ಒಳ್ಳೆಯ ಆಹಾರದಿಂದ ಒಳ್ಳೆಯ ಆರೋಗ್ಯ.
ಮಾನವನು ದಿನನಿತ್ಯ ಆರೋಗ್ಯಕರ ಆಹಾರವನ್ನು ತಿನ್ನುವದರಿಂದ ಸದೃಡನಾಗಿರುತ್ತಾನೆ. ಪೌಷ್ಠಿಕವಾದ ಆಹಾರ ಸ್ವೀಕರಿಸುವದರಿಂದ ಮನುಷ್ಯನಿಗೆ ಬರುವ ರೋಗ-ರುಜಿನುಗಳಿಗೆ ನಾವು ಕಡಿವಾಣ ಹಾಕಬಹುದು.
ಸಸ್ಯಹಾರದಿಂದ ಆರೋಗ್ಯ.
ಸಸ್ಯಹಾರಿ ಊಟದಿಂದ ಒಳ್ಳೆಯ ಆರೋಗ್ಯವನ್ನು ಪಡೆದುಕೊಳ್ಳಬಹುದು. ಮಾಂಸಹಾರಿ ಊಟದಿಂದ ಬೊಜ್ಜು, ರಕ್ತದೊತ್ತಡ, ಮಧುಮೇಹ ಹಾಗೂ ಕ್ಯಾನ್ಸರ್ ತರಹದ ಹಲವು ರೋಗಗಳು ಬರುವ ಸಾಧ್ಯತೆಯಿರುತ್ತದೆ. ಆದರೆ, ಸಸ್ಯಹಾರಿ ಊಟದಿಂದ ಕ್ಯಾನ್ಸರ್ (ಅಚಿಟಿಛಿಜಡಿ) ನ್ನು ತಡೆಗಟ್ಟಬಹುದು.
ನಿಮಗೆ ಗೊತ್ತೇ.. ಸೇಬು ಹಣ್ಣು ತಿನ್ನುವದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡಿ ರಕ್ತದಲ್ಲಿನ ಗ್ಲುಕೋಸ್ನ್ನು ಸಹಜ ಸ್ಥಿತಿಗೆ ತರುತ್ತದೆ.
ಸೇಬು ಮಧುಮೇಹದ (ಆಚಿಛಜಣಜ) ರೋಗಿಗಳಿಗೆ ಒಳ್ಳೆಯ ಔಷಧಿ ಇದ್ದಹಾಗೆ.
ಅದರಂತೆ ಈರುಳ್ಳಿಯೂ ಹೃದಯಕ್ಕೆ ಒಳ್ಳೆಯ ಔಷಧಿ. ಅದು ಮಾನವನ ರಕ್ತವನ್ನು ಶುದ್ಧೀಕರಿಸುವದರೊಂದಿಗೆ ಅದು ಕೊಲೆಸ್ಟ್ರಾಲ್ (ಅಠಟಜಣಡಿಠಟ) ಕಡಿಮೆ ಮಾಡುತ್ತದೆ. ಇದೇ ಗುಣವನ್ನು ಬೆಳ್ಳುಳ್ಳಿಯೂ ಹೊಂದಿರುತ್ತದೆ.
ಇನ್ನು ಮಜ್ಜಿಗೆಯನ್ನು ನಾವು ಕುಡಿಯುವದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಿ ಕರುಳಿನಲ್ಲಿರುವ ಕ್ರಿಮಿಗಳು ನಾಶಗೊಳ್ಳುತ್ತವೆ. ಆಗ ಮಾನವನ ಕರಳುಗಳು ಒಳ್ಳೆಯ ರೀತಿಯಲ್ಲಿ ಕೆಲಸವನ್ನು ನಿರ್ವಹಿಸುತ್ತವೆ. ಅಲ್ಸರ್ ಬರದಂತೆಯೂ ತಡೆಗಟ್ಟಬಹುದು. ಹೀಗಾಗಿ ದಿನಾಲು ಊಟವಾದ ಮೇಲೆ ಒಂದು ಲೋಟ ಮಜ್ಜಿಗೆಯನ್ನು ಕುಡಿಯುವದನ್ನು ರೂಡಿ ಮಾಡಿಕೊಳ್ಳಬೇಕು.
ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ತಾಜಾ ಮತ್ತು ಹಸಿರು ತರಕಾರಿಗಳನ್ನು ತಿನ್ನಬೇಕು. ಉದಾಹರಣಿಗೆ ಮೂಲಂಗಿ, ಗೆಜ್ಜರಿ, ಸವತೆಕಾಯಿ ಮುಂತಾದವುಗಳನ್ನು ಊಟದ ಜೊತೆಯಲ್ಲಿ ತಿನ್ನುವದರಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ.
ಆಹಾರ ರುಚಿಯಾಗಿದೆ ಎಂದು ಹೆಚ್ಚಿಗೆ ತಿಂದರೆ ಅದು ನುಚ್ಚಾಗುತ್ತದೆ. ಹಾಗೇ ತಿನ್ನುವುದು ಸರಿಯಾದ ಕ್ರಮವಲ್ಲ. ಹೊಟ್ಟೆಗೆ ಆಗುವಷ್ಟು ಊಟ ಮಾಡುವದರಿಂದ ಅದು ಸಂಪೂರ್ಣವಾಗಿ ಜೀರ್ಣಗೊಳ್ಳುತ್ತದೆ. ಊಟದಲ್ಲಿನ ಸತ್ವಗಳು ಮಾನವನ ದೇಹಕ್ಕೆ ಲಾಭಕಾರಿಯಾಗುತ್ತವೆ.
ಒಂದು ಬಾರಿ ಊಟಕ್ಕೆ ಕುಳಿತ ಮೇಲೆ ಸಂಪೂರ್ಣವಾಗಿ ಮುಗಿದ ನಂತರವೇ ಮೇಲೆಳಬೇಕು. ಊಟದ ಮಧ್ಯದಲ್ಲಿ ಅತಿಯಾಗಿ ನೀರನ್ನು ಕುಡಿಯಬಾರದು. ಅದರಿಂದ ದುಷ್ಟರಿಣಾಮಗಳು ಬರುವ ಸಾಧ್ಯತೆ ಇರುತ್ತದೆ.
ಅತೀ ಅವಸರದಲ್ಲಿ ಊಟವನ್ನು ಮಾಡಿದರೆ, ಯಾವುದೇ ಪ್ರಯೋಜನವಾಗುವುದಿಲ್ಲ. ಯಾಕೆಂದರೆ, ಊಟವು ಸರಿಯಾಗಿ ಜೀರ್ಣಗೊಂಡಿರುವುದಿಲ್ಲ.
ಮಸಾಲೆ ಪದಾರ್ಥಗಳನ್ನು ತಿನ್ನುವದರಿಂದ ನಾಲಿಗೆಗೆ ಮಾತ್ರ ರುಚಿ ಸಿಗುತ್ತದೆ. ಇದನ್ನು ಹೆಚ್ಚು ವರ್ಷ ಸೇವಿಸುವದರಿಂದ ಗಂಭೀರ ಕಾಯಿಲೆಗಳು ಎದುರಾಗುತ್ತವೆ.
ಬೆಳಿಗ್ಗೆಯಾದರೆ ಬಂತು, ಸಂಜೆಯಾದರೂ ಸಾಕು
ಮೊದಲು ನಾವೆಲ್ಲ ಕೇಳುವುದೇ ಕಾಫಿ, ಟೀ. ಅದನ್ನು ಕುಡಿದ ನಂತರವೇ ಮುಂದಿನ ಕಾರ್ಯಕ್ಕೆ ಹೋಗುತ್ತೇವೆ. ಆ ರೀತಿಯಲ್ಲಿ ನಾವೆಲ್ಲ ಇಂದಿನ ಸಮಾಜದಲ್ಲಿ ಚಹಾ ಕಾಫಿಗಳಿಗೆ ಂಜಜಛಿಣ ಆಗಿದ್ದೇವೆ.
ದಿನಾಲು ಮೇಲಿಂದ ಮೇಲೆ ಚಹಾ, ಕಾಫಿಯನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಇದರಿಂದ ಪಚನ ಶಕ್ತಿ ಕುಂಠಿತಗೊಂಡು, ಹಸಿವು ಕುಂದುತ್ತದೆ. ದಿನಕ್ಕೊಂದು ಬಾರಿ ಚಹಾ ಕುಡಿಯುವುದು ಸೂಕ್ತ ಆದರೆ, ಅದನ್ನೇ ಪದ್ದತಿ ಮಾಡಿಕೊಡುವುದು ಸರಿಯಲ್ಲ. ಅದನ್ನು ಬಿಟ್ಟುಬಿಡುವದಂಥೂ ಅತ್ಯುತ್ತಮ.
ಇನ್ನು ನಾವು ಬಳಸುವ ತಂಪು ಪಾನೀಯಗಳು ಹಲವಾರು ರಸಾಯನಿಕ ದ್ರವ್ಯಗಳಿಂದ ಕೂಡಿರುತ್ತವೆ. ಅವುಗಳ ಸೇವನೆಯಿಂದ ಕ್ರಮೇಣವಾಗಿ ಆರೋಗ್ಯ ಕೆಡುತ್ತದೆ. ಬೇಸಿಗೆಯ ಕಾಲದಲ್ಲಿ ದಣಿವಾರಿಸಿಕೊಳ್ಳಲು ಅನಿವಾರ್ಯವಾಗಿ ತಂಪು ಪಾನೀಯಗಳಿಗೆ ನಮ್ಮವರು ಮಾರುಹೋಗುತ್ತಾರೆ. ಅದನ್ನು ಇನ್ನು ಮುಂದೆ ಎಲ್ಲರೂ ತಂಪು ಪಾನೀಯಗಳನ್ನು ಬಿಟ್ಟು. ಮಜ್ಜಿಗೆ, ಎಳೆನೀರು, ಹಣ್ಣಿನ ರಸವನ್ನು ಸೇವಿಸಬೇಕು. ಇದರಿಂದ ಆರೋಗ್ಯವನ್ನು ಚನ್ನಾಗಿಡಬಹುದು.
ಈ ಹಿಂದಿನ ಸಂಚಿಕೆಗಳಲ್ಲಿ ವ್ಯಾಯಾಮ, ಸ್ವಚ್ಛತೆ, ಒಳ್ಳೆಯ ಜೀವನ ಶೈಲಿಯ ಕುರಿತು ಹೇಳಲಾಗಿದೆ. ಇದರಿಂದ ಒಳ್ಳೆಯ ಆರೋಗ್ಯವನ್ನು ಪಡೆಯಬಹುದು. ಆದಾಗ್ಯೂ ಈ ಮಾಲಿಕೆಗೆ ಸಂಬಂಧಿಸಿ ಊಟವನ್ನು ಮುಗಿಸಿದ ನಂತರ ಕನಿಷ್ಟ ಅರ್ಧಗಂಟೆಯವರೆಗೆ ಮಲಗಬಾರದು. ಊಟ ಮಾಡಿದ ತಕ್ಷಣ ವಾಕ್ ಮಾಡಬೇಕು. ಅದರಿಂದ ದೇಹಕ್ಕೆ ಅನುಕೂಲವಾಗುತ್ತದೆ. ರಾತ್ರಿಯೂ ಸುಖನಿದ್ರೆ ಬರುತ್ತದೆ.
ಕಾರಣ ಎಲ್ಲರೂ ಸಸ್ಯಹಾರವನ್ನು ಸೇವಿಸುತ್ತಾ ಉತ್ತಮ ಆರೋಗ್ಯವನ್ನು ಪಡೆಯಬೇಕು. ಉತ್ತಮ ಆಹಾರದಿಂದ ಹಲವಾರು ರೋಗಗಳನ್ನು ದೂರವಿಡಬಹುದು.
No comments:
Post a Comment
Thanku