Saturday, December 17, 2011

ಶರಣರು ಮತ್ತು ಸಮಾನತೆ

ಬಸವಣ್ಣನವರು ಮಾನವಕುಲದ ವಿಮೋಚಕ ರಾಗಿದ್ದಾರೆ. ಮಾನವ ಕುಲದ ವಿಮೋಚಕರಾಗಬೇಕಾದರೆ ಮಾನವರು ಮೊದಲಿಗೆ ತಮ್ಮನ್ನು ಅರಿತುಕೊಳ್ಳಬೇಕು. ಸತಿಪತಿ ಮಧುರಭಾವದ ಮಹತ್ವವನ್ನು ತಿಳಿದುಕೊ ಳ್ಳಬೇಕು. ಆ ಮೂಲಕ ಮಧುರಭಕ್ತಿಯ ಸಂಸ್ಕಾರ ಪಡೆಯ ಬೇಕು. ಆ ಮಧುರಭಕ್ತಿಯು ಅವರಿಬ್ಬರೊಳಗೆ ಶಾಂತಿ ಸಮಾಧಾನ ತರುವಂಥದ್ದಾಗಿರಬೇಕು. ಸಮಾಜದಲ್ಲಿ ಬೆಳೆಯುವಾಗ ಅವರ ನಡತೆಯೇ ಶಾಂತಿ ಸಮಾಧಾನಕ್ಕೆ ಪೂರಕವಾಗಿರುವುದರಿಂದ ಸಹಜವಾಗಿಯೇ ಸಾಮಾಜಿಕ ನೆಲೆಯಲ್ಲಿ ಸಂಸ್ಕೃತಿ ಮತ್ತು ನಾಗರೀಕತೆಯ ವಿಕಸನಕ್ಕೆ ತಮ್ಮ ಅಳಿಲು ಸೇವೆ ಸಲ್ಲಿಸುವರು. ಇಂಥ ಸಮಾನತೆಯ ಪ್ರಜ್ಞೆ ಮೂಡಿಸುವ ವ್ಯಕ್ತಿತ್ವ ವಿಕಸನ ಹೊಂದಿದವರೇ ಶರಣರು ಎನ್ನುತ್ತಾರೆ ವಚನ ಅಧ್ಯಯನ ಕೇಂದ್ರದ ನಿದರ್ೇಶಕರಾದ ರಂಜಾನ್ದಗರ್ಾ.
ವಚನ ಸಾಹಿತ್ಯ ಎಲ್ಲ ದೃಷ್ಟಿಯಿಂದಲೂ ಆಧುನಿಕ ಸಾಹಿತ್ಯವೇ ಆಗಿದೆ. ಅದರ ಶೈಲಿ ಕೂಡ ಆಧುನಿಕವಾದ ಗದ್ಯಶೈಲಿಗೆ ಸಮೀಪವಾಗಿದೆ. ಅದೇರೀತಿ ಹಾಡುಗಾರಿಕೆಗೆ ಬೇಕಾದ ಅಂಶಗಳನ್ನೂ ಒಳಗೊಂಡಿದೆ. ಹೀಗೆ ಗದ್ಯದ ದೇಹ ಮತ್ತು ಪದ್ಯದ ಜೀವವನ್ನು ಹೊಂದಿರುವ ತ್ರಿವಿಧಸಾಹಿತ್ಯ ಎಲ್ಲಿಯೂ ಕಾಣಸಿಗುವುದಿಲ್ಲ.

ವಚನಗಳು ಶಾಸ್ತ್ರ, ಸಾಹಿತ್ಯ ಮತ್ತು ಸಮಾಜವೆಂಬ ತ್ರಿವಿಧ ಅಂಶಗಳನ್ನು ಒಳಗೊಂಡಿವೆ. ಮೊದಲನೆ ಯದಾಗಿ ಧಾಮರ್ಿಕ ಸಾಹಿತ್ಯವಾಗಿರುವುದರಿಂದ ಇದರಲ್ಲಿ ಲಿಂಗವಂತ ಧರ್ಮಶಾಸ್ತ್ರಕ್ಕೆ ಸಂಬಂಧಿಸಿದ ವಿಚಾರಗಳು ಮೂಡಿಬಂದಿವೆ. ಇದು ಸೃಜನಶೀಲ ಸಾಹಿತ್ಯವೂ ಆಗಿರುವುದರಿಂದ ಶಬ್ದಾರ್ಥದ ಜೊತೆಗೆ ಲಕ್ಷಣಾರ್ಥ ಮತ್ತು ಧ್ವನ್ಯರ್ಥಗಳು ಸಹಜವಾಗಿಯೇ ಮೂಡಿಬಂದಿವೆ. ಇವುಗಳ ಜೊತೆಗೇ ತತ್ತ್ವಾರ್ಥ ಮತ್ತು ಬೆಡಗಿನ ಅರ್ಥಗಳನ್ನೂ ಒಳಗೊಂಡಿವೆ. ಅನ್ಯೋಕ್ತಿ. ಅಲಂಕಾರ, ಪ್ರತಿಮೆ, ಪ್ರತೀಕ ಮುಂತಾದ ಕಾವ್ಯಮೀಮಾಂಸೆಯ ಇತರ ಅಂಶಗಳೂ ಸೇರಿಕೊಂಡಿವೆ.

ಲಿಂಗಾಯತದ ಧರ್ಮಶಾಸ್ತ್ರವೇ ಆಗಿರುವ ವಚನ ಗಳು ಸಾಹಿತ್ಯಕವಾಗಿ ಸಾರ್ವತ್ರಿಕವಾಗಿವೆ. ಅಲ್ಲದೆ ಸಕಲ ಜೀವಾತ್ಮರ ಬಗೆಗಿನ ಕಾಳಜಿಯಿಂದಾಗಿ ಜನಮನವನ್ನು ಸೂರೆಗೊಳ್ಳುವ ಮೂಲಕ ಸಾಮಾಜಿಕವಾಗಿ ಮಹತ್ವದ್ದೆನಿ ಸುತ್ತವೆ. ಹೀಗೆ ವಚನಗಳು ಶಾಸ್ತ್ರವೂ ಹೌದು, ಸಾಹಿ ತ್ಯವೂ ಹೌದು. ಅಷ್ಟೇ ಅಲ್ಲದೆ ಸಾಮಾಜಿಕ ಬದುಕಿನ ಮೇಲೆ ನಡೆ ನುಡಿ ಸಿದ್ಧಾಂತದ ಪರಿಣಾಮ ಬೀರುವ ಸಮಾಜೋ ಧಾಮರ್ಿಕ ಸಂವಿಧಾನವೂ ಹೌದು.

1939ರಿಂದ 1945ರ ವರೆಗೆ ನಡೆದ ಎರಡನೇ ಮಹಾಯುದ್ಧದಲ್ಲಿ ಜಗತ್ತಿನಲ್ಲಿ ಒಟ್ಟು 5 ಕೋಟಿ ಜನ ಜೀವಕಳೆದುಕೊಂಡರು. ನಂತರ ಜಗತ್ತಿನ ಜನ ಸಮು ದಾಯಗಳಲ್ಲಿ ಮಾನವಹಕ್ಕುಗಳ ಕುರಿತು ವಿಶ್ವಾಸ ಮೂಡಿಸುವ ಮತ್ತು ದೇಶಗಳಿಗೆ ಭದ್ರತೆ ಒದಗಿಸುವ ದೃಷ್ಟಿಯಿಂದ ವಿಶ್ವಸಂಸ್ಥೆಯ ಉದಯವಾಯಿತು. ಆದರೆ 12ನೇ ಶತಮಾನದಲ್ಲಿ ಬಸವಾದಿ ಪ್ರಮಥರು ಇಂಥ ವಿಶ್ವಸಂಸ್ಥೆಯ ಕಾರ್ಯ ನಿರ್ವಹಿಸಿದರು.

ಜಾತಿವಿನಾಶಕ್ಕಾಗಿ ಹರಳಯ್ಯ ಮತ್ತು ಮಧುವರಸರ ಮಕ್ಕಳ ಮದುವೆಯನ್ನು ಏರ್ಪಡಿಸಿದಾಗ ಪಟ್ಟಭದ್ರ ಹಿತಾ ಸಕ್ತಿಗಳು ಶರಣರ ಕಗ್ಗೊಲೆ ಮಾಡಿದವು ಮತ್ತು ವಚನ ಕಟ್ಟುಗಳನ್ನು ಸುಟ್ಟವು. ಸಹಸ್ರಾರು ಶರಣರು ಕಲ್ಯಾಣ ಬಿಟ್ಟು ಹೋಗಬೇಕಾಯಿತು. ಹೀಗೆ ವಚನಸಾಹಿತ್ಯವು ಸಮತಾವಾದದಿಂದ ಕೂಡಿದ ಆಧುನಕ ಸಮಾಜದ ಕನಸುಗಳನ್ನು ಬಿತ್ತುವ ಸಾಹಿತ್ಯ ಎಂದರೆ ತಪ್ಪಾಗದು.

ಹಿಂದೂ ಧರ್ಮದಲ್ಲಿನ ಶ್ರೇಣೀಕೃತ ಸಮಾಜದಲ್ಲಿ ಸಮಗಾರ ಜಾತಿಯವರಾಗಿದ್ದ ಹರಳಯ್ಯನವರು ಇಷ್ಟಲಿಂಗದೀಕ್ಷೆಯ ನಂತರ ಲಿಂಗವಂತರಾದರು. ಆಗ ಸಮಗಾರ ಎಂಬುದು ಜಾತಿಯ ಸಂಕೇತವಾಗಿ ಉಳಿಯದೆ ಕೇವಲ ಕಾಯಕದ ಸಂಕೇತವಾಗಿ ಉಳಿಯಿತು. ಬಿಜ್ಜಳನ ಆಸ್ಥಾನದಲ್ಲಿದ್ದ ಮಧುವರಸರು ಬ್ರಾಹ್ಮಣರಾಗಿದ್ದರು. ಆದರೆ ಲಿಂಗದೀಕ್ಷೆಯ ನಂತರ ಲಿಂಗವಂತರಾದರು. ಹೀಗೆ ಇಬ್ಬರೂ ಬಸವಣ್ಣನವರ ಶರಣಸಂಕುಲದ ಸದಸ್ಯರಾದರು.

ಕುಲಗೋತ್ರಗಳಿಲ್ಲದ, ಜಾತಿ ಉಪಜಾತಿಗಳಿಲ್ಲದ, ಅಸ್ಪೃಶ್ಯತೆ ಇಲ್ಲದ, ವರ್ಗ, ವರ್ಣ ಮತ್ತು ಲಿಂಗಭೇದ ಗಳಿಲ್ಲದ, ಖಾಸಗಿ ಆಸ್ತಿ ಇಲ್ಲದ ಆದರೆ ಸಮೂಹ ಸಂಪ ತ್ತಾದ ಶಿವನಿಧಿಯನ್ನು ಹೊಂದಿದ್ದ ಶರಣಸಂಕುಲವು ವಿಶ್ವದ ಮೊಟ್ಟಮೊದಲ ಪರಿಪೂರ್ಣ ಸಮಾನತೆಯನ್ನು ಹೊಂದಿದ ಸಮಾಜವಾಗಿದೆ. ಖಾಸಗಿ ಆಸ್ತಿಯು ಮನುಷ್ಯತ್ವದ ವಿರುದ್ಧವಾಗಿರುತ್ತದೆ. ಮನುಷ್ಯತ್ವವು ಖಾಸಗಿ ಆಸ್ತಿಯ ವಿರುದ್ಧವಾಗಿರುತ್ತದೆ ಎಂಬುದನ್ನು ಮೊಟ್ಟ ಮೊದಲ ಬಾರಿಗೆ ಜಗತ್ತಿಗೆ ತೋರಿಸಿಕೊಟ್ಟು ಯಾವ ವೈರುಧ್ಯವೂ ಇಲ್ಲದ ಶರಣಸಂಕುಲವೆಂಬ ಸರ್ವ ಸಮತ್ವದ ಸಮಾಜವನ್ನು ನಿಮರ್ಿಸಿದ ಕೀತರ್ಿ ಬಸವಾದಿ ಶರಣರಿಗೆ ಸಲ್ಲುತ್ತದೆ. ಹರಳಯ್ಯ ಮಧುವರಸರು ಲಿಂಗವಂತರಾಗುವ ಮೂಲಕ ಇಂಥ ಶರಣಸಂಕುಲದ ಸದಸ್ಯರಾದ ಕಾರಣ ಹಿಂದೂಧರ್ಮ ಎಂದು ಕರೆಯಿಸಿ ಕೊಳ್ಳುವ ಮನುಧರ್ಮದ ಕಾರಣ ತಮಗೆ ಅಂಟಿಕೊಂ ಡಿದ್ದ ಕೃತ್ರಿಮ ಜಾತಿ ಮತ್ತು ಮೇಲು ಕೀಳುಗಳೆಂಬ ಅಂತಸ್ತುಗಳನ್ನು ಕಳೆದುಕೊಂಡು ನಿಜಮಾನವರಾದರು.

ಆಗ ಅವರಿಗೆ ಯಾವ ಭೇದವೂ ಕಾಣಲಿಲ್ಲ. ಹರಳಯ್ಯನವರ ಮಗ ಶೀಲವಂತ ಮತ್ತು ಮಧುವರಸರ ಮಗಳು ಲಾವಣ್ಯಳ ಕೂಡ ಲಿಂಗವಂತರಾದ ಕಾರಣ ಅವರ ಮದುವೆ ಸಹಜವಾಗಿಯೇ ಆಗಬೇಕಿತ್ತು. ಆದರೆ ಬಿಜ್ಜಳನ ಆಸ್ಥಾನದಲ್ಲಿದ್ದ ಪಟ್ಟಭದ್ರ ಹಿತಾಸಕ್ತಿಗಳು ಆ ಮದುವೆ ಧರ್ಮಬಾಹಿರ ಎಂದು ಹುಯಿಲೆಬ್ಬಿಸಿದವು. ಮನುಧರ್ಮದ ಪ್ರಕಾರ ಆ ಮದುವೆ ಧರ್ಮಬಾಹಿರ ಆಗಿತ್ತು. ಆದರೆ ಲಿಂಗವಂತ ಧರ್ಮದ ಪ್ರಕಾರ ಧರ್ಮ ಸಮ್ಮತವಾಗಿತ್ತು. ಮನುವಾದಿಗಳಿಗೆ ಅದು ಬ್ರಾಹ್ಮಣ ಕನ್ಯಾ ಮತ್ತು ಸಮಗಾರ ವರನ ಮಧ್ಯೆ ನಡೆಯುವ ಮದುವೆ ಯಾಗಿತ್ತು. ಶರಣ ಸಂಕುಲದ ಪ್ರಕಾರ ಅದು ಲಿಂಗವಂತರ ಮದುವೆಯಾಗಿತ್ತು.

ಲಿಂತವಂತ ಧರ್ಮವು ಸನಾತನವಾದಿಗಳ ಚೌಕಟ್ಟಿನ ಧರ್ಮವಲ್ಲ. ಇದು ಚೌಕಟ್ಟಿಲ್ಲದ ಬಯಲಧರ್ಮ. ಶೂನ್ಯ ಎಂಬದು ಬಯಲೇ ಆಗಿದೆ. ಇದು ಸಕಲ ಚರಾಚರಗಳ ಸಮೇತ ಎಲ್ಲವನ್ನೂ ಒಳಗೊಂಡಿದೆ. ಎಲ್ಲರೂ ನಮ್ಮವರು. ಯಾರೂ ಹೊರಗಿನವರಲ್ಲ ಎಂಬುದು ಲಿಂಗವಂತ ಧರ್ಮವಾದ ಬಸವಧರ್ಮದ ಘೋಷಣೆಯಾದರೆ, ವರ್ಣ, ಜಾತಿ, ಉಪಜಾತಿ, ವರ್ಗ ಮತ್ತು ಲಿಂಗಭೇದ ಸೃಷ್ಟಿಸಿ ನಿರಂತರ ಶೋಷಣೆಯ ಸಮಾಜವನ್ನು ಸೃಷ್ಟಿಸುವುದೇ ಮನುಧರ್ಮದ ಉದ್ದೇಶವಾಗಿದೆ.

ಮಾನವ ಘನತೆ ಮತ್ತು ಮಾನವ ಹಕ್ಕುಗಳಿಗಾಗಿ ಮನುಧರ್ಮದ ಕ್ರೌರ್ಯದ ವಿರುದ್ಧ ಹೋರಾಡಿದ ಶರಣರು, ತಮ್ಮ ತತ್ತ್ವದ ಅನುಷ್ಠಾನಕ್ಕಾಗಿ ಎಲ್ಲವನ್ನೂ ಕಳೆದುಕೊಳ್ಳಲು ಸಿದ್ಧರಾದರು. ಹರಳಯ್ಯ ಮಧುವರಸರ ಮಕ್ಕಳ ಮದುವೆಗೆ ಮನುವಾದಿಗಳ ಮತ್ತು ಮನು ಧರ್ಮದ ರಕ್ಷಣೆ ರಾಜಧರ್ಮ ಎಂದು ಅನಿವಾರ್ಯವಾಗಿ ನಂಬಿದ್ದ ದೊರೆ ಬಿಜ್ಜಳನ ವಿರೋಧವಿದ್ದರೂ ಶರಣರು ಆ ಮದುವೆಯನ್ನು ನೆರವೇರಿಸಿದರು. ಅದರಿಂದಾಗಿ ಕಲ್ಯಾಣದಲ್ಲಿ ಅಲ್ಲೋಲ ಕಲ್ಲೋಲವಾಯಿತು. ತಮ್ಮ ನಿಜ ಸಂಪತ್ತಾಗಿದ್ದ ವಚನಕಟ್ಟುಗಳ ರಕ್ಷಣೆಗಾಗಿ ಎಲ್ಲವನ್ನೂ ಬಿಟ್ಟು ಕಲ್ಯಾಣವನ್ನು ತೊರೆದವರು ಶರಣರು. ಒಂದು ಮದುವೆಗಾಗಿ ಶರಣರು ಎಲ್ಲವನ್ನೂ ಕಳೆದುಕೊಂಡು ಸಮತಾ ತತ್ತ್ವದ ರಕ್ಷಣೆ ಮಾಡಿದರು. ನಡೆ ನುಡಿ ಸಿದ್ಧಾಂತದಿಂದ ಕೂಡಿದ ತತ್ತ್ವಕ್ಕಾಗಿ ಸಹಸ್ರಾರು ದಾರ್ಶನಕರು ಹುತಾತ್ಮರಾಗಲು ಕಾರಣವಾದ ಕಲ್ಯಾಣ ಕ್ರಾಂತಿ ಎಂಬ ಇಂಥ ಘನಘೋರ ಘಟನೆ ಮಾನವ ಚರಿತ್ರೆಯಲ್ಲಿ ಇನ್ನೊಂದಿಲ್ಲ!

ವಚನ ಸಾಹಿತ್ಯವು ಭಾರತ ಸಂವಿಧಾನದ ಅಂಶ ಗಳನ್ನು ಒಳಗೊಂಡಿದೆ. ಅದೇ ರೀತಿ ಮಾನವ ಹಕ್ಕುಗಳ ಎಲ್ಲ ಅಂಶಗಳನ್ನು ಒಳಗೊಂಡಿದೆ. 1948ನೇ ಡಿಸೆಂಬರ್ 10 ರಂದು ನಡೆದ ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ 30 ಅಂಶಗಳುಳ್ಳ ಮಾನವ ಹಕ್ಕುಗಳನ್ನು ಜಾಗತಿಕ ಘೋಷಣೆಯೊಂದಿಗೆ ಸ್ವೀಕರಿಸಲಾಯಿತು. ಲಿಂಗಭೇದ, ವರ್ಣಭೇದ ಮುಂತಾದ ಅನಷ್ಟಗಳನ್ನು ತೊಡೆದು ಹಾಕಲು ಯತ್ನಿಸಿತು. ಅನೈತಿಕ ಸಂಬಂಧಗಳಿಂದ ಜನಸಿದ ಮಕ್ಕಳ ಹಕ್ಕುಗಳಲ್ಲಿ ಮತ್ತು ಸತಿ-ಪತಿಗಳ ಸಂಬಂಧದಿಂದ ಜನಸಿದ ಮಕ್ಕಳಲ್ಲಿ ವ್ಯತ್ಯಾಸವಿಲ್ಲವೆಂದು ವಿಶ್ವಸಂಸ್ಥೆ ಸಾರಿತು.

ಲಿಂಗವ ಪೂಜಿಸಿ ಫಲವೇನಯ್ಯಾ ಸಮರತಿ, ಸಮಕಳೆ, ಸಮಸುಖವ ಅರಿಯದನ್ನಕ್ಕ ಎಂದು ಬಸವಣ್ಣನವರು ತಿಳಿಸಿದ್ದಾರೆ. ಲಿಂಗಭೇದ, ವರ್ಣಭೇದ ಮತ್ತು ವರ್ಗಭೇದವನ್ನು ಅಲ್ಲಗಳೆಯುವ ಈ ವಚನವು ಸಮಾನತೆಯ ತತ್ತ್ವವನ್ನು ಸಾರುತ್ತದೆ. ಹೀಗೆ ಆಧುನಿಕ ಯುಗದ ಸವಾಲುಗಳಿಗೆ ಉತ್ತರವಾಗಿ ವಚನ ಸಾಹಿತ್ಯ ನಿಲ್ಲುತ್ತದೆ. ದಾಸೀಪುತ್ರನಾಗಲಿ, ವೇಶ್ಯಾಪುತ್ರನಾಗಲಿ ಶಿವದೀಕ್ಷೆಯಾದಬಳಿಕ ಸಾಕ್ಷಾತ್ ಶಿವನೆಂದು ವಂದಿಸಿ, ಪೂಜಿಸಿ ಪಾದೋದಕ ಪ್ರಸಾದವ ಕೊಂಬುದೇ ಯೋಗ್ಯ ಎಂದು ಹೇಳುವ ಮೂಲಕ ಬಸವಣ್ಣನವರು ಅನೈತಿಕವಾಗಿ ಜನಿಸಿದ ಮಕ್ಕಳ ಹಕ್ಕುಗಳನ್ನು ಹಿಡಿದಿದ್ದಾರೆ.

ವಚನ ಸಾಹಿತ್ಯವು ಸಮಷ್ಟಿ ಪ್ರಜ್ಞೆಯಿಂದ ಕೂಡಿದ ಸಾಹಿತ್ಯವಾಗಿದೆ. ವಚನಕಾರರು ತಮ್ಮ ವಚನಗಳನ್ನು ಸಮಾಜೋ ಧಾಮರ್ಿಕ ಸಂಸತ್ ಆಗಿದ್ದ ಅನುಭವ ಮಂಟ ಪದಲ್ಲಿ ಮಂಡಿಸಬೇಕಿತ್ತು. ಅಲ್ಲಿ ಚಚರ್ೆ ನಡೆದ ನಂತರವೇ ಅದಕ್ಕೆ ಧಾಮರ್ಿಕ, ಸಾಹಿತ್ಯಕ ಮತ್ತು ಸಾಮಾಜಿಕ ಮಹತ್ವ ಬರುತ್ತಿತ್ತು. ಈ ರೀತಿ ಸಾಮಾಜಿಕವಾಗುವ ಮತ್ತು ನಡೆ ನುಡಿ ಸಿದ್ಧಾಂತದಿಂದ ಕೂಡಿದ ವಚನಸಾಹಿತ್ಯದಂಥ ಸಾಹಿತ್ಯವೊಂದು ಧರ್ಮಗ್ರಂಥವಾಗಿರುವುದು ಜಗತ್ತಿನಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ.

ಜಗತ್ತಿನ ಎಲ್ಲ ಧರ್ಮಗ್ರಂಥಗಳು ದೇವರ ವಾಕ್ಯಗ ಳಾಗಿವೆ. ದೇವರು ಮನುಷ್ಯರಿಗೆ ಹೇಳಿದ ಕ್ರಮ ಅಲ್ಲಿದೆ. ಆದರೆ ಲಿಂಗವಂತ ಧರ್ಮಗ್ರಂಥ ದೇವರ ವಾಕ್ಯಗಳಿಂದ ಕೂಡಿಲ್ಲ. ಶರಣರ ವಚನಗಳಿಂದ ಕೂಡಿದೆ. ಸತ್ಯಶುದ್ಧ ಶರಣರು ತಮ್ಮೊಳಗಿನ ದೇವರಿಗೆ ಮಾಡಿಕೊಂಡ ನಿವೇದ ನೆಯೆ ವಚನಗಳು. ತಮ್ಮ ನಡೆ ನುಡಿ ಸಿದ್ಧಾಂತದ ಕುರಿತು ಅವರೆಲ್ಲ ತಮ್ಮೊಳಗಿನ ದೇವರಿಗೆ ವರದಿ ಒಪ್ಪಿಸಿದ್ದಾರೆ.

ಮುಖ್ಯವಾಗಿ ಬಸವಣ್ಣನವರ ಷಟ್ಸ್ಥಲದ ವಚನಗಳು, ಅಲ್ಲಮಪ್ರಭುದೇವರ ಮಂತ್ರಗೋಪ್ಯ ಮತ್ತು ಚನ್ನಬಸವಣ್ಣನವರ ಕರಣಹಸಗೆಗಳೆಂಬ ಮೂರು ಗ್ರಂಥಗಳು ಸೇರಿ ಲಿಂಗವಂತರ ಧರ್ಮಗ್ರಂಥದ ರೂಪ ತಾಳಿವೆ. ಆದರೆ ಎಲ್ಲ ಶರಣರ ವಚನಗಳು ಲಿಂಗವಂತರ ಧರ್ಮಗ್ರಂಥದ ಭಾಗಗಳು ಎಂಬುದು ಸಮಂಜಸವಾಗಿದೆ.

ಬಸವಣ್ಣನವರ ವಚನಗಳು ಭೂಮಿ ಪ್ರಧಾನ ವಾಗಿವೆ, ಅಲ್ಲಮಪ್ರಭುಗಳ ವಚನಗಳು ಬಾಹ್ಯಾಕಾಶ ಪ್ರಧಾ ನವಾಗಿವೆ. ಚನ್ನಬಸವಣ್ಣನವರ ವಚನಗಳು ದೇಹ ಮತ್ತು ಮನಸ್ಸು ಪ್ರಧಾನವಾಗಿವೆ. ಹೀಗೆ ಲಿಂಗವಂತರ ಧರ್ಮ ಗ್ರಂಥ, ಭೂಮಿ (ಬಸವಣ್ಣನವರ ಲೋಕಜ್ಞಾನ), ಬಾಹ್ಯಾ ಕಾಶ (ಅಲ್ಲಮ ಪ್ರಭುಗಳ ವಿಶ್ವಜ್ಞಾನ) ದೇಹ ಮತ್ತು ಮನ ಸ್ಸಿನ (ಚನ್ನಬಸವಣ್ಣನವರ ಸ್ವಯಂಜ್ಞಾನ) ಕಡೆಗೆ ಒಯ್ಯುವ ಮಾರ್ಗದಶರ್ಿಯಾಗಿದೆ.

ಹೀಗೆ ವಿಶ್ವಪ್ರಜ್ಞೆಯೊಂದಿಗೆ ಮಾನವ ಹಕ್ಕುಗಳು, ಅಭಿವ್ಯಕ್ತಿ ಸ್ವಾತಂತ್ರ್ಯ, ಜಾತ್ಯತೀತ ಮನೋಭಾವ, ಲಿಂಗ ಭೇದ, ವರ್ಣಭೇದ ಮತ್ತು ವರ್ಗಭೇದಗಳನ್ನು ಅಲ್ಲಗಳೆ ಯುವ ಕ್ರಮ, ಕಾಯಕಜೀವಿಗಳ ಸಂಘಟನೆ, ಕಾಯಕ ಜೀವಿಗಳಿಗೆ ವಯಸ್ಕರ ಶಿಕ್ಷಣ, ದಲಿತ ಮತ್ತು ಮಹಿಳಾ ಶಿಕ್ಷಣ, ಮಂದಿರ ಮತ್ತು ಮೂತರ್ಿಗಳ ನಿರಾಕರಣೆ, ಶಿವನ ಸೊಮ್ಮು ಎಂಬ ಸಾಮಾಜಿಕ ನಿಧಿ. ಕಾಯಕಜೀವಿಗಳ ಕೇಂದ್ರಿತ ಸಮಾಜ ವ್ಯವಸ್ಥೆ, ಸರ್ವಸಮಾಜಗಳಿಗೆ ಅನುಭವ ಮಂಟಪದಲ್ಲಿ ಪ್ರಾತಿನಧ್ಯ, ಕಾಯಕ, ಪ್ರಸಾದ ಮತ್ತು ದಾಸೋಹದ ಕುರಿತ ಕ್ರಾಂತಿಕಾರಿ ಪರಿಕಲ್ಪನೆ ಮುಂತಾದವು ಶರಣರ ಕೊಡುಗೆಗಳಾಗಿವೆ.

ಕಾಯಕ, ಪ್ರಸಾದ ಮತ್ತು ದಾಸೋಹ ಪದಗಳು ಧರ್ಮಶಾಸ್ತ್ರದ ಪದಗಳಷ್ಟೇ ಅಲ್ಲದೆ ಅರ್ಥಶಾಸ್ತ್ರದ ಪದಗಳೂ ಆಗಿವೆ. ಕಾಯಕ ಎಂಬುದು ಯೋಗ್ಯ ಉತ್ಪಾದನೆ, ಪ್ರಸಾದ ಎಂಬುದು ಸದ್ಬಳಕೆ ಹಾಗೂ ದಾಸೋಹ ಎಂಬುದು ಸಮಾಜದಲ್ಲಿ ಯೋಗ್ಯ ವಿತರಣ.ೆ ಹೀಗೆ ಬಸವ ಧರ್ಮದ ಈ ಪದಗಳು ಬಸವಣ್ಣನವರ ಅರ್ಥಶಾಸ್ತ್ರದ ಪದಗಳೂ ಆಗಿವೆ.

ಕಾಯಕವೇ ಕೈಲಾಸ ಎಂಬುದು ಕಾಯಕಜೀವಿಗಳ ಈ ಧರ್ಮದ ಮಹಾವಾಕ್ಯಗಳಲ್ಲಿ ಒಂದಾಗಿದೆ. ಕಾಯಕ ದಲ್ಲಿ ತೊಡಗುವುದರ ಮೂಲಕ ವ್ಯಕ್ತಿಯೊಬ್ಬ ತನ್ನ ಅರಿವಿನ ವಿಸ್ತಾರದೊಂದಿಗೆ ಉತ್ಪಾದನಾ ವ್ಯವಸ್ಥೆಯ ಭಾಗವಾ ಗುತ್ತಾನೆ. ತಾನು ಉತ್ಪಾದಿಸಿದ್ದನ್ನು ಸದ್ಬಳಕೆ ಮಾಡುವುದರ ಮೂಲಕ ಜಗತ್ತಿಗೆ ಆ ವಸ್ತುವಿನ ಮಹತ್ವವಿರುವುದನ್ನು ಕಂಡುಕೊಳ್ಳುತ್ತಾನೆ. ದಾಸೋಹದಲ್ಲಿ, ತನಲ್ಲಿ ಕೂಡಿಸಿ ಟ್ಟಿರುವ ವಸ್ತುಗಳ ಸಾಮಾಜಿಕ ವಿತರಣೆಗೆ ಸಿದ್ಧನಾಗುತ್ತಾನೆ.

ಆಧುನಿಕ ಜಗತ್ತಿನ ಅರ್ಥವ್ಯವಸ್ಥೆ ಹದಗೆಡುತ್ತಿದ.ೆ ಇಂಥ ಪರಿಸ್ಥಿತಿಯಲ್ಲಿ ಬಸವಣ್ಣನವರ ಅರ್ಥಶಾಸ್ತ್ರ ಹೊಸ ರೀತಿಯಲ್ಲಿ ಸರ್ವ ಸಮತ್ವಭಾವದೊಂದಿಗೆ ಬದುಕು ವುದನ್ನು ಕಲಿಸುತ್ತದೆ. ಶರಣರು ವೈಯಕ್ತಿಕ ಸಂಪತ್ತನ್ನು ಶಿವನಿಧಿಯ ಭಾಗವಾಗಿಸಿ ಸಮಾಜದಲ್ಲಿ ಯಾರೂ ಅಸ ಹಾಯಕರಾಗಿ ಬಳಲದಂತೆ ನೋಡಿಕೊಳ್ಳುತ್ತಿದ್ದರು.

ಸಕಲಜೀವಾತ್ಮರಿಗೆ ಲೇಸನೇ ಬಯಸುವ ನಮ್ಮ ಕೂಡಲಸಂಗನ ಶರಣರೇ ಕುಲಜರು ಎಂದು ಹೇಳುವಲ್ಲಿ ಬಸವಣ್ಣನವರ ಜೀವಕಾರುಣ್ಯ ಎದ್ದು ಕಾಣುತ್ತದೆ. ಮಾನವ ಈ ಜಗತ್ತಿನ ಕೇಂದ್ರಬಿಂದು ಅಲ್ಲ, ಸಕಲ ಜೀವಾ ತ್ಮರಿಂದ ಕೂಡಿದ ಜೀವಜಾಲವೇ ಈ ಜಗತ್ತಿನ ಕೇಂದ್ರ ಬಿಂದು ಎಂಬುದನ್ನು ಬಸವಣ್ಣನವರು ಈ ವಚನದಲ್ಲಿ ಸೂಚಿಸಿದ್ದಾರೆ. ಆಧುನಕ ಪರಿಸರ ವಿಜ್ಞಾನಗಳು 20ನೇ ಶತಮಾನದಲ್ಲಿ ಹೇಳಿದ್ದನ್ನು ಬಸವಣ್ಣನವರು 12ನೇ ಶತಮಾನದಲ್ಲೇ ಹೇಳಿದ್ದಾರೆ. ಜೀವಜಾಲದಲ್ಲಿದೆ ಚರಾಚರವೆಲ್ಲ ಎಂದು ಬಸವಣ್ಣನವರು ಹೇಳುವ ಮೂಲಕ ಪರಿಸರದ ಮಹತ್ವವನ್ನು ಸಾರಿದ್ದಾರೆ.

ಕಾಯಕಜೀವಿಗಳು ವಸ್ತುಗಳ ಉತ್ಪಾದನೆ ಮಾಡು ತ್ತಲೇ ತತ್ತ್ವ, ಸಾಹಿತ್ಯ ಮತ್ತು ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವಂಥ ಸಾಹಿತ್ಯ ರಚನೆ ಮಾಡಿದ್ದು ನಮಗೆಲ್ಲ ಮಾದರಿಯಾಗಿದೆ. 21ನೇ ಶತಮಾನದ ಹಾಹಾಕಾರವನ್ನು ತಡೆಗಟ್ಟಲು ಮತ್ತು ಸರಳ ಸಹಜವಾದ ಸಮೃದ್ಧ ಬದುಕನ್ನು ಕಟ್ಟಲು ವಚನಗಳು ಬಹಳ ಅವಶ್ಯವಾಗಿವೆ. ಹೀಗೆ ವಚನ ಸಾಹಿತ್ಯ ಆಧುನಿಕ ಯುಗದಲ್ಲೂ ಪ್ರಸ್ತುತವಾಗಿದೆ.

ಬಸವಣ್ಣನವರು ಮಾನವಕುಲದ ವಿಮೋಚಕ ರಾಗಿದ್ದಾರೆ. ಮಾನವ ಕುಲದ ವಿಮೋಚಕರಾಗಬೇಕಾದರೆ ಮಾನವರು ಮೊದಲಿಗೆ ತಮ್ಮನ್ನು ಅರಿತುಕೊಳ್ಳಬೇಕು. ಸತಿಪತಿ ಮಧುರಭಾವದ ಮಹತ್ವವನ್ನು ತಿಳಿದುಕೊ ಳ್ಳಬೇಕು. ಆ ಮೂಲಕ ಮಧುರಭಕ್ತಿಯ ಸಂಸ್ಕಾರ ಪಡೆಯ ಬೇಕು. ಆ ಮಧುರಭಕ್ತಿಯು ಅವರಿಬ್ಬರೊಳಗೆ ಶಾಂತಿ ಸಮಾಧಾನ ತರುವಂಥದ್ದಾಗಿರಬೇಕು. ಈ ಶಾಂತಿ ಸಮಾ ಧಾನದ ಸಂಸ್ಕಾರವು ಇಡೀ ಕುಟುಂಬವನ್ನು ಆವರಿ ಸಬೇಕು. ಮಕ್ಕಳು ಬೆಳೆಯಲು ಇಂಥ ಸಂಸ್ಕಾರ ಸಹಕಾರಿ ಯಾಗುವಂಥ ವಾತಾವರಣ ಮನೆಯಲ್ಲೇ ನಿಮರ್ಾಣ ವಾಗಬೇಕು. ಹೀಗೆ ಮಧುರಭಾವವು ಕುಟುಂಬವನ್ನು ಆವರಿಸಿದಾಗ ಮಕ್ಕಳು ಸುಸಂಸ್ಕೃತರಾಗಿ ಬೆಳೆಯುವರು. ನಂತರ ಸಮಾಜದಲ್ಲಿ ಬೆಳೆಯುವಾಗ ಅವರ ನಡತೆಯೇ ಶಾಂತಿ ಸಮಾಧಾನಕ್ಕೆ ಪೂರಕವಾಗಿರುವುದರಿಂದ ಸಹಜವಾಗಿಯೇ ಸಾಮಾಜಿಕ ನೆಲೆಯಲ್ಲಿ ಸಂಸ್ಕೃತಿ ಮತ್ತು ನಾಗರೀಕತೆಯ ವಿಕಸನಕ್ಕೆ ತಮ್ಮ ಅಳಿಲು ಸೇವೆ ಸಲ್ಲಿಸುವರು. ಇಂಥ ಸಮಾನತೆಯ ಪ್ರಜ್ಞೆ ಮೂಡಿಸುವ ವ್ಯಕ್ತಿತ್ವ ವಿಕಸನ ಹೊಂದಿದವರೇ ಶರಣರು.

ಇಂಥವರು ಯಾವ ದೇಶದಲ್ಲೇ ಇದ್ದರೂ ಕಳ್ಳರಾ ಗಿರುವುದಿಲ್ಲ; ಕೊಲೆಗಡುಕರಾಗಿರುವುದಿಲ್ಲ; ಸುಳ್ಳು ಹೇಳುವವರಾಗಿರುವುದಿಲ್ಲ; ಸಿಟ್ಟಿನ ಕೈಗೆ ಬುದ್ಧಿಯನ್ನು ಕೊಡುವವರಾಗಿರುವುದಿಲ್ಲ; ತಮ್ಮನ್ನೇ ಹೊಗಳಿಕೊ ಳ್ಳುವಂಥ ಆತ್ಮರತಿಯಲ್ಲಿ ತೊಡಗಿರುವುದಿಲ್ಲ; ಪರನಿ ಂದೆಯನ್ನು ಮಾಡುವವರಾಗಿರುವುದಿಲ್ಲ; ಬೇರೆಯವರು ಟೀಕಿಸಿದಾಗ ಅವರು ಟೀಕಿಸಿದರೇಕೆ ಎಂಬುದಕ್ಕೆ ಕಾರಣ ವನ್ನು ಹುಡುಕದೆ ಪ್ರತಿಯಾಗಿ ಟೀಕಿಸುವ ಅನಾಗರೀಕತೆ ಯನ್ನು ಪ್ರದಶರ್ಿಸುವವರಾಗಿರುವುದಿಲ್ಲ. ಇಂಥ ವ್ಯಕಿತ್ವವುಳ್ಳವರೇ ಶರಣರು.

ಹೀಗೆ ಬದುಕುವುದರಿಂದ ಅಂತರಂಗ ಶುದ್ಧಿಯಾ ಗುತ್ತದೆ. ಬಹಿರಂಗದಲ್ಲಿ ಸಮಾಜದ ಶುದ್ಧಿಯಾಗುತ್ತದೆ. ಇಂಥ ಜೀವನಕ್ರಮದಿಂದ ಮಾತ್ರ ದೇವರನ್ನು ಒಲಿಸಲು ಸಾಧ್ಯ ಎಂಬುದು ಬಸವಣ್ಣನವರ ದೃಢನಧರ್ಾರವಾಗಿದೆ. ಈ ಮಾತಿನಲ್ಲಿ ವ್ಯಕ್ತಿ, ಕುಟುಂಬ, ಸಮಾಜ, ದೇಶ ಮತ್ತು ವಿಶ್ವದ ಸಂಬಂಧವನ್ನು ಹೊಸೆಯುವ ಶಕ್ತಿ ಇದೆ. ಇಂಥ ಶರಣರು ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುತ್ತಾರೆ. ಹೀಗೆ ಲೇಸನ್ನೇ ಬಯಸುವುದರಲ್ಲಿ ಶಾಂತಿ, ಪ್ರೀತಿ ಮತ್ತು ಸಮಾನತೆಯ ತತ್ತ್ವ ಅಡಗಿದೆ. ವ್ಯಕ್ತಿಯಿಂದ ವಿಶ್ವದವರೆಗೆ ಜೀವಜಾಲದ ಸಂಬಂಧ ಅಡಗಿದೆ.

ಇಂಥ ಶರಣರಿದ್ದ ದೇಶ ಪಾವನವಾಗುತ್ತದೆ. ಅದುವೇ ವಿಶ್ವಶಾಂತಿಗೆ ಕಾರಣವಾಗುತ್ತದೆ. ಹೀಗೆ ಇಷ್ಟಲಿಂಗದಿಂದ ಒಳಗಿನ ಸಂಸ್ಕಾರ ಪಡೆದು ಜಂಗಮ ಲಿಂಗದ ಅಂದರೆ ಸರ್ವಸಮತ್ವಭಾವದಿಂದ ಕೂಡಿದ ಸಮಾಜವೆಂಬ ದೇವರ ಸೇವೆ ಮಾಡಲು ಸಾಧ್ಯವಾ ಗುತ್ತದೆ. ವ್ಯಷ್ಟಿಯಿಂದ ಸಮಷ್ಟಿಯವರೆಗೆೆ ಸರ್ವಸಮತ್ವದ ಪ್ರಜ್ಞೆಯಿಂದ ಮತ್ತು ಪ್ರೇಮಭಾವದಿಂದ ಬದುಕುವುದೇ ಮಧುರಭಕ್ತಿ. ದಯವನ್ನೇ ಧರ್ಮದ ಮೂಲವಾಗಿಸಿ ವಿಶ್ವಕಲ್ಯಾಣವನ್ನು ಸಾಧಿಸುವ ಭಕ್ತಿ.

ಹಳೆಯ ಸಾಮಾಜಿಕ ವ್ಯವಸ್ಥೆ ಇಂಥ ಮಧುರ ಭಕ್ತಿಯ ಸಾಧನೆಗೆ ತೊಡಕಾಗುವುದನ್ನು ಬಸವಣ್ಣನವರು ಗಮನಿಸಿದರು. ಹಳೆಯ ವ್ಯವಸ್ಥೆಯಿಂದಾಗಿ ಬಹುಪಾಲು ಜನಸಾಮಾನ್ಯರ ಬದುಕು ಕಷ್ಟಕರವಾಗಿತ್ತು. ಜಾತಿಭೇದದ ಕಾರಣ ಮೇಲ್ಜಾತಿಯವರು ಕೆಳಜಾತಿಯವರನ್ನು ಮುಟ್ಟಿಸಿಕೊಳ್ಳದಿರುವುದು, ಹೆಣ್ಣು ಗಂಡಿನ ಮಧ್ಯದ ಭೇದಭಾವದಿಂದಾಗಿ ಹೆಣ್ಣನ್ನು ಕೀಳಾಗಿ ನೋಡುವುದು. ಬಡವರು ಮತ್ತು ಉಳ್ಳವರು ಎಂಬ ಭೇದದಿಂದ ಬಡವರನ್ನು ಕೀಳಾಗಿ ನೋಡುವುದು. ಮಹಿಳೆಯರು, ಕೆಳಜಾತಿ ಮತ್ತು ಹಿಂದುಳಿದ ಜಾತಿಗಳಿಗೆ ಅಂದರೆ ಒಟ್ಟಾರೆ ಎಲ್ಲಾ ಮಹಿಳೆಯರು ಮತ್ತು ಶೂದ್ರ ವರ್ಣದಲ್ಲಿ ಹುಟ್ಟಿದವರಿಗೆ ಶಿಕ್ಷಣವನ್ನು ಕೊಡದಿರುವುದು. ಎಲ್ಲ ರೀತಿಯಿಂದಲೂ ಅವರು ಸದಾ ಸೇವಕರಾಗಿಯೇ ಇರು ವಂತೆ ನೋಡಿಕೊಳ್ಳುವುದು. ಅಸಮಾನತೆಯ ಸಮಾಜ ದಲ್ಲಿ ಕಾಯಕಜೀವಿಗಳ ಶೋಷಣೆ ಮಾಡುತ್ತ ಐಹಿಕ ಸುಖವನ್ನು ಅನುಭವಿಸುತ್ತ್ತ ದಾಸಿಯರನ್ನು ಮತ್ತು ವೇಶ್ಯೆ ಯರನ್ನು ಸುಖದ ಸಾಧನಗಳಾಗಿ ಬಳಸಿಕೊಳ್ಳುವುದು ಸಾಮಾನ್ಯವಾಗಿತ್ತು.

ಪುರೋಹಿತಶಾಹಿಗಳು, ಅಧಿಕಾರಶಾಹಿಗಳು & ಕುಲೀನರು ಎನ್ನಿಸಿಕೊಳ್ಳುವವರು ಯಥಾಸ್ಥಿತಿವಾದಿ ಗಳಾಗಿ ಬದುಕುವುವಂಥ ಸಮಾಜವನ್ನು ಕಳೆದ ಐದು ಸಾವಿರ ವರ್ಷಗಳಿಂದ ಪೋಷಿಸಿಕೊಂಡು ಬರಲಾಗಿತ್ತು. ಇಂಥವರ ಸುಖಲೋಲುಪತೆಗೆ ತಕ್ಕಂತೆ ಲೈಂಗಿಕ ಶಿಲ್ಪಗಳಿಂದ ಕೂಡಿದ ಬೃಹತ್ ದೇವಾಲಯಗಳನ್ನು ನಿಮರ್ಿಸುವುದು; ಆ ದೇವಾಲಯಗಳನ್ನು ದೇವದಾಸಿ ಯರಿಂದ ಕೂಡಿದ ಸುಖದ ತಾಣಗಳನ್ನಾಗಿಸುವುದು ಮತ್ತು ಮೃಷ್ಟಾನ್ನ ಭೋಜನ, ಹಾಡು, ಕುಣಿತ, ರಸಕತೆ ಮತ್ತು ಧನಕನಕ ಸಂಪತ್ತಿನ ರಕ್ಷಣಾ ತಾಣವನ್ನಾಗಿ ದೇವಾಲಯಗಳನ್ನು ಬೆಳೆಸುತ್ತ ಪಟ್ಟಭದ್ರರು ರಾಜ್ಯ ಸತ್ತೆಯನ್ನು ಕೂಡ ತಮ್ಮ ಅಂಕಿತದಲ್ಲಿಟ್ಟುಕೊಳ್ಳುವಂಥ ಸಾಮಥ್ರ್ಯ ಪಡೆದದ್ದನ್ನು ಬಸವಣ್ಣವರು ಗಮನಿಸಿದರು. ರಾಜಸ್ಥಾನದಿಂದ ಅಷ್ಟೇ ಅಲ್ಲದೆ ದೇವಸ್ಥಾನದಿಂದಲೂ ಕಾಯಕಜೀವಿಗಳ ನಿರಂತರ ಶೋಷಣೆ ನಡೆಯುತ್ತಿರು ವುದನ್ನು ಕೊನೆಗೊಳಿಸಿದರು. ದೇಗುಲ ಸಂಸ್ಕೃತಿಗೆ ತಿಲಾಂಜಲಿಯನ್ನಿಟ್ಟು ಭಕ್ತಿಸಾಮ್ರಾಜ್ಯದ ಸ್ಥಾಪನೆಗೆ ಪಣತೊಟ್ಟರು.

ಬಸವಣ್ಣನವರ ಭಕ್ತಿಸಾಮ್ರಾಜ್ಯ ಸರ್ವಸಮತ್ವದ ಮೇಲೆ ನಿಂತಿದೆ. ಅಂದರೆ ಅಲ್ಲಿ ಅಸ್ಪೃಶ್ಯತೆ ಇಲ್ಲ, ಜಾತಿ ಭೇದವಿಲ್ಲ, ಕಾಯಕಭೇದವಿಲ್ಲ, ಲಿಂಗಭೇದವಿಲ್ಲ, ವರ್ಣ ಮತ್ತು ವರ್ಗಭೇದಗಳಿಲ್ಲ. ಇಂಥ ಭಕ್ತಿ ಸಾಮ್ರಾಜ್ಯದ ಸಮಾಜಕ್ಕೆ ಬಸವಣ್ಣನವರು ಶರಣಸಂಕುಲವೆಂದು ಕರೆದರು. ಶರಣರು ಸರ್ವಸಮಾನತೆಯ ವಕ್ತಾರರಾಗಿ ನುಡಿದಂತೆ ನಡೆದು ಬದುಕಿ ತೋರಿಸಿದರು. ಜಾತಿ ಸಂಕರವಾದ ಬಳಿಕ ಕುಲವನರಿಸುವರೆ ಎಂದು ಬಸವಣ್ಣನವರು ಪ್ರಶ್ನಿಸಿದರು. ವರ್ಗ, ವರ್ಣ ಮತ್ತು ಲಿಂಗಭೇದಕ್ಕೆ ಕುಲಭೇದವೇ ಮೂಲವಾಗಿರುವುದನ್ನು ಕಂಡುಕೊಂಡರು. ಇಂಥ ಯಾತನಾಮಯವಾದ ವ್ಯವಸ್ಥೆಗೆ ವರ್ಣವ್ಯವಸ್ಥೆ ಎಂದು ಮನುವಾದಿಗಳು ಕರೆಯುತ್ತಾರೆ.

ಈ ವರ್ಣವ್ಯವಸ್ಥೆಯು ಕರ್ಮಸಿದ್ಧಾಂತದ ಮೇಲೆ ನಿಂತಿದೆ. ಕರ್ಮಸಿದ್ಧಾಂತದ ತಾಯಿಬೇರನ್ನು ಕೊಚ್ಚಿ ಹಾಕದೆ ವರ್ಣವ್ಯವಸ್ಥೆಯನ್ನು ನಿನರ್ಾಮ ಮಾಡಲು ಸಾಧ್ಯವಿಲ್ಲ. ಕರ್ಮಸಿದ್ಧಾಂತವು ಮೂಢನಂಬಿಕೆಯ ಆಗರವಾಗಿದೆ; ಶೋಷಣೆಯ ಮೂಲವಾಗಿದೆ; ಭೇದ ಭಾವದ ಗಂಗೋತ್ರಿಯಾಗಿದೆ. ಈ ಕರ್ಮಸಿದ್ಧಾಂತವು ಲೋಕಕ್ಕೆ ಪುಣ್ಯ, ಮೋಕ್ಷ ಮತ್ತು ಸ್ವರ್ಗದ ಆಸೆ ಹಚ್ಚಿಸಿದೆ. ಪಾಪ ಮತ್ತು ನರಕದ ಭಯ ಹುಟ್ಟಿಸಿದೆ. ಭಯವೇ ಧರ್ಮದ ಮೂಲ ಎನ್ನುವಂತೆ ಧರ್ಮದ ರೂಪುರೇಷೆಗಳನ್ನು ಸೃಷ್ಟಿಸಲು ಸಹಕಾರಿಯಾಗಿದೆ. ಮಾನವನ ಸುಖ ಮತ್ತು ದುಃಖಗಳು ಪೂರ್ವನಿ ಧರ್ಾರಿತ ಎಂಬ ಭ್ರಮೆಯನ್ನು ಸೃಷ್ಟಿಸಿದೆ. ಇದು ಶುಭ ಗಳಿಗೆ, ಇದು ಕೆಟ್ಟ ಗಳಿಗೆ ಎಂದು ಕಾಲನರ್ಣಯ ಮಾಡಿದೆ. ನಮ್ಮ ಹಸ್ತರೇಖೆಗಳು ನಮ್ಮನ್ನು ಭವಿಷ್ಯದ ಕಡೆಗೆ ಒಯ್ಯುವ ದಾರಿಪಟ ಎಂಬ ನಂಬಿಕೆಗೆ ಕಾರಣವಾಗಿವೆ. ಜನ್ಮಜನ್ಮಾಂತರಗಳಲ್ಲಿ ರಾಶಿಯಾಗುತ್ತ ಬಂದಿರುವ ಸಂಚಿತ ಕರ್ಮ, ಹಿಂದಿನ ಜನ್ಮದ ಪ್ರಾರಬ್ಧ ಕರ್ಮ ಮತ್ತು ಮುಂಬರುವ ಜನ್ಮದಲ್ಲಿ ಬರುವ ಆಗಾಮಿ ಕರ್ಮಗಳ ಸುಳ್ಳುಸೃಷ್ಟಿಯ ಮೂಲಕ ಮಾನವ ಸಮಾಜ ಎಂದೆಂದೂ ಬದಲಾಗದೆ ಮನೋರೋಗಿಗಳ ತಾಣವಾಗುವಂತೆ ನೋಡಿಕೊಂಡಿದೆ.

ದೇವಸ್ಥಾನ ಸಂಸ್ಕೃತಿಯು ಅಸ್ಪೃಶ್ಯತೆ, ಅಸಮಾನತೆ, ಭೇದಭಾವ ಮತ್ತು ಮೂಢನಂಬಿಕೆಯ ರಕ್ಷಣಾ ಸ್ಥಾನವಾಗಿದೆ. ಬಡವರ ಶೋಷಣೆ ಮತ್ತು ಶ್ರೀಮಂತರ ಅಭಿವೃದ್ಧಿಗೆ ಕಾರಣವಾಗಿದೆ. ಈಕಾರಣದಿಂದಲೇ ಶೋಷಕ ವರ್ಗ ದೇವಾಲಯಗಳನ್ನು ನಿಮರ್ಿಸಿತು. ಶೋಷಿತ ವರ್ಗ ಆ ದೇವರುಗಳ ಮುಂದೆ ನಿಂತು ತಮ್ಮ ದುಃಖ ನಿವಾರಣೆಗೆ ಯತ್ನಿಸಿತು. ಹೀಗೆ ಶೋಷಕರ ವಾಸ್ತವ ಮತ್ತು ಶೋಷಿತರ ಭ್ರಮೆಗಳು ಒಟ್ಟೊಟ್ಟಿಗೆ ಸಾಗುತ್ತಿರುವುದನ್ನು ಬಸವಣ್ಣನವರು ಗಮನಿಸಿದರು. ಉಳ್ಳವರು ಶಿವಾಲಯ ಮಾಡಿಹರು, ನಾನೇನು ಮಾಡಲಿ ಬಡವನಯ್ಯಾ ಎಂದು ಬಡವರ ಪರವಾಗಿ ನಿಂತರು. ಉಳ್ಳವರು ಶಿವಾಲಯಗಳನ್ನೇಕೆ ನಿಮರ್ಿಸುವರು? ಎಂಬ ರಹಸ್ಯವನ್ನು ಬಹಿರಂಗ ಪಡಿಸಿದರು. ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲ ಸಲುಗೆವಂತರಾಗಿ ಒಳಗೈದಾರೆ. ಆನು ದೇವಾ ಹೊರಗಣವನು ಎಂದು ತಾವು ಗುಡಿ ಸಂಸ್ಕೃತಿಯಿಂದ ದೂರವಾದವರು ಎಂಬುದನ್ನು ಬಸವವಣ್ಣನವರು ಸ್ಪಷ್ಟಪಡಿಸಿದರು. ಅಂಗದ ಮೇಲೆ ಲಿಂಗ ಸಾಹಿತ್ಯವಾದ ಬಳಿಕ ಸ್ಥಾವರ ದೈವಕ್ಕೆರಗಲಾಗದು ಎಂದು ಎಚ್ಚರಿಸಿದರು. ವೇದ, ಶಾಸ್ತ್ರ ಆಗಮಂಗಳನೋದಿದವರು ಹಿರಿಯರೆ? .. .. .. ಸುವಿದ್ಯವ ಕಲಿತ ಡೊಂಬನೇನು ಕಿರಿಯನೆ? ಎಂದು ಪ್ರಶ್ನಿಸಿ ಕಟ್ಟಕಡೆಯ ಮನುಷ್ಯನ ಮತ್ತು ಆತನ ಜೀವನಾನುಭವದ ಪರವಾಗಿ ನಿಂತರು. ಗಿಳಿಪಾಠದ ಶಾಸ್ತ್ರಪಂಡಿತರು ಅದು ಹೇಗೆ ಹಿರಿಯರಾಗುತ್ತಾರೆ ಎಂದು ಪ್ರಶ್ನಿಸಿದರು. ಮನೆಯೊಳಗೆ ಕತ್ತಲೆ ಹರಿಯದೊಡಾ ಜ್ಯೋತಿ ಅದೇಕೊ? .. .. ಕರ್ಮ ಹರಿಯದೊಡಾ ಪೂಜೆಯದೇಕೊ? ಎಂದು ಕರ್ಮಸಿದ್ಧಾಂತವನ್ನು ನಾಶಮಾಡುವುದೇ ಇಷ್ಟಲಿಂಗ ಪೂಜೆಯ ಮುಖ್ಯ ಉದ್ದೇಶ ಎಂಬುದನ್ನು ಸೂಚಿಸಿದರು. ಕಳ್ಳ ನಾಣ್ಯ ಸಲುಗೆಗೆ ಸಲ್ಲದು ಎಂದು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದರು. ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ ನಮ್ಮಾಣೆ ಎಂದು ಸಂಗ್ರಹ ಬುದ್ಧಿಗೆ ಕಡಿವಾಣ ಹಾಕಿದರು. ಲಿಂಗವ ಪೂಜಿಸಿ ಫಲವೇನಯ್ಯಾ ಸಮರತಿ, ಸಮಕಳೆ, ಸಮಸುಖವನರಿಯದನಕ್ಕ? ಎಂಬ ಒಂದೇ ವಾಕ್ಯದಲ್ಲಿ, ಲಿಂಗ ಸಮಾನತೆ (ಸಮರತಿ), ವರ್ಣ ಸಮಾನತೆ (ಸಮಕಳೆ) ಮತ್ತು ಸಮಸುಖ (ವರ್ಗ ಸಮಾನತೆ) ಎಂಬ ಅರಿವೇ ಇಷ್ಟಲಿಂಗ ಪೂಜಾಫಲ ಎಂಬ ಸತ್ಯದ ದರ್ಶನ ಮಾಡಿಸಿದರು. ಕಾಯಕವಾವುದೆಂದು ಬೆಸಗೊಂಡಡೆ ನಿಮ್ಮಾಣೆ ಎಂದು ಎಲ್ಲ ಕಾಯಕಜೀವಿಗಳು ಸಮಾನರು ಎಂಬುದನ್ನು ಸೂಚಿಸಿದರು. ಒಮ್ಮೆ ಶರಣೆಂದಡೆ ಪಾಪ ಕರ್ಮ ಓಡುವವು ಎಂದು ಕರ್ಮಸಿದ್ಧಾಂತದಿಂದ ತುಳಿತಕ್ಕೊಳಗಾದ ಜನರಲ್ಲಿ ಆತ್ಮವಿಶ್ವಾಸ ಮೂಡಿಸಿದರು. ಅಹಂಕಾರವೆಂಬಸದ ಮದಗಜವೇರಿ ವಿಧಿಗೆ ಗುರಿಯಾಗಿ ನವು ಹೋದಿರಲ್ಲಾ ಎಂದು ಶೋಷಕ ವರ್ಗದ ಕೃತ್ರಿಮ ಬದುಕಿನ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಏನಯ್ಯಾ ವಿಪ್ರರು ನುಡಿದಂತೆ ನಡೆಯರು, ಇದೆಂತಯ್ಯಾ ತಮಗೊಂದು ಬಟ್ಟೆ (ದಾರಿ), ಶಾಸ್ತ್ರಕ್ಕೊಂದು ಬಟ್ಟೆ ! ಎಂದು ಪುರೋಹಿತಶಾಹಿಗಳ ಜೀವನವಿಧಾನಕ್ಕೆ ಅಸಹ್ಯಪಟ್ಟರು. ಎರೆದಡೆ ನನೆಯದು, ಮರೆದಡೆ ಬಾಡದು ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ ಎಂದು ಸಾಮಾಜಿಕ ಪ್ರಜ್ಞೆ ಇಲ್ಲದೆ ಇಷ್ಟಲಿಂಗ ಪೂಜೆ ಮಾಡುವುದು ನಿಷ್ಪ್ರಯೋಜಕ ಎಂದು ಸಾರಿದರು. ಇನ್ನು ಜಂಗಮವೇ ಲಿಂಗ ಎಂದು ನಂಬಿದೆ ಎಂದು ತಿಳಿಸುತ್ತ ಸಮಾಜ (ಜಂಗಮ)ವೇ ದೇವರು ಎಂಬ ಪರಿಕಲ್ಪನೆಯನ್ನು ಮೂಡಿಸಿದರು. ಕುಲಕ್ಕೆ ತಿಲಕ್ಕೆ ನಮ್ಮ ಮಾದಾರ ಚೆನ್ನಯ್ಯ, ನಿಮ್ಮಿಂದಧಿಕ ಕೂಡಲಸಂಗಮದೇವಾ ಎಂದು ತಿಳಿಸುತ್ತ ಮನುವಾದಿ ಸಮಾಜದಲ್ಲಿನ ಕಟ್ಟಕಡೆಯ ಮನುಷ್ಯರು ಕೂಡ ತಮ್ಮ ಸಚ್ಚಾರಿತ್ರ್ಯದ ಮೂಲಕ ವ್ಯಕ್ತಿತ್ವ ವಿಕಸನ ಹೊಂದುತ್ತ ದೇವರಿಗಿಂತ ದೊಡ್ಡವರಾಗಬಲ್ಲರು ಎಂಬ ಆಶಾಭಾವವನ್ನು ಮೂಡಿಸಿದರು. ನ್ಯಾಯ ನಿಷ್ಠುರಿ ದಾಕ್ಷಿಣ್ಯಪರ ನಾನಲ್ಲ. ಲೋಕ ವಿರೋಧಿ ಶರಣನಾರಿ ಗಂಜುವವನಲ್ಲ ಎಂದು ಎಂದು ಅನ್ಯಾಯವನ್ನು ವಿರೋಧಿಸಿದರು. ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹರ ಕಕ್ಕಯ್ಯ ಎಂದು ಮಾನವಕುಲದ ಏಕತೆಯ ಬಗ್ಗೆ ಅರಿವು ಮೂಡಿಸಿದರು. ಕೈಲಾಸವೆಂಬುದೇನೊ, ಪೃಥ್ವಿಯ ಮೇಲೊಂದು ಮೊರಡಿ ಎಂದು ಸ್ವರ್ಗದ ಮಹತ್ವವನ್ನು ಅಲ್ಲಗಳೆದರು. ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದರು. ಪುಣ್ಯ ಪಾಪವೆಂಬ ಉಭವ ಕರ್ಮವನಾರು ಬಲ್ಲರು? ಎಂದು ಪ್ರಶ್ನಿಸುವ ಮೂಲಕ ಪುಣ್ಯ ಪಾಪವನ್ನು ಅಲ್ಲಗಳೆದರು.ಕೂಡಲಸಂಗನ ಶರಣರು ನಿಚ್ಚ ಲಿಂಗೈಕ್ಯರು ಎಂದು ಹೇಳಿ ಮೋಕ್ಷವನ್ನು ಅಲ್ಲಗಳೆದರು. ಸಕಲ ಜೀವತ್ಮಾರಿಗೆ ಲೇಸ ಬಯಸುವ ಜೀವಕಾರುಣ್ಯವೊಂದೇ ಧರ್ಮದ ತಳಹದಿ ಎಂಬುದನ್ನು ಲೋಕದ ಜನರಿಗೆ ತಿಳಿಸಿಕೊಟ್ಟರು. ಗಣತಿಂಥಿಣಿಯೊಳಗಿರಿಸೆನ್ನ ಲಿಂಗವೆ ಎಂದು ಜನಸಾಗರದ ಮಧ್ಯೆ ತಮ್ಮ ಅಸ್ತಿತ್ವವನ್ನು ಕಂಡುಕೊಂಡರು. ದಾಸೀಪುತ್ರನಾಗಲಿ, ವೇಶ್ಯಾಪುತ್ರನಾಗಲಿ ಶಿವದೀಕ್ಷೆಯಾದಬಳಿಕ ಸಾಕ್ಷಾತು ಶಿವನೆಂದು ವಂದಿಸಿ, ಪೂಜಿಸಿ ಪಾದೋದಕ ಪ್ರಸಾದವ ಕೊಂಬುದೇ ಯೋಗ್ಯ ಎಂದು ಪ್ರತಿಪಾದಿಸುವ ಮೂಲಕ ಮಾನವಹಕ್ಕುಗಳನ್ನು ಎತ್ತಿಹಿಡಿದರು. ಭಕ್ತಿ ಇಲ್ಲದ ಬಡವ ನಾನಯ್ಯ; ಕಕ್ಕಯ್ಯನ ಮನೆಯಲ್ಲೂ ಬೇಡಿದೆ, ಚೆನ್ನಯ್ಯನ ಮನೆಯಲ್ಲೂ ಬೇಡಿದೆ ಎಂದು ಹೇಳುತ್ತ ಕೆಳಜಾತಿ ಮತ್ತು ಕೆಳವರ್ಗದ ಜನರ ಅನುಭವಗಳನ್ನು ಎತ್ತಿಹಿಡಿದು ಅವುಗಳಿಂದ ಪಾಠಕಲಿತಿರುವುದಾಗಿ ತಿಳಿಸುತ್ತಾರೆ. ದೇವನೊಬ್ಬ ನಾಮ ಹಲವು ಎನ್ನುವ ಮೂಲಕ ವಿವಿಧ ದೇವರುಗಳ ಆರಾಧಕರ ಮೂಲ ದೇವರು ಒಬ್ಬನೆ ಮತ್ತು ಆರಾಧ ಕರೆಲ್ಲರೂ ಒಂದೇ ಮಾನವ ಜನಾಂಗ ಹಾಗೂ ಒಂದೇ ಜಗತ್ತಿಗೆ ಸೇರಿದವರು ಎಂಬುದನ್ನು ಮನದಟ್ಟು ಮಾಡಿಕೊಟ್ಟರು. ಸರ್ವ ಸೂತಕಗಳು .. ಲಿಂಗಭಕ್ತರಿಗಿಲ್ಲ ನೋಡಾ , ಹೋಮ ನೇಮ ಜಪ ತಪದಿಂದ ವೆಗ್ಗಳ ಕೂಡಲಸಂಗಮದೇವಾ ನಿಮ್ಮ ಮಾಣದೆ ನೆನೆವಂಗೆ ಎಂದು ಮುಂತಾಗಿ ಘೋಷಿಸುವ ಮೂಲಕ ಎಲ್ಲತೆರನಾದ ಮೂಢನಂಬಿಕೆಗಳನ್ನು ಬಸವಣ್ಣನವರು ಅಲ್ಲಗಳೆದರು. ಲಿಂಗವ್ಯಸನಿ ಜಂಗಮಪ್ರೇಮಿ ಎಂದೆನಿಸಯ್ಯಾ ಎಂದು ಬೇಡುವ ಮೂಲಕ ಆದರ್ಶಗಳಿಗೆ ಅಂಟುಕೊಂಡು ಸಮಾಜಪ್ರೇಮಿ ಗಳಾಗಿರಬೇಕು ಎಂಬ ಭಾವ ವ್ಯಕ್ತಪಡಿಸಿದರು. ಹೀಗೆ ಬಸವಣ್ಣನವರಿಗೆ ಸಮಾಜವೇ ದೇವರಾಗಿದೆ. ಜನಸೇ ವೆಯೇ ಪೂಜೆ, ಪ್ರಾರ್ಥನೆಗಳಾಗಿವೆ. ಬಸವ ಧರ್ಮವು ನಿಜವಾದ ಅರ್ಥದಲ್ಲಿ ಸಮಾಜಸೇವಾ ಧರ್ಮವಾಗಿದೆ. ಸರ್ವಸಮತ್ವವನ್ನು ಸಾಧಿಸುವ ಮಹಾಸಾ ಧನವಾಗಿದೆ.

ಬಸವಣ್ಣನವರ ಜೊತೆಗಿದ್ದ ಶರಣರೆಲ್ಲರೂ ಇದೇ ಕ್ರಮದಲ್ಲಿ ಚಿಂತನೆ ಮಾಡಿದ್ದಾರೆ. ವೈವಿಧ್ಯದಲ್ಲಿ ಏಕತೆಯನ್ನು ಸಾಧಿಸಿದ್ದಾರೆ.

ಪೃಥ್ವಿಯಿಂದ ಸಕಲ ಜೀವರೆಲ್ಲರೂ ಉದ್ಭವ ಗುಹೇಶ್ವರಾ ಎಂದು ಅಲ್ಲಮ ಪ್ರಭುಗಳು ಹೇಳುವಲ್ಲಿ ಸಕಲಜೀವರಾಶಿಗಳ ಮಧ್ಯದ ಘನಸಂಬಂಧವನ್ನು ಸೂಚಿಸುತ್ತಾರೆ. ಸರ್ವಸಮತ್ವದ ಚಿಂತನೆಗೆ ಮೂಲ ಆಕರ ಒದಗಿಸುತ್ತಾರೆ. ಒಂದೇ ವಸ್ತು ತನ್ನ ಲೀಲೆಯಿಂದ ಪರಮಾತ್ಮ ಜೀವಾತ್ಮ ಎಂದಾಯಿತು ಎಂದು ಉರಿ ಲಿಂಗಪೆದ್ದಿಗಳು ಜೀವ ಮತ್ತು ದೇವರ ಮಧ್ಯದ ಅವಿರತ ಸಂಬಂಧವನ್ನು ಗುರುತಿಸುತ್ತಾರೆ. ಗುರುವಾದರೂ ಕಾಯಕ ದಿಂದಲೇ ಜೀವನ್ಮುಕ್ತಿ ಎಂದು ಹೇಳುವ ಮೂಲಕ ನುಲಿಯ ಚಂದಯ್ಯನವರು ಎಲ್ಲರೂ ಉತ್ಪಾದನೆಯಲ್ಲಿ ತೊಡಗಿದಾಗ ಮಾತ್ರ ಸರ್ವಸಮತ್ವದ ಸಮಾಜ ನಿಮರ್ಾಣ ಮಾಡಲು ಸಾಧ್ಯ ಎಂದು ಸೂಚಿಸುತ್ತಾರೆ. ಕಾಯಕವೇ ಕೈಲಾಸವಾದ ಕಾರಣ ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು ಎಂದು ಆಯ್ದಕ್ಕಿ ಮಾರಯ್ಯನವರು ಇನ್ನೂ ಮುಂದುವರಿದು ಮೇಲಿನ ಮಾತಿಗೆ ಪುಷ್ಟಿ ಕೊಡುತ್ತಾರೆ. ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ ಎಂದು ಕಾಳವ್ವೆ ಹೇಳುತ್ತ ಉತ್ಪಾದನಾ ವ್ಯವಸ್ಥೆ ಮತ್ತು ಮಾನವ ಸಂಪನ್ಮೂಲದ ಮಹತ್ವವನ್ನು ಸಾರುತ್ತಾಳೆ. ಹದ ಮಣ್ಣಲ್ಲದೆ ಮಡಕೆಯಾಗಲಾರದು ಎಂದು ಕೇತಲದೇವಿ ಗುಣಮಟ್ಟದ ಉತ್ಪನ್ನವಿರಬೇಕು ಮತ್ತು ಬದುಕು ಕೂಡ ಹಾಗೇ ಇರಬೇಕು ಎಂದು ಸೂಚಿಸುತ್ತಾಳೆ. ಲಂಚ ವಂಚನಕ್ಕೆ ಕೈಯಾನದ ಭಾಷೆ ಎಂದು ಕಸಗುಡಿಸುವ ಸತ್ಯಕ್ಕ, ಸಮಾಜವು ಕಾಯಕದಿಂದ ಬದುಕಬೇಕೆ ಹೊರತು ಭ್ರಷ್ಟಾಚಾರದಿಂದ ಅಲ್ಲ ಎಂಬ ಸಂದೇಶವನ್ನು ನೀಡುತ್ತಾಳೆ. ಆನೆ ಕುದುರೆ ಭಂಡಾರವಿರ್ದಡೇನೊ ತಾನುಂಬುದು ಪಡಿಯಕ್ಕಿ ಎಂದು ಮೋಳಿಗೆಯ ಮಾರಯ್ಯನವರು ಸಂಗ್ರಹಬುದ್ಧಿಗೆ ಕಡಿವಾಣ ಹಾಕುತ್ತಾರೆ.

ಹೀಗೆ ಎಲ್ಲ ಶರಣರು ಬಸವಣ್ಣನವರ ಕಾಯಕ ತತ್ತ್ವವನ್ನು ಎತ್ತಿಹಿಡಿದಿದ್ದಾರೆ. ಬಸವತತ್ತ್ವ, ಕಾಯಕತತ್ತ್ವ ಮತ್ತು ಇಷ್ಟಲಿಂಗತತ್ತ್ವ ಬೇರೆ ಅಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಸಮಾನತೆಯಿಂದ ಕೂಡಿದ ಸಮಾಜದ ಬೇರುಗಳು ಯೋಗ್ಯರೀತಿಯಲ್ಲಿ ಉತ್ಪಾದನೆ, ಯೋಗ್ಯರೀತಿಯಲ್ಲಿ ಬಳಕೆ ಮತ್ತು ಯೋಗ್ಯರೀತಿಯಲ್ಲಿ ಸಾಮಾಜಿಕ ವಿತರಣೆ ಎಂಬ ಸೂತ್ರದ ಮೇಲೆ ನಂತಿವೆ ಎಂಬುದನ್ನು ಶರಣರೆಲ್ಲ ಸೂಚಿಸಿದ್ದಾರೆ. ಇದನ್ನೇ ಬಸವಧರ್ಮದ ಪರಿಭಾಷೆಯಲ್ಲಿ ಕಾಯಕ - ಪ್ರಸಾದ ದಾಸೋಹ ಎಂದು ಹೇಳಲಾಗಿದೆ.

ಕರುಣಿ ಬಸವಾ, ಕಾಲಹರ ಬಸವಾ, ಕರ್ಮಹರ ಬಸವಾ, ನಿರ್ಮಳ ಬಸವಾ, ಶಿವಜ್ಞಾನ ಬಸವಾ, ನಮ್ಮ ಧರ್ಮವಯ್ಯಾ ಈ ಭಕ್ತಿಯ ಪದವು ಕರುಣಿ ಕಪಿಲ ಸಿದ್ಧಮಲ್ಲಿನಾಥಯ್ಯಾ ನಿಮಗೂ ಎನಗೂ ಬಸವಣ್ಣನ ಧರ್ಮವಯ್ಯಾ ಎಂದು ಸಿದ್ಧರಾಮರು ಹೇಳುವಲ್ಲಿ ಬಸವಣ್ಣನವರೇ ಸಮಾನತೆ ಸಾರುವ ಲಿಂಗವಂತ ಧರ್ಮಸ್ಥಾಪಕರು ಎಂಬುದನ್ನು ಸೂಚಿಸಿದ್ದಾರೆ.

No comments:

Post a Comment

Thanku