Sunday, October 16, 2011

15 Sep 2011

Hutti gold mines story - TV9

ಬಂಗಾರದ ಪಂಜರ ವರದಿಯ ವಿಷಯವಸ್ತುವಾದ ಸಡಗೋಪಾನ್ ಕುಟುಂಬ ತೀರಾಸಂಕಷ್ಟದಲ್ಲಿದೆ. ನಮಗೆ ತೀರಾ ಬಡತನವಿದ್ದರೂ ಬಿಕ್ಷೆ ಬೇಡಿ ತಿನ್ನುವ ಪರಿಸ್ಥಿತಿ ಬಂದಿಲ್ಲ, ಟಿವಿಯವರು ನಿಮಗೆ ಪರಿಹಾರ ಕೊಡಿಸುತ್ತೇವೆ, ಕಂಪನಿಯವರು ನಿಮ್ಮ ಮನೆಗೆ ಬಂದು ಹಣವನ್ನು ಕೊಡುತ್ತಾರೆ ಅದಕ್ಕಾಗಿ ನೀವುಗಳು ನಾವು ಹೇಳಿದ ಹಾಗೆ ಕೇಳಿ ಅಂದಿದ್ದಕ್ಕೆ ನಾನು ಗಂಗಾಳ ಹಿಡಿದು ಕೊಂಡು ಬಿಕ್ಷುಕನ ಪಾತ್ರದಲ್ಲಿ ಕುಳಿತಿದ್ದೇ. ಆದರೆ, ಟಿವಿಯವರು ಅದನ್ನೆಲ್ಲ ಮಂದಿಗೆ ತೋರಿಸಿ ನನ್ನ ಇದ್ದ ಬಿದ್ದ ಮಾನಮಯರ್ಾದೆಯನ್ನೆಲ್ಲ ಹಾಳು ಮಾಡಿದ್ದಾರೆಂದು ಮೊನ್ನೆ ಸಡಗೋಪಾನರನ್ನು ವಿಚಾರಿಸಲು ಪ್ರಜಾಸಮರ ಹೋದಾಗ ಅವರ ಮುಂದೆಲ್ಲ ಕಣ್ಣೀರು ಹಾಕುತ್ತಾ ಹೇಳಿದರು.
ಸಡಗೋಪಾನ್ ಸಕರ್ಾರದ ದೃಷ್ಟಿಯಲ್ಲಿ ಮದ್ಯಮವರ್ಗದ ವ್ಯಕ್ತಿಯಂತೆ. ಕಾರಣ ಈತನಿಗೆ ಬಿ.ಪಿ.ಎಲ್ ಬದಲಿಗೆ ಎ.ಪಿ.ಎಲ್ ಕಾಡರ್್ನೀಡಿದೆ. ಟಿವಿ9 ಮಂದಿ ಸಡಗೋಪಾನ್ರಿಗೆ ಎ.ಪಿ.ಎಲ್ ಬದಲು ಅಂತ್ಯೋದಯ ಕಾಡರ್್, ವಸತಿಗಾಗಿ ಮನೆ, ವೃದ್ದಾಪ ವೇತನ ಕೊಡಿಸಬಹುದಿತ್ತು. ಅದನ್ನು ಬಿಟ್ಟು ಆತನ ಅಸಹಾಯಕತೆ ಬಳಸಿಕೊಂಡು ಸುದ್ದಿ ಮಾಡಿರುವುದು ಅಕ್ಷರಶಃ ಅಪರಾಧ.

ಉತ್ತಮ ಸಮಾಜದ ನಿಮರ್ಾಣಕ್ಕಾಗಿ ಕನರ್ಾಟಕದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಪ್ರಸಾರಗೊಳ್ಳುತ್ತಿರುವ ಟಿವಿ9, ಆರಂಭದಿಂದ ಎಡವಟ್ಟು ಮಾಡಿಕೊಂಡೇ ಬರುತ್ತಿದೆ. ನೆಲಕ್ಕೆ ಬಿದ್ದರೂ ಮೀಸೆಮಣ್ಣಾಗಲಿಲ್ಲ ಎಂಬಂತೆ ತನ್ನ ಪ್ರತಿಷ್ಟೆಗಾಗಿ ತಾನೇ ಹಲವು ಪ್ರಶಸ್ತಿಗಳನ್ನು ಘೋಷಿಸಿಕೊಂಡು ರಾಷ್ಟ್ರದ ನಂ.1 ಚಾನೆಲ್ ಎಂದು ಬೀಗುತ್ತಿದೆ!

ಕಳೆದ ಏಳು ತಿಂಗಳುಗಳ ಹಿಂದೆ ಬಂಗಾರದ ಪಂಜರವೆಂಬ ಶಿಷರ್ಿಕೆಯಡಿ ಹಟ್ಟಿ ಚಿನ್ನದ ಗಣಿಯ ಕುರಿತು ವರದಿ ಪ್ರಸಾರ ಮಾಡಿತ್ತು. ವರದಿಯ ಪ್ರಸಾರದ ನಂತರ ಎಲ್ಲರಿಂದ ಛೀ..ಥೂ..ಅಂತ ಉಗಿಸಿಕೊಂಡಿತ್ತು. ಕಾರಣ ವರದಿಯಲ್ಲಿ ಇಲ್ಲದ್ದನ್ನು ತಾವೇ ಸೃಷ್ಟಿಸಿ ತೋರಿಸಲಾಗಿತ್ತು. ಆ ನಂತರದ ದಿನಗಳಿಂದ ಇಲ್ಲಿಯವರೆಗೆ ಟಿವಿ9ನ ರಾಯಚೂರು ಜಿಲ್ಲಾ ವರದಿಗಾರ ಸಿದ್ದು ಬಿರಾದಾರ ಹಟ್ಟಿಯ ಕಡೆ ಮುಖ ತೋರಿಸಲೇ ಇಲ್ಲ.

ರಾಯಚೂರು ವರದಿಗಾರನಾದ ಸಿದ್ದಾರೂಢ ಅಲಿಯಾಸ್ ಸಿದ್ದು ಬಿರಾದಾರ ಹಟ್ಟಿಯ ವರದಿಗಾಗಿ ಅಸಹಾಯಕ ವೃದ್ಧನ ಕೈಗೆ ಊಟದ ತಟ್ಟೆ ಕೊಟ್ಟು ಭೀಕ್ಷೆ ಬೇಡಲು ಹೇಳಿದ್ದ.. ಅದನ್ನೇ ಪ್ರಶಸ್ತಿ ಪುರಸ್ಕೃತ ಅಬೂಬಕರ್ ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದು ಹಟ್ಟಿಯ ಕಾಮರ್ಿಕರೆಲ್ಲ ನಿವ್ಲತ್ತಿಯ ನಂತರ ಬಿಕ್ಷೆ ಬೇಡಿಕೊಂಡು ಬದುಕುತ್ತಿದ್ದಾರೆ. ಇಲ್ಲಿ ವೃದ್ದನೋರ್ವನಿಗೆ ಒಂದು ದಿನ ಬಿಕ್ಷೆ ತಪ್ಪಿದರೆ, ಅಂದೆಲ್ಲ ಹೊಟ್ಟೆಗೆ ತಣ್ಣಿರ ಬಟ್ಟೆ ಎಂತೆಲ್ಲ 30ನಿಮಿಷ ಕಿರುಚಿಕೊಂಡಿದ್ದ. (ಅಸಲಿಗೆ ಟಿವಿ 9 ತೋರಿಸಿದ ವೃದ್ದನಿಗೆ ಬಡತನವಿದೆ. ಆದರೆ, ಬಿಕ್ಷೆ ಬೇಡುವ ತಿನ್ನುವಂತಹ ಹೀನಾಯ ಸ್ಥಿತಿ ಬಂದಿಲ್ಲ)

ಸಿದ್ದುವಿನ ವರದಿ ಬಂದ ನಂತರ ಪ್ರಜಾಸಮರ ವಾಸ್ತವ ನೆಲೆಗಟ್ಟಿನ ಮೇಲೆ ಹಟ್ಟಿ ಚಿನ್ನದ ಗಣಿ ಹಾಗೂ ಸುತ್ತಮುತ್ತ ಏನೆಲ್ಲ ಅಕ್ರಮಗಳು ವ್ಯವಸ್ಥಿತವಾಗಿ ಹೇಗೆ ನಡೆಯುತ್ತಿವೆಂದು ಪ್ರಕಟಿಸಿತ್ತು. ಆದರೆ, ಅದನ್ನೆಲ್ಲ ಸಿದ್ದು ಹಟ್ಟಿ ಕಂಪನಿಯವರು ಹಣಕೊಟ್ಟು ನನ್ನ ವಿರುದ್ಧ ವರದಿ ಮಾಡಿಸಿದ್ದಾರೆಂದು ಕೆಲವರ ಮುಂದೆ ಹೇಳಿಕೊಂಡು ತಿರುಗಿದ. ಒಟ್ಟಾರೆ ಈ ವಿಷಯ ಟಿವಿ9ನ ಮುಖ್ಯಸರ ಕಿವಿಗೆ ಬಿತ್ತೋ ಇಲ್ಲ. ಚಚರ್ೆಯಂತೂ ಜಿಲ್ಲಾಮಟ್ಟದ ಎಲ್ಲಾ ಪತ್ರಕರ್ತರ ವಲಯದಲ್ಲಿ ನಡೆದು ಹೋಗಿದ್ದಂತು ಕಟುಸತ್ಯ.

ವರದಿಯ ಕೆಲವು ದಿನಗಳ ನಂತರ ಟಿವಿ9 ಮುಖ್ಯಸ್ಥರು ಸಿದ್ದುವಿನ ವರದಿಯನ್ನು ಸರ್ಮಥರ್ಿಸಿಕೊಂಡು ಮುಂದಿನ ದಿನಗಳಲ್ಲಿ ಯಾವುದೇ ವರದಿ ಮಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ಮಾಡಿ ಎಂದು ಮೌಖಿಕವಾಗಿ ಸೂಚಿಸಿದ್ದಾರಂತೆ! ಅಂದು ಅದು ಅಷ್ಟಕ್ಕೆ ಮುಗಿದು ಹೋಗಿದ್ದರೆ, ನಾವಿಂದು 1085 ಶಬ್ಧಗಳ ಸಂಪಾದಕೀಯ ಬರೆಯುವ ಅವಶ್ಯಕತೆ ಇರಲಿಲ್ಲ.

ಸಮಾಜ ಕಲುಷಿತಗೊಳಿಸುವವರಿಗೆ ರಾಷ್ಟ್ರಪ್ರಶಸ್ತಿಗಳು!

Express4media ಎಂಬ ರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆಯವರು eNBA 2011 ನೇ ಸಾಲಿನಲ್ಲಿ 26 ಪ್ರಶಸ್ತಿಗಳ ಪೈಕಿ ಒಂದನ್ನು Best News Programmeof the year 2011 -Kannada Bangarada Panjara (TV9 Karnataka) ಹಟ್ಟಿ ಚಿನ್ನದ ಗಣಿಯ ವರದಿಗಾಗಿ ಟಿವಿ9 ಗೆ ನೀಡಿದ್ದಾರೆ. ವಾಸ್ತವವಾಗಿ ಮಾಧ್ಯಮಗಳ ವಿಶ್ವಾಸಾರ್ಹತೆಯೇ ಗೊತ್ತಿಲ್ಲದ ಒಂದು ಸಂಸ್ಥೆ ನೀಡಿರುವ ಪ್ರಶಸ್ತಿಯನ್ನು ಟಿವಿ9 ನಿದರ್ೇಶಕ ಮಹೇಂದ್ರ ಮಿಶ್ರಾ, ರವಿಕುಮಾರ ಸೇರಿದಂತೆ ಹಲವರು ಆಸ್ಕರ್ ಪ್ರಶಸ್ತಿ ಸಿಕ್ಕಷ್ಟು ಸಂತಸಪಟ್ಟಿದ್ದಾರೆ. ವಾತರ್ೆ ಓದುವ ವಾಚಕರಿಂದ 2 ದಿನ ಪ್ರಶಸ್ತಿ ಕುರಿತು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಅದು ಸಾಲದೆಂಬಂತೆ ಟಿವಿ9ನ ವಿಶೇಷ ಕಾರ್ಯಕ್ರಮ ಬಂಗಾರದ ಪಂಜರ ವರದಿಗಾಗಿಯೇ ರಾಷ್ಟ್ರಪ್ರಶಸ್ತಿ, ಟಿವಿ9 ಮುಕುಟಕ್ಕೆ ಮತ್ತೊಂದು ಗರಿ ಎಂದಿದ್ದಾರೆ. ನಂತರ ಪ್ರಶಸ್ತಿ ಪಡೆದ ಅಬೂಬಕರ್ ಬೆಂಗಳೂರಿಗೆ ಮರಳಿದ ನಂತರ ಸಿದ್ದುವಿನನ್ನು ರಾಯಚೂರಿನಿಂದ ಕಛೇರಿಗೆ ಕರೆತಂದು ಕೇಕ್ ಕತ್ತರಿಸಿ, (ಹುಟ್ಟುಹಬ್ಬದಂತೆ) ಇವರಿಬ್ಬರನ್ನು ವೇದಿಕೆಯಡಿ ಕೂಡಿಸಿ ಪ್ಯಾನಲ್ ಚಚರ್ೆ ಮಾಡಿದ್ದಾರೆ. ಒಂದು ವೇಳೆ ಅಪ್ಪಿ ತಪ್ಪಿ ಟಿವಿ9ಗೆ ಮುಂದೊಂದು ದಿನ ಯಾವತ್ತಾದರೂ ಆಸ್ಕರ್ ತರಹದ ಅಂತರಾಷ್ಟ್ರೀಯ ಪ್ರಶಸ್ತಿಗಳು ದೊರೆತರೆ ಪರಿಸ್ಥಿತಿ ಕಷ್ಟ.
ಉತ್ತಮ ಮನಸ್ಥಿತಿಯನ್ನು ಹೊಂದಿರದ ಯಾವುದೇ ವ್ಯಕ್ತಿ, ಸಂಘ ಸಂಸ್ಥೆ ಉತ್ತಮ ಸಮಾಜವನ್ನು ಎಂದೆಂದಿಗೂ ನಿಮರ್ಾಣ ಮಾಡಲಾಗುವುದಿಲ್ಲ. ಟಿವಿ9ನ ಮಾಜಿ ಕ್ರೈಂ ಬ್ಯೂರೋ ರಾಘವೇಂದ್ರ ಹಲವು ಅನಾಹುತಗಳನ್ನು ಮಾಡಿ ಚಾನೆಲ್ನ್ನು ಬಿಟ್ಟು ಹೋದ. ಕೊಪ್ಪಳದಲ್ಲಿಯೂ ಮೂತರ್ಿಪ್ಯಾಠಿ ಎಂಬಾತ ಚಿಲ್ಲರೆ ವಿಷಯಗಳಿಗೆ ಆಗಾಗ ಕಿರಿಕ್ಗಳನ್ನು ಮಾಡಿಕೊಳ್ಳುತ್ತಿರುತ್ತಾನೆ. ಗುಲ್ಬರ್ಗ-ಹುಬ್ಬಳ್ಳಿ ಮುಗಿಸಿ ಈಗ ರಾಯಚೂರಿನಲ್ಲಿ ಕಸುಬು ಆರಂಬಿಸಿರುವ ಸಿದ್ದಾರೂಡ ಅಲಿಯಾಸ್ ಸಿದ್ದುಬಿರಾದಾರ ಕೂಡ ರಾಯಚೂರಿನಲ್ಲಿ ಕಂಡಕಂಡದ್ದನ್ನೆಲ್ಲ ಸ್ವಾಹ ಎನ್ನುತ್ತಿದ್ದಾನೆ... ಇಂತೆಲ್ಲ ಘನವ್ಯಕ್ತಿಗಳನ್ನು ಹೊಂದಿರುವ ಟಿವಿ9 ಚಾನೆಲ್ ಉತ್ತಮ ಸಮಾಜವನ್ನು ಅದೇಗೆ ನಿಮರ್ಾಣ ಮಾಡುತ್ತದೆ? ಇವರುಗಳ ಮಾಡುವ ವರದಿ ಎಲ್ಲವೂ ಸರಿಯಾಗಿದೆ ಎಂದು ಹಿರಿಯ ಸುದ್ದಿಸಂಪಾದಕ ಮಾರುತಿ ಹೇಗೆ ಒಪ್ಪುತ್ತಾರೆ ಮತ್ತು ರವಿಕುಮಾರನಂತಹ ಅನುಭವಿಗಳು ಎಲ್ಲವನ್ನು ಸೂಕ್ಷ್ಮವಾಗಿ ಗ್ರಹಿಸುವುದಿಲ್ಲವೇ? ಎಂಬ ಹಲವು ಪ್ರಶ್ನೆಗಳು ಸಾಮಾನ್ಯವಾಗಿ ಉದ್ಭವಿಸುತ್ತವೆ.. .

ಈವರೆಗೆ ಟಿವಿ9ನಲ್ಲಿ ಬಂದಂತಹ ಹಲವು ವರದಿಗಳನ್ನು ಸೂಕ್ಷ್ಮವಾಗಿ ಸಮಾಜದ ಕೆಳಸ್ತರದ ದೃಷ್ಟಿಯಿಂದ ನೋಡಿದರೆ, ಎಲ್ಲೋ ಒಂದು ಗುಂಪು ಸಮಾಜವನ್ನು ಕಲುಷಿತಗೊಳಿಸುವ ಪ್ರಯತ್ನವನ್ನು ವ್ಯವಸ್ಥಿತವಾಗಿ ಮಾಡುತ್ತಿದೆ ಎಂಬ ಅನುಮಾನ ಕಂಡುಬರುತ್ತದೆ.

ಕಳ್ಳ-ಕಾಕ, ಸುಳ್ಳಬುರಕ, ತಲೆಹಿಡುಕರಿಗೆ ಸಿಂಹಸ್ವಪ್ನವಾಗಿರುವ ಚಾನೆಲ್ ನಮ್ಮದು, ನಾವಿರುವುದು ಭ್ರಷ್ಟಾಚಾರವನ್ನು ಹೋಗಲಾಡಿಸಲು, ನಮ್ಮ ಹೆಸರ ಮೇಲೆ ಯಾರಾದರೂ ಬೆದರಿಸಿದರೆ, ಕೂಡಲೇ ಸಮೀಪದ ಪೊಲೀಸ್ ಠಾಣಿಗೆ ದೂರನ್ನು ನೀಡಿ ಎಂದು ಸ್ಕ್ರಾಲ್ನಲ್ಲಿ ಹಾಕುವ ಟಿವಿ9, ತನ್ನ ಸದಸ್ಯರಿಂದಲೇ ಹಾಡುಹಗಲು ಲೂಟಿ ಮಾಡುತ್ತಿದೆ. ಕನರ್ಾಟಕದಲ್ಲಿ ಅಲ್ಲೊಬ್ಬ, ಇಲ್ಲೊಬ್ಬ ಪ್ರಾಮಾಣಿಕ ವರದಿಗಾರರನ್ನು ಚಾನೆಲ್ ಹೊಂದಿದ್ದು ಬಿಟ್ಟರೆ, ಬರೀ ಲಂಪಟರನ್ನೇ ತುಂಬಿಕೊಂಡಿದೆ. ಟಿ.ಆರ್.ಪಿಗಾಗಿ ಬಡಿದಾಡುವ ಚಾನೆಲ್ಗಳಿಂದ ಸಾಮಾಜಿಕ ಕಳಕಳಿ ನೀರಿಕ್ಷಿಸುವುದು ಅಸಾಧ್ಯವಾಗಿ ಹೋಗಿಬಿಟ್ಟಿದೆ.

ಕನರ್ಾಟಕದಲ್ಲಿ 2ನೇ ನ್ಯೂಸ್ ಚಾನೆಲ್ ಆಗಿ ಆರಂಭಗೊಂಡ ಟಿವಿ9ನಲ್ಲಿ ಮೊದಲಿಗೆ ಹಮೀದ್ಪಾಳ್ಯ, ಗೌರೀಶ ಅಕ್ಕಿ, ರಂಗನಾಥನಂತಹ ಬುದ್ದಿವಂತ ಬರಹಗಾರರರಿದ್ದರು. ಕ್ರಮೇಣ ರಾಜ್ಯದಲ್ಲಿ ಸಂಭವಿಸಿದ ಮಾಧ್ಯಮ ಸಮರದಲ್ಲಿ ಎಲ್ಲರೂ ಚಾನೆಲ್ನ್ನು ಬಿಟ್ಟು ಹೋದರು. ಅವರೆಲ್ಲ ಹೋದಮೇಲೆ ರಾತ್ರಿ 12ರನಂತರ ವಾತರ್ೆ ಓದುವ ಯುವಕರು ವಿಶೇಷ ಕಾರ್ಯಕ್ರಮ, ಹಗಲು ವಾತರ್ೆಗಳನ್ನು ಓದಬೇಕಾಯಿತು.

ನಂತರ ಟಿವಿ9 ಮುಖ್ಯಸ್ಥರು ದೂರದ ದೆಹಲಿಯಿಂದ ಆಕಾಶ, ಚಂದ್ರ, ಭೂಮಿ ಹಾಗೂ ಪಾಕಿಸ್ತಾನ, ಅಮೇರಿಕ ದೇಶಗಳನ್ನು ಪರಿಚಯಿಸುತ್ತಿದ್ದ ಶಿವಪ್ರಸಾದ ಎಂಬಾತನನ್ನು ಬೆಂಗಳೂರಿಗೆ ಕರೆತಂದು ಆತನ ಮುಖಾಂತರ ಹಲವು ಕಾರ್ಯಕ್ರಮಗಳನ್ನು ನಡೆಸತೊಡಗಿದರು. ಇದಕ್ಕೆ ಲಕ್ಷ್ಮಣ ಹೂಗಾರನಂತಹ ಕೆಲವರು ಸಾಥ್ ನೀಡಿದರು..

ಮಾದ್ಯಮ ಮಂದಿಗೆಲ್ಲ ಅನ್ಯಶಾಸ್ತ್ರ ಕಲಿಸುವ ಅನಿವಾಸಿ ಕನ್ನಡಿಗ ಮಹೇಂದ್ರಮಿಶ್ರಾ ಕನರ್ಾಟಕದಲ್ಲಿ ಚಾನೆಲ್ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ವೈಯಕ್ತಿಕವಾಗಿ ಕಾಪರ್ೋರೆಟ್ ಜಗತ್ತಿನಲ್ಲಿ ಹೇಗೆ ಬದುಕಬೇಕೆಂಬದನ್ನು ಮಿಶ್ರಾ ಕನರ್ಾಟಕದಲ್ಲಿರುವ ಎಲ್ಲರಿಗಿಂತ ಚನ್ನಾಗಿ ತಿಳಿದುಕೊಂಡಿದ್ದಾರೆ. ಇಂದು ಚಾನೆಲ್ ರಾಜ್ಯಮಟ್ಟದಲ್ಲಿ ತನ್ನ ಟಿ.ಆರ್.ಪಿಯನ್ನು ಗಟ್ಟಿಯಾಗಿ ಉಳಿಸಿಕೊಂಡಿದ್ದಕ್ಕೆ ಕಾರಣಕರ್ತರೆಂದರೆ ಮಹೇಂದ್ರ ಮಿಶ್ರ.

ಹಿಂದೊಮ್ಮೆ ಕಾರ್ಯಕ್ರಮವೊಂದರಲ್ಲಿ ಮಾಜಿಮಂತ್ರಿ ಕೃಷ್ಣಯ್ಯಶೆಟ್ಟಿ ಮಾಜಿ ಕ್ರೈಂ ಬ್ಯೂರೋ ರಾಘವೇಂದ್ರನ ಹಲಕಟ್ ದಂಧೆಯ ಕುರಿತು ಮಿಶ್ರಾರವರಿಗೆ ಹೇಳಿದ್ದರು. ಏಕಾಏಕಿ ಮಿಶ್ರಾ ಮಾರನೇ ದಿನ ರಾಘವೇಂದ್ರನನ್ನು ಚಾನೆಲ್ನಿಂದ ಒದ್ದೋಡಿಸಿದ್ದ.

ದೇಶದಲ್ಲಿ ಕನರ್ಾಟಕದ ಪತ್ರಿಕೋದ್ಯಮಕ್ಕೆ ಬಹುದೊಡ್ಡ ಇತಿಹಾಸವಿದೆ. ಇಲ್ಲಿಯ ಮಂದಿ ದೇಶದ ಸುದ್ದಿಯನ್ನು ಕುಂತಲ್ಲಿಯೇ ಎಲ್ಲರಿಗಿಂತ ಹೆಚ್ಚು ಬಲ್ಲವರಂತೆ ಬರೆಯುತ್ತಾರೆ. ಜಗತ್ತಿನ ಎಲ್ಲಾ ಕಾಪರ್ೋರೇಟ್ರಗಳ ಅಂಗ ಸಂಸ್ಥೆಗಳು ಕನರ್ಾಟಕದಲ್ಲಿವೆ.
ಆದರೆ, ಯಾರೊಬ್ಬರು ಸ್ಥಳೀಯವಾಗಿ ರಾಜ್ಯಮಟ್ಟದ ಅಂತರಾಷ್ಟ್ರೀಯ ಭಾಷೆಯ ಚಾನೆಲ್ನ್ನು ತೆಗೆಯುವ ಪ್ರಯತ್ನ ಮಾಡಲಿಲ್ಲ.

ಈಗ ಅನಿವಾಸಿ ಕನ್ನಡಿಗ ಟಿವಿ9ನ ಮೂಲ ಮುಖ್ಯಸ್ಥ ಆಂದ್ರದ ರವಿಪ್ರಕಾಶ ಸಲಹೆಯನ್ನು ಯಶಸ್ವಿಯಾಗಿ ಪಡೆದು ನ್ಯೂಸ್9 ಎಂಬ ಇಂಗ್ಲೀಷ್ ಚಾನೆಲ್ನ್ನು ಶುರುಮಾಡಿದ್ದಾನೆ. ಈ ವಿಷಯ ಬೆಂಗಳೂರಿನ ಮಂದಿಗೆ ಮುಜುಗರ ಅನಿಸಿದರೂ ಒಪ್ಪಿಕೊಳ್ಳಬೇಕು.

ಮಹೇಂದ್ರ ಮಿಶ್ರಾರವರು ಎಲ್ಲಾ ಜವಾಬ್ದಾರಿಯ ಜೊತೆಗೆ ಬಹಳ ಮುಖ್ಯವಾಗಿ ಕನಿಷ್ಠ ಚಾನೆಲ್ನ ಪಾರದರ್ಶಕತೆ ಹಾಗೂ ಉಳಿವಿಗಾದರೂ ಚಾನೆಲ್ನ ಹುಡುಗರು ದಿನ ನಿತ್ಯ ಯಾವ ಕೆಲಸಗಳನ್ನು ಹೇಗೆ ನಿರ್ವಹಿಸುತ್ತಿದ್ದಾರೆ? ಅವರ ದಿನನಿತ್ಯದ ಆದಾಯವೇನು? ಅವರು ಎಲ್ಲೆಲ್ಲಿ ಆಸ್ತಿಗಳನ್ನು ಬೇನಾಮಿಯಾಗಿ ಮಾಡುತ್ತಿದ್ದಾರೆಂದು ಪರೀಕ್ಷಿಸಬೇಕು. ಅದನ್ನು ಬಿಟ್ಟು ನಿಮ್ಮನಿಮ್ಮ ಜಿಲ್ಲೆಯಲ್ಲಿ ನೀವೇನು ಬೇಕಾದರೂ ಮಾಡಿಕೊಳ್ಳಿ ನಮಗೆ ದಿನಕ್ಕೆರಡು ಬ್ರೇಕಿಂಗ್ ನ್ಯೂಸ್ ಕೊಟ್ಟರೇ ಸಾಕೆಂದು ಬೇರೆ ಚಾನೆಲ್ಗಳ ತರಹ ಮಿಶ್ರಾ ತಮ್ಮ ಹುಡುಗರಿಗೆ ಹೇಳಿದರೆ, ಮುಂದಿನ ದಿನಗಳಲ್ಲಿ ಟಿವಿ9 ಸಂಸ್ಥೆಗೆ ಉಳಿಗಾಲವಿಲ್ಲ.

ಊರಿಗೆ ಬೆಂಕಿ ಹತ್ತಿದಾಗ ಅದನ್ನು ಆರಿಸಬೇಕಾದದ್ದು ಪ್ರತಿಯೊಬ್ಬನ ಸಾಮಾಜಿಕ ಕರ್ತವ್ಯ. ಅದನ್ನು ಬಿಟ್ಟು ಹತ್ತಿದ್ದ ಬೆಂಕಿಗೆ ಇನ್ನಷ್ಟು ಪೆಟ್ರೋಲ್ ಹಾಕುವ ಕೆಲಸವನ್ನು ಯಾರು ಮಾಡಬಾರದು. ತಮಗೊಂದು ಸುದ್ದಿ ಬೇಕೆಂಬ ಕಾರಣಕ್ಕೆ ಇನ್ನೊಬ್ಬರನ್ನು ಸಮಾಜದಲ್ಲಿ ಅಪಹಾಸ್ಯಕ್ಕೀಡು ಸಿದ್ದುವಿನಂತೆ ಯಾರು ವರದಿಗಳನ್ನು ತಯಾರಿಸಬಾರದು.

ಮಿಶ್ರಾರವರು ಉತ್ತಮ ಸಮಾಜಕ್ಕಾಗಿ ಚಾನೆಲ್ ಹೊರಬರುತ್ತಿದೆಂದು ಕಾರ್ಯಕ್ರಮಗಳಲ್ಲಿ ಹೇಳಿದರೆ ಸಾಲದು, ಅದನ್ನು ಅದರ ನಿಲುವುಗಳಲ್ಲಿ ಅಳವಡಿಸಿಕೊಳ್ಳಬೇಕು.

ಪತ್ರಿಕಾ ಮಾಧ್ಯಮಗಳನ್ನು ಯಾರು ಪ್ರಶ್ನಿಸಬೇಕು...!

ಪತ್ರಿಕಾ ಮಾಧ್ಯಮಗಳನ್ನು ಯಾರು ಪ್ರಶ್ನಿಸಬೇಕು...!


ಪ್ರಜಾಪ್ರಭುತ್ವದ ಸ್ತಂಭಗಳನ್ನು ಪ್ರಶ್ನಿಸುವ ಏಕೈಕ ಹಕ್ಕು ಇದೇ ಎಂದಾಕ್ಷಣ ಸಾಮಾಜಿಕ ಸ್ವಾಸ್ಥ್ಯವನ್ನೆಲ್ಲ ಹಾಳು ಮಾಡಬೇಕೆಂದು ಯಾವ ಪತ್ರಿಕಾಧರ್ಮವು ಹೇಳಿಲ್ಲ. ಆದರೆ, ಇಂದಿನ ದಿನಗಳಲ್ಲಿ ಮಾದ್ಯಮ ವೃತ್ತಿ ಉದ್ಯಮವಾಗಿ ಪರಿವರ್ತನೆಗೊಂಡಿರುವದರಿಂದ ಮಾದ್ಯಮಗಳೇ ನಮ್ಮದು 4ನೇ ಅಂಗವೆಂದು ಸ್ವಯಂಘೋಷಣಿ ಮಾಡಿಕೊಂಡಿವೆ ಎನ್ನುತ್ತಾರೆ ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾದ್ಯಾಪಕ ಡಾ.ಅಶೋಕ ಕೆ.ಆರ್.

ಭ್ರಷ್ಟಾಚಾರ ಕೇವಲ ಸರಕಾರಿ ನೌಕರರ ಮತ್ತು ಸರಕಾರಕ್ಕಷ್ಟೇ ಸೀಮಿತವಾಗಿಸಬಹುದಾದ ಸಂಗತಿಯಾ? ಅನಧಿಕೃತವಾಗಿ ಸಾವಿರದಿಂದ ಲಕ್ಷ ರೂಪಾಯಿಗಳನ್ನು ಡೊನೇಷನ್ ಮತ್ತು ತಮ್ಮ ಟ್ರಸ್ಟ್ನ ಹೆಸರಿನಲ್ಲಿ ಪಡೆಯುವ ಶಾಲಾ ಕಾಲೇಜುಗಳು, ಎಂ.ಆರ್.ಪಿ ದರಕ್ಕಿಂತ ಹೆಚ್ಚು ಹಣ ಪಡೆಯುವ ಅಂಗಡಿಗಳು, ನಾರ್ಮಲ್ಲಾಗೇ ಆಗುವ ನಾರ್ಮಲ್ ಡೆಲಿವರಿಗೆ 50,000ದಿಂದ ಒಂದು ಲಕ್ಷದವರೆಗೆ ಪಡೆಯುವ ಪಂಚತಾರಾ ಆಸ್ಪತ್ರೆಗಳು ಇದರ ವ್ಯಾಪ್ತಿಗೆ ಬರುವುದಿಲ್ಲವಾ? ಎಂಬ ಪ್ರಶ್ನೆ ಎಲ್ಲರಲ್ಲೂ ಅಡಗಿದೆ.

ಭ್ರಷ್ಟಾಚಾರವನ್ನು ಸರಕಾರಕ್ಕೆ ಸೀಮಿತಗೊಳಿಸಿ ನಡೆಸುವ ಹೋರಾಟಗಳು ಕೊನೆಗೆ ಉಳಿದ ಹಣದಲ್ಲಿ ತಮ್ಮತಮ್ಮ ಪಾಲಿಗಾಗಿ ಕಿತ್ತಾಡಿ ಹೋರಾಟಗಳೇ ದಿಕ್ಕುತಪ್ಪಿ ಹೋಗುತ್ತವೆ.

ಇವೆಲ್ಲ ಒಂದೆದೆ ಇರಲಿ. ನಾವು ಅಣ್ಣಾ ಹಜಾರೆಯ ಹೋರಾಟವನ್ನು ಸಂಪೂರ್ಣ ಬೆಂಬಲಿಸುತ್ತೇವೆ ಎಂದು ಆರ್ಭಟಿಸಿದ, ಅಣ್ಣಾ ಹೋರಾಟವನ್ನು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂದು ಬಿಂಬಿಸಿದ ಪತ್ರಿಕೆ, ದೃಶ್ಯ ಮಾಧ್ಯಮದವರು ಉದ್ದಿಮೆ, ರಾಜಕಾರಣಿಗಳಿಂದ ಉಡುಗೊರೆ ರೂಪದಲ್ಲಿ ಹಣ ಪಡೆದು ಸುದ್ದಿ ತಿರುಚಿಯೋ ಅಥವಾ ವೈಭವೀಕರಿಸಿಯೋ ಪ್ರಕಟಿಸುವುದು ಭ್ರಷ್ಟಾಚಾರವಲ್ಲವಾ? ಬ್ಲಾಕ್ ಮೇಲ್ ಮಾಡಿ ಜನರಿಂದ ಹಣ ವಸೂಲು ಮಾಡುವುದು ಯಾವ ರೀತಿಯ ನೈತಿಕತೆ?

ಚಿಕ್ಕ ನಗರ, ಪಟ್ಟಣ ಮತ್ತು ತಾಲ್ಲೂಕು ವ್ಯಾಪ್ತಿಯಲ್ಲಿ ನಡೆಯುವ ಚುನಾವಣೆಯ ಸಂದರ್ಭದಲ್ಲಿ ಭ್ರಷ್ಟ ಪತ್ರಕರ್ತರ ಆರ್ಭಟವನ್ನು ನೋಡಬೇಕು. ಸಾವಿರ, ಲಕ್ಷಗಳ ಲೆಕ್ಕದಲ್ಲಿ ಹಣ ಪಡೆದು ಅಥವಾ ಬೆಲೆ ಬಾಳುವ ವಸ್ತುಗಳನ್ನು ಉಡುಗೊರೆಯ ಹೆಸರಿನಲ್ಲಿ ಪಡೆದು ಪಕ್ಷಪಾತಿಯಾಗಿ ವರದಿ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಇಲ್ಲಿ ಪತ್ರಕರ್ತರು ಭ್ರಷ್ಟರಾಗಿದ್ದಾರೆ!

ಕನರ್ಾಟಕದ ಉದಾಹರಣೆಯೆಂದರೆ ವಿಜಯ ಕನರ್ಾಟಕ ಪತ್ರಿಕೆಯ ಮುಂಚಿನ ಮಾಲೀಕರಾದ ವಿಜಯ ಸಂಕೇಶ್ವರರು ತಮ್ಮದೇ ರಾಜಕೀಯ ಪಕ್ಷ ಕಟ್ಟಿ ರಾಜ್ಯ ವಿಧಾನಸಭೆ ಚುನಾವಣೆಗೆ ನಿಂತಾಗ ಆ ಪತ್ರಿಕೆಯ ಸಂಪಾದಕ ಮತ್ತು ಪತ್ರಕರ್ತರ ಬಳಗ ಪತ್ರಿಕಾ ಧರ್ಮವನ್ನು ಮರೆತು ಎಲ್ಲೆಡೆಯೂ ತಮ್ಮ ಮಾಲೀಕರ ಪಕ್ಷವೇ ಮುನ್ನಡೆಯಲ್ಲಿದೆ ಎಂದು ವರದಿ ಮಾಡುತ್ತಿದ್ದರು. ಕೊನೆಗೆ ಗೆದ್ದಿದ್ದು ಒಬ್ಬರೋ ಇಬ್ಬರೋ ಅಷ್ಟೇ!

ಒಬ್ಬ ಪತ್ರಕರ್ತ ತಾನು ವಸ್ತುನಿಷ್ಠವಾಗಿ ಮಾಡಿದ ವರದಿಗೆ ಬೆದರಿಕೆಗಳು ಬಂದಾಗ ಆ ಪತ್ರಿಕೆಯ ಸಂಪಾದಕ ಕೂಡ ವೃತ್ತಿನಿಷ್ಠೆಯುಳ್ಳವನಾಗಿದ್ದಲ್ಲಿ ಬೆದರಿಕೆ ಒಡ್ಡಿದ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಸತತವಾಗಿ ತಿಂಗಳುಗಟ್ಟಲೆ ವಾಸ್ತವ ವರದಿಯನ್ನು ಮಾಡುತ್ತಾನೆ.

ಅಲ್ಲಿ ಪ್ರಕಟಗೊಳ್ಳುವ ವರದಿಗಳು ಸತ್ಯವನ್ನು ಜಗತ್ತಿಗೆ ತೋರಿಸುತ್ತಾ, ಬೆದರಿಕೆಗೆ ನಾವು ಜಗ್ಗುವುದಿಲ್ಲ ಎಂದು ಪತ್ರಿಕಾ ಧರ್ಮದ ಮೂಲಕವೇ ತಿಳಿಯಪಡಿಸುತ್ತಾನೆ ಹೊರತು ದ್ವೇಷದ ಮನೋಭಾವನೆ ಹೊಂದಿರುವುದಿಲ್ಲ.

ಆದರೆ, ಇಂದು ಅಂತಹ ಘಟನೆ ಮತ್ತು ವರದಿಗಳು ಕಡಿಮೆಯಾಗುತ್ತಿವೆ. ಸೇಡಿಗೆ ಸೇಡು ಹೆಚ್ಚಾಗುತ್ತಿದೆ. ಒಬ್ಬರಿಂದ ಹಣ ಪಡೆದು ಇನ್ನೊಬ್ಬರ ವಿರುದ್ಧ, ತಿರುಚಿದ ಸುದ್ದಿಗಳನ್ನು, ಸತ್ಯಕ್ಕೆ ವಿರುದ್ಧವಾದ ವರದಿಗಳನ್ನು ಬರೆಯುವ ಕೆಟ್ಟ ಪರಂಪರೆ ಪತ್ರಿಕೋಧ್ಯಮದಲ್ಲಿ ನಡೆಯುತ್ತಿದೆ.

ಸತ್ಯದಿಂದಿರುವವನಿಗೆ ತೊಂದರೆ ನೀಡುತ್ತಾ ದುಡ್ಡಿನ ಬಲವಿದ್ದವನಿಗೆ ಅನುಕೂಲ ಕಲ್ಪಿಸುವ ವ್ಯವಸ್ಥೆ ಜಾರಿಯಾಗುತ್ತಿದೆ.

ರಾಷ್ಟ್ರಮಟ್ಟದಲ್ಲಿ ಔಟ್ಲುಕ್, ಓಪನ್, ಮೇಲ್ ಟುಡೇ ಪತ್ರಿಕೆಗಳ ಮುಖಾಂತರ ಪ್ರಕಟಗೊಂಡ ನೀರಾ ರಾಡಿಯಾ ಟೇಪುಗಳು ಬಹಳಷ್ಟು ಖ್ಯಾತಿವೆತ್ತ ಪತ್ರಕರ್ತರ ಮುಖವಾಡಗಳನ್ನು ಬಯಲುಗೊಳಿಸಿದವು. ಎನ್.ಡಿ.ಟಿ.ವಿಯ ಬಖರ್ಾದತ್, ಹಿಂದೂಸ್ತಾನ್ ಟೈಮ್ಸನ ವೀರ್ಸಾಂಘ್ವಿ, ಬ್ಯುಸಿನೆಸ್ ವಲ್ಟರ್್ನ ಜಹಂಗೀರ್ ಪೋಚಾ, ಇಂಡಿಯಾ ಟುಡೇಯಲ್ಲಿ ಮೊದಲು ಕೆಲಸಕ್ಕಿದ್ದ ಶಂಕರ್ ಐಯರ್ ಇವರಲ್ಲಿ ಪ್ರಮುಖರು.

10ರೂಪಾಯಿ ಲಂಚ ಪಡೆದು ಸಿಕ್ಕಿಬಿದ್ದ ಪೇದೆಯನ್ನು ಬ್ರೇಕಿಂಗ್ ನ್ಯೂಸ್ನ ಹೆಸರಿನಲ್ಲಿ ದಿನವಹೀ ಸುದ್ದಿ ಪ್ರಸಾರಮಾಡುವ ಮಾಧ್ಯಮಗಳು ತಮ್ಮದೇ ಸಹೋದ್ಯೋಗಿಗಳು ಮಾಡಿದ ಲಕ್ಷಾಂತರ ರೂಪಾಯಿ ಹಗರಣಗಳ ಬಗ್ಗೆ ಮೌನ ತಾಳುವುದೇಕೆ? ಇತರೆ ಪತ್ರಕರ್ತರು ಸಿಕ್ಕಿಕೊಂಡದ್ದನ್ನು ತಮ್ಮ ವಾಹಿನಿಯಲ್ಲಿ ಪ್ರಕಟಿಸಿದರೆ ತಮ್ಮ ಬಂಡವಾಳವೂ ಮುಂದೊಂದು ದಿನ ಬಯಲಾಗಬಹುದೆಂಬ ಅಂಜಿಕೆಯಾ? ಫೇಸ್ ಬುಕ್, ಟ್ವಿಟರ್, ಬ್ಲಾಗ್ & ಇತರ ಅಂತಜರ್ಾಲ ಮಾಧ್ಯಮಗಳಲ್ಲಿ ಜನರ ಒತ್ತಾಯ ಅಧಿಕವಾದ ನಂತರವಷ್ಟೇ ದಿ ಹಿಂದು, ಇತರೆ ಪತ್ರಿಕೆಗಳಲ್ಲಿ ಈ ಹಗರಣಗಳ ಬಗ್ಗೆ ಒಳಪುಟಗಳಲ್ಲಿ ಸುದ್ದಿ, ಸಂಪಾದಕೀಯ ಬರಲಾರಂಭಿಸಿದವು.

ಕನರ್ಾಟಕದ ಮಟ್ಟಿಗೆ ಈಗ ಎಲ್ಲ ಮಾಧ್ಯಮಗಳಿಗೆ ಬಂಧನಕ್ಕೊಳಗಾಗಿರುವ ಗಣಿ ಧಣಿ(?) ಗಾಲಿ ಜನಾರ್ದನ ರೆಡ್ಡಿಯದೇ ದೊಡ್ಡ ಸುದ್ದಿ. ರೆಡ್ಡಿ ಟಿಫನ್ ಮಾಡುವುದು, ಕಿಚಡಿಯನ್ನು ತಿರಸ್ಕರಿಸಿ ಬಿಸ್ಕೀಟ್ ತಿಂದಿದದ್ದನ್ನು ಬ್ರೇಕಿಂಗ್ನಲ್ಲಿ ಹಗಲಿರುಳು ಬರತೊಡಗಿದೆ. ಇದಕ್ಕೂ ಮುನ್ನ ಯಡಿಯೂರಪ್ಪ ನೇತೃತ್ವದ ಸರಕಾರದ ಪತನಕ್ಕೆ ಕಾರಣವಾದ ಲೋಕಾಯುಕ್ತ ವರದಿಯಲ್ಲಿ ಪತ್ರಕರ್ತರಿಗೆ, ಪತ್ರಿಕೆಗಳಿಗೆ ಹಣ ನೀಡಿರುವ ಕುರಿತು ದಾಖಲೆಗಳಿವೆ!

ಡೈರಿಯೊಂದರಿಂದ ಲೋಕಾಯುಕ್ತರು ಪತ್ರಕರ್ತರ ಕುರಿತು ಸಾಕಷ್ಟು ಮಾಹಿತಿಗಳನ್ನು ಕಲೆಹಾಕಿದ್ದಾರೆ. ಗಣಿ ಹಗರಣದಲ್ಲಿ ಪಾಲ್ಗೊಂಡಿರುವ ರಾಜಕಾರಣಿಗಳ ಬಗ್ಗೆ ಆಕರ್ಷಕ ಹೆಡ್ಲೈನ್? ಬೈಲೈನ್ ಬರೆಯುವ ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಪತ್ರಕರ್ತರು ಪಡೆದ ಹಣದ ಬಗ್ಗೆ ಸೊಲ್ಲೇ ಇಲ್ಲ!

ಔಜಿಛಿಠಣಡಿಜ ಕೊನೆಗೆ ಜನರ ಗಮನಕ್ಕೆ ಈ ವಿಷಯವನ್ನು ತಂದದ್ದು ಕೂಡ ಕೆಲವು ಜನಪರ ಪತ್ರಿಕೆಗಳು. ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ವಾತರ್ಾ ಭಾರತಿ ಪತ್ರಿಕೆಗಳು ಮಾತ್ರ ಲೋಕಾಯುಕ್ತರ ಆ ಡೈರಿಯ ಪುಟಗಳನ್ನು ಪ್ರಕಟಿಸುವ ದೈರ್ಯ ತೋರಿದವು. ಅಂತಜರ್ಾಲದಲ್ಲಿ ಸಂಪಾದಕೀಯ, ಚುರುಮುರಿಯಂಥ ಕೆಲವು ಬ್ಲಾಗುಗಳು ಒಂದಷ್ಟು ಚಚರ್ೆ ನಡೆಸಿದ್ದನ್ನು ಬಿಟ್ಟರೆ ಉಳಿದೆಲ್ಲವುಗಳು ನೀರವ ಮೌನಕ್ಕೆ ಜಾರಿವೆ!!

ಇಂತಹದೊಂದು ಸಂದರ್ಭದಲ್ಲಿ ಲೋಕಾಯುಕ್ತ ವರದಿಗೆ ಸಂಬಂಧಿಸಿ ಪಾರದರ್ಶಕತೆಯಿಂದ ಪತ್ರಕರ್ತ ಸಮೂಹವೇ ಮುಂದಾಗಿ ತಮ್ಮ ಕೊಳೆಗಳನ್ನು ತೋರಿಸಿ ಉಳಿದ ವೃತ್ತಿಯವರಿಗೆ ಮಾದರಿಯಾಗಬಹುದಿತ್ತಲ್ಲವೇ? ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತದೆ.

ಆ ಡೈರಿಯಲ್ಲಿ ಪತ್ರಿಕೆ ಮತ್ತು ಪತ್ರಕರ್ತರೆಂಬ ಅನುಮಾನ ಬರುವ ಕೆಲವರ ಹೆಸರು ಮತ್ತವರಿಗೆ ಸಂದಾಯವಾದ ಹಣದ ಮಾಹಿತಿ ಮತ್ತು ದಿನಾಂಕವಿದೆ.

ಯಶವಂತ ದೇಶಪಾಂಡೆ/ ಬೆಂಗಳೂರು ಮಿರರ್/ ಸಂಜಯ್ ಸರ್ ಗೆ 1 (9/8/10ರಂದು), ವಿ. ಭಟ್ ಗೆ 50, 25(9/8/10 ಮತ್ತು 4/8/10), ಆರ್. ಬಿಗೆ 10 (31/7/10), ಸಂಜಯ್ ಸರ್ ಗೆ ಮತ್ತೆ 2, 1.5(15/9/10 ಮತ್ತು 18/9/10), ಸಂಜಯ್ ಸರ್ ರೆಫರ್ ಮಾಡಿದ ಸುರೇಶ್ ಭಟ್ ಗೆ 0.20 (8/8/10), ಪ್ರೆಸ್ ಕ್ಲಬ್ ಹರೀಶಗೆ 5 (28/9/10), ಸಂಜಯ್ ಸರ್ ಮುಖಾಂತರ ಬೆಂಗಳೂರು ಲೋಕಲ್ ಪತ್ರಿಕೆಗಳಿಗೆ 2.52, 1.52 (31/8/10 ಮತ್ತು 28/9/10), ಡೆಕ್ಕನ್ ಕ್ರಾನಿಕಲ್ಗೆ 25(28/9/10). ಡೈರಿಯಲ್ಲಿ ಹೋಟಲ್, ಡೀಸಲ್ ಮತ್ತಿತರ ಬಾಬತ್ತುಗಳಿಗೆ ನೀಡಿರುವ ಮೊತ್ತಗಳನ್ನು ಗಮನಿಸಿ ನೋಡಿದಾಗ ಮೇಲಿನ ಮೊತ್ತಗಳೆಲ್ಲ ಲಕ್ಷದಲ್ಲಿರುವ ಸಾಧ್ಯತೆ ಹೆಚ್ಚು. ಒಂದಷ್ಟು ಪತ್ರಿಕೆ ಮತ್ತು ಪತ್ರಕರ್ತರ ಹೆಸರುಗಳು ಪೂರ್ಣವಾಗಿವೆ. ಇನ್ನು ಕೆಲವು ಇನ್ಸಿಯಲ್ ಗಳಷ್ಟೇ ಇವೆ.

ಆರ್. ಬಿ ಮತ್ತು ವಿ.ಭಟ್ ಯಾರಿವರು? ಕನ್ನಡ ಪತ್ರಿಕೆ ಮತ್ತು ಪುಸ್ತಕಗಳನ್ನು ಓದುವ ಅಭ್ಯಾಸವಿರುವವರಿಗೆ ಆರ್.ಬಿ ಎಂದ ತಕ್ಷಣ ಹಾಯ್ ಬೆಂಗಳೂರಿನ ರವಿ ಬೆಳಗೆರೆ, ವಿ.ಭಟ್ ಎಂದರೆ ಈಗ ಕನ್ನಡ ಪ್ರಭ ಮತ್ತು ಸುವರ್ಣ ಟಿ.ವಿ.ಯ ಮುಖ್ಯಸ್ಥರಾಗಿರುವ ವಿಶ್ವೇಶ್ವರ ಭಟ್ಟರ ಹೆಸರುಗಳೇ ಮನದಲ್ಲಿ ಪಡಿ ಮೂಡುತ್ತವೆ. ರವಿ ಬೆಳಗೆರೆ ತಮ್ಮ ಬರವಣಿಗೆಯ ಶೈಲಿಯಿಂದ ಉಂಡಾಡಿ ಹುಡುಗರನ್ನು ಓದಿಗೆ ಹಚ್ಚಿದ್ದೇ ಹೆಚ್ಚು. ಈ ತಲೆಮಾರಿನ ಬಹಳಷ್ಟು ಹುಡುಗರು ಪತ್ರಕೋದ್ಯಮವನ್ನು ವೃತ್ತಿಯಾಗಿ ಸ್ವೀಕರಿಸಲು ರವಿಬೆಳೆಗೆರೆಯ ಬರವಣಿಗೆಯೇ ಕಾರಣವೆಂದು ಹೇಳುವದನ್ನು ನಾವು ನೋಡುತ್ತಿದ್ದೇವೆ.

ಕೆಲವೊಂದು ಬಾರಿ ಬಹಳಷ್ಟು ದಿನ ಪತ್ರಿಕೆಗಳ ಸಂಪಾದಕರ ಹೆಸರುಗಳು ಓದುಗರಿಗೆ ತಿಳಿದಿರುವುದಿಲ್ಲ. ತಮ್ಮ ಬರವಣಿಗೆಯ ಮುಖಾಂತರ ಸಂಪಾದಕನ ಸ್ಥಾನ ಪಡೆದು ಲಕ್ಷಗಟ್ಟಲೇ ಸಂಬಳ ಪಡೆಯುತ್ತಿದ್ದ ವಿಶ್ವೇಶ್ವರ ಭಟ್, ನೈತಿಕತೆಯ ಬಗ್ಗೆ ಪುಟಗಟ್ಟಲೇ ಬರೆದು ಓದುಗರನ್ನು ಮಂತ್ರಮುಗ್ದಗೊಳಿಸುತ್ತಾನೆ. ಆದರೆ, ಈತನೇ ಗಣಿ ಧೂಳಿಗೆ ಮೈಯೊಡ್ಡಿ ಹೊಲಸು ಮಾಡಿಕೊಂಡಿದ್ದಾನೆ. ವಿಶ್ವೇಶ್ವರ ಭಟ್ ಮತ್ತವರ ಶಿಷ್ಯರನ್ನು ವಿಜಯ ಕನರ್ಾಟಕದಿಂದ ಹೊರದಬ್ಬಲು ತಿಂಗಳುಗಳ ಹಿಂದೆಯೇ ಪತ್ರಿಕೆಯ ಮಾಲೀಕರಿಗೆ ಇವರ ಅಮೇಧ್ಯ ಬೋಜನದ ಅರಿವಾಗಿತ್ತೆಂಬುದು ಕಹಿಸತ್ಯ. ಭಟ್ರನ್ನು ಹೊರಹಾಕಲು ಕಾರಣವಾದ ಸಂಗತಿಗಳು ಉಳಿದ ಪತ್ರಿಕೆಗಳಿಗೆ ಗೊತ್ತಿದ್ದರೂ ಅಧಿಕೃತ ದಾಖಲೆಗಳಿಲ್ಲದ ಕಾರಣ ಪ್ರಕಟಿಸುವ ಧೈರ್ಯ (ಗೌರಿಲಂಕೇಶ್ ಪತ್ರಿಕೆ ಹೊರತುಪಡಿಸಿ) ಯಾರೊಬ್ಬರು ಮಾಡಲಿಲ್ಲ. ಕೆಲವು ಮೀಡಿಯಾ ಗಾಸಿಫ್ ಹೆಸರಲ್ಲಿ ವರದಿಗಳು ಜೊತೆಯಲ್ಲಿ ಕೆಲವೇ ಕೆಲವು ಪೀತ ಪತ್ರಿಕೆಗಳು ಮತ್ತು ಬ್ಲಾಗ್ ಗಳು ವಿಜಯ ಕನರ್ಾಟಕ ಮತ್ತು ಇತರೆ ಪತ್ರಿಕೆಗಳಲ್ಲಿ ನಡೆದ ಬದಲಾವಣೆಗೆ ಕಾರಣಗಳನ್ನು ತಿಳಿಸುವಲ್ಲಿ ಪ್ರಯತ್ನಪಟ್ಟವು. ಇನ್ನುಳಿದಂತೆ ಮುಖ್ಯವಾಹಿನಿಗಳದ್ದು ಯಥಾಪ್ರಕಾರ ಅರ್ಥಗಭರ್ಿತ ಮೌನ.

ರವಿಬೆಳಗೆರೆಯ ಬಗ್ಗೆ ಯಾರಾದರೂ ಬರೆದರೆ ಕೋಟರ್ು ಕಟಕಟೆ ಕಟ್ಟಿಟ್ಟಬುತ್ತಿ ಎನ್ನುತ್ತಿದ್ದ ನನ್ನ ಸ್ನೇಹಿತ ಪತ್ರಕರ್ತ. ಆದರೆ ರವಿ ಮಾತ್ರ ತಿನ್ನುವ ಕೆಲಸ ಬಹಳ ಶೃದ್ದೆಯಿಂದ ಮಾಡುತ್ತಾನೆ ಎನ್ನುತ್ತಾರೆ ಆತನ ಪತ್ರಿಕೆಯ ಬಳಗದ ಮಂದಿ.

ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭವೆಂದೆನಿಸಿಕೊಂಡ ಪತ್ರಿಕೋದ್ಯಮ, ಪ್ರಜಾಪ್ರಭುತ್ವದ ಓರೆಕೋರೆಗಳನ್ನು ತಿದ್ದದೇ ತಾನೇ ಅಧಃಪತನಕ್ಕೊಳಗಾಗುತ್ತಿರುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಹಾನಿಕಾರಕ ಬೆಳವಣಿಗೆ. ಸಮಾಜದ ಕಾವಲು ಕಾಯಬೇಕಾದ ಪತ್ರಕರ್ತರ ಮೇಲೆ ನಿಗಾ ಇಡಬೇಕಾಗಿರುವ ಪರಿಸ್ಥಿತಿ ಬಂದಿರುವುದು ಜಾಗತೀಕರಣ ನಮ್ಮೆಲ್ಲರಲ್ಲಿ ಹುಟ್ಟಿಹಾಕಿರುವ ಸ್ವಾರ್ಥ ದುರಾಸೆಗಳ ಫಲವಾದಿಂದಾಗಿ ಎಂಬುದನ್ನು ಯಾರು ಮರೆಯಬಾರದು. ಉತ್ತರವಿಲ್ಲದ ಅದೆಷ್ಟೋ ಪ್ರಶ್ನೆಗಳು ನಮ್ಮಲ್ಲಿವೆ. ಉತ್ತರ ಕೊಡಬೇಕಾದವರು ಫೇಸ್ ಬುಕ್, ಟ್ವಿಟ್ಟರ್ ಗಳಲ್ಲಿ ಫ್ರೆಂಡ್ಸ್ ಸಂಖ್ಯೆಯನ್ನು ಹೆಚ್ಚಿಕೊಳ್ಳಿಸುತ್ತಾ ಮೌನದಿಂದಿದ್ದಾರೆ.

ಡಾ. ಅಶೋಕ್. ಕೆ. ಆರ್.

ಪ್ರಭುವಿನ ಪಂಚಾಯತ್ ಪುರಾಣ...!

ಪ್ರಾಮಾಣಿಕ ವ್ಯಕ್ತಿಯೊರ್ವ ತನ್ನ ವ್ಯವಹಾರಗಳನ್ನು ಪಾರದರ್ಶಕವಾಗಿಟ್ಟುಕೊಳ್ಳಲು ಎಲ್ಲರೊಂದಿಗೆ ಎಲ್ಲ ಸಮಯದಲ್ಲಿ ಸಂಪರ್ಕದಲ್ಲಿರುತ್ತಾನೆ. ಆದರೆ, ಕಳ್ಳರೂ, ಸುಳ್ಳರೂ ಮಾತ್ರ ತಪ್ಪಿಸಿಕೊಳ್ಳಲು ವಾರಕ್ಕೊಂದು ನಂಬರ್ಗಳನ್ನು ಬದಲಿಸುತ್ತಾ ಸಾಗುತ್ತಾರೆ ಅದರಂತೆ ಉಂಡಾಡಿಗುಂಡ ಕೂಡ ಸಮಯಕ್ಕೊಂದು ಸಿಮ್ಗಳನ್ನು ಹಾಕುತ್ತಾ ಅಧಿಕಾರಿಗಳು ಮತ್ತು ಜನಸಾಮಾನ್ಯರನ್ನು ದಾರಿತಪ್ಪಿಸುತ್ತಿದ್ದಾನೆ. ಅವನು ದಿನನಿತ್ಯ ಬಳಸುವ ನಂಬರ್ಗಳು ಈ ಕೆಳಗಿನಂತಿವೆ. 9480874243, 9480874454, 9538698963, 8095446084, 9916099703. ಅನಕ್ಷರಸ್ಥ ಅಧ್ಯಕ್ಷ, ಉಂಡಾಡಿಗುಂಡ ಪಿಡಿಓ, ಊರಿಗೆ ಮೀರಿ ದಾರಿ ತಪ್ಪಿರುವ ಕೆಲವು ಸದಸ್ಯರೆಲ್ಲರೂ ಸೇರಿ ಹಟ್ಟಿ ಪಂಚಾಯತ್ನ್ನು ಹಾಳುಗೆಡವಿದ್ದಾರೆ. ಊರಿನ ಅಭಿವೃದ್ಧಿ ಬಗ್ಗೆ ಯಾರೊಬ್ಬರಿಗೂ ಕಾಳಜಿಯಿಲ್ಲ. ಎಲ್ಲರಿಗೆ ಸ್ವಪ್ರತಿಷ್ಟೆಯೇ ಮುಖ್ಯವಾಗಿ ಹೋಗಿದೆ ಎನ್ನುತ್ತಾರೆ. ನಮ್ಮ ಪ್ರತಿನಿಧಿ ಸತ್ಯ.


ಪ್ರಭುವಿನ ಪಂಚಾಯತ್ ಪುರಾಣ...!

ಗ್ರೇಡ್1 ಪಂಚಾಯತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಟ್ಟಿ ಗ್ರಾಮಪಂಚಾಯಿತಿ, ಆಡಳಿವನ್ನು ಅನುಷ್ಟಾನಕ್ಕೆ ತರುವಲ್ಲಿ ಸಂಪೂರ್ಣವಾಗಿ ವಿಫಲವಾಗಿ ಕೊನೆಯ ಸ್ಥಾನವನ್ನು ಹೊಂದಿದೆ.

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಊರಿಗೊಬ್ಬ ಲೀಡರ್ ಇದ್ದರೆ, ಹಟ್ಟಿಯಲ್ಲಿ ಮನೆಗೊಬ್ಬ ಮುಖಂಡರಿದ್ದಾರೆ. ಹೀಗಾಗಿ ಹಟ್ಟಿಯಲ್ಲಿ ಎಲ್ಲರ ಅಭಿಪ್ರಾಯಗಳು ಒಮ್ಮತವಾಗಿರದೇ ತಮ್ಮತಮ್ಮ ಸ್ವಾರ್ಥತೆಯನ್ನು ಎತ್ತಿತೋರಿಸುವಂತಿವೆ. (ಸಮಾಜದಲ್ಲಿ ದಡ್ಡರಿಗಿಂತ ಅತಿಹೆಚ್ಚು ಮೋಸಹೋಗುವವರು ಬುದ್ದಿವಂತರೇ!)

ಮಟ್ಕಾ, ಇಸ್ಪೀಟ್, ಲಿಕ್ಕರ್ಮಂದಿ ಪಂಚಾಯತಿಯನ್ನು ತಮ್ಮ ಸುಪಧರ್ಿಯಲ್ಲಿಟ್ಟುಕೊಳ್ಳಬೇಕೆಂದು ಹಗಲಿರುಳು ಹವಣಿಸುತ್ತಾರೆ. ಅದಕ್ಕಾಗಿ ಪಂಚಾಯತ್ ಚುನಾವಣೆಗಳಲ್ಲಿ ನಾನಾ ಗುಂಪುಗಳನ್ನು ರಚಿಸಿಕೊಂಡು ಇನ್ನಲ್ಲದ ಕಸರತ್ತುಗಳನ್ನು ಮಾಡಿ ತಮ್ಮ ಅಭ್ಯಥರ್ಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ದಲಿತ ಅಲ್ಪಂಖ್ಯಾತರು ಕೂಡ ತಮ್ಮದೇ ಗುಂಪುಗಳನ್ನು ರಚಿಸಿಕೊಂಡು ಚುನಾವಣೆ ಎದುರಿಸುತ್ತಾರೆ. ಇದರ ಜೊತೆಯಲ್ಲಿ ಲಿಂಗಾಯತರ ಗುಂಪೊಂದು ಯಾವಾಗಲೂ ಪಂಚಾಯಿತಿ ನಮ್ಮ ಹಿಡಿತದಲ್ಲಿರಬೇಕೆಂದು ಆಶಿಸುತ್ತಾರೆ. (ಕುಷ್ಟಗಿ ಶಾಸಕ ಅಮರೇಗೌಡ ಟೀಂ) ಒಟ್ಟಾರೆ ಎಲ್ಲರೂ ಪಂಚಾಯತಿಯನ್ನು ತಮ್ಮ ವಶದಲ್ಲಿಟ್ಟುಕೊಂಡು ಅಧಿಕಾರ ನಡೆಸಬೇಕೆನ್ನುವವರೇ ಹೊರತು ಗ್ರಾಮದ ಸಂಪೂರ್ಣ ಅಭಿವೃದ್ಧಿ, ಕಾಳಜಿ ಯಾರಿಗೂ ಬೇಕಾಗಿಲ್ಲ.

ಆದ್ದರಿಂದ ಹಟ್ಟಿಯ ಎಲ್ಲಾ ವಾಡರ್್ಗಳು ಅಭಿವೃದ್ಧಿ ಕಾಣದೇ, ಹದಗೆಟ್ಟಿವೆ. ವಾಡರ್್ಗಳಲ್ಲಿ ವ್ಯವಸ್ಥಿತ ಚರಂಡಿ, ಕುಡಿಯುವ ನರು, ರಸ್ತೆ ಸೌಕರ್ಯಗಳಿಲ್ಲ. ಕೆಲವೊಂದು ವಾಡರ್್ಗಳು ಹಂದಿಗಳು ವಾಸಿಸಲು ಯೋಗ್ಯವಿಲ್ಲದಂತಿವೆ.

ದೇಶದ ನಾನಾ ರಾಜ್ಯಗಳಿಂದ ವಲಸೆಬಂದಿರುವ ಹಲವು ಧಮರ್ಿಯರು ಇಲ್ಲಿದ್ದಾರೆ. ಹಟ್ಟಿಯಲ್ಲಿ ಅತ್ಯಧಿಕ ಜನಸಂಖ್ಯೆಯಿರುವ ದಲಿತ, ಅಲ್ಪಸಂಖ್ಯಾತರು ತಮ್ಮ ತಮ್ಮ ಅನುಕೂಲಗಳಿಗೆ ಇನ್ನೊಬ್ಬರನ್ನು ಬೆಂಬಲಿಸುತ್ತಾ, ತಮ್ಮ ಬದುಕನ್ನು ಮಾರಿಕೊಳ್ಳುತ್ತಾರೆ. ತಮಗಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳದೇ, ಇನ್ನೊಬ್ಬರಿಗೆ ಸಲಾಂ ಹೊಡೆದುಕೊಂಡು ಕಾಲಕಳೆಯುತ್ತಾರೆ.

ವಾಸ್ತವವಾಗಿ ಹಟ್ಟಿಯಲ್ಲಿ ಯಾರೊಬ್ಬರು ಊರಿನ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಇಲ್ಲಿನ ಅತ್ಯಧಿಕ ಮತಗಳಿಂದಲೇ ಆಯ್ಕೆಯಾಗುವ ತಾ.ಪಂ, ಜಿ.ಪಂ ಸದಸ್ಯರು ಗೆದ್ದನಂತರ ಗ್ರಾಮಗಳತ್ತ ಮರಳಿ ನೋಡುವುದಿಲ್ಲ. ಪಂಚಾಯತಿಗೆ ಬರುವ ಕಾರ್ಯದಶರ್ಿಗಳು ವಾತಾವರಣವನ್ನು ತಿಳಿದು ತಾಳಕ್ಕೆ ತಕ್ಕಂತೆ ಎಲ್ಲರನ್ನೂ ಕುಣಿಸಿಕೊಳ್ಳುತ್ತಾರೆ.

ಪ್ರತಿ ವರ್ಷ ಕೋಟಿಗಟ್ಟಲೇ ಹಣ ಉದ್ಯೋಗಖಾತ್ರಿಯಿಂದ ಹರಿದುಬರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಸಕರ್ಾರ ಜನರು ಗುಳೇಹೋಗಬಾರದು, ಇದ್ದೂರಿನಲ್ಲಿಯೇ ಉದ್ಯೋಗ ಪಡೆದು ಬದುಕು ಸಾಗಿಸಬೇಕೆಂದು ಈ ಮಹತ್ತರ ಯೋಜನೆಯನ್ನು ಜಾರಿಮಾಡಿದೆ. ಆದರೆ, ಈ ಯೋಜನೆ ದೇಶದಲ್ಲಿ ಸಂಪೂರ್ಣವಾಗಿ ಜಾರಿಯಾದರೂ ಎಲ್ಲ ಕಡೆ ವಿಫಲವಾಗಿದ್ದೇ ಹೆಚ್ಚು. ಅದರಂತೆ ಉದ್ಯೋಗಖಾತ್ರಿ ಕಾಮಗಾರಿಯನ್ನು ಕಾನೂನು ಪ್ರಕಾರವಾಗಿ ಮಾಡಿದರೆ, ಯಾವೊಂದು ಕೆಲಸಗಳು ಆಗುವುದಿಲ್ಲ. ಸುಮ್ಮನೆ ಬಂದಂತಹ ದುಡ್ಡು ಮರಳಿ ಯಾಕೆ ಕಳುಹಿಸಬೇಕೆಂದು ತಿಳಿದು ಪಂಚಾಯತ್ ಸದಸ್ಯರುಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಕಾನೂನನ್ನು ಮುರಿದು ಕಾಮಗಾರಿಗಳನ್ನು ಆರಂಭಿಸುತ್ತಾರೆ.

ಇಂತಹದೊಂದು ಸಮಜಾಯಿಷಿಯ ಅವಕಾಶವನ್ನು ಸದಸ್ಯರಿಂದಲೇ ಕೇಳಲು ಪಂಚಾಯತಿಯ ಅಧಿಕಾರಿಗಳು ಕಾದು ಕುಳಿತಿರುತ್ತಾರೆ. ಯಾವಾಗ ಸದಸ್ಯರು ಹೋಗಿ ಸಾರ್.. ನಮ್ಮ ಏರಿಯಾದ ಕೆಲಸವನ್ನು ಮಾಡಿಸುತ್ತೀವಿ ಅದಕ್ಕಾಗಿ ತಾವು ಅನುಮತಿ ಕೊಡಿ, ಮತ್ತು ಬೇಗನೇ ಬಿಲ್ ಮಾಡಿಕೊಡಬೇಕೆಂದು ಕೇಳಿದರೆ, ಆಗಲೇ ಅಧಿಕಾರಿಗಳು ವ್ಯವಹಾರವನ್ನು ಶುರುಹಚ್ಚಿಕೊಳ್ಳುತ್ತಾರೆ.

ನನಗೈದು ಪಸರ್ೇಂಟ್, ಜೆ.ಇ, ಇ.ಒ ಹಾಗೂ ಅಧ್ಯಕ್ಷನಗೆ ತಲಾ5ಪಸರ್ೆಂಟ್ ಕೊಡುವ ಮನಸ್ಸಿದ್ದರೆ ಕೆಲಸ ಆರಂಭಿಸಿ ಇಲ್ಲವೆಂದರೆ, ಬಿಟ್ಟುಬಿಡಿ ಪಮರ್ಾನು ಹೊರಡಿಸುತ್ತಾರೆ. ನಂತರ ನವುಗಳು ಕೆಲಸ ಆರಂಭಿಸಿದಾಗ ಯಾರಾದರೂ ತಕರಾರು ಮಾಡಿದರೆ, ಅದಕ್ಕೆ ನವುಗಳೇ ಹೊಣೆ ಎಂದು ಹೇಳುತ್ತಾ, ತಮ್ಮ ಪಾಲನ್ನು ಅಡ್ವಾನ್ಸ್ ಆಗಿ ಕಸಿದುಕೊಳ್ಳುತ್ತಾರೆ. ಅದರಂತೆ ಅಧ್ಯಕ್ಷನನ್ನಡಿದು ಮೇಲಿನವರು ಕೂಡ ತಮ್ಮ ಪಸರ್ೇಂಟೆಜ್ನ್ನು ಮುರಿದುಕೊಂಡು ಸಹಿ ಮಾಡುತ್ತಾರೆ.

ಸದಸ್ಯನಾದಾತ ತನ್ನ ಬೆಂಬಲಿಗರ ಕೈಯಲ್ಲಿ ಕೆಲಸ ಮಾಡಿಸಿ, ಇವರಿಗೆಲ್ಲ ಪಸರ್ೇಂಟೆಜ್ ಕೊಟ್ಟು ಗಳಿಸುವ ಲಾಭವಾದರೂ ಎಷ್ಟು? ಕಮೀಷನ್ ಆಧಾರದ ಮೇಲೆ ಕೆಲಸವಾದರೂ ಎಷ್ಟು ಗುಣಮಟ್ಟದ್ದಾಗಿರುತ್ತದೆ? ಹೀಗಿರುವಾಗ ಉದ್ಯೋಗಖಾತ್ರಿ ಯೋಜನೆ ಹೇಗೆ ತಾನೇ ಯಶಸ್ವಿಯಾಗಲು ಸಾಧ್ಯ? ಎಂಬ ಪ್ರಶ್ನೆ ಸಹಜವಾಗಿ ಎಲ್ಲರನ್ನು ಕಾಡುತ್ತದೆ.

ಇನ್ನು ಉದ್ಯೋಗಖಾತ್ರಿಯ ಕಾಮರ್ಿಕ ಹೆಸರುಗಳಲ್ಲಿ ಹೆಚ್ಚಿನವರು ಶ್ರೀಮಂತರು, ಸ್ಥಿತಿಯವಂತರೇ ಇರುತ್ತಾರೆ. ನಕಲಿ ಅಕೌಂಟ್ಗಳನ್ನು ಮಾಡಿಸಿ, ಮ್ಯಾನೇಜರ್ಗಳಿಗೆ ಕಮೀಷನ್ ಕೊಟ್ಟು ಬಿಲ್ನ್ನು ಎತ್ತಿಕೊಳ್ಳುತ್ತಾರೆ. ಅಂತಹ ಬೋಗಸ್ ಅಕೌಂಟ್ಗಳೇ ಹಟ್ಟಿ ಗ್ರಾಮಪಂಚಾಯತಿಯಲ್ಲಿ ಜಾಸ್ತಿಯಿವೆ.

ಇದು ಒಂದು ಯೋಜನೆಗೆ ಸಂಬಂಧಿಸಿದ ಮಾಹಿತಿ. ಇದರಂತೆ ವಸತಿ ಯೋಜನೆಗಳಲ್ಲಿ ಮನೆಗಳು ಬರುವದಕ್ಕಿಂತ ಮುಂಚೆಯೇ ಜನರ ಹತ್ತಿರ ಮನೆಗೆ 10,000ದಂತೆ ಸದಸ್ಯರು ವಸೂಲಿ ಮಾಡಿರುತ್ತಾರೆ. ಅಲ್ಲಿ ಅಸಲಿ ಫಲಾನುಭವಿಗಳಿಗೆ ಮನೆಗಳೇ ಸಿಗುವುದಿಲ್ಲ. ಬರೀ ಹಣಕೊಟ್ಟವನು, 2ಅಂತಸ್ತಿನ ಮನೆ ಇರುವವನು, ಬೆಳಿಗ್ಗೆದ್ದರೆ ತಹಸೀಲ್ ಕಛೇರಿ ಸುತ್ತುವವನು ಮಾತ್ರ ಮನೆಗಳನ್ನು ಪಡೆದಿರುತ್ತಾರೆ. ಇಲ್ಲಿಯೂ ಪಂಚಾಯತ್ನ ಅಧಿಕಾರಿಗಳು ಮನೆ ವೆರಿಫಿಕೇಷನ್ ಎಂದು ಹಂತಹಂತವಾಗಿ ಚೆಕ್ಗಳನ್ನು ನಡುವಾಗ ಪ್ರತಿಚೆಕ್ಗೆ ಕಮೀಷನ್ ಪಡೆದು ಸಹಿ ಮಾಡುತ್ತಾರೆ.

ಅದರಂತೆ ಪಂಚಾಯತ್ನ ಎಲ್ಲ ಯೋಜನೆಗಳಲ್ಲಿ ಅವ್ಯವಹಾರ ಸಾಮಾನ್ಯವಾಗಿ ಹೋಗಿದೆ. ಪಂಚಾಯತಿಯ ದುರಾಡಳಿತ, ಯೋಜನೆಗಳ ಜಾರಿಯಲ್ಲಿನ ಅಕ್ರಮಗಳ ವಿರುದ್ಧ ಪ್ರಾಮಾಣಿಕವಾಗಿ ಪ್ರತಿಭಟಿಸಬೇಕಾದ ಸಂಘಸಂಸ್ಥೆಗಳು, ಮುಖಂಡರು ಅಧಿಕಾರಿಗಳಿಂದ ಎಂಜಲು ಪಡೆದು ಹೋರಾಟಗಳನ್ನು ಕೈಬಿಡುತ್ತಾರೆ.

ವಿಶೇಷವಾಗಿ ಈ ಬಾರಿಯ ಆಡಳಿತದಲ್ಲಿ ಊರನ್ನು ಮೀರಿಸುವ ಮಂದಿ ಸದಸ್ಯರಾಗಿದ್ದಾರೆ. ಪಂಚಾಯತ್ನಲ್ಲಿ ಅಷ್ಟೆಲ್ಲ ಅವ್ಯವಹಾರ, ಅಕ್ರಮಗಳು ನಡೆಯುತ್ತಿದ್ದರೂ ತುಟಿಪಿಕೆನ್ನದೇ ಮೌನವಾಗಿದ್ದಾರೆ. ಯಾರಾದರೂ ಒತ್ತಾಯ ಮಾಡಿ ಕೇಳಿದರೆ, ಇಲ್ಲಾ..ರ್ರೀ.. ನಮ್ಮ ಅಧ್ಯಕ್ಷ ಸರಿಯಿಲ್ಲ, ಪಿಡಿಓ ಹೇಳಿದಲ್ಲಿ ಸಹಿಮಾಡುತ್ತಾನೆಂದು ಆಳು-ಮೂಳು ಹೇಳತೊಡಗುತ್ತಾರೆ.



ಉಂಡಾಡಿ ಗುಂಡ ಪಿ.ಡಿ.ಒ

ಪ್ರಭುಲಿಂಗ ಎಂಬ ಅನಾಮಿಕ ವ್ಯಕ್ತಿ ಹಟ್ಟಿ ಗ್ರಾಮಪಂಚಾಯತಿಯ ಪಿ.ಡಿ.ಓ. ಈತನು ಒದಿದ್ದು ಅಷ್ಟಕ್ಕಷ್ಟಾದರೂ ಮಾಡುವ ಧಿಮಾಕು ಮಾತ್ರ ಒಳ್ಳೆಯ ಐ.ಎ.ಎಸ್, ಐ.ಪಿ.ಎಸ್ನಂತೆ. ಎದೆ ಸೀಳಿದರೂ ನಾಲ್ಕಕ್ಷರ ಗೊತ್ತಿರದ ಪ್ರಭು ನಾಲ್ಕೆದು ಇಂಗ್ಲೀಷ್ ಶಬ್ಧವನ್ನು ಕಲಿತು ಹಟ್ಟಿಯನ್ನು ನಿಭಾಯಿಸುತ್ತಿದ್ದಾನೆ.

ಮಾತಿಗೊಮ್ಮೆ ಜಿ.ಪಂ ಸದಸ್ಯ ಭೂಪನಗೌಡನ ಸಂಬಂಧಿ ನಾನು, 3ದಶಕ ತಾಲೂಕನ್ನಾಳಿದ ಲಿಂಗಾಯತರು ನಾವು ಮತ್ತು ಇದೇ ಜನೆವರಿಗೆ ಪಿ.ಎಸ್.ಐ ಕೂಡ ಆಗುತ್ತೇನೆಂದು ಹೇಳುತ್ತಾ ಜನರ ಕಿವಿಮೇಲೆ ಗುಲಾಬಿ ಹೂ ಇಡುತ್ತಾ, ಹಟ್ಟಿ ಪಂಚಾಯತ್ನ ಲೂಟಿಗೆ ಕಂಕಣಬದ್ಧವಾಗಿ ನಿಂತಿದ್ದಾನೆ.

ಎಲ್ಲದರಲ್ಲಿಯೂ ದೊಡ್ಡದಾಗಿ ಪೋಸು ಕೊಡುವ ಕಮಂಗಿ ಪ್ರಭು ತಾನು ಕೆಲಸಕ್ಕೆ ಬಂದಿದ್ದೇ ಆಕಸ್ಮಿಕ ಎಂಬ ಕಹಿಸತ್ಯವನ್ನು ಮರೆತು ವತರ್ಿಸುತ್ತಿದ್ದಾನೆ. ಹಟ್ಟಿ ಗ್ರಾಮಪಂಚಾಯತ್ಗೆ ಬಂದಾಗಿನಿಂದ ಪ್ರತಿಯೊಂದರಲ್ಲಿಯೂ ಕಮೀಷನ್ ಪಡೆಯುವ ಈತ, ಇವರೆಗೆ ಕನಿಷ್ಟವೆಂದರೂ 50ಲಕ್ಷಕ್ಕೂ ಅಧಿಕ ಅಕ್ರಮ ಆಸ್ತಿ ಗಳಿಸಿದ್ದಾನೆಂಬ ಗುಮಾನಿ ಊರಲ್ಲಿ ಹರಡಿದೆ. ಕೆಲಸಕ್ಕೆ ಸೇರಿದಾಗಿನಿಂದ ಈವರೆಗೆ ಈತ ಗಳಿಸಿದ ಆದಾಯವೇನುಂಬದನ್ನು ಲೋಕಾಯುಕ್ತರು ತನಿಖೆಗೆ ಒಳಪಡಿಸಿದರೆ, ರಾಯಚೂರು ಜಿಲ್ಲೆಯಲ್ಲಿಯೇ ದೊಡ್ಡದೊಂದು ಮಿಕ ಸಿಕ್ಕಿಹಾಕಿಕೊಳ್ಳುವದರಲ್ಲಿ ಅನುಮಾನವಿಲ್ಲ.

"ಅ" ಎಂಬ ಅಕ್ಷರದ ಸಾಮಾನ್ಯ ಅರ್ಥ ಗೊತ್ತಿಲ್ಲದ ಪ್ರಭು ಹಟ್ಟಿಯ ಜೊತೆಯಲ್ಲಿ 2-3ಪಂಚಾಯತ್ಗಳನ್ನು ಬೇರೆ ಮೆಂಟೇನ್ ಮಾಡುತ್ತಾನೆ. ಮಾತಿಗೊಮ್ಮೆ ಇ.ಓ, ಸಿ.ಇ.ಓ ನನ್ನ ಮಾತನ್ನು ಕೇಳುತ್ತಾರೆ, ಅವರಿಗೆ ಪ್ರತಿತಿಂಗಳು ನಾನೇ ಮಾಮೂಲಿ ಕೊಡುತ್ತೇನೆ! ನೀವು ಏನುಬೇಕಾದರೂ ಕಂಪ್ಲೇಟ್ ಮಾಡಿ.. ನನ್ನನ್ನು ಯಾರೇನು ಮಾಡಿಕೊಳ್ಳುವುದಿಲ್ಲ ಎಂದು ಅಹಂಕಾರ ಮಾತುಗಳಾಡುತ್ತಾನೆ! (ಆದರೆ, ಪಂಚಾಯತ್ನ ಸದಸ್ಯರು ಈ ಹಿಂದೆ 2ಬಾರಿ ಸಂಬಂಧಪಟ್ಟವರಿಗೆ ಕಂಪ್ಲೇಂಟ್ ಮಾಡಿದರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ)

ಸಾರ್ವಜನಿಕರು ಮಾಹಿತಿ ಹಕ್ಕು ಕಾಯ್ದೆಯಡಿ ಈತನಿಗೆ ಸಾಕಷ್ಟು ಅಜರ್ಿಗಳನ್ನು ಕೊಟ್ಟಿದ್ದಾರೆ. ಆದರೆ, ಅದ್ಯಾವದಕ್ಕೂ ಕ್ಯಾರೆ ಎನ್ನದೇ ಉಂಡಾಡಿಗುಂಡ ಈವರೆಗೂ ಉತ್ತರ ನೀಡಿಲ್ಲ. ಅವೆಲ್ಲ ಅಜರ್ಿಗಳು ಆವಕ-ಜಾವಕನ ಪುಸ್ತಕದಲ್ಲಿವೆ. ಸ್ನೇಹಿತ, ಪತ್ರಕರ್ತ ಖಾಸೀಂಅಲಿ, ಉದ್ಯೋಗಖಾತ್ರಿ ಯೋಜನೆಗೆ ಸಂಬಂದಿಸಿ ಎರಡಮೂರು ಬಾರಿ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಅಜರ್ಿಯನ್ನು ನೀಡಿದ್ದಾನೆ. ಆದರೆ, ಈವರೆಗೂ ಆತನಿಗೆ ಸಂಪೂರ್ಣ ಮಾಹಿತಿಯನ್ನು ನೀಡದೇ ತಪ್ಪುದಾರಿಗಳನ್ನು ತೋರಿಸುತ್ತಿದ್ದಾನೆ. ಮಾಹಿತಿಗೆ ಸಂಬಂಧಿಸಿ ಯಾರಾದರೂ ಒತ್ತಡ ಹಾಕಿದರೆ ಮೊಬೈಲ್ ಸ್ವಿಚ್ಡ್ ಆಫ್ ಮಾಡುತ್ತಾನೆ.

ಪಂಚಾಯತ್ ವ್ಯಾಪ್ತಿಯಲ್ಲೊಬ್ಬಳು ಸೆಕೆಂಡ್ ಐಶು...!

ಹಟ್ಟಿ ಪಂಚಾಯತ್ ವ್ಯಾಪ್ತಿಯಲ್ಲಿ ಐಶು ಎಂಬ ವಿವಾಹಿತ ಗಂಡುಳ್ಳ ಮಹಿಳೆಯ ಹಿಂದೆ ಕೆಲವು ಸದಸ್ಯರು ಗಂಟುಬಿದ್ದಿರುತ್ತಾರೆ. ಐಶುವಿನ ಗಂಡ ನಿರುದ್ಯೋಗಿ ಮತ್ತು ಅಮ್ಮಾವ್ರಗಂಡ. ಐಶು ಹೇಳಿದ್ದನ್ನೇ ಕೇಳುವ ಗಂಡ ಆಕೆ ಯಾರ ಜೊತೆಯಲ್ಲಿ ಚಕ್ಕಂದವಾಡಿದರೂ ಅವನಿಗೇನು ವ್ಯತ್ಯಾಸವಿಲ್ಲ. ಇಂತಹ ಸೆಕೆಂಡ್ ಐಶುವನ್ನು ಒಲಿಸಿಕೊಳ್ಳಲು ಉಂಡಾಡಿಗುಂಡ ಪ್ರಭು ಹಲವು ಕಾಳುಹಾಕುವ ಪ್ರಯತ್ನ ಮಾಡಿದ್ದನೆಂಬ ಗುಮಾನಿ ಗುಟ್ಟಾಗಿಯೇನು ಉಳಿದಿಲ್ಲ. ಒಟ್ಟಾರೆ ಇಲ್ಲಿ ಐಶುವಿಗೂ ಪ್ರಭುವಿನ ಕೃಪೆ ಇದ್ದಂತಿದೆ!

ವಾಸು ಎಂಬ ಅಮಾಯಕ ಹುಡುಗನನ್ನು ಏಜೆಂಟ್ನನ್ನಾಗಿ ನೇಮಿಸಿಕೊಂಡ ಪ್ರಭು ತನ್ನೆಲ್ಲ ವ್ಯವಹಾರಗಳನ್ನು ಆತನ ಮುಖಾಂತರವೇ ಕುದುರಿಸಿಕೊಳ್ಳುತ್ತಿದ್ದಾನೆ. ಮೊನ್ನೆ ಬಿ.ಆರ್.ಜಿ.ಎಫ್ ಯೋಜನೆಯಡಿಯಲ್ಲಿ ಕಂಪ್ಯೂಟರ್ ಶಿಕ್ಷಣ ನೀಡಿದ್ದ ಚೈತನ್ಯ ಕಂಪ್ಯೂಟರ್ ಕೇಂದ್ರದವರಿಂದ ಬಿಲ್ಲಿಗೆ ಶೇ.25ರಷ್ಟು ಮಾಮೂಲಿ ಪಡೆದು ಜೊತೆಯಲ್ಲಿ ಒಂದೆರಡು ಕಂಪ್ಯೂಟರ್ಗಳನ್ನು ಉಚಿತವಾಗಿ ಪಡೆದಿದ್ದಾನೆ. ಉದ್ಯೋಗಖಾತ್ರಿ, ವಸತಿಯೋಜನೆ ಸೇರಿದಂತೆ ಪಂಚಾಯತ್ನ ಹಲವು ಯೋಜನೆಗಳಲ್ಲಿ ಮುಲಾಜಿಲ್ಲದೇ ಪಸರ್ೇಂಟೇಜ್ ಪಡೆದಿದ್ದಾನೆ!

ಜನಸಾಮಾನ್ಯರಿಗೆ ಗೊತ್ತಾಗದಂತೆ ಕುಡಿದು ತಿಂದು, ಅಮಾಯಕ ಮಹಿಳೆಯರೊಂದಿಗೆ ಲೋಲ್ಯಾಡುವ ಪ್ರಭು ಸಮಯ ಬಿದ್ದಾಗಲೆಲ್ಲ ನನ್ನ ರಿಲೇಷನ್ ಪೋಲಿಸ್ ಇಲಾಖೆಯ ಉನ್ನತ ಸ್ಥಾನದಲ್ಲಿದ್ದಾರೆಂದು ಹೇಳಿಕೊಳ್ಳುತ್ತಾನೆ. ಇನ್ನು ಹೆಚ್ಚಿನದಾಗಿ ಯಾರಾದರೂ ಪತ್ರಕರ್ತರು ಈತನನ್ನು ಪ್ರಶ್ನಿಸಿದರೆ, ಅವರಿಗೆ ಇಂತಿಷ್ಟೆಂದು ಮಾಮೂಲಿಯನ್ನು ಫಿಕ್ಸು ಮಾಡಿ ಅಧ್ಯಕ್ಷನ ಕಮಿಷನ್ನಲ್ಲಿ ಕೊಡಲು ಹೇಳುತ್ತಾನೆ. ಇದು ಹಟ್ಟಿಯ ಎಲ್ಲರ ಪಾಲಿಗೆ ದುರಂತವಲ್ಲದೇ ಮತ್ತೇನು?

ಅನಕ್ಷರಸ್ಥ ಅಧ್ಯಕ್ಷ, ದಾರಿ ತಪ್ಪಿರುವ ಸದಸ್ಯರು..

ಪರಿಶಿಷ್ಟರಿಗೆ ಮೀಸಲಿರುವ ಹಟ್ಟಿ ಗ್ರಾಮಪಂಚಾಯತ್ಗೆ ಬಸವರಾಜ ಖಾನಾಪೂರ ಎಂಬ ಅನಕ್ಷರಸ್ಥ ಮನುಷ್ಯ ಅಧ್ಯಕ್ಷನಾಗಿದ್ದಾನೆ.

ಮೂಲತಃ ಈತನು ವೃತ್ತಿಯಿಂದ ಕಟ್ಟಡಕಾಮರ್ಿಕ 7ನೇ ವಾಡರ್ಿನಿಂದ ಆಯ್ಕೆಗೊಂಡ ಈತ ಕನಸಿನಲ್ಲಿಯೂ ಹಟ್ಟಿ ಗ್ರಾಮಪಂಚಾಯತ್ನ ಅಧ್ಯಕ್ಷನಾಗುತ್ತೆನೆಂದು ಭಾವಿಸಿರಲಿಲ್ಲ. ಅದೃಷ್ಟಕ್ಕೆ ಅಧ್ಯಕ್ಷ ಸ್ಥಾನ ಮೀಸಲಾಗಿದ್ದೇ ಮತ್ತು ಪರಿಶಿಷ್ಟರಲ್ಲಿ ಅತಿಬುದ್ದಿವಂತರಿದ್ದುದ್ದೇ ಈತನಿಗೆ ವರವಾಯಿತು.

ಬುದ್ದಿವಂತರನ್ನು ಅಧ್ಯಕ್ಷನಾಗಿ ಆಯ್ಕೆ ಮಾಡಿದರೆ, ನಮ್ಮದೇನು ನಡೆಯುವುದಿಲ್ಲ ಎಂದು ಭಾವಿಸಿದ ಕೆಲವರು ಜಾತಿ ಮತ್ತು ಮಾತಿನ ಲೆಕ್ಕಾಚಾರದಡಿ ಬಸವರಾಜನನ್ನು ಅಧ್ಯಕ್ಷನನ್ನಾಗಿ ಮಾಡಿದರು.

ಮಾತಿಗೊಮ್ಮೆ ಶಿವಾಯನಮಃ, ಓಂನಮಃಶಿವಾಯ ಎನ್ನುವ ಅಧ್ಯಕ್ಷ ಬಸವರಾಜ ಎಂತಹ ಮುಗ್ಧನೆಂದರೆ, ಬೇರೆ ವಾಡರ್ಿನ ಸದಸ್ಯರು ಚಹಾಕುಡಿಯಲು ಕರೆದರೆ, ತಮ್ಮ ಸಹಪಾಠಿಯ ಒಪ್ಪಿಗೆಯನ್ನು ಪಡೆದು ಚಹಾಸ್ವೀಕರಿಸುತ್ತಾನೆ. ಪ್ರತಿಯೊಂದಕ್ಕೂ ತಲೆಯಾಡಿಸುವ ಅಧ್ಯಕ್ಷ ಓದಿದ್ದು, ಬರೆದದ್ದು, ತಿಳಿದದ್ದು ಅಷ್ಟಕ್ಕಷ್ಟೇ. ಪಂಚಾಯತಿಗೆ ಬರುವ ಎಲ್ಲ ಯೋಜನೆಗಳ ಕುರಿತ ಕಿಂಚಿತ್ತೂ ಮಾಹಿತಿ ಇರದ ಈತ ಎಲ್ಲರಿಗೂ ನಮಸ್ಕಾರ ಮಾಡುತ್ತಾ ಹೋಗುತ್ತಾನೆ.

ಈತನ ಅಮಾಯಕತೆಯನ್ನೇ ಕೆಲವರು ಬಂಡವಾಳ ಮಾಡಿಕೊಂಡು ಕುಂಟೆಬಿಲ್ಲೆ ಆಟವಾಡುತ್ತಿರುತ್ತಾರೆ. ಇದು ಒಂದೆಡೆಯಾದರೆ, ಮತ್ತೊಂದೆಡೆ ಬೇರೆ ಸದಸ್ಯರು ತಮ್ಮ ಕೆಲಸಗಳಿಗೆ ಮನ್ನಣಿ ಹಾಕಿಲ್ಲವೆಂದರೆ, ಅವಿಶ್ವಾಸ ಮಾಡುವ ಬೆದರಿಕೆಯನ್ನು ಹಾಕುತ್ತಾರೆ ಮತ್ತು ಹಾಕುತ್ತಿದ್ದಾರೆ.

ಪಿ.ಡಿ.ಓ ಪ್ರಭುಲಿಂಗ ಅಧ್ಯಕ್ಷನ ಆಗುಹೋಗುಗಳನ್ನೆಲ್ಲ ಅರಿತು, ತನಗೆ ತಿಳಿದಂತೆ ಅಧಿಕಾರ ಚಲಾಯಿಸುತ್ತಿದ್ದಾನೆ. 2011ನೇ ಸಾಲಿನ ಉದ್ಯೋಗಖಾತ್ರಿಯನ್ನು ಈವರೆಗೂ ಪಿಡಿಓ ಚಾಲನೆ ನೀಡದಿರುವುದು ಅಧ್ಯಕ್ಷನ ಕಾರ್ಯವೈಖರಿ ಎಂತಿದೆ ಎಂಬುದು ಸೂಚಿಸುತ್ತದೆ.

"ಬೆಕ್ಕು ಮನೆಯಲ್ಲಿ ಇಲ್ಲದಾಗ ಇಲಿ ಮತ್ತೇನೋ ಕೇಳಿತ್ತಂತೆ" ಅದರಂತೆ ಅಧ್ಯಕ್ಷ ಬಲವಾಗಿ ಇಲ್ಲದ ಕಾರಣ ಪಂಚಾಯತ್ ಅಧಿಕಾರಿಗಳು ಮತ್ತು ಕೆಲವು ಸದಸ್ಯರು ಮನಸ್ಸಿಗೆ ಬಂದಂತೆ ಆಟವಾಡತೊಡಗಿದ್ದಾರೆ. ಅದಕ್ಕಾಗಿ ಸಕರ್ಾರ ಅಧ್ಯಕ್ಷ ಸ್ಥಾನಕ್ಕೆ ಕನಿಷ್ಟ ಅರ್ಹತೆ ಹಾಗೂ ತಿಳುವಳಿಕೆಯ ಇರುವವರನ್ನು ನೇಮಕ ಮಾಡಲು ನಿಯಮವೊಂದನ್ನು ರೂಪಿಸುವುದು ಅವಶ್ಯ.

ದಾರಿತಪ್ಪಿರುವ ಸದಸ್ಯರು!

ಈ ಬಾರಿಯ ಪಂಚಾಯತ್ಗೆ ಉಂಡುಂಡು ತಿರುಗೋ ಮಂದಿನೇ ಹೆಚ್ಚು ಆಯ್ಕೆಯಾಗಿದ್ದಾರೆ. ಸಾಮಾಜಿಕ ಜವಾಬ್ದಾರಿ, ವ್ಯವಸ್ಥೆ, ಸಂಘಟನೆ, ತಿಳುವಳಿಕೆ ಇಲ್ಲದವರು ಅಧಿಕವಾಗಿ ಆಯ್ಕೆಯಾಗಿದ್ದಾರೆ.

ಯುವಕರು ರಾಜಕಾರಣಕ್ಕೆ ಬರಬೇಕು. ಯುವಕರೇ ದೇಶದ ಭವಿಷ್ಯ ಎಂಬಿತ್ಯಾಧಿ ಗಾದೆಗಳು ಅಕ್ಷರಶಃ ಹಟ್ಟಿ ಗ್ರಾಮಪಂಚಾಯತ್ನ ಆಡಳಿತದಲ್ಲಿ ಅಕ್ಷರಶಃ ಸುಳ್ಳಾಗಿವೆ. ಪಂಚಾಯತ್ನ ಹಿಂದಿನ ಅದೆಷ್ಟೋ ಆಡಳಿತಗಳು ಯುವಕರನ್ನು ಹೊಂದಿಲ್ಲದಿದ್ದರೂ ಯಜಮಾನ ಮಂದಿ ಸುಸೂತ್ರವಾಗಿ ಪಂಚಾಯತ್ನ್ನು ನಡೆಸಿಕೊಂಡು ಹೋಗಿದ್ದಾರೆ. ಆದರೆ, ಈ ಬಾರಿಯ ಯುವಕ ಮಂದಿ ಸಂಜೆ ಖಚರ್ು, ಇಸ್ಪೀಟ್, ಮಟ್ಕಾಗೆ ಬಿದ್ದಿರುವುದು ದುರಂತವಾಗಿದೆ. ದೊಡ್ಡವರೆಂದು ಕರೆಯಿಸಿಕೊಳ್ಳುವ ಸದಸ್ಯರೂ ಕೂಡ ಯುವಕರ ಮಾತಿಗೆ ಮಣಿ ಹಾಕುತ್ತಿದ್ದಾರೆ. ಇನ್ನೂ ಮಹಿಳೆಯರೂ ಗೆದ್ದಿರುವ ವಾಡರ್್ಗಳಲ್ಲಿ ಅವರ ಕುಟುಂಬದ ಸದಸ್ಯರೂ ಕೂಡ ಜವಾಬ್ದಾರಿಯಿಂದ ಅಧಿಕಾರವನ್ನು ಚಲಾಯಿಸುವಲ್ಲಿ ವಿಫಲರಾಗಿದ್ದಾರೆ.

ಮೊನ್ನೆ ಮಾನಪ್ಪ & ಟೀಂ ಅಧ್ಯಕ್ಷನ ವಿರುದ್ಧ ಅವಿಶ್ವಾಸ ಮೂಡಿಸಲು ತಯಾರಿ ನಡೆಸಿದಾಗ ಪ್ರತಿಯೊಬ್ಬ ಸದಸ್ಯರು ಕೇವಲ 10.000ರೂಗಳಿಗೆ ಮಾರಾಟವಾಗಿದ್ದರು! ಇದರಿಂದ ಅಧ್ಯಕ್ಷ ಕೂಡ ಹೊರತಾಗಿಲ್ಲ.

ಊರಿನ ಅಭಿವೃದ್ಧಿಯನ್ನು ಮರೆತಿರುವ ಸದಸ್ಯರು, ಅಕ್ಷರಜ್ಞಾನವಿದ್ದು ಇಲ್ಲದಂತೆ ವತರ್ಿಸುವ ಕೆಲವು ಪತ್ರಕರ್ತರು, ಕಮೀಷನ್ಗೊಂದು ಸಂಘವನ್ನು ಕಟ್ಟಿಕೊಂಡಿರುವ ನಕಲಿ ಮುಖಂಡರು, ಪಂಚಾಯತ್ನ ಹುಳುಕುಗಳನ್ನೆಲ್ಲ ತಿಳಿದು ಅವಕಾಶವಾದಿತನವನ್ನು ಪ್ರದಶರ್ಿಸುವ ಬುದ್ಧಿವಂತರು, ದಲಿತರಲ್ಲದವರನ್ನು ದಲಿತರನ್ನಾಗಿ ಮಾಡಲು ಸುಳ್ಳುಜಾತಿ ಪ್ರಮಾಣಪತ್ರಗಳನ್ನು ತಯಾರಿಸಿ ಸಕರ್ಾರಿ ಸೌಲಭ್ಯಗಳನ್ನು ಕಬಳಿಸುವ ಕೆಲವು ಮಹಿಳಾಮಣಿಗಳು ಒಟ್ಟಾರೆ ಗ್ರಾಮದಲ್ಲಿ ಏನೆಲ್ಲ ನಡೆದರೂ ತುಟಿಪಿಟಕೆನ್ನದ ಗ್ರಾಮಸ್ಥರಿರುವದರಿಂದಲೇ ವ್ಯವಸ್ಥೆ ಹದಗೆಟ್ಟಿದೆ. ಮತ್ತು ಈ ಹಿಂದೆ ಅಮಾಯಕ ಮಹಿಳಾ ಅಧ್ಯಕ್ಷೆಯೊಬ್ಬಳು ಕೂಡ ಯಾರೋ ಮಾಡಿದ ತಪ್ಪಿಗೆ ಜೈಲುಸೇರಿದ್ದು ಯಾರು ಮರೆತಿಲ್ಲ.

ಮನಸ್ಸಿದ್ದರೆ ಮಾರ್ಗ

ಸಮಯ ರಾತ್ರಿ ಏಳುವರೆ ಗಂಟೆ ದಾಟಿತ್ತು. ಆಫೀಸಿನ ಕೆಲಸದ ನಿಮಿತ್ಯ ಸುಯೋಗ ಬೆಂಗಳೂರಿಗೆ ಹೋಗಬೇಕಾಗಿತ್ತು. ಆಫೀಸಿನಲ್ಲಿದ್ದಾಗ ಮಧ್ಯಾಹ್ನ ಹೆಡ್ ಆಫೀಸಿನಿಂದ ಸುದ್ದಿ ಬಂದಾಗ ರಾತ್ರಿ ಒಂಭತ್ತು ಗಂಟೆಯ ವೋಲ್ವೋ ಬಸ್ಸಿಗೆ ರಿಜವರ್ೇಷನ್ ಮಾಡಿಸಿದ್ದ. ನಾಳೆ ಶನಿವಾರದ ದಿನ ಮೀಟಿಂಗ್ಗೆ ಹಾಜರಾಗಬೇಕಿತ್ತು. ಹಾಗೆಯೇ ನಾಳೆಯ ಅದೇ ವೋಲ್ವೋ ಬಸ್ಸಿಗೆ ರಿಟರ್ನ ಜನರ್ಿಗೂ ರಿಜವರ್ೇಷನ್ ಮಾಡಿಸಿದ್ದ ಸುಯೋಗ. ಸುಮಾರು ಎಂಟರಿಂದ ಒಂಭತ್ತು ಗಂಟೆಯ ಪ್ರಯಾಣ.

ಸುಯೋಗನ ಮನದೊಡತಿ, ಮನೆಯೊಡತಿ, ಮನದನ್ನೆ ಪತ್ನಿ ಸಾಹಿತ್ಯ ನಾಲ್ಕು ವರ್ಷದ ಮುದ್ದಿನ ಮಗಳು ಸೃಷ್ಟಿಯೊಂದಿಗೆ ಯಾವುದೋ ಅಜರ್ೆಂಟ್ ಕೆಲಸದ ನಿಮಿತ್ಯ ತನ್ನ ತವರು ಮನೆಗೆ ಎರಡು ದಿನಗಳ ಹಿಂದೆಯೇ ಹೋಗಿದ್ದಳು. ಒಂದು ವಾರದವರೆಗೆ ತವರು ಮನೆಯ ಪ್ರೊಗ್ರಾಂ ಇತ್ತು. ಅಡಿಗೆ ಮಾಡುವುದಕ್ಕೆ ಅಲ್ಪ ಸ್ವಲ್ಪ ಬರುತ್ತಿದ್ದರೂ ಆಫೀಸಿನಿಂದ ರಾತ್ರಿ ದಿನಾಲೂ ಲೇಟ್ ಆಗಿ ಬರುತ್ತಿದ್ದುದರಿಂದ ಹೊರಗಡೆಯೇ ಸುಯೋಗನ ಊಟ ಆಗುತ್ತಿತ್ತು.

ನಾಳೆಗೆ ಬೇಕಾಗುವ ಬಟ್ಟೆ ಬರೆ, ಆಫೀಸಿನ ಫೈಲು ಇನ್ನಿತರ ವಸ್ತುಗಳನ್ನು ಬ್ಯಾಗಿಗೆ ಹಾಕಿಕೊಂಡಿದ್ದ ಸುಯೋಗ. ಮಳೆ ಜಾಸ್ತಿ ಆಗಿರುವುದರಿಂದ ಚಳಿ ಇದ್ದು ಸ್ವೆಟರ್ ಶಾಲು ಸಹ ಇಟ್ಟುಕೊಂಡಿದ್ದ. ಮನೆಯಿಂದ ಬಸ್-ಸ್ಟ್ಯಾಂಡಿಗೆ ಹೋಗುವಾಗ ಬಸ್-ನಿಲ್ದಾಣದ ಹತ್ತಿರದ ಒಳ್ಳೆಯ ಹೋಟೆಲಿನಲ್ಲಿ ಊಟಮಾಡಿ ಬಸ್ಸು ಹಿಡಿಯಬೇಕೆಂದು ನಿರ್ಧರಿಸಿ ಹೊರಡುವ ತಯಾರಿಯಲ್ಲಿದ್ದ.

ಮನೆಯಿಂದ ನೂರು ಹೆಜ್ಜೆ ಹೋದರೆ ಮೇನ್ ರೋಡ್ ಸಿಗುತ್ತೆ. ಅಲ್ಲಿ ಆಟೋ ಹಿಡಿದರಾಯಿತೆಂದುಕೊಂಡು ಹೊರಡುವ ಮುಂಚೆ, ಅಡಿಗೆ ಮನೆಯಲ್ಲಿ ಗ್ಯಾಸ್ ಮೇನ್ ಆಫ್ ಮಾಡಿ, ಕಿಟಕಿಗಳನ್ನು ಹಾಕಿ ಬಾಗಿಲು ಹಾಕಬೇಕೆಂದು ಬ್ಯಾಗನ್ನು ಎತ್ತಿಕೊಳ್ಳಬೇಕೆನ್ನುವಷ್ಟರಲ್ಲಿ ಮನೆಯ ಕಸ ಮುಸುರೆ ಮಾಡುವ, ಬಟ್ಟೆ ಬರೆ ತೊಳೆಯುವ ರತ್ನಮ್ಮ ಹಾಲಿನಲ್ಲಿ ಪ್ರತ್ಯಕ್ಷಳಾದಳು. ಸುಯೋಗನಿಗೆ ಒಂದು ಕ್ಷಣ ಗಾಬರಿಯಾದಂತಾಯಿತು. ಹೊರಡುವ ಅವಸರದಲ್ಲಿದ್ದುದರಿಂದ ಏನಮ್ಮಾ, ಇಷ್ಟೊತ್ತಿನಲ್ಲಿ ಬಂದಿರುವಿ? ಏನಾದರೂ ಅರ್ಜಂಟ್ ಕೆಲಸವಿತ್ತೇ ಹೇಗೆ? ನಾನು ಬೆಂಗಳೂರಿಗೆ ಹೋಗಬೇಕಾಗಿದೆ ಎಂದು ಸುಯೋಗ ಹೇಳಿದ.

ಏನೂ ಅರ್ಜಂಟ್ ಕೆಲಸವಿಲ್ಲ ಸಾಹೇಬರೇ. ಅಮ್ಮಾವರು ಇಲ್ಲಲ್ರೀ. ಅಡಿಗೆ ಗಿಡಿಗೆ ಮಾಡಿಕೊಡಲೇ ಹೇಗೆ ಅಂತ ಕೇಳಲು ಬಂದೆ ಅಷ್ಟೆ. ಅವಳ ಧ್ವನಿಯಲ್ಲಿ ಒಂದು ರೀತಿಯ ನಡುಕ ಇತ್ತು. ಇಷ್ಟೊತ್ತಿನಲ್ಲಿ ಅವಳು ಮನೆಯಲ್ಲಿ ತನ್ನ ಜೊತೆಯಲ್ಲಿರುವುದನ್ನು ಯಾರಾದರೂ ನೋಡಿದರೆ ಅವರ ಬಾಯಿಗೆ ಆಹಾರವಾಗಬಹುದೆಂದು ಸುಯೋಗನಿಗೆ ಮುಜುಗರವಾಗತೊಡಗಿತು.

ಆಯಿತಮ್ಮಾ, ನೀ ಈಗ ಹೊರಡು. ನಾಳೆ ಕೆಲಸಕ್ಕೆ ಬರಬೇಡ. ನಾಡದು ಬೆಳಿಗ್ಗೆ ಬಾ. ಈಗ ನನಗೆ ಹೊತ್ತಾಗುತ್ತಿದೆ. ಅವಳನ್ನು ಸಾಗಹಾಕಲು ಸುಯೋಗ ಅವಸರ ಪಡಿಸಿದ.

ಆಯಿತು ಸಾಹೇಬ್ರೇ, ಅಲ್ಲಿಯವರೆಗೆ ನಿಮ್ಮ ಬ್ಯಾಗ್ ತಂದು ಕೊಡ್ತೀನಿ.

ಬೇಡಮ್ಮ ನಾನೇ ತೆಗೆದುಕೊಂಡು ಹೋಗುತ್ತೇನೆ. ಇಷ್ಟೊತ್ತಿನಲ್ಲಿ ನೀ ಇಲ್ಲಗೆ ಬಂದಿರುವುದು ಸರಿ ಕಾಣುವುದಿಲ್ಲ. ನೀ ಬೇಗ ಹೊರಡು.

ಪರವಾಗಿಲ್ಲ ಸಾಹೇಬ್ರೇ, ನಾ ಬ್ಯಾಗ್ ಹಿಡಿದುಕೊಳ್ಳ್ತೀನಿ. ಎನ್ನುತ್ತಾ ಸುಯೋಗನ ಮಾತು ಲೆಕ್ಕಕ್ಕೆ ತೆಗೆದುಕೊಳ್ಳದೇ, ಅವನ ಪಕ್ಕಕ್ಕಿದ್ದ ಬ್ಯಾಗ್ನ್ನು ಎತ್ತಿಕೊಳ್ಳಲು ಬಗ್ಗಿದಳು. ಬಗ್ಗುವಾಗ ಬೇಕೆಂತಲೇ ಸೆರಗನ್ನು ಜಾರಿಸಿ ತನ್ನ ತೆರೆದ ತುಂಬಿದೆದೆಯನ್ನು ಸುಯೋಗನ ನಡು ಮತ್ತು ತೊಡೆಗಳಿಗೆ ತೀಡುತ್ತಾ ಬ್ಯಾಗನ್ನು ತೆಗೆದುಕೊಳ್ಳಲು ಪ್ರಯತ್ನಿಸಿದಳು. ಸುಯೋಗಗೆ ಒಂದು ಕ್ಷಣ ರೋಮಾಂಚನ, ಗಾಬರಿ ಮತ್ತು ಕಸಿವಿಸಿ. ರತ್ನಮ್ಮಳ ಕೈ ಬ್ಯಾಗಿನ ಮೇಲಿದ್ದರೂ ದೃಷ್ಟಿ ಮಾತ್ರ ಸುಯೋಗನ ದೃಷ್ಟಿ ತನ್ನೆದೆಯ ಮೇಲಿದೆಯೋ ಹೇಗೆ ಎಂದು ನೋಡುತ್ತಿದ್ದಳು.

ಅವಳ ತೆರೆದೆದೆಯ ಸೀಳನ್ನು ನೋಡಿ ಒಂದು ಕ್ಷಣ ಚಂಚಲಗೊಂಡು ಕಸಿವಿಸಿಯಾಗಿದ್ದ ಮನಸ್ಸನ್ನು ಹತೋಟಿಗೆ ತಂದುಕೊಂಡು ಸುಯೋಗ ಏನೂ ಆಗದವನಂತೆ ಏನೂ ಬೇಡಮ್ಮಾ ನೀ ಹೊರಡು. ಬ್ಯಾಗನ್ನು ನಾನೇ ತೆಗೆದುಕೊಳ್ಳುತ್ತೇನೆ. ಎಂದು ಸ್ವಲ್ಪ ಎತ್ತರದ ಧ್ವನಿಯಲ್ಲಿ ಹೇಳಿದ್ದನ್ನು ಗಮನಿಸಿದ ರತ್ನಮ್ಮ, ಬಗ್ಗಿದ್ದವಳು ಮೇಲೆದ್ದು ಸೆರಗನ್ನು ಸರಿಪಡಿಸಿಕೊಳ್ಳುತ್ತಾ, ಆಯಿತು ಸಾಹೇಬ್ರೆ ನಾಡದು ಬರುತ್ತೇನೆ. ಎನ್ನುತ್ತಾ, ಕುಡಿ ನೋಟಬೀರುತ್ತಾ, ಒಲ್ಲದ ಮನಸ್ಸಿನಿಂದ ಬಿರಬಿರನೇ ಹೊರಗೋದಳು. ಅವಳು ಹೋದ ಎರಡು ಮೂರು ನಿಮಿಷಗಳ ನಂತರ ಸುಯೋಗ ಮನೆಗೆ ಬೀಗ ಹಾಕಿ, ಬ್ಯಾಗ್ ಹಿಡಿದು ರಸ್ತೆಗಿಳಿದು, ಸಿಕ್ಕ ಆಟೋ ಹಿಡಿದು ಬಸ್ಸ್ ನಿಲ್ದಾಣದ ಕಡೆಗೆ ಹೊರಟ.

ಬಸ್ಸ್ ನಿಲ್ದಾಣದ ಪಕ್ಕದ ಒಳ್ಳೆಯ ಹೋಟೆಲಿನಲ್ಲಿ ಊಟಮಾಡಿ, ಬಸ್ಸು ಏರಿ ಕಿಟಕಿಯ ಪಕ್ಕದ ತನ್ನ ಸೀಟಿನಲ್ಲಿ ಕುಳಿತಾಗ ಸುಯೋಗನಿಗೆ ಹಾಯೆನಿಸಿತ್ತು. ಮನಸ್ಸಿಗೆ ಒಂದು ತರಹ ನಿರಾಳ. ಬಸ್ಸು ನಿಗದಿತ ಸಮಯಕ್ಕೆ ಹೊರಟಾಗ ಕಣ್ಣು ಮುಚ್ಚಿ ನಿದ್ದೆ ಮಾಡಲು ಪ್ರಯತ್ನಿಸಿದ. ಊರನ್ನು ದಾಟುತ್ತಿದ್ದಂತೆ ಬಸ್ಸು ತನ್ನ ವೇಗವನ್ನು ಹೆಚ್ಚಿಸಿಕೊಂಡಂತೆ ಸುಯೋಗನ ಮನಸ್ಸು ಅಂದಿನ ಸಾಯಂಕಾಲದ ಘಟನೆಯ ವಿಮಶರ್ೆ ನಡೆಸಿತು. ರತ್ನಮ್ಮಳ ನಡತೆ ಯಾಕೊ ಅನುಮಾನಕ್ಕೆಡೆಮಾಡಿಕೊಟ್ಟಿತ್ತು. ಅಷ್ಟೊತ್ತಿನಲ್ಲಿ ಆಕೆ ಬಂದದ್ದೇಕೆ? ತಾನಂತೂ ಆಕೆಗೆ ಬರಲು ಹೇಳಿರಲಿಲ್ಲ. ಬಂದ ಉದ್ದೇಶವೇನು? ಒಂದೂ ಸ್ಪಷ್ಟವಾಗುತ್ತಿಲ್ಲ.

ರತ್ನಮ್ಮಳ ವ್ಯಕ್ತಿತ್ವ, ವೇಷ-ಭೂಷಣಗಳ ಬಗ್ಗೆ ಸುಯೋಗನ ಮನಸ್ಸು ತಿಳಿಯಲು ಪ್ರಯತ್ನಿಸುತ್ತಿತ್ತು. ಹೌದು ಇಂದು ಸಾಯಂಕಾಲ ಬಂದಾಗ ಆಕೆ ಒಪ್ಪವಾಗಿ ತಲೆ ಬಾಚಿಕೊಂಡು ನೀಟಾಗಿ ಡ್ರೆಸ್ ಮಾಡಿಕೊಂಡು ಬಂದಿದ್ದಳು. ರತ್ನಮ್ಮ 25-26ರ ಹರೆಯದ ಹೆಂಗಸು. ಗೋದಿ ಬಣ್ಣ, ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನ್ನುವ ಆಕರ್ಷಕ ಮೈಮಾಟದ ಹೆಂಗಸು. ಏಳೆಂಟು ವರ್ಷಗಳ ಹಿಂದೆ ಮದುವೆಯಾಗಿದೆಯಂತೆ. ಆದರೂ ಇನ್ನೂ ಮಕ್ಕಳಾಗಿಲ್ಲವೆಂಬ ಕೊರಗು ಇದೆಯಂತೆ. ನಮ್ಮ ಕಾಲೋನಿಯಲ್ಲಿ ಐದಾರು ಮನೆಗಳಲ್ಲಿ ಕಸ ಮುಸುರೆ ಮಾಡುತ್ತಿದ್ದಾಳೆ.

ಆಕೆಯ ಗಂಡ ರಂಗಪ್ಪ ಯಾವುದೋ ದೊಡ್ಡ ಹೋಲ್ಸೇಲ್ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವನಂತೆ. ಎರಡು ವರ್ಷಗಳಿಂದ ನಮ್ಮ ಮನೆಯ ಕೆಲಸ ಮಾಡುತ್ತಿದ್ದಾಳೆ. ಕೈ ಬಾಯಿ ಶುದ್ಧವಿರುವ ಹೆಂಗಸು ಆಕೆ. ಯಾಕೆಂದರೆ ಸುಯೋಗನ ಮನೆಯಲ್ಲಿನ ಯಾವ ಸಾಮಾನು ಇದುವರೆಗೂ ಮಾಯವಾಗಿಲ್ಲ. ಮರೆತು ದುಡ್ಡು ಗಿಡ್ಡು ಏನಾದರೂ ಟೇಬಲ್ಲಿನ ಮೇಲೆ ಎಷ್ಟೋ ಸಾರೆ ಇಟ್ಟಿದ್ದಿದೆ. ಆದರೆ ಯಾವತ್ತೂ ಏನೂ ಹೋಗಿಲ್ಲ. ಆಕೆಯ ಮೇಲೆ ಸಾಹಿತ್ಯಳಿಗೆ ತುಂಬು ವಿಶ್ವಾಸ. ಕೆಲವೊಂದು ಸಾರೆ ತಿಂಡಿ ಮಾಡಿದಾಗ ರತ್ನಮ್ಮ ಇದ್ದರೆ ಅವಳಿಗೇ ಮೊದಲು ಬಿಸಿ ಬಿಸಿ ತಿಂಡಿ ಕೊಡುತ್ತಿದ್ದಳು ಸಾಹಿತ್ಯ. ಸೃಷ್ಟಿಯೆಂದರೆ ರತ್ನಮ್ಮಳಿಗೆ ಪಂಚ ಪ್ರಾಣ. ಅವಳ ಆಟ, ಪಾಟ, ರಂಪಾಟ, ಹಟ, ತೊದಲುನುಡಿ, ಅವಳ ನಡೆ ಪ್ರತಿಯೊಂದೂ ಇಷ್ಟ. ಕೆಲಸ ಮುಗಿಸಿ ಹೋಗುವವರೆಗೂ ಅವಳ ಜೊತೆ ರತ್ನಮ್ಮಳ ಮಾತು ನಡೆದೇ ಇರುತ್ತಿತ್ತು.

ರತ್ನಮ್ಮಳು ಅಷ್ಟೇ. ಅಲ್ಲಿಯ ಇತರ ಮನೆ ಕೆಲಸದ ಹೆಂಗಸರಂತೆ ಎಲೆ, ಅಡಿಕೆ, ತಂಬಾಕು ಜಿಗಿಯುವುದು, ಗುಟ್ಕಾ ಹಾಕುವುದು, ನಸಿಪುಡಿ ತಿಕ್ಕುವುದು, ಆಗಾಗ್ಗೆ ಗುಂಡು ಹಾಕುವುದು ಇವು ಯಾವ ಚಟಗಳೂ ರತ್ನಮ್ಮಳಿಗಿಲ್ಲ. ಇದ್ದ ಬಟ್ಟೆಗಳನ್ನೇ ನೀಟಾಗಿ ತೊಳೆದುಕೊಂಡು ಉಡುತ್ತಾಳೆ. ಸಾಹಿತ್ಯಳೂ ವರ್ಷಕ್ಕೊಂದೋ ಎರಡೋ ತನ್ನ ಹಳೆಯ ಒಳ್ಳೆಯ ಸೀರೆಗಳನ್ನು ರತ್ನಮ್ಮನಿಗೆ ಕೊಡುವುದರ ಜೊತೆ ಪ್ರತಿ ವರ್ಷದ ದಸರಾ, ಯುಗಾದಿ ಹಬ್ಬಗಳಲ್ಲಿ ಹೊಸ ಸೀರೆಗಳನ್ನೂ ಕೊಡಿಸುತ್ತಾಳೆ. ಸುಯೋಗನ ಕುಟುಂಬದ ಸದಸ್ಯರೆಲ್ಲರಿಗೂ ರತ್ನಮ್ಮನೊಂದಿಗೆ ಆತ್ಮೀಯ ಸಂಬಂಧ ಬೆಸೆದುಕೊಂಡು ಬೆಳೆದುಬಂದಿದೆ. ರತ್ನಮ್ಮನು ಸುಯೋಗನ ಕುಟುಂಬದ ಯಾರಿಗೂ ವಿಶ್ವಾಸ ದ್ರೋಹ ಬಗೆದಿಲ್ಲ. ಅವರ ಪ್ರೀತಿ, ವಿಶ್ವಾಸಕ್ಕೆ ಪಾತ್ರಳಾಗುತ್ತಾ ಮುನ್ನಡೆದಿದ್ದಾಳೆ.

ಸುಯೋಗನ ಮನೆಯ ಕಾಲೋನಿಯಿಂದ ಸುಮಾರು ಮುಕ್ಕಾಲು ಕಿ. ಮೀ. ದೂರದ ಆಶ್ರಯ ಕಾಲೋನಿಯಲ್ಲಿ ಒಂದು ಮನೆಯನ್ನು ಗಿಟ್ಟಿಸಿಕೊಂಡಿದ್ದಾಳೆ ರತ್ನಮ್ಮ. ಹಾಗೆಯೇ ಸಮೀಪದ ಬ್ಯಾಂಕೊಂದರಲ್ಲಿ ಉಳಿತಾಯ ಖಾತೆಯೊಂದನ್ನು ತೆಗೆದು ಗಂಡ ಹೆಂಡಿರ ತಮ್ಮ ಉಳಿತಾಯದ ಹಣವನ್ನು ಅದರಲ್ಲಿ ಜಮಾ ಮಾಡುತ್ತಾ ಬಂದಿದ್ದಾಳೆ.

ಮೊನ್ನೆ ಸಾಹಿತ್ಯ ಊರಿಗೆ ಹೋದ ನಂತರ ರತ್ನಮ್ಮ ಕೆಲಸಕ್ಕೆ ಬಂದಿದ್ದಳು. ಮಾಮೂಲಿನಂತೆ ಎಲ್ಲಾ ಕೆಲಸ ಮುಗಿಸಿ ಹೋಗಿದ್ದಳು. ಆದರೆ ಯಥಾ ರೀತಿ ಬೆಳಿಗ್ಗೆ ಏಳುವರೆಗೆ ಕೆಲಸಕ್ಕೆ ಬಂದಿದ್ದಳು. ಆಕೆ ಕೆಲಸಕ್ಕೆ ಬಂದಾಗ ಸುಯೋಗ ದೈನಂದಿನ ಪ್ರಾತಃವರ್ಿಧಿಗಳನ್ನು ಮುಗಿಸಿ, ಹಲ್ಲುಜ್ಜಿ, ಒಂದು ಕಪ್ ಚಹ ಮಾಡಿಕೊಂಡು, ಟಿ.ವಿ. ಆನ್ ಮಾಡಿಕೊಂಡು ಅಂದಿನ ಪೇಪರು ಓದುತ್ತಿದ್ದ. ದಿನದಂತೆ ರತ್ನಮ್ಮ ಬಂದು ಕಸ ಗುಡಿಸಿ ನೆಲ ಒರೆಸಿದ್ದಳು. ಕಸ ಗುಡಿಸುವಾಗ ಮತ್ತು ನೆಲ ಒರೆಸುವಾಗ ಪೇಪರು ಓದುತ್ತಿದ್ದ ಸುಯೋಗನ ದೃಷ್ಟಿ ಎರಡು ಮೂರು ಸಾರೆ ರತ್ನಮ್ಮನ ಕಡೆಗೆ ಹರಿದಿತ್ತು. ಸುಯೋಗ ನೋಡಿದಾಗಲೆಲ್ಲ ರತ್ನಮ್ಮನ ಸೆರಗು ಎದೆಯ ಮೇಲಿರಲಿಲ್ಲ. ಕೆಲಸದ ಗಡಿಬಿಡಿಯಲ್ಲಿ ಇದು ಮಾಮೂಲು ಎಂದು ಸುಯೋಗ ಅದರ ಬಗ್ಗೆ ವಿಶೇಷ ಅರ್ಥ ಕಲ್ಪಿಸಿರಲಿಲ್ಲ.

ಚಹ ಕುಡಿದ ಬಟ್ಟಲನ್ನು ಸಿಂಕಿನ ಹತ್ತಿರ ಇಟ್ಟು ವಾಪಾಸು ಬರುವಾಗ ಯಾವುದೋ ಕಾರಣಕ್ಕೆ ಸುಯೋಗನ ಎದುರಿಗೆ ಬರುತ್ತಿದ್ದ ರತ್ನಮ್ಮ ತನ್ನೆದೆಯ ಮೇಲಿದ್ದ ಸೆರಗನ್ನು ಪೂತರ್ಿ ತೆಗೆದು ಝಾಡಿಸಿದಂತೆ ಮಾಡಿ ಪುನಃ ಎದೆಯ ಮೇಲೆ ಹಾಕಿಕೊಡಿದ್ದಳು. ಆಗಲೂ ಸುಯೋಗ ಅದಕ್ಕೆ ಯಾವುದೇ ಅರ್ಥ ಕಂಡು ಕೊಂಡಿರಲಿಲ್ಲ. ಇಂದು ಬೆಳಿಗ್ಗೆಯ ಘಟನೆಯ ನಂತರ ಅವಳ ಪ್ರತಿಯೊಂದು ಚಲನವಲನಗಳನ್ನೂ ಸುಯೋಗ ತುಲನೆಮಾಡತೊಡಗಿದ. ರಸ್ತೆಯಲ್ಲಿ ಯಾವುದೋ ಗಾಡಿ ಅಡ್ಡ ಬಂದುದರಿಂದ ಚಾಲಕ ತಕ್ಷಣ ಬ್ರೇಕ್ ಹಾಕಿದುದರಿಂದ ಬಸ್ಸು ಒಮ್ಮಿಂದೊಮ್ಮೆಲೇ ನಿಂತ ಹಾಗಾಯಿತು. ಹಾಗೆಯೇ ಸುಯೋಗನ ವಿಚಾರ ಲಹರಿಗೂ ತಡೆ ಬಿದ್ದಾಂತಾಯಿತು. ಕಾದು ನೋಡಿದರಾಯಿತು. ಅವಶ್ಯಕತೆಬಿದ್ದರೆ ಆಕೆಗೆ ಸರಿಯಾದ ರೀತಿಯಲ್ಲಿ ಉಪದೇಶವನ್ನೂ ಕೊಟ್ಟರಾಯಿತು ಎಂದು ಮನದಲ್ಲಿಯೇ ಲೆಕ್ಕಾಚಾರ ಹಾಕುತ್ತಾ ನಿದ್ದೆಗೆ ಜಾರಲು ಪ್ರಯತ್ನಿಸಿದ.

ಮೀಟಿಂಗ್ ಮುಗಿಸಿಕೊಂಡು ರಾತ್ರಿ ಪುನಃ ಅದೇ ವೋಲ್ವೋ ಬಸ್ಸು ಏರಿ ಸುಯೋಗ ತನ್ನೂರಿಗೆ ಬಂದಾಗ ಬೆಳಿಗ್ಗೆ ಆರು ಗಂಟೆ. ಆಟೊ ಹತ್ತಿ ಮನೆಗೆ ಬಂದಾಗ ಆರು ಕಾಲು ಅಷ್ಟೆ. ಬೇಗ ಬೇಗ ಟಾಯಿಲೆಟ್ಟಿಗೆ ಹೋಗಿ, ಬ್ರಷ್ ಮಾಡಿ ಮುಖ ತೊಳೆದು, ಒಂದು ಕಪ್ ಚಹ ಮಾಡಿಕೊಂಡು ಕುಡಿದ. ಈಗ ಒಂದೆರಡು ತಾಸು ನಿದ್ದೆ ಮಾಡಿ ಎದ್ದ ನಂತರ ಸ್ನಾನ ಮುಗಿಸಿಕೊಂಡು ಟಿಫಿನ್ ಇಲ್ಲವೇ ಒಂದೇ ಬಾರಿಗೆ ಊಟಕ್ಕೆ ಹೋದರಾಯಿತೆಂದುಕೊಂಡು ಮನದಲ್ಲೇ ಲೆಕ್ಕಹಾಕುತ್ತಾ ಮುಂದಿನ ಬಾಗಿಲ ಬೋಲ್ಟ ಹಾಕಿ ಬೆಡ್ ರೂಮಿಗೆ ನಡೆದ. ಹಾಸಿಗೆಗೆ ಮೈಯೊಡ್ಡುತ್ತಿದ್ದಂತೆ ಬೆಲ್ಲಾಯಿತು. ಏನೋ ರಾತ್ರಿ ಸರಿಯಾಗಿ ನಿದ್ದೆಯಾಗಿದ್ದಿಲ್ಲ. ಈಗಲಾದರೂ ಸ್ವಲ್ಪ ನಿದ್ದೆ ಮಾಡಿದರಾಯಿತೆಂದುಕೊಂಡರೆ ಇವರ್ಯಾರ ಕಾಟವಪ್ಪಾ ಈಗ ಎನ್ನುತ್ತಾ ಒಲ್ಲದ ಮನಸ್ಸಿನಿಂದ ಬಾಗಿಲು ತೆಗೆದ ಸುಯೋಗ. ಬಾಗಿಲಲ್ಲಿ ರತ್ನಮ್ಮ ನಿಂತಿದ್ದಳು. ಮನೆ ಕೆಲಸ ಮಾಡಲು ಮಾಮೂಲಿನಂತೆ ಬಂದಿರುವಳೆಂದು ಅನಿಸಿತು ಸುಯೋಗನಿಗೆ. ಒಂದು ಬಾರಿ ರತ್ನಮ್ಮನನ್ನು ಸೂಕ್ಷ್ಮವಾಗಿ ಅವಲೋಕಿಸಿದ ಸುಯೋಗ.

ಆಗಲೇ ಅವಳು ಸ್ನಾನ ಮಾಡಿಕೊಂಡು ಬಂದಿರುವಂತೆ ತೋರುತ್ತಿತ್ತು. ಸಾಹಿತ್ಯಳ ಹಳೆಯ ಸೀರೆಯಲ್ಲಿ ಮಿಂಚುತ್ತಿದ್ದಳು. ಏನು ರತ್ನಮ್ಮಾ, ಇಂದು ಸ್ನಾನ ಮಾಡಿಕೊಂಡೇ ಬಂದಂತಿದೆ? ಏನು ವಿಶೇಷವಮ್ಮಾ? ಸುಯೋಗ ತಮಾಷೆ ಮಾಡುತ್ತಾ ಪ್ರಶ್ನೆ ಹಾಕಿದ. ಸಾಹೇಬ್ರೇ, ಇವತ್ತು ಯಾಕೋ ಸ್ನಾನ ಮಾಡಿಕೊಂಡೇ ಬರಬೇಕೆಂದು ಅನ್ನಿಸಿತು. ಅದಕ್ಕೇ ಸ್ನಾನ ಮಾಡಿಕೊಂಡೇ ಬಂದೆ ಅಷ್ಟೆ. ವಿಶೇಷವೇನಿಲ್ಲ. ಎಂದು ಹೇಳತ್ತಾ ರತ್ನಮ್ಮ ಕೆಲಸಕ್ಕೆ ತೊಡಗಿಸಿಕೊಂಡಳು. ಏನೋ ಖುಷಿಯಲ್ಲಿದ್ದಂತೆ ಕಾಣುತ್ತಿದ್ದಳು ರತ್ನಮ್ಮ.

ಮಲಗಿ ನಿದ್ದೆ ಮಾಡಬೇಕೆಂಬ ತನ್ನ ಪ್ರೊಗ್ರಾಂನ್ನು ರತ್ನಮ್ಮ ಕಸ ಮುಸುರೆಮಾಡುವವರೆಗೂ ತಾತ್ಕಾಲಿಕವಾಗಿ ಮುಂದೂಡಿ ಟಿ.ವಿ. ಚಾಲೂ ಮಾಡಿ ಅಂದಿನ ಪೇಪರು ಹಿಡಿದುಕೊಂಡು ಕುಳಿತ ಸುಯೋಗ. ನಿನ್ನೆ ಮನೆಯಲ್ಲಿ ಯಾರೂ ಇಲ್ಲದಿದ್ದುದರಿಂದ ಮನೆ ಸ್ವಚ್ಛವಾಗಿಯೇ ಇತ್ತು. ರತ್ನಮ್ಮ ಬರ ಬರ ಕಸ ಬಳಿದು ನೆಲ ಒರೆಸಿ ಮನೆ ಕೆಲಸವನ್ನು ಮುಗಿಸುವ ಹಂತದಲ್ಲಿದ್ದಳು. ಅವಳು ಕೆಲಸದಲ್ಲಿ ತೊಡಗಿದ್ದಾಗ ಸುಯೋಗ ಅವಳ ಕಡೆ ಒಂದು ಸಾರೆಯೂ ನೋಡಲಿಲ್ಲ. ತನ್ನ ಪಾಡಿಗೆ ತಾ ಓದುತ್ತಾ ಕುಳಿತಿದ್ದ. ರತ್ನಮ್ಮ ತನ್ನ ಪಾಡಿಗೆ ತನ್ನ ಕೆಲಸದಲ್ಲಿ ತೊಡಗಿದ್ದಳು. ಇನ್ನೇನು ಎರಡು ನಿಮಿಷ, ಕೆಲಸ ಮುಗಿಸಿಕೊಂಡು ಹೊರಡುತ್ತಾಳೆ, ತಾನು ಮಲಗಿ ನಿದ್ದೆ ಮಾಡಬಹುದೆಂದುಕೊಂಡ.

ಬೆಡ್ ರೂಮಿನಲ್ಲಿದ್ದ ಸುಧಾ ವಾರ ಪತ್ರಿಕೆಯನ್ನು ತರಲು ಸುಯೋಗ ಹೆಜ್ಜೆ ಹಾಕಿದ್ದ. ಅದ್ಯಾವ ಮಾಯೆಯಲ್ಲಿ ರತ್ನಮ್ಮ ಬಂದಳೋ ಗೊತ್ತಿಲ್ಲ. ಬೆಡ್ ಮೇಲಿದ್ದ ಸುಧಾ ಪತ್ರಿಕೆಯನ್ನು ತೆಗೆದುಕೊಳ್ಳಲು ಬಗ್ಗಿದ್ದ ಸುಯೋಗನನ್ನು ಹಿಂದಿನಿಂದ ಗಟ್ಟಿಯಾಗಿ ತಬ್ಬಿ ಹಿಡಿದ ರತ್ನಮ್ಮ ತನ್ನೆದೆಯನ್ನು ಸುಯೋಗನ ಬೆನ್ನಿಗೆ ತಿಕ್ಕತೊಡಗಿದಳು. ಸುಯೋಗನಿಗೆ ಗಾಬರಿ, ತಬ್ಬಿಬ್ಬು, ಕಳವಳ, ಹಾಗೂ ಒಂದು ರೀತಿಯ ಭಯ. ರತ್ನಮ್ಮನ ಆಕ್ರಮಣವನ್ನು ನಿರೀಕ್ಷಿಸಿರಲಿಲ್ಲ. ಒಂದು ರೀತಿಯ ಉಸಿರು ಕಟ್ಟಿದ ವಾತಾವರಣ ಸುಯೋಗನಿಗೆ. ಆಕೆಯಿಂದ ಬಿಡಿಸಿಕೊಳ್ಳಲು ಸುಯೋಗ ಕೊಸರಾಡಿದ. ಆದರೆ ಆಗಲಿಲ್ಲ. ರತ್ನಮ್ಮಳ ಪಟ್ಟು ಬಹಳ ಗಟ್ಟಿಯಾಗಿತ್ತು. ಈ ಆಘಾತದಿಂದ ಕ್ಷಣಾರ್ಧದಲ್ಲಿ ಸುಧಾರಿಸಿಕೊಂಡ ಸುಯೋಗ. ಏ....ಏಯ್ ಏನು ಮಾಡುತ್ತಿರುವಿ ರತ್ನಮ್ಮ, ಇದು ಸರಿಯಲ್ಲ ಬಿಡು ನನ್ನನ್ನು. ನೀನು ಮಾಡುತ್ತಿರುವುದು ಒಳ್ಳೆಯದಲ್ಲ. ತೊದಲುತ್ತಾ ಏದುಸಿರು ಬಿಡುತ್ತಾ ಸುಯೋಗ ಬಡ ಬಡಿಸಿದ.

ಸಾಹಿತ್ಯಳನ್ನು ಬಿಟ್ಟು ಇನ್ನೊಂದು ಹೆಣ್ಣಿನ ದೇಹದ ಸ್ಪರ್ಶವನ್ನು ಸುಯೋಗ ಮಾಡಿರಲಿಲ್ಲ ಜೀವನದಲ್ಲಿ. ಸಾಹಿತ್ಯ ಸುಯೋಗ ಪರಸ್ಪರರಲ್ಲಿ ಸ್ವರ್ಗ ಕಂಡುಕೊಂಡಿದ್ದರು. ಅಂಥಹ ಅನ್ಯೋನ್ಯತೆ ಇಬ್ಬರಲ್ಲಿ. ಹೀಗಿರುವಾಗ ಇನ್ನೊಂದು ಹೆಣ್ಣಿನ ಕಡೆಗೆ ಸುಯೋಗನ ಮನಸ್ಸೆಂದೂ ಹರಿದಿರಲಿಲ್ಲ.

ನೋಡ್ರೀ ಸಾಹೇಬ್ರ ಯಾವುದು ಒಳ್ಳೆಯದು ಯಾವುದು ಕೆಟ್ಟದು ಎಲ್ಲಾ ನನಗೆ ಗೊತ್ತೈತಿ. ಈ ಜಗತ್ತಿನ್ಯಾಗ ಯಾವುದೂ ಒಳ್ಳೆಯದಿಲ್ಲ, ಯಾವುದೂ ಕೆಟ್ಟದಿಲ್ಲ. ನಾವು ಮಾಡೋದೆಲ್ಲಾ ನಮ ನಮಗೆ ಒಳ್ಳೇದೇ. ಬೇರೆಯವರಿಗೆ ಕೆಟ್ಟದಂತ ಅನಿಸಬಹುದು. ಆಕೆ ಇನ್ನೂ ಏನೋ ಹೇಳುತ್ತ ಇದ್ದಳು. ಅವಳ ಮಾತನ್ನು ಅಲ್ಲಿಗೇ ತಡೆದು ಸುಯೋಗ, ನೋಡು ರತ್ನಮ್ಮಾ, ಅದು ನಿನ್ನ ಅಭಿಪ್ರಾಯ ಅಷ್ಟೆ. ನಿನ್ನನ್ನು ನಾ ಆ ದೃಷ್ಟಿಲೀ ಯಾವತ್ತೂ ನೋಡಿಲ್ಲ. ನಿನ್ನ ಬಗ್ಗೆ ನನಗೆ ಒಳ್ಳೆಯ ಭಾವನೆ ಇದೆ. ನನ್ನನ್ನು ಬಿಟ್ಟು ಬಿಡು. ಎಂದು ಹೇಳುತ್ತಲಿದ್ದ.

ನೋಡ್ರೀ ಸಾಹೇಬ್ರ, ನಿಮ್ಮನ್ನೂ ಸಹ ನಾ ಎಂದೂ ಆ ಭಾವನೆಯಾಗ ನೋಡಿಲ್ಲ. ನೀವೆಷ್ಟು ಒಳ್ಳೆಯವರೆಂದು ನನಗೆ ಗೊತ್ತು. ಈಗ ಅದೆಲ್ಲಾ ನನಗೆ ಬ್ಯಾಡ. ನನಗೆ ಬೇಕಾಗಿರುವುದು ಒಂದು ಮಗು ಅಷ್ಟೆ. ನೀವು ಅಷ್ಟು ಸಹಾಯ ಮಾಡಿದ್ರ ಸಾಕು. ಸಾಯೋಮಟ ನಿಮ್ಮನ್ನು ನೆನೆಸಿಕೊಳ್ತೀನಿ.

ಅಲ್ಲ ರತ್ನಮ್ಮಾ ಮಗು ಕೊಡಲಿಕ್ಕೆ ನಿನ್ನ ಗಂಡ ಇದ್ದಾನ. ನಾ ಯಾವಾಗಲೂ ನಿನ್ನ ತಂಗಿ ಅಂತ ತಿಳಿದು ಕೊಂಡೀನಿ.

ನೋಡ್ರೀ ತಂಗೀ ಗಿಂಗೀ ಎಂದು ನನ್ನ ಮೈ ಮನ ಎರಡನ್ನೂ ಕಟ್ಟಿ ಹಾಕಬ್ಯಾಡ್ರಿ. ಈ ಅವಕಾಶಕ್ಕಾಗಿ ಭಾಳ ದಿನಗಳಿಂದ ಕಾದುಕೊಂಡು ಕುಳಿತಿದ್ದೆ. ನಿನ್ನೆ ರಾತ್ರೀನೇ ನಿಮ್ಮ ಜೊತೆ ಕೂಡಬೇಕೆಂದಿದ್ದೆ. ಆದರೆ ನೀವು ಬೆಂಗಳೂರಿಗೆ ಹೋಗುವ ಅವಸರದಲ್ಲಿದ್ರಿ. ನಿನ್ನೆ ಭಾಳ ನಿರಾಸೆಯಿಂದ ನಾ ವಾಪಾಸು ಹೋದೆ. ಅಮ್ಮಾ ಅವರು ಇಲ್ಲದ್ದು ನೋಡಿಕೊಂಡೇ ಇಂದು ಪುನಃ ಬೆಳಿಗ್ಗೇನೇ ಸ್ನಾನ ಮಾಡಿಕೊಂಡೇ ತಯಾರಾಗಿ ಬಂದಿದ್ದೇನೆ. ನಿಮ್ಮ ದಮ್ಮಯ್ಯ ಅನ್ನುವೆ. ಇಲ್ಲ ಅನ್ನಬೇಡ್ರಿ, ಅಮ್ಮಾ ಅವರಿಗೆ ಈ ವಿಷಯ ತಿಳಿಯದ ಹಾಗೆ ನೋಡಿಕೊಳ್ತೀನಿ. ಇವತ್ತು ಮಾತ್ರ ನಾ ಹಾಂಗ ಹೋಗೋದಿಲ್ಲ.

ರತ್ನಮ್ಮಾ ನಮ್ಮ ಸಮಾಜದಲ್ಲಿ ಪಾವಿತ್ರತೆಗೆ ಬೆಲೆ ಇದೆ. ಪವಿತ್ರ ಸಂಬಂಧಕ್ಕೆ ತೂಕ ಇದೆ. ಅಣ್ಣ-ತಂಗಿ ಸಂಬಂಧಕ್ಕೆ ಬಹಳ ಮಹತ್ವವಿದೆ. ಕ್ಷಣಿಕದ ಸುಖಕ್ಕೆ ಪವಿತ್ರ ಸಂಬಂಧವನ್ನು ಹಾಳುಮಾಡಿಕೊಂಡು ಜೀವನ ಪರ್ಯಂತ ಕೊರಗುವಂತಾಗಬಾರದು. ನನ್ನನ್ನು ನಿನ್ನ ಸ್ವಂತ ಅಣ್ಣನೆಂದೇ ತಿಳಿದುಕೊ. ನಿನ್ನದೇನು ಸಮಸ್ಯೆ ಇದ್ದರೂ ಪರಿಹರಿಸೋಣ. ತಾಳ್ಮೆ ಇರಲಿ. ದೇವರು ಎಲ್ಲಾ ಒಳ್ಳೇದು ಮಾಡ್ತಾನೆ.

ಯಾ ದೇವ್ರೋ ಏನೋ? ಅವ ಎಲ್ಲಿರುವನೋ ಏನೋ? ನನಗಂತೂ ಇದುವರೆಗೆ ಕಂಡಿಲ್ಲ. ನನ್ನ ಪಾಲಿಗಂತೂ ದೇವರಿಲ್ಲಂತ ಅನಸಕತ್ತೈತಿ. ಅವ ಇದ್ರ ಇಷ್ಟೊತ್ತಿಗೆ ನನ್ನ ಹೊಟ್ಟ್ಯಾಗ ಒಂದು ಕೂಸು ಹಾಕತಿದ್ದ.

ನಂಬಿಕೆ ಇರಲಿ ತಂಗೆಮ್ಮಾ. ಎಲ್ಲಾ ಸರಿ ಹೋಗುತ್ತೆ. ನಿನ್ನ ಸಮಸ್ಯೆಗೆ ನಾ ಪರಿಹಾರ ಹುಡುಕಿ ಕೊಡುತ್ತೇನೆ. ಈಗ ನನ್ನನ್ನು ಬಿಡು. ಕೂತು ಮಾತಾಡೋಣ.

ರತ್ನಮ್ಮಳಿಗೆ ಏನನ್ನಿಸಿತೋ ಏನೋ ಅಣ್ಣಾ ಎನ್ನುತ್ತಾ ತನ್ನ ಪಟ್ಟನ್ನು ಸಡಿಲಿಸಿ ಜರ್ರಂತ ಕೆಳಗಿಳಿದು ಸುಯೋಗನ ಮೊಣಕಾಲಿನಲ್ಲಿ ತನ್ನ ಮುಖ ಹುದುಗಿಸಿ ಅಳಲು ಪ್ರಾರಂಭಿಸಿದಳು. ಅವಳ ತಲೆಯಲ್ಲಿ ಕೈ ಯಾಡಿಸುತ್ತಾ ಅವಳನ್ನು ಮೇಲಕ್ಕೆಬ್ಬಿಸಿ ಹಾಲಿಗೆ ಕರೆದುಕೊಂಡು ಬಂದ ಸುಯೋಗ. ಬೆಡ್ ರೂಮಿಗೆ ಬರುವಾಗ ರತ್ನಮ್ಮ ಹಾಕಿದ್ದ ಮುಂಬಾಗಿಲನ್ನು ತೆಗೆದು ಸೋಫಾದಲ್ಲಿ ಕುಳಿತುಕೊಂಡ. ಮೊದಲನೇ ಅಂತಸ್ತಿನ ಕಟ್ಟಡವಾದುದರಿಂದ ರಸ್ತೆಯಲ್ಲಿ ಹೋಗುವವರಿಗೆ ಅವರು ಕಾಣುತ್ತಿರಲಿಲ್ಲ. ಅಲ್ಲಿನ ಕುಚರ್ಿಯೊಂದರಲ್ಲಿ ಕುಳಿತುಕೊಳ್ಳಲು ಒತ್ತಾಯ ಮಾಡಿದರೂ ಅವಳು ಅದರಲ್ಲಿ ಕೂಡದೇ ಸುಯೋಗನ ಕಾಲುಗಳ ಹತ್ತಿರ ಕುಳಿತುಕೊಳ್ಳಲು ಪ್ರಯತ್ನಿಸಿದಳು. ಬೇಡಮ್ಮಾ, ಅಕಸ್ಮಾತ್ತಾಗಿ ಯಾರಾದರೂ ಬಂದರೆ ಅಪಾರ್ಥಕ್ಕೆ ಕಾರಣವಾಗುತ್ತದೆ.ಎಂದು ಅವ ಹೇಳಿದ್ದಕ್ಕೆ ದೂರಕ್ಕೆ ಸರಿದು ಅಳುತ್ತಾ ಕುಳಿತಳು.

ಸುಯೋಗ ರತ್ನಮ್ಮಳ ಕಡೆ ಒಮ್ಮೆ ದೃಷ್ಟಿ ಹರಿಸಿದ. ರತ್ನಮ್ಮ ಮೈ ತುಂಬಾ ಸೆರಗು ಹೊದ್ದುಕೊಂಡು ಗೌರಮ್ಮನಂತೆ ಮುದ್ದಾಗಿ ಕಾಣುತ್ತಿದ್ದಳು. ಅಳುತ್ತ, ಕಣ್ಣೀರು ಒರೆಸಿಕೊಳ್ಳತ್ತಾ ಕೂತಿದ್ದರಿಂದ ಕೆಂಪು ಕೆಂಪಾಗಿ ಕಾಣುತ್ತಿದ್ದ ಅವಳ ಮುಖದ ಚೆಲುವು ಇಮ್ಮಡಿಸಿತ್ತು. ಅಳುತ್ತಾ ರತ್ನಮ್ಮ ತನ್ನ ಸಂಸಾರದ ಕತೆ ಹೇಳತೊಡಗಿದಳು.

ರತ್ನಮ್ಮ-ರಂಗಪ್ಪಾ ಅವರ ಮದುವೆಯಾಗಿ ಎಂಟು ವರ್ಷಗಳಿಗೆ ಸಮೀಪಿಸಿದೆ. ಎಲ್ಲಾ ರೀತಿಯಿಂದ ನೋಡಿದರೆ ಇಬ್ಬರದೂ ಓವರ್ ಆಲ್ ಸುಖೀ ಸಂಸಾರವೆಂದು ಹೇಳಬಹುದು. ಮದುವೆಯಾದ ಎರಡು ಮೂರು ವರ್ಷಗಳಲ್ಲಿ ಮಕ್ಕಳಾಗದಾಗ ಅವರಲ್ಲಿ ಒಂದು ರೀತಿಯ ಆತಂಕ, ಕಳವಳ ಶುರುವಾಯಿತು. ಕಾಲ ಕಳೆದಂತೆಲ್ಲಾ, ವರ್ಷಗಳು ಉರುಳಿದಂತೆಲ್ಲಾ, ಆತಂಕ ಕಳವಳ ಜಾಸ್ತಿಯಾಗುತ್ತಾ ಹೋಯಿತು. ಜೊತೆಗೆ ನಿರಾಶೆಯ ಮೋಡಗಳು ಅವರ ಸುತ್ತ ಕವಿಯತೊಡಗಿದವು. ಅವರ ಸಂಸಾರದಲ್ಲಿದ್ದ ಮೊದಲಿನ ಉತ್ಸಾಹ, ಆಸಕ್ತಿ, ತೀವ್ರತೆ, ತುಡಿತ, ಪರಸ್ಪರ ಆಕರ್ಷಣೆ ಕಡಿಮೆಯಾಗುತ್ತಾ ಹೋದವು. ತನ್ನ ಗಂಡ ರಂಗಪ್ಪನಿಂದ ತನ್ನ ಹೊಟ್ಟೆಯಲ್ಲಿ ಒಂದು ಹುಳುವೂ ಮಿಸುಕಾಡಲಿಲ್ಲವಲ್ಲ ಎಂಬ ಚಿಂತೆ, ಕಳವಳ, ಕೊರಗು ರತ್ನಮ್ಮಳಿಗೆ. ಸಂಬಂಧಿಕರ, ಪಕ್ಕದ ಮನೆಯವರ, ಹಿತೈಷಿಗಳ ಆಶಯದಂತೆ ಹಲವಾರು ದೇವರುಗಳಲ್ಲಿ ಮೊರೆಯಿಟ್ಟರು. ಆಸ್ಪತ್ರೆಯಲ್ಲೂ ತಪಾಸಣೆ ಆಯಿತು. ಯಾವ ದೇವರುಗಳೂ ಇವರ ಪಾಲಿಗೆ ಬರಲಿಲ್ಲ. ಆಸ್ಪತ್ರೆಯ ವರದಿಗಳ ಪ್ರಕಾರ ಇಬ್ಬರಲ್ಲೂ ಯಾವುದೇ ದೋಷವಿರಲಿಲ್ಲ. ಎಲ್ಲರ ಹೇಳಿಕೆ ಒಂದೇ. ಕಾಲ ಕೂಡಿ ಬರಬೇಕು. ಕಾಲ ಕೂಡಿಬಂದಾಗ ಯಾರಿಂದಲೂ ತಡೆಯುವುದಕ್ಕೆ ಆಗುವುದಿಲ್ಲವೆಂದು.

ಇತ್ತೀಚಿಗೆ ಮೂರು ತಿಂಗಳುಗಳಿಂದ ರತ್ನಮ್ಮಳು ಇನ್ನೂ ಹೆಚ್ಚಿಗೆ ವ್ಯಾಕುಲಗೊಂಡಿದ್ದಾಳೆ. ಏಕೆಂದರೆ ರಂಗಪ್ಪ ಗುಟ್ಕಾ ತಿನ್ನುವುದು ಹೆಚ್ಚಿಗೆ ಮಾಡಿದ್ದಾನೆ. ಹಾಗೆಯೇ ವಾರದಲ್ಲಿ ನಾಲ್ಕೈದು ದಿನ ಕುಡಿದು ಮನೆಗೆ ಬರಲಾರಂಭಿಸಿದ್ದಾನೆ. ಆಕೆಯ ಓಣಿಯ ಜನ ಮಾತನಾಡುವುದನ್ನು ಕೇಳಿಸಿಕೊಂಡು ಕಳವಳಕ್ಕೀಡಾಗಿದ್ದಾಳೆ. ಏನೆಂದರೆ ಈ ರೀತಿ ಹೆಚ್ಚಿಗೆ ಗುಟ್ಕಾ ತಿನ್ನುವವರಿಗೆ ಮತ್ತು ಕುಡಿಯುವವರಿಗೆ ಮಕ್ಕಳಾಗುವ ಸಾಧ್ಯತೆ ಕಡಿಮೆಯಾಗುತ್ತದೆಯೆಂದು. ಗಂಡನಿಗೆ ಈ ಚಟಗಳನ್ನು ಬಿಡಿಸಲು ರತ್ನಮ್ಮ ಸಾಕಷ್ಟು ಪ್ರಯತ್ನ ಪಟ್ಟಿದ್ದರೂ ಫಲ ಮಾತ್ರ ಸಿಕ್ಕಿರಲಿಲ್ಲ. ತನ್ನ ಹಣೆ ಬರಹವೇ ಖೊಟ್ಟಿಯಿದೆಯೆಂದು ಪೇಚಾಡಿಕೊಳ್ಳುತ್ತಿದ್ದಳು. ಈ ಚಟಗಳು ಬಲಿತ ನಂತರ ರಂಗಪ್ಪನಿಗೆ ರತ್ನಮ್ಮನ ಜೊತೆ ಪ್ರೀತಿ ಅಷ್ಟಕ್ಕಷ್ಟೆ. ಗಂಡ ಹೆಂಡಿರ ಸಂಸಾರವೇ ಚೆನ್ನಾಗಿ ನಡೆಯದಿರುವಾಗ ಮಕ್ಕಳೇಗೆ ಹುಟ್ಟುತ್ತವೆಯೆಂಬುದು ರತ್ನಮ್ಮಳ ತರ್ಕ. ತನ್ನ ಸುಂದರ ಯೌವನ ಹೀಗೇ ಬಂಜರಾಗಿ ಬಿಡುತ್ತದೇನೋ ಎಂಬ ಅಳುಕು ಅವಳ ಮನದಲ್ಲಿ.

ಟಿ.ವಿ.ಯಲ್ಲಿ ಬರುವ ಹಲವಾರು ಧಾರಾವಾಹಿಗಳನ್ನು ರತ್ನಮ್ಮ ದಿನಾಲೂ ನೋಡುತ್ತಿದ್ದಾಳೆ. ಕೆಲವೊಂದು ಧಾರಾವಾಹಿಗಳಲ್ಲಿ ಒಬ್ಬ ಹೆಂಗಸು ಎರಡು ಮೂರು ಗಂಡಸರ ಸಂಗ ಬೆಳೆಸಿ ರಾಜಾರೋಷವಾಗಿ ತಿರುಗುವುದು, ಹಾಗೇಯೇ ಒಬ್ಬ ಗಂಡಸು ಇಬ್ಬರು ಮೂವರು ಹೆಂಗಸರ ಸಂಬಂಧ ಬೆಳೆಸುವುದು ನೋಡೀ, ನೋಡೀ, ತಾನೂ ಸಹ ಇಂಥಹ ಪ್ರಯೋಗವೇಕೆ ಮಾಡಬಾರದೆಂದು ಯೋಚಿಸಿದ್ದಾಳೆ ಹಲವಾರು ಸಾರೆ. ಇಂಥಹ ಯೋಚನೆಗಳ ಪ್ರಯೋಗದ ಫಲವೇ ಸುಯೋಗನೊಂದಿನ ಇಂದಿನ ಅವಳ ಸಾಹಸ. ತನ್ನ ರೂಪ, ಯೌವನದ ಸುಂದರ ಶರೀರಕ್ಕೆ ಸುಯೋಗ ಮಾರು ಹೋಗಬಹುದೆಂದು ಅವಳು ಹಾಕಿದ್ದ ಲೆಕ್ಕಾಚಾರ ಫಲಿಸಲಿಲ್ಲ.

ನೋಡು ರತ್ನಮ್ಮಾ ನಿನ್ನಂಥಹ ಚೆಲುವೆ ಹೆಂಗಸು ಕಣ್ಸನ್ನೆ ಮಾಡಿದರೇ ಸಾಕಷ್ಟು ಜನ ಗಂಡಸರು ನಿನ್ನ ಹಿಂದೆ ಬೀಳಬಹುದು. ನಿನ್ನ ಹೆಣ್ತನ ಹಾಳು ಮಾಡಿ ಪಾವಿತ್ರ್ಯತೆ ಸೂರೆ ಮಾಡಿಬಿಡಿತ್ತಾರೆ. ನೀನು ಯಾವಾಗಲೂ ಉಡಿಯಲ್ಲಿ ಬೆಂಕಿಯನ್ನು ಇಟ್ಟುಕೊಂಡು ಅಡ್ಡಾಡುತ್ತಿರುವಿ. ಬಹಳ ಹುಷಾರಾಗಿರಬೇಕು. ನಾಳೆ ಸಾಯಂಕಾಲ ಸಾಹಿತ್ಯ, ಸೃಷ್ಟಿ ಬರುತ್ತಾರೆ. ಹೇಗೂ ನಾಡದು ನಿನ್ನ ಗಂಡನಿಗೆ ಮಾಕರ್ೆಟ್ ಬಂದ್ ಇರುವುದರಿಂದ ವಾರದ ರಜೆ ಇರುತ್ತದೆ. ಸಾಯಂಕಾಲ ಏಳು ಗಂಟೆ ಸುಮಾರಿಗೆ ಇಬ್ಬರೂ ನಮ್ಮ ಮನೆಗೆ ಬನ್ನಿರಿ. ನಾನೂ ಆಫೀಸಿನಿಂದ ಬೇಗ ಬರುತ್ತೇನೆ. ನಾವೆಲ್ಲಾ ತಿಳಿಸಿ ಹೇಳಿ ನಿನ್ನ ಬಾಳ ಹಾದಿ ಸುಧಾರಿಸುವಂತೆ ಮಾಡುತ್ತೇವೆ. ಯಾವುದಕ್ಕೂ ಹೆಚ್ಚಿಗೆ ಚಿಂತೆ ಮಾಡಬೇಡ.

ಇನ್ನೊಂದು ವಿಷಯ. ಮೊದಲು ನಿನ್ನಲ್ಲಿ ನಿನಗೆ ನಂಬಿಗೆ ಇರಲಿ. ನಿನ್ನ ಗಂಡನಲ್ಲಿ ನಿನಗೆ ನಂಬಿಗೆ ಇರಲಿ. ದೇವರಲ್ಲಿ ನಂಬಿಗೆ ಇರಲಿ. ನಿನ್ನ ಅಣ್ಣನಲ್ಲಿ ನಂಬಿಗೆ ಇರಲಿ. ಎಲ್ಲಾ ತಾನಾಗಿಯೇ ಸರಿ ಹೋಗುತ್ತದೆ. ಇವತ್ತಿನ ನಿನ್ನ ನಡತೆಯನ್ನು ಇಲ್ಲಿಯೇ ಮರೆತು ಬಿಡು. ಮನಸ್ಸಿಗೆ ಹಚ್ಚಿಕೊಂಡು ಕೊರಗಬೇಡ. ದೇವರು ನಿನ್ನ ಜೊತೆಯಿದ್ದಾನೆ. ನಿನ್ನ ಮಾನ ಪಾವಿತ್ರ್ಯತೆ ಉಳಿದಿದೆ.

ತನ್ನಂಥಹ ಪಾಪಿಯನ್ನು ಕ್ಷಮಿಸಬೇಕೆಂದು ಕಳಕಳಿಯಿಂದ ಕೇಳಿಕೊಳ್ಳುತ್ತಾ ಸುಯೋಗನ ಪಾದಗಳಿಗೆ ಕಣ್ಣೀರಿನ ಅಭಿಷೇಕ ಮಾಡಿದ್ದಳು ರತ್ನಮ್ಮ. ಸುಯೋಗ ತನ್ನ ಕೈಯಾರೆ ಅವಳ ಕಣ್ಣೀರು ಒರೆಸಿ, ಧೈರ್ಯ ತುಂಬಿ ಕಳುಹಿಸಿದ.

ಮರುದಿನ ಸಾಯಂಕಾಲ ಸಾಹಿತ್ಯ, ಸೃಷ್ಟಿಯೊಂದಿಗೆ ತನ್ನ ತವರು ಮನೆಯಿಂದ ಬಂದಿಳಿದಳು. ಸೃಷ್ಟಿ ಊಟಮಾಡಿ ಮಲಗಿದ ಮೇಲೆ ಸುಯೋಗ ಎರಡು ದಿನಗಳಿಂದ ನಡೆದ ವಿದ್ಯಮಾನಗಳನ್ನು ವಿವರಿಸಿ ಹೇಳಿದ ಸಾಹಿತ್ಯಳಿಗೆ. ನನಗಿಂತಲೂ ಭರ್ಜರಿ ಫಿಗರಿರುವ ರತ್ನಳ ರೂಪಕ್ಕೆ ಮರುಳಾಗಿ ಹಳ್ಳಕ್ಕೆ ಬಿದ್ದಿರಬಹುದು ನೀವು ಎಂದು ತಮಾಷೆ ಮಾಡಿದಳು. ಅವಳಿಗೆ ತನ್ನ ಗಂಡ ಅಪರಂಜಿ ಎಂದು ಗೊತ್ತಿದ್ದರೂ ಇದು ತಮಾಷೆ ಮಾಡುವ ವಿಷಯವಲ್ಲವೆಂದು ಸುಯೋಗನಿಗೆ ತುಂಬಾ ಕೋಪ ಬಂತು. ನೋಡು ಸಾಹಿತ್ಯ, ನೀ ಹೇಳಿದ ಹಾಗೆ ಆಗಿದ್ದರೆ ನಾನೇಕೆ ನಿನ್ನ ಹತ್ತಿರ ಈ ವಿಷಯ ಹೇಳಿ ಗುಲ್ಲು ಮಾಡಬೇಕಾಗಿತ್ತು? ಗಪ್ ಚಿಪ್ ಆಗಿ ವ್ಯವಹಾರ ಮುಂದುವರೆಸುತ್ತಿದ್ದೆ. ಸುಯೋಗ ಸಮಜಾಯಿಸಿ ಹೇಳಿದ. ಗಂಡನನ್ನು ತನ್ನೆದೆಗೆ ಅವುಚಿ ಹಿಡಿದುಕೊಂಡು ಮುದ್ದುಮಾಡಿ ರಮಿಸಿದಳು ಸಾಹಿತ್ಯ.

ಮರುದಿನ ಸಾಯಂಕಾಲ ರತ್ನಮ್ಮ-ರಂಗಪ್ಪ ದಂಪತಿಗಳು ಮನೆಗೆ ಬರುವಷ್ಟರಲ್ಲಿ ಸುಯೋಗ ಮನೆಗೆ ಬಂದು ಮುಖ ತೊಳೆದು ರೆಡಿಯಾಗಿ ಕುಳಿತಿದ್ದ. ಸಾಹಿತ್ಯ, ರತ್ನಮ್ಮಳನ್ನು ನಗುಮೊಗದಿಂದ ಸ್ವಾಗತಿಸಿ, ಎಲ್ಲರಿಗೂ ಲಘು ತಿಂಡಿ ಹಾಗು ಚಹ ಸರಬರಾಜು ಮಾಡಿದಳು.

ಸುಯೋಗ ಮೊದಲು ಅದೂ ಇದೂ ಮಾತಾಡುತ್ತಾ, ರತ್ನಮ್ಮ ತಮ್ಮ, ಮನೆಯ ಮಗಳು ಇದ್ದ ಹಾಗೆ. ರಂಗಪ್ಪ ತಮ್ಮ ಅಳಿಯ ಇದ್ದ ಹಾಗೆ ಎಂದು ಹೇಳುತ್ತಾ ಅವರನ್ನು ತನ್ನ ವಿಶ್ವಾಸಕ್ಕೆ ತೆಗೆದುಕೊಂಡು ನಂತರ ಗುಟ್ಕಾ, ಕುಡಿತದಿಂದಾಗುವ ದುಷ್ಪರಿಣಾಮಗಳು, ಹಾಗೂ ಅವುಗಳ ಅಡ್ಡ ಪರಿಣಾಮಗಳಿಂದ ಸಂಸಾರದಲ್ಲಿ ಆಗುವ ಅನಾಹುತಗಳ ಬಗ್ಗೆ ವಿವರಿಸಿ ಹೇಳಿದ. ಮನಸ್ಸು ಮಾಡಿದರೆ ಈ ಚಟಗಳನ್ನು ಯಾವ ಕಷ್ಟವಿಲ್ಲದೇ ಬಿಡಬಹುದೆಂದೂ ಹೇಳಿದ. ಹಾಗೆಯೇ ತನಗೆ ಗೊತ್ತಿರುವ ಡಾಕ್ಟರ್ ದಂಪತಿಗಳಿಗೆ ಮದುವೆಯಾಗಿ ಹದಿನಾರು ವರ್ಷದ ಮೇಲೆ ಮಕ್ಕಳಾಗಿರುವ ಬಗ್ಗೆ ಹಾಗೂ ಇನ್ನೊಬ್ಬ ಬ್ಯಾಂಕಿನ ಗೆಳೆಯ ದಂಪತಿಗಳಿಗೆ ಮದುವೆಯಾದ ಹನ್ನೆರಡು ವರ್ಷಗಳ ಬಳಿಕ ಮಕ್ಕಳಾಗಿರುವುದನ್ನು ಅವರಿಗೆ ಮನ ಮುಟ್ಟುವಂತೆ ಹೇಳಿದ. ಯಾವುದಕ್ಕೂ ಜೀವನದಲ್ಲಿ ಹತಾಶರಾಗಬೇಕಿಲ್ಲ. ನಿರಾಶರಾಗಬೇಕಿಲ್ಲ. ನಗು ನಗುತ್ತಾ ಜೀವನವನ್ನು ಎದುರಿಸಬೇಕು. ಹಾಗೆಯೇ ಅವರಿಗೆ ಯೌವನವೂ ಇದೆಯೆಂದು ಒತ್ತಿ ಒತ್ತಿ ಹೇಳಿದ ಸುಯೋಗ. ಮನಸ್ಸಿದ್ದರೆ ಮಾರ್ಗವಿದೆಯೆಂದು ತಿಳಿಸಿದ.

ರತ್ನಮ್ಮ-ರಂಗಪ್ಪ ದಂಪತಿಗಳ ಮುಖದಲ್ಲಿ ಸಂತಸ ಅರಳಿತ್ತು. ರಂಗಪ್ಪ ತಾನಾಗಿಯೇ ಮುಂದೆ ಬಂದು ಸುಯೋಗನ ಕೈ ತೆಗೆದುಕೊಂಡು ಆತನ ಕೈಯಲ್ಲಿ ತನ್ನ ಕೈ ಹಾಕಿ ಪ್ರಮಾಣ ಮಾಡುತ್ತಾ, ಇನ್ನು ಮುಂದೆ ಈ ಚಟಗಳನ್ನು ಬಿಟ್ಟು ಬಿಡುವುದಾಗಿ ಒಪ್ಪಿಕೊಂಡ. ರತ್ನಮ್ಮಳೊಂದಿಗೆ ಚೆನ್ನಾಗಿ ಸಂಸಾರ ಮಾಡಿಕೊಂಡು ಅವಳ ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳುವುದಾಗಿ ಪ್ರಮಾಣ ಮಾಡಿದ. ಎಲ್ಲರ ಮನಸ್ಸುಗಳು ಖುಷಿಯಿಂದ ಬೀಗುತ್ತಿದ್ದವು.

ಸಾಹಿತ್ಯ, ರತ್ನಮ್ಮ ಇಬ್ಬರೂ ಸೇರಿ ಅಡಿಗೆ ಮಾಡಿದರು. ಎಲ್ಲರೂ ಸೇರಿ ಊಟ ಮಾಡಿದರು. ರತ್ನಮ್ಮ ಸೃಷ್ಟಿಯ ಜೊತೆ ತಾ ಬಂದಾಗಿನಿಂದಲೂ ಆಟ ಆಡುತ್ತಿದ್ದಳು. ಊಟಮಾಡಿ ರತ್ನಮ್ಮ ಗಂಡನೊಂದಿಗೆ ಹೊರಟು ನಿಂತಾಗ, ಸಾಹಿತ್ಯ ರತ್ನಮ್ಮ ಬೇಡ ಬೇಡವೆಂದರೂ ಆಕೆಗೆ ತಮ್ಮ ಪ್ರೀತಿಯದ್ಯೋತಕವಾಗಿ ಸೀರೆ, ಖಣ ಕೊಟ್ಟು ಕಳುಹಿಸಿದಳು. ರತ್ನಮ್ಮನಿಗೆ ತನ್ನ ತವರು ಮನೆಯಲ್ಲಿರುವ ಹಾಗೆ ಅನಿಸಿತು. ಹೊರಟಾಗ ಭಾವುಕತೆಯಿಂದ ಅವಳ ಹೃದಯ ತುಂಬಿ ಬಂದಿತು. ಇಬ್ಬರೂ ಸಾಹಿತ್ಯ ಮತ್ತು ಸುಯೋಗರ ಕಾಲಿಗೆ ನಮಸ್ಕರಿಸಿ ಆಶೀವರ್ಾದ ಪಡೆದುಕೊಂಡರು.

ಮುಂದಿನ ದಿನಗಳಲ್ಲಿ ಸುಯೋಗ ಮತ್ತು ಸಾಹಿತ್ಯ, ರತ್ನಮ್ಮಳಲ್ಲಿ ಆಗುತ್ತಿದ್ದ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ರತ್ನಮ್ಮ ಉತ್ಸಾಹದ ಚಿಲುಮೆಯಾಗಿದ್ದಳು. ಲವಲವಿಕೆಯ ಬುಗ್ಗೆಯಾಗಿದ್ದಳು. ಇವರ ಮನೆಗೆ ಬಂದಾಗ ಸೃಷ್ಟಿಯೊಂದಿಗೆ ಹೆಚ್ಚಿನ ಸಮಯ ಕಳೆಯತೊಡಗಿದಳು. ಸಾಯಂಕಾಲ ದಿನಾಲೂ ಕಡಿಮೆಯೆಂದರೆ ಅರ್ಧ ಗಂಟೆಯಾದರೂ ಸೃಷ್ಟಿಯೊಂದಿಗೆ ತನ್ನ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದಳು. ರಂಗಪ್ಪ ಸಹ ತನ್ನ ಚಟಗಳಿಗೆ ತಿಲಾಂಜಲಿಯಿತ್ತಿದ್ದ. ತನ್ನ ಕೆಲಸ ಮುಗಿದ ಕೂಡಲೇ ಮನೆ ಸೇರುತ್ತಿದ್ದ. ಇಬ್ಬರ ಸಂಸಾರದಲ್ಲಿ ಮೊದಲಿನ ಅನ್ಯೋನ್ಯತೆ ಸ್ಥಾನ ಅಲಂಕರಿಸಿತ್ತು. ಹೊಸದಾಗಿ ಮದುವೆಯಾದ ಜೋಡಿಯಂತೆ ಆಗಾಗ್ಗೆ ಸಮೀಪದ ದೇವಸ್ಥಾನದ ಊರುಗಳಿಗೆ, ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಿ ಬರುತ್ತಿದ್ದರು. ದಾಂಪತ್ಯ ಸುಖದ ಪರಾಕಾಷ್ಟತೆಯಲ್ಲಿ ಮಿಂದು ತೇಲುತ್ತಿದ್ದರು.

ನಾನು ಬಡವಿ ಆತ ಬಡವ. ಒಲವೇ ನಮ್ಮ ಬದುಕು. ಬಳಸಿಕೊಂಡೆವದನೆ ನಾವು ಅದಕೂ ಇದಕೂ ಎದಕೂ. ಎಂಬ ಹೃದಯಕ್ಕೆ ಹತ್ತಿರದ ಕವಿವಾಣಿಯನ್ನು ತಮಗಾಗಿಯೇ ಇದೆಯೆಂದು ಅಂದು ಕೊಂಡಿದ್ದರು. ದಸರಾ ಹಬ್ಬಕ್ಕೆ ಇಬ್ಬರೂ ಜೊತೆಯಾಗಿ ಬಂದು ಸುಯೋಗ-ಸಾಹಿತ್ಯರೊಂದಿಗೆ ಬನ್ನಿಯೆಂಬ ಬಂಗಾರ ವಿನಿಮಯ ಮಾಡಿಕೊಂಡು ಖುಷಿ ಹಂಚಿಕೊಂಡು ಆಶೀವರ್ಾದ ಪಡೆದಿದ್ದರು. ಹಾಗೆಯೇ ಮುಂದಿನ ದೀಪಾವಳಿ, ಸಂಕ್ರಾಂತಿ ಹಬ್ಬಕ್ಕೂ ತಪ್ಪಿಸಿರಲಿಲ್ಲ. ದೀಪಾವಳಿ ಹಬ್ಬಕ್ಕಾಗಿ ಗಂಡ-ಹೆಂಡತಿ ಇಬ್ಬರಿಗೂ ಹೊಸ ಬಟ್ಟೆ ಕೊಡಿಸಿದ್ದರು, ಸುಯೋಗ ಮತ್ತು ಸಾಹಿತ್ಯ.

ಮುಂದೆ ಯುಗಾದಿ-ನಮ್ಮ ಹೊಸ ವರ್ಷ ಸಮೀಪವಾಗುತ್ತಿದ್ದಂತೆ ಎರಡೂ ಜೋಡಿಗಳಲ್ಲೂ ಸಂತಸದ ಹೊನಲು. ರತ್ನಮ್ಮ-ರಂಗಪ್ಪ ದಂಪತಿಗಳ ಈ ಆರು ತಿಂಗಳುಗಳ ಅನ್ಯೋನ್ಯ, ಮಧುರ ದಾಂಪತ್ಯದ ಫಲವೆಂಬಂತೆ ರತ್ನಮ್ಮಳ ಮಡಿಲು ತುಂಬತೊಡಗಿತ್ತು. ರತ್ನಮ್ಮಳ ಸಂತೋಷಕ್ಕೆ ಮೇರೆ ಇರಲಿಲ್ಲ. ಯುಗಾದಿ ಪಾಡ್ಯದ ದಿನ ರತ್ನಮ್ಮ ಗಂಡನೊಂದಿಗೆ ತನ್ನ ಸ್ವಂತ ತವರು ಮನೆಗೆ ಬರುವ ಠೀವಿಯಲ್ಲಿ ಸುಯೋಗ-ಸಾಹಿತ್ಯರ ಮನೆಗೆ ಬಂದಿದ್ದಳು. ಎಲ್ಲರ ಮುಖಗಳು ಸಂತೋಷ, ಸಂಭ್ರಮದಿಂದ ಬೀಗುತ್ತಿದ್ದವು. ದಂಪತಿಗಳಿಬ್ಬರೂ ಸುಯೋಗ-ಸಾಹಿತ್ಯರ ಪಾದಗಳಿಗೆರಗಿ ಆಶೀವರ್ಾದ ಪಡೆದರು.

ಅಣ್ಣಾ, ನಾವಿಬ್ಬರೂ ರಕ್ತ ಹಂಚಿಕೊಂಡು ಹುಟ್ಟಿರದಿದ್ದರೂ ನಾನೆಂತು ತೀರಿಸಲಿ ನಿನ್ನ ಋಣದ ಭಾರ. ಎನ್ನುತ್ತಾ ಸುಯೋಗನ ಪಾದವಿಡಿದು ಕಣ್ಣೀರಿನ ಧಾರೆ ಹರಿಸಿದ್ದಳು. ಛೀ ಹುಚ್ಚಿ, ಈ ಸಂತಸದ ಸಮಯದಲ್ಲಿ ಕಣ್ಣೀರೇಕೆ? ಎಂದು ಹೇಳುತ್ತಾ ಸುಯೋಗ ಅವಳ ತಲೆಯಲ್ಲಿ ತನ್ನ ಕೈಯಾಡಿಸುತ್ತಾ ಅವಳ ತೋಳು ಹಿಡಿದು ಮೇಲೆಬ್ಬಿಸಿದ. ಸಂತೋಷದಿಂದ ಅವಳ ಕಣ್ಣೀರಿನ ಕಟ್ಟೆಯೊಡೆದಿತ್ತು. ಆವೇಶದಿಂದ ಅವನನ್ನು ತಬ್ಬಿ ಹಿಡಿದು ಇನ್ನೂ ಜೋರಾಗಿ ಅಳುತ್ತಾ, ತನ್ನ ಮನದಲ್ಲಿದ್ದ ದುಗುಡವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಳು. ಸಾಹಿತ್ಯ, ರಂಗಪ್ಪ, ಸೃಷ್ಟಿ, ಈ ಅವಿಸ್ಮರಣೀಯ ದೃಷ್ಯವನ್ನು ಮೂಕವಿಷ್ಮಿತರಾಗಿ ನೋಡುತ್ತಾ ಆನಂದಿಸುತ್ತಿದ್ದರು. ಸಾಹಿತ್ಯ ಸುಯೋಗನ ಸಹಾಯಕ್ಕೆ ಬಂದು ರತ್ನಮ್ಮಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಸಮಾಧಾನ ಮಾಡತೊಡಗಿದಳು.

ಅಷ್ಟರಲ್ಲಿ ಇಲ್ಲಿ ಕೇಳಿ ರತ್ನಮ್ಮ, ರಂಗಪ್ಪ, ನಿಮಗೆ ಈಗ ಇನ್ನೊಂದು ಸಿಹಿ ಸುದ್ದಿ ಹೇಳುವೆ. ಸೃಷ್ಟಿಗೆ ಆರೇಳು ತಿಂಗಳುಗಳಲ್ಲಿ ತಮ್ಮ ಅಥವಾ ತಂಗಿ ಜೊತೆಯಾಗಲಿದೆ. ಸುಯೋಗ ತನ್ನ ಸಂತಸ ಹಂಚಿಕೊಂಡ. ಸಾಹಿತ್ಯಳ ಮುಖ ನಾಚಿಕೆಯಿಂದ ರಂಗೇರಿತ್ತು. ಎಲ್ಲರ ಮುಖದಲ್ಲಿ ಸಂತಸ ಅರಳಿತ್ತು.

ರತ್ನಮ್ಮಳ ಬಾಳಲ್ಲಿ ಆವರಿಸಿದ್ದ ಕತ್ತಲು ತನ್ನಿಂದ ತಾನೇ ಮಾಯವಾಗಿ ಹೊಂಬೆಳಕು ಮೂಡಿತ್ತು.



ಲೇಖಕರು : ಶ್ರೀ ಶೇಖರಗೌಡ ಪಾಟೀಲ್,
ಮುಖ್ಯ ವ್ಯವಸ್ಥಾಪಕರು, ಎಸ್.ಬಿ.ಹೆಚ್ ಆರ್.ಸಿ.ಪಿ.ಸಿ
ಮೊಬೈಲ್ 9448989332
ಲಿಂಗಸ್ಗೂರು.

ಅಜ್ಜಾ.. ನೀನು ಗಾಂಧಿ ತಾತ ಅಲ್ಲ...! Prakash Hegde

ಅಜ್ಜಾ.. ನೀನು ಗಾಂಧಿ ತಾತ ಅಲ್ಲ...!


ಪ್ರೀತಿಯ ಅಜ್ಜಾ..

ನಿನ್ನ ಕಂಡರೆ ಯಾಕಿಷ್ಟು ಅಕ್ಕರೆ ಹುಟ್ಟಿದೆ..?

ಗೊತ್ತಿಲ್ಲ...



ನನ್ನ ಮಗನಿಗೆ ..

ನೀನು ಭಗತ್ ಸಿಂಗ್ ನಂತಾಗು...

ಸುಭಾಸ್ ಚಂದ್ರನಂತಾಗು.. ಗಾಂಧಿತಾತನಂತಾಗು.. ಅಂತೆಲ್ಲ ಹೇಳುತ್ತಿದ್ದೆ..



ಸ್ವಲ್ಪ ದೊಡ್ಡವನಾದ ಹಾಗೆ ಅವರ ಬಗೆಗಿನ ಪುಸ್ತಕವನ್ನು ತಂದು ಕೊಡುತ್ತಿದ್ದೆ..

ಒಂದು ದಿನ ನನ್ನ ಮಗ ನನ್ನನ್ನು ಕೇಳಿದ..

ಅಪ್ಪಾ..



ಭಗತ್ ಸಿಂಗ್..ಗಾಂಧಿಯವರೆಲ್ಲ ಹಳಬರು...

ನೀನೂ ಸಹ ನೋಡಿಲ್ಲ...

ಈಗಿನವರು ಯಾರೂ ಇಲ್ಲವಾ ಒಳ್ಳೆಯ ನಾಯಕರು ?



ನಮ್ಮದೇಶದ ಪ್ರಧಾನ ಮಂತ್ರಿಗಳು..

ವಿರೋಧ ಪಕ್ಷದ ನಾಯಕರು...

ಯಾರೂ ಒಳ್ಳೆಯವರು ಇಲ್ಲವಾ ಅಪ್ಪಾ?



ಏನು ಹೇಳಲಿ...?

ನಾನು ನಿರುತ್ತರನಾಗಿದ್ದೆ..

ನನಗೆ ಈಗ ಉತ್ತರ ಸಿಕ್ಕಿದೆ...!! ಇಷ್ಟು ದಿನ ಎಲ್ಲಿದ್ದೆ ಅಜ್ಜಾ...?



ನನ್ನ ಮುದ್ದು ಅಜ್ಜಾ...

ಯಾಕೆ ಉಪವಾಸ ಮಾಡುತ್ತೀಯಾ...?

ಈ ದೇಶದ ಬಗೆಗಾ? ..

ನಮ್ಮ ಮುಂದಿನ ಭವಿಷ್ಯದ ಬಗೆಗಾ?....



ಬೇಡ ಅಜ್ಜಾ...

ನಾವು ಈಗ ಸಂತೃಪ್ತಿಯಿಂದ ಇದ್ದೇವೆ..

ಈಗಿನ ವಾತಾವರಣಕ್ಕೆ ಅಗತ್ಯಕ್ಕಿಂತ ಹೆಚ್ಚಾಗಿ ಹೊಂದಿಕೊಂಡಿದ್ದೇವೆ...



ಬೇಡ ಅಜ್ಜಾ.. ನಮಗಾಗಿ ಉಪವಾಸ ಮಾಡಬೇಡ...

ಹಿಂದೆ ಗಾಂಧಿತಾತ ಉಪವಾಸ ಸತ್ಯಾಗ್ರಹ ಮಾಡಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟರು...



ಅಜ್ಜಾ..

ನನು ಗಾಂಧಿ ತಾತ ಅಲ್ಲ...!

ನನ್ನನ್ನು ಗಾಂಧಿತಾತನಂತೆ ನೋಡುವ ಯೋಗ್ಯತೆಯೂ ನಮಗಿಲ್ಲ..

ನೋಡುವದೂ ಇಲ್ಲ..!



ನನ್ನ ಮುದ್ದು ಪುಟಾಣಿ ಅಜ್ಜ..

ನಮ್ಮನ್ನೆಲ್ಲ ಒಡೆದು ಬಿಟ್ಟಿದ್ದಾರೆ ..



ನಮ್ಮ ಜಾತಿ ...

ಭಾಷೆ ಹೆಸರಲ್ಲಿ... ಮತ ಧರ್ಮದ..

ಸಿದ್ಧಾಂತದ ಹೆಸರಲ್ಲಿ ಒಡೆದು ಚೂರು ಚೂರಾಗಿ ಹೋಗಿದ್ದೇವೆ..



ಅಯ್ಯೋ ಅಜ್ಜಾ...

ನಿನ್ನ ತತ್ವಗಳ, ನೀತಿಗಳ.. ದಿನಾಂಕ ಮುಗಿದಿದೆ..

ಮುಂಬೈ ಸಿನೆಮಾಗಳ...

ಅಲ್ಲಿನ ಥಳುಕಿನ ನಟರ ದೇಶ ಭಕ್ತಿ....

ಸಾಹಸ ನಮಗಿಷ್ಟ.. ಅದರ ಬಗೆಗೆ ನಮ್ಮ ಚಿಂತನೆ...!



ಮತ್ತೆ ದೇಶದ ಹೆಸರಲ್ಲಿ ನಮ್ಮನ್ನು ಸೇರಿಸುವ ವ್ಯರ್ಥ ಪ್ರಯತ್ನ ಮಾಡಬೇಡ..

ನಾವೆಲ್ಲಾ ಒಡೆದ ಮನಸ್ಸಿನವರು... ಮತ್ತೆ ಒಂದಾಗುವ ಆಸೆ ನಮಗಿಲ್ಲ....



ಒಡೆದ ಮನಸ್ಸುಗಳಲ್ಲಿ... ...

ಒಂದು ತರಹದ ವಿಲಕ್ಷಣ ಸಂತೋಷವನ್ನು ಅನುಭವಿಸುತ್ತಿದ್ದೇವೆ...

ನಮ್ಮ ಖುಷಿಗೆ ನೀ ಅಡ್ಡಿ ಪಡಿಸಬೇಡ...



ಆ ಗಾಂಧಿತಾತನಿಗೆ ಒಂದು ಪಕ್ಷವಿತ್ತು..

ಹಣವಿರುವವರ ಬೆಂಬಲವಿತ್ತು..

ದೇಶದ ತುಂಬಾ ಒಂದು ಸಂಘಟನೆ ಇತ್ತು....



ಮುಂದಿನ ಪ್ರಧಾನ ಮಂತ್ರಿ ಯಾರಾಗ ಬಹುದೆಂದರೆ

ಆ ತಾತನ ಬಳಿ ಉತ್ತರ ಸಿದ್ಧವಿತ್ತು..



ಮುದ್ದು ಅಜ್ಜಾ...

ನಿನ್ನ ಬಳಿ ಏನಿದೆ?...

ನಿನ್ನ ಹತ್ತಿರ ಮುಂದಿನ ....

ಪ್ರಧಾನ ಮಂತ್ರಿ ಸ್ಥಾನಕ್ಕೆ ಯೋಗ್ಯ ರಾಜಕೀಯ ಉಮೇದುವಾರ ಇದ್ದಾನೆಯೇ..?..

ನನ್ನ ಪುಟ್ಟು ಅಜ್ಜಾ ಯಾವುದೋ ಭ್ರಮೆ ಬೇಡ...



ಸತ್ಯ..,

ಅಹಿಂಸೆಯೆಲ್ಲ ಇಂದಿನ ಭಾರತಕ್ಕೆ ಅಲ್ಲ...!

ಇಂದಿನ ಸರಕಾರಕ್ಕೂ ಅಲ್ಲ...



ಅಜ್ಜಾ...

ನಿನಗೆ ಗೊತ್ತಿಲ್ಲದಂತೆ ನಿನ್ನ ಮಕ್ಕಳು.. ಮೊಮ್ಮಕ್ಕಳು...

ನಾವೆಲ್ಲಾ.. ಬದಲಾಗಿಬಿಟ್ಟಿದ್ದೇವೆ..

ಸರಿಯಾಗಲಾರದಷ್ಟು ಬದಲಾಗಿದ್ದೇವೆ..



ನೋಡುತ್ತಾ ಇರು..

ನಿನಗೂ ಒಂದು ಜಾತಿ.. ಬಣ್ಣ ಬಳಿದು..

ನಿನ್ನನ್ನೂ ....

ಒಂದು ಸಮುದಾಯದ ಬಾವುಟವನ್ನಾಗಿ ಮಾಡಿಬಿಡುತ್ತೇವೆ..



ಅಜ್ಜಾ..

ನಮಗೆ ಯಾರಿಗೂ ನಾಚಿಕೆಯಿಲ್ಲ..!

ಇಷ್ಟೆಲ್ಲ ಜನ ಬಂದರು..



ಆಂದೋಲನ ಮಾಡಿದರು ಅಂತ ಭ್ರಮೆಯಲ್ಲಿ ನೀನಿರಬೇಡ..!

ಈ ಜನರಾ...?

ಟಿವಿಯಲ್ಲಿ ತಮ್ಮ ಮುಖ ಬರುತ್ತದೆ ಅಂತ ಬಂದವರೇ ಜಾಸ್ತಿ...!



ಅಜ್ಜಾ..

ನಿನ್ನ ಬೆಂಬಲಕ್ಕೆ ನಿಂತ ಎಲ್ಲ ಮಾಧ್ಯಮದವರು...

ನಿನ್ನೆದುರಿಗೆ ಸೇರಿ ಕೂಗುವ ಜನ...

ಎಲ್ಲರೂ... ಆತ್ಮವಂಚನೆ ಮಾಡಿಕೊಳ್ಳುವವರು..



ಅಜ್ಜಾ...

ನಿನ್ನೆ ನಿನಗೆ ಜೈಕಾರ ಹಾಕಿ ..

ಇಂದು ನಗರ ಸಭೆಗೆ ಹೋಗಿ ನಾನು ಲಂಚಕೊಟ್ಟು ಬಂದೆ...



ಲಂಚ ಕೊಡುವ ನನಗೂ..

ತೆಗೆದುಕೊಂಡ ಅವನಿಗೂ...

ಸ್ವಲ್ಪವೂ ಮುಜುಗರವೂ.. ನಾಚಿಕೆಯೂ ಆಗಲಿಲ್ಲ..

ರೂಢಿಯಾಗಿಬಿಟ್ಟಿದೆ...



ನಮ್ಮ ಆತ್ಮಸಾಕ್ಷಿಯನ್ನು ಸಾಯಿಸಿ...

ಇಬ್ಬರೂ ನಗುತ್ತ .. ಸ್ನೇಹಿತರಂತೆ ಇದ್ದೇವೆ..!

ಇಷ್ಟು ದೊಡ್ಡ ಪಟ್ಟಣದಲ್ಲಿ ಹೆಂಡತಿ ಮಕ್ಕಳೊಂದಿಗೆ ಬದುಕಲು ಇದು ಅಗತ್ಯ...



ಪ್ರೀತಿಯ ಅಜ್ಜಾ .... ಬೇಜಾರಾಗಬೇಡ..

ಇನ್ನು ಸರಕಾರದ ಜೊತೆ ನಿನ್ನ ಮಾತುಕತೆ..!

ತಾವು ಕುಳಿತ ಹಣ್ಣಿನ ಮರದ ರೆಂಭೆಯನ್ನು ...

ಯಾರಾದರೂ ಕಡಿಯುತ್ತಾರೆಯೇ ಅಜ್ಜಾ...?



ಅಜ್ಜಾ..

ನಮ್ಮ ಪ್ರತಿನಿಧಿಗಳು ನಾಟಕದವರು...!

ಒಪ್ಪಿಕೊಂಡಂತೆ ಮಾಡಿದರೂ... ರಂಗೋಲಿ ಒಳಗೆ ನುಸಿಯಲು ಜಾಗ ಇಟ್ಟುಕೊಂಡಿರುತ್ತಾರೆ...



ಅಜ್ಜಾ...

ನಮ್ಮ ದೇಶದ ಭ್ರಷ್ಟಾಚಾರ ವಿದೇಶಗಳಿಂದಲೂ ಬೆಂಬಲಿತ...

ಅನೇಕ ಅಂತರರಾಷ್ಟ್ರೀಯ ಕಂಪೆನಿಗಳು..

ನಮ್ಮ ದೇಶವನ್ನು ಉದ್ಧಾರ ಮಾಡಲು ಬಂದಿವೆ..



ನಮ್ಮ ದೇಶದ ಅನೇಕ ಗಣ್ಯರು ..!

ಅವರ ಮಕ್ಕಳು ಅದರಲ್ಲಿ ಕೆಲಸ ಮಾಡುತ್ತಾರೆ..



ನಿನ್ನ ಬಿಲ್ಲನ್ನು ಪಾಸು ಮಾಡುತ್ತೇವೆ ಎನ್ನುವ...

ಎಲ್ಲ ಪಕ್ಷದ ಎಂಪಿಗಳಿಗೆ..

ಮಂತ್ರಿಗಳಿಗೆ....

ಸಂಸತ್ತಿನಲ್ಲಿ ಬಿಲ್ಲು ಪಾಸುಮಾಡುವಾಗ...

ಅವರಿಗೆ ತಿಂದ ಲಂಚದ ಆತ್ಮಸಾಕ್ಷಿಗೆ ಹೇಗೆ ಮೋಸ ಮಾಡಿಕೊಳ್ಳಲು ಸಾಧ್ಯ...?



ಬಹುರಾಷ್ಟ್ರೀಯ ಕಂಪೆನಿಗಳ ಎಂಜಲನ್ನು ..

ನಾವು ಗೌರವದಿಂದ ತಿನ್ನುತ್ತಿದ್ದೇವೆ..

ಆ ಅತಿಥಿಗಳಿಗೆ ನಾವು ಹೇಗೆ ಅಗೌರವ ತೋರಿಸಲು ಸಾಧ್ಯ...?



ಈ ಕಾನೂನು ಬಂದರೆ ಎಷ್ಟೊಂದು ಕುಟುಂಬದ

ಯಜಮಾನರು ಜೈಲಿನಲ್ಲಿರಬೇಕಾಗುತ್ತದೆ..?

ಸ್ವಲ್ಪ ಯೋಚಿಸು ಅಜ್ಜಾ...ಅವರೂ ನನ್ನ ಮಕ್ಕಳು..!



ಅಜ್ಜಾ..

ಈಗ ಸಂಧಾನ ಮಾತುಕತೆ ಅಂತೆಲ್ಲ ನಾಟಕ ನಡೆಯುತ್ತಿದೆಯಲ್ಲ..

ತೆಪ್ಪಗೆ ಒಪ್ಪಿಕೊಂಡುಬಿಡು..



ಈ ಉಪವಾಸ.. ಅಹಿಂಸೆ.. ಸತ್ಯಾಗ್ರಹ ನಮಗೆ ಅಗತ್ಯ ಇಲ್ಲ..

ಪ್ರತಿ ನಿತ್ಯ ನೂರಾ ಇಪ್ಪತ್ತು ಕೋಟಿ ಜನಕ್ಕೆ ಹೂವಿಡುವವರಿಗೆ..

ಇನ್ನೊಂದು ಹೂ ಇಡುವದು ಕಷ್ಟವೆ?



ಅಜ್ಜಾ..

ಇದುವರೆಗೆ ಯಾರೂ ಇಡದ ...

ಒಂದು ಚಂದದ ಹೂವು ನಿನಗಿಡುತ್ತಿದ್ದಾರೆ..!



ಇಂದು ಅಲ್ಲದಿದ್ದರೆ ನಾಳೆ ಕೊಟ್ಟೆ..ಕೊಡುತ್ತಾರೆ...!

ಇಟ್ಟುಕೋ..!!

ನಾವು ಇಟ್ಟುಕೊಂಡಿದ್ದೇವೆ... ನೀನೂ ಸಹಿಸಿಕೊ..

ಕ್ರಮೇಣ ರೂಢಿಯಾಗುತ್ತದೆ...!



ಅಜ್ಜಾ..

ಇದೆಲ್ಲ ಬಿಟ್ಟು ನಮ್ಮನೆಗೆ ಬಾ..



ಶೇಂಗಾವನ್ನು ನೀರಿನಲ್ಲಿ ಬೇಯಿಸಿ ...

ಉಪ್ಪು ಖಾರ ಹಾಕಿ ಬೇಯಿಸಿಡುತ್ತೇನೆ..

ಅದನ್ನು ತಿನ್ನುತ್ತ..

ನಿನ್ನ ಹಿಂದಿನ ಸಾಹಸದ ಕಥೆಗಳನ್ನು ಹೇಳು..



ನಿನಗೊಂದು ಜಾತಿ ಪಟ್ಟ ಕಟ್ಟಿ..

ಬಣ್ಣ ಬಳಿದು..

ನಿನ್ನನ್ನು...

ಒಂದು ಬಾವುಟವನ್ನಾಗಿ ನೋಡಲು ಮನಸ್ಸು ಒಪ್ಪುತ್ತಿಲ್ಲ..



ಕರಳು ಕಿವುಚಿದಂತಾಗುತ್ತದೆ..

ಬಂದು ಬಿಡು ಅಜ್ಜಾ...!



ಕಾಯುತ್ತಾ ಇತರ್ೆನೆ...