ಎಸ್.ಎಸ್.ಎಲ್.ಸಿ.ಯ ಉತ್ತರ ಪತ್ರಿಕೆಗಳ ಮೌಲ್ಯ ಮಾಪನಕ್ಕೆಂದು ನಾನು ಇಂದು ಬೆಳಿಗ್ಗೆನೇ ಬೆಂಗಳೂರಿಗೆ ಬಂದಿದ್ದೆ. ಇದಕ್ಕಾಗಿ ಬೆಂಗಳೂರಿಗೆ ಬರುತ್ತಿರುವುದು ಇದೇ ಮೊದಲು. ಇಂದು ಮೌಲ್ಯಮಾಪನದ ಸಮಯದಲ್ಲಿ ಹೃದಯಕ್ಕೆ ಹತ್ತಿರವಾಗುವಂಥಹ ಯಾವ ಸ್ನೇಹಿತರೂ ಸಿಗಲಿಲ್ಲ. ನನಗೆ ಪರಿಚಯದ ಮುಖವೂ ಕಾಣಲಿಲ್ಲ. ಅಂದಿನ ಡ್ಯೂಟಿ ಮುಗಿಸಿಕೊಂಡು ರೂಮಿಗೆ ಬಂದೆ. ಸಮೀಪದ ವಸತಿ ಗೃಹದಲ್ಲಿ ವಾಸಕ್ಕೆ ವ್ಯವಸ್ಥೆ ಆಗಿತ್ತು. ಮಂಗಳೂರಿಂದ ಬಂದಿದ್ದ ನಿಲೋಫರ್ ಎನ್ನುವಾಕೆ ನನ್ನ ರೂಮ್ ಮೇಟ್ ಆಗಿದ್ದಳು. ನಾ ನನ್ನ ಹೆಸರು, ಶಾಲೆ, ಊರಿನ ಹೆಸರು ಇತ್ಯಾದಿ ವಿವರ ನಿಲೋಫರ್ಳಿಗೆ ತಿಳಿಸಿದೆ. ಹಿಂದಿನ ದಿನ ರಾತ್ರಿ ಪ್ರಯಾಣ ಮಾಡಿ ಬಂದಿದ್ದರಿಂದ ದೇಹಕ್ಕೆ ದಣಿವಾಗಿತ್ತು. ವಿಶ್ರಾಂತಿ ಬೇಕಾಗಿದ್ದರಿಂದ ರಾತ್ರಿ ಮಲಗುವುದಕ್ಕಿಂತ ಮುಂಚೆ ನಿಲೋಫರ್ಳ ಜೊತೆಗೆ ಹೆಚ್ಚಿನ ಮಾತುಕತೆಗಳಾಗಲಿಲ್ಲ. ಅವಳಿಗೂ ವಿಶ್ರಾಂತಿ ಬೇಕಿತ್ತೇನೋ? ಆದ್ದರಿಂದ ಆಕೆನೂ ಹೆಚ್ಚಿನ ಮಾತುಕತೆಗೆ ಆಸಕ್ತಿ ತೋರಿಸಲಿಲ್ಲ. ಅವಳಿಗೂ ಹೆಚ್ಚು ಕಡಿಮೆ ನನ್ನಷ್ಟೇ ವಯಸ್ಸಿರಬಹುದು, ಅಂದರೆ ಮೂವತ್ತರ ಆಜೂ ಬಾಜು ಇರಬಹುದು ಎಂದು ಅಂದುಕೊಂಡೆ. ಪರಸ್ಪರರು ಗುಡ್ ನೈಟ್ ಹೇಳಿ ನಿದ್ರಾದೇವಿಗೆ ಶರಣಾದೆವು.
ರಾತ್ರಿ ಮಲಗಿದವಳಿಗೆ ಎಚ್ಚರವಾದದ್ದು ಬೆಳಿಗ್ಗೆ 6 ಗಂಟೆಗೇನೆ. ನಿಲೋಫರ್ ಎದ್ದು ಆಗಲೇ ಬ್ರಷ್ ಮಾಡುತ್ತಿದ್ದ ಳು. ಗುಡ್ ಮಾನರ್ಿಂಗ್ ಬೆಹನ್ಜೀ ಎಂದಳು ನಾ ಎದ್ದಕೂಡಲೇ. ನಾನೂ ಪ್ರತಿಯಾಗಿ ಬೆಳಗಿನ ಶುಭೋದಯ ಹೇಳಿದೆ. ಅವಳಿಗೆ ಖುಷಿಯಾಗಿತ್ತು. ನನ್ನ ಮುಗುಳ್ನಗೆ ಅವಳಿಗೆ ಉತ್ತೇಜನ ನೀಡಿತ್ತೇನೋ? ಹಾಗೇ ನನ್ನ ಹತ್ತಿರ ಬಂದು ನವಿರಾಗಿ ನನ್ನನ್ನು ಹಗ್ ಮಾಡಿ, ತಾನು ಸಂತಸ ಅನುಭವಿಸುವುದರ ಜೊತೆಗೆ ನನಗೂ ಸಂತಸ ಉಣಬಡಿಸಿದ್ದಳು. ಅದೇ ಸಂತಸದ ಮೂಡಿನಲ್ಲಿ ನಾ ಒಂದು ಕ್ಷಣ ಕಿಟಕಿಯ ಹತ್ತಿರ ಹೋಗಿ, ಹೊರಗಿನ ಸೌಂದರ್ಯ ವೀಕ್ಷಿಸಲು ಮುಂದಾದೆ. ವಸತಿ ಗೃಹದ ಆವರಣದಲ್ಲಿನ ದೊಡ್ಡ ದೊಡ್ಡ ಹಸಿರಿನ ವಿವಿಧ ಜಾತಿಯ ಮರಗಳು ಕಣ್ಮನ ಸೆಳೆಯುತ್ತಿದ್ದವು. ಮೂಡಣದಲ್ಲಿ ನೇಸರ ಆಕಾಶದ ಗರ್ಭದಿಂದ ಆಗ ತಾನೆ ಹೊರಬರುತ್ತಿದ್ದುದರಿಂದ ಎಲ್ಲೆಡೆ ಕೆಂಪು ಪಸರಿಸತೊಡಗಿತ್ತು. ದೃಷ್ಯ ಒಂದು ರೀತಿ ಚೇತೋಹಾರಿಯಾಗಿತ್ತು. ಮುಂಜಾವಿನ ಸೃಷ್ಟಿ ಸೌಂದರ್ಯ ಸವಿಯುವುದರಲ್ಲಿ ನಾ ಮಗ್ನಳಾಗಿದ್ದೆ.
ನನ್ನ ಸೌಂದಯರ್ೋಪಾಸನೆಗೆ ತಡೆ ಹಾಕುವಂತೆ ನಿಲೋಫರ್, ಬೆಹನ್ಜೀ, ನೀವು ಈ ಜಗದೊಡೆಯ ಸೂರ್ಯನ ಚಮತ್ಕಾರಗಳನ್ನು ನೋಡುತ್ತಾ ಹೀಗೇ ನಿಂತು ಬಿಟ್ಟರೆ, ಮೌಲ್ಯಮಾಪನಕ್ಕೆ ರೆಡಿಯಾಗಿ ಹೊರಡುವುದು ಯಾವಾಗ? ಒಂಭತ್ತು ಗಂಟೆಗೆಲ್ಲಾ ನಾಷ್ಟಾ ಮಾಡಿ ನಾವು ಮೌಲ್ಯಮಾಪನದ ಹಾಲಿನಲ್ಲಿ ಇರಬೇಕು. ಈಗಿಂದ ನೀವು ರೆಡಿಯಾಗಲು ಹೊರಟರೆ, ಅಲ್ಲಿಗೆ ಬರುತ್ತದೆ. ಇಲ್ಲವಾದರೆ ತಡವಾಗಿ ಹೋಗಬೇಕಾಗುತ್ತದೆ. ತಡವಾಗಿ ಹೋಗುವುದು ನನ್ನ ಜಾಯಮಾನವಲ್ಲ. ಬೇಗ ಶುರು ಮಾಡಿರಿ ಎಂದು ನನಗೆ ಕರ್ತವ್ಯ ಬಗ್ಗೆ ಜ್ಞಾಪಿಸಿದಳು. ನಿಲೋಫರ್ ಹೇಳಿದುದು ಸರಿ ಇತ್ತು. ಅವಳ ಮಾತುಗಳು ನನಗೆ ಇಷ್ಟವೆನಿಸಿದವು. ಆಕೆಯ ಮಾತಿಗೆ ನಾ ಸ್ಪಂದಿಸಿ, ಥ್ಯಾಂಕ್ಯೂ ಸಿಸ್ಟರ್. ನೀವು ಹೇಳಿದಂತೆ ನಾ ಬೇಗ ಬೇಗ ರೆಡಿಯಾಗುವೆ ಎಂದು ಹೇಳುತ್ತಾ, ಮುಗುಳ್ನಗೆ ಬೀರುತ್ತಾ ಟಾಯಿಲೆಟ್ಗೆ ಹೊರಟೆ. ನನಗೆ ಪ್ರತಿಯಾಗಿ ಆಕೆಯೂ ಮುಗುಳ್ನಕ್ಕಳು.
ನಾನೂ, ನಿಲೋಫರ್ ಇಬ್ಬರೂ ರೆಡಿಯಾಗಿ, ಟಿಫಿನ್ ಮುಗಿಸಿಕೊಂಡು ಮೌಲ್ಯಮಾಪನದ ಹಾಲಿಗೆ ಹೋದಾಗ 08-45 ಆಗಿತ್ತು. ವೇಳೆಗೆ ಮುಂಚೆ ಇಬ್ಬರೂ ಕರ್ತವ್ಯ ನಿರ್ವ ಹಿಸುವ ನಮ್ಮ, ನಮ್ಮ ಹಾಲಿನಲ್ಲಿದ್ದೆವು. ನನ್ನ ಹಾಲ್ ನಂಬರು 2 ಆಗಿದ್ದರೆ, ನಿಲೋಫರ್ಳದು ಹಾಲ್ 8 ನಂಬರಾಗಿತ್ತು.
ನಮಸ್ತೆ ಮೇಡಂ. ನನ್ನ ಹೆಸರು ಗೌರಿಶಂಕರ್ ಅಂತ. ಬೀದರಿನ ಸರಕಾರಿ ಪ್ರೌಢ ಶಾಲೆಯಿಂದ ಬಂದಿದ್ದೇನೆ. ನೀವೂ ಸಹ ಉತ್ತರ ಕನರ್ಾಟಕದವರೆಂದು ಗೊತ್ತಾಯಿತು. ಅದಕ್ಕೇ ಪರಿಚಯ ಮಾಡಿಕೊಳ್ಳುತ್ತಿರುವೆ. ನಾ ಇಂದೇ ಡ್ಯೂಟಿಗೆ ಹಾಜರಾಗಿದ್ದೇನೆ. ಮಧ್ಯಾಹ್ನ ಊಟಕ್ಕೆ ಹೊರಡಬೇಕೆಂದು ನಾ ನನ್ನ ಪೆನ್ನು ಇತರೆ ವಸ್ತುಗಳನ್ನು ನನ್ನ ವ್ಯಾನಿಟಿ ಬ್ಯಾಗಿನಲ್ಲಿ ಹಾಕಿಕೊಂಡು ಮೇಲೇಳುತ್ತಿದ್ದವಳು ಒಂದೇ ಸಮನೇ ಬಡಬಡಿಸಿದ ವ್ಯಕ್ತಿಯ ಕಡೆಗೆ ದೃಷ್ಟಿ ಹರಿಸಿದೆ. 28-30ರ ಆಜುಬಾಜುವಿನ ಯುವಕನಾಗಿದ್ದ ಆ ವ್ಯಕ್ತಿ. ಹ್ಯಾಂಡ್ಸಮ್ ಎಂದೇ ಹೇಳಬಹುದಾಗಿತ್ತು. ಅವರಿಗೆ ಪ್ರತಿನಮಸ್ಕಾರ ಮಾಡುತ್ತಾ, ನನ್ನ ಹೆಸರು ಮಮತಾ, ಬಾದಾಮಿಯ ಪ್ರೌಢಶಾಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಿಮ್ಮ ಪರಿಚಯವಾದುದಕ್ಕೆ ಬಹಳ ಸಂತೋಷವಾಯಿತು ಎಂದು ತಿಳಿಸಿದೆ. ಅವರಿಗೂ ತುಂಬಾ ಸಂತೋಷವಾಗಿದೆಯೆಂದು ಅವರ ಮುಖ ಭಾವದಿಂದ ನನಗೆ ಗೊತ್ತಾಗುತ್ತಿತ್ತು.
ನಿನ್ನೆ ನನಗೆ ಒಬ್ಬರೂ ಆತ್ಮೀಯರಾಗಿರಲಿಲ್ಲ ನೋಡ್ರಿ. ಇಂದು ನೀವಾಗೇ ಬಂದು ಪರಿಚಯ ಮಾಡಿಕೊಂಡಿದ್ದಕ್ಕೆ ನನಗೆ ಬಹಳ ಖುಷಿಯಾಗಿದೆ ಎಂದೆ ಮುಂದುವರಿದು.
ಹೌದು ನೋಡ್ರೀ ಮೇಡಂ, ಬಹಳ ದೂರದಿಂದ ಬಂದಂಥಹ ನಮ್ಮಂಥಹವರಿಗೆ ನಮ್ಮ ಕಡೆಯಿಂದ ಬಂದವರನ್ನು ಕಂಡಾಗ ತುಂಬಾ ಸಂತೋಷವಾಗುತ್ತದೆ. ನಿವೂ ಸಹ ನಮ್ಮ ಕಡೆಯವರಾಗಿರುವುದರಿಂದ ನಿಮ್ಮ ಪರಿಚಯ ಮಾಡಿಕೊಂಡೆ. ನನಗೂ ನಿಮ್ಮ ಮಾತಿಂದ ಬಹಳ ಸಂತೋಷವಾಯಿತು ನೋಡ್ರಿ ಎಂದರು ಗೌರಿಶಂಕರ್.
ಇಬ್ಬರೂ ಮಾತಾಡುತ್ತಾ, ಕ್ಯಾಂಟೀನದ ಕಡೆಗೆ ಹೆಜ್ಜೆ ಹಾಕಿದೆವು. ಹಾದಿಯಲ್ಲಿ ನಿಲೋಫರ್ ನಮ್ಮನ್ನು ಕೂಡಿಕೊಂಡಳು. ಅವಳ ಪರಿಚಯವನ್ನು ಗೌರಿಶಂಕರರಿಗೆ ಮಾಡಿಕೊಟ್ಟೆ. ಮೂವರೂ ಮಾತಾಡುತ್ತಾ ಊಟ ಮಾಡಿದೆವು. ನಿನ್ನೆ ನನಗಿದ್ದ ಒಂಟಿತನ ಇಂದು ಇರಲಿಲ್ಲ.
ಅಂದು ಸಾಯಂಕಾಲ ನಾ ಡ್ಯೂಟಿ ಮುಗಿಸಿ ರೆಡಿಯಾ ಗುತ್ತಿದ್ದಾಗ ಗೌರಿಶಂಕರ್ ಅವರು ನನ್ನ ಟೇಬಲ್ಲಿನ ಹತ್ತಿರ ಬಂದರು. ನಾನು ಗೌರಿಶಂಕರ್ ಇಬ್ಬರೂ ಹೊರಬರುತ್ತಿದ್ದಂತೆ ನಿಲೋಫರ್ ಬಂದಳು. ನಾನು, ನಿಲೋಫರ್ ಇಬ್ಬರೂ ನಮ್ಮ ರೂಮಿನ ಕಡೆಗೆ ಹೆಜ್ಜೆ ಹಾಕಿದೆವು ಗೌರಿಶಂಕರ್ಗೆ ಬೈ ಹೇಳುತ್ತಾ. ಅವರಿಗೂ ನಮ್ಮ ವಸತಿ ಗೃಹದ ಪಕ್ಕದ ವಸತಿ ಗೃಹದಲ್ಲೇ ವ್ಯವಸ್ಥೆ ಆಗಿತ್ತು.
ನಮ್ಮ ರೂಮಿಗೆ ಹೋದ ಮೇಲೆ ನಾನು, ನಿಲೋಫರ್ ಇಬ್ಬರೂ ಮುಖ ತೊಳೆದು ಫ್ರೆಷ್ ಆಗಿ, ಲಘುವಾಗಿ ಮೇಕಪ್ ಮಾಡಿಕೊಂಡು, ಸ್ವಲ್ಪ ಹೊತ್ತು ಹೀಗೆ ವಾಯು ವಿಹಾರ ಮಾಡಿಕೊಂಡು ಬರೋಣ ಎಂದು ಇಬ್ಬರೂ ಜೊತೆಗೂಡಿ ಹೆಜ್ಜೆ ಹಾಕಿದೆವು. ಇಂದಿನ ಕೆಲಸದ ಬಗ್ಗೆ ಒಂದೆರಡು ಮಾತುಗಳಲ್ಲಿ ನಮ್ಮ ಚಚರ್ೆ ನಡೆಯಿತು.
ಮಮತಾ ಬೆಹನ್, ಇಂದು ನನಗೆ ಒಂದು ವಿಚಿತ್ರ ಉತ್ತರ ಪತ್ರಿಕೆ ಬಂದಿತ್ತು. ಕನ್ನಡ ಪತ್ರಿಕೆಯ ಎಲ್ಲಾ ಪ್ರಶ್ನೆಗಳಿಗೆ ಒಂದೇ ಉತ್ತರ ಇತ್ತು. ಪೇಪರ ತುಂಬೆಲ್ಲಾ, ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂದು ಬರೆದಿತ್ತು. ಕೊನೆಗೆ, ಶಿವನೇ ಪರೀಕ್ಷೆಯಲ್ಲಿ ನನ್ನನ್ನು ಪಾಸು ಮಾಡಿಸಪ್ಪಾ ಎಂದಿತ್ತು ಎಂದು ನಿಲೋಫರ್ ಇವತ್ತಿನ ತನ್ನ ಅನುಭವ ಹೇಳಿದಳು.
ಹೌದೇ? ಮತ್ತೆ ನೀವು ಆ ವಿದ್ಯಾಥರ್ಿಯನ್ನು ಪಾಸು ಮಾಡಿದಿರಾ? ನಾ ಕೇಳಿದೆ.
ಹೇಗೆ ಅಂತ ಪಾಸ್ ಮಾಡಲಿ ಬೆಹನ್ಜೀ? ನನಗೆ ತುಂಬಾ ಬೇಸರವಾಯಿತು.
ನನಗೂ ಸಹ ಒಂದು ಸ್ಪೆಷಲ್ ಉತ್ತರ ಪತ್ರಿಕೆ ಬಂದಿತ್ತು. ಇಡೀ ಉತ್ತರ ಪತ್ರಿಕೆಯಲ್ಲಿ ಆಯ್ ಲವ್ ಯು ಎಂಬ ಒಕ್ಕಣೆ ಇತ್ತು. ಕೊನೆಗೆ, ನನ್ನನ್ನು ಪಾಸ್ ಮಾಡದಿದ್ದರೆ, ಆಯ್ ಹೇಟ್ ಯು ಎಂದಿತ್ತು. ನಾನೂ ಸಹ ನನ್ನ ಅನುಭವ ಹೇಳಿದೆ. ಇಬ್ಬರೂ ಗೊಳ್ಳೆಂದು ನಕ್ಕೆವು. ಈಗಿನ ವಿದ್ಯಾಥರ್ಿಗಳ ಮನಸ್ಸೇ ಅರ್ಥವಾಗುತ್ತಿಲ್ಲವಲ್ಲ? ಎಂಬ ಕಳವಳ ವ್ಯಕ್ತಪಡಿಸಿದೆವು ಇಬ್ಬರೂ.
ಇಬ್ಬರೂ ಅಲ್ಲೇ ಪಾಕರ್ೊಂದರಲ್ಲಿ ಸ್ವಲ್ಪ ಹೊತ್ತು ಕುಳಿತೆವು. ಅದೂ, ಇದೂ ಮಾತಾಡುತ್ತಿರುವಾಗ ನಿಲೋಫರ್, ಬೆಹನ್ಜೀ, ನೀವು ತಪ್ಪು ತಿಳಿದುಕೊಳ್ಳುವುದಿಲ್ಲವೆಂದರೆ ನಾ ಒಂದು ಪ್ರಶ್ನೆ ಕೇಳಬೇಕೆಂದಿರುವೆ ಎಂದು ಹೇಳುತ್ತಾ ನನ್ನ ಮುಖದಲ್ಲಿನ ಭಾವನೆಗಳನ್ನು ಗಮನಿಸತೊಡಗಿದಳು.
ನೀವು ಏನನ್ನು ಕೇಳಬೇಕೆಂದಿರುವಿರೋ ಅದನ್ನು ಯಾವ ಅಳುಕು ಇಲ್ಲದೇ ಕೇಳಿರಿ ಬೆಹನ್ಜೀ ಎಂದೆ ನಾ. ಆಕೆ ಯಾವುದರ ಬಗ್ಗೆ ಪ್ರಸ್ತಾಪಿಸಬಹುದು ಎಂಬ ಆತಂಕ ನನ್ನ ಮನದಲ್ಲಿ ಆಗುತ್ತಿದ್ದರೂ, ಅದನ್ನು ತೋರ್ಪಡಿಸಿ ಕೊಳ್ಳದೇ ಹೇಳಿದೆ. ಸ್ವಲ್ಪ ಹೊತ್ತು ಮೌನ ಆವರಿಸಿತು ಇಬ್ಬರ ಮಧ್ಯೆ. ಕೊನೆಗೆ ಮೌನ ಮುರಿದ ನಿಲೋಫರ್ಳೇ, ನಿಮಗೆ ಮದುವೆ ಆಗಿಲ್ಲವೇ ಮಮತಾ? ಎಂದು ಅಳುಕುತ್ತಾ ಕೇಳಿದಳು.
ನಿಲೋಫರ್ಳ ಪ್ರಶ್ನೆಯಿಂದ ನನಗೆ ಮುಜುಗರವಾಗು ತ್ತಿದ್ದರೂ, ಅದನ್ನು ತೋರ್ಪಡಿಸಿಕೊಳ್ಳದೇ, ಈ ವಿಷಯ ವನ್ನು ಕೇಳುವುದಕ್ಕೆ ಇಷ್ಟ್ಯಾಕೆ ಪೀಠಿಕೆ ನಿಲೋಫರ್? ಹೌದು, ನೀವು ಸಂಶಯ ವ್ಯಕ್ತ ಪಡಿಸಿರುವಂತೆ ನನಗೆ ಇನ್ನೂ ಮದುವೆ ಆಗಿಲ್ಲ. ನಾನೂ ಸಹ ನಿಮಗೆ ಇದೇ ಪ್ರಶ್ನೆಯನ್ನು ಕೇಳಬೇ ಕೆಂದಿದ್ದೆ. ಆದರೆ ನೀವೇ ಮೊದಲು ಕೇಳಿಬಿಟ್ಟಿರಿ ಎಂದು ಹೇಳುತ್ತಾ, ನಾ ನಿಲೋಫರ್ಳ ಮುಖ ದಿಟ್ಟಿಸತೊಡಗಿದೆ.
ಬೆಹನ್ಜೀ, ನನ್ನದೂ ಮದುವೆಯಾಗಿಲ್ಲ ಇನ್ನೂ. ನಿಮ್ಮ ಊಹೆ ಸರಿಯಾಗಿದೆ. ಬರುವ ಜೂನ್ ತಿಂಗಳಿಗೆ ನನಗೆ ಮೂವತ್ತು ತುಂಬುತ್ತದೆ ಎಂದಳು ನಿಲೋಫರ್. ಅವಳ ಮಾತಿನಲ್ಲಿ ದುಃಖದ ಛಾಯೆ ಇತ್ತು.
ಹಾಗಾದರೆ ನೀವು ನನಗಿಂತ ದೊಡ್ಡವರು ಎಂದ ಹಾಗಾಯಿತು. ಬರುವ ಜುಲೈ ತಿಂಗಳಿಗೆ ನನಗೆ 29ತುಂಬುತ್ತದೆ. ನಾ ನಿಮಗೆ ಅಕ್ಕಾ ಎಂದು ಕರೆಯಲೇ ಇನ್ನುಮುಂದೆ. ಹಾಗೇ ಇನ್ನೊಂದು, ಇಬ್ಬರೂ ಏಕವಚನದಲ್ಲೇ ಮಾತಾಡೋಣವೇ? ನಿಮ್ಮ ಒಪ್ಪಿಗೆ ಇದೆಯೇ? ಹೇಗೂ ನಾವಿಬ್ಬರು ಒಂದೇ ದೋಣಿಯಲ್ಲಿ ಪಯಣಿಸುತ್ತಿದ್ದೇವೆ ಅಲ್ಲವೇ? ಎಂದೆ ನಾ.
ಹಾಗೇ ಆಗಲಿ ಮಮತಾ. ನಿನ್ನ ಪರಿಚಯ, ಮಾತಿಂದ ನನಗೆ ತುಂಬಾ ಖುಷಿಯೆನಿಸುತ್ತಿದೆ. ನೀ ಹೇಳಿದಂತೆಯೇ ಆಗಲಿ ಎಂದಳು ನಿಲೋಫರ್. ಆಕೆಯ ಮಾತಿಂದ ನನಗೂ ಖುಷಿಯೆನಿಸತೊಡಗಿತ್ತು. ಖುಷಿಯ ಮೂಡಿನಲ್ಲಿಯೇ ನಾ, ಅಕ್ಕಾ, ನೀ ಇದುವರೆಗೂ ಯಾಕೆ ಮದುವೆ ಆಗಿಲ್ಲ? ಎಂದು ಇನ್ನೊಂದು ಪ್ರಶ್ನೆಯನ್ನು ಅವಳ ಮುಂದಿಟ್ಟೆ.
ನನ್ನ ಕತೆಯನ್ನು ವಿವರಿಸೋಕೆ ನನಗೆ ಅಷ್ಟು ಚೆನ್ನಾಗಿ ಬರುವುದಿಲ್ಲ. ನಿನ್ನ ಭಾಷಾ ಪ್ರಭುತ್ವತೆ ಬಹಳ ಚೆನ್ನಾಗಿದೆ. ನೀನೇ ಮೊದಲು ಹೇಳಿ ಬಿಡು ನೀ ಇದುವರೆಗೂ ಯಾಕೆ ಮದುವೆ ಆಗಿಲ್ಲವೆಂದು. ನೀ ಹೇಳಿದ ನಂತರ ನಾ ಹೇಳುವೆ. ನೀನೇ ಮೊದಲು ಹೇಳುವಿಯಾ? ಆಕೆಯ ಮಾತಿನಲ್ಲಿ ಕಳಕಳಿಯ ವಿನಂತಿ ಇತ್ತು.
ಆಯಿತಕ್ಕಾ, ನಾನೇ ಮೊದಲು ಹೇಳುವೆ. ಶುರು ಮಾಡಲೇ? ಎಂದೆ ನಾ.
ಹೇಳು ತಂಗಿ, ಶುರು ಕರೋ. ಮತ್ತೇಕೆ ಪೀಠಿಕೆ ಹಾಕುತ್ತಿರುವಿ? ನನ್ನನ್ನು ಪ್ರೋತ್ಸಾಹಿಸತೊಡಗಿದಳು ನಿಲೋಫರ್.
ಅಕ್ಕಾ ಕೇಳು, ನಾನು ಹೇಳುವೆ. ನನಗೊಬ್ಬ ಸೋದರಮಾವ ಇದ್ದಾನೆ. ಹರುಷ್ ಅಂತ. ಅಮ್ಮನ ತಮ್ಮ. ಹರುಷನಿಗೆ ನನ್ನನ್ನು ಕೊಟ್ಟು ಮದುವೆ ಮಾಡಬೇಕೆಂದು ನಾ ಎಸ್.ಎಸ್.ಎಲ್.ಸಿ.ಯಲ್ಲಿದ್ದಾಗಲೇ 2 ಕುಟುಂಬಗಳಲ್ಲಿ ಮಾತುಕತೆಗಳಾಗಿದ್ದವು. ನನಗೂ ಹರುಷ್ಗೂ ಮೂರು ವರ್ಷಗಳ ಅಂತರ ಇದೆ. ಹರುಷ್ ಆಗ ಎಂ.ಬಿ.ಬಿ.ಎಸ್. ಮೊದಲನೇ ವರ್ಷದಲ್ಲಿ ಓದುತ್ತಿದ್ದ. ತುಂಬಾ ಸ್ಮಾರ್ಟ ಗೈ ಅವ. ಅವನ ಎಂ.ಬಿ. ಮುಗಿದಾಗ ನಾ ಬಿ.ಎ. ಕೊನೇ ವರ್ಷದಲ್ಲಿದ್ದೆ. ಎಂ.ಬಿ. ಮುಗಿದ ನಂತರ ಅವ ಒಂದು ವರ್ಷ ಎಂ.ಡಿ. ಸಲುವಾಗಿ ಪ್ರಿಪೇರ್ ಮಾಡಿದ. ಅಷ್ಟರಲ್ಲಿ ನನ್ನ ಬಿ.ಎ. ಮುಗಿದಿತ್ತು. ಅವ ಎಂ.ಡಿ. ಮುಗಿಸುವಷ್ಟರಲ್ಲಿ ನಾ ಎಂ.ಎ., ಬಿ.ಎಡ್. ಮುಗಿಸಿದ್ದೆ. ಹರುಷ್ ಮುಂದೆ ಅದೇನೋ ಸೂಪರ್ ಸ್ಪೆಷಲೈಜೇಷನ್ ಕೋಸರ್ು ಅಂತ ಮುಂಬಯಿಗೆ ಹೋದ. ಅವ ಕೋಸರ್ು ಮುಗಿಸಿಕೊಂಡು ಬರುವಷ್ಟರಲ್ಲಿ ನನಗೆ ಇಪ್ಪತ್ತೇಳು ತುಂಬಿತ್ತು. ನಾ ಶಿಕ್ಷಕಿಯಾಗಿ ಸೇರಿಕೊಂಡು ಮೂರು ವರ್ಷ ಆಗುತ್ತಲಿತ್ತು. ಸೂಪರ್ ಸ್ಪೆಷಲೈಜೇಷನ್ ಕೋಸರ್ು ಮುಗಿಸಿಕೊಂಡು ಬಂದ ಹರುಷ್ ಬೆಂಗಳೂರಿನ ಪ್ರತಿಷ್ಠಿತ ಸೂಪರ್ ಸ್ಪೆಷ್ಯಾಲಿಟಿ ಆಸ್ಪತ್ರೆಯೊಂದರಲ್ಲಿ ಸೇರಿಕೊಂಡ. ಅಲ್ಲಿಯವರೆಗೆ ಸುಮ್ಮನಿದ್ದ ನನ್ನ ಅಪ್ಪ, ಅಮ್ಮ ನನ್ನ ಮತ್ತು ಹರುಷನ ಮದುವೆಗಾಗಿ ಅವಸರ ಪಡಿಸತೊಡಗಿದರು.
ನನ್ನ ವೃತ್ತಿಯಲ್ಲಿ ದಿನ ನಿತ್ಯದ ಕಾಯಕವನ್ನು ಸುಲಭವಾಗಿ ಕಾರ್ಯಗತಗೊಳಿಸಲು, ನನಗೆ ಸಹಾಯ ಒದಗಿಸಲು ಮೆಡಿಸಿನ್ ಓದಿರುವ ಹುಡುಗಿಯೇ ಸಂಗಾತಿ ಯಾಗಬೇಕು. ಬೇರೆ ಪದವಿ ಪಡೆದ ಹುಡುಗಿಗೂ ನನಗೂ ಹೊಂದಾಣಿಕೆಯಾಗುವುದಿಲ್ಲ. ಇಂಥಹದ್ದನ್ನೆಲ್ಲಾ ಊಹೆ ಮಾಡದೇ ಹಿರಿಯರು ನನ್ನ ಮತ್ತು ಮಮತಾಳ ಮದುವೆ ನಿಗದಿ ಮಾಡಿರುವುದು ಈಗ ಸಮಂಜಸವೆನಿಸುವುದಿಲ್ಲ. ಆದ್ದರಿಂದ ನಾ ಮಮತಾಳನ್ನು ಮದುವೆಯಾಗುವುದಿಲ್ಲ ಎಂದು ಹರುಷ್ ತನ್ನ ನಿಲುವನ್ನು ಸ್ಪಷ್ಟಪಡಿಸಿದ. ಅವ ಯಾರ ಮಾತನ್ನೂ ಕೇಳುವ ಹಂತದಲ್ಲಿರಲಿಲ್ಲ. ಸ್ಕೂಲ್ ಟೀಚರ್ ಆಗಿರುವ, ಆಡರ್ಿನರಿ ಎಂ.ಎ., ಬಿ.ಎಡ್. ಮಾಡಿಕೊಂಡಿರುವ ಮಮತಾ ತನ್ನಂತೆ ಯಾರಾದರೂ ಶಾಲಾ ಶಿಕ್ಷಕನನ್ನು ಮದುವೆ ಮಾಡಿಕೊಳ್ಳಲಿ. ನನ್ನ ಅಭ್ಯಂತರವೇನೂ ಇಲ್ಲ. ನಾನಂತೂ ಅವಳನ್ನು ಮದುವೆಯಾಗಲಾರೆ ಎಂದ ಹರುಷ್.
ದಾಂಪತ್ಯ ಜೀವನಕ್ಕೆ ಒಂದು ಗಂಡು, ಒಂದು ಹೆಣ್ಣು ಬೇಕು ಎಂಬುದು ಪ್ರಕೃತಿಯ ನಿಯಮ. ಡಾಕ್ಟರ್ ಹುಡುಗನಿಗೆ, ಟೀಚರ್ ಹುಡುಗಿಯೊಂದಿಗೆ ಸಂಸಾರ ಸಾಗಿಸುವುದಕ್ಕೆ ಆಗುವುದಿಲ್ಲವೇ? ನಾ ಹರುಷನ ಮಾತಿನ ವರಸೆಯನ್ನು ಪ್ರತಿಭಟಿಸಿದ್ದೆ. ನಾ ಮಾನಸಿಕವಾಗಿ ತುಂಬಾ ಬಳಲಿದೆ. ಹರುಷ್-ಮಮತಾ, ಮಮತಾ-ಹರುಷ್ ಎಂದು ನಮ್ಮ ಸಂಬಂಧಿಕರಲ್ಲಿ ಮಾತುಗಳು ಕೇಳಿ ಬರುತ್ತಿದ್ದವು ನಮ್ಮ ಜೋಡಿಯನ್ನು ನೋಡಿ. ರಜಕ್ಕೆಂದು ಊರಿಗೆ ಬಂದಾಗ ಹರುಷ್, ನಾನು ಕೈ ಕೈ ಹಿಡಿದುಕೊಂಡು ಸಕತ್ತಾಗಿ ತಿರುಗಾಡುತ್ತಿದ್ದೆವು. ಏಕಾಂತದಲ್ಲಿ ಪರಸ್ಪರರು ತಬ್ಬಿ ಮುದ್ದಾಡಿದ್ದೆವು. ನಂಬಿಕೆ ಇದೆಯೆಂದುಕೊಂಡು ಮನಸ್ಸನ್ನು ಒಪ್ಪಿಸಿದಂತೆ ಮೈಯನ್ನು ಒಪ್ಪಿಸಿರಲಿಲ್ಲ ಅಷ್ಟೇ. ಇವೆಲ್ಲವು ಗಳನ್ನು ನೆನೆಸಿಕೊಂಡರೆ ನನಗೆ ಮೈಯೆಲ್ಲಾ ಪರಚಿಕೊಳ್ಳು ವಂತಾಗುತ್ತದೆ ಈಗಲೂ.
ಹರುಷನಿಗಿಂತಲೂ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡುತ್ತೇವೆ. ಆದದ್ದನ್ನೆಲ್ಲಾ ಕೆಟ್ಟ ಕನಸು ಎಂದು ಮರೆತು ಬಿಡು ಎಂದು ಅಪ್ಪ-ಅಮ್ಮ ಸಮಾಧಾನ ಮಾಡಿದ್ದರು. ಸ್ವಲ್ಪ ದಿನಗಳ ನಂತರ ಗೊತ್ತಾಗಿತ್ತು, ಹರುಷ್ ಮುಂಬಯಿಯಲ್ಲಿದ್ದಾಗ ಅವ ಅಲ್ಲಿನ ಮರಾಠಿ ಡಾಕ್ಟರ್ ಬೆಡಗಿಯೊಬ್ಬಳ ಮೋಹ ಪಾಶದಲ್ಲಿ ಸಿಲುಕಿ ಹಾಕಿಕೊಂಡಿದ್ದಾನೆಂದು. ಮನೆಯಲ್ಲಿ ನನ್ನ ಮದುವೆಗೆ ಒತ್ತಾಯ ಮಾಡುತ್ತಿದ್ದರೂ, ನಾ ನನ್ನ ಮನಸ್ಸಿಗಾಗಿರುವ ಆಘಾತದಿಂದ ಇನ್ನೂ ಹೊರ ಬಂದಿಲ್ಲ. ಇದೇ ನೋಡು ನನ್ನ ಕತೆ ನಿಲೋಫರ್ ಎಂದೆ.
ಅಯ್ಯೋ ಮಮತಾ, ನಿನ್ನದು ಡಾಕ್ಟರ್ ಕತೆಯಾದರೆ, ನನ್ನದು ಇಂಜಿನಿರ್ ಕತೆ. ತಂಗಿ, ದೊಡ್ಡ, ದೊಡ್ಡ ಪದವಿ ಪಡೆದ ಕೆಲವರಿಗೆ ಮಾನವೀಯತೆಯೇ ಮರೆತು ಹೋಗುತ್ತಿದೆಯಲ್ಲಾ? ಬರೀ ದುಡ್ಡು, ಸ್ಟೇಟಸ್ ಅಷ್ಟೇ ಅವರಿಗೆ ಬೇಕಾಗುತ್ತಿವೆಯಲ್ಲ? ನಮ್ಮಂಥಹ ಅಮಾಯಕರಿಗೆ ಏನನ್ನೂ ಮಾಡಲಿಕ್ಕೆ ಆಗುತ್ತಿಲ್ಲವಲ್ಲ? ಮೂಕವಾಗಿ ವೇದನೆಯನ್ನು ಅನುಭವಿಸಬೇಕು ಅಷ್ಟೇ ಅಲ್ಲವೇ?
ಮಮತಾ, ನಿನ್ನ ಹಾಗೆ ನನ್ನ ಮದುವೆಯನ್ನೂ ನನ್ನ ಅಪ್ಪನ ಅಕ್ಕನ ಮಗ ಜಲೀಲನೊಂದಿಗೆ ಮಾಡಬೇಕೆಂದು ನಾನು ಪಿ.ಯು.ಸಿ.ಯಲ್ಲಿದ್ದಾಗಲೇ ಎರಡೂ ಕುಟುಂಬಗಳು ಮಾತಾಡಿಕೊಂಡಿದ್ದವು. ನಾನು ಪಿ.ಯು. ಎರಡನೇ ವರ್ಷದಲ್ಲಿದ್ದಾಗ ಜಲೀಲ್ ಬಿ.ಇ. ಮೂರನೇ ವರ್ಷದಲ್ಲಿದ್ದ. ಬಿ.ಇ. ಮುಗಿಸುತ್ತಲೇ ಜಲೀಲನಿಗೆ ಕ್ಯಾಂಪಸ್ ಸೆಲೆಕ್ಷನ್ ಆಗಿದ್ದುದರಿಂದ ಪ್ರತಿಷ್ಠಿತ ಬೆಂಗಳೂರಿನ ಸಾಫ್ಟವೇರ್ ಕಂಪನಿಯನ್ನು ಸೇರಿಕೊಂಡ. ನಾ ಬಿ.ಎ.ಗೆ ಸೇರಿದ್ದೆ.
ಜಲೀಲ್ ಒಂದು ವರ್ಷ ನೌಕರಿ ಮಾಡುತ್ತಿದ್ದಂತೆ, ಅವನ ಕಂಪನಿವರೇ ಅವನನ್ನು ಯು.ಎಸ್.ಗೆ ಎಂ.ಎಸ್. ಮಾಡಲು ಡೆಪ್ಯೂಟೇಷನ್ ಮೇಲೆ ಕಳುಹಿಸಿದರು. ಅವನ ಎಂ.ಎಸ್. ಮುಗಿದಾಗ ನನ್ನ ಬಿ.ಎ. ಮುಗಿದಿತ್ತು. ಎಂ.ಎಸ್. ಮುಗಿಯುತ್ತಲೇ ತಕ್ಷಣ ಜಲೀಲ್ ನಮ್ಮ ದೇಶಕ್ಕೆ ವಾಪಾಸು ಬರದಾದಾಗ, ನಾ ಕೇಳಿದ್ದಕ್ಕೆ, 3 ವರ್ಷಗಳವರೆಗೆ ಅಲ್ಲಿಯೇ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದ. ಅವನು ಯು.ಎಸ್.ಗೆ ಹೋಗುವಾಗಲೇ, ಎಂ.ಎಸ್. ಮಾಡಿದ ಮೇಲೆ ಯು.ಎಸ್.ದಲ್ಲಿ ಕನಿಷ್ಟ 3 ವರ್ಷಕೆಲಸ ಮಾಡಬೇಕು ಎಂದಿದ್ದ ಕರಾರಿನ ಬಗ್ಗೆ ಜಲೀಲ್ ನನಗೆ ಹೇಳಿರಲಿಲ್ಲ. ಆ 3 ವರ್ಷ ಮುಗಿಯುವಷ್ಟರಲ್ಲಿ ನನ್ನದು ಎಂ.ಎ., ಬಿ.ಎಡ್. ಮುಗಿದಿತ್ತು. ಅಷ್ಟೊತ್ತಿಗೆ ನಾ 25 ವಸಂತಗಳ ನವ ತರುಣಿ. ಓದುವಾಗ ಸುಪ್ತವಾಗಿದ್ದ ಕನಸುಗಳು ಹೃದಯದಲ್ಲಿ ಗರಿಗೆದುರತೊಡಗಿದ್ದವು ನನಗರಿವಿಲ್ಲದಂತೆ.
ಜಲೀಲ್ ಇನ್ನೇನು ಭಾರತಕ್ಕೆ ಮರಳುತ್ತಾನೆ ಎಂದು ಅಂದುಕೊಂಡದ್ದು ಸುಳ್ಳಾಗಲು ಬಹಳ ದಿನ ಹಿಡಿಯಲಿಲ್ಲ. ಅವ ಬರ ಬರುತ್ತ ನನ್ನ ಜೊತೆ ಫೋನಿನಲ್ಲಿ ಮಾತಾಡುವುದನ್ನು ದಿನದಿಂದ ದಿನಕ್ಕೆ ಕಡಿಮೆ ಮಾಡಿ, ಕೊನೆಗೊಂದು ದಿನ ನನ್ನ ಜೊತೆ ಮಾತಾಡುವುದನ್ನೇ ಬಿಟ್ಟ. ಫೋನು ನಂಬರು ಬದಲಿಸಿಕೊಂಡಿದ್ದ. ಅತ್ತೆ-ಮಾವನವರನ್ನು ಕೇಳಿದರೆ, ಅವರು ಅವನ ಫೊನ್ ನಂಬರನ್ನು ಕೊಡಲಿಲ್ಲ. ಅವ ಇನ್ನೆರಡು ವರ್ಷ ಯು.ಎಸ್.ನಲ್ಲಿಯೇ ಇರುತ್ತಾನೆ ಎಂಬ ಬಾಂಬನ್ನೂ ಸಿಡಿಸಿದರು. ಇದರಲ್ಲೇನೋ ಕುತಂತ್ರ ಇದೆಯೆಂದು ನನಗೆ ಅನಿಸತೊಡಗಿತ್ತು. ಅಷ್ಟರಲ್ಲಿ ನನಗೆ ಈಗಿರುವ ಪ್ರೌಢಶಾಲೆಯಲ್ಲಿ ಶಿಕ್ಷಕಿಯೆಂದು ಕೆಲಸ ಸಿಕ್ಕಿತ್ತು.
ನನ್ನ ಮತ್ತು ಜಲೀಲನ ನಡುವಿನ ಸಂಪರ್ಕ ಕಡಿದು ಹೋಗಿತ್ತು. ನನ್ನ ಕನಸುಗಳು ಕಮರಿ ಹೋಗಿದ್ದವು. ನನಗೆ ಇಪ್ಪತ್ತೆಂಟು ತುಂಬಿದ್ದಾಗ ಜಲೀಲ್ ಊರಿಗೆ ಬಂದಿದ್ದ. ಬರುವಾಗ ಯು.ಎಸ್.ನಿಂದ ಬಿಳಿ ಜಿರಳೆ ಒಂದನ್ನು ಅಂಟಿಸಿಕೊಂಡೇ ಬಂದಿದ್ದ. ಈ ಜಿರಳೆಯನ್ನು ಅವ ನಾಲ್ಕು ವರ್ಷಗಳ ಹಿಂದೆನೇ ತಳುಕು ಹಾಕಿಕೊಂಡಿದ್ದನಂತೆ. ಹದಿನೆಂಟು-ಇಪ್ಪತ್ತಕ್ಕೇ ಮದುವೆಯಾಗಬೇಕಿದ್ದ ನಾ ನನ್ನ ಜೀವನದ ಸುವರ್ಣಕಾಲವನ್ನು ಜಲೀಲಗಾಗಿ ವ್ಯರ್ಥ ಮಾಡಿಕೊಂಡಿದ್ದೆ. ನನ್ನ ಕನಸುಗಳು ಆಗ ನುಚ್ಚು ನೂರಾಗಿದ್ದವು. ನಾಗರಹಾವು ಸಿನಿಮಾದ ವಿಲನ್ ಜಲೀಲನಂತೆ ಇವ ನನ್ನ ಜೀವನದಲ್ಲಿ ವಿಲನ್ ಆದ. ನನ್ನ ಮನಸ್ಸಿಗಾದ ಆಘಾತ, ನನ್ನ ರಂಪಾಟ ಕೇಳುವವರಾರೂ ಇದ್ದಿಲ್ಲ. ನಿನ್ನ ತಂದೆ-ತಾಯಿಗಳು ನಿನ್ನನ್ನು ಸಮಾಧಾನ ಮಾಡಿದಂತೆ ನನ್ನ ತಂದೆ-ತಾಯಿಗಳೂ ಸಮಾಧಾನ ಮಾಡಿದ್ದರು.
ನಮ್ಮ ಧರ್ಮದಲ್ಲಿ ನಾಲ್ಕು ಜನ ಹೆಂಡಿರನ್ನು ಮಾಡಿ ಕೊಳ್ಳುವುದಕ್ಕೆ ಅವಕಾಶ ಮತ್ತು ಸಮ್ಮತಿ ಇರುವುದರಿಂದ ಬೇಕಾದರೆ ನಾ ನಿಲೋಫರ್ಳನ್ನು 2ನೇ ಹೆಂಡತಿಯನ್ನಾಗಿ ಸ್ವೀಕರಿಸುವೆ. ಅವಳಲ್ಲಿ ತಿಂಗಳಿಗೆ ಒಂದೆರಡು ಸಾರೆ ಹೋಗಿ ಬರುವೆ. ನೌಕರಿಯಿಂದ ಬರುವ ಸಂಬಳದ ಹಣವನ್ನು ತಿಂಗಳು, ತಿಂಗಳು ತಪ್ಪದೇ ನನಗೆ ತಂದು ಕೊಡಬೇಕು ಎಂದು ಜಲೀಲ್ ಬೇರೆಯವರ ಕಡೆಯಿಂದ ಹೇಳಿಕಳುಹಿಸಿ, ನನ್ನನ್ನು ಅನುಭವಿಸಬೇಕೆನ್ನುವ ತನ್ನ ಚಪಲ ಮತ್ತು ಧೂರ್ತ ಬುದ್ಧಿಯನ್ನು ವ್ಯಕ್ತಪಡಿಸಿದ್ದ. ಇಂಥಹ ನೀಚ ಮನುಷ್ಯಗೆ ನಾ ತೆರೆದುಕೊಳ್ಳುವುದಿಲ್ಲವೆಂದು ನೇರವಾಗಿ ಹೇಳಿ ಕಳುಹಿಸಿದ್ದೆ. ಅಂದಿನಿಂದ ಅವನ್ಯಾರೋ, ನಾನ್ಯಾರೋ? ಮಮತಾ, ಇದೇ ನೋಡು ನನ್ನ ಕತೆ ಎಂದು ಹೇಳಿ ನಿಟ್ಟುಸಿರು ಬಿಟ್ಟಳು ನಿಲೋಫರ್. ಆತ್ಮೀಯತೆಯಿಂದ ಅವಳ ಹೆಗಲ ಮೇಲೆ ಕೈ ಹಾಕಿ, ಬೆನ್ನು ನೇವರಿಸುತ್ತಾ ಸಮಾಧಾನ ಮಾಡಲು ಪ್ರಯತ್ನಿಸಿದೆ. ಪಾಕರ್ಿಂದ ರೂಮಿಗೆ ಬಂದ ನಾವು ಪರಸ್ಪರ ತಬ್ಬಿ ಹಿಡಿದುಕೊಂಡಿದ್ದೆವು ಎಷ್ಟೋ ಹೊತ್ತಿನವರೆಗೆ. ಎಷ್ಟೋ ವರ್ಷಗಳಿಂದ ಪರಿಚಯವಿರುವ ಗೆಳತಿಯರಂತೆ ನಾವು ಆತ್ಮೀಯರಾಗಿ ಬಿಟ್ಟೆವು.
ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಕೆಲಸ ಮುಗಿಸಿಕೊಂಡು ಬೆಂಗಳೂರಿನಿಂದ ಊರಿಗೆ ಬಂದ ಮೂರನೇ ದಿನ ಅದು. ಪ್ರಯಾಣದ ಆಯಾಸ, ಕೆಲಸದ ಒತ್ತಡ ಎಂದು ದೇಹ ಮತ್ತು ಮನಸ್ಸು ದಣಿದಿದ್ದರಿಂದ ಎರಡು ದಿನ ಭರ್ಜರಿಯಾಗಿ ರೆಸ್ಟ್ ಮಾಡಿದ್ದೆ. ಬರೀ ಊಟ, ನಿದ್ದೆಗಳ ಕಾರ್ಯಕ್ರಮ ಸಾಂಗವಾಗಿ ನಡೆದಿತ್ತು. ಮೂರನೇ ದಿನ ಬೆಳಿಗ್ಗೆ ಎದ್ದಾಗ ನೆನಪಾಗಿತ್ತು ಅಂದು ಗೌರಿಶಂಕರನ ಜನ್ಮ ದಿನ ಎಂದು. ಅವನಿಗೆ ಶುಭಾಷಯ ಹೇಳಬೇಕಾಗಿತ್ತು. ಗೌರಿಗೆ ಫೋನಾಯಿಸಿದೆ. ಅವನ ಫೋನು ರಿಂಗಾಗುತ್ತಿತ್ತು. ಆದರೆ ಗೌರಿ ಫೋನನ್ನು ರಿಸೀವ್ ಮಾಡುತ್ತಿಲ್ಲ. ಇನ್ನೇನು ರಿಂಗ್ ಕಟ್ ಆಗುವ ಹಂತದಲ್ಲಿತ್ತು. ಫೋನ್ ಕಾಲ್ ರಿಸೀವ್ ಆಯಿತು. ನಾ ಸಂತೋಷದ ಭರದಲ್ಲಿ ಹಲೋ ಎಂದೆ. ಆ ಕಡೆಯಿಂದಲೂ ಹಲೋ ಎಂದು ಹೆಣ್ಣಿನ ಮಧುರ ಧ್ವನಿ ಕೇಳಿಸಿದಾಗ ನನಗೆ ಗಾಬರಿ ಮತ್ತು ಅಚ್ಚರಿ. ಆದರೂ ಧ್ಯೆರ್ಯಗೆಡದೇ, ಗೌರಿಶಂಕರ್ ಅವರು ಇದ್ದಾರೆಯೇ? ಎಂದು ಕೇಳಿದೆ.
ಇದ್ದಾರೆ. ಅವರು ಸ್ನಾನಕ್ಕೆ ಹೋಗಿದ್ದಾರೆ. ಅವರು ಬಂದ ಮೇಲೆ ನೀವು ಯಾರು ಅಂತ ಅವರಿಗೆ ಹೇಳಲಿ? ಅವರು ಕೇಳಿದ ಪ್ರಶ್ನೆಗೆ ಉತ್ತರಿಸದೇ ನಾ, ಮೇಡಂ, ನೀವೂ....? ಎಂದೆ.
ನಾ ಅವರ ಹೆಂಡತಿ ಲಲಿತಾ ಎಂದಳು ಆಕೆ.
ಇಂದು ಸರ್ರ ಬರ್ತಡೇ ಅಲ್ಲವಾ? ಶುಭಾಷಯ ಹೇಳಬೇಕೆಂದು ಫೋನು ಮಾಡಿರುವೆ ಎಂದು ಹೇಳುವಷ್ಟರಲ್ಲಿ ಆ ಕಡೆಯಿಂದ, ಅಮ್ಮಾ, ನಮಗೆ ಬೋರ್ನವಿಟಾ ಹಾಕಿಕೊಡು ಎಂದು ಒಂದು ಗಂಡು ಮಗು ಮತ್ತು ಒಂದು ಹೆಣ್ಣು ಮಗು ಗಲಾಟೆ ಮಾಡುವ ಧ್ವನಿ ಕೇಳತೊಡಗಿತು. ನನ್ನ ಮಾತು ಅವರಿಗೆ ಸರಿಯಾಗಿ ಕೇಳದಾದವು. ಮಕ್ಕಳು ತುಂಬಾ ಗಲಾಟೆ ಮಾಡುತ್ತಿದ್ದಾರೆ. ಸ್ವಲ್ಪ ಹೊತ್ತು ಬಿಟ್ಟು ಮಾತಾಡಿರಿ ನೀವು ಎಂದು ಹೇಳುತ್ತಾ ಲಲಿತಾ ಫೊನನ್ನು ಕಟ್ ಮಾಡಿದಳು.
ಇಷ್ಟೆಲ್ಲಾ ಮಾತುಕತೆ ಆಗುವಷ್ಟರಲ್ಲಿ ನನಗೆ ಶಾಕ್ ಹೊಡೆದಂತಾಯಿತು. ನನ್ನ ಕೈ, ಕಾಲಲ್ಲಿನ ಶಕ್ತಿಯೇ ಉಡುಗಿ ಹೋದಂತಾಯಿತು. ನಿಂತಲ್ಲೇ ಕುಸಿದು ಕುಳಿತೆ. ಹಾಗೇ ನಾ ಎಷ್ಟು ಹೊತ್ತು ಕುಳಿತಿದ್ದೆನೋ ಏನೋ? ಅಮ್ಮ ಬಂದು ಎಚ್ಚರಿಸಿದಾಗಲೇ ನಾ ವಾಸ್ತವಕ್ಕೆ ಬಂದೆ. ಅಮ್ಮಾ, ತಲೆ ತುಂಬಾ ಸಿಡಿಯುತ್ತಿದೆ. ನಾ ಇನ್ನೂ ಸ್ವಲ್ಪ ಹೊತ್ತು ಮಲಗುವೆ. ನನ್ನ ಡಿಸ್ಟರ್ಬ ಮಾಡಬೇಡ ಎಂದು ಹೇಳುತ್ತಾ ನಾ ನನ್ನ ರೂಮು ಸೇರಿ ಹಾಸಿಗೆ ಮೇಲೆ ಉರುಳಿದೆ. ಈಗಿನ ಕಾಲದ ಹುಡುಗಿಯರ ನಡೆಯೇ ಗೊತ್ತಾಗುವುದಿಲ್ಲ ಎಂದು ಅಮ್ಮ ಹೇಳಿದ ಮಾತುಗಳು ನನ್ನ ಕಿವಿಗೆ ಬೀಳದೇ ಇರಲಿಲ್ಲ. ಕೇಳಿಸಿಯೂ ಕೇಳಿಸಿಕೊಳ್ಳದವಳಂತೆ ಸುಮ್ಮನಿದ್ದೆ. ದೈಹಿಕವಾಗಿ ನಾ ಹಾಸಿಗೆಯಲ್ಲಿ ಅಂಗಾತ ಮಲಗಿದ್ದರೂ ವಿಚಲಿತವಾಗಿದ್ದ ಮನಸ್ಸು ಒಳಗೊಳಗೇ ಅಳುತ್ತಿತ್ತು. ಮನಸ್ಸು ಜೀವನವೆಂಬ ಪುಸ್ತಕದ ಹಿಂದಿನ ಪುಟಗಳನ್ನು ತಿರುವಿ ಹಾಕತೊಡಗಿತು.
ಅಂದು ನಾನು, ನಿಲೋಫರ್ ಇಬ್ಬರೂ ನಮ್ಮ ಕಷ್ಟ-ಸುಖ ಹಂಚಿಕೊಂಡ ಮೇಲೆ ಬಹಳ ಆತ್ಮೀಯರಾಗಿ ಬಿಟ್ಟೆವು. ಮರುದಿನ ನಾ, ನಿಲೋಫರ್, ನನ್ನ ಮನದಲ್ಲೊಂದು ಬಹಳ ದಿನದ ಆಸೆ ಇದೆ. ಸೋಮನಾಥಪುರ, ತಲಕಾಡು, ಮಲೈ ಮಹಾದೇಶ್ವರ ಬೆಟ್ಟ, ದೇವಸ್ಥಾನ ನೋಡಬೇಕೆಂಬ ತುಡಿತ ಇದೆ. ನಮ್ಮ ಮೌಲ್ಯಮಾಪನದ ಕಾರ್ಯಕ್ರಮ ಮುಗಿದ ನಂತರ ಹೋಗೋಣ. ನೀನು ನನಗೆ ಕಂಪನಿ ಕೊಡಬೇಕು ಎಂದೆ ಆತ್ಮವಿಶ್ವಾಸದಿಂದ ಅವಳು ಬಂದೇ ಬರುತ್ತಾಳೆ ಎಂದು ಅಂದುಕೊಂಡು.
ಅಯ್ಯೋ ಸಾರಿ ಮಮತಾ. ನಿಜವಾಗಿ ನನಗೆ ನಿನ್ನ ಜೊತೆಗೆ ಬರಬೇಕೆಂದು ಮನಸ್ಸಿರುವುದಾದರೂ, ನಮ್ಮ ಈ ಕೆಲಸ ಮುಗಿದ ಕೂಡಲೇ ನಾ ಇಲ್ಲಿನ ನನ್ನ ಬಾಲ್ಯದ ಗೆಳತಿಯೊಬ್ಬಳ ಜೊತೆ ಸಮಯ ಕಳೆಯಬೇಕೆನ್ನುವ ಪ್ರೋಗ್ರ್ಯಾಂ ಮೊದಲೇ ನಿಶ್ಚಿತವಾಗಿದೆ. ಆದ್ದರಿಂದ ನನಗೆ ನಿನ್ನ ಜೊತೆ ಬರಲು ಆಗುತ್ತಿಲ್ಲ. ಸಾರಿ ಕಣೇ, ಕ್ಷಮಿಸಿಬಿಡು. ನಿಲೋಫರ್ಗೆ ತುಂಬಾ ಹಳಹಳಿಯಾಗಿತ್ತು.
ನಿಲೋಫರ್, ಡೋಂಟ್ ವರಿ, ನೋಡೋಣ ಹೇಗೂ ಇನ್ನೂ ಟೈಮಿದೆಯಲ್ಲಾ? ಎಂದು ನಾ ಹೇಳಿದ್ದೆ. ನಾ ಅಂದುಕೊಂಡಿದ್ದ ಸ್ಥಳಗಳನ್ನು ನೋಡುವುದಕ್ಕೆ ಆಗುತ್ತೋ ಇಲ್ಲವೋ ಎಂಬ ಚಿಂತೆ ನನ್ನ ಮನಸ್ಸನ್ನು ಕಾಡತೊಡಗಿದ್ದುದರಿಂದ ನಾ ಅಂದು ಕೊಂಚ ಡಲ್ಲಾಗೇ ಇದ್ದೇನೆಂದು ಅನಿಸುತ್ತಿತ್ತು.
ಮಧ್ಯಾಹ್ನ ನಾನು, ಗೌರಿಶಂಕರ್ ಮತ್ತು ನಿಲೋಫರ್ ಊಟ ಮಾಡುತ್ತಿರುವಾಗ, ಯಾಕೋ ಮಮತಾ ಮೇಡಂ ಇವತ್ತು ಡಲ್ಲಾಗಿದ್ದಾರೆ ಎಂದು ಅನಿಸುತ್ತಿದೆ ಎಂದು ಗೌರಿಶಂಕರ್ ಅಂದಾಗ, ನಿಲೋಫರ್, ನನ್ನ ಪ್ರೋಗ್ರ್ಯಾಂದ ಬಗ್ಗೆ ತಿಳಿಸುತ್ತಾ, ನಮ್ಮಿಬ್ಬರ ಮಧ್ಯೆ ಬೆಳಿಗ್ಗೆ ಆದ ಮಾತುಕತೆಗಳನ್ನು ತಿಳಿಸುತ್ತಾ, ಬಹುಶಃ ಅದಕ್ಕೇ ಡಲ್ಲಾಗಿರಬೇಕು ಎಂದು ನನ್ನ ಅನಿಸಿಕೆ ಎಂದು ತಿಳಿಸಿದಳು.
ಮಮತಾ ಮೇಡಂ, ಅದಕ್ಯಾಕೆ ಅಷ್ಟು ನಿರಾಶರಾಗಿರುವಿರಿ? ನೀವು ಹೂಂ ಅಂದರೆ ನಾ ನಿಮಗೆ ಕಂಪನ ಕೊಡುವೆ ಎಂದು ಗೌರಿಶಂಕರ್ ಹೇಳಿದಾಗ ನನಗೆ ಸಂತೋಷವೆನಿಸತೊಡಗಿತು. ಗೌರಿಶಂಕರರ ಬಗ್ಗೆ ಅಭಿಮಾನ ಮೂಡತೊಡಗಿದರೂ, ಒಂಟಿ ಗಂಡಸಿನ ಜೊತೆಗೆ ಹೋಗುವುದು ಸೂಕ್ತವೋ ಅಲ್ಲವೋ ಎಂಬ ವಿಚಾರ ಮನದಲ್ಲಿ ಹೊಳೆದು ಹೋಯಿತು. ಆದರೆ ಈಗಿನ ಕಾಲದಲ್ಲಿ ಹೆಣ್ಣು ಒಂಟಿಯಾಗಿ ತಿರುಗುವುದು ಅನಿವಾರ್ಯವಾಗಿದೆ. ಧ್ಯೆರ್ಯ, ಸ್ವಂತಿಕೆ ಇದ್ದರೆ ಸಾಕು ಎಂದು ಅಂದುಕೊಂಡೆ ಮನದಲ್ಲಿ ಒಂದು ಕ್ಷಣ.
ಗೌರಿಶಂಕರ್ ಅವರೇ, ತುಂಬಾ ಧನ್ಯವಾದಗಳು. ಆಯಿತು ಇಬ್ಬರೂ ಕೂಡಿ ಹೋಗಿ ಬರೋಣ. ಪ್ರೋಗ್ರ್ಯಾಂದ ಬಗ್ಗೆ ನಂತರ ಫೈನಲ್ ಮಾಡಿಕೊಳ್ಳೋಣ ಎಂದು ನಾ ಹೇಳಿದರೆ, ನನ್ನ ಮಮತಾಳ ಸಮಸ್ಯೆ ಸಾಲ್ವ್ ಮಾಡಿದ್ದಕ್ಕೆ ಶುಕ್ರಿಯಾ ಸರ್ ಎಂದು ನಿಲೋಫರ್ ಸಹ ಧ್ವನಿಗೂಡಿಸಿದಳು.
ಮುಂದಿನ ಎರಡು ದಿನಗಳಲ್ಲಿ ಗೌರಿಶಂಕರ್ ನನಗೆ ತುಂಬಾ ಆತ್ಮೀಯನಾದ. ಏಕವಚನದಲ್ಲಿ ಮಾತಾಡುವಷ್ಟರ ಮಟ್ಟಿಗೆ ಹತ್ತಿರನಾದ. ನಾನು, ನಿಲೋಫರ್ ಅವನನ್ನು ಗೌರಿ ಎಂದು ಮುದ್ದಾಗಿ ಕರೆಯತೊಡಗಿದೆವು. ಅವನಿಗೂ ನಮ್ಮ ಮಾತಿನಿಂದ ಖುಷಿಯಾಗುತ್ತಿತ್ತು.
ಗೌರಿಶಂಕರನ ನಯ, ವಿನಯ, ಕಳಕಳಿ, ಆತ್ಮೀಯತೆ ನನಗೆ ತುಂಬಾ ಹಿಡಿಸಿಬಿಟ್ಟವು. ದಿನಾಲೂ ಸಾಯಂಕಾಲ ನಾನು, ಗೌರಿ ಮತ್ತು ನಿಲೋಫರ್ ಅಲ್ಲಿ, ಇಲ್ಲಿ ಸುತ್ತಾಡಿ ಬರುತ್ತಿದ್ದೆವು. ಒಂದೆರಡು ದಿನ ಮೆಜೆಸ್ಟಿಕ್, ದೊಡ್ಡ ದೊಡ್ಡ ಮಾಲ್ಗಳಿಗೆ ಹೋಗಿಬಂದೆವು. ಈ ಸುತ್ತಾಟ ನಮ್ಮನ್ನು ಇನ್ನೂ ಹತ್ತಿರ ತಂದಿದ್ದವು. ಅವನ ನಡೆ, ನುಡಿ, ರೂಪ ನನ್ನ ಹೃದಯಕ್ಕೆ ಲಗ್ಗೆ ಇಡತೊಡಗಿದ್ದವು.
ನಮ್ಮ ಕೆಲಸ ಮುಗಿದ ನಂತರ ನನ್ನ, ನಿಲೋಫರ್ಳ ಅಗಲುವಿಕೆ ಹೃದಯಸ್ಪಶರ್ಿಯಾಗಿತ್ತು. ಏನೇ ಬರಲಿ, ಈ ವರ್ಷ ತಾನು ಮದುವೆ ಮಾಡಿಕೊಳ್ಳುವುದಾಗಿ ನಿಲೋಫರ್ ಹೇಳಿ ಆಶಾದಾಯಕ ಬೆಳವಣಿಗೆಗೆ ನಾಂದಿ ಹಾಡಿದಳು ನಮ್ಮಿಂದ ಬೀಳ್ಕೊಡುವಾಗ. ಹಾಗೇ, ನೀನೂ ಸಹ ಆದಷ್ಟು ಬೇಗ ಮದುವೆ ಮಾಡಿಕೊಳ್ಳಬೇಕು ಎಂದು ನನಗೆ ಹೇಳಿ ನನ್ನಿಂದ ಪ್ರಮಾಣ ಮಾಡಿಸಿಕೊಂಡ ಆಕೆಯ ಮೊಗದಲ್ಲಿ ತೃಪ್ತಿಯ ಛಾಪು ಇತ್ತು. ನಾನ್ಯಾರೋ, ನಿಲೋಫರ್ ಯಾರೋ? ಆದರೆ ಕೆಲವು ದಿನಗಳ ಪರಿಚಯದಲ್ಲಿ ಅದೆಂಥಹ ಆತ್ಮೀಯತೆ ಬೆಳೆದಿತ್ತು ನಮ್ಮಿಬ್ಬರಲ್ಲಿ?
ಬೆಂಗಳೂರಿನ ಈ ಸವಿನೆನಪುಗಳನ್ನು ಮೆಲುಕು ಹಾಕುತ್ತಾ, ನಾ ಗೌರಿಶಂಕರನೊಂದಿಗೆ ಮೈಸೂರು ಬಸ್ಸು ಏರಿದ್ದೆ. ಮೊದಲ ದಿನ ನಾವಿಬ್ಬರೂ ನೇರವಾಗಿ ಮಲೈ ಮಹಾದೇಶ್ವರಕ್ಕೆ ಹೊರಟೆವು. ಮಲೈ ಮಹಾದೇಶ್ವರ ಬೆಟ್ಟದ ಹಸಿರು ವರ್ಣದ ದಟ್ಟ ಕಾಡು, ಅಂಕುಡೊಂಕಾದ ರಸ್ತೆಗಳು ನಮ್ಮ ಮನ ಸೂರೆಗೊಳ್ಳುತ್ತಿದ್ದವು. ಮಮತಾ, ಅಲ್ಲಿ ನೋಡು, ಆ ಬೆಟ್ಟ ಹೇಗಿದೆ? ಆ ಗಿಡ ಮರಗಳು ಹೇಗಿವೆ? ಎಂದು ಗೌರಿ ನನ್ನ ಗಮನ ಪ್ರಕೃತಿಯ ಕಡೆಗೆ ಸೆಳೆಯುತ್ತಿದ್ದ. ದಂತ ಚೋರ ವೀರಪ್ಪನ್ನ ನೆನಪು ಬಂದಿತ್ತು ಇಬ್ಬರಿಗೂ. ಮಹಾದೇಶ್ವರನ ದರ್ಶನ ಪಡೆದುಕೊಂಡು ಅಂದು ವಾಪಾಸು ಮೈಸೂರಿಗೆ ಬರುವಷ್ಟರಲ್ಲಿ ಸಂಜೆಯಾಗಿತ್ತು.
ನನಗಂತೂ ಗೌರಿ ತುಂಬಾ ಹಿಡಿಸಿಬಿಟ್ಟಿದ್ದ. ಕೆಲವು ಕಡೆಗಳಲ್ಲಿ ಅವನ ಕೈಗಳಲ್ಲಿ ನನ್ನ ಕೈಗಳನ್ನು ತಳುಕಿ ಹಾಕಿಕೊಂಡು ತಿರುಗಾಡಬೇಕೆಂದು ಅನಿಸುತ್ತಿದ್ದರೂ, ಸ್ವಲ್ಪೇ ದಿನಗಳ ಪರಿಚಯದಲ್ಲಿ ಇದು ಸರಿಯಲ್ಲ ಎಂದು ಅನಿಸಿದುದರಿಂದ ಸಂಯಮದಿಂದ ತಡೆದುಕೊಳ್ಳುತ್ತಿದ್ದೆ. ಅಂದು ನಾವಿಬ್ಬರೂ ಮೈಸೂರಿನಲ್ಲಿ ವಸ್ತಿ ಹಾಕಿದೆವು. ಹೋಟೆಲಿನಲ್ಲಿ ಒಂದೇ ರೂಮು ಮಾಡೋಣ ಎಂದು ಗೌರಿ ಒತ್ತಾಯ ಮಾಡಿದರೂ ನಾನು ಬೇಡವೆಂದು ಬೇರೆ ಬೇರೆ ರೂಮು ತೆಗೆದುಕೊಂಡೆವು. ಫ್ರೆಷ್ ಆಗಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದುಕೊಂಡು ಬಂದೆವು. ಗೌರಿ ನನ್ನನ್ನು ತುಂಬಾ ಹಚ್ಚಿಕೊಂಡಿದ್ದ. ಅಂದು ರಾತ್ರಿ ಊಟ ಮಾಡುವಾಗ ಗೌರಿ, ಮಮತಾ, ನೀ ತಪ್ಪು ತಿಳಿಯದಿದ್ದರೆ ನಾ ಒಂದು ಮಾತು ಹೇಳುವೆ ಎಂದಿದ್ದಕ್ಕೆ, ನಾನು ಹೇಳು ಗೌರಿ ಎಂದಾಗ, ಅವ, ನಾನು ನಿನ್ನನ್ನು ಇಷ್ಟ ಪಟ್ಟಿದ್ದೇನೆ ಮಮತಾ. ಆಯ್ ಲವ್ ಯು ಆಲ್ಸೋ ಎಂದ.
ಗೌರಿ, ನೀ ನನಗೆ ಇಷ್ಟವಾಗಿರುವಿ. ಆಯ್ ಟೂ ಲವ್ ಯು ಎಂದಾಗ ಗೌರಿಗೆ ತುಂಬಾ ಖುಷಿಯಾಗಿತ್ತು.
2ನೇ ದಿನ ಬಸ್ಸಿನಲ್ಲಿ ಅಡ್ಡಾಡುವುದಕ್ಕೆ ಅನಾನುಕೂಲವಿದ್ದುದರಿಂದ ಟ್ಯಾಕ್ಸಿಯೊಂದನ್ನು ಬುಕ್ ಮಾಡಿಕೊಂಡು ಹೊರಟೆವು. ಮೊದಲು ಸೋಮನಾಥ ಪುರದ ದೇವಸ್ಥಾನವನ್ನು ನೋಡಿದೆವು. ಮುಂದೆ ಗಂಗರ ತಲಕಾಡು, ತಲಕಾಡಿನ ಪಂಚಲಿಂಗೇಶ್ವರ ದೇವಸ್ಥಾನ, ಅಲಮೇಲಮ್ಮನ ಶಾಪದ ಕುರುಹಾಗಿರುವ ಮರಳುಗಾಡನ್ನು ವೀಕ್ಷಿಸಿದೆವು. ಮರಳುಗಾಡಿನಲ್ಲಿ ತಿರುಗಾಡುವಾಗ ನಾನು, ಗೌರಿ ಇಬ್ಬರೂ ಕೈ ಕೈ ಹಿಡಿದುಕೊಂಡು ತಿರುಗಾಡಿ ಸಕತ್ ಎಂಜಾಯ್ ಮಾಡಿದೆವು. ತಲಕಾಡಿಂದ ವಾಪಾಸಾಗುವಾಗ ತಿರುಮಕೂಡಲು ನರಸೀಪುರದಲ್ಲಿನ ತ್ರಿವೇಣಿ ಸಂಗಮದ ನಯನ ಮನೋಹರ ದೃಷ್ಯ ನೋಡಿ ಆನಂದಿಸಿದೆವು. ಕಪಿಲಾ, ಕಾವೇರಿ, ಗುಪ್ತ ಗಾಮಿನಿ ಸರಸ್ವತಿ ನದಿಗಳ ವೈಯಾರ ಮನಸ್ಸಲ್ಲಿ ತುಂಬಿಕೊಂಡೆವು.
ಸಾಯಂಕಾಲ ಮೈಸೂರಿಗೆ ಮರಳಿದ ನಂತರ, ಇವತ್ತಾದರೂ ಒಂದೇ ರೂಮಿನಲ್ಲಿ ಇರೋಣವೇ? ಹೇಗೂ ಇಬ್ಬರೂ ಪರಸ್ಪರ ಪ್ರೀತಿಸುತ್ತಿರುವುದನ್ನು ಒಪ್ಪಿಕೊಂಡಿದ್ದೇವೆ. ಆದಷ್ಟು ಬೇಗ ಮದುವೆಯಾಗೋಣ. ಮದುವೆಗೆ ಮುಂಚೆ ಸೆಕ್ಸ್ ಎಂಜಾಯ್ ಮಾಡಿದರೆ ಬಹಳಷ್ಟು ಥ್ರಿಲ್ ಇರುತ್ತದೆ ಎಂದು ಕೇಳಿದ್ದೇನೆ. ನಾವೂ ಟೆಸ್ಟ್ ಮಾಡಿ ಟೇಸ್ಟ ನೋಡೋಣ ಎಂದು ಗೌರಿ ನನ್ನಲ್ಲಿ ಆಸೆ ಹುಟ್ಟಿಸತೊಡಗಿದ. ನನಗೆ ಗಲಿಬಿಲಿಯಾದಂತಾಗಿ ಯೋಚನೆಯಲ್ಲಿ ಮುಳುಗಿದ್ದೆ ಸ್ವಲ್ಪ ಹೊತ್ತು.
ಈ ಇಪ್ಪತ್ತೊಂಭತ್ತು ವರ್ಷಗಳ ನನ್ನ ಜೀವನದಲ್ಲಿ ನನ್ನತನವನ್ನು ಕಾಪಾಡಿಕೊಂಡು ಬಂದಿದ್ದೇನೆ. ಇಲ್ಲಿಯವರೆಗೆ ಪವಿತ್ರ ಭಾವನೆಗಳನ್ನು ರೂಢಿಸಿಕೊಂಡು ಬಂದಿರುವ ನಾನು ಈಗೇಕೆ ಎಡವಬೇಕು? ಹೇಗೂ ನಾನು ಜೀವನದಲ್ಲಿ ಸೆಟ್ಲ್ ಆಗುವ ಹಂತಕ್ಕೆ ತಪುಪಿದ್ದೇನೆ. ಈಗ ಅವಸರ ಮಾಡುವ ಅಗತ್ಯವಿಲ್ಲ ಅಲ್ಲವೇ? ಆದಷ್ಟು ಬೇಗ ಹಿರಿಯರಿಗೆ ವಿಷಯ ತಿಳಿಸಿ ನನ್ನ ಮತ್ತು ಗೌರಿಯ ಮದುವೆ ಫಿಕ್ಸ್ ಮಾಡಿಸಿಕೊಂಡರಾಯಿತು. ಕೊರಳಿಗೆ ತಾಳಿ ಬಿದ್ದ ಮೇಲೆಯೇ ಗೌರಿಗೆ ಮೈ ಒಪ್ಪಿಸುವುದು ಸರಿ ಎಂಬ ಯೋಚನೆ ಬಂದ ಕೂಡಲೇ, ಗೌರಿ, ನಾವಿಬ್ಬರೂ ಪ್ರೀತಿಸುತ್ತಿರುವುದು ನಿಜವಾಗಿರುವಾಗ ಅವಸರವೇಕೆ? ಊರಿಗೆ ವಾಪಾಸು ಹೋದನಂತರ ನಮ್ಮ, ನಮ್ಮ ತಂದೆ-ತಾಯಿಯವರಿಗೆ ವಿಷಯ ತಿಳಿಸಿ ಆದಷ್ಟು ಬೇಗ ಮದುವೆಯಾಗೋಣ. ಅಲ್ಲಿಯವರೆಗೆ ನೀ ಇಷ್ಟಕ್ಕೇ ತೃಪ್ತಿ ಪಟ್ಟುಕೋ ಎಂದು ಹೇಳುತ್ತಾ ನಾ ಅವನ ಕೆನ್ನೆಗೆ ನವಿರಾಗಿ ಮುತ್ತೊಂದನ್ನು ಕೊಟ್ಟು ಅವನ ಆಸೆಯ ಮನಕ್ಕೆ ನಿರಾಶೆ ಮಾಡಿದ್ದೆ. ಮರುದಿನ ಬೆಳಿಗ್ಗೆ ನಾವು ನಮ್ಮ, ನಮ್ಮ ಊರಿಗೆ ಪ್ರಯಾಣ ಮುಂದುವರಿಸಿದೆವು. ಹೊಸಪೇಟೆಯವರೆಗೆ ಇಬ್ಬರೂ ಜೊತೆಯಾಗಿಯೇ ಪ್ರಯಾಣಿಸಿದ್ದೆವು. ಹೊಸಪೇಟೆಯಲ್ಲಿ ಪರಸ್ಪರ ಬೈ ಹೇಳಿ ಬೇರೆ ಬೇರೆ ಬಸ್ಸು ಏರಿದ್ದೆವು.
ಗೌರಿಶಂಕರನ ಹೆಂಡತಿಯೊಂದಿಗೆ ಮಾತಾಡಿದ ನಂತರ ನನಗೆ ಒಂದು ರೀತಿಯ ಆಘಾತವಾಗಿತ್ತು. ಗೌರಿಶಂಕರನ ನಯವಂಚಕತನ ಬಯಲಾಗಿತ್ತು. ಮೈಸೂರಿನಲ್ಲಿ ನಾನೇನಾದರೂ ಅವನ ಮಾತಿಗೆ ಮರುಳಾಗಿ ನನ್ನತನವನ್ನು ಕಳೆದುಕೊಂಡಿದ್ದರೆ......? ನನಗೆ ಊಹಿಸಲಿಕ್ಕೂ ಸಾಧ್ಯವಾಗುತ್ತಿಲ್ಲ. ಆ ವೇಳೆಯಲ್ಲಿ ನನಗೆ ಸದ್ಬುದ್ಧಿ ಕೊಟ್ಟ ಆ ಅಗೋಚರ ಶಕ್ತಿಗೆ ನಾ ಕೋಟಿ, ಕೋಟಿ ಧನ್ಯವಾದ ತಿಳಿಸುತ್ತಾ, ಈ ವಿಷಯವನ್ನು ನಿಲೋಫರ್ಳೊಂದಿಗೆ ಹಂಚಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳಬೇಕೆಂದು ಅವಳಿಗೆ ಫೋನಾಯಿಸಿದೆ.
ಎಸ್. ಶೇಖರಗೌಡ,
ಮುಖ್ಯ ವ್ಯವಸ್ಥಾಪಕರು,
ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಆರ್.ಸಿ.ಪಿ.ಸಿ., ಲಿಂಗಸ್ಗೂರು
(9448989332)

No comments:
Post a Comment
Thanku