Tuesday, October 26, 2010

Broker and Joker


ತನ್ನ ಸ್ವಾರ್ಥಕ್ಕಾಗಿ ವಾಲೇಬಾಬು ಕಾಮರ್ಿಕರನ್ನು ಒಡೆದಾಳುತ್ತಾನೆ. ಆದರೆ, ಶಫೀ ಅದಕ್ಕಿಂತ ಭಿನ್ನವಾಗಿ ತನ್ನ ತಕ್ಕಡಿಯ ಮುಖಂಡರನ್ನೇ ತುಕ್ಕಡಿ ಮಾಡಿ ತನ್ನ ಜಿದ್ದು & ಸಿಟ್ಟಿನಿಂದ ಅಧಿಕಾರ ಚಲಾಯಿಸುತ್ತಾನೆ. ಎಂದು ನಮ್ಮ ಪ್ರತಿನಿಧಿ ಸಂಪೇಲ್ಲೇರ್ ವಿಶ್ಲೇಷಿಸಿದ್ದಾರೆ.
ಹಟ್ಟಿ ಚಿನ್ನದ ಗಣಿ ಕಂಪನಿಯ ಇತಿಹಾಸದಲ್ಲಿ ಕಾಮರ್ಿಕರನ್ನು ಪ್ರತಿನಿಧಿಸುವ ಸಂಘಕ್ಕೆ ತನ್ನದೇ ಪ್ರಾತಿನಿಧ್ಯತೆಯಿದೆ. ಇಲ್ಲಿದ್ದಂತೆ ಕಾಮರ್ಿಕರಿಗೊಂದು ವಿಶಾಲವಾದ ಕಾಮರ್ಿಕ ಸಂಘ (ಕಛೇರಿ) ನಮ್ಮ ರಾಜ್ಯದಲ್ಲಿಯೇ ಎಲ್ಲಿ ಇಲ್ಲ. ಕಾಮ್ರೇಡ್ ಮಖ್ದೂಂ, ನಾರಾಯಣ್, ಫೈ ನಂತಹ ನಾಯಕರು ಅಂದು ಸಂಘವನ್ನು ಬೇರುಮಟ್ಟದಿಂದ ಪ್ರಾಮಾಣಿಕವಾಗಿ ಕಟ್ಟಿದ್ದಾರೆ. ಅವರೆಲ್ಲರ ಪರಿಶ್ರಮದ ಫಲವಾಗಿ ಅಂತಹದ್ದೊಂದು ಕಾಮರ್ಿಕ ಸಂಘ ನಮ್ಮ ಮುಂದೆ ಇಂದು ಎದ್ದು ಕಾಣುತ್ತಿದೆ. ಇಷ್ಟೇಲ್ಲ ಹಿನ್ನಲೆಯನ್ನು ಹೊಂದಿರುವ ಕಾಮರ್ಿಕ ಸಂಘದಲ್ಲಿ ವಿಶೇಷವಾಗಿ ಎಲ್ಲ ಸದಸ್ಯರಿಗಿಂತ ಪ್ರಧಾನಕಾರ್ಯದಶರ್ಿಗೆ ಹೆಚ್ಚಿನ ಅಧಿಕಾರ ಮತ್ತು ಸ್ಥಾನಮಾನವಿರುತ್ತದೆ. ಆತನೇ ಎಲ್ಲ ಕಾಮರ್ಿಕರ ಸಾರಥಿಯಾಗಿರುತ್ತಾನೆ. ಆತನಿಗೆ ಜಾತಿ, ಬಣ್ಣ, ಭೇದಭಾವ, ತಾರತಮ್ಯ ಎಂತಹವುಗಳು ಇರುವುದಿಲ್ಲ. ಕಾಮರ್ಿಕರ ವೇತನ ಒಪ್ಪಂದ ಸೇರಿದಂತೆ ಹಲವಾರು ಚಚರ್ೆಗಳಲ್ಲಿ ಈತನ ಪಾತ್ರವು ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ.
ಅಂತಹ ಜವಾಬ್ದಾರಿಯುತ, ಘನತೆ ಗೌರವವಿರುವ ಜಿ.ಎಸ್ ಹುದ್ದೆಗೆ ಯಾವತ್ತು ಬ್ರೋಕರ್ ವಾಲೇಬಾಬು, ಜೋಕರ್ ಶಫಿಯಂತವರು ಆಯ್ಕೆಯಾಗಿ ವಕ್ಕರಿಸಿಕೊಂಡರೋ ಅಂದೇ ಆ ಸ್ಥಾನ ತನ್ನ ಗೌರವ, ಘನತೆಯನ್ನು ಕ್ರಮೇಣವಾಗಿ ಕಳೆದುಕೊಳ್ಳಲಾರಂಭಿಸಿತು.
ತನ್ನ ಸ್ವಾರ್ಥ, ಪ್ರತಿಷ್ಠೆಗಾಗಿ ಜಿ.ಎಸ್ ಸ್ಥಾನವನ್ನು ವಾಲೇಬಾಬು ದುರುಪಯೋಗ ಪಡಿಸಿಕೊಂಡರೆ, ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಶಫೀ, ಸ್ವಾರ್ಥತೆ, ಪ್ರತಿಷ್ಠೆಗೆ ಪರದೆಯನ್ನು ಕಟ್ಟಿ ಹಿಂಬಾಗಿಲಿನಿಂದ ತನಗೆ ಬೇಕಾದ ಸವಲತ್ತುಗಳನ್ನು ಪಡೆಯತೊಡಗಿದ.
ಶಫೀ ತಾನು ನಡೆಸುತ್ತಿರುವ ಶಾಲೆಯ ಹೆಸರಿನ ಮೇಲೆ ಮಮ್ತಾಜ್ಅಲಿಖಾನ್ನನ್ನು ಕರೆತಂದು ಆತನ ಜೊತೆ ವೇದಿಕೆ ಹಂಚಿಕೊಂಡ. ತಾರಾ ತಿಗಡಿ ಬಾರಾಣಿ ಕೆಲಸ ಮಾಡುವ ಮಾನಗೇಡಿ ದತ್ತು ಪುತ್ರರನ್ನು ಜೊತೆಗಿಟ್ಟುಕೊಂಡು ಸೋಮವಾರ ಮಂಗಳವಾರ ಕಛೇರಿ ಕೆಲಸ, ಬುಧವಾರ ಗುರುವಾರ ದವಾಖಾನೆ ಕೆಲಸ, ಶುಕ್ರವಾರ ಮಸೀಧಿ, ಶಾಲೆ ಕೆಲಸ, ಶನಿವಾರ ಭಾನುವಾರ ಊರುರು ತಿರುಗುತ್ತಾ ಚಕ್ಕ್ರ್ ಹೊಡೆಯುತ್ತಿದ್ದಾನೆ. ಈ ರೀತಿ ಮೂವತ್ತು ತಿಂಗಳು ಕಳೆದ ಶಫಿಗೆ ಕಾಮರ್ಿಕರ ಕುರಿತಾಗಲಿ ಕಂಪನಿಯವರ ಜೊತೆಯಲ್ಲಿ ಚಚರ್ಿಸಲು ಸಮಯವೇ ಇದ್ದಿಲ್ಲ.
ಎಲ್ಲ ಸಂದರ್ಭದಲ್ಲಿಯೂ ಬ್ಯೂಸಿ ಷೆಡ್ಯೂಲ್ನಲ್ಲಿದ್ದ ಶಫೀಯನ್ನು ಕಾಮರ್ಿಕರು ಕಾಣುವುದೇ ಅಪರೂಪವಾಗಿತ್ತು. ಒಂದು ತಮಾಷೆಯೆಂದರೆ, ಎಲ್ಲ ಕಾಮರ್ಿಕರು ಅಮರೇಶ ಎಂಬ ಗುಮಾಸ್ತನಿಗೆ ಏನಪ್ಪ ಆ್ಯಕ್ಟಿಂಗ್ ಜಿ.ಎಸ್ ಎಲ್ಲಿ ನಿಮ್ಮ ಅಸಲಿ ಜಿ.ಎಸ್ ಎಂದು ಕೇಳುತ್ತಿದ್ದರು! ಅಂದರೆ, ಶಫಿ ಇಲ್ಲದಕ್ಕೆ ಗುಮಾಸ್ಥನನ್ನೇ ಎಲ್ಲರೂ ಆ್ಯಕ್ಟಿಂಗ್ ಜಿ.ಎಸ್ ಎನ್ನುತ್ತಿದ್ದರು! (ನಾವುಗಳು ಕೂಡ ಕೆಲವೊಮ್ಮೆ ಕರೆದಿರಬೇಕು.)
ಈ ಮೊದಲಿಗೆ ನಾವು ಬರೆದಂತೆ ತಕ್ಕಡಿ 3ತುಕ್ಕಡಿಯಾಗಿದ್ದರಿಂದ ಅದರ ಲಾಭವನ್ನು ಶಫಿಯೂ ಪಡೆಯಿತ್ತಿದ್ದ. ಮುಖ್ಯವಾಗಿ ಅಮೀರಅಲಿಗೆ ಎದುರಾಳಿಯಿರುವ ಆಲಂಸಾಬ ಸೇರಿದಂತೆ ಹಲವರನ್ನು ತನ್ನ ದತ್ತುಪುತ್ರರಂತೆ ನೋಡಿಕೊಳ್ಳುತ್ತಿದ್ದ. ಇನ್ನು ಇತ್ತ ಶಾಂತಪ್ಪನಿಗೆ ಆಗಾಗ ಬೇರೆಬೇರೆ ಕಾರಣಗಳಿಗೆ ಹಣಕೊಟ್ಟು ಎದುರಾಳಿಯಾಗುತ್ತಿದ್ದ ಕೆಲವರನ್ನು ಶಫಿ ಬಳಸಿಕೊಳ್ಳುತ್ತಿದ್ದ. ಹೀಗೆ ಮೂವತ್ತು ತಿಂಗಳು ನೂಕಿದ ಶಫೀ ಈಗ ಎಲ್ಲಿ ತನ್ನ ಬಂಡವಾಳ ಬಯಲಾಗುತ್ತದೆಂದು ತಿಳಿದು ಹೊಸ ನಾಟಕವನ್ನಾಡಲು ಪ್ರಾರಂಭಿಸಿದ್ದಾನೆ.
ಅದುವೆ, ಪ್ರಜಾಸಮರದಲ್ಲಿ ಬರುವ ಎಲ್ಲಾ ಲೇಖನಗಳನ್ನು ಅಮೀರಅಲಿ ಮತ್ತು ಅವರ ತಮ್ಮನವರು ತಕ್ಕಡಿಯನ್ನು ತುಕ್ಕಡಿ ಮಾಡಲು ವರದಿಯನ್ನು ಮಾಡಿಕೊಡುತ್ತಾರೆಂಬ ಹೊಸ ಬಾಂಬ್.
ಈ ವಿಷಯವಾಗಿ ಮೊನ್ನೆ ಬೆಂಗಳೂರಿನಲ್ಲಿ ಸುಧೀರ್ಘವಾದ ಚಚರ್ೆ ನಡೆದಿದೆ ಎಂಬ ಕುರಿತು ನಮಗೆ ಈಗಾಗಲೇ ಮಾಹಿತಿ ಬಂದೊದಗಿದೆ! ಶಫೀ ಈ ಮೇಲಿನಂತೆ ಹೇಳುತ್ತಿದ್ದಂಥೆ ಅಮೀರಅಲಿ ಪ್ರಜಾಸಮರದಲ್ಲಿ ಬರುವ ವರದಿ ನನ್ನದೆಂದು ಸಾಭೀತು ಮಾಡಿದರೆ, ಪಕ್ಷ ನನಗೆ ಎಂತಹ ಶಿಕ್ಷೆಯನ್ನಾದರೂ ಕೊಡಲಿ ಅದನ್ನು ಅನುಭವಿಸಲು ಸಿದ್ದ ಎಂದು ಹಾಕಿಕೊಂಡಿದ್ದ ಬೂಟ್ನ್ನು ಬಿಚ್ಚಿ ಟೇಬಲ್ ಮೇಲೆ ಇಟ್ಟು, ಶಫೀ ಹೇಳಿದ ಮಾತು ಸಾಭೀತುಪಡಿಬೇಕು. ಇಲ್ಲವಾದರೆ, ಇಂದಿನಿಂದಲೇ ಕಾಮರ್ಿಕ ಸಂಘಕ್ಕೆ ನಾನು ರಾಜೀನಾಮೆ ನೀಡುತ್ತೇನೆಂದು ಹೇಳಿದ ಸುದ್ದಿ ಈಗ ಎಲ್ಲೆಡೆ ಹರಡಿದೆ. (ಬೆಂಗಳೂರಿನಿಂದ ಬಂದಾಗಿನಿಂದಲೂ ಅಮೀರಅಲಿ ಎಸ್.ಯು.ಪಿ1 ಹತ್ತಿರಕ್ಕೆ ಸುಳಿಯುತ್ತಿಲ್ಲ ಎಂಬ ಗುಮಾನಿಯೂ ಕೇಳಿಬರುತ್ತಿದೆ) ಅದು ಎಷ್ಟರ ಮಟ್ಟಿಗೆ ಸುಳ್ಳು, ಸತ್ಯ ಎಂಬುದು ನೇರವಾಗಿ ಅವರನ್ನು ವಿಚಾರಿಸಿದರೇ ಗೊತ್ತಾಗುತ್ತದೆ. ಆದರೆ,
ಬೂಟುಗಳು ಟೇಬಲ್ ಮೇಲೆ ಹೋಗುತ್ತಿರುವುದು, ಪತ್ರಿಕೆಗೆ ವರದಿಗಳನ್ನು ನೀವೆ ಕೊಡುತ್ತಿದ್ದೀರಿ ಎನ್ನುವುದು, ಸಂಘವನ್ನು ಒಡೆಯಲು ಪ್ರಯತ್ನಿಸಿದ್ದೀರಿ ಎಂಬ ಆರೋಪಗಳೆಲ್ಲವೂ ಈಗೇಕೆ ನಡೆಯುತ್ತಿವೆ ಎಂಬುದು ಯಕ್ಷ ಪ್ರಶ್ನೆಯಾಗಿದೆ!

ಬ್ರೋಕರ್ ವಾಲೇಬಾಬು.
ಆರಂಭದಲ್ಲಿ ಹಟ್ಟಿ ಕಾಮರ್ಿಕ ಸಂಘವನ್ನು ಕಟ್ಟಿದ ಕಾಮ್ರೇಡ್ಗಳ ಪಾಪದ ಕೂಸೇ ಈ ಜೋಕರ್ ವಾಲೇಬಾಬು. ಕಾಮ್ರೇಡ್ಗಳ ಗರಡಿಯಲ್ಲಿ ಪಳಗಿ, ಅಲ್ಲಿ ಎಲ್ಲವನ್ನು ತಿಳಿದುಕೊಂಡು ಕೊನೆಕೊನೆಗೆ ಸಂಘಟನೆಯನ್ನು ಬಿಟ್ಟು, ಐ.ಎನ್.ಟಿ.ಯು.ಸಿ ಸೇರಿದಾತ. ಅದಾದ ನಂತರ ತನ್ನದೇ ತಂದೆತಾಯಿ ಇಲ್ಲದ ಆಕಳು ಪಕ್ಷವೊಂದನ್ನು ಕಟ್ಟಿಕೊಂಡು ಕಾಮರ್ಿಕರನ್ನು ಶೋಷಣೆ ಮಾಡಿಕೊಂಡು ಬರುವಾತ. ಕೊನೆಯ ಸಂದರ್ಭದಲ್ಲಿ ಎಲ್ಲವನ್ನು ಕಳೆದುಕೊಂಡು ಊರುಬಿಡುವ ಸಂದರ್ಭದಲ್ಲಿ ವಿದ್ರೋಹಿ, ಜೋಕರ್ ಶಫೀಯೇ ವಾಲೇಬಾಬುಗೆ ಮರುಜೀವ ಕೊಟ್ಟನು. ಇನ್ನು ಕೆಲವರ ಅಭಿಪ್ರಾಯದಂತೆ ಆಡಳಿತ ಮಂಡಳಿಗೂ ವಾಲೇಬಾಬು ಅಂದರೆ ಬಲುಇಷ್ಟವಂತೆ. ಯಾಕೆಂದರೆ, ಈತನ ಮುಂದೆ ದುಡ್ಡೊಂದು ಇಟ್ಟರೇ ಸಾಕು ವಿಲೇಜ್ಶಾಫ್ಟ್ನ್ನು ಕೋಠಾದವರಿಗೆ, ಮಲ್ಲಪ್ಪಶಾಪ್ಟ್ನ್ನು ಯರಡೋಣಾದವರಿಗೆ, ಸೆಂಟ್ರಲ್ಶಾಫ್ಟ್ನ್ನು ಗುಡದನಾಳದವರಿಗೆ ಮಾರಲು ಸಹಿ ಹಾಕಿ ಬಿಡುತ್ತಾನೆ.
ಇಂತಹ ಕುಯುಕ್ತಿ ಹೊಂದಿರುವ ವಾಲೇಬಾಬು ಹಟ್ಟಿಯ ಕಾಮರ್ಿಕರ ಪಾಲಿಗೆ ಒಬ್ಬ ಬ್ರೋಕರ್ನೆಂದೆ ಅರ್ಥ. ತಕ್ಕಡಿಯವರ ಅವಧಿ ಮುಗಿಯಲು 3ತಿಂಗಳು ಗಡುವು ಇದ್ದಾಗಲೇ ತನ್ನದೊಂದು ಕರಪತ್ರವನ್ನು ಹೊರತಂದ. ಅದರಲ್ಲಿ ಪ್ರಮುಖವಾಗಿ ಕಾಮರ್ಿಕರಿಗೆ ಸಂಬಂಧಿಸಿದ ವಿಷಯಗಳಾವವು ಇದ್ದಿಲ್ಲವೆಂದರೂ ತಕ್ಕಡಿಯವರಿಗಿಂಥ ನಾನೇ ಶ್ರೇಷ್ಠ ಎಂಬುದನ್ನು ಮಾತ್ರ ಸಾಭೀತು ಮಾಡಿಕೊಳ್ಳುವ ಹಲವಾರು ಅಂಶಗಳಿದ್ದಂತೂ ಸತ್ಯ.
ಪ್ರತಿಬಾರಿ ವಾಲೇಬಾಬು ಯಾವುದಾದರೂ ಒಂದು ಕರಪತ್ರವನ್ನು ಹಂಚುತ್ತಾನೆಂದರೆ, ಅದಕ್ಕೆ ನಾನಾ ರೀತಿಯಲ್ಲಿ ಪ್ರತಿಕ್ರಿಯೆಗಳು ಬರುತ್ತಿದ್ದವು. ಆದರೆ, ಮೊನ್ನೆಯ ಕರಪತ್ರಕ್ಕೆ ಸಂಬಂಧಿಸಿ ನಾವುಗಳು ಕೆಲವು ಕಾಮರ್ಿಕರನ್ನು ಭೇಟಿ ಮಾಡಿದಾಗ ಅದೇನ್ ಸಾರ್.. ತಾನು ಹೊಸದನ್ನೇನು ಹೇಳಿಲ್ಲ. ನಿಮ್ಮ ಪೇಪರ್ದಲ್ಲಿರುವದನ್ನೇ ಸ್ವಲ್ಪ ಕಾಪೀ ಮಾಡಿ ಅದಕ್ಕೆ ಬಣ್ಣ ಹಚ್ಚಿ ಬರೆದಿದ್ದಾನೆ.
ಆತ ಈಗ ಏನು ಲಗಾಟಿ ಹೊಡೆದರೂ ಕಾಮರ್ಿಕರಿಗೆ ಅಸಲಿ ಬಣ್ಣ ಗೊತ್ತಿದೆ ಎಂದು ಹಿರಿಯ ಕಾಮರ್ಿಕನೊಬ್ಬ ಹೇಳಿ ತನ್ನ ಕೆಲಸದಲ್ಲಿ ಮಗ್ನನಾದ.
ಎಲ್ಲದರಲ್ಲಿಯೂ ಅಡ್ಡಗಾಲು ಹಾಕುತ್ತಾ, ತನ್ನದೇ ಆದ ಕಾನೂನುಗಳನ್ನು ಅಧಿಕಾರಿಗಳ ಮೇಲೆ ಹೇರಲು ಹೋಗುತ್ತಾನೆ. ಪ್ರತಿಯೊಂದಕ್ಕೂ ಕೋಟರ್್, ಆರ್.ಎಲ್.ಸಿ, ಎ.ಎಲ್.ಸಿ ಅಂತನೇ ತಿರುಗುತ್ತಿರುತ್ತಾನೆ.
ಕಂಪನಿಯ ಆಯ್ದ ಭಾಗಗಳಲ್ಲಿ ತನಗೆ ಬೇಕಾದವರನ್ನು ಇಟ್ಟುಕೊಂಡು ಕಂಪನಿಯ ಕುರಿತು ಸಮಗ್ರ ಮಾಹಿತಿಯನ್ನು ಕಲೆಹಾಕುತ್ತಾನೆ.
ಕಂಪೆನಿಯ ಮೇನ್ಸ್ಟೋರಿನಿಂದ 1ವಸ್ತು ಡಿಪಾಟರ್್ಮೆಂಟ್ಗೆ ಇನ್ನು ಹೋಗಿರುವುದಿಲ್ಲ. ಅಷ್ಟರಲ್ಲಿಯೇ ವಾಲೇಬಾಬು ಮನೆಗೆ ಅದರ ಬಿಲ್ಲ್ ಮತ್ತು ಸ್ಯಾಂಪಲ್ ಹೋಗಿರುತ್ತದೆ. ಅಂದರೆ ಭಾವಿಸಿ ಕಂಪನಿಯಲ್ಲಿ ಈತ ಯಾವ ರೀತಿ ತನ್ನ ಅನುಯಾಯಿಗಳನ್ನು ಕೆಲಸ ಮಾಡಲು ಬಿಟ್ಟಿರಬೇಕು.
ಈತನು ವೈಯಕ್ತಿಕವಾಗಿ ಶಫೀಗಿಂತ ಮಹಾದ್ರೋಹಿಯಾದರೂ ಅದು ತೆರೆಮರೆಯಲ್ಲಿ ಮಾತ್ರ. ತನ್ನ ಸ್ವಂತ ಆಕಳು ಪಕ್ಷವನ್ನು ಕಟ್ಟಲು ಒಂದು ಕಡೆ ಶಾಂತಪ್ಪ, ಪಾಮಣ್ಣನನ್ನು ಮುಂದಿಟ್ಟು, ಇನ್ನೊಂದೆಡೆ ತನ್ನ ಸ್ವಜಾತಿಯವರನ್ನು ಸೇರಿಸಿ ಕಮ್ಯೂನಲ್ ಬೇಸ್ ಮೇಲೆ ಕಾಮರ್ಿಕರನ್ನು ಒಡೆದಾಳುತ್ತಾನೆ. ಮತ್ತೊಂದು ಈತನಿಗೆ ಬಲವಾಗಿ ಎದುರಾಳಿಗಳು ಯಾರು ಇಲ್ಲದಿದ್ದರಿಂದ ತನ್ನ ಮನಸ್ಸಿಗೆ ಬಂದಂತೆ ತನ್ನ ಅವಧಿಯಲ್ಲಿ ಅಧಿಕಾರ ಚಲಾಯಿಸುತ್ತಾನೆ. ತಾನು ಕಟ್ಟಿಕೊಂಡ ಸ್ವಂತ ಆಕಳು ಪಕ್ಷದಲ್ಲಿಯೇ ಯಾರೊಬ್ಬರು ಈತನ ವಿರುದ್ಧ ಚಕಾರವೆತ್ತುವುದಿಲ್ಲ. (ಯಾವಗಲಾದರೂ ಒಮ್ಮೆ ಶಾಂತಪ್ಪ, ಪಾಮಣ್ಣ ರಗಳೆ ತೆಗೆಯುತ್ತಾರೆಂದು ತಿಳಿದು ಮೊದಲಿಗೆ ಅವರನ್ನು ಸಮಜಾಯಿಸಿರುತ್ತಾನೆ.)
ಕಂಪನಿಯ ಕಾಮರ್ಿಕರಲ್ಲಿ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಕಾಮರ್ಿಕರನ್ನು ಹೊರತುಪಡಿಸಿದರೆ, ಇನ್ನುಳಿದ ಎಲ್ಲ ಸಮುದಾಯದವರು ವಾಲೇಬಾಬು ಬೇಕು ಎನ್ನುತ್ತಾರೆ. ಆ ರೀತಿ ಜಾತಿವಾರು ಕಾಮರ್ಿಕರನ್ನು ಈತ ಒಡೆದಾಳುತ್ತಾನೆ. ಆತನಿಗೆ ಕಂಪನಿಯಲ್ಲಿ ಸರಿ ಸುಮಾರು 800ಮತಗಳು ರಿಸವರ್್ ಇವೆ. ಅವನು ಗುದ್ದಾಡುವುದು ಕೇವಲ 300ರಿಂದ 500 ಮತಗಳಿಗಾಗಿ ಮಾತ್ರ. ಕಂಪನಿಯಲ್ಲಿ ಎಂದಾದರೂ ವಾಲೇಬಾಬು ಸೋತಿದ್ದರೆ, ಅದು 400ರಿಂದ 500 ಮತಗಳ ಅಂತರದಲ್ಲಿಯೇ ಇರುತ್ತದೆ. ಇನ್ನು ಕೆಲವರಿಗಂತೂ ವಾಲೇಬಾಬು ಅಂದರೆ ಪಂಚಪ್ರಾಣ.
ಇಷ್ಟೇಲ್ಲ ಹಿನ್ನಲೆಯಿರುವ ವಾಲೇಬಾಬುಗೆ ಕಂಪನಿಯ ಕೆಲವೊಂದು ವಿಭಾಗ, ವಿಶೇಷವಾಗಿ ಗಣಿಯ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಿಟ್ಟುಕೊಂಡಿದ್ದಾನೆ.
ಕಂಪನಿಯ ವೀಕ್ನೆಸ್ನ್ನು ಹಿಡಿದುಕೊಂಡು ರೊಕ್ಕ ತಿನ್ನುವುದೇ ಈತನಿಗೆ ಗೊತ್ತಿರುವ ಬಹುದೊಡ್ಡ ವಿಧ್ಯೆ.
ಹೊರಗಡೆಯೂ ಕೂಡ ಯಾವನಾದರೂ ತನ್ನ ವಿರುದ್ಧ ಮಾತನಾಡಿದರೆ, ಅವನ ವೀಕ್ನೆಸ್ನ್ನು ಹಿಡಿದುಕೊಂಡು ಆಟವಾಡಿಸುತ್ತಾನೆ. ಹೀಗಾಗಿ ಯಾರೊಬ್ಬರು ಇವನೇನಾದರೂ ಮಾಡಿಕೊಂಡು ಹಾಳಾಗಿ ಹೋಗಲಿ ಎಂದು ಕಣ್ಣಿಗೆ ಕಂಡರೂ ಕಾಣದಂತಿರುತ್ತಾರೆ.

ಜೋಕರ್ ಶಫೀ.
ಸಿಟ್ಟಿಗೆ ಕುಖ್ಯಾತಿಯನ್ನು ಪಡೆದ ಶಫೀಯದ್ದು ಕೆದಕಿದರೆ ಬಹುದೊಡ್ಡ ಇತಿಹಾಸ. ಮೊದಲಿನಿಂದಲೂ ನೆಲ ನೋಡುತ್ತಾ ತಿರುಗುವ ಈತ ಎಲ್ಲರಿಗೆ ಮಾನಸಿಕ ಅಸ್ವಸ್ಥನಂತೆ ಕಾಣುತ್ತಾನೆ. ಹಟ್ಟಿ ಕಂಪನಿಯ ಕಾಮರ್ಿಕರು, ದಿನಗೂಲಿ ನೌಕರರು, ಇಂದಿನ ಪರಿಸ್ಥಿತಿಗೆ ಬರಲು ನೇರವಾಗಿ ಶಫೀಯೇ ಕಾರಣ.
ಹತ್ತಾರು ವ್ಯವಹಾರಗಳನ್ನು ಮಾಡಿಕೊಂಡು ಬಂದಿರುವ ಬಿಸಿನೆಸ್ ಮೈಂಡೆಡ್ ಶಫಿ ಅಸಲಿಗೆ ಎಡಪಂಥೀಯ ಸಂಘಟನೆಗಳ ಸದಸ್ಯನೂ ಅಲ್ಲ. ಬರೀ ಎಲ್.ಐ.ಸಿ, ಸಹರಾ, ಶಾಲೆ ಅಂತಲೇ ತಿರುಗುವ ಈತ ಎಂದಿಗೂ ತನ್ನ ವಿಭಾಗವಾದ ಗ್ಯಾರೇಜ್ನಲ್ಲಿ ಒಂದು ದಿನವೂ ಪಾನರ್ ಹಿಡಿದು ಕೆಲಸ ಮಾಡಿಲ್ಲ. (ವಾಲೇಬಾಬನ ಅವಧಿಯನ್ನು ಒಳಗೊಂಡು)
ಈ ಹಿಂದೆ ತಕ್ಕಡಿಯನ್ನು ತುಕ್ಕಡಿ ಮಾಡಲು ಪಕ್ಷೇತರನಾಗಿ ಅಮೀರಅಲಿಯ ವಿರುದ್ಧ ನಿಂತು 350ಮತಗಳನ್ನು ಪಡೆದು ಊರುಬಿಟ್ಟು ಓಡಿ ಹೋಗಲು ಸಿದ್ದತೆ ನಡೆಸಿದ್ದ ವಾಲೇಬಾಬುಗೆ ಮರುಜೀವ ನೀಡಿ, ಸಂಘಟನೆಗೆ ದ್ರೋಹ ಬಗೆದಿರುವಾತ. ಅಂದಿನ ಚುನಾವಣೆಯಲ್ಲಿ ವಾಲೇಬಾಬುಗೆ ಗೆಲ್ಲಲು ಅನುಕೂಲ ಮಾಡಿಕೊಟ್ಟು ತಾನು ಮಾತ್ರ ಸ್ವತಃ 3ವರೆ ವರ್ಷ ಮಸ್ತ್ಮಜಾ ಮಾಡಿದ. ಇದು ಅಲ್ಲಿಗೆ ಅಂದೇ ಮುಗಿದುಹೋಗಿದ್ದರೆ ಈತನ ಬಗ್ಗೆ ನಾವೆರಡು ಕಾಲಂ ಸುದ್ದಿಬರೆಯುವ ಅವಶ್ಯಕತೆ ಬೀಳುತ್ತಿದ್ದಿಲ್ಲ.
ಆದರೆ,
ಸಂಘ ತೊರೆದು ಇನ್ನೊಬ್ಬನಿಗೆ ಲಾಭ ಮಾಡಿ, ಕಾಮರ್ಿಕರ ಆಶೋತ್ತರಗಳನ್ನು ಗಾಳಿಗೆ ತೂರಿ, ತಕ್ಕಡಿ ದ್ರೋಹಿಯಾಗಿದ್ದ ಈತನನ್ನು ಕಳೆದ ಚುನಾವಣೆಯಲ್ಲಿ ಕೆಲವೊಂದು ಜಾತಿವಾದಿಗಳು ಶಫೀ ಸಾಬ ನೀವು ಮರಳಿ ತಕ್ಕಡಿ ಪಕ್ಷಕ್ಕೆ ಬರ್ರೀ.. ನೀವು ಬಂದಿಲ್ಲ ಅಂದರೆ, ಮಾದಿಗರೆಲ್ಲ ಸೇರಿಕೊಂಡು ಮಳ್ಳಿಯನ್ನು ಜಿ.ಎಸ್ ಮಾಡಲು ಎಲ್ಲಿ ಬೇಕಲ್ಲಿ ಸಭೆ ಮಾಡುತ್ತಿದ್ದಾರೆ. ನಮ್ಮ ಜನಾಂಗದವರೇ ಅಮೀರಅಲಿಗೆ ಜಿ.ಎಸ್ ಕೊಡಬಾರದೆಂದು ಹಿರಿಯ ಮುಖಂಡರಿಗೆ ಕಂಪ್ಲೇಟ್ ಕೊಟ್ಟಿದ್ದಾರೆ. ಕಾರಣ ಅನಾಯಾಸವಾಗಿ ಪಕ್ಷ ಮಳ್ಳಿಗೆ ಜಿ.ಎಸ್ ನೀಡಲು ತಯಾರಿ ನಡೆಸಿದೆ.
ಅದಕ್ಕಾಗಿ ಹಮಾರ ಹಮಾರ ಲೋಗ್ ಜಿ.ಎಸ್ ರೆಹನಾ ಸಾಬ್ ನಾವು ಬೇಕಿದ್ರೆ ನಿನ್ನ ಪರವಾಗಿ ಅಮೀರಅಲಿಗೆ ಹೇಳುತ್ತೇವೆಂದು ಓಲೈಸಿ ಶಫೀಯನ್ನು ಮರಳಿ ತಕ್ಕಡಿಗೆ ತಂದಿದ್ದರು.
ಆಗ ಅದಕ್ಕೆ ಅಮೀರಅಲಿ ಬೇರೆ ಕಾರಣಗಳಿಂದ ಒಪ್ಪಿ ಶಫೀಗೆ ಜಿ.ಎಸ್ ಸಿಗುವಂತೆ ಮಾಡಿದ! ಅಂದು ಹುಮ್ಮಸ್ಸಿನ ಯುವಕರ ಪಕ್ಷವು ಕೊನೆಗಳಿಗೆಯಲ್ಲಿ ಮಳ್ಳಿಗೆ ಜಿ.ಎಸ್ ನೀಡದೇ ಸಮಜಾಯಿಷಿ ನೀಡಿ, ಪಕ್ಷ ಬಿಟ್ಟು ಹೋಗಿದ್ದ ದ್ರೋಹಿಗೆ ಮತ್ತೊಮ್ಮೆ ಅವಕಾಶ ಕೊಟ್ಟಿತು.
ಅಷ್ಟೊತ್ತಿಗೆ ವಾಲೇಬಾಬನ ಆಡಳಿತದಿಂದ ಬೇಸತ್ತಿದ್ದವರು ಪಯರ್ಾಯವಾಗಿ ತಕ್ಕಡಿಯನ್ನು 18ಸ್ಥಾನಗಳಲ್ಲಿ ಗೆಲ್ಲಿಸಿದರು. ಅಲ್ಲಿಂದ ಶಫೀಯ ಆಟ ನಡೆದದ್ದೇ ಬೇರೆ. ಅದೆಲ್ಲವನ್ನು ನಮ್ಮ ಕಳೆದ 2ಸಂಚಿಕೆಯಲ್ಲಿ ಬರೆಯಲಾಗಿದೆ. ಈಗ ಶಫೀ ಮತ್ತು ಆತನ ಹಿನ್ನಲೆಯ ಕುರಿತು ಸ್ವಲ್ಪ ತಿಳಿಯೋಣ!
ವಾಲೇಬಾಬು ಸೋಲುತ್ತಿದ್ದಂತೆ ಶಫೀಯ ಟಸ್ಪುಸ್ ಇಂಗ್ಲೀಷ್, ಬಿಪಿ, ಸಿಟ್ಟು ಕೆಲವು ದಿನ ಎಂ.ಎಲ್ ಪಾಟೀಲ್, ಕಿಶೋರಕುಮಾರರ ರೂಂನಲ್ಲಿ ಕಾಣಿಸತೊಡಗಿದವು. ಕೊನೆಕೊನೆಗೆ ಅವೆಲ್ಲ ಮಾಯವಾಗಿ ಹಣ ಜಮಾವಣೆಯತ್ತ ಸಾಗಿದವು!
ಮೊದಲಿನಿಂದಲೂ ಈತನಿಗೆ ಎಲ್.ಐ.ಸಿಯಿಂದ ಅಂದಾಜು ಏನಿಲ್ಲವೆಂದರೂ ತಿಂಗಳಿಗೆ 10.ಸಾವಿರ ಕಮೀಷನ್, ಸಹರಾದಿಂದ ಒಂದೈದು ಸಾವಿರ, ಕಂಪನಿಯಿಂದ ಪುಕ್ಕಟೆ ಬರುವ ತನ್ನ ವೇತನವೊಂದು 15ಸಾವಿರ, ಇನ್ನು ಶಾಲೆಯಲ್ಲಂತೂ ಈತನೇ ಬಾಸ್ ಇರುವದರಿಂದ ಅದರದೊಂದು ಸ್ವಲ್ಪ ಚೂರು ಪಾರು. ಒಟ್ಟಾರೆ ಇವೆಲ್ಲ ಮೂಲಗಳಿಂದ ಬರುತ್ತಿದ್ದ ಅಂದಾಜು ಮೊತ್ತ ಜಿ.ಎಸ್ ಆಗುತ್ತಿದ್ದಂತೆ ಕ್ರಮೇಣ ಹೆಚ್ಚಾಗತೊಡಗಿತು. ಅಲ್ಲಿ ಹಣ ಹೆಚ್ಚಾಗುತ್ತಿದ್ದಂತೆ ಕಂಪನಿಯಲ್ಲಿ ಇಂಗ್ಲೀಷ್, ಅಮಾಯಕ ಬಾಗಿಲುಗಳಿಗೆ ಒದೆಯುವುದು, ಸುಮ್ಸುಮನೇ ಸಿಟ್ಟಿಗೆ ಬರುವುದು, ಎಲ್ಲವೂ ಕಡಿಮೆಯಾಗತೊಡಗಿದವು.
ಆದಾಗ್ಯೂ ಪ್ರತಿ ತಿಂಗಳು ಅಂದಾಜು 40ಸಾವಿರ ಗಳಿಸುವ ಈತ ಬೆಳಿಗ್ಗೆ ಗ್ಯಾರೇಜ್ನಲ್ಲಿ ತಿಂಡಿ, ಮಧ್ಯಾಹ್ನ ಮಸೀಧಿಯಲ್ಲಿ ಊಟ, ರಾತ್ರಿ........ ಮನೆಯಲ್ಲಿ ಊಟ ಮಾಡುತ್ತಿದ್ದಾನೆ. (ರಾತ್ರಿ ಊಟ ಗೊತ್ತಿದ್ದವರು ಮಾತ್ರ ಬಿಟ್ಟ ಸ್ಥಳವನ್ನು ತುಂಬಿಕೊಳ್ಳಬೇಕು.) ಯಾಕೆಂದರೆ ಈತನ ಹೆಂಡತಿ ಮಕ್ಕಳು ಮತ್ತು ಕುಟುಂಬವೆಲ್ಲ ರಾಯಚೂರಿನಲ್ಲಿದೆ.
ಕಾರಣ ಇಲ್ಲಿ ಈತನೇ ಪ್ರಧಾನಿ, ಈತನೇ ಗುಮಾಸ್ಥ, ಈತನೇ ಏಕೋಪಾಧ್ಯಯ. ಇದೆಲ್ಲ ದೈನಂದಿನ ಲಹರಿಯಾದರೆ, ಸಂಘಟನೆಯಲ್ಲಿಯೂ ಅಂತಹ ಹೊಸದನ್ನೇನು ಮಾಡಿಲ್ಲ.
ಆಲಂಸಾಬನ ಕೈಯಲ್ಲಿ ಸಿಗ್ನೇಚರ್ ಇರುವ ಬ್ಲಾಂಕ್ಚೆಕ್, ಗುಮಾಸ್ಥ ಅಮರೇಶನಿಗೆ ಆಫೀಸ್ ಜವಾಬ್ದಾರಿ, ಮಿಯ್ಯಸಾಬಗೆ ಸಿಕ್ಲೋನ್ ಮತ್ತು ಬಳ್ಳಾರಿ ಯುವಕನ ಚಾಕರಿ, ದತ್ತುಪುತ್ರರ ಕೈಯಲ್ಲಿ ಕೆಲವೊಂದು ಬಾಡಿಗೆ ಮನೆಗಳ ಕೀಲಿಗಳು, ಅವಶ್ಯಕತೆ ಬಿದ್ದರೆ, ಅಮೀರಅಲಿ ಮಳ್ಳೀಗೆ ಒಂದು ಮೊಬೈಲ್ ಕಾಲ್, ಮಾಡಿಕೊಂಡು ಹಳೆದೊಂದು ಡಬ್ಬಾ ಸೈಕಲ್ನ್ನು ಎಡಗೈಲಿ ಹಿಡಿದು ಬಲಗೈ ಕೊಂಕಳದಲ್ಲಿ ಚೀಲ ಸಿಗಿಸಿಕೊಂಡು ದವಖಾನೆ, ಜಫರುಲ್ಲಾ, ಶಾಲೆ, ಮಸೀದಿ, ಇನ್ನೊಬ್ಬರ ಮನೆ ಅಂತಾನೆ ತಿರುಗುತ್ತಾ ಸಂಘಟನೆಯನ್ನೂ ಬಲಹೀನಗೊಳಿಸಿ, ತಾನೇ ತುಕ್ಕಡಿಯನ್ನು ಮಾಡಿ, ತುಘಲಕ್ ಆಡಳಿತ ನಡೆಸಿದ್ದಾನೆ.
ಹೀಗಾಗಿ ಕಾಮರ್ಿಕ ಸಂಘಗಳಲ್ಲಿ ವಾಲೇಬಾಬು ಬ್ರೋಕರ್ ಆಗಿದ್ದರೆ, ಶಫೀ ಜೋಕರ್ ಆಗಿದ್ದಾನೆ ಎಂದು ಪ್ರಜ್ಞಾವಂತ ಕಾಮರ್ಿಕರು ಅಲ್ಲಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

ತಕ್ಕಡಿಯ ಅಸಲಿ ಕಥೆ.
ಹಿಂದೊಮ್ಮೆ ನಾವು ವಾಲೇಬಾಬನ ವಿರುದ್ಧ ಹೋರಾಟವನ್ನು ಮಾಡಿ ಜೈಲಿಗೆ ಹೋದಾಗ ನಮ್ಮಿಂದೆ ಅಮೀರಅಲಿ, ಶಾಂತಪ್ಪ ಮಳ್ಳಿ, ಸಿದ್ದಪ್ಪ, ಗೋರ್ಕಲ್ ವೆಂಕಟೇಶನನ್ನು ಬಿಟ್ಟರೇ ಯಾರೊಬ್ಬರು ಬರಲಿಲ್ಲ. ಕೊನೆಪಕ್ಷ ನಮಗೇನಾಗಿದೆ ಎಂದು ಅತ್ತ ಇಣುಕಿಯೂ ನೋಡಲಿಲ್ಲ. ಅದಕ್ಕಿಂತ ಹಿಂದೆಯೂ ತಕ್ಕಡಿ ಸೋತಾಗ ವಾಲೇಬಾಬು ನನ್ನ ಗೆಳೆಯ ಪತ್ರಕರ್ತ ಖಾಸೀಂಅಲಿಯ ಅಂಗಡಿಯ ಕರೆಂಟ್ನ್ನು 6ತಿಂಗಳು ತೆಗೆಸಿದ್ದ. ಆಗಲೂ ಯಾರೊಬ್ಬ ಪುರುಷರು ಅತ್ತ ಸುಳಿಯಲಿಲ್ಲ. ಕೆಲವೊಬ್ಬರಂತೂ ನೋಡಿದರೂ ನೋಡದಂಗೆ ಅಂಗಡಿ ಹಿಂದಲಿಂದಲೇ ತಲೆ ಬಗ್ಗಿಸಿಕೊಂಡು ಹೋಗುತ್ತಿದ್ದರು.
ಆದರೆ, ತಕ್ಕಡಿ ಗೆದ್ದ ಮೇಲೆ ನಾನು ಲೀಡರ್, ನೀನು ಕಾಮ್ರೇಡ್, ನಾವು ನಾಮಿನೇಟ್ ಎಂದು ಷೋ ಕೊಡುವವರ ಸಂಖ್ಯೆಯೇ ಜಾಸ್ತಿಯಾಗುತ್ತದೆ. ಮತ್ತೇ ಒಂದು ವೇಳೆ ತಕ್ಕಡಿ ಸೋತಿತೆಂದರೆ, ಬಳ್ಳಾರಿ ಯುವಕರಿಲ್ಲ, ಕಾಮ್ರೇಡ್ ಇಲ್ಲ, ನಾಮಿನೆಟೂ ಇಲ್ಲ. ಶಫೀಯಂತೂ ಮೊದಲೇ ಬರಲ್ಲ. (ಯಾಕೆಂದರೆ ಆತನದು ನಿವೃತ್ತಿ ಸಮೀಪಿಸುತ್ತಿದೆ. ಇಷ್ಟರಲ್ಲಿಯೇ ಬೇರೊಂದು ಊರಿಗೆ ಶಿಫ್ಟ್ ಆಗಲು ತಯಾರಿ ನಡೆಸಿದ್ದಾನೆ.!) ಮತ್ತದೇ ಅಮೀರಅಲಿ, ಶಾಂತಪ್ಪ, ಸಿದ್ದಪ್ಪನೇ ತಕ್ಕಡಿ ಝಂಡವನ್ನು ಹಿಡಿದುಕೊಂಡು ಎ.ಐ.ಟಿ.ಯು.ಸಿ ಜಿಂದಾಬಾದ್ ಅಂತ ತಿರುಗಬೇಕು. ಒಟ್ಟಿನಲ್ಲಿ ನಾಲಾಯಕ-ನಾಮರ್ಧರ ಮಧ್ಯೆ ಅಂದು ಮಹಾನ್ ನಾಯಕರು ಕಟ್ಟಿಬೆಳೆಸಿದ ಸಂಘಟನೆಯ ತಕ್ಕಡಿಯೊಂದೇ ಸಿಕ್ಕು ಒದ್ದಾಡುತ್ತಿದೆ. ಇದು ಮೂಲ ತಕ್ಕಡಿಯ ಅಸಲಿ ಚಿತ್ರಣ.


ಪ್ರಜಾ ಸಮರ ಫಲಶ್ರುತಿ
ಕಾಮರ್ಿಕರ ಹಣವನ್ನುಕಾಮರ್ಿಕರಿಗೆ ಕೊಡಿಸುವ ಇ.ಪಿ.ಎಫ್ ತದಿತರೇ ಸಾಲದಲ್ಲಿ ತಕ್ಕಡಿ ಕಾಮ್ರೇಡ್ಗಳು ದುಡ್ಡನ್ನು ತಿಂದಿದ್ದಾರೆ ಎಂಬುದರ ಕುರಿತು ಕಳೆದ ಸಂಚಿಕೆಯಲ್ಲಿ ಕಾಮ್ರೇಡ್ಸ್ ನಿಮ್ಮವರೇನು ಸಾಚಾನ..? ಎಂಬ ತಲೆಬರಹದಡಿ ವರದಿಯೊಂದನ್ನು ಪ್ರಕಟಿಸಲಾಗಿತ್ತು. ಆ ವರದಿಗೆ ಗಲಿಬಿಲಿಗೊಂಡ ಕಾಮರ್ಿಕ ಸಂಘ ಈಗ ತನ್ನೆಲ್ಲ ನಾಮನಿದರ್ೇಶಿತ ಸಮಿತಿಗಳನ್ನು ಬದಲಾವಣೆ ಮಾಡಿದೆ. ಅಸಲಿಗೆ ಗಾಡನಿದ್ರೆಗೆ ಜಾರಿದ್ದ ಕಾಮ್ರೇಡ್ಗಳು ಈಗ ಎಚ್ಚೆತ್ತಿದ್ದಾರಷ್ಟೇ. ಆದರೆ,
ನಿರ್ಗಮಿತ ನಾಮನಿದರ್ೇಶಿತನೊಬ್ಬನು ತನ್ನನ್ನು ತೆಗೆದುಹಾಕಿದ ಮೇಲೆ ಈ ರೀತಿ ಹೇಳಿದ್ದಾನೆ.
ದೊಡ್ಡ ದೊಡ್ಡ ಕಾಮ್ರೇಡ್ಗಳು ಈ ಹಿಂದೆ ನಮ್ಮಿಂದ ಬಾಟಲಿಗಳನ್ನು ತರಿಸಿಕೊಂಡು ಕುಡಿಯುತ್ತಿರುವಾಗ ಯಾರೊಬ್ಬರು ಏನರ್ರೀ.. ದಿನಾಲು ನಮಗೆ ಕುಡಿಸಲು ನಿಮಗೆ ರೊಕ್ಕ ಎಲ್ಲಿಂದ ಬರುತ್ತಿದೆ ಅಂತ ಯಾರು ಪ್ರಶ್ನಿಸಲಿಲ್ಲ. ಯಾಕೆಂದರೆ, ಅವರಿಗೂ ಅಸಲಿ ಹಕೀಕತ್ತು ಗೊತ್ತಿತ್ತು. ನಾವೆಲ್ಲ ಕಾಮರ್ಿಕರಿಂದಲೇ ಲಂಚ ಪಡೆದು ಕುಡಿಸುತ್ತೇವೆಂಬುದು.
ಹಾಗಾಗಿ ಅವತ್ತೆಲ್ಲ ನಾವು ಕಾಮರ್ಿಕರ ಲಂಚದ ಹಣದಿಂದ ತಂದದ್ದನ್ನೇ ಕುಡಿದು ಇವತ್ತು ಮಾತ್ರ ನಮ್ಮನ್ನೇ ಅಪರಾಧಿ ಮಾಡಿ ನಾಮ ನಿದರ್ೇಶಿತ ಸ್ಥಾನದಿಂದ ತೆಗೆದುಹಾಕಿದ್ದಾರೆ. ಈ ರೀತಿ ಮಾಡುವುದು ದೊಡ್ಡ ಕಾಮ್ರೇಡ್ಗಳಿಗೆ ಶೋಭೆ ತರುವುದಿಲ್ಲ ಎಂದಿದ್ದಾನಂತೆ.
ಅದಕ್ಕಾಗಿಯೇ ನಾವುಗಳು ಕಳೆದ ಸಂಚಿಕೆಯಲ್ಲಿ ನಿಮ್ಮ ಕಾಮ್ರೇಡ್ಗಳು ದುಡ್ಡನ್ನು ಹಗಲಿರುಳು ವಾಲೇಬಾಬುಗಿಂತ ಒಂದು ಹೆಜ್ಜೆ ಮುಂದೆ ಹೋಗಿ ತಿನ್ನುತ್ತಿದ್ದಾರೆ. ಅದು ನಿಮಗೆ ಗೊತ್ತಿದ್ದರೂ ನೀವೇಕೆ ಮೂಕಪ್ರೇಕ್ಷಕರಾಗಿದ್ದೀರಿ..? ಎಂದು ಪ್ರಶ್ನಿಸಿದ್ದೇವು.
ಏನೇ ಇರಲಿ ಇನ್ನುಮುಂದಾದರೂ ಹಗಲು ಕಂಡ ಬಾವಿಗೆ ರಾತ್ರಿ ಬೀಳಬೇಡಿ.

No comments:

Post a Comment

Thanku