Sunday, October 16, 2011

ಪತ್ರಿಕಾ ಮಾಧ್ಯಮಗಳನ್ನು ಯಾರು ಪ್ರಶ್ನಿಸಬೇಕು...!

ಪತ್ರಿಕಾ ಮಾಧ್ಯಮಗಳನ್ನು ಯಾರು ಪ್ರಶ್ನಿಸಬೇಕು...!


ಪ್ರಜಾಪ್ರಭುತ್ವದ ಸ್ತಂಭಗಳನ್ನು ಪ್ರಶ್ನಿಸುವ ಏಕೈಕ ಹಕ್ಕು ಇದೇ ಎಂದಾಕ್ಷಣ ಸಾಮಾಜಿಕ ಸ್ವಾಸ್ಥ್ಯವನ್ನೆಲ್ಲ ಹಾಳು ಮಾಡಬೇಕೆಂದು ಯಾವ ಪತ್ರಿಕಾಧರ್ಮವು ಹೇಳಿಲ್ಲ. ಆದರೆ, ಇಂದಿನ ದಿನಗಳಲ್ಲಿ ಮಾದ್ಯಮ ವೃತ್ತಿ ಉದ್ಯಮವಾಗಿ ಪರಿವರ್ತನೆಗೊಂಡಿರುವದರಿಂದ ಮಾದ್ಯಮಗಳೇ ನಮ್ಮದು 4ನೇ ಅಂಗವೆಂದು ಸ್ವಯಂಘೋಷಣಿ ಮಾಡಿಕೊಂಡಿವೆ ಎನ್ನುತ್ತಾರೆ ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾದ್ಯಾಪಕ ಡಾ.ಅಶೋಕ ಕೆ.ಆರ್.

ಭ್ರಷ್ಟಾಚಾರ ಕೇವಲ ಸರಕಾರಿ ನೌಕರರ ಮತ್ತು ಸರಕಾರಕ್ಕಷ್ಟೇ ಸೀಮಿತವಾಗಿಸಬಹುದಾದ ಸಂಗತಿಯಾ? ಅನಧಿಕೃತವಾಗಿ ಸಾವಿರದಿಂದ ಲಕ್ಷ ರೂಪಾಯಿಗಳನ್ನು ಡೊನೇಷನ್ ಮತ್ತು ತಮ್ಮ ಟ್ರಸ್ಟ್ನ ಹೆಸರಿನಲ್ಲಿ ಪಡೆಯುವ ಶಾಲಾ ಕಾಲೇಜುಗಳು, ಎಂ.ಆರ್.ಪಿ ದರಕ್ಕಿಂತ ಹೆಚ್ಚು ಹಣ ಪಡೆಯುವ ಅಂಗಡಿಗಳು, ನಾರ್ಮಲ್ಲಾಗೇ ಆಗುವ ನಾರ್ಮಲ್ ಡೆಲಿವರಿಗೆ 50,000ದಿಂದ ಒಂದು ಲಕ್ಷದವರೆಗೆ ಪಡೆಯುವ ಪಂಚತಾರಾ ಆಸ್ಪತ್ರೆಗಳು ಇದರ ವ್ಯಾಪ್ತಿಗೆ ಬರುವುದಿಲ್ಲವಾ? ಎಂಬ ಪ್ರಶ್ನೆ ಎಲ್ಲರಲ್ಲೂ ಅಡಗಿದೆ.

ಭ್ರಷ್ಟಾಚಾರವನ್ನು ಸರಕಾರಕ್ಕೆ ಸೀಮಿತಗೊಳಿಸಿ ನಡೆಸುವ ಹೋರಾಟಗಳು ಕೊನೆಗೆ ಉಳಿದ ಹಣದಲ್ಲಿ ತಮ್ಮತಮ್ಮ ಪಾಲಿಗಾಗಿ ಕಿತ್ತಾಡಿ ಹೋರಾಟಗಳೇ ದಿಕ್ಕುತಪ್ಪಿ ಹೋಗುತ್ತವೆ.

ಇವೆಲ್ಲ ಒಂದೆದೆ ಇರಲಿ. ನಾವು ಅಣ್ಣಾ ಹಜಾರೆಯ ಹೋರಾಟವನ್ನು ಸಂಪೂರ್ಣ ಬೆಂಬಲಿಸುತ್ತೇವೆ ಎಂದು ಆರ್ಭಟಿಸಿದ, ಅಣ್ಣಾ ಹೋರಾಟವನ್ನು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂದು ಬಿಂಬಿಸಿದ ಪತ್ರಿಕೆ, ದೃಶ್ಯ ಮಾಧ್ಯಮದವರು ಉದ್ದಿಮೆ, ರಾಜಕಾರಣಿಗಳಿಂದ ಉಡುಗೊರೆ ರೂಪದಲ್ಲಿ ಹಣ ಪಡೆದು ಸುದ್ದಿ ತಿರುಚಿಯೋ ಅಥವಾ ವೈಭವೀಕರಿಸಿಯೋ ಪ್ರಕಟಿಸುವುದು ಭ್ರಷ್ಟಾಚಾರವಲ್ಲವಾ? ಬ್ಲಾಕ್ ಮೇಲ್ ಮಾಡಿ ಜನರಿಂದ ಹಣ ವಸೂಲು ಮಾಡುವುದು ಯಾವ ರೀತಿಯ ನೈತಿಕತೆ?

ಚಿಕ್ಕ ನಗರ, ಪಟ್ಟಣ ಮತ್ತು ತಾಲ್ಲೂಕು ವ್ಯಾಪ್ತಿಯಲ್ಲಿ ನಡೆಯುವ ಚುನಾವಣೆಯ ಸಂದರ್ಭದಲ್ಲಿ ಭ್ರಷ್ಟ ಪತ್ರಕರ್ತರ ಆರ್ಭಟವನ್ನು ನೋಡಬೇಕು. ಸಾವಿರ, ಲಕ್ಷಗಳ ಲೆಕ್ಕದಲ್ಲಿ ಹಣ ಪಡೆದು ಅಥವಾ ಬೆಲೆ ಬಾಳುವ ವಸ್ತುಗಳನ್ನು ಉಡುಗೊರೆಯ ಹೆಸರಿನಲ್ಲಿ ಪಡೆದು ಪಕ್ಷಪಾತಿಯಾಗಿ ವರದಿ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಇಲ್ಲಿ ಪತ್ರಕರ್ತರು ಭ್ರಷ್ಟರಾಗಿದ್ದಾರೆ!

ಕನರ್ಾಟಕದ ಉದಾಹರಣೆಯೆಂದರೆ ವಿಜಯ ಕನರ್ಾಟಕ ಪತ್ರಿಕೆಯ ಮುಂಚಿನ ಮಾಲೀಕರಾದ ವಿಜಯ ಸಂಕೇಶ್ವರರು ತಮ್ಮದೇ ರಾಜಕೀಯ ಪಕ್ಷ ಕಟ್ಟಿ ರಾಜ್ಯ ವಿಧಾನಸಭೆ ಚುನಾವಣೆಗೆ ನಿಂತಾಗ ಆ ಪತ್ರಿಕೆಯ ಸಂಪಾದಕ ಮತ್ತು ಪತ್ರಕರ್ತರ ಬಳಗ ಪತ್ರಿಕಾ ಧರ್ಮವನ್ನು ಮರೆತು ಎಲ್ಲೆಡೆಯೂ ತಮ್ಮ ಮಾಲೀಕರ ಪಕ್ಷವೇ ಮುನ್ನಡೆಯಲ್ಲಿದೆ ಎಂದು ವರದಿ ಮಾಡುತ್ತಿದ್ದರು. ಕೊನೆಗೆ ಗೆದ್ದಿದ್ದು ಒಬ್ಬರೋ ಇಬ್ಬರೋ ಅಷ್ಟೇ!

ಒಬ್ಬ ಪತ್ರಕರ್ತ ತಾನು ವಸ್ತುನಿಷ್ಠವಾಗಿ ಮಾಡಿದ ವರದಿಗೆ ಬೆದರಿಕೆಗಳು ಬಂದಾಗ ಆ ಪತ್ರಿಕೆಯ ಸಂಪಾದಕ ಕೂಡ ವೃತ್ತಿನಿಷ್ಠೆಯುಳ್ಳವನಾಗಿದ್ದಲ್ಲಿ ಬೆದರಿಕೆ ಒಡ್ಡಿದ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಸತತವಾಗಿ ತಿಂಗಳುಗಟ್ಟಲೆ ವಾಸ್ತವ ವರದಿಯನ್ನು ಮಾಡುತ್ತಾನೆ.

ಅಲ್ಲಿ ಪ್ರಕಟಗೊಳ್ಳುವ ವರದಿಗಳು ಸತ್ಯವನ್ನು ಜಗತ್ತಿಗೆ ತೋರಿಸುತ್ತಾ, ಬೆದರಿಕೆಗೆ ನಾವು ಜಗ್ಗುವುದಿಲ್ಲ ಎಂದು ಪತ್ರಿಕಾ ಧರ್ಮದ ಮೂಲಕವೇ ತಿಳಿಯಪಡಿಸುತ್ತಾನೆ ಹೊರತು ದ್ವೇಷದ ಮನೋಭಾವನೆ ಹೊಂದಿರುವುದಿಲ್ಲ.

ಆದರೆ, ಇಂದು ಅಂತಹ ಘಟನೆ ಮತ್ತು ವರದಿಗಳು ಕಡಿಮೆಯಾಗುತ್ತಿವೆ. ಸೇಡಿಗೆ ಸೇಡು ಹೆಚ್ಚಾಗುತ್ತಿದೆ. ಒಬ್ಬರಿಂದ ಹಣ ಪಡೆದು ಇನ್ನೊಬ್ಬರ ವಿರುದ್ಧ, ತಿರುಚಿದ ಸುದ್ದಿಗಳನ್ನು, ಸತ್ಯಕ್ಕೆ ವಿರುದ್ಧವಾದ ವರದಿಗಳನ್ನು ಬರೆಯುವ ಕೆಟ್ಟ ಪರಂಪರೆ ಪತ್ರಿಕೋಧ್ಯಮದಲ್ಲಿ ನಡೆಯುತ್ತಿದೆ.

ಸತ್ಯದಿಂದಿರುವವನಿಗೆ ತೊಂದರೆ ನೀಡುತ್ತಾ ದುಡ್ಡಿನ ಬಲವಿದ್ದವನಿಗೆ ಅನುಕೂಲ ಕಲ್ಪಿಸುವ ವ್ಯವಸ್ಥೆ ಜಾರಿಯಾಗುತ್ತಿದೆ.

ರಾಷ್ಟ್ರಮಟ್ಟದಲ್ಲಿ ಔಟ್ಲುಕ್, ಓಪನ್, ಮೇಲ್ ಟುಡೇ ಪತ್ರಿಕೆಗಳ ಮುಖಾಂತರ ಪ್ರಕಟಗೊಂಡ ನೀರಾ ರಾಡಿಯಾ ಟೇಪುಗಳು ಬಹಳಷ್ಟು ಖ್ಯಾತಿವೆತ್ತ ಪತ್ರಕರ್ತರ ಮುಖವಾಡಗಳನ್ನು ಬಯಲುಗೊಳಿಸಿದವು. ಎನ್.ಡಿ.ಟಿ.ವಿಯ ಬಖರ್ಾದತ್, ಹಿಂದೂಸ್ತಾನ್ ಟೈಮ್ಸನ ವೀರ್ಸಾಂಘ್ವಿ, ಬ್ಯುಸಿನೆಸ್ ವಲ್ಟರ್್ನ ಜಹಂಗೀರ್ ಪೋಚಾ, ಇಂಡಿಯಾ ಟುಡೇಯಲ್ಲಿ ಮೊದಲು ಕೆಲಸಕ್ಕಿದ್ದ ಶಂಕರ್ ಐಯರ್ ಇವರಲ್ಲಿ ಪ್ರಮುಖರು.

10ರೂಪಾಯಿ ಲಂಚ ಪಡೆದು ಸಿಕ್ಕಿಬಿದ್ದ ಪೇದೆಯನ್ನು ಬ್ರೇಕಿಂಗ್ ನ್ಯೂಸ್ನ ಹೆಸರಿನಲ್ಲಿ ದಿನವಹೀ ಸುದ್ದಿ ಪ್ರಸಾರಮಾಡುವ ಮಾಧ್ಯಮಗಳು ತಮ್ಮದೇ ಸಹೋದ್ಯೋಗಿಗಳು ಮಾಡಿದ ಲಕ್ಷಾಂತರ ರೂಪಾಯಿ ಹಗರಣಗಳ ಬಗ್ಗೆ ಮೌನ ತಾಳುವುದೇಕೆ? ಇತರೆ ಪತ್ರಕರ್ತರು ಸಿಕ್ಕಿಕೊಂಡದ್ದನ್ನು ತಮ್ಮ ವಾಹಿನಿಯಲ್ಲಿ ಪ್ರಕಟಿಸಿದರೆ ತಮ್ಮ ಬಂಡವಾಳವೂ ಮುಂದೊಂದು ದಿನ ಬಯಲಾಗಬಹುದೆಂಬ ಅಂಜಿಕೆಯಾ? ಫೇಸ್ ಬುಕ್, ಟ್ವಿಟರ್, ಬ್ಲಾಗ್ & ಇತರ ಅಂತಜರ್ಾಲ ಮಾಧ್ಯಮಗಳಲ್ಲಿ ಜನರ ಒತ್ತಾಯ ಅಧಿಕವಾದ ನಂತರವಷ್ಟೇ ದಿ ಹಿಂದು, ಇತರೆ ಪತ್ರಿಕೆಗಳಲ್ಲಿ ಈ ಹಗರಣಗಳ ಬಗ್ಗೆ ಒಳಪುಟಗಳಲ್ಲಿ ಸುದ್ದಿ, ಸಂಪಾದಕೀಯ ಬರಲಾರಂಭಿಸಿದವು.

ಕನರ್ಾಟಕದ ಮಟ್ಟಿಗೆ ಈಗ ಎಲ್ಲ ಮಾಧ್ಯಮಗಳಿಗೆ ಬಂಧನಕ್ಕೊಳಗಾಗಿರುವ ಗಣಿ ಧಣಿ(?) ಗಾಲಿ ಜನಾರ್ದನ ರೆಡ್ಡಿಯದೇ ದೊಡ್ಡ ಸುದ್ದಿ. ರೆಡ್ಡಿ ಟಿಫನ್ ಮಾಡುವುದು, ಕಿಚಡಿಯನ್ನು ತಿರಸ್ಕರಿಸಿ ಬಿಸ್ಕೀಟ್ ತಿಂದಿದದ್ದನ್ನು ಬ್ರೇಕಿಂಗ್ನಲ್ಲಿ ಹಗಲಿರುಳು ಬರತೊಡಗಿದೆ. ಇದಕ್ಕೂ ಮುನ್ನ ಯಡಿಯೂರಪ್ಪ ನೇತೃತ್ವದ ಸರಕಾರದ ಪತನಕ್ಕೆ ಕಾರಣವಾದ ಲೋಕಾಯುಕ್ತ ವರದಿಯಲ್ಲಿ ಪತ್ರಕರ್ತರಿಗೆ, ಪತ್ರಿಕೆಗಳಿಗೆ ಹಣ ನೀಡಿರುವ ಕುರಿತು ದಾಖಲೆಗಳಿವೆ!

ಡೈರಿಯೊಂದರಿಂದ ಲೋಕಾಯುಕ್ತರು ಪತ್ರಕರ್ತರ ಕುರಿತು ಸಾಕಷ್ಟು ಮಾಹಿತಿಗಳನ್ನು ಕಲೆಹಾಕಿದ್ದಾರೆ. ಗಣಿ ಹಗರಣದಲ್ಲಿ ಪಾಲ್ಗೊಂಡಿರುವ ರಾಜಕಾರಣಿಗಳ ಬಗ್ಗೆ ಆಕರ್ಷಕ ಹೆಡ್ಲೈನ್? ಬೈಲೈನ್ ಬರೆಯುವ ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಪತ್ರಕರ್ತರು ಪಡೆದ ಹಣದ ಬಗ್ಗೆ ಸೊಲ್ಲೇ ಇಲ್ಲ!

ಔಜಿಛಿಠಣಡಿಜ ಕೊನೆಗೆ ಜನರ ಗಮನಕ್ಕೆ ಈ ವಿಷಯವನ್ನು ತಂದದ್ದು ಕೂಡ ಕೆಲವು ಜನಪರ ಪತ್ರಿಕೆಗಳು. ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ವಾತರ್ಾ ಭಾರತಿ ಪತ್ರಿಕೆಗಳು ಮಾತ್ರ ಲೋಕಾಯುಕ್ತರ ಆ ಡೈರಿಯ ಪುಟಗಳನ್ನು ಪ್ರಕಟಿಸುವ ದೈರ್ಯ ತೋರಿದವು. ಅಂತಜರ್ಾಲದಲ್ಲಿ ಸಂಪಾದಕೀಯ, ಚುರುಮುರಿಯಂಥ ಕೆಲವು ಬ್ಲಾಗುಗಳು ಒಂದಷ್ಟು ಚಚರ್ೆ ನಡೆಸಿದ್ದನ್ನು ಬಿಟ್ಟರೆ ಉಳಿದೆಲ್ಲವುಗಳು ನೀರವ ಮೌನಕ್ಕೆ ಜಾರಿವೆ!!

ಇಂತಹದೊಂದು ಸಂದರ್ಭದಲ್ಲಿ ಲೋಕಾಯುಕ್ತ ವರದಿಗೆ ಸಂಬಂಧಿಸಿ ಪಾರದರ್ಶಕತೆಯಿಂದ ಪತ್ರಕರ್ತ ಸಮೂಹವೇ ಮುಂದಾಗಿ ತಮ್ಮ ಕೊಳೆಗಳನ್ನು ತೋರಿಸಿ ಉಳಿದ ವೃತ್ತಿಯವರಿಗೆ ಮಾದರಿಯಾಗಬಹುದಿತ್ತಲ್ಲವೇ? ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತದೆ.

ಆ ಡೈರಿಯಲ್ಲಿ ಪತ್ರಿಕೆ ಮತ್ತು ಪತ್ರಕರ್ತರೆಂಬ ಅನುಮಾನ ಬರುವ ಕೆಲವರ ಹೆಸರು ಮತ್ತವರಿಗೆ ಸಂದಾಯವಾದ ಹಣದ ಮಾಹಿತಿ ಮತ್ತು ದಿನಾಂಕವಿದೆ.

ಯಶವಂತ ದೇಶಪಾಂಡೆ/ ಬೆಂಗಳೂರು ಮಿರರ್/ ಸಂಜಯ್ ಸರ್ ಗೆ 1 (9/8/10ರಂದು), ವಿ. ಭಟ್ ಗೆ 50, 25(9/8/10 ಮತ್ತು 4/8/10), ಆರ್. ಬಿಗೆ 10 (31/7/10), ಸಂಜಯ್ ಸರ್ ಗೆ ಮತ್ತೆ 2, 1.5(15/9/10 ಮತ್ತು 18/9/10), ಸಂಜಯ್ ಸರ್ ರೆಫರ್ ಮಾಡಿದ ಸುರೇಶ್ ಭಟ್ ಗೆ 0.20 (8/8/10), ಪ್ರೆಸ್ ಕ್ಲಬ್ ಹರೀಶಗೆ 5 (28/9/10), ಸಂಜಯ್ ಸರ್ ಮುಖಾಂತರ ಬೆಂಗಳೂರು ಲೋಕಲ್ ಪತ್ರಿಕೆಗಳಿಗೆ 2.52, 1.52 (31/8/10 ಮತ್ತು 28/9/10), ಡೆಕ್ಕನ್ ಕ್ರಾನಿಕಲ್ಗೆ 25(28/9/10). ಡೈರಿಯಲ್ಲಿ ಹೋಟಲ್, ಡೀಸಲ್ ಮತ್ತಿತರ ಬಾಬತ್ತುಗಳಿಗೆ ನೀಡಿರುವ ಮೊತ್ತಗಳನ್ನು ಗಮನಿಸಿ ನೋಡಿದಾಗ ಮೇಲಿನ ಮೊತ್ತಗಳೆಲ್ಲ ಲಕ್ಷದಲ್ಲಿರುವ ಸಾಧ್ಯತೆ ಹೆಚ್ಚು. ಒಂದಷ್ಟು ಪತ್ರಿಕೆ ಮತ್ತು ಪತ್ರಕರ್ತರ ಹೆಸರುಗಳು ಪೂರ್ಣವಾಗಿವೆ. ಇನ್ನು ಕೆಲವು ಇನ್ಸಿಯಲ್ ಗಳಷ್ಟೇ ಇವೆ.

ಆರ್. ಬಿ ಮತ್ತು ವಿ.ಭಟ್ ಯಾರಿವರು? ಕನ್ನಡ ಪತ್ರಿಕೆ ಮತ್ತು ಪುಸ್ತಕಗಳನ್ನು ಓದುವ ಅಭ್ಯಾಸವಿರುವವರಿಗೆ ಆರ್.ಬಿ ಎಂದ ತಕ್ಷಣ ಹಾಯ್ ಬೆಂಗಳೂರಿನ ರವಿ ಬೆಳಗೆರೆ, ವಿ.ಭಟ್ ಎಂದರೆ ಈಗ ಕನ್ನಡ ಪ್ರಭ ಮತ್ತು ಸುವರ್ಣ ಟಿ.ವಿ.ಯ ಮುಖ್ಯಸ್ಥರಾಗಿರುವ ವಿಶ್ವೇಶ್ವರ ಭಟ್ಟರ ಹೆಸರುಗಳೇ ಮನದಲ್ಲಿ ಪಡಿ ಮೂಡುತ್ತವೆ. ರವಿ ಬೆಳಗೆರೆ ತಮ್ಮ ಬರವಣಿಗೆಯ ಶೈಲಿಯಿಂದ ಉಂಡಾಡಿ ಹುಡುಗರನ್ನು ಓದಿಗೆ ಹಚ್ಚಿದ್ದೇ ಹೆಚ್ಚು. ಈ ತಲೆಮಾರಿನ ಬಹಳಷ್ಟು ಹುಡುಗರು ಪತ್ರಕೋದ್ಯಮವನ್ನು ವೃತ್ತಿಯಾಗಿ ಸ್ವೀಕರಿಸಲು ರವಿಬೆಳೆಗೆರೆಯ ಬರವಣಿಗೆಯೇ ಕಾರಣವೆಂದು ಹೇಳುವದನ್ನು ನಾವು ನೋಡುತ್ತಿದ್ದೇವೆ.

ಕೆಲವೊಂದು ಬಾರಿ ಬಹಳಷ್ಟು ದಿನ ಪತ್ರಿಕೆಗಳ ಸಂಪಾದಕರ ಹೆಸರುಗಳು ಓದುಗರಿಗೆ ತಿಳಿದಿರುವುದಿಲ್ಲ. ತಮ್ಮ ಬರವಣಿಗೆಯ ಮುಖಾಂತರ ಸಂಪಾದಕನ ಸ್ಥಾನ ಪಡೆದು ಲಕ್ಷಗಟ್ಟಲೇ ಸಂಬಳ ಪಡೆಯುತ್ತಿದ್ದ ವಿಶ್ವೇಶ್ವರ ಭಟ್, ನೈತಿಕತೆಯ ಬಗ್ಗೆ ಪುಟಗಟ್ಟಲೇ ಬರೆದು ಓದುಗರನ್ನು ಮಂತ್ರಮುಗ್ದಗೊಳಿಸುತ್ತಾನೆ. ಆದರೆ, ಈತನೇ ಗಣಿ ಧೂಳಿಗೆ ಮೈಯೊಡ್ಡಿ ಹೊಲಸು ಮಾಡಿಕೊಂಡಿದ್ದಾನೆ. ವಿಶ್ವೇಶ್ವರ ಭಟ್ ಮತ್ತವರ ಶಿಷ್ಯರನ್ನು ವಿಜಯ ಕನರ್ಾಟಕದಿಂದ ಹೊರದಬ್ಬಲು ತಿಂಗಳುಗಳ ಹಿಂದೆಯೇ ಪತ್ರಿಕೆಯ ಮಾಲೀಕರಿಗೆ ಇವರ ಅಮೇಧ್ಯ ಬೋಜನದ ಅರಿವಾಗಿತ್ತೆಂಬುದು ಕಹಿಸತ್ಯ. ಭಟ್ರನ್ನು ಹೊರಹಾಕಲು ಕಾರಣವಾದ ಸಂಗತಿಗಳು ಉಳಿದ ಪತ್ರಿಕೆಗಳಿಗೆ ಗೊತ್ತಿದ್ದರೂ ಅಧಿಕೃತ ದಾಖಲೆಗಳಿಲ್ಲದ ಕಾರಣ ಪ್ರಕಟಿಸುವ ಧೈರ್ಯ (ಗೌರಿಲಂಕೇಶ್ ಪತ್ರಿಕೆ ಹೊರತುಪಡಿಸಿ) ಯಾರೊಬ್ಬರು ಮಾಡಲಿಲ್ಲ. ಕೆಲವು ಮೀಡಿಯಾ ಗಾಸಿಫ್ ಹೆಸರಲ್ಲಿ ವರದಿಗಳು ಜೊತೆಯಲ್ಲಿ ಕೆಲವೇ ಕೆಲವು ಪೀತ ಪತ್ರಿಕೆಗಳು ಮತ್ತು ಬ್ಲಾಗ್ ಗಳು ವಿಜಯ ಕನರ್ಾಟಕ ಮತ್ತು ಇತರೆ ಪತ್ರಿಕೆಗಳಲ್ಲಿ ನಡೆದ ಬದಲಾವಣೆಗೆ ಕಾರಣಗಳನ್ನು ತಿಳಿಸುವಲ್ಲಿ ಪ್ರಯತ್ನಪಟ್ಟವು. ಇನ್ನುಳಿದಂತೆ ಮುಖ್ಯವಾಹಿನಿಗಳದ್ದು ಯಥಾಪ್ರಕಾರ ಅರ್ಥಗಭರ್ಿತ ಮೌನ.

ರವಿಬೆಳಗೆರೆಯ ಬಗ್ಗೆ ಯಾರಾದರೂ ಬರೆದರೆ ಕೋಟರ್ು ಕಟಕಟೆ ಕಟ್ಟಿಟ್ಟಬುತ್ತಿ ಎನ್ನುತ್ತಿದ್ದ ನನ್ನ ಸ್ನೇಹಿತ ಪತ್ರಕರ್ತ. ಆದರೆ ರವಿ ಮಾತ್ರ ತಿನ್ನುವ ಕೆಲಸ ಬಹಳ ಶೃದ್ದೆಯಿಂದ ಮಾಡುತ್ತಾನೆ ಎನ್ನುತ್ತಾರೆ ಆತನ ಪತ್ರಿಕೆಯ ಬಳಗದ ಮಂದಿ.

ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭವೆಂದೆನಿಸಿಕೊಂಡ ಪತ್ರಿಕೋದ್ಯಮ, ಪ್ರಜಾಪ್ರಭುತ್ವದ ಓರೆಕೋರೆಗಳನ್ನು ತಿದ್ದದೇ ತಾನೇ ಅಧಃಪತನಕ್ಕೊಳಗಾಗುತ್ತಿರುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಹಾನಿಕಾರಕ ಬೆಳವಣಿಗೆ. ಸಮಾಜದ ಕಾವಲು ಕಾಯಬೇಕಾದ ಪತ್ರಕರ್ತರ ಮೇಲೆ ನಿಗಾ ಇಡಬೇಕಾಗಿರುವ ಪರಿಸ್ಥಿತಿ ಬಂದಿರುವುದು ಜಾಗತೀಕರಣ ನಮ್ಮೆಲ್ಲರಲ್ಲಿ ಹುಟ್ಟಿಹಾಕಿರುವ ಸ್ವಾರ್ಥ ದುರಾಸೆಗಳ ಫಲವಾದಿಂದಾಗಿ ಎಂಬುದನ್ನು ಯಾರು ಮರೆಯಬಾರದು. ಉತ್ತರವಿಲ್ಲದ ಅದೆಷ್ಟೋ ಪ್ರಶ್ನೆಗಳು ನಮ್ಮಲ್ಲಿವೆ. ಉತ್ತರ ಕೊಡಬೇಕಾದವರು ಫೇಸ್ ಬುಕ್, ಟ್ವಿಟ್ಟರ್ ಗಳಲ್ಲಿ ಫ್ರೆಂಡ್ಸ್ ಸಂಖ್ಯೆಯನ್ನು ಹೆಚ್ಚಿಕೊಳ್ಳಿಸುತ್ತಾ ಮೌನದಿಂದಿದ್ದಾರೆ.

ಡಾ. ಅಶೋಕ್. ಕೆ. ಆರ್.

No comments:

Post a Comment

Thanku