Tuesday, October 26, 2010

ಪ್ರಜಾಪ್ರಭುತ್ವದ ಕಗ್ಗೊಲೆ


ಪ್ರಜಾಪ್ರಭುತ್ವದ ಕಗ್ಗೊಲೆ
ದಕ್ಷಿಣ ಭಾರತದಲ್ಲಿನ ಮೊದಲ ಬಿಜೆಪಿ ಸಕರ್ಾರ ಕನರ್ಾಟಕದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡುತ್ತಿದೆ. ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ಒಂದಿಲ್ಲೊಂದು ರೀತಿಯಲ್ಲಿ ತನ್ನ ತತ್ವ ಸಿದ್ದಾಂತಗಳನ್ನು ಸಾಮಾನ್ಯ ಜನರ ಮೇಲೆ ಹೇರಲು ಹವಣಿಸುತ್ತಿದೆ. ಅದ್ಯಾವುದು ಯಶಸ್ಸು ಕಾಣಲಿಲ್ಲವೆಂದರೆ, ವಾಮಮಾರ್ಗಗಳನ್ನು ಅನುಸರಿಸಿ ವ್ಯವಸ್ಥೆಗೆ ಮಸಿ ಬಳಿಯಲು ಪ್ರಯತ್ನಿಸುತ್ತಿದೆ.
ಮಾತೆತ್ತಿದರೆ ಕೇಶವ ಕೃಪ ಎಂದೇಳುವ ನಾಯಕರು, ಅಧಿಕಾರ, ಹಣದ ಲಾಲಸೆಗೆ ಏನು ಮಾಡಲು ಹೇಸುತ್ತಿಲ್ಲ. ಇಂತಹ ಸಕರ್ಾರವನ್ನು ಕನರ್ಾಟಕ ಹಿಂದೆಂದೂ ಕಂಡಿರಲಿಲ್ಲ. ಇಂದು ಕನರ್ಾಟಕವು ಕೋಮು, ದಳ್ಳುರಿಗಳಿಂದ ತತ್ತರಿಸಿ ಹೋಗಿದೆ. ಇತ್ತ ಉತ್ತರಕನರ್ಾಟಕದ ಜನತೆ ನೆರೆಹಾವಳಿಯಿಂದ ಸಹಜಸ್ಥಿತಿಗೆ ಬಂದಿಲ್ಲ. ಅತ್ತ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಜನರ ಆಶೋತ್ತರಗಳನ್ನು ಗಾಳಿಗೆ ತೂರಿ, ಹಣ ಅಧಿಕಾರಕ್ಕಾಗಿ ಕಂಡಕಂಡವರ ಹಿಂದೆ ಬೀದಿಬಸವಿಯರಂತೆ ಅಲೆದಾಡುತ್ತಿದ್ದಾರೆ.
ಅಂದು ರೈತರ ಹೆಸರಿನ ಮೇಲೆ ಪ್ರಮಾಣವಚನವನ್ನು ಸ್ವೀಕರಿಸಿದ ಯಡಿಯೂರಪ್ಪ ಕ್ರಮೇಣವಾಗಿ ರೈತರ ಬದುಕಿನ ಮೇಲೆಯೇ ಪಗಡೆಯಾಟ ಆಡತೊಡಗಿದ. ಹಳ್ಳಿಹಳ್ಳಿಗಳಲ್ಲಿ ಅಲೆಯುತ್ತಾ ಕೊನೆಗೆ ಅಧಿಕಾರವನ್ನು ಹಿಡಿದ ಯಡಿಯೂರಪ್ಪ ಹಿಂದಿನದೆಲ್ಲವನ್ನು ಮರೆತು ತನ್ನ ಜಾತಿ, ಮಠಮಾನ್ಯಗಳನ್ನೇ ಬೆಳೆಸಲು ಪ್ರಾರಂಭಿಸಿದ. ಮಾತೆತ್ತಿದರೆ ವಿರೋಧಪಕ್ಷಗಳನ್ನು ತೆಗಳುತ್ತಾ ತಾನು ಮಾತ್ರ ಸಕರ್ಾರದ ಮುಖ್ಯಮಂತ್ರಿ ಎನ್ನುವದನ್ನೇ ಮರೆತುಬಿಟ್ಟ.
ತನ್ನ ಸವರ್ಾಧಿಕಾರಿ ಧೋರಣಿಯೇ ಪಕ್ಷದಲ್ಲಿ ಭಿನ್ನಮತ ತಲೆದೋರಲು ಕಾರಣವಾಯಿತು. ಪಕ್ಷೇತರರು ಸಕರ್ಾರಕ್ಕೆ ಬೆಂಬಲ ನೀಡಿದಾಗ್ಯೂ ಪಕ್ಷೇತರರನ್ನು ಕೈಬಿಟ್ಟು ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳಲು ಯಡಿಯೂರಪ್ಪ ಅನ್ಯಮಾರ್ಗವನ್ನು ಹಿಡಿಯಲು ಯೋಚಿಸದ.
ಅದೆಲ್ಲದಕ್ಕೆ ಯಡಿಯೂರಪ್ಪ ರೆಡ್ಡಿಗಳನ್ನು ಸರಿಯಾಗಿ ಬಳಸಿಕೊಂಡು ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆಯಾಗಿ ಆಪರೇಷನ್ ಕಮಲ ಎಂಬ ಕೆಟ್ಟ ಸಂಸ್ಕೃತಿಯ ಹಾದಿಯನ್ನಿಡಿದರು.
ಹಣ, ಅಧಿಕಾರಕ್ಕಾಗಿ ಜೆ.ಡಿ.ಎಸ್ ಹಾಗೂ ಕಾಂಗ್ರೇಸ್ನ ಶಾಸಕರು ತಮ್ಮ ಪಕ್ಷಗಳಿಗೆ ಶಾಸಕರಾಗಿ ಆಯ್ಕೆಯಾದ ಕೆಲವೇ ದಿನಗಳಲ್ಲಿ ರಾಜೀನಾಮೆ ನೀಡಿ ಮತ್ತೊಂದು ಚುನಾವಣೆ ಎದುರಿಸಲು ಸನ್ನದ್ದರಾದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ತಕ್ಷಣವೇ ಯಡಿಯೂರಪ್ಪ ಇವರೆಲ್ಲರನ್ನು ಮಂತ್ರಿಯನ್ನಾಗಿ ಮಾಡಿದ. ನಂತರದ ಬೆಳವಣಿಗೆಯಲ್ಲಿ ಅವರೆಲ್ಲರೂ ಉಪಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದರು. ಇಷ್ಟಾದ ಮೇಲೆ ಬಿಜೆಪಿ 5ವರ್ಷ ಸಂಪೂರ್ಣ ಆಡಳಿತ ನಡೆಸಬೇಕಿತ್ತು. ಆದರೆ, ಅದಾಗಲಿಲ್ಲ.
ತಾನೇ ತೋಡಿಕೊಂಡ ಘೋರಿಯಲ್ಲಿ ಬಿದ್ದ ಯಡಿಯೂರಪ್ಪ
ಅಧಿಕಾರ ಚಲಾಯಿಸಲು ಜನತೆ ಕೊಟ್ಟ ಜನಾದೇಶವನ್ನು ಒಂದೆಡೆ ಇಟ್ಟು, ಅನ್ಯಮಾರ್ಗಗಳಿಂದ ಬೇರೆಬೇರೆ ಪಕ್ಷಗಳ ಶಾಸಕರನ್ನು ತನ್ನ ಪಕ್ಷದಿಂಧ ಗೆಲ್ಲಿಸಿಕೊಂಡಾಗಲೇ ಯಡಿಯೂರಪ್ಪ ತನ್ನ ಘೋರಿಯನ್ನು ಬಹಳ ಆಳವಾಗಿ ತೋಡಿಕೊಂಡಂತಾಗಿತ್ತು.
ಹಣ, ಅಧಿಕಾರಕ್ಕೆ ಬಂದಂಥವರು ಇಂದಿಲ್ಲ, ನಾಳೆ ನಮ್ಮನ್ನು ಬಿಡಬಹುದು ಎಂಬ ಕನಿಷ್ಟ ತಿಳುವಳಿಕೆಯೂ ಯಡಿಯೂರಪ್ಪನಿಗೆ ಇದ್ದಿಲ್ಲ. ಅದೆಲ್ಲವನ್ನು ಮೈಮರೆತು ತನ್ನದೇ ಆದ ಆಡಳಿತವನ್ನು ಆರಂಭಿಸಲು ಹೋದ. ಹಿಂದೆ ಭಿನ್ನಮತ ಎದ್ದಾಗ ಅದನ್ನು ನಿವಾರಿಸಲು ಶೆಟ್ಟರ್ನನ್ನು ಮಂತ್ರಿಯನ್ನಾಗಿ ಮಾಡಿದ್ದ. ನಂತರದ ಭಿನ್ನಮತದಲ್ಲಿ ಘಾತುಕಾಚಾರ್ಯನನ್ನು ಸಚಿವನನ್ನಾಗಿ ಮಾಡಿದ. ಅಲ್ಲಿಗೆ ಪಕ್ಷದಲ್ಲಿ ಭಿನ್ನಮತವೆಲ್ಲ ಶಮನಗೊಂಡಿತು ಎಂದು ತಿಳಿದು ಹಠಕ್ಕೆ ಬಿದ್ದು, ಶೋಭಾ, ಸೋಮಣ್ಣನನ್ನು ಮರಳಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡ. ಆಗಲೇ ಮತ್ತೊಂದು ಗುಂಪು ಬಂಡಾಯವೆದ್ದಿತು.
ಆದರೆ, ಇದೇ ಬಂಡಾಯ ಸಕರ್ಾರವೊಂದನ್ನು ಉರುಳಿಸಬಹುದೆಂದು ಯಡಿಯೂರಪ್ಪ ತನ್ನ ಕನಸಿನಲ್ಲಿಯೂ ಯೋಚಿಸಿರಲಿಕ್ಕಿಲ್ಲ. ಭಿನ್ನಮತ ಎದ್ದೇಳುತ್ತಿದಂತೆ ಯಾರನ್ನು ಸಮಾಜಾಯಿಷಬೇಕೆಂದೇ ಗೊತ್ತಾಗಲಿಲ್ಲ. ಯಾಕೆಂದರೆ, 16ಶಾಸಕರು ಬಿಗಿಪಟ್ಟು ಹಿಡಿದು ಮೊದಲಿನಿಂದಲೂ ಕುಮಾರಸ್ವಾಮಿಯವರ ಸಂಪರ್ಕದಲ್ಲಿದ್ದರು. ಅವರಿಗೆಲ್ಲ ಸಮಯ ಸಮಯಕ್ಕೆ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಗೈಡ್ ಮಾಡುತ್ತಿದ್ದರು. ಹೀಗಾಗಿ ಯಡಿಯೂರಪ್ಪನಿಗೆ ಸಕರ್ಾರ ಬೀಳುವ ಎಲ್ಲಾ ಲಕ್ಷಣಗಳು ಗೋಚರಿಸತೊಡಗಿದವು. ಸಂಕಟ ಬಂದಾಗ ವೆಂಕಟರಮಣ ಎಂಬಂತೆ ನನ್ನನ್ನು ಆ ದೇವರೇ ಉಳಿಸಬೇಕೆಂದು ತಿಳಿದು ಕಂಡ ಕಂಡ ದೇವಸ್ಥಾನಗಳನ್ನು ಸುತ್ತುತ್ತಾ, ಜ್ಯೋತಿಷಿಗಳನ್ನು ಕೇಳುತ್ತಾ, 6ವರೆ ಕೋಟಿ ಜನರ ಆಸ್ತಿಯಾದ ವಿಧಾನಸೌಧಕ್ಕೆ ಸಕರ್ಾರವನ್ನು ಉಳಿಸಿಕೊಳ್ಳಲು ಬೀಗಹಾಕಿದ. ಅದು ಸಾಲದೆಂಬಂತೆ ವಾಮಮಾರ್ಗವನ್ನು ಅನುಸರಿಸಿ ಮಾಠಮಂತ್ರಗಳನ್ನು ಮಾಡಿಸಿದ.
ಅಷ್ಟೊತ್ತಿಗೆ ಭಿನ್ನಮತೀಯರೆಲ್ಲರೂ ರೆಸಾಟರ್್ಗಳಿಂದಲೇ ತಮ್ಮ ಬೆಂಬಲವನ್ನು ಹಿಂಪಡೆದಿರುವುದಾಗಿ ರಾಜ್ಯಪಾಲರಿಗೆ ಪತ್ರ ರವಾನಿಸಿದರು. ಆ ಕ್ಷಣಕ್ಕೆ ರಾಜ್ಯಪಾಲರು ಯಡಿಯೂರಪ್ಪನಿಗೆ ಬಹುಮತ ಸಾಭೀತು ಮಾಡಲು 12ನೇ ತಾರೀಖನ್ನು ನಿಗದಿ ಮಾಡಿದರು. ಅಂದಿನಿಂದಲೇ ಯಡಿಯೂರಪ್ಪನಿಗೆ ತಳಮಳ ಶುರುವಾಯಿತು. ಬಿಜೆಪಿಯ ಹೈಕಮಾಂಡಂತೂ ಕಂಗೆಟ್ಟು ಹೋಯಿತು. ಇನ್ನು ಸಂಘಪರಿವಾರದ ಚೆಡ್ಡಿಗಳಿಗೆ ದಿಕ್ಕುತೋಚದಂತಾಯಿತು. ಅನಿವಾರ್ಯವಾಗಿ ಯಡಿಯೂರಪ್ಪ 11ಕ್ಕೆ ಬಹುಮತ ಸಾಭೀತು ಮಾಡೇ ತೀರುತ್ತೇನೆಂದು ಅಡ್ಡಾದಿಡ್ಡಿಯಾಗಿ ಹೇಳಿದ.
ಅದಕ್ಕೆ ಸ್ಪೀಕರ್ಗೆ ಕೆಲವೊಂದು ಅಸಂವಿಧಾನಿಕ ಮಾರ್ಗಗಳನ್ನು ಹೇಳಿ ಅತೃಪ್ತರ ಶಾಸಕರನ್ನು ಅನರ್ಹಗೊಳಿಸುವಂತೆ ಸೂಚಿಸಿದ. ಇನ್ನುಳಿದ ತನ್ನ 106 ಶಾಸಕರನ್ನು ಮಾತ್ರ ವಿಧಾನಸೌಧದೊಳಗೆ ಪ್ರವೇಶಿಸುವಂಥೆ ನೋಡಿಕೊಂಡು, ಪಕ್ಷೇತರರು, ಮಾಧ್ಯಮದವರು ಒಳಗಡೆ ಬಾರದಂತೆ ತಡೆಯಲು ಪೊಲೀಸರನ್ನು ಪೂರ್ವಯೋಜನೆಯಂತೆ ಆಯೋಜಿಸಿದ. ಅಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸದನದೊಳಗೆ ಹೋಗಲು ಹರಸಾಹಸವನ್ನೇ ಪಟ್ಟರು. ಪಕ್ಷೇತರರು ಮಾಷರ್ೇಲ್ಗಳನ್ನು ಹೊಡೆಬಡೆದು ಗೂಂಡಾಗಳಂತೆ ಸದನ ಪ್ರವೇಶಿಸಿದರು.
ವಿಧಾನಸೌಧಧ ಸುತ್ತಮುತ್ತ ಪೊಲೀಸರನ್ನು ಆಯೋಜಿಸಿ, ಮಾಧ್ಯಮದವರನ್ನು ಹೊರಗಿಟ್ಟು, ಸಂವಿಧಾನದ ನಿಯಮಾವಳಿಗಳನ್ನೇ ಗಾಳಿಗೆ ತೂರಿ ಧ್ವನಿಮತದ ಮೂಲಕ ನಾನೇ ಮುಖ್ಯಮಂತ್ರಿ ಎಂದು ಸಾಭೀತು ಮಾಡಿದ.
ಅಂದಿನ ಸ್ಥಿತಿಗತಿಯನ್ನು ಯಾರಾದರೂ ನೋಡಿದರೆ, ಕನರ್ಾಟಕದಲ್ಲಿ ಪ್ರಜಾಪ್ರಭುತ್ವ ಸಕರ್ಾರವಿದೆಯೇ ಎಂಬ ಪ್ರಶ್ನೇ ಕಾಡುತ್ತದೆ.
ಅದೇ ಸಂದರ್ಭಕ್ಕೆ ಸಕರ್ಾರವನ್ನು ವಜಾಗೊಳಿಸುವ ಹಿನ್ನಲೆಯಲ್ಲಿ ರಾಜ್ಯಪಾಲರು ರಾಷ್ಟ್ರಪತಿ ಆಡಳಿತವನ್ನು ಹೇರಬೇಕೆಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು. ಅದಾದ ಮಾರನೇ ದಿನಕ್ಕೆ ರಾಜ್ಯಪಾಲರು ಮತ್ತೊಮ್ಮೆ 14ಕ್ಕೆ ಬಹುಮತ ಸಾಭೀತುಪಡಿಸುವಂತೆ ಯಡಿಯೂರಪ್ಪನಿಗೆ ಸೂಚಿಸಿದರು.
ಬಿಜೆಪಿಯ ಹೈಕಮಾಂಡ್ ಕೂಡ ಯಡಿಯೂರಪ್ಪನಿಗೆ 14ಕ್ಕೆ ಬಹುಮತ ಸಾಭೀತು ಮಾಡುವಂತೆ ಆದೇಶಿಸಿದರು.
ಸ್ಪೀಕರ್ ಪಕ್ಷೇತರರು ಸೇರಿದಂತೆ ಬಂಡಾಯವೆದ್ದಿದ್ದ ಶಾಸಕರನ್ನು ಅನರ್ಹಗೊಳಿಸಿದ್ದರಿಂದ ಅವರೆಲ್ಲರ ಪ್ರಕರಣವು ಹೈಕೋಟರ್್ನಲ್ಲಿ ವಿಚಾರಣೆಯಲ್ಲಿತ್ತು.
ಹೈಕೋಟರ್್ ತೀರ್ಪನ್ನು ಕಾಯ್ದಿರಿಸಿ 14ರ ಬಹುಮತ ಅಂತಿಮವಲ್ಲ. ಅದು ಯಾರ ಗೆಲುವು ಅಲ್ಲ, ಸೋಲು ಅಲ್ಲ. ಎಂದು ತಿಳಿಸಿತ್ತು.
ಇದೇ ನಿಟ್ಟಿನಲ್ಲಿ ಯಡಿಯೂರಪ್ಪ ಸರಾಳವಾಗಿ 106ಶಾಸಕರ ಬೆಂಬಲವನ್ನು ಪಡೆದು 2ನೇ ಬಾರಿಗೆ ವಿಶ್ವಾಸ ಮತವನ್ನು ಸಾಭೀತುಪಡಿಸುವಲ್ಲಿ ಯಶಸ್ವಿಯಾದರು.
ಹೈಕೋಟರ್್ನ ತೀಪರ್ು 18ರಂದು ಅನರ್ಹಗೊಳಿಸಿರುವ ಶಾಸಕರ ಪರವಾಗಿ ಬಂದರೆ, ಮತ್ತೇ ಯಡಿಯೂರಪ್ಪನಿಗೆ ಕಂಟಕ ಕಟ್ಟಿಟ್ಟ ಬುತ್ತಿ. ಒಂದು ವೇಳೆ ಸ್ಪೀಕರ್ ಕ್ರಮ ಸರಿ ಎಂದು ತೀಪರ್ು ಬಂದರೆ, ಉಪ ಚುನಾವಣೆಯನ್ನು ಎದುರಿಸಬೇಕಾಗುತ್ತದೆ.
ಇತ್ತ ಜೆ.ಡಿ.ಎಸ್ ಹಾಗೂ ಕಾಂಗ್ರೇಸ್ ಪಕ್ಷದವರು ಯಡ್ಡಿಯನ್ನು ಕೆಳಗಿಳಿಸಲು ಹತ್ತಾರು ತಂತ್ರಗಳನ್ನು ಮಾಡುತ್ತಾ, ಕಾನೂನು ಹೋರಾಟವನ್ನು ಮಾಡಲು ಚಿಂತಿಸುತ್ತಿದ್ದಾರೆ.
ಆದರೆ, ಬುದ್ದಿಗೇಡಿ ಅಧ್ಯಕ್ಷ ಈಶ್ವರಪ್ಪ ಮಾತ್ರ ಮತ್ತೋಮ್ಮೆ ರಾಜ್ಯದಲ್ಲಿ ಆಪರೇಷನ್ ಕಮಲ ನಡೆದರೆ ಅಚ್ಚರಿ ಪಡಬೇಕಾಗಿಲ್ಲ ಎಂದು ಹೇಳಿಕೆ ಕೊಡುತ್ತಿದ್ದಾನೆ. ಅದರ ಭಾಗವಾಗಿ ಚನ್ನಪಟ್ಟಣದ ಜೆ.ಡಿ.ಎಸ್ನ ಶಾಸಕ ಅಶ್ವಥ್ 14ರಂದು ಶಾಸಕ ಸ್ಥಾನಕ್ಕೆ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ಕೊಟ್ಟಿದ್ದಾನೆ.
ಒಟ್ಟಾರೆ ಕನರ್ಾಟಕದಲ್ಲಿ ಬಾಬಾ ಸಾಹೇಬ ಅಂಬೇಡ್ಕರ್ರವರು ಬರೆದಿರುವ ಸಂವಿದಾನಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ.
ಇತ್ತೀಚಿಗೆ ಹತ್ತಾರು ದಿನಗಳಿಂದ ನಡೆದಿರುವ ವಿಧ್ಯಮಾನಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣುಕಿಸಿ ನೋಡುವಂತೆ ಮಾಡಿವೆ. ಕೆಲವೊಂದು ಮಾಧ್ಯಮಗಳಂತೂ ಇವುಗಳನ್ನು ಎಡಬಿಡದೇ ಪ್ರಸಾರ ಮಾಡಿದವು. ಕನರ್ಾಟಕದಲ್ಲಿ ಪ್ರ್ರಜಾಪ್ರಭುತ್ವವೆಂಬುದು ಬರೀ ಕಾಗದದ ಹಾಳೆಯಲ್ಲಿ ಮಾತ್ರ ಉಳಿದಿದೆ. ಸಕರ್ಾರದ ಕೆಲಸ ದೇವರ ಕೆಲಸ ಎನ್ನುವ ವಾಕ್ಯಕ್ಕೆ ಬೇರೆ ಅರ್ಥ ಬರತೊಡಗಿದೆ.
ಒಟ್ಟಾರೆ.. ಯಡಿಯೂರಪ್ಪನ ಹುಂಬತನದಿಂದ ರಾಜ್ಯದಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆಯಾಗಿರುವುದು ದುರಂತವೇ ಸರಿ.
ಎಂ.ಎಲ್

No comments:

Post a Comment

Thanku