ಉತ್ತಮ ಸಮಾಜಕ್ಕಾಗಿ ಅವಿರತ ಶ್ರಮ ಹಾಕುವವರು ನಮ್ಮ ಹಿಂದೆಮುಂದಿರುತ್ತಾರೆ. ಅದರಲ್ಲಿ ಕೆಲವರು ಬೆಳಕಿಗೆ ಬಂದರೆ, ಇನ್ನೂ ಕೆಲವರು ಸಮಾಜದ ಮೇಲ್ಮುಖಕ್ಕೆ ಬರದೇ, ಪರದೆಯ ಹಿಂದೆಯೇ ತಮ್ಮ ಸೇವೆಯನ್ನು ಸಲ್ಲಿಸುತ್ತಿರುತ್ತಾರೆ. ಅಂತವರನ್ನು ಗುರುತಿಸಿ, ಪ್ರೋತ್ಸಾಹಿಸುವ ಜವಾಬ್ದಾರಿಯನ್ನು ಈ ಎಲೆಮರೆಯಕಾಯಿ ಅಂಕಣ ಹೊರಲಿದೆ ಎಂದು ಭಾವಿಸಿ ನೂತನವಾಗಿ ಆರಂಭಿಸುತ್ತಿದ್ದೇವೆ. (ಸಂ)
ನೂರಾರು ಜೀವ ಉಳಿಸಿರುವ ಡಾ.ಮಾವಿನಕಟ್ಟಿ.
ಸಾಮಾನ್ಯರ ಜೊತೆ ಸಾಮಾನ್ಯರಾಗಿ, ಪ್ರಾಮಾಣಿಕ ಕರ್ತವ್ಯದಿಂದ, ನೂರಾರು ಜೀವಗಳನ್ನು ಉಳಿಸಿದ ಡಾ ರವೀಂದ್ರನಾಥ ಮಾವಿನಕಟ್ಟಿಯವರು ಹಟ್ಟಿಯ ಸುತ್ತಮುತ್ತಲಿನ ಹಳ್ಳಿಗಳ ಕೆಲವೊಂದು ಕುಟುಂಬಗಳ ಪಾಲಿಗೆ ಕಣ್ಣಿಗೆ ಕಾಣುವ ದೇವರೇ ಸರಿ. ಯಾಕೆಂದರೆ, ಇವರು ಹಾವುಗಳು ಕಚ್ಚಿದಾಗ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುವ ವ್ಯಕ್ತಿ ಮತ್ತು ಕುಟುಂಬಕ್ಕೆ ಆಪದ್ಭಾಂಭವರಾಗಿ, ಹಗಲಿರುಳು ಶ್ರಮಿಸಿ ಜೀವಗಳನ್ನು ಉಳಿಸುತ್ತಾರೆ.ಅಂತಹ ವ್ಯಕ್ತಿಯ ವಿವರಣೆ ನೀಡಲು ಈ ಸಂಚಿಕೆಯಲ್ಲಿ ನಾವು ಪ್ರಯತ್ನಿಸಿದ್ಧಿವಷ್ಟೇ.. ಹೈದರಬಾದ್ ಕನರ್ಾಟಕ ಭಾಗದಲ್ಲಿ ಹೆಸರಾದ ಅರವಳಿಕೆ ತಜ್ಞರಾದ ರವೀಂದ್ರನಾಥ ಈರಪ್ಪ ಮಾವಿನಕಟ್ಟಿಯವರು 20-07-1964 ರಂದು ಶ್ರಿಮತಿ ಬಸವಲಿಂಗಮ್ಮ ಹಾಗೂ ಈರಪ್ಪ ದಂಪತಿಗಳ ಮಗನಾಗಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಅಕ್ಕತಂಗೇರಹಾಳ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದರು. ಇವರ ತಂದೆಯಾದ ಈರಪ್ಪನವರು ಸಕರ್ಾರಿ ಶಾಲೆಯ ಶಿಕ್ಷಕರು ಮತ್ತು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಇವರ ತಂದೆಗೆ ಐವರು ಹೆಣ್ಣುಮಕ್ಕಳು, ಇಬ್ಬರು ಗಂಡು ಮಕ್ಕಳು ಸೇರಿ ಒಟ್ಟು 7ಜನ ಮಕ್ಕಳು. ಅದರಲ್ಲಿ ಮಾವಿನಕಟ್ಟಿಯವರು 6ನೇಯವರು. ತಾಯಿ ಬಸಲಿಂಗಮ್ಮನವರು ಕೂಡ ಅದೇ ಗ್ರಾಮದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿ, ಕೊನೆಗೆ ಶಾಲೆಯ ಮುಖ್ಯಗುರುಗಳಾಗಿ ಕೆಲಸ ಮಾಡಿದವರು.ಗುರುಗಳ ಸುಶಿಕ್ಷಿತ ಕುಟುಂಬದಲ್ಲಿ ಜನಿಸಿದ ರವೀಂದ್ರನಾಥ ಮಾವಿನಕಟ್ಟಿಯವರು ಪ್ರಾಥಮಿಕ ಶಿಕ್ಷಣವನ್ನು ತಮ್ಮ ಸ್ವಗ್ರಾಮದಲ್ಲಿ ಪೂರೈಸಿ, ಪ್ರೌಢಶಿಕ್ಷಣವನ್ನು ಬಿಜಾಪೂರದ ಸೈನಿಕ ಶಾಲೆ, 1984-89 ರಲ್ಲಿ ಬಳ್ಳಾರಿಯ ಸಕರ್ಾರಿ ವೈದ್ಯಕೀಯ ಕಾಲೇಜಿನಲ್ಲಿ ವೈಧ್ಯಕೀಯ ಶಿಕ್ಷಣವನ್ನು ಮುಗಿಸಿದರು.ನಂತರ ಡಿಪ್ಲೋಮಾ ಇನ್ ಅನೇಸ್ತೇಷಿಯಾ ಎಂಬ ಕೋಸರ್್ನ್ನು ಜೆ.ಎನ್.ಎಂ.ಸಿ ಮೆಡಿಕಲ್ ಕಾಲೇಜು ಬೆಳಗಾವಿಯಲ್ಲಿ 1991ರಿಂದ 1993ರವೆಗೆ ಯಶಸ್ವಿಯಾಗಿ ಮುಗಿಸಿ, ಬಿಜಾಪೂರದ ಅಲ್ಅಮೀನ್ ಮೆಡಿಕಲ್ ಕಾಲೇಜಿನ ಅರವಳಿಕೆ ವಿಭಾಗದಲ್ಲಿ ಉಪನ್ಯಾಸಕರಾಗಿ ಸೆಪ್ಟೆಂಬರ್ 1993ರಿಂದ ಎಪ್ರೀಲ್ 1998ರವರೆಗೆ 5ವರ್ಷಗಳ ಕಾಲ ಸೇವೆ ಸಲ್ಲಿಸಿದರು.ತದನಂತರ 1998ರಲ್ಲಿ ಹಟ್ಟಿ ಚಿನ್ನದ ಗಣಿ ಆಸ್ಪತ್ರೆಗೆ ಬಂದು ಸತತ 12 ವರ್ಷಗಳಿಂದ ತಮ್ಮ ಅಮೋಘ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಹಟ್ಟಿ ಆಸ್ಪತ್ರೆಯ ಆರಂಭದಿಂದ ಇಲ್ಲಿಯವರೆಗೆ ಮಹತ್ತರ ಸಾಧನೆ ಮಾಡಿರುವ ಕೆಲವೇ ಕೆಲವು ಪ್ರತಿಭಾನ್ವಿತ ವೈಧ್ಯರ ಪಟ್ಟಿಯಲ್ಲಿ ಮಾವಿನಕಟ್ಟಿಯವರು ಸೇರುತ್ತಾರೆ. ಪ್ರಸ್ತುತ ಇವರು ಹಟ್ಟಿಯ ಆಸ್ಪತೆಯಲ್ಲಿ ಅನೇಸ್ತೇಷಿಯನ್ ಹುದ್ದೆಯ ಜೊತೆ ಹೆಚ್ಚುವರಿಯಾಗಿ ರಕ್ತನಿಧಿ ಬಂಡಾರವನ್ನು ನೋಡಿಕೊಳ್ಳುತ್ತಿದ್ದಾರೆ.ರಾಯಚೂರು ಜಿಲ್ಲೆಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯಾರಿಗಾದರೂ ಹಾವುಗಳು ಕಚ್ಚಿದಾಗ ಮೊದಲಿಗೆ ಡಾ. ಮಾವಿನಕಟ್ಟಿಯವರ ಹತ್ತಿರಕ್ಕೆ ಓಡಿ ಬರುತ್ತಾರೆ. ಯಾಕೆಂದರೆ ಇವರು ತಮ್ಮ ವಿಧ್ಯಾನುಭವದಿಂದ ಎಷ್ಟೋ ಬಡಜೀವಗಳನ್ನು ಉಳಿಸಿ ಈ ಭಾಗದಲ್ಲಿ ಹೆಸರು ಮಾಡಿದ್ದಾರೆ.ಯಾವುದೇ ವ್ಯಕ್ತಿಗೆ ಮೊದಲಿಗೆ ಹಾವು ಕಡಿದ ತಕ್ಷಣ ಆತನ ಸ್ನಾಯುಗಳು ಹಾಗೂ ನರಗಳ ಎಳೆಯುವಿಕೆಯಿಂದ ಉಸಿರಾಟಕ್ಕೆ ತೊಂದರೆಯಾಗಿ ವ್ಯಕ್ತಿ ಮರಣವನ್ನಪ್ಪುವ ಸಾಧ್ಯತೆಗಳಿರುತ್ತವೆ. ಹಾವು ಕಡಿದಾಗ ಮೊದಲಿಗೆ ಕಚ್ಚಿದ ಭಾಗದಿಂದ 6ಇಂಚು ಮೇಲ್ಬಾಗದಲ್ಲಿ ರಕ್ತ ಮುಂದೆ ಹೋಗದಂತೆ ಬಟ್ಟೆಯನ್ನು ಗಟ್ಟಿಯಾಗಿ ಕಟ್ಟಬೇಕು. ಇದರಿಂದ ಹಾವಿನ ವಿಷ ಮೇಲಕ್ಕೇರದಂತೆ ತಡೆಹಿಡಿಯಬಹುದು. ಮತ್ತು ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಲು ಸಹಕಾರಿಯಾಗುತ್ತದೆ. ಈ ಆಲೋಚನೆ ಪ್ರತಿಯೊಬ್ಬರಿಗೆ ಆ ಕ್ಷಣದಲ್ಲಿ ಬರುವುದಿಲ್ಲ. ಆದರೆ, ಈ ರೀತಿಯ ಪ್ರಥಮ ಚಿಕಿತ್ಸೆಯಿಂದ ಜೀವಕ್ಕೆ ದಕ್ಕೆಯಾಗದಂತೆ ನೋಡಿಕೊಳ್ಳಬಹುದು ಎಂದು ಡಾ.ಮಾವಿನಕಟ್ಟಿಯವರು ಹಾವು ಕಡಿದಾಗ ಯಾವ ರೀತಿ ಪ್ರಥಮ ಚಿಕಿತ್ಸೆಯನ್ನು ಮಾಡಿಕೊಳ್ಳಬೇಕೆಂದು ಯಾರಾದರೂ ಪ್ರಶ್ನಿಸಿದಾಗ ಅವರಿಗೆ ಮೇಲಿನಂತೆ ವಿವರಣಿ ನೀಡುತ್ತಾರೆ.ಹಟ್ಟಿ ಚಿನ್ನದ ಗಣಿ ಆಸ್ಪತ್ರೆಗೆ ಬಂದ ನಂತರ ಇವರು 400ಕ್ಕೂ ಹೆಚ್ಚು ಹಾವು ಕಡಿತದ ರೋಗಿಗಳನ್ನು ಗುಣಪಡಿಸಿದ್ದಾರೆ. ಇದಲ್ಲದೇ ವಿಷ ಕುಡಿದು ಬಂದಂತಹ ರೋಗಿಗಳ ಜೀವಗಳನ್ನು ಉಳಿಸಿದ್ದಾರೆ. ಇವರ ಅಮೋಘ ಸೇವೆಯನ್ನು ಕಂಡು ಹಟ್ಟಿ ಮತ್ತು ಸುತ್ತಮುತ್ತಲಿನ ಗ್ರಾಮದ ಜನರು ಸದಾ ನೆನಪಿಸಿ ಕೊಳ್ಳುತ್ತಾ ಕೊಂಡಾಡುತ್ತಾರೆ. ಇಂತಹ ವೈಧ್ಯರ ಅವಶ್ಯಕತೆ ನಮ್ಮ ಭಾಗಕ್ಕೆ ಅತ್ಯವಶ್ಯಕ. ಜೊತೆಗೆ ವಕೀಲರಾದ ಮಾವಿನ ಕಟ್ಟಿಯವರ ಶ್ರೀಮತಿ ಮಂಜುಳ ಮಾವಿನಕಟ್ಟಿಯವರು ತಮ್ಮ ವೃತ್ತಿಗೆ ನ್ಯಾಯ ಸಲ್ಲಿಸುವದರೊಂದಿಗೆ ತಮ್ಮ ಪತಿಯವರಿಗೂ ಸಮಾಜ ಸೇವೆಯಲ್ಲಿ ಸಹಕಾರಿಯಾಗಿದ್ದಾರೆ. ದಂಪತಿಗಳಿಗೆ ಇರ್ವರು ಪುತ್ರರಿದ್ದು ಮೊದಲನೇಯದವನಾದ ಅಕ್ಷಯ ಎಂಬಾತ ಬೆಳಗಾವಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿಯಲ್ಲಿದ್ದು, ಇನ್ನೊರ್ವ ಪುತ್ರ ಶಿವಂ ಪ್ರೌಢಶಿಕ್ಷಣವನ್ನು ಪಡೆಯುತ್ತಿದ್ದಾನೆ.ವಿಶಾಲ ಸಮಾಜಕ್ಕೆ ಮಾವಿನಕಟ್ಟಿ ಕುಟುಂಬ ಸಲ್ಲಿಸುತ್ತಿರುವ ಅಪಾರ ಸೇವೆ ನಿಜಕ್ಕೂ ಶ್ಲಾಘನಾರ್ಹವಾದದ್ದು. ಡಾ. ಮಾವಿನಕಟ್ಟಿಯವರು ಮುಂದೆಯೂ ಉತ್ತಮ ಸೇವೆಯನ್ನು ಸಮಾಜದ ಸ್ವಾಸ್ಥ್ಯಕ್ಕಾಗಿ ಸಲ್ಲಿಸಲಿ ಎಂದು ಪತ್ರಿಕೆ ಹಾರೈಸುತ್ತದೆ
No comments:
Post a Comment
Thanku