2010ರ ಘಟನಾವಳಿಗಳ ಮೇಲೆ ಒಂದು ನೋಟ ಹೊಸ ಶತಮಾನದ ಪ್ರಾರಂಭ ದಶಕದ ಕೊನೆ ವರ್ಷ ನೆರೆಹಾವಳಿ ಸಂತ್ರಸ್ತರ ನೋವಿನಂದ ಆರಂಭಗೊಂಡಿತು. ಮನೆ, ಫಸಲು, ಜಾನುವಾರು, ಸಂಪತ್ತನ್ನೇಲ್ಲ ಕಳೆದುಕೊಂಡ ರೈತರ ಬಾಳಿಗೆ ಇಡೀ ವರ್ಷ ನಡೆದ ರಾಜಕೀಯ ದೊಂಬರಾಟ ನಾಚಿಕೆಗೇಡಿನ ಸಂಗತಿ.ಮತದಾರ ಪ್ರಭುಗಳು ನರಾಶ್ರಿತರಾಗಿ ಅಕ್ಷರಶಃ ಬೀದಿಗೆ ಬಿದ್ದಾಗ ರಾಜಕೀಯ ಅಧಿಕಾರಕ್ಕಾಗಿ ನಮ್ಮ ಪ್ರಜಾಪ್ರತಿನಧಿಗಳು ರೆಸಾಟರ್್ ರಾಜಕೀಯದಲ್ಲಿ ವೈಮರೆತಿರುವುದು 2010ನೇ ವರ್ಷದ ಕಪ್ಪುಚುಕ್ಕೆ.ರಾಜಕೀಯವಾಗಿ ಅಧಿಕಾರವನ್ನು ಉಳಿಸಿಕೊಳ್ಳುವದಕ್ಕಾಗಿ ಪ್ರಜಾಪ್ರತಿನಧಿಗಳು ಹಗಲಿರುಳು ಶ್ರಮಿಸಿದರು. ಇಲ್ಲಿ ರಾಯಚೂರು ನಗರಾಸಭಾಧ್ಯಕ್ಷ ಎ.ಮಾರೆಪ್ಪ ರಾಜೀನಾಮೆ, ಅಲ್ಲಿ ಬಿಜೆಪಿ ಅಧ್ಯಕ್ಷರಾಗಿ ಮಂತ್ರಿಯಾಗಿದ್ದ ಈಶ್ವರಪ್ಪ ನೇಮಕ ಹಾಗೂ ರಾಯಚೂರು ಜಿಲ್ಲೆಯ ಜಿಲ್ಲಾ ಪಂಚಾಯತಿಯನ್ನು ಮೊಟ್ಟಮೊದಲ ಬಾರಿಗೆ ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡಿತು. ಅದರ ಮೊದಲ ಅಧ್ಯಕ್ಷೆ ಪದ್ಮಾವತಿ ಎಂ. ಈರಣ್ಣ. ರಾಯಚೂರು, ಸಿಂಧನೂರು, ಮಾನ್ವ ಕಡೆಗಳಲ್ಲಿ ಪುರಸಭೆಗಳಿಗೆ ಮಹಿಳೆಯರೇ ಅಧ್ಯಕ್ಷರಾಗುವದರ ಮೂಲಕ ಮಹಿಳಾ ಪ್ರಾತಿನಧ್ಯಕ್ಕೆ ಅವಕಾಶ ಸಿಕ್ಕಂತಾಗಿತ್ತು. ಕಾಂಗ್ರೇಸ್ ಪಕ್ಷದಲ್ಲಿಯೂ ಜಿ.ಪರಮೇಶ್ವರ ರಾಜ್ಯಧ್ಯಕ್ಷರಾಗುತ್ತಿದ್ದಂತೆ ರಾಯಚೂರಲ್ಲಿ ವಸಂತಕುಮಾರ ಜಿಲ್ಲಾಧ್ಯಕ್ಷರಾಗಿ ಮರುಆಯ್ಕೆಗೊಂಡರು.23ನೇ ಸೆಪ್ಟೆಂಬರ್ದಂದು ಸಚಿವ ಸಂಪುಟದಿಂದ ಅರವಿಂದ ಲಿಂಬಾವಳಿ, ಗೂಳಿಹಟ್ಟಿ ಶೇಖರ ಹಾಗೂ ನಮ್ಮ ಜಿಲ್ಲೆಯ ಮಂತ್ರಿ ಶಿವನಗೌಡರನ್ನು ಸಚಿವ ಸಂಪುಟದಿಂದ ಕೈಬಿಡಲಾಯಿತು. ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ರಾಜ್ಯದ ವಿಧಾನಸಭೆಯಲ್ಲಿ 2ಬಾರಿ ಬಹುಮತ ಸಾಭೀತುಪಡಿಸಿದ್ದು, ಸಂವಿಧಾನಾತ್ಮಕವಾಗಿ ಹೊಸ ದಾಖಲೆಯಾಗಿ ಉಳಿಯಿತು. ರಾಜಕೀಯ ಹಿನ್ನೆಲೆ ರಾಜ್ಯಪಾಲರದ್ದು ಕೂಡ ಅಷ್ಟೇ ಮಹತ್ವದ ಪಾತ್ರವಾಗಿತ್ತು.ನಮ್ಮ ಶಾಸಕರ ಸಮಾಜಸೇವೆ, ಭಕ್ತಿ, ಅನುಕರಣಿ ಎಂತಹದ್ದೇಂಬುದು ಬಹುಮತ ಸಾಭೀತುಪಡಿಸುವ ಸಂದರ್ಭದಲ್ಲಿ ಪ್ರತಿಯೊಬ್ಬ ಜನಸಾಮಾನ್ಯನಗೆ ತಿಳಿಯಿತು. ಸಚಿವ ಸ್ಥಾನದಿಂದ ನಮ್ಮನ್ನು ತೆಗೆದರೆ ವಿಷ ಕುಡಿಯುತ್ತೇವೆ ಎಂದು ಕೆಲವೊಬ್ಬರು ಶಾಸಕರು ವಿಧಾನಸಭೆಯಲ್ಲಿ ಅಂಗಿಗಳನ್ನು ಅರಿದುಕೊಂಡು ಪ್ರತಿಭಟಿಸುತ್ತಿದ್ದು ಕೆಲವೊಂದು ನಾಟಕಗಳ ದೃಶ್ಯಗಳಂತಿದ್ದವು.ನೆರೆ ಹಾವಳಿಯ ನರಾಶ್ರಿತರಿಗೆ ಸೂಕ್ತರೀತಿಯ ಪರಿಹಾರ ಕಲ್ಪಿಸಿಲ್ಲ ಎಂದು ಆರೋಪಿಸಿದ ವಿರೋಧ ಪಕ್ಷಗಳು, ಸಂಘಸಂಸ್ಥೆಗಳು ಕೊನೆಕೊನೆಗೆ ಎಲ್ಲವೂ ಮೊಸಳೆ ಕಣ್ಣೀರನ್ನು ಸುರಿಸದವೇ ವಿನಃ ನರಾಶ್ರಿತರ ಗೋಳನ್ನು ಯಾರು ಕೇಳಲಿಲ್ಲ. ನಾಟಕೀಯ ಬೆಳವಣಿಗೆಯಂತೆ ಬಿ.ಎಸ್ ಯಡಿಯೂರಪ್ಪನವರು ದೀಪಾವಳಿಯ ಹಬ್ಬದಂದು ನರಾಶ್ರಿತರ ಜೊತೆ ಕಂಡರು.ಸಾಂಸ್ಕೃತಿಕವಾಗಿ ರಾಯಚೂರು ಜಿಲ್ಲೆ ಹಲವಾರು ರೀತಿಯ ವಿಭಿನ್ನಶೈಲಿಯ ಕಾರ್ಯಕ್ರಮಗಳ ಮುಖಾಂತರ ಜನಮನ್ನಣಿಗೆ ಪಾತ್ರವಾಯಿತು. ವರ್ಷದ ಆರಂಭದಲ್ಲಿ ಹಂಪಿಯಲ್ಲಿ ಆಯೋಜಿಸಿದ್ದ ಶ್ರೀಕೃಷ್ಣದೇವರಾಯನ 500ನೇ ಪಟ್ಟಾಭಿಷೇಕ ಕಾರ್ಯಕ್ರಮದ ಪೂರಕವಾಗಿ ರಾಯಚೂರಲ್ಲಿ 2ದಿನಗಳ ಕಾಲ ಸುಂದರ ಕಾರ್ಯಕ್ರಮವನ್ನು ಹತ್ತು ಹಲವು ವಿಚಾರಗೋಷ್ಟಿಗಳೊಂದಿಗೆ ಆಚರಿಸಲಾಯಿತು. ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಅಂತರ್ರಾಜ್ಯಗಳ ಬುದ್ದೀಜೀವಿಗಳು, ಪ್ರಗತಿಪರರು ಪಾಲ್ಗೊಂಡು ಯಶಸ್ವಿಗೊಳಿಸಿದರು.ಜನೆವರಿ 10ಹಾಗೂ 11ರಂದು ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನ ಹಿರಿಯ ಕವಿ ಪ್ರಾದ್ಯಾಪಕ ಪಂಚಾಕ್ಷರಿ ಹೀರೆಮಠರ ಅಧ್ಯಕ್ಷತೆಯಲ್ಲಿ ಅರ್ಥಪೂರ್ಣವಾಗಿ ಜರುಗಿತು ಅದರಂತೆ ಕುಷ್ಟಗಿಯಲ್ಲಿ ಕಸಾಪ 4ನೇ ಸಮ್ಮೇಳನ ಮಕ್ಕಳ ಕವಿ ಶೇಖರಪ್ಪ ಹುಲಿಗೇರಿಯವರ ಅಧ್ಯಕ್ಷತೆಯಲ್ಲಿ ಜರುಗಿದ್ದು ವಿಶೇಷವಾಗಿತ್ತು.ಬಹುನರಿಕ್ಷಿತ ಪದ್ಮವಿಭೂಷಣ ಪ್ರಶಸ್ತಿಯನ್ನು 94ರ ಹಿರಿಯಜ್ಜ ಸಂಗೀತ ನಧಿ ಪುಟ್ಟರಾಜ್ ಗವಾಯಿಗಳಿಗೆ ನಡಲಾಯಿತು. ಜೊತೆಯಲ್ಲಿ ಗದಗಿನಲ್ಲಿ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಗೀತಾ ನಾಗಭೂಷಣರವರ ಅಧ್ಯಕ್ಷತೆಯಲ್ಲಿ ಜರುಗಿತು. ಮಾಚರ್್ ತಿಂಗಳ ಮೊದಲ ವಾರದಲ್ಲಿ ಸವರ್ೋಚ್ಛ ನ್ಯಾಯಾಲಯದ ನವೃತ್ತ ನ್ಯಾಯಮೂತರ್ಿ ಜಸ್ಟಿಸ್ ಎಂ.ಶಿವರಾಜ ಪಾಟೀಲ್ರವರ ಅಧ್ಯಕ್ಷತೆಯಲ್ಲಿ ದೇವದುರ್ಗದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಯಿತು. ಜಿಲ್ಲೆಯ ಖ್ಯಾತ ಅನುವಾದಕ ರಾಮಣ್ಣ ಆರ್.ಹೆಚ್.ಜೆರವರನ್ನು ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಕನರ್ಾಟಕ ಘಟಕದ ರಾಜ್ಯಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.ಲಲಿತಕಲಾ ಅಕಾಡೆಮಿ, ರಾಜ್ಯ ನಾಟಕ ಅಕಾಡೆಮಿ, ಸಂಗೀತ ನೃತ್ಯ ಅಕಾಡೆಮಿಗಳು ರಾಯಚೂರಲ್ಲಿ ಅದ್ಬುತ ಕಾರ್ಯಕ್ರಮಗಳನ್ನು ಆಯೋಜಿಸಿಕೊಟ್ಟವು. ಅದರಲ್ಲಿ ಮುನ್ನೂರು ಕಾಪು ಸಮಾಜವು ಈ ಬಾರಿ ತನ್ನ ದಶಮಾನೋತ್ಸವದ ಸವಿನೆನಪಿಗಾಗಿ ಮುನ್ನುರು ಮುಂಗಾರು ಪುಸ್ತಕವನ್ನು ಬಿಡುಗಡೆಗೊಳಿಸಿ ಮುನ್ನೂರು ಸಮಾಜದ ಸಾಂಸ್ಕೃತಿಕ ಅಂಶಗಳನ್ನು ಪರಿಚಯಿಸಿತು.ಮೊಟ್ಟಮೊದಲ ಬಾರಿಗೆ ರಾಯಚೂರಿನಲ್ಲಿ ಜಿಲ್ಲಾಡಳಿತ, ಜಿ.ಪಂ ಹಾಗೂ ಸಾರ್ವಜನಕ ಶಿಕ್ಷಣ ಇಲಾಖೆಯೂ ರಾಜ್ಯಮಟ್ಟದ ಉತ್ತಮ ಶಿಕ್ಷಕರಿಗೆ ನಡುವ ಪ್ರಶಸ್ತಿಯನ್ನು ಇಲ್ಲಿಯೇ ಪ್ರದಾನ ಮಾಡಿದವು. ಅಂತದೊಂದು ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.ಯುವಜನತೆಯ ಸಾಧನೆಯ ದೃಷ್ಟಿಯಿಂದ 2010 ಹೆಚ್ಚಿನ ಭರವಸೆ ನಡಿತು. ಬಿ.ಆರ್.ಬಿ ವಾಣಿಜ್ಯ ಮಹಾವಿದ್ಯಾಲಯದ ವಿಧ್ಯಾಥರ್ಿ ಜೈಭೀಮ ನವದೆಹಲಿಯ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಿದರು.ರಾಜ್ಯದಲ್ಲಿ ಅಕ್ಟೋಬರ್ 6ರಂದು ಭಿನ್ನಮತೀಯರ ಹೊಸ ಇನ್ನಂಗ್ಸ್ ಆರಂಭಗೊಂಡ ರಾಜಕೀಯ ಅಸ್ಥಿರತೆ ವರ್ಷದ ಕೊನೆಯವರೆಗೂ ಮುಂದುವರೆಯಿತು. (ಈಗಲೂ ಚಾಲ್ತಿಯಲ್ಲಿದೆ) ಇಡೀ ವರ್ಷ ಭಿನ್ನಮತೀಯರ ಕಾಟ ಎದುರಿಸಿದ ಮುಖ್ಯಮಂತ್ರಿ ಅಭಿವೃದ್ಧಿಯ ಕಡೆ ಗಮನವೇ ಹರಿಸಲಿಲ್ಲ. ಶಿಸ್ತು, ಸಂಯಮ, ಉತ್ತಮ ನಡತೆ ಹಾಗೂ ಸಂಸ್ಕೃತಿಗೆ ಹೆಸರಾದ ರಾಜ್ಯದ ವಿಧಾನಸಭೆ ಕುಸ್ತಿಕಣವಾಗಿ ಪರಿವರ್ತನೆಗೊಂಡದ್ದು ದುರಂತವೇ ಸರಿ. ಪಕ್ಷ ರಾಜಕೀಯ ಜೂಜಾಟದಲ್ಲಿ ಅಭಿವೃದ್ಧಿ ಎಂಬುವದನ್ನು ಸಕಲ ಪಕ್ಷಗಳು ಮರೆತು ಒಬ್ಬರ ಮೇಲೆ ಮತ್ತೊಬ್ಬರು ಕೆಸರೆರಚಿ ಇಡೀ ವರ್ಷವನ್ನೇ ಅನಾಯಾಸವಾಗಿ ಕಳೆದರು.ಇದೇ ಮೊದಲ ಬಾರಿಗೆ ವಾಲ್ಮೀಕಿ ಜಯಂತಿ, ಕನಕ ಜಯಂತಿಗಳಿಗೆ ಸಕರ್ಾರಿ ರಜೆ ಹಾಗೂ ಜಯಂತಿಗಳನ್ನು ಜಿಲ್ಲಾಡಳಿತಗಳು ಬಲು ವಿಜೃಂಭಣಿಯಿಂದ ಆಚರಿಸಿದ್ದು ಸಂತಸ ತಂದರೆ, ಅಲಹಬಾದ್ ಕೋಟರ್್ ನಡಿದ ತೀಪರ್ು ಜಿಲ್ಲೆಯ ಜನತೆಗೆ ಬೇವು-ಬೆಲ್ಲವನ್ನು ಉಣಿಸಿದಂತಾಯಿತು.10ನೇ ಎಪ್ರೀಲ್ರಂದು ರಾಯಚೂರು ಲೋಕಸಭಾ ಕ್ಷೇತ್ರದಿಂದ ಮುಕ್ತಿಗೊಂಡು ಯಾದಗಿರಿ ನೂತನ ಜಿಲ್ಲೆಯಾಗಿ ರೂಪಗೊಂಡಿತು. ಸಿಂಧನೂರಿನ ಹಿರಿಯ ರಂಗಕಲಾವಿದ ಹುಸೇನಪ್ಪನವರಿಗೆ ಕನರ್ಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿತು. ಕ್ರಮೇಣ 30ನೇ ಎಪ್ರೀಲ್ 2010ರಂದು ಲಿಂಗಸ್ಗೂರಿನ ಆಮದಿಹಾಳ ಗ್ರಾಮದ ಡಾ.ಬಿ.ವಿ ಪಾಟೀಲ್ ರಾಯಚೂರು ಕೃಷಿ ವಿಶ್ವವಿಧ್ಯಾಲಯ ಪ್ರಪ್ರಥಮ ಉಪಕುಲಪತಿಯಾಗಿ ನೇಮಕಗೊಂಡರು. ಲಿಂಗಸ್ಗೂರು ವಿ.ಸಿ.ಬಿ ಕಾಲೇಜಿನ ಪ್ರಾಚಾರ್ಯ ಸಿ.ಶರಣಪ್ಪ ಹಾಗೂ ರಾಯಚೂರು ನಂದಿನ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಡಾ.ಡಿ.ಹೆಚ್ ಜಗದೀಶ ಕಲ್ಬುಗರ್ಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡರು. ಮಾನವಿ ತಾಲೂಕಿನ ನವಲಕಲ್ನ ಖ್ಯಾತ ಕಥೆಗಾರ ಮಹಾಂತೇಶ ನವಲಕಲ್ರವರಿಗೆ ಕಥಾಕ್ಷೇತ್ರದ ಸಾಧನೆಗಾಗಿ ಸೇಡಂನ ಅಮ್ಮ ಪ್ರಶಸ್ತಿಯನ್ನು ನಡಿ ಗೌರವಿಸಲಾಯಿತು.21 ಎಪ್ರೀಲ್ದಂದು ನಧನರಾದ ಪ್ರಾದ್ಯಾಪಕ ರಾಮಲಿಂಗಪ್ಪ ಕಲ್ಲೂರು ತಮ್ಮ ದೇಹವನ್ನು ರಾಯಚೂರಿನ ರಿಮ್ಸ್ ಕಾಲೇಜಿಗೆ ದೇಹದಾನ ಮಾಡಿದ್ದು ಪರೋಪಕಾರ ಮನೋಭಾವನೆಗೆ ಸಂದ ಗೌರವವಾಗಿದೆ. 22ನೇ ಜೂನ್ದಂದು ವಿವಿಧ ಸಂಘಟನೆಗಳ ಆಶ್ರಯದಲ್ಲಿ ದಲಿತ ಕವಿ ಸಿದ್ದಲಿಂಗಯ್ಯನವರ ಊರು ಕೇರಿ ನಾಟಕ ಪ್ರದರ್ಶನಗೊಂಡಿತು.ಪ್ರಸ್ತುತ ರಾಜ್ಯ ಸಕರ್ಾರ ರಾಯಚೂರು ಜಿಲ್ಲೆಯ ಸವರ್ಾಂಗೀಣ ಅಭಿವೃದ್ಧಿಗಾಗಿ ಮೂವರು ಉ(ಸುಮ್ಮನೆ)ಸ್ತುವಾರಿ ಸಚಿವರನ್ನು ದಯಪಾಲಿಸಿತು. ಲೋಕೋಪಯೋಗಿ ಸಚಿವ ಸಿ.ಎಂ ಉದಾಸಿ ಆರಂಭಿಕ ಬ್ಯಾಟ್ಸ್ಮನ್ ಆದರೆ, 2ನೇ ಆಟಗಾರ ಆನಂದ ಅಸ್ನೋಟಿಕರ್ 2ನೇ ಆಟಗಾರರಾಗಿ ವಿಕೆಟ್ ಕೈಚೆಲ್ಲಿ ಕುಳಿತರು.3ನೇ ಆಟಗಾರರಾದ ಶ್ರೀರಾಮುಲು ನೇರವಾಗಿ ಪಂಚಾಯತ್ ಚುನಾವಣಿಗಳಿಗೆ ಎಂಟ್ರಿಕೊಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರ ಪಾತ್ರ ಹೇಗಿರುತ್ತದೆ ಎಂಬುದನ್ನು ಜಿಲ್ಲೆಯ ಜನತೆ ಕಾತುರದಿಂದ ಎದುರು ನೋಡುತ್ತಿದ್ದಾರೆ.ಯಾರು ಏನೇ ಹೇಳಿದರೂ ರಾಯಚೂರು ಜಿಲ್ಲೆಯ ಪಾಲಿಗೆ 2010 ನಿರಾಶದಾಯಕ. ರೈಲ್ವೇ ಸಚಿವ ಮುನಯಪ್ಪನವರು 13ನೇ ಜನೆವರಿಯಂದು ಮುನರಾಬಾದ್, ಮಹಿಬೂಬನಗರ ರೈಲ್ವೆ ಕಾಮಗಾರಿಗಳು ಶೀಘ್ರದಲ್ಲಿ ಪೂರ್ಣಗೊಳ್ಳಲಿವೆ ಎಂದಿದ್ದರು. ಇದು ಇಂದಿಗೂ ಪೂರ್ಣಗೊಂಡಿಲ್ಲ. ಇದನ್ನು ಕಳೆದ 50ವರ್ಷಗಳಿಂದ ನಾವೆಲ್ಲರೂ ಕೇಳುತ್ತಿದ್ದೇವೆ.ಹೈದರಬಾದ್ ಕನರ್ಾಟಕದ ಸವರ್ಾಂಗೀಣ ಅಭಿವೃದ್ಧಿಗೆ ಸಂವಿಧಾನದ 371ನೇ ತಿದ್ದುಪಡಿಯನ್ನು ತರಲು ಹೋರಾಟ ಮಾಡಬೇಕಾಗಿದೆ. ಅದಕ್ಕಾಗಿ ಕೇಂದ್ರಕ್ಕೆ ನಯೋಗವೊಂದನ್ನು ಕೊಂಡೊಯ್ಯಬೇಕೆಂದು ಹಲವಾರು ರಾಜಕಾರಣಿಗಳು ಪದೇಪದೇ ಹೇಳುತ್ತಿದ್ದಾರೆ. ಇದೊಂದು ಗಾಯದ ಬರೆ ಎಳೆಯುವ ತಂತ್ರವಾಗಿ ಹೋಗಿದೆ.ಕೇಂದ್ರಸಕರ್ಾರದ ರೈಲ್ವೆ ಸಚಿವೆ ಮಮತಾ ಬ್ಯಾನಜರ್ಿಯವರು ಪೆಬ್ರುವರಿ 28ರಂದು ಮಂಡಿಸಿದ ರೈಲ್ವೆ ಬಜೆಟಿನಲ್ಲಿ ರಾಯಚೂರಿಗೆ ಬಂದ ಪಾಲು ಲೆಕ್ಕಕ್ಕಿಲ್ಲ. ಈ ಬಜೆಟ್ಂತೂ ರಾಯಚೂರು ಜಿಲ್ಲೆಯ ಪಾಲಿಗೆ ನರಾಶಕದಾಯವಾಗಿದೆ. ರಾಯಚೂರು ಜಿಲ್ಲೆಯಾಧ್ಯಂತ ಸುದ್ದಿ ಮಾಡಿದ್ದ ಅತಿಕ್ರಮಣ ಆಪರೇಷನ್ ಯೋಜನೆಯ ಆರಂಭಿಕ ಆವೇಶ ಕ್ರಮೇಣ ಕಡಿಮೆಯಾಗತೊಡಗಿತು. ಅದರಂತೆ ರಾಜ್ಯಸಕರ್ಾರವು ರಾಯಚೂರು ಜಿಲ್ಲೆಗೆ ತನ್ನ ಬಜೆಟ್ನಲ್ಲಿ ನೀರಿಕ್ಷಿತ ಪ್ರಮಾಣವನ್ನು ಹಂಚದಿರುವುದು ಎಲ್ಲರಲ್ಲಿ ನರಾಶೆಯನ್ನು ಮೂಡಿಸಿತು.ಸಂತಸ, ನೋವು, ನಲಿವು, ನರಾಶೆಗಳ ಮಧ್ಯೆ ರಾಯಚೂರು ಜಿಲ್ಲೆಯ ಮಸ್ಕಿಯ ಹಿರಿಯ ಶಿಕ್ಷಕ 86ರ ಅಮರಯ್ಯ ಸಾಲಿಮಠ ಜನೆವರಿ 5ರಂದು ನಧನಹೊಂದಿದರು. 17ನೇ ಜನೆವರಿ 2010ರಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಜ್ಯೋತಿಬಸು ಸಾವು ಎಂಡಪಂಥೀಯ ಸಂಘಟನೆ, ದೇಶದ ದುಡಿಯುವ ವರ್ಗಕ್ಕೆ ಅತೀವ ನೋವನ್ನು ತಂದೊಡ್ಡಿತು. ಮೊನ್ನೆ ಇನ್ನೋರ್ವ ಕೇರಳದ ಮಾಜಿ ಮುಖ್ಯಮಂತ್ರಿ ಕರುಣಕಾರನ್ ಸಾವು ಕೂಡ ಎಲ್ಲರನ್ನು ಮತ್ತಷ್ಟು ನೋವಿಗೆ ದೂಡಿದೆ.ಅಂತರಾಷ್ಟ್ರೀಯ ಕ್ರೀಡಾಪಟು, ಹಿರಿಯ ರಾಜಕೀಯ ನಾಯಕ ಗುಲ್ದಾಸ್ ತಿಮ್ಮಾರೆಡ್ಡಿ15 ಮೇದಂದು ನಧನ ಹೊಂದಿದರೆ, ಹಟ್ಟಿಯಲ್ಲಿ ವಿಧಿಯ ಆಟಕ್ಕೆ ಎಳೆಕಂದಮ್ಮಗಳಾದ ಪ್ರಜ್ವಲ್ ಹಾಗೂ ಗೌತಮ್ ಈ ಲೋಕವನ್ನೇ ತ್ಯಜಿಸಿದವು.ಇನ್ನು ರಾಯಚೂರಿನ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿ, ಜಿಲ್ಲೆಯ ಪ್ರಗತಿಪರ ಹೋರಾಟಗಾರೆನಸಿಕೊಂಡಿದ್ದ ಶಿವಪುತ್ರ ಭೇರಿಯವರು ಕೂಡ ತಮ್ಮ ಅಪಾರ ಬಳಗವನ್ನು ಬಿಟ್ಟು ಜೂನ್8ರಂದು ಇಹಲೋಕ ತ್ಯಜಿಸಿದರು. ಅದರಂತೆ ಮಾಜಿಸಚಿವ ಎಂ.ಎಸ್ ಪಾಟೀಲ್ರ ಪತ್ನಿ ಗುರುದೇವಿ ಎಂ.ಎಸ್ ಪಾಟೀಲ್ ಜೂನ್8ರಂದು ನಧನ ಹೊಂದಿದರೆ, ಇನ್ನೋರ್ವ ರಾಯಚೂರಿನ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ರಾಜಕೀಯ ದುರೀಣ ಎಂ.ಈರಣ್ಣನವರು 24ನೇ ನವೆಂಬರ್ದಂದು ವಿಧಿವಶರಾದರು.2011ರ ಆಗಮನ ಪಂಚಾಯತಿ ಚುನಾವಣಿಗಳ ಫಲಿತಾಂಶದೊಂದಿಗೆ ಆರಂಭವಾಗಲಿದೆ. 2010ರ ರಾಜಕೀಯ ದೊಂಬರಾಟ 2011ರಲ್ಲಿ ಮುಂದುವರೆಯದಿರಲಿ ಎಂಬುದೇ ನಮ್ಮಯ ಆಶಯ.ಅಯ್ಯಪ್ಪ ತುಕ್ಕಾಯಿ
No comments:
Post a Comment
Thanku