ಸ್ಟೇಟ್ ಬ್ಯಾಂಕ್ ಹೈದರಬಾದ್ ಕೇಂದ್ರ ಕಛೇರಿಯೂ ಆಯೋಜಿಸುವ "ಎಸ್.ಬಿ.ಹೆಚ್ ರಚನಾ 2012" ರ ಸಾಹಿತ್ಯಿಕ ಸ್ಫಧರ್ೇಯಲ್ಲಿ ಎಸ್.ಶೇಖರಗೌಡ ರವರ ಈ ಕಥೆಯೂ ಪ್ರಥಮ ಸ್ಥಾನವನ್ನು ಪಡೆದಿದೆ. 05/05/2012ರಂದು ಹೈದರಾಬಾದಿನ ಪಂಡಿತ ರವೀಂದ್ರ ಭಾರತಿ ಸಭಾಂಗಣದಲ್ಲಿ ಈ ಕಥೆಗೆ ಪ್ರಶಸ್ತಿ ನೀಡಲಾಗುವುದು. ತನ್ನಿಮಿತ್ಯ ವಿಶೇಷ ಸಂಚಿಕೆಯಲ್ಲಿ ವಿಶೇಷ ಕಥೆ. (ಸಂ)
ಸದ್ಭವ್ಯು.ಎಸ್.ನಲ್ಲಿ ಎಂ.ಎಸ್. ಮಾಡಲಿಕ್ಕೆ ಡೆಪ್ಯೂಟೇಷನ್ ಮೇಲೆ ನನ್ನನ್ನು ಕಳುಹಿಸುವುದಕ್ಕೆ ನಮ್ಮ ಕಂಪನ ತೀಮರ್ಾನಸಿ, ನಧರ್ಾರವನ್ನು ಪ್ರಕಟಿಸಿದಾಗ ನನಗೆ ಒಂದು ರೀತಿಯ ಸಂತೋಷವಾದರೂ ನನ್ನ ಒಪ್ಪಿಗೆಯನ್ನು ತಿಳಿಸಲು ಎರಡು ದಿನಗಳ ಕಾಲಾವಕಾಶ ಕೇಳಿದ್ದೆ. ನಾ ಕೆಲಸ ಮಾಡುವ ಕಂಪನಯಲ್ಲೇ ಬೇರೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ನನ್ನ ಜೀವನ ಸಂಗಾತಿ ಇಂಚರಳಿಗೆ ಈ ವಿಷಯ ಗೊತ್ತಾಗಿ, ನನ್ನನ್ನು ಅಭಿನಂದಿಸಲು ನನ್ನ ವಿಭಾಗಕ್ಕೆ ಓಡೋಡಿ ಬಂದು ನನ್ನ ಕೈ ಕುಲುಕಿ ಅಭಿನಂದಿಸಿದ್ದಳು. ಮನೆಯಲ್ಲಾದರೆ ತಬ್ಬಿ ಹಿಡಿದು ಮುದ್ದು ಮಾಡಿ ಅಭಿನಂದಿಸುತ್ತಿದ್ದಳೇನೋ?
ಏನೋ ಸದ್ಭವ್, ಇಂಥಹ ಸುವಣರ್ಾವಕಾಶ ನನ್ನನ್ನು ಹುಡುಕಿಕೊಂಡು ಬಂದಿರುವಾಗ, ನನ್ನ ನಧರ್ಾರ ತಿಳಿಸಲು ಎರಡು ದಿನಗಳ ಕಾಲಾವಕಾಶ ಬೇಕೆಂದು ಕೇಳಿರುವಿಯಂತೆ? ಮನಸ್ವೀ ಅಭಿನಂದಿಸುತ್ತಾ ತನ್ನ ಮನದಾಳದ ಮಾತು ಹೇಳಿದ್ದಳು.
ನನ್ನ ಮತ್ತು ಇಂಚರಳ ಮದುವೆಯ ಎರಡನೆಯ ವಾಷರ್ಿಕೋತ್ಸವವನ್ನು ಹೋದ ತಿಂಗಳವಷ್ಟೇ ಆಚರಿಸಿಕೊಂಡಿದ್ದೇವೆ. ವೈವಾಹಿಕ ಜೀವನದ ಮಧುರ ಕ್ಷಣಗಳಲ್ಲಿ ಎರಡು ವರ್ಷಗಳು ಕಳೆದುದು ನಮಗಿಬ್ಬರಿಗೂ ಗೊತ್ತೇ ಆಗಲಿಲ್ಲ. ಮೈಸೂರು, ಊಟಿ, ಕೊಡೈಕೆನಾಲ್, ಮುನ್ನಾರ್ಗಳಲ್ಲಿ ಮಧುಚಂದ್ರ, ಮಡಿಕೇರಿಯ ಅಬ್ಬಿ ಫಾಲ್ಸ್, ಜೋಗದ ಗುಂಡಿ, ಉಂಚಳ್ಳಿ ಜಲಪಾತ, ಯಲ್ಲಾಪುರದ ಮಾಗೋಡು ಜಲಪಾತ, ಸೋಂದಾದ ಶಿವಗಂಗಾ ಜಲಪಾತ ಮತ್ತು ಅವುಗಳ ಸುತ್ತಲಿನ ರಮ್ಯ ತಾಣಗಳ ಸುತ್ತಾಟದಲ್ಲಿ ದಿನಗಳು ಕಳೆದದ್ದೇ ಗೊತ್ತಾಗಲಿಲ್ಲ. ನನ್ನೆ, ಮೊನ್ನೆ ಮದುವೆಯಾಗಿದ್ದೇವೆ ಎಂದೆನಸುತ್ತಿತ್ತು ಇಬ್ಬರಿಗೂ.
ಹೀಗಿರುವಾಗ ಇಂಚರಳನ್ನು ಒಂಟಿಮಾಡಿ ಯು.ಎಸ್.ಗೆ ಹಾರಿ ಎರಡು ವರ್ಷಗಳವರೆಗೆ ಎಂ.ಎಸ್. ಮಾಡಲು ಮನಸ್ಸೇ ಆಗುತ್ತಿದ್ದಿಲ್ಲ.
ಅಂದು ಸಾಯಂಕಾಲ ನಾವು ಮನೆ ಸೇರಿದಾಗ ಇಂಚರ ನಾ ಮನಸ್ಸಿನಲ್ಲಿ ಅಂದುಕೊಂಡಂತೇ ಅಭಿನಂದಿಸಿದ್ದಳು ಬಹಳ ಹೊತ್ತಿನವರೆಗೂ ನನ್ನನ್ನು ತಬ್ಬಿ ಹಿಡಿದು. ಮದುವೆಯಾದ ಈ ಎರಡು ವರ್ಷಗಳಲ್ಲಿ ನಾವೆಂದೂ ಅಗಲೇ ಇಲ್ಲವೆಂದು ಹೇಳಬಹುದು. ಎಲ್ಲಿಗೆ ಹೋದರೂ ಇಬ್ಬರೂ ಜೊತೆ, ಜೊತೆಯಾಗಿಯೇ ತಿರುಗಾಡಿದ್ದೇವೆ. ಅವಳ ಊರಿಗೆ ಹೋಗಬೇಕಾದಾಗ, ನಮ್ಮ ಊರಿಗೆ ಹೋಗಬೇಕಾದಾಗ ಇಬ್ಬರೂ ಅಂಟಿಕೊಂಡೇ ಹೋಗಿ ಬಂದಿದ್ದೇವೆ. ನಾವಿಬ್ಬರೂ ಈ ರೀತಿ ಜೊತೆ, ಜೊತೆಯಾಗಿ ತಿರುಗಾಡುವುದನ್ನು ಕಂಡ ಕೆಲವರು, ಜಗತ್ತಿನಲ್ಲಿ ಇಲ್ಲದ ಗಂಡ-ಹೆಂಡತಿ ಇವರು ಎಂದು ಕುಹಕದ, ಈಷರ್ೆಯ ಮಾತುಗಳನ್ನಾಡಿದ್ದರೆ, ಕೆಲವರು ನಮ್ಮ ಅನ್ಯೋನ್ಯತೆಯನ್ನು ನೋಡಿ, ಹಾಡಿ ಹೊಗಳಿ ಆಶೀರ್ವದಿಸಿದ್ದಾರೆ, ಮೆಚ್ಚುಗೆ ಸೂಚಿಸಿದ್ದಾರೆ. ಲೋಕೋ ಭಿನ್ನ ರೂಢಿ ಅಲ್ಲವಾ? ಇಂಚರಳ ತಂಗಿಯಂತೂ ತುಂಟತನದಿಂದ ನಮ್ಮನ್ನು ರೇಗಿಸಿದ್ದೇ ರೇಗಿಸಿದ್ದು. ಅವಳ ತುಂಟಾಟದ ಮಾತುಗಳಿಂದ ನಾವಿಬ್ಬರೂ ಬಹಳಷ್ಟು ಖುಷಿ ಅನುಭವಿಸಿದ್ದೇವೆ.
ನಾನು ಮತ್ತು ಇಂಚರ ಒಂದೇ ಕಂಪನಯಲ್ಲಿ ಇಂಜಿನಯರುಗಳೆಂದು ಕೆಲಸ ಮಾಡುತ್ತಿದ್ದರೂ, ಅವಳ ಮನ ಗೆಲ್ಲಲು ನನಗೆ ಒಂದು ವರ್ಷವೇ ಹಿಡಿದಿತ್ತು. ಅವಳಿಗಿಂತ ಮೂರು ವರ್ಷ ಸೀನಯರ್ ನಾ ಸವರ್ಿಸೀನಲ್ಲಿ. ಅವಳು ಮೊದಲನೇ ದಿನ ಡ್ಯೂಟಿಗೆ ಹಾಜರಾದ ನಂತರ ನನ್ನ ವಿಭಾಗದಲ್ಲೇ ಕೆಲವು ತಿಂಗಳುಗಳವರೆಗೆ ಕೆಲಸ ಮಾಡಿದ್ದಳು. ಲವ್ ಎಟ್ ಫಸ್ಟ್ ಸೈಟ್ ಅಂತಾರಲ್ಲ, ಹಾಗೇ. ಅವಳನ್ನು ನೋಡಿದ ಮೊದಲ ದಿನವೇ ಅವಳು ನನ್ನ ಮನ ಸೆಳೆದಿದ್ದಳು. ಅವಳಲ್ಲಿ ನಾ ಆಕಷರ್ಿತನಾಗಿದ್ದೆ. ಮನದಲ್ಲೇ ಆರಾಧಿಸತೊಡಗಿದ್ದೆ. ಅವಳ ಮನದಿಂಗಿತ ತಿಳಿದುಕೊಳ್ಳುವಷ್ಟರಲ್ಲಿ ಒಂದು ವರ್ಷವೇ ಗತಿಸಿ ಹೋಗಿತ್ತು. ಅವಳ ಬಗೆಗಿನ ನನ್ನ ಮನದ ಒಲವನ್ನು ಬಿಚ್ಚಿಡಬೇಕೆಂದು ಬಹಳಷ್ಟು ಸಾರೆ ನಾ ಅಂದುಕೊಂಡರೂ ಧೈರ್ಯ ಸಾಲುತ್ತಿದ್ದಿಲ್ಲ. ಒಂದು ವೇಳೆ ಇಂಚರಳಿಗೇನಾದರೂ ನನ್ನ ಬಗ್ಗೆ ಒಲವು, ಆಸಕ್ತಿ ಇಲ್ಲದಿದ್ದರೇ? ಎಂಬ ಅನುಮಾನದ ಎಳೆ ನನ್ನನ್ನು ಸುಮ್ಮನರಿಸುತ್ತಿತ್ತು.
ಅಂದು ನಮ್ಮ ಕಂಪನಯ ಫೌಂಡೇಷನ್ ಡೇದ ಆಚರಣೆಯ ದಿನ. ಸಾಯಂಕಾಲ ನಮ್ಮ ಕಂಪನಯಲ್ಲಿ ಸಿಬ್ಬಂದಿಗಳಿಗೆಲ್ಲಾ ಭರ್ಜರಿ ಪಾಟರ್ಿಯೊಂದನ್ನು ಏರ್ಪಡಿಸಿದ್ದರು ಆಡಳಿತ ಮಂಡಳಿಯವರು. ಅಂದು ಇಂಚರಳೊಂದಿಗೆ ಮುಕ್ತವಾಗಿ ಮಾತಾಡಲು ಅವಕಾಶ ಒದಗಿ ಬಂದಿತ್ತು. ಪಾಟರ್ಿಯಲ್ಲಿ ಸಾಫ್ಟ್ ಡ್ರಿಂಕ್ಸ್, ಪ್ಯೂರ್ ವೆಜ್ ಊಟವನ್ನು ಅವಲಂಬಿಸಿದ್ದ ಕೆಲವೇ ಕೆಲವು ಜನರಲ್ಲಿ ನಾವೂ ಸಹ. ಇಂಚರಳೇ ನನ್ನನ್ನು ಹುಡುಕಿಕೊಂಡು ಬಂದಿದ್ದಳು. ಅವಳು ತಾನೇಗೇ ನನ್ನ ಹತ್ತಿರ ಬಂದುದರಿಂದ ನನಗೆ ಆನೆ ಬಲ ಬಂದಂತಾಗಿತ್ತು. ಊಟ ಮಾಡುತ್ತಾ, ನಾ ನನ್ನ ಮನದಲ್ಲಿ ಕೊರೆಯುತ್ತಿದ್ದ ವಿಚಾರವನ್ನು ಅವಳಿಗೆ ಅಂಜುತ್ತಾ, ಅಂಜುತ್ತಾ ತಿಳಿಸಿದ್ದೆ. ಅದಕ್ಕೆ ಅವಳು ಏನು ಹೇಳಿದಳು ಗೊತ್ತೇ? ಸದ್ಭವ್, ಈ ಮಾತು ನನ್ನ ಬಾಯಿಯಿಂದಲೇ ಬರಲಿ ಎಂದು ನಾ ಚಂದ್ರನಗಾಗಿ ಕಾಯುವ ಚಕೋರಿಯಂತೆ ಕಾಯುತ್ತಿದ್ದೆ. ನನಗೂ ಲವ್ ಎಟ್ ಫಸ್ಟ್ ಸೈಟ್ ಆಗಿದೆ ಕಣೋ ಎಂದು ಏಕವಚನದಲ್ಲಿ ಆತ್ಮೀಯವಾಗಿ ಮಾತಾಡುತ್ತಾ ನನಗೆ ಆತ್ಮೀಯಳಾಗಿದ್ದಳು. ಎಯ್ ಕಳ್ಳೀ, ನ ಬಹಳ ಬೆರಿಕಿ ಅದಿ ಬಿಡು ಎಂದು ಹೇಳುತ್ತಾ ಮೆದುವಾಗಿ ಅವಳ ತಲೆ ಕುಟ್ಟಿದ್ದೆ. ಮುಂದಿನ ಆರು ತಿಂಗಳಲ್ಲಿ ನಮ್ಮ ಮದುವೆಯೂ ಆಗಿತ್ತು.
ಇಂಥಹ ಅವಿನಾಭಾವ ಸಂಬಂಧಕ್ಕೆ ಅಂಟಿಕೊಂಡಿದ್ದ ನನಗೆ ಎರಡು ವರ್ಷಗಳವರೆಗೆ ಇಂಚರಳನ್ನು ಅಗಲಿ ಇರುವುದೆಂದರೆ ಸಹಿಸಲಸಾಧ್ಯವಾದ ಮಾತಾಗಿತ್ತು. ನರಿನಂದ ಹೊರ ತೆಗೆದ ಮೀನನಂತಾಗುತ್ತೆ ನನ್ನ ಪರಸ್ಥಿತಿ ಎಂದು ನನ್ನ ಮನದಾಳದ ತುಡಿತ. ಸದ್ಭವ್, ಇಂಥಹ ಅವಕಾಶ ಸಿಗುವುದು ಅಪರೂಪ. ಎರಡು ವರ್ಷ ಹೇಗೋ ಕಳೆದು ಹೋಗುತ್ತೆ. ನ ನರಾಳವಾಗಿ ಹೋಗಿ ಬಾ. ಈಗ ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಮೊಬೈಲು, ಇಂಟರ್ನೆಟ್ ಎಲ್ಲಾ ಇವೆ ಎಂದು ನನ್ನನ್ನು ಹುರಿದುಂಬಿಸಿ ಎಂ.ಎಸ್. ಮಾಡಲು ಕಳುಹಿಸಿದ್ದಳು ಇಂಚರ.
ಯು.ಎಸ್.ಗೆ ಹೋದ ನಂತರ ಮೊದಲ ವಾರದಲ್ಲಿ ನನಗೆ ತುಂಬಾ ಬೋರ್ ಆಗಿತ್ತು. ಕನರ್ಾಟಕದ ಯಾವ ವಿದ್ಯಾಥರ್ಿಯೂ ಇರಲಿಲ್ಲ. ನಾರ್ಥದಿಂದ ಮೂವರು ಹುಡುಗರಿದ್ದರೂ, ಯಾರೂ ಆತ್ಮೀಯರಾಗಲಿಲ್ಲ. ಇಬ್ಬರು, ಮೂವರು ಬಿಳಿ ತೊಗಲಿನ ಹುಡುಗಿಯರು, ಒಬ್ಬ ಕರಿಚರ್ಮದ ಆಫ್ರಿಕಾದ ಸಕತ್ತಾದ ಹುಡುಗಿ ನನ್ನ ಮೈ ಮೇಲೆ ಬೀಳಲು ಪ್ರಯತ್ನಿಸಿದ್ದರೂ, ನಾ ಅವರ ವಾಂಛೆಗೆ ಈಲ್ಡ್ ಆಗಿರಲಿಲ್ಲ. ಆದರೆ ಎರಡನೇ ವಾರದ ಮೊದಲನೇ ದಿನ ಅಂದರೆ ಸೋಮವಾರದ ದಿನ ನನಗೊಂದು ಆಶ್ಚರ್ಯ ಕಾದಿತ್ತು. ಗುಲಾಬಿ ಬಣ್ಣದ ವರ್ಕ ಸೀರೆಯಲ್ಲಿ ಮಿಂಚುತ್ತಿದ್ದ ಗುಲಾಬಿ ಬಣ್ಣದ ಯುವತಿಯೊಬ್ಬಳು ನಮ್ಮ ಕ್ಲಾಸಿನಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಳು. ಅವಳು ಕನ್ನಡದವಳೆಂದು ಗೊತ್ತಾದಾಗ ನನಗೆ ಹೇಳಲಾರದಷ್ಟು ಸಂತೋಷವಾಗಿತ್ತು. ನಾನೇ ಅವಳ ಹತ್ತಿರ ಹೋಗಿ ಪರಿಚಯ ಮಾಡಿಕೊಂಡಿದ್ದೆ. ಅವಳು ಅಂಕಿತಾ ಅಂತ ಬೆಂಗಳೂರಿನವಳು. ಬೆಂಗಳೂರಿನಲ್ಲಿ ಒಂದು ಪ್ರಸಿದ್ಧ ಕಂಪನಯಲ್ಲಿ ಕೆಲಸ ಮಾಡುತ್ತಿದ್ದಾಳಂತೆ. ಅವಳಿಗೂ ಇಂಚರಳಷ್ಟೇ ವಯಸ್ಸಿರಬಹುದೆಂದು ಅನಸುತ್ತಿತ್ತು. ಭಾರತದ ನಾರಿಯರ ಪ್ರತೀಕದಂತೆ ಸೀರೆಯಲ್ಲಿ ಮೋಹಕವಾಗಿ ಕಾಣುತ್ತಿದ್ದ ಅವಳನ್ನು ತುಂಬು ಹೃದಯದಿಂದ ಅಭಿನಂದಿಸಿದ್ದೆ. ಅವಳಿಗೂ ನಮ್ಮ ಅಪಾರ್ಟಮೆಂಟಿನಲ್ಲಿಯೇ ವಸತಿಗೆ ವ್ಯವಸ್ಥೆ ಮಾಡಲಾಗಿತ್ತು.
ಮುಂದಿನ ದಿನಗಳಲ್ಲಿ ನಾನು ಮತ್ತು ಅಂಕಿತಾ ತುಂಬಾ ಹತ್ತಿರವಾದೆವು. ನಾ, ನನ್ನ ಮತ್ತು ಇಂಚರಳ ಸಂಸಾರದ ಬಗ್ಗೆ ವಿವರವಾಗಿ ತಿಳಿಸಿದ್ದೆ. ಇಬ್ಬರೂ ಕಾಲೇಜಿಗೆ ಜೊತೆ ಜೊತೆಯಾಗಿಯೇ ಹೋಗುತ್ತಿದ್ದೆವು. ಇಲ್ಲಿನ ಪ್ರತಿಯೊಂದು ಘಟನೆಗಳ ವಿವರ ಇಂಚರಳಿಗೆ ಆಗಾಗ ವರದಿ ಒಪ್ಪಿಸುತ್ತಿದ್ದೆ. ಅಂಕಿತಾ ಇನ್ನೂ ಮದುವೆಯಾಗಿಲ್ಲವೆಂದು ನನಗೆ ಕನ್ಫರ್ಮ ಆಗಿದ್ದರೂ, ಅವಳನ್ನು ಕಾಡಿಸಬೇಕೆಂದು ಒಂದು ದಿನ ನಾ, ಅಂಕಿತಾ, ನನ್ನ ಪತಿ ಮಹಾಶಯರು ಏನು ಮಾಡುತ್ತಿರುವರು? ಎಂದು ಕೇಳಿದ್ದೆ. ಅದಕ್ಕೆ ಅಂಕಿತಾ, ಏನೋ ಸದ್ಭವ್, ನಾನು ಮದುವೆಯಾದವಳಂತೆ ಕಾಣುತ್ತಿರುವೆನಾ? ನನಗೆ ಮೆಚ್ಚುಗೆಯಾಗುವ ಹುಡುಗ ಇನ್ನೂ ಸಿಕ್ಕಿಲ್ಲ. ಅದಕ್ಕೇ ಮದುವೆಯಾಗಿಲ್ಲ. ನಾನು, ನನ್ನ ಅಪ್ಪ-ಅಮ್ಮ ಸಂಪನ್ನ, ಸದ್ಗುಣ, ಸುಂದರ ಹುಡುಗನ ಹುಡುಕಾಟದಲ್ಲೇ ಇದ್ದೇವೆ. ಹೇಗೂ ನ ಬೆಂಗಳೂರಿನಲ್ಲಿಯೇ ಇರುವಿಯಲ್ಲಾ? ನನ್ನನ್ನು ನನ್ನ ಮದುವೆಗೆ ಕರೆದೇ ಕರೆಯುತ್ತೇನೆ. ಓಕೇ ನಾ? ಎಂದಿದ್ದಳು ಅಷ್ಟೇ ತಮಾಷೆಯಾಗಿ.
ಶನವಾರ, ರವಿವಾರ ಆಗಾಗ ಸೈಟ್ ಸೀಯಿಂಗ್ಗೆಂದು ಇಬ್ಬರೂ ಜೊತೆ ಜೊತೆಯಾಗಿಯೇ ತಿರುಗುತ್ತಿದ್ದೆವು. ಆಗ ನನಗೆ ಇಂಚರಳದೇ ನೆನಪು. ನನ್ನ ಮನಸ್ಸಿನ ಭಾವನೆಗಳನ್ನು ಓದಿದವಳಂತೆ ಅಂಕಿತಾ, ಸದ್ಭವ್, ನನಗೆ ಇಂಚರಳ ನೆನಪು ಕಾಡುತ್ತಿರಬೇಕಲ್ಲ? ನ ಇಂಚರಳನ್ನು ತುಂಬಾ ಮಿಸ್ ಮಾಡಿಕೊಂಡ ಹಾಗಿದೆ. ನನ್ನ ಮುಖ ನೋಡಿದರೆ, ತಾಯಿಯಿಂದ ಅಗಲಿದ ಮಗುವಿನಂತೆ ತೋರುತ್ತಿದೆ. ಚಿಯರ್ ಅಪ್ ಮ್ಯಾನ್ ಎಂದು ನನ್ನ ಮನಕ್ಕೆ ಸಾಂತ್ವನದ ಮಜ್ಜನ ಎರೆಯುತ್ತಿದ್ದಳು ಆತ್ಮೀಯತೆಯಿಂದ. ದಿನಗಳದಂತೆಲ್ಲಾ ಅವಳು ನನ್ನನ್ನು ತುಂಬಾ ಹಚ್ಚಿಕೊಂಡಂತೆ ಕಾಣುತ್ತಿತ್ತು ಅವಳ ಮುಖ ಭಾವ ಮತ್ತು ಮಾತಿನ ಓಘ ಗಮನಸಿದರೆ.
ಅದೊಂದು ದಿನ ಲೋಕಲ್ ಸೈಟ್ ಸೀಯಿಂಗ್ಗೆಂದು ಇಬ್ಬರೂ ಹೋಗಿದ್ದೆವು. ಪಾಕರ್ೊಂದರಲ್ಲಿ ತಿರುಗುತ್ತಿದ್ದಾಗ, ಅಂಕಿತಾ ಯಾರ ಜೊತೆಗೋ ಮೊಬೈಲಿನಲ್ಲಿ ಮಾತಾಡುತ್ತಾ, ಸ್ಟೆಪ್ಸ್ನಲ್ಲಿ ಕೆಳಗಿಳಿಯುತ್ತಿದ್ದಳು. ಅವಳ ಪಕ್ಕದಲ್ಲಿ ನಾನೂ ಸಹ ಅವಳ ಕಡೆಗೇ ಗಮನವಿಟ್ಟು ಇಳಿಯುತ್ತಿದ್ದೆ. ಪಾವಟಿಗೆಗಳು ಮುಗಿದಿವೆ ಎಂಬ ಭ್ರಮೆಯಲ್ಲಿ ಆಕೆ ಕಾಲಿಡುವಾಗ ಬ್ಯಾಲೆನ್ಸ್ ತಪ್ಪಿ, ಕೆಳಗೆ ಬೀಳುವುದರಲ್ಲಿದ್ದಳು. ಅವಳ ನಡುವನ್ನು ಹಿಡಿದು ಅವಳನ್ನು ಬೀಳದಂತೆ ಹಿಡಿದುಕೊಳ್ಳಬೇಕೆಂದು ನಾ ನಡುವಿಗೆ ಕೈ ಹಾಕಬೇಕೆಂದರೆ, ಅವಳು ಬಾಗಿದ ರಭಸಕ್ಕೆ ನನ್ನ ಕೈ ಅವಳ ದೇಹದ ಯೌವನದ ಸಿರಿಯ ಭಾಗವನ್ನು ಹಿಡಿದುಕೊಂಡಿತ್ತು. ಒಂದು ಕ್ಷಣ ನನಗೆ ಒಂದು ರೀತಿಯ ರೋಮಾಂಚನವಾಗಿತ್ತಾದರೂ ಅವಳನ್ನು ಬೀಳದಂತೆ ತಡೆ ಹಿಡಿದಿದ್ದೆ. ಅವಳು ತಪ್ಪು ತಿಳಿದಾಳು ಎಂದುಕೊಂಡು ನಾ ತಕ್ಷಣ ನನ್ನ ಕೈ ತೆಗೆದು, ಸಾರಿ ಎಂದಿದೆ. ನಾ ಸಾರಿ ಹೇಳಿದ್ದಕ್ಕೆ ಆಕೆ ತಕ್ಷಣವೇ ಪ್ರತಿಕ್ರಿಯಿಸಿದ್ದಳು. ಸಾರಿ ಯಾಕೋ ಸದ್ಭವ್, ನಾ ಬೀಳುವುದನ್ನು ತಪ್ಪಿಸಬೇಕೆಂಬ ತವಕದಲ್ಲಿ ನ ನನ್ನನ್ನು ಹಿಡಿದಿದ್ದಿ ಅಷ್ಟೇ. ಇಲ್ಲದಿದ್ದರೆ ನಾ ಡೆಫಿನೆಟ್ ಆಗಿ ಕೆಳಗೆ ಬೀಳುತ್ತಿದ್ದೆ. ಆಗುವ ಅನಾಹುತ ತಪ್ಪಿಸಿದಿ. ಧನ್ಯವಾದಗಳು ಸದ್ಭವ್ ನನ್ನ ಸಮಯ ಪ್ರಜ್ಞೆಗಾಗಿ. ನನ್ನ ಕಣ್ಣುಗಳಲ್ಲಿ ತನ್ನ ಕಣ್ಣುಗಳ ನೆಟ್ಟು ಹೇಳಿದ್ದಳು ಅಂಕಿತಾ ಧನ್ಯತಾ ಭಾವ ವ್ಯಕ್ತ ಪಡಿಸುತ್ತಾ.
ಅಂಕಿತಾ
ಹಾಯ್, ನಾನು ಅಂಕಿತಾ ಅಂತ. 26ರ ಬೆಡಗಿ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವಳು. ಎಂ.ಎಸ್.ಗೆ ಇಲ್ಲಿ ಸೇರುವುದಕ್ಕಿಂತ ಮೊದಲು ನನಗೆ ಮನಸ್ಸಿನಲ್ಲಿ ತುಂಬಾ ಅಳುಕು ಇತ್ತು, ಅಲ್ಲಿ ಒಳ್ಳೇ ಕಂಪನ ಸಿಗುತ್ತದೋ ಇಲ್ಲವೋ ಎಂದು. ಅದಕ್ಕಾಗೇ ಮೀನ ಮೇಷ ಮಾಡುತ್ತಾ ಒಂದು ವಾರ ತಡವಾಗಿ ನಾ ಇಲ್ಲಿ ಸೇರಿಕೊಂಡೆ. ಇಲ್ಲಿ ಹಾಜರಾದ ಮೊದಲ ದಿನವೇ ನನಗೆ ಸದ್ಭವನ ಪರಿಚಯವಾಗಿತ್ತು. ರಿಯಲೀ ಹಿ ಈಜ್ ಎ ವೆರೀ ಸ್ಮಾರ್ಟ ಗೈ. ಅವ ನನಗೆ ಪ್ರತಿಯೊಂದು ವಿಷಯದಲ್ಲಿ ಸಹಾಯ ಒದಗಿಸುತ್ತಿದ್ದಾನೆ. ಮೇಲಾಗಿ ಇಬ್ಬರಿಗೂ ಒಂದೇ ಅಪಾರ್ಟಮೆಂಟಿನಲ್ಲಿ ವಸತಿ ಸಿಕ್ಕಿರುವುದರಿಂದ ತುಂಬಾ ಅನುಕೂಲವಾಗಿದೆ. ಎಂ.ಎಸ್.ಗೆ ಸೇರುವುದಕ್ಕಿಂತ ಮುಂಚೆ ನನ್ನ ಮನದಲ್ಲಿದ್ದ ಅಳುಕು ಮಾಯವಾಗಿತ್ತು.
ಪರಿಚಯವಾದ ದಿನದಿಂದ ಅವ ನಧಾನವಾಗಿ ದಿನದಿಂದ ದಿನಕ್ಕೆ ನನ್ನ ಮನಸ್ಸನ್ನು ಆಕ್ರಮಿಸತೊಡಗಿದ್ದಾನೆ. ಅವನಗೆ ಈಗಾಗಲೇ ಮದುವೆಯಾಗಿರುವುದರಿಂದ ನಾ ಬಹಳಷ್ಟು ವಿಚಾರ ಮಾಡಬೇಕಾಗಿದೆ. ಅವನೋ ತುಂಬಾ ಮೌಲ್ಯಾಧಾರಿತ ವ್ಯಕ್ತಿ. ಯಾವಾಗಲೂ ತನ್ನ ಪತ್ನಿಯನ್ನು ಹಾಡಿ ಹೊಗಳಿ ನೆನಪಿಸಿಕೊಳ್ಳುತ್ತಿರುತ್ತಾನೆ. ಅಂದು ಪಾಕರ್ಿನಲ್ಲಿ ನಾ ಬೀಳುತ್ತಿದ್ದಾಗ ನನ್ನನ್ನು ಬಳಸಿ ಹಿಡಿದು ಕಾಪಾಡಿದ್ದ ಅವ ಬಹಳ ಸೂಕ್ಷ್ಮ ಮನಸ್ಸಿನವ ಎಂದು ನನಗೆ ಅಂದೇ ಗೊತ್ತಾಗಿತ್ತು. ನನಗೋ ಅವನ ಬಿಸಿ ಅಪ್ಪುಗೆಯಲ್ಲಿ ಕರಗಬೇಕೆಂದು ನನ್ನ ಮನಸ್ಸು ಬಯಸುತ್ತಿದೆ. ಅವ ನನ್ನನ್ನು ತಬ್ಬಿ ಹಿಡಿದು, ನನ್ನೆದೆಯಲ್ಲಿ ತನ್ನ ಮುಖವಿಟ್ಟು ಮೈ ಮರೆಯಬೇಕು ಎಂದೆನಸುತ್ತಿದೆ. ನನ್ನ ಹುಚ್ಚು ಮನಸ್ಸು ಭೃಂಗದ ಬೆನ್ನೇರಿ ಸಾಗಿದೆ. ಅವನ ಪವಿತ್ರ ಸ್ನೇಹದ ಒಡನಾಟದಲ್ಲಿ ದಿನಗಳು ಸರಿದದ್ದೇ ಗೊತ್ತಾಗುತ್ತಿರಲಿಲ್ಲ.
ದಿನದಿಂದ ದಿನಕ್ಕೆ ಸದ್ಭವನ ಜೊತೆಗೇ ನಾ ಇರಬೇಕೆಂಬ ನನ್ನ ಬಯಕೆಯ ಸಸಿ ಹೆಮ್ಮರವಾಗುತ್ತಿದೆ. ನನ್ನ ಮನಸ್ಸು ಬಹಳ ದಿನಗಳವರೆಗೆ ತಾಕಲಾಟದಲ್ಲಿತ್ತು. ನನ್ನ ಮನಸ್ಸು ಅವನನ್ನು ಬಯಸುತ್ತಿರುವುದು ತಪ್ಪು ಎಂದು ಅನಸುತ್ತಿದೆ. ಇದರಿಂದ ಸದ್ಭವ್-ಇಂಚರರ ಸುಖ ಸಂಸಾರದಲ್ಲಿ ನಾ ಹುಳಿ ಹಿಂಡಿದಂತಾಗುತ್ತದೆ. ಇದರ ಬಗ್ಗೆ ಯೋಚಿಸುವುದು ಬೇಡ ಎಂದು ಒಂದು ಮನಸ್ಸು ತಿಳುವಳಿಕೆ ಹೇಳುತ್ತಿದ್ದರೂ, ಸದ್ಭವನೊಂದಿಗೆ ಸಂಬಂಧ ಗಟ್ಟಿಗೊಳಿಸಿಕೊಳ್ಳಬೇಕೆಂದು ಇನ್ನೊಂದು ಮನಸ್ಸು ಹಾತೊರೆಯುತ್ತಿದೆ. ಪ್ರೀತಿಯನ್ನು ಹಂಚಿಕೊಂಡು ಉಣ್ಣಲು ಆಗುವುದಿಲ್ಲವೇ? ಅದೆಷ್ಟೋ ಜನರು ಇಬ್ಬರ ಜೊತೆ ಪ್ರೀತಿ ಹಂಚಿಕೊಂಡು ಸುಖೀ ಸಂಸಾರ ನಡೆಸಿಲ್ಲವೇ? ನಡೆಸುತ್ತಿಲ್ಲವೇ? ಹಾಗಾಗಬೇಕಾದೆ, ಸದ್ಭವ್, ಇಂಚರ ಇಬ್ಬರೂ ನನ್ನನ್ನು ಒಪ್ಪಿಕೊಳ್ಳಬೇಕು. ನಾ ಮೊದಲು ಸದ್ಭವನ ಜೊತೆ ನನ್ನ ಮನದಾಳದ ವಿಚಾರಗಳನ್ನು ಹಂಚಿಕೊಳ್ಳಲೋ ಅಥವಾ ಇಂಚರಳೊಂದಿಗೆ ಹಂಚಿಕೊಳ್ಳಲೋ ಎಂಬ ತಾಕಲಾಟದಲ್ಲಿದ್ದೆ. ನಾ ಇಂಚರಳೊಂದಿಗೇ ಮೊದಲು ಮಾತಾಡಲು ನಶ್ಚಯಿಸಿದೆ.
ಇಂಚರ
ನಜವಾಗಿಯೂ ಹೇಳಬೇಕೆಂದರೆ ಸದ್ಭವನನ್ನು ಯು.ಎಸ್.ಗೆ ಕಳುಹಿಸಿದ ಮೇಲೆ ನಾ ಒಂಟಿಯಾಗಿಬಿಟ್ಟೆ. ನನ್ನ ಮನಸ್ಥಿತಿ ಹೇಗಿದೆಯೆಂದರೆ, ಅದು ನನಗೊಬ್ಬಳಿಗೇ ಗೊತ್ತು. ಸದ್ಭವನಗೆ ಯು.ಎಸ್.ಗೆ ಹೋಗುವ ಅವಕಾಶ ಒದಗಿ ಬಂದಾದ ಅವನಗೆ ಅವಕಾಶ ತಪ್ಪಿ ಹೋಗಬಾರದೆಂಬ ಕಾರಣಕ್ಕೆ ನಾನೇ ಅವನನ್ನು ಹುರಿದುಂಬಿಸಿ ಕಳುಹಿಸಿದ್ದರೂ, ಈಗ ನಾ ಅನುಭವಿಸುತ್ತಿರುವ ಒಂಟಿತನದ ಯಾತನೆ ಹೇಳಲಸದಳ. ನಮ್ಮ ಮದುವೆಯ ನಂತರ ನಾವೆಂದೂ ಇಷ್ಟು ದೀರ್ಘಕಾಲ ಅಗಲಿರಲಿಲ್ಲ. ಏನೋ ಯಾವಾಗಾದರೂ ಒಂದೆರಡು ದಿನ ಅಗಲಿರಬೇಕು ಅಷ್ಟೇ. ಯಾಕೆಂದರೆ, ನಾವು ಯಾವಾಗಲೂ ಜೊತೆಯಾಗಿಯೇ ತಿರುಗುತ್ತಿದ್ದೆವಲ್ಲ? ವಿರಹ ನೂರು ನೂರು ತರಹ ಎಂದು ಕೇಳಿದ್ದೆ. ಅದು ನೂರು ನೂರು ತರಹ ಅಲ್ಲ, ಸಾವಿರ, ಸಾವಿರ ತರಹ ಎಂದು ಹೇಳಬಹುದು.
ಸದ್ಭವ್ ಆಗಾಗ್ಗೆ ಫೋನನಲ್ಲಿ ಮಾತಾಡುತ್ತಿದ್ದರೂ, ನನಗೆ ಸಮಾಧಾನವಿಲ್ಲ. ಅವ ಅಲ್ಲಿನ ದಿನಚರಿಯನ್ನು ಸೂಕ್ಷ್ಮವಾಗಿ ಹೇಳುತ್ತಿದ್ದ. ಅವನ ಪಾಡೂ ನನ್ನದಕ್ಕಿಂತ ಬೇರೆ ಏನು ಇರಲಿಲ್ಲ. ತನಗೆ ಪರಿಚಯವಾಗಿರುವ ಬೆಂಗಳೂರಿನ ಬೆಡಗಿ ಅಂಕಿತಾಳ ಬಗ್ಗೆಯೂ ಹೇಳುತ್ತಿದ್ದ. ಆಕೆ ನನ್ನನ್ನು ಬುಟ್ಟಿಗೆ ಹಾಕಿಕೊಂಡುಬಿಟ್ಟಾಳು ನೋಡು ಮತ್ತೆ? ಎಂದು ತಮಾಷೆ ಮಾಡುತ್ತಿದ್ದೆ. ಅಂದು ಪಾಕರ್ಿನಲ್ಲಿ ನಡೆದ ಘಟನೆಯನ್ನೂ ಅವ ವಿವರವಾಗಿ ತಿಳಿಸಿದ್ದ. ಆದರೆ ನನ್ನ ಸದ್ಭವ್ ಅಪರಂಜಿ ಎಂದು ನನಗೆ ಗೊತ್ತು. ಅವ ಎಲ್ಲೂ ಎಡುವುದಿಲ್ಲವೆಂದು ನನ್ನ ಮನಸ್ಸಾಕ್ಷಿ ಹೇಳುತ್ತಿದೆ. ಆ ಹುಡುಗಿ ಅಂಕಿತಾಳೂ ಸಹ ನನ್ನ ಜೊತೆ ಆಗಾಗ ಮಾತಾಡುತ್ತಿದ್ದಾಳೆ ಆತ್ಮೀಯವಾಗಿ.
ಇಂದು ಅಂಕಿತಾ ಪ್ರಸ್ತಾಪಿಸಿದ್ದ ವಿಷಯ ನನ್ನ ನದ್ದೆಗೆಡಿಸಿತ್ತು. ಮಾತಾಡುತ್ತಾ, ಮಾತಾಡುತ್ತಾ, ಪ್ರೀತಿಯನ್ನು ಹಂಚಿಕೊಂಡು ಜೀವನ ನಡೆಸಬಹದೇ? ಎಂಬ ತನ್ನ ಪ್ರಶ್ನೆಯಿಂದ ಅವಳು ನನ್ನನ್ನು ವಿಚಾರ ಮಂಥನಕ್ಕೆ ಹಚ್ಚಿದ್ದಳು. ಹಂಚಿಕೊಳ್ಳುವ ಪ್ರೀತಿಯಾದರೆ ಹಂಚಿಕೊಳ್ಳಬಹುದು ಎಂದು ನಾ ಅವಳಿಗೆ ತಿಳಿಸಿದ್ದೆ. ನಮ್ಮ ದೇವಾನುದೇವತೆಗಳಾದ ಶಿವ, ಗೌರಿ ಮತ್ತು ಗಂಗೆಯೊಂದಿಗೆ; ತಿರುಪತಿಯ ಶ್ರೀನವಾಸ, ಶ್ರೀದೇವಿ ಮತ್ತು ಭೂದೇವಿಯವರೊಂದಿಗೆ; ಶ್ರೀ ಕೃಷ್ಣ, ರುಕ್ಮಿಣಿ, ಸತ್ಯಭಾಮೆ ಇನ್ನತರರೊಂದಿಗೆ; ಅಷ್ಟೇಕೆ ವಿಶ್ವ ಗುರು ಬಸವಣ್ಣನವರು ಗಂಗಾಂಬಿಕೆ ಮತ್ತು ನಲಾಂಬಿಕೆಯ ರೊಂದಿಗೆ ತಮ್ಮ ಪ್ರೀತಿ ಹಂಚಿಕೊಂಡಿರುವಾಗ, ಸದ್ಭವ್, ನನ್ನ ಮತ್ತು ನನ್ನ ಜೊತೆ ತನ್ನ ಪ್ರೀತಿಯನ್ನೇಕೆ ಹಂಚಿಕೊಳ್ಳ ಬಾರದು? ಎಂಬ ವಿಚಿತ್ರ ಪ್ರಶ್ನೆಯನ್ನು ಹಾಕುತ್ತಾ, ತಾನು ಸದ್ಭವನನ್ನು ಮನಸಾರೆ ಪ್ರೀತಿಸುತ್ತಿರುವುದಾಗಿ ಹೇಳಿ ನನ್ನಲ್ಲಿ ದಿಗ್ಭ್ರಮೆ ಹುಟ್ಟು ಹಾಕಿದ್ದಳು. ಹಾಗೇ ತನ್ನ ಪ್ರೀತಿಗೆ ನಾನು ಸಹಕಾರ ನಡಬೇಕೆಂದು ಮನವಿ ಮಾಡಿದ್ದಳು. ಅವಳ ಮಾತು ಕೇಳಿದ ನಾ ಸ್ತಂಭೀಭೂ ತಳಾದೆ. ನನಗೆ ಮಾತೇ ಹೊರಡಲೊಲ್ಲದು. ನನ್ನ ಮೌನವನ್ನು ಗ್ರಹಿಸಿದ ಆಕೆ ಎರಡು ಮೂರು ಸಾರೆ, ಹಲೋ, ಹಲೋ ಇಂಚರ ಎಂದೆನ್ನುತ್ತಾ, ನನ್ನನ್ನು ವಾಸ್ತವಕ್ಕೆ ತಂದಿದ್ದಳು.
ಸದ್ಭವನಲ್ಲದೇ ತನ್ನ ಜೀವನವೇ ಇಲ್ಲ. ತನಗೆ ಸದ್ಭವ್ ಬೇಕೇ ಬೇಕು ಎಂದಿದ್ದಳು ಅಂಕಿತಾ. ನಾ ಸುಮ್ಮನೇ ಅವಳ ಮಾತು ಕೇಳುತ್ತಿದ್ದೆ. ಮುಂದೆ ಅವಳೇನು ಹೇಳಿದಳೋ ನನ್ನ ಕಿವಿಗೆ ತಲುಪಲೇ ಇಲ್ಲ. ಕೊನೆಗೆ ಹಾಗೂ, ಹೀಗೂ ಸಾವರಿಸಿಕೊಂಡು, ಸದ್ಭವ್ ಇದಕ್ಕೆ ಒಪ್ಪಿರುವನೇ? ಎಂದು ನಾ ಕೇಳಿದ್ದಕ್ಕೆ, ತಾ ಇನ್ನೂ ಅವನೊಂದಿಗೆ ಈ ವಿಷಯ ಪ್ರಸ್ತಾಪಿಸಿರುವುದಿಲ್ಲ, ನನ್ನ ಅಭಿಪ್ರಾಯ ತಿಳಿದುಕೊಂಡು ಅವನೊಂದಿಗೆ ಚಚರ್ಿಸುವುದಾಗಿ ತಿಳಿಸಿದ್ದಳು ಅಂಕಿತಾ. ನನಗೆ ವಿಚಾರ ಮಾಡಲು ಎರಡು ದಿನಗಳು ಬೇಕು ಎಂದು ನಾ ಹೇಳುತ್ತಿದ್ದಂತೆ, ಅವಳು ತನ್ನ ಮಾತಿಗೆ ಕೊನೆ ಹಾಡಿದ್ದಳು.
ಅಂಕಿತಾಳ ಮಾತು ಕೇಳಿದ ದಿನದಿಂದ ನಾನು ನಾನಾಗಿ ಉಳಿಯಲಿಲ್ಲ. ನಾ ಒಂದು ರೀತಿಯ ಹುಚ್ಚಿಯಂತಾದೆ. ಯಾವ ಹೆಣ್ಣು ತನ್ನ ಗಂಡನನ್ನು ಇನ್ನೊಬ್ಬ ಹೆಣ್ಣಿನ ಜೊತೆ ಮನಸಾರೆ ಹಂಚಿಕೊಂಡಾಳು? ಗಂಗೆ-ಗೌರಿಯರು ಜಗಳವಾಡಿಲ್ಲವೇ? ರುಕ್ಮಿಣಿ-ಸತ್ಯಭಾಮೆಯರು ಕೇವಲ ಪಾರಿಜಾತ ಪುಷ್ಪಕ್ಕಾಗಿ ಮಾನವೀಯತೆ ಮರೆತು ಕಚ್ಚಾಡಲಿಲ್ಲವೇ? ತಮ್ಮ ಕ್ಷುಲ್ಲಕತನ ಮೆರೆಯಲಿಲ್ಲವೇ? ನಾ ಸದ್ಭವನನ್ನು ಅಂಕಿತಾಳೊಂದಿಗೆ ಹಂಚಿಕೊಳ್ಳಲು ತಯಾರು. ಆದರೆ ನಮ್ಮಿಬ್ಬರ ಬಗ್ಗೆ ನಮ್ಮ ಸಂಬಂಧಿಕರು, ಸ್ನೇಹಿತರು, ಹಿತೈಷಿಗಳಿಗಿರುವ ಭಾವನೆ ಇದರಿಂದ ಏನಾದೀತು? ಸದ್ಭವ್ ಮೊದಲೇ ಸೂಕ್ಷ್ಮ ಮನಸ್ಸಿನವ. ನಂದನೆಯ ಮಾತುಗಳು ಬರುವುದು ಸದ್ಭವನಗೇ ಮೊದಲು. ಇವಳು ಅಂಕಿತಾಳೇನು ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಓದುವ ಹುಡುಗಿಯೇನಲ್ಲ? ನನ್ನಂತೆ ಜವಾಬ್ದಾರಿಯುತ ಇಂಜಿನಯರ್. ಆಕೆಗೆ ಸರಿಯಾದ ದಿಶೆಯಲ್ಲಿ ವಿಚಾರ ಮಾಡುವ ಶಕ್ತಿ ಇದೆಯೆಂದು ನನ್ನ ಅನಸಿಕೆ.
ಅಂಕಿತಾಳ ರೂಪ, ವಿದ್ಯೆ ವ್ಯಕ್ತಿತ್ವಕ್ಕೆ ಬೇಕಾದಷ್ಟು ಹುಡುಗರು ತಾ ಮುಂದು, ನಾ ಮುಂದು ಎಂದು ಅವಳನ್ನು ಮದುವೆಯಾಗಲು ಬಂದೇ ಬರುತ್ತಾರೆ. ಅವಳಿಗೆ ಸದ್ಭವ್ ಅನವಾರ್ಯವೇನಲ್ಲ ಅಲ್ಲವೇ? ಯಾರೂ ಯಾರಿಗೆ ಅನವಾರ್ಯವಲ್ಲ. ಆಳವಾಗಿ ಆಕೆ ವಿಚಾರಿಸಿರಲಿಕ್ಕಿಲ್ಲ. ಬಾಲಿಶವಾಗಿ ವಿಚಾರಿಸಿ ತೀಮರ್ಾನ ಕೈಕೊಂಡಿರಬೇಕು. ಅವಳ ಮನಸ್ಸಿನ ಮುಂದಿರುವ ಸೂಡೋ ಪರದೆಯನ್ನು ಸರಿಸಬೇಕಾಗಿದೆ. ಅಂಕಿತಾ ಇಂದು ಪುನಃ ಫೋನು ಮಾಡಿದಾಗ ನಾ ನನ್ನ ಮನದಲ್ಲಿನ ವಿಚಾರಗಳನ್ನು ಆಕೆಗೆ ಸ್ಪಷ್ಟವಾಗಿ ತಿಳಿಸುತ್ತಾ, ವಿಷಯವನ್ನು ಶಾಂತ ಮನಸ್ಸಿನಂದ ವಿಚಾರಿಸಿ ತೀಮರ್ಾನವನ್ನು ತೆಗೆದುಕೊಳ್ಳಲು ತಿಳಿಸಿದೆ. ಯಾರ ಇಮೇಜಿಗೂ ಧಕ್ಕೆ ಬಾರದ ಹಾಗೆ ನಧರ್ಾರ ತೆಗೆದುಕೊಳ್ಳಲು ಸಲಹೆ ನಡಿದೆ. ನಾ ಮನಸ್ಸು ಮಾಡಿದ್ದರೆ ಆಕೆಯನ್ನು ಸಿಕ್ಕಾ ಪಟ್ಟೆ ತರಾಟೆಗೆ ತೆಗೆದುಕೊಂಡು ಝಾಡಿಸಬಹುದಾಗಿತ್ತು. ಆದರೆ ಹಾಗೆ ಮಾಡದೇ ಜೀವನದಲ್ಲಿನ ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಳ್ಳಲು ತಿಳಿಸಿದ್ದೆ. ಕೊನೆಯಲ್ಲಿ ಅಕ್ಕ ನಲಾಂಬಿಕೆಯವರ ಒಂದು ಅರ್ಥಪೂರ್ಣವಾದ ವಚನ ಹೇಳಿದ್ದೆ. ಎನಗೆ ಲಿಂಗವು ನವೇ ಬಸವಯ್ಯಾ, ಎನಗೆ ಸಂಗವು ನವೇ ಬಸವಯ್ಯಾ, ಎನಗೆ ಪ್ರಾಣವು ನವೇ ಬಸವಯ್ಯಾ, ಎನಗೆ ಪ್ರಸಾದವು ನವೇ ಬಸವಯ್ಯಾ, ಎನಗೆ ಪ್ರಭೆಯ ಮೂತರ್ಿಯೂ ನವೇ ಬಸವಯ್ಯಾ, ಎನಗೆ ಸಂಗಯ್ಯನು ನವೇ ಬಸವಯ್ಯಾ ಎಂಬಂತೆ ಸದ್ಭವನೇ ನನಗೆ ಸಕಲವು ಎಂದು ಒತ್ತಿ, ಒತ್ತಿ ಹೇಳಿದ್ದೆ ಅಂಕಿತಾಳಿಗೆ ಮನದಟ್ಟಾಗುವಂತೆ.
ಅಂಕಿತಾ
ಇಂದು ರವಿವಾರದ ದಿನ. ಎಲ್ಲೂ ಔಟಿಂಗ್ಗೆ ಹೋಗಿದ್ದಿಲ್ಲ. ನನ್ನ ಮನಸ್ಸಿನಲ್ಲಿ ತುಡಿತವಿತ್ತು. ಇಂಚರ ಳೊಂದಿಗೆ ಚಚರ್ಿಸಿದ ವಿಷಯಗಳನ್ನು ಇದುವರೆಗೂ ನಾ ಸದ್ಭವನೊಂದಿಗೆ ಹಂಚಿಕೊಂಡಿರಲಿಲ್ಲ. ಎರಡು ದಿನಗಳಿಂದ ಸ್ಥಿಮಿತದಲ್ಲಿರದಿದ್ದ ನನ್ನ ಮನಸ್ಸನ್ನು ಅರಿತು ಕೊಂಡವನಂತೆ ಸದ್ಭವ್ ನನ್ನೆ, ಹುಷಾರಿಲ್ಲವೇ? ಎಂದು ಆತ್ಮೀಯವಾಗಿ ವಿಚಾರಿಸಿದ್ದ. ಹಾಗೇನೂ ಇಲ್ಲ ಎಂದು ನಾ ಜಾರಿಕೊಂಡಿದ್ದೆ. ಇಂದು ಪುನಃ ಇಂಚರಳೊಂದಿಗೆ ನಾ ಆಕೆಯ ತೀಮರ್ಾನದ ಬಗ್ಗೆ ತಿಳಿದುಕೊಳ್ಳುವ ಕುತೂಹಲದಿಂದ ಫೋನಾಯಿಸಿದ್ದೆ. ನಾ ಕೇಳಿದ ವಿಷಯವನ್ನು ಯಾವ ಭಾರತದ ನಾರಿಯೂ ಸಮಾಧಾನದಿಂದ ಅರಗಿಸಿಕೊಳ್ಳಲಿಕ್ಕೆ ಸಾಧ್ಯವಿರಲಿಕ್ಕಿಲ್ಲ ಅಲ್ಲವೇ? ಎದುರಿಗಿದ್ದರೆ ಮೊದಲು ಕಪಾಳಕ್ಕೆ ನಾಲ್ಕು ಬಿಗಿದೇ ಮುಂದೆ ಮಾತಾಡುತ್ತಾರೆ ಅಲ್ಲವೇ? ಆದರೆ ಇಂಚರ ವಿಷಯವನ್ನೆಲ್ಲ ಕೋಪಿಸಿಕೊಳ್ಳದೇ ಕೇಳಿಸಿಕೊಂಡಿದ್ದಳು. ಅವಳ ವಿಚಾರ ಧಾರೆ, ಪ್ರೌಢಿಮೆ, ವಿವೇಚನಾ ಶಕ್ತಿ ನಜವಾಗಿಯೂ ಮೆಚ್ಚುವಂಥಹದು. ಸತಿ-ಪತಿಗಳಲ್ಲಿ ಪರಸ್ಪರ ನಷ್ಠೆ ಇರುವುದರಿಂದ ಭಾರತದಲ್ಲಿ ಇನ್ನೂ ವಿವಾಹ ವಿಚ್ಛೇದನಗಳ ಸಂಖ್ಯೆ ಕಡಿಮೆ ಇದೆ. ಇತ್ತೀಚಿನ ವರ್ಷಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ನಮ್ಮ ದೇಶದ ವಿದ್ಯಾವಂತರಲ್ಲಿ ಕಾಣಿಸತೊಡಗಿದೆ. ಪ್ರೀತಿಯೆಂದರೆ ಕೇವಲ ಪ್ರಣಯಿಗಳ ಪ್ರೀತಿಯಲ್ಲ, ಗಂಡ-ಹೆಂಡತಿಯರ ಪ್ರೀತಿಯಲ್ಲ, ಕುಟುಂಬದ ಇತರ ಸದಸ್ಯರ ಮಧ್ಯೆಯೂ ಪ್ರೀತಿ ಇರುತ್ತದೆ. ಅಪ್ಪ-ಅಮ್ಮ, ಅಣ್ಣ-ತಂಗಿ, ಸ್ನೇಹಿತರ ಮಧ್ಯೆಯೂ ಪವಿತ್ರ ಪ್ರೀತಿ ಬೇಕು. ನ ಸದ್ಭವನನ್ನು ಪ್ರೇಮಿಯೆಂದು ಪ್ರೀತಿಸದೇ ಸಹೋದರನಂತೆ ಪ್ರೀತಿಸಿ, ಪವಿತ್ರ ಪ್ರೀತಿಯ ಪರಾಕಾಷ್ಟತೆ ಅನುಭವಿಸಿ ನೋಡು. ಇಂಥಹ ಆತುರದ ನಧರ್ಾರದ ಸಂಬಂಧ ಕುದುರಿದರೆ, ನಾಳೆ ಸಮಾಜದಲ್ಲಿ ಜನರಾಡುವ ಕುಹಕದ ಮಾತುಗಳಿಂದ ನಮ್ಮೆಲ್ಲರಿಗೂ ತುಂಬಾ ಮಾನಸಿಕ ಹಿಂಸೆಯಾಗುತ್ತದೆ ಎಂದು ಇನ್ನೇನೋ ಸಾದಕ, ಬಾಧಕಗಳನ್ನು ತಿಳಿಸಿದ್ದಳು ಇಂಚರಾ.
ಹೌದು, ಇಂಚರ ಹೇಳಿದ ಮಾತುಗಳೆಲ್ಲವೂ ಅರ್ಥಪೂರ್ಣವಾದವುಗಳೇ. ಅವಳ ವಿಚಾರ ಧಾರೆ ಅದ್ಭುತವಾಗಿತ್ತು. ನನ್ನ ಈ ಹಾನಕಾರಕ ನಧರ್ಾರಕ್ಕೆ ತಿಲಾಂಜಲಿ ಇತ್ತು, ಪವಿತ್ರ ಸಂಬಂಧವನ್ನೇಕೆ ಬೆಸೆಯಬಾರದು? ನನ್ನ ಮನದ ಭಾವನೆಗಳಿಗೆ ಜ್ಞಾನೋದಯವಾಗುತ್ತಿದ್ದಂತೆ, ಅವಸರವಾಗಿ ಡ್ರೆಸ್ ಮಾಡಿಕೊಂಡು ಸದ್ಭವನ ರೂಮಿಗೆ ಹೊರಟೆ. ನನ್ನ ಆಗಮನದ ನರೀಕ್ಷೆಯಲ್ಲಿರದ ಅವನಗೆ ಆಶ್ಚರ್ಯವಾಗಿತ್ತು. ಮಾತಿಲ್ಲದೇ ಮುಗುಳ್ನಗೆಯಿಂದ, ತುಂಬು ಹೃದಯದಿಂದ ಬರಮಾಡಿಕೊಂಡ. ನಾನೇ ಮಾತಿಗಾರಂಭಿಸಿದೆ.
ಅಣ್ಣಾ, ಇಂಚರಳೇನಾದರೂ ನಮಗೆ ಫೋನು ಮಾಡಿದ್ದಳಾ? ನಮ್ಮ ಜೊತೆಗೆ ಯಾವುದಾದರೂ ಮುಖ್ಯವಾದ ವಿಷಯವನ್ನು ಪ್ರಸ್ತಾಪಿಸಿರುವಳಾ? ನನ್ನ ಹೃದಯದಾಳದಿಂದ ನನಗರಿವಿಲ್ಲದಂತೆ ಮೊದಲ ಬಾರಿಗೆ ಸದ್ಭವನಗೆ ಅಣ್ಣಾ ಎಂಬ ಸಂಭೋದನೆ ಆಗಿತ್ತು. ನನ್ನ ಮಾತಿನ ಪ್ರಭಾವ ಸದ್ಭವನ ಮುಖದಲ್ಲಿ ಓದಲು ಪ್ರಯತ್ನಿಸಿದೆ. ಬಾ ತಂಗಿ, ಬಾ. ನಾ ಇದನ್ನೇ ನರೀಕ್ಷಿಸಿದ್ದೆ ನನ್ನಂದ. ನನಗಂತೂ ತುಂಬಾ ಖುಷಿಯಾಗಿತ್ತಿದೆ. ಅಂದಂಗ ಇಂಚರ ನನ್ನೊಡನೆ ಯಾವ ವಿಷಯವನ್ನೂ ಪ್ರಸ್ತಾಪಿಸಿಲ್ಲ ಎಂದು ನನ್ನ ಕೈ ಕುಲುಕಿ ಅಭಿನಂದಿಸಿ, ನನ್ನನ್ನು ಹಗ್ ಮಾಡಿ ನನ್ನ ಬೆನ್ನ ಮೇಲೆ ಆತ್ಮೀಯವಾಗಿ ಕೈಯಾಡಿಸಿದರು ಸದ್ಭವ್. ನಾ ಇಂಚರಳಿಗೆ ಫೋನಾಯಿಸಿದೆ. ಇಂಚರ, ನಾನಗ ನನ್ನ ಅಣ್ಣ ಸದ್ಭವನ ಜೊತೆ ಇರುವೆ ಎಂದೆ ಖುಷಿಯಿಂದ. ಮೂವರ ಸಂತೋಷಕ್ಕೆ ಪಾರವೇ ಇರಲಿಲ್ಲ. ನನ್ನ ಮನದ ಮಾಯೆ ಕರಗಿ ಹೋಗಿತ್ತು.
ಎಸ್. ಶೇಖರಗೌಡ,
ಮುಖ್ಯ ವ್ಯವಸ್ಥಾಪಕರು,
ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಆರ್.ಸಿ.ಪಿ.ಸಿ., ಲಿಂಗಸ್ಗೂರು
(9448989332)
No comments:
Post a Comment
Thanku