Monday, November 28, 2011

"ಸಾಮಾಜಿಕ ನ್ಯಾಯ" ಸಮಾವೇಶ (Build the nation on justice - social justice conference)

ದೇಶದಲ್ಲಿ ದಲಿತ, ಅಲ್ಪಸಂಖ್ಯಾತ ವರ್ಗಗಳಿಗೆ ಎಷ್ಟರ ಮಟ್ಟಿಗೆ ಸಾಮಾಜಿಕ ನ್ಯಾಯ ಎಂಬುದು ಸಿಕ್ಕಿದೆ ಮತ್ತು ದೇಶದ ಪ್ರತಿಷ್ಟಿತ ಸಂವಿಧಾನವನ್ನು ರಾಜಕಾರಣಿಗಳು ಎಷ್ಟರ ಮಟ್ಟಿಗೆ ಒಪ್ಪಿಕೊಂಡಿದ್ದಾರೆ ಹಾಗೂ ದೆಹಲಿಯಲ್ಲಿ ನಡೆಯಲಿರುವ "ಸಾಮಾಜಿಕ ನ್ಯಾಯ" ಸಮಾವೇಶದ ಉದ್ದೇಶವಾದರೂ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ವರದಿ ನೀಡುತ್ತದೆ - ಸಂ.

ಭಾರತ ವಿಶ್ವದ ಶಕ್ತಿ ಶಾಲಿ ರಾಷ್ಟ್ರವಾಗುತ್ತಿದೆ ಭಾರತ ಪ್ರಕಾಶಿಸುತ್ತಿದೆ ಎಂದೆಲ್ಲಾ ತಮ್ಮಷ್ಟಕ್ಕೆ ರಾಜಕಾರಣಿಗಳು ಹಾಡುತ್ತಿರುವಾಗ ಈ ದೇಶ ಎಷ್ಟು ಕೆಳಮಟ್ಟಕ್ಕೆ ತಳ್ಳಲ್ಪಟ್ಟಿದೆ ಎನ್ನುವ ಕಟು ವಾಸ್ತವವನ್ನು ತಿಳಿಯಲೇಬೇಕು. ಸ್ವಾತಂತ್ರ್ಯ ಸಿಕ್ಕು 64 ವರ್ಷಗಳು ಕಳೆದರೂ ದೇಶದಲ್ಲಿ ಇನ್ನೂ ಅಸ್ಪೃಶ್ಯತೆ ತಾಂಡವವಾಡುತ್ತಿದೆ. ಕೋಮುವಾದ, ಜಾತೀಯತೆ, ಫ್ಯಾಸಿಸಂ, ಬಂಡವಾಳಶಾಹಿತ್ವ, ಸಾಮ್ರಾಜ್ಯ ಶಾಹಿತ್ವ, ಭ್ರಷ್ಟಾಚಾರ ಮುಂತಾದ ಜನವಿರೋಧಿ ಶಕ್ತಿಗಳಿಗೆ ಮೇಲುಗೈಯಾಗುತ್ತಿದೆ. ಸಮಾನ ಅಭಿವೃದ್ಧಿ, ಸಮಾನ ನ್ಯಾಯ ಅವಕಾಶಗಳು, ಸಂಪತ್ತಿನ ಸಮಾನ ಹಂಚಿಕೆ ಮುಂತಾದ ನೈಜ ಸಮಾಜವಾದ ಎಲ್ಲಿ ಮಾಯವಾಗಿದೆಯೋ ಎಂಬಂತಾಗಿದೆ. ಸಾಮಾಜಿಕ ನ್ಯಾಯ ಎಂಬುದು ಇನ್ನೂ ಮರಿಚೀಕೆಯಾಗಿಯೇ ಉಳಿದಿದೆ. ರಾಜಕೀಯ, ಆಥರ್ಿಕ, ಆಡಳಿತ ಮುಂತಾದ ಕ್ಷೇತ್ರಗಳನ್ನು ಮೇಲ್ಜಾತಿಗಳು ಹಾಗೂ ಬಂಡವಾಳಶಾಹಿಗಳು ತನ್ನ ಕಪಿಮುಷ್ಟಿಯಲ್ಲಿ ಭದ್ರವಾಗಿ ಹಿಡಿದಿಟ್ಟಿರುವಾಗ ಸಮಾಜದ ಕೆಳಸ್ತರಗಳ ಜನತೆಗೆ, ಶೋಷಿತ ಅಲ್ಪಸಂಖ್ಯಾತ ವರ್ಗಗಳಿಗೆ, ಗ್ರಾಮೀಣ - ರೈತಾಪಿ ವರ್ಗಗಳಿಗೆ ಅಭಿವೃದ್ಧಿ, ಸಮಾನತೆ ಹಾಗೂ ನ್ಯಾಯ ಸಿಗುವುದಾದರೂ ಹೇಗೆ ?. ಆ ಅರ್ಥದಲ್ಲಿ ನೋಡುವುದಾದರೆ, ಸಾಮಾಜಿಕ ನ್ಯಾಯಕ್ಕಾಗಿ ಮತ್ತೆ ಸ್ವಾತಂತ್ರ್ಯ ಸಂಗ್ರಾಮವನ್ನು ದೇಶದಲ್ಲಿ ನಡೆಸಲೇಬೇಕಾದ ಅನಿವಾರ್ಯತೆ, ಅಗತ್ಯತೆ ಅತ್ಯಂತ ನಿಚ್ಚಳವಾಗುತ್ತಿದೆ.

ಡಾ.ಬಿ.ಆರ್ ಅಂಬೇಡ್ಕರ್ರವರು ರಚಿಸಿದ ನಮ್ಮ ದೇಶದ ಅನುಪಮ ಸಂವಿಧಾನದ ಅಧ್ಯಾಯ 15(1)ರಲ್ಲಿ ದೇಶದ ಯಾವೊಬ್ಬ ಪ್ರಜೆಗೂ ಧರ್ಮ, ಕುಲ, ಜಾತಿ, ಲಿಂಗ ಮತ್ತು ಜನ್ಮಸ್ಥಳದ ಆಧಾರದಲ್ಲಿ ಸಕರ್ಾರಗಳು ತಾರತಮ್ಯ ಧೋರಣೆಯನ್ನು ತೋರಬಾರದು ಎಂದಿದೆ. ಆದರೆ, ಇಂದು ಈ ಉದಾತ್ತ ಮೌಲ್ಯಗಳನ್ನು ಕೇವಲ ಸಂವಿಧಾನ ಗ್ರಂಥಕ್ಕೆ ಮಾತ್ರ ಸೀಮಿತಿಗೊಳಿಸಿರುವಂತೆ ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ದಲಿತರ, ರೈತರ, ಅಲ್ಪಸಂಖ್ಯಾತ, ಆದಿವಾಸಿ ಬುಡಕಟ್ಟುಗಳ ಬದುಕು ಅತ್ಯಂತ ದುಸ್ತರವಾಗಿದೆ. ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ, ಜಾತ್ಯಾತೀತ, ಸಮಾಜವಾದಿ ಗಣತಂತ್ರ ರಾಷ್ಟ್ರವೆಂಬ ಹೆಗ್ಗಳಿಕೆಯಿಂದ ಬೀಗುತ್ತಿರುವ ಈ ದೇಶದ ಅಂತರಾಳದಲ್ಲಿ ಹುದಗಿರುವ ಕರುಣಾಜನಕ ಕಹಿ ವಾಸ್ತವಗಳು ನಮ್ಮನ್ನು ಬೆಚ್ಚಿಬೀಳಿಸುತ್ತಿವೆ.

ಯಾವುದೇ ಒಂದು ದೇಶ ಅಭಿವೃದ್ಧಿ ಹೊಂದಿದೆ ಎನ್ನಬೇಕಾದರೆ, ಆ ದೇಶದ ಪ್ರತಿಯೊಬ್ಬ ಪ್ರಜೆಗೆ ಸಮಾನ ಅಭಿವೃದ್ಧಿ, ನ್ಯಾಯ, ಸ್ವಾತಂತ್ರ್ಯ ಸಿಕ್ಕಿರಬೇಕು. ಹಾಗಲ್ಲದಿದ್ದರೆ ಆ ದೇಶವನ್ನು ಅಭಿವೃದ್ಧಿ ಹೊಂದಿದ ದೇಶ ಎನ್ನುವುದೇ ದೊಡ್ಡ ತಮಾಷೆ. ಇಂಡಿಯಾದಲ್ಲಿ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಬಡವರು ಬಡತನದ ಪ್ರಪತಾಕ್ಕೆ ಬೀಳುತ್ತಿದ್ದಾರೆ. ನಮ್ಮ ದೇಶದ ಅಭಿವೃದ್ಧಿಯನ್ನು ಇದೀಗ ತಲಾ ವಾಷರ್ಿಕ ಆದಾಯ ಆಧಾರದಲ್ಲಿ ಪರಿಗಣಿಸದೇ ಕೇವಲ ಶ್ರೀಮಂತ ಉದ್ಯಮಿಗಳ ಅಥವಾ ಒಟ್ಟು ಆದಾಯದ ಲೆಕ್ಕದಲ್ಲಿ ಪರಿಗಣಿಸಲಾಗುತ್ತದೆ. ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಬಂಡವಾಳಶಾಹಿಗಳ ಉನ್ನತಿಗಾಗಿ ಸಕರ್ಾರಗಳು, ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತುಗಳನ್ನು ನಡೆಸುತ್ತಿವೆ.

1995 ರಿಂದೀಚೆಗೆ ನಮ್ಮ ದೇಶದಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆ 2.50 ಲಕ್ಷಕ್ಕೂ ಅಧಿಕ. ಇದು ದೇಶದ ಅತ್ಯಂತ ದೊಡ್ಡ ದುರಂತ. ಬಿತ್ತನೆ ಬೀಜಕ್ಕೋ, ಗೊಬ್ಬರಕ್ಕೋ ಅಥವಾ ಟ್ರಾಕ್ಟರ್ ಖರೀದಿಸಲೋ ರೈತರು ಪಡೆಯುತ್ತಿರುವ ಸಾಲ ರೂ. 10 ಸಾವಿರದಿಂದ ಒಂದೆರಡು ಲಕ್ಷದವರೆಗೆ ಇರಬಹುದು. ಇದಕ್ಕಾಗಿ ಬ್ಯಾಂಕುಗಳು ಹಾಕುವ ಬಡ್ಡಿ ಕೂಡ ವಾಷರ್ಿಕ ಶೇ.12ರವರೆಗೆ ಇರುತ್ತದೆ. ರೈತರು ಕಷ್ಟಪಟ್ಟು ಬೆಳೆಸಿದ ಬೆಳೆಗೆ ಸರಿಯಾದ ಬೆಲೆ ಸಿಗದೆ ಪಡಕೊಂಡ ಸಾಲವನ್ನೂ ಬಡ್ಡಿಯನ್ನೂ ತೀರಿಸಲಾಗದೆ ಮನೆ/ಟ್ರಾಕ್ಟರ್/ಜಮೀನು ಜಪ್ತಿಯನ್ನು ನೋಡಲಾಗದೇ ಅಥವಾ ಮಾನಕಳೆದುಕೊಳ್ಳುವದನ್ನು ತಡೆಯಲಾಗದೇ ರೈತ ಆತ್ಮಹತ್ಯೆಗೈಯ್ಯುತ್ತಾನೆ. ಇಷ್ಟೊಂದು ಆಗಾಧ ಸಂಖ್ಯೆಯಲ್ಲಿ ರೈತನು ಸರಣೆ ಆತ್ಮಹತ್ಯೆಗೈಯುತ್ತಿರಬೇಕಾದರೆ, ಸಕರ್ಾರಗಳು ರೈತರ ಕ್ಷೇಮಕ್ಕಾಗಿ ಮಾಡಿದ್ದು ಶೂನ್ಯವಲ್ಲದೆ ಇನ್ನೇನೂ ಇಲ್ಲ. ಅದೇ ಇಡೀ ಉದ್ಯಮಿಗಳಿಗೆ ಬಹುಕೋಟಿ ಸಾಲವನ್ನು ಕಡಿಮೆ ಬಡ್ಡಿದರದಲ್ಲಿ ನೀಡುವ ಸಕರ್ಾರ ಅಂತಹ ಉದ್ಯಮಿಗಳಿಗೆ ನೀಡುವ ವಿನಾಯಿತಿ, ಪ್ರೋತ್ಸಾಹ ಅಪಾರ. ಇಂತಹ ಭಾರಿ ತಾರತಮ್ಯ ಧೋರಣೆಯನ್ನು ಸಹಿಸಲು ಸಾಧ್ಯವೇ?

ಕೆಲವು ದಿನಗಳ ಹಿಂದೆ ಕೋಲಾರ ಜಿಲ್ಲೆಯ ಕೆಜಿಎಪ್ ಎಂಬಲ್ಲಿ ಮಲದ ಗುಂಡಿಗೆ ಬಿದ್ದು ಮೂವರು ದಲಿತರು ಸಾವನ್ನಪ್ಪಿದರು. ಮೈಸೂರಿನಲ್ಲಿ ಡೋಲು ಬಾರಿಸಲು ಬಾರದ ದಲಿತರನ್ನು ಮೇಲ್ಜಾತಿಗಳು ಊರಿನಂದಲೇ ಹೊರಹಾಕಿದರು. ತುಮಕೂರಿನಲ್ಲಿ ಬ್ರಾಹ್ಮಣರು ವಾಸಿಸುವ ಸ್ಥಳದಲ್ಲಿದ್ದ ಬಾವಿಯೊಂದರಿಂದ ನರೆತ್ತಿದ್ದಕ್ಕೆ ದಲಿತರನ್ನು ಬಹಿಷ್ಕರಿಸಲಾಯಿತು. ಮಂಡ್ಯದಲ್ಲಿ ಕ್ಷೌರ ಮಾಡಿಸಲು ಹೊರಟ ಹಿರಿಯ ದಲಿತ ವ್ಯಕ್ತಿಯ ಮೂಗನ್ನೇ ಕೊಯ್ಯಲಾಯಿತು... ಇವೆಲ್ಲ ಮುಗಿದ ಕಥೆಗಳು. ಈ ಹಿಂದೆಯೂ ಈಗಲೂ ಇದು ನರಂತರ ಮುಂದುವರಿಯುತ್ತಲೇ ಬಂದ ಅಮಾನವೀಯ ಕೃತ್ಯಗಳು. ದೇಶದೆಲ್ಲೆಡೆ ಈ ರೀತಿಯ ಅಸ್ಪೃಶ್ಯತೆ, ಬಹಿಷ್ಕಾರ, ಹಲ್ಲೆ, ಹತ್ಯೆ ನಿರಂತರ ನಡೆಯುತ್ತಿರುವಾಗ ನಮ್ಮ ದಲಿತ ಬಂಧುಗಳ ಜೀವದ ಘನತೆಗೆ ಯಾವ ಕಳಕಳಿಯಿದೆ.

ದಲಿತರ ಮೇಲಿನ ಅನ್ಯಾಯಗಳನ್ನು ತಡೆಯಲು ಸಾಕಷ್ಟು ಕಾನೂನುಗಳನ್ನು ರಚಿಸಲಾಗಿದೆಯಾದರೂ ಅವು ಯಾವವೂ ಕಾರ್ಯರೂಪಕ್ಕೆ ಬರುವಲ್ಲಿ ವಿಫಲವಾಗಿವೆ. ನ್ಯಾಷನಲ್ ಲಾ ಸ್ಕೂಲ್ ತನ್ನ ಅಭಿಯಾನದಲ್ಲಿ ತಿಳಿಸಿದಂತೆ ಕನರ್ಾಟಕ, ಆಂದ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯಗಳ 646 ಪ್ರಕರಣಗಳ ಪೈಕಿ 578 ಪ್ರಕರಣಗಳು ಇತ್ಯರ್ಥಗೊಂಡಿದ್ದು ಅವುಗಳಲ್ಲಿ 27 ಪ್ರಕರಣಗಳಿಗೆ ಮಾತ್ರ ಶಿಕ್ಷೆ ವಿಧಿಸಲಾಗಿದ್ದು ಉಳಿದ 551 ಪ್ರಕರಣಗಳನ್ನು ಖುಲಾಸೆಗೊಳಿಸಲಾಗಿದೆ. ಸಮೀಕ್ಷೆಯೊಂದರ ಅಂಕಿ ಅಂಶ ಪ್ರಕಾರ ನಮ್ಮ ದೇಶದಲ್ಲಿ ಪ್ರತಿ ಗಂಟೆಗೊಮ್ಮೆ ದಲಿತ ಮಹಿಳೆಯ ಅತ್ಯಾಚಾರ ಹಾಗೂ ಪ್ರತಿ ಅರ್ಧ ಗಂಟೆಗೊಮ್ಮೆ ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಯುತ್ತಿದೆ ಎನ್ನುತ್ತಿದೆಯಾದರೆ ದಲಿತ ಬಂಧುಗಳ ಜೀವನಕ್ಕೆ ಭದ್ರತೆ ಏನು? ಹಾಗೂ ದಲಿತರ ಮೇಲೆ ಆಕ್ರಮಣಗಳನ್ನು ಮಾಡುತ್ತಿರುವವರಿಗೆ ಶಿಕ್ಷೆ ಏನು?

ಶೇ.80ರಷ್ಟು ಗ್ರಾಮೀಣ ಪ್ರದೇಶಗಳಿರುವ ರೈತರು ಕೃಷಿ ಪ್ರಧಾನವಾಗಿರುವ ಈ ದೇಶದ ಫಲವತ್ತಾದ ಭೂಮಿಯನ್ನು ಸಕರ್ಾರಗಳು ವಿದೇಶಿ ಕಂಪನಗಳಿಗೆ ಮಾರುತ್ತಿವೆ. ಬಹುರಾಷ್ಟ್ರೀಯ ಕಂಪೆನಿಗಳು ಬೃಹತ್ ಉದ್ಯಮಗಳನ್ನು ಸ್ಥಾಪಿಸಲು ಬೇಕಾದ ಸಾವಿರಾರು ಎಕರೆಗಳಷ್ಟು ಭೂಮಿಯನ್ನು ಪ್ರತಿ ಜಿಲ್ಲೆಗಳಲ್ಲಿ ಸಕರ್ಾರಗಳು ರೈತರಿಂದ ಬಲವಂತದಿಂದ ಕಿತ್ತಿಕೊಳ್ಳುತ್ತಿವೆ. ಅರಣ್ಯಗಳಲ್ಲಿ ಬೆಟ್ಟಗುಡ್ಡ ಪರಿಸರಗಳಲ್ಲಿ ನೂರಾರು ವರ್ಷಗಳಿಂದ ಬದುಕಿ ಬಂದಿರುವ ಆದಿವಾಸಿ, ಬುಡಕಟ್ಟುಗಳನ್ನು ಮೈನಂಗ್ ಮಾಫೀಯಾ ಹಿತಾಸಕ್ತಿಗಳು ಬಲತ್ಕಾರವಾಗಿ ಒಕ್ಕಲೆಬ್ಬಿಸುತ್ತಿವೆ. ಗ್ರಾಮೀಣ ಪರಿಸರಗಳಲ್ಲಿ ವಾಸ ಮಾಡುತ್ತಿರುವ ಜನರಿಗೆ ರಸ್ತೆ, ನೀರು, ಮೂಲಭೂತ ಅಗತ್ಯೆತೆಗಳ ಬಗ್ಗೆ ಹಾಗೂ ಸಕರ್ಾರಗಳ ಪ್ರಜಾತಂತ್ರ ವಿರೋಧಿ ನೀತಿಗಳ ಬಗ್ಗೆ ಮಾತನಾಡಿದರೆ, ಅಂತಹವರನ್ನು ನಕ್ಸಲ್ವಾದಿಗಳೆಂದು ಚಚ್ಚಲಾಗುತ್ತಿದೆ. ಅಮಾಯಕ / ಅಶಕ್ತ ಗ್ರಾಮೀಣರ, ಹಳ್ಳಿಗರ ಮೇಲೆ ನಕ್ಸಲ್ ನಿಗ್ರಹಪಡೆಗಳು ನಡೆಸುವ ಅನ್ಯಾಯ, ಅತ್ಯಾಚಾರಗಳು ಅಕ್ಷ್ಯಮ್ಯ..

ನಗರಗಳ ಆಧುನಿಕೀಕರಣಕ್ಕೆ ಮಾತ್ರವೇ ಪ್ರಾಶಸ್ತ್ಯ ನೀಡುತ್ತಿರುವ ಸಕರ್ಾರಗಳು ಮತ್ತು ರಾಜಕೀಯ ಪಕ್ಷಗಳು ಗ್ರಾಮ, ಹಳ್ಳಿಗಳ ಉದ್ದಾರಕ್ಕೆ ಚಿಕ್ಕಾಸಿನ ಕಿಮ್ಮತ್ತನ್ನೂ ನೀಡುವುದಿಲ್ಲ. ನಗರಗಳಲ್ಲಿ ಕೆಲಸ ಮಾಡುತ್ತಿರುವ ಐಟಿ/ಬಿಟಿ ಕ್ಷೇತ್ರಗಳಲ್ಲಿರುವ ಮಂದಿಗಳ ಮಾಸಿಕ ಆದಾಯದ ಲೆಕ್ಕ ಒಂದು ಲಕ್ಷದ ಮೇಲೆಯೇ ಇರುವಾಗ ಬಿಸಿಲು ಮಳೆ ಚಳಿಗಳಿಗೆ ಮೈಯೊಡ್ಡಿ ದುಡಿಯುವ ಹಳ್ಳಿಗನ ಸಂಪಾದನೆ ದಿನಕ್ಕೆ ರೂ.20ಕ್ಕೂ ಕಡಿಮೆ. ಇದೇನು ಅಂತರ!

ಸಂವಿಧಾನದ ಅಧ್ಯಾಯ 39(ಎ)ರಲ್ಲಿ ಸಮಾನ ನ್ಯಾಯವನ್ನು ಪ್ರತಿಪಾದಿಸುತ್ತಾ ಸಮಾನ ಅವಕಾಶಗಳ ಆದಾರದಲ್ಲಿ ನ್ಯಾಯಿಕ ವ್ಯವಸ್ಥೆಯು ಕಾಯರ್ಾಚರಿಸುವ ಖಾತರಿಯನ್ನು ಸಕರ್ಾರಗಳು ಪಾಲಿಸಲೇಬೇಕು.. ಯಾವುದೇ ಕೊರತೆಗಳಿಂದಾಗಿ ಯಾವನೇ ಒಬ್ಬ ನಾಗರೀಕನಿಗೂ ನ್ಯಾಯ ನಿರಾಕರಣಿಯಾಗದಂತೆ ಖಾತರಿಪಡಿಸಬೇಕು ಎಂದಿದೆ. ಆದರೆ, ದೇಶದಲ್ಲಿಂದು ನ್ಯಾಯದ ಸಮರ್ಪಕ ಒದಗಿಸುವಿಕೆಯು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಎಬ್ಬಿಸಿವೆ. ಮುಸ್ಲಿಂ, ಕ್ರೈಸ್ತ ಮುಂತಾದ ಅಲ್ಪಸಂಖ್ಯಾತ ಸಮುದಾಯಗಳ ಜನತೆಯ ಮೇಲಿನ ಆಕ್ರಮಣಗಳನ್ನು ನಡೆಸುವ ಫ್ಯಾಸಿಸ್ಟ್ ಶಕ್ತಿಗಳ ಕೃತ್ಯಗಳ ತನಿಖೆಯಾಗಲೀ, ಶಿಕ್ಷೆಯಾಗಲಿ ನಡೆಯುತ್ತಿಲ್ಲ. ಬಾಬರೀ ಮಸೀದಿ ದ್ವಂಸದ 17 ವರ್ಷಗಳ ಸುದೀರ್ಘ ತನಿಖೆ ನಡೆಸಿದ ಲಿಬಹರ್ಾನ್ ಕಮೀಷನ್ ನಡಿದ ವರದಿಯಲ್ಲಿ 68 ಮಂದಿ ಆರೋಪಿಗಳ ಹೆಸರಿತ್ತು. ಎಲ್.ಕೆ ಅಡ್ವಾಣಿ, ವಾಜಪೇಯಿ, ಜೋಷಿ, ರಿತಾಂಬರ, ಉಮಾಭಾರತಿ ಮುಂತಾದವರು ಆರೋಪಿಗಳು. ಆದರೆ, ದ್ವಂಸದ ನಂತರ ಈ ಆರೋಪಿಗಳು ದೇಶದ ಪ್ರಧಾನಿ, ಗೃಹಮಂತ್ರಿ ಮುಂತಾದ ಹುದ್ದೆಗಳನ್ನು ಅನುಭವಿಸಿದರು. ದೇಶದ ಜಾತ್ಯಾತೀತ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿದ ಆ ಕ್ರಿಮಿನಲ್ಗಳ ಮೇಲೆ ಯಾವುದೇ ಕ್ರಿಮಿನಲ್ ಕೇಸುಗಳೂ ಇಲ್ಲ. ಶಿಕ್ಷೆಯೂ ಇಲ್ಲ.

1992 ಡಿಸೆಂಬರ್ -1993 ಜನೆವರಿಯಲ್ಲಿ ಮುಂಬೈಯಲ್ಲಿ ನಡೆದ ನರಮೇದದಲ್ಲಿ ಅಪಾರ ಸಂಖ್ಯೆಯ ಮಂದಿಯ ಹತ್ಯೆ ನಡೆದಿತ್ತು. ಅದೇ ಸಮಯದಲ್ಲಿ ಬಾಂಬ್ ಸ್ಪೋಟದ ನೂರಾರು ಜನರ ಸಾವು ನೋವು ಸಂಭವಿಸಿತ್ತು. ಮುಂಬೈ ಹತ್ಯಾಕಾಂಡದ ತನಿಖೆಗಾಗಿ ಶ್ರೀಕೃಷ್ಣ ಆಯೋಗವನ್ನು ನೇಮಿಸಿ ವರದಿಯೂ ಸಿಕ್ಕಿತು. ಹಲವು ಮಂದಿ ರಾಜಕಾರಣಿಗಳು, ಪೊಲೀಸರು ಮುಖ್ಯ ಆರೋಪಿಗಳೆಂದು ಅದರಲ್ಲಿ ಸೂಚಿಸಲಾಗಿತ್ತು. ಆದರೆ, ಅವರ ವಿಚಾರಣೆಯಾಗಲಿ ಅವರಿಗೆ ಶಿಕ್ಷೆಯಾಗಲಿ ಆಗಲೇ ಇಲ್ಲ. ಬಾಂಬ್ ಸ್ಪೋಟ ನಡೆಸಿದ ಆರೋಪಿಗಳಿಗೆ ಕಠಿಣ ವಿಚಾರಣೆ ನಡೆದು ಜೀವಾವಧಿ ಗಲ್ಲು ಶಿಕ್ಷೆಯನ್ನು ವಿಧಿಸಲಾಯಿತು. ಗುಜರಾತ್ ನರಮೇಧದಲ್ಲಿ ಪೊಲೀಸರು ನಿಷ್ಕ್ರೀಯವಾಗಬೇಕೆಂದು ಆಜ್ಞೆ ನೀಡಿದ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಇಂದಿಗೂ ಗುಜರಾತಿನ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಿರುವುದು ಜಾತ್ಯಾತೀತ ಪ್ರಜಾಪ್ರಭುತ್ವದಲ್ಲಿ ಸಾಮಾಜಿಕ ಅನ್ಯಾಯಕ್ಕೆ ಹಿಡಿದ ಕೈಗನ್ನಡಿಯಲ್ಲವೇ?!

ದೇಶದಾದ್ಯಂತ ನಡೆದ ಬಾಂಬ್ ಸ್ಪೋಟಗಳಿಗೆ ಕಾರಣರೆಂದು ಮುಸ್ಲಿಂರನ್ನು ಅವ್ಯಾಹತವಾಗಿ ಬಂಧಿಸಿ ಚಿತ್ರಹಿಂಸೆ ನೀಡಲಾಯಿತು. ಎನ್ಕೌಂಟರ್ ಮಾಡಿ ಕೊಲ್ಲಲಾಯಿತು. ಮಕ್ಕಾಮಸೀದಿ, ಅಜ್ಮೀರ ದಗಾ೯, ಸಂಜೋತಾ ಎಕ್ಸ್ಪ್ರೆಸ್ ರೈಲು, ನಾಂದೇಡ್, ಪುಣಿ, ಜಲ್ನಾ, ಮಾಲೇಂಗಾವ್, ಮಡ್ಗಾಂವ್ ಮುಂತಾದ ಕಡೆಗಳಲ್ಲಿ ನಡೆದ ಬೀಕರ ಬಾಂಬ್ ಸ್ಪೋಟಗಳಲ್ಲಿ ಸಂಘಪರಿವಾರದ ಪ್ರಾಯೋಜಕತ್ವ ಬಹಿರಂಗವಾದಾಗ ಅದಾಗಲೇ ಕೆಲವು ವರ್ಷಗಳ ಕಳೆದು ಹೋಗಿದ್ದವು. ಕೇಸರಿ ಉಗ್ರರನ್ನು ಹಿಡಿದು ಜೈಲಿಗೆ ಹಾಕುವಷ್ಟರಲ್ಲಿ ನೂರಾರು ಮುಸ್ಲಿಂ ಯುವಕರು ಭೀಕರ ಚಿತ್ರಹಿಂಸೆಗಳಿಗೆ ಗುರಿಯಾಗಿ ಜೀವನದ ನಾಲ್ಕೈದು ವರ್ಷಗಳನ್ನೂ ಜೈಲಿನಲ್ಲಿ ಕಳೆದಿದ್ದರು. ಕೇಸರಿ ಭಯೋತ್ಪಾದಕರ ಕೃತ್ಯವೆಂದು ನಿಚ್ಚಳವಾಗಿ ಸಾಭೀತಾದರೂ ಈಗಲೂ ಮುಸ್ಲಿಂ ಅಮಾಯಕರು ಜೈಲಿನಂದ ಬಿಡುಗಡೆಯಾಗದೆ ಬಂಧಿಯಾಗಿರುವುದು ಯಾವ ನ್ಯಾಯ?

ಹುಬ್ಬಳ್ಳಿ ಕೋರ್ಟ್ನಲ್ಲಿ ನಡೆದ ಸ್ಪೋಟಕ್ಕೆ ಮುಸ್ಲಿಂರೇ ಕಾರಣರೆಂದು ಬಿಂಬಿಸಿ ಕೆಲವು ಮುಸ್ಲಿಂ ಯುವಕರನ್ನು ಬಂಧಿಸಿ ಚಿತ್ರಹಿಂಸೆಗೆ ಗುರಿಪಡಿಸಲಾಯಿತು. ಈ ಸ್ಪೋಟವು ಪ್ರಮೋದ್ ಮುತಾಲಿಕ್ ಸಹಚರನಾದ ನಾಗರಾಜ್ ಜಂಬಗಿ, ಪ್ರವೀಣ ಮುತಾಲಿಕ್ ಕೃತ್ಯವೆಂದು ಬೆಳಕಿಗೆ ಬಂದ ನಂತರವೂ ಮುತಾಲಿಕ್ನ ಮೇಲೆ ಯಾವುದೇ ಕೇಸುಗಳನ್ನು ಹಾಕಲಿಲ್ಲ. ನನ್ನ ಬಳಿ ಒಂದು ಸಾವಿರ ಮಂದಿ ಸದಸ್ಯವಿರುವ ಆತ್ಮಾಹತ್ಯಾದಳವಿದೆ ಎಂದು ಪದೇಪದೇ ಮುತಾಲಿಕ್ ಹೇಳುತ್ತಿದ್ದರೂ, ಸಕರ್ಾರದ ಕಣ್ಣಿಗೆ ಈತ ಕಾಣುತ್ತಿಲ್ಲ. 9 ವರ್ಷಗಳ ಕಾಲ ಕೊಯಮತ್ತೂರು ಜೈಲಿನಲ್ಲಿದ್ದು, ಕೊನೆಗೆ ನಿರಪರಾಧಿ ಎಂದು ಹೊರಬಂದ ನಾಸಿರ್ ಮದನಿ ಎಂಬುವವರನ್ನು ಮತ್ತೇ ಬೆಂಗಳೂರಿನ ಜೈಲಿಗೆ ಹಾಕಲಾಯಿತು. ಅವರ ತಪ್ಪೇನು ಗೊತ್ತೇ? ಕೊಡಗಿನ ಎಸ್ಟೇಟ್ ಒಂದರಲ್ಲಿ ಉಗ್ರರಿಗೆ ಕ್ಲಾಸನ್ನು ನೀಡಿದ್ದಾರೆ ಎಂಬುದು. ಆದರೆ, ಅದಕ್ಕೆ ಯಾವುದೇ ಪುರಾವೆಯೂ ಇಲ್ಲ. ಅತ್ತ ಕೇಸರಿ ಉಗ್ರರ ಜೊತೆ ನಿಕಟ ನಂಟು ಹೊಂದಿದ (ಪೋಟೋ ಸಹಿತ ಪುರಾವೆಗಳಿವೆ) ಬಿಜೆಪಿ ಮಾಜಿ ಅಧ್ಯಕ್ಷ ರಾಜನಾಥ್ಸಿಂಗ್, ಪ್ರಮೋದ ಮುತಾಲಿಕ್, ಆರ್.ಎಸ್.ಎಸ್ನ ರಾಷ್ಟ್ರೀಯ ನಾಯಕ ಇಂದ್ರೇಶ್ ಕುಮಾರ ಮುಂತಾದವರು ಈ ದೇಶದಲ್ಲಿ ಭಯೋತ್ಪಾದಕರೆಂದು ಎನಸದಿರುವದಕ್ಕೆ ಕಾರಣಗಳೇನು?

ದಲಿತರು, ಅಲ್ಪಸಂಖ್ಯಾತರು, ಆದಿವಾಸಿ ಬುಡಕಟ್ಟುಗಳು ಹಿಂದುಳಿದ ವರ್ಗಗಳು ಈ ದೇಶದ ಅವಿಭಾಜ್ಯ ಅಂಗ. ಅವರುಗಳು ಅಭಿವೃದ್ಧಿಯಾಗದೇ, ಈ ದೇಶ ಉದ್ದಾರ ಖಂಡಿತ ಸಾಧ್ಯವಿಲ್ಲ. ದೇಶದ ಯಾವೊಂದು ನಗರಗಳಲ್ಲೂ ಸಂಚರಿಸಿದಾಗ ದಲಿತರು, ಮುಸ್ಲಿಂರು ವಾಸಿಸುವ ಪ್ರದೇಶಗಳು ಕೊಂಪೆಕೊಳಚೆಗಳಾಗಿ, ಪ್ರಾಥಮಿಕ ಸೌಲಭ್ಯಗಳಿಂದ ವಂಚಿತವಾಗಿಯೂ ಇರುತ್ತವೆ. ಪಕ್ಕದಲ್ಲೇ ಇರುವ ಮೇಲ್ಜಾತಿಗಳು ಮತ್ತು ಶ್ರೀಮಂತ ಬಡಾವಣೆಗಳು ಅತ್ಯಂತ ಸುಸಜ್ಜಿತವೂ, ಅಲಂಕೃತವೂ ಆಗಿರುವದನ್ನೂ ಕಂಡಾಗ ಇಂಡಿಯಾದಲ್ಲಿ ತಾರತಮ್ಯ ಧೋರಣೆಯೂ ಎಷ್ಟು ದಟ್ಟವಾಗಿದೆಯೆಂಬುದು ಕಾಣುತ್ತದೆ.

ಪ್ರಜೆಗಳನ್ನು ರಕ್ಷಿಸಬೇಕಾದ ಹಾಗೂ ಪ್ರಜೆಗಳ ಘನತೆ ಗೌರವವನ್ನು ಕಾಪಾಡಬೇಕಾದದ್ದು ಸಕರ್ಾರದ ಕರ್ತವ್ಯ. ಆದರೆ, ಸಕಾ೯ರವೇ ಪ್ರಜೆಗಳನ್ನು ಕೊಲ್ಲುವ ಕಾನೂನನ್ನು ತಂದರೆ, ಅಂತಹ ಸಕರ್ಾರಕ್ಕೆೇ ಏನನ್ನಬೇಕು. ಎಎಪ್ಎಸ್ಪಿಎ (ಶಸಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ) ಯಿಂದ ದೇಶದ ಈಶಾನ್ಯ ರಾಜ್ಯಗಳ ಹಾಗೂ ಕಾಶ್ಮೀರದ ಜನತೆ ತತ್ತರಿಸುತ್ತಿದ್ದಾರೆ. ಪ್ರಜೆಗಳನ್ನು ಗುಂಡಿಟ್ಟು ಕೊಲ್ಲುವ ವಿಶೇಷ ಅಧಿಕಾರವು ಮಿಲಿಟರಿ, ಪೊಲೀಸರಿಗೆ ಇರುವುದೇ ಈ ಕಾಯ್ದೆಯ ವಿಶೇಷ. ಇಂತಹ ಕಾನೂನನ ವಿರುದ್ದ ಕಳೆದ 11 ವರ್ಷಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಮಣಿಪುರದ ಮಹಿಳೆ ಇರೋಮ್ ಶಮಿ೯ಳಾ ಚಾನು. ಇಂತಹ ಮಾನವತಾವಾದಿ ಮಹಿಳೆಯ ನಿರಶನಕ್ಕೆ ಸಕಾ೯ರ ಕೊಡುವ ಬೆಲೆಯೇನು? ಇನ್ನು ಪೋಟಾ, ಮೋಕ, ಕೋಕಾ ಊಪ ಮುಂತಾದ ಕಾನೂನುಗಳ ಮೂಲಕ ಜನತೆಯ ಜೀವಿಸುವ ಹಕ್ಕನ್ನು ಕಸಿಯುವ ವ್ಯವಸ್ಥೆಯಿಂದ ದೇಶದಲ್ಲಿ ಸಾಮಾಜಿಕ ನ್ಯಾಯ ಉಳಿಯುವುದು ಹೇಗೆ ತಾನೇ ಸಾಧ್ಯ.

ಜಾತ್ಯಾತೀತತೆ, ಪ್ರಜಾಪ್ರಭುತ್ವ, ಸಮಾಜವಾದ ಇವುಗಳೆಲ್ಲ ಬರೀ ಪುಸ್ತಕದ ಬದನೆಕಾಯಿಯೋ, ಭಾಷಣದ ವಸ್ತುವೋ ಆಗದೇ ನೈಜ ಅರ್ಥದಲ್ಲಿ ಮತ್ತು ನಿಜ ಜೀವನದಲ್ಲಿ ಅಕ್ಷರಶಃ ಬಳಕೆಯಾಗಬೇಕು. ಅದುವೇ ಸಾಮಾಜಿಕ ನ್ಯಾಯ. ಪ್ರತಿಯೊಬ್ಬ ಪ್ರಜೆಗೂ ಈ ಸಾಮಾಜಿಕ ನ್ಯಾಯ ಸಿಗಬೇಕೆಂಬ ಹಂಬಲದೊಂದಿಗೆ ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ನವೆಂಬರ್ 26-27ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಸಾಮಾಜಿಕ ನ್ಯಾಯ ಸಮಾವೇಶ ಹಮ್ಮಿಕೊಂಡಿದೆ. ಸಾಮಾಜಿಕ ನ್ಯಾಯಕ್ಕಾಗಿ ಸಂಗ್ರಾಮ ಇಲ್ಲಿಂದಲೇ ಆರಂಭಗೊಳ್ಳಲಿ.
 
ಮುಹ್ಮದ್ ಇಲಿಯಾಸ್ ತುಂಬೆ

No comments:

Post a Comment

Thanku