Thursday, October 27, 2011

ಕುಗ್ರಾಮದಲ್ಲಿ ಐಟಿ ಉದ್ಯಮ ಆರಂಭಿಸಿರುವ ಜಂಬುನಾಥ

ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕು ಗೋರೆಬಾಳ ಎಂಬ

ಕುಗ್ರಾಮದಲ್ಲಿ ಐಟಿ ಉದ್ಯಮ ಆರಂಭಿಸಿರುವ ಜಂಬುನಾಥ

ಮಾಡುವ ಛಲ ಮನದೊಳಗಿದ್ದರೆ ಕಲ್ಲುಬಂಡೆಯೂ ಕರಗಿ ನೀರಾಗುತ್ತದೆ. ಯುವಕರೆಲ್ಲಾ ಉದ್ಯೋಗವನ್ನರಸಿ, ದೊಡ್ಡ ದೊಡ್ಡ ಶಹರಗಳತ್ತ ವಲಸೇ ಹೊರಟಿದ್ದರೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಯುವಕನೊಬ್ಬ ಹಳ್ಳಿಯಲ್ಲೊಂದು ಐಟಿ ಕೇಂದ್ರ ಸ್ಥಾಪಿಸಿ ಹಳ್ಳಿ ಯುವಕರನ್ನು ಐಟಿ ಉದ್ಯೋಗಿಗಳನ್ನಾಗಿ ಪರಿವತರ್ಿಸುತ್ತಿದ್ದಾನೆ ಎನ್ನುತ್ತಾರೆ ನಮ್ಮ ಪ್ರತಿನಿಧಿ ಜನನಿ.

ರಾಯಚೂರು ಜಿಲ್ಲೆ ಕನರ್ಾಟಕ ಭೂಪಟದಲ್ಲಿ ಬಿಸಿಲು ಮತ್ತು ಬರಗಾಲಕ್ಕೆ ಹೆಸರುವಾಸಿಯಾಗಿದೆ.. ಈ ಜಿಲ್ಲೆಯೊಂದರಿಂದಲೇ ಪ್ರತಿವರ್ಷ ಶೇ.50ರಷ್ಟು ಕುಟುಂಬಗಳು ಪೂನಾ, ಮುಂಬಯಿ, ಬೆಂಗಳೂರಿನಂತಹ ಮಹಾನಗರಗಳಿಗೆ, ಒಪ್ಪತ್ತಿನ ಆಹಾರಕ್ಕಾಗಿ, ಉದ್ಯೋಗವನ್ನರಿಸಿ ಗುಳೇ ಹೋಗುತ್ತವೆ.

ದಿನವೊಂದಕ್ಕೆ ರಾಯಚೂರು ಜಿಲ್ಲೆಯಿಂದ ಬೆಂಗಳೂರು ನಗರವೊಂದಕ್ಕೆ 30 ಕ್ಕೂ ಹೆಚ್ಚು ಸಕರ್ಾರಿ ಬಸ್ಸುಗಳು ಹೊರಡುತ್ತವೆ. ಅದರಲ್ಲಿ 15ಕ್ಕೂ ಹೆಚ್ಚು ವಾಹನಗಳಲ್ಲಿ ಉದ್ಯೋಗವನ್ನರಿಸಿ ಗುಳೇ ಹೋಗುವವರೇ ತುಂಬಿರುತ್ತಾರೆ. ಇಂತಹದೊಂದು ಸನ್ನಿವೇಶವನ್ನು ನಾನು ಮೊನ್ನೆ ಸಿಂಧನೂರಿನ ಬಸ್ನಿಲ್ದಾಣದಲ್ಲಿ ನೋಡುತ್ತಿದ್ದಾಗ, ಎದುರಿಗೆ ಒಬ್ಬ ಯುವತಿ, ಪಕ್ಕಾ ಐಟಿ ಉದ್ಯೋಗಿಯಂತೆ ನಿಲ್ದಾಣದಿಂದ ಎದುರು ಬಂದಳು. ನಂತರ ಅವಳನ್ನು ಪರಿಚಯಿಸಿಕೊಂಡು ಕುಶಲೋಪರಿ ವಿಚಾರಿಸುತ್ತಿರುವಾಗ, ಕೆಲವೊಂದು ಮಾಹಿತಿಗಳು ಲಭ್ಯವಾದವು.

ಆ ಮಾಹಿತಿಯನ್ನಾಧರಿಸಿಯೇ ಈ ವರದಿಯನ್ನು ಮಾಡುತ್ತಿದ್ದೇನೆ.

ಮೇಲಿನ ಎರಡು ಮೂರು ಚಿತ್ರಗಳಲ್ಲಿ ಕಾಣುವ ಜನರ ಕಾರ್ಯವೈಖರಿಯನ್ನು ನೋಡಿದರೆ, ಪ್ರತಿಯೊಬ್ಬರಿಗೂ ಬೆಂಗಳೂರಿನ ಯಾವುದೋ ಕಾಲ್ಸೆಂಟರ್ ಒಂದರ ಚಿತ್ರವಿರಬೇಕೆಂದು ಅನಿಸುತ್ತದೆ. ಆದರೆ, ಅದ್ಯಾವುದು ಬೆಂಗಳೂರಿನ ಕಂಪನಿ ಚಿತ್ರವಲ್ಲ. ನಮ್ಮ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ತಲೆ ಎತ್ತಿರುವ ಬಿಪಿಓ ಕೇಂದ್ರದ್ದು..

ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ರಾಯಚೂರಿನ ಕುಗ್ರಾಮ ಗೊರೆಬಾಳಕ್ಯಾಂಪಿನಲ್ಲಿ ಸ್ಥಾಪಿಸಲ್ಪಟ್ಟ ಸಿದ್ದೇಶ್ವರ ಐಟಿ ಸೆಲ್ಯೂಷನ್ ಎನ್ನವ ಸಾಪ್ಟವೇರ್ ಕಂಪನಿ ಅದು.

ಕ್ಯಾಂಪು ಗುಡಿಸಲುಗಳು ಮಧ್ಯದಲ್ಲಿಯೇ ತಲೆಎತ್ತಿರುವ ಬಿಪಿಒ ಕೇಂದ್ರದಲ್ಲಿ, ಸುತ್ತಮುತ್ತಲಿನ ಹಳ್ಳಿಗಳಲ್ಲಿನ ನೂರಾರು ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಜಂಬುನಾಥ ಮಳೇಮಠ ಎಂಬುವವರು ಉದ್ಯೋಗವನ್ನು ನೀಡುತ್ತಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಗೊರೆಬಾಳ ಗ್ರಾಮದ ನಾಟಿ ವೈದ್ಯ ಸಿದ್ದಯ್ಯ ಎನ್ನುವವರ ಮಗ ಜಂಬುನಾಥ ಎಂಬಿಏ ಮುಗಿಸಿ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಪ್ರತಿ ತಿಂಗಳೂ 60 ಸಾವಿರ ವೇತನ ಪಡೆದು ಕೆಲಸ ಮಾಡುತ್ತಿದ್ದರು.

ಆದರೆ, ಜಂಬುನಾಥರ ತಂದೆ ತಾಯಿಗಳು ಒಂದು ಬಾರಿ ತಮ್ಮ ಮಗನನ್ನು ಈ ರೀತಿ ಪ್ರಶ್ನಿಸುತ್ತಾರಂತೆ..

ಬೆಂಗಳೂರಿಗೆ ಹೋಗಿ ಕೆಲಸ ಮಾಡುವದಕ್ಕಿಂತ, ಅದೇ ಕೆಲಸವನ್ನು ನಮ್ಮಲ್ಲಿ ಮಾಡಿ, ನಾವುಗಳೇ ನೂರಾರು ಜನರಿಗೆ ಉದ್ಯೋಗ ನೀಡಲು ಬರುವುದಿಲ್ಲವೇ? ಇಲ್ಲಿಯೇ ಕೆಲಸವನ್ನು ಆರಂಭಿಸುವದರಿಂದ ಸುತ್ತಮುತ್ತಲಿನ ವಿದ್ಯಾವಂತ ಜನರು ಗುಳೇ ಹೋಗುವುದು ತಪ್ಪುತ್ತದೆ ಎಂಬಿತ್ಯಾದಿ ಪ್ರಶ್ನೆಗಳನ್ನು ಮಗನಿಗೆ ಕೇಳಿದರಂತೆ.

ನಂತರ ಮನದಲ್ಲಿಯೇ ಚಿಂತಿಸಿದ ಜಂಬುನಾಥ ತಾನಿರುವ ಹಳ್ಲಿಯಲ್ಲಿಯೇ ಸ್ನೇಹಿತರು ಹಾಗೂ ಬಂಧುಗಳ ಸಹಕಾರದೊಂದಿಗೆ 85 ಲಕ್ಷ ಬಂಡವಾಳ ಹಾಕಿ ಸಾಪ್ಟವೇರ್ ಕಂಪನಿ ತೆರೆಯಲು ದೃಡ ನಿಧರ್ಾರ ಮಾಡಿದರು. ಆರಂಭದಲ್ಲಿ ವಿದ್ಯುತ್ ಸಂಪರ್ಕದ ಅಡಚಣೆ, ಉದ್ಯೋಗಿಗಳ ಕೊರತೆಯಂತಹ ಸಮಸ್ಯಗಳನ್ನು ಪ್ರಯಾಸದಿಂದ ಎದುರಿಸಿದ ಜಂಬುನಾಥ ಕೊನೆಕೊನೆಗೆ ವಿದ್ಯುತ್ ಸಮಸ್ಯಗೆ ತನ್ನದೇ ಆದ ಜನರೇಟರ್ ಸ್ಥಾಪಿಸಿಕೊಂಡರು. ಅಕ್ಕ ಪಕ್ಕದ ನಗರಗಳಲ್ಲಿರುವ ಇಂಜಿನಿಯರಿಂಗ್ ಕಾಲೇಜುಗಳನ್ನು ವಿಶ್ವಾಸಕ್ಕೆ ಪಡೆದು ಐಟಿ ಹಾಗೂ ಬಿಪಿಓ ಹಳ್ಳಿಯಲ್ಲಿ ಪ್ರಾರಂಬಿಸಿದರು.

ಇಂದು ಒಂದು ನೂರು ಯುವಕರು 30 ಯುವತಿಯರು ಹಾಗೂ 20ಕ್ಕೂ ಹೆಚ್ಚು ಇಂಜಿನಿಯರ್ಗಳು ಶೆಟಲೈಟ್ ಆಧಾರಿತ 4ಎಂಬಿ ಲೈನ್ ಹೊಂದಿರುವ ಈ ಕೇಂದ್ರದಲ್ಲಿ ಹಗಲಿರಳೂ ದುಡಿಯುತ್ತಿದ್ದಾರೆ, ದೂರದ ಅಮೇರಿಕಾದ ಲಿಗಲ್ ಪ್ರೊಸೆಸಿಂಗ್ ಡಾಟಾ ಎಂಟ್ರಿ , ಕನರ್ಾಟಕ ಸರಕಾರದ ಸದಾಶಿವ ಆಯೋಗದ ಸಮೀಕ್ಷೆಯ ಡಾಟಾ ಎಂಟ್ರಿ, ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಆಧಾರ್ ಯೋಜನೆಯ ಡಾಟಾ ಎಂಟ್ರಿ ಕಾರ್ಯ ಈಗ ಇಲ್ಲಿ ನಡೆಯುತ್ತಿದೆ, ಜೊತೆಗೆ ಸ್ಥಳೀಯ ರೈಸ್ ಮಿಲ್, ಶಾಲಾ ಕಾಲೇಜುಗಳಿಗೂ ಸಾಪ್ಟವೇರ್ ತಯಾರಿಸಿಕೊಡಲಾಗುತ್ತಿದೆ, ಅಷ್ಠೇ ಅಲ್ಲ ಉತ್ತರ ಕನರ್ಾಟಕದ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವ ಆಶಯದೊಂದಿಗೆ ಪ್ರಾರಂಭಗೊಂಡ ಒಂದು ವರ್ಷದ ಅವಧಿಯಲ್ಲೇ ಬೆಂಗಳೂರಿನಲ್ಲಿ ವ್ಯವಹಾರಿಕ ಶಾಖೆ ತೆರೆಯಲಾಗಿದೆ. ಮುಂದಿನ ತಿಂಗಳು ಸಿಂಗಪೂರಿನಲ್ಲೂ ಈ ಕಂಪನಿಯ ಶಾಖೆ ಪ್ರಾರಂಭವಾಗಲಿದೆ, ಈ ಯುವಕನ ಸಾಧನೆಯ ಛಲ, ನವ ನವೀನ ದೃಷ್ಠಿಕೋನ ಗಮನಿಸಿದ ದಶಕದ ಇತಿಹಾಸವಿರುವ ಓಂ ಸಾಪ್ಟವೇರ್ ಕಂಪನಿ ಈ ಯುವಕನೊಂದಿಗೆ ಪಾಲುದಾರಿಕೆಯ ಒಪ್ಪಂದ ಮಾಡಿಕೊಂಡಿದೆ, ಬರುವ ಮಾರ್ಚ ವೇಳೆಗೆ ತಾನು ಹಾಕಿದ ಬಂಡವಾಳ ವಾಪಾಸಾಗುವ ಹುಮ್ಮಸಿನಲ್ಲಿರುವ ಮಳೆಮಠ 2013ರ ವೇಳೆಗೆ 1000 ಯುವಕರಿಗೆ ಉದ್ಯೋಗ ನೀಡುವ ಉದ್ಯಮವಾಗಿ ಬೆಳೆಸುವ ಆಕಾಂಕ್ಷೆ ಹೊಂದಿರುವುದಾಗಿ ನಮ್ಮೊಂದಿಗೆ ಹೇಳಿದರು.

ನಮ್ಮದು ಹಿಂದುಳಿದ ಪ್ರದೇಶ ಇಲ್ಲಿ ಸವಲತ್ತುಗಳಿಲ್ಲ ಹೀಗಾಗಿ ರಾಯಚೂರು ಜಿಲ್ಲೆ ಹಿಂದುಳಿದ ಜಿಲ್ಲೆ ಎಂದು ಸದಾ ಉದಾಸೀನ ಮಾತುಗಳನ್ನಾಡುವವರ ಮದ್ಯೆ ಮನಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂದು ಸಾದಿಸಿ ತೊರಿಸಿದ ಈ ಯುವಕ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಗೆ ಅಪವಾದ ಎಂಬುವಂತೆ ಬೆಂಗಳೂರಿಗೆ ಸೀಮಿತವಾಗಿದ್ದ ಮಾಹಿತಿ ತಂತ್ರಜ್ಞಾನ ಉದ್ಯಮವನ್ನು ಹಳ್ಳಿಗೆ ತಂದ ಕಿರ್ತಗೆ ಪಾತ್ರವಾಗಿದ್ದಾನೆ.

No comments:

Post a Comment

Thanku