Friday, June 15, 2012

Praja samara - June 15


Praja samara - June 15


ಪಂಚಾಯತಿ ಪ್ರಭುಲಿಂಗ ಅಮಾನತ್


ಎಲ್ಲದರಲ್ಲಿಯೂ (ಕು)ಖ್ಯಾತಿಯನ್ನು ಹೊಂದಿರುವ ಹಟ್ಟಿಯಲ್ಲಿ ಇದೀಗ ಪಿಡಿಒ ಪ್ರಭುಲಿಂಗ ಅಮಾನತ್ ಆದದ್ದೇ ಸುದ್ದಿ..
    "ಉರಿದವರಿಗೆ ಅರ್ಧ ಹೋಳಿಗೆ" ಎಂಬ ಶಾಸ್ತ್ರದ ನಿಯಮ ಪ್ರಭುವಿನ ವಿಷಯದಲ್ಲಿ ಪಕ್ಕಾ ಅನ್ವಯವಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿ ದ್ದಾರೆ. ಇನ್ನೂ ಕೆಲವರಂತು ಹೀಗಾಗಬಾರದಿತ್ತು.. ಅಯ್ಯೋ, ಪಾಪ ಎನ್ನುತ್ತಿದ್ದಾರೆ. (ಪಾಪ ಎನ್ನುವವರು ಪ್ರಭುವಿನ ಫಲಾನುಭವಿಗಳು ಇರಬಹುದು.)
    ಹಟ್ಟಿ ಪಂಚಾಯತಿಯ ಹಳೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಭುಲಿಂಗನ ಕುರಿತು ಹಿಂದಿನ ನಮ್ಮ ಪತ್ರಿಕೆಯ ಸಂಚಿಕೆಯಲ್ಲಿ  "ಪ್ರಭುವಿನ ಪಂಚಾಯತ್ ಪುರಾಣ", "ಉಂಡಾಡಿ ಗುಂಡ ಪಿಡಿಒ" ಎಂಬ ಶೀಷರ್ಿಕೆಯಡಿ ವರದಿ ಬಿತ್ತರಗೊಂಡಿತ್ತು. ಆಗ ವರದಿಯ ಕುರಿತು ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
    ಆ ನಂತರದಿಂದ ಪ್ರಭುವಿನ ಒಂದೊಂದು ಪ್ರಕರಣಗಳು ಬೆಳಕಿಗೆ ಬರತೊಡಗಿದವು. ಗ್ರಾಮ ಪಂಚಾಯತ್ನ ಹಲವು ಸದ್ಯಸರು ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ವಗರ್ಾವಣಿಗಾಗಿ ಪಟ್ಟು ಹಿಡಿದು, ಇ.ಒ, ಸಿ.ಇ.ಒ ಬಳಿ ಹೋದರು. ಅದಕ್ಕೆ ಪ್ರತಿಯಾಗಿ ಇನ್ನೂ ಕೆಲವರು ಈತನನ್ನು ವಗರ್ಾವಣಿ ಮಾಡಬಾರದೆಂದು ಮನವಿ ಸಲ್ಲಿಸಿದರು. ಒಮ್ಮೆ ವಗರ್ಾವಣಿ ಬೇಕೆನ್ನುವ ಸದಸ್ಯರು ಒಂದೆರಡು ದಿನದಲ್ಲಿ ಇದೇ ಪಿಡಿಓ ಬೇಕೆಂದು ಮನವಿ ಮಾಡುತ್ತಿದ್ದದು ನಮ್ಮ ಪತ್ರಕರ್ತ ಮಿತ್ರರಿಗೆ ನಗೆಪಾಟಲೀನ ವಿಷಯವಾಗಿತ್ತು.  ಈ ರೀತಿಯ ಎಡಬಿಡಂಗಿತನ ಕೆಲವು ಸದಸ್ಯರಲ್ಲಿ ಇದ್ದುದರಿಂದಲೇ ಪ್ರಭು ಹಟ್ಟಿಯಲ್ಲಿ ಠಿಕಾಣಿ ಹೂಡಿ, ಮನಸ್ಸಿಗೆ ಬಂದಂತೆ ಕೆಲಸ ನಡೆದುಕೊಳ್ಳುತ್ತಿದ್ದ.
    ವಾಸ್ತವ ಅವಿದ್ಯಾವಂತನಲ್ಲದ ಪ್ರಭು ಕೆಲವೊಂದು ವಿಷಯಗಳಲ್ಲಿ ತೀರಾ ಕೆಳಹಂತದಲ್ಲಿ ನಡೆದುಕೊಂಡಿದ್ದಾನೆ. ಆತನ ಸಭ್ಯತೆ, ನಡವಳಿಕೆಗಳು ಒಂದು ವೇಳೆ ಸರಿಯಾಗಿದ್ದರೆ, ನೌಕರಿ ಪಡೆದು ಸಣ್ಣ ವಯಸ್ಸಿನಲ್ಲಿ ಅಮಾನತ್ ಆಗುವ ಸಂದರ್ಭ ಎದುರಾಗುತ್ತಿದ್ದಿಲ್ಲ.
    ಹಟ್ಟಿ ಪಂಚಾಯತ್ಗೆ ಬಂದ ಹಲವು ಕಾರ್ಯದಶರ್ಿಗಳಲ್ಲಿ ಕೆಲವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದ್ದು ಬಿಟ್ಟರೆ, ಉಳಿದವರೆಲ್ಲರೂ ಒಂದಿಲ್ಲೊಂದು ತಪ್ಪಿನಿಂದಲೇ ಜಾಗ ಖಾಲಿ ಮಾಡಿದ್ದಾರೆ.
ಪ್ರಭುವಿನ ಮೇಲಿರುವ ಆರೋಪಗಳು.
    2010 ಮತ್ತು 2011ನೇ ಸಾಲಿನ ಎನ್.ಆರ್.ಇ.ಜಿ ಯೋಜನೆಯಡಿ ಮತ್ತು ಪಂಚಾಯತಿಯ ಹಲವು ಯೋಜನೆಗಳಲ್ಲಿ ಅವ್ಯವಹಾರ ಎಸಗಿರುವುದು. ಇದಕ್ಕೆ ಸಂಬಂಧಿಸಿ ಹಲವರು ತಾಲೂಕಾ ಕಾರ್ಯನಿವರ್ಾಹಕ ಅಧಿಕಾರಿಗಳು ಹಾಗೂ ಸಿ.ಇ.ಒ ಅವರಿಗೆ ದೂರು ಸಲ್ಲಿಸಿದ್ದರು.
    13ನೇ ಹಣಕಾಸು ಯೋಜನೆ & ಸಂಪೂರ್ಣ ಸ್ವಚ್ಛತಾ ಆಂದೋಲನ ಯೋಜನೆಯಡಿಯೂ ಅವ್ಯವಹಾರ ಎಸಗಿರುವುದು ಮೇಲ್ನೋಟಕ್ಕೆ ಸಾಭೀತಾಗಿದೆ. ಸ್ವಚ್ಛತಾ ಆಂದೋಲನ ಜಾಗೃತ ಸಮಿತಿಯೂ ಹಟ್ಟಿ ಗ್ರಾಮಪಂಚಾಯತ್ಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದಾಗ ಹಳೆಯ ಶೌಚಾಲಯಗಳಿಗೆ ಹಣ ಪಾವತಿ ಮಾಡಿ ಹಣಕಾಸು ದುರುಪಯೋಗ ಮಾಡಿಕೊಂಡಿರುವುದು ಗೊತ್ತಾಗಿರುತ್ತದೆ. ಜೊತೆಯಲ್ಲಿ ಎನ್.ಆರ್.ಇ. ಜಿ ಯೋಜನೆಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಪ್ರಭು ಸರಿಯಾಗಿ ಇಟ್ಟಿಲ್ಲ.
    ಸಂಪೂರ್ಣ ಸ್ವಚ್ಛತಾ ಆಂದೋಲನಾ ಯೋಜನೆಯಡಿ 48 ಫಲಾನುಭವಿಗಳಿಗೆ ಉತ್ತೇಜನ  ಹಣ ಪಾವತಿಸಲಾಗಿದೆ. ಇದರಲ್ಲಿ ತಾಲೂಕಾ ಪಂಚಾಯತ್ ಹಾಗೂ ಗ್ರಾಮಪಂಚಾಯತ್ ತಯಾರಿಸಿರುವ ಯಾದಿಗೆ ಎಲ್ಲಿಯೂ ತಾಳೆಯಾಗುತ್ತಿಲ್ಲ. ಮತ್ತು ಅನುಮೋದನೆ ಪಡೆದ ಪಲಾನುಭವಿಗಳಿಗೂ, ಉತ್ತೇಜನ ಹಣ ಹೊಂದಿದ ಪಲಾನುಭವಿಗಳಿಗೂ ಸಾಕಷ್ಟು ವ್ಯತ್ಯಾಸವಿದೆ.
    ಕಾನೂನಿನ ಪ್ರಕಾರ ಎನ್.ಆರ್.ಇ.ಜಿ ಯೋಜನೆಯಡಿ ಕೆಲಸ ಕೈಗೊಂಡರೆ, ಹಣ ಪಾವತಿಯ ನಂತರ 3ನೇ ತಂಡದಿಂದ ಧೃಡೀಕರಣ ಮಾಡಿಸಬೇಕು ಹಾಗೂ ವರ್ಷದಿಂದ ವರ್ಷಕ್ಕೆ ಲೆಕ್ಕತಪಾಸಣಾಧಿ ಕಾರಿಗಳಿಂದ ಲೆಕ್ಕಪರಿಶೋಧನೆ ಮಾಡಿಸಬೇಕು.
    ಆದರೆ, ಪಿಡಿಒ ಪ್ರಭು ಇವ್ಯಾವದನ್ನು ಮಾಡದೇ ಕರ್ತವ್ಯ ಲೋಪ ಎಸಗಿದ್ದಾರೆ.
    ಪ್ರಭುವಿನ ಸ್ಯಾಂಪಲ್ ಘಟನೆಗಳಿಗೆ ಸದ್ಯಕ್ಕೆ ಮಾನ್ಯರಾದ ಮನೋಜ ಜೈನ್ ಸಾಹೇಬರು ಅಮಾನತ್ ಆದೇಶ ಹೊರಡಿಸಿದ್ದಾರೆ. ಇನ್ನೂ ಒಳಹೊಕ್ಕು ತನಿಖೆ ನಡೆದದ್ದೇ ಆದರೆ, ಈತ ಹಟ್ಟಿ ಪಂಚಾಯತ್ನಲ್ಲಿ ಮಾಡಿದ ಹತ್ತಾರು ಪ್ರಕರಣಗಳು ಹೊರಗೆ ಬೀಳುತ್ತವೆ.
ಅಂಬೇಡ್ಕರ್ಗೆ ಅಪಮಾನ ಪ್ರಕರಣ
    ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಜಯಂತಿಗೆ ಪಿಡಿಒ ಪ್ರಭು ಹಾಜರಾಗಿಲ್ಲವೆಂಬ ಕಾರಣಕ್ಕೆ ಹಲವರು ಸಿಇಒ ಗೆ ಕಂಪ್ಲೇಟ್ ಮಾಡಿದ್ದರು. ಅದಕ್ಕಾಗಿ ಜಿಲ್ಲಾ ಪಂಚಾಯತ್ನಿಂದ 1 ತಂಡ ಬಂದು ವರದಿಯನ್ನು ಸಂಗ್ರಹಿಸಿತು. ತನಿಖೆಗೆ ಬಂದಿದ್ದ ತಂಡದ ಅಧಿಕಾರಿಗಳು ಇಲ್ಲಿನ ದಲಿತ ನಾಯಕರು, ಪಂಚಾಯತ್ನ ಅಧ್ಯಕ್ಷರು , ಇತರೆ ಸದಸ್ಯರು ಹಾಗೂ ದೂರು ನೀಡಿದ್ದವರಿಂದ ಹೇಳಿಕೆಗಳನ್ನು ಪಡೆದಿದ್ದರು.
    ಸಕರ್ಾರದ ಆದೇಶದಂತೆ ಪ್ರತಿಯೊಂದು ಇಲಾಖೆಗಳು ಚಾಚುತಪ್ಪದೇ ಜಯಂತಿಯನ್ನು ಆಚರಿಸಬೇಕು. ಆದರೆ, ನಿಯಮವಿರುವುದು ಪ್ರಭುವಿಗೆ ಗೊತ್ತಿದ್ದರೂ ಕೂಡ, ಆತ ಜಯಂತಿಯಿಂದ ದೂರ ಉಳಿದಿದ್ದ ಎಂಬುದು ದೂರುದಾರರ ಆರೋಪ. ಒಂದು ವೇಳೆ ರಜೆಯ ಮೇಲೆ ಹೋಗಿದ್ದರೆ, ಮೇಲಾಧಿಕಾರಿಗಳ ಅನುಮತಿಯನ್ನಾದರೂ ಪಡೆಯಬಹುದಿತ್ತು. ಇದ್ಯಾವದನ್ನು ಮಾಡದ ಪ್ರಭು ಕಾರಣವನ್ನು ನೀಡುವಲ್ಲಿ ವಿಫಲನಾದ.
    ಪ್ರಭುವಿನ ಮೊದಲಿನ ಎಲ್ಲಾ ಆರೋಪಗಳಿಗೆ "ಅಂಬೇಡ್ಕರ್ ಪ್ರಕರಣ" ಪುಷ್ಟಿ ನೀಡಿತು. ಇದೇ ಘಟನೆಯನ್ನು ಮುಂದಿಟ್ಟುಕೊಂಡು ಹಲವರು ಪದೇ ಪದೇ ಸಿಇಒ ಗೆ ಒತ್ತಾಯಿಸಲು ರಾಯಚೂರಿಗೆ ಗುಂಪು ಗುಂಪಾಗಿ ಹೋದರು.
    ದುರಂತಕ್ಕೆ ಹೋದವರೆಲ್ಲ, ತಮ್ಮ ಬಳಿಯಿರುವ ನಮ್ಮ ಹಳೆಯ ಪ್ರಜಾಸಮರ ಪತ್ರಿಕೆಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳಿಗೆ ಕೊಟ್ಟು, ಈತನ ಕರ್ಮಕಾಂಡವನ್ನು ವಿವರಿಸಿ ಬಂದಿದ್ದಾರೆ. ಇನ್ನೂ ದಲಿತರಲ್ಲಿ ಈ ವಿಷಯದ ಕುರಿತು  ಸ್ವಲ್ಪಮಟ್ಟಿಗೆ ಭಿನ್ನಾಭಿಪ್ರಾಯ ಬಂದರೂ ಕೂಡ, ಕೆಲವರು ಪ್ರಭುನನ್ನು ಬೆಂಬಲಿಸಿದರೆ, ಇನ್ನೂ ಕೆಲವರು ವಿರೋಧ ಮಾಡುತ್ತಲೇ ಪ್ರಕರಣವನ್ನು ಜಿಲ್ಲಾ ಪೋಲಿಸ್ ಇಲಾಖೆಯ ಮಟ್ಟಕ್ಕೆ ಕೊಂಡೊಯ್ಯದರು.
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಮ್ಮ ತಂಡದಿಂದ ಈ ಪ್ರಕರಣವನ್ನು ಪರಿಶೀಲಿಸಿದಾಗ, ಇಲ್ಲಿಯೂ ಕೂಡ ಪ್ರಭುವಿನ ಮೇಲೆ ಆರೋಪ ಮೇಲ್ನೋಟಕ್ಕೆ ಸಾಭೀತಾಯಿತು. ಈತನ ಬೇಜವಾಬ್ದಾರಿ ಮತ್ತು ನಿರ್ಲಕ್ಷತನದಿಂದಲೇ ಘಟನೆ ನಡೆಯಲು ಕಾರಣವೆಂದು ವರದಿಯಲ್ಲಿ ಹೇಳಲಾಗಿದೆ.
ಬೆಂಬಲಿಸದ ಭೂಪನಗೌಡ!
    ಪ್ರಭು ಎಲ್ಲ ಕಡೆ ಭೂಪನಗೌಡ ನನ್ನ ಸಂಬಂಧಿಯೆಂದು ಹೇಳಿಕೊಂಡು ತಿರುಗಿದರೂ ಕೂಡ, ಈ ವಿಷಯದಲ್ಲಿ ಜಿ.ಪಂ ಸದಸ್ಯರು ಮಧ್ಯಪ್ರವೇಶ ಮಾಡಲಿಲ್ಲವೆಂದು ಗೊತ್ತಾಗಿದೆ. ಆದರೆ, ಕೌಟುಂಬಿಕವಾಗಿ ಪ್ರಭು & ಭೂಪನಗೌಡರ ಕುಟುಂಬಗಳ ಮಧ್ಯೆ ಇರುವ ಭಿನ್ನಾಭಿಪ್ರಾಯವೇ ಭೂಪನಗೌಡರು ಮಧ್ಯೆ ಪ್ರವೇಶ ಮಾಡದಕ್ಕೆ ಕಾರಣವಾಗಿರಬಹುದು. ಇಲ್ಲವೇ ತಪ್ಪಿತಸ್ಥರು ಯಾರೇ ಇದ್ದರೂ ಕೂಡ ಶಿಕ್ಷೆ ಅನುಭವಿಸಲಿ ಎಂಬ ವಿಚಾರ ಭೂಪನಗೌಡರ ತಲೆಯಲ್ಲಿ ಇದ್ದಿರಬಹುದು.
    ಇನ್ನೂ ಹಟ್ಟಿಯಲ್ಲಿ ಕೆಲವರು ಹೇಳುವಂತೆ ಇಲ್ಲಿಯವರೆಗೆ ಪ್ರಭು ಹಟ್ಟಿಯಲ್ಲಿ ಏನೆಲ್ಲ ಅವ್ಯವಹಾರ ನಡೆಸಲು ಭೂಪನಗೌಡರ ಕೃಪಾಕಟಾಕ್ಷವೇ ಮುಖ್ಯಕಾರಣ ಎಂದೂ ಹೇಳುತ್ತಾರೆ!
    ಏನೇ ಇರಲಿ.. ಪ್ರಭು ತಪ್ಪು ಮಾಡಿದ್ದ. ಅದಕ್ಕಾಗಿ ಅಮಾನತ್ ಶಿಕ್ಷೆ ಅನುಭವಿಸುತ್ತಿದ್ದಾನೆಂಬುದರಲ್ಲಿ ಎರಡು ಮಾತಿಲ್ಲ.

ಸಮತಾ ಸಮಜದ ಕನಸುಗಾರ ಬಿ.ವಿ ಕಕ್ಕಿಲಾಯ

        ಸಮತಾ ಸಮಜದ ಕಲ್ಪನೆಯೊಂದಿಗೆ ಏಳು ದಶಕಗಳ ಕಾಲ ನಿರಂತರವಾಗಿ ಕರಾವಳಿಯ ಸಮಸ್ಯೆಗಳಿಗೆ ರಾಜ್ಯ, ದೇಶದ ಆಗು ಹೋಗುಗಳ ಬಗ್ಗೆ ತಮ್ಮ ಬ್ಲಾಗ್,ಸಾರ್ವಜನಿಕ ಸಭೆ ಸಮಾರಂಭಗಳ ಮೂಲಕ ಹಲವು ಬಾರಿ ಬೀದಿಗಿಳಿದು ನಿರಂತರವಾಗಿ ಸ್ಪಂದಿಸುತ್ತಿದ್ದ ಬೇವಿಂಜೆ ವಿಷ್ಣು ಕಕ್ಕಿಲ್ಲಾಯರು ದಣಿವರಿಯದ ಹೋರಾಟಗಾರರಾಗಿದ್ದವರು.
    ಬಿ.ವಿ. ಕಕ್ಕಿಲ್ಲಾಯರು ವ್ಯಕ್ತಿಯಲ್ಲ ನಮಗೊಂದು ಸ್ಫೂತರ್ಿಯ ಶಕ್ತಿಯಾಗಿದ್ದರು ಎನ್ನುವುದು ಅವರ ಒಡನಾಡಿಗಳ ಅಭಿಮಾನದ ಮಾತುಗಳು. ಸ್ವಾತಂತ್ರ ಹೋರಾಟಗಾರರಾಗಿದ್ದ ಅವರು 1947ರ ಮೊದಲು ಸ್ವಾತಂತ್ರಕ್ಕೆ ತಮ್ಮ ಹೋರಾಟವನ್ನು ಕೇಂದ್ರೀಕರಿಸಿದರೆ, ನಂತರದ ದಿನಗಳಲ್ಲಿ ಭೂಹೀನರು, ರೈತರು, ಬೀಡಿ ಕಾಮರ್ಿಕರು, ಹಂಚಿನ ಕಾಖರ್ಾನೆಯಲ್ಲಿ ದುಡಿಯುತ್ತಿದ್ದ ಹಾಗೂ ಶೋಷಿತ ಸಮಾಜದ ಎಲ್ಲಾ ಜನಸಮುದಾಯದ ಬಗ್ಗೆ ಧ್ವನಿಯೆತ್ತಿದವರು. ಕಕ್ಕಿಲ್ಲಾಯರು ಅಪ್ಪಟ ಜಾತ್ಯ ತೀತ ನಿಲುವಿನೊಂದಿಗೆ, 2 ಬಾರಿ ಶಾಸಕರಾಗಿ, 1 ಬಾರಿ ಸಂಸದರಾಗಿದ್ದರೂ ಭ್ರಷ್ಟಾಚಾರದ ಕಳಂಕ ಹೊಂದದ, ಸ್ವಚ್ಛ ಚಾರಿತ್ರದ ಮಾದರಿ ರಾಜಕಾರಣಿಯಾಗಿದ್ದರು.
ಬಿ.ವಿ.ಕಕ್ಕಿಲ್ಲಾಯರೇ ಹೇಳಿಕೊಂಡಂತೆ....
    ಕುವೆಂಪುರವರ ನಿಲುವಿನ ಬಗ್ಗೆ ಅಪಾರ ಗೌರವ ಹೊಂದಿದ್ದ ಕಕ್ಕಿಲ್ಲಾಯರು ಅವರ ಮಾನವತಾವಾದದ ವೈಚಾರಿಕ ನಿಲುವನ್ನು ಹಲವು ಕಡೆಗಳಲ್ಲಿ ಪುನರುಚ್ಚರಿಸಿದ್ದರು. ಕಳೆದ ವರ್ಷ ಜೂನ್ ತಿಂಗಳಲ್ಲಿ ರಾಜ್ಯದ ಇಬ್ಬರು ರಾಜಕೀಯ ಪಕ್ಷದ ಪ್ರಮುಖ ನಾಯಕರು ಧರ್ಮಸ್ಥಳದಲ್ಲಿ ಆಣೆ, ಪ್ರಮಾಣಕ್ಕೆ ಇಳಿದಾಗ ಕಕ್ಕಿಲ್ಲಾಯರು ಅದನ್ನು ವಿರೋಧಿಸಿದರು.
    ಧರ್ಮ ಮತ್ತು ಧಾಮರ್ಿಕ ಸಂಸ್ಥೆಗಳನ್ನು ನಾನು ನಿಂದಿಸುವುದಿಲ್ಲ ಧರ್ಮದ ಹೆಸರಿನಲ್ಲಿ ನಡೆಯುವ ಅಧರ್ಮದ ಬಗ್ಗೆ ನನಗೆ ಮುನಿಸಿದೆ. ನಿಜವಾದ ಧರ್ಮಕ್ಕೆ ನಾನು ತಲೆ ಬಾಗಿತ್ತೇನೆ, ಕೈ ಮುಗಿಯುತ್ತೇನೆ... ಎನ್ನುತ್ತಾ ಈ ಬಗ್ಗೆ ಬಹಳ ಹಿಂದೆ ಕುವೆಂಪುರವರು ಹೇಳಿದ ಮಾತುಗಳನ್ನೇ ಪುನರುಚ್ಚರಿಸಿದರು.
    ಜನಲೋಕಪಾಲ್ ಮಸೂದೆ ಜಾರಿಯಾಗಬೇಕು, ಲೋಕಪಾಲ್ ಬಲಗೊಳ್ಳಬೇಕು: ಸಂವಿಧಾನಬದ್ಧವಾದ ಪ್ರಜಾಪ್ರಭುತ್ವದಲ್ಲಿ ಲೋಕಪಾಲ ಮತ್ತು ಲೋಕಾಯುಕ್ತ ಪ್ರಮುಖ ಪಾತ್ರವಹಿಸಬೇಕಾಗಿದೆ. ಕಳೆದ 63 ವರ್ಷಗಳಲ್ಲಿ ಲೋಕಪಾಲ ಅಸ್ತಿತ್ವಕ್ಕೆ ಬಂದಿಲ್ಲ, ಕೆಲವು ರಾಜ್ಯಗಳಲ್ಲಿ ಲೋಕಾಯುಕ್ತವೂ ಇಲ್ಲ. ಇದ್ದರೂ ಆಯಾ ರಾಜ್ಯಗಳ ರಾಜ್ಯಸರಕಾರ ಅವುಗಳಿಂದ ಅಬಾಧಿತವಾಗಿದೆ. ಇದರಿಂದ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಒಳ ನುಸುಳಲು ಸಾಧ್ಯವಾಗಿದೆ. ನಮ್ಮ ದೇಶವನ್ನು ಆಳಿರುವ ಆಡಳಿತ ಪಕ್ಷಗಳು ಉದ್ದೇಶ ಪೂರ್ವಕವಾಗಿಯೇ ಈ ಪರಿಸ್ಥಿತಿಯನ್ನು ನಿಮರ್ಿಸಿವೆ. ಈ ಎಲ್ಲಾ ಕಾರಣಗಳಿಂದ ಲೋಕಾಯುಕ್ತ ಬಲಗೊಳ್ಳಬೇಕು. ಎಲ್ಲಾ ಜನರನ್ನೊಳಗೊಂಡ ಜನಲೋಕಪಾಲ ಮಸೂದೆ ಜಾರಿಯಾಗ ಬೇಕು... ಎನ್ನುವುದು ಬಿ.ವಿ.ಕಕ್ಕಿಲ್ಲಾಯರ ಆಶಯವಾಗಿತ್ತು.
    ಭಾರತದ ಚುನಾವಣಾ ವ್ಯವಸ್ಥೆ ಬದಲಾವಣೆ ಯಾಗಬೇಕು: ಪ್ರಪಂಚದ ವಿವಿಧ ದೇಶಗಳಲ್ಲಿ ವಿವಿಧ ಚುನಾವಣಾ ವ್ಯವಸ್ಥೆ ಜಾರಿಯಲ್ಲಿದೆ. 93 ದೇಶಗಳಲ್ಲಿ ಮತದಾನದಲ್ಲಿ ಅನುಪಾತದ ಆಧಾರದಲ್ಲಿ ಪಕ್ಷಗಳ ಶೇ. 50 ಅಭ್ಯಥರ್ಿಗಳನ್ನು ಆರಿಸಿ ಉಳಿದ ಶೇ. 50ರಷ್ಟು ಅಭ್ಯಥರ್ಿಗಳನ್ನು ಚುನಾವಣೆಯಲ್ಲಿ ಬಹುಮತದ ಮೂಲಕ ಆಯ್ಕೆ ಮಾಡುವ ಪದ್ಧತಿಯಿದೆ. ಭಾರತದಲ್ಲೂ ಈ ರೀತಿಯ ವ್ಯವಸ್ಥೆ ಜಾರಿಯಾಗಬೇಕು...ಎನ್ನುವುದು ಕಕ್ಕಿಲ್ಲಾಯರ ಅಭಿಮತ.
    ಅಡ್ವಾಣಿ, ರಾಮ್ದೇವ್, ಹಜಾರೆ ಹೋರಾಟಗಳ ಬಗ್ಗೆ ಎಚ್ಚರ : ಭ್ರಷ್ಟಾಚಾರದ ವಿರುದ್ಧ ಅಡ್ವಾಣಿ ಹೊರಡಿಸುತ್ತಿರುವ ರಥಯಾತ್ರೆ, ರಾಮ್ದೇವ್, ಹಝಾರೆಯೊಂದಿಗೆ ಸೇರಿ ನಡೆಸಲು ಹೊರಟಿರುವ ಹೋರಾಟಗಳ ಬಗ್ಗೆ ಜನ ಎಚ್ಚರದಿಂದ ಇರಬೇಕು. ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಭ್ರಷ್ಟಾಚಾರವನ್ನು ತಡೆಯಲು ಸಾಧ್ಯವಾಗದಿರುವ ಅಡ್ವಾಣಿ, ಭ್ರಷ್ಟಾಚಾರ ವಿರುದ್ಧ ಆರಂಭಿಸಿರುವ ರಥಯಾತ್ರೆ ಒಂದು ಪ್ರಹಸನ. ರಾಮ್ದೇವ್ರನ್ನು ಮುಂದಿರಿಸಿ ವಿದೇಶಿ ಬ್ಯಾಂಕ್ಗಳಲ್ಲಿರುವ ಹಣವನ್ನು ವಶಪಡಿಸಿಕೊಳ್ಳುವ ನೆಪದಲ್ಲಿ ದೇಶಾದ್ಯಂತ ಅಶಾಂತಿ ಹಬ್ಬಿಸಿ ಅಧಿಕಾರ ಹಿಡಿಯಲು ಬಿಜೆಪಿ ಹವಣಿಸುತ್ತಿದೆ. ಆದರೆ, ರಾಮ್ದೇವ್ ಬಂಧನದೊಂದಿಗೆ ಆ ಪ್ರಹಸನ ಅಂತ್ಯಗೊಂಡಿತು. ಬಳಿಕ ಅಣ್ಣಾ ಹಝಾರೆಯೊಂದಿಗೆ ನುಸುಳಿಕೊಂಡು ಭ್ರಷ್ಟಾಚಾರ ಚಳವಳಿಯ ಮೂಲಕ ಅವಕಾಶಕ್ಕಾಗಿ ಕಾಯುತ್ತಿರುವ ರಾಮ್ದೇವ್ ಬಗ್ಗೆ ಎಚ್ಚರದಿಂದಿರಬೇಕು ಇಂಥವರನ್ನು ಒಳಗೊಂಡ ಹೋರಾಟ ಒಂದು ರಾಜಕೀಯ ಗಿಮಿಕ್ ಎನ್ನುವುದು ಕಕ್ಕಿಲ್ಲಾಯರ ಟೀಕೆ.
ಕೈಗೂಡದ ಕಕ್ಕಿಲ್ಲಾಯರ ಆಶಯ
    ಎಡ ಪಕ್ಷಗಳನ್ನು ಒಂದುಗೂಡಿಸುವ ಬಿ.ವಿ. ಕಕ್ಕಿಲ್ಲಾಯರ ಆಶಯ ಮಾತ್ರ ಕೊನೆಗೂ ಕೈಗೂಡಲಿಲ್ಲ. ಕಕ್ಕಿಲ್ಲಾಯರು ಕೊನೆಯ ದಿನಗಳಲ್ಲಿ ಈ ಮಾತನ್ನು ಹಲವು ಬಾರಿ ಹೇಳುತ್ತಲೇ ಬಂದಿದ್ದರು. ಅವರ ಬ್ಲಾಗಿನಲ್ಲಿ ಅವರು ಈ ಬಗ್ಗೆ ವಿವರವಾದ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಭಾರತ ಕಮ್ಯುಸ್ಟ್ ಪಕ್ಷವು 1964ರಲ್ಲಿ ವಿಭಜಿತವಾಗಿ 47 ವರ್ಷಗಳು ಕಳೆದುವು. 1940ರಲ್ಲಿ ವಿದ್ಯಾಥರ್ಿ ದಿಸೆಯಲ್ಲಿದ್ದಾಗಲೇ ಭಾರತ ಕಮ್ಯುನಿಸ್ಟ ಪಕ್ಷವನ್ನು ಸೇರಿದ್ದ ನಾನು ಪಕ್ಷದಲ್ಲಿ ಏಳು ದಶಕಗಳ ಕಾಲ ಸಕ್ರಿಯ ಪಾತ್ರ ವಹಿಸಿದ್ದೇನೆ. ಭಾರತೀಯ ರಾಜಕಾರಣದಲ್ಲಿ ಕಮ್ಯುನಿಸ್ಟ್ ಪಕ್ಷವು ಕಾಂಗ್ರೆಸ್ ಪಕ್ಷವನ್ನು ಹೊರತು ಪಡಿಸಿದರೆ 2ನೆಯ ಬಲಿಷ್ಠ ಪಕ್ಷವಾಗಿ ಬೆಳೆದು ನಿಂತಿದೆ. ಕಮ್ಯುನಿಸ್ಟ್ ಚಳವಳಿಯು ವಿಭಜಿತವಾದ ಬಳಿಕ ಹಲವು ಏಳು ಬೀಳುಗಳನ್ನು ಕಂಡಿದೆ ಹಾಗೂ ತನ್ನ ಸ್ಥಾನ ಮಾನಗಳನ್ನೂ ಕಳೆದುಕೊಂಡಿದೆ. ಇದೀಗ ಹಿಂದೆಂದೂ ಕಾಣದ ಸೋಲನ್ನೂ ಅನುಭವಿಸಿದೆ. ಅಲ್ಲದೆ ಹಿಂದೆ ಲೆಕ್ಕಕ್ಕೇ ಇಲ್ಲ ಎಂಬ ಸ್ಥಾನದಲ್ಲಿದ್ದ ಬಲಪಂಥೀಯ ಕೋಮುವಾದಿ ನೇತೃತ್ವದ ಭಾರತೀಯ ಜನತಾ ಪಕ್ಷವು ಇಂದು ಪ್ರಬಲವಾಗಿ ಬೆಳೆದು ದ್ವಿತೀಯ ಸ್ಥಾನಕ್ಕೆ ಏರಿ ನಿಂತಿದೆ. ಇದು ಕಮ್ಯುನಿಸ್ಟ್ ಪಕ್ಷದ ವಿಭಜನೆಯ ನೇರ ಪರಿಣಾಮ.
    ಈ ಒಡಕಿನ ದುಲರ್ಾಭವನ್ನು ಸಮಯ ಸಾಧಕರು ಪಡೆದು ಸಕರ್ಾರವು ಬಂಡವಾಳಶಾಹಿ ಧೋರಣೆಗಳನ್ನು ಹಮ್ಮಿಕೊಂಡು ತೀವ್ರಗತಿಯಲ್ಲಿ ಅವುಗಳನ್ನು ಅನುಷ್ಠಾನಗೊಳಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಸೇವಾ ಕ್ಷೇತ್ರಗಳಾದ ರಸ್ತೆ, ಸಂಚಾರ, ವಿದ್ಯುತ್, ನೀರು, ವಿಮೆ, ಅಂಚೆ, ದೂರವಾಣಿ, ದೂರದರ್ಶನ, ಆಕಾಶವಾಣಿ, ಇತ್ಯಾದಿಗಳನ್ನು ಸಹ ಖಾಸಗಿ ಸಂಸ್ಥೆಗಳಿಗೆ ವಹಿಸಿಕೊಡುವುದನ್ನು ಕಾಣುತ್ತಿದ್ದೇವೆ. ಬಹುರಾಷ್ಟ್ರೀಯ ಸಂಸ್ಥೆಗಳನ್ನು ಇಲ್ಲಿಯ ಸಕರ್ಾರ ಮಣೆಹಾಕಿ ಸ್ವಾಗತಿಸುತ್ತಿದೆ. ದೇಶದ ಅಮೂಲ್ಯ ಪ್ರಾಕೃತಿಕ ಸಂಪತ್ತೆಲ್ಲಾ ಸೂರೆಗೊಂಡು ಪರದೇಶಕ್ಕೆ ಕಳ್ಳ ಸಾಗಣೆಯಾಗುತ್ತಿರುವುದು ಕಂಡುಬರುತ್ತಿದೆ.
    ದುಡಿಯುವ ಕಾಮರ್ಿಕರು ಹಿಂದೆ ಹೋರಾಟ, ತ್ಯಾಗ ಮತ್ತು ಬಲಿದಾನಗಳನ್ನು ಮಾಡಿ ಪಡೆದಿದ್ದ ಸವಲತ್ತುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಕೆಲಸದ ನಿಶ್ಚಿತತೆ, ಖಾಯಂಮಾತಿ ಇಲ್ಲದೆ ಗುತ್ತಿಗೆಯ ಆಧಾರದಲ್ಲಿ ನೌಕರರನ್ನು ನೇಮಿಸಿಕೊಂಡು ಅವರನ್ನು ಅನೇಕ ಸವಲತ್ತುಗಳಿಂದ ವಂಚಿಸಲಾಗುತ್ತಿದೆ. ನಮ್ಮ ದೇಶದ ಜನರಲ್ಲಿ ಶೇ. 70ರಷ್ಟು ಜನರು ಕೃಷಿಯನ್ನೇ ಅವಲಂಬಿಸಿರುತ್ತಾರೆ. ಸಕರ್ಾರದ ಕೃಷಿ ನೀತಿಯಿಂದಾಗಿ ಅವರ ಬದುಕೇ ಚಿಂತಾಜನಕವಾಗಿದೆ. ಬೆಳೆದ ಬೆಳೆಗೆ, ದವಸ ಧಾನ್ಯಗಳಿಗೆ ಬೆಂಬಲ ಬೆಲೆ ಇಲ್ಲದೆ, ತೆಗೆದ ಸಾಲಗಳನ್ನು ಮರುಪಾವತಿಸಲಾಗದೆ ಹೊಲ ಗದ್ದೆಗಳನ್ನು ಕಳೆದುಕೊಂಡು ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಫಲವತ್ತಾದ ಕೃಷಿ ಯೋಗ್ಯ ಭೂಮಿಯನ್ನು ವಿಶೇಷ ಆಥರ್ಿಕ ವಲಯದ ಹೆಸರಲ್ಲಿ ಬಂಡವಾಳಶಾಹಿಗಳು ವಶೀಕರಿಸಿ ದುಲರ್ಾಭ ಪಡೆಯುತ್ತಿದ್ದಾರೆ.
    ಶಿಕ್ಷಣವು ಖಾಸಗೀಕರಣಗೊಂಡು ವ್ಯಾಪಾರದ ಸರಕಾಗಿ ಬಡ ಕಾಮರ್ಿಕರ,ರೈತರ ಮಕ್ಕಳಿಗೆ ಮರೀಚಿಕೆಯಾಗಿದೆ. ಸರಕಾರದ ಕಾರ್ಯಕ್ರಮಗಳು ಇನ್ನೂ ತೀವ್ರಗತಿಯಲ್ಲಿ ಖಾಸಗೀಕರಣದತ್ತ ಸಾಗುತ್ತಿರುವುದನ್ನು ಕಾಣುವಾಗ ಭೀತಿ ಹುಟ್ಟುತ್ತಿದೆ.ಆಂತೆಯೇ ಸರ್ವ ಸವಲತ್ತುಗಳನ್ನು ಸರಕಾರದಿಂದ ಪಡೆದು ಸ್ಥಾಪಿತವಾದ ಖಾಸಗಿ ಆಸ್ಪತ್ರೆಗಳು ಪರಿಸ್ಥಿತಿಯ ದುಲರ್ಾಭವನ್ನು ಪಡೆದು ಬಡವರನ್ನು ಸುಲಿಯುವ ಮತ್ತು ಬಡ ರೋಗಿಗಳನ್ನು ಪ್ರಯೋಗಾಲಯದ ಬಲಿಪಶು (ಗಿನಿಪಿಗ್)ಗಳಂತೆ ಹೊಸ ಮದ್ದುಗಳ, ಆವಿಷ್ಕಾರಗಳ ಪ್ರಯೋಗಕ್ಕೆ ಅವರನ್ನು ಬಳಸಲಾಗುತ್ತಿದೆ. ಶ್ರೀಮಂತರಿಗೆ ಅವು ಐಷಾರಾಮಿ ವಿರಾಮ ಕೇಂದ್ರಗಳಾಗಿ ಇರುವುದನ್ನು ಕಾಣುತ್ತಿದ್ದೇವೆ.ಮನೆ ಬಾಡಿಗೆ ನಿಯಂತ್ರಣಗಳಿಲ್ಲದೆ ಬಾಡಿಗೆ ವಸತಿದಾರರ ಬದುಕೇ ದುಸ್ತರವಾಗಿದೆ.
    ಲಂಚ, ಭ್ರಷ್ಟಾಚಾರಗಳು ಬಂಡವಾಳಿಗಳ ಶನ ಸಂತಾನಗಳಾಗಿ ದೇಶವನ್ನು ಕಾಡುತ್ತಿವೆ. ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರ, ದುವ್ರ್ಯವಹಾರ, ವಿದೇಶೀ ಬ್ಯಾಂಕುಗಳಲ್ಲಿ ಕಳ್ಳ ಕಪ್ಪುಹಣದ ಶೇಖ ರಣೆಗಳು ಮುಗಿಲು ಮುಟ್ಟಿರುವ ವರದಿಗಳನ್ನು ನಾವು ಕಾಣುತ್ತಿದ್ದೇವೆ. ಮೂಲಭೂತ ಜಾತಿವಾದಿಗಳು ದೇಶದಾದ್ಯಂತ ಭಯೋತ್ಪಾದನೆ, ಅರಾಜಕತೆಯನ್ನು ಸೃಷ್ಟಿಸಿ ಅಧಿಕಾರವನ್ನು ಕಸಿದು ಕೊಳ್ಳುವ ಸಂಚಿನ ರಹಸ್ಯ ಬಯಲಾಗಿದ್ದನ್ನೂ ಕಾಣುತ್ತಿದ್ದೇವೆ....ಇಂತಹ ದುಸ್ಥಿತಿಯಲ್ಲಿ ಎಡ ಪಕ್ಷಗಳ ಏಕೀಕರಣವನ್ನು ಒಂದು ಆಶಾಕಿರಣವಾಗಿ ಭಾರತದ ಶ್ರಮ ಜೀವಿಗಳು ಎದುರು ನೋಡುತ್ತಿದ್ದಾರೆ.ಈ ವಿಷಮ ಪರಿಸ್ಥಿತಿಯನ್ನು ಮನ ಗಂಡು ಕಮ್ಯುನಿಸ್ಟ್(ಮಾ) ಪಕ್ಷದ ಮುಂದಾಳು ಸೀತಾರಾಂ ಯೆಚೂರಿಯವರು ಎರಡೂ ಪಕ್ಷಗಳ ಏಕೀಕರಣಕ್ಕೆ ಕರೆಕೊಟ್ಟಿದ್ದಾರೆ.
    ವಿಶ್ವದ ಇತರ ರಾಷ್ಟ್ರಗಳಲ್ಲಿಯೂ ಅಂತಹ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಿ ಬಳಿಕ ಒಂದುಗೂಡಿ ಚೇತರಿಸಿರುವುದನ್ನು ನಾವು ಕಂಡಿದ್ದೇವೆ. ಈ ಹಿಂದೆಯೇ ನಮ್ಮ ಪಕ್ಷದ ನಾಯಕರು ಅನೇಕ ಬಾರಿ ಏಕೀಕರಣದ ಕರೆಯನ್ನು ಕೊಟ್ಟಿದ್ದರೂ ಅದು ಕಾರ್ಯಗತವಾಗಿರಲಿಲ್ಲ ಎಂದು ಹೇಳಲು ವಿಷಾದಿಸುತ್ತೇನೆ. ಆರಂಭದಲ್ಲಿ ಪ್ರಧಾನ ಕಾರ್ಯದಶರ್ಿಯಾಗಿದ್ದ ರಾಜೇಶ್ವರ ರಾಯರು, ಬಳಿಕ ಇಂದ್ರಜಿತ ಗುಪ್ತ, ಆ ಬಳಿಕ ಎ. ಬಿ. ಬರ್ಧನ್ರವರು ಪಕ್ಷಗಳ ಏಕೀಕರಣಕ್ಕೆ ಬಹಳಷ್ಟು ಪ್ರಯತ್ನಗಳನ್ನು ಮಾಡಿರುವುದನ್ನು ನೆನಪಿಸುತ್ತೇನೆ. ಇದು ಕಾಲದ ಅವಶ್ಯಕತೆಯಾಗಿದೆ. ಇದು ಕೇವಲ ನನ್ನ ಆಸೆ ಮಾತ್ರವಲ್ಲ, ನಮ್ಮ ಪಕ್ಷದ, ಅದರ ನೇತೃತ್ವದಲ್ಲಿರುವ ಕಾಮರ್ಿಕ, ರೈತ, ವಿದ್ಯಾಥರ್ಿ, ಯುವಜನ, ಮಹಿಳಾ ಹಾಗೂ ಇತರ ಎಲ್ಲಾ ಸಾಮೂಹಿಕ ಸಂಘಟನೆಗಳ ಹಾಗೂ ಪಕ್ಷದ ಬಗ್ಗೆ ಸದಭಿಪ್ರಾಯವುಳ್ಳ, ಪಕ್ಷವನ್ನು ಬೆಂಬಲಿಸುವ ಎಡ ಅಭಿಪ್ರಾಯವುಳ್ಳ ಬುದ್ಧಿ ಜೀವಿಗಳು ಇದೇ ಅಭಿಪ್ರಾಯವನ್ನು ತಳೆದಿದ್ದಾರೆ.
    ಕಮ್ಯುನಿಸ್ಟ್ ಪಾಟರ್ಿಯು ತನ್ನ ಹಿಂದಿನ ವರ್ಚಸ್ಸನ್ನು ಪಡೆದು ದೇಶದ ಆಡಳಿತವೇ ಎಡ ಪ್ರಜಾಪ್ರಭುತ್ವವಾದಿ ದಿಸೆಯಲ್ಲಿ ರೂಪುಗೊಳ್ಳಲಿ ಎಂದು ಒಬ್ಬ ಹಿರಿಯ ಕಮ್ಯುನಿಸ್ಟ್ ಕಾರ್ಯಕರ್ತನಾಗಿ ನಾನು ನಿವೇದಿಸಿಕೊಳ್ಳುತ್ತೇನೆ. ಇದು ನನ್ನ ಜೀವಿತಾವಧಿಯಲ್ಲೇ ಜರುಗಲಿ ಎಂದು ನನ್ನ ಜೀವಿತದ ಕೊನೆಯ ಹಂತದಲ್ಲಿರುವ ನಾನು ಹಾರೈಸುತೇನೆ ಎನ್ನುವ ಕಕ್ಕಿಲ್ಲಾಯರ ಆಶಯ ಅವರ ಜೀವಿತಾವಧಿಯಲ್ಲಿ ಈಡೇರಲಿಲ್ಲ. ಎಡ ಪಕ್ಷಗಳು ಏಕೆ ಒಂದಾಗಬೇಕು ಎಂದು ವಿವರವಾಗಿ ತಿಳಿಸಿರುವ ಕಕ್ಕಿಲ್ಲಾಯರಿಗೆ ಇಂದಿನ ವಾಸ್ತವದ ಬಗ್ಗೆ ಅರಿವಿತ್ತು. ಇಂದಿನ ಅಧಿಕಾರ ಲಾಲಸೆ, ಭ್ರಷ್ಟಾಚಾರದ ರಾಜಕಾರಣದಿಂದ ರೋಸಿ ಹೋದ ಕಕ್ಕಿಲ್ಲಾಯರು ಭಾರತದಲ್ಲಿ ಇನ್ನೊಂದು ಕ್ವಿಟ್ ಇಂಡಿಯಾ ಚಳವಳಿಯಾಗಬೇಕು ಎಂದು ಕಳೆದ ಸ್ವಾತಂತ್ರ ದಿನದ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿ.ವಿ.ಕಕ್ಕಿಲ್ಲಾಯರ ಹೋರಾಟದ ಬದುಕು
    ಬಿ.ವಿ.ಕಕ್ಕಿಲ್ಲಾಯ ಬಾಲ್ಯದಿಂದಲೇ ಹುಟ್ಟು ಹೋರಾಟಗಾರರಾಗಿ ಬೆಳೆದು ಬಂದವರು. ತಮ್ಮ 3ನೆ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು, 21ನೆ ವಯಸ್ಸಿನಲ್ಲಿಯೇ ಹೋರಾಟಕ್ಕಿಳಿದ ಬಿ.ವಿ.ಕಕ್ಕಿಲ್ಲಾಯರು 1940ರಲ್ಲಿ ಭಾರತೀಯ ಕಮ್ಯೂನಿಸ್ಟ್ ಪಕ್ಷದ ಸದಸ್ಯರಾಗಿ ಸೇರಿ 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.
    ಆಗ ನಿಷೇಧಿಸಿದ ಸಾಹಿತ್ಯ ಹೊಂದಿದ್ದ ಆರೋಪಕ್ಕೆ ಒಳಗಾಗಿ ಬ್ರಿಟಿಷರಿಂದ ಬಂಧಿಸಲ್ಪಟ್ಟಿದ್ದ ಕಕ್ಕಿಲ್ಲಾಯರು 9ತಿಂಗಳು ಮಂಗಳೂರಿನ ಜೈಲಿನಲ್ಲಿ ಕಾಲ ಕಳೆದರು. 1943ರಿಂದ 45ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೀಡಿ, ಹಂಚು, ನೆಯ್ಗೆ, ಗೇರು ಬೀಜ ಕಾಮರ್ಿಕರನ್ನು ಸಂಘಟಿಸಿದರು. 1946ರಲ್ಲಿ ಮತ್ತೆ ಬಂಧನಕ್ಕೊಳಗಾದ ಕಕ್ಕಿಲ್ಲಾಯರನ್ನು ವೆಲ್ಲೂರು, ಕಣ್ಣನ್ನೂರು ಜೈಲಿನಲ್ಲಿ ಇಡಲಾಯಿತು. ಭಾರತಕ್ಕೆ ಸ್ವಾತಂತ್ರ ದೊರೆತ ದಿನ 1947ರ ಆಗಸ್ಟ್ 14 ರಂದು ಬಿಡುಗಡೆಯಾಗಿ 15 ರಂದು ಮನೆಗೆ ಮರಳಿದರು.
    1948ರಿಂದ 50ರವರೆಗೆ ದೇಶಾದ್ಯಂತ ಕಮ್ಯೂನಿಸ್ಟರ ಮೇಲೆ ನಡೆದ ದಬ್ಬಾಳಿಕೆಯಿಂದ ಭೂಗತರಾಗಿದ್ದು ಕೊಂಡು ರಾಜ್ಯದಲ್ಲಿ ಪಕ್ಷ ಹಾಗೂ ಕಾಮರ್ಿಕರನ್ನು ಸಂಘಟಿಸಿದ್ದರು. 1950ರಲ್ಲಿ ಬೆಂಗಳೂರಿನ ಕಾರಾ ಗೃಹದಲ್ಲಿ 6 ತಿಂಗಳು ಬಂಧನಕ್ಕೊಳಗಾದರು. 1952ರಲ್ಲಿ ಮದ್ರಾಸು ಅಸೆಂಬ್ಲಿಯಿಂದ ಮೊಟ್ಟಮೊದಲು ರಾಜ್ಯಸಭೆಗೆ ಆಯ್ಕೆಯಾದರು. ಬಳಿಕ ಕನರ್ಾಟಕ ಏಕೀಕರಣ ಹೋರಾಟದಲ್ಲಿ ಪಾಲ್ಗೊಂಡರು. 1955ರ ಆಗಸ್ಟ್ 15ರಲ್ಲಿ ಗೋವಾ ವಿಮೋಚನಾ ಹೋರಾಟದಲ್ಲಿ ಮಂಗಳೂರು ತಂಡದ ನಾಯಕತ್ವ ವಹಿಸಿದ್ದ ತಂಡ ಇದ್ದುಸ್ ಎಂಬ ಹಳ್ಳಿಗೆ ನುಸುಳಿ ಭಾರತದ ರಾಷ್ಟ್ರ ಧ್ವಜವನ್ನು ಹಾರಿಸುವಲ್ಲಿ ಯಶಸ್ವಿಯಾಗಿದ್ದರು.
    1956 ರಿಂದ 62ರವರೆಗೆ ಭೂಸುಧಾರಣೆಗಾಗಿ ರಾಜ್ಯಾದ್ಯಂತ ರೈತರ ಹೋರಾಟ ಸಂಘಟನೆ ರೂಪಿಸಿದರು. ಚೀನಾ ಯುದ್ಧದ ಸಂದರ್ಭ 1962ರಲ್ಲಿ ಬೆಂಗಳೂರಿನಲ್ಲಿ ಕಕ್ಕಿಲ್ಲಾಯರು ಹಲವು ವರ್ಷ ಬಂಧನ ಕ್ಕೀಡಾದರು. 1982ರಲ್ಲಿ ನರಗುಂದದ ರೈತರ ಮೇಲೆ ಗೋಲಿಬಾರು ನಡೆದಾಗ ಪ್ರತಿಭಟಿಸಿ ರಾಜ್ಯಾದ್ಯಂತ ಜಾಗೃತಿ ಮೂಡಿಸಿ ಬೆಂಗಳೂರಿಗೆ ಬೃಹತ್ ರೈತ ಜಾಥಾ ಸಂಘಟಿಸಿದರು. 92ರ ಹರೆಯದ ಇಳಿವಯಸ್ಸಿನಲ್ಲೂ ಸಾಮಾಜಿಕ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಬಿ.ವಿ.ಕಕ್ಕಿಲ್ಲಾಯರು ಅನಾರೋಗ್ಯದ ಹೊರತಾಗಿಯೂ ಮೇ 18ರಂದು ನಕ್ಸಲ್ ಬೆಂಬಲಿಗ ಎಂಬ ಆರೋಪದಲ್ಲಿ ಜೈಲುವಾಸ ಅನುಭವಿಸುತ್ತಿರುವ ವಿಠಲ ಮಲೆಕುಡಿಯರ ಬಂಧನವನ್ನು ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸಿಪಿಐ ಜಿಲ್ಲಾ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ್ದು ಅವರ ಕೊನೆಯ ಹೋರಾಟ.
    ಸ್ವಾತಂತ್ರ ಪೂರ್ವದಲ್ಲಿ ನಿಷೇಧಿತ ಸಾಹಿತ್ಯ ಹೊಂದಿದ್ದ ಅಪರಾಧಕ್ಕೆ ಬಂಧನಕ್ಕೊಳಗಾಗಿದ್ದ ಕಕ್ಕಿಲ್ಲಾಯರಿಗೆ ಸ್ವಾತಂತ್ರ ನಂತರವೂ ಪರಿಸ್ಥಿತಿ ಬದಲಾಗದೆ ಇರುವುದು ಅವರನ್ನು ಹೋರಾಟಕ್ಕೆ ಪ್ರೇರೇಪಿಸಿತ್ತು. ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ನ ಜೀವನ ಚರಿತ್ರೆಯ ಸಾಹಿತ್ಯ ಹೊಂದಿರುವುದು ಅಪರಾಧ ಎಂದು ವಿಠಲ ಮಲೆಕುಡಿಯನೆಂಬ ವಿದ್ಯಾಥರ್ಿಯನ್ನು ಬಂಧಿಸಿರುವುದು ಅಪಾರ ನೋವನ್ನುಂಟುಮಾಡಿತ್ತು.
ಕಕ್ಕಿಲ್ಲಾಯರ ಸಾಹಿತ್ಯ ಕೃಷಿ:
    1960ರಲ್ಲಿ ನವ ಕನರ್ಾಟಕ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿದ ಕಕ್ಕಿಲ್ಲಾಯರು ಅಕ್ಷರ ಲೋಕದಲ್ಲಿ ಹೊಸ ಲೋಕವನ್ನೇ ಅನಾವರಣಗೊಳಿಸಲು ಕಾರಣರಾದರು. ಇಂದಿಗೂ ನವಕನರ್ಾಟಕ ರಾಜ್ಯದಲ್ಲಿ ಪ್ರಮುಖ ಪ್ರಕಾಶನ ಸಂಸ್ಥೆಯಾಗಿ ಹಲವಾರು ಅಮೂಲ್ಯ ಕೃತಿಗಳನ್ನು ಹೊರತಂದಿದೆ. 1983ರಲ್ಲಿ ವಿಟ್ಲ ವಿಧಾಸಭೆಯ ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ಬರವಣಿಯತ್ತ ಗಮನ ಹರಿಸಿದ ಕಕ್ಕಿಲ್ಲಾಯರು, ಕಾಲರ್್ ಮಾಕ್ಸರ್್ ಬದುಕು ಬರಹ, ಫೆಡ್ರಿಕ್ ಎಂಗಲ್ಸ್, ಪ್ರಾಚೀನ ಭಾರತದ ಭೌತಿಕವಾದ ಕೃತಿ, ಭಾರತ ದರ್ಶನ ಕೃತಿ, ಬಾಬ್ರಿ ಮಸೀದಿ ರಾಮ ಜನ್ಮ ಭೂಮಿ, ಸ್ವಾತಂತ್ರ ಸಂಗ್ರಾಮದ ಹೆಜ್ಜೆಗಳು ದಲಿತರ ಸಮಸ್ಯೆಗಳು ಮತ್ತು ಪರಿಹಾರಗಳು, ಭಾರತದ ಮುಸ್ಲಿಮರು ಎಂಬ ಅನುವಾದಿತ ಕೃತಿಗಳು ಸೇರಿದಂತೆ ಸಮಕಾಲೀನ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸಿ ಲೇಖನಗಳ ಮೂಲಕ ಪತ್ರಿಕೆಗಳಲ್ಲಿ ತಮ್ಮ ಅಭಿಪ್ರಾಯ ಪ್ರಕಟಿಸಿದ್ದರು.
    ಬಾಲ್ಯ, ಶಿಕ್ಷಣ: ಕಾಸರಗೋಡು ಜಿಲ್ಲೆಯ ಬೇವಿಂಜೆ ಎಂಬ ಗ್ರಾಮದ ಪ್ರತಿಷ್ಠಿತ ತರವಾಡು ಮನೆತನದ ಕುಟುಂಬದಲ್ಲಿ 1919 ಎಪ್ರಿಲ್ 11ರಂದು ಜನಿಸಿದ ವಿಷ್ಣು ಕಕ್ಕಿಲ್ಲಾಯರ ತಂದೆಯ ಹೆಸರು ಬೇವಿಂಜೆ ವಿಷ್ಣು ಕಕ್ಕಿಲ್ಲಾಯ. ತಾಯಿ ಗಂಗಮ್ಮ. ಕಾಸರಗೋಡಿನ ಬಾಸೆಲ್ ಮಿಶನ್ನಲ್ಲಿ ಮಾಧ್ಯಮಿಕ ಶಾಲೆ ಹಾಗೂ ಜಿಲ್ಲಾ ಬೋಡರ್್ ಫ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿವರೆಗಿನ ಅಧ್ಯಯನ. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ರಸಾಯನ ಶಾಸ್ತ್ರದಲ್ಲಿ ಬಿ.ಎ ಅಧ್ಯಯನ. ಆಗಲೇ ಪತ್ರಕರ್ತ, ಸ್ವಾತಂತ್ರ ಹೋರಾಟಗಾರರಾದ ಕಯ್ಯಾರ ಕಿಂಞಣ್ಣ ರೈ, ಮಹಾದೇವ ಪಟ್ಟಣ ಶೆಟ್ಟಿ ಮೊದಲಾದವರ ಸಂಪರ್ಕವಾಯಿತು. ಆಗ ಖಾಸಗಿ ವಸತಿ ಗೃಹದಲ್ಲಿ ಓದಿರುವ ಕಕ್ಕಿಲಾಯರ ಜೊತೆ ಕು.ಶಿ.ಹರಿದಾಸ ಭಟ್ ಜೊತೆಗಿದ್ದರು.
    1964 ರ ಜನವರಿ 9ರಂದು ಅಹಲ್ಯಾರನ್ನು ಮದುವೆಯಾದರು. ಬಿ.ವಿ.ಕಕ್ಕಿಲ್ಲಾಯ ಹಾಗೂ ಅಹಲ್ಯಾ ದಂಪತಿಗೆ ಶ್ರೀನಿವಾಸ ಕಕ್ಕಿಲ್ಲಾಯ, ವೆಂಕಟಕೃಷ್ಣ, ಹರೀಶ್, ಸೂರ್ಯನಾರಾಯಣರು ಪುತ್ರರು. ಕಮ್ಯೂನಿಸ್ಟ್ ಚಳವಳಿಗೆ ನೀಡಿದ ಕೊಡುಗೆಗೆ ಧಾರವಾಡದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಮಾಕ್ಸರ್ಿಸ್ಟ್ ಥಿಯರಿ ಮತ್ತು ಪ್ರಾಕ್ಟಿಸ್ ಸಂಸ್ಥೆಯಿಂದ 2010, ಅಕ್ಟೋಬರ್ 2ರಂದು ಕಾಲರ್್ ಮಾಕ್ಸರ್್ ಪ್ರಶಸ್ತಿ ಪಡೆದರು.
    ಇಂತಹ ಧೀಮಂತ, ಎಡಪಂಥಿಯ, ಪ್ರಗತಿಪರ ಹೋರಾಟಗಾರರಾದ ಬಿವಿ.ಕಕ್ಕಿಲಾಯರ ನಿಧನದಿಂದ ದುಡಿಯುವ ವರ್ಗಕ್ಕೆ ತುಂಬಲಾರದ ನಷ್ಟವಾಗಿದೆ.

ಬಿ.ಜೆ.ಪಿ. ಮತ್ತು ಭಂಡತನ - ಡಾ.ಎನ್.ಜಗದೀಶ್ ಕೊಪ್ಪ

    ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಒಂದು ಸಕರ್ಾರದ ಯಶಸ್ವಿಗೆ ಪ್ರಜ್ಞಾವಂತ ಮತದಾರರು ಎಷ್ಟು ಮುಖ್ಯವೊ, ಜವಾಬ್ದಾರಿಯುತ ರಾಜಕೀಯ ಪಕ್ಷಗಳ ಪಾತ್ರವೂ ಅಷ್ಟೇ ಮುಖ್ಯವಾಗಿರುತ್ತದೆ. ಅಲಿಖಿತ ಸಂವಿಧಾನವಿರುವ ಬ್ರಿಟನ್ನಲ್ಲಿ ಲೇಬರ್ ಮತ್ತು ಕನ್ಸರ್ವೇಟೀವ್ ರಾಜಕೀಯ ಪಕ್ಷಗಳು, ಲಿಖಿತ ಸಂವಿಧಾನ ಇರುವ ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ರಿಪಬ್ಲಿಕನ್ ಮತ್ತು ಡೆಮಕ್ರಟಿಕ್ ಪಕ್ಷಗಳು, ಸಕರ್ಾರದ ರಚನೆ ಮತ್ತು ಆಡಳಿತ ನಿರ್ವಹಣೆ ಹಾಗೂ ವಿರೋಧ ಪಕ್ಷವಾಗಿ ನಿಣರ್ಾಯಕ ಪಾತ್ರ ವಹಿಸುತ್ತಿರುವುದನ್ನು ನಾವು ಬಲ್ಲೆವು.
    ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದಲ್ಲೂ ಕೂಡ ಡಾ.ಅಂಬೇಡ್ಕರ್ ನೇತೃತ್ವದಲ್ಲಿ ರಚಿತವಾದ, ಜಗತ್ತಿನ ಶ್ರೇಷ್ಟ ಲಿಖಿತ ಸಂವಿಧಾನ ಅಸ್ತಿತ್ವದಲ್ಲಿದೆ. ಜೊತೆಗೆ ಎರಡು ಪ್ರಬಲ ರಾಷ್ಟ್ರೀಯ ರಾಜಕೀಯ ಪಕ್ಷಗಳು ಕ್ರಿಯಾಶೀಲವಾಗಿವೆ. ಇವುಗಳಲ್ಲಿ ಶತಮಾನದ ಇತಿಹಾಸವಿರುವ ಕಾಂಗ್ರೇಸ್ ಪಕ್ಷ ಒಂದಾದರೆ, ಇನ್ನೊಂದು ಅರ್ಧ ಶತಮಾನದಷ್ಟು ಇತಿಹಾಸವಿರುವ ಭಾರತೀಯ ಜನತಾ ಪಕ್ಷ. ಕಳೆದವಾರ ಕಾಂಗ್ರೇಸ್ ಪಕ್ಷದ ಬಗ್ಗೆ ಹಾಗೂ ಅದರ ಇತಿಮಿತಿಗಳನ್ನು ಚಚರ್ಿಸಿದ ರೀತಿಯಲ್ಲಿ ಭಾರತೀಯ ಜನತಾಪಕ್ಷವನ್ನು, ಅದರ ಸಿದ್ಧಾಂತ ಮತ್ತು ಇತ್ತೀಚೆಗಿನ ಪಕ್ಷದೊಳಗಿನ ಬೆಳವಣಿಗೆಯನ್ನು ಚಚರ್ೆಗೆ ಒಳಪಡಿಸಿ ಪರಾಮಶರ್ಿದರೇ, ತೀವ್ರ ನಿರಾಶೆಯಾಗುತ್ತದೆ.
    1925 ರಲ್ಲಿ ಅಸ್ತಿತ್ವಕ್ಕೆ ಬಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಒಡಲ ಕುಡಿಯಾಗಿ ಹೊರಹೊಮ್ಮಿದ ಜನಸಂಘ ಎಂಬ ರಾಜಕೀಯ ಪಕ್ಷ, ಈಗ ನಮ್ಮೆದುರು ಭಾರತೀಯ ಜನತಾ ಪಕ್ಷದ ರೂಪದಲ್ಲಿದೆ. 1978 ರಲ್ಲಿ ಇಂದಿರಾ ನೇತೃತ್ವದ ಕಾಂಗ್ರೇಸ್ ಸಕರ್ಾರವನ್ನು, ತುತರ್ು ಪರಿಸ್ಥಿತಿ ಹೇರಿದ ಕಾರಣಕ್ಕಾಗಿ, ಭಾರತದ ಜನತೆ ಅಧಿಕಾರದಿಂದ ಕಿತ್ತೊಗೆದರು. ಈ ವೇಳೆ ಮೊರಾಜರ್ಿ ದೇಸಾಯಿ ನೇತೃತ್ವದಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಜನತಾ ಪಕ್ಷದ ಜೊತೆ ಜನಸಂಘ ಕೂಡ ಕೈ ಜೋಡಿಸಿತು. ಮೊರಾಜರ್ಿ ಪ್ರಧಾನಿಯಾಗಿದ್ದಾಗ, ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಿಸಿದ ಅಟಲ್ ಬಿಹಾರಿ ವಾಜಪೇಯಿ, ತಮ್ಮ ಮುಕ್ತ ಮನಸ್ಸಿನ ನಡುವಳಿಕೆಯಿಂದ, ಯಾವುದೇ ಕಲ್ಮಶವಿಲ್ಲದ ಭಾವನೆಗಳಿಂದ ಭಾರತ ಮಾತ್ರವಲ್ಲ, ಜಗತ್ತಿನಾದ್ಯಂತ ಮನೆಮಾತಾದರು. ವಾಜಪೇಯಿಯವರ ಈ ಜನಪ್ರಿಯತೆ, ಕೇವಲ ಪ್ರಾದೇಶಿಕ ಪಕ್ಷದಂತೆ, ಒಂದು ಕೋಮಿನ ಸಮುದಾಯವನ್ನು ಮಾತ್ರ ಪ್ರತಿನಿಧಿಸುತ್ತಿದ್ದ ಜನಸಂಘಕ್ಕೆ ರಾಷ್ಟ್ರಮಟ್ಟದಲ್ಲಿ ವರ್ಚಸ್ಸನ್ನು ತಂದುಕೊಟ್ಟಿತು.
    ಕೇಂದ್ರದಲ್ಲಿ 1978 ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೇಸ್ಸೇತರ ಸಕರ್ಾರದಲ್ಲಿ ವ್ಯಕ್ತಿಗತ ಅಧಿಕಾರದ ಲಾಲಸೆ ಮತ್ತು ಆಂತರಿಕ ಕಚ್ಚಾಟದಿಂದ ಕೇವಲ ಎರಡು ವರ್ಷದಲ್ಲಿ ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡ ಜನತಾ ಪಕ್ಷ, ನಂತರದ ದಿನಗಳಲ್ಲಿ ಅಣು ವಿಭಜನೆಯಂತೆ, ಒಂದು ಎರಡಾಗಿ, ಎರಡು ನಾಲ್ಕಾಗಿ ಸಿಡಿದು ತನ್ನ ಮೂಲ ಛಹರೆ ಮತ್ತು ಅಸ್ತಿತ್ವವನ್ನು ಕಳೆದುಕೊಂಡಿತು. ಇದರ ಜೊತೆಗೆ ಜಯಪ್ರಕಾಶ್ ನಾರಾಯಣರ ಕಂಡಿದ್ದ ಕನಸುಗಳನ್ನು ನುಚ್ಚುನೂರು ಮಾಡಿತು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ಇಡೀ ದೇಶಾದ್ಯಂತ, 80ರ ದಶಕದಲ್ಲಿ ಭಾರತೀಯ ಜನತಾ ಪಕ್ಷ ಎಂಬ ಹೊಸ ರೂಪದಲ್ಲಿ ಜನಸಂಘ. ತನ್ನ ಛಾಪನ್ನು ಮೂಡಿಸತೊಡಗಿತು. ಆ ದಿನಗಳಲ್ಲಿ ಬಿ.ಜೆ.ಪಿ. ಪಕ್ಷದ ಆಧಾರ ಸ್ಥಂಭಗಳೆಂದರೆ, ಒಬ್ಬರು ವಾಜಪೇಯಿ, ಮತ್ತೊಬ್ಬರು ರಾಮನಿಗೆ ಲಕ್ಷ್ಮಣನಿದ್ದಂತೆ, ವಾಜಪೇಯಿಗೆ ನೆರಳಿನಂತೆ ಹಿಂಬಾಲಿಸಿದ ಎಲ್.ಕೆ. ಅಡ್ವಾಣಿ. ಇವರಿಬ್ಬರಿಗೂ ಬೆನ್ನೆಲುಬಾಗಿ ನಿಂತವರು, ಬೈರೂನ್ ಸಿಂಗ್ ಶೇಖಾವತ್. ಇವತ್ತಿಗೂ ಆ ಪಕ್ಷಕ್ಕೆ ಇವರೆಲ್ಲಾ ಶಿಖರಪ್ರಾಯದ ವ್ಯಕ್ತಿತ್ವಗಳು.
    ಬಿ.ಜೆ.ಪಿ. ಪಕ್ಷದ ಬಗೆಗಿನ ನಮ್ಮ ತಾತ್ವಿಕ ಭಿನ್ನಾಭಿಪ್ರಾಯಗಳು, ಸೈದ್ಧಾಂತಿಕ ಅಸಹನೆಗಳು ಏನೇ ಇರಲಿ, ಸಾರ್ವಜನಿಕ ಬದುಕಿನಲ್ಲಿ, ವಿಶೇಷವಾಗಿ ರಾಜಕೀಯ ಬದುಕಿನಲ್ಲಿ ಒಬ್ಬ ವ್ಯಕ್ತಿಗೆ ಇರಬೇಕಾದ ಸನ್ನಡತೆ, ಸಚ್ಛಾರಿತ್ರ್ಯ, ನೈತಿಕತೆ, ಶುದ್ಧ ಹಸ್ತ ಇವುಗಳಿಗೆ ಇವರು ಮಾದರಿಯಾದವರು. ಜೊತೆಗೆ ಕಾಂಗ್ರೇಸ್ನ ಗುಲಾಮಗಿರಿ ಸಂಸ್ಕೃತಿಗೆ ಭಿನ್ನವಾಗಿ, ತಮ್ಮ ಜೊತೆಜೊತೆಯಲ್ಲಿ ಎರಡನೇ ವರ್ಗದ ನಾಯಕರನ್ನು ಬೆಳಸಿದರು. ಇದರ ಫಲವಾಗಿ ವಾಜಪೇಯಿ ಮೂರು ಬಾರಿ ಪ್ರಧಾನಿಯಾಗಲು ಸಾಧ್ಯವಾಯಿತು.
    1984ರ ಅಕ್ಟೋಬರ್ ತಿಂಗಳಿನಲ್ಲಿ ಇಂದಿರಾ ಗಾಂಧಿಯ ಹತ್ಯೆ ಹಿನ್ನಲೆಯಲ್ಲಿ ಇಂದಿರಾ ಯುಗ ಅಂತ್ಯಗೊಂಡರೂ, ವಾಜಪೇಯಿ ಬಿ.ಜೆ.ಪಿ. ಪಕ್ಷವನ್ನು ರಾಷ್ಟ್ರಮಟ್ಟದಲ್ಲಿ ಅಧಿಕಾರಕ್ಕೆ ತರಲು 12 ವರ್ಷಗಳ ಕಾಲ ಹೆಣಗಬೇಕಾಯಿತು. ಇದಕ್ಕಾಗಿ, ಅಡ್ವಾಣಿಯವರ ರಥಯಾತ್ರೆ, 1991 ರಲ್ಲಿ ಅಯೋಧೈಯಲ್ಲಿ ಮಸೀದಿಯನ್ನು ಉರುಳಿಸಿದ ನಾಟಕಿಯ ಬೆಳವಣಿಗೆಗಳು ಸಹ ಸಹಕಾರಿಯಾದವು. ಒಟ್ಟಾರೆ, ಧರ್ಮ ಮತ್ತು ಜಾತಿಯನ್ನು ನೇರವಾಗಿ ರಾಜಕೀಯವಾಗಿ ಬಳಸಿಕೊಂಡು, ಭಾರತದ ಬಹುಮುಖಿ ಸಂಸ್ಕೃತಿಯ ಸಮಾಜಕ್ಕೆ ಧಕ್ಕೆಯಾಗುವ ರೀತಿಯಲ್ಲಿ, ಭಾರತೀಯ ಜನತಾ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದದ್ದನ್ನು ಯಾರೂ ಅಲ್ಲಗೆಳೆಯಲಾರರು. ಅಜಾತಶತ್ರು ಎನಿಸಿಕೊಂಡಿದ್ದ ವಾಜಪೇಯಿ, ತಮ್ಮ ಅಂತರಾಳದಲ್ಲಿ ಏನನ್ನೂ ಮುಚ್ಚಿಡಲಾರದ ವ್ಯಕ್ತಿಯಾಗಿದ್ದರು. ಬಾಬರಿ ಮಸೀದಿಯನ್ನು ಕರಸೇವಕರು ಉರುಳಿಸಿದಾಗ, ಅಥವಾ ಗುಜರಾತ್ನ ಗೋದ್ರಾ ಹತ್ಯಾಕಾಂಡ ಮುಂತಾದ ಘಟನೆಗಳಲ್ಲಿ ತಮ್ಮ ನೋವನ್ನು ನೇರವಾಗಿ ತೋಡಿಕೊಂಡವರು. ಈ ಕಾರಣಕ್ಕಾಗಿ ಸಂಘ ಪರಿವಾರಕ್ಕೆ ವಾಜಪೇಯಿ ಎಂದರೆ ಒಂದು ರೀತಿ ಅಲಜರ್ಿ. ಅಡ್ವಾಣಿ ಎಂದರೆ, ಮುದ್ದಿನ ಕೂಸು ಎಂಬಂತಾಗಿತ್ತು.
    ಬಿ.ಜೆ.ಪಿ. ಪಕ್ಷದಲ್ಲಿನ ಮರೆಮಾಚಿದ ಯೋಜನೆಗಳು. ಅಮಾನವೀಯ ನಡುವಳಿಕೆಗಳು, ಕೋಮುಭಾವನೆಗಳನ್ನೇ ಬಂಡವಾಳವಾಗಿಸಿಕೊಂಡು, ಅಮಾಯಕ ಜೀವಗಳ ಬದುಕಿನ ಭದ್ರತೆಗೆ ಧಕ್ಕೆಯಾಗುವ ರೀತಿಯಲ್ಲಿ ನಡೆದುಕೊಳ್ಳುವುದನ್ನು ಯಾವೊಬ್ಬ ಪ್ರಜ್ಞಾವಂತ ನಾಗರೀಕ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಪ್ಪಲಾರ. ಆದರೆ, ಆ ಪಕ್ಷದಲ್ಲಿ ಅವರದೇ ನೀತಿ, ತತ್ವ, ಸಿದ್ಧಾಂತ, ನಡುವಳಿಕೆ, ಶಿಸ್ತು, ಇವುಗಳೆಲ್ಲಾ ಒಂದು ಕಾಲಘಟ್ಟದಲ್ಲಿ ಇತರೆ ಪಕ್ಷಗಳಿಗೆ ಮಾದರಿಯಾಗಿದ್ದವು. ಆದರೆ, ಈಗ ಇವೆಲ್ಲಾ ಕಾಣೆಯಾಗಿ ಕೇವಲ ಭಂಡತನವೊಂದೇ ಪಕ್ಷದ ಬಂಡವಾಳವಾಗಿದೆ. ಭಾರತೀಯ ಜನತಾ ಪಕ್ಷದ ಅಂತರಂಗವನ್ನು ಬಯಲು ಮಾಡಿ, ಅದರ ಹುಳುಕನ್ನು ಅನಾವರಣಗೊಳಿಸಿ ಪಕ್ಷಕ್ಕೆ ಯಾವುದೇ ತತ್ವ ಸಿದ್ಧಾಂತಗಳಿಲ್ಲ ಎಂದು ಜಗತ್ತಿಗೆ ತೋರಿಸಿಕೊಟ್ಟವರು, ನಮ್ಮ ಕನರ್ಾಟಕದ ಲಿಂಗಾಯುತರ ಬಸವಣ್ಣ, ದ ಗ್ರೇಟ್ ಯಡಿಯೂರಪ್ಪ. ಇವರಿಗೆ ಭಾರತದ ಪ್ರಜ್ಙಾವಂತ ನಾಗರೀಕರು ಋಣಿಯಾಗಿರಬೇಕು. ಏಕೆಂದರೆ, ಈ ದೇಶದಲ್ಲಿ ರಾಜಕೀಯ ಮಾಡಲು ಅಥವಾ ಸಾರ್ವಜನಿಕ ಬದುಕಿನಲ್ಲಿ ಇರಲು ಸನ್ನಡತೆ, ಸಚ್ಛಾರಿತ್ರ್ಯ ಅಗತ್ಯವಿಲ್ಲ. ಅವುಗಳ ಬದಲು ಭಂಡತನ ಮತ್ತು ಜಾತಿಯ ಬೆಂಬಲವಿದ್ದರೆ ಸಾಕು ಎಂಬುದನ್ನು ತೋರಿಸಿಕೊಟ್ಟಿದ್ದು, ಸಹ ಇದೇ ಯಡಿಯೂರಪ್ಪ.
    ನಾಲ್ಕು ವರ್ಷಗಳ ಹಿಂದೆ ದಕ್ಷಿಣ ಭಾರತದಲ್ಲಿ ಪ್ರಪಥಮ ಬಾರಿಗೆ ಬಿ.ಜೆ.ಪಿ. ನೇತೃತ್ವದ ಸಕರ್ಾರ ಅಸ್ತಿತ್ವಕ್ಕೆ ಬಂತು ಎನ್ನುವ ಸಂತೋಷ ಅಥವಾ ಹೆಮ್ಮೆ ರಾಷ್ಟ್ರ ಮಟ್ಟದ ಬಿ.ಜೆ.ಪಿ. ನಾಯಕರಿಗೆ ಬಹಳ ದಿನ ಉಳಿಯಲಿಲ್ಲ. ಏಕೆಂದರೆ, ಭಾರತದ ರಾಜಕೀಯ ಇತಿಹಾಸದಲ್ಲಿ ಯಾವ ರಾಜ್ಯದಲ್ಲೂ ಒಂದು ಸಕರ್ಾರದ ಅಷ್ಟೊಂದು ಸಂಪುಟದ ಸಚಿವರು, ಅಕ್ರಮ ವ್ಯವಹಾರಗಳ ಮೂಲಕ (ಮುಖ್ಯಮಂತ್ರಿಯೂ ಸೇರಿದಂತೆ) ಜೈಲು ಪಾಲಾಗಿರಲಿಲ್ಲ. ಹಗರಣಗಳ ಸರಮಾಲೆಯೇ ಕನರ್ಾಟಕದ ಬಿ.ಜೆ.ಪಿ. ಸಕರ್ಾರದಲ್ಲಿ ಸೃಷ್ಟಿಯಾಯಿತು. ಭೂ ಹಗರಣ, ಭ್ರಷ್ಟಾಚಾರ, ಲಂಚಪ್ರಕರಣ, ಅತ್ಯಾಚಾರ ಪ್ರಕರಣ, ಅಶ್ಲೀಲ ಚಿತ್ರ ವೀಕ್ಷಣೆ ಹಗರಣ, ಒಂದೇ ಎರಡೇ? ಇವೆಲ್ಲಕ್ಕಿಂತ ಮುಖ್ಯವಾಗಿ ಇಡೀ ದೇಶವೇ ಬೆಚ್ಚಿ ಬೀಳುವಂತೆ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿ, ಇದೀಗ, ನ್ಯಾಯಾಂಗ ವ್ಯವಸ್ಥೆಯ ಬುಡಕ್ಕೆ ಲಂಚದ ಮೂಲಕ ಬಾಂಬ್ ಇಟ್ಟಿರುವ ಗಾಲಿ ಜನಾರ್ಧನ ರೆಡ್ಡಿ ಕೂಡ ಈ ಸಕರ್ಾರದ ಒಬ್ಬ ಸಚಿವನಾಗಿದ್ದ ಎನ್ನುವುದು ಸಹ ನಾಚಿಕೆಗೇಡಿನ ಸಂಗತಿ, ಅಡ್ವಾನಿ ಒಬ್ಬರನ್ನು ಹೊರತು ಪಡಿಸಿದರೆ, ಉಳಿದ ನಾಯಕರಿಗೆ ಕನರ್ಾಟಕದ ಬಿ.ಜೆ.ಪಿ. ಸಕರ್ಾರದ ಹಗರಣಗಳು ಮುಜಗರದ ಸಂಗತಿಗಳು ಎಂದು ಎನಿಸಿಲ್ಲ.
    ಅನೈತಿಕ ರಾಜಕಾರಣದ ಪರಾಕಾಷ್ಟೆ ಎನ್ನಬಹುದಾದ ಶಾಸಕರ ಪಕ್ಷಾಂತರದ ವಿಷಯ, ಬಿ.ಜೆ.ಪಿ. ಪಕ್ಷದ ಭಂಡರ ಪಾಲಿಗೆ ಹೆಮ್ಮೆಯ ಸಂಗತಿ. ಆಪರೇಷನ್ ಕಮಲ ಎಂದು ಎದೆಯುಬ್ಬಿಸಿ ಕರೆದುಕೊಳ್ಳುವ ಇವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷಾಂತರವೆಂಬುದು ಮತದಾರರಿಗೆ ಮಾಡಬಹುದಾದ ಅತಿ ದೊಡ್ಡ ಅವಮಾನ ಎಂಬ ಕನಿಷ್ಟ ವಿವೇಚನೆ ಕೂಡ ಇಲ್ಲ. ಇದಕ್ಕೆ ವಿ.ಸೋಮಣ್ಣನ ಪಕ್ಷಾಂತರ ಘಟನೆಯೊಂದು ಸಾಕು. ಕಾಂಗ್ರೇಸ್ಗೆ ರಾಜಿನಾಮೆ ನೀಡಿ ಅದೇ ಬೆಂಗಳೂರಿನ ವಿಜಯನಗರ ಕ್ಷೇತ್ರದಿಂದ ಸ್ಪಧರ್ಿಸಿದ ಈತನ ವಿರುದ್ಧ ಅಲ್ಲಿ ಮತದಾರರು ನಿನ್ನ ನಡುವಳಿಕೆ ತಪ್ಪು ಎನ್ನುವ ರೀತಿಯಲ್ಲಿ ತೀಪರ್ು ನೀಡಿ ಸೋಲಿಸಿ, ಕಾಂಗ್ರೇಸ್ ಅಭ್ಯಥರ್ಿಯನ್ನು ಗೆಲ್ಲಿಸಿದರು. ಆದರೆ, ಯಡಿಯೂರಪ್ಪ ಮಾಡಿದ್ದೇನು? ಜಾತಿಯ ಕಾರಣಕ್ಕಾಗಿ ಹಿಂಬಾಗಿಲಿನ ಮೂಲಕ ಅಂದರೆ, ವಿಧಾನಪರಿಷತ್ಗೆ ಸೋಮಣ್ಣನನ್ನು ಆಯ್ಕೆ ಮಾಡಿಕೊಂಡು ಸಚಿವರನ್ನಾಗಿ ಮಾಡಿಕೊಂಡರು. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುಗಳ ಸ್ಥಾನದಲ್ಲಿರುವ  ಮತದಾರರಿಗೆ ಮಾಡಿದ ಅವಮಾನ ಎಂದು ಪಕ್ಷದ ರಾಷ್ಟ್ರೀಯ ನಾಯಕರಿಗೆ ಅನಿಸಲೇ ಇಲ್ಲ. ಏಕೆಂದರೆ, ಇಂದಿನ ಭಾರತೀಯ ಜನತಾ ಪಕ್ಷದಲ್ಲಿ ಎಲ್.ಕೆ.ಅಡ್ವಾನಿ ಹಾಗೂ ಒಂದಿಬ್ಬರನ್ನು ಹೊರತು ಪಡಿಸಿದರೆ, ಉಳಿದ ಬಹುತೇಕ ಮಂದಿ ರೆಡ್ಡಿ ಮತ್ತು ಯಡಿಯೂರಪ್ಪನ ಲೂಟಿಯ ಹಣಕ್ಕೆ ಪಾಲುದಾರರು ಎಂಬ ಸಂಗತಿ ಈಗ ಗುಟ್ಟಾಗಿ ಉಳಿದಿಲ್ಲ. ಎಲ್ಲರೂ  ಅಮೇದ್ಯವನ್ನು ತಿಂದು ಬಾಯಿ ಒರೆಸಿಕೊಂಡವರೇ ಆಗಿದ್ದಾರೆ.
    ಮಾತೆತ್ತಿದರೆ, ಹಿಂದೂ ಧರ್ಮದ ಬಗ್ಗೆ ಅದರ ಸಂಸ್ಕೃತಿಯ ಬಗ್ಗೆ ಪುಂಖಾನುಪುಂಖವಾಗಿ ಬೊಗಳೆ ಬಿಡುವ ಆರ.ಎಸ್.ಎಸ್. ನಾಯಕರೂ ಇದಕ್ಕೆ ಹೊರತಾಗಿಲ್ಲ. ಬೆಂಗಳೂರು ನಗರ, ಆನೇಕಲ್, ಮಾಗಡಿ ರಸ್ತೆಯಲ್ಲಿರುವ ಚನ್ನಸಂದ್ರ, ಧಾರವಾಡ, ಮಂಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಪ್ರದೇಶಗಳಲ್ಲಿ 300 ಕೋಟಿ ಮೌಲ್ಯದ ಆಸ್ತಿ ಆರ್.ಎಸ್.ಎಸ್. ಸಂಸ್ಥೆಯ ಪಾಲಾಗಿದೆ. ಹಾಗಾಗಿ ಗರ್ಭಗುಡಿ ನಾಯಕರ ನಾಲಿಗೆಗಳು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲಾರದೆ ವಿಲವಿಲನೆ ಮಿಸುಕಾಡುತ್ತಿವೆ. ಅಧಿಕಾರ ಒಂದನ್ನೇ ಕೇಂದ್ರ ಮತ್ತು ಗುರಿಯಾಗಿಟ್ಟು ಇವರುಗಳು ಆಡುತ್ತಿರುವ ನಾಟಕ, ಕಟ್ಟುತ್ತಿರುವ ವೇಷ, ಜನಸಾಮಾನ್ಯರಲ್ಲಿ ಜಿಗುಪ್ಸೆ ಮತ್ತು ಅಸಹನೆ ಮೂಡಿಸಿವೆ. ಈವರೆಗೆ ಜೈಲಿಗೆ ಹೋಗಿ ಬಂದ ಶಾಸಕರು ಮತ್ತು ಸಚಿವರನ್ನು ಪಕ್ಷದಿಂದ ಅಮಾನತ್ತು ಮಾಡುವ ನೈತಿಕತೆ ಕೂಡ ಪಕ್ಷದಲ್ಲಿ ಉಳಿದಿಲ್ಲ.
    ಕಳೆದ ಆರು ತಿಂಗಳಿಂದ ಪಕ್ಷದ ವಿರುದ್ದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಬಳ್ಳಾರಿಯ ಸಂಸದೆ ಜೆ.ಶಾಂತ, ರಾಯಚೂರಿನ ಸಂಸದ ಪಕೀರಪ್ಪ, ಬಳ್ಳಾರಿ ಜಿಲ್ಲೆಯ ಶಾಸಕರಾದ ಸೋಮಶೇಖರರೆಡ್ಡಿ, ಕಂಪ್ಲಿಯ ಶಾಸಕ ಸುರೇಶ್ ಬಾಬು ಇವರನ್ನು ಪ್ರಾಥಮಿಕ ಸದಸ್ಯ ಸ್ಥಾನದಿಂದ ಕಿತ್ತು ಹಾಕಲು ಸಾಧ್ಯವಾಗಿಲ್ಲ. ಇವರೆಲ್ಲಾ ಬಳ್ಳಾರಿಯ ಉಪ ಚುನಾವಣೆಯಲ್ಲಿ ಬಿ.ಜೆ.ಪಿ. ಅಧಿಕೃತ ಅಭ್ಯಥರ್ಿಯ ವಿರುದ್ಧ ಕೆಲಸಮಾಡಿದವರು, ಈಗಲೂ ಪಕ್ಷವನ್ನು ನೇರವಾಗಿ ತೆಗಳುತ್ತಿರುವುದಲ್ಲಿ ವಿರೋಧ ಪಕ್ಷವನ್ನು ಮೀರಿಸಿದವರಾಗಿದ್ದಾರೆ. ಒಂದು ರಾಷ್ಟ್ರೀಯ ಪಕ್ಷವೊಂದರ ರಾಜ್ಯದ ಅಧ್ಯಕ್ಷನಾಗಿದ್ದುಕೊಂಡು,  ಹಾದಿ ಬೀದಿಯಲ್ಲಿ ಹೋಗುತ್ತಿದ್ದವರನ್ನು ಹಣ ಕೊಟ್ಟು ಕರೆತಂದು ಜಾತಿಯ ಕಾರಣಕ್ಕೆ ಅಧಿಕಾರ ಕೊಟ್ಟಿದ್ದೇವೆ ಎಂಬ ಬೇಜಾವಬ್ದಾರಿ ಹಾಗೂ ಸತ್ಯವಾದ ಹೇಳಿಕೆಯನ್ನ ಈಶ್ವರಪ್ಪ ಕೊಡುತ್ತಾನೆ ಎಂದರೆ, ಈತ ಎಂತಹ ಯಡವಟ್ಟು ಗಿರಾಕಿ ಎಂಬುದರ ಬಗ್ಗೆ ನೀವೆ ಯೋಚಿಸಿ? ಇಂತಹ ಅಯೋಗ್ಯರಿಂದ ಆಳಿಸಿಕೊಳ್ಳುವ ದೌಭರ್ಾಗ್ಯ ನಮ್ಮ ಶತ್ರುಗಳಿಗೂ ಬರಬಾರದು ಎಂದು ನಾವೆಲ್ಲಾ ಆಶಿಸೋಣ.
    ಒಂದು ಗ್ರಾಮ ಪಂಚಾಯಿತಿಯ ಸದಸ್ಯ ಸ್ಥಾನಕ್ಕೆ ಯೋಗ್ಯರಲ್ಲದ ಅನೇಕ ಮಂದಿ ಇಂದು ಕನರ್ಾಟಕ ಬಿ.ಜೆ.ಪಿ. ಸಕರ್ಾರದ ಸಚಿವ ಸಂಪುಟದ ಸದಸ್ಯರಾಗಿದ್ದಾರೆ. ಇವರಲ್ಲಿ ಕೆಲವರಿಗೆ ಬೆಳಿಗ್ಗೆ ಎದ್ದು ಕೂಡಲೇ ಅಧಿಕಾರ ದಕ್ಕಿಸಿಕೊಟ್ಟರು ಎಂಬ ಏಕೈಕ ಕಾರಣಕ್ಕೆ ಯಡಿಯೂರಪ್ಪನ ಕಾಲು ನೆಕ್ಕುವುದೇ ದಿನ ನಿತ್ಯದ ವೃತ್ತಿಯಾಗಿದೆ. ಈ ಮಹಾಶಯರ ಓಡಾಟಕ್ಕೆ, ಬಂಗಲೆ, ವಿಮಾನ ಪ್ರಯಾಣಕ್ಕೆ, ಯಡಿಯೂರಪ್ಪನ ಜೊತೆ ಮಠ ಮಂದಿರಗಳ ಸುತ್ತಾಟಕ್ಕೆ ನಮ್ಮ ತೆರಿಗೆ ಹಣ ವೆಚ್ಚವಾಗುತ್ತಿದೆ. ಕನರ್ಾಟಕದ ಬಿ.ಜೆ.ಪಿ. ಸಕರ್ಾರದಲ್ಲಿ ಕೆ. ಸುರೇಶ್ ಕುಮಾರ್ ಎಂಬ ಸರಳ ವ್ಯಕ್ತಿಯನ್ನು ಹೊರತು ಪಡಿಸಿದರೆ, ಉಳಿದವರಲ್ಲಿ ಇನ್ನೊಬ್ಬ ಸಜ್ಜನನ್ನು ಹುಡುಕುವುದು ನಿಜಕ್ಕೂ ಕಷ್ಟವಾಗಿದೆ. ರಾಜ್ಯದಲ್ಲಿ ಒಂದು ರಾಷ್ಟ್ರೀಯ ಪಕ್ಷ ಸಕರ್ಾರ ಇಂತಹ ದಯನೀಯ ಮತ್ತು ಅಸಹನೀಯ ಸ್ಥಿತಿಯಲ್ಲಿ ಆಡಳಿತ ನಡೆಸುತ್ತಿದ್ದರೂ ರಾಷ್ಟ್ರೀಯ ನಾಯಕರು ಕಣ್ಮುಚ್ಚಿ ಕುಳಿತಿರುವುದನ್ನ ಗಮನಿಸಿದರೆ, ಇದನ್ನು ರಾಜಕೀಯ ತಂತ್ರ ಎಂದು ಎನ್ನಲಾಗದು. ಬದಲಿಗೆ ಬಿ.ಜೆ.ಪಿ. ಪಕ್ಷದ ಭಂಡತನವೆಂದು ಕರೆಯಬೇಕಾಗುತ್ತದೆ.

ಡಾ.ಜಗದೀಶ ಕೊಪ್ಪ,
ಸಂಶೋಧಕರು.

ದಿ.ಆರ್ ಶಿವಪುತ್ರ ಭೇರಿ

ದಿ.ಆರ್ ಶಿವಪುತ್ರ ಭೇರಿಯವರು ನಮ್ಮನ್ನಗಲಿ (09/06/2010)
ಎರಡು ವರ್ಷ ಕಳೆಯಿತು. ತನ್ನಿಮಿತ್ಯ ಈ ಲೇಖನ.
ದಲಿತ ಬಂಡಾಯ, ಸಮತಾವಾದ, ಮಾಕ್ಸರ್ಿಸಂ, ಲೆನಿನ್ಸಂ ಮುಂತಾದ ಹೋರಾಟಗಾರರ ಬದುಕಿನ ಮೌಲ್ಯಗಳನ್ನು ತನ್ನಂತರಂಗದಲ್ಲಿ ರೂಡಿಸಿಕೊಂಡ ವ್ಯಕ್ತಿ ಶಿವಪುತ್ರಪ್ಪ ಭೇರಿ ಎಂದು ಹೇಳುತ್ತಿದ್ದಾರೆ ಸಾಹಿತಿ ಅಯ್ಯಪ್ಪ ತುಕ್ಕಾಯಿ.   
ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿವೇ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಗೆ,
    ಎಲ್ಲರೊಳಗೊಂದಾಗು ನೀ ಮಂಕು ತಿಮ್ಮ ಡಿ.ವಿ.ಜಿ
ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಎನ್ನುವ ತಾತ್ವಿಕ ಮತ್ತು ತಾಕರ್ಿಕ ಸತ್ಯ ಮಿಥ್ಯೆಗಳ ಮಧ್ಯೆ ಕೆಲ ಸಾವುಗಳು ಸಾಮಾಜಿಕ ಹೋರಾಟ ಮತ್ತು ಕ್ಷೇತ್ರಕ್ಕೆ ಆಘಾತವನ್ನು ನೀಡುತ್ತವೆ. 09 ಜೂನ್ 2010ರಂದು ನಿಧನರಾದ ಶಿವಪುತ್ರಪ್ಪ ಭೇರಿಯವರ ಆಕಸ್ಮಿಕ ನಿಧನದಿಂದಾಗಿ ರಾಯಚೂರು ಜಿಲ್ಲೆಯ ಒಬ್ಬ ವಿಚಾರವಾದಿ, ಎಡಪಂಥೀಯ ಹೋರಾಟಗಾರ, ಸಮನ್ವಯ ಸಾಹಿತ್ಯದ ಚಿಂತಕ, ಖ್ಯಾತ ಹೋರಾಟಗಾರ, ಪ್ರಗತಿಪರ ಚಿಂತಕನನ್ನು ಕಳೆದುಕೊಂಡಂತಾಗಿದೆ.
    ಐವತ್ತೆಂಟರ ಹೊಸ್ತಿಲಿನಲ್ಲಿ ಕಾಲಿರಿಸಿದ್ದ ಶಿವಪುತ್ರಪ್ಪ ಭೇರಿ ಸಕರ್ಾರಿ ಹುದ್ದೆಯಲ್ಲಿದ್ದರೂ ಇತರರಿಗಿಂತ ತೀರಾ ಭಿನ್ನ. ಸಾಮಾನ್ಯವಾಗಿ ಸಕರ್ಾರಿ ನೌಕರರು ತಮ್ಮ ಕಛೇರಿಯ ಕಾಯರ್ಾವಧಿಯ ಹೆಚ್ಚಿನ ಸಮಯವನ್ನು ವೇತನ ತುಟ್ಟಿಭತ್ಯೆ, ಪ್ರವಾಸಭತ್ಯೆಯ ಲೆಕ್ಕಚಾರದಲ್ಲಿ ತೊಡಗುತ್ತಾರೆ. ಯಾವುದೋ ಆಯೋಗದ ಶಿಫಾರಸ್ಸಿನ ಮೇರೆಗೆ ವೇತನ ಪರಿಷ್ಕರಣೆಯಾದಾಗ ಪ್ರತಿಯೊಬ್ಬ ಸಕರ್ಾರಿ ಹಾಗೂ ಅನುದಾನಿತ ಸಂಸ್ಥೆಗಳ ಉದ್ಯೋಗಿಗಳು ವೈಯಕ್ತಿಕ ಲಾಭದ ಗರಿಷ್ಠ ಪ್ರಯೋಜನ ಕುರಿತು ದಿನವಿಡೀ ಚಚರ್ಿಸುವ ಸಂದರ್ಭ ಸಾಮಾನ್ಯ. ಆದರೆ, ಈ ನೀತಿ ಸಕಲ ಸಕರ್ಾರಿ ನೌಕರರಿಗೆ ಅನ್ವಯವಾಗುವುದಿಲ್ಲ. ಕರ್ತವ್ಯಪರ, ನ್ಯಾಯನಿಷ್ಠುರ, ಕಾಯಕ ಪ್ರಜ್ಞೆ, ಪ್ರಾಮಾಣೆಕತೆಯನ್ನೇ ಮೈಗೂಡಿಸಿಕೊಂಡಿರುವ ಸಕರ್ಾರಿ ನೌಕರರು ತಮ್ಮ ಸಂಬಳದ ಪ್ರಮಾಣಕ್ಕಿಂತ ಹೆಚ್ಚಿನ ಸೇವೆ ಸಲ್ಲಿಸುವ ಮುಖಾಂತರ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರರಾಗುತ್ತಾರೆ.
    ಕಂದಾಯ ಇಲಾಖೆಯ ಮುಖಾಂತರ ಸಕರ್ಾರಿ ನೌಕರಿಗೆ ಸೇರಿದ ಶಿವಪುತ್ರಪ್ಪ ಭೇರಿ, ನೌಕರರ ನೈಜಹಕ್ಕುಗಳನ್ನು ದೊರಕಿಸಿ ಕೊಡುವಲ್ಲಿ ಸಕಲರ ನೀರಿಕ್ಷೆಗಳನ್ನು ಮೀರಿ ಹೋರಾಟಗಳನ್ನು ರೂಪಿಸುತ್ತಿದ್ದರು. ಸಾಮಾನ್ಯವಾಗಿ ಸಕರ್ಾರಿ ನೌಕರರು ಜನಪರ ಹೋರಾಟಗಳನ್ನು ಕೈಗೊಂಡಾಗ ಸಕರ್ಾರದ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಸಕರ್ಾರದ ಕೆಂಗಣ್ಣಿನೊಂದಿಗೆ ಮೇಲಾಧಿಕಾರಿಗಳ ದೈನಂದಿನ ಕಿರಿಕಿರಿಗಳನ್ನು ಅನುಭವಿಸುವುದು ಅನಿವಾರ್ಯ.
    ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಸಂಘದ ನಾಯಕ ತಾಳ್ಮೆ ಕಳೆದುಕೊಳ್ಳುವುದು ಸಾಮಾನ್ಯ ಮತ್ತು ಸ್ವಾಭಾವಿಕ. ಆದರೆ, ಎಂತಹದೇ ವೈಫರಿತ್ಯಗಳು ನೌಕರರಲ್ಲಿ ಸಂಭವಿಸಿದಾಗ ತಮ್ಮ ಸಂಯಮವನ್ನು ಕಳೆದುಕೊಳ್ಳದೇ ಶಿವಪುತ್ರಪ್ಪ ಭೇರಿ ರಾಯಚೂರು ಜಿಲ್ಲಾ ಸಕರ್ಾರಿ ನೌಕರರ ಸಂಘಟನೆಯನ್ನು ಹತ್ತು ವರ್ಷಗಳವರೆಗೆ ಮುಂದುವರೆಸಿದರು. ರಾಯಚೂರು ಜಿಲ್ಲಾ ಸಕರ್ಾರಿ ನೌಕರರ ಸಂಘಟನೆಯ 3ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡವರು. ಭೇರಿಯವರ ಸಂಘಟನಾ ಸಾಮಥ್ರ್ಯದ ಪ್ರತೀಕವೆಂದೇ ಪರಿಗಣಿಸಬೇಕು.
    ರಾಯಚೂರು ಜಿಲ್ಲೆಯ ದಲಿತ ಪರಿವಾರದ ರಾಮಣ್ಣ ಹನುಮಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಶಿವಪುತ್ರಪ್ಪ ಭೇರಿ, ತಮ್ಮ ಪ್ರೌಢ ಶಿಕ್ಷಣವನ್ನು ನಗರದ ಸಕರ್ಾರಿ ಬಾಲಕರ ಪ್ರೌಢಶಾಲೆಯಲ್ಲಿ ಪೂರೈಸಿದವರು. ನಿರಂತರ ಅಧ್ಯಯನ ಶೀಲತೆಯ ಪ್ರಭಾವದಿಂದಾಗಿ ಶಿವಪುತ್ರಪ್ಪನವರು ಶಾಲೆಯಲ್ಲಿಗಿಂತ ಸಮಾಜದಲ್ಲೇ ಕಲಿತ್ದೇ ಹೆಚ್ಚು. ಕೇವಲ ಉದ್ಯೋಗಕ್ಕೆ ಮಾತ್ರ ಸೀಮಿತಗೊಳ್ಳದೇ ಪರಿವರ್ತನಾಶೀಲ ಸಾಮಾಜಿಕ ವೇದನೆಗಳಿಗೆ ನಿರಂತರ ಸ್ಪಂದಿಸುವದರ ಮುಖಾಂತರ ಹೋರಾಟಮಯ ಬದುಕಿನ ಮುಂಚೂಣಿ ನಾಯಕನಾಗಿ ರೊಪಗೊಂಡವರು.
    ರಾಯಚೂರು ಜಿಲ್ಲೆಯ ಬಂಡಾಯ ಸಾಹಿತ್ಯ, ಪ್ರಗತಿಪರ ಹೋರಾಟಗಳಲ್ಲಿ ತಮ್ಮನ್ನು ಸದಾ ತೊಡಗಿಸಿಕೊಳ್ಳುವದರ ಜೊತೆಗೆ ಬಂಡಾಯದ ಗೆಳೆಯರಾದ ಬಾಬು ಬಂಡಾರಿಗಲ್, ಸಮುದಾಯದ ಗೆಳೆಯರಾದ ಕರಿಯಪ್ಪ ಮಾಸ್ತಾರ್ ಮತ್ತು ಅನೇಕ ಜಿಲ್ಲೆಯ ಸಾಹಿತಿಗಳೊಂದಿಗೆ ವೈಚಾರಿಕತೆಯ ಚಚರ್ೆಗಳನ್ನು ಮಾಡುತ್ತಿದ್ದರು.
    ತಮ್ಮ 58ರ ಸಾರ್ಥಕ ಬದುಕಿನ ಏರಿಳಿತಗಳಲ್ಲಿ ಎದುರಾದ ನೋವು-ಸಂಕಟಗಳಿಗೆ ಮುಖಾಮುಖಿಯಾಗುವದರ ಮುಖಾಂತರ ಆತ್ಮಸ್ಥೈರ್ಯವನ್ನು ಬೆಳೆಸಿಕೊಂಡವರು.
    ದಲಿತ ಬಂಡಾಯ, ಸಮತಾವಾದ, ಮಾಕ್ಸರ್ಿಸಂ, ಲೆನಿನ್ಸಂ ಮುಂತಾದ ಹೋರಾಟಗಾರರ ಬದುಕಿನ ಮೌಲ್ಯಗಳನ್ನು ತನ್ನಂತರಂಗದಲ್ಲಿ ರೂಡಿಸಿಕೊಂಡವರು. ಸಮಾಜದ ಸಾಮಾಜಿಕ ವಿಜ್ಞಾನಿಯಾಗಿ ವೈಚಾರಿಕ ಬದುಕಿನ ಚಲನೆಶೀಲತೆಯನ್ನು ಮೈಗೂಡಿಸಿಕೊಂಡವರು.
    ನೆರೆರಾಜ್ಯ ಆಂದ್ರಪ್ರದೇಶದ ಮಾದರಿಯಲ್ಲಿ ಮಾದಿಗರ ಮೀಸಲಾತಿ ಹೋರಾಟ ಸಮಿತಿಯನ್ನು ಸಂಘಟಿಸುವದರ ಮುಖಾಂತರ ಬೆಂದವರ ಬದುಕಿಗೆ ನೋವು ನಿವಾರಣೆಯ ಮಲಾಮ್ನ್ನು ಸವರಿದವರು. ಯಾವುದೇ ಸಂದರ್ಭದಲ್ಲಿ ಎದೆಗುಂದದೆ, ಮುಂದಕ್ಕಿಟ್ಟ ಹೆಜ್ಜೆಯನ್ನು ಹಿಂದಕ್ಕೆ ಸರಿಸದೇ ಶಿವಪುತ್ರಪ್ಪ ಭೇರಿ ಜನಪರ ಹೋರಾಟಗಳಿಗೆ ಹೇಳಿ ಮಾಡಿಸಿದ ವ್ಯಕ್ತಿಯಾಗಿದ್ದರು.
    ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಸಂಘಟಿಸುವ ಹಲವಾರು ಹೋರಾಟಗಳಿಗೆ ಏಕಪಕ್ಷೀಯ ನಿಧರ್ಾರ ತೆಗೆದುಕೊಳ್ಳದೇ ಪ್ರಜಾಪ್ರಭುತ್ವ ಮಾದರಿಯ ವ್ಯವಸ್ಥೆಗೆ ಅನುಗುಣವಾಗಿ ಸಂಗಾತಿಗಳೊಂದಿಗೆ ಮುಕ್ತವಾಗಿ ಚಚರ್ಿಸಿ ಸಾರ್ವಜನಿಕ ಅಭಿಪ್ರಾಯಗಳನ್ನು ಕ್ರೋಡಿಕರಿಸುವ ಮೂಲಕ ಹೋರಾಟಗಳಲ್ಲಿ ಹೋರಾಟಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣುತ್ತಿದ್ದ ಅಪರೂಪದ ವ್ಯಕ್ತಿಯಾಗಿದ್ದರು. ಹಲವಾರು ಸಂದರ್ಭಗಳಲ್ಲಿ ಶಿವಪುತ್ರಪ್ಪ ಭೇರಿಯವರ ಹೋರಾಟದ ಸ್ವರೂಪವನ್ನು ಕಣ್ಣಾರೆ ಕಂಡ ರಾಜ್ಯ ಸಮಿತಿಯ ಪಧಾದಿಕಾರಿಗಳು ಅಚ್ಚರಿಯನ್ನು ವ್ಯಕ್ತಪಡಿಸಿದ್ದರು.
    ಸಕರ್ಾರಿ ನೌಕರರ ನ್ಯಾಯಯುತ ಬೇಡಿಕೆಗಳಿಗೆ ಹಿಂದೆ ಒಂದು ಸಕರ್ಾರ ಜಾಣ ಕುರುಡತನವನ್ನು ಪ್ರದಶರ್ಿಸಿದಾಗ ಕನರ್ಾಟಕ ರಾಜ್ಯ ಸಕರ್ಾರಿ ನೌಕರರ ಸಂಘದ ಪಧಾಧಿಕಾರಿಗಳು ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವ ನಿಧರ್ಾರ ಕೈಗೊಂಡರು. ಅಂದಿನ ಹೋರಾಟದಲ್ಲಿ ಶಿವಪುತ್ರಪ್ಪ ಭೇರಿಯವರ ಕೆಚ್ಚೆದೆಯ ಪಾತ್ರ ಪ್ರಮುಖವಾಗಿತ್ತು. ಇದು ರಾಜ್ಯ ನಾಯಕರ ಮೆಚ್ಚುಗೆಗೂ ಪಾತ್ರವಾಯಿತು. ಹಲವಾರು ಸಂದರ್ಭಗಳಲ್ಲಿ ಶಿವಪುತ್ರಪ್ಪ ಭೇರಿಯವರ ಹೋರಾಟದ ಶೈಲಿ ರಾಜ್ಯದ ಇತರ ಜಿಲ್ಲೆಗಳಿಗೂ ಶ್ರೇಷ್ಠ ಮಾದರಿಯಾಗಿತ್ತು. ಕೆಲವೊಂದು ಸಂದರ್ಭಗಳಲ್ಲಿ ರಾಜ್ಯ ಮಟ್ಟದ ನಾಯಕರು ಭೇರಿಯವರ ಸಲಹೆ ಸೂಚನೆಗಳನ್ನು ಪಡೆದು ಹೋರಾಟದ ಯೋಜನೆಗಳನ್ನು ರೂಪಿಸುತ್ತಿದ್ದರು ಎನ್ನುವುದು ಆಶ್ಚರ್ಯವಾದರೂ ಸತ್ಯ ಸಂಗತಿ.
    ತಮ್ಮ ಹೋರಾಟದ ಮನೋಭಾವದಿಂದಾಗಿ ಶಿವಪುತ್ರಪ್ಪ ಭೇರಿ ರಾಯಚೂರು ಜಿಲ್ಲೆಯ ಸಂಘಟನೆಯ ಗೌರವವನ್ನು ರಾಜ್ಯಮಟ್ಟದಲ್ಲಿ ವಿಸ್ತರಿಸುವುದು ಜಿಲ್ಲೆಯ ಜನಪರ ಚಳುವಳಿಯ ಚರಿತ್ರೆಯ ಹೆಗ್ಗಳಿಕೆ.
    ಶಿವಪುತ್ರಪ್ಪ ಭೇರಿಯವರು ಜಿಲ್ಲಾ ಸಕರ್ಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡದ್ದು ಚರಿತ್ರೆಯ ಒಂದು ಪರ್ವಕಾಲ. ಪಿವಿ ನರಸಿಂಹರಾವ್ ಪ್ರಧಾನಮಂತ್ರಿಯಾಗಿ ಆಡಳಿತ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅಂದಿನ ಹಣಕಾಸು ಸಚಿವರು ಮತ್ತು ಇಂದಿನ ಪ್ರಧಾನಿಯಾಗಿರುವ ಡಾ. ಮನಮೋಹನ್ಸಿಂಗ್ರು ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿದರು. ಇದೇ ಸಂದರ್ಭದಲ್ಲಿ ಆಥರ್ಿಕ ಪ್ರಗತಿಯ ಧೋರಣೆಗೆ ಅನುಗುಣವಾಗಿ ಎಲ್.ಪಿ.ಜಿ ಜಾರಿಗೆ ಬಂದಿತು. ಎಲ್.ಪಿ.ಜಿಯ ನೆಪದಲ್ಲಿ ತೃತೀಯ ಹಾಗೂ ಅಭಿವೃದ್ದಿ ಶೀಲ ರಾಷ್ಟ್ರಗಳ ಕುತಂತ್ರಗಳಿಗೆ ಬಲಿಯಾಗಬೇಕಾಯಿತು. ಇವೆಲ್ಲವುಗಳ ಪ್ರಭಾವ ನೇರವಾಗಿ ಸಕರ್ಾರಿ ನೌಕರರ ಮೇಲೆ ಕಂಡು ಬಂತು. ನೌಕರಿ ಮಾಡುತ್ತೇವೆ ಎನ್ನುವವರಿಗೆ ಕಡ್ಡಾಯದ ರಜೆ ನಿಯಮ ಜಾರಿಗೆ ಬಂದಿತು.
    ಇಂತಹ ಕ್ಲಿಷ್ಠ ಪರಿಸ್ಥಿತಿಯಲ್ಲಿ ಮೂಕಪ್ರೇಕ್ಷಕನಾಗದ ಭೇರಿ ಜನಾಭಿಪ್ರಾಯವನ್ನು ರೂಪಿಸುವದರ ಮುಖಾಂತರ ಹಲವಾರು ಹೋರಾಟಗಳಿಗೆ ಸೈದ್ದಾಂತಿಕ ನೆಲೆಗಟ್ಟನ್ನು ರೂಪಿಸಿದರು. ಹಂತಹಂತವಾಗಿ ರಾಯಚೂರು ಜಿಲ್ಲೆಯ ಒಬ್ಬ ಚಿಂತಕನಾಗಿ ಸೂಫಿ ಸಾಹಿತ್ಯದ ಪ್ರತಿಪಾಧಕನಾಗಿ, ಧೀಮಂತ ಹೋರಾಟಗಾರನಾಗಿ ಶೋಷಿತ ದಲಿತರ ಬದುಕಿನ ಹೊಸ ಭರವಸೆಗಳ ಸಂಘಟನೆಯ ನೇತಾರನಾಗಿ ಇನ್ನೂ ಎತ್ತೆರೆತ್ತರಕ್ಕೆ ಬೆಳೆಯಬಲ್ಲ, ಸಕಲರ ನಿರೀಕ್ಷೆಗಳನ್ನು ಪೂರೈಸಬಲ್ಲ ಶಿವಪುತ್ರಪ್ಪ ಭೇರಿಯವರ ಕೌಟುಂಬಿಕ ಬದುಕಿನ ಒಂದು ಅನಿರೀಕ್ಷಿತ ಶಾಕ್ ಅವರಿಗೆ ಹೆಚ್ಚಿನ ಆಘಾತವನ್ನು ನೀಡಿತು. ಭವಿಷ್ಯದಲ್ಲಿ ಕುಟುಂಬದವರ ಕನಸುಗಳನ್ನೆಲ್ಲ ಸಾಕಾರಗೊಳಿಸ ಬೇಕಾಗಿದ್ದ, ಜೀವನದ ಸಂಧ್ಯಾಕಾಲದಲ್ಲಿ ಊರುಗೋಲು ಆಗಬೇಕಾಗಿದ್ದ ಮಗ ಅಪಘಾತದಲ್ಲಿ ತೀರಿಕೊಂಡಾಗ ಭೇರಿ ಅಂತಮರ್ುಖಿಯಾದರು. ಬದುಕಿನ ವೈರುಧ್ಯಗಳಿಗೆ ಸಾಂತ್ವಾನ ನೀಡುವ ಸೂಫಿ ಸಾಹಿತ್ಯದ ಅಂತರಂಗದ ಮೌಲ್ಯಗಳಲ್ಲಿ ಹೊಸ ಬೆಳಕನ್ನು ಕಂಡುಕೊಂಡರು. ಹೊಸ ಬೆಳಕಿನ ಹುಡುಕಾಟದಲ್ಲಿ ಸಮಗ್ರವಾಗಿ ಅಪರ್ಿಸಿಕೊಂಡಿದ್ದ ಶಿವಪುತ್ರ ಭೇರಿಯ ಆಕಸ್ಮಿಕ ಸಾವು ನೈಜಜನಪರ ಹೋರಾಟಗಳಿಗೆ ಮತ್ತು ಹೋರಾಟಗಾರರಿಗೆ ಆದ ಬಹುದೊಡ್ಡ ನಷ್ಟವಾಗಿದೆ.
ಅಭೌತಿಕ ಸಂಸ್ಕೃತಿಯಿಂದ ಭೌತಿಕ ಸಂಸ್ಕೃತಿಯ ಆಸೆ-ಆಮಿಷಗಳಿಗೆ ಬಲಿಯಾಗಿ ಪ್ರತಿಯೊಬ್ಬರು ಹಣದ ದಾಹಕ್ಕಾಗಿ ತಮ್ಮನ್ನು ತಾವೇ ಮಾರಾಟದ ವಸ್ತುಗಳನ್ನಾಗಿ ರೂಪಿಸಿಕೊಳ್ಳುತ್ತಿರುವ ಸಂಕಷ್ಟ ಪರಿಸ್ಥಿತಿಯಲ್ಲಿ ಶಿವಪುತ್ರಪ್ಪ ಭೇರಿಯವರಂತಹ ನಾಯಕರು ಮೇಲಿಂದ ಮೇಲೆ ಕೇವಲ ನೆನಪು ಮಾತ್ರ ಆಗದೇ ಅನಿವಾರ್ಯವೂ ಆಗುತ್ತಾರೆ.
    ಶಿವಪುತ್ರಪ್ಪ ಭೇರಿಯವರ ನಿಧನದಿಂದ ರಾಯಚೂರು ಜಿಲ್ಲೆಯ ಹೋರಾಟದ ಒಂದು ಯುಗ ಅಂತ್ಯಗೊಂಡಿದೆ ಎನ್ನುವುದು ಜಿಲ್ಲೆಯ ಪ್ರತಿಯೊಬ್ಬ ಚಿಂತನಶೀಲರ ಮನದಾಳದಲ್ಲಿ ಕಂಡು ಬರುವ ಸಾಮಾನ್ಯ ಸಂಗತಿ.
    ಸಾವು ಎಲ್ಲರಿಗೂ ಬರುತ್ತದೆ. ಆದರೆ, ಎಷ್ಟು ಜನ ಸಾವಿಗಿಂತ ಮುಂಚಿನ ಬದುಕನ್ನು ಸಾರ್ಥಕಗೊಳಿಸಿಕೊಳ್ಳುತ್ತಾರೆ. ಸಾರ್ಥಕತೆಯನ್ನೇ ಬದುಕಿನ ಮೌಲ್ಯವಾಗಿಸಿಕೊಂಡಿದ್ದ ಶಿವಪುತ್ರಪ್ಪ ಭೇರಿ ಭೌತಿಕ ಲೋಕದಿಂದ ಕಣ್ಮರೆಯಾದರೂ ಅವರ ಅಭಿಮಾನ ಬಳಗದ ಮನದಾಳದಲ್ಲಿ ಮಾತ್ರ ಶಾಶ್ವತವಾಗಿ ನೆಲೆಸಿದ್ದಾರೆ.

ನಯವಂಚಕರು

    ಎಸ್.ಎಸ್.ಎಲ್.ಸಿ.ಯ ಉತ್ತರ ಪತ್ರಿಕೆಗಳ ಮೌಲ್ಯ ಮಾಪನಕ್ಕೆಂದು ನಾನು ಇಂದು ಬೆಳಿಗ್ಗೆನೇ ಬೆಂಗಳೂರಿಗೆ ಬಂದಿದ್ದೆ. ಇದಕ್ಕಾಗಿ ಬೆಂಗಳೂರಿಗೆ ಬರುತ್ತಿರುವುದು ಇದೇ ಮೊದಲು. ಇಂದು ಮೌಲ್ಯಮಾಪನದ ಸಮಯದಲ್ಲಿ ಹೃದಯಕ್ಕೆ ಹತ್ತಿರವಾಗುವಂಥಹ ಯಾವ ಸ್ನೇಹಿತರೂ ಸಿಗಲಿಲ್ಲ. ನನಗೆ ಪರಿಚಯದ ಮುಖವೂ ಕಾಣಲಿಲ್ಲ. ಅಂದಿನ ಡ್ಯೂಟಿ ಮುಗಿಸಿಕೊಂಡು ರೂಮಿಗೆ ಬಂದೆ. ಸಮೀಪದ ವಸತಿ ಗೃಹದಲ್ಲಿ ವಾಸಕ್ಕೆ ವ್ಯವಸ್ಥೆ ಆಗಿತ್ತು. ಮಂಗಳೂರಿಂದ ಬಂದಿದ್ದ ನಿಲೋಫರ್ ಎನ್ನುವಾಕೆ ನನ್ನ ರೂಮ್ ಮೇಟ್ ಆಗಿದ್ದಳು. ನಾ ನನ್ನ ಹೆಸರು, ಶಾಲೆ, ಊರಿನ ಹೆಸರು ಇತ್ಯಾದಿ ವಿವರ ನಿಲೋಫರ್ಳಿಗೆ ತಿಳಿಸಿದೆ. ಹಿಂದಿನ ದಿನ ರಾತ್ರಿ ಪ್ರಯಾಣ ಮಾಡಿ ಬಂದಿದ್ದರಿಂದ ದೇಹಕ್ಕೆ ದಣಿವಾಗಿತ್ತು. ವಿಶ್ರಾಂತಿ ಬೇಕಾಗಿದ್ದರಿಂದ ರಾತ್ರಿ ಮಲಗುವುದಕ್ಕಿಂತ ಮುಂಚೆ ನಿಲೋಫರ್ಳ ಜೊತೆಗೆ ಹೆಚ್ಚಿನ ಮಾತುಕತೆಗಳಾಗಲಿಲ್ಲ. ಅವಳಿಗೂ ವಿಶ್ರಾಂತಿ ಬೇಕಿತ್ತೇನೋ? ಆದ್ದರಿಂದ ಆಕೆನೂ ಹೆಚ್ಚಿನ ಮಾತುಕತೆಗೆ ಆಸಕ್ತಿ ತೋರಿಸಲಿಲ್ಲ. ಅವಳಿಗೂ ಹೆಚ್ಚು ಕಡಿಮೆ ನನ್ನಷ್ಟೇ ವಯಸ್ಸಿರಬಹುದು, ಅಂದರೆ ಮೂವತ್ತರ ಆಜೂ ಬಾಜು ಇರಬಹುದು ಎಂದು ಅಂದುಕೊಂಡೆ. ಪರಸ್ಪರರು ಗುಡ್ ನೈಟ್ ಹೇಳಿ ನಿದ್ರಾದೇವಿಗೆ ಶರಣಾದೆವು.
    ರಾತ್ರಿ ಮಲಗಿದವಳಿಗೆ ಎಚ್ಚರವಾದದ್ದು ಬೆಳಿಗ್ಗೆ 6 ಗಂಟೆಗೇನೆ. ನಿಲೋಫರ್ ಎದ್ದು ಆಗಲೇ ಬ್ರಷ್ ಮಾಡುತ್ತಿದ್ದ ಳು. ಗುಡ್ ಮಾನರ್ಿಂಗ್ ಬೆಹನ್ಜೀ ಎಂದಳು ನಾ ಎದ್ದಕೂಡಲೇ. ನಾನೂ ಪ್ರತಿಯಾಗಿ ಬೆಳಗಿನ ಶುಭೋದಯ ಹೇಳಿದೆ. ಅವಳಿಗೆ ಖುಷಿಯಾಗಿತ್ತು. ನನ್ನ ಮುಗುಳ್ನಗೆ ಅವಳಿಗೆ ಉತ್ತೇಜನ ನೀಡಿತ್ತೇನೋ? ಹಾಗೇ ನನ್ನ ಹತ್ತಿರ ಬಂದು ನವಿರಾಗಿ ನನ್ನನ್ನು ಹಗ್ ಮಾಡಿ, ತಾನು ಸಂತಸ ಅನುಭವಿಸುವುದರ ಜೊತೆಗೆ ನನಗೂ ಸಂತಸ ಉಣಬಡಿಸಿದ್ದಳು. ಅದೇ ಸಂತಸದ ಮೂಡಿನಲ್ಲಿ ನಾ ಒಂದು ಕ್ಷಣ ಕಿಟಕಿಯ ಹತ್ತಿರ ಹೋಗಿ, ಹೊರಗಿನ ಸೌಂದರ್ಯ ವೀಕ್ಷಿಸಲು ಮುಂದಾದೆ. ವಸತಿ ಗೃಹದ ಆವರಣದಲ್ಲಿನ ದೊಡ್ಡ ದೊಡ್ಡ ಹಸಿರಿನ ವಿವಿಧ ಜಾತಿಯ ಮರಗಳು ಕಣ್ಮನ ಸೆಳೆಯುತ್ತಿದ್ದವು. ಮೂಡಣದಲ್ಲಿ ನೇಸರ ಆಕಾಶದ ಗರ್ಭದಿಂದ ಆಗ ತಾನೆ ಹೊರಬರುತ್ತಿದ್ದುದರಿಂದ ಎಲ್ಲೆಡೆ ಕೆಂಪು ಪಸರಿಸತೊಡಗಿತ್ತು. ದೃಷ್ಯ ಒಂದು ರೀತಿ ಚೇತೋಹಾರಿಯಾಗಿತ್ತು. ಮುಂಜಾವಿನ ಸೃಷ್ಟಿ ಸೌಂದರ್ಯ ಸವಿಯುವುದರಲ್ಲಿ ನಾ ಮಗ್ನಳಾಗಿದ್ದೆ.
    ನನ್ನ ಸೌಂದಯರ್ೋಪಾಸನೆಗೆ ತಡೆ ಹಾಕುವಂತೆ ನಿಲೋಫರ್, ಬೆಹನ್ಜೀ, ನೀವು ಈ ಜಗದೊಡೆಯ ಸೂರ್ಯನ ಚಮತ್ಕಾರಗಳನ್ನು ನೋಡುತ್ತಾ ಹೀಗೇ ನಿಂತು ಬಿಟ್ಟರೆ, ಮೌಲ್ಯಮಾಪನಕ್ಕೆ ರೆಡಿಯಾಗಿ ಹೊರಡುವುದು ಯಾವಾಗ? ಒಂಭತ್ತು ಗಂಟೆಗೆಲ್ಲಾ ನಾಷ್ಟಾ ಮಾಡಿ ನಾವು ಮೌಲ್ಯಮಾಪನದ ಹಾಲಿನಲ್ಲಿ ಇರಬೇಕು. ಈಗಿಂದ ನೀವು ರೆಡಿಯಾಗಲು ಹೊರಟರೆ, ಅಲ್ಲಿಗೆ ಬರುತ್ತದೆ. ಇಲ್ಲವಾದರೆ ತಡವಾಗಿ ಹೋಗಬೇಕಾಗುತ್ತದೆ. ತಡವಾಗಿ ಹೋಗುವುದು ನನ್ನ ಜಾಯಮಾನವಲ್ಲ. ಬೇಗ ಶುರು ಮಾಡಿರಿ ಎಂದು ನನಗೆ ಕರ್ತವ್ಯ ಬಗ್ಗೆ ಜ್ಞಾಪಿಸಿದಳು. ನಿಲೋಫರ್ ಹೇಳಿದುದು ಸರಿ ಇತ್ತು. ಅವಳ ಮಾತುಗಳು ನನಗೆ ಇಷ್ಟವೆನಿಸಿದವು. ಆಕೆಯ ಮಾತಿಗೆ ನಾ ಸ್ಪಂದಿಸಿ, ಥ್ಯಾಂಕ್ಯೂ ಸಿಸ್ಟರ್. ನೀವು ಹೇಳಿದಂತೆ ನಾ ಬೇಗ ಬೇಗ ರೆಡಿಯಾಗುವೆ ಎಂದು ಹೇಳುತ್ತಾ, ಮುಗುಳ್ನಗೆ ಬೀರುತ್ತಾ ಟಾಯಿಲೆಟ್ಗೆ ಹೊರಟೆ. ನನಗೆ ಪ್ರತಿಯಾಗಿ ಆಕೆಯೂ ಮುಗುಳ್ನಕ್ಕಳು.
    ನಾನೂ, ನಿಲೋಫರ್ ಇಬ್ಬರೂ ರೆಡಿಯಾಗಿ, ಟಿಫಿನ್ ಮುಗಿಸಿಕೊಂಡು ಮೌಲ್ಯಮಾಪನದ ಹಾಲಿಗೆ ಹೋದಾಗ 08-45 ಆಗಿತ್ತು. ವೇಳೆಗೆ ಮುಂಚೆ ಇಬ್ಬರೂ ಕರ್ತವ್ಯ ನಿರ್ವ ಹಿಸುವ ನಮ್ಮ, ನಮ್ಮ ಹಾಲಿನಲ್ಲಿದ್ದೆವು. ನನ್ನ ಹಾಲ್ ನಂಬರು 2 ಆಗಿದ್ದರೆ, ನಿಲೋಫರ್ಳದು ಹಾಲ್ 8 ನಂಬರಾಗಿತ್ತು.
    ನಮಸ್ತೆ ಮೇಡಂ. ನನ್ನ ಹೆಸರು ಗೌರಿಶಂಕರ್ ಅಂತ. ಬೀದರಿನ ಸರಕಾರಿ ಪ್ರೌಢ ಶಾಲೆಯಿಂದ ಬಂದಿದ್ದೇನೆ. ನೀವೂ ಸಹ ಉತ್ತರ ಕನರ್ಾಟಕದವರೆಂದು ಗೊತ್ತಾಯಿತು. ಅದಕ್ಕೇ ಪರಿಚಯ ಮಾಡಿಕೊಳ್ಳುತ್ತಿರುವೆ. ನಾ ಇಂದೇ ಡ್ಯೂಟಿಗೆ ಹಾಜರಾಗಿದ್ದೇನೆ. ಮಧ್ಯಾಹ್ನ ಊಟಕ್ಕೆ ಹೊರಡಬೇಕೆಂದು ನಾ ನನ್ನ ಪೆನ್ನು ಇತರೆ ವಸ್ತುಗಳನ್ನು ನನ್ನ ವ್ಯಾನಿಟಿ ಬ್ಯಾಗಿನಲ್ಲಿ ಹಾಕಿಕೊಂಡು ಮೇಲೇಳುತ್ತಿದ್ದವಳು ಒಂದೇ ಸಮನೇ ಬಡಬಡಿಸಿದ ವ್ಯಕ್ತಿಯ ಕಡೆಗೆ ದೃಷ್ಟಿ ಹರಿಸಿದೆ. 28-30ರ ಆಜುಬಾಜುವಿನ ಯುವಕನಾಗಿದ್ದ ಆ ವ್ಯಕ್ತಿ. ಹ್ಯಾಂಡ್ಸಮ್ ಎಂದೇ ಹೇಳಬಹುದಾಗಿತ್ತು. ಅವರಿಗೆ ಪ್ರತಿನಮಸ್ಕಾರ ಮಾಡುತ್ತಾ, ನನ್ನ ಹೆಸರು ಮಮತಾ, ಬಾದಾಮಿಯ ಪ್ರೌಢಶಾಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಿಮ್ಮ ಪರಿಚಯವಾದುದಕ್ಕೆ ಬಹಳ ಸಂತೋಷವಾಯಿತು ಎಂದು ತಿಳಿಸಿದೆ. ಅವರಿಗೂ ತುಂಬಾ ಸಂತೋಷವಾಗಿದೆಯೆಂದು ಅವರ ಮುಖ ಭಾವದಿಂದ ನನಗೆ ಗೊತ್ತಾಗುತ್ತಿತ್ತು.
    ನಿನ್ನೆ ನನಗೆ ಒಬ್ಬರೂ ಆತ್ಮೀಯರಾಗಿರಲಿಲ್ಲ ನೋಡ್ರಿ. ಇಂದು ನೀವಾಗೇ ಬಂದು ಪರಿಚಯ ಮಾಡಿಕೊಂಡಿದ್ದಕ್ಕೆ ನನಗೆ ಬಹಳ ಖುಷಿಯಾಗಿದೆ ಎಂದೆ ಮುಂದುವರಿದು.
    ಹೌದು ನೋಡ್ರೀ ಮೇಡಂ, ಬಹಳ ದೂರದಿಂದ ಬಂದಂಥಹ ನಮ್ಮಂಥಹವರಿಗೆ ನಮ್ಮ ಕಡೆಯಿಂದ ಬಂದವರನ್ನು ಕಂಡಾಗ ತುಂಬಾ ಸಂತೋಷವಾಗುತ್ತದೆ. ನಿವೂ ಸಹ ನಮ್ಮ ಕಡೆಯವರಾಗಿರುವುದರಿಂದ ನಿಮ್ಮ ಪರಿಚಯ ಮಾಡಿಕೊಂಡೆ. ನನಗೂ ನಿಮ್ಮ ಮಾತಿಂದ ಬಹಳ ಸಂತೋಷವಾಯಿತು ನೋಡ್ರಿ ಎಂದರು ಗೌರಿಶಂಕರ್.
    ಇಬ್ಬರೂ ಮಾತಾಡುತ್ತಾ, ಕ್ಯಾಂಟೀನದ ಕಡೆಗೆ ಹೆಜ್ಜೆ ಹಾಕಿದೆವು. ಹಾದಿಯಲ್ಲಿ ನಿಲೋಫರ್ ನಮ್ಮನ್ನು ಕೂಡಿಕೊಂಡಳು. ಅವಳ ಪರಿಚಯವನ್ನು ಗೌರಿಶಂಕರರಿಗೆ ಮಾಡಿಕೊಟ್ಟೆ. ಮೂವರೂ ಮಾತಾಡುತ್ತಾ ಊಟ ಮಾಡಿದೆವು. ನಿನ್ನೆ ನನಗಿದ್ದ ಒಂಟಿತನ ಇಂದು ಇರಲಿಲ್ಲ.
    ಅಂದು ಸಾಯಂಕಾಲ ನಾ ಡ್ಯೂಟಿ ಮುಗಿಸಿ ರೆಡಿಯಾ ಗುತ್ತಿದ್ದಾಗ ಗೌರಿಶಂಕರ್ ಅವರು ನನ್ನ ಟೇಬಲ್ಲಿನ ಹತ್ತಿರ ಬಂದರು. ನಾನು ಗೌರಿಶಂಕರ್ ಇಬ್ಬರೂ ಹೊರಬರುತ್ತಿದ್ದಂತೆ ನಿಲೋಫರ್ ಬಂದಳು. ನಾನು, ನಿಲೋಫರ್ ಇಬ್ಬರೂ ನಮ್ಮ ರೂಮಿನ ಕಡೆಗೆ ಹೆಜ್ಜೆ ಹಾಕಿದೆವು ಗೌರಿಶಂಕರ್ಗೆ ಬೈ ಹೇಳುತ್ತಾ. ಅವರಿಗೂ ನಮ್ಮ ವಸತಿ ಗೃಹದ ಪಕ್ಕದ ವಸತಿ ಗೃಹದಲ್ಲೇ ವ್ಯವಸ್ಥೆ ಆಗಿತ್ತು.
    ನಮ್ಮ ರೂಮಿಗೆ ಹೋದ ಮೇಲೆ ನಾನು, ನಿಲೋಫರ್ ಇಬ್ಬರೂ ಮುಖ ತೊಳೆದು ಫ್ರೆಷ್ ಆಗಿ, ಲಘುವಾಗಿ ಮೇಕಪ್ ಮಾಡಿಕೊಂಡು, ಸ್ವಲ್ಪ ಹೊತ್ತು ಹೀಗೆ ವಾಯು ವಿಹಾರ ಮಾಡಿಕೊಂಡು ಬರೋಣ ಎಂದು ಇಬ್ಬರೂ ಜೊತೆಗೂಡಿ ಹೆಜ್ಜೆ ಹಾಕಿದೆವು. ಇಂದಿನ ಕೆಲಸದ ಬಗ್ಗೆ ಒಂದೆರಡು ಮಾತುಗಳಲ್ಲಿ ನಮ್ಮ ಚಚರ್ೆ ನಡೆಯಿತು.
    ಮಮತಾ ಬೆಹನ್, ಇಂದು ನನಗೆ ಒಂದು ವಿಚಿತ್ರ ಉತ್ತರ ಪತ್ರಿಕೆ ಬಂದಿತ್ತು. ಕನ್ನಡ ಪತ್ರಿಕೆಯ ಎಲ್ಲಾ ಪ್ರಶ್ನೆಗಳಿಗೆ ಒಂದೇ ಉತ್ತರ ಇತ್ತು. ಪೇಪರ ತುಂಬೆಲ್ಲಾ, ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂದು ಬರೆದಿತ್ತು. ಕೊನೆಗೆ, ಶಿವನೇ ಪರೀಕ್ಷೆಯಲ್ಲಿ ನನ್ನನ್ನು ಪಾಸು ಮಾಡಿಸಪ್ಪಾ ಎಂದಿತ್ತು ಎಂದು ನಿಲೋಫರ್ ಇವತ್ತಿನ ತನ್ನ ಅನುಭವ ಹೇಳಿದಳು.
    ಹೌದೇ? ಮತ್ತೆ ನೀವು ಆ ವಿದ್ಯಾಥರ್ಿಯನ್ನು ಪಾಸು ಮಾಡಿದಿರಾ? ನಾ ಕೇಳಿದೆ.
    ಹೇಗೆ ಅಂತ ಪಾಸ್ ಮಾಡಲಿ ಬೆಹನ್ಜೀ? ನನಗೆ ತುಂಬಾ ಬೇಸರವಾಯಿತು.
    ನನಗೂ ಸಹ ಒಂದು ಸ್ಪೆಷಲ್ ಉತ್ತರ ಪತ್ರಿಕೆ ಬಂದಿತ್ತು. ಇಡೀ ಉತ್ತರ ಪತ್ರಿಕೆಯಲ್ಲಿ ಆಯ್ ಲವ್ ಯು ಎಂಬ ಒಕ್ಕಣೆ ಇತ್ತು. ಕೊನೆಗೆ, ನನ್ನನ್ನು ಪಾಸ್ ಮಾಡದಿದ್ದರೆ, ಆಯ್ ಹೇಟ್ ಯು ಎಂದಿತ್ತು. ನಾನೂ ಸಹ ನನ್ನ ಅನುಭವ ಹೇಳಿದೆ. ಇಬ್ಬರೂ ಗೊಳ್ಳೆಂದು ನಕ್ಕೆವು. ಈಗಿನ ವಿದ್ಯಾಥರ್ಿಗಳ ಮನಸ್ಸೇ ಅರ್ಥವಾಗುತ್ತಿಲ್ಲವಲ್ಲ? ಎಂಬ ಕಳವಳ ವ್ಯಕ್ತಪಡಿಸಿದೆವು ಇಬ್ಬರೂ.
    ಇಬ್ಬರೂ ಅಲ್ಲೇ ಪಾಕರ್ೊಂದರಲ್ಲಿ ಸ್ವಲ್ಪ ಹೊತ್ತು ಕುಳಿತೆವು. ಅದೂ, ಇದೂ ಮಾತಾಡುತ್ತಿರುವಾಗ ನಿಲೋಫರ್, ಬೆಹನ್ಜೀ, ನೀವು ತಪ್ಪು ತಿಳಿದುಕೊಳ್ಳುವುದಿಲ್ಲವೆಂದರೆ ನಾ ಒಂದು ಪ್ರಶ್ನೆ ಕೇಳಬೇಕೆಂದಿರುವೆ ಎಂದು ಹೇಳುತ್ತಾ ನನ್ನ ಮುಖದಲ್ಲಿನ ಭಾವನೆಗಳನ್ನು ಗಮನಿಸತೊಡಗಿದಳು.
    ನೀವು ಏನನ್ನು ಕೇಳಬೇಕೆಂದಿರುವಿರೋ ಅದನ್ನು ಯಾವ ಅಳುಕು ಇಲ್ಲದೇ ಕೇಳಿರಿ ಬೆಹನ್ಜೀ ಎಂದೆ ನಾ. ಆಕೆ ಯಾವುದರ ಬಗ್ಗೆ ಪ್ರಸ್ತಾಪಿಸಬಹುದು ಎಂಬ ಆತಂಕ ನನ್ನ ಮನದಲ್ಲಿ ಆಗುತ್ತಿದ್ದರೂ, ಅದನ್ನು ತೋರ್ಪಡಿಸಿ ಕೊಳ್ಳದೇ ಹೇಳಿದೆ. ಸ್ವಲ್ಪ ಹೊತ್ತು ಮೌನ ಆವರಿಸಿತು ಇಬ್ಬರ ಮಧ್ಯೆ. ಕೊನೆಗೆ ಮೌನ ಮುರಿದ ನಿಲೋಫರ್ಳೇ, ನಿಮಗೆ ಮದುವೆ ಆಗಿಲ್ಲವೇ ಮಮತಾ? ಎಂದು ಅಳುಕುತ್ತಾ ಕೇಳಿದಳು.
    ನಿಲೋಫರ್ಳ ಪ್ರಶ್ನೆಯಿಂದ ನನಗೆ ಮುಜುಗರವಾಗು ತ್ತಿದ್ದರೂ, ಅದನ್ನು ತೋರ್ಪಡಿಸಿಕೊಳ್ಳದೇ, ಈ ವಿಷಯ ವನ್ನು ಕೇಳುವುದಕ್ಕೆ ಇಷ್ಟ್ಯಾಕೆ ಪೀಠಿಕೆ ನಿಲೋಫರ್? ಹೌದು, ನೀವು ಸಂಶಯ ವ್ಯಕ್ತ ಪಡಿಸಿರುವಂತೆ ನನಗೆ ಇನ್ನೂ ಮದುವೆ ಆಗಿಲ್ಲ. ನಾನೂ ಸಹ ನಿಮಗೆ ಇದೇ ಪ್ರಶ್ನೆಯನ್ನು ಕೇಳಬೇ ಕೆಂದಿದ್ದೆ. ಆದರೆ ನೀವೇ ಮೊದಲು ಕೇಳಿಬಿಟ್ಟಿರಿ ಎಂದು ಹೇಳುತ್ತಾ, ನಾ ನಿಲೋಫರ್ಳ ಮುಖ ದಿಟ್ಟಿಸತೊಡಗಿದೆ.
    ಬೆಹನ್ಜೀ, ನನ್ನದೂ ಮದುವೆಯಾಗಿಲ್ಲ ಇನ್ನೂ. ನಿಮ್ಮ ಊಹೆ ಸರಿಯಾಗಿದೆ. ಬರುವ ಜೂನ್ ತಿಂಗಳಿಗೆ ನನಗೆ ಮೂವತ್ತು ತುಂಬುತ್ತದೆ ಎಂದಳು ನಿಲೋಫರ್. ಅವಳ ಮಾತಿನಲ್ಲಿ ದುಃಖದ ಛಾಯೆ ಇತ್ತು.
    ಹಾಗಾದರೆ ನೀವು ನನಗಿಂತ ದೊಡ್ಡವರು ಎಂದ ಹಾಗಾಯಿತು. ಬರುವ ಜುಲೈ ತಿಂಗಳಿಗೆ ನನಗೆ 29ತುಂಬುತ್ತದೆ. ನಾ ನಿಮಗೆ ಅಕ್ಕಾ ಎಂದು ಕರೆಯಲೇ ಇನ್ನುಮುಂದೆ. ಹಾಗೇ ಇನ್ನೊಂದು, ಇಬ್ಬರೂ ಏಕವಚನದಲ್ಲೇ ಮಾತಾಡೋಣವೇ? ನಿಮ್ಮ ಒಪ್ಪಿಗೆ ಇದೆಯೇ? ಹೇಗೂ ನಾವಿಬ್ಬರು ಒಂದೇ ದೋಣಿಯಲ್ಲಿ ಪಯಣಿಸುತ್ತಿದ್ದೇವೆ ಅಲ್ಲವೇ? ಎಂದೆ ನಾ.
    ಹಾಗೇ ಆಗಲಿ ಮಮತಾ. ನಿನ್ನ ಪರಿಚಯ, ಮಾತಿಂದ ನನಗೆ ತುಂಬಾ ಖುಷಿಯೆನಿಸುತ್ತಿದೆ. ನೀ ಹೇಳಿದಂತೆಯೇ ಆಗಲಿ ಎಂದಳು ನಿಲೋಫರ್. ಆಕೆಯ ಮಾತಿಂದ ನನಗೂ ಖುಷಿಯೆನಿಸತೊಡಗಿತ್ತು. ಖುಷಿಯ ಮೂಡಿನಲ್ಲಿಯೇ ನಾ, ಅಕ್ಕಾ, ನೀ ಇದುವರೆಗೂ ಯಾಕೆ ಮದುವೆ ಆಗಿಲ್ಲ? ಎಂದು ಇನ್ನೊಂದು ಪ್ರಶ್ನೆಯನ್ನು ಅವಳ ಮುಂದಿಟ್ಟೆ.
    ನನ್ನ ಕತೆಯನ್ನು ವಿವರಿಸೋಕೆ ನನಗೆ ಅಷ್ಟು ಚೆನ್ನಾಗಿ ಬರುವುದಿಲ್ಲ. ನಿನ್ನ ಭಾಷಾ ಪ್ರಭುತ್ವತೆ ಬಹಳ ಚೆನ್ನಾಗಿದೆ. ನೀನೇ ಮೊದಲು ಹೇಳಿ ಬಿಡು ನೀ ಇದುವರೆಗೂ ಯಾಕೆ ಮದುವೆ ಆಗಿಲ್ಲವೆಂದು. ನೀ ಹೇಳಿದ ನಂತರ ನಾ ಹೇಳುವೆ. ನೀನೇ ಮೊದಲು ಹೇಳುವಿಯಾ? ಆಕೆಯ ಮಾತಿನಲ್ಲಿ ಕಳಕಳಿಯ ವಿನಂತಿ ಇತ್ತು.
    ಆಯಿತಕ್ಕಾ, ನಾನೇ ಮೊದಲು ಹೇಳುವೆ. ಶುರು ಮಾಡಲೇ? ಎಂದೆ ನಾ.
    ಹೇಳು ತಂಗಿ, ಶುರು ಕರೋ. ಮತ್ತೇಕೆ ಪೀಠಿಕೆ ಹಾಕುತ್ತಿರುವಿ? ನನ್ನನ್ನು ಪ್ರೋತ್ಸಾಹಿಸತೊಡಗಿದಳು ನಿಲೋಫರ್.
    ಅಕ್ಕಾ ಕೇಳು, ನಾನು ಹೇಳುವೆ. ನನಗೊಬ್ಬ ಸೋದರಮಾವ ಇದ್ದಾನೆ. ಹರುಷ್ ಅಂತ. ಅಮ್ಮನ ತಮ್ಮ. ಹರುಷನಿಗೆ ನನ್ನನ್ನು ಕೊಟ್ಟು ಮದುವೆ ಮಾಡಬೇಕೆಂದು ನಾ ಎಸ್.ಎಸ್.ಎಲ್.ಸಿ.ಯಲ್ಲಿದ್ದಾಗಲೇ 2 ಕುಟುಂಬಗಳಲ್ಲಿ ಮಾತುಕತೆಗಳಾಗಿದ್ದವು. ನನಗೂ ಹರುಷ್ಗೂ ಮೂರು ವರ್ಷಗಳ ಅಂತರ ಇದೆ. ಹರುಷ್ ಆಗ ಎಂ.ಬಿ.ಬಿ.ಎಸ್. ಮೊದಲನೇ ವರ್ಷದಲ್ಲಿ ಓದುತ್ತಿದ್ದ. ತುಂಬಾ ಸ್ಮಾರ್ಟ ಗೈ ಅವ. ಅವನ ಎಂ.ಬಿ. ಮುಗಿದಾಗ ನಾ ಬಿ.ಎ. ಕೊನೇ ವರ್ಷದಲ್ಲಿದ್ದೆ. ಎಂ.ಬಿ. ಮುಗಿದ ನಂತರ ಅವ ಒಂದು ವರ್ಷ ಎಂ.ಡಿ. ಸಲುವಾಗಿ ಪ್ರಿಪೇರ್ ಮಾಡಿದ. ಅಷ್ಟರಲ್ಲಿ ನನ್ನ ಬಿ.ಎ. ಮುಗಿದಿತ್ತು. ಅವ ಎಂ.ಡಿ. ಮುಗಿಸುವಷ್ಟರಲ್ಲಿ ನಾ ಎಂ.ಎ., ಬಿ.ಎಡ್. ಮುಗಿಸಿದ್ದೆ. ಹರುಷ್ ಮುಂದೆ ಅದೇನೋ ಸೂಪರ್ ಸ್ಪೆಷಲೈಜೇಷನ್ ಕೋಸರ್ು ಅಂತ ಮುಂಬಯಿಗೆ ಹೋದ. ಅವ ಕೋಸರ್ು ಮುಗಿಸಿಕೊಂಡು ಬರುವಷ್ಟರಲ್ಲಿ ನನಗೆ ಇಪ್ಪತ್ತೇಳು ತುಂಬಿತ್ತು. ನಾ ಶಿಕ್ಷಕಿಯಾಗಿ ಸೇರಿಕೊಂಡು ಮೂರು ವರ್ಷ ಆಗುತ್ತಲಿತ್ತು. ಸೂಪರ್ ಸ್ಪೆಷಲೈಜೇಷನ್ ಕೋಸರ್ು ಮುಗಿಸಿಕೊಂಡು ಬಂದ ಹರುಷ್ ಬೆಂಗಳೂರಿನ ಪ್ರತಿಷ್ಠಿತ ಸೂಪರ್ ಸ್ಪೆಷ್ಯಾಲಿಟಿ ಆಸ್ಪತ್ರೆಯೊಂದರಲ್ಲಿ ಸೇರಿಕೊಂಡ. ಅಲ್ಲಿಯವರೆಗೆ ಸುಮ್ಮನಿದ್ದ ನನ್ನ ಅಪ್ಪ, ಅಮ್ಮ ನನ್ನ ಮತ್ತು ಹರುಷನ ಮದುವೆಗಾಗಿ ಅವಸರ ಪಡಿಸತೊಡಗಿದರು.
    ನನ್ನ ವೃತ್ತಿಯಲ್ಲಿ ದಿನ ನಿತ್ಯದ ಕಾಯಕವನ್ನು ಸುಲಭವಾಗಿ ಕಾರ್ಯಗತಗೊಳಿಸಲು, ನನಗೆ ಸಹಾಯ ಒದಗಿಸಲು ಮೆಡಿಸಿನ್ ಓದಿರುವ ಹುಡುಗಿಯೇ ಸಂಗಾತಿ ಯಾಗಬೇಕು. ಬೇರೆ ಪದವಿ ಪಡೆದ ಹುಡುಗಿಗೂ ನನಗೂ ಹೊಂದಾಣಿಕೆಯಾಗುವುದಿಲ್ಲ. ಇಂಥಹದ್ದನ್ನೆಲ್ಲಾ ಊಹೆ ಮಾಡದೇ ಹಿರಿಯರು ನನ್ನ ಮತ್ತು ಮಮತಾಳ ಮದುವೆ ನಿಗದಿ ಮಾಡಿರುವುದು ಈಗ ಸಮಂಜಸವೆನಿಸುವುದಿಲ್ಲ. ಆದ್ದರಿಂದ ನಾ ಮಮತಾಳನ್ನು ಮದುವೆಯಾಗುವುದಿಲ್ಲ ಎಂದು ಹರುಷ್ ತನ್ನ ನಿಲುವನ್ನು ಸ್ಪಷ್ಟಪಡಿಸಿದ. ಅವ ಯಾರ ಮಾತನ್ನೂ ಕೇಳುವ ಹಂತದಲ್ಲಿರಲಿಲ್ಲ. ಸ್ಕೂಲ್ ಟೀಚರ್ ಆಗಿರುವ, ಆಡರ್ಿನರಿ ಎಂ.ಎ., ಬಿ.ಎಡ್. ಮಾಡಿಕೊಂಡಿರುವ ಮಮತಾ ತನ್ನಂತೆ ಯಾರಾದರೂ ಶಾಲಾ ಶಿಕ್ಷಕನನ್ನು ಮದುವೆ ಮಾಡಿಕೊಳ್ಳಲಿ. ನನ್ನ ಅಭ್ಯಂತರವೇನೂ ಇಲ್ಲ. ನಾನಂತೂ ಅವಳನ್ನು ಮದುವೆಯಾಗಲಾರೆ ಎಂದ ಹರುಷ್.
    ದಾಂಪತ್ಯ ಜೀವನಕ್ಕೆ ಒಂದು ಗಂಡು, ಒಂದು ಹೆಣ್ಣು ಬೇಕು ಎಂಬುದು ಪ್ರಕೃತಿಯ ನಿಯಮ. ಡಾಕ್ಟರ್ ಹುಡುಗನಿಗೆ, ಟೀಚರ್ ಹುಡುಗಿಯೊಂದಿಗೆ ಸಂಸಾರ ಸಾಗಿಸುವುದಕ್ಕೆ ಆಗುವುದಿಲ್ಲವೇ? ನಾ ಹರುಷನ ಮಾತಿನ ವರಸೆಯನ್ನು ಪ್ರತಿಭಟಿಸಿದ್ದೆ. ನಾ ಮಾನಸಿಕವಾಗಿ ತುಂಬಾ ಬಳಲಿದೆ. ಹರುಷ್-ಮಮತಾ, ಮಮತಾ-ಹರುಷ್ ಎಂದು ನಮ್ಮ ಸಂಬಂಧಿಕರಲ್ಲಿ ಮಾತುಗಳು ಕೇಳಿ ಬರುತ್ತಿದ್ದವು ನಮ್ಮ ಜೋಡಿಯನ್ನು ನೋಡಿ. ರಜಕ್ಕೆಂದು ಊರಿಗೆ ಬಂದಾಗ ಹರುಷ್, ನಾನು ಕೈ ಕೈ ಹಿಡಿದುಕೊಂಡು ಸಕತ್ತಾಗಿ ತಿರುಗಾಡುತ್ತಿದ್ದೆವು. ಏಕಾಂತದಲ್ಲಿ ಪರಸ್ಪರರು ತಬ್ಬಿ ಮುದ್ದಾಡಿದ್ದೆವು. ನಂಬಿಕೆ ಇದೆಯೆಂದುಕೊಂಡು ಮನಸ್ಸನ್ನು ಒಪ್ಪಿಸಿದಂತೆ ಮೈಯನ್ನು ಒಪ್ಪಿಸಿರಲಿಲ್ಲ ಅಷ್ಟೇ. ಇವೆಲ್ಲವು ಗಳನ್ನು ನೆನೆಸಿಕೊಂಡರೆ ನನಗೆ ಮೈಯೆಲ್ಲಾ ಪರಚಿಕೊಳ್ಳು ವಂತಾಗುತ್ತದೆ ಈಗಲೂ.
    ಹರುಷನಿಗಿಂತಲೂ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡುತ್ತೇವೆ. ಆದದ್ದನ್ನೆಲ್ಲಾ ಕೆಟ್ಟ ಕನಸು ಎಂದು ಮರೆತು ಬಿಡು ಎಂದು ಅಪ್ಪ-ಅಮ್ಮ ಸಮಾಧಾನ ಮಾಡಿದ್ದರು. ಸ್ವಲ್ಪ ದಿನಗಳ ನಂತರ ಗೊತ್ತಾಗಿತ್ತು, ಹರುಷ್ ಮುಂಬಯಿಯಲ್ಲಿದ್ದಾಗ ಅವ ಅಲ್ಲಿನ ಮರಾಠಿ ಡಾಕ್ಟರ್ ಬೆಡಗಿಯೊಬ್ಬಳ ಮೋಹ ಪಾಶದಲ್ಲಿ ಸಿಲುಕಿ ಹಾಕಿಕೊಂಡಿದ್ದಾನೆಂದು. ಮನೆಯಲ್ಲಿ ನನ್ನ ಮದುವೆಗೆ ಒತ್ತಾಯ ಮಾಡುತ್ತಿದ್ದರೂ, ನಾ ನನ್ನ ಮನಸ್ಸಿಗಾಗಿರುವ ಆಘಾತದಿಂದ ಇನ್ನೂ ಹೊರ ಬಂದಿಲ್ಲ. ಇದೇ ನೋಡು ನನ್ನ ಕತೆ ನಿಲೋಫರ್ ಎಂದೆ.
    ಅಯ್ಯೋ ಮಮತಾ, ನಿನ್ನದು ಡಾಕ್ಟರ್ ಕತೆಯಾದರೆ, ನನ್ನದು ಇಂಜಿನಿರ್ ಕತೆ. ತಂಗಿ, ದೊಡ್ಡ, ದೊಡ್ಡ ಪದವಿ ಪಡೆದ ಕೆಲವರಿಗೆ ಮಾನವೀಯತೆಯೇ ಮರೆತು ಹೋಗುತ್ತಿದೆಯಲ್ಲಾ? ಬರೀ ದುಡ್ಡು, ಸ್ಟೇಟಸ್ ಅಷ್ಟೇ ಅವರಿಗೆ ಬೇಕಾಗುತ್ತಿವೆಯಲ್ಲ? ನಮ್ಮಂಥಹ ಅಮಾಯಕರಿಗೆ ಏನನ್ನೂ ಮಾಡಲಿಕ್ಕೆ ಆಗುತ್ತಿಲ್ಲವಲ್ಲ? ಮೂಕವಾಗಿ ವೇದನೆಯನ್ನು ಅನುಭವಿಸಬೇಕು ಅಷ್ಟೇ ಅಲ್ಲವೇ?
    ಮಮತಾ, ನಿನ್ನ ಹಾಗೆ ನನ್ನ ಮದುವೆಯನ್ನೂ ನನ್ನ ಅಪ್ಪನ ಅಕ್ಕನ ಮಗ ಜಲೀಲನೊಂದಿಗೆ ಮಾಡಬೇಕೆಂದು ನಾನು ಪಿ.ಯು.ಸಿ.ಯಲ್ಲಿದ್ದಾಗಲೇ ಎರಡೂ ಕುಟುಂಬಗಳು ಮಾತಾಡಿಕೊಂಡಿದ್ದವು. ನಾನು ಪಿ.ಯು. ಎರಡನೇ ವರ್ಷದಲ್ಲಿದ್ದಾಗ ಜಲೀಲ್ ಬಿ.ಇ. ಮೂರನೇ ವರ್ಷದಲ್ಲಿದ್ದ. ಬಿ.ಇ. ಮುಗಿಸುತ್ತಲೇ ಜಲೀಲನಿಗೆ ಕ್ಯಾಂಪಸ್ ಸೆಲೆಕ್ಷನ್ ಆಗಿದ್ದುದರಿಂದ ಪ್ರತಿಷ್ಠಿತ ಬೆಂಗಳೂರಿನ ಸಾಫ್ಟವೇರ್ ಕಂಪನಿಯನ್ನು ಸೇರಿಕೊಂಡ. ನಾ ಬಿ.ಎ.ಗೆ ಸೇರಿದ್ದೆ.
    ಜಲೀಲ್ ಒಂದು ವರ್ಷ ನೌಕರಿ ಮಾಡುತ್ತಿದ್ದಂತೆ, ಅವನ ಕಂಪನಿವರೇ ಅವನನ್ನು ಯು.ಎಸ್.ಗೆ ಎಂ.ಎಸ್. ಮಾಡಲು ಡೆಪ್ಯೂಟೇಷನ್ ಮೇಲೆ ಕಳುಹಿಸಿದರು. ಅವನ ಎಂ.ಎಸ್. ಮುಗಿದಾಗ ನನ್ನ ಬಿ.ಎ. ಮುಗಿದಿತ್ತು. ಎಂ.ಎಸ್. ಮುಗಿಯುತ್ತಲೇ ತಕ್ಷಣ ಜಲೀಲ್ ನಮ್ಮ ದೇಶಕ್ಕೆ ವಾಪಾಸು ಬರದಾದಾಗ, ನಾ ಕೇಳಿದ್ದಕ್ಕೆ,  3 ವರ್ಷಗಳವರೆಗೆ ಅಲ್ಲಿಯೇ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದ. ಅವನು ಯು.ಎಸ್.ಗೆ ಹೋಗುವಾಗಲೇ, ಎಂ.ಎಸ್. ಮಾಡಿದ ಮೇಲೆ ಯು.ಎಸ್.ದಲ್ಲಿ ಕನಿಷ್ಟ 3 ವರ್ಷಕೆಲಸ ಮಾಡಬೇಕು ಎಂದಿದ್ದ ಕರಾರಿನ ಬಗ್ಗೆ ಜಲೀಲ್ ನನಗೆ ಹೇಳಿರಲಿಲ್ಲ. ಆ 3 ವರ್ಷ ಮುಗಿಯುವಷ್ಟರಲ್ಲಿ ನನ್ನದು ಎಂ.ಎ., ಬಿ.ಎಡ್. ಮುಗಿದಿತ್ತು. ಅಷ್ಟೊತ್ತಿಗೆ ನಾ 25 ವಸಂತಗಳ ನವ ತರುಣಿ. ಓದುವಾಗ ಸುಪ್ತವಾಗಿದ್ದ ಕನಸುಗಳು ಹೃದಯದಲ್ಲಿ ಗರಿಗೆದುರತೊಡಗಿದ್ದವು ನನಗರಿವಿಲ್ಲದಂತೆ.
    ಜಲೀಲ್ ಇನ್ನೇನು ಭಾರತಕ್ಕೆ ಮರಳುತ್ತಾನೆ ಎಂದು ಅಂದುಕೊಂಡದ್ದು ಸುಳ್ಳಾಗಲು ಬಹಳ ದಿನ ಹಿಡಿಯಲಿಲ್ಲ. ಅವ ಬರ ಬರುತ್ತ ನನ್ನ ಜೊತೆ ಫೋನಿನಲ್ಲಿ ಮಾತಾಡುವುದನ್ನು ದಿನದಿಂದ ದಿನಕ್ಕೆ ಕಡಿಮೆ ಮಾಡಿ, ಕೊನೆಗೊಂದು ದಿನ ನನ್ನ ಜೊತೆ ಮಾತಾಡುವುದನ್ನೇ ಬಿಟ್ಟ. ಫೋನು ನಂಬರು ಬದಲಿಸಿಕೊಂಡಿದ್ದ. ಅತ್ತೆ-ಮಾವನವರನ್ನು ಕೇಳಿದರೆ, ಅವರು ಅವನ ಫೊನ್ ನಂಬರನ್ನು ಕೊಡಲಿಲ್ಲ. ಅವ ಇನ್ನೆರಡು ವರ್ಷ ಯು.ಎಸ್.ನಲ್ಲಿಯೇ ಇರುತ್ತಾನೆ ಎಂಬ ಬಾಂಬನ್ನೂ ಸಿಡಿಸಿದರು. ಇದರಲ್ಲೇನೋ ಕುತಂತ್ರ ಇದೆಯೆಂದು ನನಗೆ ಅನಿಸತೊಡಗಿತ್ತು. ಅಷ್ಟರಲ್ಲಿ ನನಗೆ ಈಗಿರುವ ಪ್ರೌಢಶಾಲೆಯಲ್ಲಿ ಶಿಕ್ಷಕಿಯೆಂದು ಕೆಲಸ ಸಿಕ್ಕಿತ್ತು.
    ನನ್ನ ಮತ್ತು ಜಲೀಲನ ನಡುವಿನ ಸಂಪರ್ಕ ಕಡಿದು ಹೋಗಿತ್ತು. ನನ್ನ ಕನಸುಗಳು ಕಮರಿ ಹೋಗಿದ್ದವು. ನನಗೆ ಇಪ್ಪತ್ತೆಂಟು ತುಂಬಿದ್ದಾಗ ಜಲೀಲ್ ಊರಿಗೆ ಬಂದಿದ್ದ. ಬರುವಾಗ ಯು.ಎಸ್.ನಿಂದ ಬಿಳಿ ಜಿರಳೆ ಒಂದನ್ನು ಅಂಟಿಸಿಕೊಂಡೇ ಬಂದಿದ್ದ. ಈ ಜಿರಳೆಯನ್ನು ಅವ ನಾಲ್ಕು ವರ್ಷಗಳ ಹಿಂದೆನೇ ತಳುಕು ಹಾಕಿಕೊಂಡಿದ್ದನಂತೆ. ಹದಿನೆಂಟು-ಇಪ್ಪತ್ತಕ್ಕೇ ಮದುವೆಯಾಗಬೇಕಿದ್ದ ನಾ ನನ್ನ ಜೀವನದ ಸುವರ್ಣಕಾಲವನ್ನು ಜಲೀಲಗಾಗಿ ವ್ಯರ್ಥ ಮಾಡಿಕೊಂಡಿದ್ದೆ. ನನ್ನ ಕನಸುಗಳು ಆಗ ನುಚ್ಚು ನೂರಾಗಿದ್ದವು. ನಾಗರಹಾವು ಸಿನಿಮಾದ ವಿಲನ್ ಜಲೀಲನಂತೆ ಇವ ನನ್ನ ಜೀವನದಲ್ಲಿ ವಿಲನ್ ಆದ. ನನ್ನ ಮನಸ್ಸಿಗಾದ ಆಘಾತ, ನನ್ನ ರಂಪಾಟ ಕೇಳುವವರಾರೂ ಇದ್ದಿಲ್ಲ. ನಿನ್ನ ತಂದೆ-ತಾಯಿಗಳು ನಿನ್ನನ್ನು ಸಮಾಧಾನ ಮಾಡಿದಂತೆ ನನ್ನ ತಂದೆ-ತಾಯಿಗಳೂ ಸಮಾಧಾನ ಮಾಡಿದ್ದರು.
    ನಮ್ಮ ಧರ್ಮದಲ್ಲಿ ನಾಲ್ಕು ಜನ ಹೆಂಡಿರನ್ನು ಮಾಡಿ ಕೊಳ್ಳುವುದಕ್ಕೆ ಅವಕಾಶ ಮತ್ತು ಸಮ್ಮತಿ ಇರುವುದರಿಂದ ಬೇಕಾದರೆ ನಾ ನಿಲೋಫರ್ಳನ್ನು 2ನೇ ಹೆಂಡತಿಯನ್ನಾಗಿ ಸ್ವೀಕರಿಸುವೆ. ಅವಳಲ್ಲಿ ತಿಂಗಳಿಗೆ ಒಂದೆರಡು ಸಾರೆ ಹೋಗಿ ಬರುವೆ. ನೌಕರಿಯಿಂದ ಬರುವ ಸಂಬಳದ ಹಣವನ್ನು ತಿಂಗಳು, ತಿಂಗಳು ತಪ್ಪದೇ ನನಗೆ ತಂದು ಕೊಡಬೇಕು ಎಂದು ಜಲೀಲ್ ಬೇರೆಯವರ ಕಡೆಯಿಂದ ಹೇಳಿಕಳುಹಿಸಿ, ನನ್ನನ್ನು ಅನುಭವಿಸಬೇಕೆನ್ನುವ ತನ್ನ ಚಪಲ ಮತ್ತು ಧೂರ್ತ ಬುದ್ಧಿಯನ್ನು ವ್ಯಕ್ತಪಡಿಸಿದ್ದ. ಇಂಥಹ ನೀಚ ಮನುಷ್ಯಗೆ ನಾ ತೆರೆದುಕೊಳ್ಳುವುದಿಲ್ಲವೆಂದು ನೇರವಾಗಿ ಹೇಳಿ ಕಳುಹಿಸಿದ್ದೆ. ಅಂದಿನಿಂದ ಅವನ್ಯಾರೋ, ನಾನ್ಯಾರೋ? ಮಮತಾ, ಇದೇ ನೋಡು ನನ್ನ ಕತೆ ಎಂದು ಹೇಳಿ ನಿಟ್ಟುಸಿರು ಬಿಟ್ಟಳು ನಿಲೋಫರ್. ಆತ್ಮೀಯತೆಯಿಂದ ಅವಳ ಹೆಗಲ ಮೇಲೆ ಕೈ ಹಾಕಿ, ಬೆನ್ನು ನೇವರಿಸುತ್ತಾ ಸಮಾಧಾನ ಮಾಡಲು ಪ್ರಯತ್ನಿಸಿದೆ. ಪಾಕರ್ಿಂದ ರೂಮಿಗೆ ಬಂದ ನಾವು ಪರಸ್ಪರ ತಬ್ಬಿ ಹಿಡಿದುಕೊಂಡಿದ್ದೆವು ಎಷ್ಟೋ ಹೊತ್ತಿನವರೆಗೆ. ಎಷ್ಟೋ ವರ್ಷಗಳಿಂದ ಪರಿಚಯವಿರುವ ಗೆಳತಿಯರಂತೆ ನಾವು ಆತ್ಮೀಯರಾಗಿ ಬಿಟ್ಟೆವು.
    ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಕೆಲಸ ಮುಗಿಸಿಕೊಂಡು ಬೆಂಗಳೂರಿನಿಂದ ಊರಿಗೆ ಬಂದ ಮೂರನೇ ದಿನ ಅದು. ಪ್ರಯಾಣದ ಆಯಾಸ, ಕೆಲಸದ ಒತ್ತಡ ಎಂದು ದೇಹ ಮತ್ತು ಮನಸ್ಸು ದಣಿದಿದ್ದರಿಂದ ಎರಡು ದಿನ ಭರ್ಜರಿಯಾಗಿ ರೆಸ್ಟ್ ಮಾಡಿದ್ದೆ. ಬರೀ ಊಟ, ನಿದ್ದೆಗಳ ಕಾರ್ಯಕ್ರಮ ಸಾಂಗವಾಗಿ ನಡೆದಿತ್ತು. ಮೂರನೇ ದಿನ ಬೆಳಿಗ್ಗೆ ಎದ್ದಾಗ ನೆನಪಾಗಿತ್ತು ಅಂದು ಗೌರಿಶಂಕರನ ಜನ್ಮ ದಿನ ಎಂದು. ಅವನಿಗೆ ಶುಭಾಷಯ ಹೇಳಬೇಕಾಗಿತ್ತು. ಗೌರಿಗೆ ಫೋನಾಯಿಸಿದೆ. ಅವನ ಫೋನು ರಿಂಗಾಗುತ್ತಿತ್ತು. ಆದರೆ ಗೌರಿ ಫೋನನ್ನು ರಿಸೀವ್ ಮಾಡುತ್ತಿಲ್ಲ. ಇನ್ನೇನು ರಿಂಗ್ ಕಟ್ ಆಗುವ ಹಂತದಲ್ಲಿತ್ತು. ಫೋನ್ ಕಾಲ್ ರಿಸೀವ್ ಆಯಿತು. ನಾ ಸಂತೋಷದ ಭರದಲ್ಲಿ ಹಲೋ ಎಂದೆ. ಆ ಕಡೆಯಿಂದಲೂ ಹಲೋ ಎಂದು ಹೆಣ್ಣಿನ ಮಧುರ ಧ್ವನಿ ಕೇಳಿಸಿದಾಗ ನನಗೆ ಗಾಬರಿ ಮತ್ತು ಅಚ್ಚರಿ. ಆದರೂ ಧ್ಯೆರ್ಯಗೆಡದೇ, ಗೌರಿಶಂಕರ್ ಅವರು ಇದ್ದಾರೆಯೇ? ಎಂದು ಕೇಳಿದೆ.
    ಇದ್ದಾರೆ. ಅವರು ಸ್ನಾನಕ್ಕೆ ಹೋಗಿದ್ದಾರೆ. ಅವರು ಬಂದ ಮೇಲೆ ನೀವು ಯಾರು ಅಂತ ಅವರಿಗೆ ಹೇಳಲಿ? ಅವರು ಕೇಳಿದ ಪ್ರಶ್ನೆಗೆ ಉತ್ತರಿಸದೇ ನಾ, ಮೇಡಂ, ನೀವೂ....? ಎಂದೆ.
    ನಾ ಅವರ ಹೆಂಡತಿ ಲಲಿತಾ ಎಂದಳು ಆಕೆ.
    ಇಂದು ಸರ್ರ ಬರ್ತಡೇ ಅಲ್ಲವಾ? ಶುಭಾಷಯ ಹೇಳಬೇಕೆಂದು ಫೋನು ಮಾಡಿರುವೆ ಎಂದು ಹೇಳುವಷ್ಟರಲ್ಲಿ ಆ ಕಡೆಯಿಂದ, ಅಮ್ಮಾ, ನಮಗೆ ಬೋರ್ನವಿಟಾ ಹಾಕಿಕೊಡು ಎಂದು ಒಂದು ಗಂಡು ಮಗು ಮತ್ತು ಒಂದು ಹೆಣ್ಣು ಮಗು ಗಲಾಟೆ ಮಾಡುವ ಧ್ವನಿ ಕೇಳತೊಡಗಿತು. ನನ್ನ ಮಾತು ಅವರಿಗೆ ಸರಿಯಾಗಿ ಕೇಳದಾದವು. ಮಕ್ಕಳು ತುಂಬಾ ಗಲಾಟೆ ಮಾಡುತ್ತಿದ್ದಾರೆ. ಸ್ವಲ್ಪ ಹೊತ್ತು ಬಿಟ್ಟು ಮಾತಾಡಿರಿ ನೀವು ಎಂದು ಹೇಳುತ್ತಾ ಲಲಿತಾ ಫೊನನ್ನು ಕಟ್ ಮಾಡಿದಳು.
    ಇಷ್ಟೆಲ್ಲಾ ಮಾತುಕತೆ ಆಗುವಷ್ಟರಲ್ಲಿ ನನಗೆ ಶಾಕ್ ಹೊಡೆದಂತಾಯಿತು. ನನ್ನ ಕೈ, ಕಾಲಲ್ಲಿನ ಶಕ್ತಿಯೇ ಉಡುಗಿ ಹೋದಂತಾಯಿತು. ನಿಂತಲ್ಲೇ ಕುಸಿದು ಕುಳಿತೆ. ಹಾಗೇ ನಾ ಎಷ್ಟು ಹೊತ್ತು ಕುಳಿತಿದ್ದೆನೋ ಏನೋ? ಅಮ್ಮ ಬಂದು ಎಚ್ಚರಿಸಿದಾಗಲೇ ನಾ ವಾಸ್ತವಕ್ಕೆ ಬಂದೆ. ಅಮ್ಮಾ, ತಲೆ ತುಂಬಾ ಸಿಡಿಯುತ್ತಿದೆ. ನಾ ಇನ್ನೂ ಸ್ವಲ್ಪ ಹೊತ್ತು ಮಲಗುವೆ. ನನ್ನ ಡಿಸ್ಟರ್ಬ ಮಾಡಬೇಡ ಎಂದು ಹೇಳುತ್ತಾ ನಾ ನನ್ನ ರೂಮು ಸೇರಿ ಹಾಸಿಗೆ ಮೇಲೆ ಉರುಳಿದೆ. ಈಗಿನ ಕಾಲದ ಹುಡುಗಿಯರ ನಡೆಯೇ ಗೊತ್ತಾಗುವುದಿಲ್ಲ ಎಂದು ಅಮ್ಮ ಹೇಳಿದ ಮಾತುಗಳು ನನ್ನ ಕಿವಿಗೆ ಬೀಳದೇ ಇರಲಿಲ್ಲ. ಕೇಳಿಸಿಯೂ ಕೇಳಿಸಿಕೊಳ್ಳದವಳಂತೆ ಸುಮ್ಮನಿದ್ದೆ. ದೈಹಿಕವಾಗಿ ನಾ ಹಾಸಿಗೆಯಲ್ಲಿ ಅಂಗಾತ ಮಲಗಿದ್ದರೂ ವಿಚಲಿತವಾಗಿದ್ದ ಮನಸ್ಸು ಒಳಗೊಳಗೇ ಅಳುತ್ತಿತ್ತು. ಮನಸ್ಸು ಜೀವನವೆಂಬ ಪುಸ್ತಕದ ಹಿಂದಿನ ಪುಟಗಳನ್ನು ತಿರುವಿ ಹಾಕತೊಡಗಿತು.
    ಅಂದು ನಾನು, ನಿಲೋಫರ್ ಇಬ್ಬರೂ ನಮ್ಮ ಕಷ್ಟ-ಸುಖ ಹಂಚಿಕೊಂಡ ಮೇಲೆ ಬಹಳ ಆತ್ಮೀಯರಾಗಿ ಬಿಟ್ಟೆವು. ಮರುದಿನ ನಾ, ನಿಲೋಫರ್, ನನ್ನ ಮನದಲ್ಲೊಂದು ಬಹಳ ದಿನದ ಆಸೆ ಇದೆ. ಸೋಮನಾಥಪುರ, ತಲಕಾಡು, ಮಲೈ ಮಹಾದೇಶ್ವರ ಬೆಟ್ಟ, ದೇವಸ್ಥಾನ ನೋಡಬೇಕೆಂಬ ತುಡಿತ ಇದೆ. ನಮ್ಮ ಮೌಲ್ಯಮಾಪನದ ಕಾರ್ಯಕ್ರಮ ಮುಗಿದ ನಂತರ ಹೋಗೋಣ. ನೀನು ನನಗೆ ಕಂಪನಿ ಕೊಡಬೇಕು ಎಂದೆ ಆತ್ಮವಿಶ್ವಾಸದಿಂದ ಅವಳು ಬಂದೇ ಬರುತ್ತಾಳೆ ಎಂದು ಅಂದುಕೊಂಡು.
    ಅಯ್ಯೋ ಸಾರಿ ಮಮತಾ. ನಿಜವಾಗಿ ನನಗೆ ನಿನ್ನ ಜೊತೆಗೆ ಬರಬೇಕೆಂದು ಮನಸ್ಸಿರುವುದಾದರೂ, ನಮ್ಮ ಈ ಕೆಲಸ ಮುಗಿದ ಕೂಡಲೇ ನಾ ಇಲ್ಲಿನ ನನ್ನ ಬಾಲ್ಯದ ಗೆಳತಿಯೊಬ್ಬಳ ಜೊತೆ ಸಮಯ ಕಳೆಯಬೇಕೆನ್ನುವ ಪ್ರೋಗ್ರ್ಯಾಂ ಮೊದಲೇ ನಿಶ್ಚಿತವಾಗಿದೆ. ಆದ್ದರಿಂದ ನನಗೆ ನಿನ್ನ ಜೊತೆ ಬರಲು ಆಗುತ್ತಿಲ್ಲ. ಸಾರಿ ಕಣೇ, ಕ್ಷಮಿಸಿಬಿಡು. ನಿಲೋಫರ್ಗೆ ತುಂಬಾ ಹಳಹಳಿಯಾಗಿತ್ತು.
    ನಿಲೋಫರ್, ಡೋಂಟ್ ವರಿ, ನೋಡೋಣ ಹೇಗೂ ಇನ್ನೂ ಟೈಮಿದೆಯಲ್ಲಾ? ಎಂದು ನಾ ಹೇಳಿದ್ದೆ. ನಾ ಅಂದುಕೊಂಡಿದ್ದ ಸ್ಥಳಗಳನ್ನು ನೋಡುವುದಕ್ಕೆ ಆಗುತ್ತೋ ಇಲ್ಲವೋ ಎಂಬ ಚಿಂತೆ ನನ್ನ ಮನಸ್ಸನ್ನು ಕಾಡತೊಡಗಿದ್ದುದರಿಂದ ನಾ ಅಂದು ಕೊಂಚ ಡಲ್ಲಾಗೇ ಇದ್ದೇನೆಂದು ಅನಿಸುತ್ತಿತ್ತು.
    ಮಧ್ಯಾಹ್ನ ನಾನು, ಗೌರಿಶಂಕರ್ ಮತ್ತು ನಿಲೋಫರ್ ಊಟ ಮಾಡುತ್ತಿರುವಾಗ, ಯಾಕೋ ಮಮತಾ ಮೇಡಂ ಇವತ್ತು ಡಲ್ಲಾಗಿದ್ದಾರೆ ಎಂದು ಅನಿಸುತ್ತಿದೆ ಎಂದು ಗೌರಿಶಂಕರ್ ಅಂದಾಗ, ನಿಲೋಫರ್, ನನ್ನ ಪ್ರೋಗ್ರ್ಯಾಂದ ಬಗ್ಗೆ ತಿಳಿಸುತ್ತಾ, ನಮ್ಮಿಬ್ಬರ ಮಧ್ಯೆ ಬೆಳಿಗ್ಗೆ ಆದ ಮಾತುಕತೆಗಳನ್ನು ತಿಳಿಸುತ್ತಾ, ಬಹುಶಃ ಅದಕ್ಕೇ ಡಲ್ಲಾಗಿರಬೇಕು ಎಂದು ನನ್ನ ಅನಿಸಿಕೆ ಎಂದು ತಿಳಿಸಿದಳು.
    ಮಮತಾ ಮೇಡಂ, ಅದಕ್ಯಾಕೆ ಅಷ್ಟು ನಿರಾಶರಾಗಿರುವಿರಿ? ನೀವು ಹೂಂ ಅಂದರೆ ನಾ ನಿಮಗೆ ಕಂಪನ ಕೊಡುವೆ ಎಂದು ಗೌರಿಶಂಕರ್ ಹೇಳಿದಾಗ ನನಗೆ ಸಂತೋಷವೆನಿಸತೊಡಗಿತು. ಗೌರಿಶಂಕರರ ಬಗ್ಗೆ ಅಭಿಮಾನ ಮೂಡತೊಡಗಿದರೂ, ಒಂಟಿ ಗಂಡಸಿನ ಜೊತೆಗೆ ಹೋಗುವುದು ಸೂಕ್ತವೋ ಅಲ್ಲವೋ ಎಂಬ ವಿಚಾರ ಮನದಲ್ಲಿ ಹೊಳೆದು ಹೋಯಿತು. ಆದರೆ ಈಗಿನ ಕಾಲದಲ್ಲಿ ಹೆಣ್ಣು ಒಂಟಿಯಾಗಿ ತಿರುಗುವುದು ಅನಿವಾರ್ಯವಾಗಿದೆ. ಧ್ಯೆರ್ಯ, ಸ್ವಂತಿಕೆ ಇದ್ದರೆ ಸಾಕು ಎಂದು ಅಂದುಕೊಂಡೆ ಮನದಲ್ಲಿ ಒಂದು ಕ್ಷಣ.
    ಗೌರಿಶಂಕರ್ ಅವರೇ, ತುಂಬಾ ಧನ್ಯವಾದಗಳು. ಆಯಿತು ಇಬ್ಬರೂ ಕೂಡಿ ಹೋಗಿ ಬರೋಣ. ಪ್ರೋಗ್ರ್ಯಾಂದ ಬಗ್ಗೆ ನಂತರ ಫೈನಲ್ ಮಾಡಿಕೊಳ್ಳೋಣ ಎಂದು ನಾ ಹೇಳಿದರೆ, ನನ್ನ ಮಮತಾಳ ಸಮಸ್ಯೆ ಸಾಲ್ವ್ ಮಾಡಿದ್ದಕ್ಕೆ ಶುಕ್ರಿಯಾ ಸರ್ ಎಂದು ನಿಲೋಫರ್ ಸಹ ಧ್ವನಿಗೂಡಿಸಿದಳು.
    ಮುಂದಿನ ಎರಡು ದಿನಗಳಲ್ಲಿ ಗೌರಿಶಂಕರ್ ನನಗೆ ತುಂಬಾ ಆತ್ಮೀಯನಾದ. ಏಕವಚನದಲ್ಲಿ ಮಾತಾಡುವಷ್ಟರ ಮಟ್ಟಿಗೆ ಹತ್ತಿರನಾದ. ನಾನು, ನಿಲೋಫರ್ ಅವನನ್ನು ಗೌರಿ ಎಂದು ಮುದ್ದಾಗಿ ಕರೆಯತೊಡಗಿದೆವು. ಅವನಿಗೂ ನಮ್ಮ ಮಾತಿನಿಂದ ಖುಷಿಯಾಗುತ್ತಿತ್ತು.
    ಗೌರಿಶಂಕರನ ನಯ, ವಿನಯ, ಕಳಕಳಿ, ಆತ್ಮೀಯತೆ ನನಗೆ ತುಂಬಾ ಹಿಡಿಸಿಬಿಟ್ಟವು. ದಿನಾಲೂ ಸಾಯಂಕಾಲ ನಾನು, ಗೌರಿ ಮತ್ತು ನಿಲೋಫರ್ ಅಲ್ಲಿ, ಇಲ್ಲಿ ಸುತ್ತಾಡಿ ಬರುತ್ತಿದ್ದೆವು. ಒಂದೆರಡು ದಿನ ಮೆಜೆಸ್ಟಿಕ್, ದೊಡ್ಡ ದೊಡ್ಡ ಮಾಲ್ಗಳಿಗೆ ಹೋಗಿಬಂದೆವು. ಈ ಸುತ್ತಾಟ ನಮ್ಮನ್ನು ಇನ್ನೂ ಹತ್ತಿರ ತಂದಿದ್ದವು. ಅವನ ನಡೆ, ನುಡಿ, ರೂಪ ನನ್ನ ಹೃದಯಕ್ಕೆ ಲಗ್ಗೆ ಇಡತೊಡಗಿದ್ದವು.
    ನಮ್ಮ ಕೆಲಸ ಮುಗಿದ ನಂತರ ನನ್ನ, ನಿಲೋಫರ್ಳ ಅಗಲುವಿಕೆ ಹೃದಯಸ್ಪಶರ್ಿಯಾಗಿತ್ತು. ಏನೇ ಬರಲಿ, ಈ ವರ್ಷ ತಾನು ಮದುವೆ ಮಾಡಿಕೊಳ್ಳುವುದಾಗಿ ನಿಲೋಫರ್ ಹೇಳಿ ಆಶಾದಾಯಕ ಬೆಳವಣಿಗೆಗೆ ನಾಂದಿ ಹಾಡಿದಳು ನಮ್ಮಿಂದ ಬೀಳ್ಕೊಡುವಾಗ. ಹಾಗೇ, ನೀನೂ ಸಹ ಆದಷ್ಟು ಬೇಗ ಮದುವೆ ಮಾಡಿಕೊಳ್ಳಬೇಕು ಎಂದು ನನಗೆ ಹೇಳಿ ನನ್ನಿಂದ ಪ್ರಮಾಣ ಮಾಡಿಸಿಕೊಂಡ ಆಕೆಯ ಮೊಗದಲ್ಲಿ ತೃಪ್ತಿಯ ಛಾಪು ಇತ್ತು. ನಾನ್ಯಾರೋ, ನಿಲೋಫರ್ ಯಾರೋ? ಆದರೆ ಕೆಲವು ದಿನಗಳ ಪರಿಚಯದಲ್ಲಿ ಅದೆಂಥಹ ಆತ್ಮೀಯತೆ ಬೆಳೆದಿತ್ತು ನಮ್ಮಿಬ್ಬರಲ್ಲಿ?
    ಬೆಂಗಳೂರಿನ ಈ ಸವಿನೆನಪುಗಳನ್ನು ಮೆಲುಕು ಹಾಕುತ್ತಾ, ನಾ ಗೌರಿಶಂಕರನೊಂದಿಗೆ ಮೈಸೂರು ಬಸ್ಸು ಏರಿದ್ದೆ. ಮೊದಲ ದಿನ ನಾವಿಬ್ಬರೂ ನೇರವಾಗಿ ಮಲೈ ಮಹಾದೇಶ್ವರಕ್ಕೆ ಹೊರಟೆವು. ಮಲೈ ಮಹಾದೇಶ್ವರ ಬೆಟ್ಟದ ಹಸಿರು ವರ್ಣದ ದಟ್ಟ ಕಾಡು, ಅಂಕುಡೊಂಕಾದ ರಸ್ತೆಗಳು ನಮ್ಮ ಮನ ಸೂರೆಗೊಳ್ಳುತ್ತಿದ್ದವು. ಮಮತಾ, ಅಲ್ಲಿ ನೋಡು, ಆ ಬೆಟ್ಟ ಹೇಗಿದೆ? ಆ ಗಿಡ ಮರಗಳು ಹೇಗಿವೆ? ಎಂದು ಗೌರಿ ನನ್ನ ಗಮನ ಪ್ರಕೃತಿಯ ಕಡೆಗೆ ಸೆಳೆಯುತ್ತಿದ್ದ. ದಂತ ಚೋರ ವೀರಪ್ಪನ್ನ ನೆನಪು ಬಂದಿತ್ತು ಇಬ್ಬರಿಗೂ. ಮಹಾದೇಶ್ವರನ ದರ್ಶನ ಪಡೆದುಕೊಂಡು ಅಂದು ವಾಪಾಸು ಮೈಸೂರಿಗೆ ಬರುವಷ್ಟರಲ್ಲಿ ಸಂಜೆಯಾಗಿತ್ತು.
    ನನಗಂತೂ ಗೌರಿ ತುಂಬಾ ಹಿಡಿಸಿಬಿಟ್ಟಿದ್ದ. ಕೆಲವು ಕಡೆಗಳಲ್ಲಿ ಅವನ ಕೈಗಳಲ್ಲಿ ನನ್ನ ಕೈಗಳನ್ನು ತಳುಕಿ ಹಾಕಿಕೊಂಡು ತಿರುಗಾಡಬೇಕೆಂದು ಅನಿಸುತ್ತಿದ್ದರೂ, ಸ್ವಲ್ಪೇ ದಿನಗಳ ಪರಿಚಯದಲ್ಲಿ ಇದು ಸರಿಯಲ್ಲ ಎಂದು ಅನಿಸಿದುದರಿಂದ ಸಂಯಮದಿಂದ ತಡೆದುಕೊಳ್ಳುತ್ತಿದ್ದೆ. ಅಂದು ನಾವಿಬ್ಬರೂ ಮೈಸೂರಿನಲ್ಲಿ ವಸ್ತಿ ಹಾಕಿದೆವು. ಹೋಟೆಲಿನಲ್ಲಿ ಒಂದೇ ರೂಮು ಮಾಡೋಣ ಎಂದು ಗೌರಿ ಒತ್ತಾಯ ಮಾಡಿದರೂ ನಾನು ಬೇಡವೆಂದು ಬೇರೆ ಬೇರೆ ರೂಮು ತೆಗೆದುಕೊಂಡೆವು. ಫ್ರೆಷ್ ಆಗಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದುಕೊಂಡು ಬಂದೆವು. ಗೌರಿ ನನ್ನನ್ನು ತುಂಬಾ ಹಚ್ಚಿಕೊಂಡಿದ್ದ. ಅಂದು ರಾತ್ರಿ ಊಟ ಮಾಡುವಾಗ ಗೌರಿ, ಮಮತಾ, ನೀ ತಪ್ಪು ತಿಳಿಯದಿದ್ದರೆ ನಾ ಒಂದು ಮಾತು ಹೇಳುವೆ ಎಂದಿದ್ದಕ್ಕೆ, ನಾನು ಹೇಳು ಗೌರಿ ಎಂದಾಗ, ಅವ, ನಾನು ನಿನ್ನನ್ನು ಇಷ್ಟ ಪಟ್ಟಿದ್ದೇನೆ ಮಮತಾ. ಆಯ್ ಲವ್ ಯು ಆಲ್ಸೋ ಎಂದ.
    ಗೌರಿ, ನೀ ನನಗೆ ಇಷ್ಟವಾಗಿರುವಿ. ಆಯ್ ಟೂ ಲವ್ ಯು ಎಂದಾಗ ಗೌರಿಗೆ ತುಂಬಾ ಖುಷಿಯಾಗಿತ್ತು.
    2ನೇ ದಿನ ಬಸ್ಸಿನಲ್ಲಿ ಅಡ್ಡಾಡುವುದಕ್ಕೆ ಅನಾನುಕೂಲವಿದ್ದುದರಿಂದ ಟ್ಯಾಕ್ಸಿಯೊಂದನ್ನು ಬುಕ್ ಮಾಡಿಕೊಂಡು ಹೊರಟೆವು. ಮೊದಲು ಸೋಮನಾಥ ಪುರದ ದೇವಸ್ಥಾನವನ್ನು ನೋಡಿದೆವು. ಮುಂದೆ ಗಂಗರ ತಲಕಾಡು, ತಲಕಾಡಿನ ಪಂಚಲಿಂಗೇಶ್ವರ ದೇವಸ್ಥಾನ, ಅಲಮೇಲಮ್ಮನ ಶಾಪದ ಕುರುಹಾಗಿರುವ ಮರಳುಗಾಡನ್ನು ವೀಕ್ಷಿಸಿದೆವು. ಮರಳುಗಾಡಿನಲ್ಲಿ ತಿರುಗಾಡುವಾಗ ನಾನು, ಗೌರಿ ಇಬ್ಬರೂ ಕೈ ಕೈ ಹಿಡಿದುಕೊಂಡು ತಿರುಗಾಡಿ ಸಕತ್ ಎಂಜಾಯ್ ಮಾಡಿದೆವು. ತಲಕಾಡಿಂದ ವಾಪಾಸಾಗುವಾಗ ತಿರುಮಕೂಡಲು ನರಸೀಪುರದಲ್ಲಿನ ತ್ರಿವೇಣಿ ಸಂಗಮದ ನಯನ ಮನೋಹರ ದೃಷ್ಯ ನೋಡಿ ಆನಂದಿಸಿದೆವು. ಕಪಿಲಾ, ಕಾವೇರಿ, ಗುಪ್ತ ಗಾಮಿನಿ ಸರಸ್ವತಿ ನದಿಗಳ ವೈಯಾರ ಮನಸ್ಸಲ್ಲಿ ತುಂಬಿಕೊಂಡೆವು.
    ಸಾಯಂಕಾಲ ಮೈಸೂರಿಗೆ ಮರಳಿದ ನಂತರ, ಇವತ್ತಾದರೂ ಒಂದೇ ರೂಮಿನಲ್ಲಿ ಇರೋಣವೇ? ಹೇಗೂ ಇಬ್ಬರೂ ಪರಸ್ಪರ ಪ್ರೀತಿಸುತ್ತಿರುವುದನ್ನು ಒಪ್ಪಿಕೊಂಡಿದ್ದೇವೆ. ಆದಷ್ಟು ಬೇಗ ಮದುವೆಯಾಗೋಣ. ಮದುವೆಗೆ ಮುಂಚೆ ಸೆಕ್ಸ್ ಎಂಜಾಯ್ ಮಾಡಿದರೆ ಬಹಳಷ್ಟು ಥ್ರಿಲ್ ಇರುತ್ತದೆ ಎಂದು ಕೇಳಿದ್ದೇನೆ. ನಾವೂ ಟೆಸ್ಟ್ ಮಾಡಿ ಟೇಸ್ಟ ನೋಡೋಣ ಎಂದು ಗೌರಿ ನನ್ನಲ್ಲಿ ಆಸೆ ಹುಟ್ಟಿಸತೊಡಗಿದ. ನನಗೆ ಗಲಿಬಿಲಿಯಾದಂತಾಗಿ ಯೋಚನೆಯಲ್ಲಿ ಮುಳುಗಿದ್ದೆ ಸ್ವಲ್ಪ ಹೊತ್ತು.
    ಈ ಇಪ್ಪತ್ತೊಂಭತ್ತು ವರ್ಷಗಳ ನನ್ನ ಜೀವನದಲ್ಲಿ ನನ್ನತನವನ್ನು ಕಾಪಾಡಿಕೊಂಡು ಬಂದಿದ್ದೇನೆ. ಇಲ್ಲಿಯವರೆಗೆ ಪವಿತ್ರ ಭಾವನೆಗಳನ್ನು ರೂಢಿಸಿಕೊಂಡು ಬಂದಿರುವ ನಾನು ಈಗೇಕೆ ಎಡವಬೇಕು? ಹೇಗೂ ನಾನು ಜೀವನದಲ್ಲಿ ಸೆಟ್ಲ್ ಆಗುವ ಹಂತಕ್ಕೆ ತಪುಪಿದ್ದೇನೆ. ಈಗ ಅವಸರ ಮಾಡುವ ಅಗತ್ಯವಿಲ್ಲ ಅಲ್ಲವೇ? ಆದಷ್ಟು ಬೇಗ ಹಿರಿಯರಿಗೆ ವಿಷಯ ತಿಳಿಸಿ ನನ್ನ ಮತ್ತು ಗೌರಿಯ ಮದುವೆ ಫಿಕ್ಸ್ ಮಾಡಿಸಿಕೊಂಡರಾಯಿತು. ಕೊರಳಿಗೆ ತಾಳಿ ಬಿದ್ದ ಮೇಲೆಯೇ ಗೌರಿಗೆ ಮೈ ಒಪ್ಪಿಸುವುದು ಸರಿ ಎಂಬ ಯೋಚನೆ ಬಂದ ಕೂಡಲೇ, ಗೌರಿ, ನಾವಿಬ್ಬರೂ ಪ್ರೀತಿಸುತ್ತಿರುವುದು ನಿಜವಾಗಿರುವಾಗ ಅವಸರವೇಕೆ? ಊರಿಗೆ ವಾಪಾಸು ಹೋದನಂತರ ನಮ್ಮ, ನಮ್ಮ ತಂದೆ-ತಾಯಿಯವರಿಗೆ ವಿಷಯ ತಿಳಿಸಿ ಆದಷ್ಟು ಬೇಗ ಮದುವೆಯಾಗೋಣ. ಅಲ್ಲಿಯವರೆಗೆ ನೀ ಇಷ್ಟಕ್ಕೇ ತೃಪ್ತಿ ಪಟ್ಟುಕೋ ಎಂದು ಹೇಳುತ್ತಾ ನಾ ಅವನ ಕೆನ್ನೆಗೆ ನವಿರಾಗಿ ಮುತ್ತೊಂದನ್ನು ಕೊಟ್ಟು ಅವನ ಆಸೆಯ ಮನಕ್ಕೆ ನಿರಾಶೆ ಮಾಡಿದ್ದೆ. ಮರುದಿನ ಬೆಳಿಗ್ಗೆ ನಾವು ನಮ್ಮ, ನಮ್ಮ ಊರಿಗೆ ಪ್ರಯಾಣ ಮುಂದುವರಿಸಿದೆವು. ಹೊಸಪೇಟೆಯವರೆಗೆ ಇಬ್ಬರೂ ಜೊತೆಯಾಗಿಯೇ ಪ್ರಯಾಣಿಸಿದ್ದೆವು. ಹೊಸಪೇಟೆಯಲ್ಲಿ ಪರಸ್ಪರ ಬೈ ಹೇಳಿ ಬೇರೆ ಬೇರೆ ಬಸ್ಸು ಏರಿದ್ದೆವು.
    ಗೌರಿಶಂಕರನ ಹೆಂಡತಿಯೊಂದಿಗೆ ಮಾತಾಡಿದ ನಂತರ ನನಗೆ ಒಂದು ರೀತಿಯ ಆಘಾತವಾಗಿತ್ತು. ಗೌರಿಶಂಕರನ ನಯವಂಚಕತನ ಬಯಲಾಗಿತ್ತು. ಮೈಸೂರಿನಲ್ಲಿ ನಾನೇನಾದರೂ ಅವನ ಮಾತಿಗೆ ಮರುಳಾಗಿ ನನ್ನತನವನ್ನು ಕಳೆದುಕೊಂಡಿದ್ದರೆ......? ನನಗೆ ಊಹಿಸಲಿಕ್ಕೂ ಸಾಧ್ಯವಾಗುತ್ತಿಲ್ಲ. ಆ ವೇಳೆಯಲ್ಲಿ ನನಗೆ ಸದ್ಬುದ್ಧಿ ಕೊಟ್ಟ ಆ ಅಗೋಚರ ಶಕ್ತಿಗೆ ನಾ ಕೋಟಿ, ಕೋಟಿ ಧನ್ಯವಾದ ತಿಳಿಸುತ್ತಾ, ಈ ವಿಷಯವನ್ನು ನಿಲೋಫರ್ಳೊಂದಿಗೆ ಹಂಚಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳಬೇಕೆಂದು ಅವಳಿಗೆ ಫೋನಾಯಿಸಿದೆ.

ಎಸ್. ಶೇಖರಗೌಡ,
ಮುಖ್ಯ ವ್ಯವಸ್ಥಾಪಕರು,
ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಆರ್.ಸಿ.ಪಿ.ಸಿ., ಲಿಂಗಸ್ಗೂರು
(9448989332)

ಮಾಧ್ಯಮಗಳಲಿ ಕವರೇಜ್ ಸಿಗಬೇಕಾದರೆ, ಮನುಷ್ಯ ಬಾಂಬ್ ಹಿಡಿಯಬೇಕೆ..?

   Bhatkal sits on an RDX dump - ಆರ್.ಡಿ.ಎಕ್ಸ್ ಗೋದಾಮಿನ ಮೇಲೆ ಕುಳಿತಿರುವ ಭಟ್ಕಳ - ಎಂಬ ಶೀಷರ್ಿಕೆಯಲ್ಲಿ 2012 ಮಾಚರ್್ 23ರಂದು ಟೈಮ್ಸ್ ಆಫ್ ಇಂಡಿಯಾದ ಮುಖಪುಟದಲ್ಲೊಂದು ವರದಿ ಬಂದಿತ್ತು.
    ಉತ್ತರ ಕನ್ನಡ ಜಿಲ್ಲೆಯ ಕರಾವಳಿ ನಗರವಾದ ಭಟ್ಕಳವು ಸ್ಫೋಟಕಗಳು ತುಂಬಿರುವ ಗೋದಾಮಿನಂತೆ ಕಾಣಿಸುತ್ತಿದೆ. ದಕ್ಷಿಣ ಭಾರತದ ಬೃಹತ್ ನಗರಗಳನ್ನು ನಾಶ ಮಾಡಬಹುದಾದಷ್ಟು ಪ್ರಮಾಣದ ಖಆಘಿ ಸಹಿತ, ಸ್ಫೋಟಕ ವಸ್ತುಗಳ ಗೋದಾಮವೊಂದು ನಗರದಲ್ಲಿದೆ. ಇನ್ನೂ ಗುರುತಿಸಲಾಗದ ಮನೆಯೊಂದರಲ್ಲಿ ಅದನ್ನು ದಾಸ್ತಾನಿರಿಸಲಾಗಿದೆಯೆಂದು ನಂಬಲಾಗಿದ್ದು, ಶಂಕಿತ ಭಯೋತ್ಪಾದಕರನ್ನು ಕರೆತಂದು ವಿಚಾರಿಸಲಾಗಿದೆ. ಬೆಂಗಳೂರು ಂಖಿಖ ಮತ್ತು ದೆಹಲಿ ಪೊಲೀಸರನ್ನೊಳಗೊಂಡ ವಿಶೇಷ ತಂಡವು ನಾಲ್ವರು ಶಂಕಿತ ಭಯೋತ್ಪಾದಕರ ನೆರವಿನಿಂದ ದಾಸ್ತಾನು ಕೇಂದ್ರವನ್ನು ಪತ್ತೆ ಹಚ್ಚಲು ಶ್ರಮ ಪಟ್ಟಿದೆಯಾದರೂ ಸಂಜೆವರೆಗೂ ಅವರು ಅದರಲ್ಲಿ ಯಶಸ್ವಿಯಾಗಿಲ್ಲ. ಸ್ಫೋಟಕಗಳನ್ನು ಭಟ್ಕಳಕ್ಕೆ ತಂದು ಸುರಿದಿರುವನೆಂದು ನಂಬಲಾದ ನಾಸಿರ್ ಸದ್ಯ ಪೊಲೀಸರ ಜೊತೆ ಭಟ್ಕಳದಲ್ಲೇ ಇದ್ದಾನೆ.
    ಆದರೆ ದಾಸ್ತಾನು ಕೇಂದ್ರವನ್ನು ತೋರಿಸಲು ಆತ ವಿಫಲನಾಗಿದ್ದಾನೆ. ಆತ ಈ ಹಿಂದೆ ಅಲ್ಲಿಗೆ ಭೇಟಿ ಕೊಡುವಾಗ ಕತ್ತಲಾಗಿತ್ತಾದ್ದರಿಂದ ಅದು ಈಗ ಎಲ್ಲಿದೆ ಮತ್ತು ನೋಡಲು ಆ ದಾಸ್ತಾನು ಕೇಂದ್ರ ಹೇಗಿದೆ ಎಂಬುದನ್ನು ಅಂದಾಜಿಸಲಾಗುತ್ತಿಲ್ಲ ಎಂದಿದ್ದಾನೆ. ಭಯೋತ್ಪಾದನೆಯ ಮಾಸ್ಟರ್  ಮೈಂಡ್ ಗಳಾದ ಯಾಸೀನ್ ಭಟ್ಕಳ್ ಮತ್ತು ರಿಯಾಝ್ ಭಟ್ಕಳ್ರು  ಸ್ಫೋಟಕಗಳನ್ನು ಭಟ್ಕಳದಲ್ಲಿ ಅಡಗಿಸಿಟ್ಟಿರಬಹುದೆಂದು ಮೂಲಗಳು ಹೇಳಿವೆ. ಅಲ್ಲದೆ 2010ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸ್ಫೋಟ ಮತ್ತು ಕಳೆದ ವರ್ಷ ದೆಹಲಿ ಹೈಕೋಟರ್್ ಬಳಿಯಲ್ಲಿ ನಡೆದ ಸ್ಫೋಟ ಸೇರಿದಂತೆ ದೇಶದಲ್ಲಾದ ಅನೇಕಾರು ಭಯೋತ್ಪಾದನಾ ದಾಳಿಗಳಿಗೆ ಭಟ್ಕಳದಿಂದಲೇ ಸ್ಫೋಟಕಗಳನ್ನು ಬಳಸಲಾಗಿದೆ ಎಂದು ನಂಬಲಾಗಿದೆ
    ರಾಜೀವ್ ಕಲ್ಕೊಡ್ ಎಂಬ ಪತ್ರಕರ್ತ ತಯಾರಿಸಿದ ಈ ವರದಿಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಭಟ್ಕಳಕ್ಕೆ ಸ್ಫೋಟಕಗಳ ಕಾಖರ್ಾನೆಯೆಂದು ಮುದ್ರೆಯೊತ್ತುವುದು ಎಷ್ಟು ಸರಿ ಎಂದು ಪ್ರಶ್ನಿಸಲಾಯಿತು. ಮೂಲಗಳನ್ನು ಬಹಿರಂಗಪಡಿಸಿ ಎಂದು ಆಗ್ರಹಿಸಲಾಯಿತು. ಉತ್ತರ ಕನ್ನಡದ ಜಿಲ್ಲಾ ವರಿಷ್ಠಾಧಿಕಾರಿ ಕೆ.ಬಿ. ಬಾಲಕೃಷ್ಣರು ಇಡೀ ಸುದ್ದಿಯನ್ನೇ ಹುಸಿ ಅಂದುಬಿಟ್ಟರು.  ಖಆಘಿ ಎಂದರೆ ಗೊಬ್ಬರದ ದಾಸ್ತಾನಲ್ಲ, ಕೇಂದ್ರ ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆ ಮತ್ತು ಇನ್ನಿತರ ಏಜೆನ್ಸಿಗಳಿಗೆ ತಿಳಿಯದ ವಿಚಾರ ಪತ್ರಿಕೆ ಹೇಗೆ ತಿಳಿಯಿತು ಎಂದು ಪ್ರಶ್ನಿಸಿದರು. ಇವೆಲ್ಲ ಮಾಧ್ಯಮದ ವದಂತಿ ಎಂದು ಬಹಿರಂಗವಾಗಿಯೇ ಹೇಳಿಕೆ ಕೊಟ್ಟರು. ಭಟ್ಕಳದ ಡಿಎಸ್ಪಿಯಾದ ಎಂ. ನಾರಾಯಣ ಅವರು, ಇಲ್ಲಿ ಅಂಥದ್ದೊಂದು ಶೋಧ ಕಾಯರ್ಾಚರಣೆಯೇ ನಡೆದಿಲ್ಲ ಅಂದರು. ಒಂದು ರೀತಿಯಲ್ಲಿ, ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಂಡ ಬಳಿಕ ಮಾಚರ್್ 26ರಂದು,'Bhatkal is not a town of culprits  ಭಟ್ಕಳವು ಪಾತಕಿಗಳ ನಗರವಲ್ಲ - ಎಂಬ ಶೀಷರ್ಿಕೆಯಲ್ಲಿ ಟೈಮ್ಸ್ ಪತ್ರಿಕೆ ಸ್ಪಷ್ಟೀಕರಣವನ್ನು ಕೊಟ್ಟಿತು. ತಮ್ಮ ಉದ್ದೇಶ ಪ್ರಾಮಾಣಿಕವಾಗಿತ್ತು ಅಂತ ಹೇಳಿಕೊಂಡಿತು..
    ಇವೆಲ್ಲವನ್ನೂ ಈಗ ಇಲ್ಲಿ ನೆನಪಿಸಿಕೊಳ್ಳುವುದಕ್ಕೆ ಕಾರಣ ಇದೆ..
    2012 ಜೂನ್ 5 ಮಹಾರಾಷ್ಟ್ರದಿಂದ ಬರುತ್ತಿದ್ದ ಓಕ್ಲಾ ಎಕ್ಸ್ ಪ್ರೆಸ್  ರೈಲು ಮಂಗಳೂರಿಗೆ ತಲುಪಲು ಇನ್ನೇನು ಎರಡು ಗಂಟೆ ಇದೆ ಅನ್ನುವಾಗ ಸಾಮಾನ್ಯ ದಜರ್ೆಯ ಬೋಗಿಯೊಂದರಲ್ಲಿ ಗದ್ದಲ ಕಾಣಿಸಿಕೊಳ್ಳುತ್ತದೆ. ಶೌಚಾಲಯದ ಬಳಿ ಮೂನರ್ಾಲ್ಕು ಮಂದಿ ತೀರಾ ಕಸಿವಿಸಿಗೊಂಡಂತೆ ಮಾತಾಡುತ್ತಿರುತ್ತಾರೆ. ಒಂದು ಬಗೆಯ ಭೀತಿ ಅವರ ಮುಖದಲ್ಲಿರುತ್ತದೆ. ಭಟ್ಕಳದ ಗಡ್ಡದಾರಿ ತರುಣರ ಈಸ್ ಅಹ್ಮದ್ ಅವೆಲ್ಲವನ್ನೂ ನೋಡುತ್ತಿರುತ್ತಾರೆ. ಪತ್ನಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲೆಂದು ಹೊರಟಿದ್ದ ಅವರು ಆ ಮಂದಿಯಲ್ಲಿ ವಿಚಾರಿಸುತ್ತಾರೆ. ನಿಜವಾಗಿ ಅದೊಂದು ಆದಿವಾಸಿ ಕುಟುಂಬ. ಮಹಾರಾಷ್ಟ್ರದ ಶಿಲ್ಲಾರ ಗ್ರಾಮದಿಂದ ಅವರೆಲ್ಲಾ ಕೂಲಿ ಕೆಲಸ ಹುಡುಕುತ್ತಾ ಪ್ರಯಾಣಿಸುತ್ತಿದ್ದರು. ಕೇರಳದ ಒಂದು ಕಡೆ ಕೂಲಿ ಇದೆಯೆಂದು ಹೇಳಿ ಗುಜರಾತ್ನ  ದಲ್ಲಾಳಿಯೊಬ್ಬ ಅವರನ್ನು ಕರಕೊಂಡು ಬಂದಿದ್ದ. ದಾರಾಸಿಂಗ್, ತುಂಬು ಗಭರ್ಿಣಿಯಾದ ಆತನ ಪತ್ನಿ ಲಲಿತಾ, 4 ಮತ್ತು 2 ವರ್ಷಗಳ ಇಬ್ಬರು ಮಕ್ಕಳ ಕುಟುಂಬವೇ ಕೆಲಸಕ್ಕಾಗಿ ಹೊರಟು ಬಂದಿತ್ತು. ಹೆರಿಗೆ ನೋವನ್ನನು ಭವಿಸುತ್ತಿದ್ದ ಪತ್ನಿಯನ್ನು ದಾರಾಸಿಂಗ್ ಶೌಚಾಲಯಕ್ಕೆ ತಳ್ಳಿ ದಿಕ್ಕು ಕಾಣದೇ ಚಡಪಡಿಸುತ್ತಿದ್ದುದನ್ನು ಅರಿತ ರಈಸ್ ಅಹ್ಮದ್, ಗದರಿಸಿ ಶೌಚಾಲಯದ ಬಾಗಿಲು ತೆರೆಸುತ್ತಾರೆ. ಬೋಗಿಯಲ್ಲಿದ್ದವರನ್ನು ಸಹಾಯಕ್ಕಾಗಿ ವಿನಂತಿಸುತ್ತಾರೆ. ಆದಿವಾಸಿ, ಕೂಲಿಕಾಮರ್ಿಕೆಯನ್ನು ಮುಟ್ಟಲು ಎಲ್ಲರೂ ಹಿಂದೇಟು ಹಾಕಿದಾಗ ಅನಾರೋಗ್ಯ ಪೀಡಿತ ಪತ್ನಿ ಮತ್ತು ಇನ್ನೋರ್ವ ಮಹಿಳೆಯ ಸಹಾಯದಿಂದ ಗಭರ್ಿಣಿಯನ್ನು ಶೌಚಾಲಯದಿಂದ ಕರೆತಂದು, ಪ್ರಯಾಣಿಕರ ಸೀಟಿನಲ್ಲಿ ಕೂರಿಸಿ ಶುಶ್ರೂಷೆ ನಡೆಸುತ್ತಾರೆ. ಕೊನೆಗೆ ರಈಸ್ ರೇ  ಹೆರಿಗೆ ಮಾಡಿಸುತ್ತಾರೆ. ಬ್ಲೇಡಿ ನಿಂದ ಹೊಕ್ಕುಳ ಬಳ್ಳಿಯನ್ನು ಕತ್ತರಿಸುತ್ತಾರೆ. ಗಂಡು ಮಗುವನ್ನು ಮತ್ತು ತಾಯಿಯನ್ನು ಶುಚಿಗೊಳಿಸುತ್ತಾರೆ. ರೈಲು ಪ್ರಯಾಣಿಕರಲ್ಲಿ ವಿನಂತಿಸಿ 4 ಸಾವಿರ ರೂಪಾಯಿ ಸಂಗ್ರಹಿಸಿ ದಾರಾಸಿಂಗ್ಗೆ ನೀಡುತ್ತಾರೆ. ಬಳಿಕ ಬಾಣಂತಿಯನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುತ್ತಾರೆ..
    ಜೂನ್ 6 ಇಲ್ಲವೇ 7ರಂದು ಎಲ್ಲ ಪತ್ರಿಕೆಗಳು ಈ ಸುದ್ದಿಯನ್ನು ಪ್ರಕಟಿಸಿದ್ದರೂ ಟೈಮ್ಸ್ ಆಫ್ ಇಂಡಿಯಾದಲ್ಲಿ ಈ ಸುದ್ದಿಗೆ ಜಾಗವೇ ಸಿಕ್ಕಿಲ್ಲ..
    ಅಂದಹಾಗೆ, ಮೂಲಗಳನ್ನಾಧರಿಸಿದ ವದಂತಿಯ ಸುದ್ದಿಗೆ ಮುಖ ಪುಟವನ್ನು ಮೀಸಲಿಡುವ ಪತ್ರಿಕೆಗಳಿಗೆ, ಮಾನವೀಯತೆಯನ್ನು ಸಾರುವ ಸುದ್ದಿಗಳೇಕೆ ಅಸ್ಪೃಶ್ಯ ಅನ್ನಿಸಿಕೊಳ್ಳುತ್ತವೆ? ಯಾಸೀನ್ ಭಟ್ಕಳ್ನನ್ನೋ, ರಿಯಾಜ್ನನ್ನೋ ಮುಖಪುಟದಲ್ಲಿಟ್ಟು ತಿಂಗಳುಗಟ್ಟಲೆ ಸುತ್ತಾಡಿದ ಪತ್ರಿಕೆಗಳಿಗೆ ಆ ಊರಲ್ಲಿ ಮನುಷ್ಯ ಪ್ರೇಮಿಗಳೂ ಇದ್ದಾರೆ ಅನ್ನುವ ಸಂದೇಶವನ್ನು ಸಾರುವ ಸಂದರ್ಭ ಸಿಕ್ಕಾಗಲೆಲ್ಲಾ ನುಣುಚಿಕೊಳ್ಳುವುದೇಕೆ? ಭಯೋತ್ಪಾದಕಗೆ ಗಡ್ಡ ಕಡ್ಡಾಯ ಅಂತ ಹೇಳಿಕೊಟ್ಟದ್ದೂ ಮಾಧ್ಯಮವೇ.
    ಆದರೆ, ಇಲ್ಲಿ ಓರ್ವ ಹೆಣ್ಣು ಮಗಳ ಜೀವವನ್ನು ಉಳಿಸಿ ಮಾನವೀಯತೆಯ ಉತ್ಕೃಷ್ಟ  ಮಾದರಿಯನ್ನು ತೋರಿಸಿದ್ದೂ ಓರ್ವ ಗಡ್ಡಧಾರಿಯೇ. ಯಾಕೆ ಇದು ಮಾಧ್ಯಮ ಮಿತ್ರರ ಗಮನ ಸೆಳೆದಿಲ್ಲ? ಒಂದೋ ಎರಡೋ ಪತ್ರಿಕೆಗಳನ್ನು ಬಿಟ್ಟರೆ ಉಳಿದವು ಯಾಕೆ ರಈಸ್ನ ಪೋಟೋ ಪ್ರಕಟಿಸಿಲ್ಲ? ಸಿಕ್ಕ ಸಿಕ್ಕವರಿಗೆ ಗಡ್ಡ ಅಂಟಿಸಿ, ಅವರಿಗೂ, ಭಟ್ಕಳಕ್ಕೂ, ಭಯೋತ್ಪಾದನೆಗೂ ಸಂಬಂಧವನ್ನು ಕಲ್ಪಿಸಿ, ದೇಶಾದ್ಯಂತ ಭಟ್ಕಳದ ಹೆಸರನ್ನು ಹೊತ್ತು ತಿರುಗಿದ ಮತ್ತು ಅದರ ವರ್ಚಸ್ಸಿಗೆ ಧಕ್ಕೆ ತಂದ ಮಾಧ್ಯಮಗಳಿಗೇಕೆ, ಅದೇ ಭಟ್ಕಳದ ತರುಣನೊಬ್ಬನ ಮಾನವೀಯತೆ ಮಹತ್ವಪೂರ್ಣ ಅನ್ನಿಸಲಿಲ್ಲ?
    ಅಂದ ಹಾಗೆ, ಭಟ್ಕಳ್ ಅಂದರೆ ಒಂದು ನಗರದ ಹೆಸರು. ಅದನ್ನೇಕೆ ಭಯೋತ್ಪಾದನೆಯ ಆರೋಪ ಹೊತ್ತುಕೊಂಡವರ ಹೆಸರಿನ ಮುಂದೆ ಜೋಡಿಸಲಾಗುತ್ತದೆ? ಮಕ್ಕಾ ಮಸೀದಿ, ಸಂಜೋತಾ ಎಕ್ಸ್ ಪ್ರೆಸ್ ಸಹಿತ ಹತ್ತಾರು ಭಯೋತ್ಪಾದನಾ ಕೃತ್ಯಗಳ ಆರೋಪಿಗಳಾದ ಇಂದ್ರೇಶ್ಕುಮಾರ್, ಸಾಧ್ವಿ ಪ್ರಜ್ಞಾಸಿಂಗ್, ಪುರೋಹಿತ್, ಕಾಲ್ ಸಂಗ್ರಾರನ್ನೆಲ್ಲಾ ಅವರ ಊರಿನ ಹೆಸರಿನೊಂದಿಗೆ ಮಾಧ್ಯಮಗಳು ಗುರುತಿಸುತ್ತವಾ? ಮತ್ತೇಕೆ ಯಾಸೀನ್ ಭಟ್ಕಳ್, ರಿಯಾಝ್ ಭಟ್ಕಳ್, ಇಕ್ಬಾಲ್ ಭಟ್ಕಳ್? ಇವೇನು ಶ್ರೀ, ಜನಾಬ್, ಮಿಸ್ಟರ್ನಂತೆ ಗೌರವ ಸೂಚಕ ಪದಗಳಾ? ಪದೇಪದೇ ಭಟ್ಕಳ ಅನ್ನುವ ಪದವನ್ನು ಓದುವ, ಆಲಿಸುವ ವ್ಯಕ್ತಿಯೊಬ್ಬ ಭಟ್ಕಳ ಅಂದರೆ ಭಯೋತ್ಪಾದಕರನ್ನು ತಯಾರಿಸುವ ಕಾಖರ್ಾನೆ ಎಂದು ಅಂದುಕೊಳ್ಳುವ ಸಾಧ್ಯತೆ ಇಲ್ಲವೇ?
    ಇಷ್ಟಕ್ಕೂ, ಇದು ಯಾವುದಾದರೊಂದು ನಿದರ್ಿಷ್ಟ ಪತ್ರಿಕೆಯ ಅಥವಾ ನಿದರ್ಿಷ್ಟ ಸಂದರ್ಭದ ಕುರಿತಂತೆ ಇರುವ ಆಕ್ಷೇಪವೇನೂ ಅಲ್ಲ..
    ಭಯೋತ್ಪಾದನಾ ಸಂಬಂಧದಿಂದ ಕಳಂಕಿತಗೊಂಡಿರುವ ಭಟ್ಕಳ -Bhatkal town tainted by terror links'  - ಎಂಬ ಹೆಡ್ ಲೈನಿನೊಂದಿಗೆ 2010 ಜುಲೈ 23ರಂದು CNN-IBN ಟಿವಿ ಚಾನೆಲ್ ವರದಿಯೊಂದನ್ನು ಪ್ರಸಾರ ಮಾಡಿತ್ತು. ಅದರ ವರದಿಗಾರ ಶುಹೈಬ್ ಅಹ್ಮದ್ ಭಟ್ಕಳಕ್ಕೆ ತೆರಳಿ, ಸಾರ್ವಜನಿಕರ ಬಾಯಿಗೆ ಮೈಕ್ರೋ ಪೋನ್ ಇಟ್ಟಿದ್ದ. ವಿಕಿಪೀಡಿಯಾದಲ್ಲಿ, ರಿಯಾಝ್ ಭಟ್ಕಳ್ ಅಲಿಯಾಸ್ ಶಾ ರಿಯಾಝ್ ಅಹ್ಮದ್ ಮುಹಮ್ಮದ್ ಎಂಬ ಮೈಲು ಉದ್ದದ ಹೆಸರು ಮತ್ತು ವಿವರವಿದೆ. ಮುಂಬೈ ಸ್ಫೋಟದ ಹಿಂದೆ ಭಟ್ಕಳದ ಇಂಡಿಯನ್ ಮುಜಾಹಿದೀನ್ನ  ಪಾತ್ರ -Bhatkal's IM module behind 13/7 blasts' - ಎಂಬ ದಾಟಿಯ ಶೀಷರ್ಿಕೆಗಳು ಮತ್ತು ವರದಿಗಳು ಈ ದೇಶದ ಪತ್ರಿಕೆಗಳ ಮುಖಪುಟದಲ್ಲಿ ಧಾರಾಳ ಪ್ರಕಟವಾಗಿವೆ. ಹೀಗಿರುವಾಗ ಅದಕ್ಕೆ ಭಿನ್ನವಾದ ಘಟನೆಯೊಂದು ಭಟ್ಕಳದಿಂದ ದೊರೆತರೆ ಅದೇಕೆ ಒಳಪುಟದ್ದೋ, ಒಂದು ಕಾಲಂದ್ದೋ ಸುದ್ದಿಯಾಗಿ ಪ್ರಕಟವಾಗಬೇಕು? ನಿಜವಾಗಿ ಮಾಸಲು ಬಟ್ಟೆ ಧರಿಸಿದ, ಬಟ್ಟೆಯ ಗಂಟನ್ನು ಹೇರಿಕೊಂಡು ವಲಸೆ ಬರುವ ಬಡ ಕೂಲಿ ಕಾಮರ್ಿಕೆಗೂ ಇತರರಿಗೂ ವ್ಯತ್ಯಾಸ ಇದೆ. ಬಡವರ ಬಗ್ಗೆ ಕಣ್ಣೀರು ಸುರಿಸಿ ಪುಟಗಟ್ಟಲೆ ಬರೆಯುವವರು ಕೂಡ ಅಂಥವರ ಬಳಿ ಕೂರುವುದಕ್ಕೆ ಕೆಲವೊಮ್ಮೆ ಹಿಂಜರಿಯುವುದಿದೆ.
    ಹೀಗಿರುವಾಗ, ದಾರಾಸಿಂಗ್ ಕುಟುಂಬದ ಬಡತನ, ತುಂಬು ಗಭರ್ಿಣಿಯನ್ನು ಕೆಲಸಕ್ಕೆ ಕರಕೊಂಡು ಬರುವಷ್ಟು ದಯನೀಯ ಸ್ಥಿತಿ & ರೈಲು ಬೋಗಿಯಲ್ಲಿರಬಹುದಾದ ಭಯೋತ್ಪಾದನಾ ವಿರೋಧಿ ಮನುಷ್ಯರೆಲ್ಲರ ಹಿಂಜರಿಕೆಯ ಮಧ್ಯೆಯೂ ಓರ್ವ ಗಡ್ಡಧಾರಿ ಮನುಷ್ಯ ಮಾನವೀಯತೆ ತೋರುವುದು ಯಾಕೆ ಮಾಧ್ಯಮಗಳ ಪಾಲಿಗೆ ಚಚರ್ಾ ವಸ್ತುವಾಗುತ್ತಿಲ್ಲ? ಇವರೆಲ್ಲರಿಗೆ ಸಾಮಾಜಿಕ ಕಳಕಳಿಯ ಸುದ್ದಿಯನ್ನು ಬರೆಯುವ ಮನಸ್ಸಿಲ್ಲವೇ..? ಅಥವಾ ಬಾಂಬ್ ಸ್ಪೋಟದಂತಹ ಸುದ್ದಿಯನ್ನು ಬರೆಯಲು ಕಾಯುತ್ತಿದ್ದಾರಾ..?
    ನಿಜವಾಗಿ, ಬಡವರನ್ನು ದ್ವೇಷಿಸುವುದು, ಅವರ ಬಗ್ಗೆ ಅಸಹ್ಯ ಪಟ್ಟುಕೊಳ್ಳುವುದು ಬಾಂಬ್ ಸ್ಫೋಟಕ್ಕಿಂತಲೂ ಹೆಚ್ಚು ಅಪಾಯಕಾರಿ. ಬಾಂಬ್ ಸ್ಫೋಟಗಳು ನಡೆಯುವುದು ಯಾವಾಗಲೋ ಒಮ್ಮೆ. ಆದರೆ ಹೊಟ್ಟೆಪಾಡಿಗಾಗಿ ಬದುಕನ್ನೇ ಪಣವಾಗಿಟ್ಟು ಬರುವ ದಾರಾಸಿಂಗ್ರಂಥವರು ರೈಲಿನ ಸಾಮಾನ್ಯ ಬೋಗಿಯಲ್ಲಿ, ರೈಲು ನಿಲ್ದಾಣಗಳಲ್ಲಿ, ಬಸ್ಸಿನಲ್ಲಿ, ರಸ್ತೆ ಬದಿಯಲ್ಲಿ ನಿತ್ಯ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಆದರೆ ಭಯೋತ್ಪಾದನೆಯ ಬಗ್ಗೆ, ದೇಶಪ್ರೇಮದ ಕುರಿತಂತೆ ಮಾತಾಡುವ ಎಷ್ಟೋ ಮಂದಿಗೆ ಇಂಥವರ ಸೇವೆ ಮಾಡುವುದು ಬಿಡಿ,ಇವರನ್ನು ಮುಟ್ಟಿಸಿಕೊಳ್ಳುವುದಕ್ಕೂ ಇಷ್ಟವಿರುವುದಿಲ್ಲ. ಇಂಥವರು ಮಾಧ್ಯಮಗಳಲ್ಲೂ ಸಾಕಷ್ಟು ಜನರಿದ್ದಾರೆ. ಹೀಗಿರುವಾಗ ರಈಸ್ ಅಹ್ಮದ್ ಸುದ್ದಿಯಾಗುವುದಾದರೂ ಹೇಗೆ? ಒಂದು ವೇಳೆ ರಈಸ್ ಅಹ್ಮದ್ ಬ್ಲೇಡ್ನ  ಬದಲು ಬಾಂಬು ಹಿಡಿದುಕೊಂಡಿದ್ದರೆ ಏನಾಗುತ್ತಿತ್ತು? ಪತ್ರಿಕೆಗಳ ಮುಖಪುಟ ಹೇಗಿರುತ್ತಿತ್ತು? ಬಾಂಬಿನೊಂದಿಗೆ ರಈಸ್ ಭಟ್ಕಳ್ ಬಂಧನ.. ಎಂಬ ಶೀಷರ್ಿಕೆಯ ಅಡಿಯಲ್ಲಿ ಯಾವೆಲ್ಲ ಬಗೆಯ ವರದಿ, ವಿಶ್ಲೇಷಣೆಗಳಿರುತ್ತಿತ್ತು? ಯೋಚಿಸಿ!

ಏ.ಕೆ ಕುಕ್ಕಿಲಾಯ

ಭಕ್ತಿಯ ರಸಗಂಗೆಯಲ್ಲಿ ಮುಳುಗಿದ ಕಲ್ಯಾಣ ಕರಡಕಲ್

ನಾನಿನ್ನು ಕಲಿಯಬೇಕಾಗಿದೆ, ನಾನಿನ್ನು ಬೆಳೆಯಬೇಕಾಗಿದೆ ಎನ್ನುವ ವಿನಮ್ರತೆ ಇದ್ದವರು ಎತ್ತರೆತ್ತರಕ್ಕೆ ಬೆಳೆಯುತ್ತಾರೆ. ನಾನು ಎಲ್ಲವನ್ನು ಸಾಧಿಸಿದ್ದೇನೆಂದು ಭೀಗುವವರು ಬೆಳೆಯದೇ ಕಮರಿ ಹೋಗುತ್ತಾರೆ. ಆಗ ಅವರ ನೈತಿಕ ಪತನವು ಆರಂಭವಾಗುತ್ತದೆ. ಅಂಥವರ ಜ್ಞಾನದ ಅರಿವು ಸಂಕುಚಿತವಾಗಿ ಒಂದು ಸೀಮಿತಿ ಪರಿಧಿಯಲ್ಲೇ ಸುತ್ತುತ್ತಿರುತ್ತದೆ. ಇನ್ನೂ ಕೆಲವರು ಎಲ್ಲರನ್ನೂ ಒಗ್ಗೂಡಿಸಿಕೊಂಡು ಬೌದ್ಧಿಕವಾಗಿ, ನೈತಿಕವಾಗಿ ಬೆಳೆಯುತ್ತಾ ತಮ್ಮ ವ್ಯಕ್ತಿತ್ವವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಾರೆ. ಅದಕ್ಕೊಂದು ಉದಾಹರಣಿ ಎಂಬಂತೆ ಮೊನ್ನೆ ನಡೆದ ಚಿತ್ತರಗಿ ವಿಜಯ ಮಹಾಂತೇಶ ಶಿವಯೋಗಿಗಳ 100ನೇ ಶತಮಾನೋತ್ಸವ ಸಮಾರಂಭ ಇಡೀ ಮನುಕುಲಕ್ಕೆ ಒಂದು ಸವಾಲು ಹಾಕುವಂತಿತ್ತು.
    ಬಸವತತ್ವವೆಂದರೆ, ಕಬ್ಬಿಣದ ಕಡಲೆಯೆಂದು ನಂಬಲಾಗಿದೆ. ಆದರೆ, ಅದು ನೆನೆದ ಸಿಹಿ ಕಡಲೆ ಎಂಬುದು ಮೂರ್ಖ ಜನರಿಗೆ ಗೊತ್ತಿಲ್ಲ. ಬಸವತತ್ವ ಅಳವಡಿಸಿಕೊಳ್ಳದ ನೂರಾರು ಮಾತನಾಡದ ದೇವರುಗಳಿಗೆ ಕೈಮುಗಿಯುವ ಹೆಡ್ಡರೆ ಇಂದು ಸಮಾಜದಲ್ಲಿ ಹೆಚ್ಚಾಗಿದ್ದಾರೆ. ಅಂತವರಿಗೆ ಹೇಗೆ ತಾನೇ ಅರ್ಥವಾಗುತ್ತದೆ. ಬಸವತತ್ವ.
    ಇಲಕಲ್ ಅಜ್ಜನವರ ಮಾತನ್ನು ಇಡಿ ಊರಿಗೆ ಊರೇ, ತಂದೆ ತಾಯಿ ಮಾತನ್ನು ಕೇಳದವರು ಸಹ ಶಿರಬಾಗಿ ಕೇಳಿ ಮಾಡುತ್ತಾರೆ. ಹಾಗಿದ್ದರೆ, ಅಜ್ಜನವರ ಬಳಿ ಇರುವ ಬಸವತತ್ವ ಕುರಿತು ಎಂತಹ ಮಾಹಿತಿ ಇರಬಹುದು ನೀವೆ ಊಹಿಸಿ.
    ಸಮಾಜದ ಕಟ್ಟಕಡೆಯ, ಅಸ್ಪೃಶ್ಯ, ನಗರಸಭೆಯಲ್ಲಿ ಕೆಲಸ ಮಾಡುವವರು ಹಾಗೂ ವೇಶ್ಯಾವಾಟಿಕೆಯನ್ನು ತೊರೆದು ಬಂದಂತವರನ್ನು ಶ್ರೀಗಳು ತಮ್ಮ ಪಕ್ಕಕ್ಕೆ ಕೂರಿಸಿಕೊಂಡು ಸನ್ಮಾನ ಇತರೆ ಕಾಯಕ್ರಮಗಳನ್ನು ಮಾಡುತ್ತಾರೆ. ಇದನ್ನು ಇಡೀ ಊರೇ ಒಪ್ಪಿಕೊಂಡಿದೆ.
    ಇಂದು ಸಮಾಜದಲ್ಲಿ ಸ್ವಾಮೀಜಿಗಳು ತಮ್ಮನ್ನು ವೈಭವಿಕರಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆ. ನಮ್ಮ ಜಿಲ್ಲೆ ಮತ್ತು ಹಲವು ತಾಲ್ಲೂಕಾಗಳಲ್ಲಿ ಕಾರ್ಯಕ್ರಮಗಳು ನಡೆದರೂ ಕೂಡ ಅವುಗಳಿಗೆ ಯಾವುದೇ ತಳ ಬುಡಗಳಿಲ್ಲ. ಆದರೆ, ನಮ್ಮ ಶ್ರಿಗಳು ಮಾಡುವ ಕಾರ್ಯಕ್ರಮಕ್ಕೆ ಅರ್ಥವಿದೆ. ಎಲ್ಲರೂ ನಿಜಕಾವಿಯ ಸತ್ಯದ ಕೆಲಸವನ್ನು ಮರೆತಿದ್ದಾರೆ. ಇಂತಹ ಶರಣರಿಗಾಗಿ ನಾವೇ ಶಾಲೆಗಳನ್ನು ತೆಗೆದು ಮತ್ತೊಮ್ಮೆ ಅ,ಆ,ಇ,ಈ ಕಲಿಸಬೇಕಾಗಿ ಬಂದಿರುವ ದುರಂತ.
    ಪ್ರತಿಯೊಂದು ಧಾಮರ್ಿಕ ಕಾರ್ಯಕ್ರಮಗಳೆಂದರೆ, ಪಲ್ಲಕ್ಕಿಉತ್ಸವ, ಮನುಷ್ಯರ ಮೇಲೆ ಅಮಾನವೀಯ ಸವಾರಿ, ಗಿಡಮರ, ರಥ, ಲಕ್ಷದೀಪೋತ್ಸವ, ಕುಂಭ, ಕೋಳಿ, ಕುರಿಬಲಿ, ಹಾರಾಟ-ಚೀರಾಟ ಮೊದಲಾದವುಗಳು ನಡೆಯುತ್ತವೆ.
    ಆದರೆ, ಇಲ್ಲಿ ಇವುಗಳಿಗೆ ಮನ್ನಣಿ ಇಲ್ಲ. ಕಲ್ಯಾಣ ಶರಣರ ವಚನಗಳನ್ನು ಆನೆಯ ಮೇಲಿಟ್ಟು ಮೆರವಣಿಗೆಯನ್ನು ಮಾಡಿ ಬಸವನ ತತ್ವ, ವಿಚಾರ, ಹಾಡುಗಳನ್ನು ಯುವಕ-ಯುವತಿಯರು ತಿಳಿಸುತ್ತಾ ಹೋಗುತ್ತಾರೆ. ಈ ಉತ್ಸವವನ್ನು ನೋಡಲು ಸಾಕಷ್ಟು ಜನರು ಸೇರುತ್ತಾರೆ.. ಒಂದು ರೀತಿಯಲ್ಲಿ ಈ ಕಾರ್ಯಕ್ರಮ ಕಲ್ಯಾಣ ರಾಜ್ಯದಲ್ಲಿ ನಡೆದಂತೆ ಆಗುತ್ತದೆ.
    ಒಂದು ತಿಂಗಳುಗಳ ಕಾಲ ನಿರಂತರ ಪ್ರವಚನ, ಶಿವಾನುಭವ ಇತ್ಯಾದಿ ನಡೆಯುತ್ತವೆ. ಇಲ್ಲಿನ ಯುವಕರೆಲ್ಲ ಕಾರ್ಯಕ್ರಮಕ್ಕೆ ಬೇಕಾಬಿಟ್ಟಿಯಾಗಿ ಮಟ್ಕಾ, ಇಸ್ಪೀಟ್ ಜೂಜುಕೋರರ ಬಳಿ ಚಂದಾಪಟ್ಟಿ ಎತ್ತಿ ಕಾರ್ಯಕ್ರಮವನ್ನು ಮಾಡುವುದಿಲ್ಲ. ಬದಲಿಗೆ ತಾವುಗಳೇ ಪರಿಶ್ರಮದಿಂದ ದುಡಿದ ಮತ್ತು ದಾಸೋಹದಿಂದ ಬಂದಂತಹ ಹಣದಿಂದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಕಾರ್ಯಕ್ರಮ ಮಾಡುವ ಯುವಕರ ಈ ಕೆಲಸ ಬಸವಣ್ಣನವರಿಗೆ ಮೆಚ್ಚುಗೆಯಾಗುವುದಿಲ್ಲವೇ..?
    ಈ ಹಿಂದೆ ಸಿದ್ದಲಿಂಗ ಶ್ರೀಗಳ ಪಟ್ಟಾಭಿಷೇಕಕ್ಕೆ ತಡೆಯೊಡ್ಡಿದಾಗ ವೀರಶೈವ ಎಂಬ ಪದಕ್ಕೆ ಚ್ಯುತಿ ಬಾರದ ಹಾಗೆ ವೀರತನ ತೋರಿದ್ದು ಈ ಯುವಕರು. ಮಾನವ ಜೀವನದ ವಾಸ್ತವಿಕ ಜ್ಞಾನ ಮತ್ತು ಆಧ್ಯಾತ್ಮಿಕ ಸಾಧನೆಯ ಸತ್ಯದ ತಿಳುವಳಿಕೆ ಬಹುಮುಖ ಕ್ರಾಂತಿಗೆ ಕಾರಣ.
    ನಿಜಗುರು ಮಹಾಂತಸ್ವಾಮಿಗಳ ಕಾರ್ಯಕ್ರಮದಲ್ಲಿ ನಾವುಗಳು ಭಾಗವಹಿಸುವುದು ನಮ್ಮ ಪುಣ್ಯವೆಂದೇ ಭಾವಿಸಬೇಕು. ಅಂತಹ ಭಕ್ತಿಯ ರಸಗಂಗೆಯಲ್ಲಿ ನಮ್ಮನ್ನು ಶುದ್ದಿಗೊಳಿಸುವ ನಿಮ್ಮ ಕಾರ್ಯಕ್ಕೆ ನಮೋನಮಃ. ನಾವು ಹೇಳುತ್ತಿರುವುದು ಬರೀ ಭಕ್ತರಲ್ಲ, ನೋಡಿದ ಶರಣರೆಲ್ಲ ನಿಬ್ಬೆರಗಾಗಬೇಕು.
    ಇಂದು ಪ್ರಶಸ್ತಿಗಳು ಮಾನದಂಡವನ್ನು ಮರೆತಿವೆ. ಸಕರ್ಾರಗಳು ಇಂತಹ ಗ್ರಾಮಗಳಿಗೆ "ಬಸವಪ್ರಶಸ್ತಿ" ಯನ್ನು ನೀಡಿ ಪ್ರೋತ್ಸಾಹಿಸಬೇಕು. ಬಸವ ಪ್ರಶಸ್ತಿ ತಿರಸ್ಕರಿಸುವವರಿಗೆ ಕೊಡುವದಕ್ಕಿಂತ ಅದರ ಮಹತ್ವವನ್ನು ಸಾರುವವರಿಗೆ ಕೊಟ್ಟರೆ ಒಳ್ಳೆಯದು ಎಂಬುದು ನಮ್ಮ ಭಾವನೆ.

ಮಲ್ಲಿಕಾಜರ್ುನರೆಡ್ಡಿ ಕರಡಕಲ್.