Friday, September 24, 2010





  • ಶಿವನಗೌಡನ ಅಂತ್ಯ ಆರಂಭ..


  • ಹೊತ್ತಿ ಉರಿದ ದೀಪ ಆರಿತು..

ಹಿರಿಯ, ಕಿರಿಯ ಅಧಿಕಾರಿಗಳು ಹಾಗೂ ಮಾಧ್ಯಮದವರ ಜೊತೆ ನಾಲ್ಕು ಮಾತನಾಡುವ ನೈತಿಕತೆ ಇಲ್ಲದ ಶಿವನಗೌಡನನ್ನು ಇಲ್ಲಿಯವರೆಗೆ ಸಂಪುಟದಲ್ಲಿ ಮಂತ್ರಿಯಾಗಿ ಇಟ್ಟುಕೊಂಡದ್ದೇ ದೊಡ್ಡ ಮಾತು. ಈ ಕುರಿತು ಸಾಮಾನ್ಯರ ಜನತೆಯ ಪರವಾಗಿ ಒಂದು ವಿಶ್ಲೇಷಣಿ.
ಕನರ್ಾಟಕದ ಅನ್ಷರಸ್ಥ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದೇವದುರ್ಗ ಲಾಟರಿ ಮಂತ್ರಿ ಶಿವನಗೌಡನ ತವರು ಮನೆ.ಯಾಕಪ್ಪ ಂಅ, ಏನೋ. ಂಇಇ, ಲೇ ಎಇ, ಓಡಲೇ ಅಕ, ಇನ್ನು ಇವರೆಲ್ಲರಿಗಿಂತ ಕೆಳಗಿನ ದಜರ್ೆಯ ಅಧಿಕಾರಿಗಳಂತು ಕೂಡೆಂದರೆ, ಕೂಡಬೇಕು. ನಿಲ್ಲೆಂದರೆ ನಿಲ್ಲಬೇಕು. ಇದು ಲಾಟರಿ ಶಿವನಗೌಡನ ಪೊಲಿಟಿಕಲ್ ಖದರ್! ಇದರಿಂದ ದೇವದುರ್ಗದಲ್ಲಿ ಪತ್ರಕರ್ತರು ಹೊರತಾಗಿಲ್ಲ. ಯಾರಾದರೂ ಪತ್ರಿಕೆಯವರು ವಿರುದ್ಧ ಸುದ್ದಿಯನ್ನು ಬರೆದರೆ, ಪತ್ರಿಕಾಗೋಷ್ಟಿಯಲ್ಲಿ ಪ್ರಶ್ನೆಯನ್ನು ಕೇಳಿದರೆ, ನಾನು ಏನನ್ನು ಹೇಳುತ್ತೇನೆ. ಅದನ್ನು ಮಾತ್ರ ಬರೆದುಕೊಳ್ಳಿ. ಜಾಸ್ತಿ ವಾದ-ವಿವಾದ ಮಾಡಬೇಡಿ ಎಂದು ಗರಂ ಆಗಿಯೇ ಕಟ್ಟಪ್ಪಣೆ ನೀಡುತ್ತಾನೆ.ಪತ್ರಿಕೆಯವರನ್ನು ಎದುರುಹಾಕಿಕೊಂಡರೆ, ಏನೆಲ್ಲ ನಡೆಯಬಹುದು ಎಂಬುದಕ್ಕೆ ತನ್ನ ಇತ್ತೀಚಿನ ಲೆಟೆಸ್ಟ್ ಗ್ರಂಥಾಲಯ ಹಗರಣವೇ ಮೂಕಸಾಕ್ಷಿ.ಚುನಾವಣೆಗಿಂತ ಮುಂಚೆ ಶಿವನಗೌಡ ವೆಂಕಟೇಶ ನಾಯಕನ ರಾಜಕೀಯದಿಂದ ತಿರುಗುವ ಒಂದು ನಿಯತ್ತಿನ ಪ್ರಾಣಿ. ಅದಕ್ಕಾಗಿ ವೆಂಕಟೇಶ ನಾಯಕ ನಿಯತ್ತಿನ ಪ್ರಾಣಿಗೆ ಗೌರವ ನೀಡಬೇಕೆಂದು ಶಿವನಗೌಡನನ್ನು ತಾ.ಪಂಗೆ ಅಧ್ಯಕ್ಷ.ನನ್ನಾಗಿ ಮಾಡಿದನು. ಆ ಅವಧಿಯಲ್ಲಿ ಲೆಕ್ಕವಿಲ್ಲದಷ್ಟು ಅನುದಾನಗಳನ್ನು ತಾಲೂಕಿನಾಧ್ಯಂತ ಈ ಮಹಾಭೂಪ ನುಂಗಿ ಹಾಕಿದ. ಇದಕ್ಕೆಲ್ಲ ಸಹಕಾರ ಬೆಂಬಲವೇ ಅವರ ತಾತ. ಆತನು ಆಗ ರಾಯಚೂರು ಎಂ.ಪಿ.ಒಟ್ಟಾರೆ ಎಲ್ಲ ಕುತಂತ್ರಗಳಿಂದ ಸಾಕಷ್ಟು ಹಣ ಮಾಡಿದ ಶಿವನಗೌಡ ತಾನು ಮುಂದೊಂದು ದಿನ ಮಂತ್ರಿಯಾಗುತ್ತೀನೆಂದು ಕನಸನ್ನುಕಂಡಿದ್ದಿಲ್ಲ. ದುರಾದೃಷ್ಟಕ್ಕೆ ರಾಜಕೀಯದ ಏರುಪೇರಿನಲ್ಲಿ ಶಾಸಕನಾಗಿ ನಂತರ ಆಪರೇಷನ್ ಕಮಲಕ್ಕೆ ಬಲಿಯಾಗಿ ಲಾಟರಿ ಮಂತ್ರಿಯು ಆದನು. ಒಮ್ಮಿಂದೊಮ್ಮೆಲೆ ಮಂತ್ರಿಯಾಗುತ್ತಿದ್ದಂತೆ ದಲಿತರು ಸಿಟ್ಟು ರಟ್ಟೆಗೆ ಬಂದರೆ, ಸೂಳೆಮಕ್ಕಳು ಚೂರು ಚೂರು ಎಂಬ ಘೋಷಣೆಯನ್ನು ಉಲ್ಟಾ ಮಾಡಿಕೊಂಡು ಶಿವನಗೌಡನ ಸಿಟ್ಟು ರಟ್ಟೆಗೆ ಬಂದರೆ ಅಧಿಕಾರಿಗಳೆಲ್ಲ ಚೂರು ಚೂರು ಎಂದು ಆಡಳಿತ ಮಾಡಲು ಶುರುಮಾಡಿದನು. ಇವನಿಗೆ ವಿರೋಧವಾಗಿ ತಾಲೂಕಿನಲ್ಲಿ ಯಾವೊಂದು ಕಾಂಗ್ರೇಸ್ ಜೆ.ಡಿ.ಎಸ್ಗಳು ಹೇಳಿಕೆಗಳನ್ನು ಸಹ ನೀಡಲಿಲ್ಲ. ದೇವದುರ್ಗದಲ್ಲಿ ಮುಖಂಡರೆನಿಸಿಕೊಂಡ ಅರ್ಧಜನ ಈಗಾಗಲೇ ಶಿವನಗೌಡನಿಗೆ ಶರಣಾಗತಿ ಹೊಂದಿದ್ದಾರೆ. ಇನ್ನುಳಿದವರು ತೆರೆಮರೆಯಲ್ಲಿಯೇ ತಮ್ಮ ತಮ್ಮ ಕೆಲಸಗಳನ್ನು ಮಾಡಿಕೊಂಡು ಹೋಗತೊಡಗಿದ್ದಾರೆ.ಆದರೆ, ಶಿವನಗೌಡನನ್ನು ಆಯ್ಕೆ ಮಾಡಿದ್ದು ತಾಲೂಕಿನ ಸಾಮಾನ್ಯ ಜನತೆ. ಅವರು ಹಾಕಿದ ಮತದಿಂದ 2ಬಾರಿ ಗೆದ್ದಿರುವುದು. ಅದನ್ನು ಮರೆಯಬಾರದು. ಇದೆಲ್ಲವನ್ನು ಬಿಟ್ಟು, ನಾನು ಮಂತ್ರಿ ಐದೀನಿ, ಊರ ತುಂಬಾ ಬ್ರಾಂಡಿ ಅಂಗಡಿಗಳನ್ನು ತೆಗೆದು ಬಡವರ ರಕ್ತ ಹೀರುತ್ತೀನಿ. ತಾಲೂಕಿನ ತುಂಬಾ ನಾನು ಏನನ್ನಾದರೂ ಮಾಡ್ತೀನಿ ಎಂದರೆ, ಅಂಬೇಡ್ಕರ್ ಸಾಹೇಬರು ಸಂವಿಧಾನವನ್ನೇನು ನಿಮ್ಮ ಮನೆಯಲ್ಲಿ ಬರೆದಿಲ್ಲ. ನಿನಗಾಗಿ ವಿಶೇಷ ಕಾನೂಗಳನ್ನೇನು ಮಾಡಿಲ್ಲ. ಇಲ್ಲಿ ನಿನಗೂ ಒಂದೇ ಕಾನೂನು, ಸಾಮಾನ್ಯ ಪ್ರಜೆಗೂ ಒಂದೇ ಕಾನೂನು. ಅದನ್ನು ಮೊದಲು ತಿಳಿಯಬೇಕಾಗಿದೆ.ಇಲ್ಲವಾದಲ್ಲಿ ಮುಂದಿನ ದಿನ ಶಿವನಗೌಡ ಎಂಬ ಹೆಸರು ತಾಲೂಕಿನಲ್ಲಿ ಹೇಳಹೆಸರಿಲ್ಲದಂತೆ ಹೋಗುವದರಲ್ಲಿ ಅನುಮಾನವಿಲ್ಲ. (ಹೆಚ್ಚಾದದ್ದು ನುಚ್ಚು ಆಗಲೇಬೇಕು)ಇನ್ನು ದೇವದುರ್ಗ ತಾಲೂಕಿನ ಎಲ್ಲಾ ಅಧಿಕಾರಿಗಳೇ ನಿಮ್ಮ ಆತ್ಮಸಾಕ್ಷಿಗಾಗಿ ಪ್ರಾಮಾಣಿಕ ಕೆಲಸವನ್ನು ಮಾಡಿ, ಬಡಬಗ್ಗರ ಸಮಸ್ಯೆಗಳನ್ನು ಈಡೇರಿಸಿ, ಅದುಬಿಟ್ಟು ಶಿವನಗೌಡ ದಬ್ಬಾಳಿಕೆಗೆ ಹೆದರಿ, ಇಲ್ಲವೇ ಅವನು ಹಾಕುವ ಎಂಜಲಿನಿಂದ ಹೋದರೆ, ನೀವುಗಳು ಕೂಡ ಸಾಮಾನ್ಯ ಜನತೆಗೆ ದ್ರೋಹ ಬಗೆದಂತಾಗುತ್ತದೆ.ಇಂದು ರಾಜ್ಸಸಕರ್ಾರದ ಒಬ್ಬ ಮಂತ್ರಿಯೆಂದೆನಿಸಿಕೊಂಡಿರುವ ಶಿವನಗೌಡನ ಕುರಿತು ಈಗಾಗಲೇ ಹತ್ತು ಹಲವು ಪತ್ರಿಕೆಗಳು ಸುಮಾರು ಬಾರಿ ವರದಿಯನ್ನು ಮಾಡಿವೆ. ಪತ್ರಿಕೆಯ ಸುದ್ದಿಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಸುಧಾರಣೆಯಾಗುವದಕ್ಕೆ ಪ್ರಯತ್ನಿಸಬೇಕು. ಅದನ್ನು ಬಿಟ್ಟು ಪತ್ರಿಕೆಗಳ ಮೇಲೆ ಗೂಬೆ ಕೂರಿಸುವುದು. ನಾನು ಮಾಡುವುದೇ ಸರಿ, ಎಂದರೆ ಅದು ಮೂರ್ಖತನವಾಗುತ್ತದೆ.



ಮಾನ್ಯ ಶಿವನಗೌಡರು ಅಧಿಕಾರಕ್ಕೆ ಬಂದಾಗಿನಿಂದ ತಾಲೂಕಿನ 28ಪಂಚಾಯಿತಿಗಳ ಆಡಳಿತವನ್ನು ತಮ್ಮ ಹಿಂಬಾಲಕರ ಹಿಡಿತಕ್ಕೆ ನೀಡಿದ್ದಾರೆ! ಅದರಂತೆ ಸಚಿವರ ಕೃಪಕಟಾಕ್ಷದಿಂದ ಹಿಂಬಾಲಕರೆಲ್ಲರೂ ಪಂಚಾಯತಿಯ ಅಧಿಕಾರಿಗಳನ್ನು ಹೆದರಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಿಲ್ಲ್ನ್ನು ಎತ್ತುತ್ತಿದ್ದಾರೆ.ಅದಕ್ಕೊಂದು ನಿದರ್ಶನವಾಗಿ, ಈ ಬಾರಿ ನಾವುಗಳು ಫಲಕನರಮರಡಿ ಗ್ರಾಮಪಂಚಾಯತಿಯನ್ನು ಆಯ್ಕೆ ಮಾಡಿಕೊಂಡಿದ್ದೇವೆ.ಫಲಕನಮರಡಿ ಎಂದರೆ, ಹೆಚ್ಚು ಕಡಿಮೆ ಎಲ್ಲರಿಗೆ ನೆನಪಿಗೆ ಬರುವುದು ಮೂಡಲಗುಂಡ ಸಿದ್ದನಗೌಡನ ಹೆಸರು. ಯಾಕೆಂದರೆ, ಈತನು 2ದಶಕಗಳ ಕಾಲ ಪಂಚಾಯತಿಯೊಂದನ್ನು ತನ್ನಿಡಿತದಲ್ಲಿಟ್ಟುಕೊಂಡು ಆಡಳಿತ ನಡೆಸಿದಾತ. ಯಾರಾದರೂ ಅಧಿಕಾರಿಗಳು, ಸಣ್ಣಪುಟ್ಟ ರಾಜಕಾರಣಿಗಳು ಫಲಕನಮರಡಿಯ ಗಡಿಯೊಳಗೆ ನುಸುಳಬೇಕಾದರೆ, ಮೊದಲಿಗೆ ಸಿದ್ದನಗೌಡನ ಅಪ್ಪಣೆ ಪಡೆದು ಬರಬೇಕಿತ್ತು. ಇಲ್ಲವಾದರೆ, ಅನಾಹುತ ಕಟ್ಟಿಟ್ಟ ಬುತ್ತಿ. ಅಂತಹದ್ದೊಂದು ಸವರ್ಾಧಿಕಾರತ್ವ ಈ ಫಲಕನಮರಡಿಯಲ್ಲಿತ್ತು. (ಇಲ್ಲಿನ ಜನರೇನು ಅಂದು-ಇಂದು ನಿಟ್ಟುಸಿರಿನಿಂದ ಯಾರೊಬ್ಬರು ಜೀವನ ಸಾಗಿಸುತ್ತಿಲ್ಲ).ಆದರೆ,ಇಂತಹ ಪಲಕನಮರಡಿ ಗ್ರಾಮಪಂಚಾಯತಿಯೂ ಕಳೆದ ಬಾರಿಯ ಚುನಾವಣೆಯಲ್ಲಿ ಸಿದ್ದನಗೌಡನ ಕಪಿಮುಷ್ಠಿಯಿಂದ ಜಾರಿಹೋಯಿತು. ಸಿದ್ದನಗೌಡನನ್ನು ಪಂಚಾಯತಿಯಿಂದ ದೂರವಿಡಲು ಶಿವನಗೌಡನು ಮಾಡಿದ ಎಲ್ಲ ತಂತ್ರಗಳು ಸಫಲವಾದವು. ಕೊನೆಗೆ ಶಿವನಗೌಡ ಆ ಪಂಚಾಯತಿಯಲ್ಲಿ ಬಿಜೆಪಿಯ ಝಂಡವನ್ನು ಕಟ್ಟಿ ತನ್ನ ಹಿಂಬಾಲಕನೊಬ್ಬನಿಗೆ ಆ ಪಂಚಾಯತಿಯ ಉಸ್ತುವಾರಿಯನ್ನು ನೀಡಿದ.ಈಗ ದುರಂತಕ್ಕೆ 6ತಿಂಗಳಲ್ಲಿ ಅಲ್ಲಿನ ಜನರಿಗೆ ಸಿದ್ದನಗೌಡ ಬೇಕು. ಶಿವನಗೌಡನ ಕ್ಯಾಂಡಿಡೇಟ್ಗಳು ಬೇಡ ಎನ್ನುವ ಪರಿಸ್ಥಿತಿ ಎದುರಾಗಿದೆ.ಫಲಕನಮರಡಿ ಪಂಚಾಯಿತಿಯ ಓರ್ವ ಮಹಿಳಾ ಸದಸ್ಯೆಯ ಯಜಮಾನನಾದ ವೆಂಕಟರಾಯಗೌಡ ಎಂಬಾತ ಶಿವನಗೌಡನ ಚೇಲಾ. ಈತನು ಕಳೆದ ಎಂ.ಎಲ್.ಎ ಚುನಾವಣಿಯಲ್ಲಿ ಶಿವನಗೌಡನಿಗೆ ಹಿಂದೆ ತಿರುಗಾಡಿದಾತ. ಅಂದಮಾತ್ರಕ್ಕೆ ಶಿವನಗೌಡ ಎಲ್ಲ ಅಧಿಕಾರವನ್ನು ನನಗೆ ಕೊಟ್ಟಿದ್ದಾನೆ, ನಾನೇ ಶಿವನಗೌಡನಿಗೆ ಅತಿಹೆಚ್ಚು ಮತಗಳನ್ನು ಕೊಟ್ಟದ್ದು ಹಾಗಾಗಿ ಪಂಚಾಯತಿಯಲ್ಲಿ ಏನು ನಡೆದರೂ ನನ್ನನ್ನು ಕೇಳಿ ಮಾಡಬೇಕು, ಇಲ್ಲಿ ನಾನೇ ಅಧ್ಯಕ್ಷ ಎಂದು ಆಗಾಗ ಬೊಗಳೇ ಬಿಡುತ್ತಾನೆ.ಮೂಲತಃ ವೆಂಕಟರಾಯ ಗೌಡ ಫಲಕನಮರಡಿ ಗ್ರಾಮಪಂಚಾಯತಿ ವ್ಯಾಪ್ತಿಯ ಮನುಷ್ಯನಲ್ಲ. ಈತನು ಜಾಡಲದಿನ್ನಿ ಗ್ರಾಮದಿಂದ ಹೆಂಡತಿಯ ಊರಾದ ವಂದಲಿಗೆ ವಲಸೆ ಬಂದಾತ. (ಜೊತೆಯಲ್ಲಿ ಬೇರೆ ಪಕ್ಷದಿಂದ ಬಿಜೆಪಿಗೆ ಜಂಪ್ ಮಾಡಿದಾತ)ಫಲಕನಮರಡಿಯಲ್ಲಿ ಎಲ್ಲ ಬುದ್ದಿವಂತರಿಗಿಂತ ಅತಿಬುದ್ದಿವಂತಿಕೆಯನ್ನು ಪ್ರದಶರ್ಿಸುವುದು ಇವನ ಚಾಳಿ.ಕಳೆದ ಅಕ್ಟೋಬರ್ನಲ್ಲಾದ ನೆರೆಹಾವಳಿಯಲ್ಲಿ ಈತನು ಪಂಚಾಯತಿಗೆ ಬಂದಂಥಹ ಶೇ.50ರಷ್ಟು ಹಣವನ್ನು ಗುಳುಂ ಮಾಡಿದ್ದಾನೆ! ಸಂಪೂರ್ಣ ಮನೆಬಿದ್ದವರಿಗೆ ಪೂರ್ಣ ಪರಿಹಾರ ಕೊಡಿಸುವುದಾಗಿ ಅವರಿಂದ ಹಣವನ್ನು ಲಪಟಾಯಿಸಿದ್ದಾನೆ.ಹೇಳಿಕೇಳಿ ದೇವದುರ್ಗ ತಾಲೂಕು ಮೊದಲಿಗೆ ಹೇಳಿದಂಥೆ ಅನಕ್ಷರಸ್ಥ ತಾಲೂಕು. ಇಲ್ಲಿ ಕಾನೂನು ಬಲ್ಲವರಿಗಿಂತ ನಕಲಿ ಸಂಘಟನೆಗಳ ಮುಖಂಡರಿಗೆ ಹೆಚ್ಚು ಮಹತ್ವ. ಇಂತಹದರಲ್ಲಿ ಹುಚ್ಚನ ಮದುಮೆಯಲ್ಲಿ ಉಂಡವನೇ ಜಾಣ ಎಂಬಂತೆ ವೆಂಕಟರಾಯ ಗೌಡ ಸಿಕ್ಕ ಅವಕಾಶವನ್ನು ಬಳಸಿಕೊಂಡು ಹಗಲು ಲೂಟಿಗೆ ನಿಂತಿದ್ದಾನೆ.ಈಗಾಗಲೇ ಪಲಕನಮರಡಿ ಪಂಚಾಯತಿಯಲ್ಲಿ ಮೋಟಾರ್ ದುರಸ್ಥಿಯ ನೆಪದಲ್ಲಿ 1ಲಕ್ಷ 50ಸಾವಿರ ರೂಗಳನ್ನು ಗುಳುಂ ಮಾಡಿದ್ದಾನೆ! ಒಂದೇ ಮೋಟಾರ್ ಪಂಫ್ಗೆ ಜಿ.ಪಂನಿಂದ ಹಾಗೂ ಪಂಚಾಯತಿಯಿಂದ 2ಬಾರಿ ಬಿಲ್ಲ್ನ್ನು ಎತ್ತಿದ್ದಾನೆ. ಇನ್ನು ಮನೆಗಳ ವಿಷಯದಲ್ಲಿ ಪರಿಶಿಷ್ಟಜಾತಿಗೆ ಸೇರಿದ ರಂಗಮ್ಮ ಗಂಡ ಹಂಪಣ್ಣ, ಮಾಳಮ್ಮ ಗಂಡ ಹನುಮಂತ, ಮರಿಯಮ್ಮ ಗಂಡ ಬಾಳಪ್ಪ ಮತ್ತು ಬಿ.ಸಿ.ಎಂನ ದೇವಮ್ಮ ಗಂಡ ಹನುಮಂತ ಎಂಬುವವರ ಹೆಸರಿನ ಮನೆಗಳನ್ನು ಅದಲು ಬದಲು ಮಾಡಿ ಐದೈದು ಸಾವಿರ ದುಡ್ಡನ್ನು ಯಾರು ಮೊದಲಿಗೆ ಕೊಡುತ್ತಾರೆ ಅಂತವರಿಗೆ ಮನೆಗಳ ರೆಜಿಸ್ಟ್ರೇಷನ್ ಮಾಡಿಕೊಡಲು ಓಡಾಡುತ್ತಿದ್ದಾನೆ!ಯಾರಾದರೂ ಈತನು ಮಾಡುವ ಹಲಕಟ್ ದಂಧೆಯನ್ನು ಪ್ರಶ್ನಿಸಲು ಹೋದರೆ ಲಾಟರಿ ಮಂತ್ರಿಯ ಹೆಸರನ್ನು ಹೇಳುತ್ತಾನೆ. (ಲಾಟರಿ ಮಂತ್ರಿಗೂ ಸಹಿತ ವೆಂಕಟರಾಯಗೌಡ ಹಲಕಾ-ಸಲಕಾ ಮಾತನಾಡಿದ್ದಾನೆ. ಇದು ನಮ್ಮ ಪತ್ರಿಕೆಯ ವರದಿಗಾರರ ಕೈಗೆ ಸಿಕಿದೆ!)ಶಿವನಗೌಡನು ಸಹ ಇವನ ಕೆಲಸವನ್ನು ಯಾರಾದರೂ ಅಧಿಕಾರಿಗಳು ಮಾಡಿಕೊಟ್ಟಿಲ್ಲವೆಂದರೆ, ಅವರನ್ನು ದಬಾಯಿಸುತ್ತಾನೆ ಎಂಬ ಗುಮಾನಿ!ಇಂತಹ ವೆಂಕಟರಾಯಗೌಡನಂತವರು ಊರಿಗೆ ಒಬ್ಬರು ಇದ್ದರೆ, ಊರೇ ಉದ್ದಾರ.ಇನ್ನು ಮುಂದಿನ ದಿನಗಳಲ್ಲಿ ಹಿಂದೆ ವೆಂಕಟರಾಯ ಎತ್ತಿದ ನಕಲಿ ಬಿಲ್ಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಬೇಕು. ಆತನ ಅವ್ಯವಹಾರಗಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು ಈ ಎಲ್ಲಾ ಜವಾಬ್ದಾರಿ ಮಂತ್ರಿ ಶಿವನಗೌಡ, ತಾಲೂಕಿನ ಅಧಿಕಾರಿ ಮತ್ತು ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳ ಹೆಗಲ ಮೇಲಿದೆ. ಇಲ್ಲವಾದರೆ, ಅವೆಲ್ಲವುಗಳಿಗೆ ತಾವುಗಳೇ ಕುಮ್ಮಕ್ಕು ನೀಡುತ್ತೀರೆಂಬ ಭಾವನೆ ಜನರಲ್ಲಿ ಮೂಡುತ್ತದೆ. ಇದು ಗ್ರಾಮಸ್ಥರ ಮೊದಲ ಎಚ್ಚರಿಕೆಯ ಘಂಟೆ.

No comments:

Post a Comment

Thanku