Friday, June 15, 2012

ಸಮತಾ ಸಮಜದ ಕನಸುಗಾರ ಬಿ.ವಿ ಕಕ್ಕಿಲಾಯ

        ಸಮತಾ ಸಮಜದ ಕಲ್ಪನೆಯೊಂದಿಗೆ ಏಳು ದಶಕಗಳ ಕಾಲ ನಿರಂತರವಾಗಿ ಕರಾವಳಿಯ ಸಮಸ್ಯೆಗಳಿಗೆ ರಾಜ್ಯ, ದೇಶದ ಆಗು ಹೋಗುಗಳ ಬಗ್ಗೆ ತಮ್ಮ ಬ್ಲಾಗ್,ಸಾರ್ವಜನಿಕ ಸಭೆ ಸಮಾರಂಭಗಳ ಮೂಲಕ ಹಲವು ಬಾರಿ ಬೀದಿಗಿಳಿದು ನಿರಂತರವಾಗಿ ಸ್ಪಂದಿಸುತ್ತಿದ್ದ ಬೇವಿಂಜೆ ವಿಷ್ಣು ಕಕ್ಕಿಲ್ಲಾಯರು ದಣಿವರಿಯದ ಹೋರಾಟಗಾರರಾಗಿದ್ದವರು.
    ಬಿ.ವಿ. ಕಕ್ಕಿಲ್ಲಾಯರು ವ್ಯಕ್ತಿಯಲ್ಲ ನಮಗೊಂದು ಸ್ಫೂತರ್ಿಯ ಶಕ್ತಿಯಾಗಿದ್ದರು ಎನ್ನುವುದು ಅವರ ಒಡನಾಡಿಗಳ ಅಭಿಮಾನದ ಮಾತುಗಳು. ಸ್ವಾತಂತ್ರ ಹೋರಾಟಗಾರರಾಗಿದ್ದ ಅವರು 1947ರ ಮೊದಲು ಸ್ವಾತಂತ್ರಕ್ಕೆ ತಮ್ಮ ಹೋರಾಟವನ್ನು ಕೇಂದ್ರೀಕರಿಸಿದರೆ, ನಂತರದ ದಿನಗಳಲ್ಲಿ ಭೂಹೀನರು, ರೈತರು, ಬೀಡಿ ಕಾಮರ್ಿಕರು, ಹಂಚಿನ ಕಾಖರ್ಾನೆಯಲ್ಲಿ ದುಡಿಯುತ್ತಿದ್ದ ಹಾಗೂ ಶೋಷಿತ ಸಮಾಜದ ಎಲ್ಲಾ ಜನಸಮುದಾಯದ ಬಗ್ಗೆ ಧ್ವನಿಯೆತ್ತಿದವರು. ಕಕ್ಕಿಲ್ಲಾಯರು ಅಪ್ಪಟ ಜಾತ್ಯ ತೀತ ನಿಲುವಿನೊಂದಿಗೆ, 2 ಬಾರಿ ಶಾಸಕರಾಗಿ, 1 ಬಾರಿ ಸಂಸದರಾಗಿದ್ದರೂ ಭ್ರಷ್ಟಾಚಾರದ ಕಳಂಕ ಹೊಂದದ, ಸ್ವಚ್ಛ ಚಾರಿತ್ರದ ಮಾದರಿ ರಾಜಕಾರಣಿಯಾಗಿದ್ದರು.
ಬಿ.ವಿ.ಕಕ್ಕಿಲ್ಲಾಯರೇ ಹೇಳಿಕೊಂಡಂತೆ....
    ಕುವೆಂಪುರವರ ನಿಲುವಿನ ಬಗ್ಗೆ ಅಪಾರ ಗೌರವ ಹೊಂದಿದ್ದ ಕಕ್ಕಿಲ್ಲಾಯರು ಅವರ ಮಾನವತಾವಾದದ ವೈಚಾರಿಕ ನಿಲುವನ್ನು ಹಲವು ಕಡೆಗಳಲ್ಲಿ ಪುನರುಚ್ಚರಿಸಿದ್ದರು. ಕಳೆದ ವರ್ಷ ಜೂನ್ ತಿಂಗಳಲ್ಲಿ ರಾಜ್ಯದ ಇಬ್ಬರು ರಾಜಕೀಯ ಪಕ್ಷದ ಪ್ರಮುಖ ನಾಯಕರು ಧರ್ಮಸ್ಥಳದಲ್ಲಿ ಆಣೆ, ಪ್ರಮಾಣಕ್ಕೆ ಇಳಿದಾಗ ಕಕ್ಕಿಲ್ಲಾಯರು ಅದನ್ನು ವಿರೋಧಿಸಿದರು.
    ಧರ್ಮ ಮತ್ತು ಧಾಮರ್ಿಕ ಸಂಸ್ಥೆಗಳನ್ನು ನಾನು ನಿಂದಿಸುವುದಿಲ್ಲ ಧರ್ಮದ ಹೆಸರಿನಲ್ಲಿ ನಡೆಯುವ ಅಧರ್ಮದ ಬಗ್ಗೆ ನನಗೆ ಮುನಿಸಿದೆ. ನಿಜವಾದ ಧರ್ಮಕ್ಕೆ ನಾನು ತಲೆ ಬಾಗಿತ್ತೇನೆ, ಕೈ ಮುಗಿಯುತ್ತೇನೆ... ಎನ್ನುತ್ತಾ ಈ ಬಗ್ಗೆ ಬಹಳ ಹಿಂದೆ ಕುವೆಂಪುರವರು ಹೇಳಿದ ಮಾತುಗಳನ್ನೇ ಪುನರುಚ್ಚರಿಸಿದರು.
    ಜನಲೋಕಪಾಲ್ ಮಸೂದೆ ಜಾರಿಯಾಗಬೇಕು, ಲೋಕಪಾಲ್ ಬಲಗೊಳ್ಳಬೇಕು: ಸಂವಿಧಾನಬದ್ಧವಾದ ಪ್ರಜಾಪ್ರಭುತ್ವದಲ್ಲಿ ಲೋಕಪಾಲ ಮತ್ತು ಲೋಕಾಯುಕ್ತ ಪ್ರಮುಖ ಪಾತ್ರವಹಿಸಬೇಕಾಗಿದೆ. ಕಳೆದ 63 ವರ್ಷಗಳಲ್ಲಿ ಲೋಕಪಾಲ ಅಸ್ತಿತ್ವಕ್ಕೆ ಬಂದಿಲ್ಲ, ಕೆಲವು ರಾಜ್ಯಗಳಲ್ಲಿ ಲೋಕಾಯುಕ್ತವೂ ಇಲ್ಲ. ಇದ್ದರೂ ಆಯಾ ರಾಜ್ಯಗಳ ರಾಜ್ಯಸರಕಾರ ಅವುಗಳಿಂದ ಅಬಾಧಿತವಾಗಿದೆ. ಇದರಿಂದ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಒಳ ನುಸುಳಲು ಸಾಧ್ಯವಾಗಿದೆ. ನಮ್ಮ ದೇಶವನ್ನು ಆಳಿರುವ ಆಡಳಿತ ಪಕ್ಷಗಳು ಉದ್ದೇಶ ಪೂರ್ವಕವಾಗಿಯೇ ಈ ಪರಿಸ್ಥಿತಿಯನ್ನು ನಿಮರ್ಿಸಿವೆ. ಈ ಎಲ್ಲಾ ಕಾರಣಗಳಿಂದ ಲೋಕಾಯುಕ್ತ ಬಲಗೊಳ್ಳಬೇಕು. ಎಲ್ಲಾ ಜನರನ್ನೊಳಗೊಂಡ ಜನಲೋಕಪಾಲ ಮಸೂದೆ ಜಾರಿಯಾಗ ಬೇಕು... ಎನ್ನುವುದು ಬಿ.ವಿ.ಕಕ್ಕಿಲ್ಲಾಯರ ಆಶಯವಾಗಿತ್ತು.
    ಭಾರತದ ಚುನಾವಣಾ ವ್ಯವಸ್ಥೆ ಬದಲಾವಣೆ ಯಾಗಬೇಕು: ಪ್ರಪಂಚದ ವಿವಿಧ ದೇಶಗಳಲ್ಲಿ ವಿವಿಧ ಚುನಾವಣಾ ವ್ಯವಸ್ಥೆ ಜಾರಿಯಲ್ಲಿದೆ. 93 ದೇಶಗಳಲ್ಲಿ ಮತದಾನದಲ್ಲಿ ಅನುಪಾತದ ಆಧಾರದಲ್ಲಿ ಪಕ್ಷಗಳ ಶೇ. 50 ಅಭ್ಯಥರ್ಿಗಳನ್ನು ಆರಿಸಿ ಉಳಿದ ಶೇ. 50ರಷ್ಟು ಅಭ್ಯಥರ್ಿಗಳನ್ನು ಚುನಾವಣೆಯಲ್ಲಿ ಬಹುಮತದ ಮೂಲಕ ಆಯ್ಕೆ ಮಾಡುವ ಪದ್ಧತಿಯಿದೆ. ಭಾರತದಲ್ಲೂ ಈ ರೀತಿಯ ವ್ಯವಸ್ಥೆ ಜಾರಿಯಾಗಬೇಕು...ಎನ್ನುವುದು ಕಕ್ಕಿಲ್ಲಾಯರ ಅಭಿಮತ.
    ಅಡ್ವಾಣಿ, ರಾಮ್ದೇವ್, ಹಜಾರೆ ಹೋರಾಟಗಳ ಬಗ್ಗೆ ಎಚ್ಚರ : ಭ್ರಷ್ಟಾಚಾರದ ವಿರುದ್ಧ ಅಡ್ವಾಣಿ ಹೊರಡಿಸುತ್ತಿರುವ ರಥಯಾತ್ರೆ, ರಾಮ್ದೇವ್, ಹಝಾರೆಯೊಂದಿಗೆ ಸೇರಿ ನಡೆಸಲು ಹೊರಟಿರುವ ಹೋರಾಟಗಳ ಬಗ್ಗೆ ಜನ ಎಚ್ಚರದಿಂದ ಇರಬೇಕು. ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಭ್ರಷ್ಟಾಚಾರವನ್ನು ತಡೆಯಲು ಸಾಧ್ಯವಾಗದಿರುವ ಅಡ್ವಾಣಿ, ಭ್ರಷ್ಟಾಚಾರ ವಿರುದ್ಧ ಆರಂಭಿಸಿರುವ ರಥಯಾತ್ರೆ ಒಂದು ಪ್ರಹಸನ. ರಾಮ್ದೇವ್ರನ್ನು ಮುಂದಿರಿಸಿ ವಿದೇಶಿ ಬ್ಯಾಂಕ್ಗಳಲ್ಲಿರುವ ಹಣವನ್ನು ವಶಪಡಿಸಿಕೊಳ್ಳುವ ನೆಪದಲ್ಲಿ ದೇಶಾದ್ಯಂತ ಅಶಾಂತಿ ಹಬ್ಬಿಸಿ ಅಧಿಕಾರ ಹಿಡಿಯಲು ಬಿಜೆಪಿ ಹವಣಿಸುತ್ತಿದೆ. ಆದರೆ, ರಾಮ್ದೇವ್ ಬಂಧನದೊಂದಿಗೆ ಆ ಪ್ರಹಸನ ಅಂತ್ಯಗೊಂಡಿತು. ಬಳಿಕ ಅಣ್ಣಾ ಹಝಾರೆಯೊಂದಿಗೆ ನುಸುಳಿಕೊಂಡು ಭ್ರಷ್ಟಾಚಾರ ಚಳವಳಿಯ ಮೂಲಕ ಅವಕಾಶಕ್ಕಾಗಿ ಕಾಯುತ್ತಿರುವ ರಾಮ್ದೇವ್ ಬಗ್ಗೆ ಎಚ್ಚರದಿಂದಿರಬೇಕು ಇಂಥವರನ್ನು ಒಳಗೊಂಡ ಹೋರಾಟ ಒಂದು ರಾಜಕೀಯ ಗಿಮಿಕ್ ಎನ್ನುವುದು ಕಕ್ಕಿಲ್ಲಾಯರ ಟೀಕೆ.
ಕೈಗೂಡದ ಕಕ್ಕಿಲ್ಲಾಯರ ಆಶಯ
    ಎಡ ಪಕ್ಷಗಳನ್ನು ಒಂದುಗೂಡಿಸುವ ಬಿ.ವಿ. ಕಕ್ಕಿಲ್ಲಾಯರ ಆಶಯ ಮಾತ್ರ ಕೊನೆಗೂ ಕೈಗೂಡಲಿಲ್ಲ. ಕಕ್ಕಿಲ್ಲಾಯರು ಕೊನೆಯ ದಿನಗಳಲ್ಲಿ ಈ ಮಾತನ್ನು ಹಲವು ಬಾರಿ ಹೇಳುತ್ತಲೇ ಬಂದಿದ್ದರು. ಅವರ ಬ್ಲಾಗಿನಲ್ಲಿ ಅವರು ಈ ಬಗ್ಗೆ ವಿವರವಾದ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಭಾರತ ಕಮ್ಯುಸ್ಟ್ ಪಕ್ಷವು 1964ರಲ್ಲಿ ವಿಭಜಿತವಾಗಿ 47 ವರ್ಷಗಳು ಕಳೆದುವು. 1940ರಲ್ಲಿ ವಿದ್ಯಾಥರ್ಿ ದಿಸೆಯಲ್ಲಿದ್ದಾಗಲೇ ಭಾರತ ಕಮ್ಯುನಿಸ್ಟ ಪಕ್ಷವನ್ನು ಸೇರಿದ್ದ ನಾನು ಪಕ್ಷದಲ್ಲಿ ಏಳು ದಶಕಗಳ ಕಾಲ ಸಕ್ರಿಯ ಪಾತ್ರ ವಹಿಸಿದ್ದೇನೆ. ಭಾರತೀಯ ರಾಜಕಾರಣದಲ್ಲಿ ಕಮ್ಯುನಿಸ್ಟ್ ಪಕ್ಷವು ಕಾಂಗ್ರೆಸ್ ಪಕ್ಷವನ್ನು ಹೊರತು ಪಡಿಸಿದರೆ 2ನೆಯ ಬಲಿಷ್ಠ ಪಕ್ಷವಾಗಿ ಬೆಳೆದು ನಿಂತಿದೆ. ಕಮ್ಯುನಿಸ್ಟ್ ಚಳವಳಿಯು ವಿಭಜಿತವಾದ ಬಳಿಕ ಹಲವು ಏಳು ಬೀಳುಗಳನ್ನು ಕಂಡಿದೆ ಹಾಗೂ ತನ್ನ ಸ್ಥಾನ ಮಾನಗಳನ್ನೂ ಕಳೆದುಕೊಂಡಿದೆ. ಇದೀಗ ಹಿಂದೆಂದೂ ಕಾಣದ ಸೋಲನ್ನೂ ಅನುಭವಿಸಿದೆ. ಅಲ್ಲದೆ ಹಿಂದೆ ಲೆಕ್ಕಕ್ಕೇ ಇಲ್ಲ ಎಂಬ ಸ್ಥಾನದಲ್ಲಿದ್ದ ಬಲಪಂಥೀಯ ಕೋಮುವಾದಿ ನೇತೃತ್ವದ ಭಾರತೀಯ ಜನತಾ ಪಕ್ಷವು ಇಂದು ಪ್ರಬಲವಾಗಿ ಬೆಳೆದು ದ್ವಿತೀಯ ಸ್ಥಾನಕ್ಕೆ ಏರಿ ನಿಂತಿದೆ. ಇದು ಕಮ್ಯುನಿಸ್ಟ್ ಪಕ್ಷದ ವಿಭಜನೆಯ ನೇರ ಪರಿಣಾಮ.
    ಈ ಒಡಕಿನ ದುಲರ್ಾಭವನ್ನು ಸಮಯ ಸಾಧಕರು ಪಡೆದು ಸಕರ್ಾರವು ಬಂಡವಾಳಶಾಹಿ ಧೋರಣೆಗಳನ್ನು ಹಮ್ಮಿಕೊಂಡು ತೀವ್ರಗತಿಯಲ್ಲಿ ಅವುಗಳನ್ನು ಅನುಷ್ಠಾನಗೊಳಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಸೇವಾ ಕ್ಷೇತ್ರಗಳಾದ ರಸ್ತೆ, ಸಂಚಾರ, ವಿದ್ಯುತ್, ನೀರು, ವಿಮೆ, ಅಂಚೆ, ದೂರವಾಣಿ, ದೂರದರ್ಶನ, ಆಕಾಶವಾಣಿ, ಇತ್ಯಾದಿಗಳನ್ನು ಸಹ ಖಾಸಗಿ ಸಂಸ್ಥೆಗಳಿಗೆ ವಹಿಸಿಕೊಡುವುದನ್ನು ಕಾಣುತ್ತಿದ್ದೇವೆ. ಬಹುರಾಷ್ಟ್ರೀಯ ಸಂಸ್ಥೆಗಳನ್ನು ಇಲ್ಲಿಯ ಸಕರ್ಾರ ಮಣೆಹಾಕಿ ಸ್ವಾಗತಿಸುತ್ತಿದೆ. ದೇಶದ ಅಮೂಲ್ಯ ಪ್ರಾಕೃತಿಕ ಸಂಪತ್ತೆಲ್ಲಾ ಸೂರೆಗೊಂಡು ಪರದೇಶಕ್ಕೆ ಕಳ್ಳ ಸಾಗಣೆಯಾಗುತ್ತಿರುವುದು ಕಂಡುಬರುತ್ತಿದೆ.
    ದುಡಿಯುವ ಕಾಮರ್ಿಕರು ಹಿಂದೆ ಹೋರಾಟ, ತ್ಯಾಗ ಮತ್ತು ಬಲಿದಾನಗಳನ್ನು ಮಾಡಿ ಪಡೆದಿದ್ದ ಸವಲತ್ತುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಕೆಲಸದ ನಿಶ್ಚಿತತೆ, ಖಾಯಂಮಾತಿ ಇಲ್ಲದೆ ಗುತ್ತಿಗೆಯ ಆಧಾರದಲ್ಲಿ ನೌಕರರನ್ನು ನೇಮಿಸಿಕೊಂಡು ಅವರನ್ನು ಅನೇಕ ಸವಲತ್ತುಗಳಿಂದ ವಂಚಿಸಲಾಗುತ್ತಿದೆ. ನಮ್ಮ ದೇಶದ ಜನರಲ್ಲಿ ಶೇ. 70ರಷ್ಟು ಜನರು ಕೃಷಿಯನ್ನೇ ಅವಲಂಬಿಸಿರುತ್ತಾರೆ. ಸಕರ್ಾರದ ಕೃಷಿ ನೀತಿಯಿಂದಾಗಿ ಅವರ ಬದುಕೇ ಚಿಂತಾಜನಕವಾಗಿದೆ. ಬೆಳೆದ ಬೆಳೆಗೆ, ದವಸ ಧಾನ್ಯಗಳಿಗೆ ಬೆಂಬಲ ಬೆಲೆ ಇಲ್ಲದೆ, ತೆಗೆದ ಸಾಲಗಳನ್ನು ಮರುಪಾವತಿಸಲಾಗದೆ ಹೊಲ ಗದ್ದೆಗಳನ್ನು ಕಳೆದುಕೊಂಡು ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಫಲವತ್ತಾದ ಕೃಷಿ ಯೋಗ್ಯ ಭೂಮಿಯನ್ನು ವಿಶೇಷ ಆಥರ್ಿಕ ವಲಯದ ಹೆಸರಲ್ಲಿ ಬಂಡವಾಳಶಾಹಿಗಳು ವಶೀಕರಿಸಿ ದುಲರ್ಾಭ ಪಡೆಯುತ್ತಿದ್ದಾರೆ.
    ಶಿಕ್ಷಣವು ಖಾಸಗೀಕರಣಗೊಂಡು ವ್ಯಾಪಾರದ ಸರಕಾಗಿ ಬಡ ಕಾಮರ್ಿಕರ,ರೈತರ ಮಕ್ಕಳಿಗೆ ಮರೀಚಿಕೆಯಾಗಿದೆ. ಸರಕಾರದ ಕಾರ್ಯಕ್ರಮಗಳು ಇನ್ನೂ ತೀವ್ರಗತಿಯಲ್ಲಿ ಖಾಸಗೀಕರಣದತ್ತ ಸಾಗುತ್ತಿರುವುದನ್ನು ಕಾಣುವಾಗ ಭೀತಿ ಹುಟ್ಟುತ್ತಿದೆ.ಆಂತೆಯೇ ಸರ್ವ ಸವಲತ್ತುಗಳನ್ನು ಸರಕಾರದಿಂದ ಪಡೆದು ಸ್ಥಾಪಿತವಾದ ಖಾಸಗಿ ಆಸ್ಪತ್ರೆಗಳು ಪರಿಸ್ಥಿತಿಯ ದುಲರ್ಾಭವನ್ನು ಪಡೆದು ಬಡವರನ್ನು ಸುಲಿಯುವ ಮತ್ತು ಬಡ ರೋಗಿಗಳನ್ನು ಪ್ರಯೋಗಾಲಯದ ಬಲಿಪಶು (ಗಿನಿಪಿಗ್)ಗಳಂತೆ ಹೊಸ ಮದ್ದುಗಳ, ಆವಿಷ್ಕಾರಗಳ ಪ್ರಯೋಗಕ್ಕೆ ಅವರನ್ನು ಬಳಸಲಾಗುತ್ತಿದೆ. ಶ್ರೀಮಂತರಿಗೆ ಅವು ಐಷಾರಾಮಿ ವಿರಾಮ ಕೇಂದ್ರಗಳಾಗಿ ಇರುವುದನ್ನು ಕಾಣುತ್ತಿದ್ದೇವೆ.ಮನೆ ಬಾಡಿಗೆ ನಿಯಂತ್ರಣಗಳಿಲ್ಲದೆ ಬಾಡಿಗೆ ವಸತಿದಾರರ ಬದುಕೇ ದುಸ್ತರವಾಗಿದೆ.
    ಲಂಚ, ಭ್ರಷ್ಟಾಚಾರಗಳು ಬಂಡವಾಳಿಗಳ ಶನ ಸಂತಾನಗಳಾಗಿ ದೇಶವನ್ನು ಕಾಡುತ್ತಿವೆ. ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರ, ದುವ್ರ್ಯವಹಾರ, ವಿದೇಶೀ ಬ್ಯಾಂಕುಗಳಲ್ಲಿ ಕಳ್ಳ ಕಪ್ಪುಹಣದ ಶೇಖ ರಣೆಗಳು ಮುಗಿಲು ಮುಟ್ಟಿರುವ ವರದಿಗಳನ್ನು ನಾವು ಕಾಣುತ್ತಿದ್ದೇವೆ. ಮೂಲಭೂತ ಜಾತಿವಾದಿಗಳು ದೇಶದಾದ್ಯಂತ ಭಯೋತ್ಪಾದನೆ, ಅರಾಜಕತೆಯನ್ನು ಸೃಷ್ಟಿಸಿ ಅಧಿಕಾರವನ್ನು ಕಸಿದು ಕೊಳ್ಳುವ ಸಂಚಿನ ರಹಸ್ಯ ಬಯಲಾಗಿದ್ದನ್ನೂ ಕಾಣುತ್ತಿದ್ದೇವೆ....ಇಂತಹ ದುಸ್ಥಿತಿಯಲ್ಲಿ ಎಡ ಪಕ್ಷಗಳ ಏಕೀಕರಣವನ್ನು ಒಂದು ಆಶಾಕಿರಣವಾಗಿ ಭಾರತದ ಶ್ರಮ ಜೀವಿಗಳು ಎದುರು ನೋಡುತ್ತಿದ್ದಾರೆ.ಈ ವಿಷಮ ಪರಿಸ್ಥಿತಿಯನ್ನು ಮನ ಗಂಡು ಕಮ್ಯುನಿಸ್ಟ್(ಮಾ) ಪಕ್ಷದ ಮುಂದಾಳು ಸೀತಾರಾಂ ಯೆಚೂರಿಯವರು ಎರಡೂ ಪಕ್ಷಗಳ ಏಕೀಕರಣಕ್ಕೆ ಕರೆಕೊಟ್ಟಿದ್ದಾರೆ.
    ವಿಶ್ವದ ಇತರ ರಾಷ್ಟ್ರಗಳಲ್ಲಿಯೂ ಅಂತಹ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಿ ಬಳಿಕ ಒಂದುಗೂಡಿ ಚೇತರಿಸಿರುವುದನ್ನು ನಾವು ಕಂಡಿದ್ದೇವೆ. ಈ ಹಿಂದೆಯೇ ನಮ್ಮ ಪಕ್ಷದ ನಾಯಕರು ಅನೇಕ ಬಾರಿ ಏಕೀಕರಣದ ಕರೆಯನ್ನು ಕೊಟ್ಟಿದ್ದರೂ ಅದು ಕಾರ್ಯಗತವಾಗಿರಲಿಲ್ಲ ಎಂದು ಹೇಳಲು ವಿಷಾದಿಸುತ್ತೇನೆ. ಆರಂಭದಲ್ಲಿ ಪ್ರಧಾನ ಕಾರ್ಯದಶರ್ಿಯಾಗಿದ್ದ ರಾಜೇಶ್ವರ ರಾಯರು, ಬಳಿಕ ಇಂದ್ರಜಿತ ಗುಪ್ತ, ಆ ಬಳಿಕ ಎ. ಬಿ. ಬರ್ಧನ್ರವರು ಪಕ್ಷಗಳ ಏಕೀಕರಣಕ್ಕೆ ಬಹಳಷ್ಟು ಪ್ರಯತ್ನಗಳನ್ನು ಮಾಡಿರುವುದನ್ನು ನೆನಪಿಸುತ್ತೇನೆ. ಇದು ಕಾಲದ ಅವಶ್ಯಕತೆಯಾಗಿದೆ. ಇದು ಕೇವಲ ನನ್ನ ಆಸೆ ಮಾತ್ರವಲ್ಲ, ನಮ್ಮ ಪಕ್ಷದ, ಅದರ ನೇತೃತ್ವದಲ್ಲಿರುವ ಕಾಮರ್ಿಕ, ರೈತ, ವಿದ್ಯಾಥರ್ಿ, ಯುವಜನ, ಮಹಿಳಾ ಹಾಗೂ ಇತರ ಎಲ್ಲಾ ಸಾಮೂಹಿಕ ಸಂಘಟನೆಗಳ ಹಾಗೂ ಪಕ್ಷದ ಬಗ್ಗೆ ಸದಭಿಪ್ರಾಯವುಳ್ಳ, ಪಕ್ಷವನ್ನು ಬೆಂಬಲಿಸುವ ಎಡ ಅಭಿಪ್ರಾಯವುಳ್ಳ ಬುದ್ಧಿ ಜೀವಿಗಳು ಇದೇ ಅಭಿಪ್ರಾಯವನ್ನು ತಳೆದಿದ್ದಾರೆ.
    ಕಮ್ಯುನಿಸ್ಟ್ ಪಾಟರ್ಿಯು ತನ್ನ ಹಿಂದಿನ ವರ್ಚಸ್ಸನ್ನು ಪಡೆದು ದೇಶದ ಆಡಳಿತವೇ ಎಡ ಪ್ರಜಾಪ್ರಭುತ್ವವಾದಿ ದಿಸೆಯಲ್ಲಿ ರೂಪುಗೊಳ್ಳಲಿ ಎಂದು ಒಬ್ಬ ಹಿರಿಯ ಕಮ್ಯುನಿಸ್ಟ್ ಕಾರ್ಯಕರ್ತನಾಗಿ ನಾನು ನಿವೇದಿಸಿಕೊಳ್ಳುತ್ತೇನೆ. ಇದು ನನ್ನ ಜೀವಿತಾವಧಿಯಲ್ಲೇ ಜರುಗಲಿ ಎಂದು ನನ್ನ ಜೀವಿತದ ಕೊನೆಯ ಹಂತದಲ್ಲಿರುವ ನಾನು ಹಾರೈಸುತೇನೆ ಎನ್ನುವ ಕಕ್ಕಿಲ್ಲಾಯರ ಆಶಯ ಅವರ ಜೀವಿತಾವಧಿಯಲ್ಲಿ ಈಡೇರಲಿಲ್ಲ. ಎಡ ಪಕ್ಷಗಳು ಏಕೆ ಒಂದಾಗಬೇಕು ಎಂದು ವಿವರವಾಗಿ ತಿಳಿಸಿರುವ ಕಕ್ಕಿಲ್ಲಾಯರಿಗೆ ಇಂದಿನ ವಾಸ್ತವದ ಬಗ್ಗೆ ಅರಿವಿತ್ತು. ಇಂದಿನ ಅಧಿಕಾರ ಲಾಲಸೆ, ಭ್ರಷ್ಟಾಚಾರದ ರಾಜಕಾರಣದಿಂದ ರೋಸಿ ಹೋದ ಕಕ್ಕಿಲ್ಲಾಯರು ಭಾರತದಲ್ಲಿ ಇನ್ನೊಂದು ಕ್ವಿಟ್ ಇಂಡಿಯಾ ಚಳವಳಿಯಾಗಬೇಕು ಎಂದು ಕಳೆದ ಸ್ವಾತಂತ್ರ ದಿನದ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿ.ವಿ.ಕಕ್ಕಿಲ್ಲಾಯರ ಹೋರಾಟದ ಬದುಕು
    ಬಿ.ವಿ.ಕಕ್ಕಿಲ್ಲಾಯ ಬಾಲ್ಯದಿಂದಲೇ ಹುಟ್ಟು ಹೋರಾಟಗಾರರಾಗಿ ಬೆಳೆದು ಬಂದವರು. ತಮ್ಮ 3ನೆ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು, 21ನೆ ವಯಸ್ಸಿನಲ್ಲಿಯೇ ಹೋರಾಟಕ್ಕಿಳಿದ ಬಿ.ವಿ.ಕಕ್ಕಿಲ್ಲಾಯರು 1940ರಲ್ಲಿ ಭಾರತೀಯ ಕಮ್ಯೂನಿಸ್ಟ್ ಪಕ್ಷದ ಸದಸ್ಯರಾಗಿ ಸೇರಿ 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.
    ಆಗ ನಿಷೇಧಿಸಿದ ಸಾಹಿತ್ಯ ಹೊಂದಿದ್ದ ಆರೋಪಕ್ಕೆ ಒಳಗಾಗಿ ಬ್ರಿಟಿಷರಿಂದ ಬಂಧಿಸಲ್ಪಟ್ಟಿದ್ದ ಕಕ್ಕಿಲ್ಲಾಯರು 9ತಿಂಗಳು ಮಂಗಳೂರಿನ ಜೈಲಿನಲ್ಲಿ ಕಾಲ ಕಳೆದರು. 1943ರಿಂದ 45ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೀಡಿ, ಹಂಚು, ನೆಯ್ಗೆ, ಗೇರು ಬೀಜ ಕಾಮರ್ಿಕರನ್ನು ಸಂಘಟಿಸಿದರು. 1946ರಲ್ಲಿ ಮತ್ತೆ ಬಂಧನಕ್ಕೊಳಗಾದ ಕಕ್ಕಿಲ್ಲಾಯರನ್ನು ವೆಲ್ಲೂರು, ಕಣ್ಣನ್ನೂರು ಜೈಲಿನಲ್ಲಿ ಇಡಲಾಯಿತು. ಭಾರತಕ್ಕೆ ಸ್ವಾತಂತ್ರ ದೊರೆತ ದಿನ 1947ರ ಆಗಸ್ಟ್ 14 ರಂದು ಬಿಡುಗಡೆಯಾಗಿ 15 ರಂದು ಮನೆಗೆ ಮರಳಿದರು.
    1948ರಿಂದ 50ರವರೆಗೆ ದೇಶಾದ್ಯಂತ ಕಮ್ಯೂನಿಸ್ಟರ ಮೇಲೆ ನಡೆದ ದಬ್ಬಾಳಿಕೆಯಿಂದ ಭೂಗತರಾಗಿದ್ದು ಕೊಂಡು ರಾಜ್ಯದಲ್ಲಿ ಪಕ್ಷ ಹಾಗೂ ಕಾಮರ್ಿಕರನ್ನು ಸಂಘಟಿಸಿದ್ದರು. 1950ರಲ್ಲಿ ಬೆಂಗಳೂರಿನ ಕಾರಾ ಗೃಹದಲ್ಲಿ 6 ತಿಂಗಳು ಬಂಧನಕ್ಕೊಳಗಾದರು. 1952ರಲ್ಲಿ ಮದ್ರಾಸು ಅಸೆಂಬ್ಲಿಯಿಂದ ಮೊಟ್ಟಮೊದಲು ರಾಜ್ಯಸಭೆಗೆ ಆಯ್ಕೆಯಾದರು. ಬಳಿಕ ಕನರ್ಾಟಕ ಏಕೀಕರಣ ಹೋರಾಟದಲ್ಲಿ ಪಾಲ್ಗೊಂಡರು. 1955ರ ಆಗಸ್ಟ್ 15ರಲ್ಲಿ ಗೋವಾ ವಿಮೋಚನಾ ಹೋರಾಟದಲ್ಲಿ ಮಂಗಳೂರು ತಂಡದ ನಾಯಕತ್ವ ವಹಿಸಿದ್ದ ತಂಡ ಇದ್ದುಸ್ ಎಂಬ ಹಳ್ಳಿಗೆ ನುಸುಳಿ ಭಾರತದ ರಾಷ್ಟ್ರ ಧ್ವಜವನ್ನು ಹಾರಿಸುವಲ್ಲಿ ಯಶಸ್ವಿಯಾಗಿದ್ದರು.
    1956 ರಿಂದ 62ರವರೆಗೆ ಭೂಸುಧಾರಣೆಗಾಗಿ ರಾಜ್ಯಾದ್ಯಂತ ರೈತರ ಹೋರಾಟ ಸಂಘಟನೆ ರೂಪಿಸಿದರು. ಚೀನಾ ಯುದ್ಧದ ಸಂದರ್ಭ 1962ರಲ್ಲಿ ಬೆಂಗಳೂರಿನಲ್ಲಿ ಕಕ್ಕಿಲ್ಲಾಯರು ಹಲವು ವರ್ಷ ಬಂಧನ ಕ್ಕೀಡಾದರು. 1982ರಲ್ಲಿ ನರಗುಂದದ ರೈತರ ಮೇಲೆ ಗೋಲಿಬಾರು ನಡೆದಾಗ ಪ್ರತಿಭಟಿಸಿ ರಾಜ್ಯಾದ್ಯಂತ ಜಾಗೃತಿ ಮೂಡಿಸಿ ಬೆಂಗಳೂರಿಗೆ ಬೃಹತ್ ರೈತ ಜಾಥಾ ಸಂಘಟಿಸಿದರು. 92ರ ಹರೆಯದ ಇಳಿವಯಸ್ಸಿನಲ್ಲೂ ಸಾಮಾಜಿಕ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಬಿ.ವಿ.ಕಕ್ಕಿಲ್ಲಾಯರು ಅನಾರೋಗ್ಯದ ಹೊರತಾಗಿಯೂ ಮೇ 18ರಂದು ನಕ್ಸಲ್ ಬೆಂಬಲಿಗ ಎಂಬ ಆರೋಪದಲ್ಲಿ ಜೈಲುವಾಸ ಅನುಭವಿಸುತ್ತಿರುವ ವಿಠಲ ಮಲೆಕುಡಿಯರ ಬಂಧನವನ್ನು ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸಿಪಿಐ ಜಿಲ್ಲಾ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ್ದು ಅವರ ಕೊನೆಯ ಹೋರಾಟ.
    ಸ್ವಾತಂತ್ರ ಪೂರ್ವದಲ್ಲಿ ನಿಷೇಧಿತ ಸಾಹಿತ್ಯ ಹೊಂದಿದ್ದ ಅಪರಾಧಕ್ಕೆ ಬಂಧನಕ್ಕೊಳಗಾಗಿದ್ದ ಕಕ್ಕಿಲ್ಲಾಯರಿಗೆ ಸ್ವಾತಂತ್ರ ನಂತರವೂ ಪರಿಸ್ಥಿತಿ ಬದಲಾಗದೆ ಇರುವುದು ಅವರನ್ನು ಹೋರಾಟಕ್ಕೆ ಪ್ರೇರೇಪಿಸಿತ್ತು. ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ನ ಜೀವನ ಚರಿತ್ರೆಯ ಸಾಹಿತ್ಯ ಹೊಂದಿರುವುದು ಅಪರಾಧ ಎಂದು ವಿಠಲ ಮಲೆಕುಡಿಯನೆಂಬ ವಿದ್ಯಾಥರ್ಿಯನ್ನು ಬಂಧಿಸಿರುವುದು ಅಪಾರ ನೋವನ್ನುಂಟುಮಾಡಿತ್ತು.
ಕಕ್ಕಿಲ್ಲಾಯರ ಸಾಹಿತ್ಯ ಕೃಷಿ:
    1960ರಲ್ಲಿ ನವ ಕನರ್ಾಟಕ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿದ ಕಕ್ಕಿಲ್ಲಾಯರು ಅಕ್ಷರ ಲೋಕದಲ್ಲಿ ಹೊಸ ಲೋಕವನ್ನೇ ಅನಾವರಣಗೊಳಿಸಲು ಕಾರಣರಾದರು. ಇಂದಿಗೂ ನವಕನರ್ಾಟಕ ರಾಜ್ಯದಲ್ಲಿ ಪ್ರಮುಖ ಪ್ರಕಾಶನ ಸಂಸ್ಥೆಯಾಗಿ ಹಲವಾರು ಅಮೂಲ್ಯ ಕೃತಿಗಳನ್ನು ಹೊರತಂದಿದೆ. 1983ರಲ್ಲಿ ವಿಟ್ಲ ವಿಧಾಸಭೆಯ ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ಬರವಣಿಯತ್ತ ಗಮನ ಹರಿಸಿದ ಕಕ್ಕಿಲ್ಲಾಯರು, ಕಾಲರ್್ ಮಾಕ್ಸರ್್ ಬದುಕು ಬರಹ, ಫೆಡ್ರಿಕ್ ಎಂಗಲ್ಸ್, ಪ್ರಾಚೀನ ಭಾರತದ ಭೌತಿಕವಾದ ಕೃತಿ, ಭಾರತ ದರ್ಶನ ಕೃತಿ, ಬಾಬ್ರಿ ಮಸೀದಿ ರಾಮ ಜನ್ಮ ಭೂಮಿ, ಸ್ವಾತಂತ್ರ ಸಂಗ್ರಾಮದ ಹೆಜ್ಜೆಗಳು ದಲಿತರ ಸಮಸ್ಯೆಗಳು ಮತ್ತು ಪರಿಹಾರಗಳು, ಭಾರತದ ಮುಸ್ಲಿಮರು ಎಂಬ ಅನುವಾದಿತ ಕೃತಿಗಳು ಸೇರಿದಂತೆ ಸಮಕಾಲೀನ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸಿ ಲೇಖನಗಳ ಮೂಲಕ ಪತ್ರಿಕೆಗಳಲ್ಲಿ ತಮ್ಮ ಅಭಿಪ್ರಾಯ ಪ್ರಕಟಿಸಿದ್ದರು.
    ಬಾಲ್ಯ, ಶಿಕ್ಷಣ: ಕಾಸರಗೋಡು ಜಿಲ್ಲೆಯ ಬೇವಿಂಜೆ ಎಂಬ ಗ್ರಾಮದ ಪ್ರತಿಷ್ಠಿತ ತರವಾಡು ಮನೆತನದ ಕುಟುಂಬದಲ್ಲಿ 1919 ಎಪ್ರಿಲ್ 11ರಂದು ಜನಿಸಿದ ವಿಷ್ಣು ಕಕ್ಕಿಲ್ಲಾಯರ ತಂದೆಯ ಹೆಸರು ಬೇವಿಂಜೆ ವಿಷ್ಣು ಕಕ್ಕಿಲ್ಲಾಯ. ತಾಯಿ ಗಂಗಮ್ಮ. ಕಾಸರಗೋಡಿನ ಬಾಸೆಲ್ ಮಿಶನ್ನಲ್ಲಿ ಮಾಧ್ಯಮಿಕ ಶಾಲೆ ಹಾಗೂ ಜಿಲ್ಲಾ ಬೋಡರ್್ ಫ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿವರೆಗಿನ ಅಧ್ಯಯನ. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ರಸಾಯನ ಶಾಸ್ತ್ರದಲ್ಲಿ ಬಿ.ಎ ಅಧ್ಯಯನ. ಆಗಲೇ ಪತ್ರಕರ್ತ, ಸ್ವಾತಂತ್ರ ಹೋರಾಟಗಾರರಾದ ಕಯ್ಯಾರ ಕಿಂಞಣ್ಣ ರೈ, ಮಹಾದೇವ ಪಟ್ಟಣ ಶೆಟ್ಟಿ ಮೊದಲಾದವರ ಸಂಪರ್ಕವಾಯಿತು. ಆಗ ಖಾಸಗಿ ವಸತಿ ಗೃಹದಲ್ಲಿ ಓದಿರುವ ಕಕ್ಕಿಲಾಯರ ಜೊತೆ ಕು.ಶಿ.ಹರಿದಾಸ ಭಟ್ ಜೊತೆಗಿದ್ದರು.
    1964 ರ ಜನವರಿ 9ರಂದು ಅಹಲ್ಯಾರನ್ನು ಮದುವೆಯಾದರು. ಬಿ.ವಿ.ಕಕ್ಕಿಲ್ಲಾಯ ಹಾಗೂ ಅಹಲ್ಯಾ ದಂಪತಿಗೆ ಶ್ರೀನಿವಾಸ ಕಕ್ಕಿಲ್ಲಾಯ, ವೆಂಕಟಕೃಷ್ಣ, ಹರೀಶ್, ಸೂರ್ಯನಾರಾಯಣರು ಪುತ್ರರು. ಕಮ್ಯೂನಿಸ್ಟ್ ಚಳವಳಿಗೆ ನೀಡಿದ ಕೊಡುಗೆಗೆ ಧಾರವಾಡದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಮಾಕ್ಸರ್ಿಸ್ಟ್ ಥಿಯರಿ ಮತ್ತು ಪ್ರಾಕ್ಟಿಸ್ ಸಂಸ್ಥೆಯಿಂದ 2010, ಅಕ್ಟೋಬರ್ 2ರಂದು ಕಾಲರ್್ ಮಾಕ್ಸರ್್ ಪ್ರಶಸ್ತಿ ಪಡೆದರು.
    ಇಂತಹ ಧೀಮಂತ, ಎಡಪಂಥಿಯ, ಪ್ರಗತಿಪರ ಹೋರಾಟಗಾರರಾದ ಬಿವಿ.ಕಕ್ಕಿಲಾಯರ ನಿಧನದಿಂದ ದುಡಿಯುವ ವರ್ಗಕ್ಕೆ ತುಂಬಲಾರದ ನಷ್ಟವಾಗಿದೆ.

No comments:

Post a Comment

Thanku