Friday, May 11, 2012

ಕೆಲಸದ ಸ್ಥಳಗಳಲ್ಲಿ ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯಿದೆ 2011



ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಗಟ್ಟಲು ಸಕರ್ಾರಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದ ಒಂದಿಲ್ಲೊಂದು ಕಾಯ್ದೆ, ಕಾನೂನುಗಳನ್ನು ಮಾಡುತ್ತಲೇ ಬಂದಿವೆ. ಕಾಯ್ದೆಗಳು ಹೆಚ್ಚಾದಂತೆಲ್ಲ ಅಪರಾಧ ಪ್ರಕರಣಗಳು ಹೆಚ್ಚಾಗಿವೆಯೇ ವಿನಃ ನಿಯಂತ್ರಕ್ಕೆ ಬಾರದಿರುವುದು ವಿಷಾಧನೀಯವೆಂದು ವಿಶ್ಲೇಷಿಸಿದ್ದಾರೆ ಆಂಗ್ಲ ಉಪನ್ಯಾಸಕರಾದ ಪವನಗಂಗಾಧರ ತುಮಕೂರು.

ಮಹಿಳೆ ಮೇಲೆ ಒಂದಲ್ಲಾ ಒಂದು ರೀತಿಯಲ್ಲಿ ದೌರ್ಜನ್ಯ ನಡೆಯುತ್ತಲೇ ಇದೆ. ಆಕೆಯನ್ನು ಶೋಷಣೆ ಮಾಡುವುದೇ ನಮ್ಮ ಸಮಾಜದ ಮೂಲಮಂತ್ರವೆಂಬಂತಾಗಿದೆ. ಇಂತಹ ಶೋಷಣೆಯನ್ನು, ದೌರ್ಜನ್ಯವನ್ನು ತಡೆಯಲು ಮತ್ತು ಮಹಿಳೆಗೆ ರಕ್ಷಣೆ ನಡಲು ಕಾನೂನಾತ್ಮಕವಾಗಿ ಹಲವು ಪ್ರಯತ್ನಗಳು ನಡೆದಿವೆ. ಈ ಪ್ರಯತ್ನಗಳು ಕಾಯಿದೆಗಳ ರೂಪವನ್ನು ಸಹ ಪಡೆದಿವೆ. 2000, 2001, 2002, 2003 ಮತ್ತು 2007ರ ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯಿದೆಗಳನ್ನು ರೂಪಿಸಲಾಗಿತ್ತು. ಇವೆಲ್ಲವೂ ಅನೇಕ ಕಾರಣಗಳಿಂದ ಅನುಷ್ಟಾನವಾಗುವಲ್ಲಿ ವಿಪಲವಾಗಿವೆ. ಕೆಲವು ಕಾಯಿದೆಗಳು ಜಾರಿ ಆಗಿದ್ದರೂ, ತಪ್ಪಿತಸ್ತರ ವಿರುದ್ದ ಕಠಿಣವಾಗಿ ಶಿಕ್ಷೆ ವಿಧಿಸುವಲ್ಲಿ ವಿಪಲವಾಗಿದ್ದವು. ಇದೇ ರೀತಿಯ ಕಾಯಿದೆಯೊಂದು ಈಗ ಸಿದ್ದವಾಗಿದೆ ಎಂಬುದು ಇನ್ನೊಂದು ವಿಶೇಷ.
ಕೆಲಸದ ಸ್ಥಳಗಳಲ್ಲಿ ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯಿದೆ 2010 ಎಂಬ ಕಾಯಿದೆಯೊಂದು ಈಗಾಗಲೆ ಸಿದ್ದವಾಗಿದ್ದು ಕೇವಲ ಲೋಕಸಬೆಯಲ್ಲಿ ಅಂಗೀಕಾರಕ್ಕಾಗಿ ಕಾಯುತ್ತಿದೆ. ಈ ಹಿಂದೆ ಸಿದ್ದವಾಗಿದ್ದ ಕಾಯಿದೆಗಳಲ್ಲಿ ಹಲವು ಲೋಪದೋಷಗಳಿದ್ದವು ಎಂಬ ಕಾರಣಕ್ಕೆ ಕೆಲವು ಕಾಯಿದೆಗಳು ಜಾರಿಯಾಗಲಿಲ್ಲ. ಆದರೆ ಪ್ರಸಕ್ತ 2010 ರ ಕಾಯದೆಯಲ್ಲೂ ಸಹ ಕೆಲವು ಲೋಪಗಳಿವೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಒಂದು ವೇಳೆ ಪ್ರಸಕ್ತ ಕಾಯಿದೆಯನ್ನು ಜಾರಿಗೊಳಿಸಿದರೂ ಸಹ ಮಹಿಳೆಗೆ ರಕ್ಷಣೆ ನಡಲು ಅಥವಾ ದೌರ್ಜನ್ಯಕ್ಕೊಳಗಾದ ಮಹಿಳೆಗೆ ನ್ಯಾಯ ದೊರಕಿಸುವಲ್ಲಿ ಮತ್ತು ನಜವಾದ ಅಪರಾದಿಗಳಿಗೆ ಕಠಿಣ ಶಿಕ್ಷೆ ವಿದಿಸುವಲ್ಲಿ ವಿಫಲವಾಗುತ್ತದೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.
ಈ ಕಾಯಿದೆಯಲ್ಲಿರುವ ಮೊದಲನೇ ಲೋಪವೆಂದರೆ ಲೈಂಗಿಕ ದೌರ್ಜನ್ಯವೆಸಗಿದರೆ ಅದೊಂದು ಖಾಸಗಿ ತಪ್ಪು ಎಂದು ಪರಿಗಣಿಸಲಾಗುತ್ತದೆಯೇ ಹೊರತು ಕ್ರಿಮಿನಲ್ ಮೊಕದ್ದಮೆ ಹೂಡುವ ಅಪರಾದ ಆಗುವುದಿಲ್ಲ ಎಂಬುದನ್ನು ಪ್ರಸಕ್ತ ಕಾಯಿದೆ ತಿಳಿಸುತ್ತದೆ. ದೌರ್ಜನ್ಯಕ್ಕೊಳಗಾದವರು ಇಂಟರ್ನಲ್ ಕಂಪ್ಲೈಂಟ್ ಕಮಿಟಿಗೆ ದೂರು ನಡಿ, ಆರೋಪಿ ನಜವಾದ ತಪ್ಪಿತಸ್ತ ಎಂದು ತಿಳಿದರೆ ಆ ಕಮಿಟಿಗೆ ತಪ್ಪಿತಸ್ತನ ವಿರುದ್ದ ಕ್ರಮಿನಲ್ ದಾವೆ ಹೂಡಲು ಅಥವಾ ಶಿಸ್ತುಕ್ರಮ ಕೈಗೊಳ್ಳಲು ಅಧಿಕಾರವಿಲ್ಲ. ಇದರ ಜೊತೆಗೆ ತಪ್ಪಿತಸ್ತ ಕಿರುಕುಳಕ್ಕೆ ಒಳಪಟ್ಟವರಿಗೆ ಕೇವಲ ನಷ್ಟಪರಿಹಾರ ನಡಬೇಕು, ಈ ಮೊತ್ತವು ಸಂಬಳದಲ್ಲಿ ವಜಾಗೊಳಿಸಲಾಗುತ್ತದೆ ಎಂದು ಹೇಳುತ್ತದೆ. ಅಂದರೆ ತಪ್ಪು ಮಾಡಿದವರನ್ನು ಕ್ರಿಮಿನಲ್ ಅಪರಾದದಿಂದ ಪಾರು ಮಾಡುವುದೇ ಇದರ ಉದ್ದೇಶದಂತಿದೆ.
ಈ ಕಾಯಿದೆ ಎರಡನೇ ಲೋಪವೆಂದರೆ, ಇಂಟರ್ನಲ್ ಕಂಪ್ಲೈಂಟ್ ಕಮಿಟಿ ತನಖೆ ನಡೆಸುವಾಗ ಲೈಂಗಿಕ ದೌರ್ಜನ್ಯದ ಬಗ್ಗೆ ಫ್ಯಾಕ್ಟ್ ಫೈಂಡಿಂಗ್ ಕಾರ್ಯ ಮಾತ್ರ ನರ್ವಹಿಸುತ್ತದೆಯೇ ಹೊರತು ಅಪರಾದ ನಡೆದಿದೆ ಎಂದು ಮತ್ತು ಅಪರಾದಿಗೆ ಶಿಕ್ಷೆ ವಿಧಿಸುವಂತೆ ಶಿಫಾರಸ್ಸು ಮಾಡುವ ಅಧಿಕಾರ ಇದಕ್ಕಿಲ್ಲ. ಇದರ ಮೂರನೆಯ ಲೋಪವೆಂದರೆ, ಈ ಕಾಯಿದೆಯಲ್ಲಿ ಕೆಲವು ಪೀನಲ್ ಪ್ರಾವಿಷನ್ಗಳ ಕೊರತೆ ಎದ್ದು ಕಾಣುತ್ತಿದೆ. ಇಂಡಿಯನ್ ಪೀನಲ್ ಕೋಡ್ನ 376, 354 ಮತ್ತು 509 ಸೆಕ್ಷನ್ಗಳಷ್ಟೇ ಲೈಂಗಿಕ ದೌರ್ಜನ್ಯದ ಅಪರಾದಗಳನ್ನು ಒಳಗೊಳ್ಳುವುದಿಲ್ಲ. ಇನ್ನೂ ಹಲವು ಪೀನಲ್ ಪ್ರಾವಿಷನ್ಗಳು ಇಲ್ಲದಿರುವ ಈ ಕಾಯಿದೆಯಲ್ಲಿ ದೌರ್ಜನ್ಯಕ್ಕೊಳಗಾದವರಿಗೆ ಪರಿಹಾರ ಸೂಚಿಸುವಂತಹ ಇತರ ಯಾವುದೇ ಪ್ರಾವಿಷನ್ಗಳು ಇಲ್ಲ.
ಕಾಯಿದೆಯಲ್ಲಿ ಮನೆಕೆಲಸ ಮಾಡುವ ಮಹಿಳೆಯರು ಈ ಕಾಯಿದೆಯ ಅಡಿಯಲ್ಲಿ ಬಾರದಿರುವುದು ಇದರ ನಾಲ್ಕನೇ ದೋಷವೆಂದು ಹೇಳಬಹುದು. ಈ ಕಾಯಿದೆ ಸಂಘಟಿತ ವಲಯದ ಮಹಿಳಾ ಉದ್ಯೋಗಿಗಳನ್ನು ಮಾತ್ರವೇ ಒಳಗೊಂಡಿದೆ. ಅಸಂಘಟಿತ ವಲಯದ ಮಹಿಳೆರನ್ನು ಈ ಕಾಯಿದೆ ಒಳಗೊಂಡಿಲ್ಲ. ಅಂದರೆ ಮನೆಕೆಲಸ ನರ್ವಹಿಸುವ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ ಆ ಮಹಿಳೆಗೆ ಈ ಕಾಯಿದೆಯಡಿಲ್ಲಿ ನ್ಯಾಯ ಸಿಗುವುದಿಲ್ಲ. ಈ ಕಾಯಿದೆಯಲ್ಲಿ ಸಂದಾನ ಮಾಡಿಕೊಳ್ಲುವುದಕ್ಕೆ ಅವಕಾಶಗಳಿವೆ. ಅಂದರೆ ಲೈಂಗಿಕ ದೌರ್ಜನ್ಯದ ವಿರುದ್ದ ದೂರು ನಡಿದರೆ ಶೋಷಣೆಗೆ ಒಳಗಾದ ಮಹಿಳೆಗೆ ನ್ಯಾಯ ದೊರಕಿಸುವ ಬದಲು ಅವಳನ್ನು ಮನವೊಲಿಸಿ ಸಂದಾನ ಮಾಡಿಕೊಳ್ಳುವುದರ ಮೂಲಕ ದೂರುಗಳನ್ನು ವಾಪಸ್ಸು ಪಡೆಯುವಂತೆ ಒತ್ತಾಯಿಸುವ ಅವಕಾಶಗಳು ಈ ಕಾಯಿದೆಯಲ್ಲಿವೆ. ಈ ರೀತಿಯ ಸಂದಾನಗಳಿಗೆ ಅವಕಾಶವಿರುವುದೇ ಈ ಕಾಯದೆಯ ಐದನೆ ಲೋಪವಾಗಿದೆ.
ಈ ಕಾಯಿದೆಲ್ಲಿ ಆರನೇ ಮತ್ತೊಂದು ಲೋಪವು ಕೂಡ ಇದೆ. ಈ ಕಾಯಿದೆ ಪ್ರಕಾರ ನೇಮಕ ಮಾಡುವ ಇಂಟರ್ನಲ್ ಕಂಪ್ಲೈಂಟ್ ಕಮಿಟಿಯಲ್ಲಿನ ಇಬ್ಬರು ಸದಸ್ಯರು ಕಾನೂನನ ಬಗ್ಗೆ ತಿಳಿವಳಿಕೆ ಇರುವವರು ಮತ್ತು ಕಾನೂನು ವಿಚಾರಗಳಲ್ಲಿ ಅನಭವವುಳ್ಳವರು ಇರಲೇಬೇಕೆಂಬುವುದು ಖಡ್ಡಾಯವೇನಲ್ಲ. ಅಂದರೆ ಕಾನೂನು ಜ್ಞಾನ ಇರುವವರು ಈ ಕಮಿಟಿಯಲ್ಲಿರುವುದು ಖಡ್ಡಾಯ ಮಾಡಬೇಕಿತ್ತು. ಇದರ ಜೊತೆಗೆ ಈ ಕಮಿಟಿಯಲ್ಲಿ ಬರೀ ಮಹಿಳೆಯರನ್ನಲ್ಲದೆ ಮಹಿಳೆರ ಪರವಾಗಿ ಚಿಂತಿಸುವವರನ್ನೂ ಸಹ ಕಮಿಟಿಯ ಸದಸ್ಯರನ್ನಾಗಿ ನೇಮಿಸಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.
ಪ್ರಸ್ತುತ, ಲೋಕಸಭೆಯ ಅಂಗೀಕಾರಕ್ಕಾಗಿ ಕಾಯತ್ತಿರುವ 2010ರ ಕೆಲಸದ ಸ್ಥಳಗಳಲ್ಲಿ ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯಿದೆಯು ಮೇಲೆ ವಿವರಿಸಿದಂತೆ ಹಲವು ಲೋಪದೋಶಗಳನ್ನು ಹೊಂದಿದೆ. ಅದರಲ್ಲಿಯೂ ಅಸಂಘಟಿತ ವಲಯದ ಮಹಿಳೆಯರನ್ನು ಈ ಕಾಯಿದೆ ಕಡೆಗಣಿಸಿರುವುದು ಅತ್ಯಂತ ದುರಂತದ ವಿಷಯ. ಏಕೆಂದರೆ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರ ಮೇಲೆ ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯದ ಘಟನೆಗಳು ಅತೀ ಹೆಚ್ಚಿನ ಪ್ರಮಾಣದಲ್ಲಿ ನಡೆಯತ್ತಿವೆ. ಇವರನ್ನೂ ಕೂಡ ರಕ್ಷಿಸುವ ಮತ್ತು ಇವರಿಗೂ ನ್ಯಾಯ ದೊರಕಿಸುವ ಪ್ರಮುಖ ಕಾರ್ಯವನ್ನು ಈ ಕಾಯಿದೆ ಮಾಡಬೇಕಿತ್ತು. ಹೀಗೆ ಅನೇಕ ಲೋಪದೋಶಗಳನ್ನು ಒಳಗೊಂಡಿರುವ ಈ ಕಾಯಿದೆ ಎಷ್ಟರಮಟ್ಟಿಗೆ ಮಹಿಳೆಯರಿಗೆ ವರದಾನವಾಗಬಲ್ಲದು ಎಂಬುದನ್ನು ಕಾದು ನೋಡಬೇಕಷ್ಟೇ.

No comments:

Post a Comment

Thanku