ಕೊಟ್ಟ ಕೋಡಗಗಳು ಇಸ್ಕೋಂಡ ಕಮಂಗಿಗಳು ಅಮೆರಿಕದ ಅಧ್ಯಕ್ಷರ ಐತಿಹಾಸಿಕ ಭೇಟಿ ಮುಗಿದಿದೆ, ಇದರಿಂದ ಭಾರತಕ್ಕೇನು ದಕ್ಕಿದೆ? ಅಮೆರಿಕ ಏನು ಪಡೆದಿದೆ? ಅಮೆರಿಕದ ಅಧ್ಯಕ್ಷನೊಬ್ಬ ತನ್ನ ಅಧಕ್ಷಗಿರಿಯ ಮೊದಲ ಅವಧಿಯ ಪ್ರಾರಂಭದ ವರ್ಷಗಳಲ್ಲೇ, ಯಾವುದಾದರೂ ಒಂದು ದೇಶಕ್ಕೆ ನಡಿದ ಅತಿ ದೀರ್ಘ ಭೇಟಿ ಭೇಟಿಯಿದು ಎಂದು ಭಾರತ ಸಕರ್ಾರ, ಮಾಧ್ಯಮಗಳು ಮತ್ತು ಭಾರತೀಯರು ಹೆಮ್ಮೆಯ ಅಮಲಿನಲ್ಲಿ ತೇಲುತ್ತಿರುವಾಗಲೇ ಅಮೆರಿಕದ ಸಕರ್ಾರ, ಪಕ್ಷಗಳು ಮತ್ತು ಮಾಧ್ಯಮಗಳು ಈ ಭೇಟಿಯ ಹಿಂದೆ ಅಮೆರಿಕದ ಉದ್ದೇಶಗಳು ಈಡೇರಿದೆಯೋ ಇಲ್ಲವೋ ಎಂದು ವಿಶ್ಲೇಷಣೆ ಪ್ರಾರಂಭಿಸಿದ್ದಾರೆ. ಭಾರತ ಮತ್ತು ಅಮೆರಿಕ ಸಹಜ ಮಿತ್ರರು, ವಿಶ್ವದ ಹಳೆಯ ಮತ್ತು ಅತಿ ದೊಡ್ಡ ಪ್ರಜಾತಂತ್ರಗಳ ಒಟ್ಟಿಗೆ ಇಡುವ ಐತಿಹಾಸಿಕ ಹೆಜ್ಜೆ, ವಿಶ್ವದ ದೊಡ್ಡಣ್ಣ ಅಮೆರಿಕದ ಸ್ನೇಹದಿಂದ ಭಾರತದ ಚಹರೆಯೇ ಬದಲಾಗುತ್ತಿದೆ ಎಂಬಿತ್ಯಾದಿ ಭೋಳೆಭೋಳೆ ವಿಶ್ಲೇಷಣೆಗಳಾಚೆಗೆ ಸಕರ್ಾರವಾಗಲೀ, ಮಾಧ್ಯಮಗಳಾಗಲೀ ಏನೊಂದನ್ನು ಚಚರ್ಿಸುತ್ತಿಲ್ಲ. ಇನ್ನು ವಿರೋಧ ಪಕ್ಷಗಳು ಒಬಾಮಾ ತಮ್ಮ ಭಾಷಣದಲ್ಲಿ ಪಾಕಿಸ್ತಾನವನ್ನು ನದರ್ಿಷ್ಟವಾಗಿ ಹೆಸರಿಸಿ ಟೀಕಿಸಲಿಲ್ಲ ಎಂದು ಗೊಣಗುವುದನ್ನು ಬಿಟ್ಟರೆ ಸಕರ್ಾರಕ್ಕಿಂತ ಭಿನ್ನವಾದದ್ದೇನನ್ನೂ ಹೇಳುತ್ತಿಲ್ಲ. ಇನ್ನು ಬುದ್ಧಿಜೀವಿ, ಅಕ್ಷರಸ್ಥ ಸಮುದಾಯ ಈ ಭೇಟಿಯ ಫಲಶೃತಿಯನ್ನು ಹೇಗೆ ನೋಡುತ್ತಿದೆ?ಒಬಾಮಾ ಭೇಟಿಯ ದಿನ ಕನ್ನಡದ ಖ್ಯಾತ ಕವಿ ಚಂದ್ರಶೇಖರ ಕಂಬಾರರು ಪ್ರಜಾವಾಣಿಯ ಮುಖಪುಟದಲ್ಲಿ ಒಬಾಮ ಭೇಟಿ ಮತ್ತು ಭಾರತೀಯರ ದೈನೇಸಿ ಮನೋಭಾವಗಳನ್ನು ವಿಡಂಬನೆ ಮಾಡುತ್ತಾ ಒಂದು ಕವನ ಬರೆದಿದ್ದರು. ಕಾವ್ಯವಾಗಿಯಾಗಲೀ, ರಾಜಕೀಯ ಕಾಣ್ಕೆಯ ದೃಷ್ಟಿಯಿಂದಾಗಲೀ ಆ ಕವನ ಅಂಥಾ ಮಹತ್ವದ್ದೇನಾಗಿರಲಿಲ್ಲವಾದರೂ ಯಾರೋ ಬಂದು ಏನೋ ಕೊಡುತ್ತಾರೆ ಎಂಬ ನರೀಕ್ಷೆಯಲ್ಲಿರುವ ಭಾರತದ ಒಂದು ಸ್ಥಿತಿಯ ಬಗ್ಗೆ ಲೇವಡಿ ಮಾಡಿದ್ದರು. ಭಾರತ ಸಕರ್ಾರ ಮತ್ತು ಮಾಧ್ಯಮಗಳು ಸಾಕ್ಷಾತ್ ಭಗವಂತನೇ ಪ್ರತ್ಯಕ್ಷನಾಗುತ್ತಿದ್ದಾನೆ ಎಂಬ ಹವಾ ಸೃಷ್ಟಿ ಮಾಡಿದ್ದು ನಜವೇ ಆಗಿದ್ದರಿಂದ ಕಂಬಾರರ ಆ ಲೇವಡಿಯಲ್ಲಿ ಸ್ಚಲ್ಪ ಸತ್ಯಾಂಶವಿದ್ದೇ ಇತ್ತು. ಆದರೆ ಕಂಬಾರರ ಕವನದ ಭಾವವನ್ನು ವಿರೋಧಿಸುತ್ತಾ ವಾಚಕರ ವಾಣಿಯಲ್ಲಿ ಪ್ರಕಟವಾಗುತ್ತಲೇ ಇರುವ ಪತ್ರಗಳು ಭಾರತೀಯ ಮಧ್ಯಮವರ್ಗದ ಇಬ್ಬಂದಿ ಮನಸ್ಥಿತಿಯನ್ನು ಚೆನ್ನಾಗಿ ಪ್ರತಿನಧಿಸುತ್ತದೆ. ಬಹುಪಾಲು ಪತ್ರಗಳು ಭಾರತವು ಸೂಪರ್ ಪವರ್ ಆಗುತ್ತಿರುವುದರಿಂದಲೇ ಒಬಾಮಾ ಇಲ್ಲಿಗೆ ಬರುತ್ತಿದ್ದಾರೆ..ಹೀಗಾಗಿ ಭಾರತವನ್ನು ಕೀಳಾಗಿ ಚಿತ್ರಿಸಿರುವುದು ಅಕ್ಷಮ್ಯ ಎಂಬುದೇ ಆಗಿದೆ. ಭಾರತೀಯ ಮಧ್ಯಮವರ್ಗದ ಈ ಹುಂಬ ಪ್ರತಿಷ್ಠಯೆ ಮನಸ್ಥಿತಿಯನ್ನು ಚೆನ್ನಾಗಿಯೇ ಅರ್ಥಮಾಡಿಕೊಂಡಿದ್ದ ಒಬಾಮಾ ಮಂಡಳಿ ಭಾರತವು ಉದ್ಭವಗೊಳ್ಳುತಿರುವ ಶಕ್ತಿಯಲ್ಲ..ಈಗಾಗಲೇ ಸ್ಥಾಪಿತಗೊಂಡಿರುವ ಶಕ್ತಿ (ಓಠಣ ಜಟಜಡಿರಟಿರ ಟಿಚಿಣಠಟಿ..ಣ ಚಿ ಚಿಟಡಿಜಚಿಜಥಿ ಜಟಜಡಿರಜಜ!) ಎಂದು ಚೆನ್ನಾಗಿಯೇ ಪೊಳ್ಳು ಪ್ರತಿಷ್ಠೆಯ ಬಲೂನಗೆ ಗಾಳಿ ತುಂಬಿದರು. !ಹಾಗಿದ್ದರೆ ಒಬಾಮಾ ಭೇಟಿಯಿಂದ ಭಾರತಕ್ಕೆ ದಕ್ಕಿದ್ದೇನು? ಅಸಲು ಒಬಾಮಾ ಬಂದಿದ್ದಾದರೂ ಯಾತಕ್ಕೆ?ಈ ಪ್ರಶ್ನೆಗೆ ಸ್ಪಷ್ಟವಾದ ಉತ್ತರವನ್ನು ಒಬಾಮಾನ ಸಕರ್ಾರವೇ ಕೊಟ್ಟಿದೆ. ಅವರ ಭಾರತ ಭೇಟಿ ಪ್ರಾರಂಭವಾಗುವ ಹಿಂದಿನ ದಿನ ಅಮೆರಿಕನ್ ಸಕರ್ಾರದ ಅಂತರರಾಷ್ಟ್ರಿಯ ಆಥರ್ಿಕ ವ್ಯವಹಾರಗಳ ಡೆಪ್ಯೂಟಿ ಕಾರ್ಯದಶರ್ಿಯಾಗಿರುವ ಮೈಕೇಲ್ ಫ್ರೊಮಾನ್ರವರು ಅಮೆರಿಕನ್ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಾ ಒಬಾಮಾರವರ ಈ ಭೇಟಿಯ ಉದ್ದೆಶ ಮೂಲಭೂತವಾಗಿ ಆಥರ್ಿಕವಾದದ್ದು. ಅಮೆರಿಕದಲ್ಲಿ ಉದ್ಯೋಗ ಸೃಷ್ಟಿ ಮಾಡಲು ಅನುಕೂಲವಾಗುವಂತೆ ನಮ್ಮ ಅಂತರರಾಷ್ಟ್ರೀಯ ಸಂಬಂಧಗಳನ್ನು ಬಳಸಿಕೊಳ್ಳುವುದೇ ಈ ಭೇಟಿಯ ಉದ್ದೇಶ ಎಂದು ಯಾವುದೇ ಮುಚ್ಚುಮರೆಯಿಲ್ಲದೆ ಘೋಷಿಸಿದ್ದರು. ಅಮೆರಿಕದಲ್ಲಿ ಇಂದು ನರುದ್ಯೋಗದ ಗತಿ ಅತ್ಯಂತ ತೀವ್ರವಾಗಿ ಬೆಳೆಯುತ್ತಿದೆ. ಒಬಾಮಾ ಅಧ್ಯಕ್ಷರಾದ ಮೇಲೆ ಸಾಕಷ್ಟು ಬಡ ಬಿಳಿಯರು ಮತ್ತು ಕರಿಯರು ಬೀದಿಪಾಲಾಗುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಅಮೆರಿಕದ ಆಥರ್ಿಕತೆ 1930ರ ದಶಕದಲ್ಲಿ ಎದುರಿಸುತ್ತಿದ್ದಂಥ ಬಿಕ್ಕಟ್ಟನ್ನೇ ಈಗಲೂ ಎದುರಿಸುತ್ತಿದೆ. ಕಳೆದ 70 ವರ್ಷಗಳಲ್ಲೇ ಪ್ರಥಮ ಬಾರಿಗೆ ಪ್ರಪಂಚದ ವಾಣಿಜ್ಯವು ಶೇ.14ರಷ್ಟು ಕುಸಿದಿದೆ. ಈ ಎಲ್ಲದರ ಪರಿಣಾಮವಾಗಿ ಒಬಾಮಾರ ಜನಪ್ರಿಯತೆ ಕುಸಿಯುತ್ತಿರುವುದು ಮಾತ್ರವಲ್ಲದೆ ಅಮೆರಿಕದ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಕಳೆದ 75 ವರ್ಷಗಳಲ್ಲೇ ಅತ್ಯಂತ ಹೀನಾಯವಾಗಿ ಅವರ ಡೆಮಾಕ್ರಾಟಿಕ್ ಪಕ್ಷ ಸೋತಿದೆ. ಇನ್ನಾದರೂ ಅಮೆರಿಕದಲ್ಲಿ ಹೆಚ್ಚೆಚ್ಚು ಉದ್ಯೋಗಗಳನ್ನು ಸೃಷ್ಟಿಸದಿದ್ದರೆ 2012ರಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ ಪಕ್ಷ ಬೋಡರ್ಿಗೆ ಬರುವ ಸಾಧ್ಯತೆಗಳೇ ಕ್ಷೀಣಿಸುತ್ತಿದೆ.ಆದರೆ ಅಮೆರಿಕದ ಆಥರ್ಿಕತೆಗೆ ಚೈತನ್ಯ ಕೊಡುವ ಶಕ್ತಿ ಅದರ ಅಂತರಿಕ ಆಥರ್ಿಕತೆಗಿಲ್ಲ. ಹೀಗಾಗಿ ಅಮೆರಿಕ ತನ್ನ ಆಥರ್ಿಕತೆಯನ್ನು ಪುನಶ್ಚೇತನಗೊಳಿಸಲು ಏಕಕಾಲದಲ್ಲಿ ಎರಡು ಕ್ರಮಗಳನ್ನು ಅನುಸರಿಸುತ್ತಿದೆ. ಒಂದು ತಾನು ಉತ್ಪಾದಿಸುವ ಸರಕುಗಳ ಮಾರುಕಟ್ಟೆಗೆ ಪ್ರತಿಸ್ಪಧರ್ಿಯಾಗಿ ವಿದೇಶದ ಸರಕುಗಳು ತನ್ನ ಮಾರುಕಟ್ಟೆಗೆ ನುಗ್ಗದಂತೆ ರಕ್ಷಿಸಿಕೊಳ್ಳುವ ಪ್ರೊಟೆಕ್ಷನಸ್ಟ್ ಕ್ರಮಗಳು. ಎರಡನೆಯದು ಇದೇ ರೀತಿ ಅಮೆರಿಕದ ಸರಕುಗಲಿಂದ ತನ್ನ ಗೃಹ ಮಾರುಕಟ್ಟೆಯನ್ನು ರಕ್ಷಿಸಿಕೊಳ್ಳುವ ನೀತಿಯನ್ನು ಅನುಸರಿಸುತ್ತಿರುವ ದೇಶಗಳ ಮೇಲೆ ಸಾಮ-ದಾನ-ಬೇಧ-ದಂಡೋಪಾಯಗಳನ್ನು ಬಳಸಿ ಆ ದೇಶಗಳ ಪ್ರೊಟೆಕ್ಷನಸ್ಟ್ ನತಿಗಳನ್ನು ಬದಲಿಸಿ ತನ್ನ ಬಂಡವಾಳಕ್ಕೆ, ಸರಕುಗಳಿಗೆ ಇನ್ನೂ ಹೆಚ್ಚಿನ ಮಾರುಕಟ್ಟೆಯನ್ನು ಪಡೆದುಕೊಳ್ಳುವುದು. ಆದ್ದರಿಂದಲೇ ಅಮೆರಿಕವು ತನ್ನ ವಿದೇಶಾಂಗ ನತಿಯನ್ನೇ ಆಕ್ರಮಣಕಾರಿಯಾಗಿ ಬಳಸುತ್ತಾ ಮಾರುಕಟ್ಟೆ ಅಶ್ವಮೇಧವನ್ನು ಶುರುಮಾಡಿ ಅದರ ಕಾವಲಿಗೆ ಸವ್ಯಸಾಚಿ ಒಬಾಮಾನನ್ನು ಕಳಿಸಿದೆ. ಇದಕ್ಕೆ ಖಿಜ ಓಚಿಣಠಟಿಚಿಟ ಇಥಠಿಠಡಿಣ ಟಿಣಚಿಣತಜ ಎಂಬ ಹೆಸರಿಡಲಾಗಿದೆ, ಭಾರತ ಭೇಟಿಗೆ ಹೊರಡುವ ಸ್ವಲ್ಪ ಮುನ್ನ ಅಮೆರಿಕನ್ ಉದ್ಯಮಿಗಳನ್ನುದ್ದೇಶಿಸಿ ಭಾಷಣ ಮಾಡುತ್ತಾ ಒಬಾಮಾ ಭಾರತದ ಆಥರ್ಿಕತೆ ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಲಿದೆ. ಮತ್ತು ಭಾರತದಲ್ಲಿರುವ ಮತ್ತು ಬೆಳೆಯುತ್ತಲಿರುವ ಮಧ್ಯಮವರ್ಗ ಅಮೆರಿಕದ ರಫ್ತಿಗೆ ಒಳ್ಳೆಯ ಮಾರುಕಟ್ಟೆ ಒದಗಿಸುತ್ತಾರೆ ಎಂದು ಸ್ಪಷ್ಟವಾಗಿಯೇ ಹೇಳಿದ್ದರು. ಮತ್ತು ತನ್ನ ಭಾರತ ಭೇಟಿಯ ಪ್ರಧಾನ ಉದ್ದೇಶ ಅಮೆರಿಕದ ಸರಕುಗಳಿಗೆ ಭಾರತದಲ್ಲಿ 10 ಬಿಲಿಯನ್ ಡಾಲರ್ನಷ್ಟು ಹೊಸ ಮಾರುಕಟ್ಟೆಯನ್ನು ಪಡೆದುಕೊಂಡು ಆ ಮೂಲಕ ಅಮೆರಿಕದಲ್ಲಿ 53,000 ದಷ್ಟು ಉದ್ಯೋಗಗಳನ್ನು ಸೃಷ್ಟಿಸುವುದಾಗಿದೆ ಎಂದೂ ಘೋಷಿಸಿದ್ದರು.ಅಮೆರಿಕದ ಸರಕುಗಳು ಈಗಾಗಲೇ ಭಾರತದ ಎಲ್ಲಾ ಕ್ಷೇತ್ರಗಳಲ್ಲೂ ಒಳನುಗ್ಗಿದೆ. ಭಾರತವು 1998ರಲ್ಲಿ ಅಣುಶಕ್ತಿ ಸ್ಫೋಟ ನಡೆಸಿದ ಮೇಲೆ ಅಮೆರಿಕವು ಭದ್ರತಾ ದೃಷ್ಟಿಯಿಂದಲೇ ಭಾರತದೊಡನೆ ಅಣುವಾಣಿಜ್ಯ ಮತ್ತು ಹೈಟೆಕ್ ಟ್ರೇಡುಗಳ ಮೇಲೆ ನಷೇಧ ವಿಧಿಸಿತ್ತು. ಈಗ ಭಾರತವು ಅಮೆರಿಕಕ್ಕೆ ತನ್ನ ನಷ್ಟೆಯನ್ನು ಸಂಶಯಾತೀತವಾಗಿ ಸಾಬೀತು ಮಾಡಿರುವುದರಿಂದ ಮತ್ತು ಈ ನರ್ಭಂಧ ತೆಗೆಯದೆ ಹೊರತು ಅಣು ವಾಣಿಜ್ಯದಲ್ಲಿರುವ ಅಮೆರಿಕನ್ ಕಂಪನಗಳಿಗೆ ಭಾರತದ ಮಾರುಕಟ್ಟೆಯಾಗಲೀ, ಅಮೆರಿಕನ್ನರಿಗೆ ಹೊಸ ಕೆಲಸವಾಗಲೀ ಸಿಗುವುದು ಸಾಧ್ಯವಿಲ್ಲವೆಂದೂ ಅಮೆರಿಕ ಪರಿಗಣಿಸಿದ್ದರಿಂದಲೇ ಆ ನರ್ಭಂಧಗಳನ್ನು ತೆಗೆದುಹಾಕಲು ಮುಂದಾಯಿತು. ಈ ರಾಜಕೀಯ ಅಥರ್ಿಕತೆ ಅರ್ಥ ಮಾಡಿಕೊಳ್ಳದ ಭ್ರಾಂತಿವೀರರು ಭಾರತ ಸೂಪರ್ಪವರ್ ಆಗಿದ್ದನ್ನು ಪರಿಗಣಿಸಿಯೇ ಅಮೆರಿಕ ಎಲ್ಲಾ ನರ್ಭಂಧಗಳನ್ನು ಸಡಿಲಿಸುತ್ತಿದೆ ಎಂದು ನಂಬಲೂ ಮತ್ತು ನಂಬಿಸಲೂ ಮುಂದಾಗಿದ್ದಾರೆ. ಈ ಮಹಾಶಯರುಗಳಿಗೆ ಭಾರತ ತನ್ನ ಮಾರುಕಟ್ಟೆಯ ರಕ್ಷಣೆಗೆ ಮಾಡಿಕೊಳ್ಳುತ್ತಿರುವ ಪ್ರೊಟೆಕ್ಷನಸ್ಟ್ ನತಿಯನ್ನು ಒತ್ತಡ ಹೇರಿ ಬದಲಿಸುತ್ತಿರುವ ಅಮೆರಿಕ ತನ್ನ ಮಾರುಕಟ್ಟೆಯನ್ನು ಮಾತ್ರ ಭಾರತಕ್ಕೆ ತೆರವು ಮಾಡುತ್ತಿಲ್ಲ. ಈಗಾಗಲೇ ಇದ್ದ ಔಟ್ಸೋಸರ್ಿಂಗ್(ಹೊರಗುತ್ತಿಗೆ) ಮಾರುಕಟ್ಟೆಯ ವ್ಯಾಪ್ತಿಯನ್ನೂ ಕುಗ್ಗಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರಿಂದ ಭಾರತದಲ್ಲಿ ಸೃಷ್ಟಿಯಾಗಿದ್ದ ಲಕ್ಷಾಂತರ ಉದ್ಯೋಗಗಳು ನಷ್ಟವಾಗುತ್ತವೆ ಎಂಬ ಐಟಿ ಉದ್ಯಮದ ಅಹವಾಲಿಗೆ ಒಬಾಮಾ ಸಕರ್ಾರ ಕಿಂಚಿತ್ತೂ ಅಲುಗಾಡಿಲ್ಲ. ಬದಲಿಗೆ ಒಬಾಮಾ ತಾನು ಹೊರಗುತ್ತಿಗೆ ಉದ್ಯಮಕ್ಕೆ ಕಡಿವಾಣ ಹಾಕಿ ಅಮೆರಿಕದಲ್ಲೇ ಆ ಉದ್ಯೋಗಗಳನ್ನು ಉಳಿಸಿದ್ದರ ಬಗ್ಗೆ ಯಾವುದೇ ಬಗೆಯ ವ್ಯಥೆಯಿಲ್ಲ ಎಂದು ಹೇಳಿದ್ದಾರೆ. ಒಂದು ಕಡೆ ಅಮೆರಿಕವು ತನ್ನ ನತಿಯನ್ನು ಇನ್ನಷ್ಟು ಕಠಿಣಗೊಳಿಸುತ್ತಿರುವುದರಿಂದ ಭಾರತದ ಲಕ್ಷಾಂತರ ಉದ್ಯೋಗಗಳು ನಷ್ಟವಾಗುತ್ತವೆ. ಆದರೂ ಭಾರತವು ಮಾತ್ರ ತನ್ನ ನತಿಗಳನ್ನು ಸಡಿಲಗೊಳಿಸಿ ಅಮೆರಿಕಕ್ಕೆ 50,000 ಉದ್ಯೋಗಗಳನ್ನು ದೊರಕಿಸಿಕೊಡಬೇಕು. ಇದು ಅಮೆರಿಕದ ನತಿ. ಅಲ್ಲಿ ಕರಿಯ ಒಬಾಮಾ ಇದ್ದರೂ ಇದೇ ನತಿ. ಬಿಳಿಯ ಬುಷ್ ಇದ್ದರೂ ಅದೇ ನತಿ. ತಮ್ಮ ಈ ಭೇಟಿಯನ್ನು ಅಮೆರಿಕ ಖಿತಿಠ ಘಚಿಥಿ ಊರತಿಚಿಥಿ- ಛಿಡಿಜಚಿಣಟಿರ ರಿಠಛ ಠಠಿಠಿಠಡಿಣಣಟಿಣಜ ಜಿಠಡಿ ಛಠಣ ಣಜ ಛಿಠಣಟಿಣಡಿಜ (ದ್ವಿಮುಖ ಪಥವುಳ್ಳ ಹೆದ್ದಾರಿ-ಎರಡೂ ದೇಶಗಳಲ್ಲೂ ಉದ್ಯೋಗಗಳನ್ನು ಸೃಷ್ಟಿಸುವ ಉಪಕ್ರಮ) ಎಂದು ಬಣ್ಣಿಸಿಕೊಂಡಿದೆ. ಆದರೆ ಮೇಲೆ ನೋಡಿದಂತೆ ಅದು ಒನ್ವೇ ಪಮರ್ಿಟ್ ಉಳ್ಳ ಹೆದ್ದಾರಿ. ಈ ಕ್ರಮಗಳು ಎರಡೂ ದೇಶಗಳನ್ನು ಗೆಲ್ಲಿಸುತ್ತದೆ ಎಂದು ಅಮೆರಿಕ ಹೇಳುತ್ತದೆ. ಆದರೆ ಈ ಆಟ ಹೇಗಿದೆ ಎಂದರೆ ಬಲಶಾಲಿ ಸ್ಪಧರ್ಿ ಊಜಚಿಜ ತಿಟಿ, ಖಿಚಿಟ ಙಠಣ ಟಠಠಜ (ರಾಜ ಬಿದ್ದರೆ ನಾನು ಗೆದ್ದಂತೆ, ರಾಣಿ ಬಿದ್ದರೆ ನನು ಸೋತಂತೆ) ಎಂದು ಬೆಣ್ಣೆಯಂಥಾ ಮಾತಿನಲ್ಲಿ ಮೋಸ ಮಾಡುವಂತಿದೆ. ಒಬಾಮಾನ ಭಾರತ ಭೇಟಿಯ ನಜವಾದ ಉದ್ದೇಶ ಇದಾಗಿದ್ದರಿಂದಲೇ ಒಬಾಮಾ ಮೊದಲು ಭೇಟಿ ನಡಿದ್ದು ರಾಜಕೀಯ ರಾಜಧಾನ ದೆಹಲಿಗಲ್ಲ. ವಾಣಿಜ್ಯ ರಾಜಧಾನ ಮುಂಬೈಗೆ. ಅಮೆರಿಕ ಅಧ್ಯಕ್ಷನ ಪುಷ್ಪಕ ವಿಮಾನದಲ್ಲಿ ಬಂದವರು ರಾಜಕೀಯ ಮುತ್ಸದ್ಧಿಗಳಲ್ಲ. ಬದಲಿಗೆ ಅಮೆರಿಕದ ಮಿಲಿಟರಿ-ವೈಮಾನಕ ವಾಣಿಜ್ಯೊದ್ಯಮದ ಲೀಡರ್ ಆದ ಬೋಯಿಂಗ್ ಕಂಪನಯ ಅಧ್ಯಕ್ಷ ಡಬ್ಲ್ಯೂ. ಜೇಮ್ಸ್ ಮೆಕ್ನೆಮಿ ಜೂನಯರ್, ಪೆಪ್ಸಿಯ ಮುಖ್ಯಸ್ಥೆ ಭಾರತೀಯ ಸಂಜಾಂತೆ ನೂಯಿ, ಹನವೆಲ್ ಇಂಟರ್ನ್ಯಾಷನಲ್, ಮೆಕ್ಗ್ರಾ ಹಿಲ್, ಎ.ಇ.ಎಸ್ ಕಾಪರ್್ ಇನ್ನತರ ಇನ್ನೂರು ವಾಣಿಜ್ಯೋದ್ಯಮಗಳ ಮುಖ್ಯಸ್ಥರು. ಇದು ಒಬಾಮಾ ಭೇಟಿಯ ವಾಸ್ತವಗಳು. ಈಗ ಈ ಭೇಟಿಯಿಅಲ್ಲಿ ನಜವಾಗಿ ಆದ ಒಪ್ಪಂದಗಳೆಷ್ಟು? ಇದರಲ್ಲಿ ಭಾರತಕ್ಕೆ ದಕ್ಕಿದ್ದೇನು? ಅಮೆರಿಕ ಕಿತ್ತುಕೊಂಡಿದ್ದೇನು ಎಂದು ನೋಡೋಣ!ಮೊದಲನೆಯದಾಗಿ ಈ ಭೇಟಿಯಲ್ಲಿ ಅಮೆರಿಕ ಹೈಟೆಕ್ ಟ್ರೇಡ್ ಅಂದರೆ ಉನ್ನತ ತಂತ್ರಜ್ಞಾನಕ್ಕೆ ಸಂಬಂಧಪಟ್ಟಂರೆ ಹೇರಿದ್ದ ನರ್ಭಂಧಗಳನ್ನು ತೆಗೆದು ಹಾಕಿದೆ. ಅಂದರೆ ಭಾರತದ ವಾಯುಪಡೆಯ ಆಧುನಕರಣಕ್ಕೆ ಬೇಕಾದ ಎಂಜಿನ್ಗಳು ಮತ್ತು ಅಣುಶಕ್ತಿ ಸ್ಥಾವರಗಳಿಗೆ ಬೇಕಾದ ತಂತ್ರಜ್ಞಾನವನ್ನು ಭಾರತಕ್ಕೆ ಮಾರಲು ಅಮೆರಿಕದ ಕಂಪನಗಳಿಗೆ ಶಾಸನಾತ್ಮಕವಾಗಿ ಇದ್ದ ತಡೆಗಳು ನವಾರಣೆಯಾಗಿದೆ. ಅಕ್ಟೋಬರ್ 8ರ ಭಾರತ ಮತ್ತು ಅಮೆರಿಕ ಉದ್ಯಮಪತಿಗಳ ಸಮ್ಮೇಳನದಲ್ಲಿ ಈ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಅಮೆರಿಕನ್ ಕಂಪನಗಳಿಂದ ಭಾರತದ ಸಕರ್ಾರ ಮತ್ತು ಕೆಲವು ಖಾಸಗಿ ಕಂಪನಗಳು 10 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ಕೊಳ್ಳಲು ಸಹಿ ಹಾಕಿವೆ.ಭಾರಿ ವಿಮಾನ ಕ್ಷೇತ್ರ: ಅಮೆರಿಕದಲ್ಲಿ 2008ರಲ್ಲಿ ಹಣಕಾಸು ಬಿಕ್ಕಟ್ಟು ಪ್ರಾರಂಭವಾದ ಮೇಲೆ ಅತ್ಯಂತ ಹೆಚ್ಚು ನಷ್ಟಕ್ಕೊಳಗಾಗಿದ್ದು ಮತ್ತು ಅತಿ ಹೆಚ್ಚು ನೌಕರರನ್ನು ಕೆಲಸದಿಂದ ತೆಗೆದುಹಾಕಿದ್ದು ಬೋಯಿಂಗ್ ವಿಮಾನ ತಯಾರಿಕಾ ಕಂಪನ. ಈ ಭೇಟಿಯಲ್ಲಿ ಭಾರತ ಸಕರ್ಾರದೊಡನೆ ಅದರಲ್ಲೂ ರಕ್ಷಣಾ ಇಲಾಖೆಯೊಡನೆಯಾಗಿರುವ ಒಪ್ಪಂದದ ಪ್ರಕಾರ ಬೋಯಿಂಗ್ ಕಂಪನ 10 ಅ-17 ಉಟಠಛಜಟಚಿಣಜಡಿ ಮಿಲಿಟರಿ ವಿಮಾನಗಳನ್ನು ಭಾರತಕ್ಕೆ ಮಾರಲಿದೆ. ಇದನ್ನು ಕೊಂಡ ನಂತರ ಅಮೆರಿಕವನ್ನು ಬಿಟ್ಟರೆ ಪ್ರಪಂಚದಲ್ಲಿ ಅತಿ ಹೆಚ್ಚು ಬೋಯಿಂಗ್ ವಿಮಾನಗಳನ್ನು ಹೊಂದಿರುವ ಹೆಗ್ಗಳಿಕೆ ಭಾರತದ್ದಾಗುತ್ತದೆ ಎಂಬುದನ್ನು ಬಿಟ್ಟರೆ ಇದರಿಂದ ಭಾರತಕ್ಕೆ ಹೆಚ್ಚಿನ ನೌಕೂಲವೇನೂ ಇಲ್ಲ. ಆದರೆ ಅಮೆರಿಕಕ್ಕೆ? ಒಮ್ದು ಅಂದಾಜಿನ ಪ್ರಕಾರ ಪ್ರತಿ ಅ-17 ವಿಮಾನವು ಅಮೆರಿಕದ 44 ರಾಜ್ಯಗಳಲ್ಲಿ ಹಂಚಿಹೋಗಿರುವ 650 ಸಣ್ಣ ಉದ್ದಿಮೆದಾರರಿಗೆ ಕೆಲಸವನ್ನು ನಡುತ್ತದಲ್ಲದೆ ಅಮೆರಿಕದ ಕ್ಯಾಲಿಫೋರ್ನಯಾದಲ್ಲಿರುವ ಬೃಹತ್ ಬೋಯಿಂಗ ವಿಮಾನ ತಯಾರಿಕಾ ಕಾಖರ್ಾನೆಗೆ ಒಂದು ಇಡೀ ವರ್ಷ ಕೆಲಸ ಕೊಡುತ್ತದೆ. 4.1 ಬಿಲಿಯನ್ ಡಾಲರ್ ಎಂದರೆ ಅಂದಾಜು 22,000 ಕೋಟಿ ರೂಪಾಯಿ ಮೊತ್ತದ ಈ ಒಪ್ಪಂದವು ಅಮೆರಿಕದಲ್ಲಿ 22,160 ಕೆಲಸಗಳನ್ನು ಸೃಷ್ಟಿಸಲಿದೆ.ಲಘು ಯುದ್ಧ ವಿಮಾನಗಳಿಗೆ ಎಂಜಿನ್ ಸರಬರಾಜು: ಈ ಭೇಟಿಯಲ್ಲಿ ಅಮೆರಿಕ ಹೈಟೆಕ್ ಟ್ರೇಡಿಗಿದ್ದ ನರ್ಭಂಧವನ್ನು ತೆಗೆದಿದ್ದರಿಂದ ಲಘು ಯುದ್ಧ ವಿಮಾನಗಳಿಗೆ ಹೈಟೆಕ್ ತಂತ್ರಜ್ಞಾನವನ್ನು ಸರಬರಾಜು ಮಾಡುವ ಅಮೆರಿಕದ ಜನರಲ್ ಎಲೆಕ್ಟ್ರಿಕ್ ಕಂಪನ- ಉಇ- ಗೆ ಸಾಕಷ್ಟು ಲಾಭವಾಗಿದೆ. ಅದು ಈಗ ಭಾರತದ ತೇಜಸ್ ಲಘು ಯುದ್ಧ ವಿಮಾನಗಳಿಗೆ 107, ಈ414 ಎಂಜಿನ್ ಅನ್ನು ಭಾರತದ ವೈಮಾನಕ ಅಭಿವೃದ್ಧಿ ಸಂಸ್ಥೆಗೆ ಮಾರಲು ಒಪ್ಪಂದವನ್ನು ಮಾಡಿಕೊಂಡಿದೆ. ಇದು 5000 ಕೋಟಿ ರೂಪಾಯಿಗಳ ಕಾಂಟ್ರಾಕ್ಟ್ ಆಗಿದ್ದು 4,440 ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಇದಲ್ಲದೆ 5000 ಕೋಟಿ ರೂಪಾಯಿಗಳ ಮತ್ತೊಂದು ಒಪ್ಪಂದದಲ್ಲಿ ಇದೇ ಕಂಪನಯು ಮುಂದಿನ ಹತ್ತು ವರ್ಷಗಳಲ್ಲಿ ಭಾರತದ ರೈಲ್ವೇ ಇಲಾಖೆಗೆ 1000 ಎಂಜಿನ್ಗಳನ್ನು ಸರಬರಾಜು ಮಾಡುವ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ರಿಲಯನ್ಸ್ ಕಂಪನಯ ಜೊತೆಗೆ ಮಾಡಿಕೊಂಡಿರುವ ಮತ್ತೊಂದು ಒಪ್ಪಂದದಲ್ಲಿ ಉಇ, ಸಮಾಲ್ಕೋಟ್ನಲ್ಲಿ ರಿಲಯನ್ಸ್ ಸ್ಥಾಪಿಸಲಿರುವ 2500 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರಕ್ಕೆ ಆರು ಆಧುನಕ ಗ್ಯಾಸ್ ಟಬರ್ೆನ್ ಮತ್ತು ಮೂರು ಸ್ಟೀಮ್ ಟಬರ್ೆನ್ಗಳನ್ನು ಅಂದಾಜು 5000 ಕೋಟಿ ವೆಚ್ಚದಲ್ಲಿ ಸರಬರಾಜು ಮಾಡಲಿದೆ. ಇದು ಅಂದಾಜು 2650 ಉದ್ಯೋಗಗಳನ್ನು ಅಮೆರಿಕಕ್ಕೆ ಸೃಷ್ಟಿಸಲಿದೆ.ನಾಗರಿಕ ವಿಮಾನ ಮಾರಾಟ ಒಪ್ಪಂದ: ಇದಲ್ಲದೆ ಭಾರತದ ಖಾಸಗಿ ವಿಮಾನ ಕಂಪನಯಾದ ಸ್ಪೈಸ್ಜೆಟ್ ಕಂಪನಯು ಬೋಯಿಂಗ ಕಂಪನಯಿಂದ 30, ಬೋಯಿಂಗ್ ಃ737-800 ವಿಮಾನಗಳನ್ನು ಖರೀದಿಸಲಿದೆ. ಇದು ಅಂದಾಜು 13,000 ಕೋಟಿ ರೂಪಾಯಿಗಳ ಬೃಹತ್ ಕಾಂಟ್ರಾಕ್ಟ್ ಆಗಿದ್ದು ಭಾರತದ ಹಣಕಾಸು ಸಂಸ್ಥೆಗಳು ಸ್ಪೈಸ್ಜೆಟ್ ಕಂಪನಗೆ ಕಡಿಮೆ ದರದಲ್ಲಿ ಹಣಕಾಸನ್ನು ಒದಗಿಸಲಿದೆ. ಈ ಕಾಂಟ್ರಾಕ್ಟು ಅಮೆರಿಕದಲ್ಲಿ 12,970 ಉದ್ಯೋಗಗಳನ್ನು ಸೃಷ್ಟಿಸಲಿದೆ.ಇವು ಒಬಾಮಾ ಭೇಟಿಯಲ್ಲಿ ಆದ ಕೆಲವು ಮುಖ್ಯವಾದ ಒಪ್ಪಂದಗಳು. ಇದಲ್ಲದೆ ಹಲವಾರು ಅಮೆರಿಕದ ಖಾಸಗಿ ಕಂಪನಗಳು ಭಾರತದ ಕಂಪನಗಳೊಂದಿಗೆ ಹತ್ತಾರು ಒಪ್ಪಂದಗಳನ್ನು ಮಾಡಿಕೊಂಡಿದೆ. ಖಾಸಗಿ ಕಂಪನಗಳು ಮಾಡಿಕೊಂಡ ಎಲ್ಲಾ ಒಪ್ಪಂದಕ್ಕೂ ಹಣಕಾಸು ಗ್ಯಾರಂಟಿ ವಿಷಯದಲ್ಲಿ ಭಾರತ ಸಕರ್ಾರದ ಮುಚ್ಚಳಿಕೆ ಇರುತ್ತದೆ. ಕೆಲವು ಕಾಂಟ್ಟ್ರಾಕ್ಟ್ಗಳು ಎಂಥಾ ಅಪಾಯಕಾರಿಯಾಗಿದೆಯೆಂದರೆ ಮಹಾರಾಷ್ಟ್ರ ಸಕರ್ಾರವು ತನ್ನ ಅಂತರಿಕ ಸುರಕ್ಷತೆಯ ಆಧುನಕರಣವನ್ನು ಅಮೆರಿಕದ ಕಂಪನಗೆ ಒಪ್ಪಿಸಿದೆ. ಅಮೆರಿಕದ ಡ್ಯೂಕ್ ಆರೋಗ್ಯ ಸೇವೆಯ ಕಂಪನ ಮತ್ತು ಭಾರತದ ಮೆದಾಂತ ಹಾಸ್ಪಿಟಲ್ ಕಂಪನಗಳು ಒಪ್ಪಂದಕ್ಕೆ ಸಹಿ ಹಾಕಿದ್ದು ಜಂಟಿ ಕ್ಲಿನಕಲ್ ರಿಸಚರ್್ ಮಾಡಲಿವೆ. ಇದಕ್ಕೆ ಭಾರತದ ರೋಗಿಗಳು ಪ್ರಯೋಗ ಪಶುಗಳಾಗಲಿದ್ದರೆ ಅಮೆರಿಕದಲ್ಲಿ ಈಗಾಗಲೇ ಬಳಸಲಾಗಿರುವ ಎರಡನೇ ದಜರ್ೆ ಉಪಕರಣಗಳನ್ನು ಭಾರತಕ್ಕೆ ಸಾಗಿಹಾಕಲಾಗುತ್ತಿದೆ. ಇದಲ್ಲದೆ ಕೃಷಿ ಕ್ಷೇತ್ರದಲ್ಲೂ ಹಲವಾರು ಕಾಗರ್ಿಲ್ ಮತ್ತು ಡುಪಾಂಟ್ನಂಥಾ ಅಗ್ರಿ ಬಿಸಿನೆಸ್ ಕಂಪನಗಳು ಎರಡನೇ ಹಸಿರು ಕ್ರಾಂತಿಯನ್ನು ಮುಂದುವರೆಸುವ ಹೆಸರಿನಲ್ಲಿ ತಮ್ಮ ಅಪಾಯಕಾರಿ ಬೀಜ ಮತ್ತು ಇನ್ನತರ ಸರಕುಗಳಿಗೆ ಮಾರುಕಟ್ಟೆ ಪಡೆದುಕೊಂಡಿವೆ.ಇದೆಲ್ಲಕ್ಕಿಂತ ಹೆಚ್ಚಾಗಿ ಅಮೆರಿಕದಲ್ಲಿ ಅಣುವಿದ್ಯುತ್ ಉದ್ದಿಮೆಯಲ್ಲಿರುವ ಬೃಹತ್ ಬಹುರಾಷ್ಟ್ರೀಯ ಕಂಪನಗಳು ನಾಗರಿಕ ಅಣು ಶಕ್ತಿ ಕಾಯಿದೆ ಜಾರಿಯಾದ ಮೇಲೆ ದೊರಕಲಿರುವ ಬೃಹತ್ ಮಾರುಕಟ್ಟೆಯನ್ನು ದಕ್ಕಿಸಿಕೊಳ್ಳಲು ಜೊಲ್ಲುಸುರಿಸುತ್ತಾ ಕಾದುಕುಳಿತಿವೆ. ಆದರೆ ಭಾರತದ ಸಂಸತ್ತಿನಲ್ಲಿ ಅಣುಶಕ್ತಿ ಅವಘಡದ ಕಾಯಿದೆ ಬಗ್ಗೆ ಚಚರ್ೆ ನಡೆದು ಒಂದು ವೇಳೆ ಈ ಸ್ಥಾವರಗಳಲ್ಲಿ ಅವಘಡ ಉಂಟಾದರೆ ಅದಕ್ಕೆ ಸರಬರಾಜುದಾರನೇ ಹೊಣೆಹೊರಬೇಕಾದ ಮತ್ತು 1500 ಕೋಟಿ ರೂ.ಗಳಷ್ಟು ಪರಿಹಾರ ನಡಬೇಕಾದ ಕಾನೂನು ಮಾಡಲಾಗಿದೆ. ಹಾಗೆ ನೋಡಿದರೆ ಈ ಶಾಸನವೇ ಅಮೆರಿಕದ ಪರವಾಗಿದ್ದು ಭಾರತದ ರಾಜಕೀಯ ಗುಲಾಮತನವನ್ನು ತೋರಿಸುತ್ತದೆ. ಆದರೆ ಅಮೆರಿಕಕ್ಕೆ ಇದರಿಂದಲೂ ಸಮಾಧಾನವಿಲ್ಲ. ಭಾರತದ ಸಂಸತ್ತು ಅಣು ಅವಘಡದ ಬಗ್ಗೆ ಅಮೆರಿಕದ ಕಂಪನಗಳ ಮೇಲೆ ಅಲ್ಪಸ್ವಲ್ಪ ಜವಾಬ್ದಾರಿ ಹೊರಿಸುವ ಕಾನೂನು ಮಾಡಿದ್ದರೂ ಅದನ್ನು ನಗಣ್ಯಗೊಳಿಸಲು ತಾನು ಪ್ರಸ್ತಾಪಿಸಿರುವ ಅಠಟಿತಜಟಿಣಠಟಿ ಠಟಿ ಖಣಠಿಠಿಟಜಟಜಟಿಣಚಿಡಿಥಿ ಅಠಟಠಿಜಟಿಚಿಣಠಟಿ ಜಿಠಡಿ ಓಣಛಿಟಜಚಿಡಿ ಆಚಿಟಚಿರಜ ಗೆ ಸಹಿಹಾಕಬೇಕೆಂದು ಒತ್ತಾಯಿಸುತ್ತಾ ಬಂದಿದೆ. ಇದು ಅಣುತಂತ್ರಜ್ನಾನ ಸರಬರಾಜುದಾರರ ಮೇಲಿನ ಹೊಣೆಗಾರಿಕೆಯನ್ನು ಕಡಿತಗೊಳಿಸುತ್ತದೆ. ಇದು ಅಂತರರಾಷ್ಟ್ರೀಯ ಒಪ್ಪಂದವಾದ್ದರಿಂದ ಭಾರತದ ಶಾಸನ ಆಗ ಅಪ್ರಸ್ತುತವಾಗುತ್ತದೆ. ಹೀಗಾಗಿಯೇ ಅಮೆರಿಕ, ರೋಮಾನಯಾ, ಮೊರಕ್ಕೋ ದೇಶಗಳನ್ನು ಬಿಟ್ಟರೆ ಬೇರೆ ಯಾವ ದೇಶಗಳೂ ಇದಕ್ಕೆ ಸಹಿ ಹಾಕಿರಲಿಲ್ಲ. ಒಬಾಮಾ ಭೇಟಿಗೆ ಸ್ವಲ್ಪ ಮುಂಚೆ ಭಾರತ ಸಕರ್ಾರವೂ ಸಹ ಇಂಥಾ ಒಪ್ಪಂದಕ್ಕೂ ಇದೇ ಅಕ್ಟೋಬರ್ 27ರಂದು ಸಹಿ ಹಾಕಿದೆ. ಇದು ಒಂದೆಡೆ ಅಮೆರಿಕದ ಕಂಪನಗಳಿಗೆ 1,50,000 ಕೋಟಿ ರೂಪಾಯಿ ಮಾರುಕಟ್ಟೆಯನ್ನು ಮತ್ತು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಿದರೆ ಭಾರತಕ್ಕೆ ಶಾಶ್ವತ್ ಅಪಾಯವನ್ನು ತಂದೊಡ್ಡಿದೆ.ಇದು ಅಸಲಿ ವಿಷಯ. ಮೇಲ್ನೋಟಕ್ಕೆ ನೋಡಿದರೆ ಭಾರತ ಸಕರ್ಾರವೇ ಅಮೆರಿಕದ ದೊಡ್ಡ ಗಿರಾಕಿಯಾಗಿರುವುದು ಎದ್ದು ಕಾಣುತ್ತದೆ. ಭಾರತದ ಜನತೆಯ ತೆರಿಗೆ ಹಣ ಮತ್ತು ದೇಶದ ಸಂಪನ್ಮೂಲಗಳನ್ನು ಅಮೆರಿಕ ಸಾಮ-ಬೇಧ-ದಂಡಗಳನ್ನು ಬಳಸಿ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದೆ. ಅದಕ್ಕೆ ವಾಣಿಜ್ಯ ಮೈತ್ರಿ ಎಂಬ ಮುಖವಾಡವನ್ನು ಹಾಕಲಾಗಿದೆ. ಅಮೆರಿಕ ಸಾಮಾಜ್ಯಶಾಹಿಯ ಈ ಬಗೆಯ ಆಕ್ರಮಣಕಾರಿ ವಾಣಿಜ್ಯ ಯುದ್ಧಕ್ಕೆ ಒಬಾಮಾನ ಭಾಷಣದ ಮತ್ತು ಮಿಶೆಲ್ ಒಬಾಮಾಳ ಡ್ಯಾನ್ಸುಗಳ ತೆರೆಯನ್ನು ಹಾಕಲಾಗಿದೆ. ಭಾರತ-ಅಮೆರಿಕಗಳ ಉದ್ದಿಮೆಪತಿಗಳ ಸಭೆಯಲ್ಲಿ ಮಾತನಾಡುತ್ತಾ ಒಬಾಮಾರವರು ಭಾರತ ಅಮೆರಿಕದ ವಾಣಿಜ್ಯ ವಹಿವಾಟು 35 ಬಿಲಿಯನ್ ಡಾಲರ್ ಮೀರಿಲ್ಲ. ಹೀಗಾಗಿ ಅಮೆರಿಕ ವಹಿವಾಟು ನಡೆಸುತ್ತಿರುವ ದೇಶಗಳಲ್ಲಿ ಭಾರತ 12ನೇ ಸ್ಥಾನದಲ್ಲಿದೆ. ಇದು ಹೆಚ್ಚಬೇಕು. 120 ಕೋಟಿ ಜನಸಂಖ್ಯೆ ಇರುವ ಭಾರತ ಅಮೆರಿಕದ ಪ್ರಮುಖ ವಾಣಿಜ್ಯ ಪಾಲುದಾರನಾಗದೇ ಇರಲು ಯಾವ ಕಾರಣವೂ ಇಲ್ಲ ಎಂದು ಹೇಳಿದ್ದಾರೆ. ಭಾರತವು ಕಳೆದ ಹತ್ತು ವರ್ಷಗಳಲ್ಲಿ 20 ಬಿಲಿಯನ್ ಡಾಲರ್ನಷ್ಟು ಸೇವೆ ಸರಕುಗಳನ್ನು ರಫ್ತು ಮಾಡಿದೆ, ಇದರಿಂದ ಭಾರತದಲ್ಲಿ ಪ್ರಧಾನವಾಗಿ ಐಟಿ-ಬಿಟಿ ಕ್ಷೇತ್ರದಲ್ಲಿ ಉದ್ಯೋಗಗಳು ಸೃಷ್ಟಿಯಾಗಿವೆ. ಆದರೆ ಅಮೆರಿಕ ಭಾರತ-ಅಮೆರಿಕ ವಾಣಿಜ್ಯ ಹೆಚ್ಚಾಗಬೇಕೆಂದು ಒತ್ತಡ ಹೇರುತ್ತಿರುವಾಗ ಭಾರತದಿಂದ ಇಂಥಾ ರಫ್ತುಗಳು ಹೆಚ್ಚಾಗಬೇಕೆಂದು ಬಯಸುತ್ತಿಲ್ಲ. ಅದು ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರುವುದರಿಂದ ಅಮೆರಿಕದ ಮಾರುಕಟ್ಟೆಯನ್ನು ಭಾರತ ರಫ್ತುದಾರರಿಗೆ ತೆರೆಯಲಾಗುವುದಿಲ್ಲ ಎಂದು ಸ್ಪಷ್ಟವಾಗಿಯೇ ಹೇಳಿದ್ದಾರೆ. ಅಷ್ಟು ಮಾತ್ರವಲ್ಲ. ವಿಶ್ವ ವಾಣಿಜ್ಯ ಸಂಸ್ಥೆಯ ಶರತ್ತುಗಳು ಇದ್ದಾಗ್ಯೂ ಅಮೆರಿಕ ತನ್ನ ಮಾರುಕಟ್ಟೆಯನ್ನು ಮಾತ್ರ ರಕ್ಶಿಸಿಕೊಂಡಿದೆಯೇ ಹೊರತು ಭಾರತದಂಥ ಮೂರನೇ ಪ್ರಪಂಚಗಳಿಗೆ ತೆರೆದಿಲ್ಲ. ಅದಕ್ಕೆ ಒಂದೇ ಒಂದು ಅಪವಾದ ಚೀನಾ. ಹೀಗಾಗಿ ಚೀನಾದ ವಿರುದ್ಧ ಅಮೆರಿಕ ಸಾರಿರುವ ಕರೆನ್ಸ ಮತ್ತು ವಾಣಿಜ್ಯ ಯುದ್ಧಕ್ಕೆ ಭಾರತ, ಜಪಾನ್, ಕೊರಿಯ ಮತ್ತಿತರ ದೇಶಗಳನ್ನು ಒಪ್ಪಿಸುವುದೂ ಒಬಾಮಾ ಭೇಟಿಯ ಪ್ರಮುಖ ಉದ್ದೇಶವಾಗಿತ್ತು.ಇದರಲ್ಲಿ ಭಾರತ ಪಡೆದುಕೊಂಡಿದ್ದೇನು? ಅಮೆರಿಕದ ಅಧ್ಯಕ್ಷ ಪಾಕಿಸ್ತಾನಕ್ಕೆ ಭೇಟಿ ನಡದೆ ಭಾರತಕ್ಕೆ ಮಾತ್ರ ಭೇಟಿ ಕೊಟ್ಟ ಹೆಚ್ಚುಗಾರಿಕೆ. ಅಮೆರಿಕದ ಅಧ್ಯಕ್ಷನನ್ನು ನಾಲ್ಕು ದಿನಗಳ ಕಾಲ ಭಾರತದಲ್ಲಿ ಉಪಚರಿಸಿದ ಧನ್ಯತೆ. ಭದ್ರತಾ ಮಂಡಳಿಯ ಸ್ಥಾನ ಪಡೆಯಬೇಕೆಂದರೆ ಅಂತರರಾಷ್ಟ್ರೀಯ ವಿಷಯಗಳಲ್ಲಿ ಅಷ್ಟೇ ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂಬ ಬಗ್ಗೆ ಬಿಟ್ಟಿ ಉಪದೇಶ. ಅಮೆರಿಕದ ಯುದ್ಧ ಸಾಮಗ್ರಿಗಳಿಗೆ ಅತಿ ದೊಡ್ಡ ಗ್ರಾಹಕನಾದ ಹೆಗ್ಗಳಿಕೆ. ಇದರಿಂದ ಭಾರತದ ಜನರಿಗೆ ಏನು ದಕ್ಕಿದಂತಾಯಿತು. ವಾಸ್ತವವವಾಗಿ ರೈತರ ಆತ್ಮಹತ್ಯೆಗಳಿಗೆ, ಕಾಮರ್ಿಕರು ಬೀದಿ ಪಾಲಾಗುತ್ತಿರುವುದಕ್ಕೆ, ಇಲ್ಲಿ ನರುದ್ಯೋಗ ಹೆಚ್ಚುತ್ತಿರುವುದಕ್ಕೆ ಅಮೆರಿಕದ ವಿದೇಶಾಂಗ ಮತ್ತು ಆಥರ್ಿಕ ನತಿಗಳು ಮತ್ತು ಅದರ ನೇತೃತ್ವದಲ್ಲಿ ಜಾರಿಯಾಗಿರುವ ವಿಶ್ವ ವಾಣಿಜ್ಯ ನತಿಗಳೇ ಕಾರಣ. ಈ ಭೇಟಿಯಲ್ಲಿ ಒಬಾಮಾ ಆ ಎಲ್ಲಾ ನತಿಗಳನ್ನು ಇನ್ನೂ ಕಡ್ಡಾಯವಾಗಿ ಮತ್ತು ಕಠಿಣವಾಗಿ ಜಾರಿಗೆ ತರಬೇಕೆಂದು ಆದೇಶಿಸಿದ್ದಾನೆ. ಭಾರತದ ಮೇಲೆ ಅಮೆರಿಕ ಒಂದು ಬಗೆಯ ಟ್ರೇಡ್ ಯುದ್ಧವನ್ನೇ ನಡೆಸಿದೆ. ಅವೆಲ್ಲವನ್ನೂ ನಮ್ಮ ನಾಂಕರು ಜೀ ಹುಜೂರ್ ಎಂದು ಒಪ್ಪಿಕೊಂಡಿದ್ದಾರೆ.ನಮ್ಮ ಸೇನೆಯ ಮುಂಚೂಣಿಯಲ್ಲಿರುವ ದಂಡನಾಯಕನೇ ನಮ್ಮ ಶತ್ರುವಾಗಿರುವಾಗ ಈ ಯುದ್ಧವನ್ನು ಗೆಲ್ಲುವುದಾದರೂ ಹೇಗೆ?
ಶಿವಸುಂದರ್, ಲಂಕೇಶ ಬಳಗದ ಚಾವರ್ಾಕ ಅಂಕಣಕಾರರು.
Tuesday, November 30, 2010
ಕೊಟ್ಟ ಕೋಡಗಗಳು ಇಸ್ಕೋಂಡ ಕಮಂಗಿಗಳು
Subscribe to:
Post Comments (Atom)
No comments:
Post a Comment
Thanku