ಕಭಿ ಇದರ್, ಕಭಿ ಉದರ್!
ಮೊನ್ನೆ ತಾನೆ ಬಾಲಿವುಡ್ನ ಮಿನುಗುತಾರೆ ಅಮಿತಾಬ್ ಬಚ್ಚನ್ ನರಹಂತಕ ನರೇಂದ್ರ ಮೋದಿಯೊಂದಿಗೆ ಕೈಕುಲುಕುತ್ತಿದ್ದ ಫೋಟೋಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಅಮಿತಾಬ್ ಬಚ್ಚನ್ ಗುಜರಾತ್ ರಾಜ್ಯದ ಅಧಿಕೃತ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕೊಂಡಿರುವ ಸುದ್ಧಿಯೂ ಬದಿಯಲ್ಲಿತ್ತು.
ಕೊಚ್ಚೆ ರಾಡಿಯಂತೆ ಗಬ್ಬೆದ್ದುಹೋಗಿರುವ ರಾಜಕಾರಣಕ್ಕೆ ತಮ್ಮ ಹೀರೋಗಳು ಇಳಿಯಬಾರದು ಎಂದೇ ಸಾಮಾನ್ಯವಾಗಿ ಚಿತ್ರತಾರೆಯರ, ಕ್ರೀಡಾಪಟುಗಳ, ಹಾಡುಗಾರರ, ಚಿತ್ರಕಲಾವಿದರ ಅಭಿಮಾನಿಗಳು ಬಯಸುತ್ತಾರೆ. ಸಮಾಜದಲ್ಲಿ ಕೋಮು ದಳ್ಳುರಿ ಹಚ್ಚಿ ಅದರ ಬೆಂಕಿಯಲ್ಲಿ ಚಳಿಕಾಯಿಸಿಕೊಳ್ಳುವ ಕೋಮುವಾದಿಗಳಿಂದ, ಕಂಡಲ್ಲಿ ಬಾಂಬಿಟ್ಟು ಅಮಾಯಕರ ದೇಹಗಳನ್ನು ಛಿದ್ರಗೊಳಿಸುವ ಭಯೋತ್ಪಾದಕರಿಂದ, ಕುತ್ತಿಗೆ ತನಕ ಭ್ರಷ್ಟಾಚಾರದಲ್ಲಿ ಮುಳುಗಿರುವ ಅಧಿಕಾರಶಾಹಿ-ರಾಜಕಾರಣಿಗಳ ಮೈತ್ರಿಯಿಂದ ದೂರವಿದ್ದು ತಮ್ಮ ತಮ್ಮ ಸಾಂಸ್ಕೃತಿಕ ಕ್ಷೇತ್ರದಲ್ಲೇ ಗಣನೀಯ ಸೇವೆಗೈದು ಅದನ್ನು ಶ್ರೀಮಂತಗೊಳಿಸಬೇಕೆಂದು ಹಂಬಲಿಸುತ್ತಾರೆ. ಸಚಿನ್ ತೆಂಡೂಲ್ಕರ್ನಂತಹ ಕ್ರೀಡಾಪಟುಗಳು, ಡಾ.ರಾಜ್ಕುಮಾರ್ನಂತಹ ಕೆಲವೇ ಕಲಾವಿದರು ತಮ್ಮ ಅಭಿಮಾನಿಗಳ ಅಭಿಲಾಷೆಗನುಗುಣವಾಗಿಯೇ ತಮ್ಮ ಕ್ಷೇತ್ರದಲ್ಲೇ ಸೇವೆ ಸಲ್ಲಿಸುತ್ತಾ ಅದನ್ನು ಶ್ರೀಮಂತಗೊಳಿಸುವಲ್ಲಿ ತಲ್ಲೀನರಾದಾಗ ಸಹಜವಾಗಿಯೇ ಅವರ ಅಭಿಮಾನಿಗಳೂ ಖುಷಿಯಾಗುತ್ತಾರೆ. ಆದರೆ, ಕೆಲವು ನಟರು, ಕಲಾವಿದರು, ಕ್ರೀಡಾಪಟುಗಳು ತಮ್ಮ ಅಭಿಮಾನಿಗಳ ಇಚ್ಛೆಗೆ ವ್ಯತಿರಿಕ್ತವಾಗಿ ರಾಜಕೀಯಕ್ಕಿಳಿದು ಮೈಕೈ ಹೊಲಸು ಮಾಡಿಕೊಂಡಾಗ ತಮ್ಮ ನಾಯಕರನ್ನು ದೇವರಂತೆ ಪೂಜಿಸುವ ಮನಸ್ಥಿತಿ ಹೊಂದಿರುವ ಅಭಿಮಾನಿಗಳು ಅಷ್ಟೇ ಸಹಜವಾಗಿ ನಿರಾಶೆಗೊಳಾಗುತ್ತಾರೆ. ಈಗ ಅಮಿತಾಬ್ ಬಚ್ಚನ್ ವಿಚಾರದಲ್ಲೂ ಅದೇ ಆಗಿದೆ. ತನ್ನ ಅತ್ಯದ್ಭುತ ತಲ್ಲೀನತೆಯ ನಟನೆಯ ಮೂಲಕ ಅರವತ್ತೆಂಟರ ಇಳಿವಯಸ್ಸಿನಲ್ಲೂ ಬಾಲಿವುಡ್ನಲ್ಲಿ ಸದಾ ಮಿನುಗುವ ತಾರೆಯಂತಿರುವ ಅಮಿತಾಬ್ ಬಚ್ಚನ್ ಮನುಷ್ಯರ ರಕ್ತ ಕುಡಿಯುವ ರಕ್ಕಸನಾಗಿರುವ ನರೇಂದ್ರ ಮೋದಿಯೊಂದಿಗೆ ಕೈಜೋಡಿಸಿರುವುದು, ಭಾರತದಲ್ಲಿ ಅಲ್ಪಸಂಖ್ಯಾತರ ಜಿನೋಸೈಡ್ಗಳ ಪ್ರಯೋಗಾಲಯದಂತಿರುವ ಗುಜರಾತ್ನ ಅಧಿಕೃತ ರಾಯಭಾರಿಯಾಗಿರುವುದು ಅವರ ಕೋಟಿ ಕೋಟಿ ಅಭಿಮಾನಿಗಳಿಗೆ ನಿಸ್ಸಂಶಯವಾಗಿ ನಿರಾಶೆ ಮೂಡಿಸಿದ್ದು ಮಾತ್ರವಲ್ಲ, ಅವರ ಮನಸ್ಸನ್ನು ಅತೀವವಾಗಿ ಕಲಕಿದೆ ಕೂಡ.
ನಿಮಗೆ ನೆನಪಿರಬೇಕು. ಇದೇ ಮೋದಿ 2002ರಲ್ಲಿ ಗುಜರಾತ್ನಲ್ಲಿ ಮೂರು ಸಾವಿರ ಅಮಾಯಕ ಮುಸ್ಲೀಮರ ಮಾರಣಹೋಮ ಮಾಡಿದ. ಅದಾದ ಎರಡೇ ವರ್ಷದಲ್ಲಿ ಗೋವಿಂದ ನಿಹಾಲನಿ 'ದೇವ್' ಎಂಬ ಸಿನಿಮಾ ಮಾಡಿದರು. ಅದರಲ್ಲಿ ರಾಜ್ಯದ ಮುಖ್ಯಮಂತ್ರಿ ಬಂಡಾರ್ಕರ್ (ಅಮರೀಷ್ ಪುರಿ) ರಾಜಕೀಯ ಲಾಭಕ್ಕಾಗಿ ಕೋಮುಗಲಭೆಗಳನ್ನು ನಡೆಸಿ ಸಾವಿರಾರು ಅಮಾಯಕರು ನಡುಬೀದಿಯಲ್ಲಿ ಸಾಯುವಂತೆ ಮಾಡುತ್ತಾನೆ. ಹೆಚ್ಚೂ ಕಡಿಮೆ ನರೇಂದ್ರ ಮೋದಿಯ ಪಾತ್ರವೇ ಅದು. ದೇವ್ ಪ್ರತಾಪ್ ಸಿಂಗ್ ಎಂಬ ನೆಲದ ಕಾನೂನಿಗೆ ಅತ್ಯಂತ ನಿಷ್ಠನಾಗಿರುವ, ಪ್ರಾಮಾಣಿಕನಾಗಿರುವ ಪೊಲಿಸ್ ಅಧಿಕಾರಿ ಮುಖ್ಯಮಂತ್ರಿಯ ವಿರುದ್ಧವೇ ಸೆಟೆದುನಿಲ್ಲುತ್ತಾನೆ. ದೇವ್ ಪ್ರತಾಪ್ ಸಿಂಗ್ ಎಂಬ ಒಬ್ಬ ಪ್ರಾಮಾಣಿಕ, ನಿಷ್ಠೂರ, ದೇಶಭಕ್ತ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದು ಬೇರೆ ಯಾರೂ ಅಲ್ಲ, ಇದೇ ಅಮಿತಾಬ್ ಬಚ್ಚನ್. ಈಗ ನಿಜ ಜೀವನ ನೋಡಿ. ಅದೇ ಅಮಿತಾಬ್ ಬಚ್ಚನ್ ತನ್ನ ರಾಜಕೀಯ ಹಿತಾಸಕ್ತಿಗಾಗಿ ಜನರ ರಕ್ತ ಹೀರುವಲ್ಲಿ ನಿಸ್ಸೀಮನಾಗಿರುವ ನರೇಂದ್ರ ಮೋದಿಯೊಂದಿಗೆ ಕೈಜೋಡಿಸಿದ್ದಾರೆ. ಅಮಿತಾಬ್ ಯಾವತ್ತೂ ದೇವ್ ಪ್ರತಾಪ್ ಸಿಂಗ್ ಆಗಿಯೇ ಇರಬೇಕೆಂದು ಬಯಸುವ ಅವರ ಅಭಿಮಾನಿಗಳು ಮೋದಿಯೊಂದಿಗೆ ಕೈಜೋಡಿಸಿದರೆ ನೋವಾಗದಿರುತ್ತದೆಯೆ?
ಅಮಿತಾಬ್ ಬಚ್ಚನ್ ಒಬ್ಬ ಅತ್ಯದ್ಭುತ ನಟ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಅವರ ಹಿಂದಿರುವ ಅಭಿಮಾನಿ ಜನಸಾಗರಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ; ಅವರಿಗೆ ಮೈಯಲ್ಲಿ ಹುಷಾರಿಲ್ಲ ಎಂದು ಪತ್ರಿಕೆಯಲ್ಲಿ ವರದಿಯಾದಾಗ ಇಡೀ ಉತ್ತರ ಭಾರತದಾದ್ಯಂತ ಹಲವಾರು ಅಭಿಮಾನಿಗಳು ಹತ್ತು ಹಲವು ರೀತಿಯ ಪೂಜೆಪುನಸ್ಕಾರಗಳನ್ನು ಮಾಡಿ ಅವರಿಗೆ ಬೇಗ ಗುಣವಾಗಲಿ ಎಂದು ಮೊರೆಯಿಟ್ಟ ಸತ್ಯಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ. ಅರವತ್ತು ವರ್ಷವಾದರೂ ಇನ್ನೂ ಕಾಲೇಜು ಹುಡುಗನ ಪಾತ್ರವೇ ಬೇಕೆಂದು ಹಠ ಹಿಡಿಯುವ, ಪಾತ್ರಕ್ಕನುಗುಣವಾಗಿ ತಮ್ಮನ್ನು ಮಾರ್ಪಡಿಸಿಕೊಳ್ಳದೇ ತಮ್ಮ ಇಚ್ಚೆ, ಇಮೇಜುಗಳಿಗನುಗುಣವಾಗಿ ಪಾತ್ರಗಳನ್ನೇ ಮಾರ್ಪಡಿಸುವ ಅರೆಬೆಂದ ಕಲಾವಿದರೇ ತುಂಬಿರುವ ಇಂದಿನ ಪರಿಸ್ಥಿತಿಯಲ್ಲಿ ಎಂಥ ಪಾತ್ರಕ್ಕಾದರೂ ಸಿದ್ಧವಾಗಿ ನಿಲ್ಲುವ, ಅಭಿನಯಿಸುವಾಗ ತನ್ನತನವನ್ನು ಕಳೆದುಕೊಂಡು ಪಾತ್ರದಲ್ಲಿ ತಲ್ಲೀನವಾಗಿ ಮರುಹುಟ್ಟು ಪಡೆಯುವ ಅಮಿತಾಬ್ ಸಿನಿಮಾ ಲೋಕದಲ್ಲಿ ಒಂದು ಅಪವಾದವಾಗಿ, ಒಂದು ಅನುಕರಣೀಯ ಮಾದರಿಯಾಗಿ ನಿಲ್ಲುತ್ತಾರೆ. ತೀರಾ ಇತ್ತೀಚೆಗೆ ಬಂದ 'ಪಾ' ಚಿತ್ರದಲ್ಲಿ ಒಂದು ವಿಶಿಷ್ಟ ಖಾಯಿಲೆಯಿಂದ ಬಳಲುವ ಮಗುವಿನ ಪಾತ್ರ ಮಾಡಿದ್ದಿರಬಹುದು, ಕೆಲವು ವರ್ಷಗಳ ಹಿಂದೆ ಬಂದ 'ಕಭಿ ಅಲ್ವಿದನಾ ಕೆಹನಾ', 'ಬ್ಲಾಕ್', 'ರಾಜ್ ಸಕರ್ಾರ್'ಗಳಂತಹ ಚಿತ್ರಗಳಲ್ಲಿ ಅವರು ಅಭಿನಯಿಸಿದ ಪಾತ್ರಗಳಿರಬಹುದು ಅವೆಲ್ಲವೂ ಅಮಿತಾಬ್ ಬಚ್ಚನ್ ಹೇಗೆ ಇಂತಹ ಇಳಿವಯಸ್ಸಿನಲ್ಲೂ ಎಂಥ ಪಾತ್ರವಾದರೂ ಸರಿ ಅದನ್ನೊಂದು ಸವಾಲಾಗಿ ಸ್ವೀಕರಿಸಿ ಅಭಿನಯಿಸಬಲ್ಲರು ಎಂಬುದನ್ನು ಎತ್ತಿ ತೋರಿಸುತ್ತವೆ. ಅಂತಹ ಮೇರುನಟನೂ ಕೂಡ ಒಮ್ಮೊಮ್ಮೆ ವಯಕ್ತಿಕ ಲಾಭಕ್ಕಾಗಿ, ದುಡ್ಡಿಗಾಗಿ, ವರ್ಚಸ್ಸಿಗಾಗಿ ಅಭಿಮಾನಿಗಳ ಆಶೆ ಆಕಾಂಕ್ಷೆಗಳನ್ನೂ ಮಣ್ಣುಪಾಲು ಮಾಡುತ್ತಾರೆ, ಅಭಿಮಾನಿಗಳ ಮನಸ್ಸನ್ನೂ ಅತೀವವಾಗಿ ಕಲಕಿ ನೋವುಂಟು ಮಾಡುತ್ತಾರೆ ಎಂಬುದಕ್ಕೆ ಮೊನ್ನೆ ಅವರು ಗುಜರಾತ್ನ ರಾಯಭಾರಿಯಾಗಿದ್ದೇ ಸಾಕ್ಷಿ.
ವಾಸ್ತವದಲ್ಲಿ ಅಮಿತಾಬ್ ಬಚ್ಚನ್ ಇರೋದೇ ಹಾಗೆ. ಅವರೆಂದೂ ಅಭಿಮಾನಿಗಳ ಆಕಾಂಕ್ಷೆ ಮತ್ತು ತನ್ನ ವಯಕ್ತಿಕ ಹಿತಾಸಕ್ತಿ ಇವೆರಡರ ನಡುವೆ ಆಯ್ಕೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾದರೆ ಅವರು ಎರಡನೇಯದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಸುಸ್ಮಿತಾ ದಾಸ್ ಗುಪ್ತ ಅವರು ಬರೆದಿರುವ ಂಟಣಚಿಛ: ಖಿಜ ಒಚಿಞಟಿರ ಠಜಿ ಚಿ ಖಣಠಿಜಡಿಣಚಿಡಿ ಎಂಬ ಅಮಿತಾಬ್ ಅವರ ಜೀವನ ಚರಿತ್ರೆಯನ್ನು ಅಥವಾ ಸ್ವತಃ ಅಮಿತಾಬ್ ಅವರೇ ಇತ್ತೀಚೆಗೆ ಬರೆಯುತ್ತಿರುವ ಬ್ಲಾಗ್ ಬರವಣಿಗೆಗಳನ್ನು ಗಮನಿಸಿದರೆ ಸಾಕು ಅವರ ಎಡಬಿಡಂಗಿತನ ಅರ್ಥವಾಗಿ ಹೋಗುತ್ತದೆ.
ಅಮಿತಾಬ್ ಬಚ್ಚನ್ ಒಬ್ಬ ನಟನಾಗುವ ಮೊದಲೇ ಅಮಿತಾಬ್ ಕುಟುಂಬ ನೆಹರೂ ಕುಟುಂಬಗಳ ನಡುವೆ ಅತ್ಯಂತ ನಿಕಟ ಬಾಂಧವ್ಯವಿತ್ತು. ಅಮಿತಾಬ್ ಅವರ ತಂದೆ ಹಾಗೂ ಪ್ರಸಿದ್ಧ ಕವಿ ಹರಿವಂಶ್ ರಾಯ್ ಬಚ್ಚನ್ ಅವರು ಸರೋಜಿನಿ ನಾಯ್ಡು ಮೂಲಕ ಅಲಹಬಾದ್ನಲ್ಲಿರುವ ಆನಂದಭವನದಲ್ಲಿ ನೆಹರೂ ಕುಟುಂಬವನ್ನು ಭೇಟಿಯಾಗಿದ್ದರು. ಆಗಿನ್ನೂ ಇಂದಿರಾ ಗಾಂಧಿಗೆ ಮುದುವೆಯೂ ಆಗಿರಲಿಲ್ಲ. ಸರೋಜಿನಿ ನಾಯ್ಡು ಅವರು ಹರಿವಂಶ್ ಮತ್ತು ಅವರ ಸಿಖ್ ಧಮರ್ೀಯ ಪತ್ನಿ ತೇಜಿ ಸೂರಿಯರನ್ನು 'ಕವಿ ಮತ್ತು ಕಾವ್ಯ' ಎಂದು ಬಹಳ ಮಾಮರ್ಿಕವಾಗಿ ನೆಹರೂ ಕುಟುಂಬಕ್ಕೆ ಪರಿಚಯಿಸಿದ್ದರು. (ಮುಂದೆ ಇಂದಿರಾಗಾಂಧಿಯವರು ಬಹಳ ವರ್ಷಗಳ ಕಾಲ ತೇಜಿಯವರನ್ನು ವಿದೇಶಿಯರಿಗೆ ಪರಿಚಯಿಸುವಾಗಲೆಲ್ಲಾ ಇದೇ ಪದಗುಚ್ಛವನ್ನು ಬಳಸುತ್ತಿದ್ದರು) ಅಲ್ಲಿಂದ ಪ್ರಾರಂಭವಾದ ಆ ಎರಡೂ ಕುಟುಂಬಗಳ ಸಖ್ಯ ಬಹಳ ಕಾಲ ಮುಂದುವರೆದಿತ್ತು. ರಾಜೀವ್ ಗಾಂಧಿಯನ್ನು ಮದುವೆಯಾಗುವುದಕ್ಕೆ ಸೋನಿಯಾ ಇಟಲಿಯಿಂದ ಹೊರಟು 1968ರ ಜನವರಿ 13ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಸೋನಿಯಾಳನ್ನು ರಿಸೀವ್ ಮಾಡಿದ್ದು ಇದೇ ಅಮಿತಾಬ್ ಬಚ್ಚನ್. ಸೋನಿಯಾಳಿಗೆ ಭಾರತೀಯ ಭಾಷೆ, ಸಂಸ್ಕೃತಿ, ಸಂಪ್ರದಾಯ, ರೂಢಿಪದ್ಧತಿಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ, ಕಲಿಯುವುದಕ್ಕೆ ಅನುಕೂಲವಾಗಲೆಂದು ಆಕೆಯನ್ನು ಅಮಿತಾಬ್ ಬಚ್ಚನ್ ಮನೆಯಲ್ಲೇ ಇರಿಸಿದ್ದರು ಇಂದಿರಾ ಗಾಂಧಿ. 1985ರಲ್ಲಿ ಒಂದು ಸಂದರ್ಶನದಲ್ಲಿ ಸೋನಿಯಾ ತೇಜಿ ಆಂಟಿ ನನ್ನ ಮೂರನೇ ಅಮ್ಮ. ಮೊದಲನೆಯವರು ನನ್ನ ಇಟಲಿ ಅಮ್ಮ, ಎರಡನೇಯವರು ಇಂದಿರಾ ಗಾಂಧಿ. ಅಮಿತ್ (ಅಮಿತಾಬ್ ಬಚ್ಚನ್) ಮತ್ತು ಬಂಟಿ (ಅಮಿತಾಬ್ನ ಸಹೋದರ) ನನ್ನ ಸಹೋದರರು ಎಂದಿದ್ದರು ಎಂದರೆ ಅವೆರಡೂ ಕುಟುಂಬಗಳ ನಡುವಿನ ಬಾಂಧವ್ಯ ಅರ್ಥ ಮಾಡಿಕೊಳ್ಳಬಹುದು.
ನೆಹರೂ ಹರಿವಂಶ್ರನ್ನು ಅಲಹಬಾದ್ನಿಂದ ದೆಹಲಿಗೆ ಕರೆತಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಒಬ್ಬ ವಿಶೇಷಾಧಿಕಾರಿಯನ್ನಾಗಿ ನೇಮಿಸಿದ್ದರು. ಅಮಿತಾಬ್ ಬಚ್ಚನ್ ಕೂಡ ಬಾಲಿವುಡ್ ಚಿತ್ರಲೋಕದಲ್ಲಿ ಗಟ್ಟಿಯಾಗಿ ತಳವೂರುವುದಕ್ಕೂ ಇಂದಿರಾಗಾಂಧಿ ಕುಟುಂಬ ಬಹಳವಾಗಿ ಸಹಕರಿಸಿದ್ದು ಗುಟ್ಟಾಗಿ ಏನೂ ಉಳಿದಿಲ್ಲ. ಅದಕ್ಕೆ ಪ್ರತಿಯಾಗಿ ಬಚ್ಚನ್ ಕುಟುಂಬ ಕೂಡ ನೆಹರೂ ಕುಟುಂಬದ ರಾಜಕೀಯಕ್ಕೆ ಬೆಂಬಲವಾಗಿ ನಿಂತಿದ್ದೂ ಅಷ್ಟೇ ಹಸಿ ಹಸಿಯಾಗಿದೆ. ಒಂದು ಉದಾಹರಣೆ ಕೊಡಬೇಕೆಂದರೆ 1975ರಲ್ಲಿ ಇಂದಿರಾ ದೇಶದ ಮೇಲೆ ತುತರ್ುಪರಿಸ್ಥಿತಿಯನ್ನು ಹೇರಿ ಇಡೀ ಜನಕೋಟಿಯ ಮೂಲಭೂತ ಹಕ್ಕುಗಳನ್ನೇ ಕಿತ್ತುಕೊಂಡು ಚಳವಳಿಕಾರರನ್ನು, ಬುದ್ದಿಜೀವಿಗಳನ್ನು, ವಿರೋಧ ಪಕ್ಷದವರನ್ನು ಹಿಡಿದು ಜೈಲಿಗಟ್ಟುತ್ತಿದ್ದಾಗ ಇಡೀ ದೇಶಕ್ಕೆ ದೇಶವೇ ಇಂದಿರಾಗಾಂಧಿಯ ಸವರ್ಾಧಿಕಾರವನ್ನು ವಿರೋಧಿಸಿತ್ತು. ಆಗ ತುತರ್ುಪರಿಸ್ಥಿತಿಯನ್ನು ಬೆಂಬಲಿಸುತ್ತಾ ಇಂದಿರಾ ಗಾಂಧಿಯ ಬೆನ್ನಿಗೆ ನಿಂತ ಕೆಲವೇ ಬುದ್ಧಿಜೀವಿ(!)ಗಳಲ್ಲಿ ಈ ಹರಿವಂಶ್ ಬಚ್ಚನ್ ಕೂಡ ಒಬ್ಬರು! ಅದಕ್ಕೆ ಕೃತಜ್ಞತೆಯಾಗಿ ಇಂದಿರಾ 1976ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ದಯಪಾಲಿಸಿದರು! ಮತ್ತದಕ್ಕೆ ಕೃತಜ್ಞತೆಯಾಗಿ ಅಮಿತಾಬ್ ಬಚ್ಚನ್ ತುತರ್ುಪರಿಸ್ಥಿತಿ ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ, ಅದರಲ್ಲೂ ವಿಶೇಷವಾಗಿ ಸಂಜಯ್ ಗಾಂಧಿ ಪರವಾಗಿ ಪ್ರಚಾರ ಮಾಡಿದರು! 1984ರಲ್ಲಿ ಇಂದಿರಾ ಗಾಂಧಿಯ ಕೊಲೆಯಾದ ಮೇಲೆ ರಾಜೀವ್ಗಾಂಧಿ ತನ್ನ ಭವಿಷ್ಯದ ರಾಜಕೀಯ ತಂಡದಲ್ಲಿ ಅಮಿತಾಬ್ ಹೆಸರನ್ನೂ ಸೇರಿಸಿಕೊಂಡಿದ್ದರು. (ಅಮಿತಾಬ್ ಬಚ್ಚನ್ ಎರಡು ವರ್ಷದ ಹಾಗೂ ರಾಜೀವ್ಗಾಂಧಿ ನಾಲ್ಕು ವರ್ಷದ ಹುಡುಗರಾಗಿದ್ದಾಗಿನಿಂದಲೂ ಅವರಿಬ್ಬರೂ ಸ್ನೇಹಿತರಾಗೇ ಇದ್ದವರು) ಆದರೆ, ಇಂದಿರಾ ನಿರ್ಗಮನದ ನಂತರ ರಾಜೀವ್ ಬೋಫೋಸರ್್ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡರು. ಇಂದಿರಾ ಗಾಂಧಿ ಹತ್ಯೆಗೆ ಇಡೀ ಸಿಖ್ ಸಮುದಾಯವನ್ನು ಹೊಣೆಗಾರರನ್ನಾಗಿ ಮಾಡಿ ದೆಹಲಿ ಮತ್ತು ಇಡೀ ಉತ್ತರ ಭಾರತದಲ್ಲಿ ಸಿಖ್ಖರನ್ನು ಕಾಂಗ್ರೆಸ್ಸಿಗರು ಕಂಡಲ್ಲಿ ಕೊಚ್ಚಿ ಹಾಕಿದ್ದನ್ನು ನೆನಪಿಸಿಕೊಂಡು ಒಬ್ಬ ಸಿಖ್ ತಾಯಿಯ ಮಗನಾಗಿ ಅಮಿತಾಬ್ ಬಚ್ಚನ್ ಕಾಂಗ್ರೆಸ್ಗೆ, ರಾಜೀವ್ಗೆ ಗುಡ್ಬೈ ಹೇಳಿದರು.
ಅಲ್ಲಿಂದಾಚೆಗೆ ಅಮಿತಾಬ್ ಮೇಲ್ನೋಟಕ್ಕೆ ಸಕ್ರಿಯ ರಾಜಕಾರಣದಿಂದ ದೂರವಿದ್ದಂತೆ ಕಂಡರೂ ಆಂತರ್ಯದಲ್ಲಿ ರಾಜಕಾರಣದಿಂದ ನಿರ್ಗಮಿಸಿರಲಿಲ್ಲ. ಮರಾಠಿ ಅಭಿಮಾನ, ಶಿವಾಜಿ ಭಕ್ತ ಮುಂತಾದ ಮುಖವಾಡದಲ್ಲಿ ಮುಸ್ಲೀಮರ ವಿರುದ್ಧ ಬೆಂಕಿಯುಗುಳುತ್ತಿದ್ದ ಭಾಳ್ ಠಾಕ್ರೆ ಜೊತೆ ಅಮಿತಾಬ್ ನಂಟಸ್ತಿಕೆ ಮುಂದುವರೆದಿತ್ತು. 1996ರಲ್ಲಿ ಅಂದಿನ ಪ್ರಧಾನಿ ದೇವೇಗೌಡ ಮತ್ತು ಭಾಳ ಠಾಕ್ರೆ ನಡುವಿನ ಮೀಟಿಂಗ್ ಅನ್ನು ಅಮಿತಾಬ್ ತನ್ನ ಮನೆಯಲ್ಲಿ ಸಂಘಟಿಸಿದ್ದರು. ಈಗಲೂ ಕೂಡ ಆಗಾಗ ಭಾಳ್ ಠಾಕ್ರೆಯೊಂದಿಗೆ ಜೊತೆಗೂಡಿ ಸಿನಿಮಾ ನೋಡುತ್ತಿತ್ತೇವೆ ಎಂದು ಅಮಿತಾಬ್ ಬಚ್ಚನ್ ಅವರೇ ತಮ್ಮ ಬ್ಲಾಗ್ನಲ್ಲಿ ಬರೆದುಕೊಂಡಿದ್ದಾರೆ. ದೇವೇಗೌಡರೊಂದಿಗೆ ಸ್ನೇಹ ಹಸ್ತ ಚಾಚುವುದಕ್ಕೂ ಅಮಿತಾಬ್ಗೆ ಬಿಸಿನೆಸ್ನ ಲೆಕ್ಕಾಚಾರವಿತ್ತು. ದೇವೇಗೌಡರ ಮೂಲಕ ಅಂದಿನ ಕನರ್ಾಟಕದ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್ರಿಗೆ ಹತ್ತಿರವಾಗಿ ಬೆಂಗಳೂರಿನಲ್ಲಿ ವಿಶ್ವಸುಂದರಿ ಸ್ಪಧರ್ೆ ಏರ್ಪಡಿಸಿ ಹೊಸದಾಗಿ ಸ್ಥಾಪಿಸಿದ್ದ ಂಟಣಚಿಛ ಃಚಿಛಿಛಿಚಿಟಿ ಅಠಡಿಠಿಠಡಿಚಿಣಠಟಿ ಐಣಜ (ಂಃಅಐ) ಕಂಪೆನಿಗೆ ಭಾರಿ ಲಾಭ ಮಾಡುವ ಲೆಕ್ಕಾಚಾರವನ್ನು ಅಮಿತಾಬ್ ಮಾಡಿದ್ದರು. ಆದರೆ, ಅದು ಯಶಸ್ವಿಯಾಗದೇ ಅಮಿತಾಬ್ ಭಾರಿ ನಷ್ಟ ಮಾಡಿಕೊಂಡು ಪರದಾಡಬೇಕಾಯಿತು. ಅಸಲಿಗೆ ಎಬಿಸಿಎಲ್ ಕಂಪೆನಿ ಭಾರತದ ಮೊದಲ ಮನರಂಜನಾ ಕಂಪೆನಿ. ಈ ಕಂಪೆನಿಯ ಮೂಲಕ 2000ದ ಹೊತ್ತಿಗೆ ಒಂದು ಸಾವಿರ ಕೋಟಿ ಟನರ್್ಓವರ್ ಮಾಡುವ ಭರ್ಜರಿ ಪ್ಲಾನ್ ಅನ್ನು ಅಮಿತಾಬ್ ಹೊಂದಿದ್ದರು. ಆದರೆ, ವಿಶ್ವಸುಂದರಿ ಸ್ಪಧರ್ೆಯ ವೈಫಲ್ಯ, ಅದು ನಿಮರ್ಿಸಿದ ಸಾಲು ಸಾಲು ಚಿತ್ರಗಳು ಮಕಾಡೆ ಮಲಗಿದ್ದು ಎಲ್ಲಾ ಸೇರಿಕೊಂಡು ದಿವಾಳಿಯೇಳುವ ಹಂತಕ್ಕೆ ಬಂದಿತು. ಕೊನೆಗೆ ಒಂದು ಕೋಟಿ ರೂಪಾಯಿಯೂ ಬೆಲೆ ಬಾಳದ ಅಮಿತಾಬ್ ಹೆಂಡತಿ ಜಯಾ ಬಚ್ಚನ್ ಒಡೆತನದ ಸರಸ್ವತಿ ಆಡಿಯೋ ವಿಜುಯಲ್ಸ್ ಅನ್ನು ಏಳು ಕೋಟಿ ಕೊಟ್ಟು ಕೊಂಡುಕೊಳ್ಳುವ ಮೂಲಕ ಎಬಿಸಿಎಲ್ ಕಂಪೆನಿಯನ್ನು ಮುಳುಗಿಸಿ ಹೆಂಡತಿಯ ಮಡಿಲಿಗೆ ದುಡ್ಡು ಸುರಿಯುವ ವ್ಯವಸ್ಥೆಯನ್ನೂ ಅಮಿತಾಬ್ ಮಾಡಿದರು. ಇಂತಹ ಹತ್ತು ಹಲವು ಬಿಸಿನೆಸ್ ತಂತ್ರಗಳ ಮೂಲಕವೇ ಅಮಿತಾಬ್ ಎಬಿಸಿಎಲ್ ಕಂಪೆನಿ ಮುಳುಗಿಸಿ ತಮ್ಮ ತಿಜೋರಿ ತುಂಬಿಕೊಂಡರು.
ವಾಸ್ತವದಲ್ಲಿ ಈ ಬಿಕ್ಕಟ್ಟೇ ಅಮಿತಾಬ್ ಬೇರೊಂದು ರಾಜಕೀಯ ಪಕ್ಷವನ್ನು, ಬೇರೊಬ್ಬ ರಾಜಕೀಯ ನಾಯಕನ ಆಶ್ರಯ ಪಡೆಯುವುದಕ್ಕೆ ಅವರನ್ನು ಪ್ರೇರೇಪಿಸಿತು. ಈ ಬಾರಿ ಅವರಿಗೆ ಸಿಕ್ಕಿದ್ದು ಸಮಾಜವಾದಿ ಪಕ್ಷ ಮತ್ತದರ ನಾಯಕ ಅಮರ್ ಸಿಂಗ್. ಅಮರ್ಸಿಂಗ್ ಮತ್ತು ಸಮಾಜವಾದಿ ಪಕ್ಷಕ್ಕೂ ಅಮಿತಾಬ್ನಂತಹ ಒಬ್ಬ ಸೆಲಬ್ರೆಟಿಯ ಅವಶ್ಯಕತೆಯೂ ಇತ್ತು. ಹಾಗಾಗಿ ಅದೊಂದು ಅವಕಾಶವಾದಿ ಸ್ನೇಹ ಎಂಬುದರಲ್ಲಿ ಎರಡು ಮಾತಿಲ್ಲ. ಅಮಿತಾಬ್ ಹೆಂಡತಿ ಜಯಾ ಬಚ್ಚನ್ಗೆ ಸಮಾಜವಾದಿ ಪಕ್ಷ ರಾಜ್ಯ ಸಭೆಯ ಸೀಟು ದಯಪಾಲಿಸಿದರೆ ಅಮಿತಾಬ್ರಿಂದ ಸಮಾಜವಾದಿ ಪಕ್ಷ ಬಹಳ ಪ್ರಚಾರ, ವರ್ಚಸ್ಸನ್ನೂ ಗಳಿಸಿಕೊಂಡಿತು. ಸಮಾಜವಾದಿ ಪಾಟರ್ಿಯಲ್ಲಿ ಗಟ್ಟಿಯಾಗಿ ತಳವೂರಿದ್ದ ಜಯಾ ಮತ್ತು ಬಚ್ಚನ್ 2004ರ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಬೆಂಕಿಯುಗುಳಿದ್ದೂ ಆಯಿತು, ಅದರ ವಿರುದ್ಧ ರಾಹುಲ್ ಗಾಂಧಿ ಕಿಡಿಕಾರಿದ್ದೂ ಆಯಿತು.
ಈಗ ಸಮಾಜವಾದಿ ಪಕ್ಷದಲ್ಲೂ ಪರಿಸ್ಥಿತಿ ಬದಲಾಗಿದೆ. ಅಮಿತಾಬ್ ಮತ್ತು ಜಯಾರ ರಾಜಕೀಯ ರಕ್ಷಕನಂತಿದ್ದ ಪಕ್ಷದ ಪ್ರಧಾನ ಕಾರ್ಯದಶರ್ಿ ಹಾಗೂ ಹಿರಿಯ ನಾಯಕ ಅಮರ್ ಸಿಂಗ್ ಪಕ್ಷದಿಂದ ಹೊರನಡೆದಿದ್ದಾರೆ. ಅಮರ್ ಸಿಂಗ್ ಇಲ್ಲದೇ ಮುಲಾಯಂ ಸಿಂಗ್ ಯಾದವ್ ಎದುರು ತಮ್ಮ ಬೇಳೆ ಕಾಳು ಬೇಯುವುದಿಲ್ಲ ಎಂಬುದು ಅಮಿತಾಬ್ ಬಚ್ಚನ್ಗೂ ಗೊತ್ತಿದೆ. ಅದೂ ಅಲ್ಲದೇ ಜಯಾ ಬಚ್ಚನ್ನ ರಾಜ್ಯಸಭಾ ಸದಸ್ಯತ್ವದ ಅವಧಿ ಇನ್ನೇನು ಮೂರು ತಿಂಗಳಲ್ಲಿ ಮುಗಿಯಲಿದೆ. ಅಷ್ಟರೊಳಗಾಗಿ ಯಾವುದಾದರೊಂದು ಹೊಸ ರಾಜಕೀಯ ಪಕ್ಷದ, ಹೊಸ ರಾಜಕೀಯ ನಾಯಕನ ಪಂಚೆಯಡಿಯಲ್ಲಿ ಆಶ್ರಯ ಪಡೆದುಕೊಳ್ಳಬೇಕು. ಈ ಬಾರಿ ಅಮಿತಾಬ್ಗೆ ಸಿಕ್ಕಿದ್ದು ನರೇಂದ್ರ ಮೋದಿ! ಗುಜರಾತ್ನ ಅಂಬಾಸಿಡರ್ ಆಗುವುದರ ಹಿಂದೆ, ಮೋದಿಗೆ ಸ್ನೇಹ ಹಸ್ತ ಚಾಚುವುದರ ಹಿಂದೆ ಅಮಿತಾಬ್ಗೆ ಸ್ಪಷ್ಟವಾದ ರಾಜಕೀಯ, ವ್ಯವಹಾರಿಕ ಲೆಕ್ಕಾಚಾರವಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಅಧ್ವಾನಿಯ ವಿರುದ್ಧ ಸ್ಪಧರ್ಿಸಿ ಅವರಿಗೆ ಬೆವರಿಳಿಸಿದ ಮಲ್ಲಿಕಾ ಸಾರಾಭಾಯಿ ಎಂಬ ಖ್ಯಾತ ಡಾನ್ಸರ್ ಪ್ರಕಾರ ಅಮಿತಾಬ್ ಬಚ್ಚನ್ ಚಿತ್ರಗಳಿಗೆ ಗುಜರಾತ್ನಲ್ಲಿ ತೆರಿಗೆ ವಿನಾಯಿತಿ ಕೊಡುವುದು, ಬಹುದಿನದಿಂದ ಅಮಿತಾಬ್ ಸ್ಥಾಪಿಸಬೇಕೆಂದಿರುವ ಫಿಲ್ಮ್ ಸಿಟಿಗಾಗಿ ಗುಜರಾತ್ನಲ್ಲಿ ಸಾವಿರಾರು ಎಕರೆ ಜಮೀನು ಗಿಟ್ಟಿಸಿಕೊಳ್ಳುವುದು ಹಾಗೂ ತನ್ನ ಹೆಂಡತಿ ಜಯಾ ಬಚ್ಚನ್ಗೆ ರಾಜ್ಯಸಭಾ ಸೀಟು ಕೊಡುವುದು - ಈ ಮೂರು ಕೊಡುಗೆಗಳಿಗೆ ಪ್ರತಿಯಾಗಿ ಅಮಿತಾಬ್ ಬಚ್ಚನ್ ಗುಜರಾತ್ನ ರಾಯಭಾರಿಯಾಗುವುದು - ಇದು ಒಟ್ಟಾರೆ ಡೀಲ್ನ ಸಾರಾಂಶ.
ಅಮಿತಾಬ್ ಬಚ್ಚನ್ ರಾಜೀವ್ ಮತ್ತು ಕಾಂಗ್ರೆಸ್ ಸಖ್ಯ ತೊರೆದು ದೇವೇಗೌಡರ ಅಂಗಳದಲ್ಲಿ ಕಾಣಿಸಿಕೊಂಡಾಗ, ಅಲ್ಲಿಂದಲೂ ಕಾಲ್ತೆಗೆದು ಅಮರ್ ಸಿಂಗ್ನ ಮಡಿಲಿಗೆ ಬಿದ್ದಾಗ ಪ್ರಾಯಶಃ ಅಮಿತಾಬ್ ಅಭಿಮಾನಿಗಳು ಪ್ರಾಯಶಃ ಅಷ್ಟೊಂದು ಬೇಸರಗೊಂಡಿರಲಿಲ್ಲ ಅನ್ನಿಸುತ್ತೆ. ಈಗ ದುಡ್ಡಿನಾಸೆಗಾಗಿ, ಅಧಿಕಾರಕ್ಕಾಗಿ ನರಹತ್ಯೆಯನ್ನೇ ಕಸುಬು ಮಾಡಿಕೊಂಡಿರುವ ಮೋದಿಯೊಂದಿಗೆ ಕೈಜೋಡಿಸಿದ್ದು ಮಾತ್ರ ನಿಜಕ್ಕೂ ಬೇಸರ ತರಿಸಿದೆ. ಅದು ಅಮಿತಾಬ್ ಎಂಬ ಅಮೋಘ ಮೇರುನಟನೊಳಗಿದ್ದ ಒಬ್ಬ ಕ್ಷುಲ್ಲಕ ಮನುಷ್ಯನ್ನು ಮತ್ತಷ್ಟು ನಿಚ್ಚಳವಾಗಿ ಹೊರ ಜಗತ್ತಿಗೆ ತೋರಿಸಿದೆ.
- ಕುಮಾರ್ ಬುರಡಿಕಟಿ
No comments:
Post a Comment
Thanku