ಮಾನ್ವಿ ಶಿಕ್ಷಣ ಇಲಾಖೆಗೆ ಕಂಠಕವಾಗಿರುವ ಬಿ.ಇ.ಓ ರಾಮಾಂಜನೇಯ!
ಲಿಂಗಸ್ಗೂರಿನ ಮಾಜಿ ಬಿ.ಇ.ಓ ರಾಮಾಂಜಿನೇಯ ಮಾನ್ವಿಗೆ ಹೋದಾಗಿನಿಂದ ಒಂದಿಲ್ಲೊಂದು ಕಿತಾಪತಿಗಳನ್ನು ಮಾಡುತ್ತಾ, ಶಿಕ್ಷಣ ಇಲಾಖೆಯಲ್ಲಿ ಹಗಲು ದರೋಡೆಗೆ ಕಂಕಣಬದ್ದರಾಗಿ ನಿಂತಿದ್ದಾರೆ. ಮಾನ್ವಿಯ ಶಿಕ್ಷಣ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಶಿಕ್ಷಣ ಇಲಾಖೆಯ ನೀತಿ ನಿಯಮಗಳನ್ನು ಉಲ್ಲಂಘಿಸಿ ಶಿಕ್ಷಕರಿಗೆ ರಜೆ, ವಗರ್ಾವಣೆ, ಎರವಲು ಇತ್ಯಾದಿಗಳನ್ನು ದುಡ್ಡು ಕೊಟ್ಟವರಿಗೆ ಮಾತ್ರ ನೀಡುತ್ತಿದ್ದಾರೆಂದು ಶಿಕ್ಷಕವರ್ಗವೇ ಆರೋಪಿಸುತ್ತಿದೆ. ಈ ಕುರಿತು ನಮ್ಮ ಪ್ರತಿನಿಧಿ ಸಂಪೇಲ್ಲೇರ್ ಅವರಿಂದ ಒಂದು ವರದಿ.
ಮಾನವಿಗೆ ರಾಮಾಂಜನೇಯ ಎಂಬ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಂದ ಮೇಲೆ ದಿನನಿತ್ಯ ಶಿಕ್ಷಕರ ಗೋಳು ದಿನದಿಂದ ದಿನೇ ಹೆಚ್ಚಾಗುತ್ತಿದೆ. ಇವರು ಶಿಕ್ಷಕರಿಗೆ ಮಾರ್ಗದರ್ಶಕರಾಗಿ ಒಳ್ಳೆಯ ಶೈಕ್ಷಣಿಕ ಪ್ರಗತಿ ಸಾಧಿಸುವ ಬದಲು ಅಶಿಕ್ಷಕರಂತೆ ವತರ್ಿಸುತ್ತಿದ್ದಾರೆ. ರಾಮಾಂಜನೇಯರ ಆಡಳಿತ ಶಿಕ್ಷಕರೆಲ್ಲ ರೋಸಿಹೋಗಿದ್ದಾರೆ.ಮಾನವಿಗೆ ಬಂದಾಗಿನಿಂದ ಎಂದು ನೋಡಿದರೂ ರಜೆ, ಮೀಟಿಂಗ್, ಪ್ರವಾಸವೆಂದು ಪಿಳ್ಳೆನೆವ ತೆಗೆಯುತ್ತಾ, ಊರುರು ತಿರುಗುತ್ತಾ ಮಜಾ ಉಡಾಯಿಸುತ್ತಾರೆ.ಇದು ಇಲಾಖೆಯಲ್ಲಿ ಪ್ರತಿಯೊಬ್ಬರಿಗೂ ಗೊತ್ತಿದ್ದರೂ ಸರ್ವರು ಮೂಕಪ್ರೇಕ್ಷಕರಾಗಿದ್ದಾರೆ. ಪ್ರತಿವರ್ಷ ಶಿಕ್ಷಕರ ದಿನಾಚರಣೆ ಮಾಡುವುದು ಶಿಕ್ಷಣ ಇಲಾಖೆಯ ಆದ್ಯ ಕರ್ತವ್ಯವಾಗಿದೆ. ಅದು ಒಂದೆಡೆ ಸಕರ್ಾರದ ಆದೇಶವು ಇದೆ. ಆದರೆ, ಮಾನವಿಗೆ ರಾಮಾಮಂಜನೇಯನರು ಹೋಗಿ 2ವರ್ಷಗಳಿಂದ ಇಲ್ಲಿಯವರೆಗೆ ಶಿಕ್ಷಕರ ದಿನಾಚರಣಿಯನ್ನು ಮಾಡದೇ ಶಿಕ್ಷಕ ವರ್ಗಕ್ಕೆ ಅಪಮಾನವೆಸಗಿದ್ದಾರೆ.ಪ್ರತಿವರ್ಷ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ಪ್ರತಿಶಾಲೆಗೆ ಮುಟ್ಟಿಸುವುದು ಬಿ.ಇ.ಓರವರ ಜವಾಬ್ದಾರಿ. ಅದಕ್ಕಾಗಿ ಸಕರ್ಾರ ಇಂತಿಷ್ಟು ಹಣವನ್ನು ಮೀಸಲಿಟ್ಟು ಸಾಗಾಣಿಕೆ ವೆಚ್ಚವನ್ನು ಭರಿಸುತ್ತದೆ. ಆದರೆ, ಮಹಾನ್ ಬಿ.ಇ.ಓ ಸಾಹೇಬರು ಇಲ್ಲಿಯವರೆಗೆ ತಾಲೂಕಿನಲ್ಲಿ ಕೆಲವೊಂದು ಶಾಲೆಗಳಿಗೆ ಇಲ್ಲಿಯವರೆಗೆ ಸಮರ್ಪಕವಾಗಿ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನು ವಿತರಿಸಿಲ್ಲ. ಕಾಟಾಚಾರವೆಂಬಂತೆ ತಾಲೂಕಿನ ಕೆಲವೊಂದು ಹೋಬಳಿಗಳ ಶಾಲೆಗೆ ಮಾತ್ರ ರವಾನೆ ಮಾಡಿದ್ದಾರೆ. ಇನ್ನುಳಿದ ಹಲವು ಹಳ್ಳಿಗಳ ಮುಖ್ಯಗುರುಗಳು ತಮ್ಮ ಸ್ವಂತ ಖಚರ್ಿನಲ್ಲಿಯೇ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ತೆಗೆದುಕೊಂಡು ಹೋಗಬೇಕು.. ಇದು ಬಿ.ಇ.ಓ ಆದೇಶ ಎಂದು ಮೌಖಿಕವಾಗಿ ಗದರಿಸಿದ್ದಾರೆ.ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಕೆಲವೊಂದು ಶಿಕ್ಷಕರು ತಮ್ಮ ಖಚರ್ಿನಲ್ಲಿಯೇ ಪುಸ್ತಕಗಳನ್ನು ತೆಗೆದುಕೊಂಡು ಹೋಗಿ ವಿತರಿಸಿದ್ದಾರೆ. ಬಿ.ಇ.ಓ ಸಾಹೇಬರು ಸಕರ್ಾರ ನೀಡುವ ಸಾಗಾಣಿಕೆ ವೆಚ್ಚವನ್ನು ಬಹಳ ಸಲೀಸಾಗಿ ಗುಳುಂ ಮಾಡಿದ್ದಾರೆ!ಸಕರ್ಾರದಿಂದ ಬಂದಂತಹ ಹಣವನ್ನು ತಮ್ಮ ಪಿ.ಎ ಅಥವಾ ಯಾರನ್ನಾದರೂ ಶಿಕ್ಷಣ ಸಂಯೋಜಕರನ್ನು ನೇಮಿಸಿಕೊಂಡು ಅವರ ಮುಖಾಂತರ ತಿಂದು ಹಾಕುತ್ತಾರೆ. ಇದು ಮಾಸ್ತಾರ್ ಮಂದಿಗೆ ಬಿಟ್ಟರೆ ಬೇರ್ಯಾರಿಗೂ ಗೊತ್ತಾಗುವುದಿಲ್ಲ.ಹಿಂದೊಮ್ಮೆ ಶಿಕ್ಷಕರು ತಮ್ಮ ಖಚರ್ಿನಲ್ಲಿ ಪಠ್ಯಪುಸ್ತಕಗಳನ್ನು ತೆಗೆದುಕೊಂಡು ಹೋಗಿದ್ದರಿಂದ ಅವರವರ ಖಾತೆಗೆ ಸಕರ್ಾರದ ಸಾಗಾಣಿಕೆ ವೆಚ್ಚವನ್ನು ಜಮಾಮಾಡಬೇಕೆಂದು ಶಿಕ್ಷಕರು ಸಂಘವು ಮನವಿ ಸಲ್ಲಿಸಿತ್ತು! ದುರಂತಕ್ಕೆ ಇಲ್ಲಿಯವರೆಗೆ 2 ವರ್ಷವಾದರೂ, ಯಾವೊಬ್ಬ ಮುಖ್ಯಗುರುಗಳ ಖಾತೆಗೂ ಹಣ ಜಮಾವಣೆ ಆಗಿಲ್ಲ. ಕಾರಣ ಪಠ್ಯಪುಸ್ತಕ ವಿತರಣಿಯಲ್ಲಾದ ಅಕ್ರಮವನ್ನು ತನಿಖೆ ಮಾಡುವ ಅವಶ್ಯಕತೆ ಇದೆ.ಇನ್ನು ಇಲಾಖೆ ಹೊಸದಾಗಿ ಬಂದ ಶಿಕ್ಷಕರಿಗೆ ಗುಂಪುವಿಮೆ ಮಾಡುವ ಹೆಸರಿನಲ್ಲಿ ಸಾಕಷ್ಟು ದುಡ್ಡು ತಿಂದು ಹಾಕಿದೆ. ಪ್ರತಿಶಿಕ್ಷಕರಿಂದ 400ರಿಂದ 600ರೂವರೆಗೆ ವಸೂಲಿ ಮಾಡಿದೆ ಉದಾಹರಣೆಗಳಿವೆ. ಕೆಲವೊಂದು ಶಿಕ್ಷಕರು ರಾಮಾಂಜನೇಯರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಯಾಕೆಂದರೆ ಅವರು ಯಾವುದಕ್ಕೂ ತಲೆಬಿಸಿ ಮಾಡಿಕೊಳ್ಳುವುದಿಲ್ಲ.ಶಿಕ್ಷಕರ ಹಾಗೂ ತದಿತರೆ ಸಂಘಟನೆಗಳು ಹೋಗಿ ಕೇಳಿದರೆ ಬಾಯಾರಿಕೆಯ ಉತ್ತರ ನೀಡಿ, ಅದು ನನ್ನ ಗಮನಿಕ್ಕಿಲ್ಲ, ನಾನು ವಿಚಾರಿಸುತ್ತೇನೆಂದು ಹೇಳಿ ಜಾರಿಕೊಳ್ಳುತ್ತಾರೆ.ಈಗಾಗಲೇ ಶಿಕ್ಷಕರ ಗುಂಪುವಿಮೆ ಹೆಸರಿನಲ್ಲಿ ಎಲ್ಲರೂ ವ್ಯವಸ್ಥಿತವಾಗಿ ದುಡ್ಡನ್ನು ತಿಂದಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾದಾಗ ಮಾತ್ರ ಹೂರಣ ಹೊರಬೀಳಬಹುದು.ಅದರಂತೆ 2010/11ನೇ ಸಾಲಿನಲ್ಲಿ ನೇಮಕಗೊಂಡ ಹೊಸ ಶಿಕ್ಷಕರಿಗೆ ವೇತನ ಮಾಡಲು ಅರ್ಹತಾ ಪ್ರಮಾಣ ಪತ್ರ ನೀಡಬೇಕಾಗುತ್ತದೆ. ಅದನ್ನು ನೀಡಲು ಕೂಡ ಪ್ರತಿ ಶಿಕ್ಷಕರಿಂದ 700ರಿಂದ 1000ರೂಗಳವರೆಗೆ ಲಂಚ ಪಡೆಯುತ್ತಿದ್ದಾರೆ!ಕೆಲವು ತಿಂಗಳುಗಳಿಂದ ಸಂಬಳವಿಲ್ಲದೇ ಶಿಕ್ಷಕರು ಸಂಕಷ್ಟದಲ್ಲಿದ್ದಾರೆ. ನೀವ್ಯಾಕೆ ಅವರಿಂದ ದುಡ್ಡು ಕೀಳುತ್ತಿದ್ದಿರೆಂದು ಸಂಘಟನೆಯವರು ಕೇಳಿದರೆ, ಅವರನ್ನು ಸಮಜಾಯಿಷಿ, ಇಲ್ಲದಸಲ್ಲದ ಉತ್ತರ ನೀಡಿ ಕಳುಹಿಸುತ್ತಾರೆ. ರಾಮಾಂಜನೇಯರ ಕಛೇರಿಯಲ್ಲಿ ಕೆಲವು ಸಿಬ್ಬಂದಿಗಳು ನಮ್ಮ ಕಾಯರ್ಾಲಯದ ಖಚರ್ಿಗಾಗಿ ಬಿ.ಇ.ಓ ಸಾಹೇಬರೇ ದುಡ್ಡು ತೆಗೆದುಕೊಳ್ಳಿ ಎಂದು ಹೇಳಿದ್ದಾರೆಂದು ಹೇಳುತ್ತಾರೆ. ಇಂತಹ ಘಟನೆ ಹಿಂದೊಮ್ಮೆಯೂ ನಡೆದಿತ್ತು.ಪ್ರತಿಯೊಂದರಲ್ಲಿ ಸಮಪಾಲು ಸಮಬಾಳು ಎಂಬಂತೆ ಬಿ.ಇ.ಓರವರು ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಅವರ ವ್ಯಕ್ತಿತ್ವ ಮತ್ತು ಹುದ್ದೆಗೆ ಗೌರವ ತರುವಂತಹದ್ದಲ್ಲ.ಕನರ್ಾಟಕದಲ್ಲಿ ಎಲ್ಲಿಯೂ ಏಕೋಪಾಧ್ಯಾಯ ಶಾಲೆಗಳಿರಬಾರದೆಂದು ಈ ಹಿಂದೆಯೇ ಸಕರ್ಾರ ಆದೇಶ ಹೊರಡಿಸಿದೆ. ಅದಕ್ಕಾಗಿ ಸಾಕಷ್ಟು ನೇಮಕಾತಿ ಪ್ರಕ್ರಿಯೆಗಳನ್ನು ಮಾಡಿದೆ. ಆದರೆ, ಈ ಕಾಯ್ದೆ ಮಾನವಿ ಶಿಕ್ಷಣ ಇಲಾಖೆಗೆ ಅನ್ವಯವಾಗುತ್ತಿಲ್ಲ. ಯಾಕೆಂದರೆ, ಬಿ.ಇ.ಓರವರೇ ಖುದ್ದಾಗಿ ಕೆಲವೊಂದು ಶಿಕ್ಷಕರಿಗೆ ಏಕೋಪಾಧ್ಯಯರಾಗಿ ಕೆಲಸ ಮಾಡಿ, ಅದಕ್ಕಾಗಿ ನಿಮಗೆ ಎರವಲು ಕಳುಹಿಸುತ್ತೇನೆ ಎಂದು ಹೇಳುತ್ತಿದ್ದಾರೆ.ತಾಲೂಕಿನ ಕೆಲವೊಂದು ಕಡೆ ದುಡ್ಡಿನ ಆಸೆಗಾಗಿ ಬಿ.ಇ.ಓರವರು ಏಕೋಪಾಧ್ಯಾಯ ಶಾಲೆಗಳನ್ನು ಸೃಷ್ಟಿಸಿ ಮಕ್ಕಳ ಕಲಿಕೆಗೆ ಕಂಠಕರಾಗಿದ್ದಾರೆ. ಕೆಲವೊಂದು ಶಿಕ್ಷಕರಿಂದ ಹಣವನ್ನು ತಿಂದು ಕ್ರಾಸ್ ಡೆಪ್ಯೂಟೇಷನ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಹಣಸಿಕ್ಕರೆ ಸಾಕು ನಿಯಮಗಳನ್ನು ತಿದ್ದುಪಡಿ ಮಾಡಿ ಮನಸೋ ಇಚ್ಛೆ ಕಾರ್ಯನಿರ್ವಹಿಸುತ್ತಾರೆ. ಕ್ರಾಸ್ಡೆಪ್ಯೂಟೇಷನ್ ಮುಖಾಂತರ ತಮ್ಮ ಮನೆಗೆ ಬಂದು ಹಣ ನೀಡುವವರಿಗೆ ಕೆಲವೊಂದು ಶಾಲೆಗಳ ಸಂಪೂರ್ಣ ಜವಾಬ್ದಾರಿಯನ್ನು ನೀಡಿದ್ದಾರೆ. ಅಂತಹ ಶಾಲೆಗಳು ರಾಮಾಂಜನೇಯರ ಅವಧಿಯಲ್ಲಿ ಸಾಕಷ್ಟಿವೆ. ಉದಾಹರಣಿಗೆ ನವಲಕಲ್ ಶಾಲೆಯದ್ದು ಇದೇ ಪರಿಸ್ಥಿತಿ.ಸಾಹೇಬರ ದುರಾಡಳಿತ ನೋಡಿರುವ ಸಿಬ್ಬಂದಿಗಳು ಕೂಡ ಪ್ರತಿಯೊಂದು ಕೆಲಸಕ್ಕೆ ಇಂತಿಷ್ಟೂ ಮಾಮೂಲಿಯನ್ನು ಫಿಕ್ಸ್ ಮಾಡಿಕೊಂಡಿದ್ದಾರೆ. ಅಂದರೆ ಮಾನ್ವಿಯ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾಯರ್ಾಲಯದಲ್ಲಿ ಹಣ ನೀಡಿದರೆ ಅನಕ್ಷರಸ್ಥನು ಕೂಡ ಅಕ್ಷರಸ್ಥನಾಗಿ ದಾಖಲೆಗಳನ್ನು ಪಡೆಯಬಲ್ಲ.ಎಸ್.ಎಸ್.ಎ ಯೋಜನೆಯ ಸುಮಾರು 400ಶಿಕ್ಷಕರ ವೇತನ ಸೇವಾಪುಸ್ತಕ ನಿರ್ವಹಣೆ ಸೇರಿದಂತೆ ಇಲಾಖೆಯ ಹಲವು ಕೆಲಸ ಕಾರ್ಯಗಳನ್ನು ಮಾಡಲು ಸರಿಯಾದ ಸಿಬ್ಬಂದಿಗಳು ಇದ್ದರೂ ಬಿ.ಇ.ಓರವರು ಬಿ.ಆರ್.ಸಿಯಲ್ಲಿ ಸಿ.ಸಿ.ಟಿ ಎಂದು ನೇಮಕವಾಗಿರುವ ಕೃಷ್ಣಪ್ಪ ಎಂಬಾತನಿಗೆ ಜವಾಬ್ದಾರಿ ವಹಿಸಿ, ಮತ್ತೇ ಈತನ ಕೆಳಗೊಬ್ಬ ಶಿಕ್ಷಕನೊಬ್ಬ ಕೊಟ್ಟು, ಯಾರಿಗೆ ಗೊತ್ತಾಗದಂತೆ ಎಲ್ಲದರಲ್ಲೂ ಶಿಕ್ಷಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ.ಎಂದಾದರೂ ಶಿಕ್ಷಕರು ತಮ್ಮ ಕೆಲಸಗಳಿಗಾಗಿ ಬಿ.ಇ.ಓ ಕಾಯರ್ಾಲಯಕ್ಕೆ ಬಂದರೆ, ರಾಮಾಂಜನೇಯರವರು ಎಲ್ಲೋ ದೂರವಿರುವ ಬಿ.ಆರ್.ಸಿಯನ್ನು ಭೇಟಿಯಾಗಿ ಹೋಗಿ ಎಂದು ಹೇಳುತ್ತಾರೆ. ಅಂದರರ್ಥ ಶಿಕ್ಷಕರು ಮೊದಲು ಬಿ.ಆರ್.ಸಿ ಹತ್ತಿರ ಹೋಗಿ ಸಾಹೇಬರು ಫಿಕ್ಸ್ ಮಾಡಿರುವಂತಹ ಹಣವನ್ನು ನೀಡಬೇಕು. ಅಲ್ಲಿ ವ್ಯವಹಾರ ಸರಿಯಾಗಿ ಕುದುರಿದರೆ ಮಾತ್ರ ಕಛೇರಿಯಲ್ಲಿ ಪೈಲಿಗೆ ಸಹಿ ಬೀಳುತ್ತದೆ. ಒಂದು ವೇಳೆ ಬಿ.ಆರ್.ಸಿಯ ಹತ್ತಿರ ಹಣದ ವಿಷಯದಲ್ಲಿ ವಾಗ್ವಾದ ನಡೆದರೆ, ಆ ಶಿಕ್ಷಕನ ಪೈಲು ಕಛೇರಿಯಲ್ಲಿಯೇ ಕೊಳೆಯಬೇಕಾಗುತ್ತದೆ.ಅನಾರೋಗ್ಯದಿಂದ ಬಳಳುತ್ತಿರುವ ಅಥವಾ ಗಭರ್ಿಣಿ ಶಿಕ್ಷಕರೇನಾದರೂ ಒಂದು ಸಮಸ್ಯೆ ಹೊತ್ತು ತಂದರೆ, ಬಿ.ಇ.ಓ ಒಂದೇ ಸಮನೆ ಅಲ್ಲಿಂದ ಇಲ್ಲಿಗೆ, ಇಲ್ಲಿಗೆ ಅಲ್ಲಿಗೆ ತಿರುಗಾಡಿಸಿ ಸುಸ್ತ್ ಮಾಡಿಬಿಡುತ್ತಾರೆ. ಒಂದು ವೇಳೆ ಮೊದಲಿಗೆ ಹೇಳಿದಂತೆ ದುಡ್ಡನ್ನು ನೀಡಿದರೆ, ರಜೆಗಳು, ಗಭರ್ಿಣಿ ಶಿಕ್ಷಕರ ಕೆಲಸಗಳು ತವರುಮನೆಗೆ ಓಡಿಬರುತ್ತವೆ. ಹೀಗಾಗಿ ಬಿ.ಇ.ಓ ರಾಮಾಂಜನೇಯರಿಗೆ ಸಾಕಷ್ಟು ಮಹಿಳಾ ಶಿಕ್ಷಕರು ದಿನನಿತ್ಯ ಹಿಡಿಶಾಪ ಹಾಕುತ್ತಿರುವ ದೃಶ್ಯ ಮಾನವಿಯ ಅವರ ಕಛೇರಿಯ ಮುಂದೆ ಕಾಣಸಿಗುತ್ತದೆ.ಯಾರಾದರೂ ಶಿಕ್ಷಕರು ತಮ್ಮ ಸಮಸ್ಯೆಯನ್ನು ಹೇಳಿಕೊಂಡು ಕಚೇರಿಗೆ ಬಂದರೆ, ಮೊದಲು ನಾನು ಹೇಳುವದನ್ನು ಕೇಳರ್ರೀ.. ಬಾಯಿ ಮುಚ್ಚಿಕೊಂಡು ಮೊದಲು ಶಾಲೆಗೆ ಹೋಗ್ರೀ.. ನಾನು ಬಂದು ಎಲ್ಲವನ್ನು ನೋಡಿಕೊಳ್ಳುತ್ತೇನೆ. ಇಲ್ಲದಿದ್ದರೆ ನಿಮ್ಮನ್ನು ಅಮಾನತ್ ಮಾಡಬೇಕಾಗುತ್ತದೆ ಎಂದು ಗದರಿಸಿ ಮಾನಸಿಕ ಕಿರುಕುಳ ಕೊಡುವುದು ಮಾನ್ಯ ಬಿ.ಇ.ಒರವರ ಕಾಯಕವಾಗಿದೆ.ನಾನು ಲಿಂಗಸೂರಿನಲ್ಲಿ 90ಶಿಕ್ಷಕರನ್ನು ಅಮಾನತ್ ಮಾಡಿದ್ದೇನೆ. ಇಲ್ಲಿ ನಿವೇನಾದರೂ ನನ್ನ ಮಾತು ಕೇಳದೆ, ಸಂಘದವರಿಗಾಗಲಿ ಅಥವಾ ಪತ್ರಿಕೆಯವರಿಗಾಗಲಿ ಹೇಳಿದರೆ ನಿಮಗೂ ಲಿಂಗಸ್ಗೂರು ಶಿಕ್ಷಕರ ಗತಿ ಎಂದು ಎಚ್ಚರಿಸುತ್ತಾರೆ. ವಿಶೇಷವಾಗಿ ಮಹಿಳಾ ಶಿಕ್ಷಕಿಯರಿಗೆ ಏಕವಚನದಲ್ಲಿ ಸಾಕಷ್ಟು ಕಿರುಕುಳ ನೀಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಸುಂದರಬಾಯಿ, ಪ್ರಮಿಳಾ, ಸರಳಾಬಾಯಿ ಎಂಬುವವರನ್ನು ಎರವಲು ನೀಡಿದ್ದಾರೆ. ಯಾರಾದರೂ ಎಸ್.ಡಿ.ಎಂ.ಸಿಯವರು ಬಂದರೆ ಮೊದಲು ನೀವು ಶಿಕ್ಷಕರ ವಿರುದ್ಧ ಕಂಪ್ಲೇಟ್ ಕೊಡಿ, ನಾನು ಅವರನ್ನು ಸಸ್ಪೆಂಡ್ ಮಾಡುತ್ತೇನೆಂದು ಸಮಿತಿಗೆ ಹೇಳುತ್ತಾರೆ. ಶಿಕ್ಷಕರಿಗೆ ನೈತಿಕ ಬೆಂಬಲ ನೀಡಬೇಕಾದ ಅಧಿಕಾರಿ ಹೀಗಾದರೆ ಹೇಗೆ..?ಇಷ್ಟೆಲ್ಲ ಕಿತಾಪತಿಗಳನ್ನು ಮಾಡಿರುವ ಬಿ.ಇ.ಓ ರಾಮಾಂಜನೇಯನನ್ನು ಕೂಡಲೇ ವಗರ್ಾಯಿಸಲು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಂಕಷ್ಟದಲ್ಲಿರುವ ಶಿಕ್ಷಕ ಸಮುದಾಯವನ್ನು ಪಾರು ಮಾಡಬೇಕು.
ತಾಲೂಕಿನಲ್ಲಿ ಆರ್.ಎಂ.ಎ.ಎಸ್ ಶಾಲೆಗೆ ಗ್ರೇಡ್2 ಬಡ್ತಿಹೊಂದಿದ ಪ್ರೌಡಶಾಲಾ ಮುಖ್ಯಗುರುಗಳನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಬೇಕೆಂದಿದ್ದರೂ ಲೆಕ್ಕಸದೇ ಪಟ್ಟಣದ ಕೋನಾಪೂರ ಪೇಟೆಯ ಪ್ರೌಢಶಾಲೆಯಲ್ಲಿ ಸಾಕಷ್ಟು ಶಿಕ್ಷಕರ ಕೊರತೆ ಇದ್ದರೂ ತನಗೆ ಅನುಕೂಲವಿರುವ (ಒಳಒಪ್ಪಂದದಂತೆ ಹಣ ನೀಡುವ) ರಾಘವೇಂದ್ರ ಎಂಬ ಸಹಶಿಕ್ಷಕರನ್ನು ಎರವಲು ಸೇವೆಯ ಮೇಲೆ ನೇಮಿಸಿ ಬಹಳ ನಾಜೂಕಿನಿಂದ ಸಕರ್ಾರದ ಹಣವನ್ನು ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ. ವಿಚಿತ್ರ ಸಂಗತಿಯೆಂದರೆ, ಗ್ರೇಡ್2 ಬಡ್ತಿ ಹೊಂದಿದ ಪ್ರೌಢಶಾಲೆ ಮುಖ್ಯಗುರುಗಳೊಬ್ಬರನ್ನು ಈ ಸಹ ಶಿಕ್ಷಕರ ಕೈಕೆಳಗೆ ನೇಮಿಸಿ ತಪ್ಪಿನ ಅರಿವಾಗಿ ಒಂದೇ ದಿನದಲ್ಲಿ ವಾಪಸ್ಸು ಕರೆಸಿಕೊಂಡಿರುವುದು ಸೋಜಿಗ ಸಂಗತಿ.ಪ್ರೌಢಶಾಲಾ ಮಕ್ಕಳಿಗಾಗಿ ಅಂತರ್ಜಾಲ ಮೇಳ ಆಯೋಜಿಸಿದಾಗ ಭಾಗವಹಿಸಿದ ಮಕ್ಕಳಿಗೆ ಉಪಹಾರಕ್ಕಾಗಿ ಹಣ ಸಕರ್ಾರದಿಂದ ಬಂದಿದ್ದರೂ ಒತ್ತಾಯಪೂರ್ವಕವಾಗಿ ಶಿಕ್ಷಣ ಸಂಯೋಜಕರಾದ ಸೂರ್ಯಕಾಂತ ಬಾರಕೇರ, ರಾಯಪ್ಪ ಬಳಬಟ್ಟೆ ಇವರು ಖಾಸಗಿ ಶಾಲೆಯಿಂದ ಒತ್ತಾಯವಾಗಿ ಊಟ ತರಿಸಿ ಹಣಗುಳುಂ ಮಾಡಿದ್ದಾರೆ. ಇವರು 10-12ವರ್ಷಗಳಿಂದ ಇಲ್ಲಿ ಇರುವುದರಿಂದ ಈತನನ್ನು ಬೇರೆಡೆ ವಗರ್ಾಯಿಸಬೇಕು.
ಪ್ರಜಾಸಮರ
Tuesday, November 30, 2010
ಮಾನ್ವಿ ಶಿಕ್ಷಣ ಇಲಾಖೆಗೆ ಕಂಠಕವಾಗಿರುವ ಬಿ.ಇ.ಓ ರಾಮಾಂಜನೇಯ!
Subscribe to:
Post Comments (Atom)
No comments:
Post a Comment
Thanku