ಸಹೋದರಿಯೋರ್ವರು ಈ ಇ-ಮೇಲ್ನ್ನು ಕಳುಹಿಸಿದ್ದರು.
AK Kukkilai |
ಮಗನೇ, ಇದನ್ನೂ ಉಣ್ಣು, ನನಗೆ ಹಸಿವಿಲ್ಲ...
2) ಒಂದು ದಿನ ನಾನು ಊಟ ಮಾಡುತ್ತಾ ಇದ್ದೆ. ಅಮ್ಮ ಹತ್ತಿರ ಕೂತಿದ್ದಳು. ಮೀನು ಪದಾರ್ಥ ಎಂದರೆ ನನಗಿಷ್ಟ ಅಂತ ಅಮ್ಮನಗೆ ಗೊತ್ತು. ಒಂದು ಮೀನನ್ನು ಖರೀದಿಸಿ, ಮೂರು ತುಂಡು ಮಾಡಿ, ಮೂರನ್ನು ಒಂದು ಪಿಂಗಾಣಿಯಲ್ಲಿ ಹಾಕಿ ನನ್ನ ಹತ್ತಿರ ಇಟ್ಟಿದ್ದಳು. ನಾನು ನನ್ನ ಪಿಂಗಾಣಿಯಿಂದ ಒಂದು ತುಂಡು ಮೀನನ್ನು ಅಮ್ಮನ ತಟ್ಟೆಗೆ ಹಾಕಿದೆ. ಅಮ್ಮ ಒಪ್ಪಲಿಲ್ಲ. ನಾನೂ ಬಿಡಲಿಲ್ಲ. ಬರೇ ಸಾರಲ್ಲಿ ಯಾಕೆ ಊಟ ಮಾಡುತ್ತೀ, ನಂಗೆ ಎರಡು ತುಂಡು ಸಾಕು ಎಂದೆ. ಅಮ್ಮ ಕೇಳಲಿಲ್ಲ. ಆಕೆ ಅಂದಳು,
ನಂಗೆ ಮೀನು ಇಷ್ಟ ಇಲ್ಲ ಮಗನೇ, ನನೆ ತಿನ್ನು.
3) ನಾನು ಕಣ್ಣು ಬಿಡುವ ಹಂತದಲ್ಲೇ ಅಪ್ಪ ತೀರಿ ಹೋಗಿದ್ದರು. ಆದ್ದರಿಂದ ಎಲ್ಲ ಜವಾಬ್ದಾರಿಯನ್ನೂ ಅಮ್ಮನೇ ಹೊತ್ತುಕೊಳ್ಳಬೇಕಾಯಿತು. ಅವರಿವರ, ಅಕ್ಕಪಕ್ಕದವರ ಸಾಂತ್ವನದ ಮಾತುಗಳು ಹೊಟ್ಟೆ ತುಂಬಿಸುವುದಿಲ್ಲವಲ್ಲವೇ? ಅದು ಅಮ್ಮನಗೂ ಗೊತ್ತು. ಕಂಪೆನಯಿಂದ ಬೆಂಕಿಪೊಟ್ಟಣಗಳನ್ನು ತಂದು ಅದರೊಳಗೆ ಕಡ್ಡಿಗಳನ್ನು ತುಂಬಿಸುವ ಕೆಲಸವನ್ನು ಅಮ್ಮ ಮಾಡತೊಡಗಿದಳು. ಹಾಗಂತ ತುಂಬಿಸಿದ ಕಡ್ಡಿಗಳಷ್ಟೇ ಸಂಖ್ಯೆಯಲ್ಲಿ ಪೈಸೆಗಳೂ ಸಿಗುತ್ತವೆ ಅಂದುಕೊಳ್ಳಬೇಡಿ. ರಾತ್ರಿ-ಹಗಲು ತುಂಬಿಸಿದರೂ ಮೂಲಭೂತ ಅಗತ್ಯಗಳನ್ನು ಪೂರೈಸುವಷ್ಟು ದುಡ್ಡು ಸಿಗುವುದು ಕಡಿಮೆ. ಇಷ್ಟುಕ್ಕೂ ಕೈ ತುಂಬಾ ಕೆಲಸವಾದರೂ ಇದ್ದರೆ ತಾನೇ! ಒಂದು ರಾತ್ರಿ ಅಮ್ಮ ಬೆಂಕಿ ಪೊಟ್ಟಣಗಳಿಗೆ ಕಡ್ಡಿಗಳನ್ನು ತುಂಬಿಸುವಲ್ಲಿ ಮಗ್ನಳಾಗಿದ್ದಳು. ನನಗೋ ವಿಪರೀತ ನದ್ದೆ. ನಾನು ಹೇಳಿದೆ,
ಸಾಕಮ್ಮ, ಮಲಗು. ನದ್ದೆ ಬರ್ತಿದೆ.
ಅಮ್ಮ ನಗುತ್ತಾ ಹೇಳಿದಳು,
ನನು ಮಲಗು ಮಗನೇ, ನನಗೆ ನದ್ದೆ ಬರ್ತಿಲ್ಲ.
4) ಅಮ್ಮನಗೆ ಚಾ ಅಂದರೆ ತುಂಬಾ ಇಷ್ಟ. ಹಾಲು ಸೇರಿಸದ ಚಹಾವನ್ನು ಒಂದು ಕಡೆ ಇಟ್ಟು, ಇನ್ನೊಂದು ಕಡೆ ಬೆಂಕಿಪೊಟ್ಟಣವನ್ನು ಇಡುವುದು ಆಕೆಯ ರೂಡಿ. ನನಗಾದರೋ ಚಹಾ ಅಷ್ಟಕಷ್ಟೇ. ಮನೆಯಲ್ಲಿ ಏನು ಇಲ್ಲದಿದ್ದರೂ ಚಹಾ ಒಂದು ಇರುತ್ತದೆ ಎನ್ನುವಷ್ಟರ ಮಟ್ಟಿಗೆ ಅಮ್ಮ ಚಹಾದೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದಳು. ಒಂದು ದಿನ ಅಮ್ಮನ ಬಳಿ ಒಂದೇ ಗ್ಲಾಸು ಇತ್ತು. ಸಕ್ಕರೆ, ಚಹಾದ ಡಬ್ಬಿಗಳು ಖಾಲಿಯಾಗಿದ್ದವು. ಬರೇ ನರಿನಂದ ಚಹಾ ಮಾಡಲು ಆಗುವುದಿಲ್ಲ. ಆದರೆ, ಅಮ್ಮ ನನಗೆ ಕೊಟ್ಟಳು. ನಾನು ಮತ್ತೇ ಅಮ್ಮನ ಬಳಿಗೆ ಸರಿದೆ. ಅಮ್ಮ ಹೇಳಿದಳು,
ನಂಗೆ ಚಹಾ ಇಷ್ಟ ಅಲ್ಲ, ಮಗನೇ ನನು ಕುಡಿ.
5) ಅಪ್ಪ ಸಾವಿಗೀಡಾದಾಗ ಅಮ್ಮನೇನು ಮುದುಕಿ ಆಗಿರಲಿಲ್ಲ. ಅಮ್ಮನಲ್ಲಿ ತಾರುಣ್ಯ ಇನ್ನೂ ಇತ್ತು. ಸಂಬಂಧಿಕರು, ನೆರೆ-ಹೊರೆಯವರೆಲ್ಲ ಮರು ಮದುವೆಯಾಗುವಂತೆ, ಬದುಕಿಗೊಂದು ಆಸರೆ ಕಂಡುಕೊಳ್ಳುವಂತೆ ಒತ್ತಾಯಿಸುತ್ತಿದ್ದರು. ಕೆಲವೊಂದು ಪ್ರಸ್ತಾಪಗಳೂ ಬಂದುವು. ನನ್ನಜ್ಜಿಯೇ ಅಮ್ಮನಲ್ಲಿ ಮದುವೆಯ ಬಗ್ಗೆ ಮಾತುಕತೆ ಆಡಿದ್ದನ್ನು, ಒಂದು ಬಗೆಯ ಒತ್ತಡ ಹೇರಿದ್ದನ್ನು ನಾನು ಕೇಳಿದ್ದೆ. ಅಂತ ಸಂದರ್ಭಗಳಲ್ಲೆಲ್ಲಾ ಅಮ್ಮ ರಾತ್ರಿ ನನ್ನ ಎಂದಿಗಿಂತ ಹೆಚ್ಚು ಪ್ರೀತಿಸುತ್ತಿದ್ದಳು. ಬೆಂಕಿಪೊಟ್ಟಣಗಳನ್ನು ಪಕ್ಕಕ್ಕಿಟ್ಟು ನನ್ನ ತಲೆ ಸವರುತ್ತಾ, ನನಗೆ ನದ್ದೆ ಹತ್ತುವವರೆಗೂ ಪಕ್ಕವೇ ಮಲಗುತ್ತಿದ್ದಳು. ಅಮ್ಮ ಕೆಲವಾರು ಬಾರಿ ಕಣ್ಣೀರಿಳಿಸುತ್ತಿದ್ದದನ್ನು ನಾನು ಕಂಡಿದ್ದೇ. ನನ್ನನ್ನು ಕಂಡ ಕೂಡಲೇ ಬಾ ಮಗು ಎಂದು ಹತ್ತಿರ ಕೂರಿಸುತ್ತಿದ್ದಳು. ಏನು ಆಗಿಲ್ಲವೆಂಬಂತೆ ನಗುತ್ತಿದ್ದಳು. ಒಂದು ದಿನ ಅಮ್ಮನೊಂದಿಗೆ ನನ್ನಜ್ಜ, ಅಜ್ಜಿ ಮಾತನಾಡುತ್ತಿದ್ದರು. ಬಹುಶಃ ಮರುಮದುವೆಯ ಬಗ್ಗೆಯೇ ಇದ್ದಿರಬೇಕು. ಅಮ್ಮ ಇಷ್ಟು ಹೇಳಿದ್ದು ನನಗೆ ಕೇಳಿಸಿತು.
ಈ ವಿಷಯದಲ್ಲಿ ನವು ನನ್ನನ್ನು ಒತ್ತಾಯಿಸಬಾರದು. ನನ್ನ ಮಗುವಿನೊಂದಿಗೆ ನಾನು ಸಂತಸದಿಂದ್ದೇನೆ. ಮದುವೆ ಬಿಟ್ಟು ಬೇರೆನಾದರೂ ಮಾತನಾಡಿ ಪ್ಲೀಸ್.
6. ನಾನು ಕಲಿತೆ, ದೂರದ ಊರಿನಲ್ಲಿ ಒಳ್ಳೆಯ ಉದ್ಯೋಗವು ಸಿಕ್ಕಿತು. ಅಮ್ಮನನ್ನು ಬಿಟ್ಟು ಹೋಗುವದಕ್ಕೆ ಮನಸ್ಸು ಒಪ್ಪಲೇ ಇಲ್ಲ. ಹಾಗಂತ ಕರೆದರೆ ಅಮ್ಮ ಬರುತ್ತಾನೂ ಇಲ್ಲ. ನಾನು ಉದ್ಯೋಗಕ್ಕೆ ಹೋಗಲು ಹಿಂದೇಟು ಹಾಕಿದಾಗ ಅಮ್ಮನೇ ಮುಂದೆ ನಂತು ಧೈರ್ಯ ಹೇಳಿದಳು. ನನ್ನ ಕಣ್ಣೀರು ಒರೆಸಿ ಬೀಳ್ಕೊಟ್ಟಳು. ಟೆಲಿಗ್ರಾಮ್ ಮಾಡ್ತಿರು ಅಂದಳೂ. ಪ್ರತಿ ಸಂಬಳ ಪಡೆಯುವಾಗಲೂ ಬಾಲ್ಯದಲ್ಲಿ, ನನ್ನ ಶಿಕ್ಷಣದ ಸಂದರ್ಭದಲ್ಲಿ ಅಮ್ಮ ಮಾಡಿದ ತ್ಯಾಗ, ಸಹನೆ, ಸಂಕಷ್ಟಗಳು ನೆನಪಾಗುತ್ತಾ ಕಣ್ಣು ಒದ್ದೆಯಾಗುತ್ತಿತ್ತು. ಅದೇ ಉತ್ಸಾಹದಲ್ಲಿ ದುಡ್ಡನ್ನೆಲ್ಲ ಅಮ್ಮನಗೆ ಕಳುಹಿಸಿಕೊಡುತ್ತಿದ್ದೆ. ಆದರೆ, ಅಮ್ಮ ದುಡ್ಡನ್ನು ಸ್ವೀಕರಿಸುತ್ತಲೇ ಇರಲಿಲ್ಲ. ಕಳುಹಿಸಿದ ದುಡ್ಡೆಲ್ಲ ವಾಪಾಸು ನನಗೆ ಮರುಳುತ್ತಿದ್ದವು. ಅಮ್ಮ ಹೇಳುತ್ತಿದ್ದಳು.
ನನಗೆ ದುಡ್ಡೇಕೆ ಮಗಾ? ನಾನು ದುಡಿಯುತ್ತಿರುವುದೇ ನನಗೆ ಧಾರಾಳ ಸಾಕಾಗ್ತದೇ, ನನೆ ಇಟ್ಕೋ.
7. ಆ ದಿನ ನಾನು ತುಂಬಾ ಭಾವುಕನಾಗಿದ್ದೆ. ಅಮ್ಮನನ್ನು ನಾನು ಉಪಚರಿಸಬೇಕಾದ ರೀತಿಯಲ್ಲಿ ಉಪಚರಿಸುತ್ತಿಲ್ಲವೇನೋ ಅನ್ನುವ ಪಾಪಭಾವನೆ ಮನಸನ್ನು ಕೊರೆಯುತ್ತಿತ್ತು. ಬಾಲ್ಯದಲ್ಲಿ ಅಮ್ಮ ನನಗಾಗಿ ಮಾಡಿದ ತ್ಯಾಗಗಳು, ಹರಿಸಿದ ಕಣ್ಣೀರು, ಸಹಿಸಿದ ಸಂಕಷ್ಟಗಳೆಲ್ಲ ಕೆಲಸ ಮುಗಿಸಿ ರೂಮಿಗೆ ಬಂದಾಗ ಒತ್ತರಿಸಿ ಕಣ್ಣುಗಳು ಒದ್ದೆಯಾಗುತ್ತಿತ್ತು. ಬಂಗಾರದಂತಹ ಅಮ್ಮನನ್ನು ಒಂಟಿಯಾಗಿ ಬಿಟ್ಟು ಬಂದಿರುವದರ ಸರಿ-ತಪ್ಪುಗಳು ಮನದಲ್ಲಿ ಸಂಘರ್ಷ ನಡೆಸುತ್ತಿದ್ದವು. ದುಡ್ಡು ಮೆಲೋ ಅಮ್ಮ ಮೇಲೋ ಎಂದು ನಾನು ಪ್ರತಿ ನಮಿಷವೂ ತಕರ್ಿಸುತ್ತಿದ್ದೆ. ತಿಂಗಳ ಸಂಬಳ ಪಡೆದುಕೊಳ್ಳುವಾಗಲೆಲ್ಲ ಅಮ್ಮ ತಟ್ಟೆಗೆ ಹಾಕುತ್ತಿದ್ದ ಗಂಜಿಊಟ, ಮೀನು ಸಾರು, ಮಮತೆಗಳು ನೋಟಗಳು ನೆನಪಾಗಿ, ಜೀವವಿರುವ ಅಮ್ಮನಗಿಂತ ಜೀವವಿಲ್ಲದ ನೋಟುಗಳೇ ಹೆಚ್ಚಾದವೋ ಎಂದು ಮನಸ್ಸು ಚುಚ್ಚುತ್ತಿತ್ತು. ಕಛೇರಿಯಲ್ಲೂ ಏಕಾಗ್ರತೆ ಇಲ್ಲ. ರೂಮಿನಲ್ಲೂ ನೆಮ್ಮದಿಯಿಲ್ಲ, ಸಾಕು ಈ ಉದ್ಯೋಗ ಅಂದುಕೊಂಡು ಮನೆಕಡೆ ಹೊರಟಿದ್ದೆ. ನನು ಬಂದರೆ ಮಾತ್ರ ಉದ್ಯೋಗಕ್ಕೆ ಹೋಗುವೆ, ಇನ್ನೂ ನನು ಬಡತನದ ಬದುಕು ಸಾಗಿಸುವುದು ನಂಗಿಷ್ಟವಿಲ್ಲ ಎಂದು ಅಮ್ಮನಲ್ಲಿ ಹಠ ಹಿಡಿದಿದ್ದೆ. ಆದರೆ ಅಮ್ಮ ಎಂದಿನಂತೆ ನರ್ಮಲವಾಗಿ ನಕ್ಕಳು. ನನ್ನ ಹತ್ತಿರ ಕೂರಿಸಿ ತಲೆ ಸವರುತ್ತಾ ಹೇಳಿದಳು.
ನಂಗೆ ಈ ಬದುಕೇ ತುಂಬಾ ಖುಷಿ ಕೊಡುತ್ತಿದೆ. ನನು ಅಲ್ಲಿ ಚನ್ನಾಗಿರು. ಟೆಲಿಗ್ರಾಮ್ ಕಳುಹಿಸುತ್ತಿರು. ನಂಗ್ಯಾವ ಬೇಸರವೂ ಇಲ್ಲ.
8. ಅಮ್ಮನಗೆ ವಯಸ್ಸಾಯಿತು. ಈ ನಡುವೆ ಅಮ್ಮ ಒಂದೇ ಒಂದು ಬಾರಿ ತನ್ನ ಬಗ್ಗೆ, ತನ್ನ ಆರೋಗ್ಯದ ಬಗ್ಗೆ ಪ್ರಸ್ತಾಪಿಯೇ ಇಲ್ಲ. ಪ್ರತಿ ಸಂದರ್ಭದಲ್ಲೂ ಆಕೆ ನನ್ನ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಳು. ಜಾಗ್ರತೆ ಮಗನೇ ಅನ್ನುತ್ತಿದ್ದಳು. ಹೀಗಿರುವಾಗಲೇ ಒಂದು ದಿನ ಅಮ್ಮ ಕಾಯಿಲೆಗೊಳಗಾಗಿರುವ ಸುದ್ದಿ ಬಂತು. ಒಡೋಡಿ ಬಂದೆ. ಅಮ್ಮ ಕ್ಯಾನ್ಸರ್ ಪೀಡಿತಳಾಗಿ ಮಲಗಿದ್ದಳು. ನನ್ನನ್ನು ಕಂಡ ಕೂಡಲೇ ನಗುವ ಪ್ರಯತ್ನ ಮಾಡಿದಳು. ಸಾಧ್ಯವಾಗಲಿಲ್ಲ. ನಾನು ಹೃದಯ ಬಿರಿದು ಅತ್ತೆ. ಅಮ್ಮ ತಡವರಿಸುತ್ತಾ ಹೇಳಿದಳು.
ಅಳ್ಬೇಡ ಮಗನೇ, ನನಗೇನು ಆಗಿಲ್ಲ. ನೋವು ಆಗ್ತಿಲ್ಲ. ಸುಖವಾಗಿದ್ದೇನೆ.
ಅಮ್ಮ ಹೇಳಿದ 8 ಸುಳ್ಳುಗಳು ಅನ್ನು ಮಲೆಯಾಳಂ ಭಾಷೆಯ ಈ ಇ-ಮೇಲ್ನ್ನು ಓದುತ್ತಾ ಮನಸ್ಸು ಭಾರವಾಯಿತು. ಇಷ್ಟಕ್ಕೂ ಅಮ್ಮನ ಆ ಮಹಾನ್ ಗುಣಕ್ಕೆ ಸುಳ್ಳು ಎಂಬ ಪದವನ್ನು ಪ್ರಯೋಗಿಸುವುದಾದರೂ ಹೇಗೆ? ನಜವಾಗಿ ಬದುಕಿನ ವಿವಿಧ ಹಂತಗಳಲ್ಲಿ ಅಮ್ಮ ಅನೇಕಾರು ಪಾತ್ರಗಳನ್ನು ನರ್ವಹಿಸುತ್ತಾ ಬರುತ್ತಿರುತ್ತಾರೆ. ನಾವು ಸಣ್ಣವರಿರುವಾಗ ನಮ್ಮ ಪಾಲಿಗೆ ತಾಯಿ ಎಂದರೆ ಬರೇ ಊಟ ಕೊಡುವ, ಸ್ನಾನ ಮಾಡಿಸುವ, ಮಲಗಿಸುವ, ಹಾಲು ಕಒಡುವ, ಬಟ್ಟೆ ತೊಳೆಯುವ.. ಒಂದು ವ್ಯಕ್ತಿತ್ವವಷ್ಟೇ ಆಗಿರುವುದಿಲ್ಲ. ನಮ್ಮ ಸಕಲ ಪ್ರಶ್ನೆ, ಅನುಮಾನ, ದೂರುಗಳಿಗೆ ಸಿದ್ದ ಉತ್ತರ ಸಿಗುವ ಖಜಾನೆಯೂ ಆಗಿರುತ್ತಾರೆ. ಏನೇ ಕೇಳಿದರೂ ಅಮ್ಮ ಉತ್ತರಿಸುತ್ತಾರೆ. ಇರುವೆಯ ಬಗ್ಗೆ, ಕಾಗೆಯ ಕೂಗಾಟದ ಬಗ್ಗೆ, ಬೆಕ್ಕು, ಕೀಟ, ಟಿವಿ ಚಿತ್ರ, ಹೋಮ್ ವರ್ಕಗಳ ಬಗ್ಗೆ... ಎಲ್ಲದರ ಕುರಿತೂ ನಾವು ಕೇಳುವುದು ಅಮ್ಮನಲ್ಲೇ ಅಲ್ಲವೇ? ಅಮ್ಮನಗೆ ಗೊತ್ತಿಲ್ಲದ್ದು ಏನು ಇಲ್ಲ ಅನ್ನುವ ಭಾವನೆಯೊಂದು ಪ್ರತಿ ಮಗುವಿನಲ್ಲೂ ಬೆಳೆದೇ ಇರುತ್ತದೆ.
ಆದರೆ, ಟೀನೇಜ್ ಹಾಗಲ್ಲ. ಅಲ್ಲಿ ತಾಯಿಯ ತಿಳುವಳಿಕೆಯ ಬಗ್ಗೆ, ನಲುವುಗಳ ಕುರಿತು ಅಸಮಾಧಾನ ಸ್ಪೋಟಗೊಳ್ಳತೊಡಗುತ್ತದೆ. ನನ್ನನ್ನು ತಾಯಿ ಅರ್ಥ ಮಾಡಿಕೊಳ್ಳುತ್ತಿಲ್ಲ ಅನ್ನುವ ದಾಟಿಯಲ್ಲಿ ಆ ವಯಸ್ಸು ಮಾತಾಡಿಸುತ್ತದೆ. ತನ್ನ ಪ್ರತಿ ಅಭಿಪ್ರಾಯ, ಬೇಡಿಕೆಯನ್ನೂ ಅಮ್ಮ ಒಪ್ಪಬೇಕು ಅನ್ನು ಹಠ ಬಂದುಬಿಡುತ್ತದೆ. ಇಷ್ಟಕ್ಕೂ ಮಕ್ಕಳಲ್ಲಿ ಇಂಥ ನಲುವುಗಳು ಶಾಶ್ವತವಾಗಿ ಉಳಿದಿರುತ್ತವೆ ಎಂದಲ್ಲ. ಮಧ್ಯ ವಯಸ್ಸಿನಲ್ಲಿ ಮದುವೆ, ಮಕ್ಕಳಾದ ಮೇಲೆ ವ್ಯಕ್ತಿ ಮತ್ತೇ ಬದಲಾಗುತ್ತಾನೆ/ಳೆ. ತಾಯಿಯನ್ನು ಪ್ರಿತಿಸತೊಡಗುತ್ತಾನೆ/ಳೆ. ಆಕೆಯ ವ್ಯಕ್ತಿತ್ವ ಆತನಲ್ಲಿ/ಕೆ ಮತ್ತೇ ಮತ್ತೇ ಪ್ರಭಾವ ಬೀರತೊಡಗುತ್ತದೆ. ವಿಶೇಷ ಏನೆಂದರೆ, ಈ ಎಲ್ಲ ಸಂದರ್ಭಗಳಲ್ಲಿ ಅಮ್ಮ ಅಮ್ಮನೇ ಆಗಿರುತ್ತಾಳೆ. ಮಗು ಸಿಟ್ಟು ಮಾಡಿಕೊಂಡಿದ್ದಾನೆಂದೋ ಮಗಳೂ ಮುನಸಿಕೊಂಡಿದ್ದಾಳೆಂದೋ ಅಂದುಕೊಂಡು ಮಕ್ಕಳನ್ನೇ ದ್ವೇಷಿಸುವ ಅಮ್ಮಂದಿರಿರುವದನ್ನು ಎಲ್ಲಾದರೂ ಕೇಳಿದ್ದೀರಾ? ಮಾತು ಬಿಟ್ಟೋ, ಅಪ್ಪನಲ್ಲಿ ಸಿಟ್ಟು ಮಾಡಿಕೊಂಡೋ ಹೊರಟು ಹೋದ ಮಗನನ್ನು ನೆನಪಿಸಿಕೊಂಡು ಕಣ್ಣೀರಿಳಿಸುವದಕ್ಕೆ ಅಮ್ಮನಗಲ್ಲದೇ ಇನ್ನಾರಿಗೆ ಸಾಧ್ಯವಿದೆ? ಒಂದು ರೀತಿಯಲ್ಲಿ ನಾವು ಬೆಳೆದಂತೆ ಅಮ್ಮ ಬೆಳೆಯುತ್ತಲೇ ಇರುತ್ತಾರೆ. ನಾವು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದಂತೆಲ್ಲಾ ಅಮ್ಮ ನಗೂಡವಾಗುತ್ತಲೇ ಹೋಗುತ್ತಾಳೆ.
ಅಂದಹಾಗೆ
ಮೊಬೈಲ್ನ್ನು ವಿಪರೀತವಾಗಿ ಹಚ್ಚಿಕೊಳ್ಳಬೇಡ ಎಂದು ಅಮ್ಮ ಬುದ್ದಿವಾದ ಹೇಳಿದ್ದಕ್ಕೆ ಸಿಟ್ಟಾಗಿ 12ರ ವಯಸ್ಸಿನ ಮಗಳೊಬ್ಬಳು ಕಳೆದ ವಾರ ಆತ್ಮಹತ್ಯೆ ಮಾಡಿಕೊಂಡ ಸುದ್ದಿಯನ್ನು ಓದಿದಾಗ ಈ ಇ-ಮೇಲ್ ನೆನಪಾಯಿತು.
No comments:
Post a Comment
Thanku