ಬಂಗಾರದ ಪಂಜರ ವರದಿಯ ವಿಷಯವಸ್ತುವಾದ ಸಡಗೋಪಾನ್ ಕುಟುಂಬ ತೀರಾಸಂಕಷ್ಟದಲ್ಲಿದೆ. ನಮಗೆ ತೀರಾ ಬಡತನವಿದ್ದರೂ ಬಿಕ್ಷೆ ಬೇಡಿ ತಿನ್ನುವ ಪರಿಸ್ಥಿತಿ ಬಂದಿಲ್ಲ, ಟಿವಿಯವರು ನಿಮಗೆ ಪರಿಹಾರ ಕೊಡಿಸುತ್ತೇವೆ, ಕಂಪನಿಯವರು ನಿಮ್ಮ ಮನೆಗೆ ಬಂದು ಹಣವನ್ನು ಕೊಡುತ್ತಾರೆ ಅದಕ್ಕಾಗಿ ನೀವುಗಳು ನಾವು ಹೇಳಿದ ಹಾಗೆ ಕೇಳಿ ಅಂದಿದ್ದಕ್ಕೆ ನಾನು ಗಂಗಾಳ ಹಿಡಿದು ಕೊಂಡು ಬಿಕ್ಷುಕನ ಪಾತ್ರದಲ್ಲಿ ಕುಳಿತಿದ್ದೇ. ಆದರೆ, ಟಿವಿಯವರು ಅದನ್ನೆಲ್ಲ ಮಂದಿಗೆ ತೋರಿಸಿ ನನ್ನ ಇದ್ದ ಬಿದ್ದ ಮಾನಮಯರ್ಾದೆಯನ್ನೆಲ್ಲ ಹಾಳು ಮಾಡಿದ್ದಾರೆಂದು ಮೊನ್ನೆ ಸಡಗೋಪಾನರನ್ನು ವಿಚಾರಿಸಲು ಪ್ರಜಾಸಮರ ಹೋದಾಗ ಅವರ ಮುಂದೆಲ್ಲ ಕಣ್ಣೀರು ಹಾಕುತ್ತಾ ಹೇಳಿದರು.
ಸಡಗೋಪಾನ್ ಸಕರ್ಾರದ ದೃಷ್ಟಿಯಲ್ಲಿ ಮದ್ಯಮವರ್ಗದ ವ್ಯಕ್ತಿಯಂತೆ. ಕಾರಣ ಈತನಿಗೆ ಬಿ.ಪಿ.ಎಲ್ ಬದಲಿಗೆ ಎ.ಪಿ.ಎಲ್ ಕಾಡರ್್ನೀಡಿದೆ. ಟಿವಿ9 ಮಂದಿ ಸಡಗೋಪಾನ್ರಿಗೆ ಎ.ಪಿ.ಎಲ್ ಬದಲು ಅಂತ್ಯೋದಯ ಕಾಡರ್್, ವಸತಿಗಾಗಿ ಮನೆ, ವೃದ್ದಾಪ ವೇತನ ಕೊಡಿಸಬಹುದಿತ್ತು. ಅದನ್ನು ಬಿಟ್ಟು ಆತನ ಅಸಹಾಯಕತೆ ಬಳಸಿಕೊಂಡು ಸುದ್ದಿ ಮಾಡಿರುವುದು ಅಕ್ಷರಶಃ ಅಪರಾಧ.
ಉತ್ತಮ ಸಮಾಜದ ನಿಮರ್ಾಣಕ್ಕಾಗಿ ಕನರ್ಾಟಕದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಪ್ರಸಾರಗೊಳ್ಳುತ್ತಿರುವ ಟಿವಿ9, ಆರಂಭದಿಂದ ಎಡವಟ್ಟು ಮಾಡಿಕೊಂಡೇ ಬರುತ್ತಿದೆ. ನೆಲಕ್ಕೆ ಬಿದ್ದರೂ ಮೀಸೆಮಣ್ಣಾಗಲಿಲ್ಲ ಎಂಬಂತೆ ತನ್ನ ಪ್ರತಿಷ್ಟೆಗಾಗಿ ತಾನೇ ಹಲವು ಪ್ರಶಸ್ತಿಗಳನ್ನು ಘೋಷಿಸಿಕೊಂಡು ರಾಷ್ಟ್ರದ ನಂ.1 ಚಾನೆಲ್ ಎಂದು ಬೀಗುತ್ತಿದೆ!
ಕಳೆದ ಏಳು ತಿಂಗಳುಗಳ ಹಿಂದೆ ಬಂಗಾರದ ಪಂಜರವೆಂಬ ಶಿಷರ್ಿಕೆಯಡಿ ಹಟ್ಟಿ ಚಿನ್ನದ ಗಣಿಯ ಕುರಿತು ವರದಿ ಪ್ರಸಾರ ಮಾಡಿತ್ತು. ವರದಿಯ ಪ್ರಸಾರದ ನಂತರ ಎಲ್ಲರಿಂದ ಛೀ..ಥೂ..ಅಂತ ಉಗಿಸಿಕೊಂಡಿತ್ತು. ಕಾರಣ ವರದಿಯಲ್ಲಿ ಇಲ್ಲದ್ದನ್ನು ತಾವೇ ಸೃಷ್ಟಿಸಿ ತೋರಿಸಲಾಗಿತ್ತು. ಆ ನಂತರದ ದಿನಗಳಿಂದ ಇಲ್ಲಿಯವರೆಗೆ ಟಿವಿ9ನ ರಾಯಚೂರು ಜಿಲ್ಲಾ ವರದಿಗಾರ ಸಿದ್ದು ಬಿರಾದಾರ ಹಟ್ಟಿಯ ಕಡೆ ಮುಖ ತೋರಿಸಲೇ ಇಲ್ಲ.
ರಾಯಚೂರು ವರದಿಗಾರನಾದ ಸಿದ್ದಾರೂಢ ಅಲಿಯಾಸ್ ಸಿದ್ದು ಬಿರಾದಾರ ಹಟ್ಟಿಯ ವರದಿಗಾಗಿ ಅಸಹಾಯಕ ವೃದ್ಧನ ಕೈಗೆ ಊಟದ ತಟ್ಟೆ ಕೊಟ್ಟು ಭೀಕ್ಷೆ ಬೇಡಲು ಹೇಳಿದ್ದ.. ಅದನ್ನೇ ಪ್ರಶಸ್ತಿ ಪುರಸ್ಕೃತ ಅಬೂಬಕರ್ ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದು ಹಟ್ಟಿಯ ಕಾಮರ್ಿಕರೆಲ್ಲ ನಿವ್ಲತ್ತಿಯ ನಂತರ ಬಿಕ್ಷೆ ಬೇಡಿಕೊಂಡು ಬದುಕುತ್ತಿದ್ದಾರೆ. ಇಲ್ಲಿ ವೃದ್ದನೋರ್ವನಿಗೆ ಒಂದು ದಿನ ಬಿಕ್ಷೆ ತಪ್ಪಿದರೆ, ಅಂದೆಲ್ಲ ಹೊಟ್ಟೆಗೆ ತಣ್ಣಿರ ಬಟ್ಟೆ ಎಂತೆಲ್ಲ 30ನಿಮಿಷ ಕಿರುಚಿಕೊಂಡಿದ್ದ. (ಅಸಲಿಗೆ ಟಿವಿ 9 ತೋರಿಸಿದ ವೃದ್ದನಿಗೆ ಬಡತನವಿದೆ. ಆದರೆ, ಬಿಕ್ಷೆ ಬೇಡುವ ತಿನ್ನುವಂತಹ ಹೀನಾಯ ಸ್ಥಿತಿ ಬಂದಿಲ್ಲ)
ಸಿದ್ದುವಿನ ವರದಿ ಬಂದ ನಂತರ ಪ್ರಜಾಸಮರ ವಾಸ್ತವ ನೆಲೆಗಟ್ಟಿನ ಮೇಲೆ ಹಟ್ಟಿ ಚಿನ್ನದ ಗಣಿ ಹಾಗೂ ಸುತ್ತಮುತ್ತ ಏನೆಲ್ಲ ಅಕ್ರಮಗಳು ವ್ಯವಸ್ಥಿತವಾಗಿ ಹೇಗೆ ನಡೆಯುತ್ತಿವೆಂದು ಪ್ರಕಟಿಸಿತ್ತು. ಆದರೆ, ಅದನ್ನೆಲ್ಲ ಸಿದ್ದು ಹಟ್ಟಿ ಕಂಪನಿಯವರು ಹಣಕೊಟ್ಟು ನನ್ನ ವಿರುದ್ಧ ವರದಿ ಮಾಡಿಸಿದ್ದಾರೆಂದು ಕೆಲವರ ಮುಂದೆ ಹೇಳಿಕೊಂಡು ತಿರುಗಿದ. ಒಟ್ಟಾರೆ ಈ ವಿಷಯ ಟಿವಿ9ನ ಮುಖ್ಯಸರ ಕಿವಿಗೆ ಬಿತ್ತೋ ಇಲ್ಲ. ಚಚರ್ೆಯಂತೂ ಜಿಲ್ಲಾಮಟ್ಟದ ಎಲ್ಲಾ ಪತ್ರಕರ್ತರ ವಲಯದಲ್ಲಿ ನಡೆದು ಹೋಗಿದ್ದಂತು ಕಟುಸತ್ಯ.
ವರದಿಯ ಕೆಲವು ದಿನಗಳ ನಂತರ ಟಿವಿ9 ಮುಖ್ಯಸ್ಥರು ಸಿದ್ದುವಿನ ವರದಿಯನ್ನು ಸರ್ಮಥರ್ಿಸಿಕೊಂಡು ಮುಂದಿನ ದಿನಗಳಲ್ಲಿ ಯಾವುದೇ ವರದಿ ಮಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ಮಾಡಿ ಎಂದು ಮೌಖಿಕವಾಗಿ ಸೂಚಿಸಿದ್ದಾರಂತೆ! ಅಂದು ಅದು ಅಷ್ಟಕ್ಕೆ ಮುಗಿದು ಹೋಗಿದ್ದರೆ, ನಾವಿಂದು 1085 ಶಬ್ಧಗಳ ಸಂಪಾದಕೀಯ ಬರೆಯುವ ಅವಶ್ಯಕತೆ ಇರಲಿಲ್ಲ.
ಸಮಾಜ ಕಲುಷಿತಗೊಳಿಸುವವರಿಗೆ ರಾಷ್ಟ್ರಪ್ರಶಸ್ತಿಗಳು!
ಉತ್ತಮ ಮನಸ್ಥಿತಿಯನ್ನು ಹೊಂದಿರದ ಯಾವುದೇ ವ್ಯಕ್ತಿ, ಸಂಘ ಸಂಸ್ಥೆ ಉತ್ತಮ ಸಮಾಜವನ್ನು ಎಂದೆಂದಿಗೂ ನಿಮರ್ಾಣ ಮಾಡಲಾಗುವುದಿಲ್ಲ. ಟಿವಿ9ನ ಮಾಜಿ ಕ್ರೈಂ ಬ್ಯೂರೋ ರಾಘವೇಂದ್ರ ಹಲವು ಅನಾಹುತಗಳನ್ನು ಮಾಡಿ ಚಾನೆಲ್ನ್ನು ಬಿಟ್ಟು ಹೋದ. ಕೊಪ್ಪಳದಲ್ಲಿಯೂ ಮೂತರ್ಿಪ್ಯಾಠಿ ಎಂಬಾತ ಚಿಲ್ಲರೆ ವಿಷಯಗಳಿಗೆ ಆಗಾಗ ಕಿರಿಕ್ಗಳನ್ನು ಮಾಡಿಕೊಳ್ಳುತ್ತಿರುತ್ತಾನೆ. ಗುಲ್ಬರ್ಗ-ಹುಬ್ಬಳ್ಳಿ ಮುಗಿಸಿ ಈಗ ರಾಯಚೂರಿನಲ್ಲಿ ಕಸುಬು ಆರಂಬಿಸಿರುವ ಸಿದ್ದಾರೂಡ ಅಲಿಯಾಸ್ ಸಿದ್ದುಬಿರಾದಾರ ಕೂಡ ರಾಯಚೂರಿನಲ್ಲಿ ಕಂಡಕಂಡದ್ದನ್ನೆಲ್ಲ ಸ್ವಾಹ ಎನ್ನುತ್ತಿದ್ದಾನೆ... ಇಂತೆಲ್ಲ ಘನವ್ಯಕ್ತಿಗಳನ್ನು ಹೊಂದಿರುವ ಟಿವಿ9 ಚಾನೆಲ್ ಉತ್ತಮ ಸಮಾಜವನ್ನು ಅದೇಗೆ ನಿಮರ್ಾಣ ಮಾಡುತ್ತದೆ? ಇವರುಗಳ ಮಾಡುವ ವರದಿ ಎಲ್ಲವೂ ಸರಿಯಾಗಿದೆ ಎಂದು ಹಿರಿಯ ಸುದ್ದಿಸಂಪಾದಕ ಮಾರುತಿ ಹೇಗೆ ಒಪ್ಪುತ್ತಾರೆ ಮತ್ತು ರವಿಕುಮಾರನಂತಹ ಅನುಭವಿಗಳು ಎಲ್ಲವನ್ನು ಸೂಕ್ಷ್ಮವಾಗಿ ಗ್ರಹಿಸುವುದಿಲ್ಲವೇ? ಎಂಬ ಹಲವು ಪ್ರಶ್ನೆಗಳು ಸಾಮಾನ್ಯವಾಗಿ ಉದ್ಭವಿಸುತ್ತವೆ.. .
ಈವರೆಗೆ ಟಿವಿ9ನಲ್ಲಿ ಬಂದಂತಹ ಹಲವು ವರದಿಗಳನ್ನು ಸೂಕ್ಷ್ಮವಾಗಿ ಸಮಾಜದ ಕೆಳಸ್ತರದ ದೃಷ್ಟಿಯಿಂದ ನೋಡಿದರೆ, ಎಲ್ಲೋ ಒಂದು ಗುಂಪು ಸಮಾಜವನ್ನು ಕಲುಷಿತಗೊಳಿಸುವ ಪ್ರಯತ್ನವನ್ನು ವ್ಯವಸ್ಥಿತವಾಗಿ ಮಾಡುತ್ತಿದೆ ಎಂಬ ಅನುಮಾನ ಕಂಡುಬರುತ್ತದೆ.
ಕಳ್ಳ-ಕಾಕ, ಸುಳ್ಳಬುರಕ, ತಲೆಹಿಡುಕರಿಗೆ ಸಿಂಹಸ್ವಪ್ನವಾಗಿರುವ ಚಾನೆಲ್ ನಮ್ಮದು, ನಾವಿರುವುದು ಭ್ರಷ್ಟಾಚಾರವನ್ನು ಹೋಗಲಾಡಿಸಲು, ನಮ್ಮ ಹೆಸರ ಮೇಲೆ ಯಾರಾದರೂ ಬೆದರಿಸಿದರೆ, ಕೂಡಲೇ ಸಮೀಪದ ಪೊಲೀಸ್ ಠಾಣಿಗೆ ದೂರನ್ನು ನೀಡಿ ಎಂದು ಸ್ಕ್ರಾಲ್ನಲ್ಲಿ ಹಾಕುವ ಟಿವಿ9, ತನ್ನ ಸದಸ್ಯರಿಂದಲೇ ಹಾಡುಹಗಲು ಲೂಟಿ ಮಾಡುತ್ತಿದೆ. ಕನರ್ಾಟಕದಲ್ಲಿ ಅಲ್ಲೊಬ್ಬ, ಇಲ್ಲೊಬ್ಬ ಪ್ರಾಮಾಣಿಕ ವರದಿಗಾರರನ್ನು ಚಾನೆಲ್ ಹೊಂದಿದ್ದು ಬಿಟ್ಟರೆ, ಬರೀ ಲಂಪಟರನ್ನೇ ತುಂಬಿಕೊಂಡಿದೆ. ಟಿ.ಆರ್.ಪಿಗಾಗಿ ಬಡಿದಾಡುವ ಚಾನೆಲ್ಗಳಿಂದ ಸಾಮಾಜಿಕ ಕಳಕಳಿ ನೀರಿಕ್ಷಿಸುವುದು ಅಸಾಧ್ಯವಾಗಿ ಹೋಗಿಬಿಟ್ಟಿದೆ.
ಕನರ್ಾಟಕದಲ್ಲಿ 2ನೇ ನ್ಯೂಸ್ ಚಾನೆಲ್ ಆಗಿ ಆರಂಭಗೊಂಡ ಟಿವಿ9ನಲ್ಲಿ ಮೊದಲಿಗೆ ಹಮೀದ್ಪಾಳ್ಯ, ಗೌರೀಶ ಅಕ್ಕಿ, ರಂಗನಾಥನಂತಹ ಬುದ್ದಿವಂತ ಬರಹಗಾರರರಿದ್ದರು. ಕ್ರಮೇಣ ರಾಜ್ಯದಲ್ಲಿ ಸಂಭವಿಸಿದ ಮಾಧ್ಯಮ ಸಮರದಲ್ಲಿ ಎಲ್ಲರೂ ಚಾನೆಲ್ನ್ನು ಬಿಟ್ಟು ಹೋದರು. ಅವರೆಲ್ಲ ಹೋದಮೇಲೆ ರಾತ್ರಿ 12ರನಂತರ ವಾತರ್ೆ ಓದುವ ಯುವಕರು ವಿಶೇಷ ಕಾರ್ಯಕ್ರಮ, ಹಗಲು ವಾತರ್ೆಗಳನ್ನು ಓದಬೇಕಾಯಿತು.
ನಂತರ ಟಿವಿ9 ಮುಖ್ಯಸ್ಥರು ದೂರದ ದೆಹಲಿಯಿಂದ ಆಕಾಶ, ಚಂದ್ರ, ಭೂಮಿ ಹಾಗೂ ಪಾಕಿಸ್ತಾನ, ಅಮೇರಿಕ ದೇಶಗಳನ್ನು ಪರಿಚಯಿಸುತ್ತಿದ್ದ ಶಿವಪ್ರಸಾದ ಎಂಬಾತನನ್ನು ಬೆಂಗಳೂರಿಗೆ ಕರೆತಂದು ಆತನ ಮುಖಾಂತರ ಹಲವು ಕಾರ್ಯಕ್ರಮಗಳನ್ನು ನಡೆಸತೊಡಗಿದರು. ಇದಕ್ಕೆ ಲಕ್ಷ್ಮಣ ಹೂಗಾರನಂತಹ ಕೆಲವರು ಸಾಥ್ ನೀಡಿದರು..
ಮಾದ್ಯಮ ಮಂದಿಗೆಲ್ಲ ಅನ್ಯಶಾಸ್ತ್ರ ಕಲಿಸುವ ಅನಿವಾಸಿ ಕನ್ನಡಿಗ ಮಹೇಂದ್ರಮಿಶ್ರಾ ಕನರ್ಾಟಕದಲ್ಲಿ ಚಾನೆಲ್ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ವೈಯಕ್ತಿಕವಾಗಿ ಕಾಪರ್ೋರೆಟ್ ಜಗತ್ತಿನಲ್ಲಿ ಹೇಗೆ ಬದುಕಬೇಕೆಂಬದನ್ನು ಮಿಶ್ರಾ ಕನರ್ಾಟಕದಲ್ಲಿರುವ ಎಲ್ಲರಿಗಿಂತ ಚನ್ನಾಗಿ ತಿಳಿದುಕೊಂಡಿದ್ದಾರೆ. ಇಂದು ಚಾನೆಲ್ ರಾಜ್ಯಮಟ್ಟದಲ್ಲಿ ತನ್ನ ಟಿ.ಆರ್.ಪಿಯನ್ನು ಗಟ್ಟಿಯಾಗಿ ಉಳಿಸಿಕೊಂಡಿದ್ದಕ್ಕೆ ಕಾರಣಕರ್ತರೆಂದರೆ ಮಹೇಂದ್ರ ಮಿಶ್ರ.
ಹಿಂದೊಮ್ಮೆ ಕಾರ್ಯಕ್ರಮವೊಂದರಲ್ಲಿ ಮಾಜಿಮಂತ್ರಿ ಕೃಷ್ಣಯ್ಯಶೆಟ್ಟಿ ಮಾಜಿ ಕ್ರೈಂ ಬ್ಯೂರೋ ರಾಘವೇಂದ್ರನ ಹಲಕಟ್ ದಂಧೆಯ ಕುರಿತು ಮಿಶ್ರಾರವರಿಗೆ ಹೇಳಿದ್ದರು. ಏಕಾಏಕಿ ಮಿಶ್ರಾ ಮಾರನೇ ದಿನ ರಾಘವೇಂದ್ರನನ್ನು ಚಾನೆಲ್ನಿಂದ ಒದ್ದೋಡಿಸಿದ್ದ.
ದೇಶದಲ್ಲಿ ಕನರ್ಾಟಕದ ಪತ್ರಿಕೋದ್ಯಮಕ್ಕೆ ಬಹುದೊಡ್ಡ ಇತಿಹಾಸವಿದೆ. ಇಲ್ಲಿಯ ಮಂದಿ ದೇಶದ ಸುದ್ದಿಯನ್ನು ಕುಂತಲ್ಲಿಯೇ ಎಲ್ಲರಿಗಿಂತ ಹೆಚ್ಚು ಬಲ್ಲವರಂತೆ ಬರೆಯುತ್ತಾರೆ. ಜಗತ್ತಿನ ಎಲ್ಲಾ ಕಾಪರ್ೋರೇಟ್ರಗಳ ಅಂಗ ಸಂಸ್ಥೆಗಳು ಕನರ್ಾಟಕದಲ್ಲಿವೆ.
ಆದರೆ, ಯಾರೊಬ್ಬರು ಸ್ಥಳೀಯವಾಗಿ ರಾಜ್ಯಮಟ್ಟದ ಅಂತರಾಷ್ಟ್ರೀಯ ಭಾಷೆಯ ಚಾನೆಲ್ನ್ನು ತೆಗೆಯುವ ಪ್ರಯತ್ನ ಮಾಡಲಿಲ್ಲ.
ಈಗ ಅನಿವಾಸಿ ಕನ್ನಡಿಗ ಟಿವಿ9ನ ಮೂಲ ಮುಖ್ಯಸ್ಥ ಆಂದ್ರದ ರವಿಪ್ರಕಾಶ ಸಲಹೆಯನ್ನು ಯಶಸ್ವಿಯಾಗಿ ಪಡೆದು ನ್ಯೂಸ್9 ಎಂಬ ಇಂಗ್ಲೀಷ್ ಚಾನೆಲ್ನ್ನು ಶುರುಮಾಡಿದ್ದಾನೆ. ಈ ವಿಷಯ ಬೆಂಗಳೂರಿನ ಮಂದಿಗೆ ಮುಜುಗರ ಅನಿಸಿದರೂ ಒಪ್ಪಿಕೊಳ್ಳಬೇಕು.
ಮಹೇಂದ್ರ ಮಿಶ್ರಾರವರು ಎಲ್ಲಾ ಜವಾಬ್ದಾರಿಯ ಜೊತೆಗೆ ಬಹಳ ಮುಖ್ಯವಾಗಿ ಕನಿಷ್ಠ ಚಾನೆಲ್ನ ಪಾರದರ್ಶಕತೆ ಹಾಗೂ ಉಳಿವಿಗಾದರೂ ಚಾನೆಲ್ನ ಹುಡುಗರು ದಿನ ನಿತ್ಯ ಯಾವ ಕೆಲಸಗಳನ್ನು ಹೇಗೆ ನಿರ್ವಹಿಸುತ್ತಿದ್ದಾರೆ? ಅವರ ದಿನನಿತ್ಯದ ಆದಾಯವೇನು? ಅವರು ಎಲ್ಲೆಲ್ಲಿ ಆಸ್ತಿಗಳನ್ನು ಬೇನಾಮಿಯಾಗಿ ಮಾಡುತ್ತಿದ್ದಾರೆಂದು ಪರೀಕ್ಷಿಸಬೇಕು. ಅದನ್ನು ಬಿಟ್ಟು ನಿಮ್ಮನಿಮ್ಮ ಜಿಲ್ಲೆಯಲ್ಲಿ ನೀವೇನು ಬೇಕಾದರೂ ಮಾಡಿಕೊಳ್ಳಿ ನಮಗೆ ದಿನಕ್ಕೆರಡು ಬ್ರೇಕಿಂಗ್ ನ್ಯೂಸ್ ಕೊಟ್ಟರೇ ಸಾಕೆಂದು ಬೇರೆ ಚಾನೆಲ್ಗಳ ತರಹ ಮಿಶ್ರಾ ತಮ್ಮ ಹುಡುಗರಿಗೆ ಹೇಳಿದರೆ, ಮುಂದಿನ ದಿನಗಳಲ್ಲಿ ಟಿವಿ9 ಸಂಸ್ಥೆಗೆ ಉಳಿಗಾಲವಿಲ್ಲ.
ಊರಿಗೆ ಬೆಂಕಿ ಹತ್ತಿದಾಗ ಅದನ್ನು ಆರಿಸಬೇಕಾದದ್ದು ಪ್ರತಿಯೊಬ್ಬನ ಸಾಮಾಜಿಕ ಕರ್ತವ್ಯ. ಅದನ್ನು ಬಿಟ್ಟು ಹತ್ತಿದ್ದ ಬೆಂಕಿಗೆ ಇನ್ನಷ್ಟು ಪೆಟ್ರೋಲ್ ಹಾಕುವ ಕೆಲಸವನ್ನು ಯಾರು ಮಾಡಬಾರದು. ತಮಗೊಂದು ಸುದ್ದಿ ಬೇಕೆಂಬ ಕಾರಣಕ್ಕೆ ಇನ್ನೊಬ್ಬರನ್ನು ಸಮಾಜದಲ್ಲಿ ಅಪಹಾಸ್ಯಕ್ಕೀಡು ಸಿದ್ದುವಿನಂತೆ ಯಾರು ವರದಿಗಳನ್ನು ತಯಾರಿಸಬಾರದು.
No comments:
Post a Comment
Thanku