Friday, January 13, 2012

ಒಂದು ಅಪಘಾತ - ತಪ್ಪಿದ ಅನಾಹುತ

2012ರ ವಿಶೇಷ ಸಂಚಿಕೆ ತರುವ ಅವಧಿಯದು. ಅದಕ್ಕಾಗಿ ಜಾಹೀರಾತು, ಸುದ್ದಿಗಳನ್ನು ಸಂಗ್ರಹಿಸುವದರಲ್ಲಿಯೇ ನನನ್ನು ತೊಡಗಿಸಿಕೊಂಡಿದ್ದೆ. ಸಂಚಿಕೆ ತರಲು ಇನ್ನು ಮೂರು ದಿನಗಳು ಉಳಿದಾಗ ಅವಸರದಲ್ಲಿ ಕೆಲಸ ಮಾಡಲು ಆರಂಭಿಸಿದೆ.

28 ರ ಸಂಜೆ ಲಿಂಗಸ್ಗೂರಿನ ಗುತ್ತೇದಾರರೋರ್ವರು ಜಾಹೀರಾತಿಗೆ ಸಂಬಂದಿಸಿ ತಮ್ಮ ಭಾವಚಿತ್ರವನ್ನು ಕೊಡಲು ಲಿಂಗಸೂರಿಗೆ ಆಹ್ವಾನಿಸಿದರು. ಅದಕ್ಕಾಗಿಯೇ ನಾನು ಲಿಂಗಸ್ಗೂರಿಗೆ ಹೋಗಲು ಸಿದ್ದನಾಗಿದ್ದೆ. (ಜೊತೆಯಲ್ಲಿ ಲಿಂಗಸ್ಗೂರಿನಲ್ಲಿರುವ ನನ್ನ ತಂಗಿಯ ಕುಟುಂಬವನ್ನು ಭೇಟಿ ಮಾಡುವ ಉದ್ದೇಶವು ಇತ್ತು.)

ಗುತ್ತೇದಾರರ ಭೇಟಿ ಮುಗಿಸಿಕೊಂಡು ತಂಗಿಯ ಮನೆಗೆ ಹೋಗಿ ಊಟ ಮಾಡಿ ಅಲ್ಲಿಯೇ ಮಲಗಿದ್ದರೆ, ಅಪಘಾತವೊಂದರಿಂದ ಪಾರಾಗುತ್ತಿದೆ. ಆದರೆ, ಅದು ಆಗಾಗಲಿಲ್ಲವೇ..?

ರಾತ್ರಿ ಏಕಾಏಕಿ, 11 ಗಂಟೆಗೆ ಮರಳಿ ಊರಿಗೆ ಹೊರಡಲು ನಾನು ತೀಮರ್ಾನಿಸಿದ್ದೇ, ಪತ್ರಿಕೆ 1 ವಾರ ತಡವಾಗಿ ತಮ್ಮೆಲ್ಲರ ಕೈಗೆ ಸಿಗುವಂತಾಗಿದೆ, 21 ದಿನಗಳ ಕಾಲ ಆಸ್ಪತ್ರೆಯಲ್ಲಿರಬೇಕಾಗಿ ಬಂತು.

ನನ್ನ ದಿವ್ಯ ನಿರ್ಲಕ್ಷವೇ ಅಪಘಾತಕ್ಕೆ ಆಹ್ವಾನ ನೀಡಿತು

ಲಿಂಗಸ್ಗೂರಿನಿಂದ ಮಧ್ಯರಾತ್ರಿ ಗುಡದನಾಳ ಮಾರ್ಗವಾಗಿ ಹಟ್ಟಿಗೆ ಆಗಮಿಸುತ್ತಿದ್ದಾಗ, ಆ ಕಡೆಯಿಂದ ಒಂದೇ (ಬಲಗಡೆ) ದೀಪವನ್ನು ಹೊಂದಿದ್ದ ಟ್ರಾಕ್ಟರ್ ಎದುರಾಯಿತು.

ಚಳಿ ಹೆಚ್ಚಿದ್ದರಿಂದ ನಾನು ಸರಾಸರಿ 50ರ ವೇಗದಲ್ಲಿ ಗಾಡಿಯನ್ನು ಓಡಿಸುತ್ತಿದ್ದೆ. ಎದುರಿಗೆ ಬರುವ ಒಂದೇ ಲೈಟಿನ ಗಾಡಿ, ದ್ವಿಚಕ್ರವಾಹನ ಇರಬಹುದೆಂದು ತಿಳಿದು ಹಾಗೇಯೇ ಮುಂದೆ ಹೋದೆ. ತೀರ ಸಮೀಪಕ್ಕೆ ಹೋದಾಗ ಅದು ಟ್ರಾಕ್ಟರ್ ಎಂಬುದು ಗೊತ್ತಾಯಿತು. ಇನ್ನೇನು ಟ್ರಾಕ್ಟರ್ಗೆ ಡಿಕ್ಕಿ ಹೊಡೆಯುತ್ತೇನೆ ಎನ್ನುತ್ತಲೇ ನನ್ನ ಬೈಕ್ನ್ನು ಎಡ ಭಾಗಕ್ಕೆ ತಿರುವಿಕೊಂಡಾಗ ಬೈಕ್ ಸ್ಕಿಡ್ ಆಗಿ ಬಿದ್ದೆ. ಜೊತೆಯಲ್ಲಿ ನನ್ನ ತಂಗಿಯ ಗಂಡನೂ ಇದ್ದನು.

ಹೆಚ್ಚಿನ ಅಪಾಯ ತಡೆಗಟ್ಟಿದ ನನ್ನೆರಡು ಮೊಬೈಲ್ಗಳು

ಆ ವೇಳೆ ಹಾಕಿಕೊಂಡಿದ್ದ ಶಟರ್್ನ ಜೇಬು ಸಂಪೂರ್ಣವಾಗಿ ತುಂಡಾಗಿ ಒಳಗಿದ್ದ ಎರಡು ಮೊಬೈಲ್ಗಳು ಎರಡು ಕಡೆ ಅರ್ಧಭಾಗದಷ್ಟು ಸವೆದು ಹೋಗಿದ್ದವು. ಒಂದು ವೇಳೆ ಮೊಬೈಲ್ಗಳೂ ಜೇಬಿನಲ್ಲಿ ಇರದೆ ಹೋಗಿದ್ದರೆ ಮೊಬೈಲ್ಗೆ ಬಿದ್ದಿರುವ ಪೆಟ್ಟು ನನ್ನ ದೇಹಕ್ಕೆ ಬಿದ್ದು, ಇನ್ನು ಹೆಚ್ಚಿನ ಅನಾಹುತ ಸಂಭವಿಸುತ್ತಿತ್ತು. ಅದೃಷ್ಟಕ್ಕೆ ಅಂತಹದ್ದೇನಾಗಲಿಲ್ಲ.

ನಂತರ ನೋಡನೋಡತ್ತಿದ್ದಂತೆ ನನ್ನ ಬೈಕು ಹಾಗೂ ಹಿಂದಿನ ಸವಾರ ನನ್ನ ಮೇಲೆ ಬಿದ್ದಿದ್ದ. ಎಡಗೈನ 3 ಬೆರಳುಗಳು ಕಲ್ಲಿಗೆ ತಗುಲಿ ಉಜ್ಜಿದ್ದರಿಂದ ತೀವ್ರ ತರಹದ ರಕ್ತಸ್ರಾವ ಉಂಟಾಗಿತ್ತು.

ಆಮೇಲೆ ಬಿದ್ದ ಬೈಕ್ನ್ನು ಮೇಲೆತ್ತಿಕೊಂಡು ಚಾಲೂ ಮಾಡಲು ಹೋದರೆ ಬೈಕ್ ಸ್ಟಾಟರ್್ ಆಗುತ್ತಿಲ್ಲ. ಅದೃಷ್ಟಕ್ಕೆ ಆ ಕಡೆಯಿಂದ ಹಟ್ಟಿಗೆ ಹೋಗುತ್ತಿದ್ದವರು ನನ್ನನ್ನು ಹ.ಚಿ.ಗ ಆಸ್ಪತ್ರೆಗೆ ಸಾಗಿಸಿದರು. ಹಿಂದಿನಿಂದ ನನ್ನಸಂಭಂದಿಗಳು ಬೈಕ್ನ್ನು ಊರಿಗೆ ತಂದರು.

ವೈದ್ಯರ ಸಾಹಸ

ರಾತ್ರಿ ಪಾಳೆಯಲ್ಲಿನ ಆಸ್ಪತ್ರೆ ಸಿಬ್ಬಂದಿಗಳು 1 ಗಂಟೆಗಳ ಕಾಲ ಎಡಗೈಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ನಂತರ ವೈದ್ಯರೂ ಹಾಗೂ ನಮ್ಮ ಉತ್ತಮ ಶೆಟಲ್ ಬ್ಯಾಡ್ಮಿಂಟನ್ ಆಟಗಾರರಾದ ಡಾ.ಶಿವಪ್ರಕಾಶ್ರವರು ಬಂದು ತುತರ್ುಚಿಕಿತ್ಸೆಯನ್ನು ನೀಡಿದರು.

ಮಾರನೇ ದಿನ ನನ್ನನ್ನು ಎಮಜರ್ೆನ್ಸಿ ವಾಡರ್್ನಿಂದ ಶಸ್ತ್ರಚಿಕಿತ್ಸಾ ಕೋಣಿಗೆ ವಗರ್ಾಯಿಸಲಾಯಿತು. ಅರವಳಿಕೆ ತಜ್ಞರು ಮತ್ತು ಪತ್ರಿಕೆಗೆ ಆರೋಗ್ಯಕ್ಕೆ ಸಂಭಂದಿಸಿ ಹಲವು ಸಕರಾತ್ಮಕ ಆಲೋಚನೆಗಳುಳ್ಳ ಲೇಖನಗಳನ್ನು ಬರೆಯುತ್ತಾ, ಬಂದಿರುವ ಡಾ.ರವೀಂದ್ರನಾಥ ಈರಪ್ಪ ಮಾವಿನಕಟ್ಟಿ, ಖ್ಯಾತ ಮೂಳೆ & ಕೀಲು ತಜ್ಞರಾದ ಡಾ.ಬ್ರಹ್ಮಾನಂದ ಯಾದವಾಡರವರು, ಸುಧೀರ್ಘವಾಗಿ ಹತ್ತೈದು ನಿಮಿಷಗಳ ಕಾಲ ಚಚರ್ಿಸಿ ಶಸ್ತ್ರಚಿಕಿತ್ಸೆ ಮಾಡುವ ತೀಮರ್ಾನಕ್ಕೆ ಬಂದರು.

ಅದರಂತೆ, ಶಸ್ತ್ರಚಿಕಿತ್ಸಾ ಸಹಾಯಕರಾದ ಡಾರ್ಲಿ ಗಾಂಧೀರೂಬನ್, ಫಕ್ರುದ್ದೀನ್ ಕೂಡ ಸಾಥ್ ನೀಡಿ ಯಶಸ್ವಿ ಶಸ್ತ್ರ ಚಿಕಿತ್ಸೆಯನ್ನು ಮಾಡಿ ಮುಗಿಸಿದರು. ಇವರೆಲ್ಲರ ಕಾಯಕಕ್ಕೆ (ಅದು ಅವರ ದಿನನಿತ್ಯದ ಜವಾಬ್ದಾರಿಯಾಗಿರಬಹುದು) ನಾನು ಸದಾ ಚಿರಋಣಿ.

ಅಪಘಾತದ ಸುದ್ದಿ ತಿಳಿದ ನಂತರ ನನ್ನೆಲ್ಲ ಸ್ನೇಹಿತರು, ಹಿತೈಷಿಗಳು ಹಾಗೂ ಕುಟುಂಬದ ಸದಸ್ಯರುಗಳು ದಿನನಿತ್ಯ ಆಸ್ಪತ್ರೆಗೆ ಬಂದು, ಆರೋಗ್ಯ ವಿಚಾರಿಸುತ್ತಾ, ಸಾಂತ್ವಾನ ಹೇಳಿದ್ದು ಎಂದಿಗೂ ಮರೆಯುವಂತಿಲ್ಲ. ಜೊತೆಯಲ್ಲಿ ಮೊಬೈಲ್ ಮುಖಾಂತರ ನನ್ನ ಗುರುಗಳು, ಸಂಶೋಧನಾ ಸಹಾಯಕರು, ನನ್ನ ಪತ್ರಿಕಾಮಿತ್ರರು ಅಪಘಾತಕ್ಕೆ ಸಂಭಂಧಿಸಿ ಶೀಘ್ರಗುಣಮುಖವಾಗಲಿ ಹಾರೈಸಿದರು.



ಡಾ.ಮಾವಿನಕಟ್ಟಿಯವರ ಮಾತನ್ನು ಉಲ್ಲಂಘಿಸಿದ್ದೇ ಅಪಘಾತಕ್ಕೆ ಕಾರಣ


ಡಾ.ಮಾವಿನಕಟ್ಟಿಯವರು
 

ರಾಮಚಂದ್ರ ಗುರೂಜಿಯವರಿಂದ ತರಬೇತಿ ಪಡೆದಿರುವ ಡಾ.ಮಾವಿನಕಟ್ಟಿಯವರು ಹಲವು ದಿನಗಳಿಂದ ವ್ಯಕ್ತಿತ್ವ ವಿಕಸನಕ್ಕಾಗಿ ಕೈಗೊಳ್ಳಬೇಕಾದ ಹಲವು ಕ್ರಮಗಳನ್ನು ನನಗೆ ಉಚಿತವಾಗಿ ಹೇಳುತ್ತಿದ್ದರು. ಆದರೆ, ಅದನ್ನು ಸರಿಯಾಗಿ ಪಾಲಿಸಿದ್ದರೆ, ಈ ಅಪಘಾತ ಸಂಭವಿಸುತ್ತಿದ್ದಿಲ್ಲ.

ನನ್ನಲ್ಲಿರುವ ಸಿಟ್ಟು ಹಾಗೂ ದೌರ್ಬಲ್ಯವನ್ನು ಸರಿಮಾಡಿಕೊಳ್ಳಲು ಖುದ್ದಾಗಿ ತಾವುಗಳೇ ಹಲವು ಪ್ರಯೋಗಗಳನ್ನು ಮಾಡಿ ತೋರಿಸಿದ್ದಾರೆ. ಅದರಲ್ಲಿ ನಾನು ಕೆಲವೊಂದನ್ನು ಆಸಕ್ತಿಯಿಂದ ಕಲಿತಿದ್ದೆನೆಯೂ ಕೂಡ.

ಕನರ್ಾಟಕದ ನಾಲ್ಕು ರಾಜಕಾರಣ ಬಣಗಳು

ಬಣ 1 :

ನಜೀರ ಸಾಬ್
60 ಹಾಗೂ 70 ರ ದಶಕದಲ್ಲಿ ತಮ್ಮರಾಜಕಾರಣ ಶುರು ಮಾಡಿದ ನಜೀರ ಸಾಬ್, ಕೆ.ಹೆಚ್.ರಂಗನಾಥ್, ಬಿ.ಎಲ್.ಗೌಡ, ಕೆಂಪೀರೆಗೌಡ, ಸಂಗಮೇಶ್ವರ ಸದರ್ಾರ, ಎ.ಲಕ್ಷ್ಮೀಸಾಗರ್, ಕಲ್ಲಣನವರ್, ಬಂಡೀ ಸಿದ್ದೇಗೌಡ, ವೈ.ಕೆ.ರಾಮಯ್ಯ (ಇಲ್ಲಿ ಇನ್ನೂ ಅನೇಕ ಹೆಸರುಗಳನ್ನು ಸೇರಿಸಬಹುದು. ಇದು ಕೇವಲ ಉದಾಹರಣೆಗೆ) ರಂತಹ ಕನರ್ಾಟಕದ ರಾಜಕಾರಣಿಗಳು 80 ಹಾಗೂ 90ರ ದಶಕದ ಮಧ್ಯಭಾಗದವರೆಗೂ ರಾಜ್ಯದ ರಾಜಕಾರಣದಲ್ಲಿ ಸಕ್ರಿಯವಾಗಿದ್ದರು.

ಇವರಲ್ಲಿ ಕೆಲವರು ಕಾಂಗ್ರೆಸ್ನವರಾಗಿದ್ದರೆ, ಕೆಲವರು ಜನತಾ ಪಕ್ಷಕ್ಕೆ ಸೇರಿದ್ದರು. ಈ ವಿಭಿನ್ನ ಪಕ್ಷದ ಭಿನ್ನತೆ ಹೊರತುಪಡಿಸಿ ಇವರಲ್ಲಿ ಅನೇಕ ಸಾಮ್ಯತೆಗಳಿದ್ದವು. ಮೊದಲನೆಯದಾಗಿ ಇವರೆಲ್ಲ ಶೂದ್ರ, ಹಿಂದುಳಿದ, ದಲಿತ, ಅಲ್ಪ ಸಂಖ್ಯಾತ ವರ್ಗಕ್ಕೆ ಸೇರಿದವರು, ಸಂಕೋಚದ ವ್ಯಕ್ತಿತ್ವವುಳ್ಳವರು, ಆಕರ್ಷಕ ಮಾತುಗಾರರಾಗಿರಲಿಲ್ಲ, ರಾಜಕಾರಣಿಗಳಾಗಿದ್ದರೂ ಎಂದೂ ವೇದಿಕೆ ಮೇಲೆ ಅಸಂಖ್ಯ ಜನರನ್ನು ಮೋಡಿ ಮಾಡುವ ಭಾಷಣಕಾರರಾಗಿರಲಿಲ್ಲ, ರಾಜಕೀಯದಲ್ಲೂ ಎಂದೂ ಆರಕ್ಕೇರದ ಇವರು ಮಾನವತಾವಾದಿಗಳಾಗಿದ್ದರು, ಅನೇಕರು ಉತ್ತಮ, ದಕ್ಷ ಆಡಳಿತಗಾರರಾಗಿದ್ದರು, ಬಡಜನತೆಯ ಪರವಾಗಿ ಇವರ ಹೃದಯ ಪ್ರಾಮಾಣಿಕವಾಗಿ ಮಿಡಿಯುತ್ತಿತ್ತು.

ಇವರಲ್ಲಿ ಬಹುತೇಕರು ಆಷಾಡಭೂತಿತನದ, ಮೋಸದ ರಾಜಕಾರಣ ಕಂಡರೆ ಕೆಂಡಾಮಂಡಲವಾಗುತ್ತಿದ್ದರು. ಈ ಕಾರಣಕ್ಕೆ ಕೆಲವು ಬಾರಿ ವಿವಾದಕ್ಕೆ ಕಾರಣರಾಗಿದ್ದರು. ಆದರೆ ತಾವು ಸಚಿವರಾಗಿದ್ದ ಕಾಲದುದ್ದಕ್ಕೂ ಜನಪರ ಕೆಲಸಗಳನ್ನು ಮಾಡಿದ್ದರು. ಈ ಮೂಲಕ ತಮ್ಮ ಪ್ರೀತಿಯ ನಾಯಕರಾದ ಅರಸು, ಹೆಗಡೆಯವರಿಗೆ ಹೆಸರನ್ನು ತಂದುಕೊಟ್ಟಿದ್ದರು. ಇವರು ಎಂದೂ ಜಾತೀಯತೆ ಮಾಡಲಿಲ್ಲ, ಜಾತಿ ರಾಜಕಾರಣದಿಂದ ದೂರವಿದ್ದರು, ಗುಂಪುಗಳನ್ನು, ಹಿಂಬಾಲಕರನ್ನು, ಪುಢಾರಿಗಳನ್ನು ಕಟ್ಟಲಿಲ್ಲ ಹಾಗೂ ಹತ್ತಿರಕ್ಕೆ ಬಿಟ್ಟುಕೊಳ್ಳಲಿಲ್ಲ. ತಮ್ಮ ಸುಧೀರ್ಘ ರಾಜಕೀಯ ಜೀವನದಲ್ಲಿ ವಿಫುಲ ಅವಕಾಶಗಳಿದ್ದರೂ ಎಂದೂ ರಾಜಕೀಯವಾಗಿ ಮಹತ್ವಾಕಾಂಕ್ಷಿಗಳಾಗಿರಲಿಲ್ಲ. ಇದರಿಂದಾಗಿಯೇ ಯಾವುದೇ ಹಿಂದುಳಿದ ಜಾತಿಗಳ ಒಕ್ಕೂಟಗಳನ್ನು ಕಟ್ಟಲ್ಲಿಲ್ಲ. ಚಳುವಳಿ ಆಧಾರಿತ ಹೋರಾಟಗಳು ಇವರ ಪಾಲಿಗೆ ಒಗ್ಗುತ್ತಿರಲ್ಲಿಲ್ಲ. ಹಾಗಾಗಿಯೇ ಯಾವುದೇ ಜನ, ಜಾತಿ, ವರ್ಗ ಸಮುದಾಯದೊಂದಿಗೂ ಇವರ ಐಡೆಂಟಿಟಿ ಇರಲಿಲ್ಲ. ಕೇವಲ ವ್ಯಕ್ತಿಗತ ಪರಿಶುದ್ಧ, ಸರಳ ರಾಜಕಾರಣವೇ ಇವರ ಬಂಡವಾಳ.

ಇವರ ಈ ಎಲ್ಲ ಗುಣಗಳು ರಾಜಕೀಯ ಜೀವನದಲ್ಲಿ ಇವರನ್ನು ಭ್ರಷ್ಟಾಚಾರದ ಕಳಂಕದಿಂದ ಮುಕ್ತಿಗೊಳಿಸಿತ್ತು. ಆದರೆ ಇವೆಲ್ಲಕ್ಕಿಂತಲೂ ಇವರ ದೊಡ್ಡ ಸಾಧನೆ ತಮ್ಮ ನಂಬಿದ ಆದರ್ಶಗಳನ್ನು ಬಿಟ್ಟುಕೊಡದೆ ಯಾವ ಆಮಿಷೆಗಳಿಗೆ ಬಲಿಯಾಗದೆ ಅತ್ಯಂತ ಬಿಕ್ಕಟ್ಟಿನ ಸಂಧರ್ಭದಲ್ಲೂ, ಅನೇಕ ಒತ್ತಡಗಳಿದ್ದರೂ ಕುಂಟುಂಬ ರಾಜಕಾ ರಣವನ್ನು ಮಾಡಲೇ ಇಲ್ಲ. ಸ್ವಜನ ಪಕ್ಷಪಾತವೆನ್ನುವ ಹೊಲಸನ್ನು ಇವರೆಂದೂ ತಮ್ಮ ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ. ಇದರ ಫಲವಾಗಿಯೇ ಇವತ್ತಿಗೂ ಇವರ ಮಕ್ಕಳು, ಬಂಧುವರ್ಗದವರಾರು ರಾಜಕೀಯದಲ್ಲಿಲ್ಲ. ಇದು ಅಂತಿಂಥ ಸಾಧನೆ ಏನಲ್ಲ. ಇದಕ್ಕಾಗಿ ಕನರ್ಾಟಕದ ಜನತೆ ಇವರಿಗೆ ಸದಾ ಕೃತಜ್ಞತೆಯನ್ನು ಸೂಚಿಸುತ್ತದೆ.

ಎರಡು ಬಾರಿ, ಮೂರು ಬಾರಿ ಗೆದ್ದು ಬಂದರೂ ತಮ್ಮ ರಾಜಕೀಯ ಕ್ಷೇತ್ರವನ್ನು ಎಂದೂ ಮೂಗಿನ ಮೇಲೆ ಬೆರಳಿಡುವಷ್ಟು ಬೆಳೆಸುವ, ಅಭಿವೃದ್ದಿಗೊಳಿಸುವ ಯಾವ ಕಾರ್ಯಕ್ರಮಗಳನ್ನೂ ಇವರು ಹಾಕಿಕೊಳ್ಳಲಿಲ್ಲ, ಹೀಗಾಗಿ ಇವರ ಅಧಿಕಾರದ ಅವಧಿಯಲ್ಲಿ ಇವರ ಶಾಸಕ ಸ್ಥಾನದ ಕ್ಷೇತ್ರಗಳು ಎಂದೂ ಅಭೂತಪೂರ್ವ ಎನ್ನುವ ಮಟ್ಟದಲ್ಲಿ ಅಭಿವೃದ್ಧಿ ಹೊಂದಲೇ ಇಲ್ಲ. ಇದಕ್ಕೆ ಮೂಲಭೂತ ಕಾರಣ ಇವರು ಸದಾಕಾಲ ಪೊರೆಯುವ ಜನಸಂಪರ್ಕದ ಕೊರತೆಯನ್ನು ಎದುರಿಸಿದ್ದು, ಹಾಗೂ ಎಂದಿಗೂ 24 ಗಂಟೆಗಳಲ್ಲದಿದ್ದರೂ ಕನಷ್ಟ 12 ಗಂಟೆಗಳ ಬಿಡುವಿಲ್ಲದ ರಾಜಕಾರಣ ಮಾಡುವ ಜಾಯಮಾನವೇ ಇವರದಾಗಿರಲಿಲ್ಲ. ಇವರು ಅತ್ಯಂತ ಜನಪ್ರಿಯರಾಗಿದ್ದರೂ ನಜವಾದ ಅರ್ಥದ ಜನನಾಯಕರಾಗಿರಲಿಲ್ಲವಾಗಿದ್ದರಿಂದ ವ್ಯವಸ್ಥೆಯೊಂದಿಗೆ ಸದಾಕಾಲವಲ್ಲದಿದ್ದರೂ ಅವಶ್ಯಕತೆ ಬಿದ್ದಾಗಲೆಲ್ಲ ಜಿದ್ದಾಜಿದ್ದಿ ನಡೆಸುವ ರಾಜಕೀಯ ಎದೆಗಾರಿಕೆ ಇವರಲ್ಲಿರಲ್ಲ. ರಾಜಕೀಯ ಬಿಕ್ಕಟ್ಟಿನ ಸಂಧರ್ಭಗಳಲ್ಲಿ (ಕಾಂಗ್ರೆಸ್ ಹೋಳಾದಾಗ, ತುತರ್ು ಪರಿಸ್ಥಿತಿ, ತಮ್ಮ ನಾಯಕ ಅರಸು ಅವರು ಕಾಂಗ್ರೆಸ್ನಿಂದ ಹೊರ ಬಂದು ತಬ್ಬಲಿಯಾದಾಗ, ಜನತಾ ಪಕ್ಷ ವಿಘಟನೆಗಳ ಸರಮಾಲೆಯಲ್ಲಿ ಸಿಲುಕಿಕೊಂಡಾಗ, ರಾಮಕೃಷ್ಣ ಹೆಗಡೆ ಸ್ವಜನ ಪಕ್ಷಪಾತದ, ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿದಾಗ) ಇವರೆಂದೂ ದಿಟ್ಟತನವನ್ನು ಪ್ರದಶರ್ಿಸಲಿಲ್ಲ. ಒಂದು ರೀತಿಯಲ್ಲಿ ಜಾಣ ಮೌನವನ್ನು ಆಶ್ರಯಸಿದ್ದರು. ಈ ಜಾಣ ಮೌನ ಆ ಕಾಲದಲ್ಲಿ ಪ್ರಶ್ನಾರ್ಹ ಎನಸಿತ್ತು.

ಅನೇಕ ಸಾಮಾಜಿಕ ಸ್ಥಿತ್ಯಂತರಗಳು, ಜಾತೀಯ ದೌರ್ಜನ್ಯಗಳು ತಮ್ಮ ಕಾಲಘಟ್ಟದಲ್ಲಿ ನಡೆದಾಗಲೂ ಇವರು ವ್ಯಕ್ತಪಡಿಸಿದ ಅಸಹಾಯಕತೆ, ನರ್ಲಕ್ಷ್ಯತೆ ಕೂಡ ಪ್ರಶ್ನಾರ್ಹವೇ ಆಗಿತ್ತು. ರಾಜಕೀಯ ಇಚ್ಛಾಶಕ್ತಿಯನ್ನು ಸಂಪೂರ್ಣವಾಗಿ, ಅತ್ಯಂತ ದಿಟ್ಟತನದಿಂದ ಪ್ರಯೋಗಿಸಿದಾಗ ಮಾತ್ರ ಒಬ್ಬ ಜನನಾಯಕ ಮತ್ತೊಂದು ಅರ್ಥಪೂರ್ಣ ತಲೆಮಾರನ್ನು ಹುಟ್ಟಿಹಾಕಲು ಸಾಧ್ಯ ಎನ್ನುವ ರಾಜಕೀಯದ ಮೂಲ ಮಂತ್ರ ಈ ಬಣಕ್ಕೆ ಅರ್ಥವಾಗಿರಲಿಲ್ಲವೋ ಅಥವಾ ಎಂದಿನಂತೆ ನಮಗ್ಯಾತಕ್ಕೆ ಇದೆಲ್ಲ ಎನ್ನುವ ಧೋರಣೆಯೋ, ಕೊನೆಗೂ ಇವರಿಗೆ ರಾಜಕೀಯ, ಸಾಮಾಜಿಕ ಸಂಕೀರ್ಣತೆ, ಸ್ಥಿತ್ಯಂತರಗಳು, ಕಾಲ ಕಾಲಕ್ಕೆ ಬದಲಾಗುತ್ತಿರುವ ವಸ್ತುನಷ್ಟತೆ ಅರ್ಥವಾದಂತಿರಲಿಲ್ಲ. ಆದರೆ ರಾಜಕಾರಣಿ ಏನೆಲ್ಲ ಅದ್ಭುತ ಕಾರ್ಯಗಳನ್ನು, ಹೊಸ ಸಮಾಜವನ್ನು ಕಟ್ಟಲಿಕ್ಕಾಗುವಷ್ಟು, ಜೀವಪರ ಚಲನಶೀಲತೆಯನ್ನು ತರವಷ್ಟು ಧೀಮಂತ ನಾಯಕ ಆಗಿರಬೇಕು ಎನ್ನುವ ಸರ್ವಕಾಲದ ಆದರ್ಶದ ಅಪೇಕ್ಷಣೆಯೇ ಇಂದು ಕನಸಿನ ಗಂಟಾಗಿರುವ ಸಂಧರ್ಭದಲ್ಲಿ ಅಸಹಾಯಕನೂ, ನಚನೂ ಅಗದೆ ಕನಷ್ಟ ಇವರಷ್ಟಾದರೂ ಪ್ರಾಮಾಣಿಕವಾಗಿ ದುಡಿದು, ಬಾಳಿ ಬದುಕಬೇಕು ಎಂದು ಇಂದಿನ ತಲೆಮಾರಿಗೆ, ಮುಂದಿನ ತಲೆಮಾರಿಗೆ ಇವರನ್ನು ಮಾದರಿಯಾಗಿ ನಾವು ಅತ್ಯಂತ ಹೃತ್ಪೂರ್ವಕವಾಗಿ ಹೇಳಬಹುದು.

ಬಣ 2 :
ದೇವೇಗೌಡ
ಮೇಲಿನ ಬಣಕ್ಕೆ ಹೋಲಿಸಿದರೆ ಸಂಪೂರ್ಣ ತದ್ವಿರುದ್ಧ ವ್ಯಕ್ತಿತ್ವದ, ರಾಜಕಾರಣಿಗಳು ದೇವೇಗೌಡ ಹಾಗೂ ದಿವಂಗತ ಎಸ್.ಬಂಗಾರಪ್ಪ. ರಾಜಕೀಯವಾಗಿ ಅತ್ಯಂತ ಮಹಾತ್ವಾಕಾಂಕ್ಷಿಗಳಾಗಿದ್ದ ಇವರಿಬ್ಬರೂ ಶೂದ್ರರ, ಹಿಂದುಳಿದ ವರ್ಗಗಳ ಪ್ರಶ್ನಾತೀತ ನೇತಾರರೆನ ಸಿಕೊಂಡವರು.

ಇವರು ಹಳ್ಳಿ ಮೂಲದ ಜಿಗುಟುತನದ, ಸರಳತೆ, ಆಷಾಢ ಭೂತಿತನವನ್ನು, ಪುಢಾರಿಗಿರಿಯನ್ನು ಕಂಡರೆ ಸದಾ ಸಿಡಿದೇಳುವ ಗುಣ, ಉಳುವವರ ಬಗೆಗೆ ಸದಾಕಾಲ ಚಿಂತಿಸುವ ಮನಸ್ಸು, ಯಾವುದಕ್ಕೂ ಬಗ್ಗದ ಆತ್ಮ ವಿಶ್ವಾಸ ಹಾಗೂ ಈ ನೆಲದ. ಈ ಮಣ್ಣಿನ ವ್ಯಕ್ತಿತ್ವವನ್ನು ಹೊಂದಿದ್ದರು. 80ರ ದಶಕದಲ್ಲಿ ಅತ್ಯಂತ ಸಮರ್ಥ ನಾಯಕರಾಗಿ ಹೊರ ಹೊಮ್ಮಿದ ದೇವೇಗೌಡರು ಅಂದಿಗೂ ಇಂದಿಗೂ ಅತ್ಯುತ್ತಮ ನೀರಾವರಿ ತಜ್ಞರೆಂದು ಪ್ರಖ್ಯಾತಿಯಾದವರು. ರಾಜ್ಯದ ಪ್ರತಿಯೊಂದು ಜಿಲ್ಲೆಗಳ ವೈಶಿಷ್ಟ್ಯಗಳನ್ನು ಸ್ಪಷ್ಟವಾಗಿ ಅರಿ ತಿದ್ದ ದೇವೇಗೌಡರು ಹಾಗೂ ಇದೇ ಮಾದರಿಯ ಮತ್ತೊಬ್ಬ ಧೀಮಂತ ನಾಯಕರಾಗಿದ್ದ ದಿವಂಗತ ಎಸ್.ಬಂಗಾರಪ್ಪ ಹಿಂದು ಳಿದ ವರ್ಗಗಳಲ್ಲಿ ಸದಾ ಪ್ರಜ್ವಲಿಸುವ ಸ್ವಾಭಿಮಾನದ ಕಿಚ್ಚನ್ನು ತಂದುಕೊಟ್ಟಿದ್ದು ಸಾಮಾನ್ಯ ಸಂಗತಿಯೇನಲ್ಲ.

ತಮ್ಮ ಹಳ್ಳಿಯ ಮುಗ್ಧ, ಪ್ರಾಮಾಣಿಕ ವ್ಯಕ್ತಿತ್ವವನ್ನು ದೇವೇಗೌಡರು ದಣಿವರಿಯದ ನರಂತರ ಜನಸಂಪರ್ಕದ ರಾಜಕಾರಣದ ಮೂಲಕವೂ ಬಂಗಾರಪ್ಪನವರು ಸಮಾಜವಾದಿ ಹಿನ್ನೆಲೆಯಿಂದ, ಶಾಂತವೇರಿ ಗೋಪಾಲ ಗೌಡರ ನಾಯಕತ್ವದಿಂದ ಪಡೆದು ಕೊಂಡಿದ್ದರು. ಸಕಾರಣವಾಗಿಯೆ ಇವರಿಗೆ ತಾವು ಈ ರಾಜ್ಯದ ಮುಖ್ಯಮಂತ್ರಿಯಾಗಲು ಅರ್ಹರೂ ಎನ್ನುವ ಆತ್ಮವಿಶ್ವಾಸ ಹಾಗೂ ಇದು ಫಲಿಸುವ ಕಾಲವೂ ಕೂಡಿ ಬಂದಾಗ ಆಗ ಚಲಾವಣೆಯಲ್ಲೇ ಇಲ್ಲದ ರಾಮಕೃಷ್ಣ ಹೆಗಡೆ ಎನ್ನುವ ಬೋಡರ್್ ರೂಂ ರಾಜಕಾರಣಿ ಹಿಂಬಾಗಿಲಿನಂದ ಪ್ರವೇಶಿಸಿ ಮುಖ್ಯಮಂತ್ರಿ ಗದ್ದುಗೆಗೇರಿ ತಮ್ಮ ಕುಟಿಲ ನತಿಯ ಮೂಲಕ ಇವರಿಬ್ಬರಿಗೂ ಚೆಳ್ಳೆಹಣ್ಣು ತಿನ್ನಸಿದ್ದರು.

ಇವರಿಬ್ಬರನ್ನು 80ರ ದಶಕದುದ್ದಕ್ಕೂ ಕಾಡಿದ ಕನ್ನಡ ಮಾಧ್ಯಮಗಳ ಜಾತೀಯತೆ ಹಾಗೂ ಧೂರ್ತತನವಂತೂ ಕಣ್ಣಿಗೆ ರಾಚು ವಷ್ಟು ಪ್ರಖರವಾಗಿತ್ತು. ( ಆ ದಶಕಗಳಲ್ಲಿ ಹೆಗಡೆಯವರೊಂದಿಗೆ ಸತತವಾಗಿ ಗುರುತಿಸಿಕೊಂಡ,) ಅವರನ್ನು ಸದಾ ಬೆಂಬಲಿಸಿ ಈ ಶೂದ್ರ, ಹಿಂದುಳಿದ ರಾಜಕಾರಣಿಗಳ ಬಗ್ಗೆ ಅಸಡ್ಡೆ ತೋರಿದ ನಮ್ಮ ಪ್ರೀತಿಯ, ಹೆಮ್ಮೆಯ ಕನ್ನಡದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳು ಈಗ ಬಂಗಾರಪ್ಪನವರು ತೀರಿಕೊಂಡನಂತರ ವಿಚಿತ್ರ ರೀತಿಯಲ್ಲಿ ರಾಗ ಬದಲಿಸಿ ಹಾಡುತ್ತಿರುವುದು ನಮ್ಮಂತ ಹವರಲ್ಲಿ ಬೆರಗನ್ನು, ಹತಾಶೆಯನ್ನು ಮೂಡಿಸಿದೆ.

ಆಗ ಲಂಕೇಶ್ ಪತ್ರಿಕೆ, ಮುಂಗಾರು, ಪ್ರಜಾವಾಣಿಯಂತಹ ಪತ್ರಿಕೆಗಳನ್ನು ಹೊರತು ಪಡಿಸಿ ಮಿಕ್ಕೆಲ್ಲ ಮಾಧ್ಯಮಗಳು ಬೆನ್ನೆಲು ಬಿಲ್ಲದ, ಕುತಂತ್ರ ರಾಜಕಾರಣಿ ಹೆಗಡೆಯವರನ್ನು ಅಟ್ಟದ ಮೇಲೆ ಕೂರಿಸಿ ಜನಗಳ ಮಧ್ಯದಿಂದ ರಾಜಕೀಯವನ್ನು ಮಾಡಿ ಜನ ನಾಯಕರೆನಿಸಿಕೊಂಡ ಇವರಿಬ್ಬರನ್ನೂ ಪದೇ ಪದೇ ಗೇಲಿಗೊಳಿಸುತ್ತ, ಹಂಗಿಸುತ್ತ ಹೆಗಡೆ ಒಬ್ಬ ವಿನಯವಂತ ರಾಜಕಾರಣಿ ಯಂತೆಯೂ, ಇವರು ಸೀನದರೆ ಅಕ್ಕರೆಯಿಂದ ಕೊಡೆ ಹಿಡಿದು, ದೇವೇಗೌಡ ಹಾಗೂ ಎಸ್.ಬಂಗಾರಪ್ಪ ಕೇವಲ ತಂಟೆಕೋರ ರಂತೆಯೂ, ಇವರಿಬ್ಬರೂ ಇಲ್ಲಿನ ಬರ ಪೀಡಿತ ಹಳ್ಳಿಗಳ ಬಗ್ಗೆ, ನರಾವರಿಯ ಅಗತ್ಯತೆಯ ಬಗ್ಗೆ ತಮ್ಮೆಲ್ಲ ಅನುಭವವನ್ನು ಬಳಸಿ ಮಾತನಾಡತೊಡಗಿದಾಗ ಇದೇ ಮಾಧ್ಯಮಗಳು ಇದನ್ನು ಬಂಡಾಯವೆನ್ನುವಂತೆಯೂ ಯಶಸ್ವಿಯಾಗಿ ಬಿಂಬಿಸಿದ್ದು ಇವರಿಬ್ಬರ ಆತ್ಮಪ್ರತಿಷ್ಠೆಗೆ ದೊಡ್ಡ ಬರೆಯನ್ನೇ ಎಳೆಯಿತು.

ಇದನ್ನು ಇವರಿಬ್ಬರೂ ತಮ್ಮ ಹಳ್ಳಿತನದ ಪ್ರಾಮಾಣಿಕತೆ, ಸರ್ವರಿಗೂ ಸಮಪಾಲನ್ನು ಬಯಸುವ ಪ್ರಾಮಾಣಿಕತೆಯನ್ನು ಬಳಸಿ ಕೊಂಡು ಮರಳಿ ತಮ್ಮ ಜನರ ಬಳಿಗೆ ಹೋಗುವುದರ ಬದಲು, ಆ ಮೂಲಕ ಮತ್ತೆ ತಮ್ಮ ರಾಜಕೀಯದ ಬುನಾದಿಯನ್ನು ಹಂತ ಹಂತವಾಗಿ ಕಟ್ಟುವುದರ ಬದಲು 90ರ ದಶಕದ ಅಂತ್ಯದ ವೇಳೆಗೆ ಸಾಮಾಜಿಕ ಸ್ಪರ್ಶವನ್ನು ನಧಾನವಾಗಿ ಕಳೆದುಕೊಳ್ಳುತ್ತ ಒಕ್ಕಲಿಗರೆಂದರೆ ಅವರು ಎಲ್ಲಾ ಜಾತಿಗಳಲ್ಲಿರುವ ವೃತ್ತಿಪರ, ಅಮಾಯಕ, ಅಸಹಾಯಕ ರೈತರು ಎನ್ನುವ ಮೂಲಭೂತ ತತ್ವ ವನ್ನೇ ಮರೆತು ಅವರನ್ನು ಕೇವಲ ತಮ್ಮ ಓಟ್ ಬ್ಯಾಂಕ್ ಜಾತಿಯಾಗಿ ಕಂಡ, ಸ್ವಂತದ, ಆದರ್ಶದ ಘನತೆಯೆಂದರೆ ಒಕ್ಕಲಿಗರ, ಸ್ವಂತ ಕುಟುಂಬದ ವರ್ಚಸ್ಸು ಹಾಗೂ ಅಧಿಕಾರವೆನ್ನುವ ಮಟ್ಟಕ್ಕೆ ತಲುಪಿದ ದೇವೇಗೌಡರು, 90ರ ದಶಕದ ಅಂತ್ಯದ ವೇಳೆಗೆ ತಮ್ಮ ಮೂಲ ಪ್ರಗತಿಪರ ಗುಣವಾದ ಎಲ್ಲಾ ಜಾತಿಯ ಬಡವರ ಪರ ಸದಾ ತುಡಿಯುವ ಹಳೇ ಕಾಲದ ತಮ್ಮ ವ್ಯಕ್ತಿತ್ವವನ್ನು ಜನ ನಾಯಕರಾಗುವ ಮತ್ತೊಂದು ಎತ್ತರಕ್ಕೆ ಕೊಂಡೊಯ್ಯುವ ರಾಜಕೀಯ ಮುತ್ಸದ್ದಿತನವನ್ನೇ ಕಲಿಯದೆ ಕೇವಲ ವೈಯುಕ್ತಿಕ ಛಲ ವನ್ನೇ ಇನ್ನಿಲ್ಲದಂತೆ ನೆಚ್ಚಿ ಇದರ ಋಣಾತ್ಮಕ ಅಂಶಗಳನ್ನೇ ತಮ್ಮ ಆತ್ಮ ಪ್ರತ್ಯಯದ ಸದಾ ಕಾಲ ದುರಂತ ನಾಯಕನ ಪೋಸಿ ಗೆ ಬಳಸಿಕೊಂಡು ಸೋಲಿಲ್ಲದ ಸರದಾರರೆನ್ನುವ ಘೋಷಣೆಗೆ ಬಲಿಯಾಗಿ ಸಂಪೂರ್ಣವಾಗಿ ಹಾದಿ ತಪ್ಪಿದ ದಿವಂಗತ ಎಸ್.ಬಂಗಾರಪ್ಪ.

ಇವರಿಬ್ಬರೂ ತಮಗೆ ಸಹಜವಾಗಿ ದೊರೆತ ಜನನಾಯಕರ ಜನಪ್ರಿಯತೆಯ ಧನಾತ್ಮಕ ಅಂಶಗಳಿಗೆ ತಿಲಾಂಜಲಿಯಿಟ್ಟು, ಸ್ವತಹ ಪರಿಶ್ರಮದಿಂದ ಪಡೆದ ಈ ಜನನಾಯಕ ಜನಪ್ರಿಯತೆಯನ್ನು ಯಾರೂ ಕಂಡರಿಯದಂತಹ ಕುಂಟುಂಬ, ಸ್ವಜನ ಪಕ್ಷಪಾತದ ರಾಜಕಾರಣಕ್ಕೆ ಧಾರೆಯೆರೆದು ತಮ್ಮನ್ನು ನಂಬಿದ ಪಕ್ಷ, ಅಮಾಯಕ ಹಿಂಬಾಲಕರನ್ನು ಸಂಪೂರ್ಣ ಅಧೋಗತಿಗೆ ತಂದು ನಿಲ್ಲಿಸಿ ತಮ್ಮ ಜೀವಿತದ ಸಂಧ್ಯಾಕಾಲದ ವೇಳೆಗೆ ಸಂಪೂರ್ಣ ಆಸಹಾಯಕ ಸ್ಥಿತಿಗೆ ತಲುಪಿ ನಗೆಪಾಟಲಿಗೀಡಾಗಿದ್ದು ನಜಕ್ಕೂ ದುಖದ ಸಂಗತಿ. ಇಷ್ಟೇ ಅಲ್ಲ ತಮ್ಮ ಹುಂಬ ಛಲವನ್ನೇ ರಾಜಕೀಯ ದಾಳವನ್ನಾಗಿ ಮಾಡಿಕೊಂಡು ಯಾರಿಗೋ ಪಾಠ ಕಲಿಸುತ್ತೇವೆ ಎನ್ನುವ ಹುಸಿ ಭ್ರಮೆಯಿಂದ ಅಧಿಕಾರಕ್ಕಾಗಿ ನೇಪಥ್ಯದಲ್ಲಿ ಹೊಂಚಿಹಾಕುತ್ತಿದ್ದ ಸಂಘ ಪರಿವಾರಕ್ಕೆ ಸಮರ್ಥ ರಾಜಕೀಯ ವೇದಿಕೆ ಯನ್ನು ನಮರ್ಿಸಿಕೊಟ್ಟರು. ಇಂತಹ ಸುವಣರ್ಾವಕಾಶವನ್ನು ಈ ಸಂಘ ಪರಿವಾರ ಕನಸಿನಲ್ಲಿಯೂ ನೆನಸಿರಲಿಲ್ಲ. ಆದರೆ ಈ ಜನನಾಯಕರು ತಮ್ಮ ರಾಜಕೀಯ ನೈತಿಕತೆಯನ್ನು ಅನಗತ್ಯವಾಗಿ ಬಲಿಕೊಟ್ಟು ಬಿಜೆಪಿಗೆ ಕನರ್ಾಟಕ ಹೆಬ್ಬಾಗಿಲನ್ನು ಪ್ರವೇಶಿಸುವ ಎಲ್ಲಾ ರಸ್ತೆಗಳನ್ನು ತೆರೆದು ಕೊಟ್ಟರು. ಇದಕ್ಕಾಗಿ ಇವರು ತೆತ್ತ ಬೆಲೆ ಅಪಾರವಾದದ್ದು ಹಾಗೆಯೇ ಕನರ್ಾಟಕದ ಜನತೆ ಕೂಡ. ಇವರಿಬ್ಬರಿಗೆ ಮೇಲಿನ ಬಣದ ತಮ್ಮ ಸಹೋದ್ಯೋಗಿಗಳ ಋಜು ಸ್ವಭಾವ ಸ್ವಲ್ಪವಾದರೂ ದಕ್ಕಿದ್ದರೆ, ಮೇಲಿನ ಬಣದ ಏನೇ ಬಂದರು ಕುಟುಂಬ ರಾಜಕಾರಣವನ್ನು ಮಾತ್ರ ಪೋಷಿಸುವುದಿಲ್ಲ ಎನ್ನುವ ನೈತಿಕ ಛಲ ಸ್ವಲ್ಪವಾದರೂ ದಕ್ಕಿದ್ದರೆ, ಮೇಲಿನ ಬಣದ ಎಂತಹ ವಿಷಮ ಪರಿಸ್ಥಿತಿಯಲ್ಲಿಯೂ ತಮ್ಮ ವ್ಯಕ್ತಿತ್ವವನ್ನು ಹಾಳು ಮಾಡಿಕೊಳ್ಳದ ನೈತಿಕತೆಯ ಪಾಲು ಸ್ವಲ್ಪ ವಾದರೂ ದಕ್ಕಿದ್ದರೆ?.

ಬಣ 3 :
ಸಿದ್ದರಾಮಯ್ಯ, ಮಲ್ಲಿಕಾಜು೯ನ ಖಗೆ೯ , ಎಂ.ಸಿ.ನಾಣಯ್ಯ, ಎಚ್.ಕೆ.ಪಾಟೀಲ, ಸಿಂಧ್ಯ, ಎಚ್.ಸಿ.ಮಹಾದೇವಪ್ಪ ಮುಂತಾದ ವರು. ಮೇಲಿನ ಎರಡೂ ಬಣಗಳ ವ್ಯಕ್ತಿತ್ವವನ್ನು ಅಷ್ಟಿಷ್ಟು ಪಡೆದುಕೊಂಡಂತಿರುವ ಇವರ ಬಗ್ಗೆ ಹೆಚ್ಚಿಗೆ ಹೇಳುವುದೇನಿದೆ?

ಇವರು ಸಂಘ ಪರಿವಾರದ ಕೋಮುವಾದ ರಾಜಕಾರಣಕ್ಕೆ ತಮ್ಮ ಸೆಕ್ಯುಲರ್ ವ್ಯಕ್ತಿತ್ವದ ಮೂಲಕವೇ ತಕ್ಕ ಉತ್ತರ ನೀಡಬಲ್ಲ ಛಾತಿಯುಳ್ಳವರು. ಆಡಳಿತಾತ್ಮಕವಾಗಿ ದಕ್ಷತೆಯನ್ನು, ಅಪಾರ ಅನುಭವವನ್ನು ಸಾಧಿಸಿರುವವರು. ರಾಜ್ಯದ ಹಣಕಾಸಿನ ಬಗ್ಗೆ ಯಾಗಲಿ, ಸಾಮಾಜಿಕ ಸ್ಥಿತ್ಯಂತರಗಳ ಬಗ್ಗೆಯಾಗಲೀ ಇವರು ಅಪಾರ ಜ್ಞಾನದಿಂದ ಮಾತನಾಡಬಲ್ಲರು. ಆದರೆ ಸಕ್ರಿಯ ರಾಜ ಕಾರಣಕ್ಕೆ ಅತ್ಯವಶ್ಯಕವಾಗಿರುವ ಸದಾಕಾಲ ಜನಸಂಪರ್ಕದ ತುತರ್ು ಅಗತ್ಯತೆ ಇವರಿಗೆ ಅಲಜರ್ಿ. ಏಕೆಂದರೆ ಇದಕ್ಕಾಗಿ ಕನಷ್ಟ 12 ಗಂಟೆಗಳ ರಾಜಕೀಯ ಮಾಡಬೇಕಾಗುತ್ತದೆ. ಅದು ಇವರಿಗಾಗದು. ಇವರ ಜನನಾಯಕನ ಖ್ಯಾತಿ ಮೇಲಿನ ಬಣ ಒಂದಂಕ್ಕಿಂತಲೂ ಕೊಂಚ ಜಾಸ್ತಿ ಹಾಗೂ ಮೇಲಿನ ಬಣ ಎರಡಕ್ಕಿಂತಲೂ ಕಡಿಮೆ. ಯಾವುದೇ ಕಾಲಕ್ಕೂ ಯಾರನ್ನು ಎದುರಿಸಿ ಯಾದರೂ ಸರಿಯೆ ನನ್ನ ಸ್ವಂತ ವ್ಯಕ್ತಿತ್ವ, ಛಲವನ್ನು ನೆಚ್ಚಿಯೇ ರಾಜಕೀಯ ಮಾಡುತ್ತೇನೆ ಹೊರತು ಇನ್ನೊಬ್ಬರ ಹಂಗಿನೊಳಗೆ ನೆಚ್ಚಿಕೊಂಡು ಮಾತ್ರ ಅಲ್ಲ ಎನ್ನುವ ರಾಜಕೀಯ ಛಲ ಮೇಲಿನ ಮೊದಲ ಬಣಕ್ಕಿಂತ ಸ್ವಲ್ಪ ಜಾಸ್ತಿ, ಎರಡನೇ ಬಣಕ್ಕಿಂತ ಕಡಿಮೆ. ಇವರ ಪ್ರಗತಿಪರ ಚಿಂತನೆಯ ಮನೋಭಾವ ಮೇಲಿನ ಎರಡೂ ಬಣಕ್ಕಿಂತಲೂ ಜಾಸ್ತಿ. ರಾಜಕೀಯದಲ್ಲಿ ಸದಾಕಾಲ ಎದುರಾ ಗುವ ಮುಂದೇನು ಮಾಡಬೇಕು ಎನ್ನುವ ನಿರಂತರ ಜಿಜ್ಞಾಸೆಯನ್ನು ಎದುರಿಸುವ, ನಿರ್ಧರಿಸುವ ಸ್ಪಷ್ಟತೆಯ ವಿಷಯದಲ್ಲಿ ಮೇಲಿ ನ ಎರಡೂ ಬಣಕ್ಕಿಂತಲೂ ಸಂಪೂರ್ಣ ಕಡಿಮೆ. ಇದು ಇವರಲ್ಲಿ ಅತ್ಯಂತ ದುರ್ಬಲ ರಾಜಕೀಯ ಇಚ್ಛಾಶಕ್ತಿಯ ಮನೋಭಾವ ವನ್ನು ಹುಟ್ಟಿಹಾಕಿ ಮಸಿ ಇಟ್ಟಂತೆ ಎಲ್ಲವನ್ನೂ ನುಂಗಿ ನೀರು ಕುಡಿದಿದೆ.

ಇಂದಿನ ಅತ್ಯಂತ ಹತಾಶೆಯ, ಸಂಧಿಗ್ಧ, ದಿಕ್ಕೆಟ್ಟ ಪರಿಸ್ಥಿತಿಯನ್ನು ಇವರು ತಮ್ಮ ಜಡತ್ವವನ್ನು ಕಳಚಿ ಸಂಪೂರ್ಣವಾಗಿ ಮೇಲೆದ್ದು ನಿರಂತರ ಜನಸಂಪರ್ಕದ ಮೂಲಕ ತಮ್ಮ ರಾಜಕೀಯ ಜೀವನದ ಪುನರುಜ್ಜೀವನಗೊಳಸಿಕೊಂಡರೆ ಇವರಿಗೆ ಸುವಣರ್ಾವ ಕಾಶ. ಆದರೆ ಕೊಟ್ಟ ಕುದುರೆಯನ್ನು ಏರಲು ನರಾಕರಿಸುತ್ತಾರೆ ಅಥವಾ ನರಾಕರಿಸಿದ್ದಾರೆ ಎನ್ನುವ ತಮ್ಮ ಮೇಲಿನ ಅಪಾದನೆ ಯಿಂದ ಹೊರಬರಲು ಇವರು ಪ್ರಯತ್ನಿಸಿದ ಯಾವುದೇ ದರ್ಶನಗಳು ಇಲ್ಲ.

ಬಣ 4 :

ಯಡಿಯೂರಪ್ಪ
ಕುಮಾರಸ್ವಾಮಿ, ಯಡಿಯೂರಪ್ಪ, ಶ್ರೀರಾಮುಲು ಹಾಗೂ ಮುಂತಾದವರು. ಮೊದಲಿಗೇ ಹೇಳಬಿಡಬೇಕು ಅನಾಯಾಸ ವಾಗಿ 3ನೇ ಬಣದಲ್ಲಿರಬಹುದಾದಂತಹ ಜನಪ್ರಿಯ ರಾಜಕಾರಣಿ ಕುಮಾರಸ್ವಾಮಿ ತಮ್ಮ ಗೊಂದಲಗಳು, ಆತ್ಮಹತ್ಯಾತ್ಮಕ ನಿಲು ವುಗಳು ಮೂಲಕ ಸರ್ರನೆ ಈ ಭ್ರಷ್ಟ ನಾಲ್ಕನೇ ಬಣಕ್ಕೆ ಜಾರಿರು ವುದು 21ನೇ ಶತಮಾನದ ಕನರ್ಾಟಕ ರಾಜಕೀಯದ ದುರಂತಗಳಲ್ಲೊಂದು. ಕೇವಲ ತಂತ್ರ ಹಾಗೂ ಪ್ರತಿ ತಂತ್ರಗ ಳನ್ನು ಹೆಣೆಯುತ್ತಾ ಎದುರಾಳಿಗಳನ್ನು ಅಡ್ಡಬೀಳಿಸುವುದೇ ಸಕ್ರಿಯ ರಾಜಕಾರಣ, ವೈಯುಕ್ತಿಕ ಭ್ರಷ್ಟಾಚಾರದ ಜೊತೆಗೆ ಸಂಪೂರ್ಣ ವ್ಯವಸ್ಧೆಯನ್ನೇ ಭ್ರಷ್ಟಾಚಾರಗೊಳಿಸಿದ ಅಪಕೀ ತರ್ಿ, ಕನರ್ಾಟದಲ್ಲಿ ಸದಾಕಾಲ ಅಧಿಕಾರ ಹಿಡಿಯುವುದು ನಮ್ಮ ಜನ್ಮಸಿದ್ಧ ಹಕ್ಕು ಎನ್ನುವ ಪಾಳೇಗಾರಿಕೆ ಧೋರಣೆ, ನೈತಿಕ ರಾಜಕಾರಣದ ಬಗ್ಗೆ ಇನ್ನಲ್ಲದಂತಹ ಅಸಡ್ಡೆ ಹಾಗೂ ತಿರಸ್ಕಾರ, ರಾಜಕೀಯದಲ್ಲಿ ನೈತಿಕತೆ ಎನ್ನುವುದೇ ಕಸದ ಬುಟ್ಟಿಗೆ ಸಮ, ಕುಂಟುಂಬ, ಸ್ವಜನ ಪಕ್ಷಪಾತ, ಜಾತಿ ರಾಜಕಾರಣವೆ ನ್ನುವುದು ಜನತೆಯ ಆಶೀವರ್ಾದದ ಮೂಲಕವೇ ಮಾಡುತ್ತಿದ್ದೇವೆ ಎನ್ನುವ ಹೂಂಕರಿಕೆ ಇಂತಹ ಅವಗುಣಗಳನ್ನು ಹೊಂದಿ ರುವ ಯಡಿಯೂರಪ್ಪ, ಶ್ರೀರಾಮುಲುರಂತಹವರ ರಾಜಕಾರಣಿಗಳು ಇವಕ್ಕೆ ಸಮವೆನ್ನುವಂತೆ ನಡೆದುಕೊಳ್ಳುತ್ತಿರುವ ಕುಮಾರ ಸ್ವಾಮಿ ಹಾಗೂ ಇವರ ಜೊತೆಗೆ ಸದಾಕಾಲ ಕಣ್ಣಾಮುಚ್ಚಾಲೆಯಾಟವಾಡುತ್ತ, ಅದರ ಖುಷಿಯನ್ನು ಅನುಭವಿಸುತ್ತ, ಇದನ್ನೇ ರಾಜಕಾರಣವೆನ್ನುವ ಭ್ರಮೆಯಲ್ಲಿರುವ, ಸುದ್ದಿಯಲ್ಲಿರುವ ಕುಮಾರಸ್ವಾಮಿಯವರ ರಾಜಕೀಯ ಎಲ್ಲವೂ ಬರುವ ವರ್ಷಗಳಲ್ಲಿ ಕನ ರ್ಾಟಕವನ್ನು ಮತ್ತಷ್ಟು ಅಂಧಕಾರಕ್ಕೆ, ಅಧೋಗತಿಗೆ ತಳ್ಳುವುದು ಗ್ಯಾರಂಟಿ. ಇವೆಲ್ಲವಕ್ಕೆ ಕಿರೀಟವಿಟ್ಟಂತೆ ಶ್ರೀರಾಮುಲು ಅವ ರು ಹಿಂದುಳಿದವರ ಏಳಿಗೆಗಾಗಿ ಸ್ಥಾಪಿಸುವ ಹೊಸ ಪಕ್ಷ ಆ ವರ್ಗದ ಅಮಾಯಕ ಜನತೆಯನ್ನು ಹಳ್ಳಕ್ಕೆ ಬೀಳಿಸುವುದು ಗ್ಯಾರಂಟಿ.

ಕೇವಲ ನೋಟುಗಳನ್ನು ಹಂಚುವುದೇ ಸಮಾಜಕಾರ್ಯವೆನ್ನುವುದನ್ನು ರಾಜಕೀಯ ಸಿದ್ಧಾಂತವನ್ನಾಗಿ ರೂಪಿಸಿರುವ ಶ್ರೀರಾ ಮುಲು ಹಾಗೂ ರೆಡ್ಡಿಯ ಬಳಗ ಬಳ್ಳಾರಿ ಭಾಗದ ಜನತೆಯನ್ನು ಕೂಡ ಇದಕ್ಕೆ ಸರಿಯಾಗಿ ಟ್ಯೂನ್ ಮಾಡಿಕೊಂಡಿರುವುದು ಹಾಗೂ ಈ ಮತಿಹೀನ ಹೊಸ ಪಕ್ಷದ ಮೂಲಕ ಇದು ಇನ್ನಷ್ಟು ಮುಂದುವರೆದು ಇನ್ನಿಲ್ಲದ ಹಂಗಿನ ಅನೈತಿಕ ಸ್ಥಿತಿಗೆ ಆ ಜಿಲ್ಲೆ ಯನ್ನು ಸಂಪೂರ್ಣವಾಗಿ ತಳ್ಳಿ ಇದೇ ತತ್ವವನ್ನು ರಾಜ್ಯದ ಇತರ ಭಾಗಗಳಿಗೂ ವಿಸ್ತರಿಸುವ ಕುಟಿಲ ಯೋಜನೆಗಳಿಗೆ ಮಿಕ್ಕವರಿ ಬ್ಬರೂ ಅಗಲೇ ಕಣ್ಣು ಮಿಟುಕಿಸುತ್ತಿರುವ ರೀತಿ, ಈ ಬಣದ ಮೂವರೂ ಮುಂದಿನ ದಿನಗಳ ರಾಜಕೀಯದ ಕಿಂಗ್ ಮೇಕರ್ ಗಳಾಗಿ ಬಿಂಬಿತವಾಗಿರುತ್ತಿರುವುದು, ಮೂರನೇ ಬಣದ ಜನರ ನಿಷ್ಕ್ರಿಯತೆ ಎಲ್ಲವೂ ರಾಜ್ಯದ ಪ್ರಜ್ಞಾವಂತರಿಗೆ, ನೈತಿಕತೆಗೆ ದೊಡ್ಡ ಸವಾಲಾಗುತ್ತವೆ.

ಹಾಗಿದ್ದರೆ ನಾವೇನು ಮಾಡಬೇಕು?

ವರ್ತಮಾನ ಬಳಗ

ಮಾನವ ಕಾಳಜಿಯ ಕೈಗನ್ನಡಿ



ಕಾಲ೯ ಮಾಕ್ಸ೯ರಂಥವರು ನಿರೀಶ್ವರವಾದವನ್ನು ಎತ್ತಿ ಹಿಡಿದರು. ಮಾನವರೇ ತಮ್ಮ ವ್ಯಕ್ತಿತ್ವವಿಕಸನದ ಮೂಲಕ ದೇವರಾಗುತ್ತಾರೆ ಎಂಬುದನ್ನು ಮಹಾವೀರರು ತಿಳಿಸಿದರು. ದೇವರ ಕುರಿತು ಅಜ್ಞೇಯವಾದಿ ನಿಲುವನ್ನು ಗೌತಮ ಬುದ್ಧ ತಾಳಿದ. ಏಸು, ಪೈಗಂಬರ್, ಬಸವಣ್ಣ ಮುಂತಾದವರು ಒಬ್ಬನೇ ದೇವರು, ಒಂದೇ ವಿಶ್ವ ಮತ್ತು ಒಂದೇ ಮಾನವಕುಲ ಎಂಬುದರಲ್ಲಿ ಅಚಲವಾದ ನಂಬಿಕೆ ಇಟ್ಟವರು ಎನ್ನುತ್ತಾರೆ ವಚನ ಅಧ್ಯಯನ ಕೇಂದ್ರದ ನಿದರ್ೇಶಕರಾದ ರಂಜಾನ ದಗಾ೯

ಉಪನಿಷತ್ ಋಷಿಗಳು, ಮಹಾವೀರ, ಗೌತಮ ಬುದ್ಧ, ಸಾಕ್ರೆಟಿಸ್, ಝರತುಷ್ಟ್ರ ಏಸುಕ್ರಿಸ್ತ, ಮುಹಮ್ಮದ್ ಪೈಗಂಬರ್, ಗುರುನಾನಕ, ಬಸವಾದಿ ಶರಣರು, ಸೂಫಿಗಳು, ಸಂತರು, ದಾಸರು, ಚಾವರ್ಾಕರು, ಕಾಲರ್್ ಮಾಕ್ಸರ್್ ಮುಂತಾದ ವಿವಿಧ ಚಿಂತನಾ ಮಾರ್ಗಗಳ ದಾರ್ಶನಿಕರು ಲೌಕಿಕರಿಗೆ ಜೀವನದರ್ಶನ ಮಾಡಿಸುವ ಉದ್ದೇಶದಿಂದ ತಮ್ಮ ಬದುಕನ್ನೇ ಮುಡಿಪಾಗಿಟ್ಟವರಾಗಿದ್ದಾರೆ. ಇವರ ಧರ್ಮದರ್ಶನ ಮತ್ತು ಚಿಂತನಾ ಕ್ರಮಗಳಲ್ಲಿ ವೈವಿಧ್ಯವಿರಬಹುದು. ಆದರೆ ಜನ ನೆಮ್ಮದಿಯ ಬದುಕು ಸಾಗಿಸುತ್ತ ವಿಶ್ವದ ರಹಸ್ಯವನ್ನು ಅರಿತುಕೊಳ್ಳಲಿ ಎಂಬುದೇ ಅವರ ಆಶಯವಾಗಿತ್ತು.

ಈ ರಹಸ್ಯವನ್ನು ಅರಿತುಕೊಳ್ಳುವಲ್ಲಿ ಮುಖ್ಯವಾಗಿ ನಾಲ್ಕು ವಿಧಾನಗಳನ್ನು ಅನುಸರಿಸಲಾಗಿದೆ. ಕಾಲರ್್ ಮಾಕ್ಸರ್್ರಂಥವರು ನಿರೀಶ್ವರವಾದವನ್ನು ಎತ್ತಿ ಹಿಡಿದರು. ಮಾನವರೇ ತಮ್ಮ ವ್ಯಕ್ತಿತ್ವವಿಕಸನದ ಮೂಲಕ ದೇವರಾಗುತ್ತಾರೆ ಎಂಬುದನ್ನು ಮಹಾವೀರರು ತಿಳಿಸಿದರು. ದೇವರ ಕುರಿತು ಅಜ್ಞೇಯವಾದಿ ನಿಲುವನ್ನು ಗೌತಮ ಬುದ್ಧ ತಾಳಿದ. ದೇವರು ಮತ್ತು ಆತ್ಮ ಇದ್ದಾವೆ ಅಥವಾ ಇಲ್ಲ ಎಂಬುದರ ಗೊಡವೆ ನಮಗೇಕೆ? ಲೋಕದ ಜನರನ್ನು ದುಃಖದಿಂದ ಪಾರು ಪಾಡುವುದೇ ತುತರ್ಾಗಿ ಆಗಬೇಕಾದ ಕಾರ್ಯ ಎಂಬುದು ಬೌದ್ಧ ದರ್ಶನದ ತಿರುಳು. ಏಸು, ಪೈಗಂಬರ್, ಬಸವಣ್ಣ ಮುಂತಾದವರು ಒಬ್ಬನೇ ದೇವರು, ಒಂದೇ ವಿಶ್ವ ಮತ್ತು ಒಂದೇ ಮಾನವಕುಲ ಎಂಬುದರಲ್ಲಿ ಅಚಲವಾದ ನಂಬಿಕೆ ಇಟ್ಟವರು. ದೇವರು ನಿಗರ್ುಣ ನಿರಾಕಾರ ಎಂಬುದರ ಪ್ರತಿಪಾದಕರಿವರು. ಇಂಥವರ ಮಧ್ಯೆ ಬಹುದೇವತೆಗಳ ಮೂತರ್ಿಗಳನ್ನು ಪೂಜಿಸುವ ಮತ್ತು ಆ ಮೂತರ್ಿಗಳಿಗೆ ದೇವಾಲಯಗಳನ್ನು ನಿಮರ್ಿಸುವ ಹಿಂದೂಧರ್ಮದ ಪಂಡಿತರೂ ಇದ್ದಾರೆ.

ಎಲ್ಲ ಏಕದೇವೋಪಾಸಕರು, ತಮ್ಮಲ್ಲೇ ದೇವರನ್ನು ಕಾಣುವವರು ಮತ್ತು ದೇವರ ಗೊಡವೆಗೆ ಹೋಗದವರು ಮತ್ತು ದೇವರು ಇಲ್ಲವೆಂದು ವಾದಿಸುವವರ ಮಧ್ಯೆ ಒಂದು ಒಮ್ಮತವಿದೆ ಅದೆಂದರೆ ಖಾಸಗಿ ಆಸ್ತಿ ರಾಕ್ಷಸೀ ಸಮಾಜವನ್ನು ಸೃಷ್ಟಿಸುತ್ತದೆ ಮತ್ತು ಸಾಮೂಹಿಕ ಆಸ್ತಿ ಮಾನವೀಯ ಸಮಾಜವನ್ನು ಸೃಷ್ಟಿಸುತ್ತದೆ ಎಂಬುದು. ಮಾನವೀಯ ಸಮಾಜ ನಿಮರ್ಾಣಕ್ಕಾಗಿ ಇವರೆಲ್ಲ ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಿಸಿದ್ದಾರೆ. ಇಂಥ ಮಾನವೀಯ ಸಮಾಜ ನಿಮರ್ಾಣ ಮಾಡಲು ಬೇಕಾದ ಮನಸ್ಸುಗಳನ್ನು ಸೃಷ್ಟಿಸುವುದೇ ಅಕ್ಕ ಅನ್ನಪೂರ್ಣತಾಯಿ ಅವರ ಈ ಜೀವನದರ್ಶನ ಕೃತಿಯಲ್ಲಿನ ಆಶಯವಾಗಿದೆ. ಅದಕ್ಕಾಗಿ ಅವರು ವಿಶ್ವದ ಅನೇಕ ದಾರ್ಶನಿಕರ ಮತ್ತು ಮಾನವತಾವಾದಿಗಳ ವಿಚಾರಗಳ ಮೂಲಕ ಕಳೆದ ಶ್ರಾವಣ ಮಾಸದಲ್ಲಿ ಬೀದರಿನ ಶರಣ ನಗರದ ಶರಣ ಉದ್ಯಾನದಲ್ಲಿ ಒಂದು ತಿಂಗಳ ಪರ್ಯಂತ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಸರ್ವಸಮತ್ವದ ಬದುಕಿನ ಪ್ರತಿಪಾದನೆ ಮಾಡಿದ್ದನ್ನು ಶರಣ ರಮೇಶ ಮಠಪತಿ ಅವರು ಸಮರ್ಥವಾಗಿ ಸಂಗ್ರಹಿಸಿ, ಸಂಪಾದಿಸಿ ಜೀವನದರ್ಶನ ಕೃತಿ ಸಿದ್ಧಪಡಿಸಿದ್ದು ಅಭಿನಂದನಾರ್ಹ ವಾಗಿದೆ.

ಏಕದೇವ, ಆ ದೇವರ ಸೃಷ್ಟಿಯಾದ ಏಕ ವಿಶ್ವ ಮತ್ತು ಆ ವಿಶ್ವದಲ್ಲಿ ಸಕಲ ಚರಾಚರದಿಂದ ಕೂಡಿದ ಜೀವಜಾಲದೊಳಗೆ ಒಂದಾಗಿ ಇರುವ ಮಾನವಕುಲದ ಅರಿವಿನೊಂದಿಗೆ ಅಕ್ಕ ಅನ್ನಪೂರ್ಣತಾಯಿ ಅವರು ಈ ವಚನಶ್ರಾವಣ ಪ್ರವಚನ ಕಾರ್ಯಕ್ರಮವನ್ನು ತಪಸ್ಸಿನ ಹಾಗೆ ನೆರವೇರಿಸಿದ್ದಾರೆ. ವಿವಿಧ ದಾರ್ಶನಿಕರ ಉದಾಹರಣೆಗಳನ್ನು ಅವರು ತಮ್ಮ ಪ್ರವಚನಗಳಲ್ಲಿ ಬಳಸಿಕೊಂಡರೂ ಬಸವದರ್ಶನ ಅವರ ಚಿಂತನೆಯ ಸ್ಥಾಯಿಭಾವವಾಗಿದೆ. ಬಸವದರ್ಶನಕ್ಕೆ ವಿಶ್ವವ್ಯಾಪಕತ್ವ ಇದೆ ಎಂಬುದನ್ನು ಸೂಚಿಸುವುದೇ ಅವರು ವಿವಿಧ ದಾರ್ಶನಿಕರ ಚಿಂತನೆಗಳನ್ನು ಅಳವಡಿಸಿಕೊಳ್ಳುವುದಕ್ಕೆ ಮುಖ್ಯ ಕಾರಣವಾಗಿದೆ.

ಬಸವಣ್ಣನವರು 12ನೇ ಶತಮಾನದಲ್ಲೇ ಸಮೂಹಶಕ್ತಿಯ ಸಮಾಜವೊಂದರ ನಿಮರ್ಾಣ ಮಾಡಿದರು. ಆ ಸಮಾಜಕ್ಕೆ ಶರಣಸಂಕುಲ ಎಂದು ಕರೆದರು. ಸೃಷ್ಟಿಕರ್ತ, ಸೃಷ್ಟಿ ಮತ್ತು ಮಾನವಕುಲದ ಮಧ್ಯೆ ಏಕತೆಯನ್ನು ಸಾಧಿಸುವ ಮೂಲಕ ಈ ಶರಣಸಂಕುಲ ಸಕಲಜೀವಾತ್ಮರಿಗೆ ಲೇಸನ್ನೇ ಬಯಸುವ ಸರ್ವಸಮತ್ವದ ಸಮಾಜವಾಗಿತ್ತು.

ಬಸವಣ್ಣನವರ ಈ ಶರಣಸಂಕುಲ ಸಮಾಜ ಮನುವಾದಿಗಳ ಸಮಾಜಕ್ಕೆ ತದ್ವಿರುದ್ಧವಾಗಿತ್ತು. ವರ್ಗಭೇದ, ವರ್ಣಭೇದ, ಜಾತಿಭೇದ, ಲಿಂಗಭೇದ, ಕಾಯಕ ಭೇದ, ಪ್ರಾದೇಶಿಕ ಭೇದ, ಅಸ್ಪೃಶ್ಯತೆ, ಪುಣ್ಯ, ಪಾಪ, ಸ್ವರ್ಗ, ನರಕ ಮತ್ತು ಮೋಕ್ಷದ ಭ್ರಮೆಗಳನ್ನು ಸೃಷ್ಟಿಸುವ ಕರ್ಮಸಿದ್ಧಾಂತದಿಂದ ಮುಕ್ತವಾಗಿತ್ತು. ಜೀವಕಾರುಣ್ಯವನ್ನು ಸೃಷ್ಟಿಸುವ ಕಾಯಕ ಸಿದ್ಧಾಂತದಿಂದ ಪ್ರಫುಲ್ಲವಾಗಿತ್ತು.

ಶರಣಸಂಕುಲದ ಶರಣರು ಎಲ್ಲ ಭೇದಗಳನ್ನು ಮೀರಿ ಬೆಳೆದವರಾಗಿದ್ದರು. ಕೈಲಾಸವೆಂಬುದನ್ನು ಅವರು ಹಾಳುಭೂಮಿ ಎಂದು ಪರಿಗಣಿಸಿದ್ದರು. ತಾವು ಬದುಕುತ್ತಿರುವ ತಾಣವೇ ಅವರಿಗೆ ಕತರ್ಾರನ ಕಮ್ಮಟವಾಗಿತ್ತು. ಕಾಯಕದ ಮೂಲಕ ಅಂತಃಕರಣದಿಂದ ಬದುಕು ಸಾಗಿಸುವವರಿಗೆ ಪುಣ್ಯದ ಮೂಲಕ ಸ್ವರ್ಗ ತಲಪುತ್ತೇವೆ ಎಂಬ ಭ್ರಮೆ ಇರುವುದಿಲ್ಲ. ದಯಾಮಯರಾಗಿ ಬದುಕುವ ಕಾರಣ ಪಾಪ ಮತ್ತು ನರಕದ ಭಯ ಇರುವುದಿಲ್ಲ. ಕಾಯಕದ ಮೂಲಕ ಬರುವ ಅನುಭವ, ಅನುಭವ ಮಂಟಪದಲ್ಲಿ ಸಮೂಹ ಜ್ಞಾನದಿಂದ ಸಿಗುವ ಅನುಭಾವ ಮತ್ತು ಲಿಂಗಾಂಗ ಸಾಮರಸ್ಯದ ಮೂಲಕ ನತ್ಯ ಲಿಂಗಕ್ಯರಾಗೇ ಇರುವ ಕಾರಣ ಮೋಕ್ಷದ ಬಯಕೆಯೂ ಇರುವುದಿಲ್ಲ. ಹೀಗೆ ಅವರು ಅನುಭಾವಿಗಳಾಗಿದ್ದರಿಂದ ಯಾವ ಭೇದಭಾವಗಳೂ ಅವರ ಬಳಿ ಸುಳಿಯಲಿಲ್ಲ. ಹೀಗಿದ್ದರು ನಮ್ಮ ಶರಣರು.

ಬಸವಣ್ಣನವರು ಇಂಥ ಒಂದು ಸುಂದರ ಸಮಾಜವನ್ನು ನಿಮರ್ಿಸಿದರು. ಈ ಸಮಾಜದಲ್ಲಿ ಸ್ಥಾವರಲಿಂಗ ಮುಂತಾದ ಮೂತರ್ಿಗಳಾಗಲೀ, ಮಂದಿರಗಳಾಗಲೀ, ಅರ್ಚಕರಾಗಲಿ, ಕಾವಿಬಟ್ಟೆಯ ಸ್ವಾಮಿ ಸನ್ಯಾಸಿಗಳಾಗಲೀ, ವಿವಿಧ ರೀತಿಯ ಪರಾವಲಂಬಿಗಳಾಗಲೀ ಇರಲಿಲ್ಲ. ಇಲ್ಲಿ ವಿರಕ್ತರು ಮತ್ತು ಸಾಂಸಾರಿಗರ ಮಧ್ಯೆ ವ್ಯತ್ಯಾಸವಿರಲಿಲ್ಲ. ಯಾರೇ ಆಗಿರಬಹುದು ಅವರು ನಿಜಮಾನವರಾಗಿರಬೇಕು ಎಂಬುದೇ ಶರಣಸಂಕುಲದ ನಿಧರ್ಾರವಾಗಿತ್ತು. ಶರಣರೆಂದರೆ ನಿಜಮಾನವರು. ಈ ನಿಜಮಾನವರೇ ಕರ್ಮಸಿದ್ಧಾಂತ ಮುಂತಾದ ಎಲ್ಲ ಮಾನವನಿಮರ್ಿತ ಮೇಲುಕೀಳಿನ ಸಂಕೋಲೆಗಳನ್ನು ಹಾಗೂ ಮೂಢನಂಬಿಕೆಗಳನ್ನು ಕಳಚಿಕೊಂಡು ಸ್ವತಂತ್ರಧೀರರಾದ ನವಮಾನವರು.

ಬಸವಣ್ಣನವರು ಇಂಥ ನವಜನಾಂಗದ ಸೃಷ್ಟಿಮಾಡಿದಾಗ ಶರಣಸಂಕುಲ ಎಂಬ ಸಮಾಜ ರೂಪುತಾಳಿ ಲೋಕಕ್ಕೆ ಮಾದರಿಯಾಯಿತು. ಮನುವಾದಿ ಸಮಾಜಕ್ಕೆ ದೊಡ್ಡ ಸವಾಲಾಗುವುದರ ಮೂಲಕ ಪಟ್ಟಭದ್ರ ಹಿತಾಸಕ್ತಿಗಳಾದ ರಾಜಶಾಹಿ ಮತ್ತು ಪುರೋಹಿತಶಾಹಿಗಳಿಗೆ ನಡುಕ ಹುಟ್ಟಿಸಿತು. ಇಂಥವರ ಅವಶ್ಯಕತೆ ಇಲ್ಲದಂಥ ಶರಣ ಸಮಾಜವನ್ನು ಬಸವಣ್ಣನವರು ನಿಮರ್ಾಣ ಮಾಡಿದ್ದರು. ದೇವರ ಹಂಗೂ ಇಲ್ಲದ ಸಮಾಜ ಇದಾಗಿತ್ತು. ಅಂತಃಸಾಕ್ಷಿಯನ್ನೇ ದೇವರಾಗಿಸಿಕೊಂಡು ಸತ್ಯಶುದ್ಧ ಕಾಯಕ ಮಾಡುತ್ತ, ಬಂದುದನ್ನು ದೇವರ ಪ್ರಸಾದವೆಂದು ಸ್ವೀಕರಿಸುವುದರ ಮೂಲಕ ಸರಳ ಬದುಕನ್ನು ಸಾಗಿಸುತ್ತ, ಇಂದಿಂಗೆ ನಾಳಿಂಗೆ ಎಂದು ಸ್ವಂತಕ್ಕಾಗಿ ಸಂಗ್ರಹ ಮಾಡದೆ ದಾಸೋಹಂ ಭಾವದ ಮೂಲಕ ಶರಣ ಸಂಕುಲದ ಶಿವನಿಧಿಗೆ ಅಪರ್ಿಸುತ್ತಿದ್ದರು. ಹೀಗೆ ಬಸವಣ್ಣನವರು ಆ ಕಾಲದಲ್ಲೇ ಸಾಮೂಹಿಕ ಭವಿಷ್ಯನಿಧಿಯನ್ನು ಸ್ಥಾಪಿಸುವುದರ ಮೂಲಕ ಮಾನವೀಯತೆಗೆ ವಿರುದ್ಧವಾದ ಖಾಸಗಿ ಆಸ್ತಿಗೆ ಕಡಿವಾಣ ಹಾಕಿದ್ದರು.

ಖಾಸಗಿ ಆಸ್ತಿ ಎಂಬುದು ಹಿಂಸೆ, ಸುಲಿಗೆ, ವಂಚನೆ, ಭ್ರಷ್ಟಾಚಾರ, ಕ್ರೌರ್ಯ ಮತ್ತು ಸರ್ವರೀತಿಯ ಭೇದಭಾವಗಳಿಂದ ಕೂಡಿದ ಸಮಾಜವನ್ನು ಸೃಷ್ಟಿಸುವುದು. ಮಾನವರು ಆಧ್ಯಾತ್ಮಿಕ ಆನಂದದಿಂದ ವಂಚಿತರಾಗುವುದರ ಮೂಲಕ ಐಹಿಕ ಸುಖಕ್ಕೇ ಮೋಹಿತರಾಗುವಂತೆ ಮಾಡುವುದು. ಸ್ವಾರ್ಥಕ್ಕಾಗಿ ಪ್ರಾಣಿ, ಪಕ್ಷಿ ಮತ್ತು ಸಸ್ಯಸಂಕುಲ ಮೊದಲು ಮಾಡಿ ಸಕಲ ಚರಾಚರ ವಸ್ತುಗಳನ್ನು ವಿನಾಶದ ಅಂಚಿಗೆ ಒಯ್ಯುವುದು. ಆಗ ಧರ್ಮಗಳು, ದರ್ಶನಗಳು, ಉದಾತ್ತ ಚಿಂತನೆಗಳು, ಸಾಮಾಜಿಕ ಕಾಳಜಿಗಳು, ಆದರ್ಶಗಳು ಒಟ್ಟಾರೆ ಮಹೋನ್ನತ ಮಾನವೀಯ ಗುಣಗಳು ನಿರುಪಯುಕ್ತವೆನಿಸುವವು. ಹಣವೇ ದೇವರ ಕೊನೆಯ ಅವತಾರ ಎಂದು ಜಗತ್ತು ಭಾವಿಸುವಂತಾಗುವುದು. ಹಣ ಗಳಿಸುವುದು ಮಾತ್ರ ಜ್ಞಾನವೆನಿಸಿ ಮಾನವನ ಎಲ್ಲ ಸೂಕ್ಷ್ಮತೆಗಳು ಹೇಳಹೆಸರಿಲ್ಲದಂತಾಗುವವು. ಇಂಥ ದುರಂತವನ್ನು ತಪ್ಪಿಸುವುದೇ ಬಸವಣ್ಣನವರ ಗುರಿಯಾಗಿತ್ತು. ಆ ಕಾರಣದಿಂದಲೇ ಅವರು ಇಷ್ಟಲಿಂಗವನ್ನು ದಯಪಾಲಿಸಿದರು. ಶೋಷಕರ ಕೈಗೊಂಬೆಗಳಂತಿರುವ ಕಣ್ಣಿಗೆ ಕಾಣುವ ಡುಪ್ಲಿಕೇಟ್ ದೇವರುಗಳನ್ನು ಇಷ್ಟಲಿಂಗವು ಶರಣರಾದ ಕಾಯಕಜೀವಿಗಳ ಬದುಕಿನಿಂದ ದೂರ ಸರಿಸಿತು. ಕಾಯಕಜೀವಿಗಳು ಗುಡಿಗುಂಡಾರಗಳಿಗೆ ಸಲ್ಲಿಸುವ ಬಿಟ್ಟಿಕೂಲಿ ನಿಂತಿತು. ಹರಕೆ, ಮುಡಿ, ದಾನ ಮುಂತಾದವುಗಳ ಮೂಲಕ ರಾಜವ್ಯವಸ್ಥೆಯನ್ನೂ ಹಿಡಿತದಲ್ಲಿಟ್ಟುಕೊಂಡಿದ್ದ ಗುಡಿವ್ಯವಸ್ಥೆಯಿಂದ ಕಾಯಕಜೀವಿಗಳ ಸುಲಿಗೆ ಮಾಡುವುದು ತಪ್ಪಿತು.

ಶರಣ ಸಂಕುಲದ ಸದಸ್ಯರು ಜಾತಿಸಂಕರಗೊಂಡ ನವಸಮಾಜದಲ್ಲಿ ಅರಿವನ್ನೇ ಗುರುವಾಗಿಸಿಕೊಂಡು ಹಿಂದೆಂದೂ ಕಾಣದಂಥ ಹೊಸಬದುಕಿನ ಅನುಭವ ಪಡೆದರು. ಮನುಧರ್ಮದಿಂದ ಸೃಷ್ಟಿಯಾಗಿದ್ದ ಕೆಳಜಾತಿ, ಕೆಳವರ್ಗಗಳ ವಿವಿಧ ಕಾಯಕಜೀವಿಗಳು ಭೂತಕಾಲದಲ್ಲಿನ ಕೀಳರಿಮೆಯಿಂದ ವಿಮುಕ್ತರಾದರು. ಅತಂತ್ರ ಭವಿಷ್ಯದ ಭಯದಿಂದ ಹೊರಬಂದರು. ವರ್ತಮಾನದಲ್ಲಿನ ಶರಣಸಂಕುಲದಲ್ಲಿ ಸತ್ಯಶುದ್ಧ ಕಾಯಕದೊಂದಿಗೆ ನೆಮ್ಮದಿಯಿಂದ ಬದುಕಿದರು.

ಇದೊಂದು ಪರಿಪೂರ್ಣ ಸಮಾಜವಾಗಿತ್ತು. ಸತ್ಯಶುದ್ಧ ಕಾಯಕದ ಮೂಲಕ ಮಾನವಕುಲ ಮತ್ತು ಜೀವಸಂಕುಲಕ್ಕೆ ಒಳಿತಾಗುವಂಥ ವಸ್ತುಗಳನ್ನೇ ಉತ್ಪಾದಿಸುವ ಕ್ರಮ, ಹಾಗೆ ಉತ್ಪಾದಿಸಿದ ವಸ್ತುಗಳಿಂದ ಬಂದುದನ್ನು ದೇವರ ಕಾಣಿಕೆ ಎಂಬ ಪ್ರಸಾದ ಪ್ರಜ್ಞೆಯೊಂದಿಗೆ ಸದ್ಬಳಕೆ ಮಾಡುವ ಮನಸ್ಥಿತಿ, ಹಿತಮಿತವಾಗಿ ಬಳಸುವುದರ ಮೂಲಕ ಸಂಗ್ರಹವಾಗುವ ಸಂಪತ್ತನ್ನು ಸಮಾಜರೂಪಿ ದೇವರಿಗೆ ಹಿಂದಿರುಗಿಸುವ ರೀತಿಯಲ್ಲಿ ಸಾಮೂಹಿಕ ನಿಧಿಗೆ ದಾಸೋಹ ರೂಪದಲ್ಲಿ ಕೊಡುವುದರ ಮೂಲಕ ಸಾಮಾಜಿಕ ವಿತರಣಾ ವ್ಯವಸ್ಥೆ, ಅನುಭವ ಮಂಟಪದ ಮೂಲಕ ದೊರೆಯುವ ಅನುಭಾವ, ಮಹಾಮನೆಯ ಮೂಲಕ ದೊರೆಯುವ ವಿಶ್ವಕುಟುಂಬ ಭಾವ, ಅರಿವಿನ ಮನೆಯ ಮೂಲಕ ದೊರೆಯುವ ಲಿಂಗಾಂಗ ಸಾಮರಸ್ಯದ ಅರಿವು. ವಚನ ಸಾಹಿತ್ಯದ ಮೂಲಕ ಲಭ್ಯವಾದ ಸೃಜನಶೀಲತೆ ಹೀಗೆ ಎಲ್ಲ ರೀತಿಯಿಂದಲೂ ಶರಣಸಂಕುಲ ಲೋಕಮಾನ್ಯವಾದ ಸಮಾಜವಾಗಿತ್ತು.

ಇಂಥ ಶರಣಸಮಾಜ ಈ ಭೂಮಿಯ ಮೇಲೆ ಮತ್ತೆ ವಿಜೃಂಭಿಸುವುದರ ಮೂಲಕ ಎಲ್ಲ ರೀತಿಯ ಶೋಷಣೆ, ಹಿಂಸೆ ಮತ್ತು ಭೇದಭಾವಗಳು ನಾಶವಾಗಬೇಕು ಎಂಬ ಮಹೋನ್ನತವಾದ ಆಶಯಗಳೊಂದಿಗೆ ಅಕ್ಕ ಅನ್ನಪೂರ್ಣತಾಯಿ ಅವರು ಜೀವನದರ್ಶನ ಮಾಡುವಂಥ ಈ ಪ್ರವಚನಗಳ ಮೂಲಕ ಏಕಕಾಲಕ್ಕೆ ದೇವರ ಸೇವೆಯನ್ನೂ ಸಮಾಜ ಸೇವೆಯನ್ನೂ ಮಾಡಿದ್ದಾರೆ. ಇಡೀ ಜಗತ್ತೇ ಬಂದವರ ಓಣಿ ಎಂಬ ಸತ್ಯವನ್ನು ಸಾರಿದ್ದಾರೆ. ಈ ಭೂಮಿಯ ಮೇಲೆ ಅತಿಥಿಗಳಂತೆ ಬದುಕಿ ಹೋಗುವ ಕ್ರಮವನ್ನು ಅರುಹಿದ್ದಾರೆ. ಸ್ಪಧರ್ಾತ್ಮಕವಾದ ಸುಲಿಗೆಯ ಮೇಲೆಯೆ ನಮರ್ಾಣವಾದ ಆಧುನಕ ಸಮಾಜ ಖಿನ್ನತೆಯನ್ನು ಸೃಷ್ಟಿಸುವ ಕೇಂದ್ರವಾಗಿದೆ. ಅದು ಸೃಷ್ಟಿಸುವ ಯಾವ ವಸ್ತು ಕೂಡ ದೀಘರ್ಾವಧಿಯ ನೆಮ್ಮದಿ ಕೊಡುವಂಥ ಸಾಮಥ್ರ್ಯ ಹೊಂದಿಲ್ಲ. ಈ ಸಮಾಜ ಸಾವನ್ನು ಮರೆಸಿದೆ. ಆದರೆ ನಡೆದಾಡುವ ಮತ್ತು ಮಾತನಾಡುವ ಹೆಣಗಳನ್ನು ಸೃಷ್ಟಿಸಿದೆ. ಆ ಮೂಲಕ ಸಾವು ಮತ್ತು ಬದುಕಿನ ಮಧ್ಯೆ ವ್ಯತ್ಯಾಸವಿಲ್ಲದಂತೆ ಮಾಡಿದೆ ಎಂಬುದರ ಬಗ್ಗೆ ಅಕ್ಕನವರು ತುಂಬ ನೊಂದುಕೊಂಡು ತಿಳಿಸಿದ್ದಾರೆ. ಹೊಸ ಪೀಳಿಗೆ ಬದುಕಿನ ಸೂಕ್ಷ್ಮತೆಗಳನ್ನು ಅರಿಯದೆ ಹೋಗುತ್ತಿರುವ ಬಗ್ಗೆ ಖೇದ ವ್ಯಕ್ತಪಡಿಸಿದ್ದಾರೆ.

ಐಹಿಕ ಅಭ್ಯುದಯ ಎಂಬುದು ಮನುಷ್ಯತ್ವವನ್ನು ಕಾಲಕಸದಂತೆ ನೋಡುವಂಥ ವಾತಾವರಣ ಸೃಷ್ಟಿಸಿದಾಗ ನೆಮ್ಮದಿ ಎಂಬುದು ಬರಿ ಕನಸಾಗಿ ಉಳಿಯುತ್ತದೆ. ಈಗ ನಡೆಯುತ್ತಿರುವುದು ಉನ್ನತಿಯ ಲಕ್ಷಣವಲ್ಲ ಅಧೋನ್ನತಿಯ ಪರಿಣಾಮ. ಮಾನವರ ಸಾಮಾಜಿಕ ವ್ಯಕ್ತಿತ್ವವನ್ನೇ ನಾಶ ಮಾಡುತ್ತ ವ್ಯಕ್ತಿತ್ವ ವಿಕಸನದ ಬಗ್ಗೆ ಚಿಂತಿಸುವ ಈ ದಿನಗಳಲ್ಲಿ ಮತ್ತೆ ಮಾನವನನ್ನು ಮೌಲ್ಯಭರಿತ ಸಾಮಾಜಿಕನನ್ನಾಗಿಸುವ ಕ್ರಮವನ್ನು ಈ ಪ್ರವಚನದ ಪಾಠಗಳು ಸೂಚಿಸಿವೆ.

ಅಹಂಕಾರ, ಮೂಲಶಕ್ತಿಯ ಬಗ್ಗೆ ಇರುವ ಅಸಡ್ಡೆ, ಸಂಪತ್ತಿನ ದಾಹ, ಸಮಾಜದಲ್ಲಿದ್ದೂ ಧನಬಲದಿಂದಾಗಿ ಒಂಟಿತನಕ್ಕೆ ಒಗ್ಗುವ ಅರ್ಥಹೀನ ಬದುಕು, ವಸ್ತುಮೋಹ ಮತ್ತು ಇಂದ್ರಿಯಗಳ ದಾಸರಾಗುವುದರ ಮೂಲಕ ಉಂಟಾಗುವ ಚಿತ್ತಕ್ಷೊಭೆ, ತಿರಸ್ಕಾರ ಭಾವ, ದ್ವೇಷಸಾಧನೆ, ಯಯಾತಿಯಾಗುವ ಹುಚ್ಚು, ಋಜುಮಾರ್ಗದಿಂದ ದೂರಾದ ನಿಷ್ಕ್ರಿಯ ಜೀವನ ಮತ್ತು ಮಾನವಸಂಬಂಧಗಳ ಬಗೆಗಿನ ಅಸಡ್ಡೆಯಿಂದಾಗಿ ಹೀನ ಸಮಾಜದ ನಮರ್ಾಣದಲ್ಲಿ ಬಹುಪಾಲು ಜನ ತಲ್ಲೀನರಾಗಿರುವಾಗ ಮಾನವೀಯ ಮೌಲ್ಯಗಳಿಂದ ಕೂಡಿದ ಈ ಜೀವನದರ್ಶನ ಗ್ರಂಥ ಸಹೃದಯರ ಹೃದಯದಲ್ಲಿ ಮಾನವೀಯ ಅಲೆಗಳನ್ನು ಎಬ್ಬಿಸಿ ಬದುಕನ್ನು ಸಾರ್ಥಕಗೊಳಿಸುವುದರ ಕಡೆ ಸಾಗುವಂತೆ ಮಾಡುವುದರಲ್ಲಿ ಸಂಶಯವಿಲ್ಲ. ಮಧುರ ಭಾಷೆ ಮತ್ತು ಮನಸೂರೆಗೊಳ್ಳುವ ದೃಷ್ಟಾಂತಗ ಳಿಂದಾಗೆ ಸರಾಗವಾಗಿ ಓದಿಸಿಕೊಂಡು ಹೋಗುತ್ತಲೇ ಆಳವಾದ ಚಿಂತನೆಗೆ ಹಚ್ಚುವುದು ಈ ಗ್ರಂಥದ ವೈಶಿಷ್ಟ್ಯ ವಾಗಿದೆ. ಮಾನವೀಯ ಸ್ಪಂದನದಿಂದಾಗಿ ರಂಜಕತೆ ಯಿಂದ ಕೂಡಿದ ಈ ಗ್ರಂಥ ಬೇಗನೆ ಕಾಲೇಜು ವಿದ್ಯಾ ಥರ್ಿಗಳಿಗೆ ಪಠ್ಯವಾಗಿ, ಅವರು ಶಿಕ್ಷಣದ ಮೂಲಕ ತಮ್ಮ ಚಾರಿತ್ರ್ಯ ರೂಪಿಸಿಕೊಳ್ಳುವಂತಾಗಲಿ.

ರಂಜಾನ ದಗಾ೯  

ಸಾರೇಕೊಪ್ಪದ ಸರದಾರನ ನೆನಪು




ಡಾ.ಎನ್.ಜಗದೀಶ್ ಕೊಪ್ಪ
 ಕನರ್ಾಟಕ ರಾಜಕೀಯ ಕಂಡ ಬಹು ಮುಖ ವ್ಯಕ್ತಿತ್ವದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ತಮ್ಮ 79ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಕನರ್ಾಟಕದ ರಾಜಕಾರಣಿಗಳು ಹೇಗಿರಬೇಕು ಮತ್ತು ಹೇಗಿರಬಾರದು ಎಂಬುದಕ್ಕೆ ಉದಾಹರಣೆಯಾಗಿದ್ದ ಬಂಗಾರಪ್ಪ.ನವರ ಕುರಿತು ಡಾ.ಎನ್.ಜಗದೀಶ್ ಕೊಪ್ಪರವರು ನಾಲ್ಕು ವರ್ಷದ ಹಿಂದೆ ಬಂಗಾರಪ್ಪನವರಿಗೆ 75 ವರ್ಷ ತುಂಬಿದ ಸಮಯದಲ್ಲಿ ಡಾ. ಚಂದ್ರಶೇಖರ ಕಂಬಾರ ಅವರ ಸಂಪಾದಕತ್ವದಲ್ಲಿ ಹೊರತರಲಾಗಿದ್ದ ಸಾರೆಕೊಪ್ಪದ ಬಂಗಾರ ಎಂಬ ಅಭಿನಂದನಾ ಗ್ರಂಥಕ್ಕೆ  ಬರೆದಿದ್ದ ಒಂದು ಲೇಖನ ನಮ್ಮೆಲ್ಲ ಓದುಗರಿಗೂ ಗೊತ್ತಾಗಲೆಂದು ಇಲ್ಲಿ ಪ್ರಕಟಸಲಾಗಿದೆ. (ಸಂ)

ಬಂಗಾರಪ್ಪ ಕನರ್ಾಟಕದ ರಾಜಕೀಯ ರಂಗದಲ್ಲಿ ಕಳೆದ 40 ವರ್ಷಗಳಿಂದ ಜನಸಾಮಾನ್ಯರ ಮನಸ್ಸಿನಲ್ಲಿ ಚಿರಸ್ಥಾಯಿಯಾಗುಳಿದ ಒಂದು ಹೆಸರು. ಬಡತನ, ಹಸಿವು, ಶೋಷಣೆ, ಗುಲಾಮಗಿರಿತನ ಇವುಗಳ ವಿರುದ್ಧ ತನ್ನ ರಾಜಕೀಯ ಬದುಕಿನುದ್ದಕ್ಕೂ ಹೋರಾಡುತ್ತಲೇ ಬಂದ ಹುಟ್ಟು ಹೋರಾಟಗಾರ ಎಸ್.ಬಂಗಾರಪ್ಪನವರು ಕನರ್ಾಟಕದ ರಾಜಕೀಯ ಹಾಗೂ ಸಾಂಸ್ಕೃತಿಕ ವಲಯಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಕನರ್ಾಟಕದ ರಾಜಕೀಯಕ್ಕೆ ಶಾಂತವೇರಿ ಗೋಪಾಲಗೌಡ ಮತ್ತು ಜೆ.ಎಚ್.ಪಟೇಲರಂತಹ ಧೀಮಂತ ನಾಯಕರು ಹಾಗೂ ಚಿಂತಕರನ್ನು ನೀಡಿದ ಶಿವಮೊಗ್ಗ ಜಿಲ್ಲೆಯ ಮಣ್ಣಿನಂದ ಹುಟ್ಟಿ ಬಂದ ಇನ್ನೋರ್ವ ರಾಜಕೀಯ ನೇತಾರ ಎಸ್.ಬಂಗಾರಪ್ಪ.

1960ರ ದಶಕದಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಮುನ್ನ ವಕೀಲಿ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಡವರ ಮತ್ತು ಗೇಣಿದಾರರ ಪರ ಹೋರಾಡುತ್ತಾ ಸಮಾಜವಾದಿ ಚಳುವಳಿಗೆ ಧುಮುಕಿದ ಬಂಗಾರಪ್ಪನವರು, 1967ರಲ್ಲಿ ಸೊರಬ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗುವುದರ ಮೂಲಕ ವಿಧಾನಸಭೆ ಪ್ರವೇಶಿಸಿದರು. ಆನಂತರ ಬಂಗಾರಪ್ಪನವರದ್ದು ವರ್ಣರಂಜಿತ ವ್ಯಕ್ತಿತ್ವ.

ಸೊರಬ ಕ್ಷೇತ್ರದಿಂದ ಸೋಲಿಲ್ಲದ ಸರದಾರನಂತೆ ನರಂತರವಾಗಿ ವಿಧಾನಸಭೆಗೆ ಆರಿಸಿ ಬಂದ ಬಂಗಾರಪ್ಪನವರು ಆಯಾ ಕಾಲಘಟ್ಟದ ಜ್ವಲಂತ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ದನಯೆತ್ತಿ ಕನರ್ಾಟಕದ ಜನಮನವನ್ನು ಸೂರೆ ಗೊಂಡರು. ರಾಜಕೀಯ ಬದುಕಿನ ಒತ್ತಡಗಳಿಗೆ ಅನುಗುಣವಾಗಿ ಬಂಗಾರಪ್ಪನವರು ಪಕ್ಷಗಳನ್ನು ಬದಲಾಯಿಸಿದರೂ ಕೂಡ ತಾವು ನಂಬಿದ ತತ್ವ ಸಿದ್ಧಾಂತಗಳನ್ನು ಎಂದೂ ತಮ್ಮ ರಾಜಕೀಯ ಸ್ವಾರ್ಥಕ್ಕೆ ಬಲಿಕೊಡಲಿಲ್ಲ. ಇದಕ್ಕೆ ಪ್ರಮುಖ ಕಾರಣ ರಾಮಮನೋಹರ ಲೋಹಿಯಾರ ಚಿಂತನೆ ಹಾಗೂ ಶಾಂತವೇರಿ ಗೋಪಾಲಗೌಡರ ಪ್ರಭಾವ.

ಗೋಪಾಲಗೌಡರ ನಧನಾನಂತರ ಶಿವಮೊಗ್ಗ ಜಿಲ್ಲೆಯ ಪ್ರಭಾವಿ ರಾಜಕಾರಣಿಯಾಗಿ ಜೆ.ಎಚ್.ಪಟೇಲರ ಜೊತೆ ಗುರುತಿಸಿಕೊಂಡ ಬಂಗಾರಪ್ಪನವರು ಕೇವಲ ಶಿವಮೊಗ್ಗ ಜಿಲ್ಲೆಗೆ ಸೀಮಿತವಾಗದೆ ರಾಜ್ಯ ರಾಜಕಾರಣದಲ್ಲಿ ಪ್ರಭಾವ ಬೀರತೊಡಗಿದರು.

ಕನರ್ಾಟಕ ಕಂಡ ಜನಪರ ಕಾಳಜಿಯ ಧೀಮಂತ ಮುಖ್ಯಮಂತ್ರಿ ಎಂದೇ ಹೆಸರಾದ ದಿವಂಗತ ದೇವರಾಜ ಅರಸುರವರು ಕಟ್ಟಿದ ಕ್ರಾಂತಿ ರಂಗ ಪಕ್ಷವನ್ನು ಅವರ ನಧನಾನಂತರ ಮುನ್ನಡೆಸುವುದರ ಮೂಲಕ 80ರ ದಶಕದಲ್ಲಿ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಪತನಗೊಳಿಸುವುದರಲ್ಲಿ ಬಂಗಾರಪ್ಪನವರ ಪಾತ್ರ ಪ್ರಮುಖವಾದುದು. ಗುಂಡೂರಾವ್ ಸರಕಾರ ಪತನಗೊಂಡ ನಂತರ ಈ ರಾಜ್ಯದ ಚುಕ್ಕಾಣಿ ಹಿಡಿದು ಮುಖ್ಯ ಮಂತ್ರಿಯಾಗಬೇಕಿದ್ದ ಬಂಗಾರಪ್ಪ ಹಲವು ರಾಜಕೀಯ ಒಳಸುಳಿಗೆ ಸಿಲುಕಿ ಅಂದಿನ ಜನತಾ ಸರಕಾರದ ರಾಮಕೃಷ್ಣ ಹೆಗಡೆಯವರಿಗೆ ಮುಖ್ಯಮಂತ್ರಿ ಪದವಿ ಬಿಟ್ಟು ಕೊಡಬೇಕಾಗಿ ಬಂದಿತು. ನಂತರದ ದಿನಗಳಲ್ಲಿ ತಮ್ಮ ಕ್ರಾಂತಿರಂಗ ಪಕ್ಷವನ್ನು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಳಿಸುವುದರ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಪಾದಾರ್ಪಣೆ ಮಾಡಿದ ಬಂಗಾರಪ್ಪನವರು ಕಾಂಗ್ರೆಸ್ ನೇತೃತ್ವದ ಸರಕಾರಗಳಲ್ಲಿ ಪ್ರಭಾವಿ ಸಚಿವರಾಗಿ ಕಾರ್ಯ ನರ್ವಹಿಸಿದರು. 1989ರಲ್ಲಿ ಅಸ್ತಿತ್ವದಲ್ಲಿದ್ದ ಕಾಂಗ್ರೆಸ್ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರನ್ನು ಅಂದಿನ ಪ್ರಧಾನ ರಾಜೀವ್ ಗಾಂಧಿ ಅನರೀಕ್ಷಿತವಾಗಿ ಕೆಳಗಿಳಿಸಿ ಬಂಗಾರಪ್ಪನವರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದರು.

ತಮ್ಮ ಜಿಲ್ಲೆಯಾದ ಶಿವಮೊಗ್ಗದ ಜನತೆಯನ್ನು ಜಾತಿ ಧರ್ಮದ ಹಂಗಿಲ್ಲದೆ, ರಾಜಕೀಯ ಪಕ್ಷಗಳ ಕಟ್ಟುಪಾಡುಗಳಿಲ್ಲದೆ ಪ್ರೀತಿಸಬಲ್ಲ ವ್ಯಕ್ತಿತ್ವ ಬಂಗಾರಪ್ಪನವರದ್ದು. ಇಂದಿಗೂ ಶಿವಮೊಗ್ಗ ಜಿಲ್ಲೆಯ ಯಾವುದೇ ಹಳ್ಳಿಗೆ ಹೋಗಲಿ ಅಲ್ಲಿಯ ಗ್ರಾಮಸ್ಥರನ್ನು ಹೆಸರಿಡಿದು ಕರೆಯುವಷ್ಟು ನೆನಪನ್ನು ಬಂಗಾರಪ್ಪ ಉಳಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಬೆಂಗಳೂರಿನಲ್ಲಿ ಬಂಗಾರಪ್ಪನವರ ಯಾವುದೇ ಕಾರ್ಯಕ್ರಮ ನಡೆಯಲಿ ಶಿವಮೊಗ್ಗ ಜಿಲ್ಲೆಯ ಹಳ್ಳಿಗಳಿಂದ ಜನರು ನದಿಯಂತೆ ಹರಿದು ಬರುತ್ತಾರೆ. ಜೊತೆಗೆ ಬಂಗಾರಪ್ಪನವರು ಎಷ್ಟೇ ಪಕ್ಷಗಳನ್ನು ಬದಲಾಯಿಸಿದರೂ ಅವರನ್ನು ಗೆಲ್ಲಿಸುತ್ತಲೇ ಬಂದಿದ್ದಾರೆ.

ಬಂಗಾರಪ್ಪನವರ ರಾಜಕೀಯ ತಪ್ಪು ನಧರ್ಾರಗಳಿಂದಾಗಿ ಇಂದಿನ ಯು.ಪಿ.ಎ. ಸರಕಾರದಲ್ಲಿ ಕೇಂದ್ರ ಸಚಿವರಾಗುವ ಅವಕಾಶವನ್ನು ಕಳೆದುಕೊಂಡರು. ಬಂಗಾರಪ್ಪನವರು ಬಿ.ಜೆ.ಪಿ. ಅಭ್ಯಥರ್ಿಯಾಗಿ ಲೋಕಸಭೆ ಪ್ರವೇಶಿಸಿದಾಗ ವಾಜಪೇಯಿ ನೇತೃತ್ವದ ಎನ್.ಡಿ.ಎ. ಸರಕಾರ ಚುನಾವಣೆಯಲ್ಲಿ ಸೋಲುಂಡಿತು. ಬಂಗಾರಪ್ಪನವರ ವ್ಯಕ್ತಿತ್ವಕ್ಕೆ ಹೊಂದಾಣಿಕೆಯಾಗದ ಬಿ.ಜೆ.ಪಿ. ಪಕ್ಷದ ಉಸಿರುಗಟ್ಟಿಸುವ ವಾತಾವರಣದಲ್ಲಿ ಇರಲಾರದೆ ರಾಜಿನಾಮೆ ನೀಡಿ ಅವರು ಹೊರಬಂದರು.

ಅತ್ತ ಕಾಂಗ್ರೆಸ್ ಪಕ್ಷವನ್ನು ಇತ್ತ ಬಿ.ಜೆ.ಪಿ.ಪಕ್ಷವನ್ನು ಸಮಾನ ಶತೃಗಳಂತೆ ಭಾವಿಸಿರುವ ಬಂಗಾರಪ್ಪನವರು ತಮ್ಮ 75ರ ಈ ಇಳಿವಯಸ್ಸಿನಲ್ಲೂ ಉತ್ತರ ಪ್ರದೇಶದ ಮುಲಾಯಂಸಿಂಗ್ ನೇತೃತ್ವದ ಸಮಾಜವಾದಿ ಪಕ್ಷವನ್ನು ಸೇರಿ ಮತ್ತೆ ಲೋಕಸಭೆಗೆ ಸ್ವಧರ್ಿಸಿ ಜಯಭೇರಿ ಬಾರಿಸಿ ಕನರ್ಾಟಕದಲ್ಲಿ ಸಮಾಜವಾದಿ ಪಕ್ಷ ಬೆಳೆಯಲು ಶ್ರಮಿಸುತ್ತಿದ್ದಾರೆ.

ನನಗೆ ಬಂಗಾರಪ್ಪನವರ ಬಗ್ಗೆ ಗೌರವ ಮೂಡಲು ವಿಶೇಷ ಕಾರಣವೆಂದರೆ ಅವರ ಶಿಸ್ತುಬದ್ಧ ಜೀವನ. ನರಂತರ ರಾಜಕೀಯ ಚಟುವಟಿಕೆಗಳ ನಡುವೆಯೂ ಕ್ರೀಡೆ, ಸಂಗೀತ, ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡಿರುವ ಬಂಗಾರಪ್ಪನವರು ಯಾವುದೇ ದುರಭ್ಯಾಸಗಳಿಲ್ಲದೆ ತಮ್ಮ ದೇಹ ಹಾಗೂ ಮನಸ್ಸನ್ನ ಆರೋಗ್ಯಯುತವಾಗಿ ಕಾಪಾಡಿಕೊಂಡು ಬಂದಿದ್ದಾರೆ.

ಇಂದಿನ ಕನರ್ಾಟಕ ದ ರಾಜಕಾರಣದಲ್ಲಿ ಎಸ್.ಎಂ.ಕೃಷ್ಣ, ಬಂಗಾರಪ್ಪ ಮತ್ತು ದೇವೇಗೌಡ ಮೂವರು ಒಂದೇ ವಯೋಮಾನದವರು. ಈ ಮೂವರ ಹೋರಾಟ, ಚಿಂತನೆ ಮತ್ತು ಜನಪರ ಕಾಳಜಿ ಕನರ್ಾಟಕದ ಭವಿಷ್ಯದ ರಾಜಕಾರಣಿಗಳಿಗೆ ಮಾದರಿಯಾಗಬಲ್ಲದು. 75 ವರ್ಷಗಳನ್ನು ಆಚರಿಸಿಕೊಳ್ಳುತ್ತಿರುವ ಬಂಗಾರಪ್ಪನವರು ಇನ್ನಷ್ಟು ಕಾಲ ನಮ್ಮ ನಡುವೆ ಇದ್ದು ಕನರ್ಾಟಕದ ನೆಲ ಜಲ, ಭಾಷೆ ಸಂಸ್ಕೃತಿ ಮುಂತಾದ ಹೋರಾಟಗಳಿಗೆ ಸ್ಫೂತರ್ಿ ತುಂಬಲಿ ಎಂಬುದು ನನ್ನ ಆಶಯ

ಡಾ.ಎನ್.ಜಗದೀಶ್ ಕೊಪ್ಪ

ಜನಪರ ಪತ್ರಿಕೋದ್ಯಮದ ಮುಂದಿನ ಸವಾಲುಗಳು..?

ಭಾರತದ ತುತರ್ುಪರಿಸ್ಥಿತಿ ಸಂದರ್ಭದಲ್ಲಿ ಪ್ರಭುತ್ವವು ಮಾಧ್ಯಮದ ಮೇಲೆ ಹೇರಿದ ಪ್ರತ್ಯಕ್ಷ ಅಂಕುಶದ ವಿರುದ್ಧ ಇಡಿ ಪತ್ರಿಕೋದ್ಯಮ ಸೆಟೆದು ನಿಂತು ತನ್ನ ವಾಚ್ಡಾಗ್ ಜವಾಬ್ದಾರಿಯನ್ನು ನಿರ್ವಹಿಸಿತ್ತು. ಒಂದೇ ಬಗೆಯ ಸರಕುಗಳನ್ನು ಮಾರಾಟ ಮಾಡುವವರಲ್ಲಿ ಪೈಪೋಟಿ ಇರುವಂತೆ ಒಂದೇ ಬಗೆಯ ಸುದ್ದಿಯನ್ನು ಬಿತ್ತರಿಸಬೇಕಾದ ಮಾಧ್ಯಮಗಳ ನಡುವೆಯೂ ಕತ್ತು ಕೊಯ್ಯುವ ಸ್ಪಧರ್ೆ ಏರ್ಪಟ್ಟಿದೆ ಎಂದು ವಿಶ್ಲೇಷಿಸುತ್ತಾರೆ ಅಂಕಣಕಾರರಾದ ಶಿವಸುಂದರ್

ಪ್ರಾಯಶಃ ಪತ್ರಿಕೋದ್ಯಮದಲ್ಲಿ ಈ ರೀತಿ ಜನಪರ ಪತ್ರಿಕೋದ್ಯಮ ಎಂದು ವಿಭಾಗೀಕರಣ ಮಾಡಬೇಕಾಗಿ ಬಂದಿರುವುದೇ ಸಮಕಾಲೀನ ಪತ್ರಿಕೋದ್ಯಮದ ದುರಂತ ಹಾಗೂ ಪ್ರಮುಖ ಸವಾಲೂ ಆಗಿದೆ. ವಾಸ್ತವವಾಗಿ ಪತ್ರಿಕೋದ್ಯಮದ ಹುಟ್ಟಿನಲ್ಲೇ ಜನಪರವಾಗಿರಬೇಕಾದ ಆಶಯ ಅಡಕವಾಗಿದೆ. ತಮ್ಮ ಬದುಕು ಮತ್ತು ಭವಿಷ್ಯವನ್ನು ಪ್ರಭಾವಿಸುವ ಸಂಗತಿಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಕಾಯಕವೇ ತನ್ನಂತೆ ತಾನೇ ಒಂದು ಜನಪರ ಕೆಲಸ. ಜನಸಾಮಾನ್ಯರು ಪ್ರಮುಖವಾಗುವ ಪ್ರಜಾಪ್ರಭುತ್ವದ ಅಡಿಗಲ್ಲುಗಳಲ್ಲಿ ಮುಕ್ತಪತ್ರಿಕೋದ್ಯಮ ಪ್ರಮುಖವಾಗುವುದು ಈ ಕಾರಣದಿಂದಲೇ. ಆದ್ದರಿಂದಲೇ ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಸ್ಥಿಭಾರವೆಂದು ಪರಿಗಣಿಸಲಾಗುತ್ತದೆ. ದೇಶದ ಆಗುಹೋಗುಗಳ ಬಗ್ಗೆ ಕಲ್ಲುಕೋಟೆಗಳ ಮುಚ್ಚಿದ ಬಾಗಿಲುಗಳ ಒಳಗೆ ನೀತಿಗಳು ರೂಪುಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಅದರ ಬಗ್ಗೆ ಮಾಹಿತಿಯನ್ನು ಮತ್ತು ಸಂದರ್ಭದ ವಿಶ್ಲೇಷಣೆಯನ್ನು ಒದಗಿಸುವುದು ಪತ್ರಿಕೋದ್ಯಮದ ಪ್ರಮುಖ ಕರ್ತವ್ಯ. ಆಗ ಮಾತ್ರ ಜನತೆಯು ನಿಜವಾದ ಅರ್ಥದಲ್ಲಿ ಪಾಲ್ಗೊಳ್ಳುವ ರಾಜಕೀಯ ವ್ಯವಸ್ಥೆ ಸಾಕಾರವಾಗಲು ಸಾಧ್ಯ.

ಆದ್ದರಿಂದಲೇ ಪ್ರಜಾತಂತ್ರವಿರದ ಊಳಿಗ ಮಾನ್ಯ ಪ್ರಭುತ್ವಗಳು, ರಾಜಸತ್ತೆಗಳು, ಸವರ್ಾಧಿಕಾರಿ ಆಡಳಿತ ವ್ಯವಸ್ಥೆಗಳು ಮತ್ತು ವಸಾಹತುಶಾಹಿ ಶೋಷಣೆಗೆ ಗುರಿಯಾಗಿದ್ದ ದೇಶಗಳ ಅಧಿಕಾರಸ್ಥರು ಮುಕ್ತ ಪತ್ರಿಕೋದ್ಯಮಕ್ಕೆ ಬದ್ಧ ವಿರೋಧಿಗಳಾಗಿದ್ದರು. ಇಲ್ಲಿ ಮುಕ್ತ ಪತ್ರಿಕೋದ್ಯಮವೆಂದರೆ ಪ್ರಭುತ್ವದ ಆಮಿಷ ಮತ್ತು ದಮನಗಳಿಗೆ ಜಗ್ಗದ ಪತ್ರಿಕೋದ್ಯಮ, ಸತ್ಯಕ್ಕೆ ನಿಷ್ಟವಾಗಿದ್ದ ಪತ್ರಿಕೋದ್ಯಮ ಎಂಬುದೆ ಆಗಿತ್ತು. ಆದರೆ ಇಂದು ವಸಾಹತು ಯುಗವು ಹೆಚ್ಚು ಕಡಿಮೆ ಮುಗಿದು ಜಗತ್ತಿನ ಬಹುತೇಕ ಕಡೆ ಪ್ರಜಾಪ್ರಭುತ್ವದ ಹೆಸರಿನ ಆಡಳಿತ ವ್ಯವಸ್ಥೆಗಳೇ ಅಸ್ತಿತ್ವದಲ್ಲಿವೆ.

ಈ ಎಲ್ಲ ರಾಷ್ಟ್ರಗಳು ತಮ್ಮ ತಮ್ಮ ಸಂವಿಧಾನಗಳಲ್ಲಿ ಮುಕ್ತ ಪತ್ರಿಕೋದ್ಯಮವನ್ನು ತಮ್ಮ ದೇಶದ ಪ್ರಜಾತಂತ್ರದ ಅಸ್ಥಿಭಾರಗಳಲ್ಲಿ ಒಂದೆಂದು ಘೋಷಿಸಿಕೊಂಡಿವೆ. ಆ ನಿಟ್ಟಿನಲ್ಲಿ ಪ್ರಭುತ್ವ ಮಧ್ಯ ಪ್ರವೇಶವಿರದ ಹಲವಾರು ಮಾಧ್ಯಮ ನೀತಿಗಳನ್ನು ಮತ್ತು ಕಾನೂನನ್ನು ಜಾರಿಗೊಳಿಸಿವೆ. ಇವೆಲ್ಲವೂ ನಿಜವೇ! ಆದರೂ ನಮ್ಮ ಪತ್ರಿಕೋದ್ಯಮ ನಿಜಕ್ಕೂ ಮುಕ್ತ ಪತ್ರಿಕೋದ್ಯಮವೇ? ಜನಪರವೇ? ಎಂಬ ಪ್ರಶ್ನೆಯಂತೂ ಬಗೆಹರಿದಿಲ್ಲ. ಪತ್ರಿಕೋದ್ಯಮಕ್ಕೆ ಪ್ರಮುಖವಾಗಿ ಎರಡು ಕರ್ತವ್ಯಗಳಿವೆ. ಒಂದು ಆಳುವ ವರ್ಗ ನಿಜಕ್ಕೂ ಸಂವಿಧಾನಬದ್ಧವಾಗಿ ಅಥರ್ಾತ್ ಪ್ರಜಾತಾಂತ್ರಿಕವಾಗಿ ಕೆಲಸ ಮಾಡುತ್ತಿದೆಯೋ ಇಲ್ಲವೋ ಎಂಬ ಬಗ್ಗೆ ಪ್ರಜಾತಂತ್ರದ ಕಾವಲು ನಾಯಿಗಳಂತೆ-ವಾಚ್ಡಾಗ್ಗಳಂತೆ ಕೆಲಸ ಮಾಡುವುದು.

ಎರಡನೆಯದು ಜನತೆಗೆ ಆಗು ಹೋಗುಗಳ ಬಗ್ಗೆ ಸುದ್ದಿ, ಸೂಕ್ಷ್ಮವಿಶ್ಲೇಷಣೆ, ನಿದರ್ಿಷ್ಟ ಬೆಳವಣಿಗೆಗೆ ಕಾರಣವಾದ ಸಂದರ್ಭ, ಮತ್ತು ಆ ಮಾಹಿತಿಗಳೆಲ್ಲದರ ಸಂಶ್ಲೇಷಣೆ. ಇವೆರಡು ಯಾವುದೇ ಜವಾಬ್ದಾರಿಯುತ ಪತ್ರಿಕೋದ್ಯಮದ ಜವಾಬ್ದಾರಿಯಾಗಿರುತ್ತದೆ. ಭಾರತದ ತುತರ್ುಪರಿಸ್ಥಿತಿ ಸಂದರ್ಭದಲ್ಲಿ ಪ್ರಭುತ್ವವು ಮಾಧ್ಯಮದ ಮೇಲೆ ಹೇರಿದ ಪ್ರತ್ಯಕ್ಷ ಅಂಕುಶದ ವಿರುದ್ಧ ಇಡಿ ಪತ್ರಿಕೋದ್ಯಮ ಸೆಟೆದು ನಿಂತು ತನ್ನ ವಾಚ್ಡಾಗ್ ಜವಾಬ್ದಾರಿಯನ್ನು ನಿರ್ವಹಿಸಿತ್ತು. ಅಷ್ಟು ಮಾತ್ರವಲ್ಲ, ತಮ್ಮದೇ ಆದ ಕಾರಣಗಳಿಗಾಗಿ ಜನತೆಯ ಒಂದು ವಿಭಾಗ ಭಾರತದ ಪ್ರಭುತ್ವದ ವಿರುದ್ಧ ಸಂವಿಧಾನ ಬಾಹಿರ ಚಳವಳಿಯಲ್ಲಿ ತೊಡಗಿರುವ ಕಾಶ್ಮೀರ, ಈಶಾನ್ಯ ಭಾರತ, ನಕ್ಸಲೈಟ್ ಚಳವಳಿ ಪ್ರಬಲವಾಗಿರುವ ಪ್ರದೇಶಗಳಲ್ಲೂ ಪ್ರಭುತ್ವ ಮತ್ತು ಆಡಳಿತಾರೂಢರು ವಿಧಿಸಿದ ಅಂಕುಶವನ್ನು ಮೀರಿ ಪತ್ರಿಕೋದ್ಯಮವು ತನ್ನ ಪ್ರಜಾತಾಂತ್ರಿಕ ಜವಾಬ್ದಾರಿಯನ್ನು ನಿರ್ವಹಿಸಲು ಉತ್ತಮ ಪ್ರಯತ್ನವನ್ನೇ ನಡೆಸಿದೆ ಎಂದೇ ಹೇಳಬೇಕು.

ಆದರೆ, ಇಂದು ಮುಕ್ತ ಪತ್ರಿಕೋದ್ಯಮ ಎದುರಿಸುತ್ತಿರುವ ಸವಾಲು ಬೇರೆ ಬಗೆಯದು. ಜಾಗತೀಕರಣದ ಈ ಕಾಲಘಟ್ಟದಲ್ಲಿ ಪ್ರಭುತ್ವ ಬಿಡಿಬಿಡಿಯಾಗಿ ಖಾಸಗೀಕರಣಗೊಳ್ಳುತ್ತಾ ಮುಕ್ತ ಮಾರುಕಟ್ಟೆಯ ಹೆಸರಲ್ಲಿ ಮಾರುಕಟ್ಟೆ ಶಕ್ತಿಗಳು ಎಲ್ಲ ಆಥರ್ಿಕ ಮತ್ತು ರಾಜಕೀಯ ವ್ಯವಹಾರಗಳನ್ನು ವಶಪಡಿಸಿಕೊಳ್ಳುತ್ತಿವೆ. ಮುಕ್ತ ಪತ್ರಿಕೋದ್ಯಮದ ಪ್ರಾರಂಭದ ದಿನಗಳಲ್ಲಿ ರಾಜಕೀಯ ಮತ್ತು ಆಥರ್ಿಕತೆಯ ಮೇಲೆ ಸಂಪೂರ್ಣ ಪರಮಾಧಿಕಾರ ಹೊಂದಿದ್ದ ಪ್ರಭುತ್ವವನ್ನು ವಿಮಶರ್ೆಗೆ ಗುರಿ ಮಾಡುತ್ತಾ ಜನತೆಯ ಪರವಾಗಿ ಶಾಶ್ವತ ವಿರೋಧ ಪಕ್ಷದ ಪಾತ್ರ ವಹಿಸುತ್ತಿದ್ದ ಮಾಧ್ಯಮಗಳು ಇಂದು ಪ್ರಭುತ್ವದ ಜಾಗವನ್ನು ಆಕ್ರಮಿಸಿರುವ ಮಾರುಕಟ್ಟೆ ಶಕ್ತಿಗಳ ಬಗ್ಗೆ ಇದೇ ಬಗೆಯ ವಿಮಶರ್ಾತ್ಮಕ ದೃಷ್ಟಿಕೋನ ಮತ್ತು ದೂರವನ್ನು ಹೊಂದಿವೆಯೇ?

ಮಾರುಕಟ್ಟೆ ಶಕ್ತಿಗಳ ಬಗ್ಗೆ ಜನತೆಯ ಪರವಾಗಿ ವಾಚ್ ಡಾಗ್ ಪಾತ್ರವನ್ನು ವಹಿಸುತ್ತಿದೆಯೇ? ಜನತೆಗೆ ಮಾರುಕಟ್ಟೆ ಶಕ್ತಿಗಳ ಬಗ್ಗೆ ಸುದ್ದಿ, ಸೂಕ್ಷ್ಮವಿಶ್ಲೇಷಣೆ, ಮತ್ತು ಸಂಶ್ಲೇಷಣೆಗಳನ್ನು ಒದಗಿಸುತ್ತಿವೆಯೇ? ಇತ್ತೀಚೆಗೆ ಯೂರೋಪಿನ ಸ್ಯಾಲಸ್ಬರಿ ಎಂಬಲ್ಲಿ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ಮುಖ್ಯಸ್ಥರ ದೊಡ್ಡ ಸಮ್ಮೇಳನವೊಂದು ನಡೆಯಿತು. ಅದರಲ್ಲಿ ಪ್ರತಿಯೊಬ್ಬರೂ ವ್ಯಕ್ತ ಪಡಿಸಿದ ಸರ್ವಸಮ್ಮತ ಅಭಿಪ್ರಾಯವೆಂದರೆ ಲಾಭವನ್ನು ಅಧಿಕಗೊಳಿಸಬೇಕೆಂಬ ಆಶಯವು ಪತ್ರಿಕೋದ್ಯಮದ ಇತರ ಎಲ್ಲ ಧ್ಯೇಯಗಳನ್ನು ಬದಿಗೆ ತಳ್ಳಿದೆ ಎಂಬುದು.

ಮಾರುಕಟ್ಟೆ ಮತ್ತು ಲಾಭ ಪತ್ರಿಕೋದ್ಯಮವನ್ನು ಕಬಳಿಸಿದ ನಂತರ ಇಂದಿನ ಪತ್ರಿಕೋದ್ಯಮದ ಗುಣಲಕ್ಷಣಗಳು ಸಂಪೂರ್ಣವಾಗಿ ಬಂಡವಾಳಶಾಹಿ ಸ್ವರೂಪವನ್ನು ಪಡೆದುಕೊಂಡಿವೆ. ಮಾರುಕಟ್ಟೆ ನೀತಿ ಸಂಹಿತೆಯ ಪ್ರಕಾರ ಸುದ್ದಿ ಎಂಬುದು ಜನರಿಗೆ ಒದಗಿಸಬೇಕಾದ ಅತ್ಯಗತ್ಯ ಮಾಹಿತಿಯಲ್ಲ. ಬದಲಿಗೆ ಸುದ್ದಿಯೂ ಈಗೊಂದು ಮಾರಾಟವಾಗಬೇಕಾದ ಸರಕು. ಲಾಭವನ್ನು ಗಳಿಸಿಕೊಡಬೇಕಾದ ಸರಕು. ಬಂಡವಾಳಶಾಹಿ ಮಾರುಕಟ್ಟೆಯಲ್ಲಿ ಸರಕುಗಳ ಮಾರಾಟದ ನಿಯಮಗಳಿಗೆ ಯಾವ ಜನಪರತೆಯ ಲೇಪವೂ ಇರುವುದಿಲ್ಲ. ಒಂದೇ ಬಗೆಯ ಸರಕುಗಳನ್ನು ಮಾರಾಟ ಮಾಡುವವರಲ್ಲಿ ಪೈಪೋಟಿ ಇರುವಂತೆ ಒಂದೇ ಬಗೆಯ ಸುದ್ದಿಯನ್ನು ಬಿತ್ತರಿಸಬೇಕಾದ ಮಾಧ್ಯಮಗಳ ನಡುವೆಯೂ ಕತ್ತು ಕೊಯ್ಯುವ ಸ್ಪಧರ್ೆ ಏರ್ಪಟ್ಟಿದೆ.

ಹಲವು ಸ್ಪಧರ್ಿಗಳ ನಡುವೆ ಜನ ತಮ್ಮ ಸರಕನ್ನೇ ಕೊಳ್ಳುವಂತೆ ಮಾಡಲು ಬಂಡವಾಳಶಾಹಿಗಳು ಅನುಸರಿಸುವ ಮಾರ್ಗವನ್ನೇ ಈಗ ಮಾಧ್ಯಮ ಸಂಸ್ಥೆಗಳು ಅನುಸರಿಸುತ್ತಿವೆ. ಇಂದಿನ ಮಾರುಕಟ್ಟೆಯಲ್ಲಿ ಸರಕಿನ ಗುಣಮಟ್ಟಕ್ಕಿಂತ ಅದರ ಪ್ಯಾಕೇಜೇ ಮುಖ್ಯವಾಗುವಂತೆ ಸುದ್ದಿ ಏನು ಅನ್ನುವುದಕ್ಕಿಂತ ಎಷ್ಟು ರೋಚಕವಾಗಿ ಅದನ್ನು ಮುಂದಿಡಲಾಗುತ್ತದೆ ಎಂಬುದೇ ಆ ಸುದ್ದಿ ಸರಕಿನ ಮಾರಾಟವನ್ನು ನಿರ್ಧರಿಸುತ್ತದೆ. ಹೀಗಾಗಿ ಇಂದಿನ ಪತ್ರಿಕೋದ್ಯಮದಲ್ಲಿ ಯಾವುದು ಪ್ರಮುಖ ಸುದ್ದಿಯಾಗುತ್ತದೆ ಎಂಬುದು ತೀಮರ್ಾನಗೊಳ್ಳುವುದು ಅದು ಎಷ್ಟು ರೋಚಕತೆಯನ್ನು ಹೊಂದಿದೆ ಎಂಬುದರಿಂದಲೇ. ಮುಂಬೈ ಟೆರರ್ ದಾಳಿ 60 ಗಂಟೆ ಬ್ರೇಕ್ ಇಲ್ಲದೇ ಪ್ರಸಾರವಾಗುವುದು ಮತ್ತು ಅದೇ ಸಮಯದಲ್ಲಿ ದೇಶದ ಇತರ ಹಿಂದುಳಿದ ವರ್ಗಗಳ ಪರವಾದ ಕಾಳಜಿ ಇಟ್ಟುಕೊಂಡ ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಸಾವು ಸುದ್ದಿಯೇ ಆಗದಿರುವುದು ಇದೇ ಕಾರಣದಿಂದಲೇ.

ಈ ರೀತಿಯಲ್ಲಿ ಮಾರುಕಟ್ಟೆಯು ಸುದ್ದಿಯ ಆಯ್ಕೆಯನ್ನು ನಿರ್ಧರಿಸುತ್ತಿದ್ದಂತೆ ಜನಸಾಮಾನ್ಯರ ಹಿತಾಸಕ್ತಿ ಸಹಜವಾಗಿಯೇ ಹಿಂದಕ್ಕೆ ಸರಿಯಲಾರಂಭಿಸುತ್ತದೆ. ತನ್ನ ಓದುಗ ವರ್ಗ ಅಥವಾ ನೋಡುವ ವರ್ಗ ಕೊಳ್ಳಬಲ್ಲ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗ ಎಂದು ನಿರ್ಧರಿಸಿಕೊಂಡಿರುವ ಈ ಮಾಧ್ಯಮ ಸಂಸ್ಥೆಗಳು ಆ ವರ್ಗದ ಅಭಿರುಚಿಯನ್ನು ತಾನು ಗ್ರಹಿಸಿಕೊಂಡಿರುವ ರೀತಿಯಲ್ಲಿ ಉತ್ತೇಜಿಸುತ್ತಿವೆ ಮತ್ತು ಪುನರ್ ರೂಪಿಸುತ್ತಿವೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರಾರಂಭವಾದ ಇಂಗ್ಲಿಷ್ ದಿನಪತ್ರಿಕೆಯೊಂದು ತನ್ನ ಓದುಗ ವರ್ಗ ಬೆಂಗಳೂರಿನ ಜಾಲಿ ಗೋಯಿಂಗ್ ಮಧ್ಯಮ ವರ್ಗವಾಗಿರುವುದರಿಂದ ರೈತರ ಆತ್ಮಹತ್ಯೆ, ನಗರದ ಕೊಳೆಗೇರಿ ನಿವಾಸಿಗಳ ಗೋಳು ಇನ್ನಿತ್ಯಾದಿಗಳ ಬಗ್ಗೆ ಬರೆಯಬೇಡಿ ಎಂದು ಸ್ಪಷ್ಟವಾಗಿ ನಿದರ್ೇಶನ ಕೊಟ್ಟಿದೆಯಂತೆ. ಅದು ಕೇವಲ ಆ ದಿನಪತ್ರಿಕೆಯೊಂದರ ನೀತಿಯೇನಲ್ಲ. ಈ ಹಿಂದೆ ಎಲ್ಲ ಪತ್ರಿಕೆಗಳಲ್ಲೂ ರೈತರ, ಕಾಮರ್ಿಕರ, ಇನ್ನಿತರ ಜನವರ್ಗಗಳ ಆಗು ಹೋಗುಗಳನ್ನು ವರದಿ ಮಾಡಲೆಂದೇ ವಿಶೇಷ ವರದಿಗಾರರಿರುತ್ತಿದ್ದರು. ಇಂದು ಬಹುಪಾಲು ಪತ್ರಿಕೆಗಳಲ್ಲಿ ಆ ಬಗೆಯ ಬೀಟ್ಗಳನ್ನೇ ತೆಗೆದು ಹಾಕಲಾಗಿದೆ. ಪ್ರಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ಹೇಳುವಂತೆ ಕೆಲವು ವರ್ಷಗಳ ಹಿಂದೆ ನಡೆದ ಲ್ಯಾಕ್ಮೆ ಫ್ಯಾಷನ್ ಶೋ ವರದಿ ಮಾಡಲು 400 ಕ್ಕೂ ಹೆಚ್ಚು ವರದಿಗಾರರು ಬೇರೆ ಬೇರೆ ಸಂಸ್ಥೆಗಳಿಂದ ನಿಯುಕ್ತಿಗೊಂಡಿದ್ದರು.

ಆದರೆ, ಅದೇ ಸಮಯದಲ್ಲಿ ದೇಶಾದ್ಯಂತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ರೈತರ ಪರಿಸ್ಥಿತಿಯನ್ನು ವರದಿ ಮಾಡಲು ಹತ್ತು ವರದಿಗಾರರೂ ಸಹ ನಿಯುಕ್ತಿಗೊಂಡಿರಲಿಲ್ಲ. ಕುಡಿಯುವ ನೀರಿನ ಖಾಸಗೀಕರಣದಿಂದಾಗಿ ಮತ್ತು ಆರೋಗ್ಯ ಸೇವೆಗಳ ಖಾಸಗೀಕರಣದಿಂದಾಗಿ ದೇಶಾದ್ಯಂತ ಮಲೇರಿಯಾ ಹಾಗೂ ಕಾಲರಾಗಳಿಂದ ಲಕ್ಷಾಂತರ ಭೇದಿ-ವಾಂತಿಗಳಿಂದ ಸಾಯುತ್ತಿದ್ದರೆ ಅದರ ಬಗ್ಗೆ ಒಂದೂ ಸಾಲು ವರದಿ ಮಾಡದ ಮಾಧ್ಯಮಗಳು ಅಮಿತಾಭ್ ಬಚ್ಚನ್ ಆಸ್ಪತ್ರೆಯಲ್ಲಿ ಬೆಳಗ್ಗೆ ಮಲವಿಸರ್ಜನೆ ಮಾಡಿದ್ದನ್ನು ಬ್ರೇಕಿಂಗ್ ನ್ಯೂಸ್ ಎಂಬಂತೆ ವರದಿ ಮಾಡುತ್ತಿರುವುದು ಸಹ ಸುದ್ದಿ ಮಾಧ್ಯಮಗಳ ನೀತಿ ಸಂಹಿತೆಯೇ ಬದಲಾಗುತ್ತಿರುವುದರ ಪರಿಣಾಮ. ಹೀಗೆ ಸುದ್ದಿ ಎಂದರೆ ಏನು ಮತ್ತು ಅದನ್ನು ಏಕೆ ಮತ್ತು ಹೇಗೆ ವರದಿ ಮಾಡಬೇಕು ಎಂಬುದರ ಬಗೆಗಿನ ಗ್ರಹಿಕೆಯನ್ನೇ ಲಾಭದ ಲಾಲಸೆ ಸಂಪೂರ್ಣವಾಗಿ ಬದಲು ಮಾಡಿದೆ. ಈ ಮಾರುಕಟ್ಟೆ ಸಂಹಿತೆಯು ಜನ ಯಾವುದನ್ನು ಬಯಸುತ್ತಾರೋ ಅದನ್ನು ಕೊಡುತ್ತೇವೆ ಎಂಬ ಆತ್ಮವಂಚಕ ತರ್ಕವನ್ನು ಮುಂದಿಡುತ್ತಿದರೂ ಅಸಲಿ ವಿಷಯವೆಂದರೆ ಇತರ ಉದ್ಯಮಗಳಲ್ಲಿ ಕೃತಕ ಬೇಡಿಕೆಯನ್ನು ಸೃಷ್ಟಿಸಿ ಮಾರುಕಟ್ಟೆಯನ್ನು ಗಿಟ್ಟಿಸಿಕೊಳ್ಳುವಂತೆ ಪತ್ರಿಕೋದ್ಯಮದಲ್ಲೂ ಸಹ ಕೃತಕ ಬೇಡಿಕೆಯನ್ನು ಸೃಷ್ಟಿಸಿಕೊಳ್ಳುತ್ತಿದೆ.

ಹಲವು ವರ್ಷಗಳ ಹಿಂದೆ ಕ್ರೈಂ ನ್ಯೂಸ್, ಕ್ರೈಂ ಸ್ಟೋರಿ, ಹೀಗೂ ಉಂಟೇ, ಅಗೋಚರ ಇನ್ನಿತರ ಕಾರ್ಯಕ್ರಮಗಳನ್ನು ನೋಡದೆಯೂ ಸಹ ಜನ ಮಲಗುತ್ತಿದ್ದರು. ಆದರೆ ಇವತ್ತು ಹಸಿ ಹಿಂಸೆ ಮತ್ತು ಮೌಢ್ಯಗಳನ್ನು ರೋಚಕವಾಗಿ ಬಿತ್ತರಿಸುವ ಮೂಲಕ ಹೊಸ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳಲಾಗಿದೆ. ಅಷ್ಟರ ಮಟ್ಟಿಗೆ ಜನರ ಅಭಿರುಚಿಗಳನ್ನೂ ಸಹ ಭ್ರಷ್ಟಗೊಳಿಸಲಾಗುತ್ತಿದೆ. ಅದೇ ರೀತಿ ದೃಶ್ಯ ಮಾಧ್ಯಮಗಳು ವಿಶೇಷವಾಗಿ ಹುಟ್ಟು ಹಾಕಿರುವ ಬ್ರೇಕಿಂಗ್ ನ್ಯೂಸ್ ಸಂಸ್ಕೃತಿ. ಇದು ಅನಗತ್ಯವಾದ, ಅಸಂಗತವಾದ ಸುದ್ದಿಗಳನ್ನು ಸಹ ದೇಶದ ಅತಿ ಪ್ರಮುಖ ವಿದ್ಯಮಾನವೆಂಬಂತೆ ತೋರಿಸುತ್ತವೆ. ಸುದ್ದಿಯನ್ನು ರೋಚಕ ರೂಪದಲ್ಲಿ ಮಾತ್ರ ಗ್ರಹಿಸುವಂತೆ ಮಾಡುವ ಈ ಹೊಸ ಸಂಸ್ಕೃತಿ ವಿಶ್ಲೇಷಣೆ ಮಾಡಿ ತಪ್ಪು ಸರಿಗಳನ್ನು ನಿರ್ಧರಿಸಬಲ್ಲ ಜ್ಞಾನವಂತ ಪ್ರಬುದ್ಧ ನಾಗರಿಕರನ್ನು ಸೃಷ್ಟಿ ಮಾಡುವ ಬದಲು ಪ್ರಶ್ನಿಸದೇ ಒಪ್ಪಿಕೊಳ್ಳುವ ಗ್ರಾಹಕನನ್ನಷ್ಟೇ ಸೃಷ್ಟಿಸುತ್ತಿದೆ.

ಹೀಗಾಗಿ ತಂತ್ರಜ್ಞಾನ ಇನ್ನಿತ್ಯಾದಿ ಕಾರಣದಿಂದ ಮಾಹಿತಿಯ ಪ್ರವಾಹವೇ ಹರಿದು ಬರುತ್ತಿದೆ. ಆದರೆ ಅದರಲ್ಲಿ ಶೇ.90ರಷ್ಟು ಸುದ್ದಿಗೆ ಅರ್ಹವಲ್ಲದ ಮಾಹಿತಿ ಎಂದು ವರದಿಗಳು ತಿಳಿಸುತ್ತದೆ. ಪ್ರತಿ ವರ್ಷವೂ ಮೂರು ಪಟ್ಟು ಮಾಹಿತಿ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಇಂದಿನ ಪತ್ರಿಕೋದ್ಯಮದ ಬಹುದೊಡ್ಡ ಸವಾಲು ಮಾಹಿತಿಯಿಂದ ಜ್ಞಾನವನ್ನು ಹಿಂಡಿ ತೆಗೆಯುವುದೇ ಆಗಿದೆ. ಆದರೆ ಮಾಹಿತಿಯಿಂದ ಜ್ಞಾನವನ್ನು ಹಿಂಡಿ ತೆಗೆಯುವ ಸಾಹಸಕ್ಕೆ ಹೋಗದ ಇಂದಿನ ಪತ್ರಿಕೋದ್ಯಮ ಜೊಳ್ಳನ್ನೇ ಕಾಳೆಂದು ಉಣಬಡಿಸುತ್ತಿದೆ. ಇದು ಒಂದು ಪ್ರಬುದ್ಧ ಮತ್ತು ಜೀವಂತ ಪ್ರಜಾತಂತ್ರವನ್ನು ಬುಡದಿಂದಲೇ ನಾಶ ಮಾಡುವ ಮಾರುಕಟ್ಟೆಯ ಕುತಂತ್ರವಲ್ಲದೇ ಬೇರೇನಲ್ಲ.

ಇದರ ಅರ್ಥ ಮಾರುಕಟ್ಟೆ ಶಕ್ತಿಗಳ ಈ ಲಾಭಕೋರತೆಗೆ ಇತರ ಯಾವುದೇ ಸಿದ್ಧಾಂತಗಳ ಸೋಂಕಿರುವುದಿಲ್ಲ ಎಂದು ಭಾವಿಸಿದರೇ ತಪ್ಪಾದೀತು. ಲಾಭದಾಯಕತೆಯನ್ನು ಇತರ ಎಲ್ಲ ಮೌಲ್ಯಗಳಿಗಿಂತಲೂ ಪ್ರಧಾನವಾಗಿಸುವ ನೀತಿ ಸಂಹಿತೆ ಸಹಜವಾಗಿ ಸಮಾಜಮುಖಿ ಮೌಲ್ಯಗಳಿಗೂ ಮತ್ತು ಸಮಾಜವಾದಿ ಆಶಯಗಳಿಗೂ ವಿರುದ್ಧವಾಗಿರುತ್ತದೆ. ಅದರಲ್ಲೂ ಪತ್ರಿಕೋದ್ಯಮವು ಒಂದು ಬಂಡವಾಳಶಾಹಿ ಉದ್ಯಮವಾದ ಮೇಲೆ ಜಾಗತೀಕರಣದ ಈ ಸನ್ನಿವೇಶದಲ್ಲಿ ಇಡೀ ಪತ್ರಿಕೋದ್ಯಮವೂ ಸಹ ಕೆಲವೇ ಬಂಡವಾಳಶಾಹಿ ಸಂಸ್ಥೆಗಳ ಏಕಸ್ವಾಮ್ಯವಾಗುತ್ತಿದೆ.

ಸುದ್ದಿಯ ಮೂಲಕ ಬಂಡವಾಳಶಾಹಿ ಸಿದ್ಧಾಂತವೂ ಮತ್ತು ಅದಕ್ಕೆ ಅನುಕೂಲಕಾರಿಯಾದ ಇತರ ಮೌಲ್ಯಗಳನ್ನೂ ಅದೂ ವಾಸ್ತವತೆಯ ಹೆಸರಲ್ಲಿ ನಿರಂತರವಾಗಿ ಬಿತ್ತುತ್ತಿದೆ. ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣವು ಪ್ರಾರಂಭವಾದಾಗ ಎಲ್ಲ ಸರಕಾರಿ ಸಂಸ್ಥೆಗಳನ್ನು ಸರಕಾರದ ಸಬ್ಸಿಡಿಯ ಮೇಲೆ ಬದುಕುವ ಬಿಳಿ ಆನೆಗಳೆಂದು ಹೀಯ್ಯಾಳಿಸಿದ ಮಾಧ್ಯಮಗಳು ಮುಕ್ತ ಮಾರುಕಟ್ಟೆಯ ಯುಗದಲ್ಲಿ ಸಕರ್ಾರ ತನ್ನ ಸಂಸ್ಥೆಗಳಿಗೆ ವಿಶೇಷ ರಿಯಾಯತಿ ಕೊಡುವುದು ಅಕ್ಷಮ್ಯ ಅಪರಾಧವೆಂದು ತಮ್ಮ ಮಾಲಕರ ವಾದವನ್ನು ರೋಚಕ ಪ್ಯಾಕೇಜುಗಳಲ್ಲಿ ಮುಂದಿಟ್ಟವು.

ಆದರೆ ಅದೇ ಸಮಯದಲ್ಲಿ ವಿದೇಶಿ ಬಂಡವಾಳಕ್ಕೆ ಮತ್ತು ಐಟಿ ಬಿಟಿಗಳಿಗೆ ಮತ್ತು ವಿಶೇಷ ಆಥರ್ಿಕ ವಲಯದಲ್ಲಿ ಖಾಸಗಿ ಉದ್ಯಮಗಳಿಗೆ ವಿಶೇಷ ರಿಯಾಯಿತಿಗಳನ್ನು ಕೊಡುತ್ತಿರುವುದೂ ಸಹ ಮುಕ್ತ ಮಾರುಕಟ್ಟೆ ಸಂಹಿತೆಗೆ ವಿರುದ್ಧವೆಂಬುದನ್ನು ಯಾವ ಮಾಧ್ಯಮಗಳೂ ಸಹ ಬಿತ್ತರಿಸಲಿಲ್ಲ. ಮಾರುಕಟ್ಟೆಯಲ್ಲಿ ಬಲವಿದ್ದವು ಬದುಕುತ್ತವೆ ಇಲ್ಲದವು ಸಾಯುತ್ತವೆ. ಅದೆ ಸಹಜ ನಯಮ ಎಂದು ಸರಕಾರಿ ಸಂಸ್ಥೆಗಳ ಸಾವಿಗೆ ಕಣ್ಣೀರಿಡುವ ಅಗತ್ಯವಿಲ್ಲ ಎಂದು ಪ್ರತಿಪಾದಿಸುತ್ತಿದ್ದ ಮಾಧ್ಯಮಗಳು ಇದೀಗ ತಮ್ಮದೇ ದುರಾಸೆಯಿಂದಾಗಿ ಸಾವು ತಂದುಕೊಂಡಿರುವ ಅಮೆರಿಕದ ಬ್ಯಾಂಕಿಂಗ್ ಸಂಸ್ಥೆಗಳ ಅವಸ್ಥೆಗೆ ಕಣ್ಣೀರಿಡುತ್ತಾ ಲಕ್ಷಾಂತರ ಕೋಟಿ ನಾಗರಿಕರ ಹಣವನ್ನು ಅವರನ್ನು ಉಳಿಸಲು ಸುರಿಯಿರಿ ಎಂದು ಪ್ರತಿಪಾದಿಸುತ್ತಿವೆ. ಒಟ್ಟಿನಲ್ಲಿ ಮಾರುಕಟ್ಟೆ ಶಕ್ತಿಗಳಿಂದ ಯಾವುದೇ ಬಗೆಯ ದೂರ ಅಥವಾ ಸ್ವಾತಂತ್ರ್ಯವನ್ನು ಉಳಿಸಿಕೊಂಡಿಲ್ಲ.

ಆದ್ದರಿಂದಲೇ ವಾಸ್ತವತೆಗಿಂತ ಬಂಡವಾಳಶಾಹಿ ಪರ ಪ್ರಚಾರವೇ ಇಂದಿನ ಮಾಧ್ಯಮಗಳಲ್ಲಿ ಸುದ್ದಿ ಎಂಬಂತೆ ಅಥವಾ ವಿಶ್ಲೇಷಣೆ ಎಂಬಂತೆ ರಾರಾಜಿಸುತ್ತಿದೆ. ಅದರ ಬಗೆಗಿನ ನೈಜ ವಿಶ್ಲೇಷಣೆಗಳನ್ನು ಅಥವಾ ಸಮಾಜವಾದಿ ಅಥವಾ ಸಮಾಜ ಮುಖಿ ವಿಶ್ಲೇಷಣೆಗಳನ್ನು ಪತ್ರಿಕೋದ್ಯಮ ಪ್ರಚಾರವಲ್ಲ ಎಂದು ನಿರಾಕರಿಸುವ ಈ ಮಾಧ್ಯಮಗಳು ಮಾತ್ರ ವಸ್ತುನಿಷ್ಠತೆಯ ಹೆಸರಲ್ಲಿ ಮಾಡುತ್ತಿರುವುದೆಲ್ಲಾ ಮಾರುಕಟ್ಟೆ ಶಕ್ತಿಗಳ ಪರವಾದ ಪ್ರಚಾರವೇ! ವಾಸ್ತವವಾಗಿ ಕಾಪರ್ೊರೇಟ್ ಉದ್ದಿಮೆಗಳೇ ನೇರವಾಗಿ ಪತ್ರಿಕೋದ್ಯಮವನ್ನು ನಿಯಂತ್ರಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಎಡಿಟೊರಿಯಲ್ ಕಂಟೆಂಟ್ ಅನ್ನು ನಿಯಂತ್ರಿಸುವಲ್ಲೂ ಪರೋಕ್ಷವಾದ ಪದ್ಧತಿಗಳನ್ನು ಅನುಸರಿಸುತ್ತಿವೆ.

ಎಡಿಟೋರಿಯಲ್ ಎಂಬುದೇ ಜಾಹೀರಾತುಗಳ ನಡುವಿನ ಖಾಲಿ ಜಾಗವನ್ನು ಭತರ್ಿ ಮಾಡುವ ಲೇಖನ ಎಂದು ಹೆಮ್ಮೆಯಿಂದ ಪ್ರತಿಷ್ಠಿತ ಪತ್ರಿಕೆಗಳೇ ಹೇಳಿಕೊಳ್ಳುತ್ತಿವೆ! ಅಷ್ಟು ಮಾತ್ರವಲ್ಲದೆ ಎಡಿಟೋರಿಯಲ್ ವಿವಾದಗಳನ್ನು ಬಗೆಹರಿಸಲು ಹಲವಾರು ಮಾಧ್ಯಮ ಸಂಸ್ಥೆಗಳು ಕಾಪರ್ೊರೇಟ್ ಉದ್ಯಮಪತಿಗಳನ್ನೇ ನೇಮಕ ಮಾಡಿಕೊಂಡಿವೆ! ಹಲವರ ದಾರಿದ್ರ್ಯ ಹೆಚ್ಚು ಮಾಡುತ್ತಾ ಕೆಲವರ ಸಂಪತ್ತನ್ನು ಮಾತ್ರ ಹೆಚ್ಚು ಮಾಡುವ ಇಂದಿನ ಆಥರ್ಿಕತೆ ನಿದರ್ಿಷ್ಟ ಬಗೆಯ ಎಂದರೆ ತೋರಿಕೆಯಲ್ಲಿ ಪ್ರಜಾತಂತ್ರವಾಗಿರುವ ಆದರೆ ಬಡವರ ಪಾಲಿಗೆ ಸವರ್ಾಧಿಕಾರವೇ ಆಗಿರುವ ರಾಜಕೀಯವನ್ನು ಅನಿವಾರ್ಯಗೊಳಿಸುತ್ತದೆ. ಅದನ್ನು ಅನಿವಾರ್ಯ ಎಂಬಂತೆ ಮಾಡಲು ಹಲವು ಬಗೆಯ ಸೈದ್ಧಾಂತಿಕ ಸಮರ್ಥನೆಗಳು ಸಹ ಅಗತ್ಯವಾಗುತ್ತವೆ. ಒಂದು ಜನಪರ ಮತ್ತು ನಿಷ್ಪಕ್ಷಪಾತ ಪತ್ರಿಕೋದ್ಯಮ ಈ ಹುನ್ನಾರಗಳನ್ನು ಬಯಲುಗೊಳಿಸಬೇಕು.

ಆದರೆ, ಇಂದು ಕಾಪರ್ೊರೇಟ್ ಉದ್ದಿಮೆಗಳ ಹಿಡಿತದಲ್ಲಿರುವ ಮಾಧ್ಯಮಗಳು ಜನಸಾಮಾನ್ಯರ ಹಿತಾಸಕ್ತಿಗೆ ವಿರುದ್ಧವಾಗಿರುವ ಕೋಮುವಾದ, ಯುದ್ಧೋನ್ಮಾದ, ದ್ವೇಷದ ನೆಲೆಯ ಉನ್ಮಾದಯುಕ್ತ ದೇಶಪ್ರೇಮ ಇನ್ನಿತ್ಯಾದಿಗಳನ್ನು ಬಹಿರಂಗವಾಗಿಯೇ ಬೆಂಬಲಿಸುತ್ತಿವೆ. ಹಾಗೆ ನೋಡಿದರೆ ಚಿಂತಕರೊಬ್ಬರು ಹೇಳಿದಂತೆ ಈ ಬಗೆಯೆ ಚಿಂತನೆಗಳ ಪ್ರಚಾರವೇ ಇಂದು ಮಾಹಿತಿ ಮತ್ತು ಜ್ಞಾನ ಎಂಬಂತೆಯೂ ಪ್ರಚಾರದಲ್ಲಿದೆ. ಮುಂಬೈ ಟೆರರ್ ಬಗ್ಗೆ ಕೆಲವು ಮಾಧ್ಯಮಗಳು ಕೋಮುವಾದಿ ಪ್ರಚಾರಕ್ಕೆ ಮತ್ತು ಯುದ್ಧದ ಪ್ರಚೋದನೆಗೆ ಬಳಸಿಕೊಂಡ ರೀತಿ ಇದಕ್ಕೆ ಒಂದು ಇತ್ತೀಚಿನ ಉದಾಹರಣೆ.

ಇದು ಜನಪರ ಪತ್ರಿಕೋದ್ಯಮದ ಎದುರಿಸುತ್ತಿರುವ ಸವಾಲು. ಮಾರುಕಟ್ಟೆ ಶಕ್ತಿಗಳಿಗೆ ಮತ್ತು ಅವರ ಆಸಕ್ತಿಗಳಿಗೆ ಇಂದಿನ ಪತ್ರಿಕೋದ್ಯಮ ಅಧೀನವಾಗಿರುವುದನ್ನು ಗುರುತಿಸುವುದು. ಹೀಗಾಗಿ ಇಂದಿನ ಪತ್ರಿಕೋದ್ಯಮವೂ ಮುಕ್ತವಲ್ಲವೆಂಬುದನ್ನು ಮಾರುಕಟ್ಟೆ ಶಕ್ತಿಗಳ ಪರವಾಗಿರುವುದನ್ನು ಗ್ರಹಿಸುವುದು. ಹೀಗಾಗಿ ಇಂದು ಯಾವುದನ್ನು ವಸ್ತುನಿಷ್ಠ ಮೌಲ್ಯವೆಂದು ಮಾಧ್ಯಮಗಳು ಪ್ರಚಾರ ಮಾಡುತ್ತಿವೆಯೋ ಅದನ್ನು ಮತ್ತೊಮ್ಮೆ ಪ್ರಶ್ನಿಸುವುದು. ಜೋಳ್ಳಿನಿಂದ ಕಾಳನ್ನು ಬೇರ್ಪಡಿಸುವುದು. ವ್ಯಕ್ತಿನಿಷ್ಠತೆಯಿಂದ ವಸ್ತುನಿಷ್ಠತೆಯನ್ನು ಬೇರ್ಪಡಿಸುವುದು, ಅಭಿಪ್ರಾಯವನ್ನು ವಾಸ್ತವತೆಯಿಂದ ಬೇರ್ಪಡಿಸುವುದು, ಖಾಸಗಿ ಆಸಕ್ತಿಯನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಬೇರ್ಪಡಿಸುವುದು, ದುರುಪಯೋಗವನ್ನು ಪ್ರಭಾವದಿಂದ ಬೇರ್ಪಡಿಸುವುದನ್ನು ಮಾಡುವ ಮೂಲಕ ಪತ್ರಿಕೋದ್ಯಮವು ವ್ಯವಸ್ಥೆಯ ವಕ್ತಾರನಾಗದೆ ಪ್ರಚಾರಕನಾಗದೆ ಪ್ರಶ್ನಿಸುವ, ಸಂದೇಹದಿಂದ ನೋಡುವ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಜನರ ಹಿತಾಸಕ್ತಿಯನ್ನು ಎಲ್ಲಕ್ಕಿಂತ ಮುಖ್ಯವೆಂದು ನೋಡುವ ಮೂಲ ಉದ್ದೇಶಕ್ಕೆ ಮರಳಬೇಕಿದೆ.

ಆದರೆ, ಒಟ್ಟಾರೆಯಾಗಿ ನೋಡಿದಾಗ ಮಾರುಕಟ್ಟೆ ಶಕ್ತಿಗಳ ಸವರ್ಾಧಿಕಾರ ನಡೆದಿರುವ ಈ ಹೊತ್ತಿನಲ್ಲಿ ಪತ್ರಿಕೋದ್ಯಮ ಕೇವಲ ಅದರ ಪ್ರಚಾರ ಸಾಧನವಾಗಿ ಬಿಡುವ ಅಪಾಯ ಎದುರಾಗಿದೆ. ಇದು ಕೇವಲ ಪತ್ರಿಕೋದ್ಯಮಕ್ಕೆ ಅಲ್ಲ ಪ್ರಜಾತಂತ್ರವೇ ಎದುರಿಸುತ್ತಿರುವ ಅಪಾಯವಾಗಿದೆ.

ಶಿವಸುಂದರ್

ಮಾಧ್ಯಮಗಳ ಐಡಿಯಾಲಜಿ ಎಂತಹದ್ದು..



ಪ್ರಜಾಪ್ರಭುತ್ವದ ಸ್ಪಧರ್ಾಕಣದಲ್ಲಿರುವ ಜಾತಿ, ವರ್ಗ, ಧರ್ಮ ಲಿಂಗತ್ವ, ಕೋಮು ಮೊದಲಾದ ಐಡೆಂಟಿಟಿಗಳೇ ಇಂದು ಮಾಧ್ಯಮಗಳನ್ನು ನಿಯಂತ್ರಿಸುತ್ತಿವೆ ಎಂಬ ಗ್ರಹಿಕೆ ಈ ಲೇಖನದ ಹಿನ್ನಲೆಯಾಗಿದೆ ಎನ್ನುತ್ತಾರೆ ಶ್ರೀನಿವಾಸ ಹೆಚ್.ಆರ್ ಮಂಗಳೂರು.

ಮಾಧ್ಯಮಗಳ ಹಿಂದೆ ಅವುಗಳದ್ದೇ ಆದ ಐಡಿಯಾಲಾಜಿಕಲ್ ನೆಲೆಗಳಿರುತ್ತವೆ ಎಂಬ ಗ್ರಹಿಕೆ ಮಾಧ್ಯಮಗಳನ್ನು ನೋಡುವ ಆದರ್ಶವಾದಿ ಗ್ರಹಿಕೆಗಳನ್ನು ತಿರಸ್ಕರಿಸುತ್ತದೆ. ಪತ್ರಿಕೆಗಳು ಪ್ರಜಾಪ್ರಭುತ್ವದ ಕಾವಲುನಾಯಿ ಎಂಬ ಮಾತಿನಂತೆ ಬಹುಮಟ್ಟಿಗೆ ಇಂಡಿಯಾದಲ್ಲಿ ಪ್ರಜಾಪ್ರಭುತ್ವದ ಅಸ್ತಿತ್ವದೊಂದಿಗೆ ಮಾಧ್ಯಮಗಳ ಅಸ್ತಿತ್ವವವು ವಿವರಿಸಿಕೊಳ್ಳುತ್ತಿದೆ.

ಪತ್ರಿಕೆಗಳು ಕಾವಲು ನಾಯಿ ಎಂದು ಏಕಕಾರದಲ್ಲಿ ಭಾವಿಸಿದರೆ ಪ್ರಜಾಪ್ರಭುತ್ವ ಚಟುವಟಿಕೆಗಳ ನೇರ ಪ್ರಕ್ರಿಯೆ, ಪರಿಣಾಮಗಳಿಂದ ಹೊರಗೆ (ಮನೆಯ ಹೊರಗೆ) ಕಾವಲು ಕುಳಿತ ಸ್ಥಿತಿ ಎಂದಾಗುತ್ತದೆ. ಪತ್ರಿಕೆಗಳ ಪ್ರಜಾಪ್ರಭುತ್ವದಲ್ಲಿ ಸಂಲಗ್ನಗೊಂಡು ಅವೂ ಈ ಚಟುವಟಿಕೆಗಳಲ್ಲಿ ನೇರವಾಗಿ ಭಾಗವಹಿಸುತ್ತವೆ ಎಂದು ತಿಳಿದುಕೊಳ್ಳೋಣ. ಆಗ ಪ್ರಜಾಪ್ರಭುತ್ವ ಎನ್ನುವುದು ಬೇರೆ ಬೇರೆ ಹಿತಾಸಕ್ತಿಗಳು ಅಧಿಕಾರಕ್ಕಾಗಿ ಸ್ಪಧರ್ಿಸುವ ಬಹುರೂಪಿ ಹಿತಾಸಕ್ತಿಗಳ ಸ್ಪಧರ್ಾಕರಣವಾಗಿರುವ ದರಿಂದ ಇದಕ್ಕೆ ಸಂವಾದಿಯಾಗಿ ಮಾಧ್ಯಮಗಳೂ ಬಹುರೂಪಿಯಾಗಿದ್ದು, ಅಧಿಕಾರಕ್ಕಾಗಿ ಸ್ಪಧರ್ಿಸುವ ವಿಭಿನ್ನ ಹಿತಾಸಕ್ತಿಗಳನ್ನು ಪ್ರತಿನಿಧಿಕರಿಸುತ್ತದೆ. ಅಥವಾ ಬೇರೆಬೇರೆ ಐಡಿಯಾಲಾಜಿಗಳ ಮುಖವಾಣಿಗಳಾಗಿ ಕೆಲಸ ಮಾಡುತ್ತವೆ ಎಂಬ ತಿಳುವಳಿಕೆ ಮೂಡುತ್ತದೆ.

ಪ್ರಜಾಪ್ರಭುತ್ವದ ಸ್ಪಧರ್ಾಕಣದಲ್ಲಿರುವ ಜಾತಿ, ವರ್ಗ, ಧರ್ಮ ಲಿಂಗತ್ವ, ಕೋಮು ಮೊದಲಾದ ಐಡೆಂಟಿಟಿಗಳೇ ಇಂದು ಮಾಧ್ಯಮಗಳನ್ನು ಕೂಡ ನಿಯಂತ್ರಿಸುತ್ತಿವೆ ಎಂಬ ಗ್ರಹಿಕೆ ಈ ಲೇಖನದ ಹಿನ್ನಲೆಯಲ್ಲಿದೆ. ಹೀಗಾಗಿ ಮಾಧ್ಯಮಗಳು ಕೇವಲ ವಾಸ್ತವಗಳನ್ನು ವರದಿ ಮಾಡುವುದಿಲ್ಲ. ಬದಲಾಗಿ ಸತ್ಯಗಳನ್ನು ತಮ್ಮದೇ ಐಡಿಯಾಲಾಜಿಕಲ್ ಹಿನ್ನೆಲೆಯಲ್ಲಿ ರೂಪಿಸುವ ಕೆಲಸ ಮಾಡುತ್ತವೆ ಎಂಬುದರ ಕಡೆಗೆ ಇಲ್ಲಿ ಗಮನ ಹರಿಸಲಾಗಿದೆ. ಇದರ ಜೊತೆಗೆ ಕಾಪರ್ೋರೆಟ್ ಜಗತ್ತಿನ ಜೊತೆಗೆ ಮಾಧ್ಯಮಗಳು ಸಂಬಂಧ ಪಡೆದಿದ್ದು ಇಂದು ಉದ್ಯಮಗಳಾಗಿ ಗುರುತಿಸಿಕೊಂಡಿರುವದರಿಂದ ಸಹಜವಾಗಿ ಲಾಭ ಗಳಿಸಿ ಜಾಗತಿಕ ಬಂಡವಾಳದಲ್ಲಿ ಪಾಲು ಪಡೆಯುವುದು ಇವುಗಳ ಉದ್ದೇಶವಾಗಿದೆ. ಸಾಮಾನ್ಯವಾಗಿ ಒಂದು ಆಲೋಚನೆ, ಉಪಾಯ ಎಂಬ ಅರ್ಥದಲ್ಲಿ ಐಡಿಯಾಲಾಜಿ ಪದ ಸೂಚಿಸುತ್ತದೆ. ಸಿದ್ದಾಂತ, ತತ್ವ ಎಂಬ ಪದಗಳಿಗೆ ಸಂವಾದಿಯಾದ ಇಂಗ್ಲೀಷ್ ಐಡಿಯಾಲಾಜಿ ಅನೇಕ ಆಲೋಚನೆಗಳ ಒಂದು ಸಮೂಹ ಅಥವಾ ಚಿಂತನದ ತುಣುಕುಗಳು ತರ್ಕಬದ್ದವಾಗಿ ವಾಸ್ತವವನ್ನು ಜನಕ್ಕೆ ಕಟ್ಟಿಕೊಡುವುದು ಎಂಬ ಅರ್ಥವನ್ನು ಆ ಪದವೊಳಗಿಂಡಿದೆ.

1977ರಲ್ಲಿ ಈ ಪದ ಮೊಟ್ಟಮೊದಲ ಬಾರಿಗೆ ಡೆಸ್ಮುಟ್ ದಿ ಟ್ರಿಸ್ಸಿ ಎನ್ನುವ ಪ್ರೆಂಚ್ ವಿದ್ವಾಂಸನಿಂದ ಚಲಾವಣೆಗೆ ಬಂತು. ಆತನ ವಿವರಣೆಯೆಂದರೆ, "ಆಲೋಚನೆಗಳ ವಿಜ್ಞಾನವೇ ಐಡಿಯಾಲಜಿ". ಅದು ಯಾವುದೇ ಸಂದೇಹ ಅಥವಾ ಗೊತ್ತಿಲ್ಲದರ ಬಗ್ಗೆ ಸೂಚಿಸುವುದು. ವೈಜ್ಞಾನಿಕ ಉತ್ತರವೇ ಐಡಿಯಾಲಜಿ. ಇಂದು ಈ ಪದಕ್ಕೆ ವಿಸ್ತಾರವಾದ ಅರ್ಥ ಪ್ರಾಪ್ತಿಯಾಗಿದೆ. ಯಾವುದೇ ಒಂದು ಕ್ರಿಯೆ ಅಥವಾ ನುಡಿಯ ಹಿಂದೆ ಒಂದು ಐಡಿಯಾಲಜಿ ಇರುತ್ತದೆ. ಈ ಐಡಿಯಾಲಜಿ ವ್ಯಕ್ತಿಯನ್ನು ಕ್ರಿಯಾಶೀಲವಾಗಿಸುತ್ತದೆ. ಆಲೋಚನೆಗೆ ಸಿಡಿಮದ್ದಿನಂತೆ ಕಾರ್ಯನಿರ್ವಹಿಸುವ ಕಾರ್ಯ 3 ರೀತಿಯದ್ದಾಗಿದೆ.

1 ವಾಸ್ತವವನ್ನು ಸರಳೀಕರಿಸುವುದು.

2 ವಾಸ್ತವದ ಬಗ್ಗೆ ಆದೇಶವನ್ನೀಯುವುದು.

3 ವಾಸ್ತವವನ್ನು ಸಮಥರ್ಿಸುವುದು.

ನಿದರ್ಶನವೊಂದರಿಂದ ಮೇಲಿನವುಗಳನ್ನು ಮತ್ತಷ್ಟು ಸ್ಪಷ್ಟಪಡಿಸಿಕೊಳ್ಳಬಹುದು. ಅಹಿಂಸಾ ಸಿದ್ದಾಂತ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಗಾಂಧೀಜಿ. ಆತ ವಾಸ್ತವವನ್ನು ಅಥರ್ೈಸಿದುದು ಅಹಿಂಸೆಯ ನೆಲೆಯಲ್ಲಿ. ಆದರೆ, ಈ ಸಿದ್ದಾಂತ ಕ್ರೀಯಾಶೀಲವಾಗು ವುದು ಹೀಗೆ. ನಾವು ಅಹಿಂಸೆಯನ್ನು ತೊರೆಯಬೇಕು. ಯಾವುದೇ ಜೀವಿಗೆ ನೋವುಂಟು ಮಾಡಬಾರದು ಎಂದು ಹೇಳುವ ಗಾಂಧಿಜಿ ಉದಯಸಿದ್ದು ಬನಿಯಾ ಜಾತಿಯಲ್ಲಿ, ವ್ಯಾಪಾರಿ ಕುಟುಂಬದ ವ್ಯಕ್ತಿ, ಒಬ್ಬ ವ್ಯಾಪಾರಿಗೆ ಲಾಭ ಅಥವಾ ನಷ್ಟ ಉಂಟಾಗುವುದು ಅಹಿಂಸೆ ಮತ್ತು ಹಿಂಸೆಯಿಂದ.

ಪ್ರತಿಭಟನೆ, ಗಲಭೆ, ಹಿಂಸೆ ಇರುವ ಎಡೆಗಳಲ್ಲಿ ವ್ಯಾಪಾರ ಸಾಧ್ಯವಾಗುವುದಿಲ್ಲ. ಸಂಭ್ರಮ, ಶಾಂತಿ, ಅಹಿಂಸೆ ಇದ್ದಾಗಲಷ್ಟೇ ವ್ಯಾಪಾರ ಸಾಧ್ಯ. ಆದ್ದರಿಂದ ಆಥರ್ಿಕ ವಹಿವಾಟು ನಡೆಯಬೇಕಾದರೆ, ಅಹಿಂಸಾವಾದ ಜಾರಿಯಾಗಬೇಕು. ಇದು ಅಹಿಂಸಾವಾದದ ಕ್ರೀಯಾಶಿಲತೆ. ಯಾವುದೇ ಐಡಿಯಾಲಜಿಯೂ ಸಹ ತನ್ನದೇ ಆದ ಹಿತಾಸಕ್ತಿಗಳನ್ನು ಹೊಂದಿರುತ್ತದೆ. ಅಲ್ಲದೇ ಹಿತಾಸಕ್ತಿಗಳನ್ನು ಪೋಷಿಸಿ ಬೆಳೆಸುತ್ತಿರುತ್ತದೆ.

ಆಧುನಿಕ ತಂತ್ರಜ್ಞಾನ ಇಂದು ಮಾದ್ಯಮಗಳಿಗೆ ವೇಗವನ್ನು ತಂದುಕೊಟ್ಟಿದೆ. ಸುದ್ದಿಸ್ಪೋಟದ ಈ ಕಾಲದಲ್ಲಿ ಜನರಿಗೆ ಸುದ್ದಿಕೊಡುವ ಧಾವಂತದಲ್ಲಿ ಎಂತಹ ಸುದ್ದಿ ಅತ್ಯವಶ್ಯ ಎಂಬುದನ್ನು ಮರೆತು, ಯಾರು ಮೊದಲು ಸುದ್ದಿ ಕೊಡುತ್ತಾರೆಂಬುದು ಮುಖ್ಯವಾಗುತ್ತದೆಯೇ ಹೊರತು ಎಂತಹ ಸುದ್ದಿ ಕೊಡುತ್ತಿದ್ದೇವೆ ಅದು ಸತ್ಯವೇ ಅದು ನಿಖರವೇ ಎಂಬ ಸಂಗತಿಗಳು ತೆರೆಯ ಹಿಂದೆ ಸರಿಯುತ್ತಿವೆ. ಸುದ್ದಿಗೆ ಮೊದಲೇ ಬೇಡಿಕೆ ಕಡಿಮೆ. ಹೆಚ್ಚೆಂದರೆ, ಅದು ಒಂದು ದಿನದ್ದು ಮಾತ್ರ. ಆದರೆ, 24ಗಂಟೆ ಸುದ್ದಿ ವಾಹಿನಿಗಳು ಬಂದ ಮೇಲೆ ಇದರ ಆಯುಷ್ಯ ಇನ್ನು ಕಡಿಮೆ. ಈಗ ಅದು ಬರೀ ಕ್ಷಣದ್ದು ಮಾತ್ರ. 24ಗಂಟೆ ಸುದ್ದಿ ಪ್ರಸಾರ ಬಂದಮೇಲೆ ಕ್ಷಣಕ್ಷಣಕ್ಕಾದರೂ ಏನಾದರೂ ಬ್ರೇಕಿಂಗ್ ನ್ಯೂಸ್ ಕೊಡಲೇಬೇಕು. ಆ ಟೀವಿಗಳು ಇದಕ್ಕಿಂತ ಈ ಟಿವಿಯ ಸುದ್ದಿಯನ್ನು ಬ್ರೇಕ್ ಮಾಡಬೇಕು. ಅದು ಒಳ್ಳೆಯದ್ದೆಆಗಿರಲಿ, ಕೆಟ್ಟದೇ ಆಗಿರಲಿ. ತಾನು ಮೊದಲೇ ಅದನ್ನು ಬ್ರೇಕ್ ಮಾಡಿದೆ ಎಂಬ ಪೈಪೋಟಿಯಲ್ಲಿ ಸುದ್ದಿಗೆ ಇರಬೇಕಾದ ಸತ್ಯ ನಿಷ್ಠೆ ಹಾಗೂ ಘನತೆಗಳೆರಡು ಮಣ್ಣುಪಾಲಾಗುತ್ತಿವೆ.

2005ರಲ್ಲಿ ಅಮಿತಾಬಚ್ಚನ್ ಅಸ್ವಸ್ಥರಾಗಿ ಮುಂಬಯಿನ ಲೀಲಾವತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರು ಚಿಕಿತ್ಸೆ ಪಡೆಯುತ್ತಿದ್ದ ಕೊಠಡಿಗೆ ಒಬ್ಬ ವರದಿಗಾಥರ್ಿ ನುಗ್ಗಿ ಬಚ್ಚನ್ರವರ ಬೈಟ್ ಪಡಯುಲು ಯತ್ನಿಸಿದ್ದರು. ಆಕೆಯನ್ನು ಆಸ್ಪತ್ರೆಯ ಸಿಬ್ಬಂದಿ ಆಚೆ ತಳ್ಳಿದ್ದರು. ಅದೇ ವರ್ಷ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಮೇಲೆ ನಡೆದ ಉಗ್ರರದಾಳಿಯಲ್ಲಿ ಗಾಯಗೊಂಡಿದ್ದ ಪಟೇಲಪ್ಪ ಎಂಬುವವರ ಬೈಟ್ ಪಡೆಯಲು ಒಬ್ಬ ಟಿವಿ ವರದಿಗಾತರ್ಿ ವೈದ್ಯರ ವೇಷದಲ್ಲಿ ಆಸ್ಪತ್ರಗೆ ನುಗ್ಗಿದಳು. ಈ ಎರಡು ಘಟನೆಗಳಲ್ಲಿ ಹಲವು ನೈತಿಕ ಪ್ರಶ್ನೆಗಳಿವೆ.

ಅದು ಸುದ್ದಿ ಮುಖ್ಯವೇ ಅಥವಾ ಬಚ್ಚನ್ ಆರೋಗ್ಯ ಮುಖ್ಯವೇ? ಅಥವಾ ಉಗ್ರರ ದಾಳಿಗೆ ಏಕೈಕ ಸಾಕ್ಷಿಯಾಗಿದ್ದ ಪಟೇಲಪ್ಪನವರ ಭದ್ರತೆ ಮುಖ್ಯವೇ? ಒಬ್ಬ ವ್ಯಕ್ತಿಗೆ ಖಾಸಗಿತನ ಮುಖ್ಯವಲ್ಲವೇ? ಟಿವಿ ವಾಹಿನಿಗಳು ಮನುಷ್ಯನ ಖಾಸಗಿ ಬದುಕಿಗೆ ಕೈಹಾಕುತ್ತಿವೆಯೇ? ಪದ್ಮಪ್ರಿಯ ಒಬ್ಬ ಶಾಸಕರ ಪತ್ನಿಯಾಗಿದ್ದರೂ ಆಕೆಗೂ ಒಂದು ಖಾಸಗಿ ಬದುಕು ಇರಬಹುದಿತ್ತಲ್ಲವೇ? ವ್ಯಕ್ತಿಗತ ನೋವು ಸಂತೋಷ ಆಯ್ಕೆಗಳು ಇರಬಹುದಲ್ಲವೇ? ಎಲ್ಲವನ್ನು ಬಿಚ್ಚಿಡುವ ಧಾವಂತದಲ್ಲಿ ಟಿವಿ ಸುದ್ದಿಗಾರರು ಜನರನ್ನು ಭೇಟೆಯಾಡುತ್ತಿದ್ದಾರೆ.

ಆಧುನಿಕ ತಂತ್ರಜ್ಞಾನ ಮೂಲಕ ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ ಪರಿಕಲ್ಪನೆ ಹುಟ್ಟಿಕೊಂಡಿದೆ. ಇದರಿಂದ ತಕ್ಷಣದ ವರದಿಗಳು ವೀಕ್ಷಕ/ಓದುಗರಿಗೆ ಸಿಗುತ್ತವೆ. ಆದರೆ, ವರದಿಗಳ ಸ್ವರೂಪ ಹಾಗೂ ಅದರ ಹಿಂದಿನ ಸಮಾಜದ ಕಳಕಳಿಯಾದರೂ ಎಂತಹದ್ದು.

2005ರಲ್ಲಿ ಆದಿ ಉಡುಪಿಯಲ್ಲಿ ನಡೆದ ಬೆತ್ತಲೆ ಪ್ರಕರಣ. ಹಾಜಬ್ಬ ಹಾಗೂ ಹಸನಬ್ಬರವರನ್ನು ಬೆತ್ತಲೆ ಮಾಡಿದ ಪ್ರಕರಣಕ್ಕೆ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ವ್ಯಕ್ತವಾಯಿತು. ಅದರಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿನ ಪ್ರತಿಭಟನೆ ತೀವ್ರಸ್ವರೂಪವನ್ನು ತಳೆಯುತ್ತಿತ್ತು. ಘಟನೆಯ ಮರುದಿನ ಈ ಜಿಲ್ಲೆಗಳ ಪ್ರಸಿದ್ದ ದಿನಪತ್ರಿಕೆಯೊಂದು ಮುಖಪುಟದಲ್ಲಿ ಇದು ಭಾರತವಲ್ಲ ಪಾಕಿಸ್ತಾನವೆಂಬ ಶಿಷರ್ಿಕೆಯಡಿ ಪ್ರತಿಭಟನೆಯ ಮೆರವಣಿಗೆಯ ವೇಳೆ ಪಾಕಿಸ್ತಾನದ ಧ್ವಜ ಹಾರಾಡುತ್ತಿತ್ತು ಎಂಬ ಸುದ್ದಿಯನ್ನು ಪ್ರಕಟಿಸಿತ್ತು. ನಂತರ ಮರುದಿನದ ಪತ್ರಿಕೆಯಲ್ಲಿ ಸುದ್ದಿಯೂ ಕಣ್ತಪ್ಪಿಂದ ತಪ್ಪಾಗಿ ಪ್ರಕಟವಾಗಿದೆ ಎಂದು ವಿಷಾಧಿಸಿ ಪ್ರಕಟಿಸಿತು. ದಗರ್ಾದ ಧ್ವಜವನ್ನು ಪಾಕಿಸ್ತಾನದ ಧ್ವಜವೆಂದು ಚಿತ್ರ ಸಮೇತ ಸುದ್ದಿ ಪ್ರಕಟಿಸುವ ಪತ್ರಿಕೆಗಳು ಕೇವಲ ವೇಗದಿಂದ (ಅವಸರ) ಇಂತಹ ತಪ್ಪು ಮಾಡಿರಲಿಕ್ಕಿಲ್ಲ. ಬದಲಾಗಿ ಇಡೀ ಪ್ರಕರಣವನ್ನು ತಿರುಚುವ ಪತ್ರಿಕೆಯ ಹಿಂದಿರುವ ಐಡಿಯಾಲಜಿ ಅರ್ಥವಾಗುತ್ತದೆ.

ಮಾಧ್ಯಮಗಳು ಕೇವಲ ನಡೆದ ಘಟನೆಯನ್ನು ಮಾತ್ರ ವರದಿ ಮಾಡದೇ ಸುದ್ದಿಗಳನ್ನು ಸೃಷ್ಟಿಸುವ ಕ್ರಿಯೆಯಲ್ಲಿ ತೊಡಗಿರುತ್ತವೆ. ರೋಚಕೆತೆಯ ಬೆನ್ನತ್ತು ಟಿವಿ ವರದಿಗಾರರು ಮಾಡುವ ಕೆಲಸ ಒಂದೆರಡಲ್ಲ.

ಇತ್ತೀಚಿಗೆ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಧಾರವಾಡದಲ್ಲಿ ಮರಾಠಿಗರ ವಿರುದ್ದ ಪ್ರತಿಭಟನೆ ಮಾಡುತ್ತಿದ್ದ ಕನ್ನಡ ಚಳುವಳಿಗಾರರಿಗೆ ನೀವು ಬರೀ ಹೀಗೆ ಘೋಷಣೆ ಕೂಗಿದರೆ ಸಾಲದು. ಏನಾದರೂ ದಾಂಧಲೆ ಮಾಡಿ ಎಂದು ಟಿವಿ ವರದಿಗಾರರೇ ಪ್ರೇರೆಪಿಸಿದ್ದರು. ಅದರಂತೆ ಅಲ್ಲಿನ ತಿಳುವಳಿಕೆ ಇಲ್ಲದ ಕೆಲ ಮಂದಿ ಮಹಾರಾಷ್ಟ್ರ ಬ್ಯಾಂಕಿಗೆ ನುಗ್ಗಿ ಪಿಠೋಪಕರಣಗಳನ್ನು ಒಡೆದುಹಾಕಿದರು. ಬ್ಯಾಂಕ್ ಆಪ್ ಮಹಾರಾಷ್ಟ್ರ ಮರಾಠಿಗರದ್ದೇ ಅಥವಾ ಭಾರತೀಯರದೇ? ಮೈಸೂರು ಬ್ಯಾಂಕ್ ಕೂಡ ದೇಶದ ಆಸ್ತಿಯೇ ತಾನೆ? ಅದೇನು ಕನರ್ಾಟಕದ ಆಸ್ತಿಯೇ? ನಾವು ಬರೀ ಮಹಾರಾಷ್ಟ್ರ ಬ್ಯಾಂಕಿನ ಒಂದು ಶಾಖೆಯನ್ನು ಪುಡಿಮಾಡಿದರೆ, ಮರಾಠಿಗರು ಮನಸ್ಸು ಮಾಡಿದರೆ, ಮುಂಬಯಿ ಹಾಗೂ ಪುಣೆಯಲ್ಲಿರುವ ಕನ್ನಡಿಗರ ಅಂಗಡಿ ಮುಂಗಟ್ಟುಗಳನ್ನು ಪುಡಿ ಮಾಡಿಬಿಡುತ್ತಿದ್ದರು. ಪುಣ್ಯ ಅವರು ಈ ಕೆಲಸಕ್ಕೆ ಕೈಹಾಕಲಿಲ್ಲ.

ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದ ಅವಧಿಯದು. ಶಾಸಕರ ಭವನಕ್ಕೆ ಬಂದಿದ್ದ ಬೆಳಗಾವಿ ಮೇಯರ್ ವಿಜಯ ಮೋರೆ ಹಾಗೂ ಅವರ ಇಬ್ಬರು ಸಹಚರರಿಗೆ (ಅವರಲ್ಲಿ ಒಬ್ಬರು ಮಾಜಿಉಪಮೇಯರು ಹಾಗೂ ಇನ್ನೊಬ್ಬರು ಮಾಜಿಶಾಸಕರು) ಕನ್ನಡ ಚಳುವಳಿಗಾರರು ಮುಖಕ್ಕೆ ಮಸಿ ಬಳಿದರು. ಭಾರತೀಯ ದಂಡ ಸಂಹಿತೆಯ ಪ್ರಕಾರ ಮಸಿ ಬಳಿಯುವುದು ಮಾನಹಾನಿ, ಎರಡು ಭಾಷಿಕರ ನಡುವೆ ದ್ವೇಷ ಹುಟ್ಟಿಸುವ ಕೆಲಸ. ಮೋರೆಯ ಮುಖಕ್ಕೆ ಮಸಿ ಬಳಿಯುವ ಜಾಗಕ್ಕೆ ಚಳುವಳಿಗಾರರು ಟಿವಿ ವರದಿಗಾರರನ್ನು ಕರೆದುಕೊಂಡು ಹೋಗಿದ್ದರು. ಅಪರಾಧಕ್ಕೆ ಸಾಕ್ಷಿಯಾಗುವುದು ಅಪರಾಧವಲ್ಲವೇ? ಅಲ್ಲ ಎನ್ನುವುದಾದರೆ, ಟಿವಿ ವರದಿಗಾರರನ್ನು ನಾಳೆ ಕರೆದುಕೊಂಡು ಹೋಗಿ ಯಾರಾದರೂ ಕೊಲೆ ಮಾಡಿದರೆ, ನಾವು ಅದನ್ನು ವರದಿ ಮಾಡುತ್ತೇವೆಂದು ಹೇಳಲಾದಿತೇ?

ಟಿವಿ ವಾಹಿನಿಗಳು ಅನೇಕ ವರ್ಷಗಳಿಂದ ಮುದ್ರಣ ಮಾದ್ಯಮ ಪಾಲಿಸಿಕೊಂಡು ಬಂದ ಸೂಕ್ಷ್ಮತೆಗಳ ಹಂಗನ್ನು ತೊರೆದಿವೆ. ಹೀಗಾಗಿ ಮಾಧ್ಯಮಗಳು ಮಾಲೀಕರ ನಿಲುವುಗಳನ್ನು ಅವಲಂಭಿಸಿ ಕೆಲಸ ಮಾಡುತ್ತಿವೆ.

ಹೀಗೊಂದು ಕೊಲೆಯ ಆರೋಪ

ಮಧ್ಯಾಹ್ನ ಎರಡು ಗಂಟೆಯ ಸಮಯ. ರಾಜ್ಯದ ಪ್ರಸಿದ್ಧ ದೂರದರ್ಶನ ವಾಹಿನಿ ಟಿ.ವಿ.-7 ರ ಬ್ರೇಕಿಂಗ್ ನ್ಯೂಜ್ ತಲೆ ಬರಹದಡಿಯಲ್ಲಿ ಸುದ್ದಿಯೊಂದು ಬಿತ್ತರವಾಗುತ್ತಿತ್ತು. ರಾಜ್ಯದ ಹಿಂದುಳಿದ ಜಿಲ್ಲೆ ರಾಯ ಚೂರಿನ ಅತೀ ಹಿಂದುಳಿದ ತಾಲೂಕು ಕೇಂದ್ರವೊಂ ದರಲ್ಲಿ ಹಾಡು ಹಗಲೇ ಪ್ರಥಮ ದಜರ್ೆ ಗುತ್ತೇದಾರ ಲಂಕೆಪ್ಪನವರ ಬರ್ಬರ ಕೊಲೆ.

ಮಚ್ಚು ಮತ್ತು ಕೊಡಲಿಗಳಿಂದ ಹತ್ಯೆ. ಕೊಲೆಯ ಉದ್ದೇಶ ತಿಳಿದು ಬಂದಿಲ್ಲ. ಕೊಲೆಗೆ ಸಂಬಂಧಿಸಿದಂತೆ ತಾಲೂಕಿನ ಜಿಲ್ಲಾ ಪಂಚಾಯತಿ ಕಾರ್ಯಾಲಯದ ಕಿರಿಯ ಇಂಜಿನಿಯರ್ ವೀರಾಂಜನೇಯರಾವ್ ಹಾಗೂ ಊರಿನ ಪ್ರಸಿದ್ಧ ಹಿರಿಯ ವ್ಯಕ್ತಿ ಚಂದ್ರಯ್ಯ ಸ್ವಾಮಿ ಎಂಬುವವರನ್ನು ಬಂಧಿಸಲಾಗಿದೆ. ಇಬ್ಬರೂ ಕೊಲೆ ನಡೆದ ಸಮಯದಲ್ಲಿ ಕೊಲೆಯಾದ ಊರಿನಲ್ಲಿ ಇರದಿದ್ದುದು ವಿಶೇಷವಾದರೂ ಕೊಲೆಗಾರನ ಹೆಂಡತಿ ನೀಡಿದ ದೂರಿನ ಅನ್ವಯ, ಜಿಲ್ಲಾ ಪೋಲೀಸ ವರಿಷ್ಠಾಧಿಕಾರಿಗಳ ಆದೇಶದ ಮೇರೆಗೆ ಸ್ಥಳೀಯ ಪೋಲೀಸರು ಇಬ್ಬರನ್ನೂ ಬಂಧಿಸಿರುವರು. ಪೋಲೀಸ ಇಲಾಖೆ ಹೆಚ್ಚಿನ ತನಿಖೆಗಾಗಿ ಕ್ರಮ ಕೈಕೊಂಡಿದೆ.

ಪ್ರಥಮ ದಜರ್ೆ ಗುತ್ತೇದಾರ ಲಂಕೆಪ್ಪನ ಭೀಕರ ಕೊಲೆಯ ಸುದ್ದಿ ಕಾಳ್ಗಿಚ್ಚಿನಂತೆ ಎಲ್ಲೆಡೆ ಹರಡಿ ತಾಲೂಕಿ ನೆಲ್ಲೆಡೆ ಜನರ ಮಾತಿಗೆ ಗ್ರಾಸವಾಗಿತ್ತು. ಲಂಕೆಪ್ಪನ ಕೊಲೆಯ ಸುದ್ದಿ ಜನರ ಬಾಯಿಯಲ್ಲಿ ಚಿತ್ರ ವಿಚಿತ್ರವಾಗಿ ಹೊರ ಹೊಮ್ಮುತ್ತಿತ್ತು. ಇತ್ತೀಚಿಗೆ ಈ ಲಂಕೆಪ್ಪನಿಗೂ ಸೊಕ್ಕು ನೆತ್ತಿಗೆ ಏರಿತ್ತು ಬಿಡಲೇ. ಅವನ್ನ ಹಿಡೇರ ಇದ್ದಿಲ್ಲ. ಮೊದಲು ಸಾಮಾನ್ಯ ಮನುಷ್ಯನಾಗಿದ್ದವ ಈ ಏಳೆಂಟು ವರ್ಷಗಳಲ್ಲಿ ಕಂಟ್ರ್ಯಾಕ್ಟ್ ಮಾಡಿ ದೊಡ್ಡ ಮನುಷ್ಯ ಆಗಿ ಬಿಟ್ಟಿದ್ದ. ಅದೆಷ್ಟು ಕಂತ್ರಾಟು ಮಾಡಿರುವನೋ ಏನೋ? ಅವಗೆ ಹಿರೇರು ಕಿರೇರು ಅನ್ನೋ ದಜರ್ು ಇರಲಿಲ್ಲ. ಅವಂದೂ ಉರುಣಿಗೆ ಜಾಸ್ತಿಯಾಗಿತ್ತು. ಕೈಯಲ್ಲಿ ನಾಲ್ಕು ಕಾಸು ಆಡಾಕತ್ತಿದ ಮ್ಯಾಲ ಬ್ಯಾರೆಯವರ ಖಬರ ಇದ್ದಿಲ್ಲ. ತಾನಾಯಿತು, ತನ್ನ ಪಟಾಲಂಗಳಾಯಿತು. ಅಲ್ಲಪಾ, ಈ ಗಿಡ್ಡನ ಮನುಷ್ಯ ಜ್ಯೂನಿಯರ್ ಇಂಜಿನಿಯರ್ ವೀರಾಂಜನೇ ಯರಾವ್ ಅದೇನು ತೆಪ್ಪು ಮಾಡಿದ್ದನಪಾ? ಆತನ್ನ ಪೋಲೀಸರು ಹಿಡಕಂಡಾರಂತ. ಆತಂದೇನೂ ತಪ್ಪು ಇರ್ಲಿಕ್ಕಿಲ್ಲಂತ ನಮಗನಿಸ್ತದ. ಆತ ಡ್ಯೂಟಿ ಮ್ಯಾಲ ರಾಯಚೂರಿನಾಗ ಇದ್ರೂ ಆತನ್ನ ಪೋಲೀಸ್ರು ಅರೆಸ್ಟ್ ಮಾಡ್ಯಾರಂದ್ರ ಏನೈತೇನಪಾ ನಮಗೊಂದೂ ಗೊತ್ತಾಗ್ತಿಲ್ಲ. ಆತನ್ನ ಯಾರೋ ಈ ಕೇಸಿನಾಗ ಬೇಕಂತ ಸಿಗ್ಹಾಕ್ಯಾರಂತ ಅನಸಕತೈತ. ಎಲ್ಲಾ ಕಲಿಗಾಲದ ಮಹಿಮೆ.

ಅಲ್ಲಪಾ, ನಮ್ಮ ಚಂದ್ರಯ್ಯ ಸ್ವಾಮಿ ಕೂಡ ಯಾವುದೋ ಫಂಕ್ಷನ್ಯಾಗ ಬ್ಯಾರೆ ಊರಾಗಿದ್ರೂ ಪೋಲೀಸರು ಅರೆಸ್ಟ್ ಮಾಡ್ಯಾರಂತ. ಲಂಕೆಪ್ಪನ ಹೆಂಡ್ತಿ ಪೋಲೀಸ್ರಿಗೆ ಅವ್ರ ಹೆರು ಬರಕೊಟ್ಟಾಳಂತ. ಲಂಕೆಪ್ಪನ ಕೊಲೆ ಮಾಡಿರುವವರು ಯಾರೋ? ಶಿಕ್ಷೆ ಅನುಭವಿಸು ವವರು ಯಾರೋ ಅಂತ ಅಂದಂಗಾತಲ್ಲ. ಒಂದೂ ತಿಳಿದಂಗಾಗೈತೆಲ್ಲ. ಲಂಕೆಪ್ಪಗ ಗುತ್ತೇದಾರಿಕ್ಯಾಗ ಸಡ್ಡು ಹೊಡ್ದು ನಿಲ್ತಿದ್ದ ಅವನ ಸಂಬಂಧಿಕರ ಕೈವಾಡ ಏನಾರ ಇರ್ಬಹುದೇನೋ? ಈ ರೀತಿಯಾಗಿ ಜನ ಇನ್ನೂ ಏನೇನೋ ಮಾತಾಡಿಕೊಳ್ತಿದ್ದರು.

ಜಿಲ್ಲಾ ಪಂಚಾಯತಿಯ ಕಿರಿಯ ಇಂಜಿನಿಯರ್ ವೀರಾಂಜನೇಯರಾವ್ ಅವರು ಕಾರ್ಯ ನಿಮಿತ್ಯ ರಾಯಚೂರಿನ ತಮ್ಮ ಜಿಲ್ಲಾ ಕೇಂದ್ರ ಕಚೇರಿಯಲ್ಲಿದ್ದರು ಲಂಕೆಪ್ಪನ ಕೊಲೆಯಾದ ಸಮಯದಲ್ಲಿ. ಚಂದ್ರಯ್ಯ ಸ್ವಾಮಿ ಊರಿನ ಪ್ರಮುಖ ವ್ಯಕ್ತಿ. ಅವರ ಹಿತ ವಚನ, ಮಧ್ಯಸ್ತಿಕೆ ಊರಿನ ಎಲ್ಲಾ ಜನರಿಗೆ, ರಾಜಕೀಯ ಪಕ್ಷದವರಿಗೆ ಹಾಗೂ ಸರಕಾರಿ ಅಧಿಕಾರಿಗಳಿಗೆ ಬೇಕೇ ಬೇಕು. ಕೊಲೆಯಾದ ಸಮಯದಲ್ಲಿ ಅವರೂ ಸಹ ಪಕ್ಕದ ಊರಿನ ತಮ್ಮ ಸಮಾಜದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಆದರೂ ಇಬ್ಬರ ಬಂಧನವಾಗಿತ್ತು.

ಮಧ್ಯಾಹ್ನ ಒಂದು ಗಂಟೆಯ ಸಮಯ. ಎಪ್ರಿಲ್ ತಿಂಗಳು. ಉತ್ತರ ಕನರ್ಾಟಕದ ರಣರಣ ಬಿಸಿಲು. ಊರಿನ ಬೀದಿಗಳಲ್ಲಿ ಯಾವ ನರಪಿಳ್ಳೆಯೂ ಕಾಣು ತ್ತಿಲ್ಲ. ಸೂರ್ಯ ದೇವನ ಬಿಸಿಲಿನ ತಾಪಕ್ಕಂಜಿದ ಜನಗಳು ತಮ್ಮ ತಮ್ಮ ಮನೆಗಳಲ್ಲಿ ಒಂದು ರೀತಿಯ ಗೃಹ ಬಂಧನದಲ್ಲಿದ್ದರು. ಗುತ್ತೇದಾರ ಲಂಕೆಪ್ಪ ಅದೇ ತಾನೇ ತನ್ನ ಗೆಳೆಯರೊಂದಿಗೆ ಪ್ರವಾಸಿ ಮಂದಿರದಲ್ಲಿ ಪುಷ್ಕಳ ಭೋಜನ ಹೊಡೆದು ತನ್ನ ಮನೆಯ ಕಡೆಗೆ ಬುಲೆಟ್ ಸೈಕಲ್ ಮೋಟರಿನಲ್ಲಿ ಹೊರಟಿದ್ದ. ಅವನ ಸೈಕಲ್ ಮೋಟರು ಕಿರಿಯ ಇಂಜಿನಿಯರ್ ವೀರಾಂಜನೇಯ ರಾವ್ ಅವರ ವಸತಿ ಗೃಹದ ಮುಂದಿನಿಂದ ವೇಗವಾಗಿ ಚಲಿಸುತ್ತಿತ್ತು. ಕೊಡಲಿ, ಮಚ್ಚುಗಳ ಸಮೇತ ನಾಲ್ಕು ಜನರು ಲಂಕೆಪ್ಪನ ಮೇಲೆ ಹಟಾತ್ ದಾಳಿ ಮಾಡಿದ್ದರು. ಹುಲಿಗಳ ಹಿಂಡಿನ ದಾಳಿಗೆ ಸಿಕ್ಕ ಜಿಂಕೆಯಂತಾಗಿತ್ತು ಲಂಕೆಪ್ಪನ ಪರಸ್ಥಿತಿ. ಕೊಡಲಿ, ಮಚ್ಚುಗಳ ಆಟೋಪ ಟೋಪದಲ್ಲಿ ಲಂಕೆಪ್ಪನ ಪ್ರಾಣ ಕ್ಷಣಾರ್ಧದಲ್ಲಿ ಆಕಾಶದಲ್ಲಿ ಲೀನವಾಗಿತ್ತು. ವಿಲ ವಿಲ ಒದ್ದಾಡಿದ ಲಂಕೆಪ್ಪನ ದೇಹ ತಣ್ಣಗಾಗಿತ್ತು. ಲೀಲಾ ಜಾಲವಾಗಿ ತಮ್ಮ ಕೆಲಸ ಮುಗಿಸಿದ ಕೊಲೆಗಡುಕರು ಪಕ್ಕದಲ್ಲಿಯೇ ಇದ್ದ ಕಿರಿಯ ಇಂಜಿನಿಯರ್ ವೀರಾಂಜನೇಯರಾವ್ ಅವರ ವಸತಿ ಗೃಹಕ್ಕೆ ನುಗ್ಗಿದವರು ತಮ್ಮ ಕೈಯಲ್ಲಿ ಆಯುಧಗಳನ್ನು ಎಲ್ಲಿ ಬೇಕೆಂದರಲ್ಲಿ ಎಸೆದು ಮಿಂಚಿನ ವೇಗದಲ್ಲಿ ಅಲ್ಲಿಂದ ಪರಾರಿಯಾಗಿದ್ದರು. ಎಲ್ಲರ ಮುಖಗಳು ಕಪ್ಪು ಬಟ್ಟೆಯಿಂದ ಮುಚ್ಚಿದ್ದವು. ಎಲ್ಲರ ಕೈಗಳು ಗ್ಲೌಸುಗಳಲ್ಲಿ ಮರೆಯಾಗಿದ್ದವು. ತಮ್ಮ ಗುರುತು ಬೇರೆಯವರಿಗೆ ಸಿಗಬಾರದೆಂದು ವ್ಯಸ್ಥಿತವಾಗಿ ಹಾಕಿಕೊಂಡು ಬಂದಿದ್ದ ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಿದ್ದರು.

ಮಕ್ಕಳ ವಿದ್ಯಾಭ್ಯಾಸದ ನಮಿತ್ಯ ರಾವ್ ಅವರು ತಮ್ಮ ಕುಟುಂಬದ ಸದಸ್ಯರಿಗೆ ರಾಯಚೂರಿನಲ್ಲಿ ಮನೆ ಮಾಡಿದ್ದರು. ತಾವು ಇಲ್ಲಿ ಸರಕಾರಿ ವಸತಿ ಗೃಹದಲ್ಲಿದ್ದುಕೊಂಡು ವಾರಕ್ಕೆ ಒಂದು ಸಾರೆ ಇಲ್ಲವೇ ಎರಡು ಸಾರೆ ರಾಯಚೂರಿಗೆ ಹೋಗಿ ಬರುತ್ತಿದ್ದರು. ಕೊಲೆಗಡುಕರ ಮಿಂಚಿನ ಕಾರ್ಯಾಚರಣೆ, ಅವರ ರಕ್ತ ಸಿಕ್ತ ಆಯುಧಗಳಿಂದ ರಾವ್ ಅವರ ವಸತಿ ಗೃಹ ಒಂದು ರೀತಿ ಭಯಾನಕವಾಗಿ ಕಾಣತೊಡಗಿತ್ತು. ಕೊಲೆಗಡುಕರು ನುಗ್ಗಿದ ಸಮಯ ಮಟ ಮಟ ಮಧ್ಯಾಹ್ನ ವಾಗಿತ್ತು. ಜೆ.ಇ. ಸಾಹೇಬರ ವಸತಿ ಗೃಹ ನೋಡಿಕೊ ಳ್ಳುತ್ತಿದ್ದ ಮಾಲಿ ಮನೆಯ ಕಂಪೌಂಡಿನ ಹಿಂದಿನ ಭಾಗದಲ್ಲಿ ಏನೋ ಕೆಲಸದಲ್ಲಿ ನಿರತನಾಗಿದ್ದುದರಿಂದ ಅವನಗೆ ಶರವೇಗದಲ್ಲಿ ಬಂದು ಹೋದ ಕೊಲೆಗಡುಕರ ಸಂಚು ತಿಳಿಯಲೇ ಇಲ್ಲ.

ವೀರಾಂಜನೇಯರಾವ್ ಅವರು ಈ ಊರಿನಲ್ಲಿ ಕಿರಿಯ ಅಭಿಯಂತರೆಂದು ಹತ್ತು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವರು. ಸಾಧ್ಯವಾದಷ್ಟು ಯಾವ ರಾಜಕಾರಣಿಯ ಮುಲಾಜು ಹಿಡಿಯದೇ ಕಾನೂನಿನ ಚೌಕಟ್ಟಿನೊಳಗೆ ಕಾರ್ಯ ನಿರ್ವಹಿಸುವ ವ್ಯಕ್ತಿ ಅವರು. ಹೀಗಾಗಿ ಸಾಕಷ್ಟು ಸ್ಥಳೀಯ ಜನ ನಾಯಕರ ಅವ ಕೃಪೆಗೆ ಒಳಗಾಗಿದ್ದರು. ಇವರನ್ನು ಎತ್ತಂಗಡಿ ಮಾಡಲು ಸರ್ವ ಪ್ರಯತ್ನಗಳು ನಡೆದಿದ್ದರೂ ಇವರ ಜಾಗಕ್ಕೆ ಬರುವವರು ಯಾರೂ ಇರದೇ ಇದ್ದುದರಿಂದ ರಾವ್ ಅವರೇ ಇಲ್ಲಿ ಮುಂದುವರೆದಿದ್ದರು.

ಊರಿನ ಪ್ರಮುಖ ವ್ಯಕ್ತಿ ಚಂದ್ರಯ್ಯ ಸ್ವಾಮಿದೂ ಒಂದು ವಿಶಿಷ್ಟ ವ್ಯಕ್ತಿತ್ವ. ಊರಿನ ಎಲ್ಲಾ ರಾಜಕೀಯ ಪಕ್ಷದ ಮುಖಂಡರಿಗೂ ಅವರು ಬೇಕು. ಊರಿನ ಒಳ್ಳೆಯದಕ್ಕೆ ಅವರು ಯಾವ ತ್ಯಾಗಕ್ಕೂ ಸರಿ. ಜ್ಯೂನಿಯರ್ ಇಂಜಿನಿಯರ್ ಅವರಂತೆ ಇವರೂ ನಿಷ್ಟುರವಾದಿ. ಇಬ್ಬರಿಗೂ ಹೇಗೋ ಗೆಳೆತನ ಬೆಳೆಯಿತು. ಸ್ವಾಮಿ, ರಾವ್ ಅವರಿಗಿಂತ ಐದಾರು ವರ್ಷ ದೊಡ್ಡವ ರಾದರೂ ಇಬ್ಬರಲ್ಲೂ ಒಂದು ರೀತಿಯ ಆತ್ಮೀಯತೆ ಬೆಳೆದು ಬಂದಿತ್ತು. ಪರಸ್ಪರರು ದಿನಾಲೂ ಭೆಟ್ಟಿಯಾ ಗುತ್ತಿದ್ದರು, ಮಾತನಾಡುತ್ತಿದ್ದರು, ಚಚರ್ಿಸುತ್ತಿದ್ದರು, ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದರು. ರಾವ್ ಹೇಗೂ ಒಬ್ಬರೇ ಇದ್ದುದರಿಂದ ಇಬ್ಬರ ಮಾತುಕತೆಗಳಿಗೆ ಹೆಚ್ಚಿನ ವೇಳೆ ಸಿಗುತ್ತಿತ್ತು. ಚಂದ್ರಯ್ಯ ಸ್ವಾಮಿಯವರನ್ನು ಹಿಡಿದರೆ ತಮ್ಮ ಕೆಲಸ ಸಲೀಸಾಗಿ ಆಗುತ್ತದೆಯೆಂದು ಸಾರ್ವಜನಕರಲ್ಲಿ ಒಂದು ರೀತಿಯ ಅಭಿಪ್ರಾಯ ಮೂಡಿತ್ತು. ಆದರೆ ಹಂಗೇನೂ ಇರಲಿಲ್ಲ. ನ್ಯಾಯಯುತ ವಾಗಿದ್ದರೆ ಯಾವುದೇ ಶಿಫಾರಿಷ್ ಇಲ್ಲದೇ ಕೆಲಸ ಮಾಡುತ್ತಿದ್ದರು ರಾವ್. ಸ್ವಾಮಿ ಸಹ ಯಾರಿಂದಲೂ ಏನನ್ನೂ ಅಪೇಕ್ಷಿಸಿದವರಲ್ಲ.

ಇದ್ದ ಜಾಗದಲ್ಲೇ ಇಬ್ಬರನ್ನೂ ಏಕಾಯೇಕಿ ಬಂಧಿಸಿದ್ದುದರಿಂದ ರಾವ್ ಮತ್ತು ಸ್ವಾಮಿ ಇಬ್ಬರೂ ತಲ್ಲಣಗೊಂಡಿದ್ದರು. ಇಂಥಹ ಸ್ಥಿತಿ ಬರುವುದ ಕ್ಕಿಂತಲೂ ಪ್ರಾಣವೇ ಹೋಗಿದ್ದರೆ ಚೆನ್ನಾಗಿತ್ತೇನೋ ಎಂಬ ಭಾವನೆ ಮೂಡಿತ್ತು ರಾವ್ಗೆ. ಮಯರ್ಾದೆಗೆ ತನ್ನ ಕುಳ್ಳು ದೇಹವನ್ನು ಹಿಡಿಯಾಗಿ ಮಾಡಿಕೊಳ್ಳುತ್ತಿದ್ದ ಮನುಷ್ಯ ಈ ಘಟನೆಯಿಂದ ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿ ಹೋದರು. ತನ್ನ ಮನೆ ದೇವರಾದ ಗಂಗನಾಳ ಹನುಮಂತ ದೇವರನ್ನು ಕ್ಷಣ ಕ್ಷಣಕ್ಕೂ ನೆನೆಯತೊಡಗಿದ್ದರು. ಚಂದ್ರಯ್ಯ ಸ್ವಾಮಿಯವರ ಸ್ಥಿತಿಯೂ ಸಹ ಇದಕ್ಕಿಂತ ಬೇರೆ ಆಗಿರಲಿಲ್ಲ. ಕೊಲೆ ನಡೆದ ಸಮಯದಲ್ಲಿ ತಾವು ಊರಲ್ಲಿಯೇ ಇರಲಿಲ್ಲ. ಯಾರೋ ದುಷ್ಕಮರ್ಿಗಳು ಲಂಕೆಪ್ಪನನ್ನು ಕೊಲೆ ಮಾಡಿ, ಕೊಲೆಗೆ ಬಳಸಿದ ಆಯುಧಗಳನ್ನು ರಾವ್ ಅವರ ಇಲಾಖೆಯ ವಸತಿ ಗೃಹದಲ್ಲಿ ಬೀಸಾಡಿ ಹೋಗಿ ದ್ದಾರೆ. ಈ ಕೊಲೆಗೂ, ತಮಗೂ ಯಾವ ಸಂಬಂಧವೂ ಇಲ್ಲವೆಂದು ಪ್ರತಿಪಾದಿಸಿದರೂ ಅವರ ಮನವಿ ಅರಣ್ಯರೋದನವಾಗಿತ್ತು. ಊರಿನ ಪೋಲೀಸ್ ಇಲಾಖೆಯ ಸಿ.ಪಿ.ಐ.,ಎಸ್.ಐ., ಎಲ್ಲಾ ಕಾನ್ಸ್ಟೇಬ ಲ್ಲುಗಳು ಇವರಿಗೆ ಹೊಸಬರೇನಲ್ಲ. ಎಲ್ಲರೂ ಪರಿಚಿತರೇ. ಇವರ ದೋಸ್ತರೇ. ಕರ್ತವ್ಯ ನಿಭಾಯಿ ಸುತ್ತಿದ್ದಾಗ ಪೋಲೀಸರು ಇಲಾಖೆಯ ಗತ್ತು, ಠೀವಿ, ಕ್ರೌರ್ಯ, ಅಮಾನವೀಯತೆ ಪ್ರದಶರ್ಿಸುತ್ತಿದ್ದರು. ಅವರಿಗೂ ಗೊತ್ತಿತ್ತು ತಾವು ಅಸಾಹಕರೆಂದು. ಮೇಲಾಧಿಕಾರಿಗಳ ಆದೇಶದ ಪಾಲನೆ ಮಾಡುತ್ತಿದ್ದರು ಅಷ್ಟೇ. ಲಂಕೆಪ್ಪನ ಮುಗ್ಧ ಹೆಂಡತಿ ಯಾರೋ ಕಿತಾಪತಿಗಳ ಪ್ರಚೋದನೆಯಿಂದ ಇವರ ಮೇಲೆ ಲಿಖಿತ ದೂರು ನೀಡಿದ್ದಾಳೆಂದು ಸ್ಥಳೀಯ ಪೋಲೀಸರಿಗೆ ಅನಿಸುತ್ತಿತ್ತು. ಆದರೂ ಅವರು ತಮ್ಮ ಕರ್ತವ್ಯ ನಿಭಾಯಿಸಬೇಕಾಗಿತ್ತು.

ವೀರಾಂಜನೇಯರಾವ್ ಅವರ ಚಡ್ಡಿ ದೋಸ್ತ ಮತ್ತು ಸಹದ್ಯೋಗಿ ಜೆ.ಇ. ಶಂಕರ್ ಪಾಟೀಲರು ಚಂದ್ರಯ್ಯ ಸ್ವಾಮಿಯವರಿಗೆ ಗೊತ್ತಿದ್ದ ಪ್ರಭಾವಿ ರಾಜಕಾರಣಿಗಳ ಸಲಹೆಯಂತೆ ಒಬ್ಬ ಪ್ರಸಿದ್ಧ ಕ್ರಿಮಿನಲ್ ಲಾಯರ್ಗೆ ಈ ಕೇಸನ್ನು ಒಪ್ಪಿಸಿದರು. ಇಬ್ಬರಿಗೂ ಬೇಲ್ ಸಿಗಲು ಒಂದು ವಾರವೇ ಬೇಕಾಯಿತು. ಬಿಡುಗಡೆಯಾಗಿ ಬರುವಷ್ಟರಲ್ಲಿ ಇಬ್ಬರೂ ಅರ್ಧ ಇಳಿದಿದ್ದರು. ಮಾನಸಿಕವಾಗಿ ಕುಗ್ಗಿದ್ದರು.

ವೀರಾಂಜನೇಯರಾವ್ ಕೊಲೆಯ ಕೇಸಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದರಿಂದ ಇಲಾಖೆಯ ವತಿಯಿಂದ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಯಿತು. ಅವರನ್ನು ತತಕ್ಷಣ ಸೇವೆಯಿಂದ ಅಮಾನತ್ತಿನಲ್ಲಿಡಲಾಯಿತು ಹಾಗೂ ಇಲಾಖೆಯ ಆಂತರಿಕ ವಿಚಾರಣೆಯೂ ಶುರು ಮಾಡಲಾಯಿತು. ಇದರಿಂದ ಮುಂದಿನ ಎರಡು ತಿಂಗಳಲ್ಲಿ ಸಹಾಯಕ ಇಂಜಿನಿಯರ್ ಹುದ್ದೆಗೆ ಬಡ್ತಿ ಹೊಂದಬೇಕಾಗಿದ್ದ ರಾವ್ ಅವರ ಬಡ್ತಿಗೆ ತಾತ್ಕಾಲಿಕ ತಡೆ ಬಿದ್ದಿತ್ತು. ರಾವ್ ಸರಕಾರಿ ಕೆಲಸದಲ್ಲಿದ್ದುದರಿಂದ ಇನ್ನೂ ಹೆಚ್ಚಿನ ಕಿರಿ ಕಿರಿ ಅನುಭವಿಸಬೇಕಾಯಿತು.

ಪೋಲೀಸರ ವಿಚಾರಣೆ ಬಿಟ್ಟು ಇಂಥಹ ಕಿರಿ ಕಿರಿ ಚಂದ್ರಯ್ಯ ಸ್ವಾಮಿಯವರಿಗೆ ಇರಲಿಲ್ಲ. ಪೋಲೀಸ ಇಲಾಖೆ ಮತ್ತು ಅವರ ಇಲಾಖೆಯ ಮೇಲಾಧಿಕಾ ರಿಗಳ ಕಿರಿ ಕಿರಿ ಅತಿರೇಕಕ್ಕೆ ಹೋಯಿತು. ಮುಂದೆ ಕೊಲೆಯ ಕೇಸನ್ನು ಸಿ.ಓ.ಡಿ.ಗೆ ವಹಿಸಲಾಯಿತು. ಸಿ.ಓ.ಡಿ ಪೋಲೀಸರಿಂದಲೂ ವಿಚಾರಣೆ ಶುರುವಾ ಯಿತು. ವಿಚಾರಣೆ ಮುಗಿಯುಷ್ಟರಲ್ಲಿ ರಾವ್ಗೆ ಸಾಕು ಸಾಕಾಗಿ ಹೋಯಿತು. ಜೀವ ಕೈಗೆ ಬಂದಂತಾಗಿತ್ತು. ಇವೆಲ್ಲವುಗಳಿಂದ ಬೇಸತ್ತ ರಾವ್ ಒಂದು ದಿನ ಮನೆಯವರಿಗೂ ಹೇಳದೇ ಕೇಳದೇ ಕಣ್ಮರೆಯಾದರು. ಮೂರು ತಿಂಗಳುಗಳವರೆಗೆ ತಮಿಳುನಾಡಿನಲ್ಲಿ ಅಜ್ಞಾತವಾಸ ಅನುಭವಿಸಿದರು.

ಲಂಕೆಪ್ಪನ ಚಿಕ್ಕಪ್ಪನ ಮಕ್ಕಳಿಗೂ ಲಂಕೆಪ್ಪನಿಗೂ ಯಾವಾಗಲೂ ದಾಯಾದಿ ಕಲಹ ಇದ್ದದ್ದೇ. ಲಂಕೆಪ್ಪನ ಚಿಕ್ಕಪ್ಪನ ಮಕ್ಕಳೂ ಕಂಟ್ರ್ಯಾಕ್ಟ್ ಕೆಲಸ ಮಾಡುತ್ತಿದ್ದರು. ಗುತ್ತೇದಾರಿಕೆ ಪಡೆಯುವುದರಲ್ಲಿ ಇಬ್ಬರಿಗೂ ಪೈಪೋಟಿ ಇದ್ದದ್ದೇ. ಈ ಸಾರೆ ಎರಡು ಕೋಟಿಗಳ ಕಂಟ್ರ್ಯಾಕ್ಟ್ ಕೆಲಸ ಲಂಕೆಪ್ಪನ ಚಿಕ್ಕಪ್ಪನ ಮಕ್ಕಳಿಗೆ ದೊರೆತಿತ್ತು. ಇದರಲ್ಲಿ ವೀರಾಂಜನೇಯರಾವ್ ಮತ್ತು ಚಂದ್ರಯ್ಯ ಸ್ವಾಮಿಯವರ ಕುಮ್ಮಕ್ಕು ಇದೆಯೆಂದು ಲಂಕೆಪ್ಪನ ಅನಿಸಿಕೆಯಾಗಿತ್ತು.

ಊರಿನ ಸರಕಾರಿ ದವಾಖಾನೆಗೆ ಎರಡು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದಿದ್ದ ನರ್ಸ ಲಲನಾಮಣಿ ಡಯನಾ ತನ್ನ ರೂಪ, ಲಾವಣ್ಯ, ವಯ್ಯಾರಗಳಿಂದ ಲಂಕೆಪ್ಪನ ಚಿಕ್ಕಪ್ಪನ ಮಗನನ್ನು ಬುಟ್ಟಿಗೆ ಹಾಕಿಕೊಂಡಿದ್ದಳು. ಅವಳ ರೂಪಕ್ಕೆ ಮರುಳಾ ಗಿದ್ದ ಲಂಕೆಪ್ಪನೂ ಅವಳ ಸಂಗಕ್ಕೆ ಹಪಹಪಿಸುತ್ತಿದ್ದ. ಅವಳನ್ನು ತನ್ನೆಡೆಗೆ ಸೆಳೆದುಕೊಳ್ಳಲು ಸರ್ವ ಪ್ರಯತ್ನ ವನ್ನೂ ನಡೆಸಿದ್ದ. ಅದೇನಾಯಿತೋ ಏನೋ ಈಗ್ಗೆ ಆರು ತಿಂಗಳುಗಳಿಂದ ರೂಪಸಿ ಡಯಾನಾ ಲಂಕೆಪ್ಪನ ತೆಕ್ಕೆಗೆ ಬಂದಿದ್ದಳು. ಇದರಿಂದ ದಾಯಾದಿಗಳ ನಡುವೆ ದ್ವೇಷ ಇನ್ನೂ ಉಲ್ಬಣಗೊಂಡಿತ್ತು.

ತಮಿಳುನಾಡಿನಲ್ಲಿ ದೇವಸ್ಥಾನದಿಂದ ದೇವಸ್ಥಾನ ಗಳಿಗೆ ಅಜ್ಞಾತವಾಗಿ 3 ತಿಂಗಳುಗಳವರೆಗೆ ತಿರುಗಾಡಿದ ವೀರಾಂಜನೇಯರಾವ್ ಕೊನೆಗೆ, ನಾನಂತೂ ನಿದೋರ್ ಷಿ. ಲಂಕೆಪ್ಪನ ಹತ್ಯೆಯಲ್ಲಿ ನನ್ನದೇನು ಪಾತ್ರವಿಲ್ಲ. ಆತನೇನು ನನ್ನ ಸಂಬಂಧಿಕನೂ ಅಲ್ಲ. ದಾಯಾದಿಯೂ ಅಲ್ಲ. ಈ ರೀತಿ ನಾ ತಲೆ ಮರೆಸಿ ಕೊಂಡು ಅಡ್ಡಾಡಿದರೆ ನಾನು ತಪ್ಪಿತಸ್ಥನೆಂದು ಜನರಲ್ಲಿ ಭಾವನೆ ಮೂಡುತ್ತದೆ. ಈಗಾಗಲೇ ನಾ ನೀರಲ್ಲಿ ಮುಳುಗಿದ್ದೇನೆ. ನೀರಲ್ಲಿ ಮುಳುಗಿದವರಿಗೆ ಮಳೆಯೇನು, ಚಳಿಯೇನು? ನನ್ನ ಆರಾಧ್ಯ ದೈವ ಗಂಗನಾಳ ಮಾರುತಿ ದೇವರು ನನ್ನ ನ್ನಂತೂ ಕೈ ಬಿಡುವುದಿಲ್ಲವೆಂಬ ಭರವಸೆ ನನಗಿದೆ. ಊರಿಗೇ ಹೋಗಿ ಬಂದಿದ್ದನ್ನು ಧೈರ್ಯದಿಂದ ಎದುರಿಸಿ ದರಾಯಿತು ಎಂದುಕೊಂಡು ರಾವ್ 3 ತಿಂಗಳ ನಂತರ ಊರಿಗೆ ವಾಪಾಸು ಬಂದರು.

ಇಲಾಖೆಯ ವತಿಯಿಂದ ಕೈಕೊಂಡಿದ್ದ ತನಿಖೆ ಮುಗಿದು, ರಾವ್ ನಿದರ್ೋಷಿಯೆಂದು ವರದಿ ಹೊರ ಬಂದಾಗ ರಾವ್ಗೆ ಆದ ಖುಷಿ ಬಣ್ಣಿಸಲಸದಳ. ಅವರಿಗೆ ಅರ್ಧ ತಲೆ ಭಾರ ಕಡಿಮೆಯಾದಂತಾಯಿತು. ಪುನಃ ಕರ್ತವ್ಯಕ್ಕೆ ಹಾಜರಾದರು. ಹಾಗೇ ಹಿಂದಿನ ದಿನಾಂಕದಿಂದ ಬರಬೇಕಾಗಿದ್ದ ಬಡ್ತಿಯೂ ಸಿಕ್ಕು ಸಹಾಯಕ ಇಂಜಿನಿಯರ್ ಸಹ ಆದರು.

ನ್ಯಾಯಾಲಯದಲ್ಲಿದ್ದ ದಾವೆ ಹಾಗೇ ಮುಂದುವರೆ ದಿತ್ತು. ಅಂತೂ 3 ವರ್ಷಗಳ ನಂತರ ನ್ಯಾಯಾಲಯದ ತೀಪರ್ು ಹೊರ ಬಿತ್ತು. ಲಂಕೆಪ್ಪನ ಕೊಲೆಯಾದ ಸಮಯದಲ್ಲಿ ವೀರಾಂಜನೇಯರಾವ್ ಮತ್ತು ಚಂದ್ರಯ್ಯ ಸ್ವಾಮಿ ಇಬ್ಬರೂ ಆ ಜಾಗದಲ್ಲಿ ಇರದೇ ಇದ್ದುದರಿಂದ, ಇಬ್ಬರ ಬೆರಳ ಗುರುತುಗಳು ಕೊಲೆಗೆ ಉಪಯೋಗಿಸಿದ ಆಯುಧಗಳ ಮೇಲೆ ಇರದೇ ಇದ್ದುದರಿಂದ, ಲಂಕೆಪ್ಪ ನಿಗೂ ಇವರಿಗೂ ಯಾವುದೇ ರೀತಿಯ ವೈಷಮ್ಯತೆ ಇರದೇ ಇದ್ದುದರಿಂದ ಇಬ್ಬರನ್ನೂ ನಿದರ್ೋಷಿಗಳೆಂದು ನ್ಯಾಯಾಲಯ ತೀಮರ್ಾನಿಸಿ ಅವರ ಬಿಡುಗಡೆಗೆ ಆದೇಶ ಹೊರಡಿಸಿತು. ಹಾಗೇಯೇ ನಿಜವಾದ ಅಪರಾ ಧಿಗಳನ್ನು ತೀವ್ರ ಕಂಡು ಹಿಡಿಯಲು ಪೋಲೀಸು ಇಲಾ ಖೆಗೆ ಆದೇಶ ನೀಡಿತು.

ನ್ಯಾಯಾಲಯ ತೀಪರ್ು ಪ್ರಕಟಿಸಿದ ದಿನ ರಾವ್ ಮತ್ತು ಸ್ವಾಮಿ ಇಬ್ಬರೂ ವಿಜಯೋತ್ಸವ ಆಚರಿಸಿದರು. ರಾವ್ ಅವರ ಚಡ್ಡಿ ದೋಸ್ತ್ ಶಂಕರ್ ಪಾಟೀಲರ ಸಂತೋಷಕ್ಕೆ ಮೇರೆಯೇ ಇರಲಿಲ್ಲ. ಎಲ್ಲರ ಕುಟುಂಬದ ಸದಸ್ಯರು ನಿರಾಳವಾಗಿ ಉಸಿರು ಹಾಕಿದರು.

ನ್ಯಾಯಾಲಯದ ತೀಮರ್ಾನ ಬಂದ ಮೂರನೇ ದಿನ ಬೆಳಿಗ್ಗೆ ರಾವ್ ಮತ್ತು ಚಂದ್ರಯ್ಯ ಸ್ವಾಮಿ ಇಬ್ಬರೇ ರಾವ್ ಅವರ ವಸತಿ ಗೃಹದಲ್ಲಿ ಕುಳಿತು ಆಪ್ತ ಸಮಾ ಲೋಚನೆ ನಡೆಸಿದ್ದರು. ಅಷ್ಟರಲ್ಲಿ ರಾವ್ ಅವರ ಆಫೀ ಸಿನ ಜವಾನ ಬಂದು, ಸಾಹೇಬರೇ, ಲಂಕೆಪ್ಪನವರ ಹೆಂಡತಿಯವರು ನಿಮ್ಮನ್ನು ಕಾಣಬೇಕೆಂದು ಬಂದಿದ್ದಾರೆ. ಒಳಗೆ ಕಳುಹಿಸಲೇ? ಎನ್ನುತ್ತಾ ಅವರ ಮುಖ ನೋಡ ತೊಡಗಿದ. ರಾವ್ ಮತ್ತು ಸ್ವಾಮಿ ಇಬ್ಬರೂ ಕಣ್ಣುಬ್ಬು ಏರಿಸುತ್ತಾ ಪರಸ್ಪರ ಮುಖ ನೋಡಿಕೊಂಡರು. ಆಯ್ತು ಕಳುಹಿಸು ಎಂದರು ಸ್ವಾಮಿ.

35ರ ಆಜು ಬಾಜು ವಯಸ್ಸಿನ, ಮೈ ತುಂಬಾ ಸೆರಗು ಹೊದ್ದುಕೊಂಡ ಹೆಂಗಸು ಮೆಲ್ಲಗೆ ಹೆಜ್ಜೆ ಇಡುತ್ತಾ ಒಳಗೆ ನಡೆದು ಬರುತ್ತಿದ್ದುದನ್ನು ಇಬ್ಬರೂ ನೋಡುತ್ತಾ ಕುಳಿತಿದ್ದರು. ಭರ್ಜರಿ ಅಂಗ ಸೌಷ್ಠವದ ಹೆಂಗಸು ಲಂಕೆಪ್ಪನ ಹೆಂಡತಿ. ಒಳಗೆ ಬಂದ ಆಕೆ ನೇರವಾಗಿ ಮೊದಲು ಸ್ವಾಮಿಯ ಕಾಲಿಗೆ ಬಿದ್ದಳು. ನಂತರ ರಾವ್ ಅವರ ಕಾಲು ಹಿಡಿದುಕೊಂಡು ಕಣ್ಣೀರು ಹಾಕುತ್ತಾ, ಸ್ವಾಮೇರಾ ಮತ್ತು ಸಾಹೇಬರಾ, ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಿರಿ. ನಮ್ಮ ಸಂಬಂಧಿಕರ ಮಾತು ಕೇಳಿ ನಿಮ್ಮ ಮೇಲೆ ನನ್ನ ಗಂಡನ ಕೊಲೆಯ ಆರೋಪ ಹೊರಿಸಿದೆ. ನನ್ನ ಬುದ್ಧಿಗೆ ನಿಜ ತಿಳಿಯುವಷ್ಟರಲ್ಲಿ ಕೇಸು ಬಹಳ ಮುಂದುವರೆದಿತ್ತು. ಕುತ್ಸಿತ ಬುದ್ಧಿಯ ನಮ್ಮ ಸಂಬಂಧಿಕರ ವಿಷ ವತರ್ುಲದ ಕಪಿ ಮುಷ್ಟಿಯಲ್ಲಿ ನಾ ಸಿಲುಕಿದ್ದೆ. ಅವರ ಕಪಿ ಮುಷ್ಟಿಯಿಂದ ಹೊರ ಬರುವುದು ದುಸ್ತರವಾಗಿತ್ತು.

ನನ್ನಿಂದ ನಿಮ್ಮ ಘನತೆ, ಗೌರವ, ಮಾನ, ಮಯರ್ಾದೆಗಳಿಗೆ ಸಾಕಷ್ಟು ಧಕ್ಕೆ ಆಗಿದೆ. ನಿಮಗೆ, ನಿಮ್ಮ ಕುಟುಂಬದವರಿಗೆ ಚಿತ್ರ ಹಿಂಸೆ ಕೊಟ್ಟಿದ್ದೇನೆ. ಮಾನಸಿಕವಾಗಿ ನೀವೆಲ್ಲಾ ಬಹಳಷ್ಟು ನೋವನ್ನು ಅನುಭವಿಸುವಂತೆ ನಾ ಮಾಡಿದ್ದೇನೆ. ನೀವೆಲ್ಲಾ ನಿದರ್ೋಷಿಗಳೆಂದು ನನಗೆ ಅನಿಸುತ್ತಿತ್ತು. ನಿಮ್ಮ ಮೇಲಿನ ಕೇಸನ್ನು ವಾಪಾಸು ಪಡೆಯಬೇಕೆಂಬ ನನ್ನ ಸಲಹೆಗೆ ಕವಡೆ ಕಾಸಿನ ಕಿಮ್ಮತ್ತೂ ಇರಲಿಲ್ಲ. ನಾ ಅಸಹಾಕಳಾಗಿದ್ದೆ. ಈಗಲೂ ನಮ್ಮವರು ಮೇಲಿನ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲು ಒತ್ತಾಯಿಸುತ್ತಿದ್ದರೂ ನಾ ಅದಕ್ಕೆ ಒಪ್ಪಿಲ್ಲ. ಈ ಮಧ್ಯೆ ನಿಮ್ಮ ಒಂದು ಮಾತು ನನ್ನ ಕಿವಿಗೆ ಬಿದ್ದಿದೆ. ನೀವು ನನ್ನ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹೂಡಬೇಕೆಂಬ ವಿಚಾರದಲ್ಲಿರುವಿರೆಂಬ ವಿಷಯ ನನಗೆ ತಿಳಿದು ಬಂದಿದೆ. ದಯವಿಟ್ಟು ಹಾಗೆ ಮಾಡಬೇಡಿರಿ. ನಾನೊಬ್ಬ ಹೆಂಗಸು. ನನ್ನ ಜೀವ, ಮಾನದ ಪ್ರಶ್ನೆ. ನಿಮ್ಮ ತಂಗಿಯೆಂದು ತಿಳಿದುಕೊಂಡು ನನ್ನನ್ನು ಕ್ಷಮಿಸಬೇಕಾಗಿ ವಿನಂತಿ. ಸಧ್ಯಕ್ಕಂತೂ ಸತ್ಯಕ್ಕೆ ಜಯ ಸಿಕ್ಕಿದೆಯೆಂದು ನನ್ನ ಅನಿಸಿಕೆ. ತನ್ನೆದೆಯಲ್ಲಿ ತುಡಿಯುತ್ತಿದ್ದುದನ್ನು ಹೊರ ಹಾಕಿದ್ದಳು ಲಂಕೆಪ್ಪನ ಹೆಂಡತಿ.

2 ದಿನಗಳಿಂದ ರಾವ್ ಮತ್ತು ಸ್ವಾಮಿ ಇಬ್ಬರೂ ಆಕೆಯ ಮೇಲೆ ಮಾನ ನಷ್ಟ ಮೊಕದ್ದಮೆ ಹೂಡುವ ವಿಚಾರದಲ್ಲೇ ಇದ್ದರು. ಈಗ ನೋಡಿದರೆ ಈಯಮ್ಮ ಹೀಗೆ ಬೇಡಿಕೊಳ್ಳುತ್ತಿದ್ದಾಳೆ. ಅವಳಿಗೆ ತನ್ನ ತಪ್ಪಿನ ಅರಿವಾಗಿದೆ. ಕ್ಷಮೆ ದೈವೀ ಗುಣ ಎನ್ನುತ್ತಾರೆ ಹಿರಿ ಯರು. ಆದದ್ದು ಆಗಿ ಹೋಗಿದೆ. ಕೆಟ್ಟ ಕನಸು ಎಂದು ಮರೆತು ಬಿಡೋಣ. ತಂಗಿಯೆಂದು ಬೇರೆ ಹೇಳುತ್ತಿ ದ್ದಾಳೆ. ಎಷ್ಟಾದರೂ ಹೆಂಗಸು. ಸತ್ಯ ಅಂತೂ ಎಲ್ಲರಿ ಗೂ ಗೊತ್ತಾಗಿದೆ. ಕ್ಷಮಿಸಿಬಿಟ್ಟರಾಯಿತೆಂದು ಇಬ್ಬರೂ ನಿಧರ್ಾರಕ್ಕೆ ಬಂದರು. ರಾವ್ ಮತ್ತು ಸ್ವಾಮಿ ಇಬ್ಬರೂ ಲಂಕೆಪ್ಪನ ಹೆಂಡತಿಗೆ, ಸರಿ ತಂಗೆಮ್ಮ ಎಂದರು. ಮೂವರ ವದನದಲ್ಲಿ ಸಂತಸದ ಛಾಯೆ ಎದ್ದು ಕಾಣುತ್ತಿತ್ತು.


ಎಸ್. ಶೇಖರಗೌಡ,


ಮುಖ್ಯ ವ್ಯವಸ್ಥಾಪಕರು,
ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಆರ್.ಸಿ.ಪಿ.ಸಿ., ಲಿಂಗಸ್ಗೂರು
(9448989332)

ಮತ್ಸ್ಯಗಂಧಿಯ ಮೀನುಗಳು

ಬೆಳಗಿನ ಜಾವ ಮೂರಕ್ಕೆ ಪ್ರಯತ್ನಪಟ್ಟರೂ ನೆನಪಿಗೆ ಬಾರದ ಸ್ವಪ್ನವೊಂದರಿಂದ ಎಚ್ಚರವಾ ಯಿತು. ಅರ್ಧ ಗಂಟೆ ಹೊರಳಾಡಿದೆನಾದರೂ ನಿದ್ರೆ ಹತ್ತಲಿಲ್ಲ. ಎದ್ದು ಕುಳಿತು ಕೊನೆಯ ಕೆಲವು ಪುಟಗಳಷ್ಟೇ ಉಳಿದಿದ್ದ ನನ್ನ ತೇಜಸ್ವಿ ಪುಸ್ತಕವನ್ನು ಕೈಗೆತ್ತಿಕೊಂಡೆ. ಗಂಟೆ ಆರಾಗುವಷ್ಟರಲ್ಲಿ ಪುಸ್ತಕದ ಪುಟಗಳು ಮುಗಿದುಹೋದವು.

ರೂಮಿನಲ್ಲೇ ಅತ್ತಿಂದಿತ್ತ ಹೆಜ್ಜೆ ಹಾಕುತ್ತಾ, ಇಂದೇಕೋ ಮಳೆಯಿಲ್ಲ, ಏನು ಮಾಡಬೇಕೆಂದು ತೋಚದೆ ಮೊಬೈಲೆತ್ತಿಕೊಂಡು ಗೂಗಲ್ಗೆ ಹೋಗಿ ಸುಳ್ಯ ಎಂದು ಟೈಪಿಸಿ ಮೂಡುವ ಪುಟಗಳಿಗೆ ಕಾದೆ. ಮೊದಲ ಪುಟ ವಿಕಿಪೀಡಿಯಾದಾಗಿತ್ತು. ಅದನ್ನೇ ತೆರೆದೆ. ಸುಳ್ಯದ ಹತ್ತಿರದ ಜಾಗಗಳ ಹೆಸರುಗಳನ್ನು ನೋಡುತ್ತಿದ್ದಾಗ ತೊಡಿಕಾನ, ಮತ್ಸ್ಯಗಂಧಿ, ದೇವರಗುಂಡಿಯ ಹೆಸರುಗಳು ಕಂಡವು. ಸುಳ್ಯದಿಂದ ಹತ್ತಿರದಲ್ಲೇ ಇದ್ದ ಜಾಗಗಳವು.

ಸರಿ ನಡಿ ಹೊರಡೋಣ ಎಂದು ಶಟರ್ು ಪ್ಯಾಂಟು ತೊಟ್ಟು ಜಕರ್ಿನ್ನಿನ ಒಳಜೇಬಿಗೆ ಕ್ಯಾಮೆರಾ, ಮೊಬೈಲನ್ನು ಹಾಕಿ ಜಕರ್ಿನ್ನನ್ನು ಹೆಗಲಿಗೇರಿಸಿ ಬೈಕೇರಿ ಹೊರಟೆ. ದಾರಿ ಕೇಳಲು ರಸ್ತೆಯಲ್ಲಿ ಜನ ಸಂಚಾರವೇ ಆರಂಭವಾಗಿರಲಿಲ್ಲ. ಎಲ್ಲರೂ ಭಾನುವಾರದ ರಜೆಯ ಮೋಜನ್ನು ನಿದ್ರೆಯಲ್ಲಾನಂದಿಸುತ್ತಿರುವಾಗ ನನಗ್ಯಾವ ಹುಕಿ ಇದು ಎಂದು ನಗುತ್ತಾ, ಬಸ್ ನಿಲ್ದಾಣದ ಬಳಿಹೋಗಿ ಆಟೋದವರನ್ನು ತೊಡಿಕಾನಕ್ಕೆ ಹೋಗು ವ ದಾರಿ ಕೇಳಿದೆ. ಮಡಿಕೇರಿಯೆಡೆಗೆ ಹೋಗುವ ರಸ್ತೆಯಲ್ಲೇ ಹೋಗಿ ಅರಂತೋಡುವಿನ ಬಳಿ ಬಲಕ್ಕೆ 5 ಕಿ.ಮಿ ಕ್ರಮಿಸಿದರೆ ತೊಡಿಕಾನ ಸಿಗುತ್ತದೆ ಎಂದರು.

ಬೆಳಗಿನ ಖಾಲಿ ರಸ್ತೆಗಳ ಸೊಬಗನ್ನು ಸವಿಯುತ್ತಾ ಮಧ್ಯೆ ಮಧ್ಯೆ ಫೋಟೋ ಕ್ಲಿಕ್ಕಿಸುತ್ತಾ ತೊಡಿಕಾನದ ದೇವಸ್ಥಾನಕ್ಕೊಂದು ಮಿಂಚಿನ ಭೇಟಿ ಕೊಟ್ಟು ದೇವಾಲಯದ ಹಿಂದಿರುವ ಮತ್ಸ್ಯಗಂಧಿಯ ಕಡೆ ಹೆಜ್ಜೆ ಹಾಕಿದೆ. ಹಿಂದಿನ ದಿನದ ಮಳೆಗೆ ಜಾರುತ್ತಿದ್ದ ಆ ಕೊರಕಲುಗಳಲ್ಲಿ ಒಂದಷ್ಟು ಪ್ರಯಾಸಪಡುತ್ತಾ ನಡೆದು ಮತ್ಸ್ಯಗಂಧಿ ತಲುಪಿದೆ.

ಕೇರಳದ ಒಂದಷ್ಟು ಮಂದಿ ನದಿಯ ಬದಿಗೆ ಕಟ್ಟಿದ್ದ ಮೆಟ್ಟಿಲುಗಳ ಮೇಲೆ ನಿಂತು ಕುತೂಹಲ ಭರಿತವಾಗಿ ಮೀನುಗಳನ್ನು ನೋಡುತ್ತಿದ್ದರು. ಅಲ್ಲೇ ಹಾಕಿದ್ದ ಕಟ್ಟೆಯ ಮೇಲೆ ಕುಳಿತು ಸುತ್ತಲಿನ ಪರಿಸರವನ್ನು ಆಸ್ವಾದಿಸುತ್ತಾ ಒಂದೆರಡು ಫೋಟೋ ತೆಗೆದೆ. 5 ನಿಮಿಷದ ನಂತರ ಅವರೆಲ್ಲ ಹೊರಟು ಹೋದರು. ಇಷ್ಟು ಬೆಳಿಗ್ಗೆ ಹೆಚ್ಚು ಜನರು ಇಲ್ಲಿಗೆ ಬರುವವುದಿಲ್ಲವೇನೋ ಎಂಬುದನ್ನು ನೆನೆದು ಏಕಾಂತದ ಖುಷಿಯನ್ನನುಭವಿಸುವ ಸಾಧ್ಯತೆಯಿಂದ ಸಂತಸವಾಯಿತು.

ಹೋಗಿ ಮೆಟ್ಟಿಲ ಮೇಲೆ ಕುಳಿತು ಚಪ್ಪಲಿ ಕಳಚಿ ಕಾಲನ್ನು ನೀರಿನೊಳಗಿಳಿಬಿಟ್ಟು ಕುಳಿತೆ. ಮೀನುಗಳ ಓಡಾಟದ ಸಂಘರ್ಷದಿಂದ ಸುತ್ತಲಿನ ಹವೆಗಿಂತ ನೀರೇ ಬೆಚ್ಚಗಿತ್ತು, ಹಿತ ತರುವಂತಿತ್ತು. ಹಸ್ತಗಳನ್ನು ಮೇಲಿನ ಮೆಟ್ಟಲ ಮೇಲಿಟ್ಟು, ಆಗಸದೆಡೆಗೆ ಮುಖಮಾಡಿ ಕಣ್ಣುಮುಚ್ಚಿದೆ. ಪಕ್ಷಿಗಳ ಕಲರವ, ನದಿಯ ಹರಿವು, ಮರ? ಗಿಡದ ಎಲೆಗಳ ತೊಯ್ದಾಡುವಿಕೆಯ ಸದ್ದು ಕ್ರಮೇಣ ಮರೆಯಾಗುತ್ತಾ ಹೋಗಿ ಯಾರೊ ಮೆಲುದನಿಯಲ್ಲಿ ಮಾತನಾಡುತ್ತಿರುವ ಸದ್ದು ಕೇಳಿತು. ಕಣ್ಣು ತೆರೆದು ಸುತ್ತಲೂ ನೋಡಿದೆ, ಯಾರೂ ಕಾಣಲಿಲ್ಲ; ಭ್ರಮೆಯಿರಬೇಕೆಂದು ಮತ್ತೆ ಕಣ್ಣೆವೆ ಮುಚ್ಚಿದೆ; ಮತ್ತೆ ಮಾತನಾಡುವ ಸದ್ದು, ಜಗಳವಾಡುತ್ತಿರುವ ದನಿಯಿತ್ತು ಆ ಸದ್ದಿನಲ್ಲಿ.

ಕಣ್ತೆರೆದು ನೀರಿನತ್ತ ನೋಡಿದೆ. ಕೇಳಿದ್ದು ಮೀನುಗಳ ಸಂಭಾಷಣೆಯಾ? ಎಂಬ ಪ್ರಶ್ನೆ ಉದ್ಭವಿಸಿ ನನ್ನ ಕಲ್ಪನಾ ಲಹರಿಗೆ ನನಗೇ ನಗು ಬಂತು. ನೀರನ್ನೇ ಗಮನಿಸುತ್ತ ಕುಳಿತಾಗ ನನ್ನ ಕಲ್ಪನೆ ಕೇವಲ ಕಲ್ಪನೆಯಲ್ಲ ನಿಜವೆಂಬುದು ನಿಧಾನಕ್ಕೆ ಅರಿವಿಗೆ ಬರುತ್ತಲೇ ಅಚ್ಚರಿಯುಂಟಾಯಿತು. ಮೀನುಗಳು 2 ಗುಂಪಿನಲ್ಲಿದ್ದವು. ಬಲಗಡೆ ನೂರಾರು ಮೀನುಗಳಿರುವ ಗುಂಪು, ಎಡದಲ್ಲಿ ಹತ್ತದಿನೈದಷ್ಟೇ ಇದ್ದ ಗುಂಪು. 2 ಗುಂಪಿನ ಮುಂದಾಳತ್ವ ವಹಿಸಿದ್ದ ಮುಖಂಡರನ್ನು ಗುರುತಿಸುವುದು ಕಷ್ಟವಾಗಲಿಲ್ಲ. ಮುಖಂಡರಿಬ್ಬರೂ ನಿಲರ್ಿಪ್ತ ಭಾವದಿಂದ ನನ್ನೆಡೆಗೆ ನೋಡಿ ಚಟಪಟ ಸದ್ದು ಮಾಡುತ್ತಿದ್ದ ಗುಂಪಿನ ಇತರ ಮೀನುಗಳತ್ತ ನೋಡಿದವು. ಮುಖಂಡರ ಮುಖಭಾವವನ್ನರಿತವರಂತೆ ಉಳಿದ ಮೀನುಗಳು ನಿಶ್ಯಬ್ದ ತಾಳಿದವು. ಒಂದೆರಡು ಕ್ಷಣದ ನಂತರ ಎಡದಲ್ಲಿದ್ದ ಮುಖಂಡ ಮೌನ ಮುರಿದು ನೀವೇನೇ ಹೇಳಿದರೂ ಕೂಗಿದರೂ ನಾವಂತೂ ಇಲ್ಲಿ ಉಳಿಯುವುದಿಲ್ಲ. ನಾವು ಮುಂದೆ ಸಾಗುತ್ತೇವೆ ಎಂದು ಹೇಳಿತು.

ಮ್.. ನಿಮಗೆ ಅರ್ಥವಾಗುವುದಿಲ್ಲ ಬಿಡಿ. ನಮ್ಮ ಸುಖ, ನೆಮ್ಮದಿ ಕಂಡು ನಿಮಗೆ ಹೊಟ್ಟೆಯುರಿಯಿರಬೇಕು. ಮಳೆಗಾಲದಲ್ಲಿ ಈ ನದಿಯ ಪ್ರವಾಹದ ವಿರುದ್ಧ ಈಜಿ ಅಗೋ ಅಲ್ಲಿ ಕಾಣುತ್ತಿದೆಯಲ್ಲ ಕಟ್ಟೆ ಅದರ ಈ ಬದಿಗೇ ಉಳಿದುಬಿಟ್ಟರೆ ಇನ್ನುಳಿದೆಲ್ಲ ಕಾಲ ರೆಕ್ಕೆ ಅಲುಗಿಸದೆ ಪ್ರಯಾಸವಿಲ್ಲದೇ ಆರಾಮಾಗಿ ಇದ್ದುಬಿಡಬಹುದು. ಆಹಾರಕ್ಕೂ ಶ್ರಮಪಡುವ ಅಗತ್ಯವಿಲ್ಲ. ದೇವಸ್ಥಾನಕ್ಕೆ ಬರುವ ಜನರೇ ಪುರಿ, ಅನ್ನ ಹಾಕುತ್ತಾರೆ. ತಿಂದುಂಡು ನೆಮ್ಮದಿಯಾಗಿರಬಹುದು ನನ್ನ ಮಾತು.....

ಬಲಬದಿಯ ಮುಖಂಡನ ಮಾತುಗಳನ್ನು ಅರ್ಧಕ್ಕೆ ತಡೆಯುತ್ತಾ ಬೇರೆಯವರ ಹಂಗಿನಲ್ಲಿ ಬದುಕಿ ನೆಮ್ಮದಿ ಯಾಗಿ ಆರಾಮವಾಗಿ ಇರಬಹುದೆಂದು ಎಂದೂ ನಮ ಗನ್ನಿಸಿಲ್ಲ ಕೊಂಚ ಗಡುಸಾಗಿಯೇ ಹೇಳಿದ ಮುಖಂಡನ ಮಾತಿಗೆ ಹೌದೌದೆಂದು ತಲೆಯಾಡಿಸಿದವು ಹಿಂದಿದ್ದ ಮೀನುಗಳು. ಹ್ಹ ಹ್ಹ ಹಂಗ್ಯಾಕೆ? ಅವರು ನಮ್ಮನ್ನು ದೈವಾಂಶ ಸಂಭೂತರೆಂದೇ ಕಾಣುತ್ತಾರೆ. ನಮ್ಮನ್ನು ಬೇಟೆಯಾ ಡಲೂ ಇಲ್ಲಿ ಅವಕಾಶವಿಲ್ಲ. ನಾವೇ ಇಲ್ಲಿನ ರಾಜ ರಾಣಿಯರು.

ಈ ಗೊಡ್ಡು ಅಹಂಕಾರ ಬೇಡ. ನಿಮ್ಮಲ್ಲಿ ಅಹಂಭಾವದ ಭಾವನೆ ಬೆಳೆಸಿ, ನಿಮ್ಮಷ್ಟು ಸುಖಿಗಳೂ ಯಾರೂ ಇಲ್ಲರೆಂಬ ಭ್ರಮೆ ಹುಟ್ಟಿಸಿ ಅವರು ಬಿಸಾಡುವ ಆಹಾರಕ್ಕಾಗಿ ನಿಮ್ಮನ್ನು ಕಾಯುವಂತೆ ಮಾಡಿರುವ ಆ ಮನುಷ್ಯ ಜನ್ಮಕ್ಕೆ ಧಿಕ್ಕಾರವಿರಲಿ. ಇಲ್ಲಿ ನಿಮಗೆ ಆಹಾರವೆಸೆದು ಗುಲಾಮಗಿರಿಯೆಡೆಗೆ ತಳ್ಳಿ ಆ ಕಟ್ಟೆ ದಾಟಿ ಗಾಳವಿಡಿದು ಕೂರುವ ಆ ಮನುಜರಿಂದ ದೈವವೆನ್ನಿಸಿಕೊಳ್ಳುವ ಕರ್ಮ ನಮಗೆ ಬೇಡ

ಆದರೆ ಇಲ್ಲಿ ಪ್ರಾಣಭಯವಿಲ್ಲದೆ ಆರಾಮವಾಗಿರ ಬಹುದಲ್ಲ ದನಿಯಲ್ಲಿನ ಆತ್ಮವಿಶ್ವಾಸ ಸ್ವಲ್ಪ ಸ್ವಲ್ಪವಾಗಿ ಕಡಿಮೆಯಾಗುತ್ತಿತ್ತು.

ಆರಾಮವಾಗಿರುವುದಷ್ಟೇ ಜೀವನವಾ? ಒಪ್ತೀನಿ, ಮತ್ಸ್ಯಗಂಧಿಯ ಆಚೀಚಿನ ಬದುಕಿನಲ್ಲಿ ಪ್ರತಿ ಕ್ಷಣವೂ ಹೋರಾಡಬೇಕು. ಆಹಾರಕ್ಕೆ, ಬೇಸಿಗೆಯಲ್ಲಿ ನೀರಿನ ಮೂಲಕ್ಕೆ, ಈ ಮನುಷ್ಯರ ಗಾಳಗಳಿಂದ ತಪ್ಪಿಸಿಕೊಳ್ಳು ವುದಕ್ಕೆ ಹೋರಾಡಲೇಬೇಕು. ನಮಗೆ ಆ ಹೋರಾಟ ದಲ್ಲೇ ನೆಮ್ಮದಿಯಿದೆ, ಸುಖವಿದೆ. ಆಯುಷ್ಯ ತೀರುವ ಮುಂಚೆಯೇ ಸಾಯುವ ಸಂಭವ ಅಧಿಕವಾದರೂ ಸ್ವತಂತ್ರ್ಯವಾಗಿ ಪರರ ಹಂಗಿಗೆ ಸಿಲುಕದೆ ಬಾಳ್ವೆ ನಡಿಸಿದ ಆತ್ಮಸಂತೃಪ್ತಿಯಾದರೂ ನಮ್ಮಲ್ಲಿ ಉಳಿದೀತು.

ಮುಖಂಡರೇ ನನ್ನದೊಂದು ಪ್ರಶ್ನೆ ಎಡಬದಿಯ ಮುಖಂಡನ ಹಿಂದಿದ್ದ ಮೀನೊಂದು ಕೇಳಿತು. ಕೇಳು ಎಂಬಂತೆ ತಲೆಯಾಡಿಸಿತು ಮುಖಂಡ.

ಅಲ್ಲಾ ಅವರಿಗೆ ಬೇಸಿಗೆಯಲ್ಲಿ ನೀರು ಹೇಗೆ ದೊರಕುತ್ತೆ. ಆಗಲಾದರೂ ನೀರನ್ನರಸಿ ಈ ಸ್ಥಳವನ್ನು ತೊರೆಯಬೇಕಲ್ಲವೇ? ಈ ಪ್ರಶ್ನೆಗೆ ನಾನೇ ಉತ್ತರವನ್ನೀ ಯುತ್ತೇನೆಂಬಂತೆ ಬಲಬದಿಯ ಮುಖಂಡ ಗಂಟಲು ಸರಿಮಾಡಿಕೊಂಡಿತು. ಬೇಸಿಗೆ ಪ್ರಾರಂಭವಾಗುವುದಕ್ಕೆ ಮುಂಚಿತವಾಗಿಯೇ ಅಗೋ ಆ ಕಟ್ಟೆಗಳ ನಡುವೆ ಹಲಗೆಯಿಟ್ಟು ನೀರು ಹರಿಯುವುದನ್ನು ನಿಲ್ಲಿಸಿಬಿಡುತ್ತಾರೆ. ಮತ್ತೂ ಕಡಿಮೆಯಾದಲ್ಲಿ ದೇವರಗುಂಡಿಯಿಂದ ಪೈಪ್ನಲ್ಲಿ ನೀರು ಹರಿಸುತ್ತಾರೆ. ಹಾಗಾಗಿ ನಾವು ಎಲ್ಲಿಗೂ ಹೋಗುವ ಅವಶ್ಯಕತೆಯಿಲ್ಲ ಕುಗ್ಗುತ್ತಿದ್ದ ಆತ್ಮವಿಶ್ವಾಸವನ್ನು ಮುಚ್ಚಿಡಲು ಒಣಅಭಿಮಾನವನ್ನು ತೋರ್ಪಡಿಸುತ್ತಾ ಹೇಳಿತು.

ಎಡಬದಿಯ ಮೀನುಗಳು ತಮ್ಮಲ್ಲೇ ಮಾತನಾಡಿ ಕೊಂಡವು. ಏನೆಂದು ನನಗೆ ಸ್ಪಷ್ಟವಾಗಿ ತಿಳಿಯಲಿಲ್ಲ. ಅವರ ಮನಸ್ಥಿತಿಯನ್ನು ಅರಿತ ಮುಖಂಡ ನೋಡಿ ಈ ಹಂಗಿನ ಸುಖ ಪ್ರತಿಯೊಬ್ಬರ ಮನಸ್ಸನ್ನೂ ಚಂಚಲ ಗೊಳಿಸುತ್ತೆಂಬುದನ್ನು ನಾನು ಬಲ್ಲೆ. ಇಂಥ ಕೃತಕ ಸುಖದ ಜಾಗಗಳು ಜೀವಿಸಲು ಹೋರಾಡಬೇಕಾದ ನಮ್ಮ ದೈಹಿಕ ಶ್ರಮವನ್ನಷ್ಟೇ ಅಲ್ಲದೇ ನಮ್ಮ ಮಾನಸಿಕ ಶ್ರಮವನ್ನೂ ಹೊಸಕಿ ಹಾಕುತ್ತವೆ. ಚಿಂತನೆಯನ್ನು, ಆಲೋಚನಾ ಪರತೆಯನ್ನು ಹುಟ್ಟುವ ಮೊದಲೇ ಸಾಯಿಸುತ್ತವೆ. ಈ ಪ್ರಲೋಭನೆಗಳ ಪ್ರಭಾವಕ್ಕೆ ಒಳಗಾಗದಿರಿ ಎಂದಷ್ಟೇ ನಾನು ಹೇಳಬಲ್ಲೆ.

ಇನ್ಮೇಲೆಯೂ ನೀವು ಇಲ್ಲೇ ಇರಲು ನಿರ್ಧರಿಸಿದರೆ ............. ನನ್ನ ಬಲವಂತವಿಲ್ಲ ಎಂದ್ಹೇಳಿ ಒಮ್ಮೆ ಕಣ್ಣು ಮುಚ್ಚಿ ಏನೋ ಯೋಚಿಸಿ ಕಣ್ತೆರೆದು ನಾನಿನ್ನು ಹೊರಡುತ್ತೇನೆ. ಇಲ್ಲೇ ಉಳಿಯಬಯಸುವವರು ಉಳಿಯಬಹುದು ಎದುರಿನ ಗುಂಪನ್ನುದ್ದೇಶಸಿ ಹಂಗಿನರಮನೆಯನ್ನು ತೊರೆದು ಸ್ವತಂತ್ರ್ಯವಾಗುಳಿಯ ಬಯಸುವವರಿಗೆ ನಮ್ಮಲ್ಲಿ ಸದಾ ಸ್ವಾಗತ ಎಂದು ಮಾತು ಮುಗಿಸಿ ಎದುರಿನ ಮುಖಂಡನೆಡೆಗೊಮ್ಮೆ ನೋಡಿ ವಿದಾಯದ ನಗೆ ಬೀರಿ ನದಿಯ ಹರಿವಿನ ಜೊತೆ ಮುಂದೆ ಸಾಗಿತು.

ಮೆಟ್ಟಿಲುಗಳ ಮೇಲೆ ನಡೆಯುತ್ತಾ ನಾನೂ ಅದರ ಸಮನಾಂತರವಾಗಿ ಸಾಗಿದೆ. ಇಲ್ಲಿ ಉಳಿಯುವುದಾ? ಅಥವಾ ಮುಂದೆ ಸಾಗುವುದಾ? ಎಂಬ ಜಿಜ್ಞಾಸೆಯಲ್ಲಿದ್ದ ಮೀನುಗಳ ಬಗ್ಗೆ ಆ ಮುಖಂಡನಿಗೆ ಆಸ್ಥೆಯಿರುವಂತೆ ಕಾಣಲಿಲ್ಲ.

ಕಟ್ಟೆ ದಾಟುವ ಮುನ್ನ ಒಮ್ಮೆ ನನ್ನೆಡೆಗೆ ತಿರುಗಿ ಮನದಲ್ಲೇ ನಿಮಗೆ ಧಿಕ್ಕಾರವಿರಲಿ ಎಂದು ಹೇಳಿ ಪರತಂತ್ರದಿಂದ ಸ್ವತಂತ್ರ್ಯದೆಡೆಗೆ ಈಜುತ್ತಾ ಮುಂದರಿಯಿತು.

ಡಾ.ಅಶೋಕ ಕೆ.ಆರ್. ಸುಳ್ಯ.

ಅಂಬೇಡ್ಕರ್ ಅಧಿಕಾರ ಮತ್ತು ರಾಜಕೀಯದ ಮಹತ್ವ

ಕಳೆದ ತಿಂಗಳು ಆಂಗ್ಲ ಪತ್ರಿಕೆಯೊಂದರಲ್ಲಿ ಸುದ್ಧಿಯೊಂದು ಪ್ರಕಟವಾಗಿತ್ತು. ಭಾರತದ ಕಮ್ಯುನಿಸ್ಟ್ ಪಕ್ಷಗಳು (ಸಿ.ಪಿ.ಐ, ಮತ್ತು ಸಿ.ಪಿ.ಎಂ) ಭಾರತೀಕರಣ ಗೊಳ್ಳುತ್ತಿವೆ ಎಂಬುದೇ ಆ ಸುದ್ಧಿ.

ಭಾರತೀಕರಣವೆಂದರೆ ಅವುಗಳ Strategyಯಲ್ಲಿ ಏನಾದರು ಬದಲಾವಣೆ ಇರಬೇಕು. ಅಂದಾಗ ಅದಕ್ಕೆ ಮಹತ್ವ ಬರುತ್ತಲ್ಲವೇ? ಒಂದೆಡೆ ಅವುಗಳು ಈಗಾಗಲೇ ತಮ್ಮ ಸಿದ್ಧಾಂತ ಮತ್ತು ಕಾರ್ಯಕ್ರಮಗಳಲ್ಲಿ ಅಂಬೇಡ್ಕರರನ್ನು ಒಳಗೊಳ್ಳಲು ನಿರ್ಧರಿಸಿದಂತಿವೆ. ಹಾಗಿದ್ದರೆ ಇದುವರೆಗೆ ಕಮ್ಯುನಿಸ್ಟ್ ಪಕ್ಷಗಳಲ್ಲಿ ಅಂಬೇಡ್ಕರ್ ಇರಲಿಲ್ಲವೇ? ಖಂಡಿತ ಇಲ್ಲ. ಕಮ್ಯುನಿಸ್ಟ್ ಪಕ್ಷಗಳು ಅವರ ಅಪ್ಪಟ ವಿರೋಧಿಗಳಾಗಿದ್ದವೇ? ಅವು ಏನಿದ್ದರೂ ಮಾಕ್ಸರ್್, ಲೆನಿನ್, ಮತ್ತು ಚೆಗುವಾರ ಹೀಗೆ ಈಠಡಿಜರಟಿ ಮುಖಗಳತ್ತ ಸುತ್ತುತ್ತಾ, ಹೆಚ್ಚಿಗೆ ಭಾರತದತ್ತ ಗಮನ ಹರಿಸುತ್ತಿದ್ದಿಲ್ಲ. ಅದು ಅಂಬೇಡ್ಕರರತ್ತ!

ಯಾಕೆಂದರೆ Basically ಕಮ್ಯುನಿಸ್ಟ್ ಪಕ್ಷಗಳಿಗೂ ಮತ್ತು ಅಂಬೇಡ್ಕರರ ಜಾತಿ, ಧರ್ಮ ಮತ್ತು ಆ ಹಿನ್ನೆಯಲ್ಲಿನ ಹೋರಾಟ ಇತ್ಯಾದಿಗಳಿಗೂ ಒಂದು ರೀತಿಯ ಎಣ್ಣೆ ಸೀಗೆಕಾಯಿಯ ಸಂಬಂಧ.

ಕಮ್ಯುನಿಸ್ಟರದ್ದು ಶ್ರೀಮಂತ-ಬಡವ, ಕಾಮರ್ಿಕ-ಮಾಲೀಕ ಎಂಬ ವರ್ಗಹೋರಾಟದ ಮಾದರಿ. ಹೀಗಿರುವಾಗ ಅಲ್ಲೆಲ್ಲಿ ಬರುತ್ತದೆ ಅಂಬೇಡ್ಕರ್ ಸಿದ್ಧಾಂತ? ಅದರಲ್ಲೂ ಭಾರತದಲ್ಲಿ ಠಛಿಚಿಟಣ ಬ್ರಾಹ್ಮಣರ ಕಪಿಮುಷ್ಟಿಯಲ್ಲಿ ಆ ಪಕ್ಷಗಳು ಸಿಕ್ಕಿ ನರಳುತ್ತಿರುವಾಗ! ಅಂದಹಾಗೆ ಕಮ್ಯುನಿಸ್ಟರಿಗೇಕೆ ಈಗ ಅಂಬೇಡ್ಕರ್ ಬೇಕಾಗಿದ್ದಾರೆ? ಅಂತಹ ಣಡಿರಜಟಿಣ ಏನಿದೆ ಕಮ್ಯುನಿಸ್ಟರಿಗೆ? ಅಂಬೇಡ್ಕರ್ ಬಗ್ಗೆ ಅವರಿಗೆ ಈ ಪರಿಯ ದಿಢೀರ್ ವ್ಯಾಮೋಹ ಉಕ್ಕಲು ಕಾರಣವಾದರೂ ಏನು? ಉತ್ತರ ಸಿಂಪಲ್ಲು. ಕಮ್ಯುನಿಸ್ಟ್ ಪಕ್ಷಗಳು ಈಗ ಪತನದ ಅಂಚಿನಲ್ಲಿವೆ!

ಪಶ್ಚಿಮ ಬಂಗಾಳದ ಕಳೆದ ಚುನಾವಣೆಯಲ್ಲಿ ಅವು ಸೋತು ಸುಣ್ಣವಾಗಿವೆ. ಅವರ ಪ್ರಮುಖ, ಹಳೆಯ ತಲೆಮಾರಿನ ನಾಯಕರುಗಳೂ ಕೂಡ ಈಗ ಅವರ ನಡುವೆ ಇಲ್ಲ. ಉದಾ: ಜ್ಯೋತಿಬಸು. ಹಾಗೆಯೇ ಇಡಿ ಭಾರತದಾಧ್ಯಂತ ಅವರ ಪಕ್ಷವನ್ನು ಮೇಲೆತ್ತಬಲ್ಲ ಸಮುದಾಯವೊಂದು ಅಥವಾ ಸಿದ್ಧಾಂತವೊಂದು ಈಗ ಅವರ ಜೊತೆ ಇಲ್ಲ. ಅದರಲ್ಲೂ ಜಾಗತೀಕರಣದ ಈ ದಿನಗಳಲ್ಲಿ ಎಲ್ಲರೂ ಹಣದ ಹಿಂದೆ ಓಡುತ್ತಿರುವಾಗ ವರ್ಗ ಹೋರಾಟದ ಕಮ್ಯುನಿಸ್ಟರನ್ನು ಈಗ ಯಾರು ಛಿಚಿಡಿಜ ಮಾಡುತ್ತಾರೆ?

ಂಛಿಣಣಚಿಟಟಥಿ ಕಮ್ಯುನಿಸಂ ಭಾರತದ ಅಸ್ಪೃಶ್ಯರ ಜೀವಾಳವಾಗಬೇಕಿತ್ತು. ಅವರ ಹೋರಾಟದ ದೀಪವಾಗಬೇಕಿತ್ತು. ಆದರೆ ಜಾತಿಯ ಪ್ರಶ್ನೆ ಬಂದಾಗ, ಮೀಸಲಾತಿಯ ಸಮಸ್ಯೆ ಬಂದಾಗ ಕಮ್ಯುನಿಸ್ಟರ ನಡವಳಿಕೆ ಆರ್.ಎಸ್.ಎಸ್ನವರಿಗಿಂತೇನೂ ಭಿನ್ನವಾಗಿಲ್ಲ. ಆ ಕಾರಣಕ್ಕಾಗಿ ಅದು ಅಸ್ಪೃಶ್ಯರ ಜೀವಾಳವಿರಲಿ ಹೋರಾ ಟದ ಮಾರ್ಗವಾಗಿಯೂ ಕೂಡ ಕಂಡಿಲ್ಲ. ಏಕೆಂದರೆ ಜ್ಯೋತಿಬಸುರಂತಹ ಅವರ ಉನ್ನತ ನಾಯಕರೇ ಹಿಂದೆ ಮಂಡಲ್ ವರದಿಯ ವಿರುದ್ಧ ಮಾತನಾಡಿದ್ದಾರೆ!

ಬಂಗಾಳದಲ್ಲಿ ಈಗಲೂ ದಲಿತರಿಗೆ ಆಡಳಿತದಲ್ಲಿ ಸರಿಯಾದ ಪಾಲುದಾರಿಕೆ ಇಲ್ಲ!. ಮೀಸಲಾತಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ. ಕಾರಣವೇ ನೆಂದರೆ ಕಮ್ಯುನಿಸ್ಟರಿಗೆ ದಲಿತರ ಜಾತಿಯ ಸಮಸ್ಯೆಗ ಳಿಗಿಂತ ಮಾಕ್ಸರ್್ರ ವರ್ಗ ಹೋರಾಟವೇ ಮುಖ್ಯ. ಈ ನಿಟ್ಟಿನಲ್ಲಿ ದಲಿತರ ಸಮಸ್ಯೆ ಅವರಿಗೆ ನಗಣ್ಯ.

ಪ್ರಶ್ನೆ ಏನೆಂದರೆ ಜಾತಿಪೀಡಿತ ಭಾರತದಲ್ಲಿ ಎಲ್ಲಿಯವರೆಗೆ ಆ ಸವಕಲು ವರ್ಗ ಸಂಘರ್ಷದ ಮಾತು ನಡೆಯುತ್ತದೆ? ಕಳೆದಬಾರಿ ಪಶ್ಷಿಮ ಬಂಗಾಳದಲ್ಲಿ ಆಗಿರುವುದೇ ಅದು. ಕಮ್ಯುನಿಸ್ಟ್ ಪಕ್ಷಗಳು ಸೋತು ಸುಣ್ಣವಾಗಿವೆ. ರಾಷ್ಟ್ರದಾಧ್ಯಂತ ಮೌಲ್ಯ ಕಳೆದುಕೊ ಳ್ಳುತ್ತಿವೆ. ಅದಕ್ಕೆ ಈಗ ಮುಳುಗುವವನಿಗೆ ಹುಲುಕಡ್ಡಿ ಆಸರೆ ಎಂಬಂತೆ ತಮ್ಮ ಸಿದ್ಧಾಂತದಲ್ಲಿ ಅಂಬೇಡ್ಕರರನ್ನು ಸೇರಿಸಿಕೊಳ್ಳುವ ಮಾತನಾಡುತ್ತಿವೆ!. ಅಂದಹಾಗೆ ತಮ್ಮ ಸಿದ್ಧಾಂತದಲ್ಲಿ ಅಂಬೇಡ್ಕರರನ್ನು ಸೇರಿಸಿಕೊಳ್ಳುವ ಕಮ್ಯುನಿಸ್ಟ್ ಪಕ್ಷಗಳ ಈ ನಡೆ ಅಂಬೇಡ್ಕರರಿಗೆ ಗೌರವ ನೀಡಿದಂತಾಗತ್ತ ದೆಯೇ? ಖಂಡಿತಾ ಇಲ್ಲ. ಅದು ಅಂಬೇಡ್ಕರ್ವಾದದ ವಿರುದ್ಧ ಕಮ್ಯುನಿಸ್ಟರು ನಡೆಸುತ್ತಿರು ದಾಳಿ ಎನ್ನದೆ ವಿಧಿಯಿಲ್ಲ.

ಇನ್ನು ಆರ್.ಎಸ್.ಎಸ್ನವರದು ವಿಚಿತ್ರ ನಡೆ. ಕಳೆದವಾರ ಆರ್.ಎಸ್.ಎಸ್ ಪ್ರಮುಖರೊಬ್ಬರು ಸಮಾಜ ಚಿಕಿತ್ಸಕ ಅಂಬೇಡ್ಕರ್ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ. ಅಂಬೇಡ್ಕರ್ ಮೇಲಿನ ಪ್ರೀತಿಯಿಂದ ಆ ಆರ್.ಎಸ್.ಎಸ್ ಮುಖಂಡರು ಈ ಕೃತಿಯನ್ನು ಪ್ರಕಟಿಸಿದ್ದಾರೆಂದೆನಿಸಿದರೂ ಒಟ್ಟಾರೆ ಅದು ದಲಿತರನ್ನು ಹಿಂದೂ ಧರ್ಮದ ಒಳಗೆ ಎಳೆದುಕೊಳ್ಳುವ ನಿರಂತರ ಪ್ರಯತ್ನದ ಮತ್ತೊಂದು ಯತ್ನವಲ್ಲದೆ ಬೇರೇನಲ್ಲ. ಆಶ್ಚರ್ಯಕರವೆಂದರೆ ಆರ್.ಎಸ್.ಎಸ್ ತನ್ನ ತೆಕ್ಕೆಗೆ ಅಂಬೇಡ್ಕರರನ್ನು ಸೆಳೆದುಕೊಳ್ಳುವ ಈ ಯತ್ನವನ್ನು ಅಂಬೇಡ್ಕರ್ ಬದುಕಿದ್ದಾಗಿಂದಲೂ ಮಾಡುತ್ತಾ ಬಂದಿದೆ.

ಅಂಬೇಡ್ಕರ್ ಜೀವನ ಚರಿತ್ರೆ ಬರೆದಿರುವ ಬ್ರಾಹ್ಮಣ ವರ್ಗದ ಧನಂಜಯ ಕೀರ್ ಎಂಬುವವರೇ ಅಂಬೇಡ್ಕರ ರನ್ನು ಸಾವರ್ಕರ್ ಜೊತೆ ಸಮೀಕರಿಸುತ್ತ ಆರ್.ಎಸ್. ಎಸ್ ನ ಇಂತಹ ಕ್ರೀಯೆಗೆ ಮುನ್ನುಡಿ ಬರೆದಿದ್ದಾರೆ. ಈ ನಿಟ್ಟಿನಲ್ಲಿ ಆರ್.ಎಸ್.ಎಸ್, ಎ.ಬಿ.ವಿ.ಪಿ ಇತ್ಯಾದಿ ಸಂಘಟನೆಗಳು ಅಂಬೇಡ್ಕರ್ ಫೋಟೋವನ್ನು ತಮ್ಮ ಕಾರ್ಯಕ್ರಮಗಳಲ್ಲಿ, ಪತ್ರಿಕೆಗಳಲ್ಲಿ ಹಾಕುವ ಮೂಲಕ ಅವರನ್ನು, ಆ ಮೂಲಕ ದಲಿತರನ್ನು ಹಿಂದೂ ತೆಕ್ಕೆಗೆ ಸೆಳೆದುಕೊಳ್ಳುವ ತನ್ನ ಕಾರ್ಯವನ್ನು ದಶಕಗಳಿಂದ ಮುಂದುವರೆಸಿದೆ. ಒಟ್ಟಾರೆ ಅಂಬೇಡ್ಕರರ ಸಿದ್ದಾಂತ ಆರ್.ಎಸ್.ಎಸ್. ಮತ್ತು ಹೇಗೆ ಕಮ್ಯುನಿಸ್ಟರಿಗೆ ತುತರ್ಾಗಿ ಬೇಕಾಗಿದೆ. ಈ ನಿಟ್ಟಿನಲ್ಲಿ ಆರ್.ಎಸ್.ಎಸ್ಆಗಾಗ ಅಂಬೇಡ್ಕರ್ರ ಹೆಸರಿನ ಕೃತಿ ಬರೆಯುತ್ತಾ, ದಾಳಿಯನ್ನು ನಡೆಸುತ್ತಿರುತ್ತದೆ.

ಇನ್ನು ಅಂಬೇಡ್ಕರ್ ದಾಳಿಗೊಳಗಾಗುತ್ತಿರುವ ಮತ್ತೊಂದು ದಿಕ್ಕು ಗಾಂಧಿವಾದ. ಸ್ವತಃ ಗಾಂಧೀಜಿಯ ವರಿಂದ ಪೂನಾ ಒಪ್ಪಂದ ಸಂದರ್ಭದಲ್ಲಿ ಪ್ರಾರಂಭವಾದ ಈ ದಾಳಿ ನಿರಂತರ ಮುಂದುವರೆದಿದೆ. ಕಾಂಗ್ರೆಸ್ನ ಸಮಾಜವಾದಿಗಳು ಮತ್ತು ಗಾಂಧಿವಾದಿಗಳು ಇಂತಹ ದಾಳಿಯ ನೇತೃತ್ವವನ್ನು ವಹಿಸಿದ್ದಾರೆ. ಪೂನಾ ಒಪ್ಪಂದದ ಸಂದರ್ಭದಲ್ಲಿ ಅಸ್ಪೃಶ್ಯರಿಗೆ ನೀಡಲ್ಪಟ್ಟಿದ್ದ ಪ್ರತ್ಯೇಕ ಮತದಾನದ ಹಕ್ಕನ್ನು ಕಿತ್ತುಕೊಂಡು ಹರಿಜನ ಸೇವಕ ಸಂಘ ಗಳನ್ನು ಪ್ರಾರಂಭಿಸುವ ಮೂಲಕ ಈ ದಾಳಿಗೆ ಮುನ್ನುಡಿ ಬರೆಯಲಾಯಿತಾದರೂ ನಂತರದ ದಿನಗಳಲ್ಲಿ ಹರಿಜನ (ದೇವರ ಮಕ್ಕಳು) ಎಂಬ ಮೂಗಿಗೆ ತುಪ್ಪ ಸವರುವ ಮೂಲಕ, ಮೀಸಲಾತಿಯ ನಿರಂತರ ವಂಚನೆಯ ಮೂಲಕ, ದಲಿತರನ್ನು ರಾಜಕೀಯ ಚಮಚಾಗಿರಿಗೆ ಒಳಪಡಿಸುವ ಮೂಲಕ ಗಾಂಧಿವಾದ ಅಂಬೇಡ್ಕರ್ವಾದದ ವಿರುದ್ಧ ವ್ಯವಸ್ಥಿತ ದಾಳಿಯನ್ನು ಸಂಘಟಿಸುತ್ತಾ ಬಂದಿದೆ. ಆರ್.ಎಸ್.ಎಸ್ನವರದ್ದು, ಕಣ್ಣಿಗೆ ಕಾಣುತ್ತದೆ. ಆದರೆ ಗಾಂಧಿವಾದದ ದಾಳಿ ಕಣ್ಣಿಗೆ ಕಾಣುವುದಿಲ್ಲ. ಒಂದು ರೀತಿ ಮಂಕುಬೂದಿ ಎರಚಿದಂತೆ.

ಒಂದಂತೂ ನಿಜ, ಗಾಂಧೀವಾದವಿರಲಿ, ಕೋಮು ವಾದವಿರಲಿ, ಕಮ್ಯುನಿಸ್ಟರಿರಲಿ ಎಲ್ಲರಿಗೂ ಅಂಬೇಡ್ಕರ್ ಬೇಕು. ಹಾಗಿದ್ದರೆ ಇವರೆಲ್ಲರಿಗೂ ಅಂಬೇಡ್ಕರ್ ಕಂಡರೆ ಅಷ್ಟೊಂದು ಪ್ರೀತಿಯೆ ಅಥವಾ ಮೋಹವೇ? ಇದ್ಯಾವುದು ಅಲ್ಲ. ಅವರ ಒಟ್ಟಾರೆ ಉದ್ದೇಶ ಅಂಬೇಡ್ಕರ್ ಸುತ್ತ ಇರುವ ದಲಿತ ಸಮೂಹದ ಕಡೆಗೆ. ಶೇ25ರಿಂದ 30ರಷ್ಟಿರುವ ಆ ಓಟ್ ಬ್ಯಾಂಕ್ಕಡೆಗೆ.

ಇಂದು ಖಜಜಡಿತಜ ಃಚಿಟಿಞ ಗಿಂತ ಓಟ್ ಬ್ಯಾಂಕ್ ಮುಖ್ಯ. ಓಟ್ ಬ್ಯಾಂಕ್ ಇದ್ದರೆ ರಿಸವರ್್ ಬ್ಯಾಂಕ್ ಕೀ ತಾನಾಗೇ ಸಿಕ್ಕುತ್ತದೆ. ಇದನ್ನೇ ಅಂಬೇಡ್ಕರ್ ಹೇಳಿರುವುದು Political power is the master key, through which you can unlock all doors of progress ಎಂದು. ಅಂದರೆ ಓಟ್ ಬ್ಯಾಂಕ್ ಮೂಲಕ ದೊರೆಯುವ ರಾಜಕೀಯ ಅಧಿಕಾರದ ಕೀ ಪ್ರಗತಿಯ ಎಲ್ಲಾ ರೀತಿಯ ಬಾಗಿಲುಗಳನ್ನು ತೆರೆಯುತ್ತದೆ ಎಂದರ್ಥ. ಈ ನಿಟ್ಟಿನಲ್ಲಿ ಅಂಬೇಡ್ಕರರ ಆಸೆಯೂ ಕೂಡ 'I wanted to see my people as governing class' ಎಂಬುದಾಗಿತ್ತು. ಅಂದರೆ ನನ್ನ ಜನರು ಈ ದೇಶದ ಅಧಿಕಾರ ಹಿಡಿಯಬೇಕೆಂಬುದು ಅದರ ಸರಳ ಅರ್ಥ.

ಈ ನಿಟ್ಟಿನಲ್ಲಿ ಒಟ್ಟಾರೆ ಹೇಳುವುದಾದರೆ ಅಂಬೇಡ್ಕರ್ ಅವರ ವಾದ ದಲಿತರನ್ನು ಈ ದೇಶದ ರಾಜಕೀಯ ಅಧಿಕಾರದ ಗದ್ದುಗೆಯತ್ತ ಕೊಂಡೊಯ್ದರೆ ಅವರ ಹಿಂದೆ ಬಿದ್ದಿರುವ ಗಾಂಧಿವಾದ, ಕೋಮುವಾದ, ಇತ್ಯಾದಿಗಳು ದಲಿತರನ್ನು ಅಂತಹ ಅಧಿಕಾರ ಗದ್ದುಗೆಯಿಂದ ದೂರ ಇಡುವ ಸಂಚನ್ನು ಹೊಂದಿದ್ದವು ಅಥವ ಹೊಂದಿವೆ, ಬದಲಿಗೆ ಆ ಓಟ್ ಬ್ಯಾಂಕನ್ನು ಯಾವ ರೀತಿಯಲ್ಲಾದರೂ ಕಿತ್ತುಕೊಂಡು ಅದರ ಮೂಲಕ ಮನುವಾದವನ್ನು ಜಾರಿಗೊಳಿಸುವ ದುಷ್ಟ ಹುನ್ನಾರವನ್ನು ಈ ಮೂರು ವಾದಗಳೂ ಹೊಂದಿವೆ. ಹೀಗಿರುವಾಗ ಗಾಂಧಿವಾದ, ಕೊಮುವಾದ, ಕಮ್ಯುನಸ್ಟ್ವಾದಗಳ ಸಂಚಿಗೆ ಅಂಬೇಡ್ಕರ್ವಾದ ಬಲಿಯಾಗಬೇಕೆ? ಅಥವಾ ಅಂತಹ ವಾದಗಳು ಎಸೆಯುವ ಎಂಜಲಿಗೆ ಅಂಬೇಡ್ಕರ್ವಾದದ ವಾರಸುದಾರರಾದ ದಲಿತರು ತಮ್ಮ ಓಟ್ ಬ್ಯಾಂಕನ್ನು, ಆ ಮೂಲಕ ರಾಜಕೀಯ ಅಧಿಕಾರ ಎಂಬ ಮಾಸ್ಟರ್ ಕೀ ಅನ್ನು ಕಳೆದುಕೊಳ್ಳಬೇಕೆ? ಅಥವಾ ಬೇರೆಯವರ ಕೈಗಿತ್ತು ನಮ್ಮನ್ನು ಅಭಿವೃದ್ಧಿ ಮಾಡಿ ಎಂದು ಗೋಗರೆಯಬೇಕೆ? ಖಂಡಿತ, ಹಾಗೇನಾದರೂ ಆದದ್ದೇ ಆದರೆ ಅದು ದಲಿತರ ಆ ಮೂಲಕ ಅಂಬೇಡ್ಕರ್ವಾದದ ಸಾಮೂಹಿಕ ಆತ್ಮಹತ್ಯೆಯಾಗುತ್ತದಷ್ಟೆ.

ರಘೋತ್ತಮ ಹೊ.ಬ.
ಲೇಖಕರು, ಚಾಮರಾಜನಗರ