ಸ್ವಾತಂತ್ರ್ಯ ಪೂರ್ವದ ಹೋರಾಟಗಾರ, ಕವಿ ಮುಖ್ದೂಂ ಮೊಹಿನುದ್ದೀನ್. ಅಂದು 1908ರ ವರ್ಷ ಭಾರತ ಕಾಮರ್ಿಕ ವರ್ಗದ ಒಂದು ಐತಿಹಾಸಿಕ ಚಳವಳಿಯ ಫ್ರಧಾನ ಘಟ್ಟ. ಇದೇ ವರ್ಷದಲ್ಲಿ ಬ್ರಿಟಿಷರು ಶ್ರೀ ಲೋಕಮಾನ ತಿಲಕರ ನಿರ್ಭಂದಿಸಿದ ಪರಿಣಾಮವಾಗಿ ಬಾಂಬೆ ಕಾಮರ್ಿಕರು ಬೀದಿಗಿಳಿದು, ತಮ್ಮ ವರ್ಗ ಶಕ್ತಿ ಪ್ರದಶರ್ಿಸಿ,ಚರಿತ್ರೆಯನ್ನು ನಿಮರ್ಿಸಿದರು. ರಷ್ಯಾದ ವಿ.ಐ ಲೆನಿನ್ ಅವರು ಭಾರತದ ಕಾಮರ್ಿಕ ವರ್ಗಕ್ಕೆ ತಮ್ಮ ಕ್ರಾಂತಿಕಾರಿ ಸಂದೇಶಗಳನ್ನು ಕಳುಹಿಸಲಾಗಿತ್ತು. ಅದೇ ವರ್ಷ ಪೆಬ್ರುವರಿ 04 ರಂದು ತೆಲಂಗಾಣ ಪ್ರಾಂತ್ಯದ ಮೆದಕ್ ಜಿಲ್ಲೆಯ ಒಂದು ಕುಗ್ರಾಮದಲ್ಲಿ ಮಖ್ದೂಂ ಜನಿಸಿದರು.ಮಖ್ದೂಂ ಇಂದು ಇಲ್ಲಾ, ಆದರೆ ಅವರ ಕ್ರಾಂತಿಕಾರಿ ಕಾರ್ಯಕಲಾಪಗಳು, ಸಾಹಿತ್ಯ ಕೃಷಿ ಸಾದನೆ,ಅವರ ಮಧುರ ಸ್ಮೃತಿಗಳೂ ಮಾತ್ರ ಇಂದಿಗೂ ನಿತ್ಯ ವಸಂತನೀಯವಾಗಿ ನಿಂತಿವೆ.ಜಾತಸೃಹಿ ಧೈವೋಮೃತ್ಯು ಅನ್ನೋ ಸೂತ್ರ ಇಂತಹ ವ್ಯಕ್ತಿಗಳಿಗೆ ಸೂಕ್ತವಲ್ಲದ್ದು. ಬದಲಿಗೆ ಇಂತಹ ವ್ಯಕ್ತಿಗಳಿಗೆ ಜನನವೇ ಹೊರತು ಮರಣವಿಲ್ಲ ತಮ್ಮ ಕೃತಿಗಳ ದ್ವಾರ ಇಂದಿಗೂ ಸಮಾಜದಲ್ಲಿ ಇವರು ಚೀರಂಜೀವಿ.ಒಬ್ಬ ಪ್ರಮುಖ ನಾಯಕ ಶಾಶ್ವತವಾಗಿ ನಮ್ಮನ್ನಗಲಿ ಹೋದ ಒಬ್ಬ ಪ್ರೇಮಿಸುವ ತಂದೆ ಆದರ್ಶನೀಯ ಆಚಾರ್ಯ ತನ್ನ ಅಭಿಮಾನಿಗಳೆಲ್ಲರನ್ನು ದುಃಖ ಸಾಗರದಲ್ಲಿ ಮುಳುಗಿಸಿದ. ಇದು 1969 ಆಗಸ್ಟ್ 25 ರಂದು ಮಖ್ದೂಂ ರ ಮರಣದ ವಿಷಾದ ಸುದ್ದಿ ಕೇಳಿದ ಪ್ರಜೆಗಳು ವ್ಯಕ್ತಪಡಿಸಿದ ಮನೋಬಾವನೆಗಳು. ಇಷ್ಟಕ್ಕೂ ಈ ಮಖ್ದೂಂ ಯಾರು...?ಖ್ಯಾತ ಫಿರ್ಮೋದ್ಯಮಿ ಹಾಗೂ ಉದರ್ು ಲೇಖಕ ಖ್ವಾಜ ಅಹಮದ್ ಅಬ್ಬಾಸರು ಮಖ್ದೂಂ ಮೋಹಿಯುದ್ದೀನ್ರ ಬಗ್ಗೆ ಈ ಸಾಲುಗಳು......
ಒಚಿಞಜಠಠಟ ತಿಚಿ ಚಿ ರಟಠತಿಟಿರ ಜಿಟಚಿಟಜ ಚಿ ತಿಠ ಣಜ ಛಿಠಠಟ ಜಡಿಠಠಿ ಠಜಿ ಜಜತಿ. ಊಜ ತಿಚಿ ಣಜ ಛಿಚಿಟಟ ಠಜಿ ಡಿಜತಠಟಣಣಠಟಿ ಚಿ ತಿಠ ಣಜ ಣಟಿಞಟಟಿರ ಟಣಛಿ ಠಜಿ ಣಜ ಠಿಚಿಥಿಚಿಟ. ಊಜ ತಿಚಿ ಞಟಿಠತಿಟಜಜರಜ, ಜ ತಿಚಿ ತಿಜಠಟ, ಜ ತಿಚಿ ಚಿಛಿಣಠಟಿ, ಜ ತಿಚಿ ಣಜ ರಣಟಿ ಠಜಿ ಡಿಜತಠಟಣಣಠಟಿಚಿಡಿಥಿ ರಣಜಡಿಟಟಚಿ ಚಿಟಿಜ ಣಜ ಣಚಿಡಿ ಠಜಿ ಟಣಛಿಚಿಟಿ.ಊಜ ತಿಚಿ ಠಜಠಣಡಿ ಠಜಿ ಣಜ ರಣಟಿ ಠಿಠತಿಜಜಡಿ ಚಿಟಿಜ ತಿಠ ಣಜ ಜಿಡಿಚಿರಚಿಟಿಛಿಜ ಠಜಿ ರಿಚಿಟಟಿಜ.
ಮಖ್ದೂಂ ಉರಿಯುವ ಕೊಳ್ಳಿಯಾಗಿದ್ದರು, ಮಂಜಿನ ಹನಿಯಾಗಿದ್ದರು, ಕ್ರಾಂತಿಯ ಕರೆಯೂ ಆಗಿದ್ದರು, ಒಂದೆಡೆ ಕ್ರಾಂತಿಕಾರಿಗಳ ಕೋವಿಯಾದರೆ ಇನ್ನೊಂದೆಡೆ ಸಂಗೀತಗಾರನ ಕೈಯ ವಾದ್ಯವಾಗಿದ್ದರು ; ಮದ್ದು ಗುಂಡುಗಳ ವಾಸನೆಯಾಗಿದ್ದರೆ ಇನ್ನೊಂದೆಡೆ ಮಲ್ಲಿಗೆಯ ಪರಿಮಳವಾಗಿದ್ದರು ; ಮಖ್ದೂಂರು ಅವರೊಬ್ಬ ಬಹುರೂಪಿ ಪರಿಪಕ್ವ ಮಾನವ, ಮನುಷ್ಯ..... ತಮ್ಮ ಜೀವಂತವೆಲ್ಲಾ ನಿಶ್ವಾರ್ಥ ಪ್ರಜಾ ಸೇವೆಯನ್ನೆ ಕಲಿತ ಮನು ಕುಲದ ಮಹಾಕವಿ, ವಿಶ್ವ ಮಾನವ ಮಖ್ದೂಂ ಮೋಹಿಯೂದ್ದೀನ್... ಬಡ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಮಖ್ದೂಂರ ಪೂರ್ಣ ಹೆಸರು ಅಬು ಸಯ್ಯದ್ ಮಖ್ದೂಂ ಮೋಹಿಯುದ್ದೀನ್ ಖ್ವಾದಿ ಖ್ವಾದಿ ಅವರ ಮನೆತನದ ಹೆಸರು [ಪ್ರವಾದಿ ಮಹ್ಮದರ ನಿಕಟ ಸಂಗಾತಿ ಆಗಿದ್ದ ಅಬು ಸಯ್ಯದ್ ಖ್ವಾದಿ ಅವರ ವಂಶಸ್ಥರು] ಮಖ್ದೂಂರ ತಂದೆ ಗೌಸ್ ಮೋಹಿಯುದ್ದೀನ್ ಮೆದಕ್ ಜಿಲ್ಲೆಯ ತಹಸೀಲ್ ಕಛೇರಿಯ ಶಿರಸ್ಥೇದಾರರಾಗಿದ್ದರು. ನನ್ನ ಚಿಕ್ಕಂದಿನಲ್ಲಿ ಚಕ್ಕಂದು ಎಂಬುವುದೇ ಇರಲಿಲ್ಲ ಎಂದು ಜಗತ್ತು ಪ್ರಸಿದ್ದಿ ರಷ್ಯಾದ ಕಥೆಗಾರ ಆಂಟಿನ್ ಚಕೋವರರ ಈ ಸಾಲುಗಳು ಮಖ್ದೂಂರ ಬಾಲ್ಯದ ಸಂತೋಷ ಸಂವೃದ್ದ, ಚಿನ್ನಾಟ, ಚೆಲ್ಲಾಟ ಹಾಗೂ ಸ್ವಚ್ಛಂದ ನಿಶ್ಚಿಂತೆ ಯಾವುದು ಅವರ ಪಾಲಿಗೆ ಇರಲಿಲ್ಲ. ಮಖ್ದೂಂರಿಗೆ ನಾಲ್ಕು ವರ್ಷಗಳು ತುಂಬಿರಲಿಲ್ಲ ತಂದೆ ತೀರಿ ಹೋದರು. ಅವರ ನಿದನ ನಂತರ ತಾಯಿ ಪುನರ್ ಮದುವೆಯಾದರು. ದುರಂತವೆಂದರೆ ತನ್ನ ತಾಯಿ ಬದುಕಿರುವುದು ಎಷ್ಟೋ ವರ್ಷಗಳೂ ಗತಿಸಿದರೂ ತಿಳಿದಿರಲಿಲ್ಲ. ಇವರನ್ನು ಚಿಕ್ಕಪ್ಪ ಬಷೀರುದ್ದೀನ್ ಧಾಮರ್ಿಕ ಪರಿಸರದೊಂದಿಗೆ ಬೆಳೆಸಿದರು. ಮಖ್ದೂಂರು ಸಂಗಾರೆಡ್ಡಿ ಜಿಲ್ಲೆಯಿಂದ ಮೆಟ್ರಿಕ್ಯುಲೇಷನ್ ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಹೈದ್ರಾಬಾದ್ಗೆ ಬಂದಾಗ ಅವರ ವಯಸ್ಸು 30 ವರ್ಷಗಳು. ಹೈದ್ರಾಬಾದ್ನ ನಿಜಾಮನಿಗೆ ಎಲ್ಲಾ ವಿಧ್ಯಾಗಳ ಚರ್ಕವತರ್ಿ ಎಂದು ಬಿರುದುಗಳು ಹೊಂದಿದ್ದರೋ ಶಿಕ್ಷಣದ ಅನುಕೂಲತೆಗಳ ಅಭಾವ ತಾಂಡವಾಡುತ್ತಿತ್ತು. ಸಾಮಾನ್ಯವಾಗಿ ಜಿಲ್ಲೆಗೆ ಒಂದರಂತೆ ಹೈಸ್ಕೂಲುಗಳು ಮಾತ್ರ ಕಾಣುತ್ತಿದ್ದವು. ದೇಶವು ಆಗ ಬ್ರಿಟಿಷ್ರ ದಬ್ಬಾಳಿಕೆಯಲ್ಲಿ ನರಳುತ್ತಿತ್ತು.ಯುವ ಉತ್ಸಾಹಿಗಳಿಂದ ರವಿ ನಾರಾಯಣರೆಡ್ಡಿ ಮತ್ತು ಬದ್ದಾಂ ಯಲ್ಲಾರೆಡ್ಡಿ ಬ್ರಿಟಿಷ್ ಭಾರತದಲ್ಲಿ ಸತ್ಯಾಗ್ರಹ ಕೈಗೊಂಡಿದ್ದರು. ಆಲಿಘಡ್ ವಿಶ್ವವಿದ್ಯಾನಿಲಯದ ಅಕ್ಬರ್ ಅಲಿಖಾನ್, ಪ್ರೋ ಇರಪಾನ್ ಹಬೀಬ್ ಮುಂತಾದ ಮುಖಂಡರು ವಿದ್ಯಾಥರ್ಿ ಚಳುವಳಿಯಲ್ಲಿ ಭಾಗವಹಿಸಿದ್ದರು. ಇವೆಲ್ಲವೂ ಹೈದ್ರಾಬಾದ್ನ ಯುವಕರ ಮೇಲೆ ಪ್ರಭಾವ ಉಂಟು ಮಾಡಿದ್ದವು. ಅಂದಿನ ದಿನಗಳಲ್ಲಿ ನಿಗಾರ್ ಮಾಸ ಪತ್ರಿಕೆ [ಉದರ್ು] ನಿಯಾಜ್ ಪತ್ತೇಪುರಿ ಮುಸ್ಲಿಂ ಯುವಕರನ್ನು ಬಡಿದೆಬ್ಬಿಸುವಂತಹ ಲೇಖನಗಳನ್ನು ಬರೆಯುತ್ತಿದ್ದರು. 1933-34 ರ ಸುಮಾರಿಗೆ ಮಖ್ದೂಂರು ಈ ಎಲ್ಲಾ ಪ್ರಭಾವಗಳಿಗೆ ಒಳಗಾಗಿ ಕಾವ್ಯ ಜಗತ್ತಿಗೆ ಕಾಲಿರಿಸಿದ್ದು ಅವರ ಕಾವ್ಯ ಪ್ರತಿಭೆ ನಯವಾದ ನವರಾಗ, ಭಾವಗೀತೆಗಳಿಂದ ಸಾಮ್ರಾಜ್ಯವಾದ, ಫ್ಯಾಸಿಸಂ, ಬಡತನ, ಬರ್ಬರತೆ, ವೇಶ್ಯವೃತ್ತಿ ಹಾಗೂ ಅಧಃ ಪತನಗಳ ವಿರುದ್ದದ ಪ್ರಕ್ಷುಬ್ದ ಸುಳಿಯಲ್ಲಿ ಸಿಕ್ಕಿತು. ಈ ಅವದಿಯಲ್ಲಿ ಉದಯೋನ್ಮುಖ ಬುದ್ದಿಜೀವಿಗಳಿಗೆ ತಾವು ಅನುಸರಿಸಲಿರುವ ಹೊಸ ಹಾದಿಯನ್ನು ಸೂಚಿಸುವ ಉದ್ದೇಶ ಹೊಂದಿರುವ ಪುರೋಗಾಮಿ ಲೇಖಕರ ಸಂಘಟನೆ ಜನ್ಮ ತಾಳಿತು. ಅವರಲ್ಲಿ ಹೊಸ ಆಶಯಗಳ ಅಲೆಯನ್ನೇಬ್ಬಿಸಿತು. ಮಖ್ದೂಂರು ಆಗಲೇ ತಮ್ಮ ಅಶಿಷ್ಟದಾ ತೆಲಂಗಾಣ ಇಂತಜಾರ್ ಕವನ ಸಂಕಲನಗಳಿಂದ ಖ್ಯಾತಿ ಹೊಂದಿದ್ದರು. ಅವರ ಕಾವ್ಯ ಈಗ ಹೊಸ ತಿರುವು ಪಡೆಯುವದರೊಂದಿಗೆ ಸಾಮ್ರಾಜ್ಯವಾದದ ವಿರುದ್ದ ಉರಿಯುವ ಪಂಜಿನಂತೆ ಕವನಗಳನ್ನು ಬರೆದರು. ಶೂನ ಫಾಗ್ ಫೂರ್ ಆಜಾದಿ-ಏ-ವತನ್ ಕವನಗಳು ಭಾರತದ ಭವಿಷ್ಯವನ್ನೇ ಬದಲಿಸುವ ಯುವ ಜನರಿಗೆ ಕರೆ ನೀಡಿದವು. ಹವೇಲಿ ಎಂಬ ಕವನದಲ್ಲಿ ಅವರು ಊಳಿಗಮಾನ್ಯ ಶಾಹಿಪದ್ದತಿಯ ಹಾಗು ಅದರಮೌಲ್ಯಗಳವಿರುದ್ದ ಸಾವಿನ ಸೆಳೆತದಲ್ಲಿ ವಿಕೃತ ಸಮಾಜವು ಸತ್ತವರಿಂದೆಲ್ಲ ಕಪ್ಪು ಪಡೆಯುತ್ತಿದೆ.ಸುತ್ತ ಎಲ್ಲಾ ಕಡೆಗೂ ಕತ್ತಲು,ಸಂಕಟ,ವಿನಾಶ ಇವೆ.ಗೋಡೆಯ ಈ ಬಿರುಕಿನಲ್ಲಿ ಎಂಥ ಕತ್ತಲೇ!ಭಯಾನಕ!ಅಲ್ಲಿ ಹಾವುಗಳು, ಚೇಳುಗಳು ಸೇರಿ ಮನೆ ಮಾಡಿವೆ.ಬಡ್ಡಿಕೋರ ಸಾಹುಕಾರ ಮಹಾಜನರಿಗೆ,ಮತಾಂಧ ಬ್ರಾಹ್ಮಣನಿಗೆಡಾಂಭಿಕ ಮುಲ್ಲಾನಿಗೂ ಆಶ್ರಯ ನೀಡಿದೆ.ಎಂದು ತಮ್ಮ ಕತ್ತಿ ಝಳಿಸುತ್ತಾರೆ. ಮೌತ್ ಕಾ ಗೀತ [ಸಾವಿನ ಹಾಡು] ದಲ್ಲಿ ಉಳಿಗಮಾನ್ಯ ಪದ್ದತಿ ಹಾಗು ಸಾಮ್ರಾಜ್ಯವಾದದ ಅಧಃ ಪತನಗಳ ವಿರುದ್ದ ತುಂಬ ಹರಿತವಾದ ವಿಡಂಬನೆ ಬಳಸಿದ್ದಾರೆ. ಆ ಕವನದಲ್ಲಿ ಭೂಕಂಪಗಳಿಗೆ, ಮಿಂಚಿಗೆ, ವಿನಾಶದ ದಾಳಿಗಳಿಗೆ, ಭಯಂಕರ ಸಿಡಿಲುಗಳಿಗೆ, ಜ್ವಾಲಾಮುಖಿಗಳ ಲಾವಾರಸಕ್ಕೆ ಎಲ್ಲದಕ್ಕೂ ಔತಣ ನೀಡಿ, ವರ್ತಮಾನದ ಈ ವಿದ್ರೂಪವನ್ನು ಅಳಿಸಿ ಹಾಕಿ, ರೋಗಗ್ರಸ್ತ ಸಮಾಜದ ಅವಶೇಷಗಳ ಮೇಲೆ ಸುಂದರ ಭವಿಷ್ಯ ಕಟ್ಟಲು ಕರೆಕೊಟ್ಟಿದ್ದಾರೆ. ಮಖ್ದೂಂ ಮೋಹಿಯುದ್ದೀನ್ರ ಪ್ರೇರಣೆಯಿಂದ 1936-38ರಲ್ಲಿ ಯುವ ಉತ್ಸಾಹಿಗಳು ಸಂಗಾತಿಗಳ ಕೂಟ ಎಂಬ ಸಂಘಟನೆಯನ್ನು ಕಟ್ಟಿದರು. 1939ರಲ್ಲಿ ಸಾಮ್ರಾಜ್ಯವಾದಿ ಯುದ್ದ, ಬಂಡವಾಳವಾದದ ವಿರುದ್ದ ತಮ್ಮ ಹರಿತವಾದ ಲೇಖನಿಯನ್ನು ಎತ್ತಿದರು. ಈ ಅವಧಿಯಲ್ಲಿ ಜಲ್ವೇ ಜಲಾವ್ ಮತ್ತು ಸಿಫಾಯಿ ಖ್ಯಾತ ರಚನೆಯಾಗಿದ್ದವು.1941ರಲ್ಲಿ ಹಿಟ್ಲರ್ ರಷ್ಯಾದ ಮೇಲೆ ದಾಳಿ ನಡೆಸಿದಾಗ ಯುದ್ದವು ಹೊಸ ತಿರುವನ್ನು ಪಡೆಯಿತು. ಆಗ ಮಖ್ದೂಂರು ರಚಿಸಿದ ಪ್ರಸಿದ್ದ ಕವನ ಅಂಧೇರಾ ಇದರಲ್ಲಿ ಮಖ್ದೂಂರು ತಮ್ಮ ರೋಷವನ್ನೆಲ್ಲಾ ಹರಿಬಿಟ್ಟರು.ನಾಗರೀಕತೆಯ ಸೀಳಿ ಬಾಯ್ದೆರೆದ ಗಾಯಗಳುಕಂದಕಗಳು, ಮುಳ್ಳು ಬೇಲಿಅವುಗಳಲ್ಲಿ ಸಿಗಿಬಿದ್ದ ಮನುಷ್ಯ ದೇಹಗಳು ಮನುಷ್ಯರ ಶವಗಳ ಮೇಲೆ ಕುಳಿತ ರಣಹದ್ದುಗಳು ಛಿದ್ರ, ವಿಚ್ಛಿದ್ರಗೊಂಡ ಮೃತ ದೇಹಗಳು ಅತ್ತಿತ್ತ ಬಿದ್ದ ಅಂಗಾಂಗಗಳು ಒಂದು ಶವದಿಂದ ಇನ್ನೊಂದರವರೆಗೂ ತಣ್ಣಗಿನ ಗಾಳಿ ಬೀಸುತ್ತದೆ.ದುಃಖಿಸುತ್ತಎಂದು ಫ್ಯಾಸಿಸಂನ ವಣರ್ಿಸುತ್ತ....ರಾತ್ರಿಗೆ ಕತ್ತಲೆಯನ್ನುಳಿದು,ಕೊಡಲು ಇನ್ನೇನಿಲ್ಲಇರುಳಿನ ಹಣೆಯ ಮೇಲೆ ಸೇರಿದ ಈ ವಾಕ್ಚುಲನಕ್ಷತ್ರಗಳು,ಶುಭ್ರ ಸೂರ್ಯನ ಬರುವಿನೊಂದಿಗೆಕಣ್ಮರೆಯಾಗುತ್ತವೆ.ಎಂದು ಕ್ರಾಂತಿಕಾರಿ ವಿಚಾರಗಳೊಂದಿಗೆ ಕವನ ಮುಗಿಸುತ್ತಾರೆ. ಆ ತರುವಾಯ ಬಂದದ್ದು ಪ್ರಖ್ಯಾತ ಕವನ ಸ್ಟಾಲಿನ್-ಇ-ಆವಾಜ್ ಖ್ಯಾತ ತಾಜುರ್ ಕವಿ ಜಂಬೂಲ್ ಜುಬೇರ್ರ ಕವನದ ಮುಕ್ತ ಅನುವಾದ. ಅದೊಂದು ಶಕ್ತಿಶಾಲಿ ಕವನವಾಗಿದೆ. ಅದರಲ್ಲಿಯ ಶಬ್ದಗಳು ಸತ್ವ ಪೂರ್ಣವಾಗಿದ್ದು ಕೇಳುಗರ ಹೃದಯವನ್ನು ಹಿಡಿದು ಅಲುಗಾಡಿಸುವಂತಿದೆ. ಸಾಮ್ರಾಜ್ಯವಾದಿ ಶೋಷಣೆ ಮತ್ತು ಭಾರತದ ಸಾಮಾಜಿಕ ನೇಯ್ಗೆಯನ್ನು ನಾಶ ಮಾಡಿದ ದುರ್ಜನರ ಬಗೆಗಿನ ಅವರ ರೋಷವನ್ನು ಬಂಗಾಲದ ಬರಗಾಲ ಕುರಿತು ಬರೆದ ಕವನ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ. ಅದು ದೇವರದೇ ಜಾತಿಯಾಗಿರಲಿ,ಮುಸ್ಲಿಂರೇ ಅಥವಾ ಪವಿತ್ರವಾದ ಬ್ರಾಹ್ಮಣರೇ ಇರಲಿ,ಅವರು ಹಸಿವನ್ನು ಅಳೆಯಲಾಗದುಅವರ ಶವಗಳನ್ನು ಎಣೆಸಲಾಗದು.ಈ ಘಟ್ಟದಲ್ಲಿ ಮಖ್ದೂಂರು ತಮ್ಮ ಸಕರ್ಾರಿ ಸಿಟಿ ಕಾಲೇಜಿನ ಉಪನ್ಯಾಸಕ ವೃತ್ತಿಗೆ ರಾಜೀನಾಮೆ ನೀಡಿ, ಪೂಣರ್ಾವಧಿ ಕಮ್ಯೂನಿಷ್ಟ್ ಕ್ರಾಂತಿಕಾರಿಗಳ ಗುಂಪಿಗೆ ಸೇರಿದರು.ಆ ಸಮಯದಲ್ಲಿ ರಾಷ್ಟ್ರೀಯ ಮುಖಂಡರನ್ನು ಸೆರೆ ಹಿಡಿಯುವದನ್ನು ವಿರೋದಿಸಲು ಏರ್ಪಟ್ಟ ಒಂದು ಸಾರ್ವಜನಿಕ ಸಭೆಯೊಂದರಲ್ಲಿ ಮಖ್ದೂಂರು ಲಿನ್ ಲಿಥಗೋ ತನ್ನ ಬಾಲ ಅಲ್ಲಾಡಿಸುತ್ತಾ ಯುದ್ದವನ್ನು ಯಶಸ್ವಿ ನಡೆಸುವಂತೆ, ಭಾರತವನ್ನು ಮುನ್ನಡೆಸಲಾರ ಎಂದು ಗುಡುಗಿದ್ದರ ನಿಮಿತ್ಯ ಬ್ರಿಟಿಷ್ರ ಗುಲಾಮಿ ನಿಜಾಂನು ಅವಿವೇಕನೆಂದು ವಿಚಾರಣೆಗೆ ಒಳಪಡಿಸಿ ಜೈಲುವಾಸ ಹಾಗೂ ದಂಡ ವಿದಿಸಿದ್ದನು. ಜೈಲ್ನಲ್ಲಿ ಕಾಂಗ್ರೇಸ್ ಮುಖಂಡರುಗಳಾದ ಆರ್.ಎನ್.ದಿವಾನ್, ಬಿ.ಸಿ.ಚೌದ್ರಿ, ಅಚ್ಚುತ್ರಾವ್ ದೇಶಪಾಂಡೆ, ಸ್ವಾಮಿ ರಮಾನಂದ ತೀರ್ಥರ ಪರಿಚಯ ಮಖ್ದೂಂರಿಗೆ ಆಯಿತು. 40 ರ ದಶಕದ ಪೂರ್ವದಲ್ಲೇ ಯುವ ಟ್ರೇಡ್ ಯೂನಿಯನ್ ಕಾರ್ಯಕರ್ತರ ನೇತೃತ್ವ ವಹಿಸುತ್ತಾ ಅನೇಕ ಕಾಮರ್ಿಕ ಹೋರಾಟಗಳ ಅಲೆಯನ್ನೇ ಎಬ್ಬಿಸಿದರು.1941ರಲ್ಲಿ ಹೈದ್ರಾಬಾದಿನ ಚಾರ್ಮಿನಾರ ಸಿಗರೇಟಿನ ವಜೀರ್ ಸುಲ್ತಾನ ಪ್ಯಾಕ್ಟರಿ ವ್ಯಾಜ್ಯದಲ್ಲಿ ಕಾಮರ್ಿಕರ ಪ್ರತಿನಿದಿಯಾಗಿ ಸಂದಾನದ ಮಾತುಕತೆಗಳಲ್ಲಿ ಭಾಗವಹಿಸಿದರು. ಆಗಲೇ ಮಖ್ದೂಂರು ಆಲ್ ವಿನ್ ಮೆಟಲ್ ಕಾಮರ್ಿಕರ ಮುಷ್ಕರದ ನೇತೃತ್ವ ವಹಿಸಿದ್ದರು. ಕಾಮರ್ಿಕರ ಹಿತೈಷಿಯಾಗಿ ಸಿಂಗರೇಣೆ ಗಣಿ ಕಾಮರ್ಿಕರ ಸಂಘ, ಹೈದ್ರಾಬಾದ್ ಕನರ್ಾಟಕದ ಗುಲ್ಬಗರ್ಾ ಜಿಲ್ಲೆಯ ಶಹಬಾದ್ ಸಿಮೆಂಟ್ ಕಾಮರ್ಿಕರ ಸಂಘ, ಹಾಗೂ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣೆ ಕಾಮರ್ಿಕರ ಸಂಘಗಳ ಸಂಸ್ಥಾಪಕರಾಗಿದ್ದರು.ಹೈದ್ರಾಬಾದ್ ನಗರದಲ್ಲಿ ಮುನ್ಸಿಪಲ್ ಕಾಮರ್ಿಕ ಸಂಘದ ಅಧ್ಯಕ್ಷರಾಗಿದ್ದರು. ಮತ್ತು ಹಿರಿಯ ಕಾಮರ್ಿಕ ಮುಖಂಡ ಎಸ್.ಎಂ.ಜೋಷಿಯವರು 16-08-1946ರಂದು ಉದ್ಘಾಟಿಸಿದ ಅಖಿಲ ಹೈದ್ರಾಬಾದ್ ಟ್ರೇಡ್ ಯೂನಿಯನ್ ಕಾಂಗ್ರೇಸ್ನ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. 40ರ ದಶಕದಲ್ಲಿ ಹೀಗೆ ಟ್ರೇಡ್ ಯೂನಿಯನ್ಗಳನ್ನು ಕಟ್ಟುತ್ತಾ, ಬೆಳೆಸುತ್ತಾ, ತೆಲಂಗಾಣದ ಸಶಸ್ತ್ರ ಹೋರಾಟಗಳನ್ನು ಬೆಂಬಲಿಸುತ್ತಾ ತಮ್ಮ ರಾಜಕೀಯ ಮುನ್ನುಗ್ಗುವ ಸಮಯದಲ್ಲಿ ನಿಜಾಂನ ದಬ್ಬಾಳಿಕೆ ಹಾಗೂ ಹಿಂಸಾಚಾರಗಳ ವಿರುದ್ದ ಹೋರಾಟಗಳನ್ನು ಭೂಗತವಾಗಿ ನಡೆಸಿದರು. ತಮ್ಮ ಭೂಗತವನ್ನು ಗುಲ್ಬಗರ್ಾದ ಶಹಬಾದ್ ಸಿಮೆಂಟ್ ಕಾಮರ್ಿಕರ ಮದ್ಯೆ ಕಳೆದರು. ಸೊಲ್ಲಾಪೂರ, ಮುಂಬೈಗೆ ತೆರಳಿ ತಮ್ಮ ಕಾಮರ್ಿಕ ಚಳುವಳಿಗಳನ್ನು ಕಟ್ಟುತ್ತಾ ಮುಂಬೈಯಿಂದಲೇ ತಮ್ಮ ಇನ್ನೊಂದು ಕವನ ತೆಲಂಗಾಣ ರಚಿಸಿದರು.ಕಾಡುಗಳಲ್ಲಿ ಹುಟ್ಟಿದ ಮಕ್ಕಳೇಬೆಟ್ಟಗಳೂ, ಹೊಲಗಳೂ ಎಚ್ಚರಗೊಂಡಿವೆತಮ್ಮೆಲ್ಲರ ಖಡ್ಗಗಳುಹೊಳೆದಿವೆ ಕುಡುಗೋಲುಗಳುನೇಗಿಲ ಎತ್ತರಕ್ಕೆ ಎದ್ದಿವೆಊಳಿಗರ ಅಡಿಪಾಯಗಳು ಅಲುಗಿವೆದೊರೆ ಮಕ್ಕಳ ಅರಮನೆಗಳು ನಡುಗುತ್ತಿವೆಹಲಕಾಗಳ,ನಿಜಾಂರ ಆಳ್ವಿಕೆ ಕುಸಿಯುತ್ತಿದೆ.ಹಾಗೂ ಇಡೀ ನಿಜಾಂನ ನಿರಂಕುಶವಾದದ ವಿರುದ್ದ ಚಾರ ಮೀನಾರ್ ಎನ್ನುವ ಕೃತಿ ರಚಿಸಿದ್ದನ್ನು ನಿಜಾಂ ಪ್ರಭುತ್ವ ಮೇ 1947ರಲ್ಲಿ ಕೃತಿ ನಿಷೇದಿಸಿ ಆದೇಶ ಹೊರಡಿಸಿತು. ಪುನಃ ಹೈದ್ರಾಬಾದಗೆ ಮರಳಿ ನಿಜಾಂನ ವಿರುದ್ದ ಭೂಗತ ಹೋರಾಟಗಳನ್ನು ಕಟ್ಟಿದರು. 1948ರಲ್ಲಿ ಪರಿಸ್ಥಿತಿ ಭಾರತ ಸೈನ್ಯದ ಸಹಾಯದಿಂದ ಜನರ ಚಳುವಳಿಯನ್ನು ದಮನ ಮಾಡಿ ನಿಜಾಂ ಸಕರ್ಾರ ಭಾರತದಲ್ಲಿ ವೀಲಿನವಾಗಿ ಉರುಳಿತು. 1951ರಲ್ಲಿ ಆಂತರಿಕ ರಾಜಕೀಯ ಭಿನ್ನತೆ ಹಾಗು ದಸ್ತಗಿರಿ ಅನುಭವಿಸಿದರು. ಅಂದು ಜೈಲಿನಲ್ಲಿ ಕೈದ್ [ಕೈಸೆರೆ] ಎಂಬ ಕವಿತೆಯನ್ನು ರಚಿಸಿದರು.ಕೈಸೆರೆಯಾದ ತರುಣನ ಕನಸುಗಳು ಮಲುಗುತ್ತವೆ.ಸರಪಳಿಯ ತೋಳಗಳಲ್ಲಿಬೇಡಿಗಳ ಗಲಗಲ ಶಬ್ದ ಖೈದಿಗಳನ್ನು ಬದಲಿಸುತ್ತದೆ ನಿದ್ದೆಯಲ್ಲೂ ಉಕ್ಕುವ ಬಾಳಿನತ್ತ ಕೈ ಮಾಡುತ್ತದೆನನ್ನ ಒಂದೇ ದುಃಖವೆಂದರೇ, ನನ್ನ ಜೀವನದ ಬೆಲೆಯುಳ್ಳ ವರ್ಷಗಳ ಅಪಾರ ನಿಧಿಯೂ ಸೆರೆ ಮನೆಗಳ ಗೋಡೆಗಳ ಹಿಂದೆ ಕಳೆದು ಹೋಯಿತ್ತಲ್ಲಾ...ಎಂದು ಇದು ಇನ್ನೊಂದು ಸೆರೆಮನೆಯಾಗಿದ್ದ ನನ್ನ ದೇಶದ ಬಂಧನದ ಶೋಷಣೆಗಳನ್ನೊಡೆದು ಹುಡಿಗೊಡಿಸಲುಸಮಪರ್ಿಸಲಿಲ್ಲವಲ್ಲಾ ಎಂದು.ಹೋರಾಡುವ ತನ್ನ ಜನರೊಂದಿಗೇ ತಾವು ಇರಬೇಕೆಂಬ ಅವರ ಹಂಬಲ ಈ ಕವನದ ಉದ್ದಕ್ಕೂ ಕಾಣುತ್ತದೆ. ನಿರಂಕುಶ ಪ್ರಭುಗಳ ವಿರುದ್ದ ಹೋರಾಡುತ್ತಿರುವ ಮಿಲಿಯಾಂತರ ಜನರ ಆಶಯಗಳಿಗೆ ಮಖ್ದೂಂರ ಹೃದಯ ಸ್ಪಂದಿಸುತ್ತಿತ್ತು.1952ರಲ್ಲಿ ಜೈಲಿನಿಂದ ಬಿಡುಗಡೆ ಹೊಂದಿ ಹೈದ್ರಾಬಾದ್ ನಗರದ ಪ್ರಥಮ ಚುನಾವಣೆಯಲ್ಲಿ ಸೋತರು. ಹುಜೂರ್ ನಗರದಿಂದ ಅಸೆಂಬ್ಲಿಗೆ ಗೆದ್ದರು. 1953ರಲ್ಲಿ ವಿಯಟ್ನಾಂದಲ್ಲಿ ವಿಶ್ವ ಟ್ರೇಡ್ ಯೂನಿಯನ್ ಕೇಂದ್ರದಲ್ಲಿ ಕೆಲಸ ಮಾಡಲು ಎ.ಐ.ಟಿ.ಯು.ಸಿ ಆಯ್ಕೆ ಮಾಡಿತು. ಅವರು 1954ರಲ್ಲಿ ಭಾರತಕ್ಕೆ ಮರಳಿ ಎ.ಐ.ಟಿ.ಯು.ಸಿ ಯ ಸಹ ಕಾರ್ಯದಶರ್ಿಯಾಗಿ ಕೆಲಸ ಮಾಡಲು ನಿಯುಕ್ತರಾದರು. 1952-55ರ ಅವದಿಯಲ್ಲಿ ಪ್ರಪಂಚ ಯುದ್ದದ ನಂತರ ನೂತನ ಮಾನವನು ಉದಯವಾಗುತ್ತಾನೆ ಎಂದು ಒತ್ತಿ ಹೇಳುತ್ತ, ಕವಿ ಏಕಕಾಲದಲ್ಲಿ ಜನತೆಯ ಬದುಕಿನೊಂದಿಗೆ ಸ್ಪಂದಿಸುತ್ತ ತನ್ನ ಸೃಜನಶೀಲ ಒಂಟಿತನದಲ್ಲಿ ತೊಡಗಿರುತ್ತಾನೆ. ಎನ್ನುವ ವೇಳೆ 1957 ರ ವೇಳೆಗೆ ಮಖ್ದೂಂರ ಕಾವ್ಯಗಳು ಹೊಸ ಆಯಾಮವನ್ನು ಪಡೆದಿದ್ದವು. ಆಗವರು ಗಝಲ್ಗಳನ್ನು ಬರೆಯಲು ಆರಂಬಿಸಿದರು. ಅವರ ಖ್ಯಾತ ಚಾಂದ ತಾರೋ ಕಾ ಬನ್ ಇರುಳಿನ ಅವಶೇಷಗಳು ಇನ್ನೂ ಇವೆ.ಕತ್ತಲಿನ ತುಂಡುಗಳುಹೊಸ ಬೆಳಕಿನ ಬೆಳ್ಳಗಿನ ಬೆಳಕು ಹಾಸಿಗೆಸಂಗಾತಿಗಳೇಕೈಯಲ್ಲಿ ಕೈಹಿಡಿದು ಮುಂದೆ ಬನ್ನಿರಿನಮ್ಮ ಗುರಿಯತ್ತ ಸಾಗೋಣಪ್ರೀತಿಯ ಮತ್ತು ನೇಣುಗಂಬದ ಗುರಿಗೆನಿಮ್ಮ ನಿಮ್ಮ ಕೋಟನ್ನು ಹೆಗಲೇರಿಸಿಮುನ್ನಡೆಯಿರಿ[ಚಂದ್ರ ತಾರೆಗಳ ವನ] 1957-58ರ ವೇಳೆಗೆ ರಚಿತವಾದ ಕೃತಿ. ಇಲ್ಲಿ ಭಾರತೀಯ ಸ್ವಾತಂತ್ರ್ಯ ಚಳುವಳಿಯ ಮಜಲುಗಳನ್ನು ವಣರ್ಿಸಿದ್ದಾರೆ. ರಕ್ತಪಾತಗಳು, ಭವಿಷ್ಯಗಳು ವಣರ್ೆಸಿದ್ದಾರೆ. ಮಖ್ದೂಂರ ಇಡೀ ಜೀವನ ಹೋರಾಟಗಳು ಹಾಗು ಕಾವ್ಯಗಳ ರಚನೆಯಾಗಿತ್ತು.ಮಖ್ದೂಂರು ತಮ್ಮ 61 ನೇ ವಯಸ್ಸಿನಲ್ಲಿ ನಿಧನರಾದ ಸಂಧರ್ಭದಲ್ಲಿ ಂ ಡಿಜತಠಟಣಣಠಟಿಜಡಿಥಿ ಠಿಠಜಣ ಟಿಠ ಟಠಡಿಜ, ಂ ಡಿಠಟಚಿಟಿಣಛಿ ಠಿಠಜಣ,ಚಿ ಟಥಿಡಿಛಿಣ ಟಿಚಿಣಛಿಜಜ ಚಿತಿಚಿಥಿ ಜಿಡಿಠಟ ಣ, ಂ ರಡಿಜಚಿಣ ಛಿಠಟಟಣಟಿಣ ಟಜಚಿಜಜಡಿ ಚಿಟಿಜ ಠಡಿರಚಿಟಿಜಡಿ ರಠಟಿಜ..... ಜನರ ವೇದನೆಗಳಿಗೆ ಪೂರಕವಾಗಿ ಮಖ್ದೂಂರ ಕವನದ ಈ ಸಾಲುಗಳು ಹಯಾತ್ ಲೇಕೆ ಚಲೋ, ಕಾಯನಾಥ್ ಲೇಕೆ ಚಲೋಚಲೇತೋ ಸಾರೆ ಜಮಾನಕೋ, ಸಾಥ್ ಲೇಕೆ ಚಲೋ....ಜನರ ಮಧ್ಯೆ, ಜನರಿಗಾಗಿ, ಜನರಲ್ಲಿ ಮಖ್ದೂಂ ಮೋಹಿಯುದ್ದೀನ್ರು ಅಮರರಾಗಿ ಚಿರಂಜೀವಿಯಾಗಿ ಉಳಿದಿದ್ದಾರೆ.
ದಿಶಿವಪುತ್ರಪ್ಪ ಭೇರಿ.
Wednesday, January 5, 2011
ಸ್ವಾತಂತ್ರ್ಯ ಪೂರ್ವದ ಹೋರಾಟಗಾರ, ಕವಿ ಮುಖ್ದೂಂ ಮೊಹಿನುದ್ದೀನ್.
Subscribe to:
Post Comments (Atom)
No comments:
Post a Comment
Thanku