Friday, May 11, 2012
ಎಲ್.ಸಿ ಕಟರ್ಿಸ್ ನೆನಪು ಮಾತ್ರ
ಖ್ಯಾತ ಗಣಿ ಅಭಿಯಂತರರಾದ ಶ್ರೀ ಎಲ್.ಸಿ. ಕಟರ್ಿಸ್ ಇವರು ದಿನಾಂಕ 29-01-2012 ರಂದು ಇಹ ಲೋಕವನ್ನು ತ್ಯಜಿಸಿರುವುದು ಸಂತಾಪಕರ ವಿಷಯ. ದಿವಂಗತ ಶ್ರೀ ಎಲ್.ಸಿ. ಕಟರ್ಿಸ್ ಇವರು 3ನೇ ಮೇ 1920ನೇ ಇಸ್ವಿಯಲ್ಲಿ ಇಂಗ್ಲೆಂಡಿನ ಯಾರ್ಕಶೈರ್ ಪಟ್ಟಣದಲ್ಲಿ ಜನಿಸಿದರು. ಇವರು ಇಂಗ್ಲೇಂಡನಲ್ಲಿನ ಕಾಡ್ಲಿಫ್ ಕ್ಯಾಂಬರೂನ್ ಸ್ಕೂಲ್ ಆಫ್ ಮೈನ್ಸ್ನಲ್ಲಿ ಮೈನಿಂಗ್ ಎಂಜಿನಿಯರ್ ಪದವಿಯನ್ನು ಪಡೆದಿದ್ದರು.
ಮೈನಿಂಗ್ ಜೊತೆಯಲ್ಲಿ ಇವರು ಎಲೆಕ್ಟ್ರಿಕಲ್, ಸಿವಿಲ್ ಮತ್ತು ಮೆಕ್ಯಾನಿಕಲ್ ಕ್ಷೇತ್ರಗಳಲ್ಲಿಯೂ ಸಾಕಷ್ಟು ಪ್ರತಿಭೆಯನ್ನು ಹೊಂದಿದ್ದರು. ಇಂಗ್ಲೇಂಡಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದಾಗ ವಿಶ್ವದ 2ನೇ ಮಹಾ ಸಮರ ಶುರುವಾಗಿತ್ತು. ಆಗ ಇವರು ಇಂಗ್ಲೆಂಡಿನ ಸೇನೆಯಲ್ಲಿ ಕ್ಯಾಪ್ಟನ್ ಎಂದು ಸೇರಿಕೊಂಡು ಸೇವೆ ಸಲ್ಲಿಸಿದರು. 2ನೇ ಮಹಾಯುದ್ದದ ಅಂತ್ಯಗೊಂಡ ನಂತರ ಮೆ|| ಜಾನ್ ಟೇಲರ್ & ಸನ್ಸ್ ಎಂಬ ಹೆಸರಾಂತ ಗಣಿ ಸಂಸ್ಥೆಯಲ್ಲಿ ಸಮಾಲೋಚಕರ ಹುದ್ದೆಗೆ ಸೇರಿಕೊಂಡರು.
ನಂತರ ಭಾರತದಲ್ಲಿ 1947ರಲ್ಲಿ ಡೆಕ್ಕನ್ ವಿಭಾಗದ ನಿಜಾಮರ ಅಧೀನಕ್ಕೊಳಪಟ್ಟ "ಹೈದ್ರಾಬಾದ ಗೋಲ್ಡ್ ಮೈನಿಂಗ್" ಕಂಪನಿಯಲ್ಲಿ ಸೇರಿಕೊಂಡರು. ಹಟ್ಟಿಯಲ್ಲಿನ ಈ ಗಣಿಯಲ್ಲಿ ಚೀಫ್ ಅಂಡರ್ಗ್ರೌಂಡ ಏಜೆಂಟ್ ಎಂಬ ಹುದ್ದೆಗೆ ನೇಮಕಗೊಂಡಾಗ, ಈ ಭಾಗವು ಬರಗಾಲ ಪೀಡಿತ ಪ್ರದೇಶವಾಗಿತ್ತು. ಇವರು ಗಣಿ ಅಭಿವೃದ್ಧಿಯ ಜೊತೆಯಲ್ಲಿ ಹಟ್ಟಿಯಲ್ಲಿನ ಸುತ್ತಮುತ್ತಲಿನ ಹಳ್ಳಿಗಳ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಶ್ರಮಿಸಿದರು.1956ರ ರಲ್ಲಿ ಹಟ್ಟಿ ಚಿನ್ನದ ಗಣಿಯ ಈ ಪ್ರದೇಶವು ಮೈಸೂರು ರಾಜ್ಯಕ್ಕೆ ಸೇರ್ಪಡೆಯಾಗಿ ಹಟ್ಟಿ ಚಿನ್ನದ ಗಣಿ ಕಂಪನಿ ಎಂದು ಮರು ನಾಮಕರಣ ಹೊಂದಿರುವ ಉಲ್ಲೇಖವಿದೆ. ಹಾಗೂ 1972ರಲ್ಲಿ ಕನರ್ಾಟಕ ರಾಜ್ಯದ ಮುಖ್ಯಮಂತ್ರಿಗಳು ಈ ಕಂಪನಿಗೆ ಅಧ್ಯಕ್ಷರಾಗಿ ನೇಮಕಗೊಂಡರು. ಈ ಸಂದರ್ಭದಲ್ಲಿ ದಿವಂಗತ ಎಲ್.ಸಿ. ಕಟರ್ಿಸ್ ಇವರು ಮೈನಿಂಗ್ ಇಂಜಿನಿಯರ್ನಿಂದಿಡಿದು ಹಂತಹಂತವಾಗಿ ಬಡ್ತಿ ಹೊಂದಿ 1976ರಲ್ಲಿ ಕಂಪೆನಿಯ ಏಜೆಂಟ್ ಮತ್ತು ಜನರಲ್ ಮ್ಯಾನೇಜರ್ ಹುದ್ದೆಯನ್ನು ಅಲಂಕರಿಸಿದರು.
ದಿವಂಗತರು ಸಕರ್ಾರದ ಜೊತೆ ಒಳ್ಳೆಯ ಬಾಂಧವ್ಯವನ್ನಿಟ್ಟುಕೊಂಡಿದ್ದರು. ಇವರು ಅಧಿಕಾರವಹಿಸಿಕೊಂಡಾಗ ಗಣಿಯು 120 ಮೀಟರ ಆಳದವರೆಗೆ ಗಣಿಗಾರಿಕೆ ಚಟುವಟಿಕೆಯು ನಡೆಯುತ್ತಿದ್ದು, ಇವರು ಗಣಿಯ ಅಭಿವೃದ್ಧಿಗಾಗಿ ತುಂಬಾ ಶ್ರಮಿಸಿದರು, ಮತ್ತು ಇವರು ನುರಿತ ಕಾಮರ್ಿಕರ ಮತ್ತು ವಿದ್ಯಾರ್ಹತೆ ಹೊಂದಿದ್ದ ಸಿಬ್ಬಂದಿಗಳ ನೇಮಕ ಮಾಡಿಕೊಳ್ಳುವುದರೊಂದಿಗೆ ಗಣಿಯನ್ನು ಅಭಿವೃದ್ಧಿಪಡಿಸಿ ಈ ದಿನ ಹಟ್ಟಿ ಚಿನ್ನದ ಗಣಿಯು ಪ್ರಕಾಶಮಾನವಾಗಿ ಹೆಸರು ಗಳಿಸಲು ಕಾರಣೀಭೂತರಾದರೆಂದರೆ, ತಪ್ಪಾಗಲಾರದು.
ಇವರು ತಮ್ಮ ಅಪಾರ ಬುದ್ಧಿ ಮತ್ತು ಅನುಭವದಿಂದ ಗಣಿಯ ಯಾಂತ್ರಿಕರಣಕ್ಕೆ ನಾಂದಿಯಾದರು. ಇವರು ಸ್ವತ:ಃ ತಾವೆ ವಜ್ರ ಭೈರಿಗೆ ಯಂತ್ರವನ್ನು ಕಂಡುಹಿಡಿದು ತಯಾರಿಸಿ ಅದನ್ನು ಗಣಿಯ ಕೆಲಸಕ್ಕೆ ಅನೂಕೂಲವಾಗುವಂತೆ ರೂಪಿಸಿದ್ದು ಇವರ ಆಸಕ್ತಿಯನ್ನು ತೋರಿಸುತ್ತದೆ. ಇವರು ಸ್ವತಃ ಎಲ್ಲಾ ಕೆಲಸಗಾರರೊಂದಿಗೆ ಸ್ನೇಹಭಾವದಿಂದಿದ್ದು ಕಾಮರ್ಿಕರ ಮತ್ತು ಮುಖ್ಯಮಂತ್ರಿಗಳ ವಿಶ್ವಾಸಗಳಿಸಿ ಇವರು ಪ್ರತಿ ವರ್ಷ 120 ಮೀಟರ್ ಆಳದವರೆಗೆ ಗಣಿಯ ಅಭಿವೃದ್ಧಿಯನ್ನು ಹೆಚ್ಚಿಸುತ್ತಾ ಹಟ್ಟಿ ಚಿನ್ನದ ಗಣಿ ಕಂಪನಿ ಬೆಳವಣಿಗೆಗಾಗಿ ಶ್ರಮಿಸಿದರು.
1963 ರಲ್ಲಿ ಕೇಂದ್ರ ಸಕರ್ಾರವು ಗೋಲ್ಡ್ ಕಾಂಟ್ರ್ಯಾಕ್ಟ್ ಕಾಯ್ದೆಯನ್ನು ಜಾರಿಗೊಳಿಸಿದಾಗ, ಹಟ್ಟಿ ಚಿನ್ನದ ಗಣಿ ಕಂಪನಿಯು ಸಂಕಷ್ಟಕ್ಕೀಡಾಗಿ ಸ್ಥಗಿತಗೊಳಿಸುವ ಹಂತಕ್ಕೆ ಬಂದಿತ್ತು. ಆಗ ಕಟರ್ಿಸ್ರವರು ಖುದ್ದಾಗಿ ಪ್ರಧಾನಿಯವರನ್ನು ಭೇಟಿ ಮಾಡಿ ಹಳದಿ ಲೋಹದ ಮಹತ್ವವನ್ನು ಹಾಗೂ ಗಣಿಗಾರಿಕೆಯ ಅವಶ್ಯಕತೆಯನ್ನು ಮನದಟ್ಟು ಮಾಡಿ ಸದರಿ ಸಂಕಷ್ಟದಿಂದ ಗಣಿಯನ್ನು ಪಾರು ಮಾಡಿದ್ದಲ್ಲದೇ ಇತಿಹಾಸದಲ್ಲಿ ಮೊದಲನೇ ಸಲ ಎಲ್ಲಾ ನೌಕರರಿಗೆ ಬೋನಸ್ ಹಣವನ್ನು ವಿತರಣೆ ಮಾಡಿದರು.
1956ರರಲ್ಲಿ 150 ಟನ್ ಅದಿರು ಉತ್ಪಾದನೆಯ ಸಾಮಥ್ರ್ಯವನ್ನು ಹೊಂದಿದ್ದ ಗಣಿಯನ್ನು 400 ಟನ್ ಅದಿರು ಉತ್ಪಾದನೆ ಹಾಗೂ 1970ರ ವೇಳೆಯಲ್ಲಿ 1000 ಟನ್/ದಿನಕ್ಕೆ ಉತ್ಪಾದಿಸುವ ಸಾಮಥ್ರ್ಯವನ್ನು ಗಣಿ ಅಭಿವೃದ್ಧಿ ಮೂಲಕ ಸಾಧಿಸಿರುವದು ಹೆಮ್ಮೆಯ ವಿಷಯ. ಈ ಅವಧಿಯಲ್ಲಿ ಕಟರ್ಿಸ್ರವರು ಗಣಿ ಮತ್ತು ಲೋಹ ತಜ್ಞರಾದ ಆರ್.ಹೆಚ್.ಸಾಹುಕಾರ ಎಂಬ ತಜ್ಞರ ಸಹಯೋಗದಲ್ಲಿ ಗಣಿಯ ಉತ್ಪಾದನಾ ಸಮಾಥ್ರ್ಯವನ್ನು ಹೆಚ್ಚಳಗೊಳಿಸದ್ದಲ್ಲದೇ ಗಣಿ ಯಾಂತ್ರೀಕರಣವನ್ನು ಅಳವಡಿಸಿಕೊಂಡು ಹಟ್ಟಿ ಚಿನ್ನದ ಗಣಿ ಕಂಪನಿಯ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ.
ಕಟರ್ಿಸ್ರವರು ಗಣಿ ಅಭಿವೃದ್ಧಿಯೇ ತಮ್ಮ ಧ್ಯೇಯವೆಂದು ತಿಳಿದು ಹಟ್ಟಿ ಚಿನ್ನದ ಗಣಿಗಾಗಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಗಣಿ ಅಭಿವೃದ್ಧಿಯ ಜೊತೆಯಲ್ಲಿ ಇವರು ಹಲವು ಕ್ರೀಡೆಗಳಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ಪುಟ್ಬಾಲ್, ಟೆನ್ನಿಸ್, ಬಿಲಿಯಡ್ಸರ್್ ಹಾಗೂ ಸ್ನೂಕರ್ ಆಟಗಳಲ್ಲಿ ಚಾಂಪಿಯನ್ ಆಗಿದ್ದರು.
ಸಾಕಷ್ಟು ಶ್ರಮ ವಹಿಸಿ ಟಮನಕಲ್ನಿಂದ ಹಟ್ಟಿ ಚಿನ್ನದ ಗಣಿಗೆ ಕುಡಿಯುವ ನೀರನ್ನು ತಂದರು. ಸುತ್ತಲಿನ ಹಳ್ಳಿಗಳಿಗೆ ಜನರಿಗೆ ಉದ್ಯೋಗಾವಕಾಶಗಳನ್ನು ನೀಡಿದರು. ವಿದ್ಯಾವಂತ, ಅವಿದ್ಯಾವಂತರೆನ್ನದೇ ಎಲ್ಲರಿಗೂ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರು. ಇಂತಹ ಹಲವು ಜನಪರ ಕಾರ್ಯಗಳೇ ಕಟರ್ಿಸ್ರವರ ದೂರದೃಷ್ಟಿಯನ್ನು ಎತ್ತಿತೋರಿಸುತ್ತವೆ.
1976ರಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ನಡೆದ ಕಾಮರ್ಿಕರ ಗಲಭೆಯಿಂದ ಇವರು ಸ್ವಯಂ ನಿವೃತ್ತಿಯನ್ನು ಪಡೆದು ಕಂಪನಿಯನ್ನು ಬಿಟ್ಟು ಹೋದರು. ಆದರೂ ಇವರು ತಿಂಥಿಣಿ ತಾಮ್ರ ಘಟಕ, ಚಿತ್ರದುರ್ಗ ತಾಮ್ರ ಘಟಕದಂತಹ ಹಲವು ತಾಮ್ರದ ಘಟಕಗಳಿಗೆ ಮತ್ತು ಹಟ್ಟಿ ಚಿನ್ನದ ಗಣಿಗೆ "ಗಣಿ ಸಮಾಲೋಚಕ" ರೆಂದು ನೇಮಕಗೊಂಡು ಅಪಾರ ಸೇವೆಯನ್ನು ಸಲ್ಲಿಸಿದರು. ಇದಲ್ಲದೇ ಭಾರತ ದೇಶದ ಹಲವು ಗಣಿಗಳ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮವಹಿಸಿದ್ದಾರೆ.
ಲೋಹಶಾಸ್ತ್ರ ದಿಗ್ಗಜರಾದ ಡಾ|| ಬಿ.ಪಿ ರಾಧಕೃಷ್ಣರವರ ಜೊತೆಗೂಡಿ ಭಾರತದಲ್ಲಿನ ಹಲವು ಲೋಹಗಳು ಮತ್ತು ಹಟ್ಟಿ, ಗದಗ ಸುತ್ತಮುತ್ತಲಿನ ನಿಕ್ಷೇಪಗಳ ಕುರಿತು ಜಿಯಾಲಾಜಿಕಲ್ ಸೊಸೈಟಿ ಆಫ್ ಇಂಡಿಯಾದ ಜರ್ನಲ್ಗಳಿಗೆ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಇಂದಿಗೂ ಕೂಡ ಜಿ.ಎಸ್.ಐನ ಜರ್ನಲ್ಗಳಲ್ಲಿ ಕಟರ್ಿಸ್ರವರ ಬರವಣಿಗೆಗಳನ್ನು ನೋಡಬಹುದಾಗಿದೆ.
ಇಷ್ಟೇಲ್ಲ ಸಾಧನೆಗಳನ್ನು ಮಾಡಿದ ದಿಗ್ಗಜ, ಗಣಿಶಾಸ್ತ್ರಜ್ಞ ಎಲ್.ಸಿ ಕಟರ್ಿಸ್ರವರು ಬರೀ ನೆನಪಾಗಿ ಉಳಿದು ಇತಿಹಾಸದ ಪುಟ ಸೇರಿದರು.
ಡಾ.ಎಂ.ಎಲ್ ಪಾಟೀಲ್,
ಕಾರ್ಯನಿವರ್ಾಹಕ ನಿದರ್ೇಶಕರು.
ಹಟ್ಟಿ ಚಿನ್ನದ ಗಣಿ ಕಂಪನಿ ನಿ.
ಜನಪರ ವ್ಯಕ್ತಿ ಎಲ್.ಸಿ ..
ಗಣಿಯ ಅಭಿವೃದ್ಧಿಗಾಗಿ ತನ್ನ ಜೀವನವನ್ನು ಮುಡುಪಾಗಿಟ್ಟ ಮಹಾನ್ ವ್ಯಕ್ತಿ, ಶ್ರೇಷ್ಟ ಗಣಿ ತಜ್ಞ ಎಲ್.ಸಿ ಕಟರ್ಿಸ್.
ಅವರು ಇಂಗ್ಲೇಂಡಿನಿಂದ ಬಂದು ಭಾರತದಲ್ಲಿ ಸಾಕಷ್ಟು ಗಣಿಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಅದರಂತೆ ಭಾರತದ ಯಾವ ಪ್ರದೇಶದಲ್ಲಾದರೂ ಉಳಿದುಕೊಳ್ಳುವ ಸಾಕಷ್ಟು ಅವಕಾಶಗಳಿದ್ದರೂ ಕೂಡ, ಕಟರ್ಿಸ್ರವರು ಎಲ್ಲಿಯೂ ಹೋಗದೇ.. ಕನರ್ಾಟಕದಲ್ಲಿಯೇ ಉಳಿದುಕೊಂಡರು.
ಅದರಲ್ಲಿ ವಿಶೇಷವಾಗಿ ಕಟರ್ಿಸ್ರವರಿಗೆ ನಮ್ಮ ಹಟ್ಟಿ ಗಣಿಯ ಬಗ್ಗೆ ಕಾಳಜಿ ಇತ್ತು. ಅದರಂತೆ ಇಲ್ಲಿನ ಜನರು ಕೂಡ ಅಷ್ಟೇ ಪ್ರೇಮದಿಂದ ಕಟರ್ಸ್ರವರನ್ನು ಕಾಣುತ್ತಿದ್ದರು.
ಅಶೋಕ ವಾಲ್ಮೀಕಿ,
ನೂತನ ಪ್ರಧಾನ ವ್ಯವಸ್ಥಾಪಕರು.
ಹಟ್ಟಿ ಚಿನ್ನದ ಗಣಿ ಕಂ.
ಎಲ್.ಸಿ ಕಟಿಸ್ ಮಹಾನ್ವ್ಯಕ್ತಿ
ಇಂದು ನಾವೆಲ್ಲ ಹಟ್ಟಿ ಗಣಿಯ ಅಭಿವೃದ್ಧಿಗಾಗಿ ಶ್ರಮಿಸಿದ ಶ್ರೇಷ್ಟ, ಮಹಾನ್ ಗಣಿತಜ್ಞ ಎಲ್.ಸಿ.ಕಟರ್ಿಸ್ನ ಕಳೆದುಕೊಂಡಿರುವುದು ವಿಷಾದನೀಯ.ಅಂದು ಗಣಿ ಯಾಂತ್ರಿಕರಣಕ್ಕಾಗಿ ಹಗಲಿರುಳು ಶ್ರಮಿಸಿದ ಕಟರ್ಿಸ್ರವರು ಹಟ್ಟಿಯ ಸುತ್ತಮುತ್ತ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರ ಹಿಂದಿನ ಹಲವು ಕಾರ್ಯಗಳೇ ನಮಗೆ ಮಾರ್ಗದರ್ಶನಗಳಾಗಲಿ..
ಇಂದು ಕಂಪೆನಿಯೂ ಆಧುನಿಕರಣಗೊಂಡು ಎಲ್ಲ ಹಂತದಲ್ಲಿ ಉತ್ತಮವಾಗಿ ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವುದು ಎಲ್ಲರ ಶ್ರಮದಿಂದವೆಂದು ನಾನು ಭಾವಿಸುತ್ತೇನೆ.
ಪ್ರಕಾಶ ಬಹದ್ದೂರ್,
ಏಜೆಂಟ್ & ಉಪಪ್ರಧಾನ ವ್ಯವಸ್ಥಾಪಕರು.
ಹಟ್ಟಿ ಚಿನ್ನದ ಗಣಿ ಕಂ.
Dear
Sir,
This is in response to your Face Book article,
Shankargouda patil. M |
The information to a great personality like late Mr L.C .Curtis will be petite. As posted in Face Book he is the father of Hutti gold mines. He came to India
as a qualified pilot and became a Master Miner and developed Hutti gold mines as world class mining company. He was so dedicated that he
would take any work seriously,like one incidence, after his retirement he turned him self to a Automobile Engineer. He use to buy old cars and convert them into trendy sport cars. So much was the passion for work in any thing and get succeed in every thing.
I had a opportunity of working with him in Hydro metallurgy of copper. His brain child Thinthini copper mines opened and the economics of mines were not favorable. Mr Curtis came out with idea to make copper metal and mines
profitable. He started working on Hydro metallurgy of copper metal from
Chalcopyrite , a copper concentrate with another stellar personality late sri G.K Naidu then AGM(met) of HGML. The work needed total dedication and they used to work from morning to practically mid night. Untiring they
worked and were unfortunate as they could not navigate to the end.
There was a human part him and I realized many a times. Incidents like, when ever
he used to stay in laboratory if it is a tea time he used to make arrangements to get tea for all of us. I was very new to HGML and straight from college and my dresses used to be like college boys. One day Mr Curtis told jokingly to me I think you should ask Sri G.K Naidu for a special clothing allowance which was non existence at that time. That was affectionate humorous part in him.
I doubly lucky to associate with him in Gadag ,Chitraduga and Hutti expansion.The Hutti expansion which came in a right time and Hutti became Feeder to thousands of families who directly and indirectly depend on Her.
Mr L.C curtis returned more than he received from society . All old timers
fondly remember him and article in PRAJA SAMARA Patrike will refresh to all
those who know him in particular and make impression on the new generation of Hutti in general.
A respectable Salute to Gentleman Curtis and to Praja Samar for digging the archives.
ಬೂದಿಮುಚ್ಚಿದ ಕೆಂಡ 'ಒಳಮೀಸಲಾತಿ'
ಆಂಧ್ರಪ್ರದೇಶದಲ್ಲಿ ಮಾದಿಗರ ಒಳಮೀಸಲಾತಿ ಹೋರಾಟಕ್ಕೆ ಪ್ರಗತಿಪರ ಮೂಲಸಮುದಾಯದ ಗದ್ದರ್ ಮುಂತಾದವರು ಬೆಂಬಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಕನರ್ಾಟಕದಲ್ಲಿ ದಲಿತ ಸಂಘರ್ಷ ಸಮಿತಿಯ ಒಂದು ಗುಂಪು ಅಂದರೆ, ಶ್ರೀಧರ ಕಲಿವೀರ, ಜಯಣ್ಣ ಮುಂತಾದವರು ಒಳಮೀಸಲಾತಿ ಹೋರಾಟಕ್ಕೆ ಬೆಂಬಲಿಸಿದ್ದು ಅಪರೂಪದ ಘಟನೆ. ಆದರೆ, ಕನರ್ಾಟಕದ ಪ್ರಸಿದ್ದ ದಲಿತ ಲೇಖಕರು, ಚಿಂತಕರು, ವಿಚಾರವಂತರು ಇದರ ಬಗ್ಗೆ ಮೌನ ವಹಿಸಿದ್ದು ಇಲ್ಲವೇ ದಾರಿತಪ್ಪಿಸುವ ಹೇಳಿಕೆ ನೀಡಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಎನ್ನುತ್ತಾರೆ ಮಾಜಿ ವಿಧಾನ ಪರಿಷತ್ ಸದ್ಯಸರಾದ ಡಾ.ಎಲ್.ಹನುಮಂತಯ್ಯ.
ಕಳೆದ ಮೂರು ದಶಕಗಳಿಂದ ತೀವ್ರ ಚಚರ್ೆಗೆ ಒಳಗಾಗಿರುವ ಗಂಭೀರ ವಿಚಾರ ಒಳಮೀಸಲಾತಿ. ಹಿಂದುಳಿದ ವರ್ಗಗಳಲ್ಲಿ ಒಳಮೀಸಲಾತಿ ಅಸ್ತಿತ್ವಕ್ಕೆ ಬಂದಾಗಿನಂದಲೂ ಜಾರಿಯಲ್ಲಿದೆ. ಅದು ಹಿಂದುಳಿದ ವರ್ಗಗಳಲ್ಲಿ ಚಚರ್ೆಯ ವಿಷಯವಲ್ಲ; ಒಪ್ಪಿತ ಮೌಲ್ಯ. ನೂರಾರು ಜಾತಿಗಳಿರುವ ಹಿಂದುಳಿದ ವರ್ಗ, ಹಿಂದುಳಿದ, ಅತಿಹಿಂದುಳಿದ ಎಂಬ ಶ್ರೇಣಿಗಳಿರುವದರಿಂದ ಈ ರೀತಿಯ ಶ್ರೇಣಿಕರಣ ಮೀಸಲಾತಿ ನಡಿಕೆಯಲ್ಲೂ ಜಾರಿಗೆ ಬಂದು ವೈಜ್ಞಾನಕ ಪ್ರತಿಪಾದಿತವಾಗಿದೆ. ಆದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಲ್ಲಿ ಒಳ ಮೀಸಲಾತಿ ಜಾರಿಗೆ ಬರಬೇಕೆಂದು ಕೂಗು ಕೇಳಿದ ದಿನದಿಂದಲೂ ವಿವಾದಕ್ಕೆ ಒಳಗಾಗಿದೆ. ಇದೊಂದು ಆಶ್ಚರ್ಯ ಮತ್ತು ಆಘಾತಕಾರಿ ಸಂಗತಿಯೂ ಹೌದು.
ಕನರ್ಾಟಕದ ಪರಿಶಿಷ್ಟ ಜಾತಿಯಲ್ಲಿ ಸುಮಾರು 101 ಜಾತಿಗಳಿವೆ. ಈ ಜಾತಿಗಳಲ್ಲಿ ಮುಖ್ಯವಾಗಿ 4 ಗುಂಪುಗಳಿವೆ. 1976ರಲ್ಲಿ ನೇಮಕವಾದ ಹಾವನೂರು ಆಯೋಗದಲ್ಲಿ ಪರಿಶಿಷ್ಟ ಜಾತಿಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿದೆ.
1. ಮಾದಿಗ ಮತ್ತು ಸಂಬಂಧಿತ ಜಾತಿಗಳು 2. ಮಾಲ/ಹೊಲೆಯ ಮತ್ತು ಸಂಬಂಧಿತ ಜಾತಿಗಳು 3. ಲಮಾಣಿ, ಬಂಜಾರ 4. ಕೊರಮ, ಕೊರಚ ಇತ್ಯಾದಿ.
ಮೇಲಿನ ಮೊದಲೆರಡು ಗುಂಪುಗಳು ಅಸ್ಪೃಶ್ಯ ಸಮುದಾಯಗಳಾದರೆ, ಕೆಳಗಿನ ಎರಡು ಸಮುದಾಯಗಳು ಸ್ಪೃಶ್ಯ ಸಮುದಾಯಗಳು. ಅಂಬೇಡ್ಕರ್ ಅವರು ಪ್ರತಿಪಾದಿಸುವಂತೆ ಮೀಸಲಾತಿಯ ಪ್ರಮುಖ ಆಧಾರ ಅಸ್ಪೃಶ್ಯತೆ. ಅಸ್ಪೃಶ್ಯತೆಯ ಜೊತೆ, ಅಷ್ಟೇ ಸಮಾನವಾದ ಸಾಮಾಜಿಕ ಪಿಡುಗುಗಳಿಗೆ ಸಿಕ್ಕಿಕೊಂಡಿರುವ ಸಮುದಾಯಗಳನ್ನು ಪರಿಶಿಷ್ಟ ಜಾತಿಗಳ ಗುಂಪಿನಲ್ಲಿ ಸೇರಿಸಲಾಯಿತು. ಆರಂಭದ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಮಾದಿಗ, ಹೊಲೆಯ, ಕೊರಮ, ಕೊರಚ ಮತ್ತು ಕೆಲವು ಅಲೆಮಾರಿ ಜಾತಿಗಳನ್ನು ಮಾತ್ರ ಸೇರಿಸಲಾಗಿತ್ತು. ಕಾಲಾಂತರದಲ್ಲಿ ಸ್ಪಶ್ಯ ಜಾತಿಯಿಂದ ಭೋವಿ ಮತ್ತು ಅಲೆಮಾರಿ ಸಮುದಾಯವಾದ ಭೋವಿ ಮತ್ತು ಅಲೆಮಾರಿ ಸಮುದಾಯವಾದ ಲಮಾಣಿ-ಬಂಜಾರವನ್ನು ಸೇರಿಸಲಾಯಿತು. ಕನರ್ಾಟಕವನ್ನು ಹೊರತುಪಡಿಸಿದರೆ, ಭೋವಿ ಮತ್ತು ಲಂಬಾಣಿ ಜಾತಿಗಳು ಬೇರ್ಯಾವ ರಾಜ್ಯದಲ್ಲೂ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಇಲ್ಲ. ಅಸ್ಪೃಶ್ಯರಷ್ಟೇ ಆಥರ್ಿಕವಾಗಿ ಹಿಂದುಳಿದಿದ್ದರೂ, ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಮೂಲಕ ಅಸ್ಪೃಶ್ಯ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂಬ ದೂರು ಬಹಳ ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಆದರೆ, ಸದ್ಯ ರಾಜಕೀಯ ಕಾರಣಗಳಿಂದ ಈ ಪಟ್ಟಿಯನ್ನು ಪರಿಸ್ಕರಿಸುವ ಧೈರ್ಯವನ್ನು ಯಾವ ಸಕರ್ಾರವೂ ಮಾಡಲಾಗದ ಸ್ಥಿತಿ ಇದೆ. ಕನರ್ಾಟಕದಲ್ಲಿ ಮೊದಲಿಗೆ ಮೀಸಲಾತಿ ವಗರ್ೀಕರಣ ಮಾಡಬೇಕೆಂದು ಕೇಳಲಾರಂಭಿಸಿದ್ದು ಮಾದಿಗ ಸಮುದಾಯ. ಇದನ್ನು ಕೇಳಲು ಅವರಿಗಿದ್ದ ಸಮರ್ಥನೆ ಈ ಕೆಳಗಿನಂತಿದೆ.
ಮಾದಿಗ ಸಮುದಾಯ, ಪರಿಶಿಷ್ಟ ಜಾತಿಗಳ ಜನಸಂಖ್ಯೆಯಲ್ಲಿ ಶೇ.57.28ರಷ್ಟಿದೆ ಎಂಬ ವಾದವಿದೆ. ನಮ್ಮ ಜನಸಂಖ್ಯೆ ಪ್ರಮಾಣಕ್ಕೆ ಸರಿಯಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪಾಲು ದೊರೆತಿಲ್ಲ. ಆದ್ದರಿಂದ ಈಗಿರುವ ಸ್ಥಿತಿಯಲ್ಲೇ ಮುಂದುವರೆದರೆ, ನಮ್ಮ ಆಥರ್ಿಕ ಮತ್ತು ಸಾಮಾಜಿಕ ಪ್ರಗತಿ ಸಾಧ್ಯವಿಲ್ಲ. ಆದ್ದರಿಂದ ಒಳ ಮೀಸಲಾತಿ ಜಾರಿಗೊಳಿಸಿ ಎಂದು ಅದು ಪ್ರತಿಪಾದಿಸಿದೆ. ಪರಿಶಿಷ್ಟ ಜಾತಿಯಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಇರುವ ಸಮುದಾಯಕ್ಕೆ ಈ ವರೆಗೂ ಸಿಕ್ಕಿರುವ ಮೀಸಲಾತಿಯಲ್ಲಿ ಶೇ15ರಲ್ಲಿ ಸುಮಾರು 8ರಷ್ಟು ಪಾಲು ಸಿಗಬೇಕಾಗಿತ್ತು. ಆದರೆ, ಶೇ.2ರಷ್ಟು ಸಿಕ್ಕಿಲ್ಲವಾದ ಕಾರಣ ನಮ್ಮ ಸಂವಿಧಾನಾತ್ಮಕ ಪಾಲು ದೊರೆತಿಲ್ಲ. ಅದಕ್ಕಾಗಿ ಒಳಮೀಸಲಾತಿ ಜಾರಿಗೊಳಿಸಿ ಎಂದು ಈ ಸಮುದಾಯ ಒತ್ತಾಯಿಸುತ್ತಿದೆ.
ಶೈಕ್ಷಣಿಕವಾಗಿ ಕೂಡ ಗಣನಯ ಪ್ರಮಾಣದ ಅಕ್ಷರಸ್ಥರಿಲ್ಲ ಮತ್ತು ತೀವ್ರ ಶೈಕ್ಷಣಿಕ ಪ್ರಗತಿ ಸಾಧಿಸಿರುವ ಸಮುದಾಯಗಳ ಜೊತೆ ಸ್ಪಧರ್ಿಸಿ ವೃತ್ತಿಪರ ಶಿಕ್ಷಣ ಪಡೆಯುವುದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಸಮಾನತೆ ಸಾಧಿಸಲು ಒಳಮೀಸಲಾತಿಯೇ ಸದ್ಯದ ಪರಿಹಾರವೆಂದು ಈ ಸಮುದಾಯದ ಪರವಾಗಿ ವಾದಿಸಲಾಗುತ್ತಿದೆ.
ಮಾದಿಗ ಸಮುದಾಯದವರು ವ್ಯವಸಾಯದ ಜೊತೆ ಚರ್ಮದ ಕೆಲಸ ಮತ್ತು ಪೌರಕಾಮರ್ಿಕ ಕೆಲಸ ಮಾಡುತ್ತಿದ್ದಾರೆ. ಶ್ರಮಜೀವಿಗಳೂ, ಅನಕ್ಷರಸ್ಥರೂ ಆಗಿರುವ ಇವರು ಪರಿಶಿಷ್ಟ ಜಾತಿಯ ಉಳಿದ ಸಮುದಾಯಗಳ ಜೊತೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸ್ಪಧರ್ಿಸುವುದು ಸಾಧ್ಯವಿಲ್ಲವೆಂದು ಪ್ರತಿಪಾದಿಸಿ ಪಾರಂಪರಿಕ ಕಾರಣಗಳನ್ನೂ ನೀಡಲಾಗಿದೆ.
ಸಂವಿಧಾನದ ಆಶಯದಲ್ಲಿ ಶೇ.15ರ ಪ್ರಮಾಣದಲ್ಲಿ ಮೀಸಲಾತಿ ನಿಗದಿ ಮಾಡಿರುವುದು ಜನಸಂಖ್ಯೆ ಪ್ರಮಾಣದಲ್ಲಿ. ಆದ್ದರಿಂದ ಅದೇ ಅನುಪಾತದಲ್ಲಿ ಜನಸಂಖ್ಯಾಧಾರಿತ ಒಳಮೀಸಲಾತಿ ಜಾರಿಗೊಳಿಸಿದರೆ, ಯಾರಿಗೂ ಅನ್ಯಾಯವಾಗುವುದಿಲ್ಲ ಎಂಬ ವಾದ ಬಲವಾಗಿದೆ. ಒಳ ಮೀಸಲಾತಿಯನ್ನು ವಿರೋಧಿಸುವ ಗುಂಪು ಇದನ್ನು ಮಾನವೀಯ ಅಂತಕರಣದಿಂದ ನೋಡದೆ, ತಾಂತ್ರಿಕ ಕಾರಣಗಳನ್ನು ನಡಿ ವಿರೋಧಿಸುತ್ತಿದೆ. ಕೆಲವರು ಇದನ್ನು ದಲಿತ ಒಗ್ಗಟ್ಟನ್ನು ಕೆಡಿಸುವ ರಾಜಕೀಯ ಕ್ರಮ ಎನ್ನುತ್ತಾರೆ. ಹಲವರು ಈ ಸಮುದಾಯಗಳ ಮಧ್ಯೆ ಹೇಳಿಕೊಳ್ಳುವಷ್ಟು ಅಂತರ ಇಲ್ಲವೆಂತಲೂ, ಇದನ್ನು ಕೆಲವು ಸ್ವಾರ್ಥ ರಾಜಕಾರಣಿಗಳು ಹುಟ್ಟುಹಾಕಿರುವ ತಂತ್ರವೆಂದೂ ಅಲ್ಲಗೆಳೆಯುತ್ತಿದ್ದಾರೆ.
ಕನರ್ಾಟಕದಲ್ಲಿ 1975ರಿಂದ ಹುಟ್ಟಿಕೊಂಡ ದಲಿತ ಸಂಘರ್ಷ ಸಮಿತಿ, ಸ್ವಲ್ಪಮಟ್ಟಿಗೆ ಅಸ್ಪೃಶ್ಯ ಸಮುದಾಯಗಳ ಮಧ್ಯೆ ತೋರಿಕೆಯ ಒಗ್ಗಟ್ಟನ್ನು ಸಾಧಿಸಲು ಯಶಸ್ವಿಯಾಗಿತ್ತು. ದಲಿತರೆಂದು ಕರೆಯುವ ಮೂಲಕ ಅಸ್ಪೃಶ್ಯರು ಮತ್ತು ಇತರೆ ಪರಿಶಿಷ್ಟ ಜಾತಿಗಳೆಲ್ಲರಿಗೂ ದಲಿತರೆಂಬ ವಿಶಾಲ ಅರ್ಥದ ಪದವನ್ನು ಬಳಸುವ ಮೂಲಕ ಒಳಗುದಿಯನ್ನು ಅದುಮಿ ಇಡಲಾಗಿತ್ತು.
ವಿದ್ಯಾವಂತ ಅಸ್ಪೃಶ್ಯರು ತಮ್ಮ ಸವಲತ್ತು, ಬಡ್ತಿಗಾಗಿ ಒಂದಾಗಿ ಹೋರಾಡುತ್ತಿದ್ದರೂ, ಅನಕ್ಷರಸ್ಥ ಅಸ್ಪೃಶ್ಯರ ನಡುವಿನ ಜಾತಿಗಳ ಪ್ರತ್ಯೇಕತೆ ನರಂತರವಾಗಿ ಮುಂದುವರೆದಿತ್ತು. ಹೊಲೆಯ ಮತ್ತು ಮಾದಿಗ ಸಮುದಾಯಗಳ ನಡುವೆ ವಿವಾಹ ಸಂಬಂಧಗಳೇರ್ಪಡಲಿಲ್ಲ. ಒಟ್ಟಿಗೆ ಬಾಳುವ ಯಾವುದೇ ಸಂಬಂಧಗಳಿಲ್ಲದಿದ್ದರೂ, ಅವು ಎರಡು ಪ್ರತ್ಯೇಕ ಜಾತಿಗಳಾಗಿದ್ದಾಗಲೂ ಒಂದೇ ಎಂಬ ಹುಸಿ ಭಾವನೆಯನ್ನು ಬಿತ್ತಲಾಗಿತ್ತು.
ದಲಿತ ಸಂಘರ್ಷ ಸಮಿತಿಯು ಜಾತಿ, ವ್ಯಕ್ತಿಪ್ರತಿಷ್ಟೆ, ಸ್ವಾರ್ಥದಿಂದ ಅನೇಕ ಗುಂಪುಗಳಾಗಿದ್ದಾಗಲೂ ಏಕತೆಯನ್ನು ಸಾಧಿಸಲಾಗದಿದ್ದರೂ, ಒಳಮೀಸಲಾತಿ ಪ್ರಶ್ನೆ ಬಂದಾಗ ಅಸ್ಪೃಶ್ಯ ಜಾತಿಗಳು ಒಂದು ಎಂಬ ಅಭಿಪ್ರಾಯವನ್ನು ಬಿತ್ತನೆ ಮಾಡಲಾಯಿತು. ಅಸ್ಪೃಶ್ಯರ ಒಗ್ಗಟ್ಟನ್ನು ಕಾಪಾಡಲು ಅವರಿಗೆ ಸಮಪಾಲು ನಡುವುದೇ ಪರಿಹಾರ ಎಂಬ ವಾದವನ್ನು ಎಲ್ಲ ಪ್ರಗತಿಪರರೂ ಒಪ್ಪುತ್ತಾರೆ. ಆಂಧ್ರಪ್ರದೇಶದಲ್ಲಿ ಮಾದಿಗರ ಒಳಮೀಸಲಾತಿ ಹೋರಾಟಕ್ಕೆ ಪ್ರಗತಿಪರ ಮೂಲಸಮುದಾಯದ ಗದ್ದರ್ ಮುಂತಾದವರು ಬೆಂಬಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಕನರ್ಾಟಕದಲ್ಲಿ ದಲಿತ ಸಂಘರ್ಷ ಸಮಿತಿಯ ಒಂದು ಗುಂಪು ಅಂದರೆ, ಶ್ರೀಧರ ಕಲಿವೀರ, ಜಯಣ್ಣ ಮುಂತಾದವರು ಒಳಮೀಸಲಾತಿ ಹೋರಾಟಕ್ಕೆ ಬೆಂಬಲಿಸಿದ್ದು ಅಪರೂಪದ ಘಟನೆ. ಆದರೆ, ಕನರ್ಾಟಕದ ಪ್ರಸಿದ್ದ ದಲಿತ ಲೇಖಕರು, ಚಿಂತಕರು, ವಿಚಾರವಂತರು ಇದರ ಬಗ್ಗೆ ಮೌನ ವಹಿಸಿದ್ದು ಇಲ್ಲವೇ ದಾರಿತಪ್ಪಿಸುವ ಹೇಳಿಕೆ ನೀಡಿದ್ದು ಇತಿಹಾಸದಲ್ಲಿ ದಾಖಲಾಗಿದೆ.
ಈ ಸವಲತ್ತುಗಳನ್ನು ಪಡೆದಿರುವವರ, ನಾವು ಹೆಚ್ಚು ಅಂಕ ಪಡೆದು ಉದ್ಯೋಗ ಪಡೆದಿದ್ದೇವೆ ಎಂಬ ವಾದವಂತೂ ಹಿಂದೂಗಳ ಜಾತಿ ಪರವಾದ ವಾದದಂತೆಯೇ ಕೇಳಿಸುತ್ತದೆ. ಕೆಲವರು ಜಾಗತೀಕರಣದಿಂದ ಮೀಸಲಾತಿಯೇ ಅಪ್ರಸ್ತುತವಾಗಿರುವಾಗ ಒಳಮೀಸಲಾತಿಗೆ ಅರ್ಥವಿದೆಯೇ ಎಂಬ ಮೊಂಡುವಾದ ಮಾಡುತ್ತಿದ್ದಾರೆ. ಆಂಧ್ರಪ್ರದೇಶದಲ್ಲಿ ಒಳಮೀಸಲಾತಿ ಜಾರಿಯಲ್ಲಿದ್ದ ಅವಧಿಯಲ್ಲಿ ಒಂದು ಉದ್ಯೋಗ ಸಿಗದಿದ್ದ ಅಲ್ಪಸಂಖ್ಯಾತ ದಲಿತ ಸಮುದಾಯಗಳಿಗೆ ಉದ್ಯೋಗ ಮತ್ತು ಎಂಜಿನಯರಿಂಗ್, ಮೆಡಿಕಲ್ ಸೀಟುಗಳು ಸಿಗಲಾರಂಭಿಸಿದವು. ಈ ಸತ್ಯವನ್ನು ತಿಳಿದಿರುವ ಮಾದಿಗ ಮತ್ತಿತರ ಸಮುದಾಯಗಳು ಒಳಮೀಸಲಾತಿಯನ್ನು ಜಾರಿಗೊಳಿಸದೆ ಸಮಾನ ಬೆಳವಣಿಗೆ, ಸಾಮಾಜಿಕ ನ್ಯಾಯ ಸಾಧ್ಯವಿಲ್ಲವೆಂಬ ಅಭಿಪ್ರಾಯಕ್ಕೆ ಬಂದಿವೆ. ಇದರಿಂದ ಪರಸ್ಪರ ಅನುಮಾನ, ದ್ವೇಷ ಹುತ್ತಗಟ್ಟುತ್ತಿದೆ. ಇದನ್ನು ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿವೆ. ಪರಿಶಿಷ್ಟ ಜಾತಿಯಲ್ಲಿರುವ ಜಾತಿಗಳನ್ನು ವಿಭಜಿಸುವ ಮೂಲಕ ಅಧಿಕಾರಕ್ಕೆ ಬರುವ ತಂತ್ರವನ್ನು ಕೋಮುವಾದಿ ಪಕ್ಷಗಳು ಬಳಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಜಾತ್ಯಾತೀತ ಪಕ್ಷಗಳು ಸತ್ಯಕ್ಕೆ ಕಣ್ಣುಮುಚ್ಚುವ ಮೂಲಕ ಪರಿಶಿಷ್ಟ ಜಾತಿಗಳ ಒಗ್ಗಟ್ಟು ಮತ್ತು ಸಾಮಾಜಿಕ ನ್ಯಾಯವನ್ನು ಏಕಕಾಲಕ್ಕೆ ತಿರಸ್ಕರಿಸುತ್ತಿವೆ.
ಜಾತ್ಯಾತೀತ ರಾಜಕಾರಣದ ಕನಸು ಕಾಣಲು ಯಾರಾದರೂ ಸರಿ, ಪರಿಶಿಷ್ಟ ಜಾತಿಗಳ ಸಮಸ್ಯೆಗಳ ಚಚರ್ೆಯನ್ನು ಹಲವು ಕೋನಗಳಲ್ಲಿ ಗಮನಸಬೇಕು. ಎಲ್ಲ ರಾಜಕೀಯ ಪಕ್ಷಗಳೂ ಜಾತಿ ಪ್ರಶ್ನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸಾಮಾನ್ಯವಾದದ್ದು. ಅವರು ಸಂತರಲ್ಲ. ಸಂತರೇ ಜಾತಿ ರಾಜಕಾರಣದ ದಾಳಗಳಾಗಿರುವ ಈ ಸಂದರ್ಭದಲ್ಲಿ ರಾಜಕೀಯ ಚಿಂತಕರು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಇಲ್ಲವಾದರೆ, ಕೋಮುವಾದಿಗಳು ಮತ್ತೇ ಅಧಿಕಾರ ಹಿಡಿಯಲು, ಮುಂದುವರಿಯಲು ಜಾತ್ಯಾತೀತರೇ ಕಾರಣರಾಗುತ್ತಾರೆ. ಇದು ಈವತ್ತಿನ ಸತ್ಯ.
(ಕೃಪೆ : ಪ್ರಜಾವಾಣಿ ದಲಿತ ವಿಶೇಷ ಸಂಚಿಕೆ.)
ಬಾಲಕಾರ್ಮಿಕನೆಂಬ ಬಾಲಕುಸುಮ..
ಡಾ|| ಅಂಬಿಕಾವತಿ.ಎಂ |
ಗಗನಚುಂಬಿ ಕಟ್ಟಡದ ನಿಮರ್ಾಣಕ್ಕೆ ತಳಪಾಯ ಹಾಕುವ ಕಲ್ಲನ್ನು ಹೊರುವ ಮಕ್ಕಳು, ಮರಳಿನ ಕಣಕಣದಲ್ಲೂ ಸೇರಿಕೊಂಡು, ತಮ್ಮ ವಯಸ್ಸಿಗೆ ಮೀರಿದ ಸಾಮಥ್ರ್ಯವನ್ನು ಪ್ರದಶರ್ಿಸಬೇಕಾದಂತಹ ದುಃಸ್ಥಿತಿ ಎದುರಾಗಿರುವುದು ವಿಪರ್ಯಾಸವಲ್ಲವೇ?
ಎಲ್ಲರೊಡನೊಡಗೂಡಿ, ಅಪ್ಪ-ಅಮ್ಮನನ್ನು ಗೋಗೆರೆದು, ಹೋಟೆಲ್ನಲ್ಲಿ ತನಗೆ ಏನೆಲ್ಲಾ ಬೇಕೋ ಅದೆಲ್ಲವನ್ನು ತರಿಸಿ ತಿನ್ನಬೇಕಾದ ಮಗು, ದುರಾದೃಷ್ಟಾವಶತ್ ಇಂದು ಯಾರೋ ಅಧಿಕಾರ ಅಂತಸ್ತುಗಳ ಅಮಲಿನಲ್ಲಿ ಅರ್ಧತಿಂದು, ಅರ್ಧಬಿಟ್ಟಿರುವ ತಟ್ಟೆಯನ್ನು ತನ್ನ ಪುಟ್ಟ ಕೈಗಳಲ್ಲಿ ತೊಳೆಯಬೇಕಾಗಿ ಬಂದಿದೆ.
ಅಷ್ಟೇ ಅಲ್ಲ, ಬೀದಿ-ತಳ್ಳುವ ಗಾಡಿಯಲ್ಲಿ ತಯಾರಾಗುವ ಜಂಕ್ ಪುಡ್, ಲಘುಉಪಹಾರ ಬಳಕೆಯಲ್ಲಿ ಚಿಕ್ಕಮಕ್ಕಳನ್ನು ಬಳಸಲಾಗುತ್ತದೆ.ಬೀದಿ ಕಸಗುಡಿಸುವುದು, ಕಾಖರ್ಾನೆ, ಮನೆಗಳ ನಿಮರ್ಾಣದ ಕೆಲಸಗಳಲ್ಲಿ ಇಟ್ಟಿಗೆ, ಕಲ್ಲುಗಳನ್ನು ಹೊತ್ತುಕೊಂಡು ಹೋಗುವುದು, ದಿನ ಬೆಳಗಾದರೆ ನಾವು ಓದುವ ದಿನಪತ್ರಿಕೆಯನ್ನು ಮನೆಮನೆಗಳಿಗೆ ತಲುಪಿಸುವುದು, ಕಬ್ಬಿನ ಹಾಲಿನ ಅಂಗಡಿ, ಹೆಸರಾಂತ ಮತ್ತು ಸಾಮಾನ್ಯ ಹೋಟೆಲ್ಗಳು ಇತ್ಯಾದಿ ಎಲ್ಲಕಡೆಗಳಲ್ಲಿಯೂ ಇಂದು ಬಾಲಕಾಮರ್ಿಕರು ಬಳಕೆಯಾಗುತ್ತಿದ್ದಾರೆ.
ಸಕರ್ಾರಗಳು ಅದೆಷ್ಟೋ ಕಾನೂನುಗಳನ್ನು ಜಾರಿಗೆ ತಂದರೂ ಸಹ ಬಾಲಕಾಮರ್ಿಕ ಪದ್ದತಿಯನ್ನು ಹೋಗಲಾಡಿಸಲು ಸಾಧ್ಯವಾಗಿಲ್ಲ. ಸಂಘ ಸಂಸ್ಥೆಗಳು, ಪ್ರಗತಿಪರರು ಸಾಕಷ್ಟು ಹೋರಾಟ, ಪ್ರತಿಭಟನೆ, ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದಾಗ್ಯೂ ಬಾಲಕಾಮರ್ಿಕ ಪದ್ದತಿ ನಿಯಂತ್ರಣಕ್ಕೆ ಬಾರದಿರುವುದು ದುರಂತ.
ಸ್ನೇಹಿತರೇ....
ಮರಳಿ ಬಾ ಶಾಲೆಗೆ" ಎಂಬ ಸಕರ್ಾರಿ ಯೋಜನೆ ಸಕರ್ಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಉಚಿತ ಶಿಕ್ಷಣ, ಊಟ ಎಲ್ಲವನ್ನು ಒದಗಿಸಿದೆ. ಆದರೂ ಕೂಡ ಸಕರ್ಾರಿ ಶಾಲೆಗಳಲ್ಲಿ ದಿನೇ ದಿನೇ ಹಾಜರಾತಿ ಕಡಿಮೆಯಾಗುತ್ತಿದೆ. ದಾಖಲಾತಿಗಳಲ್ಲಿ ಮಕ್ಕಳ ಸಂಖ್ಯೆಯೂ ಇಳಿಮುಖವಾಗುತ್ತಿದೆ. ಶೈಕ್ಷಣಿಕ ವರ್ಷಗಳಲ್ಲಿಯೇ ಮಕ್ಕಳು ಶಾಲೆಗಳನ್ನು ಬಿಟ್ಟು ಹೋಗುತ್ತಿದ್ದಾರೆ. ಶಾಲೆ ಕಲಿಯದ ಮಕ್ಕಳನ್ನು ಪತ್ತೇ ಹಚ್ಚಲು ಸಕರ್ಾರ ಹತ್ತಾರು ಸಮೀಕ್ಷೆಯನ್ನು ಮಾಡಿದೆ. ಅದರ ಫಲಿತಾಂಶವನ್ನು ನೋಡಿದರೆ, ನಮಗೆ ಅಲ್ಲಿಯೂ ನಿರಾಶೆ ಕಾಡುತ್ತದೆ.
ಸುಸ್ಥಿತಿಯ ಮಕ್ಕಳಿಗೆ ಹತ್ತಾರು ಆರೋಗ್ಯದ ಸಮಸ್ಯೆಗಳಿರುವಾಗ ಇನ್ನು ಬಾಲ ಕಾಮರ್ಿಕ ಸಮಸ್ಯೆಗಳು ಕೇಳುವಂತೆಯೇ ಇಲ್ಲ. ಹೋಟೆಲ್, ಬಸ್ನಿಲ್ದಾಣ, ಸಾರ್ವಜನಿಕ ಸ್ಥಳಗಳೇ ಬಾಲಕಾಮರ್ಿಕರಿಗೆ ಆಶ್ರಯತಾಣವಾಗಿರುವದರಿಂದ ದೂಳು, ಕಲುಷಿತ ನೀರು, ಕಳಪೆಮಟ್ಟದ ಆಹಾರ ಎಲ್ಲವನ್ನು ಸೇವಿಸಿ ಶ್ವಾಸಕೋಶ ಸಂಬಂಧಿ ಹಲವು ಕಾಯಿಲೆಗಳಿಗೆ ತುತ್ತಾಗುತ್ತಾರೆ.
ದೇಶದಲ್ಲಿ ನಡೆದ ಹಲವಾರು ಸಮೀಕ್ಷೆಗಳಲ್ಲಿ ಹುಟ್ಟುವ ಮಕ್ಕಳೇ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆಂಬ ವರದಿ ಇದೆ. ಆದರೆ, ಇಲ್ಲಿ ಪ್ರತಿಯೊಬ್ಬ ಬಾಲಕಾಮರ್ಿಕರು ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ.
ದೈಹಿಕವಾಗಿ ಕಾಡುವ ಈ ಕಾಯಿಲೆಗಳ ಹೊರತಾಗಿ ಮನಸ್ಸನ್ನು ದಿನೇ ದಿನೇ ಕುಗ್ಗಿಸುವ, ತನ್ನ ಜೊತೆಗಾರರ ಜೊತೆಯಲ್ಲಿ ಆಟ-ಪಾಠಗಳಿಂದ ವಂಚಿತರಾಗುವ ಪ್ರಮೇಯಗಳೇ ಹೆಚ್ಚು.
ಹೂವೊಂದು ತಾನು ಅರಳಿ ಸುಗಂಧವನ್ನು ಎಲ್ಲೆಡೆ ಹರಡುವ ಬದಲಿಗೆ ಅರಳುವ ಮುನ್ನವೇ ಮುದುಡುವ ಪರಿಯಂತಾಗಿದೆ ಬಾಲಕಾರ್ಮಿಕ ಬದುಕು.
ಆತ್ಮೀಯರೇ ನನ್ನ ಆಶಯವಿಷ್ಟೆ !
ಬಾಲಕ-ಬಾಲಕಿಯರನ್ನು ಅವರ ಆಟ-ಊಟ-ಪಾಠಗಳಿಂದ ವಂಚಿತರನ್ನಾಗಿಸುವ ಪ್ರತಿಯೊಬ್ಬರಿಗೂ ಶಿಕ್ಷೆಯಾಗಲೀ, ಈ ಮಕ್ಕಳೆಲ್ಲಾ ಶಾಲೆಗಳಿಗೆ ತೆರಳಿ ಪುಸ್ತಕಗಳ ಪುಟಗಳನ್ನು ತಿರುವಿ, ಜ್ಞಾನವಂತರಾಗಿ ದೇಶಕ್ಕೆ ವಿವೇಕಾನಂದ, ಸರ್.ಎಂ.ವಿಶ್ವೇಶ್ವರಯ್ಯ, ಡಾ|| ಎ.ಪಿ.ಜೆ. ಅಬ್ದುಲ್ ಕಲಾಂರಂತಹ ಅಮೂಲ್ಯ ರತ್ನಗಳಾಗಿ ಪರಿವರ್ತನೆ ಹೊಂದಲಿ.
ದೇಶ ಕಾಯುವ ವೀರಯೋಧರಾಗಲಿ ಹೊರತು ಕಾಖರ್ಾನೆಗಳ ಮುಂದೆ ನಿಲ್ಲುವ ಜವಾನನಾಗುವುದು ಬೇಡ, ಹಲವರ ಪ್ರಾಣವನ್ನು ಉಳಿಸುವ ವೈದ್ಯನಾಗಲಿಯೇ ಹೊರತು ಕೈಗಾರಿಕೆ ಕಟ್ಟಡಗಳಲ್ಲಿ ಸಿಲುಕಿ ನರಳುವವನಾಗುವುದು ಬೇಡ, ಸಮಾಜವನ್ನು ತಿದ್ದುವ ಉತ್ತಮ ಶಿಕ್ಷಕನಾಗಲಿ, ಕಾನೂನನ್ನು ರಕ್ಷಣಿ ಮಾಡುವ ಪೊಲೀಸ್ ಅಧಿಕಾರಿಯಾಗಲಿ, ಅದು ಬಿಟ್ಟು ಚಿಕ್ಕಮಕ್ಕಳು ಬಾಲಕಾಮರ್ಿಕತೆಯ ಬಂಧನಲ್ಲಿ ಸಿಲುಕುವುದು ಬೇಡವೆಂದು ಹೇಳುತ್ತೇನೆ.. ಏನಂತೀರಿ..?
ವಿಶ್ವದಾದ್ಯಂತ ಪ್ರತಿ ವರ್ಷ ಜೂನ್ ತಿಂಗಳನ್ನು ಆ್ಯಂಟಿ ಚೈಲ್ಡ್ ಲೇಬರ್ ಡೇ ಎಂದು ಆಚರಿಸಲಾಗುತ್ತದೆ. ಎಲ್ಲರೂ ಕೈ ಜೋಡಿಸಿ ಬಾಲಕಾಮರ್ಿಕ ಎಂಬ ರೋಗವನ್ನು ಹೋಗಲಾಡಿಸಲು ಪ್ರಯತ್ನಿಸೋಣ..!
ಕರುಣಾಳು ಬಾ ಬೆಳಕೆ, ಮುಸುಕಿನ ಮಬ್ಬಲಿ ಕೈ ಹಿಡಿದು ನಡೆ ಸುಮ್ಮನೆ
ಡಾ|| ಅಂಬಿಕಾವತಿ.ಎಂ.
ಶಸ್ತ್ರ ಚಿಕಿತ್ಸಕರು,
ಶ್ರೀ ದೇವರಾಜ ಅರಸು ಮೆಡಿಕಲ್ ಕಾಲೇಜು ಕೋಲಾರ.
ambikaashri67@live.com
ಅಂಥ ನೋವಲ್ಲೂ ನಗುವ ಸಾಮಥ್ರ್ಯ ಅವರಿಗಲ್ಲದೆ ಇನ್ನಾರಿಗಿರಲು ಸಾಧ್ಯ? ಏ.ಕೆ ಕುಕ್ಕಿಲ
ಸಹೋದರಿಯೋರ್ವರು ಈ ಇ-ಮೇಲ್ನ್ನು ಕಳುಹಿಸಿದ್ದರು.
AK Kukkilai |
ಮಗನೇ, ಇದನ್ನೂ ಉಣ್ಣು, ನನಗೆ ಹಸಿವಿಲ್ಲ...
2) ಒಂದು ದಿನ ನಾನು ಊಟ ಮಾಡುತ್ತಾ ಇದ್ದೆ. ಅಮ್ಮ ಹತ್ತಿರ ಕೂತಿದ್ದಳು. ಮೀನು ಪದಾರ್ಥ ಎಂದರೆ ನನಗಿಷ್ಟ ಅಂತ ಅಮ್ಮನಗೆ ಗೊತ್ತು. ಒಂದು ಮೀನನ್ನು ಖರೀದಿಸಿ, ಮೂರು ತುಂಡು ಮಾಡಿ, ಮೂರನ್ನು ಒಂದು ಪಿಂಗಾಣಿಯಲ್ಲಿ ಹಾಕಿ ನನ್ನ ಹತ್ತಿರ ಇಟ್ಟಿದ್ದಳು. ನಾನು ನನ್ನ ಪಿಂಗಾಣಿಯಿಂದ ಒಂದು ತುಂಡು ಮೀನನ್ನು ಅಮ್ಮನ ತಟ್ಟೆಗೆ ಹಾಕಿದೆ. ಅಮ್ಮ ಒಪ್ಪಲಿಲ್ಲ. ನಾನೂ ಬಿಡಲಿಲ್ಲ. ಬರೇ ಸಾರಲ್ಲಿ ಯಾಕೆ ಊಟ ಮಾಡುತ್ತೀ, ನಂಗೆ ಎರಡು ತುಂಡು ಸಾಕು ಎಂದೆ. ಅಮ್ಮ ಕೇಳಲಿಲ್ಲ. ಆಕೆ ಅಂದಳು,
ನಂಗೆ ಮೀನು ಇಷ್ಟ ಇಲ್ಲ ಮಗನೇ, ನನೆ ತಿನ್ನು.
3) ನಾನು ಕಣ್ಣು ಬಿಡುವ ಹಂತದಲ್ಲೇ ಅಪ್ಪ ತೀರಿ ಹೋಗಿದ್ದರು. ಆದ್ದರಿಂದ ಎಲ್ಲ ಜವಾಬ್ದಾರಿಯನ್ನೂ ಅಮ್ಮನೇ ಹೊತ್ತುಕೊಳ್ಳಬೇಕಾಯಿತು. ಅವರಿವರ, ಅಕ್ಕಪಕ್ಕದವರ ಸಾಂತ್ವನದ ಮಾತುಗಳು ಹೊಟ್ಟೆ ತುಂಬಿಸುವುದಿಲ್ಲವಲ್ಲವೇ? ಅದು ಅಮ್ಮನಗೂ ಗೊತ್ತು. ಕಂಪೆನಯಿಂದ ಬೆಂಕಿಪೊಟ್ಟಣಗಳನ್ನು ತಂದು ಅದರೊಳಗೆ ಕಡ್ಡಿಗಳನ್ನು ತುಂಬಿಸುವ ಕೆಲಸವನ್ನು ಅಮ್ಮ ಮಾಡತೊಡಗಿದಳು. ಹಾಗಂತ ತುಂಬಿಸಿದ ಕಡ್ಡಿಗಳಷ್ಟೇ ಸಂಖ್ಯೆಯಲ್ಲಿ ಪೈಸೆಗಳೂ ಸಿಗುತ್ತವೆ ಅಂದುಕೊಳ್ಳಬೇಡಿ. ರಾತ್ರಿ-ಹಗಲು ತುಂಬಿಸಿದರೂ ಮೂಲಭೂತ ಅಗತ್ಯಗಳನ್ನು ಪೂರೈಸುವಷ್ಟು ದುಡ್ಡು ಸಿಗುವುದು ಕಡಿಮೆ. ಇಷ್ಟುಕ್ಕೂ ಕೈ ತುಂಬಾ ಕೆಲಸವಾದರೂ ಇದ್ದರೆ ತಾನೇ! ಒಂದು ರಾತ್ರಿ ಅಮ್ಮ ಬೆಂಕಿ ಪೊಟ್ಟಣಗಳಿಗೆ ಕಡ್ಡಿಗಳನ್ನು ತುಂಬಿಸುವಲ್ಲಿ ಮಗ್ನಳಾಗಿದ್ದಳು. ನನಗೋ ವಿಪರೀತ ನದ್ದೆ. ನಾನು ಹೇಳಿದೆ,
ಸಾಕಮ್ಮ, ಮಲಗು. ನದ್ದೆ ಬರ್ತಿದೆ.
ಅಮ್ಮ ನಗುತ್ತಾ ಹೇಳಿದಳು,
ನನು ಮಲಗು ಮಗನೇ, ನನಗೆ ನದ್ದೆ ಬರ್ತಿಲ್ಲ.
4) ಅಮ್ಮನಗೆ ಚಾ ಅಂದರೆ ತುಂಬಾ ಇಷ್ಟ. ಹಾಲು ಸೇರಿಸದ ಚಹಾವನ್ನು ಒಂದು ಕಡೆ ಇಟ್ಟು, ಇನ್ನೊಂದು ಕಡೆ ಬೆಂಕಿಪೊಟ್ಟಣವನ್ನು ಇಡುವುದು ಆಕೆಯ ರೂಡಿ. ನನಗಾದರೋ ಚಹಾ ಅಷ್ಟಕಷ್ಟೇ. ಮನೆಯಲ್ಲಿ ಏನು ಇಲ್ಲದಿದ್ದರೂ ಚಹಾ ಒಂದು ಇರುತ್ತದೆ ಎನ್ನುವಷ್ಟರ ಮಟ್ಟಿಗೆ ಅಮ್ಮ ಚಹಾದೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದಳು. ಒಂದು ದಿನ ಅಮ್ಮನ ಬಳಿ ಒಂದೇ ಗ್ಲಾಸು ಇತ್ತು. ಸಕ್ಕರೆ, ಚಹಾದ ಡಬ್ಬಿಗಳು ಖಾಲಿಯಾಗಿದ್ದವು. ಬರೇ ನರಿನಂದ ಚಹಾ ಮಾಡಲು ಆಗುವುದಿಲ್ಲ. ಆದರೆ, ಅಮ್ಮ ನನಗೆ ಕೊಟ್ಟಳು. ನಾನು ಮತ್ತೇ ಅಮ್ಮನ ಬಳಿಗೆ ಸರಿದೆ. ಅಮ್ಮ ಹೇಳಿದಳು,
ನಂಗೆ ಚಹಾ ಇಷ್ಟ ಅಲ್ಲ, ಮಗನೇ ನನು ಕುಡಿ.
5) ಅಪ್ಪ ಸಾವಿಗೀಡಾದಾಗ ಅಮ್ಮನೇನು ಮುದುಕಿ ಆಗಿರಲಿಲ್ಲ. ಅಮ್ಮನಲ್ಲಿ ತಾರುಣ್ಯ ಇನ್ನೂ ಇತ್ತು. ಸಂಬಂಧಿಕರು, ನೆರೆ-ಹೊರೆಯವರೆಲ್ಲ ಮರು ಮದುವೆಯಾಗುವಂತೆ, ಬದುಕಿಗೊಂದು ಆಸರೆ ಕಂಡುಕೊಳ್ಳುವಂತೆ ಒತ್ತಾಯಿಸುತ್ತಿದ್ದರು. ಕೆಲವೊಂದು ಪ್ರಸ್ತಾಪಗಳೂ ಬಂದುವು. ನನ್ನಜ್ಜಿಯೇ ಅಮ್ಮನಲ್ಲಿ ಮದುವೆಯ ಬಗ್ಗೆ ಮಾತುಕತೆ ಆಡಿದ್ದನ್ನು, ಒಂದು ಬಗೆಯ ಒತ್ತಡ ಹೇರಿದ್ದನ್ನು ನಾನು ಕೇಳಿದ್ದೆ. ಅಂತ ಸಂದರ್ಭಗಳಲ್ಲೆಲ್ಲಾ ಅಮ್ಮ ರಾತ್ರಿ ನನ್ನ ಎಂದಿಗಿಂತ ಹೆಚ್ಚು ಪ್ರೀತಿಸುತ್ತಿದ್ದಳು. ಬೆಂಕಿಪೊಟ್ಟಣಗಳನ್ನು ಪಕ್ಕಕ್ಕಿಟ್ಟು ನನ್ನ ತಲೆ ಸವರುತ್ತಾ, ನನಗೆ ನದ್ದೆ ಹತ್ತುವವರೆಗೂ ಪಕ್ಕವೇ ಮಲಗುತ್ತಿದ್ದಳು. ಅಮ್ಮ ಕೆಲವಾರು ಬಾರಿ ಕಣ್ಣೀರಿಳಿಸುತ್ತಿದ್ದದನ್ನು ನಾನು ಕಂಡಿದ್ದೇ. ನನ್ನನ್ನು ಕಂಡ ಕೂಡಲೇ ಬಾ ಮಗು ಎಂದು ಹತ್ತಿರ ಕೂರಿಸುತ್ತಿದ್ದಳು. ಏನು ಆಗಿಲ್ಲವೆಂಬಂತೆ ನಗುತ್ತಿದ್ದಳು. ಒಂದು ದಿನ ಅಮ್ಮನೊಂದಿಗೆ ನನ್ನಜ್ಜ, ಅಜ್ಜಿ ಮಾತನಾಡುತ್ತಿದ್ದರು. ಬಹುಶಃ ಮರುಮದುವೆಯ ಬಗ್ಗೆಯೇ ಇದ್ದಿರಬೇಕು. ಅಮ್ಮ ಇಷ್ಟು ಹೇಳಿದ್ದು ನನಗೆ ಕೇಳಿಸಿತು.
ಈ ವಿಷಯದಲ್ಲಿ ನವು ನನ್ನನ್ನು ಒತ್ತಾಯಿಸಬಾರದು. ನನ್ನ ಮಗುವಿನೊಂದಿಗೆ ನಾನು ಸಂತಸದಿಂದ್ದೇನೆ. ಮದುವೆ ಬಿಟ್ಟು ಬೇರೆನಾದರೂ ಮಾತನಾಡಿ ಪ್ಲೀಸ್.
6. ನಾನು ಕಲಿತೆ, ದೂರದ ಊರಿನಲ್ಲಿ ಒಳ್ಳೆಯ ಉದ್ಯೋಗವು ಸಿಕ್ಕಿತು. ಅಮ್ಮನನ್ನು ಬಿಟ್ಟು ಹೋಗುವದಕ್ಕೆ ಮನಸ್ಸು ಒಪ್ಪಲೇ ಇಲ್ಲ. ಹಾಗಂತ ಕರೆದರೆ ಅಮ್ಮ ಬರುತ್ತಾನೂ ಇಲ್ಲ. ನಾನು ಉದ್ಯೋಗಕ್ಕೆ ಹೋಗಲು ಹಿಂದೇಟು ಹಾಕಿದಾಗ ಅಮ್ಮನೇ ಮುಂದೆ ನಂತು ಧೈರ್ಯ ಹೇಳಿದಳು. ನನ್ನ ಕಣ್ಣೀರು ಒರೆಸಿ ಬೀಳ್ಕೊಟ್ಟಳು. ಟೆಲಿಗ್ರಾಮ್ ಮಾಡ್ತಿರು ಅಂದಳೂ. ಪ್ರತಿ ಸಂಬಳ ಪಡೆಯುವಾಗಲೂ ಬಾಲ್ಯದಲ್ಲಿ, ನನ್ನ ಶಿಕ್ಷಣದ ಸಂದರ್ಭದಲ್ಲಿ ಅಮ್ಮ ಮಾಡಿದ ತ್ಯಾಗ, ಸಹನೆ, ಸಂಕಷ್ಟಗಳು ನೆನಪಾಗುತ್ತಾ ಕಣ್ಣು ಒದ್ದೆಯಾಗುತ್ತಿತ್ತು. ಅದೇ ಉತ್ಸಾಹದಲ್ಲಿ ದುಡ್ಡನ್ನೆಲ್ಲ ಅಮ್ಮನಗೆ ಕಳುಹಿಸಿಕೊಡುತ್ತಿದ್ದೆ. ಆದರೆ, ಅಮ್ಮ ದುಡ್ಡನ್ನು ಸ್ವೀಕರಿಸುತ್ತಲೇ ಇರಲಿಲ್ಲ. ಕಳುಹಿಸಿದ ದುಡ್ಡೆಲ್ಲ ವಾಪಾಸು ನನಗೆ ಮರುಳುತ್ತಿದ್ದವು. ಅಮ್ಮ ಹೇಳುತ್ತಿದ್ದಳು.
ನನಗೆ ದುಡ್ಡೇಕೆ ಮಗಾ? ನಾನು ದುಡಿಯುತ್ತಿರುವುದೇ ನನಗೆ ಧಾರಾಳ ಸಾಕಾಗ್ತದೇ, ನನೆ ಇಟ್ಕೋ.
7. ಆ ದಿನ ನಾನು ತುಂಬಾ ಭಾವುಕನಾಗಿದ್ದೆ. ಅಮ್ಮನನ್ನು ನಾನು ಉಪಚರಿಸಬೇಕಾದ ರೀತಿಯಲ್ಲಿ ಉಪಚರಿಸುತ್ತಿಲ್ಲವೇನೋ ಅನ್ನುವ ಪಾಪಭಾವನೆ ಮನಸನ್ನು ಕೊರೆಯುತ್ತಿತ್ತು. ಬಾಲ್ಯದಲ್ಲಿ ಅಮ್ಮ ನನಗಾಗಿ ಮಾಡಿದ ತ್ಯಾಗಗಳು, ಹರಿಸಿದ ಕಣ್ಣೀರು, ಸಹಿಸಿದ ಸಂಕಷ್ಟಗಳೆಲ್ಲ ಕೆಲಸ ಮುಗಿಸಿ ರೂಮಿಗೆ ಬಂದಾಗ ಒತ್ತರಿಸಿ ಕಣ್ಣುಗಳು ಒದ್ದೆಯಾಗುತ್ತಿತ್ತು. ಬಂಗಾರದಂತಹ ಅಮ್ಮನನ್ನು ಒಂಟಿಯಾಗಿ ಬಿಟ್ಟು ಬಂದಿರುವದರ ಸರಿ-ತಪ್ಪುಗಳು ಮನದಲ್ಲಿ ಸಂಘರ್ಷ ನಡೆಸುತ್ತಿದ್ದವು. ದುಡ್ಡು ಮೆಲೋ ಅಮ್ಮ ಮೇಲೋ ಎಂದು ನಾನು ಪ್ರತಿ ನಮಿಷವೂ ತಕರ್ಿಸುತ್ತಿದ್ದೆ. ತಿಂಗಳ ಸಂಬಳ ಪಡೆದುಕೊಳ್ಳುವಾಗಲೆಲ್ಲ ಅಮ್ಮ ತಟ್ಟೆಗೆ ಹಾಕುತ್ತಿದ್ದ ಗಂಜಿಊಟ, ಮೀನು ಸಾರು, ಮಮತೆಗಳು ನೋಟಗಳು ನೆನಪಾಗಿ, ಜೀವವಿರುವ ಅಮ್ಮನಗಿಂತ ಜೀವವಿಲ್ಲದ ನೋಟುಗಳೇ ಹೆಚ್ಚಾದವೋ ಎಂದು ಮನಸ್ಸು ಚುಚ್ಚುತ್ತಿತ್ತು. ಕಛೇರಿಯಲ್ಲೂ ಏಕಾಗ್ರತೆ ಇಲ್ಲ. ರೂಮಿನಲ್ಲೂ ನೆಮ್ಮದಿಯಿಲ್ಲ, ಸಾಕು ಈ ಉದ್ಯೋಗ ಅಂದುಕೊಂಡು ಮನೆಕಡೆ ಹೊರಟಿದ್ದೆ. ನನು ಬಂದರೆ ಮಾತ್ರ ಉದ್ಯೋಗಕ್ಕೆ ಹೋಗುವೆ, ಇನ್ನೂ ನನು ಬಡತನದ ಬದುಕು ಸಾಗಿಸುವುದು ನಂಗಿಷ್ಟವಿಲ್ಲ ಎಂದು ಅಮ್ಮನಲ್ಲಿ ಹಠ ಹಿಡಿದಿದ್ದೆ. ಆದರೆ ಅಮ್ಮ ಎಂದಿನಂತೆ ನರ್ಮಲವಾಗಿ ನಕ್ಕಳು. ನನ್ನ ಹತ್ತಿರ ಕೂರಿಸಿ ತಲೆ ಸವರುತ್ತಾ ಹೇಳಿದಳು.
ನಂಗೆ ಈ ಬದುಕೇ ತುಂಬಾ ಖುಷಿ ಕೊಡುತ್ತಿದೆ. ನನು ಅಲ್ಲಿ ಚನ್ನಾಗಿರು. ಟೆಲಿಗ್ರಾಮ್ ಕಳುಹಿಸುತ್ತಿರು. ನಂಗ್ಯಾವ ಬೇಸರವೂ ಇಲ್ಲ.
8. ಅಮ್ಮನಗೆ ವಯಸ್ಸಾಯಿತು. ಈ ನಡುವೆ ಅಮ್ಮ ಒಂದೇ ಒಂದು ಬಾರಿ ತನ್ನ ಬಗ್ಗೆ, ತನ್ನ ಆರೋಗ್ಯದ ಬಗ್ಗೆ ಪ್ರಸ್ತಾಪಿಯೇ ಇಲ್ಲ. ಪ್ರತಿ ಸಂದರ್ಭದಲ್ಲೂ ಆಕೆ ನನ್ನ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಳು. ಜಾಗ್ರತೆ ಮಗನೇ ಅನ್ನುತ್ತಿದ್ದಳು. ಹೀಗಿರುವಾಗಲೇ ಒಂದು ದಿನ ಅಮ್ಮ ಕಾಯಿಲೆಗೊಳಗಾಗಿರುವ ಸುದ್ದಿ ಬಂತು. ಒಡೋಡಿ ಬಂದೆ. ಅಮ್ಮ ಕ್ಯಾನ್ಸರ್ ಪೀಡಿತಳಾಗಿ ಮಲಗಿದ್ದಳು. ನನ್ನನ್ನು ಕಂಡ ಕೂಡಲೇ ನಗುವ ಪ್ರಯತ್ನ ಮಾಡಿದಳು. ಸಾಧ್ಯವಾಗಲಿಲ್ಲ. ನಾನು ಹೃದಯ ಬಿರಿದು ಅತ್ತೆ. ಅಮ್ಮ ತಡವರಿಸುತ್ತಾ ಹೇಳಿದಳು.
ಅಳ್ಬೇಡ ಮಗನೇ, ನನಗೇನು ಆಗಿಲ್ಲ. ನೋವು ಆಗ್ತಿಲ್ಲ. ಸುಖವಾಗಿದ್ದೇನೆ.
ಅಮ್ಮ ಹೇಳಿದ 8 ಸುಳ್ಳುಗಳು ಅನ್ನು ಮಲೆಯಾಳಂ ಭಾಷೆಯ ಈ ಇ-ಮೇಲ್ನ್ನು ಓದುತ್ತಾ ಮನಸ್ಸು ಭಾರವಾಯಿತು. ಇಷ್ಟಕ್ಕೂ ಅಮ್ಮನ ಆ ಮಹಾನ್ ಗುಣಕ್ಕೆ ಸುಳ್ಳು ಎಂಬ ಪದವನ್ನು ಪ್ರಯೋಗಿಸುವುದಾದರೂ ಹೇಗೆ? ನಜವಾಗಿ ಬದುಕಿನ ವಿವಿಧ ಹಂತಗಳಲ್ಲಿ ಅಮ್ಮ ಅನೇಕಾರು ಪಾತ್ರಗಳನ್ನು ನರ್ವಹಿಸುತ್ತಾ ಬರುತ್ತಿರುತ್ತಾರೆ. ನಾವು ಸಣ್ಣವರಿರುವಾಗ ನಮ್ಮ ಪಾಲಿಗೆ ತಾಯಿ ಎಂದರೆ ಬರೇ ಊಟ ಕೊಡುವ, ಸ್ನಾನ ಮಾಡಿಸುವ, ಮಲಗಿಸುವ, ಹಾಲು ಕಒಡುವ, ಬಟ್ಟೆ ತೊಳೆಯುವ.. ಒಂದು ವ್ಯಕ್ತಿತ್ವವಷ್ಟೇ ಆಗಿರುವುದಿಲ್ಲ. ನಮ್ಮ ಸಕಲ ಪ್ರಶ್ನೆ, ಅನುಮಾನ, ದೂರುಗಳಿಗೆ ಸಿದ್ದ ಉತ್ತರ ಸಿಗುವ ಖಜಾನೆಯೂ ಆಗಿರುತ್ತಾರೆ. ಏನೇ ಕೇಳಿದರೂ ಅಮ್ಮ ಉತ್ತರಿಸುತ್ತಾರೆ. ಇರುವೆಯ ಬಗ್ಗೆ, ಕಾಗೆಯ ಕೂಗಾಟದ ಬಗ್ಗೆ, ಬೆಕ್ಕು, ಕೀಟ, ಟಿವಿ ಚಿತ್ರ, ಹೋಮ್ ವರ್ಕಗಳ ಬಗ್ಗೆ... ಎಲ್ಲದರ ಕುರಿತೂ ನಾವು ಕೇಳುವುದು ಅಮ್ಮನಲ್ಲೇ ಅಲ್ಲವೇ? ಅಮ್ಮನಗೆ ಗೊತ್ತಿಲ್ಲದ್ದು ಏನು ಇಲ್ಲ ಅನ್ನುವ ಭಾವನೆಯೊಂದು ಪ್ರತಿ ಮಗುವಿನಲ್ಲೂ ಬೆಳೆದೇ ಇರುತ್ತದೆ.
ಆದರೆ, ಟೀನೇಜ್ ಹಾಗಲ್ಲ. ಅಲ್ಲಿ ತಾಯಿಯ ತಿಳುವಳಿಕೆಯ ಬಗ್ಗೆ, ನಲುವುಗಳ ಕುರಿತು ಅಸಮಾಧಾನ ಸ್ಪೋಟಗೊಳ್ಳತೊಡಗುತ್ತದೆ. ನನ್ನನ್ನು ತಾಯಿ ಅರ್ಥ ಮಾಡಿಕೊಳ್ಳುತ್ತಿಲ್ಲ ಅನ್ನುವ ದಾಟಿಯಲ್ಲಿ ಆ ವಯಸ್ಸು ಮಾತಾಡಿಸುತ್ತದೆ. ತನ್ನ ಪ್ರತಿ ಅಭಿಪ್ರಾಯ, ಬೇಡಿಕೆಯನ್ನೂ ಅಮ್ಮ ಒಪ್ಪಬೇಕು ಅನ್ನು ಹಠ ಬಂದುಬಿಡುತ್ತದೆ. ಇಷ್ಟಕ್ಕೂ ಮಕ್ಕಳಲ್ಲಿ ಇಂಥ ನಲುವುಗಳು ಶಾಶ್ವತವಾಗಿ ಉಳಿದಿರುತ್ತವೆ ಎಂದಲ್ಲ. ಮಧ್ಯ ವಯಸ್ಸಿನಲ್ಲಿ ಮದುವೆ, ಮಕ್ಕಳಾದ ಮೇಲೆ ವ್ಯಕ್ತಿ ಮತ್ತೇ ಬದಲಾಗುತ್ತಾನೆ/ಳೆ. ತಾಯಿಯನ್ನು ಪ್ರಿತಿಸತೊಡಗುತ್ತಾನೆ/ಳೆ. ಆಕೆಯ ವ್ಯಕ್ತಿತ್ವ ಆತನಲ್ಲಿ/ಕೆ ಮತ್ತೇ ಮತ್ತೇ ಪ್ರಭಾವ ಬೀರತೊಡಗುತ್ತದೆ. ವಿಶೇಷ ಏನೆಂದರೆ, ಈ ಎಲ್ಲ ಸಂದರ್ಭಗಳಲ್ಲಿ ಅಮ್ಮ ಅಮ್ಮನೇ ಆಗಿರುತ್ತಾಳೆ. ಮಗು ಸಿಟ್ಟು ಮಾಡಿಕೊಂಡಿದ್ದಾನೆಂದೋ ಮಗಳೂ ಮುನಸಿಕೊಂಡಿದ್ದಾಳೆಂದೋ ಅಂದುಕೊಂಡು ಮಕ್ಕಳನ್ನೇ ದ್ವೇಷಿಸುವ ಅಮ್ಮಂದಿರಿರುವದನ್ನು ಎಲ್ಲಾದರೂ ಕೇಳಿದ್ದೀರಾ? ಮಾತು ಬಿಟ್ಟೋ, ಅಪ್ಪನಲ್ಲಿ ಸಿಟ್ಟು ಮಾಡಿಕೊಂಡೋ ಹೊರಟು ಹೋದ ಮಗನನ್ನು ನೆನಪಿಸಿಕೊಂಡು ಕಣ್ಣೀರಿಳಿಸುವದಕ್ಕೆ ಅಮ್ಮನಗಲ್ಲದೇ ಇನ್ನಾರಿಗೆ ಸಾಧ್ಯವಿದೆ? ಒಂದು ರೀತಿಯಲ್ಲಿ ನಾವು ಬೆಳೆದಂತೆ ಅಮ್ಮ ಬೆಳೆಯುತ್ತಲೇ ಇರುತ್ತಾರೆ. ನಾವು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದಂತೆಲ್ಲಾ ಅಮ್ಮ ನಗೂಡವಾಗುತ್ತಲೇ ಹೋಗುತ್ತಾಳೆ.
ಅಂದಹಾಗೆ
ಮೊಬೈಲ್ನ್ನು ವಿಪರೀತವಾಗಿ ಹಚ್ಚಿಕೊಳ್ಳಬೇಡ ಎಂದು ಅಮ್ಮ ಬುದ್ದಿವಾದ ಹೇಳಿದ್ದಕ್ಕೆ ಸಿಟ್ಟಾಗಿ 12ರ ವಯಸ್ಸಿನ ಮಗಳೊಬ್ಬಳು ಕಳೆದ ವಾರ ಆತ್ಮಹತ್ಯೆ ಮಾಡಿಕೊಂಡ ಸುದ್ದಿಯನ್ನು ಓದಿದಾಗ ಈ ಇ-ಮೇಲ್ ನೆನಪಾಯಿತು.
ಕೆಲಸದ ಸ್ಥಳಗಳಲ್ಲಿ ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯಿದೆ 2011
ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಗಟ್ಟಲು ಸಕರ್ಾರಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದ ಒಂದಿಲ್ಲೊಂದು ಕಾಯ್ದೆ, ಕಾನೂನುಗಳನ್ನು ಮಾಡುತ್ತಲೇ ಬಂದಿವೆ. ಕಾಯ್ದೆಗಳು ಹೆಚ್ಚಾದಂತೆಲ್ಲ ಅಪರಾಧ ಪ್ರಕರಣಗಳು ಹೆಚ್ಚಾಗಿವೆಯೇ ವಿನಃ ನಿಯಂತ್ರಕ್ಕೆ ಬಾರದಿರುವುದು ವಿಷಾಧನೀಯವೆಂದು ವಿಶ್ಲೇಷಿಸಿದ್ದಾರೆ ಆಂಗ್ಲ ಉಪನ್ಯಾಸಕರಾದ ಪವನಗಂಗಾಧರ ತುಮಕೂರು.
ಕೆಲಸದ ಸ್ಥಳಗಳಲ್ಲಿ ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯಿದೆ 2010 ಎಂಬ ಕಾಯಿದೆಯೊಂದು ಈಗಾಗಲೆ ಸಿದ್ದವಾಗಿದ್ದು ಕೇವಲ ಲೋಕಸಬೆಯಲ್ಲಿ ಅಂಗೀಕಾರಕ್ಕಾಗಿ ಕಾಯುತ್ತಿದೆ. ಈ ಹಿಂದೆ ಸಿದ್ದವಾಗಿದ್ದ ಕಾಯಿದೆಗಳಲ್ಲಿ ಹಲವು ಲೋಪದೋಷಗಳಿದ್ದವು ಎಂಬ ಕಾರಣಕ್ಕೆ ಕೆಲವು ಕಾಯಿದೆಗಳು ಜಾರಿಯಾಗಲಿಲ್ಲ. ಆದರೆ ಪ್ರಸಕ್ತ 2010 ರ ಕಾಯದೆಯಲ್ಲೂ ಸಹ ಕೆಲವು ಲೋಪಗಳಿವೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಒಂದು ವೇಳೆ ಪ್ರಸಕ್ತ ಕಾಯಿದೆಯನ್ನು ಜಾರಿಗೊಳಿಸಿದರೂ ಸಹ ಮಹಿಳೆಗೆ ರಕ್ಷಣೆ ನಡಲು ಅಥವಾ ದೌರ್ಜನ್ಯಕ್ಕೊಳಗಾದ ಮಹಿಳೆಗೆ ನ್ಯಾಯ ದೊರಕಿಸುವಲ್ಲಿ ಮತ್ತು ನಜವಾದ ಅಪರಾದಿಗಳಿಗೆ ಕಠಿಣ ಶಿಕ್ಷೆ ವಿದಿಸುವಲ್ಲಿ ವಿಫಲವಾಗುತ್ತದೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.
ಈ ಕಾಯಿದೆಯಲ್ಲಿರುವ ಮೊದಲನೇ ಲೋಪವೆಂದರೆ ಲೈಂಗಿಕ ದೌರ್ಜನ್ಯವೆಸಗಿದರೆ ಅದೊಂದು ಖಾಸಗಿ ತಪ್ಪು ಎಂದು ಪರಿಗಣಿಸಲಾಗುತ್ತದೆಯೇ ಹೊರತು ಕ್ರಿಮಿನಲ್ ಮೊಕದ್ದಮೆ ಹೂಡುವ ಅಪರಾದ ಆಗುವುದಿಲ್ಲ ಎಂಬುದನ್ನು ಪ್ರಸಕ್ತ ಕಾಯಿದೆ ತಿಳಿಸುತ್ತದೆ. ದೌರ್ಜನ್ಯಕ್ಕೊಳಗಾದವರು ಇಂಟರ್ನಲ್ ಕಂಪ್ಲೈಂಟ್ ಕಮಿಟಿಗೆ ದೂರು ನಡಿ, ಆರೋಪಿ ನಜವಾದ ತಪ್ಪಿತಸ್ತ ಎಂದು ತಿಳಿದರೆ ಆ ಕಮಿಟಿಗೆ ತಪ್ಪಿತಸ್ತನ ವಿರುದ್ದ ಕ್ರಮಿನಲ್ ದಾವೆ ಹೂಡಲು ಅಥವಾ ಶಿಸ್ತುಕ್ರಮ ಕೈಗೊಳ್ಳಲು ಅಧಿಕಾರವಿಲ್ಲ. ಇದರ ಜೊತೆಗೆ ತಪ್ಪಿತಸ್ತ ಕಿರುಕುಳಕ್ಕೆ ಒಳಪಟ್ಟವರಿಗೆ ಕೇವಲ ನಷ್ಟಪರಿಹಾರ ನಡಬೇಕು, ಈ ಮೊತ್ತವು ಸಂಬಳದಲ್ಲಿ ವಜಾಗೊಳಿಸಲಾಗುತ್ತದೆ ಎಂದು ಹೇಳುತ್ತದೆ. ಅಂದರೆ ತಪ್ಪು ಮಾಡಿದವರನ್ನು ಕ್ರಿಮಿನಲ್ ಅಪರಾದದಿಂದ ಪಾರು ಮಾಡುವುದೇ ಇದರ ಉದ್ದೇಶದಂತಿದೆ.
ಈ ಕಾಯಿದೆ ಎರಡನೇ ಲೋಪವೆಂದರೆ, ಇಂಟರ್ನಲ್ ಕಂಪ್ಲೈಂಟ್ ಕಮಿಟಿ ತನಖೆ ನಡೆಸುವಾಗ ಲೈಂಗಿಕ ದೌರ್ಜನ್ಯದ ಬಗ್ಗೆ ಫ್ಯಾಕ್ಟ್ ಫೈಂಡಿಂಗ್ ಕಾರ್ಯ ಮಾತ್ರ ನರ್ವಹಿಸುತ್ತದೆಯೇ ಹೊರತು ಅಪರಾದ ನಡೆದಿದೆ ಎಂದು ಮತ್ತು ಅಪರಾದಿಗೆ ಶಿಕ್ಷೆ ವಿಧಿಸುವಂತೆ ಶಿಫಾರಸ್ಸು ಮಾಡುವ ಅಧಿಕಾರ ಇದಕ್ಕಿಲ್ಲ. ಇದರ ಮೂರನೆಯ ಲೋಪವೆಂದರೆ, ಈ ಕಾಯಿದೆಯಲ್ಲಿ ಕೆಲವು ಪೀನಲ್ ಪ್ರಾವಿಷನ್ಗಳ ಕೊರತೆ ಎದ್ದು ಕಾಣುತ್ತಿದೆ. ಇಂಡಿಯನ್ ಪೀನಲ್ ಕೋಡ್ನ 376, 354 ಮತ್ತು 509 ಸೆಕ್ಷನ್ಗಳಷ್ಟೇ ಲೈಂಗಿಕ ದೌರ್ಜನ್ಯದ ಅಪರಾದಗಳನ್ನು ಒಳಗೊಳ್ಳುವುದಿಲ್ಲ. ಇನ್ನೂ ಹಲವು ಪೀನಲ್ ಪ್ರಾವಿಷನ್ಗಳು ಇಲ್ಲದಿರುವ ಈ ಕಾಯಿದೆಯಲ್ಲಿ ದೌರ್ಜನ್ಯಕ್ಕೊಳಗಾದವರಿಗೆ ಪರಿಹಾರ ಸೂಚಿಸುವಂತಹ ಇತರ ಯಾವುದೇ ಪ್ರಾವಿಷನ್ಗಳು ಇಲ್ಲ.
ಕಾಯಿದೆಯಲ್ಲಿ ಮನೆಕೆಲಸ ಮಾಡುವ ಮಹಿಳೆಯರು ಈ ಕಾಯಿದೆಯ ಅಡಿಯಲ್ಲಿ ಬಾರದಿರುವುದು ಇದರ ನಾಲ್ಕನೇ ದೋಷವೆಂದು ಹೇಳಬಹುದು. ಈ ಕಾಯಿದೆ ಸಂಘಟಿತ ವಲಯದ ಮಹಿಳಾ ಉದ್ಯೋಗಿಗಳನ್ನು ಮಾತ್ರವೇ ಒಳಗೊಂಡಿದೆ. ಅಸಂಘಟಿತ ವಲಯದ ಮಹಿಳೆರನ್ನು ಈ ಕಾಯಿದೆ ಒಳಗೊಂಡಿಲ್ಲ. ಅಂದರೆ ಮನೆಕೆಲಸ ನರ್ವಹಿಸುವ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ ಆ ಮಹಿಳೆಗೆ ಈ ಕಾಯಿದೆಯಡಿಲ್ಲಿ ನ್ಯಾಯ ಸಿಗುವುದಿಲ್ಲ. ಈ ಕಾಯಿದೆಯಲ್ಲಿ ಸಂದಾನ ಮಾಡಿಕೊಳ್ಲುವುದಕ್ಕೆ ಅವಕಾಶಗಳಿವೆ. ಅಂದರೆ ಲೈಂಗಿಕ ದೌರ್ಜನ್ಯದ ವಿರುದ್ದ ದೂರು ನಡಿದರೆ ಶೋಷಣೆಗೆ ಒಳಗಾದ ಮಹಿಳೆಗೆ ನ್ಯಾಯ ದೊರಕಿಸುವ ಬದಲು ಅವಳನ್ನು ಮನವೊಲಿಸಿ ಸಂದಾನ ಮಾಡಿಕೊಳ್ಳುವುದರ ಮೂಲಕ ದೂರುಗಳನ್ನು ವಾಪಸ್ಸು ಪಡೆಯುವಂತೆ ಒತ್ತಾಯಿಸುವ ಅವಕಾಶಗಳು ಈ ಕಾಯಿದೆಯಲ್ಲಿವೆ. ಈ ರೀತಿಯ ಸಂದಾನಗಳಿಗೆ ಅವಕಾಶವಿರುವುದೇ ಈ ಕಾಯದೆಯ ಐದನೆ ಲೋಪವಾಗಿದೆ.
ಈ ಕಾಯಿದೆಲ್ಲಿ ಆರನೇ ಮತ್ತೊಂದು ಲೋಪವು ಕೂಡ ಇದೆ. ಈ ಕಾಯಿದೆ ಪ್ರಕಾರ ನೇಮಕ ಮಾಡುವ ಇಂಟರ್ನಲ್ ಕಂಪ್ಲೈಂಟ್ ಕಮಿಟಿಯಲ್ಲಿನ ಇಬ್ಬರು ಸದಸ್ಯರು ಕಾನೂನನ ಬಗ್ಗೆ ತಿಳಿವಳಿಕೆ ಇರುವವರು ಮತ್ತು ಕಾನೂನು ವಿಚಾರಗಳಲ್ಲಿ ಅನಭವವುಳ್ಳವರು ಇರಲೇಬೇಕೆಂಬುವುದು ಖಡ್ಡಾಯವೇನಲ್ಲ. ಅಂದರೆ ಕಾನೂನು ಜ್ಞಾನ ಇರುವವರು ಈ ಕಮಿಟಿಯಲ್ಲಿರುವುದು ಖಡ್ಡಾಯ ಮಾಡಬೇಕಿತ್ತು. ಇದರ ಜೊತೆಗೆ ಈ ಕಮಿಟಿಯಲ್ಲಿ ಬರೀ ಮಹಿಳೆಯರನ್ನಲ್ಲದೆ ಮಹಿಳೆರ ಪರವಾಗಿ ಚಿಂತಿಸುವವರನ್ನೂ ಸಹ ಕಮಿಟಿಯ ಸದಸ್ಯರನ್ನಾಗಿ ನೇಮಿಸಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.
ಪ್ರಸ್ತುತ, ಲೋಕಸಭೆಯ ಅಂಗೀಕಾರಕ್ಕಾಗಿ ಕಾಯತ್ತಿರುವ 2010ರ ಕೆಲಸದ ಸ್ಥಳಗಳಲ್ಲಿ ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯಿದೆಯು ಮೇಲೆ ವಿವರಿಸಿದಂತೆ ಹಲವು ಲೋಪದೋಶಗಳನ್ನು ಹೊಂದಿದೆ. ಅದರಲ್ಲಿಯೂ ಅಸಂಘಟಿತ ವಲಯದ ಮಹಿಳೆಯರನ್ನು ಈ ಕಾಯಿದೆ ಕಡೆಗಣಿಸಿರುವುದು ಅತ್ಯಂತ ದುರಂತದ ವಿಷಯ. ಏಕೆಂದರೆ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರ ಮೇಲೆ ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯದ ಘಟನೆಗಳು ಅತೀ ಹೆಚ್ಚಿನ ಪ್ರಮಾಣದಲ್ಲಿ ನಡೆಯತ್ತಿವೆ. ಇವರನ್ನೂ ಕೂಡ ರಕ್ಷಿಸುವ ಮತ್ತು ಇವರಿಗೂ ನ್ಯಾಯ ದೊರಕಿಸುವ ಪ್ರಮುಖ ಕಾರ್ಯವನ್ನು ಈ ಕಾಯಿದೆ ಮಾಡಬೇಕಿತ್ತು. ಹೀಗೆ ಅನೇಕ ಲೋಪದೋಶಗಳನ್ನು ಒಳಗೊಂಡಿರುವ ಈ ಕಾಯಿದೆ ಎಷ್ಟರಮಟ್ಟಿಗೆ ಮಹಿಳೆಯರಿಗೆ ವರದಾನವಾಗಬಲ್ಲದು ಎಂಬುದನ್ನು ಕಾದು ನೋಡಬೇಕಷ್ಟೇ.
ಸಂತೆಯೊಳಗೊಂದು ಮನೆಯ ಮಾಡಿ
ಸಿರಾಜ್ ಬಿಸರಳ್ಳಿ |
ನಮ್ಮೂರಿನಿಂದ ಆ ಹಳ್ಳಿಗೆ ಹೋಗುವ ರಸ್ತೆ ಶುರುವಾಗುವುದೇ ಊರ ಹೊರಗಿಂದ. ಊರ ಹೊರಗೇ ಈ ರಸ್ತೆಯ ಎರಡೂ ಬದಿ ಸ್ಮಶಾನಗಳಿವೆ. ಅದೋ ಅಲ್ಲಿ ಕಾಣುತ್ತಲ್ಲ ಹೆಣ ಸುಟ್ಟ ವಾಸನೆ ಬರ್ತಾ ಇದೆಯಲ್ಲ ಅದು ಹಿಂದೂಗಳ ಸ್ಮಶಾನ. ಹೌದು ಈ ಕಡೆ ಪಕ್ಕದಲಿರುವುದು ಸಾಬರ ಖಬರಸ್ತಾನ. ಮೊದಲು ಊರಿಂದ ಬಹಳ ದೂರಕ್ಕೆ ಇದ್ದವು ಈ ಎರಡೂ ಸ್ಮಶಾನಗಳು ಈಗ ಊರು ಬೆಳಿತಾ ಬೆಳೀತಾ ಹತ್ತಿರಕ್ಕೆ ಬಂದು ಬಿಟ್ಟಿವೆ.
ನಾನು ದಿನಾಲೂ ಇಲ್ಲಿಯವರೆಗೆ ಜಾಗಿಂಗ್ಗೆ ಬರುತ್ತಿದ್ದೆ. ಮೊದಮೊದಲು ಊರ ಹೊರಗೆ ಒಬ್ಬನೇ ಬೆಳಿಗ್ಗೆ ಜಾಗಿಂಗ್ ಮಾಡುತ್ತಿದ್ದೆ. ನಂತರ ನಾಲ್ಕಾರು ಗೆಳೆಯರು ಜೊತೆಯಾದರು. ಜೋರಾಗಿಓಡುತ್ತಾ ಬರ್ತಾ ಇದ್ದವರು, ಸ್ಮಶಾನದ ಹತ್ತಿರ ಬಂದ ತಕ್ಷಣ ಮೆಲ್ಲಗೆ ಸಾಗುತ್ತಿದ್ದೇವು. ನಾನು ಕೇಳಿದರೆ ಮಹೇಶ ಹೇಳ್ತಾ ಇದ್ದ ಸ್ಮಶಾನದಲ್ಲಿ ಮಲಗಿದವರಿಗೆ ಮುಂಜ್ ಮುಂಜಾನೆ ಡಿಸ್ಟರ್ಬ್ ಮಾಡಿದ್ರೆ ಬೇಜಾರಾಗಿಬಿಡುತ್ತೆ ಅದಕ್ಕೆ ಮೆಲ್ಲಗೆ ಓಡ್ತೀನಿ ಎಂದು ನಗಾಡಿದ್ದ. ಇನ್ನೂ ಮಬ್ಬಗತ್ತಲು ಇರುವಾಗಲೇ ನಮ್ಮ ಜಾಗಿಂಗ್ ಶುರುವಾಗಿರುತ್ತಿತ್ತು. ಮುಳ್ಳು ಜಾಲಿಯ ಪೊದೆಯಲ್ಲಿ ಮುಂಗಸಿ, ಹಾವುಗಳು ಸುಳಿದಾಡುವುದು ಕಾಣುತ್ತಿತ್ತು. ಒಮ್ಮೊಮ್ಮೆ ತಗ್ಗು ಬಿದ್ದ ಸಾಬರ ಗೋರಿಯ ಹತ್ತಿರ ಹೋಗಿ ನೋಡುವಾಸೆ ಎಲ್ಲರಿಗೆ ಆದರೆ ಅಂಜಿಕೆ. ಹೀಗೆ ಒಂದು ದಿನ ಬೇಗನೇ ಜಾಗಿಂಗ್ ಬಂದಿದ್ದೆ ಮಹೇಶ ಸಹ ಜೊತೆಯಲ್ಲಿದ್ದ. ಸ್ಮಶಾನ ಸಮೀಪಿಸಿದಂತೆ ವಿಲಕ್ಷಣ ಚರ್ಮ ಸುಟ್ಟ ವಾಸನೆ, ಕೂದಲು ಸುಟ್ಟವಾಸನೆ ಬರ್ತಾ ಇತ್ತು. ಮೆಲ್ಲನೆ ನಡಿಗೆ ಆರಂಭಿಸಿದ್ದೆವು. ಅತ್ತಿತ್ತ ನೋಡುತ್ತಿದ್ದ ಮಹೇಶ ಒಮ್ಮೇಲೆ ಚೀರಿದ. ಅರೆಬೆಂದ ಯುವತಿಯ ಶವ. ನಗ್ನವಾಗಿ ಬಿದ್ದಿತ್ತು. ಪೂರ್ಣವಾಗಿ ಸುಟ್ಟಿರಲಿಲ್ಲ. ಅಂದರೆ ರಾತ್ರಿ ಸುಡಲು ಬಂದವರು ಅರೆ ಬರೆಸುಟ್ಟಿದ್ದರು. ನಾಯಿ ನರಿಗಳು ಅದನ್ನು ಎಳೆದಾಡಿಕೊಂಡು ಬಂದು ರಸ್ತೆಯಂಚಿಗೆ ತಳ್ಳಿದ್ದವು. 20-25ರ ವಯಸ್ಸಿನ ಯುವತಿಯ ಶವವದು ನೋಡಲು ಭೀಕರವಾಗಿತ್ತು. ದೇಹದ ಮೇಲೆ ಗಾಯದ ಗುರುತುಗಳು. ಚೀರಿದ ಮಹೇಶ ಹೆದರಿಕೆಯಿಂದ ಹಿಂದೆಓಡಿದ. ನಾನೂ ಅವನ ಜೊತೆ ಸೇರಿದೆ.
**
ನಿನ್ನೆ ಯಾರೂ ಶವಸಂಸ್ಕಾರಕ್ಕೆ ಸ್ಮಶಾನಕ್ಕೆ ಬಂದಿರಲಿಲ್ಲ. ಮತ್ತೆ ಎಲ್ಲಿಂದ ಬಂತು ಈ ಹೆಣ್ಣಿನ ಶವ. ಪೋಲೀಸರು ಬಂದು ಹೆಣ ಎತ್ತಿಕೊಂಡು ಹೋದರು.
ಮದ್ಹಾಹ್ನ ಹೊತ್ತಿನಲ್ಲಿ ಚಿಕನ್ ಪೀರಾಸಾಬ ಹೆಂಡತಿ ನಾಪತ್ತೆಯಾಗಿದ್ದಾಳೆ ಎಂಬ ಸುದ್ದಿ ಊರ ತುಂಬ ಹರಡಿತು. ಚಿಕನ್-ಮಟನ್ ಅಂಗಡಿ ಇಟ್ಟುಕೊಂಡಿದ್ದ ಪೀರಾಸಾಬಗೆ 2 ಹೆಂಡತಿಯರು. ಮೊದಲನೆಯವಳಿಂದ ಮಕ್ಕಳಾಗಲಿಲ್ಲ ಅಂತ ಕಳೆದ ಕೆಲವು ತಿಂಗಳುಗಳ ಹಿಂದಷ್ಟೇ ಪೀರಾಸಾಬ 2ನೇ ಮದುವೆಯಾದ. ವಯಸ್ಸು 50ರ ಸಮೀಪ ಇದ್ದರೇನಂತೆ ಒಳ್ಳೆಯ ವ್ಯಾಪಾರದಿಂದ ಊರಿನಲ್ಲಿ ಗಟ್ಟಿ ಕುಳ ಎಂಬ ಹೆಸರಿತ್ತು. ಪೀರಾಸಾಬ 5ಹೊತ್ತು ನಮಾಜು ಮಾಡುವ ನಮಾಜಿ ಆಗಿದ್ದ. ಮಕ್ಕಳಿಲ್ಲ ಎಂಬ ಒಂದು ಸಂಕಟ ಬಿಟ್ಟರೆ ಖುಷಿಯಾಗಿ ಹಾಯಾಗಿದ್ದ. 2ನೇ ಮದುವೆಯ ಹುಚ್ಚು ಎಲ್ಲಿಂದ ಬಂತೋ ತಿಳಿಯದು. ತನಗೆ ಹೆಣ್ಣು ನೋಡುವಂತೆ ಅವರಿವರಲ್ಲಿ ಹೇಳಿಟ್ಟಿದ್ದ. ಸ್ವಂತ ಮನೆ, ಊರ ಹೊರಗೆ ಹೊಲ, ಪ್ಲಾಟುಗಳು & ಉತ್ತಮ ವ್ಯಾಪಾರ ಇದ್ದ ಪೀರಾಸಾಬಗೆ ಹೆಣ್ಣು ಕೊಡುವವರು ಕಡಿಮೆಯೆ? 3 ತಿಂಗಳಲ್ಲಿ ಪಕ್ಕದೂರಿನ ಪಿರ್ದೋಸ್ಳನ್ನು ಮದುವೆ ಮಾಡಿಕೊಂಡು ಬಂದಿದ್ದ. ಅವನ ಮೊದಲ ಹೆಂಡತಿ ರಮೀಜಾ ಮೊದ ಮೊದಲು ಇದಕ್ಕೆ ವಿರೋಧ ಮಾಡಿದ್ದಳು. ಯಾವಾಗ ತನ್ನ ಮಾತು ನಡೆಯುವುದಿಲ್ಲ ಎಂಬುದು ಅರಿವಾಯಿತೋ ಸುಮ್ಮನಾದಳು. ಪೀರಾಸಾಬಗೆ ನವ ಯೌವ್ವನವನ್ನೇ ತಂದಿದ್ದಳು ಪಿರ್ದೋಸ್. ಈಗೀಗ ಚಿಕನ್ ಪೀರಸಾಬನ ಅಂಗಡಿಗೆ ಹೋದ ಯಾವ ಬಿಕ್ಷುಕನೂ ಬರಿಗೈಯಲ್ಲಿ ಮರುಳುತ್ತಿರಲಿಲ್ಲ. ಪೀರಸಾಬನ ರಸಿಕತೆಯ ಮಾತುಗಳು ಮಾಕರ್ೆಟ್ನಲ್ಲಿ ನಗೆಯ ಅಲೆಯೆಬ್ಬಿಸುತ್ತಿದ್ದವು.
ನಿನ್ನೆ ದಗರ್ಾಕ್ಕೆ ಹೋದವಳು ಮನೆಗೆ ಬಂದಿಲ್ಲ ಎಂದು ಪೀರಾಸಾಬ ಪೋಲೀಸ್ ಸ್ಟೇಷನ್ ಕಟ್ಟಿ ಹತ್ತುತ್ತಲೇ ಆ ಹೆಣ ಅವನ ಹೆಂಡತಿಯದೇ ಎನ್ನುವುದು ಖಾತ್ರಿಯಾಯಿತು. ನಿನ್ನೆ ಸಂಜಿಮುಂದ ದಗರ್ಾಕ್ಕೆ ಹೋಗಿ ಬರ್ತೀನಿ ಅಂತಾ ಹೋದವಳು, ಬರಲೇ ಇಲ್ಲ. ನಾನು ರಾತ್ರಿನೇ ಕಂಪ್ಲೇಟ್ ಕೊಡಬೇಕೆಂದಿದ್ದೆ ಆದರೆ ಬರಬಹುದು ಅಂತಾ ಸುಮ್ಮನಾಗಿದ್ದೆ ಎಂದ.
ಪೋಲೀಸರಿಗೆ ಅನುಮಾನ ಬಂದು ಏನಾದರೂ ಜಗಳ ಹಾಗಿತ್ತೋ ಎಂಗ ಅಂದಾಗ, ಗಂಡ ಹೆಂಡತಿ ಅಂದ ಮೇಲೆ ನೂರು ಮಾತು ಬರೊದು ಹೋಗೊದು ಇರೋದ ಆದರ ನನ್ನ ಹೆಂಡತಿಗೆ ಈ ಗತಿ ತಂದವರನ್ನ ಸುಮ್ಮನೆ ಬೀಡಬ್ಯಾಡ್ರೀ, ನನ್ನ ಬಂಗಾರದ ಗಿಣಿಯಂತಹ ಹೆಂಡ್ತಿನ ಕೊಂದವರನ್ನ ಬಿಡಬ್ಯಾಡ್ರಿ ಎಂದು ಇನ್ಸ್ ಪೆಕ್ಟರ್ ಕಾಲಿಗೆ ಬಿದ್ದು ಗೋಳಾಡಿದ್ದ. ಪೋಸ್ಟಮಾರ್ಟಂ ಅದೂ ಇದು ಹಾಗಿ ಹೋಯ್ತು ಊರಿನ ಒಂದೆರೆಡು ಕುಳಗಳು ಇನ್ಸ್ಪೆಕ್ಟರ್ನ್ನ ಪ್ರೈವೇಟ್ ಆಗಿ ಭೇಟಿಯಾದರು. ಸಂಜೆ ಅನ್ನೊದರೊಳಗಾಗಿ ಅವಳ ಹೆಣ ದಫನ್ ಮಾಡಲಾಯಿತು. ಪೀರಾಸಾಬನ ದುರಾದೃಷ್ಟಕ್ಕೆ ಊರು ಮರುಗಿತು.
**
ಮರುದಿನ ಮಹೇಶ ಜಾಗಿಂಗ್ಗೆ ಬರಲಿಲ್ಲ. ಜ್ವರ ಅಂತ ಮಲಗಿ ಬಿಟ್ಟಿದ್ದ ನಾನೂ ಆ ಕಡೆ ಜಾಗಿಂಗ್ಗೆ ಹೋಗಲಿಲ್ಲ. ಮೂರನೇ ದಿನ ನಾನೊಬ್ಬನೇ ಜಾಗಿಂಗ್ ಮಾಡ್ತಾ ಹೋದೆ ಮೊನ್ನೆ ತಾನೆ ಧಫನ್ ಆಗಿದ್ದ ಪಿರ್ದೋಸ್ ಸಮಾಧಿ ಮೇಲೆ ಹಾಕಿದ್ದ ಹೂಗಳು ಇನ್ನೂ ಬಾಡಿರಲಿಲ್ಲ. ದೊಡ್ಡ ದೊಡ್ಡ ಗುಲಾಬಿ ಹೂಗಳು ಇನ್ನು ಕೆಂಪುತನ ತೋರುತ್ತಿದ್ದವು. ಸ್ಮಶಾನದೊಳಗೆ ಆಡು, ಕುರಿ ಹೋಗದಂತೆ ಬೇಲಿ ಕಟ್ಟಿದ್ದರು. ಸ್ಮಶಾನಕ್ಕೂ ಬೇಲಿನಾ? ಸತ್ತ ಮೇಲೂ ಬೇಲಿಯ ಹಂಗಿನಲ್ಲಿ ಮಲಗಿದ್ದ ಆತ್ಮಗಳ ಬಗ್ಗೆ ನಗು ಬಂತು. ಗೋರಿಯೊಳಗಿಂದ ಯಾವುದೋ ಆತ್ಮವೊಂದು ಮಗ್ಗಲು ಬದಲಿಸಿದಂತೆ ಸದ್ದಾಯಿತು. ನಿಲ್ಲುವ ದೈರ್ಯ ಸಾಲದೇ ಮನೆಗೆ ಓಡಿದೆ.
ಮಧ್ಯಾಹ್ನವೇ ಸುದ್ದಿ ಬಂತು ಪೀರಾಸಾಬ ಆತ್ಮಹತ್ಯೆ ಮಾಡಿಕೊಂಡನಂತೆ. ಮನೆಯೊಳಗಿನ ಜಂತಿಗೆ ಹಗ್ಗ ಬಿಗಿದುಕೊಂಡು ಜೋತಾಡುತ್ತಿದ್ದ ಅವನ ಶರೀರವನ್ನು ಕೆಳಗೆ ಇಳಿಸುವುದೊರಳಗಾಗಿ ಎಲ್ಲರಿಗೂ ಸಾಕು ಸಾಕಾಯಿತು. ಒಳ್ಳೆಯ ಕಟ್ಟುಮಸ್ತಾದ ಆಳು. ಜಂತಿ ಮುರಿದುಕೊಂಡು ಬೀಳದೇ ಇದ್ದುದೆ ಹೆಚ್ಚು. ಹೆಂಡತಿ ಸತ್ತು ಮೂರು ದಿನ ಆಗಿಲ್ಲ ಅಷ್ಟರಲ್ಲೇ ಪೀರಾಸಾಬ ಆತ್ಮಹತ್ಯೆ ಮಾಡಿಕೊಂಡಿದ್ದ. ಸಣ್ಣ ಹೆಂಡತಿನ ಬಹಳ ಹಚ್ಚಿಕೊಂಡಿದ್ದ ಅದಕ್ಕ ತಡೀಲಾರದ ಜೀವಕಳ ಕೊಂಡಾನಂತ ನೆರೆದವರು ಹೇಳುತ್ತಿದ್ದದ್ದು ಕೇಳಿಸುತ್ತಿತ್ತು. ನಾನು ನೀನು ಅನ್ನೊದರೊಳಗೆ ಊರಿನ ಜನ ಸೇರಿದರು. ಮಸೀದಿಯಿಂದ ಜನಾಜಾದ ಡೋಲಿ ತರಲಾಯಿತು. ಊರಿನಲ್ಲಿ ಹೆಸರುವಾಸಿಯಾಗಿದ್ದ ಪೀರಾಸಾಬನಿಗೆ ಊರೆಲ್ಲ ನೆಂಟರು, ಜನ ಸೇರಿದರು. ನಾನೂ ಹೋಗಬೇಕಾಯಿತು. ಮೈ ತೊಳೆದ ನಂತರ ಹೆಣವನ್ನು ಡೋಲಿಯಲ್ಲಿ ಇಟ್ಟು, ಹೂವಿನ ಹಾರ, ಚದ್ದರ್ಗಳನ್ನು ಹಾಕಿದರು. ಖಬರಸ್ಥಾನದಲ್ಲಿ ಹೆಂಡತಿಯ ಪಕ್ಕದಲ್ಲೇ ಪೀರಾಸಾಬಗೆ ಗೋರಿ ತೋಡಲಾಗಿತ್ತು. ಹೆಣವನ್ನು ಇಳಿಸಿ, ಕೊನೆ ಸಾರಿ ಮುಖ ತೋರಿಸಿ ಮಣ್ಣು ಹಾಕಿದರು. ನಾನು ಖಬರ್ ಸ್ಥಾನದಲ್ಲಿ ಒಂದು ಕಡೆ ಕುಳಿತಿದ್ದೆ. ಸಾಲಾಗಿ ಮಲಗಿದ್ದ ಗೋರಿಗಳು. ತಮ್ಮ ಮೇಲೆ ಒಂದೊಂದು ರೀತಿಯ ಶೃಂಗಾರ ಮಾಡಿಕೊಂಡಿದ್ದವು. ನೆಲದ ಒಡಲೊಳಗೆ ಮೇಲು ಕೀಳೆನ್ನದೆ ಮಲಗಿದ ದೇಹಗಳಿಗೆ ಅವರವರ ಯೋಗ್ಯತೆಯಂತೆ ಮಣ್ಣಿನ ಮೇಲೆ ಬಂಗಾರದ ಗಿಲಿಟಿನ ಕಲ್ಲು, ಷಾಬಾದ್ ಕಲ್ಲು, ಚಪ್ಪಡಿ ಕಲ್ಲು, ಬರೀ ಮಣ್ಣು ಹೊರಿಸಲಾಗಿತ್ತು.
ಒಬ್ಬೊಬ್ಬರದೇ ಹೆಸರು ಓದುತ್ತಾ ಹೋದಂತೆ ಅವರೆಲ್ಲ ಕಣ್ಮುಂದೆ ನಿಂತಂತಾಯಿತು, ಅದೋ ಅಲ್ಲಿ ನೋಡಿ ದೊಡ್ಡದಾಗಿ ಗೋರಿಕಟ್ಟಿಸಿಕೊಂಡು. ಯಾವುದೋ ಸಂತನ ಮಾದರಿಯಲ್ಲಿ ಡಿಜೈನ್ ಮಾಡಿಸಿಕೊಂಡು ಮಲಗಿದ್ದಾನಲ್ಲ ಅವನು ಹಾಜಿ ಮೊಹ್ಮದ್ ಅಂತಾ ಊರಿನಲ್ಲಿ ಸಂತನ ಹಾಗೆ ಬಾಳಿದ. ತರಕಾರಿ ವ್ಯಾಪಾರ ಮಾಡಿಕೊಂಡೇ ಉನ್ನತ ಸ್ಥಾನಕ್ಕೆ ಏರಿದ ತರಕಾರಿ ಮೊಹ್ಮದ್ ಸಾಯೋ ಮೊದಲು ಹಜ್ಗೆ ಹೋಗಿಬಂದ ನಂತರ ಹಾಜಿ ಮೊಹ್ಮದ್ ಆಗಿ ಬದಲಾಗಿದ್ದ.
ಇಲ್ಲೇ ಅದರ ಪಕ್ಕದಲ್ಲೇ ಇದೆಯಲ್ಲ ಸಣ್ಣ ಗೋರಿ ಅದು ಪುಟ್ಟ ಮಗುವಿನದು. ಒಂದೇ ದಿನ ಬಾಳಿ, ಜೀವನದ ಜಂಜಡವೇ ಬೇಡ ಎಂದು ಹೋದ ಅದು ತನ್ನೊಂದಿಗೆ ತಾಯಿಯ, ತಂದೆಯ ವರ್ಷಗಳ ಕನಸನ್ನು ಕಿತ್ತುಕೊಂಡು ಹೋಗಿತ್ತು. ಗೆಳೆಯನ ಮಗು ಅದು, ಮೊದಲ ಮಗು. ಪುಟ್ಟ ಎಸಳಿನಂತಹ ತುಟಿಗಳು, ಹುಟ್ಟಿದ ಒಂದೇ ದಿನದಲ್ಲಿ ಮುಗುಳ್ನಗು ಬೀರುತ್ತಿದ್ದ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಅದರ ಅಪ್ಪ ಹೇಳಿದ್ದ ನೋಡೋ ನನ್ನ ಮಗು ಹೇಗಿದೆ? ಸರಕಾರಿ ಆಸ್ಪತ್ರೆಯ ಪಲ್ಲಂಗದಲ್ಲಿ ಮಲಗಿದ್ದ ಮಗುವಿನ ತಾಯಿಯ ಪಕ್ಕದಲ್ಲಿ ಕುಳಿತಿದ್ದ ನನಗೆ ಆ ಪುಟ್ಟ ಮಗುವಿನ ನಗುವಲ್ಲಿ ಸ್ವರ್ಗ ಕಾಣುತ್ತಿದ್ದ ತಂದೆ ತಾಯಿಯ ದೃಶ್ಯ ಇಂದಿಗೂ ಮರೆಯಲಾಗಿಲ್ಲ. ನಗು ನಗುತ್ತಾ ಆಡುತ್ತಿದ್ದ ಮಗು ರಾತ್ರಿಯೊಳಗೆ ಉಸಿರುಗಟ್ಟಿಸಿಕೊಂಡು ಬಿಟ್ಟಿತ್ತು. ವೈದ್ಯರು ಬರುವುದರೊಳಗೆ ಮೂಗಿನಿಂದ ರಕ್ತ ತೊಟ್ಟಿಕ್ಕುತ್ತಿತ್ತು. ಪುಟ್ಟ ಗುಲಾಬಿ ಬಣ್ಣದ ಮಗುವಿಗೆ ಗುಲಾಬಿ ಹೂವಿನ ಹಾರ, ಚಾದರ್ನಲ್ಲಿ ಇಟ್ಟುಕೊಂಡು ಖಬರಸ್ಥಾನಕ್ಕೆ ತಂದಿದ್ದರು.
ಗೋರಿಯನ್ನು ಸರಿ ಮಾಡಿದ ನಂತರ ಮೌಲಾಸಾಬ ಸಾವು-ಬದುಕಿನಬಗ್ಗೆ ಮಾತನಾಡುತ್ತಿದ್ದ. ನಾವೆಲ್ಲರೂ ಒಂದು ದಿನ ಇಲ್ಲಿಗೆ ಬರಲೇಬೇಕು ಇದನ್ನು ನೆನಪು ಮಾಡಿಕೊಳ್ಳುತ್ತಾ ಚೆನ್ನಾಗಿ ಬಾಳಬೇಕು...
ಶ್!ಸದ್ದು ಮಾಡಬೇಡಿ ಅಲ್ಲೇ ಪಕ್ಕದಲ್ಲಿ ಮೈಮೇಲೆ ಬಂಡೆ ಕಲ್ಲುಗಳನ್ನು ಹೇರಿಕೊಂಡು ಮಲಗಿದ್ದಾನಲ್ಲ ಅದು ಖಾದರ್ನದು. ಮೆಲ್ಲಗೆ ಬನ್ನಿಆವಾಜ್ ಮಾಡಬೇಡಿ. ಈ ಕಡೆ ಬಂದು ನೋಡಿ ಸರಿಯಾಗಿ ಕಾಣಿಸುತ್ತೆ. ಊರಿನಲ್ಲೆಲ್ಲ ರೌಡಿಯಂತೆ ಮೆರೆಯುತ್ತಿದ್ದ ಖಾದರ್ ಕುಡಿದನೆಂದರೆ ಮನುಷ್ಯನೇ ಅಲ್ಲ. ಸಣ್ಣ ಪುಟ್ಟ ಗೌಂಡಿ ಕೆಲಸ ಮಾಡಿಕೊಂಡಿದ್ದ ಖಾದರ್ ತನ್ನದಲ್ಲದ ತಪ್ಪಿಗೆ ಜೈಲಿಗೆ ಹೋಗಿ ಬಂದ. ನಂತರ ಅವನು ಕೆಲಸ ಮಾಡಬೇಕೆಂದರೂ ಕೆಲಸ ಸಿಗಲಿಲ್ಲ. ಕೆಲಸ ಸಿಕ್ಕಲೆಲ್ಲ ಹೊಡೆದಾಡ್ತಾ ಇದ್ದ. ಮನೆಯವರಿಗೆ ಬೇಡವಾಗಿದ್ದ ಖಾದರ್ಗೆ ಕೊನೆಗಾಲಕ್ಕೆ ಜೊತೆಯಾಗಿದ್ದು ಅವನ ನಾಯಿ ಮಾತ್ರ. ಅವನು ಸತ್ತಿದಾನೆ ಅಂದರೂ ಜನ ಅವನ ಹೆಣ ಸಮೀಪ ಬರಲಿಲ್ಲ. ಕೊನೆಗೆ ಜಮಾತ್ನ ಜನ ಸೇರಿಕೊಂಡು ಅವನ ಮಣ್ಣು ಮಾಡಿದರು.
ಇಲ್ಲಿ ನೋಡಿ, ತಲೆ ಹತ್ತಿರ ಒಂದು, ಕಾಲ ಕಡೆ ಒಂದು ಕಲ್ಲು ಇಟ್ಟುಕೊಂಡು ಗೋರಿಯೊಳಗೆ ಮಲಗಿದ್ದಾನಲ್ಲ ಮೆಹಬೂಬ ಅಂತಾ. ಹೂವಿನ ಅಂಗಡಿ ಇಟ್ಟುಕೊಂಡಿದ್ದ ಮೆಹಬೂಬನಿಗೆ ಇಬ್ಬರು ಮಕ್ಕಳು, ಹೆಂಡತಿ ತೀರಿಕೊಂಡರೂ 2ನೇ ಮದುವೆಯಾಗಿದ್ದಿಲ್ಲ. ಊರಲ್ಲಿ ನಡೆಯುವ ಯಾವುದೇ ಸಮಾರಂಭಕ್ಕೆ, ದೇವರ ಜಾತ್ರೆಗೆ, ಮೊಹರಂ ಡೋಲಿಗಳಿಗೆ ಇವನದೇ ಹೂವಿನ ಶೃಂಗಾರ. ಮಕ್ಕಳಿಗೆ ಓದಿಸಿ ದೊಡ್ಡ ವ್ಯಕ್ತಿಗಳನ್ನಾಗಿ ಮಾಡಬೇಕೆನ್ನುವ ಕನಸು ಕಾಣ್ತಿದ್ದ. ಮಕ್ಕಳಿಗೆ ವಿದ್ಯೆ ಹತ್ತಲಿಲ್ಲ. ಅಂಗಡೀಲಿ ಕುರೋಕೆ ಶುರು ಮಾಡಿದರು. ವಯಸ್ಸಿಗೆ ಬಂದ ಮಕ್ಕಳು ನಮಾಜನ್ನಾದರೂ ಕಲಿಯಲಿ ಅಂತಾ ಮಸೀದಿ ಕಳಿಸುತ್ತಿದ್ದ. ಇಬ್ಬರೂ ತಪ್ಪದೇ ನಮಾಜ್ ಮಾಡುತ್ತಿದ್ದರು.
ಒಂದು ದಿನ ದೊಡ್ಡವನು ಅಬ್ಬಾ ಮಸೀದಿಯವರೆಲ್ಲ ಸೇರಿಕೊಂಡು ಇಸ್ತೆಮಾಕ್ಕೆ ಹೊಂಟಾರ ನಾವೂ ಹೋಗ್ತೀವಿ ಅಂದಾಗ ಮೆಹಬೂಬ ಮಕ್ಕಳು ಹೀಗಾದರೂ ಒಳ್ಳೇ ದಾರಿ ಹತ್ತಲಿ ಅಂತ ಖುಷಿಯಿಂದ ಕಳಿಸಿ ಕೊಟ್ಟಿದ್ದ. ಇಸ್ತೇಮಾಕ್ಕೆ ಹೋದವರು ಎರಡು ತಿಂಗಳ ನಂತರ ವಾಪಸ್ಸಾದರು. ಸಣ್ಣ ಸಣ್ಣ ಗಡ್ಡ ಬೆಳೆಸಿದ್ದರು. ತಲೇಲಿ ಯಾವಾಗಲೂ ಟೋಪಿ ಹಾಕಿಕೊಂಡಿರುವುದನ್ನು ಕಲಿತಿದ್ದರು. ಧಾಮರ್ಿಕವಾಗಿರುವ ಮಕ್ಕಳನ್ನು ಕಂಡು ಮೆಹಬೂಬ ಸಂತಸಗೊಂಡ. ಆದರೆ ಅವನ ಸಂತಸ ಬಹಳ ದಿನ ಉಳಿಯಲಿಲ್ಲ. ಮನೆಯಲ್ಲಿದ್ದ ಅಜ್ಜ ಅಜ್ಜಿಯರ, ತಾಯಿಯ ಫೋಟೋಗಳನ್ನ ಮಕ್ಕಳು ತೆಗೆದು ಟ್ರಂಕ್ನಲ್ಲಿಟ್ಟರು. ಮನೇಲಿ ಯಾವುದೇ ದೇವರ ಫೋಟೋಗಳನ್ನು ಇಡಗೊಡಲಿಲ್ಲ. ದಗರ್ಾಕ್ಕೆ ಹೋಗುತ್ತಿದ್ದ ಅಪ್ಪನ ಜೊತೆ ಜಗಳಕ್ಕೆ ನಿಂತ ಮಕ್ಕಳು ಹೀಗಿನಿಂದ ನೀನು ದಗರ್ಾಕ್ಕೆಲ್ಲ ಹೋಗಬಾರದು, ಮನೇಲಿ ಲೋಬಾನ ಹಾಕಬಾರದು, ದೇವರ ಫೋಟೋ ಇಡಬಾರದು, ಹೂವು ಹಾಕಬಾರದು ಅಂತಾ ಶುರು ಹಚ್ಚಿದರು. ಊರಿನಲ್ಲಿಯ ಎಲ್ಲ ದೇವರಿಗೆ ಹೂವು ಕೊಡುತ್ತಿದ್ದ ಮೆಹಬೂಬನಿಗೆ ತನ್ನ ಮನೆಯ ದೇವರ ಕೋಣೆಯಲ್ಲಿ ಹೂವು ಇಡಲಾರದಂಗಾಯ್ತು, ಅಷ್ಟಕ್ಕೆ ಸುಮ್ಮನಾಗದ ಮಕ್ಕಳು ಸಂಬಂಧಿಕರ ಹೆಣದ ಡೋಲಿಗೆ ಹೂವಿನ ಚಾದರ್ ಹಾಕಲಿಕ್ಕೆ ಬಿಡುತ್ತಿರಲಿಲ್ಲ. ಹೂವಿನ ಹಾರ ಹಾಕಲೂ ಬಿಡುತ್ತಿರಲಿಲ್ಲ. ಮಕ್ಕಳ ಈ ವರ್ತನೆಗೆ ಮೆಹಬೂಬ ಬಹಾಳ ಬೇಜಾರು ಮಾಡಿಕೊಳ್ಳುತ್ತಿದ್ದ ಎಲ್ಲಿಂದಲೋ ಎನೋ ಕಲ್ತು ಬಂದು ಇದೆಲ್ಲ ಶುರು ಹಚ್ಚಬ್ಯಾಡ್ರಿ, ನಮ್ಮ ಹಳೆಯ ರಿವಾಜಿನಂತೆ ಇರೋಣ ಅನ್ನುತ್ತಿದ್ದರೆ, ಮಕ್ಕಳೂ ಮಾತ್ರ ಕೇಳುತ್ತಿರಲಿಲ್ಲ. ಕೊನೆಗೊಂದು ದಿನ ಸತ್ತ ಮೆಹಬೂಬನ ಡೋಲಿಗೆ ಮಕ್ಕಳು ಹೂವನ್ನು ಮುಟ್ಟಿಸಲಿಲ್ಲ. ಗೋರಿಯನ್ನು ಕಟ್ಟಿಸಲಿಲ್ಲ. ಕಾಲು ಮತ್ತು ತಲೆಯ ಹತ್ತಿರ ಕಲ್ಲಿಟ್ಟರು. ಊರೆಲ್ಲಾ ಹೂವಿನಿಂದ ಮೆರೆಸುತ್ತಿದ್ದ ಮೆಹಬೂಬನಿಗೆ ಸತ್ತಮೇಲೆ ಮೊಳ ಹೂವು ಸಿಗಲಿಲ್ಲ. ಊರಿನ ಜನ ಮರುಗಿದರು.
ಸ್ಮಶಾನದ ಪ್ರವೇಶ ಮಾಡುತ್ತಲೇ ಬರುವ ವೈರಾಗ್ಯವಿದೆಯೆಲ್ಲ ಅದು ಕ್ಷಣಿಕ ಮಾತ್ರವಂತೆ ನಿಜ. ದೇಹವನ್ನು ಗೋರಿಯಲ್ಲಿಡುವಾಗ ಜೀವನದ ಮೇಲೆ ಬೇಸರ ಬಂತು. ಯಾಕಾದರೂ ಇಷ್ಟೊಂದು ಒದ್ದಾಡ್ತಿವೋ ನಾವೆಲ್ಲ ಅನಿಸುತ್ತಿತ್ತು. ಅಷ್ಟರಲ್ಲೇ ಪೋನ್ ವಟಗುಟ್ಟಿತು. ಎಲ್ಲಿದಿಯೋ ನಿನ್ನೇನೆ ದುಡ್ಡು ಕೊಡ್ತೀನಿ ಅಂದಿದ್ದಿ, ಬಡ್ಡಿನೂ ಕೊಟ್ಟಿಲ್ಲ ಅತ್ತ ಕಡೆಯ ಸಾಲ ಕೊಟ್ಟವನ ದ್ವನಿಗೆ ಸೀದಾ ಧರೆಗಿಳಿದು ಬಂದು ಹೇಳಿದೆ ಇಲ್ಲಾ ನಾಳೆ ಕೊಡ್ತೀನಿ.
**
ಮರುದಿನ ಎಂದಿನಂತೆ ಜಾಗಿಂಗ್ ಬಂದೆ ಮಹೇಶ ಒಬ್ಬನೇ ಬಂದಿದ್ದ . ಓಡೋಡಿ ಬಂದು ಕುಳಿತೆ ಒಮ್ಮೇಲೆ ತಲೆ ತಿರುಗಿದಂಗಾಗಿ ವಾಂತಿ ಮಾಡಿಕೊಂಡೆ. ಮಹೇಶ ಕೂಗಿದ ಏನಾಯ್ತೋ?
ಇಲ್ಲ ನನ್ನದು ತಪ್ಪಾಯಿತು, ನನ್ನನ್ನ ಕ್ಷಮಿಸಿಬಿಡು ಚಿಕನ್ ಪೀರಾಸಾಬ ಗೋಗರೆಯುತ್ತಿದ್ದ. ಮುನಿಸಿಕೊಂಡು ಕುಳಿತಿದ್ದ ಅವನ ಹೆಂಡತಿ ತಲೆಯನ್ನು ಮೊಣಕಾಲಿನಲ್ಲಿ ಹುದುಗಿಸಿ ಅಳುತ್ತಿದ್ದಳು. ಅವಳು ನಗ್ನಳಾಗಿಯೇ ಕುಳಿತಿದ್ದಳು.
ನಾನು ಮಾಡಿದ ತಪ್ಪಾದರೂ ಏನು? ಅವಳ ತಲೆ ಎತ್ತಿ ಕೇಳಿದಳು. ಅವಳ ಕಣ್ಣುಗಳಲ್ಲಿ ಸಾಗರದಷ್ಟು ನೀರಿತ್ತು. ಏನೂ ಅರಿಯದ ಮುಗ್ದತೆಯಿತ್ತು. ಮತ್ತೇ ಕೇಳಿದಳು ನಾನು ಮಾಡಿದ್ದಾದರೂ ಏನು?
ಪೀರಾಸಾಬ ಹೇಳುತ್ತಿದ್ದ ನನಗೆ ಅರಿಯದೇ ತಪ್ಪು ಮಾಡಿಬಿಟ್ಟೆ, ದಯವಿಟ್ಟು ನನ್ನನ್ನು ಕ್ಷಮಿಸು. ದುಡುಕಿನಲ್ಲಿ ನಿನ್ನ ಶೀಲದ ಬಗ್ಗೆ ಶಂಕೆ ಪಟ್ಟೆ. ನೀನು ಹೇಳಿದ್ದೆ ನಾನು ತಂದೆಯಾಗ್ತಾ ಇದೀನಾ ಅಂತ ಎಷ್ಟು ಖುಷಿಯಾಗಿದ್ದೆ ಗೊತ್ತಾ? ಅದೇ ಖುಷಿಯಲ್ಲಿ ಅಂಗಡಿಗೆ ಬಂದೆ. ರಮೀಜಾ ಮದ್ಯಾಹ್ನ ಅಂಗಡಿಗೆ ಬಂದವಳೇ ಕೇಳಿದಳು. ಆ ಮಗುವಿನ ಅಪ್ಪ ನೀನೇನಾ ಅಂತ, ಸಿಟ್ಟಿನಿಂದ ಕೆನ್ನೆಗೆ ಬಾರಿಸಿದೆ. ಕಣ್ಣೀರು ಸುರಿಸುತ್ತಲೇ ಹೇಳಿದಳು. ಬಹಳ ದಿನಗಳಿಂದ ಹೇಳಬಾರ್ದು ಅಂತ ಇದ್ದೆ. ಆದರೆ ನನ್ನ ಮಾತು ನೀವು ಕೇಳಲ್ಲ ಅಂತ ಸುಮ್ಮನಿದ್ದೆ. ಹಿಂದಿನ ಓಣಿಯ ಇಜಾಜ್ನಿಗೂ ಪಿರ್ದೋಸ್ಳಿಗೂ ಹಳೆಯ ಸಂಬಂದ ಇದೆ. ಅವನು ಅವಳು ಒಂದೇ ಶಾಲೇಲಿ ಒದ್ತಾ ಇದ್ರು ಅಂದ್ಳು. ಸಿಟ್ಟಿಗೆದ್ದ ನಾನು ಮನೆಗೆ ಬಂದ್ರೆ ನೀನು ಮನೆಯ ಬಾಗಿಲಲ್ಲಿ ನಿಂತು ನಗುತ್ತಾ ಕೈಯಾಡಿಸುತ್ತಿದ್ದೆ. ಅತ್ತ ನೋಡಿದರೆ ನಿನ್ನ ಗೆಳೆಯ ಇಜಾಜ್ ಹೊರಟಿದ್ದ. ಮನೆಯೊಳಗೆ ಬಂದವನೇ ಕೂಗಿ ಕರೆದ, ಕೈಯಲ್ಲಿದ್ದ ಮಚ್ಚನ್ನು ನಿನಗೆ ಚುಚ್ಚಿದೆ, ಆವಾಗಲೂ ನೀ ಕೇಳ್ತಾ ಇದ್ದದ್ದು ಕಾಡ್ತಾ ಇತ್ತು.
ನನ್ನ ತಪ್ಪಾದರು ಏನು?
ನನ್ನ ಮಣ್ಣು ಮಾಡಿದ ನಂತರ ಇಜಾಜ್ ದಾರಿಯಲ್ಲಿ ಸಿಕ್ಕು ಹೇಳಿದ ಜೀಜಾಜಿ, ನನ್ನ ತಂಗಿ ನಿನ್ನೆ ತಾನೆ ಸಿಹಿ ಸುದ್ದಿ ಹೇಳಿ, ತನ್ನ ತವರು ಮನೆಯವರಿಗೆ ಹೇಳಿ ಬಾ ಎಂದು ಸಂತೋಷದಿಂದ ನಗು ನಗುತ್ತಾ ಕಳಿಸಿದ್ದಳು. ಇವತ್ತು ನೋಡಿದರೆ ಅವಳಿಲ್ಲ ಎಂದತ್ತ. ಅಲ್ಲಿಯ ತನಕ ನಿನ್ನ ಮೇಲೆ ಇದ್ದ ಸಿಟ್ಟು ಇಳಿದಂತಾಯಿತು. ಮನೆಗೆ ಹೋದವನೆ ರಮೀಜಾಳ ಬಾಯಿ ಬಿಡಿಸಿದೆ. ಇಷ್ಟು ವರ್ಷ ಆದರೂ ನನ್ನಲ್ಲಿ ಹುಟ್ಟದ ಜೀವ ಅವಳಲ್ಲಿ ಹುಟಿದ್ದಕ್ಕೆ ಹೊಟ್ಟೆಕಿಚ್ಚುಪಟ್ಟು ಅವಳು ನಿನ್ನ ಬಗ್ಗೆ ಇಲ್ಲಸಲ್ಲದ್ದನ್ನ ಹೇಳಿದ್ದನ್ನ ಒಪ್ಪಿಕೊಂಡಳು.
ಪ್ರೀತಿಯ ಅರಗಿಣಿಯಂತಿದ್ದ ನಿನ್ನನ್ನು ಕೊಂದ ತಪ್ಪಿಗೆ ನಾನು ನೇಣುಹಾಕಿಕೊಂಡೆ...
ನನಗೆ ಕ್ಷಮಿಸಿಬಿಡು ನನ್ನದು ತಪ್ಪಾಯಿತು ಗೊಗರೆಯುತ್ತಲೇ ಇದ್ದ.
ಅವಳು ಕೇಳಿದಳು ನನ್ನ ಒಂದು ಮಾತು ಕೇಳಬಹುದಿತ್ತಲ್ಲನನ್ನ ತಪ್ಪಾದರೂ ಏನು? ನನ್ನನ್ನು ಯಾಕೆ ಕೊಂದಿ?... ಅವಳು ಕೇಳುತ್ತಲೇ ಇದ್ದಳು ಅವನು ಹೇಳುತ್ತಲೇ ಇದ್ದ..
ಮಹೆಬೂಬ ತನ್ನ ಗೋರಿಯ ಮೇಲೆ ಖಬರಸ್ತಾನದ ಅಂಚಿನಲ್ಲಿ ಬೆಳೆದಿದ್ದ ಕಾಡು ಹೂಗಳನ್ನು ತಂದಿಡುತ್ತಿದ್ದ. ಗೋರಿಯ ಮೇಲೆಲ್ಲಾ ಹೂವಿನಿಂದ ಶೃಂಗಾರ ಮಾಡುತ್ತಿದ್ದ. ಅತ್ತ ಇತ್ತ ನೋಡುತ್ತ ಹೇಳುತ್ತಿದ್ದ. ಹೂವು ಇರೋದು ಪೂಜೆಗೆ, ಮುಡಿಯೋದಿಕ್ಕೆ.. ಶೃಂಗಾರಕ್ಕೆ, ಡೋಲಿಯ ಮೇಲೆ ಹಾಕುವದಕ್ಕೆ.
ನಗುವಿನೊಂದಿಗೆ ಹುಟ್ಟಿ ನಗುವಿನೊಂದಿಗೆ ಸತ್ತ ಮಗು ತನ್ನ ಗುಲಾಬಿ ತುಟಿಗಳನ್ನು ತುಸುವೇ ತೆರೆದು ನಗುತ್ತಿತ್ತು. ಯಾವುದೇ ಭಾಷೆ ಅರಿಯದ ಅದು ನಗುತ್ತಲೇ ಇತ್ತು.
ಖಾದರ್ ಗೋರಿಯ ಮೇಲೆ ಕುಳಿತು ತಾನೊಬ್ಬನೇ ವಟಗುಟ್ಟುತ್ತಿದ್ದ ಈ ಪ್ರಪಂಚಾನೇ ಹಿಂಗೆ. ಎಲ್ಲರೂ ಕಳ್ಳ ನನ್ಮಕ್ಳು. ನಾನು ಕದೀಲಿಲ್ಲ. ಅಂದರೆ ಸಾಕ್ಷಿ ಬೇಕಂತೆ ಇವರಿಗೆ. ಲಫಡಾ, ಲಫಂಗ ದುನಿಯಾ, ನಿಯತ್ತಿಲ್ಲದ ದುನಿಯಾ, ನನ್ನ ನಾಯಿಯಷ್ಟೂ ನಿಯತ್ತಿಲ್ಲದ ಜನ.
ಹಾಜಿ ಮೊಹ್ಮದ್ ತನ್ನ ಗೋರಿಯ ಮೇಲೆ ಕುಳಿತು ದೇವರ ದ್ಯಾನ ಮಾಡುತ್ತಿದ್ದ ಆಗಾಗ ಇಪ್ಪತ್ತು ರೂಪಾಯಿ ಕೆಜಿಗೆ ಎನ್ನುತ್ತಿದ್ದ
ಖಬರಸ್ತಾನ ಎನ್ನುವುದು ಶಾಂತಿಯ ತಾಣವಲ್ಲ, ಗಜಿಬಿಜಿ ನಿಮ್ಮ ಮೀನಿನ ಸಂತೆಯಂತೆ.
ಹಿಂದೂಗಳ ಸ್ಮಶಾನದಲ್ಲೂ ಇದೇ ಗಜಿಬಿಜಿ ನಿಮ್ಮ ವಾರದ ಸಂತೆಯಂತೆಯೇ
ಅಯ್ಯೋ.. ನಿಮಗೆ ಹೇಳೋದೆ ಮರ್ತು ಬಿಟ್ಟಿದ್ದೆ. ಇದೆಲ್ಲಾ ನನಗೆ ಹೇಗೆ ಗೊತ್ತಾಯ್ತು ಅಂತಾನಾ. ಇಲ್ಲಿ ನೋಡಿ ಹೊಸ ಪ್ರೇಷ್ ಗೋರಿಯೊಂದು ಕಾಣ್ತಾ ಇದೆಯಾ? ಇವತ್ತು ಬೆಳಿಗ್ಗೆ ತಾನೇ ತೋಡಿ, ಮುಚ್ಚಿರೋದು. ಹೂವಿನ ಪರಿಮಳ, ಅಗರಬತ್ತಿ ವಾಸನೆ ಇನ್ನೂ ಬರ್ತಾನೇ ಇದೆ. ಅದು ನನ್ನದೇ. ತಲೆ ಚಕ್ರ ಬಂದು ಬಿದ್ದೋನು ಒಂದು ವಾರ ಸಾವು ಬದುಕಿನೊಂದಿಗೆ ಒದ್ದಾಡಿದೆ. ಬ್ರೈನ್ ಟ್ಯೂಮರೋ ಎಂತದೋ ಅಂತೆ. ನಿನ್ನೆ ಸೋಲೊಪ್ಪಿಕೊಂಡುಬಿಟ್ಟೆ.
ಮೈಮೇಲೆ ಒಂದೇ ಸಮನೆ ಮಣ್ಣಿನ ವಜ್ಜೆ ತಡೆಯೋಕಾಗ್ಲಿಲ್ಲ. ಮೇಲ್ಬಂದೆ, ಈಗ ಪರವಾಗಿಲ್ಲ.
ಕಥೆ ಬರೆಯೋದಿಕ್ಕೆ ಪ್ರಶಸ್ತವಾದ ಸ್ಥಳ. ಬರೀತಾ ಕೂತಿದೀನಿ, ಕಾಯ್ತಾ ಇರ್ತೀನಿ, ಬರ್ತೀರಾ ತಾನೇ?
ಸಿರಾಜ್ ಬಿಸರಳ್ಳಿ, ಮುಖ್ಯಸ್ಥರು ಕನ್ನಡ ನೆಟ್ ಡಾಟಕಾಮ್ ಕೊಪ್ಪಳ.
ಸದ್ಭವ್, ಇಂಚರ, ಅಂಕಿತಾ
ಸ್ಟೇಟ್ ಬ್ಯಾಂಕ್ ಹೈದರಬಾದ್ ಕೇಂದ್ರ ಕಛೇರಿಯೂ ಆಯೋಜಿಸುವ "ಎಸ್.ಬಿ.ಹೆಚ್ ರಚನಾ 2012" ರ ಸಾಹಿತ್ಯಿಕ ಸ್ಫಧರ್ೇಯಲ್ಲಿ ಎಸ್.ಶೇಖರಗೌಡ ರವರ ಈ ಕಥೆಯೂ ಪ್ರಥಮ ಸ್ಥಾನವನ್ನು ಪಡೆದಿದೆ. 05/05/2012ರಂದು ಹೈದರಾಬಾದಿನ ಪಂಡಿತ ರವೀಂದ್ರ ಭಾರತಿ ಸಭಾಂಗಣದಲ್ಲಿ ಈ ಕಥೆಗೆ ಪ್ರಶಸ್ತಿ ನೀಡಲಾಗುವುದು. ತನ್ನಿಮಿತ್ಯ ವಿಶೇಷ ಸಂಚಿಕೆಯಲ್ಲಿ ವಿಶೇಷ ಕಥೆ. (ಸಂ)
ಸದ್ಭವ್ಯು.ಎಸ್.ನಲ್ಲಿ ಎಂ.ಎಸ್. ಮಾಡಲಿಕ್ಕೆ ಡೆಪ್ಯೂಟೇಷನ್ ಮೇಲೆ ನನ್ನನ್ನು ಕಳುಹಿಸುವುದಕ್ಕೆ ನಮ್ಮ ಕಂಪನ ತೀಮರ್ಾನಸಿ, ನಧರ್ಾರವನ್ನು ಪ್ರಕಟಿಸಿದಾಗ ನನಗೆ ಒಂದು ರೀತಿಯ ಸಂತೋಷವಾದರೂ ನನ್ನ ಒಪ್ಪಿಗೆಯನ್ನು ತಿಳಿಸಲು ಎರಡು ದಿನಗಳ ಕಾಲಾವಕಾಶ ಕೇಳಿದ್ದೆ. ನಾ ಕೆಲಸ ಮಾಡುವ ಕಂಪನಯಲ್ಲೇ ಬೇರೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ನನ್ನ ಜೀವನ ಸಂಗಾತಿ ಇಂಚರಳಿಗೆ ಈ ವಿಷಯ ಗೊತ್ತಾಗಿ, ನನ್ನನ್ನು ಅಭಿನಂದಿಸಲು ನನ್ನ ವಿಭಾಗಕ್ಕೆ ಓಡೋಡಿ ಬಂದು ನನ್ನ ಕೈ ಕುಲುಕಿ ಅಭಿನಂದಿಸಿದ್ದಳು. ಮನೆಯಲ್ಲಾದರೆ ತಬ್ಬಿ ಹಿಡಿದು ಮುದ್ದು ಮಾಡಿ ಅಭಿನಂದಿಸುತ್ತಿದ್ದಳೇನೋ?
ಏನೋ ಸದ್ಭವ್, ಇಂಥಹ ಸುವಣರ್ಾವಕಾಶ ನನ್ನನ್ನು ಹುಡುಕಿಕೊಂಡು ಬಂದಿರುವಾಗ, ನನ್ನ ನಧರ್ಾರ ತಿಳಿಸಲು ಎರಡು ದಿನಗಳ ಕಾಲಾವಕಾಶ ಬೇಕೆಂದು ಕೇಳಿರುವಿಯಂತೆ? ಮನಸ್ವೀ ಅಭಿನಂದಿಸುತ್ತಾ ತನ್ನ ಮನದಾಳದ ಮಾತು ಹೇಳಿದ್ದಳು.
ನನ್ನ ಮತ್ತು ಇಂಚರಳ ಮದುವೆಯ ಎರಡನೆಯ ವಾಷರ್ಿಕೋತ್ಸವವನ್ನು ಹೋದ ತಿಂಗಳವಷ್ಟೇ ಆಚರಿಸಿಕೊಂಡಿದ್ದೇವೆ. ವೈವಾಹಿಕ ಜೀವನದ ಮಧುರ ಕ್ಷಣಗಳಲ್ಲಿ ಎರಡು ವರ್ಷಗಳು ಕಳೆದುದು ನಮಗಿಬ್ಬರಿಗೂ ಗೊತ್ತೇ ಆಗಲಿಲ್ಲ. ಮೈಸೂರು, ಊಟಿ, ಕೊಡೈಕೆನಾಲ್, ಮುನ್ನಾರ್ಗಳಲ್ಲಿ ಮಧುಚಂದ್ರ, ಮಡಿಕೇರಿಯ ಅಬ್ಬಿ ಫಾಲ್ಸ್, ಜೋಗದ ಗುಂಡಿ, ಉಂಚಳ್ಳಿ ಜಲಪಾತ, ಯಲ್ಲಾಪುರದ ಮಾಗೋಡು ಜಲಪಾತ, ಸೋಂದಾದ ಶಿವಗಂಗಾ ಜಲಪಾತ ಮತ್ತು ಅವುಗಳ ಸುತ್ತಲಿನ ರಮ್ಯ ತಾಣಗಳ ಸುತ್ತಾಟದಲ್ಲಿ ದಿನಗಳು ಕಳೆದದ್ದೇ ಗೊತ್ತಾಗಲಿಲ್ಲ. ನನ್ನೆ, ಮೊನ್ನೆ ಮದುವೆಯಾಗಿದ್ದೇವೆ ಎಂದೆನಸುತ್ತಿತ್ತು ಇಬ್ಬರಿಗೂ.
ಹೀಗಿರುವಾಗ ಇಂಚರಳನ್ನು ಒಂಟಿಮಾಡಿ ಯು.ಎಸ್.ಗೆ ಹಾರಿ ಎರಡು ವರ್ಷಗಳವರೆಗೆ ಎಂ.ಎಸ್. ಮಾಡಲು ಮನಸ್ಸೇ ಆಗುತ್ತಿದ್ದಿಲ್ಲ.
ಅಂದು ಸಾಯಂಕಾಲ ನಾವು ಮನೆ ಸೇರಿದಾಗ ಇಂಚರ ನಾ ಮನಸ್ಸಿನಲ್ಲಿ ಅಂದುಕೊಂಡಂತೇ ಅಭಿನಂದಿಸಿದ್ದಳು ಬಹಳ ಹೊತ್ತಿನವರೆಗೂ ನನ್ನನ್ನು ತಬ್ಬಿ ಹಿಡಿದು. ಮದುವೆಯಾದ ಈ ಎರಡು ವರ್ಷಗಳಲ್ಲಿ ನಾವೆಂದೂ ಅಗಲೇ ಇಲ್ಲವೆಂದು ಹೇಳಬಹುದು. ಎಲ್ಲಿಗೆ ಹೋದರೂ ಇಬ್ಬರೂ ಜೊತೆ, ಜೊತೆಯಾಗಿಯೇ ತಿರುಗಾಡಿದ್ದೇವೆ. ಅವಳ ಊರಿಗೆ ಹೋಗಬೇಕಾದಾಗ, ನಮ್ಮ ಊರಿಗೆ ಹೋಗಬೇಕಾದಾಗ ಇಬ್ಬರೂ ಅಂಟಿಕೊಂಡೇ ಹೋಗಿ ಬಂದಿದ್ದೇವೆ. ನಾವಿಬ್ಬರೂ ಈ ರೀತಿ ಜೊತೆ, ಜೊತೆಯಾಗಿ ತಿರುಗಾಡುವುದನ್ನು ಕಂಡ ಕೆಲವರು, ಜಗತ್ತಿನಲ್ಲಿ ಇಲ್ಲದ ಗಂಡ-ಹೆಂಡತಿ ಇವರು ಎಂದು ಕುಹಕದ, ಈಷರ್ೆಯ ಮಾತುಗಳನ್ನಾಡಿದ್ದರೆ, ಕೆಲವರು ನಮ್ಮ ಅನ್ಯೋನ್ಯತೆಯನ್ನು ನೋಡಿ, ಹಾಡಿ ಹೊಗಳಿ ಆಶೀರ್ವದಿಸಿದ್ದಾರೆ, ಮೆಚ್ಚುಗೆ ಸೂಚಿಸಿದ್ದಾರೆ. ಲೋಕೋ ಭಿನ್ನ ರೂಢಿ ಅಲ್ಲವಾ? ಇಂಚರಳ ತಂಗಿಯಂತೂ ತುಂಟತನದಿಂದ ನಮ್ಮನ್ನು ರೇಗಿಸಿದ್ದೇ ರೇಗಿಸಿದ್ದು. ಅವಳ ತುಂಟಾಟದ ಮಾತುಗಳಿಂದ ನಾವಿಬ್ಬರೂ ಬಹಳಷ್ಟು ಖುಷಿ ಅನುಭವಿಸಿದ್ದೇವೆ.
ನಾನು ಮತ್ತು ಇಂಚರ ಒಂದೇ ಕಂಪನಯಲ್ಲಿ ಇಂಜಿನಯರುಗಳೆಂದು ಕೆಲಸ ಮಾಡುತ್ತಿದ್ದರೂ, ಅವಳ ಮನ ಗೆಲ್ಲಲು ನನಗೆ ಒಂದು ವರ್ಷವೇ ಹಿಡಿದಿತ್ತು. ಅವಳಿಗಿಂತ ಮೂರು ವರ್ಷ ಸೀನಯರ್ ನಾ ಸವರ್ಿಸೀನಲ್ಲಿ. ಅವಳು ಮೊದಲನೇ ದಿನ ಡ್ಯೂಟಿಗೆ ಹಾಜರಾದ ನಂತರ ನನ್ನ ವಿಭಾಗದಲ್ಲೇ ಕೆಲವು ತಿಂಗಳುಗಳವರೆಗೆ ಕೆಲಸ ಮಾಡಿದ್ದಳು. ಲವ್ ಎಟ್ ಫಸ್ಟ್ ಸೈಟ್ ಅಂತಾರಲ್ಲ, ಹಾಗೇ. ಅವಳನ್ನು ನೋಡಿದ ಮೊದಲ ದಿನವೇ ಅವಳು ನನ್ನ ಮನ ಸೆಳೆದಿದ್ದಳು. ಅವಳಲ್ಲಿ ನಾ ಆಕಷರ್ಿತನಾಗಿದ್ದೆ. ಮನದಲ್ಲೇ ಆರಾಧಿಸತೊಡಗಿದ್ದೆ. ಅವಳ ಮನದಿಂಗಿತ ತಿಳಿದುಕೊಳ್ಳುವಷ್ಟರಲ್ಲಿ ಒಂದು ವರ್ಷವೇ ಗತಿಸಿ ಹೋಗಿತ್ತು. ಅವಳ ಬಗೆಗಿನ ನನ್ನ ಮನದ ಒಲವನ್ನು ಬಿಚ್ಚಿಡಬೇಕೆಂದು ಬಹಳಷ್ಟು ಸಾರೆ ನಾ ಅಂದುಕೊಂಡರೂ ಧೈರ್ಯ ಸಾಲುತ್ತಿದ್ದಿಲ್ಲ. ಒಂದು ವೇಳೆ ಇಂಚರಳಿಗೇನಾದರೂ ನನ್ನ ಬಗ್ಗೆ ಒಲವು, ಆಸಕ್ತಿ ಇಲ್ಲದಿದ್ದರೇ? ಎಂಬ ಅನುಮಾನದ ಎಳೆ ನನ್ನನ್ನು ಸುಮ್ಮನರಿಸುತ್ತಿತ್ತು.
ಅಂದು ನಮ್ಮ ಕಂಪನಯ ಫೌಂಡೇಷನ್ ಡೇದ ಆಚರಣೆಯ ದಿನ. ಸಾಯಂಕಾಲ ನಮ್ಮ ಕಂಪನಯಲ್ಲಿ ಸಿಬ್ಬಂದಿಗಳಿಗೆಲ್ಲಾ ಭರ್ಜರಿ ಪಾಟರ್ಿಯೊಂದನ್ನು ಏರ್ಪಡಿಸಿದ್ದರು ಆಡಳಿತ ಮಂಡಳಿಯವರು. ಅಂದು ಇಂಚರಳೊಂದಿಗೆ ಮುಕ್ತವಾಗಿ ಮಾತಾಡಲು ಅವಕಾಶ ಒದಗಿ ಬಂದಿತ್ತು. ಪಾಟರ್ಿಯಲ್ಲಿ ಸಾಫ್ಟ್ ಡ್ರಿಂಕ್ಸ್, ಪ್ಯೂರ್ ವೆಜ್ ಊಟವನ್ನು ಅವಲಂಬಿಸಿದ್ದ ಕೆಲವೇ ಕೆಲವು ಜನರಲ್ಲಿ ನಾವೂ ಸಹ. ಇಂಚರಳೇ ನನ್ನನ್ನು ಹುಡುಕಿಕೊಂಡು ಬಂದಿದ್ದಳು. ಅವಳು ತಾನೇಗೇ ನನ್ನ ಹತ್ತಿರ ಬಂದುದರಿಂದ ನನಗೆ ಆನೆ ಬಲ ಬಂದಂತಾಗಿತ್ತು. ಊಟ ಮಾಡುತ್ತಾ, ನಾ ನನ್ನ ಮನದಲ್ಲಿ ಕೊರೆಯುತ್ತಿದ್ದ ವಿಚಾರವನ್ನು ಅವಳಿಗೆ ಅಂಜುತ್ತಾ, ಅಂಜುತ್ತಾ ತಿಳಿಸಿದ್ದೆ. ಅದಕ್ಕೆ ಅವಳು ಏನು ಹೇಳಿದಳು ಗೊತ್ತೇ? ಸದ್ಭವ್, ಈ ಮಾತು ನನ್ನ ಬಾಯಿಯಿಂದಲೇ ಬರಲಿ ಎಂದು ನಾ ಚಂದ್ರನಗಾಗಿ ಕಾಯುವ ಚಕೋರಿಯಂತೆ ಕಾಯುತ್ತಿದ್ದೆ. ನನಗೂ ಲವ್ ಎಟ್ ಫಸ್ಟ್ ಸೈಟ್ ಆಗಿದೆ ಕಣೋ ಎಂದು ಏಕವಚನದಲ್ಲಿ ಆತ್ಮೀಯವಾಗಿ ಮಾತಾಡುತ್ತಾ ನನಗೆ ಆತ್ಮೀಯಳಾಗಿದ್ದಳು. ಎಯ್ ಕಳ್ಳೀ, ನ ಬಹಳ ಬೆರಿಕಿ ಅದಿ ಬಿಡು ಎಂದು ಹೇಳುತ್ತಾ ಮೆದುವಾಗಿ ಅವಳ ತಲೆ ಕುಟ್ಟಿದ್ದೆ. ಮುಂದಿನ ಆರು ತಿಂಗಳಲ್ಲಿ ನಮ್ಮ ಮದುವೆಯೂ ಆಗಿತ್ತು.
ಇಂಥಹ ಅವಿನಾಭಾವ ಸಂಬಂಧಕ್ಕೆ ಅಂಟಿಕೊಂಡಿದ್ದ ನನಗೆ ಎರಡು ವರ್ಷಗಳವರೆಗೆ ಇಂಚರಳನ್ನು ಅಗಲಿ ಇರುವುದೆಂದರೆ ಸಹಿಸಲಸಾಧ್ಯವಾದ ಮಾತಾಗಿತ್ತು. ನರಿನಂದ ಹೊರ ತೆಗೆದ ಮೀನನಂತಾಗುತ್ತೆ ನನ್ನ ಪರಸ್ಥಿತಿ ಎಂದು ನನ್ನ ಮನದಾಳದ ತುಡಿತ. ಸದ್ಭವ್, ಇಂಥಹ ಅವಕಾಶ ಸಿಗುವುದು ಅಪರೂಪ. ಎರಡು ವರ್ಷ ಹೇಗೋ ಕಳೆದು ಹೋಗುತ್ತೆ. ನ ನರಾಳವಾಗಿ ಹೋಗಿ ಬಾ. ಈಗ ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಮೊಬೈಲು, ಇಂಟರ್ನೆಟ್ ಎಲ್ಲಾ ಇವೆ ಎಂದು ನನ್ನನ್ನು ಹುರಿದುಂಬಿಸಿ ಎಂ.ಎಸ್. ಮಾಡಲು ಕಳುಹಿಸಿದ್ದಳು ಇಂಚರ.
ಯು.ಎಸ್.ಗೆ ಹೋದ ನಂತರ ಮೊದಲ ವಾರದಲ್ಲಿ ನನಗೆ ತುಂಬಾ ಬೋರ್ ಆಗಿತ್ತು. ಕನರ್ಾಟಕದ ಯಾವ ವಿದ್ಯಾಥರ್ಿಯೂ ಇರಲಿಲ್ಲ. ನಾರ್ಥದಿಂದ ಮೂವರು ಹುಡುಗರಿದ್ದರೂ, ಯಾರೂ ಆತ್ಮೀಯರಾಗಲಿಲ್ಲ. ಇಬ್ಬರು, ಮೂವರು ಬಿಳಿ ತೊಗಲಿನ ಹುಡುಗಿಯರು, ಒಬ್ಬ ಕರಿಚರ್ಮದ ಆಫ್ರಿಕಾದ ಸಕತ್ತಾದ ಹುಡುಗಿ ನನ್ನ ಮೈ ಮೇಲೆ ಬೀಳಲು ಪ್ರಯತ್ನಿಸಿದ್ದರೂ, ನಾ ಅವರ ವಾಂಛೆಗೆ ಈಲ್ಡ್ ಆಗಿರಲಿಲ್ಲ. ಆದರೆ ಎರಡನೇ ವಾರದ ಮೊದಲನೇ ದಿನ ಅಂದರೆ ಸೋಮವಾರದ ದಿನ ನನಗೊಂದು ಆಶ್ಚರ್ಯ ಕಾದಿತ್ತು. ಗುಲಾಬಿ ಬಣ್ಣದ ವರ್ಕ ಸೀರೆಯಲ್ಲಿ ಮಿಂಚುತ್ತಿದ್ದ ಗುಲಾಬಿ ಬಣ್ಣದ ಯುವತಿಯೊಬ್ಬಳು ನಮ್ಮ ಕ್ಲಾಸಿನಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಳು. ಅವಳು ಕನ್ನಡದವಳೆಂದು ಗೊತ್ತಾದಾಗ ನನಗೆ ಹೇಳಲಾರದಷ್ಟು ಸಂತೋಷವಾಗಿತ್ತು. ನಾನೇ ಅವಳ ಹತ್ತಿರ ಹೋಗಿ ಪರಿಚಯ ಮಾಡಿಕೊಂಡಿದ್ದೆ. ಅವಳು ಅಂಕಿತಾ ಅಂತ ಬೆಂಗಳೂರಿನವಳು. ಬೆಂಗಳೂರಿನಲ್ಲಿ ಒಂದು ಪ್ರಸಿದ್ಧ ಕಂಪನಯಲ್ಲಿ ಕೆಲಸ ಮಾಡುತ್ತಿದ್ದಾಳಂತೆ. ಅವಳಿಗೂ ಇಂಚರಳಷ್ಟೇ ವಯಸ್ಸಿರಬಹುದೆಂದು ಅನಸುತ್ತಿತ್ತು. ಭಾರತದ ನಾರಿಯರ ಪ್ರತೀಕದಂತೆ ಸೀರೆಯಲ್ಲಿ ಮೋಹಕವಾಗಿ ಕಾಣುತ್ತಿದ್ದ ಅವಳನ್ನು ತುಂಬು ಹೃದಯದಿಂದ ಅಭಿನಂದಿಸಿದ್ದೆ. ಅವಳಿಗೂ ನಮ್ಮ ಅಪಾರ್ಟಮೆಂಟಿನಲ್ಲಿಯೇ ವಸತಿಗೆ ವ್ಯವಸ್ಥೆ ಮಾಡಲಾಗಿತ್ತು.
ಮುಂದಿನ ದಿನಗಳಲ್ಲಿ ನಾನು ಮತ್ತು ಅಂಕಿತಾ ತುಂಬಾ ಹತ್ತಿರವಾದೆವು. ನಾ, ನನ್ನ ಮತ್ತು ಇಂಚರಳ ಸಂಸಾರದ ಬಗ್ಗೆ ವಿವರವಾಗಿ ತಿಳಿಸಿದ್ದೆ. ಇಬ್ಬರೂ ಕಾಲೇಜಿಗೆ ಜೊತೆ ಜೊತೆಯಾಗಿಯೇ ಹೋಗುತ್ತಿದ್ದೆವು. ಇಲ್ಲಿನ ಪ್ರತಿಯೊಂದು ಘಟನೆಗಳ ವಿವರ ಇಂಚರಳಿಗೆ ಆಗಾಗ ವರದಿ ಒಪ್ಪಿಸುತ್ತಿದ್ದೆ. ಅಂಕಿತಾ ಇನ್ನೂ ಮದುವೆಯಾಗಿಲ್ಲವೆಂದು ನನಗೆ ಕನ್ಫರ್ಮ ಆಗಿದ್ದರೂ, ಅವಳನ್ನು ಕಾಡಿಸಬೇಕೆಂದು ಒಂದು ದಿನ ನಾ, ಅಂಕಿತಾ, ನನ್ನ ಪತಿ ಮಹಾಶಯರು ಏನು ಮಾಡುತ್ತಿರುವರು? ಎಂದು ಕೇಳಿದ್ದೆ. ಅದಕ್ಕೆ ಅಂಕಿತಾ, ಏನೋ ಸದ್ಭವ್, ನಾನು ಮದುವೆಯಾದವಳಂತೆ ಕಾಣುತ್ತಿರುವೆನಾ? ನನಗೆ ಮೆಚ್ಚುಗೆಯಾಗುವ ಹುಡುಗ ಇನ್ನೂ ಸಿಕ್ಕಿಲ್ಲ. ಅದಕ್ಕೇ ಮದುವೆಯಾಗಿಲ್ಲ. ನಾನು, ನನ್ನ ಅಪ್ಪ-ಅಮ್ಮ ಸಂಪನ್ನ, ಸದ್ಗುಣ, ಸುಂದರ ಹುಡುಗನ ಹುಡುಕಾಟದಲ್ಲೇ ಇದ್ದೇವೆ. ಹೇಗೂ ನ ಬೆಂಗಳೂರಿನಲ್ಲಿಯೇ ಇರುವಿಯಲ್ಲಾ? ನನ್ನನ್ನು ನನ್ನ ಮದುವೆಗೆ ಕರೆದೇ ಕರೆಯುತ್ತೇನೆ. ಓಕೇ ನಾ? ಎಂದಿದ್ದಳು ಅಷ್ಟೇ ತಮಾಷೆಯಾಗಿ.
ಶನವಾರ, ರವಿವಾರ ಆಗಾಗ ಸೈಟ್ ಸೀಯಿಂಗ್ಗೆಂದು ಇಬ್ಬರೂ ಜೊತೆ ಜೊತೆಯಾಗಿಯೇ ತಿರುಗುತ್ತಿದ್ದೆವು. ಆಗ ನನಗೆ ಇಂಚರಳದೇ ನೆನಪು. ನನ್ನ ಮನಸ್ಸಿನ ಭಾವನೆಗಳನ್ನು ಓದಿದವಳಂತೆ ಅಂಕಿತಾ, ಸದ್ಭವ್, ನನಗೆ ಇಂಚರಳ ನೆನಪು ಕಾಡುತ್ತಿರಬೇಕಲ್ಲ? ನ ಇಂಚರಳನ್ನು ತುಂಬಾ ಮಿಸ್ ಮಾಡಿಕೊಂಡ ಹಾಗಿದೆ. ನನ್ನ ಮುಖ ನೋಡಿದರೆ, ತಾಯಿಯಿಂದ ಅಗಲಿದ ಮಗುವಿನಂತೆ ತೋರುತ್ತಿದೆ. ಚಿಯರ್ ಅಪ್ ಮ್ಯಾನ್ ಎಂದು ನನ್ನ ಮನಕ್ಕೆ ಸಾಂತ್ವನದ ಮಜ್ಜನ ಎರೆಯುತ್ತಿದ್ದಳು ಆತ್ಮೀಯತೆಯಿಂದ. ದಿನಗಳದಂತೆಲ್ಲಾ ಅವಳು ನನ್ನನ್ನು ತುಂಬಾ ಹಚ್ಚಿಕೊಂಡಂತೆ ಕಾಣುತ್ತಿತ್ತು ಅವಳ ಮುಖ ಭಾವ ಮತ್ತು ಮಾತಿನ ಓಘ ಗಮನಸಿದರೆ.
ಅದೊಂದು ದಿನ ಲೋಕಲ್ ಸೈಟ್ ಸೀಯಿಂಗ್ಗೆಂದು ಇಬ್ಬರೂ ಹೋಗಿದ್ದೆವು. ಪಾಕರ್ೊಂದರಲ್ಲಿ ತಿರುಗುತ್ತಿದ್ದಾಗ, ಅಂಕಿತಾ ಯಾರ ಜೊತೆಗೋ ಮೊಬೈಲಿನಲ್ಲಿ ಮಾತಾಡುತ್ತಾ, ಸ್ಟೆಪ್ಸ್ನಲ್ಲಿ ಕೆಳಗಿಳಿಯುತ್ತಿದ್ದಳು. ಅವಳ ಪಕ್ಕದಲ್ಲಿ ನಾನೂ ಸಹ ಅವಳ ಕಡೆಗೇ ಗಮನವಿಟ್ಟು ಇಳಿಯುತ್ತಿದ್ದೆ. ಪಾವಟಿಗೆಗಳು ಮುಗಿದಿವೆ ಎಂಬ ಭ್ರಮೆಯಲ್ಲಿ ಆಕೆ ಕಾಲಿಡುವಾಗ ಬ್ಯಾಲೆನ್ಸ್ ತಪ್ಪಿ, ಕೆಳಗೆ ಬೀಳುವುದರಲ್ಲಿದ್ದಳು. ಅವಳ ನಡುವನ್ನು ಹಿಡಿದು ಅವಳನ್ನು ಬೀಳದಂತೆ ಹಿಡಿದುಕೊಳ್ಳಬೇಕೆಂದು ನಾ ನಡುವಿಗೆ ಕೈ ಹಾಕಬೇಕೆಂದರೆ, ಅವಳು ಬಾಗಿದ ರಭಸಕ್ಕೆ ನನ್ನ ಕೈ ಅವಳ ದೇಹದ ಯೌವನದ ಸಿರಿಯ ಭಾಗವನ್ನು ಹಿಡಿದುಕೊಂಡಿತ್ತು. ಒಂದು ಕ್ಷಣ ನನಗೆ ಒಂದು ರೀತಿಯ ರೋಮಾಂಚನವಾಗಿತ್ತಾದರೂ ಅವಳನ್ನು ಬೀಳದಂತೆ ತಡೆ ಹಿಡಿದಿದ್ದೆ. ಅವಳು ತಪ್ಪು ತಿಳಿದಾಳು ಎಂದುಕೊಂಡು ನಾ ತಕ್ಷಣ ನನ್ನ ಕೈ ತೆಗೆದು, ಸಾರಿ ಎಂದಿದೆ. ನಾ ಸಾರಿ ಹೇಳಿದ್ದಕ್ಕೆ ಆಕೆ ತಕ್ಷಣವೇ ಪ್ರತಿಕ್ರಿಯಿಸಿದ್ದಳು. ಸಾರಿ ಯಾಕೋ ಸದ್ಭವ್, ನಾ ಬೀಳುವುದನ್ನು ತಪ್ಪಿಸಬೇಕೆಂಬ ತವಕದಲ್ಲಿ ನ ನನ್ನನ್ನು ಹಿಡಿದಿದ್ದಿ ಅಷ್ಟೇ. ಇಲ್ಲದಿದ್ದರೆ ನಾ ಡೆಫಿನೆಟ್ ಆಗಿ ಕೆಳಗೆ ಬೀಳುತ್ತಿದ್ದೆ. ಆಗುವ ಅನಾಹುತ ತಪ್ಪಿಸಿದಿ. ಧನ್ಯವಾದಗಳು ಸದ್ಭವ್ ನನ್ನ ಸಮಯ ಪ್ರಜ್ಞೆಗಾಗಿ. ನನ್ನ ಕಣ್ಣುಗಳಲ್ಲಿ ತನ್ನ ಕಣ್ಣುಗಳ ನೆಟ್ಟು ಹೇಳಿದ್ದಳು ಅಂಕಿತಾ ಧನ್ಯತಾ ಭಾವ ವ್ಯಕ್ತ ಪಡಿಸುತ್ತಾ.
ಅಂಕಿತಾ
ಹಾಯ್, ನಾನು ಅಂಕಿತಾ ಅಂತ. 26ರ ಬೆಡಗಿ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವಳು. ಎಂ.ಎಸ್.ಗೆ ಇಲ್ಲಿ ಸೇರುವುದಕ್ಕಿಂತ ಮೊದಲು ನನಗೆ ಮನಸ್ಸಿನಲ್ಲಿ ತುಂಬಾ ಅಳುಕು ಇತ್ತು, ಅಲ್ಲಿ ಒಳ್ಳೇ ಕಂಪನ ಸಿಗುತ್ತದೋ ಇಲ್ಲವೋ ಎಂದು. ಅದಕ್ಕಾಗೇ ಮೀನ ಮೇಷ ಮಾಡುತ್ತಾ ಒಂದು ವಾರ ತಡವಾಗಿ ನಾ ಇಲ್ಲಿ ಸೇರಿಕೊಂಡೆ. ಇಲ್ಲಿ ಹಾಜರಾದ ಮೊದಲ ದಿನವೇ ನನಗೆ ಸದ್ಭವನ ಪರಿಚಯವಾಗಿತ್ತು. ರಿಯಲೀ ಹಿ ಈಜ್ ಎ ವೆರೀ ಸ್ಮಾರ್ಟ ಗೈ. ಅವ ನನಗೆ ಪ್ರತಿಯೊಂದು ವಿಷಯದಲ್ಲಿ ಸಹಾಯ ಒದಗಿಸುತ್ತಿದ್ದಾನೆ. ಮೇಲಾಗಿ ಇಬ್ಬರಿಗೂ ಒಂದೇ ಅಪಾರ್ಟಮೆಂಟಿನಲ್ಲಿ ವಸತಿ ಸಿಕ್ಕಿರುವುದರಿಂದ ತುಂಬಾ ಅನುಕೂಲವಾಗಿದೆ. ಎಂ.ಎಸ್.ಗೆ ಸೇರುವುದಕ್ಕಿಂತ ಮುಂಚೆ ನನ್ನ ಮನದಲ್ಲಿದ್ದ ಅಳುಕು ಮಾಯವಾಗಿತ್ತು.
ಪರಿಚಯವಾದ ದಿನದಿಂದ ಅವ ನಧಾನವಾಗಿ ದಿನದಿಂದ ದಿನಕ್ಕೆ ನನ್ನ ಮನಸ್ಸನ್ನು ಆಕ್ರಮಿಸತೊಡಗಿದ್ದಾನೆ. ಅವನಗೆ ಈಗಾಗಲೇ ಮದುವೆಯಾಗಿರುವುದರಿಂದ ನಾ ಬಹಳಷ್ಟು ವಿಚಾರ ಮಾಡಬೇಕಾಗಿದೆ. ಅವನೋ ತುಂಬಾ ಮೌಲ್ಯಾಧಾರಿತ ವ್ಯಕ್ತಿ. ಯಾವಾಗಲೂ ತನ್ನ ಪತ್ನಿಯನ್ನು ಹಾಡಿ ಹೊಗಳಿ ನೆನಪಿಸಿಕೊಳ್ಳುತ್ತಿರುತ್ತಾನೆ. ಅಂದು ಪಾಕರ್ಿನಲ್ಲಿ ನಾ ಬೀಳುತ್ತಿದ್ದಾಗ ನನ್ನನ್ನು ಬಳಸಿ ಹಿಡಿದು ಕಾಪಾಡಿದ್ದ ಅವ ಬಹಳ ಸೂಕ್ಷ್ಮ ಮನಸ್ಸಿನವ ಎಂದು ನನಗೆ ಅಂದೇ ಗೊತ್ತಾಗಿತ್ತು. ನನಗೋ ಅವನ ಬಿಸಿ ಅಪ್ಪುಗೆಯಲ್ಲಿ ಕರಗಬೇಕೆಂದು ನನ್ನ ಮನಸ್ಸು ಬಯಸುತ್ತಿದೆ. ಅವ ನನ್ನನ್ನು ತಬ್ಬಿ ಹಿಡಿದು, ನನ್ನೆದೆಯಲ್ಲಿ ತನ್ನ ಮುಖವಿಟ್ಟು ಮೈ ಮರೆಯಬೇಕು ಎಂದೆನಸುತ್ತಿದೆ. ನನ್ನ ಹುಚ್ಚು ಮನಸ್ಸು ಭೃಂಗದ ಬೆನ್ನೇರಿ ಸಾಗಿದೆ. ಅವನ ಪವಿತ್ರ ಸ್ನೇಹದ ಒಡನಾಟದಲ್ಲಿ ದಿನಗಳು ಸರಿದದ್ದೇ ಗೊತ್ತಾಗುತ್ತಿರಲಿಲ್ಲ.
ದಿನದಿಂದ ದಿನಕ್ಕೆ ಸದ್ಭವನ ಜೊತೆಗೇ ನಾ ಇರಬೇಕೆಂಬ ನನ್ನ ಬಯಕೆಯ ಸಸಿ ಹೆಮ್ಮರವಾಗುತ್ತಿದೆ. ನನ್ನ ಮನಸ್ಸು ಬಹಳ ದಿನಗಳವರೆಗೆ ತಾಕಲಾಟದಲ್ಲಿತ್ತು. ನನ್ನ ಮನಸ್ಸು ಅವನನ್ನು ಬಯಸುತ್ತಿರುವುದು ತಪ್ಪು ಎಂದು ಅನಸುತ್ತಿದೆ. ಇದರಿಂದ ಸದ್ಭವ್-ಇಂಚರರ ಸುಖ ಸಂಸಾರದಲ್ಲಿ ನಾ ಹುಳಿ ಹಿಂಡಿದಂತಾಗುತ್ತದೆ. ಇದರ ಬಗ್ಗೆ ಯೋಚಿಸುವುದು ಬೇಡ ಎಂದು ಒಂದು ಮನಸ್ಸು ತಿಳುವಳಿಕೆ ಹೇಳುತ್ತಿದ್ದರೂ, ಸದ್ಭವನೊಂದಿಗೆ ಸಂಬಂಧ ಗಟ್ಟಿಗೊಳಿಸಿಕೊಳ್ಳಬೇಕೆಂದು ಇನ್ನೊಂದು ಮನಸ್ಸು ಹಾತೊರೆಯುತ್ತಿದೆ. ಪ್ರೀತಿಯನ್ನು ಹಂಚಿಕೊಂಡು ಉಣ್ಣಲು ಆಗುವುದಿಲ್ಲವೇ? ಅದೆಷ್ಟೋ ಜನರು ಇಬ್ಬರ ಜೊತೆ ಪ್ರೀತಿ ಹಂಚಿಕೊಂಡು ಸುಖೀ ಸಂಸಾರ ನಡೆಸಿಲ್ಲವೇ? ನಡೆಸುತ್ತಿಲ್ಲವೇ? ಹಾಗಾಗಬೇಕಾದೆ, ಸದ್ಭವ್, ಇಂಚರ ಇಬ್ಬರೂ ನನ್ನನ್ನು ಒಪ್ಪಿಕೊಳ್ಳಬೇಕು. ನಾ ಮೊದಲು ಸದ್ಭವನ ಜೊತೆ ನನ್ನ ಮನದಾಳದ ವಿಚಾರಗಳನ್ನು ಹಂಚಿಕೊಳ್ಳಲೋ ಅಥವಾ ಇಂಚರಳೊಂದಿಗೆ ಹಂಚಿಕೊಳ್ಳಲೋ ಎಂಬ ತಾಕಲಾಟದಲ್ಲಿದ್ದೆ. ನಾ ಇಂಚರಳೊಂದಿಗೇ ಮೊದಲು ಮಾತಾಡಲು ನಶ್ಚಯಿಸಿದೆ.
ಇಂಚರ
ನಜವಾಗಿಯೂ ಹೇಳಬೇಕೆಂದರೆ ಸದ್ಭವನನ್ನು ಯು.ಎಸ್.ಗೆ ಕಳುಹಿಸಿದ ಮೇಲೆ ನಾ ಒಂಟಿಯಾಗಿಬಿಟ್ಟೆ. ನನ್ನ ಮನಸ್ಥಿತಿ ಹೇಗಿದೆಯೆಂದರೆ, ಅದು ನನಗೊಬ್ಬಳಿಗೇ ಗೊತ್ತು. ಸದ್ಭವನಗೆ ಯು.ಎಸ್.ಗೆ ಹೋಗುವ ಅವಕಾಶ ಒದಗಿ ಬಂದಾದ ಅವನಗೆ ಅವಕಾಶ ತಪ್ಪಿ ಹೋಗಬಾರದೆಂಬ ಕಾರಣಕ್ಕೆ ನಾನೇ ಅವನನ್ನು ಹುರಿದುಂಬಿಸಿ ಕಳುಹಿಸಿದ್ದರೂ, ಈಗ ನಾ ಅನುಭವಿಸುತ್ತಿರುವ ಒಂಟಿತನದ ಯಾತನೆ ಹೇಳಲಸದಳ. ನಮ್ಮ ಮದುವೆಯ ನಂತರ ನಾವೆಂದೂ ಇಷ್ಟು ದೀರ್ಘಕಾಲ ಅಗಲಿರಲಿಲ್ಲ. ಏನೋ ಯಾವಾಗಾದರೂ ಒಂದೆರಡು ದಿನ ಅಗಲಿರಬೇಕು ಅಷ್ಟೇ. ಯಾಕೆಂದರೆ, ನಾವು ಯಾವಾಗಲೂ ಜೊತೆಯಾಗಿಯೇ ತಿರುಗುತ್ತಿದ್ದೆವಲ್ಲ? ವಿರಹ ನೂರು ನೂರು ತರಹ ಎಂದು ಕೇಳಿದ್ದೆ. ಅದು ನೂರು ನೂರು ತರಹ ಅಲ್ಲ, ಸಾವಿರ, ಸಾವಿರ ತರಹ ಎಂದು ಹೇಳಬಹುದು.
ಸದ್ಭವ್ ಆಗಾಗ್ಗೆ ಫೋನನಲ್ಲಿ ಮಾತಾಡುತ್ತಿದ್ದರೂ, ನನಗೆ ಸಮಾಧಾನವಿಲ್ಲ. ಅವ ಅಲ್ಲಿನ ದಿನಚರಿಯನ್ನು ಸೂಕ್ಷ್ಮವಾಗಿ ಹೇಳುತ್ತಿದ್ದ. ಅವನ ಪಾಡೂ ನನ್ನದಕ್ಕಿಂತ ಬೇರೆ ಏನು ಇರಲಿಲ್ಲ. ತನಗೆ ಪರಿಚಯವಾಗಿರುವ ಬೆಂಗಳೂರಿನ ಬೆಡಗಿ ಅಂಕಿತಾಳ ಬಗ್ಗೆಯೂ ಹೇಳುತ್ತಿದ್ದ. ಆಕೆ ನನ್ನನ್ನು ಬುಟ್ಟಿಗೆ ಹಾಕಿಕೊಂಡುಬಿಟ್ಟಾಳು ನೋಡು ಮತ್ತೆ? ಎಂದು ತಮಾಷೆ ಮಾಡುತ್ತಿದ್ದೆ. ಅಂದು ಪಾಕರ್ಿನಲ್ಲಿ ನಡೆದ ಘಟನೆಯನ್ನೂ ಅವ ವಿವರವಾಗಿ ತಿಳಿಸಿದ್ದ. ಆದರೆ ನನ್ನ ಸದ್ಭವ್ ಅಪರಂಜಿ ಎಂದು ನನಗೆ ಗೊತ್ತು. ಅವ ಎಲ್ಲೂ ಎಡುವುದಿಲ್ಲವೆಂದು ನನ್ನ ಮನಸ್ಸಾಕ್ಷಿ ಹೇಳುತ್ತಿದೆ. ಆ ಹುಡುಗಿ ಅಂಕಿತಾಳೂ ಸಹ ನನ್ನ ಜೊತೆ ಆಗಾಗ ಮಾತಾಡುತ್ತಿದ್ದಾಳೆ ಆತ್ಮೀಯವಾಗಿ.
ಇಂದು ಅಂಕಿತಾ ಪ್ರಸ್ತಾಪಿಸಿದ್ದ ವಿಷಯ ನನ್ನ ನದ್ದೆಗೆಡಿಸಿತ್ತು. ಮಾತಾಡುತ್ತಾ, ಮಾತಾಡುತ್ತಾ, ಪ್ರೀತಿಯನ್ನು ಹಂಚಿಕೊಂಡು ಜೀವನ ನಡೆಸಬಹದೇ? ಎಂಬ ತನ್ನ ಪ್ರಶ್ನೆಯಿಂದ ಅವಳು ನನ್ನನ್ನು ವಿಚಾರ ಮಂಥನಕ್ಕೆ ಹಚ್ಚಿದ್ದಳು. ಹಂಚಿಕೊಳ್ಳುವ ಪ್ರೀತಿಯಾದರೆ ಹಂಚಿಕೊಳ್ಳಬಹುದು ಎಂದು ನಾ ಅವಳಿಗೆ ತಿಳಿಸಿದ್ದೆ. ನಮ್ಮ ದೇವಾನುದೇವತೆಗಳಾದ ಶಿವ, ಗೌರಿ ಮತ್ತು ಗಂಗೆಯೊಂದಿಗೆ; ತಿರುಪತಿಯ ಶ್ರೀನವಾಸ, ಶ್ರೀದೇವಿ ಮತ್ತು ಭೂದೇವಿಯವರೊಂದಿಗೆ; ಶ್ರೀ ಕೃಷ್ಣ, ರುಕ್ಮಿಣಿ, ಸತ್ಯಭಾಮೆ ಇನ್ನತರರೊಂದಿಗೆ; ಅಷ್ಟೇಕೆ ವಿಶ್ವ ಗುರು ಬಸವಣ್ಣನವರು ಗಂಗಾಂಬಿಕೆ ಮತ್ತು ನಲಾಂಬಿಕೆಯ ರೊಂದಿಗೆ ತಮ್ಮ ಪ್ರೀತಿ ಹಂಚಿಕೊಂಡಿರುವಾಗ, ಸದ್ಭವ್, ನನ್ನ ಮತ್ತು ನನ್ನ ಜೊತೆ ತನ್ನ ಪ್ರೀತಿಯನ್ನೇಕೆ ಹಂಚಿಕೊಳ್ಳ ಬಾರದು? ಎಂಬ ವಿಚಿತ್ರ ಪ್ರಶ್ನೆಯನ್ನು ಹಾಕುತ್ತಾ, ತಾನು ಸದ್ಭವನನ್ನು ಮನಸಾರೆ ಪ್ರೀತಿಸುತ್ತಿರುವುದಾಗಿ ಹೇಳಿ ನನ್ನಲ್ಲಿ ದಿಗ್ಭ್ರಮೆ ಹುಟ್ಟು ಹಾಕಿದ್ದಳು. ಹಾಗೇ ತನ್ನ ಪ್ರೀತಿಗೆ ನಾನು ಸಹಕಾರ ನಡಬೇಕೆಂದು ಮನವಿ ಮಾಡಿದ್ದಳು. ಅವಳ ಮಾತು ಕೇಳಿದ ನಾ ಸ್ತಂಭೀಭೂ ತಳಾದೆ. ನನಗೆ ಮಾತೇ ಹೊರಡಲೊಲ್ಲದು. ನನ್ನ ಮೌನವನ್ನು ಗ್ರಹಿಸಿದ ಆಕೆ ಎರಡು ಮೂರು ಸಾರೆ, ಹಲೋ, ಹಲೋ ಇಂಚರ ಎಂದೆನ್ನುತ್ತಾ, ನನ್ನನ್ನು ವಾಸ್ತವಕ್ಕೆ ತಂದಿದ್ದಳು.
ಸದ್ಭವನಲ್ಲದೇ ತನ್ನ ಜೀವನವೇ ಇಲ್ಲ. ತನಗೆ ಸದ್ಭವ್ ಬೇಕೇ ಬೇಕು ಎಂದಿದ್ದಳು ಅಂಕಿತಾ. ನಾ ಸುಮ್ಮನೇ ಅವಳ ಮಾತು ಕೇಳುತ್ತಿದ್ದೆ. ಮುಂದೆ ಅವಳೇನು ಹೇಳಿದಳೋ ನನ್ನ ಕಿವಿಗೆ ತಲುಪಲೇ ಇಲ್ಲ. ಕೊನೆಗೆ ಹಾಗೂ, ಹೀಗೂ ಸಾವರಿಸಿಕೊಂಡು, ಸದ್ಭವ್ ಇದಕ್ಕೆ ಒಪ್ಪಿರುವನೇ? ಎಂದು ನಾ ಕೇಳಿದ್ದಕ್ಕೆ, ತಾ ಇನ್ನೂ ಅವನೊಂದಿಗೆ ಈ ವಿಷಯ ಪ್ರಸ್ತಾಪಿಸಿರುವುದಿಲ್ಲ, ನನ್ನ ಅಭಿಪ್ರಾಯ ತಿಳಿದುಕೊಂಡು ಅವನೊಂದಿಗೆ ಚಚರ್ಿಸುವುದಾಗಿ ತಿಳಿಸಿದ್ದಳು ಅಂಕಿತಾ. ನನಗೆ ವಿಚಾರ ಮಾಡಲು ಎರಡು ದಿನಗಳು ಬೇಕು ಎಂದು ನಾ ಹೇಳುತ್ತಿದ್ದಂತೆ, ಅವಳು ತನ್ನ ಮಾತಿಗೆ ಕೊನೆ ಹಾಡಿದ್ದಳು.
ಅಂಕಿತಾಳ ಮಾತು ಕೇಳಿದ ದಿನದಿಂದ ನಾನು ನಾನಾಗಿ ಉಳಿಯಲಿಲ್ಲ. ನಾ ಒಂದು ರೀತಿಯ ಹುಚ್ಚಿಯಂತಾದೆ. ಯಾವ ಹೆಣ್ಣು ತನ್ನ ಗಂಡನನ್ನು ಇನ್ನೊಬ್ಬ ಹೆಣ್ಣಿನ ಜೊತೆ ಮನಸಾರೆ ಹಂಚಿಕೊಂಡಾಳು? ಗಂಗೆ-ಗೌರಿಯರು ಜಗಳವಾಡಿಲ್ಲವೇ? ರುಕ್ಮಿಣಿ-ಸತ್ಯಭಾಮೆಯರು ಕೇವಲ ಪಾರಿಜಾತ ಪುಷ್ಪಕ್ಕಾಗಿ ಮಾನವೀಯತೆ ಮರೆತು ಕಚ್ಚಾಡಲಿಲ್ಲವೇ? ತಮ್ಮ ಕ್ಷುಲ್ಲಕತನ ಮೆರೆಯಲಿಲ್ಲವೇ? ನಾ ಸದ್ಭವನನ್ನು ಅಂಕಿತಾಳೊಂದಿಗೆ ಹಂಚಿಕೊಳ್ಳಲು ತಯಾರು. ಆದರೆ ನಮ್ಮಿಬ್ಬರ ಬಗ್ಗೆ ನಮ್ಮ ಸಂಬಂಧಿಕರು, ಸ್ನೇಹಿತರು, ಹಿತೈಷಿಗಳಿಗಿರುವ ಭಾವನೆ ಇದರಿಂದ ಏನಾದೀತು? ಸದ್ಭವ್ ಮೊದಲೇ ಸೂಕ್ಷ್ಮ ಮನಸ್ಸಿನವ. ನಂದನೆಯ ಮಾತುಗಳು ಬರುವುದು ಸದ್ಭವನಗೇ ಮೊದಲು. ಇವಳು ಅಂಕಿತಾಳೇನು ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಓದುವ ಹುಡುಗಿಯೇನಲ್ಲ? ನನ್ನಂತೆ ಜವಾಬ್ದಾರಿಯುತ ಇಂಜಿನಯರ್. ಆಕೆಗೆ ಸರಿಯಾದ ದಿಶೆಯಲ್ಲಿ ವಿಚಾರ ಮಾಡುವ ಶಕ್ತಿ ಇದೆಯೆಂದು ನನ್ನ ಅನಸಿಕೆ.
ಅಂಕಿತಾಳ ರೂಪ, ವಿದ್ಯೆ ವ್ಯಕ್ತಿತ್ವಕ್ಕೆ ಬೇಕಾದಷ್ಟು ಹುಡುಗರು ತಾ ಮುಂದು, ನಾ ಮುಂದು ಎಂದು ಅವಳನ್ನು ಮದುವೆಯಾಗಲು ಬಂದೇ ಬರುತ್ತಾರೆ. ಅವಳಿಗೆ ಸದ್ಭವ್ ಅನವಾರ್ಯವೇನಲ್ಲ ಅಲ್ಲವೇ? ಯಾರೂ ಯಾರಿಗೆ ಅನವಾರ್ಯವಲ್ಲ. ಆಳವಾಗಿ ಆಕೆ ವಿಚಾರಿಸಿರಲಿಕ್ಕಿಲ್ಲ. ಬಾಲಿಶವಾಗಿ ವಿಚಾರಿಸಿ ತೀಮರ್ಾನ ಕೈಕೊಂಡಿರಬೇಕು. ಅವಳ ಮನಸ್ಸಿನ ಮುಂದಿರುವ ಸೂಡೋ ಪರದೆಯನ್ನು ಸರಿಸಬೇಕಾಗಿದೆ. ಅಂಕಿತಾ ಇಂದು ಪುನಃ ಫೋನು ಮಾಡಿದಾಗ ನಾ ನನ್ನ ಮನದಲ್ಲಿನ ವಿಚಾರಗಳನ್ನು ಆಕೆಗೆ ಸ್ಪಷ್ಟವಾಗಿ ತಿಳಿಸುತ್ತಾ, ವಿಷಯವನ್ನು ಶಾಂತ ಮನಸ್ಸಿನಂದ ವಿಚಾರಿಸಿ ತೀಮರ್ಾನವನ್ನು ತೆಗೆದುಕೊಳ್ಳಲು ತಿಳಿಸಿದೆ. ಯಾರ ಇಮೇಜಿಗೂ ಧಕ್ಕೆ ಬಾರದ ಹಾಗೆ ನಧರ್ಾರ ತೆಗೆದುಕೊಳ್ಳಲು ಸಲಹೆ ನಡಿದೆ. ನಾ ಮನಸ್ಸು ಮಾಡಿದ್ದರೆ ಆಕೆಯನ್ನು ಸಿಕ್ಕಾ ಪಟ್ಟೆ ತರಾಟೆಗೆ ತೆಗೆದುಕೊಂಡು ಝಾಡಿಸಬಹುದಾಗಿತ್ತು. ಆದರೆ ಹಾಗೆ ಮಾಡದೇ ಜೀವನದಲ್ಲಿನ ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಳ್ಳಲು ತಿಳಿಸಿದ್ದೆ. ಕೊನೆಯಲ್ಲಿ ಅಕ್ಕ ನಲಾಂಬಿಕೆಯವರ ಒಂದು ಅರ್ಥಪೂರ್ಣವಾದ ವಚನ ಹೇಳಿದ್ದೆ. ಎನಗೆ ಲಿಂಗವು ನವೇ ಬಸವಯ್ಯಾ, ಎನಗೆ ಸಂಗವು ನವೇ ಬಸವಯ್ಯಾ, ಎನಗೆ ಪ್ರಾಣವು ನವೇ ಬಸವಯ್ಯಾ, ಎನಗೆ ಪ್ರಸಾದವು ನವೇ ಬಸವಯ್ಯಾ, ಎನಗೆ ಪ್ರಭೆಯ ಮೂತರ್ಿಯೂ ನವೇ ಬಸವಯ್ಯಾ, ಎನಗೆ ಸಂಗಯ್ಯನು ನವೇ ಬಸವಯ್ಯಾ ಎಂಬಂತೆ ಸದ್ಭವನೇ ನನಗೆ ಸಕಲವು ಎಂದು ಒತ್ತಿ, ಒತ್ತಿ ಹೇಳಿದ್ದೆ ಅಂಕಿತಾಳಿಗೆ ಮನದಟ್ಟಾಗುವಂತೆ.
ಅಂಕಿತಾ
ಇಂದು ರವಿವಾರದ ದಿನ. ಎಲ್ಲೂ ಔಟಿಂಗ್ಗೆ ಹೋಗಿದ್ದಿಲ್ಲ. ನನ್ನ ಮನಸ್ಸಿನಲ್ಲಿ ತುಡಿತವಿತ್ತು. ಇಂಚರ ಳೊಂದಿಗೆ ಚಚರ್ಿಸಿದ ವಿಷಯಗಳನ್ನು ಇದುವರೆಗೂ ನಾ ಸದ್ಭವನೊಂದಿಗೆ ಹಂಚಿಕೊಂಡಿರಲಿಲ್ಲ. ಎರಡು ದಿನಗಳಿಂದ ಸ್ಥಿಮಿತದಲ್ಲಿರದಿದ್ದ ನನ್ನ ಮನಸ್ಸನ್ನು ಅರಿತು ಕೊಂಡವನಂತೆ ಸದ್ಭವ್ ನನ್ನೆ, ಹುಷಾರಿಲ್ಲವೇ? ಎಂದು ಆತ್ಮೀಯವಾಗಿ ವಿಚಾರಿಸಿದ್ದ. ಹಾಗೇನೂ ಇಲ್ಲ ಎಂದು ನಾ ಜಾರಿಕೊಂಡಿದ್ದೆ. ಇಂದು ಪುನಃ ಇಂಚರಳೊಂದಿಗೆ ನಾ ಆಕೆಯ ತೀಮರ್ಾನದ ಬಗ್ಗೆ ತಿಳಿದುಕೊಳ್ಳುವ ಕುತೂಹಲದಿಂದ ಫೋನಾಯಿಸಿದ್ದೆ. ನಾ ಕೇಳಿದ ವಿಷಯವನ್ನು ಯಾವ ಭಾರತದ ನಾರಿಯೂ ಸಮಾಧಾನದಿಂದ ಅರಗಿಸಿಕೊಳ್ಳಲಿಕ್ಕೆ ಸಾಧ್ಯವಿರಲಿಕ್ಕಿಲ್ಲ ಅಲ್ಲವೇ? ಎದುರಿಗಿದ್ದರೆ ಮೊದಲು ಕಪಾಳಕ್ಕೆ ನಾಲ್ಕು ಬಿಗಿದೇ ಮುಂದೆ ಮಾತಾಡುತ್ತಾರೆ ಅಲ್ಲವೇ? ಆದರೆ ಇಂಚರ ವಿಷಯವನ್ನೆಲ್ಲ ಕೋಪಿಸಿಕೊಳ್ಳದೇ ಕೇಳಿಸಿಕೊಂಡಿದ್ದಳು. ಅವಳ ವಿಚಾರ ಧಾರೆ, ಪ್ರೌಢಿಮೆ, ವಿವೇಚನಾ ಶಕ್ತಿ ನಜವಾಗಿಯೂ ಮೆಚ್ಚುವಂಥಹದು. ಸತಿ-ಪತಿಗಳಲ್ಲಿ ಪರಸ್ಪರ ನಷ್ಠೆ ಇರುವುದರಿಂದ ಭಾರತದಲ್ಲಿ ಇನ್ನೂ ವಿವಾಹ ವಿಚ್ಛೇದನಗಳ ಸಂಖ್ಯೆ ಕಡಿಮೆ ಇದೆ. ಇತ್ತೀಚಿನ ವರ್ಷಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ನಮ್ಮ ದೇಶದ ವಿದ್ಯಾವಂತರಲ್ಲಿ ಕಾಣಿಸತೊಡಗಿದೆ. ಪ್ರೀತಿಯೆಂದರೆ ಕೇವಲ ಪ್ರಣಯಿಗಳ ಪ್ರೀತಿಯಲ್ಲ, ಗಂಡ-ಹೆಂಡತಿಯರ ಪ್ರೀತಿಯಲ್ಲ, ಕುಟುಂಬದ ಇತರ ಸದಸ್ಯರ ಮಧ್ಯೆಯೂ ಪ್ರೀತಿ ಇರುತ್ತದೆ. ಅಪ್ಪ-ಅಮ್ಮ, ಅಣ್ಣ-ತಂಗಿ, ಸ್ನೇಹಿತರ ಮಧ್ಯೆಯೂ ಪವಿತ್ರ ಪ್ರೀತಿ ಬೇಕು. ನ ಸದ್ಭವನನ್ನು ಪ್ರೇಮಿಯೆಂದು ಪ್ರೀತಿಸದೇ ಸಹೋದರನಂತೆ ಪ್ರೀತಿಸಿ, ಪವಿತ್ರ ಪ್ರೀತಿಯ ಪರಾಕಾಷ್ಟತೆ ಅನುಭವಿಸಿ ನೋಡು. ಇಂಥಹ ಆತುರದ ನಧರ್ಾರದ ಸಂಬಂಧ ಕುದುರಿದರೆ, ನಾಳೆ ಸಮಾಜದಲ್ಲಿ ಜನರಾಡುವ ಕುಹಕದ ಮಾತುಗಳಿಂದ ನಮ್ಮೆಲ್ಲರಿಗೂ ತುಂಬಾ ಮಾನಸಿಕ ಹಿಂಸೆಯಾಗುತ್ತದೆ ಎಂದು ಇನ್ನೇನೋ ಸಾದಕ, ಬಾಧಕಗಳನ್ನು ತಿಳಿಸಿದ್ದಳು ಇಂಚರಾ.
ಹೌದು, ಇಂಚರ ಹೇಳಿದ ಮಾತುಗಳೆಲ್ಲವೂ ಅರ್ಥಪೂರ್ಣವಾದವುಗಳೇ. ಅವಳ ವಿಚಾರ ಧಾರೆ ಅದ್ಭುತವಾಗಿತ್ತು. ನನ್ನ ಈ ಹಾನಕಾರಕ ನಧರ್ಾರಕ್ಕೆ ತಿಲಾಂಜಲಿ ಇತ್ತು, ಪವಿತ್ರ ಸಂಬಂಧವನ್ನೇಕೆ ಬೆಸೆಯಬಾರದು? ನನ್ನ ಮನದ ಭಾವನೆಗಳಿಗೆ ಜ್ಞಾನೋದಯವಾಗುತ್ತಿದ್ದಂತೆ, ಅವಸರವಾಗಿ ಡ್ರೆಸ್ ಮಾಡಿಕೊಂಡು ಸದ್ಭವನ ರೂಮಿಗೆ ಹೊರಟೆ. ನನ್ನ ಆಗಮನದ ನರೀಕ್ಷೆಯಲ್ಲಿರದ ಅವನಗೆ ಆಶ್ಚರ್ಯವಾಗಿತ್ತು. ಮಾತಿಲ್ಲದೇ ಮುಗುಳ್ನಗೆಯಿಂದ, ತುಂಬು ಹೃದಯದಿಂದ ಬರಮಾಡಿಕೊಂಡ. ನಾನೇ ಮಾತಿಗಾರಂಭಿಸಿದೆ.
ಅಣ್ಣಾ, ಇಂಚರಳೇನಾದರೂ ನಮಗೆ ಫೋನು ಮಾಡಿದ್ದಳಾ? ನಮ್ಮ ಜೊತೆಗೆ ಯಾವುದಾದರೂ ಮುಖ್ಯವಾದ ವಿಷಯವನ್ನು ಪ್ರಸ್ತಾಪಿಸಿರುವಳಾ? ನನ್ನ ಹೃದಯದಾಳದಿಂದ ನನಗರಿವಿಲ್ಲದಂತೆ ಮೊದಲ ಬಾರಿಗೆ ಸದ್ಭವನಗೆ ಅಣ್ಣಾ ಎಂಬ ಸಂಭೋದನೆ ಆಗಿತ್ತು. ನನ್ನ ಮಾತಿನ ಪ್ರಭಾವ ಸದ್ಭವನ ಮುಖದಲ್ಲಿ ಓದಲು ಪ್ರಯತ್ನಿಸಿದೆ. ಬಾ ತಂಗಿ, ಬಾ. ನಾ ಇದನ್ನೇ ನರೀಕ್ಷಿಸಿದ್ದೆ ನನ್ನಂದ. ನನಗಂತೂ ತುಂಬಾ ಖುಷಿಯಾಗಿತ್ತಿದೆ. ಅಂದಂಗ ಇಂಚರ ನನ್ನೊಡನೆ ಯಾವ ವಿಷಯವನ್ನೂ ಪ್ರಸ್ತಾಪಿಸಿಲ್ಲ ಎಂದು ನನ್ನ ಕೈ ಕುಲುಕಿ ಅಭಿನಂದಿಸಿ, ನನ್ನನ್ನು ಹಗ್ ಮಾಡಿ ನನ್ನ ಬೆನ್ನ ಮೇಲೆ ಆತ್ಮೀಯವಾಗಿ ಕೈಯಾಡಿಸಿದರು ಸದ್ಭವ್. ನಾ ಇಂಚರಳಿಗೆ ಫೋನಾಯಿಸಿದೆ. ಇಂಚರ, ನಾನಗ ನನ್ನ ಅಣ್ಣ ಸದ್ಭವನ ಜೊತೆ ಇರುವೆ ಎಂದೆ ಖುಷಿಯಿಂದ. ಮೂವರ ಸಂತೋಷಕ್ಕೆ ಪಾರವೇ ಇರಲಿಲ್ಲ. ನನ್ನ ಮನದ ಮಾಯೆ ಕರಗಿ ಹೋಗಿತ್ತು.
ಎಸ್. ಶೇಖರಗೌಡ,
ಮುಖ್ಯ ವ್ಯವಸ್ಥಾಪಕರು,
ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಆರ್.ಸಿ.ಪಿ.ಸಿ., ಲಿಂಗಸ್ಗೂರು
(9448989332)
ವಿಮುಖ
ಹಳ್ಳಿಗಳಲ್ಲಿ ಅದೆಷ್ಟೋ ಪ್ರತಿಭೆಗಳಿಗೆ ಮಾನ್ಯತೆ ಸಿಗದಿದ್ದಾಗ, ಅವುಗಳು ಪಟ್ಟಣಕ್ಕೆ ಬಂದು ಏನನ್ನಾದರೂ ಸಾಧಿಸಬೇಕೆಂದು ಹವಣಿಸುತ್ತವೆ. ಆದರೆ, ನಗರ ಪ್ರದೇಶದ ಬದುಕಿಗೆ ಅಂಟಿಕೊಂಡ ಕ್ಷಣಕ್ಕೆ ತಮ್ಮ ಹಿಂದಿನದೂ ಮರೆಯುವದು ಸಹಜ ರೂಡಿಯಾಗಿದೆ. ಆ ಹಿನ್ನಲೆಯಲ್ಲಿ ಒರ್ವ ಯುವಕ ಹಳ್ಳಿಯಿಂದ ನಗರಕ್ಕೆ ಬಂದು ಹೇಗೆ ಬದಲಾದ ಎಂಬುದನ್ನು ಅಚ್ಚುಕಟ್ಟಾಗಿ ವಿವರಿಸಿದ್ದಾರೆ ಶರತ್ ಚಕ್ರವತರ್ಿ, ಕುಂದಾಪುರ.
ವಿಕಾಸ ಯಾರೋ ಬಂದವ್ರೆ, ನೋಡಪ್ಪ ಅಮ್ಮನ ಧ್ವನಿ ಕೇಳುತ್ತಲೇ ಮಾಡುತ್ತಿದ್ದ ಕಸುಬನ್ನು ಅರ್ಧಕ್ಕೆ ನಿಲ್ಲಿಸಿ ಹಿತ್ತಲಿಂದ ನಡೆದನು.
ಬಂದಿದ್ದವನು ವಿಶ್ವನಾಥ. ವಿಕಾಸನ ಗೆಳೆಯ, ಜೊತೆಗೆ ಓದಿದವ. ಎಂ.ಕಾಂ ಮುಗಿಸಿ ಬೆಂಗ್ಳೂರಿನ ಕಾಲೆಜೊಂದರಲ್ಲಿ ಅಥಿತಿ ಉಪನ್ಯಾಸಕನಾಗಿದ್ದ. ಗೆಳೆಯರ ಭೇಟಿ ಕಾಫಿ ತಿಂಡಿ ಒಂದಿಷ್ಟು ಹರಟೆಗಳೊಂದಿಗೆ ನಡೆದು ವಿಕಾಸನ ಚಿತ್ರಗಳ ಕಡೆಗೆ ಬಂದಿತ್ತು. ನಿನ್ನೆಲ್ಲಾ ಪೇಂಟಿಂಗ್ಸ್ನ್ನು ಬೈಂಡಿಂಗ್ ಮಾಡ್ಸಿ ಇಟ್ಟಿರು, ನೆಕ್ಟ್ಸ್ ಟೈಮ್ ಬೆಂಗ್ಳೂರ್ ಚಿತ್ರಕಲಾ ಪರಷತ್ ಅಲ್ಲಿ ಎಕ್ಸಿಬಿಷನ್ಗೆ ತಗೊಂಡೋಗನ. ಟೋಟಲ್ ಎಷ್ಟ್ ಪೇಂಟಿಂಗ್ಸ್ ಆಗಿದವೆ. ಎಂದು ಗೋಡೆಗಳ ಮೇಲಿದ್ದ ಒಂದು ಚಿತ್ರಪಟವನ್ನ ನೋಡುತ್ತಾ ಹೇಳಿದ ವಿಶ್ವ.
ಎಕ್ಸಿಬಿಷನ್ಗೆ ತಗೊಂಡೋಗೊ ಅಂತದ್ದು ಯಾವ್ದು ಮಾಡಿಲ್ಲ. ಒಂದೆರಡು ಬಿಟ್ರೆ ಬಾಕಿ ಎಲ್ಲ ಪೆನ್ಸಿಲ್ ಸ್ಕೆಚ್ಗಳು ಅಷ್ಟೇ.
ಇನ್ನೂ ಟೈಮ್ ಐತಲಾ ನೀನ್ ಮಾಡು ಅಟ್ ಲೀಸ್ಟ್ ಒಂದೈವತ್ತಾದ್ರು ಮಾಡಿಟ್ಟಿರು
ಸರಿ ನೋಡ್ತಿನಿ ಕುಶಲೋಪರಿಗಳು ಮುಗಿದಿದ್ದವು. ವಿಶ್ವ ಹೊರಟು ಹೋದ. ವಿಶ್ವನ ಮಾತುಗಳು ವಿಕಾಸನಲ್ಲಿ ಚೈತನ್ಯ ಮೂಡಿಸಿದರೂ ಒಂದು ರೀತಿಯಲ್ಲಿ ಚಿಂತೆಗೀಡು ಮಾಡಿದವು. ವಿಕಾಸ ಒಬ್ಬ ಕಡುಬಡವ. ತಂದೆ ಇದ್ದದ್ದೆಲ್ಲವ ಕಳೆದು ಸೋತು ಮೂಲೆ ಹಿಡಿದಿದ್ದನು. ತಮ್ಮನೊಬ್ಬ ಇನ್ನು ಓದುತ್ತಿದ್ದ. ಎರಡು ಎಮ್ಮೆಗಳನ್ನು ಕಟ್ಟಿಕೊಂಡು ಅವನ ತಾಯಿ ಹೇಗೋ ಸಂಸಾರ ತೂಗಿಸಿದ್ದಳು. ಇವನ ಬಿ.ಎ ಉಪಯೋಗಕ್ಕೆ ಬಾರದ್ದಾಗಿತ್ತು. ಊಟಕ್ಕೆ ಪಾಡು ಪಡುವಾಗ ಇನ್ನೆಲ್ಲಿಯ ಎಕ್ಸಿಬಿಷನ್. ಚಿತ್ರಬಿಡಿಸಲು ಬೇಕಾಗುವ ವಿವಿಧ ನಮೂನೆ ಪೆನ್ಸಿಲ್, ಐವರಿ ಶೀಟ್ಗಳು, ಪೋಸ್ಟರ್ ಬಣ್ಣ ಬ್ರಷ್ಗಳನ್ನು ಕೊಳ್ಳಲು ಏನಿಲ್ಲವೆಂದರೂ ಸಾವಿರಾರು ರೂಪಾಯಿ ಬೇಕಿತ್ತು. ಅದರಲ್ಲಿ ಐವತ್ತು ಪೇಂಟಿಂಗ್ಸ್ ಎಂದರೇ ಅವನಿಗೆ ಹಲವಾರು ಸಾವಿರಗಳನ್ನೇ ಖಚರ್ು ಮಾಡಬೇಕಾಗಿತ್ತು. ತರುವುದು ಎಲ್ಲಿಂದ? ಆದಾಯ ಶೂನ್ಯ. ಕೆಲವು ಸ್ನೇಹಿತರು ಬಣ್ಣ ಕೆಲವು ಬ್ರಷ್ಗಳನ್ನು ಗಿಫ್ಟ್ ಎಂದು ನೀಡಿ, ಅವನ ಕೆಲವು ಪೇಂಟಿಂಗ್ಸನ್ನು ಅದೇ ಗಿಫ್ಟ್ ಹೆಸರಿನಲ್ಲಿ ತೆಗೆದುಕೊಂಡು ಹೋಗಿದ್ದರು. ಅವನ ಬಡತನ ಅವನನ್ನು ಹತಾಶನನ್ನಾಗಿಸಿತ್ತು.
ಆದರೂ ಅವನೊಬ್ಬ ಅದ್ಬುತ ಚಿತ್ರಕಲೆಗಾರ. ಎದುರಿದ್ದ ದೃಶ್ಯಕ್ಕೆ ಜೀವತುಂಬಿ, ಭಾವವುಳ್ಳ ಹನಿಗವನಗಳೊಂದಿಗೆ ಅದ್ಬುತ ದೃಷ್ಯಕಾವ್ಯವನ್ನೇ ಹುಟ್ಟುಹಾಕುವಂತ ನಿಪುಣನಾಗಿದ್ದ. ಮುಂದೊಂದು ದಿನ ದೊಡ್ಡ ಕಲಾವಿದನಾಗಿ ನಾಡಿಗೆ ಹೆಸರಾಗಬೇಕೆಂಬುದು ಅವನ ಆಶಯ; ಗುರಿ ಕೂಡ.
ಯಾವುದಾದರೂ ಸಣ್ಣ ಕೆಲಸಕ್ಕೆ ಸೇರಿ, ಜೊತೆ ಜೊತೆಗೆ ಚಿತ್ರಕಲೆಯ ಸಾಧನೆಗೆ ಶ್ರಮಿಸಬೇಕೆಂದು ತೀಮರ್ಾನಿಸಿದ್ದ. ಹಲವಾರು ಸಕರ್ಾರಿ ಖಾಸಗಿ ಕೆಲಸಗಳಿಗೆ ಅಜರ್ಿ ಎಸೆದು ಸಾಕಾಗಿ ಕುಳಿತಿರುವಾಗ ಅವನಿಗೆ ಸಿಕ್ಕಿದ್ದೆ ಲೋಕೋಪಯೋಗಿ ಇಲಾಖೆಯಲ್ಲಿ ಜವಾನನ ಕೆಲಸ.
ಸಕರ್ಾರಿ ಸಂಬಳ ಹೆಚ್ಚಲ್ಲದಿದ್ದರೂ ಕಡಿಮೆಯೆನ್ನುವಂತೆಯೂ ಇರಲಿಲ್ಲ. ಇದನ್ನೇನು ಕೊನೆಯವರೆಗೂ ಮಾಡಬೇಕೆ ಎಂದುಕೊಂಡು ಹೊರಡಲು ತಯಾರಾದ. ಅವನ ಗ್ರಹಾಚಾರಕ್ಕೊ ಏನೋ ಕೆಲ್ಸ ಸಿಕ್ಕಿದ್ದು ದೂರದ ಮಂಗಳೂರಿನಲ್ಲಿ. ಹಲವು ಆಪ್ತರ ಭರವಸೆಗಳೊಂದಿಗೆ ಹಾಸನದಿಂದ ಮಂಗಳೂರು ಬಸ್ಸು ಹತ್ತಿದ. ಅವನ ಒಂದು ತಿಂಗಳ ಖಚರ್ಿಗಾಗಿ ಮನೆಯಲ್ಲಿದ್ದ ಒಂದು ಎಮ್ಮೆಯನ್ನು ಮಾರಿ ಅವನ ತಾಯಿ ಕಣ್ಣಿರಿನ ನಡುವೆ ನಗುತ್ತಾ ಕಳುಹಿಸಿಕೊಟ್ಟರು.
ಮಂಗಳೂರು ಮಹಾನಗರದ ದುಭಾರಿ ಜೀವನ, ಅಸಾಧಾರಣ ಶೆಖೆ ಅವನನ್ನು ತತ್ತರಿಸುವಂತೆ ಮಾಡಿದವು. ಸ್ನೇಹಿತನ ದೂರದ ಸಂಬಂಧಿಯೊಬ್ಬನ ರೂಮಿನಲ್ಲೇ ಇವನಿಗೆ ಜಾಗ ದೊರೆಯಿತು. ಅವನು ಕೂಡ ಒಬ್ಬನಿದ್ದರಿಂದ ಹೊಂದಿಕೆಯಾಗುವಂತೆ ಕಂಡನು. ಮೊದಮೊದಲು ಕೆಲಸ ಆರಾಮು ಎನಿಸಿದರೂ ನಂತರದ ದಿನಗಳಲ್ಲಿ ಅಧಿಕಾರಿಗಳೇ ಕಿರಿಕಿರಿ ಎನಿಸತೊಡಗಿದರು. ಓಯ್ ವಿಕಾಸು ಇಲ್ಲಿ ಬಾ, ಎಂತದು ನೀನು ಕೆಲಸ ಮಾಡುವುದು. ಇಲ್ಲಿ ಕಾಣು ಬಲೆ ಹೇಗೆ ಬೀಳ್ತವುಂಟು ಎಂದು ಗುಮಾಸ್ತನ ಆರ್ಭಟ, ಬೊಜ್ಜ, ಸಾವು ಬೈಗಳಗಳ ಮಧ್ಯೆ ಜೀವನ ರೋಸಿಹೋಗುತ್ತಿತ್ತು. ಸೌಂದರ್ಯವೆಂದು ಭಾವುಕನಾಗಿ ಮೈಮರೆತು ನೋಡುತ್ತಿದ್ದ ಜೇಡರಬಲೆಗಳ ಮೇಲೆ ಕಿಡಿಕಿಡಿಯಾಗುವಂತಾಯಿತು.
ತಿಂಗಳು ತುಂಬುತ್ತಾ ಬಂದಿತ್ತು. ಎಮ್ಮೆ ಮಾರಿದ ಹಣವು ಮುಗಿದು ಜೇಬಿನಲ್ಲಿ ಹತ್ತು ರೂಪಾಯಿ ಮಾತ್ರ ಉಳಿದಿತ್ತು. ಸ್ನೇಹಿತನ ರೂಮಿನಲ್ಲೇ ರಾತ್ರಿ ಊಟ ಆಗುತ್ತಿದ್ದರಿಂದ ಹೇಗೋ ಜೀವ ಉಳಿದಿತ್ತೆನ್ನಬಹುದು. ಇನ್ನುಳಿದಂತೆ ಬೆಳಿಗ್ಗೆ ಮಧ್ಯಾಹ್ನಗಳು ಉಪವಾಸ ವ್ರತಗಳಾದವು. ಹಸಿದು ಹಸಿದು ಸಿಕ್ಕದೆಲ್ಲಾ ತಿನ್ನುವಂತಾಯಿತು ಅವನ ಪಾಡು. ಕೆಲವು ದಿನಗಳಲ್ಲಿ ರೂಮಿನ ಸ್ನೇಹಿತ ಕೂಡ ಬರಿಗೈಯ್ಯವನನ್ನು ಕಡೆಗಾಣಿಸಲಾರಂಭಿಸಿದ.
ಬ್ಯಾಂಕ್ ಅಕೌಂಟ್, ಎನ್.ಪಿ.ಸಿ ಇತ್ಯಾದಿ ರಗಳೆಗಳಿಂದ ಮೊದಲ ತಿಂಗಳ ಸಂಬಳವೂ ತಡವೇ. ಎರಡು ಮೂರು ತಿಂಗಳ ನಂತರ ಬಂದರೂ ಬಂದೀತು, ಎಂದಾಗ ವಿಕಾಸ ದಿಕ್ಕೆಟ್ಟು ಕುಳಿತನು. ಸಾಲ ಮಾಡಿಕೊಂಡಾದ್ರು ಹಾಸನ ಬಸ್ಸು ಹತ್ತಬೇಕೆನಿಸುತ್ತಿತ್ತು. ಹೀಗಿರುವಾಗ ಒಮ್ಮೆ ಕಾಂಟ್ರಕ್ಟ್ ಇಂಜಿನಿಯರ್ ಸೋಮನಾಥ ಶೆಟ್ಟಿಯವರು ಕಂಟ್ರಾಕ್ಟ್ ಬಿಲ್ ಸಂಬಂಧಿ ಫೈಲ್ ನೀಡಿ ತುತರ್ಾಗಿ ಸಕರ್ಾರಿ ಅಭಿಯಂತರ ಸೈನ್ ಮಾಡಿಸಿ ತರಲು ಕೋರಿದರು. ಕೆಲಸ ಮುಗಿದ ಕೂಡಲೇ ನೂರು ರೂಪಾಯಿಯ ಬಣ್ಣದ ನೋಟನ್ನು ಚಾಚಿದರು. ಅಯ್ಯೊ ಬ್ಯಾಡ ಸರ್ ಬ್ಯಾಡ ಎಂದರೂ ಹೇ ಅಡ್ಡಿಯಿಲ್ಲ ಇಟ್ಟಗೋ ಮಾರಾಯ, ಬಿರಿಯಾನಿ ತಿನ್ನು" ಎಂದು ಅವನ ಜೇಬಿಗೆ ತುರುಕಿ ಗಲ್ಲ ತಟ್ಟಿದರು. ಹಸಿದು ತತ್ತರಿಸಿದ್ದವನು ಬಿರಿಯಾನಿ ಹೆಸರು ಕೇಳಿ ಮಾತುಬರದೇ ಸ್ಥಬ್ದನಾದ. ಅವನ ಹಸಿವು ಅವನ ಬಾಯಿ ಕಟ್ಟಿಹಾಕಿತು.
ಮಧ್ಯಾಹ್ನದ ಬಿಡುವಲ್ಲೇ ಹೋಗಿ ಹೊಟ್ಟೆ ತುಂಬ ಬಿರಿಯಾನಿ ತಿಂದು ಬೀಡ ಹಾಕುವ ನಿಧರ್ಾರ ಮಾಡಿದನು. ಬಿಡುವಾಯ್ತು. ಹೊರಟ, ಹೊಟೇಲ್ ಹತ್ತಿರವಾಗುತ್ತಿರವಂತೆ ಅವನ ಮನಸ್ಸು ಬಿರಿಯಾನಿಯ ರುಚಿಯಿಂದ ನಾಳೆ? ಎಂಬ ಪ್ರಶ್ನೆಯ ಕಡೆಗೆ ಸಾಗುತ್ತಿತ್ತು. ಸೀದಾ ಹೋದವನೆ ಸಣ್ಣ ಕ್ಯಾಂಟೀನಲ್ಲಿ ಒಂದೇ ಒಂದು ಖಾಲಿ ದೋಸೆ ತಿಂದು ಮಿಕ್ಕ ಹಣವನ್ನ ತನ್ನ ನಾಳೆಯ ಖರ್ಚನ್ನು ನೆನೆದು ಜೇಬಿಗಿಳಿಸಿದ. ಹೊಟ್ಟೆ ಸ್ವಲ್ಪ ಮಟ್ಟಿಗೆ ತುಂಬಿತಾದರೂ ಮನಸ್ಸು ಮಾತ್ರ ಪೂತರ್ಿ ತುಂಬಿ ಸಂತುಷ್ಟಗೊಂಡು ಸೋಮನಾಥಶೆಟ್ಟಿಗೆ ವಂದಿಸುತ್ತಿತ್ತು. ಆ ದಿನ ಕಳೆದು ಮರುದಿನ ಬಂತು. ಇಂದು ಕೂಡ ನೆನ್ನೆಯಂತೆ ಆದರೇ.....! ಎಂದುಕೊಳ್ಳುತ್ತಾ ಕೆಲಸದಲ್ಲಿ ತೊಡಗಿದನು. ಆದರೆ ಹಿಂದಿನ ದಿನ ಮತ್ತೇ ಮರುಕಳುಹಿಸಿತು. ಕಾರ್ಯಪಾಲಕ ಅಭಿಯಂತರರ ಕೊಠಡಿಯಿಂದ ಹೊರಬಂದ ವ್ಯಕ್ತಿಯೊಬ್ಬ ಇವನನ್ನು ಕರೆದು ಕೈಗೊಂದು ಕವರ್ ಕೊಟ್ಟು, ಇದನ್ನು ನಿಮ್ ಸಾಹೇಬರಿಗೆ ತಲುಪಿಸು, ಇದು ನಿನಗೆ ಎಂದು ವಿಕಾಸನ ಜೇಬಿಗೆ ಐವತ್ತು ಗಿಡಿದು ಹೊರ ನಡೆದ. ಕವರ್ ಒಳಗಿದ್ದಿದ್ದು ಹಣವೇ. ಸಾಹೇಬನ ಪಾಲು. ವಿಕಾಸನ ತಲೆತಿರುಗತೊಡಗಿ ವಿಚಾರಗಳ ತಾಕಲಾಟಕ್ಕೆ ಶುರುಹಚ್ಚಿಕೊಂಡಿತು.
ಇದು ಪ್ರತಿದಿನ ಸಲೀಸಾಗಿ ನಡೆಯತೊಡಗಿತು. ಸಾಹೇಬಗೆ ಬರಬೇಕಾದ್ದರ ಜೊತೆಗೆ ಇವನ ಪಾಲು ಇವನಿಗೆ ಆಯಾಸವಿಲ್ಲದೇ ದೊರಕುತ್ತಿತ್ತು. ಪುರುಸೊತ್ತಾದಾಗಲೆಲ್ಲ ತನ್ನ ಬಳಿ ಎಷ್ಟು ದುಡ್ಡಿದೆ? ಎಷ್ಟು ಖಚರ್ಾಯ್ತು? ತೂ.. ಅಷ್ಟೇಕೆ ಖಚರ್ು ಮಾಡಿದೆ? ಇವತ್ತು ಯಾರು? ಎಷ್ಟು? ಎಂಬ ಆಲೋಚನೆಯಲ್ಲಿಯೇ ಮುಳುಗಿದನು. ಅವರಾಗಿಯೇ ಕೊಟ್ಟಾಗ ತೆಗೆದುಕೊಂಡು ಸುಮ್ಮನಾಗುತ್ತಿದ್ದವನು ದಿನ ಕಳೆದಂತೆ ಕಛೇರಿಗೆ ಬರುವ ಪರಿಚಿತ -ಅಪರಿಚಿತರೆಲ್ಲರನ್ನು ತಾನಾಗಿಯೇ ಮಾತಾಡಿಸಿ ಅವರ ಸಮಸ್ಯೆ ತಿಳಿದು ಕೆಲ್ಸ ಮಾಡ್ಸಿಕೊಡ್ತಿನಿ, ನನ್ ಕಡೆನೂ ನೋಡ್ಕೊಬೇಕು ಎಂದು ಸೂಚನೆ ನೀಡುತ್ತಾ ಕೈಚಾಚತೊಡಗಿದನು. ಪ್ರತಿದಿನ ಏನಿಲ್ಲವೆಂದರೂ 250 - 300 ರೂಪಾಯಿಗಳು ಅವನದಾಗುತ್ತಿತ್ತು.
ಇತ್ತ ಆದಾಯ ಕಂಡರೂ ಅವನಲ್ಲಿಯ ಜಿಪುಣ ಜಾಗೃತನಾಗತೊಡಗಿದನು. ಆದರೆ ಮೊದಲಿನಿಂದಲೂ ಅವನೆನು ಅಂತ ಜಿಪುಣನಾಗಿರಲಿಲ್ಲ. ಇತ್ತೀಚೆಗೆ ಹತ್ತು ರೂಪಾಯಿ ಖಚರ್ು ಮಾಡಲು ಅವನು ಹತ್ತು ಸಲವೇ ಯೋಚಿಸುತ್ತಿದ್ದ. ಅವನ ಬುದ್ದಿಯೆಲ್ಲಾ ದುಡ್ಡನ್ನು ಕಲೆಹಾಕಿ ದೊಡ್ಡ ಮೊತ್ತ ಮಾಡುವುದನ್ನಷ್ಟೇ ಯೋಚಿಸುತ್ತಿತ್ತು. ತಿಂಗಳ ಸಂಬಳವೇ ಬೇಡವೆನಿಸುವಷ್ಟು ಹಣ ಅವನಲ್ಲಿ ಶೇಖರಣೆಯಾಗಿತ್ತು. ಜೊತೆಗೆ 2 ತಿಂಗಳ ಸಂಬಳದ ಹಣವೂ ಸೇರಿ ಎರಡು ತಿಂಗಳಲ್ಲೇ ಹತ್ತಾರು ಸಾವಿರಗಳು ಅವನಲ್ಲಿ ಸೇರಿತ್ತು. ಚಪ್ಪಲಿ ಹರಿದರೂ ಹೊಲಿಗೆ ಹಾಕಿಸಿ ನಡೆದನೇ ಹೊರತು ಹೊಸದನ್ನು ಕೊಳ್ಳುವ ಧೈರ್ಯ ಮಾಡಲಿಲ್ಲ.
ಆದರೇ ಅವನ ಗುರಿಯ ಕನಸು ಮಾತ್ರ ಆಗಾಗ ಬಿಚ್ಚಿಕೊಂಡು ಆಲೋಚನೆಗಳಲ್ಲಿ ರೂಪ ತಾಳುತ್ತಿತ್ತು. ದಿನನಿತ್ಯದಲ್ಲಿ ಕಂಡಂತಹ ಕೆಲವು ಭಾವುಕ ಸನ್ನಿವೇಶಗಳು, ಸಮುದ್ರ ದಡದ ಪ್ರೇಮಿಗಳು, ಸುಕ್ಕುಹಿಡಿದ ಅಜ್ಜಿಯ ನಗು, ಮಂಗಳೂರಿನ ಸುಂದರ ಸೂಯರ್ಾಸ್ತಗಳು ಚಿತ್ರಿಸುವಂತೆ ಆಗಾಗ್ಗೆ ಕೈಬೀಸುತ್ತಿದ್ದವು. ಸದ್ಯದಲ್ಲೆ ಇವನೆಲ್ಲಾ ಪಟದೊಳಕ್ಕೆ ಕಟ್ಟಿಕೂರಿಸಬೇಕು ಅಂದುಕೊಳ್ಳುತ್ತಿದ್ದನು. ಮತ್ತೊಂದು ಕಡೆ ಖಾಲಿ ಹಾಳೆ ಸಿಕ್ಕಿದ ಕಡೆಯೆಲ್ಲಾ ಲೆಕ್ಕಮಾಡುತ್ತಾ ಕೂರತೊಡಗಿದ. ಜೇಬಿನಲ್ಲೆಷ್ಟು, ಬ್ಯಾಂಕಿನಲ್ಲೆಷ್ಟು, ಮುಂದಿನ ವಾರದೊಳಗೆ ಎಷ್ಟಾಗಬಹುದು ಇವುಗಳೇ ಆ ಲೆಕ್ಕಾಚಾರಗಳಾಗಿದ್ದವು. ವಿಕಾಸ್ ದಿನ ದಿನಕ್ಕೆ ವಿ-ಕಾಸುವೇ ಆಗಿ ಹೋದನು.
ಅದೊಂದು ದಿನ, ತಿಂಡಿ ತಿನ್ನದೇ ಅರ್ಧ ಟೀ ಕುಡಿದು ನಗರದ ಬೀದಿಗಳಲ್ಲಿ ಜೇಬಿಗೆ ಕೈಹಾಕಿ ನಡೆಯುತ್ತಿರುವಾಗ ಚಿತ್ರಕಲಾ ಸಾಮಾಗ್ರಿಗಳು ದೊರೆಯುತ್ತವೆ, ಎಂಬ ಮಾಹಿತಿಯಿದ್ದ ಜಾಹೀರಾತುವೊಂದನ್ನು ಕಂಡು ಆ ಅಂಗಡಿ ಬಳಿ ಹೋದನು. ತರತರಹದ ಪೆನ್ಸೀಲುಗಳು, ಬ್ರಶ್, ಬಣ್ಣದ ಡಬ್ಬಿಗಳು, ತೆಳು-ಗಟ್ಟಿ ಹಾಳೆಗಳನ್ನು ಕೇಳಿ ತೆಗೆಸಿದ. ಕಣ್ಣಮುಂದೆ ಎಲ್ಲಾ ಸಾಮಾಗ್ರಿಗಳನ್ನು ಒಟ್ಟಾಗಿ ಕಂಡು ಅವನು ಮನಸ್ಸು ಉಲ್ಲಾಸಗೊಂಡಿತು. ಅವುಗಳ ಬೆಲೆಯನ್ನು ಕೇಳಿ ಲೆಕ್ಕಮಾಡಹೊರಟನು. ಮನಸ್ಸೆಲ್ಲೋ ಒಂದು ಕಡೆ ಮುಷ್ಕರ ಸಾರಿ ಕೆಳಮುಖನಾಗಿ ಜಗ್ಗತೊಡಗಿತು. ಇಬ್ಬದಿಗೆ ಸಿಲುಕಿದವನು ಒಂದು ಕ್ಷಣ ಯೋಚಿಸಿ ಗಂಟಲು ಸರಿಮಾಡಿಕೊಂಡು ಬೇಡ ಸಾರ್, ಸಾರಿ ಎಂದು ಮುಂದೆ ಅಡಿಯಿಟ್ಟನು.
ಮೂಲಭೂತ ಶಿಕ್ಷಣವೆಂಬುದು ಮರೀಚಿಕೆ
ಮುಖ್ಯ ನ್ಯಾಯಾಧೀಶರಾದ ಗೌರವಾನ್ವಿತ ಎಸ್.ಎಚ್.ಕಪಾಡಿಯ, ನ್ಯಾಯಾಧೀಶ ಕೆ.ಎಸ್.ರಾಧಾಕೃಷ್ಣ, ಮತ್ತು ನ್ಯಾಯಾಧೀಶ ಜೆ.ಜೆ. ಸ್ವತಂತ್ರ ಕುಮಾರ ಅವರು ನೀಡಿರುವ ಐತಿಹಾಸಿಕ ತೀಪರ್ಿನ ಪ್ರಕಾರ ಕಡ್ಡಾಯ ಮೂಲಭೂತ ಶಿಕ್ಷಣ ಹಕ್ಕು ಕಾಯ್ದೆಯ ಅನ್ವಯ ಆಥರ್ಿಕವಾಗಿ ದುರ್ಬಲ ವರ್ಗಗಳಿಗೆ ಶೇಕಡ 25ರಷ್ಟು ಮೀಸಲಾತಿಯನ್ನು ಅನುಮೋದಿಸಿ, ಈ ಕಾಯ್ದೆಯನ್ನು ಎತ್ತಿ ಹಿಡಿದು ಇದನ್ನು 2012ರಿಂದಲೇ ಜಾರಿಗೆ ಬರುವಂತೆ ಅನುಷ್ಟಾನಗೊಳಿಸಲು ಆದೇಶಿಸಿದೆ. ಈ ತೀಪರ್ಿನ ಪ್ರಕಾರ ಸಕರ್ಾರಿ ಶಾಲೆಗಳು, ಅನುದಾನಿತ ಖಾಸಗಿ ಶಾಲೆಗಳು, ಅನುದಾನರಹಿತ ಖಾಸಗಿ ಶಾಲೆಗಳು ಈ ಕಾಯ್ದೆಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಆದರೆ ಅನುದಾನರಹಿತ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಈ ಕಾಯ್ದೆಯಿಂದ ವಿನಾಯಿತಿ ಕೊಡಲಾಗಿದೆ.
ಇಂದು ಸ್ವಾತಂತ್ರ್ಯ ಬಂದು 65 ವರ್ಷಗಳ ನಂತರವೂ ಮೂಲಭೂತ ಶಿಕ್ಷಣವು ಒಂದು ಮರೀಚಿಕೆಯಾಗಿರುವುದು, ಅದಕ್ಕಾಗಿ ನ್ಯಾಯಾಂಗವು ಪದೇ ಪದೇ ಮಧ್ಯ ಪ್ರವೇಶ ಮಾಡಬೇಕಾಗಿ ಬಂದಿರುವುದು, ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೆ ತರಲು ತಿಣುಕುತ್ತಿರುವುದು ಕಡೆಗೂ ಎಲ್ಲಾ ಸಕರ್ಾರಿ ಪ್ರಾಥಮಿಕ ಶಾಲೆಗಳು (8ನೇ ತರಗತಿವರೆಗೆ) ಹಾಗೂ ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಶಾಲೆಗಳು (8ನೇ ತರಗತಿಯವರೆಗೆ) ಆಥರ್ಿಕವಾಗಿ ದುರ್ಬಲ ವರ್ಗಗಳಿಗೆ ಶೇಕಡ 25 ರಷ್ಟು ಮೀಸಲಾತಿಯನ್ನು ಕೊಡಬೇಕೆನ್ನುವ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಶಿಕ್ಷಣ ಹಕ್ಕು ಕಾಯ್ದೆಯ ಕರಡು ನೀತಿಯನ್ನು ಎತ್ತಿ ಹಿಡಿದು ಐತಿಹಾಸಿಕ ತೀಪರ್ು ನೀಡಿದೆ, ಇದೇ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಬೇಕೆಂದು ಸಹ ಆದೇಶಿಸಿದೆ. ಇದು ದೇಶದ ಎಲ್ಲಾ ಸಂಬಂಧಪಟ್ಟ ಮೇಲ್ಕಾಣಿಸಿದ ಶಾಲೆಗಳು ಸಂವಿಧಾನದ ಪ್ರಕಾರ ದೇಶದ ನ್ಯಾಯಾಂಗ ವ್ಯವಸ್ಥೆಯ ಆದೇಶವನ್ನು ಪಾಲಿಸಲೇಬೇಕು. ಆಥರ್ಿಕವಾಗಿ ದುರ್ಬಲ ವರ್ಗಗಳಿಗೆ ಶಿಕ್ಷಣದಲ್ಲಿ ಶೇಕಡ 25ರಷ್ಟು ಮೀಸಲಾತಿಯ ಆದೇಶವನ್ನು ಕಾನೂನಿನ ಪ್ರಕಾರ ಪಾಲಿಸಬೇಕು ಎನ್ನುವುದು ಒಂದು ಕಡೆಯಾದರೆ, ಪ್ರಾಥಮಿಕ ಶಿಕ್ಷಣವನ್ನು ಉಚಿತವಾಗಿ ನೀಡಲೇಬೇಕು ಎನ್ನುವ ಮಾನವೀಯ ನೆಲೆಗಟ್ಟಿನ ಹಕ್ಕೊತ್ತಾಯವೆನ್ನುವುದು ಮತ್ತೊಂದು ಪ್ರಮುಖ ನೀತಿ.
ಇದು ನೈತಿಕತೆಯ, ಮೌಲ್ಯಗಳ ಪ್ರಶ್ನೆ. ಆದರೆ ಈ ನೈತಿಕತೆ ಹಾಗೂ ಮೌಲ್ಯಗಳ ಅರ್ಥಗಳ ಅರಿವೇ ಇಲ್ಲದ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಕಳೆದ 65 ವರ್ಷಗಳಲ್ಲಿ ಪ್ರಾಥಮಿಕ ಶಿಕ್ಷಣಕ್ಕಾಗಿ ರೂಪಿಸಿದ ನೀತಿಗಳು ಅತ್ಯಂತ ದುರ್ಬಲವಾಗಿದ್ದವು. ಏಕೆಂದರೆ ಇದು ಖಾಸಗಿಶಾಲೆಗಳಿಗೆ ಅನುಕೂಲಕರವಾಗುವಂತೆ ಇತ್ತು ಮತ್ತು ಇಲ್ಲಿ ರಾಜಕೀಯ ಇಚ್ಛಾಶಕ್ತಿ ಇರಲೇ ಇಲ್ಲ ಹಾಗೂ ಸಾಮಾಜಿಕ ಜವಾಬ್ದಾರಿ ಹಾಗೂ ಸಾಮಾಜಿಕ ನ್ಯಾಯದ ಪರವಾದ ಮನಸ್ಸು ಸಕರ್ಾರಗಳಿಗೆ ಅಸ್ಪೃಶ್ಯವಾಗಿತ್ತು. ಇನ್ನು ಕೇವಲ ಆಥರ್ಿಕ ಲಾಭವನ್ನೇ ತನ್ನ ಪ್ರಥಮ ಆದ್ಯತೆಯನ್ನಾಗಿ ಮಾಡಿಕೊಂಡಿರುವ ನಮ್ಮ ದೇಶದ ಖಾಸಗಿ ಶಾಲೆಗಳು ಮೀಸಲಾತಿಯೆಂದರೆ ಬೆಚ್ಚಿ ಬೀಳುತ್ತವೆ. ಇನ್ನಿಲ್ಲದ ಆತಂಕವನ್ನೂ, ಇದರಿಂದ ದೇಶದ ಭವಿಷ್ಯವೇ ನಾಶವಾಗುತ್ತದೆ ಎಂದು ಕೀಳು ಮಟ್ಟದ ಪಿತೂರಿಯನ್ನೇ ಹುಟ್ಟು ಹಾಕುತ್ತವೆ. ಇದೆಲ್ಲದರ ಹಿನ್ನೆಲೆಯಲ್ಲಿ ಆಥರ್ಿಕವಾಗಿ ದುರ್ಬಲ ವರ್ಗಗಳಿಗೆ ಶಿಕ್ಷಣದಲ್ಲಿ ಶೇಕಡ 25 ರಷ್ಟು ಮೀಸಲಾತಿಯ ಆದೇಶವನ್ನು ಖಾಸಗಿ ಶಾಲೆಗಳು ಅತ್ಯಂತ ಅಮಾನವಿಯ, ಅನೈತಿಕವಾಗಿ, ಆತ್ಮದ್ರೋಹದಿಂದ ಪ್ರಶ್ನಿಸುತ್ತಿದ್ದರೆ, ಸಕರ್ಾರ ಇನ್ನು ತನ್ನ ಜವಬ್ದಾರಿ ಮುಗಿಯಿತು ಏನಿದ್ದರೂ ಖಾಸಗಿ ಶಾಲೆಗಳುಂಟು ಹಾಗೂ ಸುಪ್ರೀಂಕೋಟರ್್ನ ಆದೇಶವುಂಟು ಎಂದು ಅತ್ಯಂತ ಬೇಜವಬ್ದಾರಿಯಿಂದ ವತರ್ಿಸುತ್ತಿವೆ.
ಮೊದಲು ಖಾಸಗಿ ಶಾಲೆಗಳ ಆಕ್ಷೇಪಣೆಗಳನ್ನು ನೋಡೋಣ:
1. ಈ ಮೀಸಲಾತಿಯು ಶಾಲೆಗಳ ಶಿಕ್ಷಣದ ಗುಣಮಟ್ಟವನ್ನು ಹಾಳು ಮಾಡುತ್ತವೆ. ಮಧ್ಯಮ ವರ್ಗದ ಹಾಗೂ ಮೇಲ್ವರ್ಗದ ಶ್ರೀಮಂತ ವಿದ್ಯಾಥರ್ಿಗಳು ಕೆಳವರ್ಗಗಳ ಬಡ ವಿದ್ಯಾಥರ್ಿಗಳೊಂದಿಗೆ ಬೆರೆಯುವುದಿಲ್ಲ. ಬಡ ವಿದ್ಯಾಥರ್ಿಗಳು ಕೀಳರಿಮೆಯಿಂದ ಬಳಲುತ್ತಾರೆ. ಇದು ಶಾಲೆಯಲ್ಲಿ ತಾರತಮ್ಯ ನೀತಿಯನ್ನು ಹುಟ್ಟಿ ಹಾಕುತ್ತದೆ.
ಪ್ರಜ್ಞಾವಂತರ ಉತ್ತರ: ಪ್ರಾರಂಭದಲ್ಲಿ ವಿಭಿನ್ನ ವರ್ಗಗಳ ವಿದ್ಯಾಥರ್ಿಗಳು ಒಂದುಗೂಡಿ ಬೆರೆಯಲು ತೊಂದರೆ ಇರುತ್ತದೆ. ಇದು ಸಹಜ. ಆದರೆ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಯರು ಇಲ್ಲಿ ಅತ್ಯಂತ ಸೂಕ್ಷ್ಮವಾಗಿ, ಜವಬ್ದಾರಿಯಿಂದ, ಹೆಚ್ಚಿನ ಹೊಣೆಗಾರಿಕೆಯಿಂದ ಈ ಪರಿಸ್ಥಿತಿಯನ್ನು ತಿಳಿಗೊಳಿಸಬೇಕು. ಇದು ಕಷ್ಟದ ಕೆಲಸವೇನಲ್ಲ. ಈ ನಡುವಳಿಕೆಗಳನ್ನು ಶಿಕ್ಷಣದ ತರಬೇತಿಯ ಸಂದರ್ಭದಲ್ಲಿ ಕಲಿಸಿಕೊಡಲಾಗುತ್ತದೆ. ಒಂದು ವೇಳೆ ಕಲಿಸಿಕೊಡದಿದ್ದರೆ ಕಲ್ಪಿಸಿಕೊಡಬೇಕು. ಈ ರೀತಿಯ ಸಾಮಾಜಿಕ ಹಿನ್ನೆಲೆಯ, ಶೈಕ್ಷಣಿಕ ಹಿನ್ನೆಲೆಯ ಅಸಮತೋಲನವನ್ನು ನಿಭಾಸಲು ಮಾನವ ಶಾಸ್ತ್ರೀಯ ಅಧ್ಯಯನದಲ್ಲಿ ಅನೇಕ ಪರಿಕರಗಳು, ಉತ್ತರಗಳು, ಸಿದ್ಧ ಮಾದರಿಗಳು ದೊರಕುತ್ತವೆ. ಶಿಕ್ಷಕರು ಇವನ್ನು ಅಭ್ಯಸಿಸಬೇಕು. ಇದು ಬಹಳ ಸುಲಭ. ಕೇವಲ ಇಚ್ಛಾಶಕ್ತಿ ಬೇಕು. ಅಷ್ಟೇ. ಆದರೆ ಇವರೆಲ್ಲ ಸಾಮಾಜಿಕ ಜವಾಬ್ದಾರಿ ಹಾಗೂ ಸಾಮಾಜಿಕ ನ್ಯಾಯದ ಅರ್ಥವನ್ನು, ಅಗತ್ಯತೆಯನ್ನು ಮನದೊಳಗೆ ಪ್ರಾಮಾಣಿಕವಾಗಿ ಬಿಟ್ಟುಕೊಂಡರೆ ಕೆಲವೇ ತಿಂಗಳುಗಳೊಳಗೆ ತಮ್ಮ ಶಾಲೆಯನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡಬಹುದು. ಮತ್ತು ಮಾಡಲೇಬೇಕು. ಇದು ನ್ಯಾಯಾಂಗದ ಆದೇಶ. ಒಂದು ವೇಳೆ ಹಾಗಾಗದಿದ್ದರೆ ಇದು ನ್ಯಾಯಾಂಗದ ನಿಂದನೆಯಾಗುತ್ತದೆ ಎಂದು ನಾವೆಲ್ಲ ಈ ಮನುವಾದಿಗಳಿಗೆ ಪದೇ ಪದೇ ಎಚ್ಚರಿಸುತ್ತಿರಬೇಕು.
2. ಈ ಮೀಸಲಾತಿಯ ಮೂಲಕ ಕಳ್ಳರು, ರೌಡಿ ಹಿನ್ನೆಲೆಯವರು ಶಾಲೆಗಳಲ್ಲಿ ಪ್ರವೇಶವನ್ನು ಪಡೆದುಕೊಂಡು ಒಟ್ಟಾರೆಯಾಗಿ ಶಾಲೆಯ ಶಾಂತಿ ವ್ಯವಸ್ಥೆ ಹಾಳಾಗುತ್ತದೆ. ಅವರ ಊಟದ ವ್ಯವಸ್ಥೆಯಲ್ಲಿನ ತಾರತಮ್ಯದಿಂದ ಶಾಲೆಯ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಫಲಿತಾಂಶದ ಮಟ್ಟ ಕುಸಿಯುತ್ತದೆ.
ಪ್ರಜ್ಞಾವಂತರ ಉತ್ತರ: ಇಂತಹ ನೀಚತನದ, ದುರಹಂಕಾರದ ಅಭಿಪ್ರಾಯಗಳಿಗೆ ಒಂದೇ ಉತ್ತರ. ನಾವೆಲ್ಲ ಈ ಹೇಳಿಕೆಗಳನ್ನು ನೀಡಿದವರ ವಿರುದ್ಧ ನ್ಯಾಯಾಂಗ ನಿಂದನೆಯ, ವೈಯುಕ್ತಿಕ ಮಾನಹಾನಿ ಅಪಾದನೆಯಡಿಯಲ್ಲಿ ಕೋಟರ್್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅಜರ್ಿಯನ್ನು ಸಲ್ಲಿಸಬೇಕು. ಕೆಲವು ಪ್ರಕರಣಗಳಲ್ಲಿ ಸಂಬಂಧಪಟ್ಟವರಿಗೆ ಛೀಮಾರಿ ಹಾಕಿಸಿ ಶಿಕ್ಷೆ ಕೊಡಿಸಿದರೆ ಮಿಕ್ಕವರು ತೆಪ್ಪಗೆ ದೂರ ಸರಿಯುತ್ತಾರೆ. ಸಾಮಾಜಿಕ ನ್ಯಾಯದ ಪರವಾಗಿ ಕೇವಲ ಮಾತನಾಡುವ ನಾವು ಸಾರ್ವಜನಿಕವಾಗಿ ಕ್ರಿಯಾಶೀಲರಾಬೇಕು ಅಷ್ಟೇ. ಇದು ಬಿಟ್ಟು ಮತ್ತೆ ವಾದ ಪ್ರತಿವಾದಗಳಲ್ಲಿ ತೊಡಗಿದರೆ ಅದು ನಮ್ಮ ನೀಚತನ, ಅನೈತಿಕತೆಯನ್ನು ತೆರೆದಿಡುತ್ತದೆ.
3. ಈ ಮೀಸಲಾತಿಯ ಮೂಲಕ ನಾವು ಕೆಳವರ್ಗದ ಬಡ ವಿದ್ಯಾಥರ್ಿಗಳನ್ನು ಸೇರಿಸಿಕೊಂಡರೆ ನಮ್ಮ ಆಥರ್ಿಕ ವ್ಯವಸ್ಥೆಯಲ್ಲಿ ಅಸಮತೋಲನ ಉಂಟಾಗುತ್ತದೆ. ಶೇಕಡಾ 25 ರಷ್ಟು ವಿದ್ಯಾಥರ್ಿಗಳಿಗೆ ಉಚಿತ ವಿದ್ಯಾಭ್ಯಾಸ ನೀಡಬೇಕಾದರೆ ಇದಕ್ಕೆ ಬೇಕಾದ ಹಣವನ್ನು ಎಲ್ಲಿಂದ ತರುವುದು? ಇದನ್ನು ಸರಿ ತೂಗಿಸಲು ಮಧ್ಯಮ ಹಾಗೂ ಮೇಲ್ವರ್ಗದ ಶ್ರೀಮಂತ ಪೋಷಕರಿಂದ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡಬೇಕು. ಇದನ್ನು ಪ್ರತಿಭಟಿಸಿ ಅವರು ನಮ್ಮ ಶಾಲೆಯನ್ನೇ ತೊರೆಯಬಹುದು.
ಪ್ರಜ್ಞಾವಂತರ ಉತ್ತರ: ಕಡ್ಡಾಯ ಶಿಕ್ಷಣ ಹಕ್ಕಿನ ಕರಡು ನೀತಿಯ ಪ್ರಕಾರ ವಿದ್ಯಾಭ್ಯಾಸದ ಶುಲ್ಕದ ಶೇಕಡ 35 ರಷ್ಟು ಹಣವನ್ನು ಕೇಂದ್ರ ಸಕರ್ಾರ ಭರಿಸಿದರೆ ಶೇಕಡ 65 ರಷ್ಟು ಹಣವನ್ನು ರಾಜ್ಯ ಸಕರ್ಾರಗಳು ಭರಿಸುತ್ತವೆ. ಈ ಅನುಕೂಲ ಕಲ್ಪಿಸಕೊಡುವುದಕ್ಕಾಗಿ ಖಾಸಗಿ ಶಾಲೆಗಳು ಇತರೆ ಸೌಲಭ್ಯಗಳನ್ನು ಶೇಕಡ 25 ರಷ್ಟು ಹೆಚ್ಚುವರಿ ಬಡ ವಿದ್ಯಾಥರ್ಿಗಳಿಗೆ ಕಲ್ಪಿಸಿ ಕೊಡಬೇಕು. ಈ ಹೆಚ್ಚುವರಿಯಾದ ವಿದ್ಯಾಥರ್ಿಗಳ ಪ್ರವೇಶಕ್ಕೆ ಅನುವು ಮಾಡಿಕೊಡಲು ತಮ್ಮ ಪೇಮೆಂಟ್ ವಿಭಾಗದ ಪ್ರವೇಶದಲ್ಲಿ ಶೇಕಡವಾರು 25 ರಷ್ಟು ಕಡಿತಗೊಳಿಸಲೇಬೇಕು. ಇದಕ್ಕಾಗಿ ತಮ್ಮ ಲಾಭಂಶದಲ್ಲಿ ಕೊಂಚ ಕಡಿಮೆ ಗಳಿಕೆ ಉಂಟಾಗಬಹುದು. ಈ ಮೂಲಕವಾದರೂ ಪ್ರಾಥಮಿಕ ಶಿಕ್ಷಣವೆನ್ನುವುದು ವ್ಯಾಪಾರದ ಸರಕಲ್ಲ ಬದಲಾಗಿ ಮೂಲಭೂತ ಅವಶ್ಯಕತೆ ಮತ್ತು ಇದನ್ನು ಉಚಿತವಾಗಿ ಪಡೆಯುವುದು ಬಡವರ ಹಕ್ಕು ಎನ್ನುವ ಜೀವಪರ ನೈಸಗರ್ಿಕ ನೀತಿಯನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಗೌರವಿಸಲೇಬೇಕು. ಇದನ್ನೂ ಮಾಡಲಾಗದಿದ್ದರೆ ಅವರು ಈ ವಲಯವನ್ನೇ ಬಿಟ್ಟು ಹೋಗಬೇಕಾಗುತ್ತದೆ ಮತ್ತು ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಕರ್ಾರಗಳು ತಾಕೀತು ಮಾಡಲೇಬೇಕು.
4. ಕಡ್ಡಾಯ ಶಿಕ್ಷಣ ಹಕ್ಕಿನ ಕಾಯ್ದೆಯನ್ನು ಜಾರಿಗೊಳಿಸಲು ತಮ್ಮ ಸರ್ವ ಶಿಕ್ಷಣದ ಅಭಿಯಾನದ ಅಡಿಯಲ್ಲಿ ಸಕರ್ಾರವೇ ಏತಕ್ಕೆ ಹೆಚ್ಚುವರಿ ಶಾಲೆಗಳನ್ನು ಆರಂಭಿಸಿ ಪ್ರವೇಶಕ್ಕಾಗಿ ಕಾದಿರುವ ಸುಮಾರು 10 ಲಕ್ಷದಷ್ಟು ಬಡ ವಿದ್ಯಾಥರ್ಿಗಳನ್ನು ಸಕರ್ಾರಿ ಶಾಲೆಗಳಲ್ಲಿ ಸೇರಿಸಿಕೊಳ್ಳಬಾರದು? ನಮ್ಮನ್ನೇಕೆ ಪೀಡಿಸುತ್ತೀರಿ?
ಪ್ರಜ್ಞಾವಂತರ ಉತ್ತರ: ನೋಡಿ ಇವರ ನೈತಿಕ ಪತನ!! ಕೆಳವರ್ಗಗಳ ಬಡಜನತೆಯೊಂದಿಗೆ ಮಾನಸಿಕ ಹಾಗೂ ಭೌತಿಕ ಸಂಪರ್ಕವನ್ನು ಸಂಪೂರ್ಣ ಕಡೆದು ಕೊಂಡಿರುವ ಈ ಮೇಲ್ವರ್ಗ ಹಾಗೂ ಮಧ್ಯಮ ವರ್ಗಗಳು 30 ವರ್ಷಗಳ ಹಿಂದೆ ಹೀಗಿರಲಿಲ್ಲ. ಕಳೆದ 20ವರ್ಷಗಳ ಖಾಸಗೀಕರಣದ ಲಾಭವನ್ನು ಏಕಪಕ್ಷೀಯವಾಗಿ ಹೊಡೆದುಕೊಂಡ ಈ ಮೇಲ್ವರ್ಗ ಹಾಗೂ ಮಧ್ಯಮ ವರ್ಗಗಳು ಆಥರ್ಿಕವಾಗಿ ಬಲವಾಗುತ್ತಾ ತಮ್ಮ ಮಾನಸಿಕ ಭ್ರಷ್ಟಾಚಾರವನ್ನೂ, ಬೌದ್ಧಿಕ ದಿವಾಳಿತನವನ್ನೂ ಕೂಡ ಅದೇ ವೇಗದಲ್ಲಿ ಬೆಳೆಸಿಕೊಂಡಿವೆ. ಈ ವರ್ಗಗಳು ತಮ್ಮ ಆಥರ್ಿಕ ಬಲದಿಂದ ಆಗಲೇ ಈ ಖಾಸಗಿ ಶಾಲೆಗಳ ಅನುಕೂಲತೆ ಗುಣಮಟ್ಟವನ್ನು ಬಳಸಿಕೊಂಡು ಜೀವನದಲ್ಲಿ ಮೇಲೇರಿದ್ದಾರೆ. ಉತ್ತಮ ಸಂಬಳ ತೆಗೆದುಕೊಳ್ಳುತಿದ್ದಾರೆ. ಇದನ್ನಾಗಲೇ ಈ ಮೇಲ್ವರ್ಗ ಹಾಗೂ ಮಧ್ಯಮ ವರ್ಗಗಳ ಮೂರು ತಲೆಮಾರುಗಳು ಇದರ ಫಲವನ್ನು ಅನುಭವಿಸಿವೆ. ಆದರೆ ಇದೇ ಸೌಲಭ್ಯ ದುಬಾರಿಯಾದ ಖಾಸಗಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಕೆಳವರ್ಗಗಳ, ದಲಿತರ ಬಡಮಕ್ಕಳು ಲಭ್ಯವಾಗಿಲ್ಲ.
ಏಕೆಂದರೆ ದುಬಾರಿಯಾದ ಈ ಖಾಸಗಿ ಶಿಕ್ಷಣ ಮಾಧ್ಯಮ ಇವರಿಗೆ ಗಗನಕುಸುಮ ಎಂದು ಎಲ್ಲರಿಗೂ ಗೊತ್ತು. ಇದನ್ನು ಪಡೆದುಕೊಳ್ಳುವುದೇ ಸಾಮಾಜಿಕ ನ್ಯಾಯದ ಮೂಲ ತಿರುಳು. ಇದನ್ನು ಅನುಷ್ಟಾನಗೊಳಿಸುವುದರ ಮೊದಲ ಹೆಜ್ಜೆಯೇ ಈ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಮೂಲ ನೀತಿ. ಇದನ್ನು ಶತಮಾನಗಳಿಂದ ಹೇಳುತ್ತಲೇ ಬಂದಿದ್ದರೂ ಈ ಮೇಲ್ವರ್ಗ ಹಾಗೂ ಮಧ್ಯಮ ವರ್ಗಗಳು ಅದನ್ನು ಒಪ್ಪಿಕೊಂಡು ಅನುಸರಿಸಲು ತಯಾರಿಲ್ಲವೆಂದರೆ ನಾವೆಲ್ಲ ಈ ಜನಗಳ ಮನಪರಿವರ್ತನೆಗೆ ಕಾಯುತ್ತಾ ಮತ್ತೆ ಶತಮಾನಗಳವರೆಗೆ ಕಾಯುತ್ತಾ ಕೂಡಬೇಕೇ (ಆತ್ಮವಂಚನೆಯ ಮಾರ್ಗ) ಅಥವಾ ಸುಪ್ರೀಂಕೋಟರ್ಿನ ಆದೇಶವನ್ನೇ ಒಂದು ದೊಡ್ಡ ಅಸ್ತವನ್ನಾಗಿ ಬಳಸಿಕೊಂಡು (ಆತ್ಮಸಾಕ್ಷಿಯ ಮಾರ್ಗ) ಕ್ರಿಯಾಶೀಲರಾಗಬೇಕೇ.
ಇನ್ನು ಕಡೆಯದಾಗಿ ರಾಜ್ಯ ಸಕರ್ಾರಗಳ ಆತ್ಮವಂಚನೆ ಹಾಗೂ ಸಮಾಜದ್ರೋಹ. ಸುಪ್ರೀಂಕೋಟರ್ಿನ ಆದೇಶದಡಿಯಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆದೇಶಗಳನ್ನು, ಗಡುವನ್ನೂ ಜಾರಿಗೊಳಿಸಬೇಕಲ್ಲವೇ? ಇದಕ್ಕಾಗಿ ಸಮಿತಿಯನ್ನು ರಚಿಸಿ ಈಗಾಗಲೇ ಇದರ ಅನುಷ್ಠಾನಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿತ್ತು. ಇದಾವುದನ್ನೂ ಮಾಡದೆ ಸಕರ್ಾರಗಳು ನಿದ್ರಿಸುತ್ತಿವೆ. ಈ ಖಾಸಗಿ ಶಿಕ್ಷಣ ಸಂಸ್ಥೆಗಳು ಈ ತೀಪರ್ಿನ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸಲಿ ಎಂದು ಬಕಪಕ್ಷಿಯಂತೆ ಕಾಯುತ್ತಿವೆ. ಈಗಾಗಲೇ ಖಾಸಗಿ ಶಿಕ್ಷಣ ಸಂಸ್ಥೆಗಳು ಅನುದಾನರಹಿತ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಾಗಿ ಪರಿವತರ್ಿತವಾಗಲು ವಾಮಮಾರ್ಗಗಳನ್ನು ಹುಡುಕುತ್ತಿವೆ. ಏಕೆಂದರೆ ಅಲ್ಲಿ ಈ ಕಾಯ್ದೆಗೆ ವಿನಾಯಿತಿ ಇದೆ. ಇದಕ್ಕೆ ಸಕರ್ಾರ ಪರೋಕ್ಷವಾಗಿ ಸಹಾಯ ಮಾಡುತ್ತಿದೆ. ಇದು ಎಂತಹ ನೀಚತನ !!!
ಕೇಂದ್ರ ಸಕರ್ಾರ ನಿಯೋಜಿಸಿದ ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಸಮಿತಿಯು ಶಿಕ್ಷಣ ಕಾಯ್ದೆ ಹಕ್ಕು ಕಾನೂನಿಗೆ ಪೂರಕವಾಗಿ ದೇಶದ ಸಕರ್ಾರಿ ಶಾಲೆಗಳ ಬಗೆಗೆ ಒಂದು ವರದಿಯನ್ನು ನೀಡಲು ಇಲ್ಲಿನ ಕೆಲವು ಪ್ರಮುಖ ರಾಜ್ಯಗಳನ್ನು ತನ್ನ ಸಂಶೋಧನೆಗಾಗಿ ಆರಿಸಿಕೊಂಡು ಕೆಳಗಿನಂತೆ ವರದಿ ನಿಡಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಶೇಕಡಾ 55-60 ರಷ್ಟು ಪ್ರಾಥಮಿಕ ಶಾಲೆಯ ವಿದ್ಯಾಥರ್ಿಗಳು ಮಧ್ಯದಲ್ಲೇ ತಮ್ಮ ಶಿಕ್ಷಣವನ್ನು ಮೊಟಕುಗೊಳಿಸುತ್ತಾರೆ. ಶೇಕಡಾ 30 ರಷ್ಟು ಶಾಲೆಗಳು ಏಕೋಪಾಧ್ಯಾಯ ಶಾಲೆಗಳು. ಇನ್ನೂ ಕನಿಷ್ಟ 6 ಲಕ್ಷ ಶಿಕ್ಷಕರ ಅವಶ್ಯಕತೆ ಇದೆ. ಉತ್ತರ ಭಾರತದ ಅನೇಕ ಸಕರ್ಾರಿ ಶಾಲೆಯ ಶಿಕ್ಷಕರು ತಮ್ಮ ಶಿಕ್ಷಕ ವೃತ್ತಿಯನ್ನು ಹೊರ ಗುತ್ತಿಗೆ ನೀಡುತ್ತಾರೆ. ಶೇಕಡಾ 8ರಷ್ಟು ಶಾಲೆಗಳಿಗೆ ಕಟ್ಟಡಗಳಿಲ್ಲ. ಶೇಕಡಾ 15ರಷ್ಟು ಶಾಲೆಗಳಿಗೆ ಕುಡಿಯುವ ನೀರಿನ ಸೌಲಭ್ಯವಿಲ್ಲ. ಶೇಕಡಾ 60 ರಷ್ಟು ಶಾಲೆಗಳಲ್ಲಿ ಶೌಚಾಲಯಗಳಿಲ್ಲ. ಶೇಕಡಾ 70 ರಷ್ಟು ಶಾಲೆಗಳಲ್ಲಿ ವಿದ್ಯುತ ವ್ಯವಸ್ಥೆ ಇಲ್ಲ. ಇದಕ್ಕೆ ಅತ್ಯಂತ ತೀವ್ರವಾಗಿ ಆಕ್ಷೇಪವನ್ನು ವ್ಯಕ್ತಪಡಿಸಿದ ಸುಪ್ರೀಂಕೋರ್ಟ ರಾಜ್ಯ ಸಕರ್ಾರಗಳಿಗೆ ತಮ್ಮ ಸಕರ್ಾರಿ ಶಾಲೆಗಳಲ್ಲಿನ ಶೌಚಾಲಯ, ಕುಡಿಯುವ ನೀರಿನ ಹಾಗೂ ಇನ್ನಿತರ ಸೌಕರ್ಯಗಳ ಬಗೆಗೆ ತಕ್ಷಣ ವರದಿ ನೀಡಲು ಸೂಚಿಸಿದಾಗ ಆತ್ಮಸಾಕ್ಷಿ ಇಲ್ಲದ ಸಕರ್ಾರಗಳು ಮೇಲ್ಕಾಣಿಸಿದ ಎಲ್ಲಾ ಸೌಲಭ್ಯಗಳು ಲಭ್ಯವಿದೆ ಎಂದು ಸುಳ್ಳು ಅಂಕಿಅಂಶಗಳೊಂದಿಗೆ, ಸುಳ್ಳುವರದಿಯನ್ನು ಸಲ್ಲಿಸಿವೆ. ಇದನ್ನು ಸಮ್ಮತಿಸದ ಸುಪ್ರೀಂಕೋರ್ಟ ಸಂಪೂರ್ಣ ಪರಿಶೋಧನೆ ನಡೆಸಲು ಸೂಚಿಸಿದೆ.
ಇದು ನಮ್ಮ ಸಕರ್ಾರಿ ಶಾಲೆಗಳ ಎಂದೆಂದೂ ಮುಗಿಯದ ದುರಂತ ಕಥೆ. ಇದನ್ನು ವಿಸ್ರೃತವಾಗಿ ಬರೆದರೆ ನೂರಾರು ಪುಟಗಳು ಸಾಲದು. ನಿಜ ನಾನು ಮತ್ತು ನಮ್ಮ ತಲೆಮಾರು ಮತ್ತು ನಮ್ಮ ಹಿರಿಯ ತಲೆಮಾರಿನವರೆಲ್ಲ ಸಕರ್ಾರಿ ಕನ್ನಡ ಮಾಧ್ಯಮದಲ್ಲೇ ಓದಿದ್ದು.
ಆದರೆ ಅದು ಭೂತಕಾಲದ ಮಾಧ್ಯಮದಲ್ಲಿ ಓದಿಸಿ ಸಾರ್ವಜನಿಕವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣದ ಪರವಾಗಿ ಮಾತನಾಡಿದರೆ ಇದು ಕಂಡವರ ಮಕ್ಕಳನ್ನು ಬಾವಿಗೆ ದೂಡಿದಂತಲ್ಲದೇ ಮತ್ತಿನ್ನೇನು? ನಮಗೆಲ್ಲಾ ಕನ್ನಡ ಮಾಧ್ಯಮದ ಶಿಕ್ಷಣದ ಹೋರಾಟಕ್ಕೆ ಈ ಅಲ್ಪಸಂಖ್ಯಾತ, ದಲಿತ, ಕೆಳ ವರ್ಗಗಳ ಜನಾಂಗ ಒಂದು ಆಟಿಕೆ ಮಾತ್ರ. ನಮ್ಮ ಕನ್ನಡಾಭಿಮಾನಕ್ಕೆ, ನಾವು ಪಲಾಯನವಾದಿಗಳಲ್ಲ ಎಂದು ಇಡೀ ಜಗತ್ತಿಗೆ ತೋರ್ಪಡಿಸಿಕೊಳ್ಳುವುದಕ್ಕೆ, ಕಮ್ಮಟಗಳಲ್ಲಿ ನಾಡಿನ ಭಾಷೆಯ ಮಹತ್ವದ ಮೇಲೆ ಚಿಂತಿಸಿ, ಮಂಥಿಸಿ ಮಿಂಚುವುದಕ್ಕೆ ನಾವು ತಳ ಸಮುದಾಯಗಳ, ಅಲ್ಪ ಸಂಖ್ಯಾತರ ಮಕ್ಕಳನ್ನ, ಹಿಂದುಳಿದವರ, ಬಡವರ ಮಕ್ಕಳನ್ನ ಬಳಸಿಕೊಂಡು, ಅವರನ್ನು ಕನ್ನಡದ ಪರವಾದ ಹೋರಾಟಕ್ಕೆ ಎಳೆದು ತಂದು ನಮ್ಮ ಅಹಂನ ಕನ್ನಡ ಉಳಿಸಿಸಲು ಇವರನ್ನ ಹಾದಿ ತಪ್ಪಿಸಿ ವೇದಿಕೆಗಳ ಮೇಲೆನಮ್ಮ ಕನ್ನಡ ಉದ್ಧಾರ ಮಾಡಿಕೊಳ್ಳುವುದಾದರೆ, ಈ ರೀತಿ ಶೋಷಿಸುವುದೇ ಕನ್ನಡಪರ ಚಿಂತನೆ ಎನ್ನುವುದಾದರೆ ಇಂತಹ ಲೊಳಲೊಟ್ಟೆ, ಬುಡುಬುಡಿಕೆಯ ಹೋರಾಟಕ್ಕೆ ನಮ್ಮಂತಹವರ ವಿರೋಧವಿದೆ.
ಇದು ಅತಿಯಾದ ಮಾತು ಎಂದು ನನಗೆ ಗೊತ್ತು. ಆದರೆ ದಯವಿಟ್ಟು ಇದನ್ನು ನಾವೆಲ್ಲ ಬಹಳ ಎಚ್ಚರಿಕೆಯಿಂದ, ಆತ್ಮಸಾಕ್ಷಿಯಿಂದ ಗಮನಿಸಬೇಕು. ಇಂದು ನಿಜಕ್ಕೂ ಕನ್ನಡ ಮಾಧ್ಯಮದ ಶಿಕ್ಷಣಕ್ಕೆ ಅನ್ನ ತಂದುಕೊಡುವ ಸಿದ್ಧ ಸೂತ್ರಗಳಾಗಲೀ, ಮಂತ್ರದಂಡಗಳಾಗಲೀ, ದೇಸೀ ಮಾರ್ಗಗಳಾಗಲೀ, ಭವಿಷ್ಯದ ಕಾಣಿಕೆಗಳಾಗಲೀ ಖಂಡಿತ ಇಲ್ಲವೇ ಇಲ್ಲ. ಕನ್ನಡ ಮಾಧ್ಯಮದ ಶಿಕ್ಷಣಕ್ಕೆ ಈ ಅನ್ನ ತಂದು ಕೊಡುವ ಮಾಗರ್ೋಪಾಯಗಳನ್ನು ಸಕರ್ಾರದ ಜೊತೆಗೆ ಸೇರಿ ನಾವೆಲ್ಲ ರೂಪಿಸಬೇಕು. ಅದಕ್ಕಾಗಿ ನಮ್ಮ ಖಾಸಗಿ ಸಮಯವನ್ನು ತ್ಯಾಗ ಮಾಡಲೇಬೇಕು. ಆಗ ಮಾತ್ರ ನಮ್ಮ ಕನ್ನಡಪರ ಹೋರಾಟಕ್ಕೆ ಮಾನ್ಯತೆ ದೊರಕುತ್ತದೆ.
ನಮ್ಮ ಕನ್ನಡ ಮಾಧ್ಯಮದಲ್ಲಿನ ಶಿಕ್ಷಣದ ಬಗೆಗಿನ ಸಂವಾದದಲ್ಲಿ ದಲಿತ, ಅಲ್ಪಸಂಖ್ಯಾತ ಸಮುದಾಯದವರನ್ನೂ ಒಳಗೊಳ್ಳಬೇಕು. ಅವರ ನಿರ್ಣಯವೇ ನಿಣರ್ಾಯಕವಾಗಿರಬೇಕು. ಆಗಲೇ ಇದಕ್ಕೆ ನ್ಯಾಯ ದೊರಕುತ್ತದೆ. ಆಗ ನಮ್ಮ ಕನ್ನಡ ಮಾಧ್ಯಮದ ಪರವಾದ ನಿಲುವಿಗೆ ಸ್ವಯಂ ಮಾನ್ಯತೆ ದೊರಕುತ್ತದೆ.
ಈಗಿನ ಪರಿಸ್ಥಿತಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಈಗಿನ ಸಕರ್ಾರಿ ಶಾಲೆಗಳನ್ನು ಸುಧಾರಿಸಲು 200% ಸಾಧ್ಯವಿಲ್ಲ. ಇಲ್ಲಿನ ನೌಕರಶಾಹಿ, ಶಿಕ್ಷಣ ಮಂತ್ರಿ, ಶಿಕ್ಷಕರು, ಮತ್ತು ಶಿಕ್ಷಕರ ತರಬೇತಿ ಪರಿಕರಗಳು ಎಲ್ಲವೂ ಒಟ್ಟಿಗೇ ಈಗಿರುವ ಮಟ್ಟದಿಂದ ಕನಿಷ್ಟ 70%ರಷ್ಟು ಮೇಲೇರಬೇಕು. ಇದು ಸಾಧ್ಯವೇ? ಅದಕ್ಕಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣಕ್ಕಾಗಿ ಅತ್ಯಂತ ನಿಷ್ಟುರ, ಸತ್ಯಪರ. ಅನಿವಾರ್ಯ ಕ್ರಾಂತಿಕಾರಿ ಕ್ರಮಗಳು (ಘನ ಸಕರ್ಾರ ಮನಸ್ಸಿದ್ದರೆ ತೆಗೆದುಕೊಳ್ಳಬೇಕಾದದ್ದು):
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಕುಹಕಿಗಳ ಪ್ರಕಾರ ಟಿಎ,ಡಿಎ ಪ್ರಾಧಿಕಾರ), ಕನ್ನಡ ಪುಸ್ತಕ ಪ್ರಾಧಿಕಾರ (ಕುಹಕಿಗಳ ಪ್ರಕಾರ ಸದ್ಯಕ್ಕೆ ಪುನರ್ವಸತಿ ಕೇಂದ್ರ), ಸಂಸ್ಕೃತ ವಿಶ್ವವಿದ್ಯಾಲಯ (ಕುಹಿಕಿಗಳ ಪ್ರಕಾರ ಸದ್ಯಕ್ಕೆ ಬಾಜಾ ಬಜಂತ್ರಿಗಳ, ಭಟ್ಟಂಗಿಗಳ, ಅನೇಕ ಬಾರಿ ಕೇಸರಿ ಪಡೆಗಳ, ಬಹುಮಾನ ವಿತರಕರ ಆಡೊಂಬಲ) ಗಳನ್ನು ಕೆಲವು ವರ್ಷಗಳಷ್ಟು ಕಾಲ ತಾತ್ಕಾಲಿಕವಾಗಿ ವಿಸಜರ್ಿಸಿ ಅಮಾನತ್ತಿನಲ್ಲಿಡಬೇಕು.
ಮೇಲಿನ ಕನ್ನಡದ ಮೂರೂ ಬೇಜವಬ್ದಾರಿ ಸಕರ್ಾರಿ ಸಂಸ್ಥೆಗಳನ್ನು 4 ಕನ್ನಡ ಶಾಲಾ ಘಟಕಗಳಾಗಿ ಪರಿವತರ್ಿಸಬೇಕು. ಇವುಗಳನ್ನು ಹೈದರಾಬಾದ ಕನರ್ಾಟಕ, ಮುಂಬೈ ಕನರ್ಾಟಕ, ಕರಾವಳಿ ಕನರ್ಾಟಕ, ದಕ್ಷಿಣ ಕನರ್ಾಟಕ ಎಂದು 4 ಘಟಕಗಳಾಗಿ ಪುನರ್ರಚಿಸಬೇಕು. ಮೂಲ ಸಂಸ್ಥೆಗಳಲ್ಲಿನ ಸಿಬ್ಬಂದಿಗಳನ್ನು ಈ ಕನ್ನಡ ಕಾರ್ಯಕ್ಕೆ ಬಳಸಿಕೊಳ್ಳಬೇಕು. ಕೊರತೆಯಾದರೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಎರವಲು ಪಡೆಯಬೇಕು.
ಮೇಲಿನ 4 ಘಟಕಗಳಿಗೆ ಕನ್ನಡದ ಅತ್ಯುತ್ತಮ ಪ್ರಗತಿಪರ, ಜಾತ್ಯಾತೀತ ಶಿಕ್ಷಣ ತಜ್ಞರನ್ನು ಮುಖ್ಯಸ್ಥರನ್ನಾಗಿ ನೇಮಿಸಬೇಕು. ಇವರಿಗೆ ಕನ್ನಡ ಮಾಧ್ಯಮದಲ್ಲಿನ ಅತ್ಯುತ್ತಮ ಶಿಕ್ಷಣಕ್ಕಾಗಿ ಅತ್ಯಂತ ತುತರ್ಿನ ಕರಡು ನೀತಿ ಮತ್ತು ಯೋಜನೆಗಳು (ಖಠಡಿಣ ಣಜಡಿಟ ಠಿಟಚಿಟಿ) ಮತ್ತು ದೂರಗಾಮಿ ಕರಡು ನೀತಿ ಮತ್ತು ಯೋಜನೆಗಳು (ಖಠಡಿಣ ಣಜಡಿಟ ಠಿಟಚಿಟಿ) ಸಿದ್ಧಪಡಿಸಲು ಕಾಲಮಿತಿಯನ್ನು ನಿಗದಿಪಡಿಸಬೇಕು.
ಮೇಲಿನ ಶಿಕ್ಷಣ ತಜ್ಞರು ಮತ್ತು ಅವರ ಸಹಾಯಕರು ಕನ್ನಡ ಮಾಧ್ಯಮದ ಉನ್ನತೀಕರಣಕ್ಕೆ ತಯಾರಿಸಿದ ಕರಡು ನೀತಿ & ಯೋಜನೆಗಳ ಅನುಷ್ಟಾನಕ್ಕೆ ಸ್ವಯಂಸೇವಕರ ಪಡೆಯನ್ನು ಸಕರ್ಾರ ನೇಮಿಸಿಕೊಳ್ಳಬೇಕು. ಇದಕ್ಕೆ ಬುದ್ಧಿಜೀವಿಗಳು, ಕನ್ನಡಪರ ಉತ್ಸಾಹಿಗಳು ನೇರವಾಗಿ ಅಖಾಡಕ್ಕೆ ಧುಮುಕಬೇಕು. ಬೇಕಿದ್ದರೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮತ್ತು ಕನ್ನಡಪರ ಹೋರಾಟದ ಸಂಘಟನೆಗಳಿಂದ ಸೇವೆಯನ್ನು ಪಡೆದುಕೊಳ್ಳಬೇಕು.
ಕಡೆಯದಾಗಿ ಸಕರ್ಾರ ಇದಕ್ಕೆ ಯಾವುದೇ ರೀತಿಯ ಕಾನೂನು ತೊಡಕು ಎದುರಾಗದಂತೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಇದು ಸುಮ್ಮನೇ ಯೋಚಿಸಿದಾಗ ಹೊಳೆದದ್ದು. ಇದು ನಿಜಕ್ಕೂ ಸೀಮಿತವಾದದ್ದು. ಇದಕ್ಕಿಂತಲೂ ಉತ್ತಮವಾದ ಅನೇಕ ಹೊಳಹುಗಳು, ಯೋಜನೆಗಳು ನೂರಾರು ಇದೆ. ಇದನ್ನು ಮುಕ್ತ ಸಂವಾದದ ಮೂಲಕ ಜಾರಿಗೊಳಿಸಬಹುದು.
ಏಕೆಂದರೆ ಕನ್ನಡ ಮಾದ್ಯಮಗಳ ಉನ್ನತೀಕರಣವೆನ್ನುವ ಕತ್ತಲ ದಾರಿ ಬಲು ದೂರ. ನಾವು ಕಡೇ ಪಕ್ಷ ಮಿಣುಕು ದೀಪಗಳಾಗದಿದ್ದರೆ ಹೇಗೆ?
ಶ್ರೀಪಾದ ಭಟ್, ವರ್ತಮಾನ ಬಳಗ.
Subscribe to:
Posts (Atom)