Saturday, December 17, 2011

ನಾನು ಬೇಡವಾದೆನಾ.. ನಿಮಗೆ!

ಬಡತನ, ಅನಕ್ಷರತೆಯ ಕೊರತೆಯಿಂದಾಗಿ ಭ್ರೂಣಹತ್ಯೆಯೂ ದೇಶದಲ್ಲಿ ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ.. ಸಕರ್ಾರ ಭ್ರೂಣಹತ್ಯೆ ನಿಮರ್ೂಲನೆ ಮಾಡಲು ಹಾಕಿಕೊಂಡಿರುವ ಕಾರ್ಯಕ್ರಮಗಳನ್ನು ಸಾಮಾಜಿಕ ಹೊಣೆಗಾರಿಕೆಯಿಂದ ಪ್ರತಿಯೊಬ್ಬರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಜನಸಾಮಾನ್ಯರಿಗೆ ತಿಳಿಸಬೇಕು. ಅಂದಾಗ ಮಾತ್ರ ಭ್ರೂಣಹತ್ಯೆ ನಿಯಂತ್ರಿಸಲು ಸಾಧ್ಯ ಎನ್ನುತ್ತಾರೆ. ಖ್ಯಾತ ಶಸ್ತ್ರಚಿಕಿತ್ಸಕರಾದ ಡಾ.ಅಂಬಿಕಾವತಿ ಎಂ.

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗಂಡಿಗಿಂತ ಹೆಣ್ಣಿಗೆ ಉನ್ನತ ಸ್ಥಾನವಿದೆ. ಹೆಣ್ಣು ದೇವತೆಯ ಸ್ವರೂಪಿ, ಮನೆಯ ಲಕ್ಷ್ಮೀಯೆಂದು ಕರೆಯುವುದು ರೂಡಿಯಲ್ಲಿದೆ. ಇದು ಎಲ್ಲರಿಗೆ ಗೊತ್ತಿರುವ ವಿಷಯವು ಹೌದು.

ಇಂದು ನಮ್ಮ ಆಧುನಿಕ ಭಾರತದಲ್ಲಿ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಗಂಡಿಗೆ ಸಮನಾಗಿ ಬೆಳೆದು ನಿಂತಿದ್ದಾಳೆ. ಅದು ಸಂತೋಷದ ವಿಷಯ ಆದರೆ, ಅಷ್ಟೇ ಖೇದಕರವಾಗಿ ಮಹಿಳೆ ತಾನು ಬಾಣಂತಿಯ ಸಂದರ್ಭದಲ್ಲಿ ತನ್ನ ಹೊಟ್ಟೆಯಲ್ಲಿ ಹೆಣ್ಣಿದೆ ಎಂದು ಗೊತ್ತಾದರೆ, ಅದನ್ನು ಹತ್ಯೆ (ಭ್ರೂಣಹತ್ಯೆ) ಮಾಡಿಸುವ ಕೆಲಸಕ್ಕೆ ಮುಂದಾಗಿದ್ದಾಳೆ. ಮತ್ತೊಂದೆಡೆ ಅನೈತಿಕ ಸಂಬಂಧಗಳಿಂದ ಹುಟ್ಟುವ ಮಗುವು ಹತ್ಯೆಯಾಗುತ್ತಿದೆ. ತಾವು ಮಾಡಿದ ತಪ್ಪಿಗೆ ಅಸುಳೆಯನ್ನು ಬಲಿಕೊಡುವ ಸಂಪ್ರದಾಯ 2ವರ್ಗದಲ್ಲೂ ನಡೆಯುತ್ತಿದೆ. ವಿದ್ಯಾಂವತರು ಮತ್ತು ಅನಕ್ಷರಸ್ಥರು ತಾವು ಮಾಡುವ ತಪ್ಪಿಗೆ ಇಂತಹ ಕೃತ್ಯವನ್ನು ಮಾಡಲು ಮುಂದಾಗುತ್ತದೆ3. ಒಟ್ಟಾರೆ ಭ್ರೂಣಹತ್ಯೆ ಎಂಬುದು ದೇಶದ ಸಾಮಾಜಿಕ ಪಿಡುಗಾಗಿ ಪರಿಣಮಿಸತೊಡಗಿದೆ.

ಸಕರ್ಾರಗಳು ಸಾಕಷ್ಟು ಸುರಕ್ಷತಾ ಕ್ರಮಗಳು, ಕಾನೂನುಗಳನ್ನು ಜಾರಿಗೆ ತಂದರೂ ಭ್ರೂಣಹತ್ಯೆಗಳು ಮೊದಲಿಗಿಂತ ಇಂದು ಜಾಸ್ತಿಯಾಗಿವೆ.

ನಾಗರಿಕ ಸಮಾಜವು ಎಂತಹ ಕೀಳು ಕ್ರೌರ್ಯಕ್ಕೆ ಇಳಿದಿದೆ ಹೋಗಿವೆ ಎಂದರೆ, ಹೇಳತೀರದು. ಭ್ರೂಣಹತ್ಯೆಯ ವಿಷಯದಲ್ಲಿ ನಮ್ಮ ಮಾನವೀಯ ಮೌಲ್ಯಗಳಿಗೆ ಬೆಲೆಯೆ ಇಲ್ಲದಂತಾಗಿದೆ. ಲಿಂಗಧಾರಿತ ಗರ್ಭಪಾತ (Sex selective abortion) ಇಂದು ಸಮಾಜದ ಸೂಕ್ಷ್ಮ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ. ಜಾತಿ, ಮತ, ಪ್ರೇಮ ವೇಗಗಳ ಗಡಿ ಇಲ್ಲ್ಲದೆ ದೇಶದ್ಯಂತ ಈ ಪಾಪದ ಕ್ರೌರ್ಯ ವ್ಯಾಪಕವಾಗಿ ಹರಡುತ್ತಿದೆ.

ಆಧುನಿಕ ವೈದ್ಯಕೀಯ ವಿಜ್ಞಾನದ ಅನ್ವಯಗಳಾದ Amniocentesis ಮತ್ತು Ultrasoundಗಳ ದುರ್ಬಳಕೆ, ಹಾಗು ಕೆಲವೊಂದು ಜಾಹೀರಾತುಗಳು ಜನರ ಮನಸ್ಸಿನ ಮೇಲೆ ತುಂಬ ಕೆಟ್ಟ ಪರಿಣಾಮವನ್ನು ಬೀರುತ್ತಿವೆ. Pay Rs/- 500 now and save Rs/- 5oooo later ಎಂಬ ನಾಮ ಫಲಕಗಳು Scanning centreಗಳಲ್ಲಿ ನಾವು ನೋಡಬಹುದಾಗಿದೆ.

Kolloor
ಮಕ್ಕಳಿಗೆ ಜನ್ಮ ನೀಡುವುದಕ್ಕೆ ಮತ್ತು ಮನೆಯನ್ನು ನಿಭಾಯಿಸುವದಕ್ಕೆ ಹೆಣ್ಣು/ಹೆಂಡತಿ ಬೇಕು ಆದರೆ ಹೆಣ್ಣಿನ ಜನನ ಮಾತ್ರ ಬೇಡ ಎಂಬ ಈ ಮೂರ್ಖತನ, ಮೂಡನಂಬಿಕೆ ಈ ಸಮಾಜದಲ್ಲಿ ತೊಲಗಬೇಕು. ಅದಕ್ಕಾಗಿ ಪ್ರತಿಯೊಬ್ಬರು ಜಾಗೃತಿ ಹೊಂದಬೇಕು.

ನನ್ನ ಇಪ್ಪತ್ತು ವರ್ಷದ ವೈದ್ಯಕೀಯ ಅನುಭವದಲ್ಲಿ ನಾನು ಭ್ರೂಣಹತ್ಯೆಗೆ ಕಂಡುಕೊಂಡ ಕಾರಣಗಳೇನೆಂದರೆ ಬಡತನ ಮತ್ತು ಅನಕ್ಷರತೆ. ಇವೆರಡರ ಕೊರತೆಯಿಂದಾಗಿ ಸ್ತ್ರೀ ಸಮಾನತೆ ಹಾಗೂ ಸಾಮಾಜಿಕ ಮೌಲ್ಯಗಳು ಕುಸಿಯುತ್ತಿವೆ. ಗ್ರಾಮಾಂತರ ಪ್ರದೇಶಗಳಲ್ಲಿ ಹೆಣ್ಣುಮಕ್ಕಳನ್ನು ಭಾರ/ಹೊರೆ, ಅವಳಿಂದ ಏನೂ ಪ್ರಯೋಜನ ಇಲ್ಲ, ಅವಳಿಗೆ ಮದುವೆ ವರದಕ್ಷಿಣೆಯ ಖಚರ್ು ಇತ್ಯಾದಿಗಳೆಲ್ಲ ಮಾಡಬೇಕಾಗುತ್ತದೆ ಎಂದು ಭಾವಿಸಿ ಅವಳನ್ನು ಪೋಷಿಸುವುದೇ ವ್ಯರ್ಥವೆಂಬ ಕೀಳು ಧೋರಣೆ ಗ್ರಾಮಾಂತರ ಮಹಿಳೆಯರನ್ನು ಭ್ರೂಣಹತ್ಯೆಗೆ ಪ್ರಚೋಧಿಸುತ್ತಿದೆ.

ಭ್ರೂಣಹತ್ಯೆ ಬರೀ ಶಿಶುವಿನ ಶೋಷಣೆಯಲ್ಲದೇ ತಾಯಿಯ ಶೋಷಣೆಯು ನಡೆಯುತ್ತಿದೆ. ಗಂಡು ಹೆಣ್ಣಿನ ಜನನವಾಗುವುದು ವೈಜ್ಞಾನಿಕವಾಗಿ ಗಂಡಿನ ಕ್ರೋಮೋಜೋಮ್ ಎಕ್ಸ್ ವೈ ಇಂದ ನಿಧರ್ಾರವಾಗುತ್ತದೆ. ಹೆಣ್ಣಿನ ಎಕ್ಸ್ ಎಕ್ಸ್ ಕ್ರೋಮೋಜೋಮ್ನಿಂದ ಮಾತ್ರವಲ್ಲ. ಈ ಸತ್ಯವನ್ನು ಎಲ್ಲರೂ ಅರಿಯಬೇಕಾಗಿದೆ. ತನ್ನದೇನೂ ತಪ್ಪಿಲ್ಲದಿದ್ದರೂ ಹೆಣ್ಣು ನಿಂದನೆಗೆ ಒಳಗಾಗಿ ಗಂಡನ, ಅತ್ತೆ ಮಾವಂದಿರ ಒತ್ತಾಯಕ್ಕೆ ಮಣಿದು ಭ್ರೂಣಹತ್ಯೆಗೆ ಒಪ್ಪುತ್ತಾಳೆ ಆದರೆ ನಿಜಸ್ಥಿತಿಯಲ್ಲಿ ಯಾವ ತಾಯಿಯೂ ತನ್ನ ಕರುಳಿನ ಕುಡಿಯನ್ನು ಬೆಳೆಯುವ ಮುನ್ನ ಕೊಲ್ಲುವದನ್ನು ಒಪ್ಪುವುದಿಲ್ಲ. ಈ ನಾಗರಿಕ ಸಮಾಜ ಭ್ರೂಣಹತ್ಯೆಯ ನೆಪದಲ್ಲಿ ಹೆಣ್ಣನ್ನು ಮಾನಸಿಕವಾಗಿ, ಶಾರೀರಿಕವಾಗಿ ಶೋಷಣೆಗೆ ಒಳಪಡಿಸಿ ಆಕೆಯನ್ನು ಗಂಡು ಮಗುವಿಗೆ ಜನ್ಮ ನೀಡುವ ಯಂತ್ರ ಎಂದು ಭಾವಿಸಿ ಅಬಲೆಯನ್ನಾಗಿಸಿದೆ.

ಇನ್ನಾದರೂ ಭ್ರೂಣಹತ್ಯೆಯನ್ನು ನಿಲ್ಲಿಸಲು ಪ್ರಯತ್ನಿಸೋಣ. ಎಲ್ಲಾ ಶಾಲಾ ಕಾಲೇಜುಗಳಲ್ಲಿ, ವೈದ್ಯಕೀಯ ಕೇಂದ್ರಗಳಲ್ಲಿ/ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಮಹಿಳಾ ಜಾಗೃತಿಯನ್ನು ಉಂಟುಮಾಡುವ ಕಾರ್ಯಕ್ರಮಗಳಿಗೆ ಚಾಲನೆ ನೀಡೋಣ. ಅದರಿಂದ ಸ್ವಲ್ಪಮಟ್ಟಿಗೆ ಜಾಗೃತಿಯನ್ನಾದರೂ ಕಾಣಬಹುದಾಗಿದೆ..

ಭಾರತ ಸಕರ್ಾರದ ಬಾಲಿಕ ಯೋಜನೆಗಳು, ಕುಟುಂಬ ಕಲ್ಯಾಣ ಯೋಜನೆಗಳು ಹೆಣ್ಣು ಅಬಲೆಯಲ್ಲ ಸಬಲೆ ಎಂದು ಘೋಷಿಸಿ 2001ರ ವರ್ಷವನ್ನು ಸ್ತ್ರೀ ಸಬಲೀಕರಣ ವರ್ಷವೆಂದು ಘೋಷಿಸಿದ್ದರೂ, ಹೆಣ್ಣು ಆಂತರಿಕವಾಗಿ ಶೋಷಣೆಯನ್ನು ಅನುಭವಿಸುತ್ತಿರುವಳು.

ಗರ್ಭಪಾತ ಮಾಡುವ ಮುನ್ನ ವೈದ್ಯರೂ ಸಹ ಸ್ವಲ್ಪ ಪ್ರಜ್ಞೆಯಿಂದ ವತರ್ಿಸಬೇಕಾಗಿದೆ ಅನಗತ್ಯ ಗರ್ಭಪಾತ ಮಾಡುವುದನ್ನು ತಮ್ಮಲ್ಲಿಯೇ ಚಚರ್ಿಸಿ ನಿಲ್ಲಿಸಬೇಕು. ಶಿಶು ಹತ್ಯೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜಾರಿಯಾಗಬೇಕು.

ಇನ್ನೊಂದೆಡೆ ಹೆಣ್ಣುಮಕ್ಕಳನ್ನು ಕಸದ ಬುಟ್ಟಿಗೆ ಬಿಸಾಡುವ ಜನ..; ತಮ್ಮ ಮಗು ತಮಗೆ ಹೊರೆಯಾದರೆ ಅನಾಥಾಶ್ರಮಕ್ಕಾದರೂ ಸೇರಿಸಬಹುದಲ್ಲವೇ? ತಮಿಳುನಾಡು ಸಕರ್ಾರವು ವೈಟ್ ಕ್ರೆಡಲ್ಎಂಬ ಶಿಶು ಸಂರಕ್ಷಣಾ ಕೇಂದ್ರಗಳನ್ನು ರೂಪಿಸಿದೆ. ಇಲ್ಲಿ ಬೇಡವಾದ ನವಜಾತ ಶಿಶು, ಅನಾಥ ಶಿಶುಗಳನ್ನು ಪೋಷಿಸಲಾಗುತ್ತಿದೆ. ಇಂತಹ ಕೇಂದ್ರಗಳನ್ನು ನಮ್ಮ ಸಕರ್ಾರವು ಪ್ರಾರಂಭಿಸಿದಲ್ಲಿ ಭ್ರೂಣಹತ್ಯೆಯನ್ನು ತಡೆಯಬಹುದು.

ಎರಡೂ ದಶಕಗಳ ಕಾಲ ಭಾರತವನ್ನಾಳಿದ ಇಂದಿರಾಗಾಂಧಿ, ಗಗನ ಯಾತ್ರೆಯನ್ನು ಮಾಡಿದ ಕಲ್ಪನಾ ಚಾವ್ಲ, ಆಟೋಟದಲ್ಲಿ ಮಿಂಚಿದ ಪಿ.ಟಿ. ಉಷಾ, ಸಂಗೀತ ಕ್ಷೇತ್ರದಲ್ಲಿ ಗಂಗೂಭಾಯಿ ಹಾನಗಲ್ ಹೀಗೆ ಸಾಕಷ್ಟು ಮಹಿಳೆಯರು ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಇಂತಹ ನಮ್ಮ ದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆಗಳು ಮೇಲಿಂದ ನಡೆಯುತ್ತಿರುವುದು ನಮ್ಮೆಲ್ಲರ ದೌಭರ್ಾಗ್ಯ..!

ಹೆಣ್ಣು ಭ್ರೂಣಹತ್ಯೆ ಅಪರಾಧ ಎಂಬ ಪ್ರಜ್ಞೆ ಎಲ್ಲಾ ಜನತೆಯಲ್ಲಿ ಬರಬೇಕಾಗಿದೆ ಈ ನಿಟ್ಟಿನಲ್ಲಿ ಸ್ವಯಂಸೇವಾ ಸಂಸ್ಥೆಗಳು, ವೈದ್ಯರು ಶಿಶುಹತ್ಯೆಯನ್ನು ನಿಲ್ಲಿಸುವುದು ತಮ್ಮ ಕರ್ತವ್ಯವೆಂದು ಭಾವಿಸಿ ಜನರಲ್ಲಿ ಜಾಗೃತಿಯನ್ನು ಉಂಟುಮಾಡಲು ಕಾರ್ಯಕ್ರಮ ಗಳನ್ನು ನಡೆಸಬೇಕು. ಶಿಶುಹತ್ಯೆಯನ್ನು ನಿಮರ್ೂಲನೆ ಮಾಡಿ ಆ ಮೂಲಕ ಹೆಣ್ಣಿನ ರಕ್ಷಣೆ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಯೋಚಿಸಬೇಕಾಗಿದೆ. ಹೆಣ್ಣು ಮಗುವನ್ನು ಸಾಯಿಸುವ ಮೊದಲು ಅದಕ್ಕೂ ಜೀವವಿದೆ, ಬದುಕುವ ಹಕ್ಕು ಇದೆ ಎಂಬುದನ್ನು ಯೋಚಿಸಿ ಬದುಕಲು ಬಿಡಬೇಕಾಗಿದೆ. ನನ್ನ ಕಳಕಳಿಯ ಮನವಿ.

ಡಾ.ಅಂಬಿಕಾವತಿ.ಎಂ.
ಮುಖ್ಯ ಶಸ್ತ್ರಚಿಕಿತ್ಸಕರು. ಎಸ್.ಡಿ.ಯು.ಎಂ.ಸಿ.ಕೋಲಾರ.

1 comment:

  1. The Real life fact... Today every couple expect for a boy kid... They even forget they have born through a mother who is girl too... Being a doctor you have illustrated the problem and message for development beautifully in this article... Keep on writing..

    Thank you,

    Regards,

    VIVEK NAMBIAR
    RESEARCH SCHOLAR
    DEPT OF MASS COMMUNICATION & JOURNALISM
    MANGALORE UNIVERSITY
    09632005187

    ReplyDelete

Thanku