ಎಲ್ಲದರಲ್ಲಿಯೂ (ಕು)ಖ್ಯಾತಿಯನ್ನು ಹೊಂದಿರುವ ಹಟ್ಟಿಯಲ್ಲಿ ಇದೀಗ ಪಿಡಿಒ ಪ್ರಭುಲಿಂಗ ಅಮಾನತ್ ಆದದ್ದೇ ಸುದ್ದಿ..
"ಉರಿದವರಿಗೆ ಅರ್ಧ ಹೋಳಿಗೆ" ಎಂಬ ಶಾಸ್ತ್ರದ ನಿಯಮ ಪ್ರಭುವಿನ ವಿಷಯದಲ್ಲಿ ಪಕ್ಕಾ ಅನ್ವಯವಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿ ದ್ದಾರೆ. ಇನ್ನೂ ಕೆಲವರಂತು ಹೀಗಾಗಬಾರದಿತ್ತು.. ಅಯ್ಯೋ, ಪಾಪ ಎನ್ನುತ್ತಿದ್ದಾರೆ. (ಪಾಪ ಎನ್ನುವವರು ಪ್ರಭುವಿನ ಫಲಾನುಭವಿಗಳು ಇರಬಹುದು.)
ಹಟ್ಟಿ ಪಂಚಾಯತಿಯ ಹಳೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಭುಲಿಂಗನ ಕುರಿತು ಹಿಂದಿನ ನಮ್ಮ ಪತ್ರಿಕೆಯ ಸಂಚಿಕೆಯಲ್ಲಿ "ಪ್ರಭುವಿನ ಪಂಚಾಯತ್ ಪುರಾಣ", "ಉಂಡಾಡಿ ಗುಂಡ ಪಿಡಿಒ" ಎಂಬ ಶೀಷರ್ಿಕೆಯಡಿ ವರದಿ ಬಿತ್ತರಗೊಂಡಿತ್ತು. ಆಗ ವರದಿಯ ಕುರಿತು ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
ಆ ನಂತರದಿಂದ ಪ್ರಭುವಿನ ಒಂದೊಂದು ಪ್ರಕರಣಗಳು ಬೆಳಕಿಗೆ ಬರತೊಡಗಿದವು. ಗ್ರಾಮ ಪಂಚಾಯತ್ನ ಹಲವು ಸದ್ಯಸರು ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ವಗರ್ಾವಣಿಗಾಗಿ ಪಟ್ಟು ಹಿಡಿದು, ಇ.ಒ, ಸಿ.ಇ.ಒ ಬಳಿ ಹೋದರು. ಅದಕ್ಕೆ ಪ್ರತಿಯಾಗಿ ಇನ್ನೂ ಕೆಲವರು ಈತನನ್ನು ವಗರ್ಾವಣಿ ಮಾಡಬಾರದೆಂದು ಮನವಿ ಸಲ್ಲಿಸಿದರು. ಒಮ್ಮೆ ವಗರ್ಾವಣಿ ಬೇಕೆನ್ನುವ ಸದಸ್ಯರು ಒಂದೆರಡು ದಿನದಲ್ಲಿ ಇದೇ ಪಿಡಿಓ ಬೇಕೆಂದು ಮನವಿ ಮಾಡುತ್ತಿದ್ದದು ನಮ್ಮ ಪತ್ರಕರ್ತ ಮಿತ್ರರಿಗೆ ನಗೆಪಾಟಲೀನ ವಿಷಯವಾಗಿತ್ತು. ಈ ರೀತಿಯ ಎಡಬಿಡಂಗಿತನ ಕೆಲವು ಸದಸ್ಯರಲ್ಲಿ ಇದ್ದುದರಿಂದಲೇ ಪ್ರಭು ಹಟ್ಟಿಯಲ್ಲಿ ಠಿಕಾಣಿ ಹೂಡಿ, ಮನಸ್ಸಿಗೆ ಬಂದಂತೆ ಕೆಲಸ ನಡೆದುಕೊಳ್ಳುತ್ತಿದ್ದ.
ವಾಸ್ತವ ಅವಿದ್ಯಾವಂತನಲ್ಲದ ಪ್ರಭು ಕೆಲವೊಂದು ವಿಷಯಗಳಲ್ಲಿ ತೀರಾ ಕೆಳಹಂತದಲ್ಲಿ ನಡೆದುಕೊಂಡಿದ್ದಾನೆ. ಆತನ ಸಭ್ಯತೆ, ನಡವಳಿಕೆಗಳು ಒಂದು ವೇಳೆ ಸರಿಯಾಗಿದ್ದರೆ, ನೌಕರಿ ಪಡೆದು ಸಣ್ಣ ವಯಸ್ಸಿನಲ್ಲಿ ಅಮಾನತ್ ಆಗುವ ಸಂದರ್ಭ ಎದುರಾಗುತ್ತಿದ್ದಿಲ್ಲ.
ಹಟ್ಟಿ ಪಂಚಾಯತ್ಗೆ ಬಂದ ಹಲವು ಕಾರ್ಯದಶರ್ಿಗಳಲ್ಲಿ ಕೆಲವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದ್ದು ಬಿಟ್ಟರೆ, ಉಳಿದವರೆಲ್ಲರೂ ಒಂದಿಲ್ಲೊಂದು ತಪ್ಪಿನಿಂದಲೇ ಜಾಗ ಖಾಲಿ ಮಾಡಿದ್ದಾರೆ.
ಪ್ರಭುವಿನ ಮೇಲಿರುವ ಆರೋಪಗಳು.
2010 ಮತ್ತು 2011ನೇ ಸಾಲಿನ ಎನ್.ಆರ್.ಇ.ಜಿ ಯೋಜನೆಯಡಿ ಮತ್ತು ಪಂಚಾಯತಿಯ ಹಲವು ಯೋಜನೆಗಳಲ್ಲಿ ಅವ್ಯವಹಾರ ಎಸಗಿರುವುದು. ಇದಕ್ಕೆ ಸಂಬಂಧಿಸಿ ಹಲವರು ತಾಲೂಕಾ ಕಾರ್ಯನಿವರ್ಾಹಕ ಅಧಿಕಾರಿಗಳು ಹಾಗೂ ಸಿ.ಇ.ಒ ಅವರಿಗೆ ದೂರು ಸಲ್ಲಿಸಿದ್ದರು.
13ನೇ ಹಣಕಾಸು ಯೋಜನೆ & ಸಂಪೂರ್ಣ ಸ್ವಚ್ಛತಾ ಆಂದೋಲನ ಯೋಜನೆಯಡಿಯೂ ಅವ್ಯವಹಾರ ಎಸಗಿರುವುದು ಮೇಲ್ನೋಟಕ್ಕೆ ಸಾಭೀತಾಗಿದೆ. ಸ್ವಚ್ಛತಾ ಆಂದೋಲನ ಜಾಗೃತ ಸಮಿತಿಯೂ ಹಟ್ಟಿ ಗ್ರಾಮಪಂಚಾಯತ್ಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದಾಗ ಹಳೆಯ ಶೌಚಾಲಯಗಳಿಗೆ ಹಣ ಪಾವತಿ ಮಾಡಿ ಹಣಕಾಸು ದುರುಪಯೋಗ ಮಾಡಿಕೊಂಡಿರುವುದು ಗೊತ್ತಾಗಿರುತ್ತದೆ. ಜೊತೆಯಲ್ಲಿ ಎನ್.ಆರ್.ಇ. ಜಿ ಯೋಜನೆಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಪ್ರಭು ಸರಿಯಾಗಿ ಇಟ್ಟಿಲ್ಲ.
ಸಂಪೂರ್ಣ ಸ್ವಚ್ಛತಾ ಆಂದೋಲನಾ ಯೋಜನೆಯಡಿ 48 ಫಲಾನುಭವಿಗಳಿಗೆ ಉತ್ತೇಜನ ಹಣ ಪಾವತಿಸಲಾಗಿದೆ. ಇದರಲ್ಲಿ ತಾಲೂಕಾ ಪಂಚಾಯತ್ ಹಾಗೂ ಗ್ರಾಮಪಂಚಾಯತ್ ತಯಾರಿಸಿರುವ ಯಾದಿಗೆ ಎಲ್ಲಿಯೂ ತಾಳೆಯಾಗುತ್ತಿಲ್ಲ. ಮತ್ತು ಅನುಮೋದನೆ ಪಡೆದ ಪಲಾನುಭವಿಗಳಿಗೂ, ಉತ್ತೇಜನ ಹಣ ಹೊಂದಿದ ಪಲಾನುಭವಿಗಳಿಗೂ ಸಾಕಷ್ಟು ವ್ಯತ್ಯಾಸವಿದೆ.
ಕಾನೂನಿನ ಪ್ರಕಾರ ಎನ್.ಆರ್.ಇ.ಜಿ ಯೋಜನೆಯಡಿ ಕೆಲಸ ಕೈಗೊಂಡರೆ, ಹಣ ಪಾವತಿಯ ನಂತರ 3ನೇ ತಂಡದಿಂದ ಧೃಡೀಕರಣ ಮಾಡಿಸಬೇಕು ಹಾಗೂ ವರ್ಷದಿಂದ ವರ್ಷಕ್ಕೆ ಲೆಕ್ಕತಪಾಸಣಾಧಿ ಕಾರಿಗಳಿಂದ ಲೆಕ್ಕಪರಿಶೋಧನೆ ಮಾಡಿಸಬೇಕು.
ಆದರೆ, ಪಿಡಿಒ ಪ್ರಭು ಇವ್ಯಾವದನ್ನು ಮಾಡದೇ ಕರ್ತವ್ಯ ಲೋಪ ಎಸಗಿದ್ದಾರೆ.
ಪ್ರಭುವಿನ ಸ್ಯಾಂಪಲ್ ಘಟನೆಗಳಿಗೆ ಸದ್ಯಕ್ಕೆ ಮಾನ್ಯರಾದ ಮನೋಜ ಜೈನ್ ಸಾಹೇಬರು ಅಮಾನತ್ ಆದೇಶ ಹೊರಡಿಸಿದ್ದಾರೆ. ಇನ್ನೂ ಒಳಹೊಕ್ಕು ತನಿಖೆ ನಡೆದದ್ದೇ ಆದರೆ, ಈತ ಹಟ್ಟಿ ಪಂಚಾಯತ್ನಲ್ಲಿ ಮಾಡಿದ ಹತ್ತಾರು ಪ್ರಕರಣಗಳು ಹೊರಗೆ ಬೀಳುತ್ತವೆ.
ಅಂಬೇಡ್ಕರ್ಗೆ ಅಪಮಾನ ಪ್ರಕರಣ
ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಜಯಂತಿಗೆ ಪಿಡಿಒ ಪ್ರಭು ಹಾಜರಾಗಿಲ್ಲವೆಂಬ ಕಾರಣಕ್ಕೆ ಹಲವರು ಸಿಇಒ ಗೆ ಕಂಪ್ಲೇಟ್ ಮಾಡಿದ್ದರು. ಅದಕ್ಕಾಗಿ ಜಿಲ್ಲಾ ಪಂಚಾಯತ್ನಿಂದ 1 ತಂಡ ಬಂದು ವರದಿಯನ್ನು ಸಂಗ್ರಹಿಸಿತು. ತನಿಖೆಗೆ ಬಂದಿದ್ದ ತಂಡದ ಅಧಿಕಾರಿಗಳು ಇಲ್ಲಿನ ದಲಿತ ನಾಯಕರು, ಪಂಚಾಯತ್ನ ಅಧ್ಯಕ್ಷರು , ಇತರೆ ಸದಸ್ಯರು ಹಾಗೂ ದೂರು ನೀಡಿದ್ದವರಿಂದ ಹೇಳಿಕೆಗಳನ್ನು ಪಡೆದಿದ್ದರು.
ಸಕರ್ಾರದ ಆದೇಶದಂತೆ ಪ್ರತಿಯೊಂದು ಇಲಾಖೆಗಳು ಚಾಚುತಪ್ಪದೇ ಜಯಂತಿಯನ್ನು ಆಚರಿಸಬೇಕು. ಆದರೆ, ನಿಯಮವಿರುವುದು ಪ್ರಭುವಿಗೆ ಗೊತ್ತಿದ್ದರೂ ಕೂಡ, ಆತ ಜಯಂತಿಯಿಂದ ದೂರ ಉಳಿದಿದ್ದ ಎಂಬುದು ದೂರುದಾರರ ಆರೋಪ. ಒಂದು ವೇಳೆ ರಜೆಯ ಮೇಲೆ ಹೋಗಿದ್ದರೆ, ಮೇಲಾಧಿಕಾರಿಗಳ ಅನುಮತಿಯನ್ನಾದರೂ ಪಡೆಯಬಹುದಿತ್ತು. ಇದ್ಯಾವದನ್ನು ಮಾಡದ ಪ್ರಭು ಕಾರಣವನ್ನು ನೀಡುವಲ್ಲಿ ವಿಫಲನಾದ.
ಪ್ರಭುವಿನ ಮೊದಲಿನ ಎಲ್ಲಾ ಆರೋಪಗಳಿಗೆ "ಅಂಬೇಡ್ಕರ್ ಪ್ರಕರಣ" ಪುಷ್ಟಿ ನೀಡಿತು. ಇದೇ ಘಟನೆಯನ್ನು ಮುಂದಿಟ್ಟುಕೊಂಡು ಹಲವರು ಪದೇ ಪದೇ ಸಿಇಒ ಗೆ ಒತ್ತಾಯಿಸಲು ರಾಯಚೂರಿಗೆ ಗುಂಪು ಗುಂಪಾಗಿ ಹೋದರು.
ದುರಂತಕ್ಕೆ ಹೋದವರೆಲ್ಲ, ತಮ್ಮ ಬಳಿಯಿರುವ ನಮ್ಮ ಹಳೆಯ ಪ್ರಜಾಸಮರ ಪತ್ರಿಕೆಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳಿಗೆ ಕೊಟ್ಟು, ಈತನ ಕರ್ಮಕಾಂಡವನ್ನು ವಿವರಿಸಿ ಬಂದಿದ್ದಾರೆ. ಇನ್ನೂ ದಲಿತರಲ್ಲಿ ಈ ವಿಷಯದ ಕುರಿತು ಸ್ವಲ್ಪಮಟ್ಟಿಗೆ ಭಿನ್ನಾಭಿಪ್ರಾಯ ಬಂದರೂ ಕೂಡ, ಕೆಲವರು ಪ್ರಭುನನ್ನು ಬೆಂಬಲಿಸಿದರೆ, ಇನ್ನೂ ಕೆಲವರು ವಿರೋಧ ಮಾಡುತ್ತಲೇ ಪ್ರಕರಣವನ್ನು ಜಿಲ್ಲಾ ಪೋಲಿಸ್ ಇಲಾಖೆಯ ಮಟ್ಟಕ್ಕೆ ಕೊಂಡೊಯ್ಯದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಮ್ಮ ತಂಡದಿಂದ ಈ ಪ್ರಕರಣವನ್ನು ಪರಿಶೀಲಿಸಿದಾಗ, ಇಲ್ಲಿಯೂ ಕೂಡ ಪ್ರಭುವಿನ ಮೇಲೆ ಆರೋಪ ಮೇಲ್ನೋಟಕ್ಕೆ ಸಾಭೀತಾಯಿತು. ಈತನ ಬೇಜವಾಬ್ದಾರಿ ಮತ್ತು ನಿರ್ಲಕ್ಷತನದಿಂದಲೇ ಘಟನೆ ನಡೆಯಲು ಕಾರಣವೆಂದು ವರದಿಯಲ್ಲಿ ಹೇಳಲಾಗಿದೆ.
ಬೆಂಬಲಿಸದ ಭೂಪನಗೌಡ!
ಪ್ರಭು ಎಲ್ಲ ಕಡೆ ಭೂಪನಗೌಡ ನನ್ನ ಸಂಬಂಧಿಯೆಂದು ಹೇಳಿಕೊಂಡು ತಿರುಗಿದರೂ ಕೂಡ, ಈ ವಿಷಯದಲ್ಲಿ ಜಿ.ಪಂ ಸದಸ್ಯರು ಮಧ್ಯಪ್ರವೇಶ ಮಾಡಲಿಲ್ಲವೆಂದು ಗೊತ್ತಾಗಿದೆ. ಆದರೆ, ಕೌಟುಂಬಿಕವಾಗಿ ಪ್ರಭು & ಭೂಪನಗೌಡರ ಕುಟುಂಬಗಳ ಮಧ್ಯೆ ಇರುವ ಭಿನ್ನಾಭಿಪ್ರಾಯವೇ ಭೂಪನಗೌಡರು ಮಧ್ಯೆ ಪ್ರವೇಶ ಮಾಡದಕ್ಕೆ ಕಾರಣವಾಗಿರಬಹುದು. ಇಲ್ಲವೇ ತಪ್ಪಿತಸ್ಥರು ಯಾರೇ ಇದ್ದರೂ ಕೂಡ ಶಿಕ್ಷೆ ಅನುಭವಿಸಲಿ ಎಂಬ ವಿಚಾರ ಭೂಪನಗೌಡರ ತಲೆಯಲ್ಲಿ ಇದ್ದಿರಬಹುದು.
ಇನ್ನೂ ಹಟ್ಟಿಯಲ್ಲಿ ಕೆಲವರು ಹೇಳುವಂತೆ ಇಲ್ಲಿಯವರೆಗೆ ಪ್ರಭು ಹಟ್ಟಿಯಲ್ಲಿ ಏನೆಲ್ಲ ಅವ್ಯವಹಾರ ನಡೆಸಲು ಭೂಪನಗೌಡರ ಕೃಪಾಕಟಾಕ್ಷವೇ ಮುಖ್ಯಕಾರಣ ಎಂದೂ ಹೇಳುತ್ತಾರೆ!
ಏನೇ ಇರಲಿ.. ಪ್ರಭು ತಪ್ಪು ಮಾಡಿದ್ದ. ಅದಕ್ಕಾಗಿ ಅಮಾನತ್ ಶಿಕ್ಷೆ ಅನುಭವಿಸುತ್ತಿದ್ದಾನೆಂಬುದರಲ್ಲಿ ಎರಡು ಮಾತಿಲ್ಲ.

No comments:
Post a Comment
Thanku