Wednesday, January 5, 2011

ಪ್ರಜಾ ತಂತ್ರಕ್ಕೆ ಮರಣದಂಡನೆಬಿನಾಯಕ ಸೇನ್ ಜೀವಾವಧಿ!


ಪ್ರಜಾ ತಂತ್ರಕ್ಕೆ ಮರಣದಂಡನೆಬಿನಾಯಕ ಸೇನ್ ಜೀವಾವಧಿ!ಈ ದೇಶದಲ್ಲಿರುವ ಪ್ರಜಾಸತ್ತೆ ಪ್ರಜಾತಂತ್ರದ ಮುಸುಕು ಹೊದ್ದಿರುವ ನಿರಂಕುಶತ್ವವೇ ಎಂಬುದು ಮತ್ತೊಮ್ಮೆ ರುಜುವಾತಾಗಿದೆ. ಡಾ. ಬಿನಾಯಕ್ ಸೇನ್ರಂತಹ ಅತ್ಯಂತ ಜನಪರ ಮತ್ತು ಜನಪ್ರಿಯ ಡಾಕ್ಟರಿಗೂ ಈ ದೇಶದ ನ್ಯಾಯಾಲಯವೊಂದು ಅವರು ಮಾಡದ ತಪ್ಪಿಗೆ ಜೀವಾವಧಿಯಂತಹ ಘೋರ ಶಿಕ್ಷೆಯನ್ನು ವಿಧಿಸುತ್ತದೆ ಎಂದರೆ ಈ ದೇಶದ ಪ್ರಜಾತಂತ್ರ ಮತ್ತು ನ್ಯಾಯಾಂಗ ಯಾವ ಪಾತಾಳವನ್ನು ಮುಟ್ಟಿದೆ ಎಂಬುದು ಅರ್ಥವಾಗುತ್ತದೆ. ಡಾ. ಬಿನಾಯಕ್ ಸೇನ್ ಮಾಡಿದ ಯಾವ ಕೆಲಸ ಈ ಪ್ರಜಾತಂತ್ರದಲ್ಲಿ ಜೀವಾವಧಿ ಶಿಕ್ಷೆಯನ್ನು ಆಹ್ವಾನಿಸುವಂತ ಅಪರಾಧವಾಯಿತು ಎಂಬುದನ್ನು ನೋಡಿದರೆ ಈ ದೇಶದ ಕಾನೂನುಗಳ ನಿಜವಾದ ಹೂರಣ ಬಯಲಿಗೆ ಬೀಳುತ್ತದೆ.ಡಾ. ಬಿನಾಯಕ್ ಸೇನರು ವೆಲ್ಲೂರು ಮೆಡಿಕಲ್ ಕಾಲೇಜಿನಿಂದ ವೈದ್ಯ ಪದವಿಯನ್ನು ಪಡೆಯುವ ಮುನ್ನವೇ ಶಂಕರ್ ಗುಹಾ ನಿಯೋಗಿಯವರ ಹೋರಾಟದ ಮತ್ತು ಸೇವೆಯ ಬದುಕಿನಿಂದ ಪ್ರಭಾವಿತರಾಗಿದ್ದರು. ಆದ್ದರಿಂದಲೇ ವೈದ್ಯ ಪದವಿಯಲ್ಲಿ ಅತ್ಯಂತ ಉನ್ನತ ಶ್ರೇಣಿಯಲ್ಲಿ ಪಾಸಾದರೂ ತಮ್ಮ ಜ್ಞಾನವನ್ನು ಆಸ್ತಿ ಮಾಡಲು ಬಳಸದೇ ಅತ್ಯಂತ ಶೊಷಿತ ಮತ್ತು ನಿರ್ಲಕ್ಷಿತ ಜನಸಮುದಾಯಗಳಿಗೆ ಬಳಸಲು ತೀಮರ್ಾನಿಸಿದರು. ಜ್ಞಾನವಂತರೆಲ್ಲಾ ಆಸ್ತಿವಂತರಾಗಲು ಇಲ್ಲಸಲ್ಲದ ಮಾರ್ಗವನ್ನು ಹಿಡಿಯುತ್ತಿರುವಾಗ ಈ ಪ್ರತಿಭಾನ್ವಿತ ವೈದ್ಯ ಈ ಸಮಾಜದ ಉಳ್ಳವರ ಬದುಕಿನ ಈ ಸ್ವಾರ್ಥಸಂಹಿತೆಯನ್ನು ಉಲ್ಲಂಘಿಸಿದ್ದೇ ಅವರು ಮಾಡಿದ ಘನಘೋರ ಅಪರಾಧ. ಎಷ್ಟೆಂದರೆ ಬಿನಾಯಕ ಸೇನರ ಈ ಸರಳ ಬದುಕೇ ಅವರು ಮಾವೋವಾದಿಗಳ ಸ್ನೇಹಿತನೇ ಇರಬೇಕೆಂದು ಅನುಮಾನ ಪಡಲು ಸಕರ್ಾರದ ಸಿಕ್ಕ ಬಲು ದೊಡ್ಡ ಪುರಾವೆಯಾಯಿತು! ನಿಸ್ವಾರ್ಥವನ್ನು ಮತ್ತು ಪ್ರಾಮಾಣಿಕತೆಗಳು ಶಿಕ್ಷಾರ್ಹ ಅಪರಾಧವಾಗುವ ವ್ಯವಸ್ಥೆಯನ್ನು ಪ್ರಜಾತಂತ್ರ ಎಂದು ಕರೆಯಬಹುದೇ?ಡಾ.ಬಿನಾಯಕ್ ಸೇನರು ಛತ್ತೀಸ್ಘಡದ ಆದಿವಾಸಿಗಳ ಮಧ್ಯೆ ತಮ್ಮ ಶುಶ್ರೂಷಾ ಕೇಂದ್ರವನ್ನು ತೆರದು ಆರೋಗ್ಯ ಸೇವೆ ಪ್ರಾರಂಭಿಸಿದ ಅಲ್ಪಾವಧಿಯಲ್ಲಿ ಆದಿವಾಸಿಗಳ ಅನಾರೋಗ್ಯಕ್ಕಿರುವ ಸಾಮಾಜಿಕ ಕಾರಣಗಳನ್ನು ಅರಿತುಕೊಂಡರು. ಅಪೌಷ್ಟಿಕತೆ, ರಕ್ತಹೀನತೆ, ಕೇವಲ ಆರೋಗ್ಯದ ಸಮಸ್ಯೆಯಲ್ಲ. ಬಡತನವೆಂಬ ಸಾಮಾಜಿಕ ಮತ್ತು ಆಥರ್ಿಕ ಮೂಲದ ಕಾರಣವೇ ಅವರ ಖಾಯಿಲೆಗೆ ಕಾರಣವಾಗುತ್ತಿರುವ ಮೂಲ ಸಮಸ್ಯೆಗಳು ಎಂದು ಅರ್ಥಮಾಡಿಕೊಳ್ಳಲು ಈ ಹೃದಯವಂತ ವೈದ್ಯನಿಗೆ ಹೆಚ್ಚು ಸಮಯವೇನೂ ಬೇಕಾಗಲಿಲ್ಲ. ಹಾಗೂ ಚತ್ತೀಸ್ಘಡದಲ್ಲಿ ಆದಿವಾಸಿಗಳ ಬಡತನಕ್ಕೆ ಪ್ರಮುಖ ಕಾರಣ ಸಕರ್ಾರದ ಅರಣ್ಯನೀತಿಗಳು ಎಂಬುದನ್ನು ಅರ್ಥಮಾಡಿಕೊಂಡ ಬಿನಾಯಕ್ ಸೇನರು ಆದಿವಾಸಿಗಳ ನಾಗರಿಕ ಹಕ್ಕನ್ನು ಕಾಪಾಡಲು ಪಿಯುಸಿಎಲ್ ಸಂಸ್ಥೆಯನ್ನು ಸೇರಿಕೊಂಡರು. ಅಪಾರ ಖನಿಜ ಸಂಪನ್ಮೂಲವನ್ನು ಹೊಂದಿರುವ ಆ ಪ್ರದೇಶವನ್ನು ಬೃಹತ್ ಬಹುರಾಷ್ಟ್ರೀಯ ಕಂಪನಿಗಳ ವಶಮಾಡಲು ಸಕರ್ಾರವು ಆದಿವಾಸಿಗಳನ್ನು ಅಲ್ಲಿಂದ ಎತ್ತಂಗಡಿ ಮಾಡಲು ಪ್ರಯತ್ನಿಸಿದಾಗ ಬಿನಾಯಕ್ ಸೇನರೂ ಹಲವಾರು ಸಂಘಸಂಸ್ಥೆಗಳೊಡನೆ ಸೇರಿ ಹೋರಾಟ ರೂಪಿಸಿದರು. ಅದರಲ್ಲೂ ಸಾಲ್ವಾ ಜುಡುಂ ಹೆಸರಿನಲ್ಲಿ ಆದಿವಾಸಿಗಳನ್ನು ಕೊಂದು ಹಾಕಲು ಮತ್ತು ಬಲವಂತವಾಗಿ ಹೊರಹಾಕಲು ಸಕರ್ಾರ ಒಂದು ಕಾನೂನು ಬಾಹಿರ ಸೇನೆಯನ್ನೇ ರಚಿಸಿ ತನ್ನ ಜನರ ಮೇಲೆ ಯುದ್ಧ ಶುರು ಮಾಡಿದಾಗ ಸಕರ್ಾರದ ಸಾಲ್ವಾಜುಡುಂ ಸಂಚನ್ನು ಬಯಲುಗೊಳಿಸಿದವರಲ್ಲಿ ಬಿನಾಯಕ್ ಸೇನರೇ ಮೊದಲಿಗರು. ಬಡವರ ಅನಾರೋಗ್ಯಕ್ಕೆ ಬಡತನವೇ ಪ್ರಧಾನ ಶತ್ರು. ಆದ್ದರಿಂದ ವೈದ್ಯನೊಬ್ಬನ ಹೋರಾಟ ಕೇವಲ ಬಡವರ ಖಾಯಿಲೆಯ ವಿರುದ್ಧ ಮಾತ್ರವಿದ್ದರೆ ಸಾಲದು ಆ ಕಾಯಿಲೆಗಳ ಮೂಲಕಾರಣದ ವಿರುದ್ಧವೂ ಇರಬೇಕೆಂದೇ ಪ್ರಪಂಚದ ಇತಿಹಾಸದಲ್ಲೆ ಚೆಗುವಾರ, ಡಾ. ನಾರ್ಮನ್ ಬೆಥ್ಯೂನ್, ಡಾ.ಕೊಟ್ನೀಸ್ ಇತರರು ದುಡಿದು, ಹೋರಾಡಿ, ಮಡಿದಿದ್ದಾರೆ. ಡಾ. ಬಿನಾಯಕ್ ಸೇನರು ಸಹ ಅದೇ ಸಾಲಿನಲ್ಲಿ ಸೇರುವ ಜನರ ಹಾಗೂ ಸಮಾಜದ ವೈದ್ಯರು. ಬಿನಾಯಕ್ ಸೇನರು ಹೀಗೆ ತಾವು ವೈಧ್ಯವೃತ್ತಿಯಲ್ಲಿ ತೆಗೆದುಕೊಂಡ ಪ್ರಮಾಣವನ್ನು ಅಕ್ಷರಶಃ ಅನುಸರಿಸಲು ಯತ್ನಿಸುವ ಪ್ರಕ್ರಿಯೆಯಲ್ಲೇ ನಾಗರಿಕ ಹಕ್ಕುಗಳ ಹೋರಾಟಗಾರರೂ ಆದರು. ತಾವು ಮಾಡುತ್ತಿದ್ದ ವೈದ್ಯ ವೃತ್ತಿಗೆ ಆದಿವಾಸಿಗಳ ಸಾಮಾಜಿಕ ಮತ್ತು ಆಥರ್ಿಕ ಹಕ್ಕಿಗಾಗಿ ನಡೆಸುತ್ತಿದ್ದ ಹೋರಾಟಗಳು ಪೂರಕ ಮತ್ತು ಅದರ ಅವಿಭಾಜ್ಯ ಅಂಗವೆಂದೇ ಅವರು ಭಾವಿಸಿದ್ದರು. ಇದು ಪ್ರಾಯಶಃ ಪ್ರಭುತ್ವದ ಕಣ್ಣಲ್ಲಿ ಅವರು ಮಾಡಿದ ಎರಡನೇ ಅಪರಾಧವಾಗಿತ್ತು!ನಿಸ್ವಾರ್ಥವಾಗಿ ಜೀವಿಸಿದ್ದು ಮತ್ತು ಆದಿವಾಸಿಗಳ ಪರವಾಗಿ ಮತ್ತು ನಿಜವಾದ ಪ್ರಜಾಪ್ರಭುತ್ವಕ್ಕಾಗಿ ಧ್ವನಿ ಎತ್ತಿದ್ದ ಡಾ. ಬಿನಾಯಕ್ ಸೇನರನ್ನು ಈ ಕಾಪರ್ೊರೇಟ್ ಪ್ರಭುತ್ವ ಸಹಿಸಲು ಸಾಧ್ಯವೇ ಇರಲಿಲ್ಲ. ಆದಿವಾಸಿಗಳ ಪರವಾಗಿ ಶಸ್ತ್ರ ಧರಿಸಿ ಹೋರಾಡುತ್ತಿರುವ ನಕ್ಸಲರ ಮೇಲೆ ಸುಲಭವಾಗಿ ಪ್ರಭುತ್ವದ ವಿರುದ್ಧ ಯುದ್ಧ ಹೂಡಿರುವ ಅಪರಾಧ ಹೊರಿಸಿ ಕೊಲ್ಲುವುದು ಅಥವಾ ಸೆರೆಗೆ ದೂಡುವುದನ್ನು ಅಭ್ಯಾಸ ಮಾಡಿಕೊಂಡಿದ್ದ ಸಕರ್ಾರ ಈ ನಿರಾಯುಧ ಯೋಧನನ್ನು ಬಲಿ ಹಾಕುವುದು ಹೇಗೆ ಎಂಬುದು ತಲೆನೋವಾಗಿತ್ತು. ಆ ಸಂದರ್ಭದಲ್ಲಿಯೇ ಜೈಲಿನಲ್ಲಿದ್ದ ಮಾವೋವಾದಿ ನಾಯಕನನ್ನು ಅವರ ಕುಟುಂಬದ ಮನವಿಯ ಮೇರೆಗೆ ಆರೋಗ್ಯ ಸಂಬಂಧಿ ವಿಚಾರಗಳಲ್ಲಿ ಪದೇಪದೇ ಭೇಟಿಯಾಗಿರುವುದು ಸಕರ್ಾರದ ಗಮನಕ್ಕೆ ಬಂದಿತು. ಅದನ್ನೇ ಬಳಸಿಕೊಂಡು 2007ರ ಮೇ ತಿಂಗಳಲ್ಲಿ ಬಿನಾಯಕ್ ಸೇನರು ಇಲ್ಲದಿರುವಾಗ ಅವರ ಮನೆಯನ್ನು ಪೊಲೀಸರು ರೇಡ್ ಮಾಡಿದರು. ಅವರ ಮನೆಯಲ್ಲಿದ್ದ ಕಂಪ್ಯೂಟರ್, ಅವರ ಸಾಹಿತ್ಯ ಮೆಡಿಕಲ್ ಪುಸ್ತಕಗಳು ಎಲ್ಲವನ್ನು ವಶಪಡಿಸಿಕೊಂಡು ಡಾ. ಬಿನಾಯಕ್ ಸೇನರ ಬಳಿ ಜೈಲಿನಲ್ಲಿದ್ದ ಮಾವೋವಾದಿ ನಾಯಕ ನಾರಾಯಣ ಸನ್ಯಾಲ್ ತನ್ನ ಪಕ್ಷದ ಇತರ ಸದಸ್ಯರಿಗೆ ತಲುಪಿಸಲು ನೀಡಲಾಗಿದ್ದ ಪತ್ರವೊಂದು ಸಿಕ್ಕಿತೆಂದೂ, ಡಾ. ಸೇನರು ಈ ರೀತಿ ಬಹಿಷ್ಕೃತ ಮಾವೋವಾದಿ ಸಂಘಟನೆಯ ಕುರಿಯರ್ ಆಗಿ ಕೆಲಸ ಮಾಡುತ್ತಿದ್ದಾರೆಂದೂ, ಇದು ಚತ್ತೀಸ್ಘಡ್ ವಿಶೇಷ ಸಾರ್ವಜನಿಕ ಭದ್ರತಾ ಕಾಯಿದೆ ಮತ್ತು ಅನ್ಲಾಫುಲ್ ಆಕ್ಟಿವಿಟೀಸ್ ಪ್ರಿವೆನ್ಷನ್ ಆಕ್ಟ್ ಅಡಿ ಶಿಕ್ಷಾರ್ಹ ಅಪರಾಧವೆಂದು ಆರೋಪ ಹೊರಿಸಿ 2007ರ ಮೇ 14ರಂದು ಬಂಧಿಸಿದರು.ಡಾ. ಸೇನರ ಬಂಧನದ ಸುದ್ದಿ ಇಡೀ ದೇಶವನ್ನೇ ಮಾತ್ರವಲ್ಲದೆ ಜಗತ್ತಿನಾದ್ಯಂತ ಹರಡಿಕೊಂಡಿರುವ ಅವರ ಅಭಿಮಾನಿಗಳನ್ನು, ಪ್ರಜಾತಂತ್ರವಾದಿಗಳನ್ನು ಬೆಚ್ಚಿಬೀಳಿಸಿತು. ಛತ್ತೀಸ್ಘಡ್ ಕೋಟರ್ುಗಳು ಅವರಿಗೆ ಜಾಮೀನು ಕೊಡಲೂ ಸಹ ನಿರಾಕರಿಸಿದವು. ಸುಪ್ರೀಂಕೋಟರ್ು ಸಹ ಪ್ರಾರಂಭದಲ್ಲಿ ಅವರಿಗೆ ಬೇಲ್ ನಿರಾಕರಿಸಿತು. ಆದರೆ ಸೇನರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಜಗತ್ತಿನ ಇಪ್ಪತ್ತಕ್ಕೂ ಹೆಚ್ಚು ನೊಬೆಲ್ ಪ್ರಶಸ್ತಿ ವಿಜೇತರೂ, ಖ್ಯಾತ ಬುದ್ಧಿಜೀವಿಗಳು, ಸಹಸ್ರಾರು ಸಂಘಸಂಸ್ಥೆಗಳು ಪ್ರಚಾರಾಂದೋಲನ ಮತ್ತು ಹೋರಾಟದ ಅಭಿಯಾನವನ್ನೇ ಪ್ರಾರಂಭಿಸಿದರು. ಈ ಎಲ್ಲಾ ಕಾರಣದಿಂದ ಕೊನೆಗೂ 2009ರ ಮೇನಲ್ಲಿ ಅಂದರೆ ವಿನಾಕಾರಣ ಭತರ್ಿ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ ನಂತರವೇ ಅವರನ್ನು ಸುಪ್ರಿಂ ಕೋಟರ್ು ಜೈಲಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡಿತು. ಆದರೆ ಹೇಗಾದರೂ ಸರಿ ಬಿನಾಯಕ್ ಸೇನರಿಗೆ ಶಿಕ್ಷೆ ವಿಧಿಸುವುದು ಪ್ರಭುತ್ವಕ್ಕೆ ಅತ್ಯಗತ್ಯವಾಗಿತ್ತು. ಏಕೆಂದರೆ ನ್ಯಾಯದ ಪರವಾಗಿ ಬಿನಾಯಕ ಸೇನರಂಥ ಖ್ಯಾತ ನಾಮರೇ ಶಿಕ್ಷೆ ಒಳಗಾಗದರೆ ಉಳಿದವರೂ ತಾವಾಗಿಯೇ ಅನ್ಯಾಯವನ್ನು ಸಹಿಸಿಕೊಂಡು ಸುಮ್ಮನಾಗುತ್ತಾರೆ ಎಂಬುದು ಸಕರ್ಾರದ ಪ್ರಭುತ್ವದ ಹುನ್ನಾರವಾಗಿತ್ತು.ಆದರೆ ಅತ್ಯಂತ ದುರದೃಷ್ಟದ ಸಂಗತಿಯೆಂದರೆ ಪ್ರಜಾಸತ್ತೆಯ ಪ್ರಮುಖ ಅಂಗವಾಗಿರಬೇಕಿದ್ದ ಸ್ವತಂತ್ರ ನ್ಯಾಯಾಲಯವೂ ಈ ಪ್ರಕರಣದಲ್ಲಿ ತನ್ನ ನ್ಯಾಯವಿಚಕ್ಷತೆಯನ್ನು ಮತ್ತು ನಿಷ್ಪಕಪಾತಿತನವನ್ನು ಬದಿಗಿಟ್ಟು ಕಣ್ಣಿಗೆ ಖಾಕಿಪಟ್ಟಿಯನ್ನು ಕಟ್ಟಿಕೊಂಡು ಹೆಚ್ಚು ಕಡಿಮೆ ಪೊಲೀಸರು ದಾವೆಯಲ್ಲಿ ನೀಡಿದ್ದ ಅಜರ್ಿಯನ್ನೇ ತೀಪರ್ೆಂದು ಓದಿರುವುದು! ಮೇಲ್ನೋಟಕ್ಕೆ ನೋಡಿದರೆ ನ್ಯಾಯಾಲಯ ಈ ಪ್ರಕರಣದಲ್ಲಿ ಸಂಪೂರ್ಣ ಏಕಪಕ್ಷೀಯವಾಗಿ ಪೊಲೀಸರು ಮತ್ತು ಪ್ರಬಲರು ಸೃಷ್ಟಿಸಿದ ಪೂರ್ವಗ್ರಹಗಳಿಗೆ ಹಾಗೂ ನಾಗರಿಕ ಹೋರಾಟಗಳ ಬಗ್ಗೆ ವ್ಯಕ್ತಿಗತವಾಗಿ ತಾವು ನಂಬುವ ಸೈದ್ಧಾಂತಿಕ ಪೂರ್ವಗ್ರಹಗಳಿಗೆ ಬಲಿಯಾಗಿಯೇ ತೀಪರ್ು ಕೊಟ್ಟಿರುವುದು ಎದ್ದು ಕಾಣುತ್ತದೆ.ಪ್ರಾಸಿಕ್ಯುಷನ್ ವಾದದ ಪ್ರಕಾರ ಡಾ. ಬಿನಾಯಕ್ ಸೇನರು ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಕಾರ್ಯಕರ್ತರು. ಮತ್ತು ಆ ಸಂಘಟನೆಯ ಕಾರ್ಯಚಟುವಟಿಕೆಯನ್ನು ಪಸರಿಸಲು ಅವರು ಜೈಲಿನಲ್ಲಿದ್ದ ಮಾವೋವಾದಿ ಪಕ್ಷದ ನಾಯಕ ನಾರಾಯಣ ಸನ್ಯಾಲ್ ಅವರಿಂದ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಲು ಸೂಚನೆ ಇರುವ ಪತ್ರಗಳನ್ನು ತೆಗೆದುಕೊಂಡು ಪಕ್ಷದ ಇತರ ಕಾರ್ಯಕರ್ತರಿಗೆ ತಲುಪಿಸಲು ಮತ್ತೊಬ್ಬ ಮಾವೋವಾದಿ ಪಕ್ಷದ ಕಾರ್ಯಕರ್ತರಾದ ಪೀಯೂಷ್ ಗುಹಾ ಎಂಬುವರಿಗೆ ತಲುಪಿಸುತ್ತಿದ್ದರು. ಹೀಗಾಗಿ ಈ ಮೂವರು (ನಾರಾಯಣ್ ಸನ್ಯಾಲ್, ಡಾ. ಬಿನಾಯಕ್ ಸೇನ್, ಪೀಯೂಷ್ ಗುಹಾ) ಬಹಿಷ್ಕೃತ ಸಂಘಟನೆಯ ಸದಸ್ಯರಾಗಿರುವುದು ಒಂದು ಅಪರಾಧ. ಎರಡನೆಯದು ಸಕರ್ಾರದ ವಿರುದ್ಧ ಸಂಚುಕೂಟ ರೂಪಿಸಿದ್ದು 2ನೇಯ ಅಪರಾಧ. ಸಕರ್ಾರದ ವಿರುದ್ಧ ಯುದ್ಧ ಹೂಡಲು ಸನ್ನಾಹ ಹೂಡಿದ್ದು 3ನೇ ಅಪರಾಧ. ಈ ಎಲ್ಲಾ ಆರೋಪಗಳನ್ನು ಹೊರಿಸಿ ಐಪಿಸ್ ಸೆಕ್ಷನ್ 124-ಎ,120-ಬಿ, ಛತ್ತೀಸ್ಘಡ್ ವಿಶೇಷ್ ಜನ ಸುರಕ್ಷಾ ಅಧಿನಿಯಮ್ನ 8(1), 8(2), 8(3), ಮತ್ತು 8(5), ಮತ್ತು ಗಟಿಟಚಿತಿಜಿಣಟ ಂಛಿಣತಣಜ ಕಡಿಜತಜಟಿಣಠಟಿ ಂಛಿಣ, 1967 ನ ಸೆಕ್ಷನ್ 39(2)ರಡಿ ಆರೋಪಗಳನ್ನು ಹೊರಿಸಲಾಗಿತ್ತು.ಆದರೆ ಇವೆಲ್ಲಾ ಆರೋಪಗಳಷ್ಟೆ! ಇದನ್ನು ಅನುಮಾನಕ್ಕೆಡೆಯಿಲ್ಲದಂತೆ ಸಾಬೀತು ಮಾಡುವ ಜವಾಬ್ದಾರಿ ತನಿಖಾಧಿಕಾರಿ ಪೊಲೀಸರದ್ದು ಮತ್ತು ಅವರ ಪರವಾಗಿ ವಾದ ಮಾಡುವ ಪ್ರಾಸಿಕ್ಯುಷನ್ ವಕೀಲರದ್ದು. ಅವರು ಮಾಡುವ ವಾದ ಮತ್ತು ನೀಡುವ ಸಾಕ್ಷಿ ಪುರಾವೆಗಳು ಹಾಗೂ ಆರೋಪಿಯು ತನ್ನ ಸಮರ್ಥನೆಗೆ ನೀಡುವ ಸಾಕ್ಷಿ ಪುರಾವೆಗಳನ್ನೆಲ್ಲಾ ತುಲನೆ ಮಾಡಿ ನ್ಯಾಯಾಧೀಶ ತನ್ನ ತೀಪರ್ು ನೀಡಬೇಕು. ಹಾಗೂ ಆ ತೀಪರ್ು ನಿರಪರಾಧಿಗೆ ವಿನಾಕಾರಣ ಶಿಕ್ಷೆಯಾಗದಂಥ ನ್ಯಾಯ ಸಂಹಿತೆಯನ್ನೂ ಮತ್ತು ಅನುಮಾನಕ್ಕೆಡೆ ಕೊಡದಂತೆ ಅಪರಾಧ ಸಾಬೀತಾಗಬೇಕಾದ ನ್ಯಾಯಪ್ರಕ್ರಿಯೆಯನ್ನು ಅನುಸರಿಸಬೇಕು. ಅದರಲ್ಲೂ ದೇಶದ್ರೋಹದ ಆಪಾದನೆಯನ್ನು ಒಪ್ಪಿಕೊಳ್ಳಬೇಕಾದರೆ ಹಾಗೂ ಜೀವಾವಧಿಯಂತ ಗೋರ ಶಿಕ್ಷೆ ವಿಧಿಸಬೇಕಾದರೆ ಅಂಥ ಆರೋಪ ಕಿಂಚಿತ್ತೂ ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತಾಗಿರಬೇಕು. ಇಂಥಾ ಪ್ರಕರಣಗಳಲ್ಲಿ ಕೆಳನ್ಯಾಯಾಲಯಗಳಲ್ಲಿ ನ್ಯಾಯ ಪ್ರಕ್ರಿಯೆ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಸುಪ್ರೀಂ ಕೋಟರ್ು ಕೆಲವು ಸ್ಪಷ್ಟ ನಿದರ್ೆಶನಗಳನ್ನು & ಲ್ಯಾಂಡ್ಮಾಕರ್್ ತೀಪರ್ುಗಳನ್ನು ನೀಡಿದೆ. ಉದಾಹರಣೆಗೆ ದೇಶದ್ರೋಹದ ಆಪಾದನೆ ಸ್ವೀಕೃತವಾಗಬೇಕಾದರೆ ಅಂತಹ ಅಪರಾಧ ನೇರ ಹಿಂಸಾಚರಣೆಗೂ ಕಾರಣವಾಗಿರಬೇಕು ಎಂಬುದು ಒಂದು ಮಾರ್ಗದರ್ಶನ.ಆದರೆ ಪ್ರಾಸಿಕ್ಯುಷನ್ ಪರ ವಾದವಾಗಲೀ, ರಾಯಪುರದ ಎರಡನೇ ಸೆಷನ್ಸ್ ಜಡ್ಜ್ ಬಿ.ಪಿ. ವಮರ್ಾ ಆಗಲೀ ಈ ಯಾವುದೇ ಪ್ರಕ್ರಿಯೆ ಮತ್ತು ಸಂಹಿತೆಯನ್ನು ಅನುಸರಿಸಿಲ್ಲ. ಉದಾಹರಣೆಗೆ ಡಾ. ಬಿನಾಯಕ್ ಸೇನರು ಮಾವೋವಾದಿ ಎಂದು ಆರೋಪಿಸಲು ಪೊಲೀಸರು ಹೊರಿಸಿರುವ ಆರೋಪಗಳು ಇವು:1.ಡಾ. ಸೇನರು 33 ಕ್ಕೂ ಹೆಚ್ಚು ಸಾರಿ ಮಾವೋವಾದಿ ನಾಯಕ ನಾರಾಯಣ ಸನ್ಯಾಲ್ ಅವರನ್ನು ಭೇಟಿ ಮಾಡಿದ್ದಾರೆ.2.ಡಾ. ಸೇನರ ಶಿಫಾರಸ್ಸಿನ ಮೇರೆಗೆ ಸನ್ಯಾಲರಿಗೆ ಮನೆ ಬಾಡಿಗೆಗೆ ನಡಲಾಗಿದೆ. ಇದು ಅವರಿಬ್ಬರ ಸಂಬಂಧವನ್ನು ಸಾಬೀತು ಮಾಡುತ್ತದೆ.3.ಡಾ. ಸೇನರು ನಾರಾಯಣ ಸನ್ಯಾಲ್ ಅವರಿಂದ ಪತ್ರವನ್ನು ತೆಗೆದುಕೊಂಡು ಪೀಯೂಷ್ ಗುಹಾ ಅವರಿಗೆ ತಲುಪಿಸಿದ್ದಾರೆ. 4.ಡಾ. ಸೇನರು ಮತ್ತು ಅವರ ಪತ್ನಿ ಇಳಿನಾ ಸೇನರು ಶಂಕರ್ ಸಿಂಗ್ ಮತ್ತು ಅಮಿತಾ ಶ್ರೀವಾಸ್ತವ ಎಂಬ ಇಬ್ಬರು ಮಾವೋವಾದಿಗಳಿಗೆ ತಮ್ಮ ರೂಪಾಂತರ್ ಎಂಬ ಸಂಸ್ಥೆಯಲ್ಲಿ ಕೆಲಸ ಕೊಟ್ಟಿದ್ದರು. ಮತ್ತು ಡಾ. ಸೇನ್ ದಂಪತಿಗಳು ಕಾಡಿನಲ್ಲಿ ಹಲವಾರು ಬಾರಿ ಮಾವೋವಾದಿಗಳ ಸಭೆಯಲ್ಲಿ ಭಾಗವಹಿಸಿದ್ದರು.5.ಡಾ. ಸೇನರು ಚತ್ತೀಸ್ಘಡ್ದಲ್ಲಿ ತಮ್ಮ ಪಕ್ಷಕ್ಕೆ ಮಾಡುತ್ತಿರುವ ಸೇವೆಯನ್ನು ಶ್ಲಾಘಿಸಿ ಮಾವೋವಾದಿ ಪಕ್ಷದ ಕೇಂದ್ರ ಸಮಿತಿ ಸೇನರಿಗೆ ಬರೆದ ಪತ್ರ ದೊರೆತಿದೆ. ಮೊದಲನೆಯದಾಗಿ ಡಾ. ಸೇನರು ಮಾವೋವಾದಿ ನಾಯಕ ಸನ್ಯಾಲರನ್ನು 33 ಬಾರಿ ಭೇಟಿಯಾದ ಆರೋಪ. ಡಾ. ಸೇನರಿಗೆ ನಾರಾಯಣ್ ಸನ್ಯಾಲರ ಮನೆಯವರು ಜೈಲಿನಲ್ಲಿರುವ ತಮ್ಮ ಸಂಬಂಧಿಯ ಆರೋಗ್ಯವನ್ನು ಜೈಲಿನಾಧಿಕಾರಿಗಳು ಕಡೆಗಣಿಸುತ್ತಿದ್ದರಾದ್ದರಿಂದ ನಾಗರಿಕ ಹಕ್ಕು ಸಂಘಟನೆಯ ಕಾರ್ಯಕರ್ತರಾಗಿ ತಾವು ಮಧ್ಯಪ್ರವೇಶ ಮಾಡಬೇಕೆಂದು ಮನವಿ ಮಾಡಿರುವ ಪತ್ರವನ್ನು ಸೇನರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಮತ್ತು ಪ್ರತಿಬಾರಿ ಯಾವುದೇ ಗುಟ್ಟು-ಗುಮಾನಿಗೆ ಅವಕಾಶ ಕೊಡದಂತೆ ಪಿಯುಸಿಲ್ ಲೆಟರ್ ಹೆಡ್ಡಿನಲ್ಲೇ ಭೇಟಿಗೆ ಅವಕಾಶ ಕೋರಿದ್ದಾರೆ ಮತ್ತು ಜೈಲು ಅಧಿಕಾರಿಗಳ ಸಮಕ್ಷಮದಲ್ಲಿಯೇ ಅವರಿಬ್ಬರ ಭೇಟಿ ನಡೆದಿದೆ. ಪಾಟಿ ಸವಾಲಿನಲ್ಲಿ ಜೈಲಿನ ಅಧಿಕಾರಿಗಳು ಇವೆಲ್ಲವನ್ನೂ ಧೃಢೀಕರಿಸಿದ್ದು ಮಾತ್ರವಲ್ಲದೆ ತಮ್ಮ ಕಣ್ಣು ತಪ್ಪಿಸಿ ಸನ್ಯಾಲರು ಯಾವುದೇ ಪತ್ರವನ್ನು ಸೇನರಿಗೆ ಕೊಟ್ಟಿರುವ ಸಾಧ್ಯತೆಯೆ ಇಲ್ಲವೆಂದು ಧೃಢವಾಗಿ ಹೇಳಿದ್ದಾರೆ. ಅಲ್ಲದೆ ಅವರಿಬ್ಬರೂ ಆರೋಗ್ಯದ ವಿಷಯವನ್ನು ಹೊರತುಪಡಿಸಿ ಬೇರೆ ಯಾವುದೇ ಮಾತುಗಳನ್ನು ಆಡಿಲ್ಲವೆಂದೂ ಹೇಳಿಕೆ ನೀಡಿದ್ದಾರೆ. ಆದರೂ ನ್ಯಾಯಾಲಯ ಈ ಹೇಳಿಕೆಯನ್ನೇ ಗಮನಕ್ಕೆ ತೆಗೆದುಕೊಳ್ಳಲಿಲ್ಲವೇಕೆ?ಎರಡನೆಯದಾಗಿ ಡಾ. ಸೇನ್ ದಂಪತಿಗಳು ಮಾವೋವಾದಿಗಳು ಎಂಬುದಕ್ಕೆ ಪೋಲಿಸರು ಮುಂದಿಟ್ಟಿರುವ ಸಾಕ್ಷ್ಯಗಳಾದರೂ ಏನು? ಅವರು ಶಂಕರ್ ಮತ್ತು ಅಮಿತ್ ಎಂಬ ಇಬ್ಬರು ಮಾವೋವಾದಿಗಳಿಗೆ ಕೆಲಸ ಕೊಟ್ಟಿದ್ದರು ಎಂಬುದು. ಅಮಿತ್ ಮತ್ತು ಶಂಕರ್ ಎಂಬ ಹೆಸರುಳ್ಳ ಇಬ್ಬರು ಮಾವೋವಾದಿಗಳು ಇರುವುದು ನಿಜ. ಆದರೆ ಆ ಇಬ್ಬರು ಸೇನ್ ದಂಪತಿಗಳು ಕೆಲಸ ಕೊಟ್ಟಿದ್ದ ವ್ಯಕ್ತಿಗಳಲ್ಲ ಎಂಬುದನ್ನು ಪೊಲೀಸರೇ ಪಾಟಿ ಸವಾಲಿನ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾರೆ. ಸೇನ್ ದಂಪತಿಗಳು ಕಾಡಿನಲ್ಲಿ ಮಾವೋವಾದಿಗಳ ಸಭೆಯಲ್ಲಿ ಭಾಗವಹಿಸಿದ್ದರು ಎಂಬುದಕ್ಕೆ ಪೊಲೀಸರು ತೋರಿದ ಒಂದು ಡಾಕ್ಯುಮೆಂಟರಿ ಚಿತ್ರ ವಾಸ್ತವವಾಗಿ ಆದಿವಾಸಿಗಳ ಜೊತೆ ಅವರ ಆರೋಗ್ಯದ ಬಗ್ಗೆ ನಡೆಸುತ್ತಿದ ಸಂಭಾಷಣೆಯ ತುಣಕೆಂದು ಆ ಸಾಕ್ಷ್ಯ ಚಿತ್ರ ತೆಗೆದವರೇ ಕೋಟರ್ಿನಲ್ಲಿ ಸಾಕ್ಷ್ಯ ಹೇಳಿದ್ದಾರೆ. ಅಲ್ಲದೆ ಇಳಿನಾ ಸೇನ್ರವರು ಐಎಸ್ಐ ಎಂಬ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯೊಡನೆ ಸಂಪರ್ಕ ಹೊಂದಿದ್ದಾರೆ ಎಂದೂ ಆಪಾದನೆ ಮಾಡಿದ್ದರು. ಅದಕ್ಕೆ ಅವರು ತೋರಿದ ಪುರಾವೆ ದೆಹಲಿ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾಗಿರುವ ಇಂಡಿಯನ್ ಸೋಷಿಯಲ್ ಇನ್ಸಿಟ್ಯೂಟ್ (ಐಎಸ್ಐ!)ಗೆ ಬರೆದ ಪತ್ರ. ಅದಲ್ಲದೆ ಕಾಮ್ರೇಡ್ ಎಂದು ಅದರ ಅಧ್ಯಕ್ಷರನ್ನು ಸಂಬೋಧಿಸಿದ್ದನ್ನು ಸಹ ಪೊಲಿಸರು ಸೇನ್ ದಂಪತಿಗಳು ಮಾವೋವಾದಿಗಳು ಎಂದು ಸಾಬೀತು ಮಾಡಲು ಸಾಕ್ಷ್ಯವನ್ನಾಗಿ ಮುಂದಿಟ್ಟಿದ್ದರು. ಮೇಲ್ನೋಟಕ್ಕೆ ಹಾಸ್ಯಾಸ್ಪದವಾಗಿರುವ ಪೊಲೀಸರ ಈ ಪ್ರಯತ್ನಗಳನ್ನು ಮಾತ್ರ ನ್ಯಾಯಾಲಯ ಕಿಂಚಿತ್ತೂ ಶಂಕಿಸಿಲ್ಲ. ಇದಲ್ಲದೆ ಸನ್ಯಾಲ್ ಎಂಬ ಮಾವೋವಾದಿ ನಾಯಕರನ್ನು ರಾಯಪುರದ ಬಾಡಿಗೆ ಮನೆಯೊಂದರಿಂದ ಬಂಧಿಸಲಾಗಿದೆಯೆಂದೂ ಅದನ್ನು ಅವರಿಗೆ ಬಾಡಿಗೆ ಕೊಡಿಸಿದ್ದು ಸೇನರೆಂಬುದು ಪೊಲೀಸರ ವಾದ. ಆದರೆ ಕೋಟರ್ಿಗೆ ಪೊಲೀಸರೇ ನೀಡಿರುವ ಮತ್ತೊಂದು ದಾಖಲೆಯಲ್ಲಿ ಸನ್ಯಾಲರನ್ನು ಆಂಧ್ರದ ಭದ್ರಾಚಲಂನಲ್ಲಿ ಬಂಧಿಸಲಾಗಿದೆಯೆಂದು ಹೇಳಿದ್ದಾರೆ. ಆ ಬಾಡಿಗೆ ಮನೆಯ ಮಾಲೀಕರ ಪ್ರಾಥಮಿಕ ಹೇಳಿಕೆಯಲ್ಲಿ ಸೇನರ ಪ್ರಸ್ತಾಪ ಇಲ್ಲ. ಅದನ್ನು ನಂತರದಲ್ಲಿ ಸೇರಿಸಲಾಗಿದೆ. ಹಾಗೆಯೇ ಮಾವೋವಾದಿ ಕೇಂದ್ರಸಮಿತಿಯೆ ಪ್ರಶಂಸಾ ಪತ್ರಕ್ಕೆ ಯಾರದ್ದು ಸಹಿಯೇ ಇಲ್ಲ. ಅದು ಯಾರು ಬೇಕಾದರೂ ಯಾವುದೇ ಕಂಪ್ಯೂಟರಿಂದ ತೆಗೆಯಬಹುದಾದ ಪ್ರಿಂಟ್. ಯಾವುದಾದರೂ ದಾಖಲೆಯನ್ನು ಪೊಲೀಸರು ವಶಪಡಿಸ್ಕೊಂಡರೆ ಅದನ್ನು ಮಹಜರು ಮಾಡಿ ಪೊಲೀಸ್ ಅಧಿಕಾರಿಯ, ಆರೋಪಿಯ ಮತ್ತು ಸಾಕ್ಷಿಗಳ ಸಹಿಯನ್ನು ಪಡೆದುಕೊಂಡಿರಬೇಕು. ಆದರೆ ಈ ಪತ್ರಕ್ಕೆ ಅವ್ಯಾವುದೂ ಇಲ್ಲ. ಅದಕ್ಕೆ ಕಾರಣವನ್ನು ಕೇಳಿದರೆ ಅದು ಕೈತಪ್ಪಿನಿಂದ ಆದದ್ದೆಂದು ಪೊಲೀಸರು ಸಮಜಾಯಿಷೀ ನೀಡಿದ್ದಾರೆ! ಮತ್ತು ಅದನ್ನು ನ್ಯಾಯಾಲಯ ಒಪ್ಪಿಕೊಂಡಿದೆ.ಹೀಗೆ ಡಾ. ಬಿನಾಯಕ್ ಸೇನರನ್ನು ಮಾವೋವಾದಿ ಎನ್ನಲು, ಅಥವಾ ಮಾವೋವಾದಿಗಳ ಕುರಿಯರ್ ಎನ್ನಲು ಅಥವಾ ಸಕರ್ಾರದ ವಿರುದ್ಧ ಯುದ್ಧ ಹೂಡಿದ್ದರು ಎನ್ನಲು ಯಾವುದೇ ಸಾಕ್ಷ್ಯ ಪುರಾವೆಗಳಿಲ್ಲ. ಅಥವಾ ಯಾವುದೇ ಬಲವಾದ ಅಥವಾ ಅನುಮಾನಕ್ಕೆಡೆಯಿಲ್ಲದಂತೆ ಸಾಬೀತು ಮಾಡುವ ಸಾಕ್ಷಾಧಾರಗಳಿಲ್ಲ. ಆದರೂ ಡಾ. ಬಿನಾಯಕ್ ಸೇನ್ರನ್ನು ನ್ಯಾಯಾಲಯ ತಪ್ಪಿತಸ್ಥನೆಂದು ಪರಿಗಣಿಸಿ ಜೀವಾವಧಿಯಂಥ ಘನಘೋರ ಶಿಕ್ಷೆ ವಿಧಿಸಲು ಕಾರಣವೇನು? ನ್ಯಾಯಾಧೀಶ ವಮರ್ಾ ರವರು ತಮ್ಮ 90 ಪುಟಗಳ ತೀಪರ್ಿನಲ್ಲಿ ಒಂದು ಕಡೆ ಪೊಲೀಸರು ತಮ್ಮ ಸಾಕ್ಷ್ಯಗಳನ್ನು ಒದಗಿಡುವಾಗ ಅಲ್ಪಸ್ವಲ್ಪ ತಪ್ಪು ಮಾಡಿರುವುದು ನಿಜ. ಆದರೆ ಅದನ್ನು ದೊಡ್ಡದು ಮಾಡುವ ಅಗತ್ಯವಿಲ್ಲ ಎನ್ನುತ್ತಾರೆ. ಸೇನರ ಪರವಾಗಿ ಬಂದ ಯಾವುದೇ ಸಾಕ್ಷಿಗಳನ್ನು ಮತ್ತು ಅವರ ವಾದಗಳನ್ನು ಎಲ್ಲಿಯೂ ಪರಿಗಣಿಸಿಲ್ಲ. ಪೊಲೀಸರ ಯಾವುದೇ ಹೇಳಿಕೆಗಳನ್ನು ಆರೋಪಿ ಪರ ವಕೀಲರ ಪಾಟಿ ಸವಾಲಿನ ಬೆಳಕಿನಲ್ಲಿ ಯಾವುದೇ ಪರಾಮಶರ್ೆ ಮಾಡದೆ ಯಥಾವತ್ ಒಪ್ಪಿಕೊಂಡಿದ್ದಾರೆ. ಹೀಗೆ ಉದ್ದಕ್ಕೂ ನ್ಯಾಯಾಲಯ ಪೊಲೀಸರ ಪರವಾದ ಮತ್ತು ಡಾ. ಸೇನರ ವಿರುದ್ಧವಾದ ಮನೋಧೋರಣೆಯನ್ನೇ ವ್ಯಕ್ತಪಡಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಾಲ್ವಾಜುಡುಂ ಎಂಬುದು ನಾಗರಿಕತೆಗೇ ಅಪಮಾನ ಮಾಡುವಂತ ಪೊಲೀಸರು ಸೃಷ್ಟಿಸಿರುವ ಖಾಸಗಿ ಸೇನೆಯೆಂದು ಸಾಕ್ಷಾತ್ ಸುಪ್ರೀಂ ಕೋಟರ್ೆ ತೀಪರ್ು ನೀಡಿದೆ. ಆದರೂ ಈ ಪ್ರಕರಣದಲ್ಲಿ ನ್ಯಾಯಾಧೀಶ ವಮರ್ಾರವರು ಸಾಲ್ವಾಜುಡುಂ ಎಂಬುದು ಆದಿವಾಸಿಗಳ ಪರವಾದ ಶಾಂತಿ ಸಂಘಟನೆ. ಅದರ ವಿರುದ್ಧ ಡಾ. ಸೇನರು ಹೋರಾಟ ಮಾಡಿರುವುದು ತಪ್ಪು ಮತ್ತು ಇದರ ಹಿಂದೆ ಸೇನರ ನಕ್ಸಲ್ ಪರ ನಿಲುವು ಸ್ಪಷ್ಟಗೊಳ್ಳುತ್ತದೆಂದು ಅಭಿಪ್ರಾಯ ಪಟ್ಟಿದ್ದಾರೆ. ಹಾಗೂ ಕೊನೆಯಲ್ಲಿ ಸೇನರು ಮಾಡಿದ ತಪ್ಪಿಗೆ ಜೀವಾವಧಿ ಶಿಕ್ಷೆ ಹೆಚ್ಚಾದರೂ ಛತ್ತೀಸ್ಘಡ್ನಲ್ಲಿ ಮಾವೋವಾದಿಗಳು ನಡೆಸುತ್ತಿರುವ ಕ್ರೌರ್ಯವನ್ನು ನೋಡಿದರೆ ಹೆಚ್ಚೇನಲ್ಲ ಎಂದು ಸಮಥರ್ಿಸಿಕೊಳ್ಳುತ್ತಾರೆ!! ನ್ಯಾಯಾಧೀಶರ ಈ ಹೇಳಿಕೆಯೇ ಇಡೀ ತೀಪರ್ಿನ ಹಿಂದೆ ಎಂಥ ಸೈದಾಂತಿಕ ಪೂರ್ವಗ್ರಹ ಕೆಲಸ ಮಾಡಿದೆ ಎಂಬುದನ್ನು ತೋರಿಸುತ್ತದೆ. ಸಾಕ್ಷ್ಯ, ಪುರಾವೆ, ನ್ಯಾಯ ಸಂಹಿತೆ ಎಲ್ಲವನ್ನೂ ಈ ನ್ಯಾಯಾಧೀಶರು ಕಟ್ಟಿಕೊಂಡ ಖಾಕಿ ಪಟ್ಟಿ ನಿರರ್ಥಕಗೊಳಿಸಿದೆ. ಇತ್ತೀಚೆಗೆ ಹೊರಬಿದ್ದ ಅಯೋಧ್ಯೆ-ಬಾಬ್ರಿ ಮಸೀದಿ ತೀಪರ್ಿನಲ್ಲೂ ಸಾಕ್ಷಿ-ಪುರಾವೆಗಳಿಗಿಂತ ಬಲಿಷ್ಟರು ಸೃಷ್ಟಿಸಿದ ಪೂವರ್ಾಗ್ರಹಗಳಿಗೆ ನ್ಯಾಯ ಬಲಿಯಾಗಿತ್ತು. ಅದಕ್ಕೂ ಹಿಂದೆ ಅಫ್ಜಲ್ ಗುರುವಿಗೆ ಸಂಸತ್ ದಾಳಿ ಪ್ರಕರಣದಲ್ಲಿ ಮರಣದಂಡನೆ ವಿಧಿಸುವಾಗಲೂ ಸುಪ್ರೀಂ ಕೋಟರ್ು ಹೇಳಿದ್ದು ಪ್ರಕರಣದಲ್ಲಿ ಆರೋಪಿಯ ಪಾಲು ಮರಣದಂಡನೆ ವಿಧಿಸುವಷ್ಟು ಗುರುತರವಲ್ಲವಾದರೂ ಸಾರ್ವಜನಿಕರ ಸಾಮೂಹಿಕ ಆಕ್ರೊಶವನ್ನು ಸಾಬೀತು ಗೊಳಿಸಬೇಕಿದ್ದರೆ ಈ ಮರಣದಂಡನೆ ಅನಿವಾರ್ಯ!! ಇದು ಪ್ರಜಾಸತ್ತೆಯನ್ನು ಕಾಪಾಡಿಕೊಳ್ಳುವಲ್ಲಿ ಅಂತಿಮ ಆಸರೆಯೆಂದು ಪರಿಗಣಿಸಲಾಗಿದ್ದ ನ್ಯಾಯಾಂಗವು ನಡೆದುಕೊಳ್ಳುತ್ತಿರುವ ರೀತಿ! ಈ ಎಲ್ಲಾ ಪ್ರಕರಣದಲ್ಲೂ ಹಿಂದೂತ್ವವಾದಿಗಳು ಮತ್ತು ಕಾಪರ್ೊರೇಟ್ ಬಂಡವಾಳಶಾಹಿಗಳೂ ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಈ ದೇಶದ ಬಹುಸಂಖ್ಯಾತರ ವಿರುದ್ಧ ಬಡವರ ವಿರುದ್ಧ ಅವರ ಹೋರಾಟಗಳ ವಿರುದ್ಧ ಸಾರಾಂಶದಲ್ಲಿ ನಿಜವಾದ ಪ್ರಜಾಸತ್ತೆ ಮತ್ತು ನ್ಯಾಯದ ವಿರುದ್ಧ ಹುಟ್ಟುಹಾಕಿದ ಪ್ರಚಾರಗಳಿಗೆ ಪೂರ್ವಗ್ರಹಗಳಿಗೆ ಬಲಿಯಾಗಿದೆ. ಇದಕ್ಕೆ ಅವರ ವರ್ಗ ಹಾಗೂ ಇತರ ಸಾಮಾಜಿಕ ಹಿನ್ನೆಲೆಗಳೂ ಪೂರಕವಾಗಿ ಕೆಲಸ ಮಾಡಿದೆ.ಡಾ. ಬಿನಾಯಕ ಸೇನರಿಗೆ ನೀಡಿದ ಜೀವಾವಧಿ ಶಿಕ್ಷೆ ಸಾರಾಂಶದಲ್ಲಿ ಪ್ರಜಾತಂತ್ರಕ್ಕೆ ನೀಡಿರುವ ಮರಣದಂಡನೆಯೂ ಆಗಿದೆ. ಆದ್ದರಿಂದಲೇ ಪ್ರಜಾತಂತ್ರದ ಉಳಿವಿಗಾಗಿ ಹೋರಾಡ ಬೇಕೆಂದಿರುವ ಪ್ರತಿಯೊಬ್ಬರೂ ಡಾ. ಬಿನಾಯಕ್ ಸೇನರಿಗೆ ನಿಡಿರುವ ಶಿಕ್ಷೆಯ ವಿರುದ್ದ ರಾಜಿಯಿಲ್ಲದ ಹೋರಾಟಕ್ಕೆ-ಸೇನರನ್ನು ಆರೋಪ ಮುಕ್ತ ಮಾಡುವವರೆಗೆ ಸನ್ನದ್ಧರಾಗುವ ಅಗತ್ಯವಿದೆ.
ಶಿವಸುಂದರ್ - ಲಂಕೇಶ ಬಳಗದ 'ಚಾವರ್ಾಕ್ ಅಂಕಣಕಾರರು'

No comments:

Post a Comment

Thanku