Tuesday, October 26, 2010

ಲಿಂಗಸ್ಗೂರು ಮೀಸಲು ಕ್ಷೇತ್ರಕ್ಕೆ ಆಯ್ಕೆಯಾಗಿರುವ ದಲಿತ ವಿರೋಧಿ ಶಾಸಕ ಮಾನಪ್ಪ ವಜ್ಜಲ್


ಲಿಂಗಸ್ಗೂರು ಮೀಸಲು ಕ್ಷೇತ್ರಕ್ಕೆ ಆಯ್ಕೆಯಾಗಿರುವ ದಲಿತ ವಿರೋಧಿ ಶಾಸಕ ಮಾನಪ್ಪ ವಜ್ಜಲ್ 2ವರೆ ವರ್ಷದಲ್ಲಿ ಹೇಳಿಕೊಳ್ಳುವಂತಹ ಯಾವೊಂದು ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದಲ್ಲಿ ಮಾಡಿಲ್ಲ. ತಾಲೂಕಿನ ಬಿಜೆಪಿಯ ಮೂಲ ಕಾರ್ಯಕರ್ತರನ್ನು ಮೂಲೆಗುಂಪು ಮಾಡಿ ದಿನನಿತ್ಯ ಬರೀ ಜಾತಿಯ ರಾಜಕಾರಣ ಮಾಡುತ್ತಾ ಯಥಾ ಕಾಲಹರಣ ಮಾಡಿದ್ದಾನೆ ಎಂದು ತಾಲೂಕಿನ ಪ್ರತಿಯೊಬ್ಬ ಪ್ರಜೆಯೂ ಆರೋಪಿಸುತ್ತಿದ್ದಾನೆ.
ಈ ಕುರಿತು ನಮ್ಮ ಪ್ರತಿನಿಧಿ ಸಂಪಲ್ಲೇರ್ ಅವರಿಂದ ಒಂದು ವಿಶ್ಲೇಷಣೆ.
ಲಿಂಗಸ್ಗೂರು ಮೀಸಲು ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ ತಾನೊಬ್ಬ ಶಾಸಕನೆಂಬುದನ್ನೇ ಭವಿಷ್ಯ ಮರೆತಂತಿದೆ.
ಪುಡಾರಿ ವ್ಯಕ್ತಿಗಳಂತೆ, ತನ್ನ ವಿರುದ್ಧ ದಲಿತರು ಮಾಡಿರುವ ಹೋರಾಟಕ್ಕೆ ರಿವೇಂಜ್ ಆಗಿ ತಮ್ಮ ಸ್ವಜಾತಿಯ ಕೆಲವು ಬಾಡಿಗೆದಾರರನ್ನು ಜಮಾಯಿಸಿ ಲಿಂಗಸ್ಗೂರಿನಲ್ಲಿ 15ರಂದು ತನ್ನ ತಮ್ಮನ ನೇತೃತ್ವದಲ್ಲಿ ಹೋರಾಟ ಮಾಡಿಸಿದ್ದ.
ಅದಕ್ಕಿಂತ ಮುಂಚೆ 1ರಂದು ದಲಿತ ಸಂಘಟನೆಗಳು ತಾಲೂಕಿನಲ್ಲಿ ನಡೆದಿರುವ ಕೊಲೆ ಪ್ರಕರಣಗಳು, ಮಾನಪ್ಪನ ಸ್ವಜಾತಿ ರಾಜಕಾರಣ ಹಾಗೂ ತಾಲೂಕಿನ ಭ್ರಷ್ಟ ಆಡಳಿತವನ್ನು ವಿರೋಧಿಸಿ ಲಿಂಗಸ್ಗೂರಿನಲ್ಲಿ ಬೃಹತ್ ಪ್ರತಿಭಟನೆಯೊಂದನ್ನು ಮಾಡಿದ್ದವು. ಅಂದಿನ ಆ ಪ್ರತಿಭಟನೆ ಬರೀ ದಲಿತರ ಪ್ರತಿಭಟನೆಯಾಗದೇ, ಜನಸಾಮಾನ್ಯರ ಹೋರಾಟವಾಗಿ ರೂಪುಗೊಂಡಿತ್ತು. ಅದು ಎಲ್ಲರಿಗೆ ಗೊತ್ತಿರುವ ವಿಷಯ.
ಅಲ್ಲಿ ಪ್ರಮುಖವಾಗಿ ತಾಲೂಕಿನಲ್ಲಿ ಈಗಾಗಲೇ ಸಕರ್ಾರದ ವರದಿಯಂತೆ 8ಕೊಲೆಗಳು ನಡೆದಿವೆ! ಅವುಗಳನ್ನು ಭೇದಿಸಲು ಪೊಲೀಸ್ ಇಲಾಖೆ ವಿಫಲವಾಗಿದೆ. ಪೊಲೀಸ್ ಅಧಿಕಾರಿಗಳು ಮಾನಪ್ಪನ ಸ್ವಜಾತಿಯವರಾಗಿದ್ದರಿಂದ ಪ್ರಕರಣಗಳನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ತಾಲೂಕಾ ಆಡಳಿತ ಸಂಪೂರ್ಣ ಹದಗೆಟ್ಟು ಹೋಗಿದೆ. ದಲಿತರು ದಲಿತರಾಗಿ ಬದುಕುವ ಸ್ಥಿತಿ ಹಳ್ಳಿಗಳಲ್ಲಿಲ್ಲ, ಇನ್ನು ಶಿಕ್ಷಣ ಇಲಾಖೆ, ತಾ.ಪಂನಲ್ಲಿಯೂ ಮಾನಪ್ಪನ ಸ್ವಜಾತಿಯವರೇ ಇರುವದರಿಂದ ತಾಲೂಕಿನಲ್ಲಿ ಅಭಿವೃದ್ಧಿಯೂ ಮರಿಚೀಕೆಯಾಗಿದೆ ಎನ್ನುವ ಎಂಬಿತ್ಯಾದಿ ಆರೋಪಗಳು ದಲಿತ ಸಂಘಟನೆಗಳದ್ದಾಗಿದ್ದವು.
ಆದರೆ,
ಶಾಸಕನಾಗಿರುವ ಮಾನಪ್ಪ ದಲಿತ ಸಂಘಟನೆಗಳು ಮಾಡುತ್ತಿರುವ ಆರೋಪಗಳನ್ನೆಲ್ಲ ಸಕರಾತ್ಮಕವಾಗಿ ಗಣನಗೆ ತೆಗೆದುಕೊಳ್ಳದೇ, ಬರೀ ದಲಿತ ಸಂಘಟನೆಗಳು ನಮ್ಮ ಭೋವಿ ಸಮಾಜವನ್ನು ಅವಹೇಳನ ಮಾಡುತ್ತಿವೆ. ನಾನು ಮಾಡುತ್ತಿರುವ ಅಭಿವೃದ್ಧಿ ದಲಿತ ಮುಖಂಡರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ, ನಾನು ಅಧಿಕಾರಕ್ಕೆ ಬಂದ ಮೇಲೆ ಅಟ್ರಾಸಿಟಿ ಪ್ರಕರಣಗಳಿಗೆ ಕಡಿವಾಣ ಹಾಕಿದ್ದೇನೆ. ಅದ್ಕಕಾಗಿ ದಲಿತ ಮುಖಂಡರು ನನ್ನ ಮೇಲೆ ವಿನಾಕಾರಣ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಆದ್ದರಿಂದ ದಲಿತ ಮುಖಂಡರ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬೇಕೆಂದು ಎಂದು ಆರೋಪಿಸುತ್ತಾ, ತನ್ನ ಅಣ್ಣ-ತಮ್ಮಂದಿರ ಮುಖಾಂತರ ತಮ್ಮ ಭೋವಿ ಜನಾಂಗದವರನ್ನು ಸೇರಿಸಿ ಪ್ರತಿಭಟನೆ ಮಾಡಿಸಿದ. ಇಲ್ಲಿ ಅಸಲಿಗೆ ಮಾನಪ್ಪ, ದಲಿತರ ಹೋರಾಟದಿಂದ ಮಣ್ಣುಪಾಲಾದ ತನ್ನ ಇಮೇಜ್ನ್ನು ಮತ್ತೇ ಕಟ್ಟಿಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾನೆ.
ಇಂತಹ ಚಿಲ್ಲರೆ ಕೆಲಸವನ್ನು ಮಾನಪ್ಪ ಮುಂದೆ ಮಾಡುತ್ತಾನೆಂದು ದಲಿತ ಸಂಘಟನೆಗಳಿಗೆ ಮೊದಲಿಗೆ ಗೊತ್ತಿದ್ದರಿಂದ ದಲಿತರು ಅಂದಿನ ತಮ್ಮ ಪ್ರತಿಭಟನೆಯಲ್ಲಿ ಈ ರೀತಿ ಹೇಳಿದ್ದರು.
ಮಾನಪ್ಪ.. ನೀನೇನಾದರೂ ನಮ್ಮ ಹೋರಾಟಕ್ಕೆ ಪ್ರತಿಯಾಗಿ ವಿನಾಕಾರಣ ದುಡ್ಡಿನ ದರ್ಪದಿಂದ ಹೋರಾಟವನ್ನು ಮಾಡಿದರೆ, ಮತ್ತೇ ತಾಲೂಕಿನಲ್ಲಿ 25000 ದಲಿತರನ್ನು ಸೇರಿಸಿ ಉಗ್ರಹೋರಾಟ ಮಾಡಬೇಕಾಗುತ್ತದೆ. ಎಂದು ಎಚ್ಚರಿಸಿದ್ದಾರೆ.
ಆದಾಗ್ಯೂ ದಲಿತ ಸಂಘಟನೆಗಳ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದೇ, ಅಮಾಯಕ ಜನರನ್ನು ದುಡ್ಡಿಗೆ ಸೇರಿಸಿ ಹೋರಾಟವನ್ನು ಮಾಡಿಸಿದ್ದಾನೆ.
ಮುಂದೆ ದಲಿತರು ಕೂಡ ಪ್ರತಿಭಟನೆಗೆ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅದು ಮಾನಪ್ಪನ ವಿರುದ್ಧದ ಹೋರಾಟ.
ಅಂತೆಯೇ ದಲಿತ ಸಂಘಟನೆಗಳು ತಾಲೂಕಿಗೆ ಬಂದಂತಹ ಎಲ್ಲಾ ಯೋಜನೆಗಳಲ್ಲಿ ಮಾನಪ್ಪ ನುಂಗಿದ್ದೆಷ್ಟು? ಮತ್ತು ಹಿಂಬಾಲಕರಿಗೆ ಕೊಟ್ಟಿದ್ದೇಷ್ಟು? ಜೊತೆಯಲ್ಲಿ ತನ್ನ ಅಣ್ಣತಮ್ಮಂದಿರ ಹೆಸರಲ್ಲಿ ಅಸಲಿಗೆ ಎತ್ತಿದ ನಕಲಿ ಬಿಲ್ಗಳೆಷ್ಟು? ಎಂಬೆಲ್ಲಾ ದಾಖಲೆಗಳನ್ನು ಕ್ರೋಡಿಕರಿಸುತ್ತಿದ್ದಾರೆ. ಈ ವಿಷಯವು ಕೂಡ ಮಾನಪ್ಪನಿಗೆ ಈಗಾಗಲೇ ಗೊತ್ತಾಗಿದೆ. ಅದಕ್ಕಾಗಿ ದಲಿತರು ಮುಂದೊಂದು ದಿನ ಹೋರಾಟ ಮಾಡದಂತೆ ತನ್ನ ಚೇಲಾಗಳಿಂದ ಕೆಲವೊಂದು ತಂತ್ರಗಾರಿಕೆಯನ್ನು ಮಾಡುತ್ತಿದ್ದಾನೆ.
ಅನಕ್ಷರಸ್ಥ ಶಾಸಕನ ಅವಾಂತರ!
ಲಿಂಗಸ್ಗೂರು ಮೀಸಲು ಕ್ಷೇತ್ರಕ್ಕೆ ವಕ್ಕರಿಸಿರುವ ಮಾನಪ್ಪ ಮೂಲತಃ ಅನಕ್ಷರಸ್ಥ. (ಓದಿದ 4ನೇ ಕ್ಲಾಸು ಲೆಕ್ಕಕ್ಕೆ ಬರುವುದಿಲ್ಲ).
ಬಿಜೆಪಿಯೆಂದರೆ, ರಾಷ್ಟ್ರದಲ್ಲಿ ಅದೊಂದು ಹಿಂದುತ್ವವಾದಿಗಳ ಪಕ್ಷ. ಅಲ್ಲಿ ಬ್ರಾಹ್ಮಣರು, ಲಿಂಗವಂತರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಪಕ್ಷವನ್ನು ಸಂಘಟಿಸುತ್ತಿರುತ್ತಾರೆ. ಅದು ರಾಜ್ಯಮಟ್ಟದಲ್ಲಿಯೂ ಹಾಗೇ ಇರುತ್ತದೆ.
ಆದರೆ,
ಮಾನಪ್ಪನ ಕ್ಷೇತ್ರದಲ್ಲಿ ಅದು ಉಲ್ಟಾ ಹೊಡೆದಿದೆ.
ಮೂಲ ಬಿಜೆಪಿಗಳಾಗಿ ಹತ್ತನ್ನೆರಡು ವರ್ಷ ಕಮಲದ ಝಂಡವನ್ನು ಹಿಡಿದಿದ್ದ ಲಿಂಗವಂತರನ್ನೇಲ್ಲ ಮಾನಪ್ಪ ಮೂಲೆಗುಂಪು ಮಾಡುತ್ತಾ, ತಮ್ಮ ಜನಾಂಗದವರನ್ನೇ ವಿವಿಧ ಮೋಚರ್ಾಗಳಡಿ ಸೇರಿಸಿ ಮನಸ್ಸಿಗೆ ಬಂದಂತೆ ಅಧಿಕಾರವನ್ನು ಚಲಾಯಿಸುತ್ತಿದ್ದಾನೆ.
ಲಿಂಗಾಯತರು ಹೇಗೆ ಅಧಿಕಾರಕ್ಕೆ ಬರುತ್ತಿದ್ದಂತೆ ತಮ್ಮ ತಮ್ಮ ಜಾತಿಯವರನ್ನು ಬೆಳೆಸುತ್ತಾರೆ. ಅದರಂತೆ ಲಿಂಗವಂತರ ಹಾದಿ ಹಿಡಿದು ಮಾನಪ್ಪನು ಕೂಡ ತನ್ನ ಸ್ವಜಾತಿಯವರನ್ನು ಬೆಳೆಸಲು ಹೋಗಿ ಹಳ್ಳಕ್ಕೆ ಬಿದ್ದಿದ್ದಾನೆ.
ಸುಶಿಕ್ಷಿತ ಲಿಂಗವಂತ ಅಮರೇಗೌಡ ಬಯ್ಯಾಪೂರ 15ವರ್ಷಗಳ ಕಾಲ ತನ್ನ ಜಾತಿಯ ನಾಯಕರನ್ನು ಬೆಳೆಸಿದ್ದರೂ ಮಾನಪ್ಪನ ಆಡಳಿತದಲ್ಲಿ ಇರುವಂತೆ ಎಂದೆಂದೂ ಕಾನೂನು ಸುವ್ಯವಸ್ಥೆ ತಾಲೂಕಿನಲ್ಲಿ ಹದಗೆಟ್ಟಿದ್ದಿಲ್ಲ.
2ಮೇಟಿಗಳನ್ನು ಎಡಬಲಕ್ಕೆ ಅಮರೇಗೌಡ ತಗೊಂಡು ತಿರುಗಿದರೂ, ಎಲ್ಲ ಇಲಾಖೆಯಲ್ಲಿ ಲಿಂಗಾಯತರು ಮಾಡಿದ್ದನ್ನೇ ಸರಿ ಎನ್ನುತ್ತಿದ್ದಿಲ್ಲ.
ನಮಗೆ ಗೊತ್ತಿದ್ದಂತೆ ಇಲ್ಲಿ ಒಂದು ಘಟನೆಯನ್ನು ನೆನಪಿಸೋಣ. ಯಾವುದೋ ಒಂದು ಜಮೀನಿನ ವಿಷಯದಲ್ಲಿ ಹಟ್ಟಿಯ ದಿ.ಶಾಲಂಸಾಬಗೆ ಕಂದಾಯ ಇಲಾಖೆಯ ಲಿಂಗವಂತ ನೌಕರನೌಬ್ಬ ಕೆಲಸವನ್ನು ಮಾಡಿಕೊಡದಿದ್ದಾಗ ಖುದ್ದಾಗಿ ಅಮರೇಗೌಡನೇ ಕಂದಾಯ ಇಲಾಖೆಗೆ ಬಂದು ಆ ನೌಕರನನ್ನು ಹಿಗ್ಗಾಮಗ್ಗಾ ಜಾಡಿಸುತ್ತಾ, ಬರೀ ಲಿಂಗವಂತರು ಹಾಕಿದ ಓಟಿನಿಂದ ನಾನು ಗೆದ್ದಿಲ್ಲ. ನನ್ನನ್ನು ಎಲ್ಲರು ಮತ ಹಾಕಿ ಗೆಲ್ಲಿಸಿದ್ದಾರೆ. ನಾನು ಎಲ್ಲರ ಕೆಲಸವನ್ನು ಮಾಡಿಸಿಕೊಡಬೇಕು. ನಾನು ಬರೀ ಲಿಂಗವಂತರಿಗೆ ಮಾತ್ರ ಎಂ.ಎಲ್.ಎ ಅಲ್ಲ, ಎಂದು ಹೇಳಿ ಕೊನೆಗೆ ಆ ನೌಕರನನ್ನೇ ವಗರ್ಾವಣಿ ಮಾಡಿಸಿದ. (ಇಂತಹ ಸಾಕಷ್ಟು ಉದಾಹರಣಿಗಳಿವೆ.)
ಆದರೆ,
ಇಂದು ಮಾನಪ್ಪನ ಸ್ವಜಾತಿ ಸಮಾಜದ ಅಧಿಕಾರಿಗಳು ಜನಸಾಮಾನ್ಯರಿಗೆ ಏನೆಲ್ಲ ತೊಂದರೆಗಳನ್ನು ಕೊಡುತ್ತಿದ್ದರೂ ಈತ ಮಾತ್ರ ತುಟಿಪಿಟಕೆನ್ನುವುದಿಲ್ಲ. ಅಂದರೆ, ಇತನಿಗೆ ಎಂತಹದಿರಬಹುದು ತನ್ನ ಸ್ವಜಾತಿಯ ದುರಾಭಿಮಾನ. ದಲಿತರ ಸಿಟ್ಟು ರಟ್ಟೆಗೆ ಬಂದರೆ ಅಧಿಕಾರಿಗಳೆಲ್ಲ ಚೂರುಚೂರು ಎಂಬ ದಲಿತರ ಘೋಷಣೆಯ ಸಾರಾಂಶವನ್ನು ನಿನ್ನ ಅಧಿಕಾರಿಗಳಿಗೆ ಹೇಳು. ನಿಷ್ಪಪಕ್ಷಪಾತವಾಗಿ ಯಾರೇ ತಪ್ಪು ಮಾಡಿರಲಿ, ಅವರಿಗೆ ಶಿಕ್ಷೆಯನ್ನು ನೀಡಿರಿ ಎಂದು ತಾಲೂಕಾ ಆಡಳಿತಕ್ಕೆ ಸೂಚಿಸು.
ಅದನ್ನೆಲ್ಲ ಬಿಟ್ಟು ನನಗೆ ಬರೀ ಭೋವಿ ಜನಾಂಗದವರು ಮಾತ್ರ ಮತ ಹಾಕಿ ಗೆಲ್ಲಿಸಿದ್ದಾರೆಂದು ತಿಳಿದರೆ, ನೀನೊಬ್ಬ ಶತಮೂರ್ಖನಾಗುತ್ತಿಯಾ! ತಾಲೂಕಿನಲ್ಲಿ ಎಲ್ಲರೂ ಮತಹಾಕಿದ್ದಕ್ಕೆ ಅತಿಹೆಚ್ಚು ಮತಗಳಿಂದ ಗೆದ್ದಿದ್ದೀ.
ದಲಿತ ಸಂಘಟನೆಗಳ ಹತ್ತಾರು ತುಕ್ಕಡಿಗಳಿಗೆ ಒಂದಿಷ್ಟು ಹಣವನ್ನು ಕೊಟ್ಟು ಡಿವೈಡ್ ಮಾಡಿದರಾಯ್ತೂ ಅಂತ ಕನಸಿನಲ್ಲಿಯೂ ಯೋಚಿಸಬೇಡ. ಆ ಕಾಲ ಮುಗಿದು ಹೋಗಿದೆ. ಅದರಂತೆ ನಿನ್ನ ಅಂತ್ಯ ಕೂಡ ಇದೀಗ ಆರಂಭವಾಗುತ್ತಿದೆ. ಇದು ದಲಿತರ ಪ್ರಥಮ ಎಚ್ಚರಿಕೆಯೆಂದು ತಿಳಿದುಕೋ..

ಮಾನಪ್ಪನ ಹಟ್ಟಿ ರಾಜಕೀಯ
ಮಾನಪ್ಪ ಅಧಿಕಾರಕ್ಕೆ ಬರಲು ಪ್ರಮುಖವಾಗಿ ಮೂರು ಕಾರಣ.
*. ಪರಿಶಿಷ್ಟೇತರರು ಒಗ್ಗಟ್ಟಿನಿಂದ ಮತಚಲಾಯಿಸಿರುವುದು,
*. ಮಾನಪ್ಪನಿಗೆ ಹಣದಲ್ಲೂ, ಹೆಂಡದಲ್ಲೂ ಮೀರಿಸುವ ಅಭ್ಯಥರ್ಿಗಳನ್ನು ಪ್ರಬಲ ಪಕ್ಷಗಳು ಹಾಕದೇ ಇರವುದು.
*. ಕೊನೆಯದಾಗಿ ಬಿಜೆಪಿಯ ವೈರಿಗಳೆಂದು ಬಿಂಬಿತವಾಗಿರುವ ತಾಲೂಕಿನ ಅಲ್ಪಸಂಖ್ಯಾತರು (ಹಟ್ಟಿಯನ್ನು ಹೊರತುಪಡಿಸಿ) ಉಳಿದ ಭಾಗದಲ್ಲಿ ದುಡ್ಡಿಗೆ ತಮ್ಮ ಮತಗಳನ್ನು ಮಾರಿಕೊಂಡದ್ದು.
ಯಾಕೆ ಕಾರಣಗಳನ್ನು ಮೊದಲಿಗೆ ತಿಳಿಸಿದೆಯೆಂದರೆ, ಮಾನಪ್ಪ ತಾನು ತನ್ನ ಜಾತಿಯವರ ಓಟಿನಿಂದಲೇ ಗೆದ್ದಿದ್ದೇನೆಂಬ ಪಿತ್ತವನ್ನು ನೆತ್ತಿಗೇರಿಸಿಕೊಂಡಿದ್ದಾನೆ. ಆದ್ದರಿಂದ ವಾಸ್ತವ ಮಾನಣ್ಣ ಈಗಲಾದರೂ ತಾನು ಗೆಲ್ಲಲು ಯಾರು ಕಾರಣ ಎಂಬುದನ್ನು ಅರಿಯಲಿ ಎಂಬುದಕ್ಕಾಗಿ.
ಈ ಮೂರು ಕಾರಣಗಳಿಂದ ಗೆದ್ದುಬಂದ ಮಾನಪ್ಪ ಮೊದಲಿಗೆ ಟಾಗರ್ೇಟ್ ಮಾಡಿದ್ದು ಹಟ್ಟಿಯನ್ನೇ!
ಶಾಸಕನಾಗುತ್ತಿದ್ದಂತೆ ಹಟ್ಟಿಯ ಮೊದಲಿನ ಬಿಜೆಪಿಯ ಲಿಂಗವಂತರನ್ನೆಲ್ಲ ಪಕ್ಷದಲ್ಲಿ ತುಳಿಯುತ್ತ, ತನ್ನ ಸ್ವಜಾತಿ ಬಂಧುಭಾಂದವರನ್ನು ಬೆಳೆಸಲು ತೀಮರ್ಾನಿಸಿದ. 12ನೇ ಕ್ಲಾಸ್ ಹುಡುಗರಿಗಿರುವ ಕನಿಷ್ಟ ಅರ್ಹತೆ ಇಲ್ಲದ ಕಳ್ಳ-ಸುಳ್ಳರನ್ನೆಲ್ಲ ಕಾಲೇಜು ಸಮಿತಿಯ ಸುಧಾರಣಾ ಸಮಿತಿಗಳಿಗೆ ಸದಸ್ಯರನ್ನಾಗಿ ಮಾಡಿದ. (ಕೆಲವೊಂದು ಸಂಧರ್ಭಗಳಲ್ಲಿ ಹಟ್ಟಿ ಕಾಲೇಜಿನ ಕಾರ್ಯಕ್ರಮಗಳಿಗೆ ನಾವು ಹೋದಾಗ ಸುಧಾರಣಾ ಸಮಿತಿಯ ಮಾನಣ್ಣನ ಸದಸ್ಯರ ವೇದಿಕೆ ನೋಡಿ ನಗುಬರುತ್ತದೆ.) ಊರೂರು ತಿರುಗಿಕೊಂಡು ಸಂಘಸಂಸ್ಥೆಗಳನ್ನು ಮಾಡುತ್ತಿರುವವರಿಗೆ ಪಕ್ಷದಲ್ಲಿ ಕೆಲವೊಂದು ಮೋಚರ್ಾಗಳ ಉಸ್ತುವಾರಿ ಕೊಟ್ಟ.
ಅದಾದ ಕೆಲವೇ ದಿನಗಳಲ್ಲಿ ಲಿಂಗವಂತರ ಪಕ್ಷವಾಗಿದ್ದ ಬಿಜೆಪಿಯನ್ನು ಶಿವಪುತ್ರ, ಸಜ್ಜನ & ಗ್ಯಾಂಗ್ನಿಂದ ಕಸಿದುಕೊಂಡು ತನಗೆ ಬೇಕಾದ ವ್ಯಕ್ತಿಗಳನ್ನು ಪದಾಧಿಕಾರಿಗಳನ್ನಾಗಿ ಮಾಡುತ್ತಾ, ತನ್ನೇಲ್ಲ ಇಂಟರನಲ್ ಸೆಟಪ್ಗಳನ್ನು ಸರಿಯಾಗಿ ನೋಡಿಕೊಂಡ. ಇನ್ನು ಹೊರಗಡೆ ಹಟ್ಟಿಯಲ್ಲಿ ಕಾಂಗ್ರೇಸ್ ಮತ್ತು ಜೆ.ಡಿ.ಎಸ್ಗಳನ್ನು ಬೆಂಬಲಿಸಿದ್ದ ಕೆಲವರನ್ನು ತನ್ನ ಹಣ ಅಧಿಕಾರದ ಬಲದಿಂದ ಖರೀಧಿ ಮಾಡಿದ. ಇದರಿಂದ ಅಲ್ಪಸಂಖ್ಯಾತರು ಹೊರತಾಗಿಲ್ಲ.
ಕಾಯ್ದೆ ಕಾನೂನುಗಳ ಅರಿವಿಲ್ಲದ ಮಾನಪ್ಪ ಶಾಸಕನಾಗುತ್ತಿದ್ದಂತೆ, ಬಹಳ ಸಲೀಸಾಗಿ ಬಿಜೆಪಿಯನ್ನು ಹೊಡೆದು ಹಾಕಿದ. ಇದೇ ಪದ್ದತಿಯನ್ನು ಮುದಗಲ್, ಲಿಂಗಸ್ಗೂರಿನಲ್ಲಿ ಮಾಡಿದ್ದಾನೆ!
ಆರಂಭದಲ್ಲಿ ಲಿಂಗವಂತರನ್ನು ಪಕ್ಷದಲ್ಲಿ ದೂರಿಡುತ್ತಾ ಹಿಂದುಳಿದ ವರ್ಗದವರನ್ನು ತನ್ನಿತ್ತರದಲ್ಲಿಟ್ಟುಕೊಂಡಿದ್ದ. ಯಾಕೋ.. ಏನೋ ಅದು ಸರಿಗೆ ಕಾಣಲಿಲ್ಲವೆಂಬಂತೆ ಕೊನೆಗೆ ಪರಿಶಿಷ್ಟರನ್ನು ದೂರಿಡಲು ಪ್ರಾರಂಭಿಸಿದ. (ತನ್ನ ಸ್ವಜಾತಿಯವರನ್ನು ಹೊರತುಪಡಿಸಿ) ಚುನಾವಣೆಯಲ್ಲಿ ನಾನು ನನ್ನ ಸ್ವಜಾತಿ ಮತ್ತು ಹಣದ ಬಲದಿಂದ ಶಾಸಕನಾಗಿದ್ದೇನೆ. ಹಟ್ಟಿಯಲ್ಲಿ ನನಗೆ ಲೀಡ್ ಬಂದಿಲ್ಲ. ಇಲ್ಲಿ ಎಲ್ಲರೂ ಕಾಂಗ್ರೇಸ್ನ ಪರವಾಗಿದ್ದಾರೆಂದು ತಿಳಿದು ಕೆಲವು ದಿನ ಹಟ್ಟಿಗೆ ಬರುವದನ್ನೇ ಬಿಟ್ಟಿದ್ದ. ನಂತರದ ಬೆಳವಣಿಗೆಯಲ್ಲಿ ಅವರ ಪಕ್ಷದ ನಾಯಕರೇ, ಛೀ..ಥೂ.. ಅಂತ ಕ್ಯಾಕರಿಸಿ ಉಗಿಯುತ್ತಿದ್ದಂತೆ ಹಟ್ಟಿಗೆ ಬಂದು ನಾನು ನಿಮ್ಮ ಶಾಸಕ, ನಿಮ್ಮ ಮನೆಯವನು ಸ್ವಾಮಿ, ನನಗೆ ನಿಮ್ಮ ಮೇಲೆ ಯಾವುದೇ ಮುನಿಸು ಇಲ್ಲ ಸ್ವಾಮಿ, ಎಂದು ನಾಟಕವಾಡಲು ಪ್ರಾರಂಭಿಸಿದ. ಆದರೆ, ಹಟ್ಟಿಯ ಜನರು ಬಹಳ ಬುದ್ದಿವಂತರೆಂದು ಭಾವಿಸಿದ ಮಾನಪ್ಪ ತನ್ನಿಂದಿರುವ ಯಾರೊಬ್ಬರಿಗೆ ಯಾವುದೇ ಕೆಲಸಗಳನ್ನು ನೀಡಲಿಲ್ಲ. ಹೆಸರಿಗೆ ಸುಮ್ಮನೆ ಬೆನ್ನು ಚಪ್ಪರಿಸುತ್ತಾ, ಇವರಿಂದಲೇ ನಾನು ಶಾಸಕನಾಗಿದ್ದೇನೆ ಎಂದು ಬಣ್ಣದ ಮಾತುಗಳನ್ನು ಆಡಲು ಪ್ರಾರಂಭಿಸಿದ.
ಈಗ ಮಾನಪ್ಪಣ್ಣ ಹಟ್ಟಿಯ ಮುಖಂಡರಿಗೆ ನೀಡುತ್ತಿರುವ ಗೌರವ ಎಂತಹದ್ದೇಂದರೆ,
ಉದಾಹರಣೆಗೆ ನಮ್ಮ ನಾಗರೆಡ್ಡೆಪ್ಪಣ್ಣ, ಸ್ವಾಮಿಅಣ್ಣ, ನಮ್ಮ ಬಾಲಪ್ಪಣ್ಣ, ನಮ್ಮ ಅಮರಗುಂಡಪ್ಪಣ್ಣ, ಅಮ್ಜದಣ್ಣ ಎಂದು ತನ್ನ ವೇದಿಕೆಗಳಿಗೆ ಕರೆದು ಹರಕೆಯ ಕುರಿಗೆ ಬಲಿಯ ಮೊದಲು ತಪ್ಪಲು ತಿನಿಸಿದಂತೆ ಜೋರ್ಜೋರಾಗಿ ಹಾರವನ್ನು ಹಾಕುತ್ತಿರುತ್ತಾನೆ.
ಇನ್ನು ಕ್ಯಾಂಪಿನಲ್ಲಿ ಅಧಿಸೂಚಿತ ಪ್ರದೇಶ ಸಮಿತಿಗೆ ಬರುವ ಎಲ್ಲ ಕಾಮಗಾರಿಗಳನ್ನು ನಾನೇ ಮಾಡಿಸುತ್ತಿದ್ದೇನೆ. ನನ್ನಿಂದಲೇ ಈ ಎಲ್ಲಾ ಕೆಲಸಗಳಿಗೆ ಸಾಗುತ್ತಿವೆ ಎಂದು ಕ್ಯಾಂಪಿನ ಜನರಿಗೆ ಹೇಳುವಂತೆ ಅಮರೇಶ ಚಿತ್ತರಗಿ ಎಂಬ ಮುಖ್ಯಾಧಿಕಾರಿಗೆ ಮೌಖಿಕವಾಗಿ ಗದರಿಸಿದ್ದಾನೆ! ಮಾನಪ್ಪನ ಮಾತು ಕಿವಿಗೆ ಬಿದ್ದರೂ ಬೀಳಲಾರದಂತಿರುವ ಚಿತ್ತರಗಿ, ಕ್ಯಾಂಪಿನ ಅಭಿವೃದ್ಧಿಗೆ ಶಾಸಕರು ಸಾಕಷ್ಟು ಶ್ರಮಿಸಿದ್ದಾರೆ. ಕ್ಯಾಂಪಿನ ಅಭಿವೃದ್ಧಿಯಲ್ಲಿ ಶಾಸಕರ ಪಾತ್ರ ಬಹಳ ದೊಡ್ಡದು ಎಂದು ಒಂದು ಕಾರ್ಯಕ್ರಮದಲ್ಲಿ ಹೇಳಿದ್ದರು. (ಕ್ಯಾಂಪಿನ ಅಭಿವೃದ್ಧಿಗೆ ದೊಡ್ಡಮನಿ ತಂಡ ಹಾಗೂ ನಮ್ಮ ತೋಟಿ ಅಣ್ಣತಮ್ಮಂದಿರು ದಿನನಿತ್ಯ ಎಷ್ಟು ಕೆಲಸ ಮಾಡುತ್ತಾರೆಂಬುದು ಚಿತ್ತರಗಿಗೂ ಹಾಗೂ ಮಾನಪ್ಪನಿಗೂ ಗೊತ್ತಿಲ್ಲ)
ಆದರೆ, ಪ್ರಮುಖವಾಗಿ ಮಾನಪ್ಪ ಎಂ.ಎಲ್.ಎ ಆಗಿ ಇಷ್ಟು ದಿನದಲ್ಲಿ ಒಂದು ದಿನವಾಗಲಿ ಹಟ್ಟಿ ಕಾಮರ್ಿಕರ ಗೋಳನ್ನು ಕೇಳಲಿಲ್ಲ. ಕಾಮರ್ಿಕರ ಬದುಕಿನ ಅನಿವಾರ್ಯತೆಯನ್ನು ಅರಿಯಲಿಲ್ಲ. ದಿನಗೂಲಿ ನೌಕರರ ಪಾಡು ಏನಾಗಿದೆ ಎಂದು ಯೋಚಿಸಲಿಲ್ಲ. ಅವೆಲ್ಲದರ ಬದಲಿಗೆ ಕಂಪನಿಯ ಅಧಿಕಾರಿಗಳಿಗೆ ಪೋನ್ ಮಾಡಿ ನಮ್ಮವರನ್ನು ಟ್ರಾನ್ಸಪರ್ ಮಾಡಿ, ನಮ್ಮವರು ಬಂದಾರೆ ಅವರಿಗೆ ಚಂದಾ ಕೊಡ್ರಿ, ಹನುಮಂತಪ್ಪ ಆಲ್ಕೋಡ್ಗೆ ಗೆಸ್ಟ್ಹೌಸ್ನಲ್ಲಿ ರೂಂ ಕೊಡಬೇಡ್ರೀ. ನಮ್ಮ ಬೆಂಬಲಿಗರಿಗೆ ಸಣ್ಣಪುಟ್ಟ ಕೆಲಸ ಮಾಡಿಕೊಡಿ ಎಂದು ಕೇಳುತ್ತಾ, ಹಟ್ಟಿಯಲ್ಲಿ ಬಿಟ್ಟಿ ರಾಜಕೀಯ ಮಾಡಹತ್ತಿದ್ದಾನೆ. ಇಂತಹ ಮಾನಣ್ಣನನ್ನು ಏನೆಂದು ಕರೆದರೆ ಸೂಕ್ತ ಓದುಗರೇ.. ನೀವೇ ಸೂಚಿಸಿ.
ಕಳೆದ ಪಂಚಾಯತಿ ಚುನಾವಣೆಯಲ್ಲಿ ಮಾನಪ್ಪನಿಗೆ ಮುಖಭಂಗ.
ಅಧಿಕಾರಕ್ಕೆ ಬರುತ್ತಿದ್ದಂಥೆ ಹಟ್ಟಿಯಲ್ಲಿ ಲಿಂಗವಂತರನ್ನೆಲ್ಲ ತುಳಿದಿದ್ದ ಮಾನಪ್ಪನಿಗೆ ಕಳೆದ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಲಿಂಗವಂತರೆಲ್ಲ ಒಗ್ಗಟ್ಟಾಗಿ ಪಾಠ ಕಲಿಸಿ ಭಾರಿ ಮುಖಭಂಗವನ್ನು ಮಾಡಿದ್ದಾರೆ.
ತಾಲೂಕಿನಲ್ಲಿ ಬಿಜೆಪಿ ಆಡಳಿತ ಇರಲಾರದ ಸಂದರ್ಭದಲ್ಲಿಯೇ ಕನಿಷ್ಟ ಐದು ಸದಸ್ಯರನ್ನು ಗೆಲ್ಲುತ್ತಿದ್ದ ಪಕ್ಷ ಒಬ್ಬ ಶಾಸಕ, ಹತ್ತಾರು ಮುಖಂಡರು, ಕೋಟಿಗಟ್ಟಲೇ ಹಡಬೆ ಹಣವನ್ನು ಇಟ್ಟುಕೊಂಡು ಈ ಬಾರಿ ಚುನಾವಣಿಯಲ್ಲಿ ಒಂದೇ ಒಂದು ಸ್ಥಾನದಲ್ಲಿ ಗೆಲ್ಲಲು ಹರಸಾಹಸ ಪಡಬೇಕಾಯಿತು. (ಗೆದ್ದ ಒಂದೇ ವ್ಯಕ್ತಿ ಮಾನಪ್ಪನ ಸ್ವಜಾತಿಬಂಧು.)
ಊರಿನ ಶ್ರೀಮಂತ ವ್ಯಕ್ತಿ ನಜೀರಸಾಬ, ಗ್ರಾ.ಪಂನ ಮಾಜಿ ಉಪಾಧ್ಯಕ್ಷ ಬಾಲಪ್ಪ ನಾಯಕ, ಶಾಸಕನಿಗೆ ಆಪ್ತರೆನಿಸಿರುವ ಎನ್.ಸ್ವಾಮಿ, ಗುರುಗಳಿಗೆಲ್ಲ ಗುರು ಎನಿಸಿರುವ ಶ.ಶಿ ಹೀರೆಮಠ ಸೇರಿದಂತೆ ಹಲವಾರು ತನ್ನ ಹುರಿಯಾಳುಗಳು ಗ್ರಾ.ಪಂ ಚುನಾವಣೆಯಲ್ಲಿ ಜಯಸಾಧಿಸಲು ಆಗಲಿಲ್ಲ. ಅಲ್ಪ ಬುದ್ದಿವಂತಿಕೆಯಿಂದ ಹನುಮಂತರೆಡ್ಡಿ ಮಾತ್ರ ಚುನಾವಣೆಯಿಂದ ಹಿಂದೆ ಸರಿದ. ಇಲ್ಲವೆಂದರೆ ಈತನಿಗೂ ಇದೇ ಗತಿ ಬರುತ್ತಿತ್ತೇನೋ?
ಚುನಾವಣಿಯಲ್ಲಿ ಇಷ್ಟೇಲ್ಲ ಗತಿಸಿದರೂ, ಮಾನಪ್ಪ ಪಂಚಾಯತಿಯನ್ನು ನಾನೇ ನಡೆಸುತ್ತೇನೆ. ಗೆದ್ದ ಎಲ್ಲರೂ ನನ್ನ ಪಕ್ಷಕ್ಕೆ ಬರುತ್ತಾರೆ, ಅವರೆಲ್ಲ ನನ್ನತ್ತಿರ ಇದ್ದಾರೆಂದು ಹುಚ್ಚನ ಹಾಗೆ ಅಂದಿನ ಸಂದರ್ಭದಲ್ಲಿ ಹೇಳಿಕೆ ನೀಡುತ್ತಿದ್ದ. ತನ್ನ ಒಂದೇ ಅಭ್ಯಥರ್ಿಯನ್ನು ಇಟ್ಟುಕೊಂಡು ಏನು ಮಾಡಲಿಕ್ಕೆ ಆಗದೇ ಕೊನೆಗೆ ಅನಿವಾರ್ಯವಾಗಿ ಶಂಕರಗೌಡನ ಗುಂಪಿಗೆ ಬೆಂಬಲಿಸುವಂತೆ ಪರೋಕ್ಷವಾಗಿ ತಿಳಿಸಿದ. ಅಂದಿನ ಚುನಾವಣೆಯಲ್ಲಿ ಮಾನಪ್ಪನ ಅಭ್ಯಥರ್ಿಗಳು ಒಬ್ಬೊಬ್ಬರಾಗಿ ಸೋಲಿನ ಸಿಹಿಯನ್ನು ಅನುಭವಿಸುತ್ತಿದ್ದಂತೆ, ಹಟ್ಟಿಯ ಲಿಂಗವಂತರಿಗೆಲ್ಲ ಹಾಲಿನಲ್ಲಿ ಅಮೃತವನ್ನೇ ಬೆರೆಸಿ ಕುಡಿದಂಗಾಗುತ್ತಿತ್ತು.
ಹೀಗಾಗಿ ಮಾನಪ್ಪನಿಗೆ ಹಟ್ಟಿಯ ಗ್ರಾ.ಪಂ ಚುನಾವಣಿಯಲ್ಲಿ ಭಾರಿ ಮುಖಭಂಗವಾಯಿತು.
ಒಬ್ಬ ಶಾಸಕನಾಗಿ ಗ್ರಾಮಪಂಚಾಯತಿಯನ್ನು ಗೆಲ್ಲಿಸಲು ಆಗಿಲ್ಲವೆಂದರೆ, 32ರಲ್ಲಿ ಕನಿಷ್ಟ 15 ಸ್ಥಾನಗಳಲ್ಲಾದರೂ ಜಯ ಸಾಧಿಸಲು ವಿಫಲವಾದರೆ, ಎಲೆಕ್ಷನ್ಗೆ ನಿಲ್ಲಲಾರದ ಊರಿನ ಒಬ್ಬ ಶ್ರೀಮಂತನನ್ನು ವಾಡರ್ಿಗೆ ನಿಲ್ಲಿಸಿ ಒಂದು ಕೇರಿಯ ಮತವನ್ನು ಪಡೆಯಲು ಆಗಿಲ್ಲವೆಂದರೆ, ನೀನು ಎಂ.ಎಲ್.ಎ ಆದರೂ ಕೂಡ ಏನು ಲಾಭ.. ಈ ಬಾರಿ ಪಂಚಾಯತಿ ಚುನಾವಣೆಯನ್ನೇ ಗೆಲ್ಲಿಸಲು ನಿನ್ನ ಕೈಯಲ್ಲಿ ಗೆಲ್ಲಿಸಲು ಆಗಿಲ್ಲವೆಂದರೆ, ತಾ.ಪಂ, ಜಿ.ಪಂ ದೇವರೇ ಗತಿ.
ಅಲ್ಲಿ ನೋಡು, ಹಟ್ಟಿ ಕಂಪನಿಯಲ್ಲಿ ಮೂರೊತ್ತು ದುಡಿದುಕೊಂಡು ತಿನ್ನುವ ಅಮರಗುಂಡಪ್ಪ ಎಂಬ ಕಾಮರ್ಿಕ ಪಂಚಾಯತಿ 32ರಲ್ಲಿ 19ಸ್ಥಾನಗಳನ್ನು ತನ್ನ ಗುಂಪಿನ ಮುಖಾಂತರ ಗೆಲ್ಲಿಸಿಕೊಂಡಿದ್ದಾನೆ. ಅಂದರೆ ಈ ವಿಚಾರದಲ್ಲಿ ನೀನು ಅಮರಗುಂಡಪ್ಪನೆಂಬ ಕಾಮರ್ಿಕನಿಗಿಂತಲೂ ಕಡೆ ಎಂದರ್ಥ.
ನಿನ್ನ ಹತ್ತಿರ ಕೋಟಿಕೋಟಿ ದುಡ್ಡಿದ್ದರೂ, ನೀನೊಬ್ಬ ಎಂ.ಎಲ್.ಎ ಆಗಿದ್ದರೂ, ನಿನ್ನ ಸ್ವಜಾತಿಯವರ ಪ್ರೇಮವನ್ನು ಒಂದೆಡೆಯಿಟ್ಟುಕೊಂಡು, ಎಲ್ಲಿಯವರೆಗೆ ಜನಸಾಮಾನ್ಯರ ಸಮಸ್ಯೆಗಳು, ಎಲ್ಲ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡುವುದಿಲ್ಲವೋ, ಅಲ್ಲಿಯವರೆಗೆ ನೀನೇ ಖುದ್ದಾಗಿ ಗ್ರಾಮಪಂಚಾಯತಿ ಚುನಾವಣೆಗೆ ನಿಂತರೂ ಗೆಲ್ಲವುದು ಅನುಮಾನ.
ನಿರ್ಲಕ್ಷ ಮಾಡಿದರೆ, ಅಂತ್ಯದ ಆರಂಭ ಶುರುವಾಗಿದೆ ಎಂದೇ ಅರ್ಥ.
ಲಿಂಗಸ್ಗೂರು ವಿಧಾನಸಭಾ ಕ್ಷೇತ್ರ ಅಮರೇಗೌಡ, ಆನ್ವರಿ, ಗುರುಗುಂಟಿ ದೊರೆಗಳ ಆಡಳಿತವನ್ನು ಕಂಡಿದೆ. ಆದರೆ ಮಾನಪ್ಪನ ಆಡಳಿತವನ್ನು ಕನಸಿನಲ್ಲಿಯೂ ಕಂಡಿರಲಿಲ್ಲ. ಅಷ್ಟರ ಮಟ್ಟಿಗೆ ಮಾನಪ್ಪನ ಆಡಳಿತದಿಂದ ಕ್ಷೇತ್ರ ಬೇಸರಗೊಂಡಿದೆ. ಲಿಂಗಸ್ಗೂರಿಗೆ ಉಜ್ವಲಕುಮಾರ ಘೋಷ್ ಎಂಬ ಸಹಾಯಕ ಆಯುಕ್ತ ಬಂದಾಗಿನಿಂದ ಮಾನಪ್ಪನಿಗೆ ಸ್ವಲ್ಪ ಟೈಟ್ ಆಗಿದೆ. ಆದರೂ, ಕಿತಾಪತಿ ಆಗ ಮಾಡುತ್ತಲೇ ಇರುತ್ತಾನೆ ಈ ಮಾನಪ್ಪ. ರಾಜ್ಯ ರಾಜಕೀಯದಲ್ಲಾದ ಹೈಡ್ರಾಮದಲ್ಲಿ ತನ್ನ ಗುರು ಆನ್ವರಿ ಬಸವರಾಜಪ್ಪನ ಹಿಂದೆ ಓಡಿ ಹೋಗಿದ್ದಾನೆ.
ಮಾನಪ್ಪನ ಮಾಸ್ಟರ್ ಪ್ಲಾನ್!
ತಾಲೂಕಿನಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಮಾನಪ್ಪ ಕಾಣೆಯಾಗಿದ್ದಾನೆ ಎಂದು ಪೊಲೀಸ್ ಕಛೇರಿಗಳಿಗೆ ಒಂದು ಕಡೆ ದೂರನ್ನು ನೀಡುತ್ತಿದ್ದಾರೆ. ಆದರೆ, ಮಾನಪ್ಪ ನನ್ನ ಆರೋಗ್ಯ ಹದಗೆಟ್ಟಿದ್ದರಿಂದ ಚಿಕಿತ್ಸೆ ಪಡೆಯುತ್ತಿದ್ದೆ. ಈಗ ನನ್ನ ಆರೋಗ್ಯ ಸುಧಾರಿಸಿದೆ. ಅದಕ್ಕಾಗಿ ನನ್ನ ಬಳಿ ವೈಧ್ಯಕೀಯ ಪ್ರಮಾಣ ಇರುವುದಾಗಿ ಹಸಿ ಸುಳ್ಳನ್ನು ಹೇಳುತ್ತಿದ್ದಾನೆ. ಅಸಲಿಗೆ ಮಾನಪ್ಪನ ಮಾಸ್ಟರ್ ಫ್ಯಾನ್ ಹೀಗಿದೆ ; ದಲಿತರ ಹೋರಾಟದಿಂದ ಮಣ್ಣುಮುಕ್ಕಿರುವ ತನ್ನ ಇಮೇಜ್ನ್ನು ಕಟ್ಟಿಕೊಳ್ಳಲು ಮತ್ತು ತನ್ನ ಮೇಲಿರುವ ಜಾತಿ ರಾಜಕಾರಣದ ಆರೋಪವನ್ನು ಬದಿಗೊತ್ತಲು, ನಿಣರ್ಾಯಕ ಮತದಾರರಾದ ಲಿಂಗವಂತರನ್ನು ಒಲೈಸಿಕೊಂಡು ಮುಂದಿನ ದಿನದಲ್ಲಿ ಆರೋಪ ಮುಕ್ತನಾಗಿ ಓಟ್ ಬ್ಯಾಂಕ್ ಮಾಡಿಕೊಳ್ಳಲು ಈ ತಂತ್ರವನ್ನು ಅನುಸರಿಸುತ್ತಿದ್ದಾನೆ.
ಅದರ ಒಂದು ಭಾಗವಾಗಿ ಮೊನ್ನೆ ಬಸವರಾಜ ಪಾಟೀಲ್ ಆನ್ವರಿ ಜೊತೆ ಹೋಗಿ ವಿಶ್ವಾಸ ಮತದ ಸಂದರ್ಭದಲ್ಲಿ ಗೈರು ಹಾಜರಿಯಾಗಿದ್ದ.
ಒಂದಂತೂ ಸತ್ಯ ಮಾನಪ್ಪ ಏನೇ ಪಲ್ಟಿ ಹೊಡೆದರು ಮುಂದಿನ ಬಾರಿ ಜಿಲ್ಲಾ ಪಂಚಾಯತ್ಗೆ ಗೆಲ್ಲುವುದು ತುಸು ಕಷ್ಟನೇ..?

ಮಾನಣ್ಣನ ಮಂಗಾಟ!
ನಾನು ಅಧಿಕಾರಕ್ಕೆ ಬಂದ ಮೇಲೆ ಅಟ್ರಾಸಿಟಿ ಪ್ರಕರಣಗಳಿಗೆ ಕಡಿವಾಣ ಹಾಕಲಾಗಿದೆ ಎಂದು ಬೊಬ್ಬೆ ಇಡುವ ಮಾನಪ್ಪಣ್ಣ ಹಿಂದೊಮ್ಮೆ ತಾನೇ ತನ್ನದ್ಯಾವುದೋ ಒಂದು ಪ್ರಕರಣದಲ್ಲಿ ಪೊಲೀಸರಿಗೆ ಅಟ್ರಾಸಿಟಿ ಕೇಸ್ ಬುಕ್ ಮಾಡುವಂತೆ ಸೂಚಿಸಿದ್ದ.
ತಾನೊಬ್ಬ ಶಾಸಕನಾಗಿ ಈ ರೀತಿಯ ಹೀನಕೃತ್ಯಕ್ಕೆ ಇಳಿದಿರುವಾಗ ಅಲ್ಪತಿಳುವಳಿಕೆ ಇರುವ ಮುಖಂಡರು ಮಾಡುತ್ತಿರುವುದು ಯಾವ ಲೆಕ್ಕ?
ಈಗಾಗಲೇ ತಾಲೂಕಿನ ಸಾಕಷ್ಟು ಕೊಲೆ ಪ್ರಕರಣಗಳು ಅಂತ್ಯವನ್ನು ಕಂಡಿಲ್ಲ. ಪ್ರತಿಯೊಂದು ಕೊಲೆಗಳಲ್ಲಿ ಆರೋಪಿಗಳು ಯಾರೆಂದು ಇಲಾಖೆಗೆ ಗೊತ್ತಿದ್ದರೂ ಅದು ಕಣ್ಮುಚ್ಚಿ ಕುಳಿತಂತಿದೆ.
ತವಗದ ಅಮರೇಶ ಎಂಬ ಕಾಮರ್ಿಕನ ಕಗ್ಗೊಲೆ ನಡೆದು ವರ್ಷಗಳೇ ಸಾಗುತ್ತಿವೆ. ಈ ಕೊಲೆಯಲ್ಲಿ ಆರೋಪಿಗಳು ಯಾರೆಂಬುದು ಪೊಲೀಸರಿಗೆ ಗೊತ್ತಿದೆ. ಕೊಲೆಗೈದ ಆರೋಪಿಗಳೆಲ್ಲ ರಾಜಾರೋಷವಾಗಿ ಪೊಲೀಸರೆದುರಿಗೆ ತಿರುಗುತ್ತಿದ್ದಾರೆ.
ಆದರೆ,
ಅವರ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಪೊಲೀಸರಿಂದ ಆಗುತ್ತಿಲ್ಲ. ಇಲ್ಲಿಯೂ ಪೊಲೀಸ್ ಇಲಾಖೆ ಹಿಂದೇಟು ಹಾಕುತ್ತಿದೆ. ಅದರಂತೆ ಸಾಕಷ್ಟು ಪ್ರಕರಣಗಳು ತಾಲೂಕಿನಲ್ಲಿ ಅಂತ್ಯ ಕಾಣದೇ ಪೊಲೀಸ್ ಇಲಾಖೆಯ ರೆಕಾಡರ್್ರೂಮಿನಲ್ಲಿ ಕೊಳೆಯುತ್ತಿವೆ. ಅದರಂತೆ ಕೊಲೆಯಾದ ಕುಟುಂಬದವರು ನ್ಯಾಯಕ್ಕಾಗಿ ಪೊಲೀಸ್ ಇಲಾಖೆಗೆ ದಿನನಿತ್ಯ ಅಲೆಯುವುದು ತಪ್ಪುತ್ತಿಲ್ಲ.
ತಾಲೂಕಿನಲ್ಲಿ ನಡೆದ ಎಲ್ಲ ಕೊಲೆಗಳ ಸಚಿತ್ರ ವರದಿಯನ್ನು ಒಂದೊಂದಾಗಿ ಮುಂದಿನ ಸಂಚಿಕೆಗಳಲ್ಲಿ ಸವಿಸ್ತಾರವಾಗಿ ಪ್ರಕಟಿಸಲಾಗುವುದು.

No comments:

Post a Comment

Thanku