ಕನ್ನಡದ ನವೋದಯ ಕಾಲದ ಹರಿಕಾರರಲ್ಲಿ ಕುಪ್ಪಳ್ಳಿ ವೆಂಕಟಪ್ಪನವರ ಮಗನಾದ ಪುಟ್ಟಪ್ಪನವರು ಒಬ್ಬರು. ಇವರ ಕಾವ್ಯನಾಮ ಕುವೆಂಪು. ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಅಪೂರ್ವ ಸಾಧನೆ ಮಾಡಿದ ಇವರು ಹೊಸಗನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿ ಹೊಸ ಮೌಲ್ಯಗಳನ್ನು ರೂಪಿಸಿಕೊಟ್ಟಂತವರು.ಅವರು 29/12/1904ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ ಗ್ರಾಮದಲ್ಲಿ ಜನಿಸಿದರು. ಕುವೆಂಪುರವರು ವಿಧ್ಯಾಬ್ಯಾಸವನ್ನು ಮೈಸೂರಿನಲ್ಲಿ ಮಾಡಿ, 1927ರಲ್ಲಿ ಬಿ.ಎ, 1929ರಲ್ಲಿ ಎಂ.ಎ ಪದವಿ ಪಡೆದರು. ತಾವು ಓದಿದ ಮೈಸೂರು ಮಹಾರಾಜ್ ಕಾಲೇಜಿನಲ್ಲಿ 1929ರಿಂದ ಕನ್ನಡ ಅಧ್ಯಾಪಕ ವೃತ್ತಿ ಆರಂಭಿಸಿದರು. 1955ರಲ್ಲಿ ಅದೇ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದರು. ಕೊನೆಗೆ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದರು. 1955ರಲ್ಲಿ ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿತು. 1957ರಲ್ಲಿ ಧಾರವಾಡದಲ್ಲಿ ನಡೆದ 37ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಕುವೆಂಪುರವರು ವಹಿಸಿಕೊಂಡಿದ್ದರು. 1958ರಲ್ಲಿ ಭಾರತ ಸಕರ್ಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು.1964ರಲ್ಲಿ ಕನರ್ಾಟಕ ಸಕರ್ಾರ ರಾಷ್ಟ್ರಕವಿ ಬಿರುದನ್ನು ನೀಡಿತು. 1968ರಲ್ಲಿ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ದೊರೆಯಿತು. ಕನ್ನಡಿಗರಲ್ಲಿ ಪ್ರಥಮ ಬಾರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಧೀಮಂತಿಕೆ ಕುವೆಂಪುರವರಿಗೆ ಸಲ್ಲುತ್ತದೆ.ಕುವೆಂಪುರವರು ಕಾದಂಬರಿ, ಕಥೆ, ಭಾವಗೀತೆ, ಪ್ರಬಂಧ, ನಾಟಕ, ಆತ್ಮಚರಿತ್ರೆ ಮುಂತಾದವುಗಳು ಬರೆದಿದ್ದಾರೆ.ಅವರ ಆತ್ಮಚರಿತ್ರೆಯಾದ ನೆನಪಿನ ದೋಣಿಯಲ್ಲಿ, ನಾಟಕಗಳಾದ ಶೂದ್ರತಪಸ್ವಿ, ಜಲಗಾರ, ಯಮನಸೋಲು, ಬೆರಳಿಗೆ ಕೊರಳ್, ರಕ್ತಾಕ್ಷಿ ಪ್ರಮುಖವು.ಇನ್ನು ಕಾದಂಬರಿಗಳಲ್ಲಿ ಕಾನೂರು ಸುಬ್ಬಮ್ಮ ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು, ಪ್ರಮುಖವಾದವುಗಳು.ವೈಚಾರಿಕ ಪ್ರಜ್ಞೆ, ಸಾಮೂಹಿಕ ಕಳಕಳಿ, ನಿಸರ್ಗ ಪ್ರೇಮ ಕುವೆಂಪು ಸಾಹಿತ್ಯದಲ್ಲಿ ಕಂಡು ಬರುವ ಜೀವಂತ ನಿಲುವುಗಳು. ಭಾವಗೀತೆ, ಪ್ರಬಂದ, ವಿಮಷರ್ೆ, ನಾಟಕ, ಆತ್ಮಚರಿತ್ರೆ, ಜೀವನ ಚರಿತ್ರೆ ಕ್ಷೇತ್ರಗಳಲ್ಲಿ ಕುವೆಂಪು ಸಾಧನೆ ಅಪೂರ್ವವಾದದ್ದು.ಹೊಸ ಕಾಲವು ಹಳೆಯ ಶ್ರದ್ದೆ, ನಂಬಿಕೆ, ಮೌಡ್ಯತನ ಎಲ್ಲವನ್ನು ಹುಸಿ ಮಾಡಿ ಇಡೀ ಮಾನವ ಕುಲ ಒಂದೆಂಬ ಆದರ್ಶವನ್ನು ನೀಡಿ ಹೊಸ ಕಾಲದ ಮೌಲ್ಯದರ್ಶನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಇವರ ಕಾವ್ಯ ಸಾಹಿತ್ಯ ನಮ್ಮೆಲ್ಲರಿಗೂ ಅವಕಾಶವನ್ನು ನೀಡಿದೆ ಎಂಬುದು ನಿಜಕಂಡ ಸಾಹಿತ್ಯವಾಗಿದೆ.ವಿಶ್ವ ಮಾನವ ಸಂದೇಶದ ಬಗ್ಗೆ ಇವರಿಗಿರುವ ಮನೋಭಾವನೆಯೂ ಇವರಿಂದ ರಚಿತವಾದ ಹಲವಾರು ಕವಿತೆಯ ಸಾಲುಗಳಲ್ಲಿ ನಾವು ಕಾಣಬಹುದು.ಓ ನನ್ನ ಚೇತನಆಗು ನೀ ಅನಿಕೇತನನೂರು ಮತದ ಹೊಟ್ಟು ತೂರಿಎಲ್ಲ ಮತದ ಎಲ್ಲೇ ಮೀರಿಓ ನನ್ನ ಚೇತನಆಗು ನೀ ಅನಿಕೇತನ1987 ಮಾಚರ್್ 22ರಂದು ನಡೆದ ವಿಶ್ವಕನ್ನಡ ಸಮ್ಮೇಳನ ನಡೆದ ಸಂದರ್ಭದಲ್ಲಿ ಕುವೆಂಪುರವರು ಈ ರೀತಿ ಹೇಳಿರುತ್ತಾರೆ.ಜಾತಿಯತೇ, ಮತೀಯತೆಯ ಹಿತದೃಷ್ಟಿಯಿಂದ ಮಾನವನ ಸಂಕುಚಿತ ಮನೋಭಾವನೆಯನ್ನೇ ಇಂದಿನಂತೆ, ಹೀಗಿನಂತೆ ಮುಂದುವರೆಸಿಕೊಂಡು ಹೋದರೆ, ವಿಶ್ವಕ್ಕೆ ವಿನಾಶ ತಪ್ಪಿದ್ದಲ್ಲ. ಇದನ್ನು ತಡೆಗಟ್ಟಲು ವಿಶ್ವಮಾನವರೆಲ್ಲರೂ ಮುಂದಾಗಬೇಕು. ಜಗತ್ತಿನ ಜನರೆಲ್ಲರೂ ವಿಶ್ವಮಾನವರೆನಿಸಬೇಕುಮತ ಮನುಜ ಮತವಾಗಬೇಕುಪಥ ವಿಶ್ವಪಥವಾಗಬೇಕುಒಮ್ಮೆ ಬಿ.ಎಂ.ಶ್ರೀರವರು ತಮ್ಮ ಪ್ರೀತಿಯ ಶಿಷ್ಯ ಕುವೆಂಪುರವರ ಕುರಿತು ಈ ರೀತಿ ಹೇಳುತ್ತಾರೆ. ಪ್ರತಿಯೊಂದು ಹೃದಯಾಂತರಂಗದಿಂದಲೇ ಹೊರಬರುವದರಿಂದ ಕೇಳುವವರಿಗೆ ಹಿತವೆನಿಸಿ ಸರಾಗವಾಗಿ ಶ್ರೋತೃಗಳ ಹೃದಯದ ಬಾಗಿಲುಗಳನ್ನು ಸ್ಪಷರ್ಿಇಸಿ ತಟ್ಟುತ್ತವೆ.ಕುವೆಂಪುರವರ ಒಂದೆರಡು ಆಯ್ದ ಕವನಗಳು.
ನಡೆ ಮುಂದೆ ಮುಂದೆನುಗ್ಗಿ ನಡೆ ಮುಂದೆಜಗ್ಗದಯೆ ಕುಗ್ಗದಯೆಹಿಗ್ಗಿ ನಡೆ ಮುಂದೆ.
ಭರತ ಖಂಡದ ಹಿಂದೆನನ್ನ ಮತವೆಂದುಭಾರತಾಂಬೆಯ ಸುಖಕ್ಕೆಸೋದರರು ಎಂದುಭಾರತಾಂಬೆಯ ಮುಕ್ತಿಮುಕ್ತಿ ನನಗೆಂದುನಡೆಮುಂದೆ ನಡೆಮುಂದೆ
ನುಗ್ಗಿ ನಡೆಮುಂದೆಜಗ್ಗದೆ, ಕುಗ್ಗದೆ,ಹಿಗ್ಗಿ ನಡೆಮುಂದೆ
ಕೆಳಮತದ ಕಲೆ ಎಲ್ಲ ಹೊಸಮತಿಯ ಹೊಳೆಯಲ್ಲಿ ಕೊಚ್ಚಿ ಹೋಗಲಿ. ಬರಲಿ ಜ್ಞಾನ ಬುದ್ದಿ ಗುಡಿ ಚಚರ್ು ಮಸೀಧಿಗಳ ಬಿಟ್ಟು ದೂರಬನ್ನಿ. ಬಡತನ ಬುಡಮಟ್ಟ ಕೀಳ ಬನ್ನಿಸಾಕಿನ್ನು ಸೇರಿರೈ ಮನುಜ ಮತಕ್ಕೆಕುವೆಂಪುರವರ ಇಂತಹ ಸಾಕಷ್ಟು ಕವನಗಳು ಸಾಮಾಜಿಕ ಕ್ರಾಂತಿಯನ್ನೇ ಮಾಡಿವೆ ಎಂದರೆ ತಪ್ಪಾಗಲಾರದು.
ನರಸಪ್ಪ ಯಾದವ, ಮುಖ್ಯಸ್ಥರು ವಿನಾಯಕ ಶಿಕ್ಷಣ ಸಂಸ್ಥೆ ಹ.ಚಿ.ಗ
Wednesday, January 5, 2011
ಓ..ನನ್ನ ಚೇತನ... ಆಗು ನೀ.. ಅನಿಕೇತನ....
Subscribe to:
Post Comments (Atom)
No comments:
Post a Comment
Thanku