Wednesday, January 5, 2011



ಯೋಗವೆಂಬುದು ಶ್ರೀಕೃಷ್ಣನು ಅಜರ್ುನನಿಗೆ ಗೀತೋಪದೇಶದಲ್ಲಿ ಭೋದನೆ ಮಾಡಿದರು. ನಂತರ ಅದೇ ಯೋಗದ ಮೇಲೆ ಪತಂಜಲಿ ಮಹಷರ್ಿಗಳು ಸಾಕಷ್ಟು ಸಂಶೋಧನೆಗಳನ್ನು ನಡೆಸಿ ಜಗತ್ತಿಗೆ ಪರಿಚಯಿಸಿದರು.ಆದರೆ, ಇಂದು ಅದೇ ಯೋಗವನ್ನು ಬಾಬಾ ರಾಮದೇವರವರು ಪ್ರತಿಯೊಬ್ಬರಿಗೂ ಆಸ್ಥಾ ಎಂಬ ಖಾಸಗಿ ವಾಹಿನಿಯ ಮುಖಾಂತರ ಪ್ರತಿಯೊಬ್ಬರ ಮನೆಮನೆಗೆ ಮುಟ್ಟಿಸುತ್ತಿದ್ದಾರೆ.ನಮ್ಮ ದೇಹದಲ್ಲಿ ಅಷ್ಟ ಚಕ್ರಗಳಿರುತ್ತವೆ1)ಮೂಲಧಾರ 2) ಸ್ವಾದಿಷ್ಟಾನ 3) ಮಣಿಪುರ 4) ಅನಾಹಟ್ 5) ಹೃದಯ 6) ವಿಶುದ್ಧಿ 7) ಆಜ್ಞಾ 8) ಸಹಸ್ರಾರ)ಮನುಷ್ಯ ಪ್ರತಿನಿತ್ಯ ಯೋಗವನ್ನು ಮಾಡುವದರಿಂದ ಈ ಅಷ್ಟಚಕ್ರಗಳು ಪ್ರಚೋದನೆಗೊಂಡು ದೇಹದ ಅಂಗಾಂಗಳ ವ್ಯೂಹಗಳು ಸರಿಯಾಗಿ ಕಾರ್ಯನಿರ್ವಹಿಸಿ ನಮ್ಮ ಆರೋಗ್ಯವನ್ನು ಕಾಪಾಡುತ್ತವೆ. ಮಾನವನಿಗೆ ಯಾವುದೇ ರೀತಿಯ ದೈಹಿಕ, ಮಾನಸಿಕ ತೊಂದರೆಗಳು ಬರುವುದಿಲ್ಲ. ಆತನ ಆರೋಗ್ಯ ದಿನೇ ದಿನೇ ವೃದ್ಧಿಸತೊಡಗುತ್ತದೆ. ಇದಕ್ಕಾಗಿ ಪ್ರಪಂಚದ ನಾನಾ ಕಡೆ ಸಂಶೋಧನೆ ನಡೆದು ಪುರಾವೆಗಳು ಒದಗಿವೆ.ನಮ್ಮ ದೇಶದಲ್ಲಿ ಹೆಚ್ಚು ಜನರು ಹೃದ್ರೋಗ, ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿದ್ದಾರೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯು ಈ ಮೇಲಿನ 3ರೋಗಗಳನ್ನು ಸುಲಭವಾಗಿ ನಿಯಂತ್ರಿಸಬಹುದೆಂದು ಹೇಳಿದೆ. ಅಂದರೆ, ಈ ಕಾಯಿಲೆಗಳನ್ನು ನಿಯಂತ್ರಿಸುವಲ್ಲಿಯೇ ನಾವೆಲ್ಲ ಹಿಂದೆ ಬಿದ್ದಿವೆ. ಇನ್ನು ಭಯಾನಕ ಕಾಯಿಲೆಗಳನ್ನು ತಡೆಯಲು ನಾವೇಷ್ಟು ಸಮರ್ಥರಿದ್ದೀವಿ.?ದೇಶದಲ್ಲಿ ಬಾಬಾ ರಾಮದೇವರವರ ಭಾರತ ಸ್ವಾಭಿಮಾನ ಟ್ರಸ್ಟ್ನ್ನು ಹೊರತುಪಡಿಸಿದರೆ, ಇನ್ನುಳಿದ ಯಾವುದೇ ರಾಜಕೀಯ ಪಕ್ಷ, ಸಂಘಟನೆಗಳು ಮಧುಮೇಹ, ರಕ್ತದೊತ್ತಡ, ಹೃದ್ರೋಗದಂತಹ ಸಾಮಾನ್ಯ ರೋಗದಿಂದ ಭಾರತವನ್ನು ಮುಕ್ತಗೊಳಿಸಲು ಸಾಧ್ಯವಾಗಿಲ್ಲ. ಜೊತೆಯಲ್ಲಿ ಈ 3ರೋಗಗಳನ್ನು ತೊಲಗಿಸಲು ಇಲ್ಲಿಯವರೆಗೆ ಯಾವೊಂದು ರಾಷ್ಟ್ರೀಯ ಕಾರ್ಯಕ್ರಮಗಳನ್ನು ಘೋಷಿಸಿಲ್ಲ! (ಈ ದೇಶದ ಪ್ರದಾನಿಯವರಾದ ಡಾ.ಮನಮೋಹನ್ಸಿಂಗ್ರೇ ಖುದ್ದಾಗಿ ಮಧುಮೇಹ ಮತ್ತು ಹೃದ್ರೋಗದಿಂದ ಬಳಲುತ್ತಿದ್ದಾರೆಂದರೆ ಏನರ್ಥ? ಈಗಾಗಲೇ ಅವರೇ 2ಬಾರಿ ಹೃದಯ ಚಿಕಿತ್ಸೆಗೆ ಒಳಗಾಗಿದ್ದಾರೆ.)2005ರ ಫೆಬ್ರುವರಿ 11,12,13ರಂದು ಚನೈನಲ್ಲಿ ವಿಶ್ವಮಧುಮೇಹ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಅಂದಿನ ಆರೋಗ್ಯ ಮಂತ್ರಿಗಳಾದ ಅನ್ಬುಮಣಿ ರಾಮದಾಸ್ರವರು ಆ ಸಮ್ಮೇಳನದಲ್ಲಿ ಈ ರೀತಿ ಘೋಷಣಿಯನ್ನು ಮಾಡಿದ್ದರು : ಇನ್ನು ಕೇವಲ 3ತಿಂಗಳಲ್ಲಿ ರಾಷ್ಟ್ರೀಯ ಮಧುಮೇಹ ನಿಯಂತ್ರಣ ಕಾರ್ಯಕ್ರಮವನ್ನು ದೇಶದೆಲ್ಲೆಡೆ ಆಯೋಜಿಸಿ ಸಂಪೂರ್ಣವಾಗಿ ಮಧುಮೇಹವನ್ನು ನಿಯಂತ್ರಿಸುತ್ತೇವೆಂದು ಘೋಷಿಸಿದ್ದರು.ಆ ಘೋಷಣಿ ಇಂದಿಗೂ ಜಾರಿಗೆ ಬರದೇ ಘೋಷಣಿಯಾಗಿಯೇ ಉಳಿದಿದೆ. ದಿನೇ ದಿನೇ ಮಧುಮೇಹಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆಯೇ ವಿನಃ ಇಳಿಕೆಯಂತೂ ಕಾಣುತ್ತಿಲ್ಲ.ಆದರೆ, ಇಂದು ಬಾಬಾ ರಾಮದೇವನಂತವರು ಭಾರತವನ್ನು ರೋಗಮುಕ್ತ, ಪೂರ್ಣ ಸ್ವಾತಂತ್ರ್ಯ ಹಾಗೂ ಭ್ರಷ್ಟಾಚಾರದಿಂದ ಮುಕ್ತಮಾಡಲು ಯೋಗವೆಂದೇ ಸುಲಭ ದಾರಿ ಎಂದು ಘೋಷಿಸಿದ್ದಾರೆ.ಭಾರತ ದೇಶದಲ್ಲಿ ಎಲ್ಲರೂ ಟಿವಿಯನ್ನು ನೋಡುತ್ತಾರೆ. ಮನೋರಂಜನೆಗಾಗಿ ಹಾಡು, ಸಿನಿಮಾಗಳನ್ನೇ ನೋಡುವ ಜನರು ಯೋಗದಂತಹ ಕಾರ್ಯಕ್ರಮಗಳನ್ನು ವೀಕ್ಷಿಸಿರಿ. ಅದರಲ್ಲಿ ಹೇಳುವಂತೆ ಎಲ್ಲರೂ ಯೋಗವನ್ನು ಕಲಿತರೆ ಇಡೀ ಸಮಾಜಕ್ಕೆ ಒಳಿತಾಗುತ್ತದೆ. ಅಮೇರಿಕಾದಂತಹ ದೇಶಗಳಲ್ಲಿ ಯೋಗವು ಒಣಟಣ ಟಟಟಠಟಿ ಆಠಟಟಠಡಿ ಃಣಟಿಜ ಆಗಿದೆ. ಮತ್ತು ತಿಠ ಠತಿಟಿ ಥಿಠರಚಿ ಅನ್ನುವ ಚಚರ್ೆ ನಡೆದಿದೆ. ಎಲ್ಲದರಲ್ಲಿಯೂ ಭಾರತವನ್ನು ಹಿಯ್ಯಾಳಿಸುವ ಅಮೇರಿಕಾವೇ ಭಾರತದ ಯೋಗವನ್ನು ಒಪ್ಪಿಕೊಂಡಿದೆ. ಯೋಗವನ್ನು ಶಾಲಾಮಕ್ಕಳ ಶಿಕ್ಷಣದಲ್ಲಿ ಅಳವಡಿಸಿದರೆ ಒಳ್ಳೆಯದು. ಪ್ರಾಥಮಿಕ ಹಂತದಲ್ಲಿಯೇ ಮಕ್ಕಳು ಯೋಗವನ್ನು ಕಲಿತಂತಾಗುತ್ತದೆ.ಕಾರಣ ಎಲ್ಲರೂ ದಿನನಿತ್ಯ ಯೋಗವನ್ನು ಮಾಡುವದರೊಂದಿಗೆ ಉತ್ತಮ ದೈನಂದಿನ ಜೀವನವನ್ನು ಸಾಗಿಸಿ ಎಂಬುದೇ ನಮ್ಮಯ ಅಭಿಲಾಷೆ.
ಯೋಗವನ್ನು ದಿನಿತ್ಯ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವದರಿಂದ ಆಗುವ ಅನೇಕ ಲಾಭಗಳು.1) ಮನಸ್ಸಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಬಹುದು.2) ನೆನಪಿನ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು.3) ಮನುಷ್ಯ ದುಶ್ಚಟಗಳಿಂದ ದೂರವಾಗಬಹುದು. ಪ್ರಮುಖವಾಗಿ ಯೋಗ ಮಾಡುವ ಮನುಷ್ಯ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ.4) ರಕ್ತದೊತ್ತಡ, ಮಧುಮೇಹ, ಹೃದ್ರೋಗ ನಿಮರ್ೂಲನೆ ಸಾಧ್ಯ.5) ದೇಹದ ಯಾವುದೇ ಭಾಗದಲ್ಲಿ ಗಡ್ಡೆಗಳಿದ್ದರೆ ಅವುಗಳು ನಿವಾರಣಿಯಾಗಿ, ಮೂಳೆ, ಮಾಂಸಖಂಡಗಳು ಶಕ್ತಿಯುತವಾಗುತ್ತವೆ.6) ಶ್ವಾಸಕೋಶ, ನಾಳ ಮತ್ತು ನಿನರ್ಾಳ ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸುವವು.7) ದೃಷ್ಟಿಯು ತೀಕ್ಷ್ಣವಾಗುವುದು ಮತ್ತು ನಿದ್ರಾಹೀನೆತೆಯೂ ದೂರವಾಗುವುದು.8) ವಿಶೇಷವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಡಾ.ರವೀಂದ್ರನಾಥ ಈರಪ್ಪ ಮಾವಿನಕಟ್ಟಿ.

No comments:

Post a Comment

Thanku