Tuesday, October 26, 2010

Court Demolishes The Mosque


ಸುಪ್ರಿಂ ಕೋಟರ್ಿನ ಆದೇಶದ ಮೇರೆಗೆ ಒಂದು ವಾರದ ಕಾಲ ಮುಂದೂಡಲಾಗಿದ್ದ ಬಾಬ್ರಿ ಮಸೀದಿ-ರಾಮಜನ್ಮಭೂಮಿ ವಿವಾದದ ತೀರ್ಪನ್ನು ಕೊನೆಗೂ ಸೆಪ್ಟೆಂಬರ್ 30ರಂದು ಅಲಹಾಬಾದ್ ಹೈಕೋಟರ್ಿನ ಲಖನೌ ವಿಭಾಗದ ತ್ರಿಸದಸ್ಯ ಪೀಠ ನೀಡಿದೆ. ತೀಪರ್ು ಯಾರ ಪರವಾಗಿದ್ದರೂ ಪರವಾಗಿಲ್ಲ, ನ್ಯಾಯದ ಪರವಾಗಿದ್ದರೆ ಸಾಕು ಎನ್ನುವರು ಕೆಲವರಿದ್ದರೂ ನಡುವೆ ತೀಪರ್ು ಹೇಗೇ ಬಂದರೂ ದೇಶದ ಶಾಂತಿ ಕದಡಿ ಮತ್ತೆ ರಕ್ತಪಾತ ಆಗದಿದ್ದರೆ ಸಾಕು ಎಂಬ ಆತಂಕವೇ ದೇಶದ ಪ್ರಧಾನವಾದ ಮೂಡ್ ಆಗಿತ್ತು. ಅದಕ್ಕೆ ತಕ್ಕಂತೆ ತೀಪರ್ು ಬರುವ ಕೆಲದಿನಗಳ ಮುಂಚೆಯಿಂದ ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ತಮ್ಮ ಹಲವಾರು ಕ್ರಮಗಳಿಂದ ಹುಟ್ಟಿಸಿದ ಭೀತಿಯೂ ಸಹ ಸೆಪ್ಟೆಂಬರ್ 30ರಂದು ಏನಾಗಬಹುದು ಎಂಬ ಆತಂಕವನ್ನು ಹೆಚ್ಚಿಸಿತ್ತು. 30ರ ಮಧ್ಯಾಹ್ನದ 3.30ರ ವೇಳೆಗೆ ಇಡೀ ದೇಶವೇ ಕಫರ್ೂ್ಯ ವಿಧಿಸಿದಂತೆ ಸ್ಥಭ್ದಗೊಂಡಿತು.
ತೀಪರ್ು ಏನೇ ಬಂದರೂ ವಿಜಯೋತ್ಸವವಾಗಲೀ, ಪ್ರತಿಭಟನೆಯಾಗಲೀ ಮಾಡಬಾರದೆಂದು ಪೊಲೀಸ್ ಇಲಾಖೆ ಆದೇಶ ಹೊರಡಿಸಿದ್ದರೂ ಮೊದಲೇ ಯೋಜನೆ ಮಾಡಲಾಗಿತ್ತೋ ಎಂಬಂತೆ ತೀಪರ್ು ಬಂದ ಒಂದೇ ಗಂಟೆಯೊಳಗೇ ದೇಶದ ಹಲವು ಕಡೆ ಸಂಘಪರಿವಾರದ ಸಂಸ್ಥೆಗಳು ವಿಜಯೋತ್ಸವ ನಡೆಸಿದರು. ಕನರ್ಾಟಕದಲ್ಲೂ ಮಂಗಳೂರು, ಕೊಡಗು ಇನ್ನಿತರ ಕಡೆಗಳಲ್ಲಿ ಸಂಘಪರಿವಾರ ಬಹಿರಂಗವಾಗಿ ಗುಂಪುಗೂಡು ಪಟಾಕಿ ಸಿಡಿಸಿ ವಿಜಯ ಆಚರಿಸಿತು. ಮುಖ್ಯಮಂತ್ರಿಗಳ ಜಿಲ್ಲೆಯಾದ ಶಿವಮೊಗ್ಗದಲ್ಲಂತೂ ಸಂಘಪರಿವಾರ ನಿಷೇಧಾಜ್ನೆಯನ್ನೂ ಉಲ್ಲಂಘಿಸಿ ವಿಜಯೋತ್ಸವದ ಮೆರವಣಿಗೆ ನಡೆಸಿದರು! ಹೀಗೆ ಪೊಲೀಸರ ನಿಷೇದಾಜ್ನೆಯೂ ಸಹ ತೀಪರ್ಿನಂತೆ ಪಕ್ಷಪಾತಿಯಾಗಿತ್ತು. ಸಾರಾಂಶದಲ್ಲಿ ಅದು ಮುಸ್ಲಿಮರ ಕಣ್ಣೀರನ್ನೂ ಸಹ ನಿಷೇಧಗೊಳಿಸಿತು.
ಈಗ ತೀಪರ್ು ಬಂದು ವಾರ ಕಳೆದಿದೆ. ತೀಪರ್ಿನ ಎಲ್ಲಾ ವಿವರಗಳೂ ಲಭ್ಯವಾಗಿದೆ. ನ್ಯಾಯಮೂತರ್ಿಗಳಾದ ಅಗರ್ವಾಲ್, ಶಮರ್ಾ ಮತ್ತು ಎಸ್.ಯು. ಖಾನ್ ಗಳನ್ನೊಳಗೊಂಡ ತ್ರಿಸದಸ್ಯ ಪೀಠ ನೀಡಿದ ತೀಪರ್ಿನ ಒಟ್ಟಾರೆ ಗಾತ್ರ ಹೆಚ್ಚೂ ಕಡಿಮೆ 10,000 ಪುಟಗಳಷ್ಟಿದೆ. ಇದರ ಅಷ್ಟು ವಿವರಗಳು ಈಗ ಇಂಟರೆನೆಟ್ನಲ್ಲಿ ಲಭ್ಯವಿದೆ. ಅದಕ್ಕೆ ಪೂರಕವಾಗಿ ಅವರು ಪರಾಂಬರಿಸಿರುವ ಸಾಕ್ಷಿಗಳು ಮತ್ತು ಪುರಾವೆಗಳು ಒಟ್ಟು ರಾಶಿ ಒಂದು ಲಕ್ಷ ಪುಟಗಳಷ್ಟಿದೆ. ಹೀಗಾಗಿ ತೀಪರ್ಿನ ಬಗ್ಗೆ ಯಾವುದೇ ವ್ಯಕ್ತಿನಿಷ್ಟ ಅಭಿಪ್ರಾಯಗಳಿಗೆ ಬರಲು ಅವಕಾಶವೇ ಇಲ್ಲದಂತೆ ತೀಪರ್ಿನ ತಾತ್ಪರ್ಯ ಮತ್ತು ಆ ಬಗೆಯ ತೀಪರ್ು ನೀಡಲು ಕೋಟರ್ು ಪರಿಗಣಿಸಿದ ಅಂಶಗಳು ಈಗ ಬಹಿರಂಗವಾಗಿ ಲಭ್ಯವಾಗಿದೆ.
ಮೇಲ್ನೋಟಕ್ಕೆ ಈ ತೀಪರ್ಿನ ಬಗ್ಗೆ ಕೆಲವು ಅಂಶಗಳು ಸ್ಪಷ್ಟಗೊಳ್ಳುತ್ತದೆ. ಮೊದಲನೆಯದಾಗಿ ಈ ತೀಪರ್ು ಮಸೀದಿಯ ಮೇಲೆ ಮುಸ್ಲಿಮರಿಗಿದ್ದ ಎಲ್ಲಾ ಹಕ್ಕುಗಳನ್ನೂ ನಿರಾಕರಿಸುತ್ತದೆ. ಎರಡನೆಯದಾಗಿ ಯಾವುದೇ ಸಾಕ್ಷಿ ಪುರಾವೆಗಳಿಲ್ಲದಿದ್ದರೂ ಕೇವಲ ಹಿಂದೂಗಳ ನಂಬಿಕೆ ಮತ್ತು ಶ್ರದ್ಧೆಯನ್ನು ಮಾತ್ರ ಪರಿಗಣಿಸಿ ಜಾಗದ ಒಡೆತನ ಹಾಗೂ ಇತರ ಎಲ್ಲಾ ವಾದಗಳ ಬಗ್ಗೆ ಹಿಂದೂಗಳ ವಾದವನ್ನು ಪುರಸ್ಕರಿಸಿದೆ. ಆದರೂ ಕೊನೆಗೆ ಔದಾರ್ಯದಿಂದ ಮೂರನೇ ಒಂದು ಭಾಗದಷ್ಟು ಜಾಗವನ್ನು ಮಾತ್ರ ಮುಸ್ಲಿಮರಿಗೆ ಕೊಟ್ಟು ರಾಜಿ-ಕಬೂಲಿಗೆ ಯತ್ನಿಸಿದೆ. ಅಂದರೆ ನ್ಯಾಯಾಲಯವು ಕಾನೂನು ಮತ್ತು ನ್ಯಾಯಸೂತ್ರಗಳಿಗಿಂತ ಹೆಚ್ಚಾಗಿ ನಂಬಿಕೆ ಮತ್ತು ಶ್ರದ್ಧೆಯ ವಿಷಯವನ್ನೇ ಪರಿಗಣಿಸಿ ವಸ್ತುನಿಷ್ಟ ನ್ಯಾಯ ಪ್ರಕ್ರಿಯೆ ಜೊತೆ ರಾಜಿ ಮಾಡಿಕೊಂಡಿದೆ.
ಈ ದೇಶದ ಸಾಮಾನ್ಯ ಜನ ತೀಪರ್ಿನ ಬಗ್ಗೆ ನಿರಾಳದ ನಿಟ್ಟುಸಿರನ್ನು ಎಳೆದಿರುವುದರಲ್ಲಿ ಆಶ್ಚರ್ಯವಿಲ್ಲ. ಈ ದೇಶದ ಜನರಿಗೆ ಬಾಬ್ರಿ ಮಸೀದಿ-ರಾಮಜನ್ಮಭೂಮಿ ಎಂದರೆ ಜ್ನಾಪಕಕ್ಕೆ ಬರುವುದು ರಾಮನೂ ಅಲ್ಲ. ಅಲ್ಲಾಹೂನೂ ಅಲ್ಲ. ಬದಲಿಗೆ ಜ್ನಾಪಕಕ್ಕೆ ಬರುವುದು ಆ ರಕ್ತಸಿಕ್ತ 90 ರ ದಶಕಗಳು. ಸಂಘಪರಿವಾರ ದೇಶಾದ್ಯಂತ ಹುಟ್ಟುಹಾಕಿದ ಕೋಮುಗಲಭೆಗಳ ಬೀಭತ್ಸಗಳು. ಹೀಗಾಗಿ ಹೇಗೋ ತೀಪರ್ು ಅಂಥಾ ಒಂದು ಬಂದು ಈ ವಿವಾದ ಕೊನೆಗೊಂಡರೆ ಸಾಕು. ಮತ್ತೆ ಗಲಭೆಗಳಾಗಿ ರಕ್ತಪಾತವಾಗದಿದ್ದರೆ ಸಾಕು ಎಂಬುದೇ ಈ ದೇಶದ ಜನಸಾಮಾನ್ಯರೆಲ್ಲರ ಆಶಂವಾಗಿತ್ತು. ಆದರೆ ಶಾಂತಿಯುತ ಸಹಬಾಳ್ವೆಯ ದೃಷ್ಟಿಯಿಂದ ಜನಸಾಮಾನ್ಯರು ಮಾಡಿಕೊಳ್ಳುವ ಹತಾಷ ಮತ್ತು ನಿಸ್ಸಹಾಯಕ ತರ್ಕಗಳೇ ನ್ಯಾಯಾಲಯದ ಮತ್ತು ಕಾನೂನು ಪಂಡಿತರ ದೃಷ್ಟಿಯೂ ಆಗಿಬಿಡುವುದು ಒಂದು ದುರಂತ!
ಈ ತೀಪರ್ು ಹೊರಬಂದ ನಂತರ ಈ ದೇಶದ ಖ್ಯಾತ ನ್ಯಾಯಾಂಗ ತಜ್ನರಾದ ರಾಜೀವ್ ಧವನ್, ನ್ಯಾಯಮೂತರ್ಿ ರಾಜೇಂದ್ರ ಸಚ್ಚಾರ್, ಕೃಷ್ಣ ಅಯ್ಯರ್ ರಂಥ ಈ ದೇಶದ ಘನತೆವೆತ್ತ ನ್ಯಾಯಾಧೀಶರುಗಳು ತೀರ್ಪನ್ನೂ ಮತ್ತು ನ್ಯಾಯಾಲಯ ಅನುಸರಿಸಿರುವ ನ್ಯಾಯಿಕ ಮಾನದಂಡಗಳನ್ನು ಸಾರಾಸಗಟು ಟೀಕೆ ಮಾಡಿದ್ದಾರೆ. ಅತ್ಯಂತ ದುರಾದೃಷ್ಟಕರವೆಂದು ಬಣ್ಣಿಸಿದ್ದಾರೆ. ಆದರೂ ಕೆಲವು ಮಧ್ಯಸ್ಥ ಉದಾರವಾದಿಗಳು ಹಾಗೂ ಕೆಲವು ಪ್ರಮುಖ ಎಡ ಮತ್ತು ನಡುಪಂಥೀಯರು ಈ ತೀರ್ಪನ್ನು ಐತಿಹಾಸಿಕ ಮತ್ತು ಅತ್ಯಂತ ಸ್ವಾಗತಾರ್ಹವೆಂದೆಲ್ಲಾ ಹಾಡಿಹೊಗಳಿದ್ದಾರೆ. ಇದಕ್ಕೂ ಕಾರಣ ಕೋಮುವಾದಿಗಳು ತಮ್ಮ ಸತತ ಆಕ್ರಮಣಗಳಿಂದ ಪ್ರಗತಿಪರರಲ್ಲಿ ಸೃಷ್ಟಿಸಿರುವ ದಣಿವು ಮತ್ತು ಹತಾಷೆ. ನ್ಯಾಯವೋ ಅನ್ಯಾಯವೋ ಒಟ್ಟಿನಲ್ಲಿ ಶಾಂತಿ ಸ್ಥಾಪನೆಯಾದರೆ ಸಾಕೆಂಬ ಸಿನಿಕತನದ ತರ್ಕಗಳು. ಅಂಥವರೇ ಈಗ ಅಲ್ಲಿ ರಾಮಮಂದಿರ-ಮಸೀದಿ ಎರಡು ತಲೆ ಎತ್ತಲಿ. ಶಾಂತಿ ಮುಖ್ಯ..ಇತ್ಯಾದಿ ಎಂದೆಲ್ಲಾ ಬಡಬಡಿಸಿದ್ದಾರೆ. ಆದರೆ ಅಂಥಾ ಸಾಧ್ಯತೆಗೆ ಬೇಕಾದ ಕಾನೂನು ಬುನಾದಿಯನ್ನೇ ಈ ತೀಪರ್ು ಹೊಡೆದುಹಾಕಿದೆ. ಎಲ್ಲ ಸೆಕ್ಯುಲಾರ್ ಜನರ ಉದ್ದೇಶ ಶಾಂತಿಯೇ ಆದರೂ ಅದು ನ್ಯಾಯವನ್ನು ಕೊಂದು ಪಡೆಯುವ ಶಾಂತಿಯಾಗಿದ್ದರೆ ಸದ್ಯಕ್ಕೂ ಮತ್ತು ಶಾಶ್ವತಕ್ಕೂ ಅಶಾಂತಿಯ ಮತ್ತು ಕೋಮುಗಲಭೆಗಳನ್ನೇ ಹೇರುತ್ತದೆ ಎಂಬುದನ್ನು ಈ ತೀಪರ್ು ಸಾಬೀತು ಮಾಡುತ್ತದೆ.
ಆದ್ದರಿಂದ ಬೋಳೆಬೋಳೆಯಾದ ವಿಶ್ಲೇಷಣೆ ಮತ್ತು ಮೇಲ್ಸ್ಥರದ ತರ್ಕಗಳಿಂದ ಯಾವ ಇಹಕ್ಕಾಗಲೀ, ಪರಕ್ಕಾಗಲೀ ಏನೂ ಪ್ರಯೋಜನವಿಲ್ಲ. ಬದಲಿಗೆ ನ್ಯಾಯ, ಸಂವಿಧಾನ, ಸಾಕ್ಷಿ, ಪುರಾವೆ, ಸೆಕ್ಯುಲಾರಿಸಂನ ಮಾನದಂಡಗಳನ್ನು ಅನುಸರಿಸಿ ಈ ತೀಪರ್ಿನ ಸರಿಯಾದ ವಿಶ್ಲೇಷಣೆ ಮಾಡಿ ಸಕರ್ಾರ, ಸಮಾಜ ಮತ್ತು ನ್ಯಾಯಾಲಯಗಳು ಸರಿಯಾದ ನಿಲುವಿಗೆ ಬರುವ ಅಗತ್ಯವಿದೆ.
ಸದರಿ ಲಖನೌ ಕೋಟರ್ಿನ ತೀಪರ್ಿನ ವಿಶ್ಲೇಷಣೆ ಮಾಡುವ ಮುನ್ನ ಈ ವಿವಾದದ ಇತಿಹಾಸದ ಬಗ್ಗೆ ಮತ್ತು ಕೋಟರ್ಿನ ಮುಂದಿದ್ದ ದಾವೆಗಳ ಸ್ವರೂಪದ ಬಗ್ಗೆ ಒಂದು ಸಣ್ಣ ಪರಿಚಯ.
ಬಾಬ್ರಿ ಮಸೀದಿ ರಾಮಜನ್ಮಭೂಮಿಯಾದದ್ದು!
ಕ್ರಿ.ಶ. 1528ರಲ್ಲಿ ಬಾಬರ್ ಅಥವಾ ಬಾಬರ್ನ ಸಲಹೆಯ ಮೇರೆಗೆ ಅವನ ದಂಡನಾಯಕ ಮೀರ್ ಬಾಕಿ ಅಯೋಧ್ಯೆಯಲ್ಲಿ ಬಾಬರ್ನ ಹೆಸರಲ್ಲಿ ಒಂದು ಮಸೀದಿಯನ್ನು ನಿಮರ್ಿಸಿದ. 1528ರ ನಂತರದ ಅವದಿಯಲ್ಲಿ ಯಾವುದೋ ಒಂದು ಹಂತದಲ್ಲಿ ಅಲ್ಲಿ ಹಿಂದೂಗಳೂ ಸಹ ಅದೇ ಆವರಣದಲ್ಲಿ ರಾಮನಿಗೆ ಪ್ರಾರ್ಥನೆ ಸಲ್ಲಿಸಲು ಪ್ರಾರಂಭಿಸಿದರು. 1855ರಲ್ಲಿ ನಡೆದ ಕೋಮು ಗಲಭೆಯೊಂದರಲ್ಲಿ ಬಾಬ್ರಿ ಮಸೀದಿಯ ಮೇಲೂ ದಾಳಿಯಾಗುತ್ತದೆ. 1857ರಲ್ಲಿ ಹಿಂದೂ ಮತ್ತು ಮುಸ್ಲಿಮರಿಬ್ಬರೂ ಒಟ್ಟಾಗಿ ಬ್ರಿಟಿಷರನ್ನು ಎದುರಿಸುತ್ತಾರೆ. 1858ರಲ್ಲಿ ಬಾಬ್ರಿ ಮಸೀದಿಯ ಒಳ ಆವರಣದ ಸುತ್ತಾ ಬೇಲಿಯನ್ನು ಕಟ್ಟಿ ಒಳ ಆವರಣದಲ್ಲಿ ಮುಸ್ಲಿಮರ ಪ್ರಾರ್ಥನೆಗೂ, ಹೊರ ಆವರಣದಲ್ಲಿ ಹಿಂದೂಗಳ ಪೂಜೆಗೂ ಅವಕಾಶ ಕಲ್ಪಿಸಿಕೊಡಲಾಗುತ್ತದೆ. 1860ರಲ್ಲಿ ಫೈಜಾಬಾದಿನ ಬ್ರಿಟಿಷ್ ತಹಶೀಲ್ದಾರ ಪ್ರಪ್ರಥಮ ಬಾರಿಗೆ ಬಾಬ್ರಿ ಮಸೀದಿ ಕಟ್ಟಿದ ಜಾಗದಲ್ಲಿ ರಾಮಮಂದಿರವಿತ್ತೆಂಬ ಪ್ರಸ್ತಾಪ ಮಾಡುತ್ತಾನೆ. 1870ರಲ್ಲಿ ಕಾನರ್ೆಜಿಯೆಂಬ ಮತ್ತೊಬ್ಬ ಬ್ರಿಟಿಷ್ ಲೇಖಕಿ ಬಾಬ್ರಿ ಮಸೀದಿಯ ಕೆಳಗೆ ರಾಮಮಂದಿರವಿರವಹುದೆಂಬ ಚರಿತ್ರೆ ಬರೆಯುತ್ತಾಳೆ. 1885ರಲ್ಲಿ ಪ್ರಥಮ ಬಾರಿಗೆ ಹಿಂದೂ ಸಂತರು ಬಾಬ್ರಿ ಮಸೀದಿಯ ಹೊರ ಆವರಣದಲ್ಲಿ (ಚಬೂತರ್) ರಾಮಮಂದಿರ ನಿಮರ್ಾಣ ಮಾಡಿಕೊಳ್ಳಲು ಫೈಜಾಬಾದ್ ಸಬ್ ಜಡ್ಜ್ ಎದುರು ಮತ್ತು ನಂತರದಲ್ಲಿ ಜಿಲ್ಲಾ ನ್ಯಾಯಾಲಯದ ಎದಿರು ದಾವೆ ಹೂಡುತ್ತಾರೆ. ಆದರೆ ಅಲ್ಲಿ ರಾಮಮಂದಿರವಿತ್ತೆಂಬುದು ನಿಜವೇ ಆದರೂ ಈಗ 350 ವರ್ಷಗಳ ಕೆಳಗೆ ನಡೆದು ಹೋದ ಅನ್ಯಾಯವನ್ನು ಸರಿಪಡಿಸಲು ಈಗ ಇರುವ ಪರಿಸ್ಥಿತಿಯನ್ನು ಬದಲು ಮಾಡಲು ಬರುವುದಿಲ್ಲವೆಂದು ಕೋಟರ್ು ನಿರಾಕರಿಸುತ್ತದೆ. (ಅಂದರೆ ದಾವೆಯನ್ನು ರದ್ದು ಪಡಿಸಿದರೂ ಬಾಬ್ರಿ ಮಸೀದಿಯ ಕೆಳಗೆ ಮಂದಿರವಿರಬಹುದೆಂಬ ಊಹಾಪೋಹಕ್ಕೆ ಬ್ರಿಟಿಷ್ ಕೋಟರ್ೂ ಪರೋಕ್ಷ ಮಾನ್ಯತೆಯನ್ನು ನೀಡುತ್ತದೆ). ನಂತರ 1934ರಲ್ಲಿ ಸಂಭವಿಸಿದ ಕೋಮು ಗಲಭೆಯಲ್ಲಿ ಕೆಲವು ಹಿಂದೂ ಮತೋನ್ಮಾದಿ ಶಕ್ತಿಗಳು ಬಾಬ್ರಿ ಮಸೀದಿಯ ಗೋಡೆಗಳನ್ನು ಕೆಡವಿ ಮಸೀದಿಗೆ ಹಾನಿ ಮಾಡುತ್ತಾರೆ. ಆಗ ಬ್ರಿಟಿಷ್ ಸಕರ್ಾರ ಅದನ್ನು ರಿಪೇರಿ ಮಾಡಿಸಿಕೊಟ್ಟು ಯಥಾಸ್ಥಿತಿ ಕಾಯುತ್ತದೆ. 1949ರ ಡಿಸೆಂಬರ್ 22ರ ಮಧ್ಯರಾತ್ರಿ ಹಿಂದೂಗಳ ಗುಂಪೊಂದು ಬಾಬ್ರಿ ಮಸೀದಿಯ ಒಳಾವರಣಕ್ಕೆ ಗುಟ್ಟಾಗಿ ಪ್ರವೇಶಿಸಿ ಅಲ್ಲಿ ಬಾಲರಾಮನ ಮೂತರ್ಿಯನ್ನು ಪ್ರತಿಸ್ಟಾಪಿಸುತ್ತವೆ. ಆಗ ನೆಹ್ರೂ, ಸದರ್ಾರ್ ಪಟೇಲ್ ಸಕರ್ಾರ ಮೂತರ್ಿಗಳನ್ನು ಕೂಡಲೇ ತೆಗಿಸಿ ಯಥಾಸ್ಥಿತಿ ಕಾಯ್ದುಕೊಂಡು ಬರಬೇಕೆಂದು ಅಂದಿನ ಮುಖ್ಯಮಂತ್ರಿ ಗೋಪಿವಲ್ಲಭ ಪಂತ್ಗೆ ಆದೇಶ ನೀಡುತ್ತಾರೆ. ಆದರೆ ಆಗಿನ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಕೆ.ಕೆ. ನಯ್ಯರ್, ಮೂತರ್ಿಗಳನ್ನು ತೆಗೆದುಹಾಕಿದರೆ ಕೋಮು ಗಲಭೆಗಳಾಗುವ ಸಾಧ್ಯತೆಯ ನೆಪವೊಡ್ಡಿ ಮೂತರ್ಿಗಳನ್ನು ತೆಗೆಯುವುದಿಲ್ಲ. ಬದಲಿಗೆ ಬಾಬ್ರಿ ಮಸೀದಿಯ ಪ್ರವೇಶವನ್ನು ಮುಸ್ಲಿಮ್ ಮತ್ತು ಹಿಂದೂಗಳಿಬ್ಬರಿಗೂ ನಿರ್ಭಂದಿಸುತ್ತಾರೆ. (ನಂತರ ಈತ ಭಾರತೀಯ ಜನತಾ ಪಕ್ಷದ ಅಂದಿನ ರೂಪವಾಗಿದ್ದ ಭಾರತೀಯ ಜನಸಂಘದ ಹೆಸರಲ್ಲಿ ಚುನಾವಣೆಗೆ ಸ್ಪಧರ್ಿಸುತ್ತಾರೆ!). ನಂತರ 1950ರ ಜನವರಿಯಲ್ಲಿ ಆಸ್ಥಾನ್ ಜನ್ಮ ಸ್ಥಾನ ಸಮಿತಿಯ ಗೋಪಾಲ್ ವಿಶಾರದ್ ಎಂಬುವರು ಪ್ರತಿಮೆಗಳ ಪೂಜೆಗೆ ಅವಕಾಶ ಕೊಡಬೇಕೆಂದು ದಾವೆ ಹೂಡುತ್ತಾರೆ. 1950ರ ಡಿಸೆಂಬರ್ನಲ್ಲಿ ಮತ್ತೊಬ್ಬ ಹಿಂದೂ ಮಹಂತರೂ ಬಾಬ್ರಿ ಮಸೀದಿಯ ಒಳಾವರಣದಲ್ಲಿ ಪೂಜೆಗೆ ಅವಕಾಶ ಕೊಡಬೇಕೆಂದೂ ದಾವೆ ಹೂಡುತ್ತಾರೆ. 1955ರಲ್ಲಿ ಫೈಜಾಬಾದ್ ಹೈಕೋಟರ್ು ಪ್ರತಿಮೆಯನ್ನು ತೆಗೆಯುವ ಅಗತ್ಯವಿಲ್ಲವೆಂದು ಆದೇಶ ನೀಡುತ್ತದೆ. ನಂತರ ಅದನ್ನು ಉತ್ತರ ಪ್ರದೇಶ ಹೈಕೋಟರ್ು ಸಹ ಎತ್ತಿ ಹಿಡಿಯುತ್ತದೆ. ಈ ಮಧ್ಯೆ ಬಾಬ್ರಿ ಮಸೀದಿಯ ಹೊರಾವರಣದಲ್ಲಿ ಚಬೂತರ್ ಮತ್ತು ಸೀತಾ ರಸೋಯಿ ಎಂಬಲ್ಲಿ ಹಿಂದೂಗಳು ಪ್ರಾರ್ಥನೆ ಸಲ್ಲಿಸುವುದು ಮುಂದುವರೆದಿರುತ್ತದೆ. ಆದರೆ ಒಳಾವರಣದಲ್ಲಿ ಹಿಂದೂ ಸಂಘಟನೆಗಳು ರಾಮ ಪ್ರತಿಮೆಗಳನ್ನು ಸ್ಥಾಪಿಸಿದ್ದರಿಂದ ಹಾಗೂ ಒಳಾವರಣಕ್ಕೆ ಬೀಗ ಹಾಕಿದ್ದರಿಂದ ಮುಸ್ಲಿಮರು ಬಾಬ್ರಿ ಮಸೀದಿಯಲ್ಲಿ ನಮಾಜ್ ಮಾಡುವುದು ನಿಲ್ಲುತ್ತದೆ. 1959ರಲ್ಲಿ ನಿಮರ್ೋಹಿ ಅಖಾಡಾ ಎಂಬ ವೈಷ್ಣವ ಪಂಥಕ್ಕೆ ಸೇರಿದ ಸಂಘಟನೆಯೊಂದು ಬಾಬ್ರಿ ಮಸೀದಿಯ ಹೊರಾವರಣದಲ್ಲಿರುವ ಸೀತಾ ರಸೋಯಿ ಮತ್ತು ಚಬೂತರ್ ಪ್ರದೇಶದ ಒಡೆತನ ತಮಗೇ ಸೇರಿದ್ದೆದೆಂದೂ ಅದನ್ನು ತಮ್ಮ ವಶಕ್ಕೆ ಕೊಡಬೇಕೆಂದೂ ಒಡೆತನ ದಾವೆ (ಟೈಟಲ್ ಸೂಟ್)ಸಲ್ಲಿಸುತ್ತಾರೆ. 1961ರ ಡಿಸೆಂಬರ್ 18ರಂದು ಸುನ್ನಿ ವಕ್ಫ್ ಬೋಡರ್್ ಸಮಿತಿಯವರು ಬಾಬ್ರಿ ಮಸೀದಿ ಪ್ರದೇಶದ ಇಡೀ ಒಡೆತನ ತಮಗೆ ಸೇರಬೇಕೆಂದು ಒಡೆತನದ ದಾವೆ ಸಲ್ಲಿಸುತ್ತಾರೆ.
1984ರಲ್ಲಿ ಹಿಂದೂಪರ ಸಂಘಟನೆಯೊಂದು ರಾಮ ವಿಗ್ರಹಗಳಿರುವ ಸ್ಥಳಕ್ಕೆ ಹಾಕಿರುವ ಬೀಗವನ್ನು ತೆಗೆದು ಹಿಂದೂಗಳು ಪೂಜೆ ಸಲ್ಲಿಸಲು ಅವಕಾಶ ಕೊಡಬೇಕೆಂದು ದಾವೆ ಸಲ್ಲಿಸುತ್ತಾರೆ. ಅದನ್ನು ಪುರಸ್ಕರಿಸಿದ ಫೈಜಾಬಾದ್ ಜಿಲ್ಲಾ ಕೋಟರ್ು ಬೀಗವನ್ನು ತೆಗೆಯಬೇಕೆಂದು ಆದೇಶಿಸುತ್ತದೆ. ಅದನ್ನು ಉನ್ನತ ಕೋಟರ್ಿನಲ್ಲಿ ಪ್ರಶ್ನಿಸಿದ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಬೀಗವನ್ನು ತೆಗೆದು ಹಿಂದೂಗಳ ಪೂಜೆಗೆ ಏಕಪಕ್ಷೀಯವಾಗಿ ಅವಕಾಶ ಮಾಡಿಕೊಡುತ್ತದೆ. ಆದರೆ ಇದರಿಂದ ಉತ್ತೇಜಿತಗೊಂಡ ಸಂಘಪರಿವಾರ ಮತ್ತು ಬಿಜೆಪಿ ಪಕ್ಷ ದೇಶಾದ್ಯಂತ ರಾಮಜನ್ಮಭೂಮಿ ವಿಮೋಚನಾ ಚಳವಳಿಯನ್ನು ಪ್ರಾರಂಭಿಸುತ್ತದೆ. ಹಿಂದೂಗಳು ಬಾಬ್ರಿ ಮಸೀದಿ ಇರುವ ಜಾಗದಲ್ಲಿ ರಾಮ ಜನ್ಮ ತಾಳಿದ್ದಾನೆಂದು ನಂಬುತ್ತಾರಾದ್ದರಿಂದ ಮುಸ್ಲಿಮರು ಅದನ್ನು ಬಿಟ್ಟುಕೊಡಬೇಕೆಂದೂ ಆ ಮೂಲಕ ಬಾಬರ್ ಮಂದಿರ ಕೆಡವಿ ಮಸೀದಿ ಕಟ್ಟಿದ್ದಕೆ ಪ್ರಾಯಶ್ವಿತ್ತ ಮಾಡಿಕೊಳಬೇಕೆಂದೂ ಅಸತ್ಯ-ಅರ್ಧಸತ್ಯಗಳ ಪ್ರಚಾರ ಪ್ರಾರಂಭಿಸಿ ಇಡೀ ದೇಶದಲ್ಲಿ ಕೋಮುಗಲಭೆಗಳ ದಾವಾನಲವನ್ನು ಹಬ್ಬಿಸುತ್ತಾರೆ. ಮುಸ್ಲಿಮರ ಸಾಲುಸಾಲು ಕಗ್ಗೊಲೆಗಳನ್ನು ನಡೆಸುತ್ತಾರೆ.
ಸರ್ವಶಕ್ತ ಭಗವಂತನಿಗೆ ಮಾನವನೇ ಗಾಡರ್ಿಯನ್
ಇದೇ ಸಮಯದಲ್ಲಿ 1989ರಲ್ಲಿ ಸಂಘಪರಿವಾರದ ರಾಮ ಶಿಲಾನ್ಯಾಸ್ ಸಮಿತಿಯು ಸಾಕ್ಷಾತ್ ಭಗವಾನ್ ಶ್ರೀರಾಮಚಂದ್ರನ ಹೆಸರಲ್ಲಿ ಮತ್ತೊಂದು ಅಜರ್ಿಯನ್ನು ಕೋಟರ್ಿನಲ್ಲಿ ದಾಖಲಿಸುತ್ತದೆ.. ಈ ಕೇಸಿನಲ್ಲಿ ಅಜರ್ಿದಾರರು ಯಾರು ಗೊತ್ತೆ? ಅಜರ್ಿದಾರ ನಂಬರ್ 1, ಸಾಕ್ಷಾರ್ ಭಗವಾನ್ ಶ್ರೀರಾಮಚಂದ್ರ ವಿರಾಜ್ಮಾನ್. ಅಜರ್ಿದಾರ ನಂಬರ್ 2. ರಾಮಜನ್ಮಭೂಮಿ ಎಂಬ ಜಾಗ! ಬಾಲ ರಾಮ ದೇವರಾಗಿದ್ದು, ಎಷ್ಟೇ ವರ್ಷಗಳಾದರೂ ಅವನು ಬಾಲಕನೇ ಆಗಿರುವುದರಿಂದ ಆತನ ಆತ್ಮ ಸಖನಾದ 63 ವರ್ಷದ ತ್ರಿಪಾಠಿ ಎಂಬುವರು ತಾನು ಬಾಲರಾಮನ ಗಾಡರ್ಿಯನ್ ಎಂದೂ ಬಾಲರಾಮನ ಪರವಾಗಿ ವಾದಿಸುವುದಾಗಿಯೂ ಅಜರ್ಿ ಸಲ್ಲಿಸಿದರು. ಭಗವಂತಗೆ ಮಾನವ ಗಾಡರ್ಿಯನ್! ಈ ಅಜರ್ಿಯಲ್ಲಿ ್ಲ ಭಗವಾನ್ ಬಾಲರಾಮರು ಇಡೀ ಪ್ರದೇಶ ತನಗೆ ಸೇರಬೇಕಾದ್ದರಿಂದ ನಿಮರ್ೀಹಿ ಅಖಾಡಾ ಮತ್ತು ಸುನ್ನಿ ವಕ್ಫ್ ಬೋಡರ್್ಗಳಿಬ್ಬರನ್ನೂ ಪ್ರತಿದಾವೆಗಳನ್ನಾಗಿಸಿ ಇಡೀ ಪ್ರದೇಶವನ್ನು ಕೇವಲ ತನಗೇ ಬಿಟ್ಟುಕೊಡಬೇಕೆಂದು ವಾದಿಸಿದ್ದಾರೆ! ಇಂಥಾ ಹಾಸ್ಯಾಸ್ಪದ ಅಜರ್ಿಯನ್ನೂ ಕೋಟರ್ು ಪರಿಗಣಿಸಿದ್ದು ಮಾತ್ರವಲ್ಲ. ಸೆಪ್ಟೆಂಬರ್ 30ರ ತೀಪರ್ಿನಲ್ಲಿ ಬಾಲರಾಮನ ಹಕ್ಕನ್ನು ಸಂಪೂರ್ಣವಾಗಿ ಎತ್ತಿಹಿಡಿದಿದೆ!!
ನಾಲ್ಕು ಕೇಸುಗಳು ಇಪ್ಪತ್ತು ವರ್ಷಗಳು
1989ರಲ್ಲಿ ಸಕರ್ಾರದ ವಿಶೇಷ ಮನವಿಯ ಪ್ರಕಾರ ಅಯೋಧ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಫೈಜಾಬಾದ್ ಕೋಟರ್ಿನಲ್ಲಿ ಇದ್ದ ಎಲ್ಲಾ ಪ್ರಕರಣಗಳನ್ನು ಅಲಹಾಬಾದ್ ಹೈಕೋಟರ್ಿಗೆ ವಗರ್ಾಯಿಸಲಾಯಿತು. ಹೀಗಾಗಿ 1950ರಲ್ಲಿ ಬಾಬ್ರಿ ಮಸೀದಿಯ ಒಳಾವರಣದಲ್ಲಿರುವ ಪ್ರತಿಮೆಗಳ ಪೂಜೆಗೆ ಸಕರ್ಾರ ಅಂದು ವಿಧಿಸಿದ್ದ ನಿರ್ಭಂಧವನ್ನು ಪ್ರಶ್ನಿಸಿ ವಿಶಾರದ್ ಎಂಬುವರು ಹಾಕಿದ್ದ ದಾವೆಯು ಅಲಹಾಬಾದ್ ಹೈಕೋಟರ್ಿನಲ್ಲಿ- ಮೂಲದಾವೆ (ಔಡಿರಟಿಚಿಟ ಖಣಣ- ಔಖ-1) 1 ಎಂದು ದಾಖಲಾಯಿತು. ಸಂತ ಮಹಂತರು ಇದೇ ವಿಷಯದಲ್ಲಿ 1951ರಲ್ಲಿ ಹಾಕಿದ್ದ ದಾವೆ ಮೂಲದಾವೆ 2, ಔಖ-2, ಎಂದು ದಾಖಲಾಯಿತು. 1959ರಲ್ಲಿ ಬಾಬ್ರಿ ಮಸೀದಿಯ ಹೊರಾವರಣದಲ್ಲಿರುವ ಸೀತಾ ರಸೋಯಿ ಮತ್ತು ಚಬೂತರ್ ಪ್ರದೇಶದ ಒಡೆತನವನ್ನು ತಮಗೇ ನಡಬೇಕೆಂದು ನಿಮರ್ೋಹಿ ಅಖಾಡಾದವರು ಸಲ್ಲಿಸಿದ್ದ ದಾವೆಯನ್ನು ಮೂಲದಾವೆಯನ್ನು ಔಖ-3 ಎಂದೂ ದಾಖಲಿಸಿಕೊಳ್ಳಲಾಯಿತು. 1961ರಲ್ಲಿ ಸುನ್ನಿ ವಕ್ಫ್ ಬೋಡರ್ಿನವರು ಇಡೀ ಬಾಬ್ರಿ ಮಸೀದಿ ಪ್ರದೇಶದ ಒಡೆತನವನ್ನು ಕೇಳಿ ಸಲ್ಲಿಸಿದ್ದ ದಾವೆಯನ್ನು ಔಖ-4 ಎಂದೂ ಪರಿಗಣಿಸಿ, 1909ರಲ್ಲಿ ಇಡೀ ಪ್ರದೇಶ ತನ್ನದು ಎಂದು ಭಗವಾನ್ ರಾಮ ಹಾಕಿದ್ದ ಅಜರ್ಿಯನ್ನು ಔಖ-5 ಎಂದೂ ಪರಿಗಣಿಸಲಾಯಿತು. 1990ರಲ್ಲಿ ಔಖ-2ರ ಅಜರ್ಿದಾರ ಭಗವಂತನ ಹೆಸರಲ್ಲಿ ಬಿಜೆಪಿ ನಡೆಸುತ್ತಿದ್ದ ರಾಜಕಾರಣವನ್ನು ಕಂಡು ಬೇಸತ್ತು ತಮ್ಮ ಅಜರ್ಿಯನ್ನು ಹಿಂತೆಗೆದುಕೊಂಡರು. ಹೀಗಾಗಿ ಅಲಹಾಬಾದ್ ಹೈಕೋಟರ್ಿನ ಮುಂದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲಕ್ಕು ದಾವೆಗಳು ಉಳಿದುಕೊಂಡವು.
ಈ ಮಧ್ಯೆ ರಾಮಜನ್ಮಭೂಮಿ ವಿವಾದವನ್ನು ರಾಷ್ಟ್ರಮಟ್ಟದ ಕೋಮುವಾದಿ ರಾಜಕಾರಣಕ್ಕೆ ಬಳಸಿಕೊಂಡ ಸಂಘಪರಿವಾರ ಮತ್ತು ಬಿಜೆಪಿ ರಾಷ್ಟ್ರಾದ್ಯಂತ ರಾಮನ ಹೆಸರಲ್ಲಿ ಉನ್ಮಾದ ಸೃಷ್ಟಿಸಿ ಕೋಮು ಕಗ್ಗೊಲೆಗಳನ್ನು ನಡೆಸಿದ್ದಲ್ಲದೆ 1992ರ ಡಿಸೆಂಬರ್ 6ರಂದು ಬಾಬ್ರಿ ಮಸೀಯನ್ನು ಕೆಡವಿ ಹಾಕಿತು. ಅಂದೇ ಅಲ್ಲಿ ಒಂದು ತಾತ್ಕಾಲಿಕ ರಾಮಮಂದಿರವನ್ನು ಕಟ್ಟಿಬಿಟ್ಟಿತು. 1993ರಲ್ಲಿ ಕೇಂದ್ರ ಸಕರ್ಾರ ಬಾಬ್ರಿ ಮಸೀಯಿದ್ದ ಇಡೀ 2.7 ಎಕರೆಯನ್ನು ಒಳಗೊಂಡಂತೆ 64 ಎಕರೆ ಪ್ರದೇಶವನ್ನು ತನ್ನ ಸುಫದರ್ಿಗೆ ತೆಗೆದುಕೊಂಡಿತು. ವಿವಾದಿತ ಸ್ಥಳದಲ್ಲಿ ರಾಮಮಂದಿರವಿತ್ತೋ ಇಲ್ಲವೋ ಎಂಬ ವಿಷಯದ ಬಗ್ಗೆ ಕೇಂದ್ರ ಸಕರ್ಾರದ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ಸುಪ್ರಿಂಕೋಟರ್ಿನ ಅಭಿಪ್ರಾಯ ಕೇಳಿದರು. ಆದರೆ ಸುಪ್ರಿಂ ಕೋಟರ್ಿನ ಐದು ನ್ಯಾಯಾಧೀಶರ ಪೀಠ ಇಂಥಾ ಇತಿಹಾಸ, ನಂಬಿಕೆ ಮತ್ತು ಶ್ರದ್ಧೆಗಳ ವಿಷಯದ ಬಗ್ಗೆ ಕೋಟರ್ುಗಳ ತಮ್ಮ ಅಭಿಪ್ರಾಯ ಕೊಡಲು ಅಶಕ್ತ ಮತ್ತು ಸಲ್ಲದು ಎಂದು ತಿಳಿಸಿತು. 1994ರ ಇಸ್ಮಾಯಿಲ್ ಫರೂಖಿ ಪ್ರಕರಣದಲ್ಲಿ ಸುಪ್ರಿಂ ಕೋಟರ್ು ಇಡೀ ಪ್ರಕರಣವನ್ನು ಅಲಹಾಬಾದ್ ಹೈಕೋಟರ್ು ಒಂದೇ ಪ್ರಕರಣವೆಂದು ಭಾವಿಸಿ ತೀಪರ್ು ನೀಡಲು ಆದೇಶಿಸಿತು.
ಅಲಹಾಬಾದ್ನ ಲಖನೌ ವಿಭಾಗದ ತ್ರಿಸದಸ್ಯ ಪೀಠ ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿತು. 2000ರಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಸಕರ್ಾರ ಅಧಿಕಾರದಲ್ಲಿದ್ದಾಗ ಕೇಂದ್ರ ಸಕರ್ಾರದ ಸುಫದರ್ಿಯಲ್ಲಿದ್ದ ಬಾಬ್ರಿ ಮಸೀದಿಯಿದ್ದ 2.7 ಎಕರೆ ಜಾಗದಲ್ಲಿ ಬಾಬ್ರಿ ಮಸೀದಿ ನಿಮರ್ಾಣಕ್ಕೂ ಮುಂಚೆ ಮಂದಿರವಿತ್ತೇ ಎಂದು ಅಧ್ಯಯನ ಮಾಡಲು ಆಕರ್ಿಯಾಲಾಜಿಕಲ್ ಸವರ್ೇ ಆಫ್ ಇಂಡಿಯಾಗೆ ಆದೇಶಿಸಲಾಯಿತು. 2002ರಲ್ಲಿ ಅವರು ಆ ಜಾಗದಲ್ಲಿ ಉತ್ಖನನ ಪ್ರಾರಂಭಿಸಿ 2003ರಲ್ಲಿ ವರದಿ ಕೊಟ್ಟರು. ಆದರೆ ಉತ್ಖನನಕೆ ಮತ್ತು ಅಧ್ಯಯನಕ್ಕೆ ಅವರು ಅನುಸರಿಸಿದ ಪದ್ಧತಿ ಮತ್ತು ತಲುಪಿದ ತೀಮರ್ಾನಗಳ ಬಗ್ಗೆ ದೇಶದ ಎಲ್ಲಾ ಪ್ರಮುಖ ಇತಿಹಾಸಕಾರರು ಮತ್ತು ಪರಿಣಿತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆದರೂ ಕೋಟರ್ು ಆ ವರದಿಯನ್ನು ತನ್ನ ಪ್ರಮುಖ ಸಾಕ್ಷ್ಯವೆಂದು ಪರಿಗಣಿಸಿತು. ಇದು ಇಲ್ಲಿಯವರೆಗಿನ ಅಯೋಧ್ಯಾ ಪ್ರಕರಣದ ಇತಿಹಾಸ. ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ತ್ರಿಸದಸ್ಯ ಪೀಠದ ನ್ಯಾಯಾಧೀಶರೆಂದರೆ ನ್ಯಾಯಮೂತರ್ಿ ಶಮರ್ಾ, ನ್ಯಾಯಮೂತರ್ಿ ಅಗರ್ವಾಲ್ ಮತ್ತು ನ್ಯಾಯಮೂತರ್ಿ ಎಸ್.ಯು. ಖಾನ್. ಈ ನ್ಯಾಯ ಪೀಠವು ಮೊದಲು ಪ್ರತಿ ಪ್ರಕರಣದಲ್ಲಿ ಯಾವ್ಯಾವ ವಿಷಯಗಳ ಬಗ್ಗೆ ತೀಮರ್ಾನ ಕೊಡಬೇಕಿದೆ ಎಂಬುದನ್ನು ಪಟ್ಟಿ ಮಾಡಿತು. ಅದರಂತೆ ವಿಶಾರದರ ಔಖ-1ಪ್ರಕರಣದಲ್ಲಿ 17 ವಿಷಯಗಳನ್ನೂ, ನಿಮರ್ೋಹಿ ಅಖಾಡಾದ ಔಖ-3 ವಿಷಯದಲ್ಲಿ 17 ವಿಷಯಗಳನ್ನೂ, ಸುನ್ನಿ ವಕ್ಫ್ ಬೋಡರ್ಿನ ಔಖ-4 ಪ್ರಕರಣದಲ್ಲಿ 28 ಹಾಗೂ ಕೆಲವು ಉಪವಿಷಯಗಳನ್ನೂ, ಮತ್ತು ಭಗವಾನ್ ಶ್ರೀರಾಮ ವಿರಾಜಮಾನ್ರ ಔಖ-5 ಪ್ರಕರಣದಲ್ಲಿ 30 ವಿಷಯಗಳನ್ನು ಇತ್ಯರ್ಥ ಮಾಡಬೇಕಾಗಿದೆಯೆಂದೂ ನ್ಯಾಯಾಲಯ ಪಟ್ಟಿ ಮಾಡಿತು.
ಪಂಚ ಪಶ್ನೆಗಳು ಮತ್ತು ಪ್ರಶ್ನಾರ್ಹ ತೀಪರ್ುಗಳು
ಆದರೂ ಈ ಎಲ್ಲಾ ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಐದಾರು ವಿಷಯಗಳು ಮಾತ್ರ ಪ್ರಮುಖವಾದದ್ದು. ಆದ್ದರಿಂದಲೇ ಕೋಟರ್ೂ ಸಹ ತನ್ನ ಬೃಹತ್ ತೀರ್ಪನ್ನು ಮಾಧ್ಯಮಗಳಿಗೆ ಹೇಳುವಾಗ ಈ ಐದಾರು ಪ್ರಮುಖ ವಿಷಯಗಳ ಬಗೆಗೇ ಒತ್ತುಕೊಟ್ಟಿದೆ. ಮಿಕ್ಕ ಎಲ್ಲಾ ತೀಮರ್ಾನಗಳನ್ನು ಈ ನೆಲೆಯಿಂದಲೇ ಮಾಡಲಾಗಿದೆ. ಹೀಗಾಗಿ ನ್ಯಾಯಾಲಯ ಇತ್ಯರ್ಥ ಮಾಡಿದ ಆ ಪ್ರಮುಖ ವಿಷಯಗಳು ಮತ್ತು ಆ ತೀಮರ್ಾನಕ್ಕೆ ಬರಲು ಅದು ಅನುಸರಿಸಿದ ನ್ಯಾಯಿಕ ಮಾನದಂಡಗಳನ್ನು ಗಮನಿಸುವುದು ಅತ್ಯಂತ ಮುಖ್ಯ. ಬೇರೆ ಬೇರೆ ವಿಷಯಗಳಿಗೆ ಸಂಬಂಧಪಟ್ಟಂತೆ ಮೂರೂ ಜನ ಬೇರೇಬೇರೇ ತೀಪರ್ು ಕೊಟ್ಟಿದ್ದರೂ ಸಾರಾಂಶದಲ್ಲಿ ಅವರು ನಡುವೆ ಸಾಮ್ಯತೆಗಳೂ ಇವೆ.
1. ವಿವಾದಿತ ಪ್ರದೇಶದ ಒಡೆತನ ಯಾರಿಗೆ ಸೇರಬೇಕು?
ತೀಪರ್ು: ಯಾವುದೇ ಸ್ಥಳದ ಒಡೆತನವು ವಿವಾದದಲ್ಲಿದ್ದು ಅಲ್ಲಿ ಮತ್ತೊಬ್ಬರು ಹಕ್ಕು ಸ್ಥಾಪಿಸಲು ಬಯಸಿದಲ್ಲಿ ಪ್ರಕರಣ ಬಯಲುಗೊಂಡ 12 ವರ್ಷಗಳ ಒಳಗೆ ದಾವೆಯನ್ನು ಹೂಡಬೇಕು. ಇಲ್ಲಿ ನಿಮರ್ೋಹಿ ಅಖಾಡಾ ಹತ್ತಾರು ವರ್ಷದ ಕೆಳಗೇ ಪ್ರಾರಂಭವಾದರೂ ಪ್ರಕರಣ ದಾಖಲಿಸಿದ್ದು 1959ರಲ್ಲಿ. ಅದೇ ರೀತಿ ಪ್ರತಿಮೆಗಳನ್ನು 1949ರಲ್ಲೇ ಸ್ಥಾಪಿಸಿ ಮುಸ್ಲಿಮರ ನಮಾಜಿಗೆ ಪ್ರತಿಭಂಧ ಹೂಡಿದ್ದರೂ ಅವರು ಒಡತನ ದಾವೆ ಸಲ್ಲಿಸಿದ್ದು 1961ರಲ್ಲಿ. ಹೀಗಾಗಿ ಇಬ್ಬರ ದಾವೆಗಳು ಸಮಯ ಬಾಹಿರವಾದ್ದರಿಂದ ನಿಮರ್ೋಹಿ ಅಖಾಡಾ ಮತ್ತು ಸುನ್ನಿ ವಕ್ಫ್ ಬೋಡರ್ಿನ ದಾವೆಯನ್ನು ವಜಾ ಮಾಡಲಾಗಿದೆಯೆಂದು ಮೂರೂ ಜನ ನ್ಯಾಯಾಧೀಶರೂ ಆದೇಶ ನೀಡಿದ್ದಾರೆ.
ಆದರೆ ಸುನ್ನಿ ವಕ್ಫ್ ಬೋಡರ್್ ತನ್ನ ದಾವೆ ಸಲ್ಲಿಸಿದ್ದು 1961ರ ಡಿಸೆಂಬರ್ 18ರಂದು. ಪ್ರತಿಮೆಗಳು ಸ್ಥಾಪನೆಯಾಗಿದ್ದು 1949ರ ಡಿಸೆಂಬರ್ 22ರಂದು. ಹೀಗೆ ಕೇವಲ ದಿನಗಳ ಲೆಕ್ಕಾಚಾರ ತೆಗೆದುಕೊಂಡರೂ ಸುನ್ನಿ ವಕ್ಫ್ ಬೋಡರ್್ ದಾವೆ ಕಾಲಬಾಹಿರವಾಗುವುದಿಲ್ಲ!!
ಆದರೂ ನ್ಯಾಯಾಧೀಶರಾದ ಖಾನ್ ಮತ್ತು ಅಗರ್ವಾಲ್ರವರು ವಿವಾದಿತ ಜಾಗವನ್ನು ಮೂರು ಭಾಗ ಮಾಡಿ ರಾಮಲಲ್ಲಾ, ನಿಮರ್ೋಹಿ ಅಖಾಡಾ ಮತ್ತು ಸುನ್ನಿ ಬೋಡರ್ಿಗೆ ತಲಾ ಮೂರನೇ ಒಂದು ಭಾಗವನ್ನು ಹಂಚಬೇಕೆಂದು ಆದೇಶಿಸಿದ್ದಾರೆ. ಆದರೆ ನ್ಯಾ.ಶಮರ್್ ಇಡೀ ಪ್ರದೇಶ ರಾಮಲಲ್ಲಾಗೆ ಸೇರಬೇಕಿದ್ದರಿಂದ ಉಳಿದೆರಡು ಫಿಯರ್ಾದುದಾರರಿಗೆ ಜಾಗವನ್ನು ಹಂಚಲು ನಿರಾಕರಿಸುತ್ತಾರೆ.
ಆದರೆ ಮೂರು ಸದಸ್ಯರ ಪೀಠದಲ್ಲಿ ಇಬ್ಬರ ಅಭಿಪ್ರಾಯವೇ ಬಹುಮತದ ಅಭಿಪ್ರಾಯವಾಗುತ್ತಾದ್ದರಿಂದ ಅನುಷ್ಠಾನಕ್ಕೆ ತರಬೇಕಿರುವುದು ಬಹುಮತದ ತೀಮರ್ಾನವನ್ನೇ. ಆದರೆ ಈ ಬಹುಮತದ ತೀಪರ್ು ನಿಜವಾದ ಹಕ್ಕುದಾವೆ ಹೂಡಿದ್ದ ಇಬ್ಬರೂ ಫಿಯರ್ಾದಿಗಳಿಗೂ ಯಾವುದೇ ಸರಿಯಾದ ತರ್ಕವಿಲ್ಲದೆ ಒಡೆತನದ ಹಕ್ಕು ನಿರಾಕರಿಸುತ್ತದೆ. ಹಾಗೂ ಯಾವ ಸಾಕ್ಷ್ಯ ಪುರಾವೆಗಳಿಲ್ಲದಿದ್ದರೂ ಮೂರನೇ ವಾದಿಯಾದ ಭಗವಾನ್ ರಾಮಲಲ್ಲಾನಿಗೆ ಒಂದು ಪಾಲು ಒಡೆತನವನ್ನು ನೀಡುತ್ತದೆ. ಆದರೆ ಹಕ್ಕನ್ನು ನಿರಾಕರಿಸಿದ ನ್ಯಾಯಾಲಯವೇ ಅಂತಿಮವಾಗಿ ಔದಾರ್ಯ ತೋರಿಸಿ ಎರಡೂ ಫಿಯರ್ಾದಿಗಳಿಗೆ ಒಂದೊಂದು ಪಾಲು ನೀಡುತ್ತದೆ. ಇದು ಈಗಾಗಲೇ ಸತತವಾಗಿ ಹಕ್ಕುಗಳ ವಂಚನೆಗೆ ಗುರಿಯಾಗುತ್ತಿರುವ ಮುಸ್ಲಿಂ ಸಮುದಾಯದ ಗಾಯಕ್ಕೆ ಔದಾರ್ಯದ ಬರೆಯನ್ನೇ ಎಳೆದಂತಾಗಿದೆ.
2. ವಿವಾದಿತ ಜಾಗದಲ್ಲಿ 1528ರಲ್ಲಿ ಮಸೀದಿ ಕಟ್ಟುವ ಮುನ್ನ ರಾಮಮಂದಿರವಿತ್ತೇ?
ತೀಪರ್ು: ಈ ವಿಷಯದ ಬಗ್ಗೆ ಮೇಲ್ನೋಟಕ್ಕೆ ಒಬ್ಬೊಬ್ಬ ನ್ಯಾಯಾಧೀಶರು ಒಂದೊಂದು ಬಗೆಯ ತೀಮರ್ಾನ ಕೊಟ್ಟಿದ್ದಾರೆ ಎಂದು ಅನಿಸಿದರೂ ಸಾರಾಂಶ ಒಂದೇ ರೀತಿ ಇದೆ.
ನ್ಯಾ. ಖನ್ನಾರವರು ಇಲ್ಲಿ ಮಸೀದಿ ಕಟ್ಟುವ ಮುನ್ನ ರಾಮಮಂದಿರವಿತ್ತು ಎಂದು ಹೇಳಲಾಗುವುದಿಲ್ಲ ಎಂದು ಅಭಿಪ್ರಾಯ ಪಡುತ್ತಾರೆ. ಆದರೆ ಅಕರ್ಿಯಾಲಾಜಿಕಲ್ ಸವರ್ೇ ಆಫ್ ಇಂಡಿಯಾ (ಂಖ) ಕೊಟ್ಟ ವಿವಾದಾತ್ಮಕ ವರದಿ ಮತ್ತು ತೀಮರ್ಾನಗಳನ್ನು ಪ್ರಶ್ನಿಸದೇ ಒಪ್ಪಿಕೊಳ್ಳುವ ನ್ಯಾ, ಖಾನ್ರವರು ಮಸೀದಿಯ ಕೆಳಗೆ ಒಂದು ಬೃಹತ್ ಹಿಂದೂ ಧಾಮರ್ಿಕ ಸ್ವರೂಪದ ಕಟ್ಟಡವಿತ್ತೆಂದು ಸರಿಯಾದ ಪುರಾವೆಯಿಲ್ಲದೇ ಒಪ್ಪಿಕೊಳ್ಳುತ್ತಾರೆ. ಆದರೆ ಅದೇ ಸಮಯದಲ್ಲಿ ಅದು ರಾಮಮಂದಿರವೇ ಆಗಿತ್ತೆಂದೋ ಅಥವಾ ಅದನ್ನು ಕೆಡವಿಯೇ ಕಟ್ಟಲಾಗಿದೆಯೆಂದೂ ತೀಮರ್ಾನಕ್ಕೆ ಬರಲು ಆಗುವುದಿಲ್ಲವೆಂದು ಹೇಳುತ್ತಾರಾದರೂ ಅದು ಅಂತಿಮವಾಗಿ ಅವರ ತೀಪರ್ಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ನ್ಯಾ. ಅಗರ್ವಾಲ್ರವರೂ ಸಹ ಂಖ ವರದಿಯನ್ನು ಯಥಾವತ್ ಒಪ್ಪಿಕೊಳ್ಳುತ್ತಾರೆ. ಹಾಗೂ ಮಸೀದಿಯನ್ನು ಅಸ್ತಿತ್ವದಲ್ಲಿದ್ದ ಬೃಹತ್ ಹಿಂದೂ ಧಾಮರ್ಿಕ ರಚನೆಯ ಮೇಲೆಯೇ ಕಟ್ಟಲಾಗಿದೆಯೆಂದು ಅಭಿಪ್ರಾಯ ಪಡುತ್ತಾರೆ.
ನ್ಯಾ.ಶಮರ್ಾರಂತೂ ಬಿಡಿ! ವಿಶ್ವಹಿಂದೂ ಪರಿಷತ್ತಿನ ಲಾಯರ್ ಹಾಗೂ ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ಮುಂದಿಟ್ಟ ವಾದವನ್ನು ಯಾವುದೇ ತಿದ್ದುಪಡಿಯಿಲ್ಲದೆ ಒಪ್ಪಿಕೊಳ್ಳುತ್ತಾರೆ. ಅವರ ಪ್ರಕಾರ ಅಲ್ಲಿ ಮಸೀದಿ ಕಟ್ಟುವ ಮುಂಚೆ ಸಾಕ್ಷಾತ್ ಶ್ರೀರಾಮ ಮಂದಿರವೇ ಅಸ್ತಿತ್ವದಲ್ಲಿತ್ತು. ಮತ್ತು ಅದನ್ನು ಕೆಡವಿಯೇ ಬಾಬ್ರಿ ಮಸೀದಿಯನ್ನು ಕೆಡವಲಾಗಿದೆ.
ಹೀಗೆ ನ್ಯಾ. ಶಮರ್ಾರ ಅತಿರೇಕದ ಅಭಿಪ್ರಾಯಗಳನ್ನು ಹೊರತುಪಡಿಸಿದರೂ ಉಳಿದಿಬ್ಬರ ತೀಮರ್ಾನವೂ ಸಹ ಯಾವುದೇ ಸರಿಯಾದ ಪುರಾವೆಗಳ ಮೇಲೆ ನಿಂತಿಲ್ಲ.
ಮೊದಲನೆಯದಾಗಿ 1994ರಲ್ಲಿ ರಾಷ್ಟ್ರಪತಿಯವರು ಮಸೀದಿಯ ಕೆಳಗೆ ರಾಮಮಂದಿರವಿತ್ತೇ ಎಂದು ಅಭಿಪ್ರಾಯ ತಿಳಿಸಲು ಕೋರಿದಾಗ ಸುಪ್ರಿಂಕೋಟರ್ಿನ ಐದು ಜನರ ಪೀಠ ಕೋಟರ್ುಗಳು ಇಂಥಾ ವಿಷಯಗಳಲ್ಲಿ ಮಧ್ಯಪ್ರವೇಶ ಮಾಡಬಾರದೆಂದು ಅಷ್ಟು ಖಚಿತವಾಗಿ ಹೇಳಿದ್ದರೂ ನ್ಯಾಯಾಂಗದ ಶ್ರೇಣೀಕರಣದಲ್ಲಿ ಸುಪ್ರೀಂ ಕೋಟರ್ಿಗಿಂತ ಕೆಳಗಿರುವ ಮೂರು ಸದಸ್ಯರ ಹೈಕೋಟರ್ು ಇದನ್ನು ಪರಿಗಣನೆಗೆ ತೆಗೆದುಕೊಂಡಿದ್ದೇ ತಪ್ಪು. ಅದರ ಬಗ್ಗೆ ತಮಗೆ ಯಾವುದೇ ಪರಿಣಿತಿ ಇಲ್ಲದಿದ್ದರೂ ಅದರ ಬಗ್ಗೆ ವ್ಯಾಖ್ಯಾನ ನೀಡಿ ತೀಪರ್ು ನೀಡಿದ್ದು ಎರಡನೇ ಮಹಾಪರಾಧ!
ಮೂರನೆಯದಾಗಿ ಕೋಟರ್ೂ ಬಲವಾಗಿ ಆಧರಿಸಿದ್ದ ಂಖ ನೀಡಿದ ವರದಿ ಮತ್ತು ಉತ್ಖನನ ಮತ್ತು ಸಂಶೋಧನೆಗೆ ಅದು ಅನುಸರಿಸಿದ ಮಾರ್ಗ. ಇದರ ಬಗ್ಗೆ ಇತಿಹಾಸಕಾರರು ಮತ್ತು ಸಂಶೋಧಕರು ಹಲವಾರು ಆಕ್ಷೇಪಣೆಗಳನ್ಮು ಸಲ್ಲಿಸಿದ್ದರು. ಅದರಲ್ಲು ಆ ತಂಡ ಉತ್ಖನನ ಮಾಡುವಾಗ ಹೊರ ಆವರಣದಲ್ಲಿ ಪಾಳು ಬಿದ್ದಿದ್ದ ಇಟ್ಟಿಗೆಗಳನ್ನೆಲ್ಲಾ ಒಟ್ಟು ಸೇರಿಸಿ ಪಿಲ್ಲರ್ ಸ್ವರೂಪದ ರಚನೆ ಇತ್ತೆಂದು ಸಾಬೀತು ಮಾಡಲು ನಡೆಸಿದ ಪ್ರಯತ್ನ ಮತ್ತು ಅದರ ಹಿಂದಿನ ಉದ್ದೇಶಗಳ ಬಗ್ಗೆ ಕೆಲವು ಇತಿಹಾಸಕಾರರು ಸುಪ್ರಿಂ ಕೋಟರ್ಿಗೂ ದೂರು ಸಲ್ಲಿಸಿದ್ದರು. ಅಲ್ಲದೆ ಉತ್ಖನನದಲ್ಲಿ ಕಂಡ ಅವಶೇಷಗಳ ಕಾಲಾವಧಿಯನ್ನು ನಿಧರ್ಾರ ಮಾಡಲು ಂಖ ಅನುಸರಿಸಿದ ಮಾದರಿ ಅತ್ಯಂತ ಕಳಪೆಯಾಗಿದೆಯೆಂದು ನ್ಯಾಯಾಲಯಗಳ ಗಮನಕ್ಕೂ ತರಲಾಗಿತ್ತು. ಈ ಉತ್ಖನನವನ್ನು ಆಧರಿಸಿ ಅವರು ನೀಡಿದ ವರದಿ ಇನ್ನೂ ಹಾಸ್ಯಾಸ್ಪದವಾಗಿತ್ತು.
ವಾಸ್ತವವಾಗಿ ಇದನ್ನು ಕಂಡು ರೋಸಿಹೋಗಿದ್ದ ಈ ದೇಶದ ಗಣ್ಯಾತಿಗಣ್ಯಇತಿಹಾಸಕಾರರಾದ ಸೂರಜ್ ಭಾನ್, ಡಿ.ಎನ್ .ಝಾ, ಆರ್.ಎಸ್. ಶಮರ್ಾ ಮತ್ತು ಅಲಿ ಯವರು ಆ ಉತ್ಖನನದ ವರದಿಯ ಬಗ್ಗೆ ತಮ್ಮ ಅಭಿಪ್ರಾಯವನ್ನೂ ನೀಡಲೂ ಸಹ ಅವಕಾಶ ಕೊಡಬೇಕೆಂದು ಕೋರಿದ್ದರು. ಅದಕ್ಕೆ ಪ್ರತಿವಾದಿಗಳಾಗಿದ್ದ ಮುಸ್ಲಿಂ ಸಂಘಟನೆಗಳೂ ಒಪ್ಪಿಕೊಂಡಿದ್ದವು. ಆದರೆ ಸಕರ್ಾರ ಅದರ ಬಗ್ಗೆ ದಿವ್ಯ ನಿರ್ಲಕ್ಷ್ಯವನ್ನು ತೋರಿತು. ಆದರೂ ಈ ಇತಿಹಾಸಕಾರರು ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ದೇಶಕ್ಕೊಂದು ಇತಿಹಾಸಕಾರರ ವರದಿಯನ್ನು ನೀಡಿದರು. ಅದರಲ್ಲಿ ಅವರು ಆ ಆವರಣದಲ್ಲಿ ದೊರೆತ ಅವಶೇಷಗಳಲ್ಲಿ ಬಳಸಿರುವ ಸುಕರ್ಿ ಹಾಗೂ ಸುಣ್ಣದ ಬಳಕೆಗಳು ಅವಶೇಷವಾಗಿರುವ ಕಟ್ಟಡ ಒಂದು ಇಸ್ಲಾಮಿಕ್ ಕಟ್ಟಡವೇ ವಿನಃ ಹಿಂದೂ ಧಾಮರ್ಿಕ ಕಟ್ಟಡವಲ್ಲ ಎಂಬ ಅಭಿಪ್ರಾಯ ಪಟ್ಟಿದ್ದರು. ಮುಸ್ಲಿಂ, ಪಿಲ್ಲತ್ರಹ ಕಾಣುವ ರಚನೆಗಳು ವಾಸ್ತವವಾಗಿ ಭಾರವನ್ನು ಹೊರುವ ಪಿಲ್ಲರ್ಗಳಲ್ಲ ಬದಲಿಗೆ ಅದು ಅಲಂಕಾರಿಕ ರಚನೆ ಎಂಬುದನ್ನೂ ಸಾಬೀತುಪಡಿಸಿದ್ದರು. ಇದಲ್ಲದೆ ಇನ್ನೂ ಹಲವಾರು ಪುರಾವೆಗಳನ್ನು ತೋರಿಸಿ ಅದು ಇಸ್ಲಾಮಿಕ್ ಕಟ್ಟಡವೇ ವಿನಃ ಮಂದಿರವಾಗಿರಲಾರದು ಎಂದು ಸಾಬೀತು ಪಡಿಸುತ್ತಾರೆ. ಮತ್ತು ಅದನ್ನು ಕೋಟರ್ಿಗೂ ಸಲ್ಲಿಸುತ್ತಾರೆ.
ದೇಶದ ಪ್ರಖ್ಯಾತ ಇತಿಹಾಸ ತಜ್ನರ ಪ್ರಕಾರ ಅಯೋಧ್ಯೆ ಪ್ರಸಿದ್ಧ ಬೌದ್ಧ ಮತ್ತು ಜೈನ ಯಾತ್ರಾಸ್ಥಳವೂ ಆಗಿತ್ತು. ವಾಸ್ತವವಾಗಿ 17ನೇ ಶತಮಾನದ ತನಕ ರಾಮನು ಉತ್ತರ ಭಾರತದಲ್ಲಿ ಅಂಥಾ ಜನಪ್ರಿಯ ದೇವರೇ ಆಗಿರಲಿಲ್ಲ. ಹೀಗಾಗಿ ಉತ್ಖನನದಲ್ಲಿ 15ನೇ ಶತಮಾನಕ್ಕೂ ಹಿಂದೆ ರಾಮಮಂದಿರದ ಅವಶೇಷಗಳು ಕಂಡುಬಂದಿರಲು ಸಾಧ್ಯವೇ ಇಲ್ಲ.
ಮಧ್ಯಕಾಲೀನ ಭಾರತದ ಬಗ್ಗೆ ಅಧಿಕೃತ ಆಕರವೆಂದೇ ಪ್ರಸಿದ್ಧರಾಗಿರುವ ಖ್ಯಾತ ಇತಿಹಾಸ ತಜ್ನ ಇಫéರ್ಾನ್ ಹಬೀಬರ ಪ್ರಕಾರವಂತೂ ಬಾಬ್ರಿ ಮಸೀದಿಯನ್ನು ಈಗಾಗಲೇ ಪತನಗೊಂಡಿದ್ದ ದಗರ್ಾ ಅಥವಾ ಮಸೀದಿಯ ಅವಶೇಷಗಳ ಮೇಲೆ ಕಟ್ಟಲಾಗಿದೆ.
ಹೀಗೆ ಮಸೀದಿಯ ಕೆಳಗೆ ಸಿಕ್ಕಿರುವ ಅವಶೆಷಗಳೊ ಮಂದಿರದ್ದೋ, ಮಸೀದಿಯದ್ದೋ, ದಗರ್ಾದೋ, ಜೈನ ಬಸದಿಯದ್ದೋ, ಅಥವಾ ಬೌದ್ಧ ವಿಹಾರದ್ದೋ ಎಂಬ ತೀಮರ್ಾನವನ್ನು ಂಖ ವರದಿಯನ್ನು ಆಧರಿಸಿ ಖಚಿತವಾಗಿ ಮಾಡಲು ಸಾಧ್ಯವೇ ಇಲ್ಲ. ಅಥವಾ ಮಂದಿರವಾದಿಗಳು ಈ ವರದಿಯನ್ನು ಆಧರಿಸಿ ಅಲ್ಲಿ ಇದ್ದದ್ದು ಇವ್ಯಾವುದೂ ಅಲ್ಲವೆಂದೂ, ಕೇವಲ ರಾಮಮಂದಿರ ಮಾತ್ರವೆಂದೂ ಖಚಿತವಾಗಿ ಸಾಬೀತು ಸಹ ಮಾಡಿಲ್ಲ. ಅಬ್ಬಬ್ಬಾ ಎಂದರೆ ಂಖ ವರದಿ ಹೇಳುವುದು ಅಲ್ಲಿ ಧಾಮರ್ಿಕ ಅವಶೇಷ ಇದೆ ಎಂದು ಮಾತ್ರ.
ಹೀಗಿರುವಾಗ ಕೋಟರ್ು ವಿವಾದಾಸ್ಪದವಾದ ಂಖ ವರದಿಯನ್ನು ಹೇಗೆ ಯಥಾವತ್ ಒಪ್ಪಿಕೊಂಡಿತು? ಅದರ ಆಧಾರದಲ್ಲಿ ಹೇಗೆ ಮಸೀದಿಯ ಕೆಳಗೆ ಹಿಂದೂ ಧಾಮರ್ಿಕ ರಚನೆಯೋ ಅಥವಾ ನ್ಯಾ.ಶಮರ್ಾ ಹೇಳುವಂತೆ ರಾಮಮಂದಿರವೋ ಇತ್ತು ಎಂಬ ತೀಮರ್ಾನಕ್ಕೆ ಬರಲು ಸಾಧ್ಯವಾಯಿತು? ಮೊದಲಿಂದಲೂ ಈ ನ್ಯಾಯಾಧೀಶರುಗಳು ಹಿಂದೂ ಜನರ ನಂಬಿಕೆ ಮತ್ತು ಶ್ರದ್ಧೆಗಳಿಗೆೆ ಸಾಕ್ಷಿ ಪುರಾವೆಗಳಿಗಿಂತ ಹೆಚ್ಚಿನ ಮಹತ್ವವನ್ನು ಕೊಡುತ್ತಾ ಬಂದಿದ್ದೇ ನ್ಯಾಯಕ್ಕೆ ಈ ರೀತಿ ಘೋರ ಅಪಚಾರವಾಗಲು ಕಾರಣವಾಯಿತು.
3. ವಿವಾದಿತ ಸ್ಥಳದಲ್ಲಿ ಮುಸ್ಲಿಮರು ಬಹಳ ಹಿಂದಿನಿಂದಲೂ ಪ್ರಾರ್ಥನೆ ಸಲ್ಲಿಸುತ್ತಾ ಬಂದಿದ್ದಾರೆಯೆ? ಅಲ್ಲಿದ್ದ ಕಟ್ಟಡವನ್ನು ಮಸೀದಿಯೆಂದು ಪರಿಗಣಿಸಬಹುದೇ?
ತೀಪರ್ು: ಇದರ ಬಗ್ಗೆ ನ್ಯಾ.ಶಮರ್ಾರಂತೂ ಒಂದೇ ಉಸಿರಿನಲ್ಲಿ ಬಿಲ್ಕುಲ್ ಅದು ಮಸೀದಿಯಾಗಿರಲಿಲ್ಲವೆಂದೂ ತೀಪರ್ಿತ್ತಿದ್ದಾರೆ. ಅವರ ಪ್ರಕಾರ ಮಂದಿರವನ್ನು ಕೆಡವಿ ಮಸೀದಿಯನ್ನು ಕಟ್ಟಲಾಗಿದೆಯಾದ್ದರಿಂದ ಅದು ಇಸ್ಲಾಮಿಕ್ ಪದ್ಧತಿಯ ಪ್ರಕಾರ ಮಸೀದಿ ಎನಿಸಿಕೊಳ್ಳುವುದಿಲ್ಲ. ಆದರೆ ನ್ಯಾ.ಖಾನ್ ಮತ್ತು ನ್ಯಾ. ಅಗರ್ವಾಲ್ ಅವರು ಅದು ಮಸೀದಿಯೇ ಎಂದೂ, ಅಲ್ಲಿ 1949ರ ತನಕ ಮುಸ್ಲಿಮರು ನಮಾಜು ಮಾಡುತ್ತಿದ್ದರೆಂದು ಒಪ್ಪಿಕೊಳ್ಳುತ್ತಾರೆ. ಆದರೆ 1949ರಿಂದ ಮುಸ್ಲಿಮರನ್ನು ನಮಾಜು ಮಾಡದಂತೆ ತಡೆದದ್ದು ಸಕರ್ಾರ ಮತ್ತು ನ್ಯಾಯಾಲಯವೇ ಎನ್ನುವುದನ್ನು ನ್ಯಾಯಾಲಯ ಪರಿಗಣನೆಗೇ ತೆಗೆದುಕೊಂಡಿಲ್ಲ. ಹೀಗಾಗಿ ಹೇಗಿದ್ದರೂ ಈಗ ಅಲ್ಲಿ ಮುಸ್ಲಿಮರು ಹಲವು ದಶಕಗಳಿಂದ ನಮಾಜು ಸಲ್ಲಿಸುತ್ತಿಲ್ಲವಾದ್ದರಿಂದ ಅದನ್ನು ಈಗ ಮಸೀದಿಯೆಂದು ಪರಿಗಣಿಸದಿದ್ದರೂ ಮುಸ್ಲಿಮರು ಕಳೆದುಕೊಳ್ಳುವುದು ಏನೂ ಇಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
4. 1949ರ ಡಿಸೆಂಬರ್ 22-23ರ ಮಧ್ಯರಾತ್ರಿ ರಾಮ ಪ್ರತಿಮೆಗಳನ್ನು ವಿವಾದಿತ ಸ್ಥಳದಲ್ಲಿ ಸ್ಥಾಪಿಸಲಾಯಿತೋ? ಅಥವಾ ಅದು ಅನೂಚಾನ ಕಾಲದಿಂದಲೂ ಅದು ಅಲ್ಲೇ ಇದೆಯೋ?
ತೀಪರ್ು: ಈ ಪ್ರಶ್ನೆಗೆ ಮಾತ್ರ ಮೂರೂ ಜನ ನ್ಯಾಯಾಧೀಶರು ಡಿಸೆಂಬರ್ 22 ರಾತ್ರಿಯೇ ಅಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗಿದೆಯೆಂದೂ ಒಪ್ಪಿಕೊಳ್ಳುತ್ತಾರೆ. ಹಾಗಿದ್ದರೆ ಅಲ್ಲಿ ಪ್ರತ್ರಿಮೆಗಳನ್ನು ತಂದಿಟ್ಟವರು ಯಾರು? ಅವರ ಮೇಲೆ ಕ್ರಮಗಳೆನು? ಪ್ರತಿಮೆ ತಂದಿಟ್ಟಿದ್ದ ಕಾರಣಕ್ಕಾಗಿ ಅಲ್ಲಿ ನಮಾಜು ಮಾಡುವ ಹಕ್ಕನ್ನು ಕಳೆದುಕೊಂಡ ಮುಸ್ಲಿಮರಿಗೆ ಪರಿಹಾರವೇನು? ಈಗಲಾದರೂ ಆ ಮೂತರ್ಿಯನ್ನು ಅಲ್ಲಿಯೇ ಇರಗೊಡಬೇಕೆ? ತೆಗೆಯಬೇಕೆ? ಈ ಯಾವ ಪ್ರಶ್ನೆಗಳಿಗೂ ನ್ಯಾಯಾಲಯ ನ್ಯಾಯಬದ್ಧ ತೀಮರ್ಾನ ನೀಡುವುದಿಲ್ಲ. ಬದಲಿಗೆ ಈ ಪ್ರಕರಣವನ್ನು ಸಹ ಈ ಜಾಗವು ರಾಮಜನ್ಮಸ್ಥಾನವೇ ಎಂಬ ವಾದವನ್ನು ಒಪ್ಪಿಕೊಳ್ಳಲು ಕಾರಣವೆಂಬಂತೆ ಬಳಸಿಕೊಳ್ಳುತ್ತವೆ.
5. ಈ ಪ್ರದೇಶವು ರಾಮನ ಜನ್ಮಸ್ಥಾನವೇ? ಈ ಜಾಗವನ್ನು ಹಿಂದೂಗಳು ರಾಮ ಜನ್ಮ ಭೂಮಿ ಎಂದು ಪರಿಭಾವಿಸಿ ಅನೂಚಾನ ಕಾಲದಿಂದಲೂ ಪ್ರಾರ್ಥನೆ ಮಾಡುತ್ತಾ ಬಂದಿದ್ದಾರೆಯೇ?
ತೀಪರ್ು: ಪ್ರಾಯಶಃ ಈ ಪ್ರಶ್ನೆಗೆ ಕೋಟರ್ು ನೀಡಿರುವ ತೀಪರ್ು ಮತ್ತು ಆ ತೀಮರ್ಾನಕ್ಕೆ ಬರಲು ಅದು ಅನುಸರಿಸಿರುವ ಮಾನದಂಡಗಳು ಈ ದೇಶದ ಜನತೆ ನ್ಯಾಯಾಂಗದ ಬಗ್ಗೆ ಇಟ್ಟಿರುವ ವಿಶ್ವಾಸವನ್ನೇ ಕಳೆದುಕೊಳ್ಳುವಂತೆ ಮಾಡಿದೆ. ಪ್ರಪ್ರಥಮ ಬಾರಿಗೆ ಒಂದು ನಿದರ್ಿಷ್ಟ ಜಾಗದ ಧಾಮರ್ಿಕತೆಯನ್ನು ನಿರ್ಧರಿಸಲು ನ್ಯಾಯಾಲಯ ಸಾಕ್ಷಿ ಪುರಾವೆಗಳನ್ನು ಬಿಟ್ಟು ಪುರಾಣಗಳನ್ನು ಸಾಕ್ಷ್ಯವಾಗಿಯೇ ಪರಿಗಣಿಸಿದೆ.
ನ್ಯಾ. ಶಮರ್ಾರವರ ಪ್ರಕಾರ ಅಲ್ಲಿ ರಾಮ ಜನ್ಮ ತಾಳಿದ್ದು ನೂರಕ್ಕೆ ನೂರು ನಿಜ. ಏಕೆಂದರೆ ಹಲವಾರು ಪುರಾಣಗಳಲ್ಲಿ ಅಯೋಧ್ಯೆಯಲ್ಲಿ ರಾಮ ಜನ್ಮ ತಳೆದ ಎಂಬ ಉಲ್ಲೇಖವಿದೆ. ಅಷ್ಟು ಮಾತ್ರವಲ್ಲ. ನ್ಯಾ. ಶಮರ್ಾರವರ ಪ್ರಕಾರ ಹಿಂದೂ ಧರ್ಮದ ಪ್ರಕಾರ ದೇವನು ಒಂದು ಸ್ಥಳದಲ್ಲಿದ್ದಾನೆ ಎಂದು ಭಾವಿಸಿದರೆ ಸಾಕು ದೇವರು ಅಲ್ಲಿರುತ್ತಾನೆ. ಹೀಗಾಗಿ ರಾಮನು ಬಾಬ್ರಿ ಮಸೀದಿಯಿದ್ದ ಜಾಗದಲ್ಲೇ ಜನ್ಮ ತಳೆದದ್ದು ಎಂಬ ತೀಮರ್ಾನಕ್ಕೆ ಬರಲು ಯಾವ ಪುರಾವೆಯೂ ಬೇಕಿಲ್ಲ. ಆದರೆ 1949ರ ಡಿಸೆಂಬರ್ ಮಧ್ಯರಾತ್ರಿಯವರೆಗೆ ಅಲ್ಲಿ ರಾಮನ ಪ್ರತಿಮೆ ಇರಲಿಲ್ಲ ಎಂಬುದು ಸಾಬೀತಾಗಿರುವಾಗ ಅದು ಹಿಂದಿನಿಂದಲೂ ರಾಮಮಂದಿರವಾಗಿತ್ತು ಎಂಬ ತೀಮರ್ಾನಕ್ಕೆ ಹೇಗೆ ಬರಲು ಸಾಧ್ಯ ಎಂಬ ಪ್ರಶ್ನೆಗೆ ನ್ಯಾ. ಶಮರ್ಾರವರು ಹಿಂದೂ ಧರ್ಮದ ಪ್ರಕಾರ ದೇವನನ್ನು ಹೇಗೆ ಬೇಕಾದರೂ ಉಪಾಸನೆ ಮಾಡಬಹುದು. ಪ್ರತಿಮೆಯ ಅಗತ್ಯವೇ ಇಲ್ಲ ಎಂಬ ಉತ್ತರ ಕೊಡುತ್ತಾರೆ. ಮಿಕ್ಕಂತೆ ಒಂದು ವಿತಂಡ ವಾದದಂತೆ ಕಾಣುವ ಈ ತೀರ್ಪನ್ನು ನೀಡಿರುವುದು ನಿವೃತ್ತಿಯ ಅಂಚಿನಲ್ಲಿದ್ದ ಹೈಕೋಟರ್ೊಂದರ ಹಿರಿಯ ನ್ಯಾಯಾಧೀಶರೇ!
ನ್ಯಾ.ಖಾನ್ ಅವರಿಗೆ ಅಲ್ಲಿ ರಾಮಮಂದಿರವಿತ್ತೇ ಎಂಬ ಬಗ್ಗೆ ಅನುಮಾನವಿದ್ದರೂ ಹಿಂದೂ ಜನರ ನಂಬಿಕೆಯ ಪ್ರಕಾರ ಅದು ರಾಮಜನ್ಮಭೂಮಿಯೆಂದು ಒಪ್ಪಿಕೊಳ್ಳಬೇಕಾಗುತ್ತದೆ ಎಂಬ ನಿಲುವಿಗೆ ಬರುತ್ತಾರೆ.
ನ್ಯಾ.ಅಗರವಾಲ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತಾರೆ. ಇಲ್ಲಿ ರಾಮ ಹುಟ್ಟಿದ್ದನೋ ಇಲ್ಲವೋ, ಹಿಂದೂಗಳು ಅಯೋಧ್ಯೆಯನನ್ನು ರಾಮ ಜನ್ಮಭೂಮಿ ಎಂದು ಭಾವಿಸುತ್ತಾರೋ ಇಲ್ಲವೊ ಎಂಬ ಬಗ್ಗೆ ಅವರು 700ಕ್ಕೂ ಹೆಚ್ಚು ವೇದ ಗ್ರಂಥಗಳನ್ನು ಅಧ್ಯಯನ ಮಾಡಿದ್ದಾರಂತೆ. ಅದಕ್ಕಾಗಿ ತಮ್ಮ ತೀಪರ್ಿನಲ್ಲಿ 5000ಕ್ಕೂ ಹೆಚ್ಚು ಪುಟಗಳನ್ನೂ ಖಚರ್ು ಮಾಡಿದ್ದಾರೆ. ಇಷ್ಟೆಲ್ಲ ಮಾಡಿ ಅವರು ಬಂದು ತಲುಪುವ ತೀಮರ್ಾನವೇನು?
ಹಿಂದೂ ಧಾಮರ್ಿಕ ಪದ್ಧತಿಯ ಪ್ರಕಾರ ಒಂದು ಜಾಗದಲ್ಲಿ ರಾಮನಿದ್ದಾನೋ ಇಲ್ಲವೋ ಎಂಬ ನಿರ್ಣಯಕ್ಕೆ ಬರಲು ಪ್ರಧಾನವಾಗಿ ಪರಿಗಣಿಸಬೇಕಾದ್ದು ಅವರ ನಂಬಿಕೆಯನ್ನಂತೆ. ಆ ನಂಬಿಕೆಯೇ ಅವರ ಧರ್ಮದ ಅಂತರ್ಗತ ಭಾಗವೂ ಆಗಿಬಿಡುತ್ತದಂತೆ. ಆಗ ಅದು ಸಂವಿಧಾನದ ಆರ್ಟಿಕಲ್ 25 ಕೊಡುವ ಧಾಮರ್ಿಕ ಆಚರಣೆಯ ಹಕ್ಕಿನ ಪ್ರಶ್ನೆಯೂ ಆಗಿಬಿಡುತ್ತದಂತೆ. ಅಂದರೆ ರಾಮನು ಬಾಬ್ರಿ ಮಸೀದಿಯಲ್ಲಿ ಇರುವ ಜಾಗದಲ್ಲಿ ಜನ್ಮ ತಳೆದಿದ್ದ ಎಂಬ ನಂಬಿಕೆ ಹಿಂದೂ ಧರ್ಮದ ಅಂತಭರ್ಾಗವಾಗಿ ಬಿಡುತ್ತದೆ. ಆಗ ಬಾಬ್ರಿ ಮಸೀದಿಯಲ್ಲಿ ರಾಮಪೂಜೆ ಮಾಡುವುದು ಹಿಂದೂಗಳ ಧಾಮರ್ಿಕ ಹಕ್ಕಿನ ಭಾಗವೇ ಆಗಿಬಿಡುತ್ತದೆ ಎಂಬುದು ಅಗರ್ವಾಲ್ರವರ ವಾದ. ಹಾಗೂ ಇಂಥಾ ನಂಬಿಕೆಯನ್ನು ಪ್ರಶ್ನಿಸಲಾಗುವುದಿಲ್ಲ. ಅಂಥಾ ಪ್ರಶ್ನೆ ಕೇಳುವುದರ ಬಗ್ಗೆಯೇ ನ್ಯಾ. ಅಗರ್ವಾಲರು ಕಿಡಿಕಾರುತ್ತಾರೆ. ಅದೇ ಪ್ರಶ್ನೆಯನ್ನು ಪೈಗಂಬರರ ಬಗ್ಗೆ, ಮತ್ತು ಕ್ರಿಸ್ತನ ಬಗ್ಗೆ ಏಕೆ ಕೇಳುವುದಿಲ್ಲ ಎಂದು ವಕೀಲರಂತೆ ಪಾಟಿ ಸವಾಲು ಹಾಕಿ ಪ್ರಶ್ನಿಸುತ್ತಾರೆ.
ಹೀಗಾಗಿ ವಿವಾದಾಸ್ಪದವಾದ ಜಾಗವೊಂದು ಹಿಂದೂಗಳಿಗೆ ಸೇರಬೇಕೋ ಅಥವಾ ಮುಸ್ಲಿಮರಿಗೆ ಸೇರಬೇಕೋ ಎಂಬ ಬಗ್ಗೆ ನ್ಯಾಯಾಲಯ ಈ ತರ್ಕದ ಪ್ರಕಾರ ಸಾಕ್ಷಿ ಪುರಾವೆಗಳಿಗಿಂತ ಪ್ರಮುಖವಾಗುವುದು ಬಹುಸಂಖ್ಯಾತರ ಶ್ರದ್ಧೆ ಮತ್ತು ನಂಬಿಕೆ. ಇದರ ಪರಿಣಾಮವೇನೆಂದು ನಂತರ ಚಚರ್ಿಸೋಣ. ಈಗ ಈ ತರ್ಕವಾದರೂ ಸರಿಯಿದೆಯೇ ಎಂದು ಪರಿಶೀಲಿಸೋಣ.
ನ್ಯಾ. ಅಗರ್ವಾಲರು ಉದ್ಧರಿಸಿರುವ ಗ್ರಂಥಗಳೆಲ್ಲಾ ಹಿಂದೂ ಜನರ ನಂಬಿಕೆಯನ್ನು ಪ್ರತಿಪಾದಿಸುವ ಹೇಳಿಕೆಗಳೇ ಹೊರತು ಅವು ಐತಿಹಾಸಿಕ ಸಾಕ್ಶ್ಯಾಧಾರಗಳಲ್ಲ. ಅವು ಒಂದು ರೂಲ್ ಆಫ್ ಲಾ- ಎಲ್ಲರಿಗೂ ಒಂದೇ ಕಾನೂನು- ಎಂಬ ನಿಯಮಾನುಸಾರ ನಡೆಯುವ ಆಧುನಿಕ ಪ್ರಜಾಪ್ರಭುತ್ವದಲ್ಲಿ ಸಾಕ್ಷ್ಯಗಳಾಗುವುದಿಲ್ಲ. ಎರಡನೆಯದಾಗಿ ರಾಮನು ಹಿಂದೂ ಧರ್ಮದ ಅಂತರ್ಗತ ಭಾಗವೆಂಬುದಕ್ಕೆ ಯಾವ ಧಾಮರ್ಿಕ ಪುರಾವೆಗಳನ್ನು ನ್ಯಾಯಾಧೀಶರು ಪರಿಗಣಿಸಿದ್ದಾರೆ? ಅದೂ ಸಹ ಒಂದು ನಂಬಿಕೆಯಷ್ಟೆ. ಏಕೆಂದರೆ ಹಿಂದೂ ಧರ್ಮದವರೆಂದು ಪರಿಗಣಿಸಲಾಗುವ ಬಹುಸಂಖ್ಯಾತ ಜನರಿಗೆ ರಾಮ ದೇವರಲ್ಲ. ದಲಿತರಂತೂ ತಮ್ಮನ್ನು ಹಿಂದುಗಳೇ ಅಲ್ಲವೆಂದು ಪರಿಗಣಿಸಿಕೊಳ್ಳುತ್ತಾರೆ. ಹಾಗಿದ್ದ ಮೇಲೆ ರಾಮನ ಕಲ್ಪನೆ ಬಹುಸಂಖ್ಯಾತ ಹಿಂದೂಗಳ ಧಾಮರ್ಿಕ ನಂಬಿಕೆಯ ಅಂತರ್ಗತ ಭಾಗ ಎಂಬ ತೀಮರ್ಾನಕ್ಕೆ ಬರಲು ಹೇಗೆ ಸಾಧ್ಯ? ಅದು ಒಂದು ಸ್ಥಳದ ಧಾಮರ್ಿಕ ಸ್ವರೂಪದ ಬಗ್ಗೆ ವಿವಾದವಿದ್ದಾಗ ಯಾವ ತಳಹದಿಯೂ ಇಲ್ಲದೆ ಇಂಥ ವಿವಾದಾತ್ಮಕ ತೀಮರ್ಾನಕ್ಕೆ ಹೇಗೆ ಬರಲು ಸಾಧ್ಯ? ಅತಿ ಮುಖ್ಯವಾಗಿ ಉಲ್ಲೇಖಗೊಂಡಿರುವ ಪುರಾಣಗಳು ರಾಮನ ಜನ್ಮಸ್ಥಾನ ಅಯೋಧ್ಯೆಯೇ ಎಂದು ಹೇಳುತ್ತವೆಯೇ ವಿನಃ, ರಾಮ ಬಾಬ್ರಿ ಮಸೀದಿ ಇದ್ದ 115*95 ಅಡಿ ವಿಸ್ತೀರ್ಣದಲ್ಲಿ ಜನ್ಮ ತಳೆದ ಎಂದೇನೂ ಹೇಳುವುದಿಲ್ಲ. ಇತಿಹಾಸಕಾರರು ಹೇಳುವಂತೆ ಬಾಬ್ರಿ ಮಸೀದಿಯೇ ರಾಮಜನ್ಮಭೂಮಿ ಎಂಬ ನಂಬಿಕೆ ಬ್ರಿಟಿಷರ ನಂತರದ್ದು.
ಹೀಗಿರುವಾಗ ಯಾವ ಕಾನೂನು, ಸಾಕ್ಷ್ಯ, ಪುರಾವೆ, ಸಂವಿಧಾನಿಕ ಮೌಲ್ಯಗಳ ಆಧಾರದಲ್ಲಿ ಬಾಬ್ರಿ ಮಸೀದಿಯಲ್ಲೇ ರಾಮಜನ್ಮಭೂಮಿ ಇದೆಯೆಂಬ ನಿರ್ಣಯಕ್ಕೆ ಬರಲು ಸಾಧ?
ಪ್ರಾಯಶಃ ಸ್ವತಂತ್ರ ಭಾರತದಲ್ಲಿರಲಿ ಬ್ರಿಟಿಷ್ ಭಾರತವೂ ಸಹ ಈ ರೀತಿ ಒಂದು ಸಿವಿಲ್ ವಿವಾದವನ್ನು ಬಗೆಹರಿಸಲು ಬಹುಸಂಖ್ಯಾತರ ನಂಬಿಕೆ ಮತ್ತು ಶ್ರದ್ಧೆಯನ್ನು ಏಕೈಕ ಮಾನದಂಡವಾಗಿ ಪರಿಗಣಿಸಿರಲಿಲ್ಲ. ಉದಾಹರಣೆಗೆ 1886ರಲ್ಲಿ ಇದೇ ವಿವಾದವನ್ನು ಬಗೆಹರಿಸುತ್ತಾ ಬ್ರಿಟಿಷ್ ನ್ಯಾಯಾಧೀಶ ಯಂಗ್ ಹೇಳಿದ್ದು ಹಿಂದೂಗಳ ನಂಬಿಕೆಯ ಪ್ರಕಾರ ಇಲ್ಲಿ ಮಂದಿರವನ್ನು ಕೆಡವಿ ಮಸೀದಿಯನ್ನು ಕಟ್ಟಿರುವುದು ನಿಜವೇ ಎಂದಿಟ್ಟುಕೊಂಡರೂ 350 ವರ್ಷಗಳ ಕೆಳಗೆ ಆಗಿಹೋಗಿರುವ ವಿಷಯಕ್ಕೆ ಈಗ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಅದೇ ರೀತಿ ಲಾಹೋರಿನಲ್ಲ್ಲಿ 18 ನೇ ಶತಮಾನದಲ್ಲಿ ಇದ್ದ ಮಸೀದಿಯನ್ನು ಸಿಖ್ ಆಡಳಿತದಲ್ಲಿ ಗುರುದ್ವಾರವಾಗಿ ಪರಿವರ್ತನೆಗೊಳ್ಳುತ್ತದೆ. ಅದನ್ನು ತಮಗೆ ಮರಳಿಸಬೇಕೆಂಬ ದೂರನ್ನು ಮುಸ್ಲಿಮರು ಪ್ರಿವೀ ಕೌನ್ಸಿಲ್ಗೆ ಒಯ್ದಾಗಲೂ ಇತಿಹಾಸದಲ್ಲಿ ಆದ ಸಂಗತಿಗಳಿಗೆ ಈಗ ಪರಿಹಾರ ಒದಗಿಸಲು ಸಾಧ್ಯವಿಲ್ಲೆವೆಂದು ತೀಮರ್ಾನವಾಗುತ್ತದೆ. ಆ ಗುರುದ್ವಾರ ಈಗಲೂ ಪಾಕಿಸ್ತಾನದಲ್ಲಿ ನಾಶಗೊಳ್ಳದೆ ಅಸ್ಥಿತ್ವದಲ್ಲಿದೆ.
ಆದರೆ ಒಂದು ಆಧುನಿಕ ಪ್ರಜಾಪ್ರಭುತ್ವದ ಸೆಕ್ಯುಲಾರ್ ಸಂವಿಧಾನದ ಆಧಾರದಲ್ಲಿ ನಡೆಯುವ ದೇಶವೊಂದರ ನ್ಯಾಯಾಲಯ 60 ವರ್ಷಗಳ ನಂತರ ನೀಡುವ ತೀಪರ್ಿಗೆ ಪ್ರಧಾನವಾಗಿ ಆಧರಿಸುವುದು ಬಹುಸಂಖ್ಯಾತರೆಂದು ಹೇಳಿಕೊಳ್ಳುವ ಕೂಗುಮಾರಿಗಳ ನಂಬಿಕೆ ಮತ್ತು ಶ್ರದ್ಧೆಗಳನ್ನು!
ಹೀಗೆ ಸಾಕ್ಷಿ, ಪುರಾವೆ ಮತ್ತು ಕಾನೂನುಗಳನ್ನೆಲ್ಲಾ ಪರಿಗಣಿಸದೆ ಕೇವಲ ಬಹುಸಂಖ್ಯಾತರೆಂದು ಹೇಳಿಕೊಳ್ಳುವವರ ಶ್ರದ್ಧೆ ಮತ್ತು ನಂಬಿಕೆಗಳೇ ನ್ಯಾಯ ತೀಮರ್ಾನದ ಮಾನದಂಡವಾಗಿಬಿಟ್ಟರೆ ಬಹುಸಂಸ್ಕ್ರತಿ ಮತ್ತು ಬಹು ಧಮರ್ಿಯರ ದೇಶವಾದ ಈ ಭಾರತ ಒಂದು ದೇಶವಾಗಿ ಉಳಿಯಲು ಸಾಧ್ಯವೇ?

ಕಾಯುವವರೇ ಕೊಲ್ಲುವವರಾದರೆ, ನ್ಯಾಯಾಧೀಶರೇ ವಕೀಲರಾದರೆ?
ಸಾರಾಂಶದಲ್ಲಿ ಈ ತೀಪರ್ು 1949ರಲ್ಲಿ ಗೂಂಡಾಗಿರಿ ಮಾಡಿ ಪ್ರತಿಮೆಗಳನ್ನು ತಂದಿಟ್ಟವರ ಹಕ್ಕುಗಳನ್ನೂ ಎತ್ತಿ ಹಿಡಿದಿದೆ. 1992ರಲ್ಲಿ ಬಾಬ್ರಿ ಮಸೀದಿ ಕೆಡವಿದವರನ್ನು ಶಿಕ್ಷಿಸುವ ಬದಲು ಸನ್ಮಾನಸಿದೆ. ಏಕೆಂದರೆ ಬಾಬ್ರಿ ಮಸಿದಿಯನ್ನು ತಾವು ನಾಶ ಮಾಡಲು ಕಾರಣ ಅಲ್ಲಿ ರಾಮ ಜನ್ಮ ತಳೆದಿದ್ದ ಎಂಬ ಮತ್ತು ರಾಮಮಂದಿರವನ್ನು ಕೆಡವಿಯೇ ಅಲ್ಲಿ ಬಾಬ್ರಿ ಮಸೀದಿಯನ್ನು ಕಟ್ಟಲಾಗಿದೆ ಎಂಬ ತಮ್ಮ ನಂಬಿಕೆಯಿಂದಲೇ ಎಂದು ಸಂಘಪರಿವಾರ ಹೇಳಿಕೊಂಡು ಬಂದಿದೆ. ಬಾಬ್ರಿ ಮಸೀದಿಯ ಮಧ್ಯ ಗುಮ್ಮಟವಿದ್ದ ಜಾಗದಲ್ಲೇ ರಾಮನು ಜನ್ಮ ತಳೆದಿದ್ದಾನೆಂಬುದು ನಮ್ಮ ನಂಬಿಕೆಯಾದ್ದರಿಂದಲೇ ಗುಮ್ಮಟವನ್ನು ಒಡೆದುಹಾಕಿದವೆಂದು ಮಸೀದಿ ನಾಶ ಮಾಡಿದ ಆರೆಸ್ಸೆಸ್ಸಿಗರು ಸಮಥರ್ಿಸಿಕೊಂಡಿದ್ದರು. ಈಗ ಮೂರೂ ನ್ಯಾಯಾಧೀಶರು ಜಾಗವನ್ನು ಹಂಚಿಕೊಡುವಾಗ ಗುಮ್ಮಟದ ಮಧ್ಯಭಾಗದಲ್ಲಿ ರಾಮ ಜನ್ಮ ತಳೆದಿದ್ದ ಎಂದು ಹಿಂದೂಗಳು ಭಾವಿಸುತ್ತಾರಾದ್ದರಿಂದ ಅದನ್ನು ಅವರಿಗೇ ಕೊಡಬೇಕೆಂದು ಆದೇಶಿಸಿದ್ದಾರ. ಆ ಮೂಲಕ ಬುನಾದಿಯಿಲ್ಲದ ನಂಬಿಕೆಯ ಆಧಾರದಲ್ಲಿ ಸಂಘಪರಿವಾರ ಮಾಡಿದ ಗುಮ್ಮಟ ನಾಶವನ್ನು ನ್ಯಾಯಾಲಯ ಪರೋಕ್ಷವಾಗಿ ನ್ಯಾಯವೆಂದು ಸಮಥರ್ಿಸಿ ನ್ಯಾಯಬದ್ಧಗೊಳಿಸಿದೆ. ಸತ್ಯವೋ, ಸುಳ್ಳೋ ಬಹುಸಂಖ್ಯಾತರ ನಂಬಿಕೆಯನ್ನು ಗೌರವಿಸಿ ಬಾಬ್ರಿ ಮಸೀದಿ ಇರುವ ಜಾಗದಲ್ಲಿ ಭವ್ಯ ರಾಮಮಂದಿರ ಕಟ್ಟಿಕೊಳ್ಳಲು ಮುಸ್ಲಿಮರು ಸಹಕರಿಸಬೇಕೆಂದು ಸಂಘಪರಿವಾರ ಬಹಿರಂಗವಾಗಿ ಅಲ್ಪಸಂಖ್ಯಾತರನ್ನು ಬ್ಲಾಕ್ಮೇಲ್ ಮಾಡುತ್ತಿದೆ. ಈ ತೀಪರ್ು ಅದಕ್ಕೆ ಬೇಕಾದ ಕಾನೂನನ ದಾರಿಯನ್ನು ಸುಗಮಗೊಳಿಸಿದಂತಾಗಿದೆ, ಮೂರನೇ ಒಂದು ಭಾಗದಷ್ಟು ಜಾಗವನ್ನು ನ್ಯಾಯಾಲಯ ಮುಸ್ಲಿಮರಿಗೆ ಕೊಟ್ಟಿದೆ. ಆದರೆ ಅಲ್ಲಿ ಮುಸ್ಲಿಮರು ಮಂದಿರದ ಪಕ್ಕದಲ್ಲಿ ಮಸೀದಿಯನ್ನು ನಮರ್ಿಸಿಕೊಳ್ಳಲು ಸಾಧ್ಯವೇ? ಈಗಾಗಲೆ ವಿಶ್ವಹಿಂದೂ ಪರಿಷತ್ತಿನ ತೊಗಾಡಿಯಾ ಅವರು ಮಂದಿರದ ಕನಷ್ಟ 10 ಕಿಮೀ ಫಾಸಲೆಯಲ್ಲಿ ಮಸೀದಿ ನಮರ್ಾಣಕ್ಕೆ ಅವಕಾಶ ಮಾಡಿಕೊಡುವುದಿಲ್ಲವೆಂದು ಘೋಷಿಸಿದ್ದಾರೆ.. ಹಾಗೂ ಮುಸ್ಲಿಮರು ಪ್ರಾಕ್ಟಿಕಲ್ ಆಗಿ ಯೋಚಿಸಿ ಸುಪ್ರಿಂ ಕೋಟರ್ಿಗೆ ಮೇಲ್ಮನವಿ ಮಾಡಿಕೊಳ್ಳದೆ ರಾಜಿಗೆ ಬರಬೇಕೆಂದು ಸಂಘಪರಿವಾರ ಆಗ್ರಹಿಸಿದೆ. ಇಲ್ಲಿ ರಾಜಿ ಎಂದರೆ ಅರ್ಥ ತಮ್ಮ ಮೂರನೇ ಒಂದು ಜಾಗವನ್ನು ಬಿಟ್ಟುಕೊಡಿ ಎಂದು. ಪ್ರಾಕ್ಟಿಕಲ್ ಎಂದರೆ ಇತಿಹಾದದಲ್ಲಿ ಆದ ರಕ್ತಪಾತ ನೆನಪಿರಲಿ ಎಂಬುದೇ ಅಲ್ಲವೇ? ಹೀಗೆ ಈ ತೀಪರ್ು ಸಂಘಪರಿವಾರದ ಫ್ಯಾಸಿಸ್ಟ್ ಶಕ್ತಿಗಳಿಗೆ ಇನ್ನಲ್ಲದ ಬಲವನ್ನು ತಂದುಕೊಟ್ಟು ಭಾರತದ ಪ್ರಜಾಸತ್ತೆಯನ್ನು ಸೆಕ್ಕ್ಯುಲಾರ್ ಬದುಕನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ.
ಅಷ್ಟು ಮಾತ್ರವಲ್ಲ. ಈಗಾಗಲೇ ಸಂಘಪರಿವಾರವು ಇಂಥಾ 2000 ಮಸೀದಿ ಮತ್ತು ಚಚರ್ುಗಳಲ್ಲಿ ತಮ್ಮ ದೇವರು ಹುಟ್ಟಿದ್ದಾರೆ ಅಥವಾ ಬೆಳೆದಿದ್ದಾರೆ ಎಂಬ ತಮ್ಮ ನಂಬಿಕೆಯ ವಾದವನ್ನು ಮುಂದಿಟ್ಟಿದ್ದಾರೆ. ಅದರಲ್ಲಿ 72 ಸ್ಥಳಗಳು ಕನರ್ಾಟಕದಲ್ಲಿವೆ. ಈ ತೀಪರ್ಿನಲ್ಲಿ ನ್ಯಾಯಾಧೀಶರು ಅನುಸರಿಸಿದ ಮಾರ್ಗವೇ ಮೇಲ್ಪಂಕ್ತಿಯಾದರೆ ಇದು ದೇಶಾದ್ಯಂತ ಎಂಥಾ ಅರಾಜಕತೆಯನ್ನೂ, ಕೋಮು ಸಂಘರ್ಷವನ್ನೂ ಹುಟ್ಟುಹಾಕಬಹುದು?
ಈಗ ಎರಡೂ ಪಕ್ಷಗಳು ಸುಪ್ರೀಂ ಕೋಟರ್ಿಗೆ ಮೇಲ್ಮನವಿ ಹೋಗಲು ಮುಂದಾಗಿವೆ. ದೇಶದ ವರಿಷ್ಟ ನ್ಯಾಯಾಲಯವಾದರೂ ದೇಶದಲ್ಲಿ ಸಂವಿಧಾನವನ್ಣೂ ಕಾನೂನು ಬದ್ಧ ಅಡಳಿತವನ್ನೂ ಎತ್ತಿ ಹಿಡಿಯಬಹುದೇ? ಹಾಗಿಲ್ಲದೆ ಬಹುಸಂಖ್ಯಾತರ ನಂಬಿಕೆ ಮತ್ತು ಶ್ರದ್ಧೆಗಳೇ ನ್ಯಾಯಸಂಹಿತೆಯಾಗಿಬಿಟ್ಟರೆ ಈ ದೇಶ ಛಿದ್ರ ಛಿದ್ರವಾಗುವುದಿಲ್ಲವೇ? ಹಾಗಾಗದಿರಲಿ. ನ್ಯಾಯಾಲಯವೇ ಮಸೀದಿ ಕೆಡವಿ ಮಂದಿರ ಕಟ್ಟುವಂತೆ ಆಗದಿರಲಿ.

ಇತಿಹಾಸದ ಭೂತ ಭವಿಷ್ಯದ ಬೆನ್ನು ಬಿಡದ ಹೊರತು..!
1947ಕ್ಕೂ ಹಿಂದೆ ಈ ದೇಶದಲ್ಲಿ ಧರ್ಮಗಳ ನಡುವೆ, ಶ್ರದ್ಧೆಗಳ ನಡುವೆ ಸಾಕಷ್ಟು ಕಲಹಗಳು ನಡೆದು ಹೋಗಿವೆ. 47ರ ಆಗಸ್ಟ್ 15ರ ನಂತರ ಈ ದೇಶದ ನಾಗರಿಕರಿಂದಲೂ ಸಮಾನತೆ ಮತ್ತು ಭ್ರಾತೃತ್ವದಿಂದ ಬಾಳಲು ಸಂಕಲ್ಪ ತೊಟ್ಟಿದ್ದೇವೆ. ಆದುದರಿಂದ ಇತಿಹಾಸಗಳ ಸಂಗತಿಗಳನ್ನು ಇತಿಹಾಸಕ್ಕೆ ಬಿಟ್ಟು ಹೊಸದಾಗಿ ಬದುಕು ಕಟ್ಟುವ ಭವಿಷ್ಯ ಮುಖಿ ರಾಜಕೀಯ ಮತ್ತು ನ್ಯಾಯಸಂಹಿತೆ ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ 1991ರ ಸಂಸತ್ತಿನಲ್ಲಿ ಠಿಟಚಿಛಿಜ ಠಜಿ ತಿಠಡಿಠಿ (ಠಿಜಛಿಚಿಟ ಠಿಡಿಠತಠಟಿ) ಚಿಛಿಣ-1991 ಎಂಬ ಕಾಯಿದೆ ಜಾರಿಗೆ ಬಂದಿದೆ. ಇದರ ಪ್ರಕಾರ ಈ ದೇಶದಲ್ಲಿ ಯಾವುದೇ ಶ್ರದ್ಧಾ ಕೇಂದ್ರಗಳ ಬಗ್ಗೆ ವಿವಾದವಿದ್ದರೂ ್ನಶೃದ್ಧಾ ಕೇಂದ್ರಗಳನ್ನು 1947ರ ಆಗಸ್ಟ್ 15ರಂದು ಯಾವ ಸ್ಥಿತಿಯಲ್ಲಿತ್ತೋ, ಯಾವ ಧಾಮರ್ಿಕ ಸ್ವರೂಪದಲ್ಲಿತ್ತೋ ಅದೇ ಯಥಾಸ್ಥಿತಿಯನ್ನು ಕಾಯ್ದುಕೊಂಡು ಬರಬೇಕೆಂದು ನಿದರ್ೇಶಿಸಲಾಗಿದೆ. ದುರದೃಷ್ಟವಶಾತ್ ಬಾಬರಿ ಮಸೀದಿ ವಿವಾದವೊಂದನ್ನು ಈ ಕಾಯಿದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
1947ರ ಹಿಂದಿನ ಇತಿಹಾಸವನ್ನು ಇತಿಹಾಸಕ್ಕೆ ಬಿಟ್ಟು ಭ್ರಾತೃತ್ವ ಮತ್ತು ಸಮಾನತೆಯನ್ನು ಕಾಪಾಡಿಕೊಂಡು ಬರಲು ಆಯಾ ಸ್ಥಳಗಳ ಯಥಾಸ್ಥಿತಿಯನ್ನು ಕಾಪಾಡಿಕೊಂಡ ಬರಬೇಕು ಎಂಬ ಈ ಕಾಯಿದೆಯ ತರ್ಕ, ಅತ್ಯಂತ ನ್ಯಾಯೋಚಿತವಾದುದು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಂತದ್ದು. ಬಾಬರಿ ಮಸೀದಿ ವಿವಾದಕ್ಕೂ ಇದೇ ಮಾನದಂಡ ಅನ್ವಯವಾದರೆ ಮಾತ್ರ ಈ ವಿವಾದ ನ್ಯಾಯೋಚಿತವಾಗಿ ಬಗೆಹರಿಯುತ್ತದೆ.
ಶಾಂತಿ ಅತ್ಯಂತ ಮುಖ್ಯವಾದುದು. ಆದರೆ ಅದು ಅನ್ಯಾಯದ ನೆಲೆಗಟ್ಟಿನಿಂದ ಮೂಡಿದ ಶಾಂತಿಯಾದರೆ ಅದರ ಬಾಳು ಅತ್ಯಂತ ಅಲ್ಪಾವಧಿಯಾಗಿರುತ್ತದೆ. ನ್ಯಾಯದ ನೆಲೆಗಟ್ಟಿನಿಂದ ಆರಳುವ ಶಾಂತಿಯೇ ಶಾಶ್ವತವಾದದು ಮತ್ತು ಸೌಹಾರ್ದಯುತವಾದುದು.

ಶಿವಸುಂದರ್,
ಲೇಖಕರು, ಗೌರಿ ಲಂಕೇಶ ಬಳಗ.

No comments:

Post a Comment

Thanku