ದಕ್ಷಿಣ ಭಾರತದಲ್ಲಿನ ಮೊದಲ ಬಿಜೆಪಿ ಸಕರ್ಾರ ಕನರ್ಾಟಕದಲ್ಲಿ ಎಲ್ಲ ಕ್ಷೇತ್ರಗಳನ್ನು ಹೊಲಸೆಬ್ಬಿಸಿದೆ. ರಾಜಕೀಯ ಕ್ಷೇತ್ರದಲ್ಲಿ ಆಪರೇಷನ್ ಕಮಲ ಮಾಡಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದೆ ಎಂಬುದು ಮಾತ್ರ ಎಲ್ಲರಿಗೆ ತಿಳಿದಿರುವ ವಿಷಯ. ಆದರೆ, ಸ್ವಲ್ಪ ಆಳವಾಗಿ ಬಿಜೆಪಿಯ ಒಳಹೊಕ್ಕು ನೋಡಿದರೆ, ಕೇಸರಿ ಪಕ್ಷ ಎಲ್ಲ ಕ್ಷೇತ್ರಗಳಲ್ಲಿಯೂ ಆಪರೇಷನ್ ಮಾಡಿರುವುದು ನಮಗೆ ಗೋಚರಿಸುತ್ತದೆ.ರೆಡ್ಡಿಗಳ ಹಣ, ಅಧಿಕಾರ ಬಲ, ಯಡಿಯೂರಪ್ಪನ ಮಕ್ಕಳ ಸವರ್ಾಧಿಕಾರ, ಚೆಡ್ಡಿಗಳ ಹಸ್ತಕ್ಷೇಪ, ಬಿಜೆಪಿ ಹೈಕಮಾಂಡನ ಅರೆಬರೆ ನಿಲುವುಗಳು ಇವೆಲ್ಲವುಗಳಿಂದ ತಮ್ಮ ಮನಸೋ ಇಚ್ಚೇ ಅಧಿಕಾರ ದುರುಪಯೋಗಿ ಎಲ್ಲ ಕ್ಷೇತ್ರವನ್ನು ಆಪರೇಷನ್ ಪ್ರಕ್ರಿಯೆ ಆವರಿಸಿಕೊಂಡಿದೆ. ಇತ್ತೀಚಿಗೆ ಬಿಜೆಪಿ ಸಕರ್ಾರ ರಾಜ್ಯೋತ್ಸವದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು ಗುರುತಿಸುವ ನೆಪದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಗಳನ್ನು ಇಂತಿಷ್ಟು ಹಣಕ್ಕೆ ಹರಾಜಿಗೆ ಕೂಗಿದೆ!ಹಿಂದೆಂದೂ ಯಾವ ಸಕರ್ಾರಗಳು ಮೊನ್ನೇಯಷ್ಟು ಮಹನೀಯರನ್ನು ಪುರಸ್ಕರಿಸಿದ ಉದಾಹರಣಿಗಳಿಲ್ಲ. ಆದರೆ, ಬಿಜೆಪಿ ಸಕರ್ಾರ ಎಲ್ಲರಿಂದ ಬೇಷ್ ಎನ್ನಿಸಿಕೊಳ್ಳಲು, ಎಲ್ಲ ಮಂತ್ರಿ, ಚೆಡ್ಡಿ, ಮಾಧ್ಯಮಗಳಿಂದ ಸಹಿ ಎನ್ನಿಸಿಕೊಳ್ಳಲು ಕಂಡ ಕಂಡವರಿಗೆ ಪ್ರಶಸ್ತಿಯನ್ನು ಘೋಷಿಸಿದೆ. ತಾನು ಮೊದಲಿಗೆ ಬಿಡುಗಡೆ ಮಾಡಿದ ಪಟ್ಟಿಯಿಂದ ಕೆಲವರಿಗೆ ಅಸಮಾಧಾನ ಆಗಿದೆ ಎಂದು ತಿಳಿಯುತ್ತಿದ್ದಂಥೆ ಧೀಡಿರನೇ ರವಿಚಂದ್ರನ್ ಸೇರಿದಂಥೆ ಮುಂತಾದವರ ಹೆಸರನ್ನು ಸೇರಿಸಿ ಮತ್ತೊಂದು ಪಟ್ಟಿಯನ್ನು ತಯಾರಿಸಿತು. ಅತಿಹೆಚ್ಚು ಹಣ ನೀಡುವ, ಹಗಲಿರುಳು ಸಕರ್ಾರದ ಚಾಕರಿಯನ್ನು ಮಾಡಿಕೊಂಡು ಬಿದ್ದಿರುವ ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿತು!ರಾಜ್ಯ ಸಕರ್ಾರ ನೀಡುವ ಪ್ರಶಸ್ತಿಯ ಹಿಂದಿನ ಹೂರಣವನ್ನು ಯಾವೊಂದು ಮಾಧ್ಯಮಗಳು ನೈತಿಕವಾಗಿ ಪ್ರಶ್ನಿಸಿಬಾರದೆಂದು ಪ್ರತಿಯೊಂದು ಮಾಧ್ಯಮಗಳ ಮುಖ್ಯಸ್ಥರುಗಳು, ಕೆಲವೊಂದು ಬ್ಯೂರೋದ ಸಂಪಾದಕರುಗಳಿಗೆ ಮೊದಲಿಗೆ ಪ್ರಶಸ್ತಿಯನ್ನು ಘೋಷಿಸಿತ್ತು. ದುರಂತಕ್ಕೆ ಕನ್ನಡಪ್ರಭದ ಸಂಪಾದಕ ಸುಬ್ರಮಣ್ಯರೊಬ್ಬರನ್ನು ಬಿಟ್ಟರೆ, ಉಳಿದವರ್ಯಾರು ನಿರಾಕರಿಸಲಿಲ್ಲ.ಪ್ರಶಸ್ತಿ ತಮ್ಮ ಪಾಲಿನ ಸೌಭಾಗ್ಯಕ್ಕೆ ಬಂದಿದೆ ಎಂದು ತಿಳಿದು ಯಾರೊಬ್ಬರು ಪ್ರಶಸ್ತಿಯ ಅರ್ಹತೆ ಕುರಿತು ಚಕಾರವೆತ್ತದೆ, ಕೆಲವೊಂದು ಮಂತ್ರಿಗಳು ಹಾಗೂ ಶಾಸಕರಿಗೆ ಸಮಾಧಾನಪಡಿಸಲು ಹೇಗೆ ನಿಗಮಮಂಡಳಿಗೆ ಸ್ಥಾನವನ್ನು ನೀಡುತ್ತಾರೆ ಅದರಂತೆ ನಮ್ಮ ಮಾಧ್ಯಮದ ಮಂದಿ ನಮಗೂ ಅವಕಾಶ ಸಿಕ್ಕಿದೆ ನಾವೇಕೆ ಬಿಡಬೇಕೆಂದು ಎಲ್ಲರೂ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿಯನ್ನು ಪಡೆದರು.ನಂತರದ ಪ್ರತಿಕ್ರಿಯೆಯಲ್ಲಿ ಎಲ್ಲರೂ ವಾಡಿಕೆಯಂತೆ ಈ ಪ್ರಶಸ್ತಿ ಮಾಧ್ಯಮಗಳನ್ನು ನಂಬಿದ ಜನರಿಗೆ ಸಲ್ಲಬೇಕೆಂದು ಹೇಳಿಕೆ ಕೊಟ್ಟು ತಮಗೆ ಸಕರ್ಾರ ನೀಡಿದ ಪ್ರಶಸ್ತಿಯನ್ನು ಸಮಥರ್ಿಸಿಕೊಂಡರು.ಇಲ್ಲಿ ವಿಶೇಷವಾಗಿ ಮಾಧ್ಯಮಗಳು ಸಕರ್ಾರದಿಂದ ಪಡೆದಿರುವ ಪ್ರಶಸ್ತಿಯ ಬಗ್ಗೆ ಹೇಳಬೇಕಾಗಿದೆಯೆಂದರೆ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಂಡು, ಪ್ರಜಾಪ್ರಭುತ್ವದ ಸ್ಥಂಭಗಳು ಕುಸಿದಾಗ ವ್ಯವಸ್ಥೆಯ ಪರ ನಿಲುವು ತಾಳಬೇಕಾದ ಮಾಧ್ಯಮಗಳು ಸಮಾಜವನ್ನೇ ಕಲುಷಿತಗೊಳಿಸಿ ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕಿಯಾಗಿರುವ ಸಕರ್ಾರಗಳು ಅಧಿಕಾರ ನಡೆಸುತ್ತಿರುವಾಗ ಅವುಗಳು ವಾಸ್ತವಿಕೆತೆಯನ್ನು ಜನಸಾಮಾನ್ಯರಿಗೆ ತಿಳಿಸುವ ಬದಲಿಗೆ ಅವುಗಳು ನೀಡುವ ಪ್ರಶಸ್ತಿಯನ್ನು ತಮ್ಮ ಸ್ವಾರ್ಥಕ್ಕೆ ಸ್ವೀಕರಿಸಿದರೆ, ನೈತಿಕವಾಗಿ ಇವರುಗಳು ಸಕರ್ಾರದ ವಿರುದ್ಧ ಹೇಗೆ ಸುದ್ಧಿ ಮಾಡಲು ಸಾಧ್ಯ?ದಿನವೊಂದು ಕಾರ್ಯಕ್ರಮಗಳನ್ನು ಮಾಡುತ್ತ, ಒಬ್ಬೊಬ್ಬ ಮಂತ್ರಿ, ಶಾಸಕ, ಅಧಿಕಾರಿಯ ತಪ್ಪುಗಳನ್ನು ಹಿಡಿದು ಅರ್ಧ, ಅರ್ಧ ಗಂಟೆ ಕಾರ್ಯಕ್ರಮವನ್ನು ಜನರಿಗೆ ಮನರಂಜನೆಯಾಗಿ ತೋರಿಸುವ ಮಾಧ್ಯಮ ಮಂದಿ, ತಾವೇ ಏಕಾಏಕಿ ಕಳ್ಳರಿಂದಲೇ ಗೌರವವನ್ನು ಪಡೆಯುವುದೆಂದರೆ ಏನರ್ಥ?ಯಡಿಯೂರಪ್ಪ, ಅಶೋಕ, ಗೋವಿಂದ ಕಾರಜೋಳ, ಕಟ್ಟಾಸುಬ್ರಮಣ್ಯ ನಾಯ್ಡು ಸೇರಿದಂತೆ ಹಲವಾರು ಮಂತ್ರಿಗಳ ಮಾನಮಯರ್ಾದೆಯನ್ನು ರಾಜ್ಯದ ಮಾಧ್ಯಮಗಳು ಸುಮಾರು ಸಂದರ್ಭಗಳಲ್ಲಿ ಹರಾಜಾಕಿವೆ. ಅವರು ಮಾಡಿರುವ ಹಗರಣಗಳನ್ನು ಬಯಲಿಗಿಟ್ಟಿವೆ. ಅದರ ಕುರಿತು ಹಲವಾರು ಚಚರ್ಾಗೋಷ್ಟಿಗಳನ್ನು ಮಾಡಿವೆ. ಆದರೆ, ಅದೇ ಕಟ್ಟಾ, ಗೋವಿಂದ, ಯಡ್ಡಿಯ ಕೈಯಿಂದ ಪ್ರಶಸ್ತಿಯನ್ನು ಪಡೆದು ನಮ್ಮನ್ನು ಸಕರ್ಾರ ಗುರುತಿಸಿದ್ದಕ್ಕೆ ಅಭಿನಂದನೆಗಳೆಂದು ಹೇಳುತ್ತಿರೆಂದರೆ, ಮಾಧ್ಯಮದ ಮಂದಿಯೇ ನಿಮಗೆಂತ ನೈತಿಕೆತೆ ಇದೆ?ಸಕರ್ಾರ ತನ್ನ ಹಗರಣ, ಭ್ರಷ್ಟಾಚಾರ, ಹೂರಣಗಳು ಜನಸಾಮಾನ್ಯರಿಗೆ ತಿಳಿಯಬಾರದು. ಅದನ್ನು ಹೊರ ಜಗತ್ತಿಗೆ ಬಿತ್ತರಿಸುವ ಎಲ್ಲಾ ಮಾಧ್ಯಮಗಳನ್ನು ನಮ್ಮ ಹಿಡಿತದಲ್ಲಿಟ್ಟುಕೊಳ್ಳಬೇಕು. ಅವುಗಳನ್ನು ಸಮಾಜಾಯಿಸಲು ಆಗಾಗ ಜಾಹೀರಾತು, ತದಿತರೆಗಳ ಮುಖಾಂತರ ಸಮಜಾಯಿಸುತ್ತಿರಬೇಕೆಂದು ಸಾಮಾನ್ಯವಾಗಿ ಆಲೋಚಿಸುತ್ತವೆ. ಅದಕ್ಕೆ ಪೂರಕವಾಗಿ ಮಾಧ್ಯಮಗಳು, ತಮ್ಮ ನೈತಿಕತೆಯನ್ನು ಬೀದಿಗೊತ್ತಿ ಸಕರ್ಾರ ಮಾಡುವ ಎಲ್ಲ ಕೆಲಸಕ್ಕೆ ಸಮ್ಮತಿ ಸೂಚಿಸಿದರೆ, ಮಾಧ್ಯಮ ಮಂದಿ ಪ್ರಜಾಪ್ರಭುತ್ವಕ್ಕೆ ದ್ರೋಹ ಬಗೆದಂತೆ. ಪರಿಸ್ಥಿ ಹೀಗೆ ಹೋದರೆ, ಯಾರೊಬ್ಬರಿಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಉಳಿಯುವುದಿಲ್ಲ. ಈಗ ಕನರ್ಾಟಕದಲ್ಲಿ ಅದೇ ಪರಿಸ್ಥಿತಿ ನಿಮರ್ಾಣವಾಗಿದೆ.ಮೊನ್ನೆಯ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಕೊಡಮಾಡುವ ಪ್ರಶಸ್ತಿಯನ್ನು ಬಿಜೆಪಿ ಸಕರ್ಾರ ರಾಜ್ಯದ ಎಲ್ಲಾ ಚಾನೆಲ್, ಪತ್ರಿಕೆಗಳ ಪ್ರತಿನಧಿಗಳಿಗೆ ನೀಡಿ, ಸಕರ್ಾರದ ವಿರುದ್ಧ ಯಾವೊಬ್ಬ ಮಾಧ್ಯಮದವರು ಚಕಾರವೆತ್ತದಂತೆ ಮಾಡಿದೆ.ಪ್ರಸ್ತುತ ಸಮಾಜದಲ್ಲಿ ಅಸಲಿಗೆ ಸಾಕಷ್ಟು ಪ್ರತಿಭೆಗಳು ಎಲೆಮರೆಕಾಯಿಯಂತೆ ಕೆಲಸ ಮಾಡುತ್ತಿವೆ. ಕೆಲವೊಂದು ಐ.ಎ.ಎಸ್ ಅಧಿಕಾರಿಗಳು ಪ್ರಮಾಣಿಕವಾಗಿ ತಮ್ಮ ಜವಾಬ್ದಾರಿಯನ್ನು ನರ್ವಹಿಸಿಕೊಂಡು, ದುಡಿಯುವ ವರ್ಗದ ಅಳಲು ಮತ್ತು ಆಲೋಚನೆಗಳನ್ನು ಗಮನದಲ್ಲಿಟ್ಟುಕೊಂಡು ಜನಸಾಮಾನ್ಯರ ಪರ ಯೋಜನೆಗಳನ್ನು ರೂಪಿಸುತ್ತಾ, ಪ್ರಜಾಪ್ರಭುತ್ವದ ನೀತಿ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಅಲ್ಲಿಲ್ಲುಳಿದ ಅಂತಹ ಕೆಲವೇ ಕೆಲವು ಅಧಿಕಾರಿಗಳಿಂದ ದೇಶದಲ್ಲಿ ಪ್ರಜಾಪ್ರಭುತ್ವವೆಂಬುದು ಜೀವಂತವಾಗಿ ಉಳಿದಿದೆ. (ಉದಹಾರಣಿಗೆ ರಾಖೇಶಸಿಂಗ್, ರಜನೀಶ್ ಗೋಯೆಲ್, ವಿ.ಮಂಜುಳ, ಮುನಿಷ್ ಮೌದ್ಗೀಲ್, ಪಂಕಜಕುಮಾರ ಪಾಂಡೆ, ಶಾಲಿನಿ ರಜನೀಶ್ ರಂತಹ ಸುಮಾರು ಅಧಿಕಾರಿಗಳು ವ್ಯವಸ್ಥೆಯ ಬದಲಾವಣಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರುಗಳ ಸೇವೆ ಅವಿಸ್ಮರಣೀಯ.)ಅದರಂತೆ ಸಮಾಜದ ಸ್ತರದಲ್ಲಿ ಕೆಲವೊಬ್ಬರು ಮೊದಲಿಗೆ ಹೇಳಿದಂತೆ ತಾವುಗಳು ಎಲೆಮರೆಕಾಯಿಯಾದರೂ, ತಮ್ಮನ್ನು ಯಾರೊಬ್ಬರು ಗುರುತಿಸದಿದ್ದರೂ, ತಾವು ಮಾತ್ರ ವ್ಯವಸ್ಥೆಗೆ ತಮ್ಮದೇ ಕಾಣಿಕೆ ಸಲ್ಲಿಸುತ್ತಿದ್ದಾರೆ.ಇನ್ನು ನಾವಿರುವ ಪ್ರದೇಶವನ್ನು ಬಿಟ್ಟುಹೋಗಿ ಕಣಿವೆ, ಗುಡ್ಡಗಾಡು, ಅಂತರ್ರಾಜ್ಯ ಪ್ರದೇಶಗಳಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಹೋಗಿ ಕೆಲವು ಮಾಧ್ಯಮ ಸ್ನೇಹಿತರು, ಪ್ರಸ್ತುತ ಸಮಾಜಕ್ಕೆ ವಾಸ್ತವ ವರದಿಯನ್ನು ತೋರಿಸಲು ಅವಿರತ ಶ್ರಮ ಹಾಕುತ್ತಿದ್ದಾರೆ. (ಉದಾಹರಣಿಗೆ ನಕ್ಸಲೀಯರ ಮೂಲ ಅಸಲೀ ಹಕೀಕತ್ತು, ನಿಲುವನ್ನು ಪ್ರಜಾಪ್ರಭುತ್ವದ ವ್ಯವಸ್ಥೆಗೆ ತಿಳಿಸಲು ಅರುಂಧತಿರಾಯ್ರಂತಹ ಖ್ಯಾತ ಪತ್ರಕರ್ತರು ತಮ್ಮ ಜೀವವನ್ನು ತೊರೆದು ಕಾಡಿಗೆ ಹೋಗಿ ನಾಡಿಗೆ ಸವಿಸ್ತಾರ ವರದಿಯನ್ನು ಮಾಡಿದ್ದಾರೆ. ನಕ್ಸಲೀಯರ ಅಸಲಿಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಇನ್ನು ಕನರ್ಾಟಕದಲ್ಲಿ ಕುಮಾರ ಬುರಡಿಕಟ್ಟಿಯಂತಹ ಪ್ರಗತಿಪರ ಯುವ ಬರಹಗಾರರು ಎಲ್.ಟಿ.ಟಿ.ಇ ಪ್ರಭಾಕರನ್ ಮತ್ತು ಶ್ರೀಲಂಕಾ ಸಕರ್ಾರದ ನಿಲುವು ಎಂತಹದು. ಪ್ರಭಾಕರನ್ ಮತ್ತು ಶ್ರೀಲಂಕಾ ಸೇನೆಗಳ ಸಮರದಲ್ಲಿ ಅಲ್ಲಿನ ಸಾಮಾನ್ಯ ಜನರ ಸ್ಥಿತಿ ಎಂತಹದ್ದಿರಬಹುದು ಎಂಬುದರ ಕುರಿತು ಆಳವಾಗಿ ಅಧ್ಯಯನ ಮಾಡಿ ವ್ಯವಸ್ಥೆಗೆ ಅಸಲಿ ವರದಿಯನ್ನು ಮಾಡಿ ಓಈಳಂ ಎಂಬ ಪುಸ್ತಕದ ಮುಖಾಂತರ ಸಮಗ್ರ ಮಾಹಿತಿಯನ್ನು ಒದಗಿಸಿದ್ದಾರೆ.)ವಾಸ್ತವವಾಗಿ ಸಕರ್ಾರಗಳು ಅಂತಹ ಎಲೆಮರೆಕಾಯಿಯಂತಿರುವ ಮಹನೀಯರನ್ನು ಗುರುತಿಸಿ, ಪ್ರೋತ್ಸಾಹಿಸಿ ಪ್ರಶಸ್ತಿ ನೀಡಬೇಕು. ಅದು ಮಾನವೀಯತೆ ಮತ್ತು ಆ ಪ್ರಶಸ್ತಿಗೆ ಒಂದು ಗೌರವ, ಶೋಭೆ ಬರುತ್ತದೆ. ಅದನ್ನು ಬಿಟ್ಟು ಸಕರ್ಾರದ ಚಾಕರಿ ಮಾಡುತ್ತಾ, ಎಲ್ಲೋ ಎ.ಸಿ ರೂಮಿನಲ್ಲಿ ಕುಳಿತು, ಬೇರೊಂದು ಇಂಗ್ಲೀಷ್ ಚಾನೆಲ್ಗಳ ವರದಿಯನ್ನೇ ಕನ್ನಡಕ್ಕೆ ತಜರ್ುಮೆ ಮಾಡಿ ವರದಿ ಮಾಡುವ ಮಂದಿಯನ್ನು ಸನ್ಮಾನಿಸದರೆ, ಏನು ಲಾಭ..? ಅದಕ್ಯಾವ ಅರ್ಥವೂ ಇಲ್ಲ. ಆ ರೀತಿ ನೀಡುವ ಪ್ರಶಸ್ತಿ ಇದೀಗ ತನ್ನ ಮಹತ್ವವನ್ನು ಕಳೆದುಕೊಂಡಿದೆ. ಇದರಲ್ಲಿ ಎರಡು ಮಾತಿಲ್ಲ.
ಎಂ.ಎಲ್
No comments:
Post a Comment
Thanku