ಹೀಗೂ ಉಂಟೇ...
ಮೊಬೈಲು ರಿಂಗಣಿಸಿದಾಗ ಮೇಜಿನ ಮೇಲಿದ್ದ ಫೋನನ್ನು ಎತ್ತಿಕೊಳ್ಳಲು ಅಡಿಗೆ ಮನೆ ಯಿಂದ ನಾ ಹೆಜ್ಜೆ ಹಾಕಿದೆ. ಮೊಬೈಲನ್ನು ನೋಡಿ ದಾಗ ಯಾವುದೋ ಅನ್ ನೋನ್ ನಂಬರು. ಕರೆಯನ್ನು ಸ್ವೀಕರಿಸಿ ನಾ ಹಲೋ ಎಂದಾಗ, ದಿವ್ಯಾ ಭಾರತೀ ಏನಮ್ಮಾ? ಎಂದು ಆ ಕಡೆ ಯಿಂದ ಧ್ವನಿಯೊಂದು ಕೇಳಿ ಬಂತು. ಪರಿಚಿ ತವಾದ ಧ್ವನಿಯೇ ಎಂದು ಅನಿಸಿದರೂ ಯಾರ ದೆಂದು ಗೊತ್ತಾಗಲೊಲ್ಲದು.
ಹೌದು ನಾನೇ ದಿವ್ಯಾ. ನೀವು ಯಾರು ಎಂದು ಗೊತ್ತಾಗಲಿಲ್ಲ ಎಂದೆ. ನಾನಮ್ಮಾ, ನಿಮ್ಮ ಅಂಕಲ್ ರವಿ ಶಂಕರ್. ನಿಮ್ಮ ತಂದೆಯ ಪಕ್ಕದ ಮನೆಯ ಅಂಕಲ್ ಕಣಮ್ಮಾ. ಗೊತ್ತಾಯಿ ತೇನಮ್ಮಾ? ಎಂದರು ಆ ಕಡೆಯಿಂದ. ಗೊತ್ತಾ ಯಿತು ಅಂಕಲ್. ಸಾರಿ ಅಂಕಲ್, ನಿಮ್ಮ ಧ್ವನಿ ತಕ್ಷಣ ಗೊತ್ತಾಗಲಿಲ್ಲ. ನಮಸ್ಕಾರ ಅಂಕಲ್. ಹೇಗಿ ದ್ದೀರಿ? ಆಂಟಿ ಹೇಗಿದ್ದಾರೆ? ಬಹಳ ದಿನಗಳ ನಂತರ ಫೋನು ಮಾಡಿದ್ದೀರಿ. ವಿಶೇಷವೇನು ಅಂಕಲ್? ಎಂದೆ.
ರವಿ ಶಂಕರ್ ಅಂಕಲ್ ಊರಲ್ಲಿ ನಮ್ಮ ಮನೆಯ ಪಕ್ಕದ ಮನೆಯವರು. ಮುಖ್ಯಗುರು ಗಳು ಎಂದು ಸೇವೆಯಿಂದ ನಿವೃತ್ತಿಯಾಗಿ ಎರಡು ವರ್ಷಗಳಾಗಿವೆ. ಅಪ್ಪಾಜಿಗಿಂತ ಎರಡು ಮೂರು ವರ್ಷ ಚಿಕ್ಕವರಿರಬೇಕು. ಅವರೂ, ನಾವೂ ಒಂದೇ ಮನೆಯವರಂತೆಯೇ ಇದ್ದೇವೆ.
ಅಂಥಹ ವಿಶೇಷ ವಿಷಯವೇನಿಲ್ಲಮ್ಮಾ. ನಾಳೆ ರವಿವಾರವಲ್ಲವಾ? ನೀನು ಊರಲ್ಲಿಯೇ ಇರುವಿಯಾ ಹೇಗೆ? ಏಕೆಂದರೆ ಇತ್ತೀಚಿಗೆ ಮದುವೆಯಾವಳು ನೀನು. ಎಷ್ಟಾದರೂ ಹೊಸ ಜೋಡಿ ನಿಮ್ಮದು. ನೀನು, ನಿನ್ನ ಗಂಡ ಜಮ್ಮಂತ ಎಲ್ಲಾದರೂ ಸುತ್ತಾಡುವ ಪ್ರೋಗ್ರ್ಯಾಂ ಏನಾದರೂ ಹಾಕಿಕೊಂಡಿರುವಿಯಾ ಹೇಗೆ? ಅಂತಹದ್ದೇನೂ ಪ್ರೋಗ್ರ್ಯಾಂ ಇಲ್ಲದೇ ನೀನು ಊರಲ್ಲಿಯೇ ಇರುವುದಾದರೆ ನಾ ನಾಳೆ ನಿಮ್ಮಲ್ಲಿಗೆ ಬರಬೇ ಕೆಂದಿರುವೆ. ಜರೂರಿಯಾದ ವಿಷಯವೊಂದರ ಬಗ್ಗೆ ನಿನ್ನ ಜೊತೆ ಮಾತಾಡುವುದಿದೆ. ನೀ ಚೆನ್ನಾಗಿರುವಿ ತಾನೆ? ಎಂದಿದ್ದರು ಅಂಕಲ್.
ಅಂಕಲ್, ನಾವು ಊರಲ್ಲಿಯೇ ಇರುತ್ತೇವೆ. ನೀವು ದಯವಿಟ್ಟು ಬನ್ನಿರಿ. ನೀವು ಬರುತ್ತೀರಿ ಎನ್ನುವುದನ್ನು ಕೇಳುತ್ತಿರುವುದಕ್ಕೇ ನನಗೆ ಬಹಳ ಸಂತೋಷವೆನಿಸುತ್ತಿದೆ. ಬರುವಾಗ ಜೊತೆಯಲ್ಲಿ ಆಂಟಿಯನ್ನೂ ಕರೆದುಕೊಂಡು ಬನ್ನಿರಿ. ಆಂಟಿಯನ್ನು ನೋಡದೇ ಬಹಳ ದಿನಗಳಾಗಿವೆ. ನಿಮ್ಮ ಆಶೀವರ್ಾದದಿಂದ ನಾವು ಇಲ್ಲಿ ಚೆನ್ನಾಗಿ ದ್ದೇವೆ. ಆಂಟಿ, ಅಪ್ಪ, ಅಮ್ಮ ಹೇಗಿರುವರು? ನಾ ಕೇಳಿದೆ. ನನಗೆ ಒಂದು ರೀತಿಯ ಖುಷಿ ಯಾಗಿತ್ತು. ಅಂಕಲ್ ಜೊತೆ ಒಂದು ರೀತಿಯ ಅವಿನಾಭಾವ ಸಂಬಂಧ ಬೆಳೆದು ಬಂದಿತ್ತು. ಅವರು ನನಗೆ ಖಾಸಾ ಚಿಕ್ಕಪ್ಪನಂತೆಯೇ ಇದ್ದರು ನಾ ಚಿಕ್ಕವಳಾಗಿದ್ದಾಗಿನಿಂದ.
ಆಯಿತಮ್ಮಾ ಹಾಗಾದರೆ ನಾ ನಾಳೆ ಬೆಳಿಗ್ಗೆ 11 ಗಂಟೆಯ ಸುಮಾರು ನಿಮ್ಮನೆಲ್ಲಿರುತ್ತೇನೆ. ಬಂದಾಗ ಅಲ್ಲಿಯೇ ವಿವರವಾಗಿ ಮಾತಾ ಡೋಣ ಎನ್ನುತ್ತಾ ಅಂಕಲ್ ಫೋನು ಕಟ್ ಮಾಡಿದ್ದರು. ನಮ್ಮ ಊರಿನಿಂದ ಇಲ್ಲಿಗೆ ಒಂದು ತಾಸಿನ ಪ್ರಯಾಣ ಅಷ್ಟೆ. ಇಲ್ಲಿನ ಬಸ್ ನಿಲ್ದಾಣಕ್ಕೆ ಬಂದ ಕೂಡಲೇ ಒಂದು ರಿಂಗ್ ಕೊಟ್ಟರೆ ಬಸ್ ನಿಲ್ದಾಣಕ್ಕೆ ಬಂದು ಕರೆದುಕೊಂಡು ಬರುವುದಾಗಿ ತಿಳಿಸಿದೆ.
ರವಿ ಶಂಕರ್ ಅಂಕಲ್ ಬರುತ್ತಿರುವುದಕ್ಕೆ ಮನಸ್ಸು ಒಂದೆಡೆ ಗರಿಗೆದರಲು ತೊಡಗಿದ್ದರೆ, ಇನ್ನೊಂದೆಡೆ, ಜರೂರಿಯಾದ ವಿಷಯವೊಂದರ ಬಗ್ಗೆ ಮಾತಾಡುವುದಿದೆ ಎಂಬ ಅವರ ಮಾತಿನ ಒಕ್ಕಣೆಯಿಂದ ಒಂದು ರೀತಿಯ ಆತಂಕ ಶುರು ವಾಗಿತ್ತು ಮನದಲ್ಲಿ. ಯಾವ ಜರೂರಿ ಮಾತೋ ಏನೋ ಎಂದು ಕುತೂಹಲಕ್ಕೆ ಎಡೆ ಮಾಡಿಕೊ ಟ್ಟಿದ್ದರು ಅಂಕಲ್. ಮನಸ್ಸು ಮಂಥನದಲ್ಲಿ ಮುಳು ಗಿತ್ತು.
ಮೇಡಂ ಗಾಢವಾದ ಯೋಚನೆಯಲ್ಲಿದ್ದ ಹಾಗಿದೆ? ಎಂದು ದಿಗಂತ್ ಹೇಳಿದಾಗಲೇ ನಾ ಯೋಚನಾ ಲಹರಿಯಿಂದ ಹೊರ ಬಂದಿದ್ದೆ. ಟಿ.ವಿ. ನೋಡುತ್ತಲೇ, ನನ್ನ ಮತ್ತು ಅಂಕಲ್ ನಡುವಿನ ಫೋನಿನಲ್ಲಿನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ದಿಗಂತನಿಗೆ ನಾ ಮಾತಿನ ವಿವರ ಹೇಳುತ್ತಾ, ಅವನ ಪಕ್ಕದಲ್ಲಿ ಕುಳಿತೆ. ದಿಗಂತ್ ನನ್ನ ಭುಜದ ಮೇಲೆ ಕೈ ಹಾಕುತ್ತಾ, ಯಾಕೋ ನೀ ಸ್ವಲ್ಪ ಡಿಪ್ರೆಸ್ ಆದ ಹಾಗೆ ಕಾಣುತ್ತಿರುವಿ ಎಂದ. ಹಾಗೇನೂ ಇಲ್ಲಪ್ಪಾ ಎಂದೆನ್ನುತ್ತಾ ಅವನ ಕುತ್ತಿಗೆ ಬಳಸಿದೆ ವಿಷಯ ಮರೆಸಲು.
ಮರುದಿನ ಬೆಳಿಗ್ಗೆ 11 ಗಂಟೆಯ ಸುಮಾರು ರವಿ ಶಂಕರ್ ಅಂಕಲ್ರ ಫೊನು ಬಂತು. ದಿಗಂತ್ ಮತ್ತು ನಾ ಇಬ್ಬರೂ ಬಸ್ ನಿಲ್ದಾಣಕ್ಕೆ ಹೊರಟೆವು. ಅವ ತನ್ನ ಹೀರೋ ಹೊಂಡಾ ಗಾಡಿಯಲ್ಲಿ, ನಾ ನನ್ನ ಸ್ಕೂಟಿಯಲ್ಲಿ. ಆಂಟಿ ಸಹ ಬರಬಹುದೇನೋ ಎಂಬ ನಿರೀಕ್ಷೆಯಲ್ಲಿದ್ದ ನನಗೆ ಅಲ್ಲಿ ಅಂಕಲ್ ಒಬ್ಬ ರನ್ನೇ ಕಂಡು ಕೊಂಚ ನಿರಾಸೆಯಾಗಿದ್ದುದರಿಂದ ಮನದಾಳದ ನೋವನ್ನು ಅವರೊಂದಿಗೆ ಹಂಚಿ ಕೊಂಡಾಗ, ಇಲ್ಲಮ್ಮಾ, ಅವಳಿಗೆ ಓಡಾಟ ಅಂದರೇ ಅಲಜರ್ಿ ವಯಸ್ಸಿನ ಪ್ರಭಾವದಿಂದ ಬೇಗ ಆಯಾಸ ಪಟ್ಟುಕೊಳ್ಳುತ್ತಾಳೆ. ನೀ ಹೇಳಿದ್ದನ್ನು ನಾ ಆಕೆಗೆ ತಿಳಿಸಿದರೂ, ಆಕೆ ಒಲ್ಲೆ ಎಂದಳು. ನೀನೇನೂ ಬೇಸರ ಮಾಡಿಕೊಳ್ಳಬೇಡಮ್ಮಾ ಎಂದು ಅವರು ಸಮಾಧಾನ ಮಾಡಿದರು. ದಿಗಂತ್ನ ಪರಿಚಯ ಮಾಡಿದೆ ಅಂಕಲ್ಗೆ. ಅಂಕಲ್ರನ್ನು ತನ್ನ ಗಾಡಿಯಲ್ಲಿ ಹತ್ತಿಸಿಕೊಂಡ ದಿಗಂತ್. ಅವರ ಹಿಂದೆ ನಾ ನನ್ನ ಗಾಡಿಯಲ್ಲಿ ಹೊರಟೆ.
ಮನೆಗೆ ಬರುತ್ತಲೇ ಅಂಕಲ್ಗೆ ಫ್ರೆಷ್ ಆಗಲು ವ್ಯವಸ್ಥೆ ಮಾಡಿದೆ. ಟಿಫಿನ್ ಮಾಡಲು ಒತ್ತಾಯಿ ಸಿದರೆ ಬೇಡವೆಂದರು. ಊರಿನಲ್ಲಿಯೇ ಮುಗಿಸಿ ಕೊಂಡು ಬಂದಿರುವುದಾಗಿ ತಿಳಿಸಿದುದರಿಂದ ನಾ ಚಹವನ್ನಷ್ಟೇ ಮಾಡಿಕೊಟ್ಟು ತೃಪ್ತಿಪಟ್ಟುಕೊಳ್ಳ ಬೇಕಾಯಿತು. ಮಿತ ಆಹಾರ, ಚಟುವಟಿಕೆಯ ಜೀವನದ ಶೈಲಿಯಿಂದ 62-63ರ ರವಿ ಶಂಕರ್ ಅಂಕಲ್ 50ರ ವಯಸ್ಸಿನವರಂತೆ ಕಾಣುತ್ತಿದ್ದರು. ಚಹ ಹೀರುತ್ತಾ ಮಾತಿಗಿಳಿದರು ಅಂಕಲ್. ವಿಷಯ ತಿಳಿದುಕೊಳ್ಳಬೇಕೆಂಬ ಕುತೂಹಲ, ತವಕ ನನಗಿದ್ದುದರಿಂದ ಮನೆಗೆ ಬಂದ ಕೂಡಲೇ ಪ್ರಸ್ತಾ ಪಿಸಬೇಕೆಂದಾಕೆ ಸಂಯಮದಿಂದ ಸುಮ್ಮನಿದ್ದೆ ಅವರೇ ಪ್ರಾರಂಭಿಸಲೆಂದು.
ಮೊದಲನೆಯದಾಗಿ, ನಿಮ್ಮ ಜೋಡಿ ನೋಡಿ ನನಗೆ ತುಂಬಾ ಸಂತೋಷವಾಗಿದೆ. ನನ್ನ ಅಭಿನಂದನೆಗಳು ಇಬ್ಬರಿಗೂ. ಎರಡನೆಯದಾಗಿ ಈಗ ನಿನ್ನ ತಂದೆಯವರ ರಾಯಭಾರಿಯಾಗಿ ನಾ ಇಲ್ಲಿಗೆ ಬಂದಿದ್ದೇನೆ ಎಂದು ನನ್ನ ನೋಡುತ್ತಾ ಹೇಳಿದ ಅಂಕಲ್ ಸ್ವಲ್ಪ ಹೊತ್ತು ಮೌನಿಗಳಾದರು. ಅಂಕಲ್ ಅಂತಮರ್ುಖಿಯಾದುದನ್ನು ಗಮನಿಸಿದ ನಾನು ಮತ್ತು ದಿಗಂತ್ ಮುಖ ಮುಖ ನೋಡಿ ಕೊಂಡೆವು. ಮೌನವನ್ನು ಮುರಿದು ನಾನೇ, ಅಂಕಲ್ ಅದೇನಿದ್ದರೂ ಹೇಳಿ ಬಿಡಿ. ಎಂಥಹ ಪರಸ್ಥಿತಿ ಬಂದರೂ ಅದನ್ನು ಎದುರಿಸಲು ನಾವಿಬ್ಬರೂ ಸನ್ನದ್ಧರಾಗಿದ್ದೇವೆ ಎಂದೆ.
ನೋಡಮ್ಮಾ, ಭಾರತೀ, ವಿಷಯವೇನು ಅಂಥಹ ಗಂಭೀರವಾದುದು ಅಲ್ಲ ನಿಜವಾಗಿಯೂ. ನೀ ಸಣ್ಣವಳಿದ್ದಾಗಿನಿಂದಲೂ ನಿನ್ನನ್ನು ನಾ ನೋಡಿರುವೆ. ನಿನ್ನ ಮನಸ್ಸು ಎಂಥಹದೆಂದು ನಾ ಬಲ್ಲೆ. ನಿನ್ನ ತಂದೆ ಹೇಳಿ ಕಳುಹಿಸಿರುವ ವಿಷಯ ವ್ಯವಹಾರಿಕವಾಗಿದ್ದರೂ, ವಿಶಾಲ ಮನಸ್ಸಿನಿಂದ ವಿಶ್ಲೇಷಿದರೆ ಏನೂ ಅಲ್ಲ ಎಂದು ನನ್ನ ಅಭಿಪ್ರಾಯ. ದೊಡ್ಡ ಮನಸ್ಸು ಮುಖ್ಯ ಅಷ್ಟೆ ಎಂದು ಹೇಳಿ ಸುಮ್ಮನಾದ ಅಂಕಲ್ ತುಸು ಸಮಯದ ನಂತರ, ಮೊದಲನೆಯದಾಗಿ, ನಿನ್ನ ತಂದೆ ನಿನ್ನ ಲಗ್ನದ ಖಚರ್ಿಗೆಂದು ನಿನ್ನ ಹೆಸರಿನಲ್ಲಿ ಬ್ಯಾಂಕಿನಲ್ಲಿ ಇಟ್ಟಿರುವ ಎರಡು ಲಕ್ಷ ರೂಪಾಯಿಗಳ ಫಿಕ್ಸೆಡ್ ಡಿಪಾಜಿಟ ಹಣ ಅವರಿಗೇ ವಾಪಾಸು ಕೊಡ ಬೇಕಂತೆ. ಏಕೆಂದರೆ, ನೀ ಅವರ ಮನಸ್ಸಿಗೊಪ್ಪುವ ಸ್ವಜಾತಿ ಹುಡುಗನನ್ನು ಲಗ್ನವಾಗದೇ ನೀನೇ ಪ್ರೀತಿಸಿ, ಮದುವೆಯಾಗಿರುವ ಹುಡುಗ ಬೇರೆ ಜಾತಿಯ ವರಾಗಿರುವುದರಿಂದ ಎಂದರು ಅಂಕಲ್ ತುಸು ಅಳುಕುತ್ತಾ.
ಅಂಕಲ್, ನನ್ನ ಮದುವೆಯಾಗಿರುವುದಂತೂ ನಿಜ. ಮನುಷ್ಯ ಜಾತಿಯ ಹುಡುಗನನ್ನು ಮದುವೆ ಯಾಗಿರುವೆ. ಮದುವೆಯೆಂದ ಮೇಲೆ ಖಚರ್ುಇದ್ದೇ ಇರುತ್ತೆ. ನನ್ನ ಹೆಸರಿನಲ್ಲಿದ್ದ ದುಡ್ಡನ್ನು ಮದುವೆಗೆ ಬಳಸಿರುವೆನೆಂದು ತಿಳಿದುಕೊಳ್ಳಿರಿ. ನಾನೇನು ಗಪ್-ಚಿಪ್ ಆಗಿ ಮದುವೆ ಆಗಿಲ್ಲ. ನನ್ನ ಮತ್ತು ದಿಗಂತ್ನ ಮದುವೆಯ ಬಗ್ಗೆ ಅಪ್ಪ, ಅಮ್ಮನ ಜೊತೆ ವಿವರವಾಗಿ ಚಚರ್ಿಸಿದ್ದೇನೆ. ನಮ್ಮ ಮದುವೆಯನ್ನು ಅವರೇ ಮಾಡಿಕೊಡಬೇಕೆಂದು ಕಳಕಳಿಯಿಂದ, ದೈನ್ಯತೆಯಿಂದ ಬೇಡಿಕೊಂಡಿದ್ದೇವೆ. ಅಪ್ಪನದು ಒಂದೇ ಹಟ. ಜಾತಿ, ಜಾತಿ ಎಂದು ಬಡಕೊಂಡರು. ಯಾರ ಭಾವನೆಗಳನ್ನೂ ಅರ್ಥ ಮಾಡಿಕೊಳ್ಳಲಿಲ್ಲ. ನಮ್ಮನ್ನು ಹರಸಿ, ಆಶೀರ್ವ ದಿಸಬೇಕಾಗಿದ್ದ ಅವರು ಜಾತಿಯ ಭೂತದ ಬೆನ್ನತ್ತಿ ತಮ್ಮ ಮನಸ್ಸಿನ ಹಟದ ಸಾಧನೆಗಾಗಿ ನಮ್ಮಿಂದ ತಾವೇ ದೂರ ಉಳಿದರು. ನನಗೆ ಮದುವೆಯಾದಾಗ ಮೂವತ್ತು ದಾಟಿತ್ತು ಎಂದು ನಿಮಗೆ ಗೊತ್ತೇ ಇದೆಯೆಂದು ನಾ ತಿಳಿಯುವೆ. ನನಗೆ 25ರಲ್ಲೇ ಅದೆಷ್ಟು ಚೆಂದದ ವರಗಳು ಬಂದಿದ್ದವೆಂದೂ ನಿಮಗೆ ಗೊತ್ತು. ಯಾತಕ್ಕಾಗಿ ನನ್ನ ಮದುವೆ ತಡವಾಯಿತು ಎಂದು ಅದೂ ಸಹ ನಿಮಗೊತ್ತಿದೆ. ನನಗೆ ಸರಿಯಾದ ಟೈಮಿನಲ್ಲಿ ಮದುವೆಯಾಗಿದ್ದರೆ, ಅವರೇ ಆರಿಸಿದ ನಮ್ಮ ಜಾತಿಯ ಹುಡುಗನನ್ನೇ ಮದುವೆಯಾಗುತ್ತಿರಲಿಲ್ಲವೇ? ನೀವೇ ಹೇಳಿ.
ಆದದ್ದೆಲ್ಲಾ ಒಳ್ಳೆಯದಕ್ಕೇ ಎಂದು ನಿಮ್ಮಂಥಹ ಹಿರಿಯರೇ ಹೇಳುತ್ತಾರೆ. ಮೂವತ್ತಾದ ಮೇಲೆ ಕಂಕಣ ಬಲ ಕೂಡಿ ಬಂದರೂ ಮುತ್ತಿನಂಥಹ ಹುಡುಗನೇ ನನಗೆ ಸಿಕ್ಕಿದ್ದಾನೆ. ನನ್ನ ಮದುವೆ ಯನ್ನು ಉದ್ದೇಶಪೂರ್ವಕವಾಗಿ, ತಮ್ಮ ಸ್ವಾರ್ಥ ಕ್ಕಾಗಿ, ಹಣದಾಸೆಗಾಗಿ ತಡಮಾಡಿದ ನನ್ನ ತಂದೆ ಯನ್ನು ನಾ ದಿನಾಲೂ ನೆನೆಯುವೆ ಧನ್ಯತೆ ಯಿಂದ. ದಿಗಂತ್ನಂಥಹ ಹುಡುಗನನ್ನು ಪಡೆದಿ ರುವುದು ಅಪ್ಪ, ಅಮ್ಮ, ಮತ್ತು ನಿಮ್ಮಂಥಹ ಹಿರಿ ಯರ ಆಶೀವರ್ಾದದಿಂದವೆಂದೇ ನಾ ತಿಳಿದಿರುವೆ. ಪುನರ್-ಜನ್ಮದಲ್ಲಿ ನನಗೆ ನಂಬಿಕೆಯಿರದೇ ಇರುವುದರಿಂದ ದಿಗಂತ್ನಂಥಹ ಗಂಡನನ್ನು ಪಡೆಯುವುದಕ್ಕೆ ಪೂರ್ವ ಜನ್ಮದ ಪುಣ್ಯ ಎಂದು ನಾ ಹೇಳದೇ ನಿಮ್ಮಂಥಹ ಹಿರಿಯರು ಮಾಡಿದ ಪುಣ್ಯ ಎಂದು ತಿಳಿದುಕೊಂಡಿರುವೆ. ನಾ ನನ್ನ ಮನದಲ್ಲಿದ್ದ ದುಗುಡವನ್ನು ಇನ್ನೂ ಹೇಳಬೇಕೆಂದಿದ್ದುದನ್ನು ದಿಗಂತ್ ತಡೆದ.
ಅಂಕಲ್, ದಿವ್ಯಾ ಭಾರತಿಯ ಮನಸ್ಸಿಗೆ ತುಂಬಾ ನೋವಾಗಿದೆ, ಆಘಾತವಾಗಿದೆ. ಅದಕ್ಕಾಗಿ ಈ ರೀತಿ ಹೇಳುತ್ತಿದ್ದಾಳೆ. ನೀವೇನೂ ಬೇಸರ ಮಾಡಿಕೊಳ್ಳಬೇಡಿರಿ. ನೀವು ದಯವಿಟ್ಟು ಎರಡನೇ ವಿಚಾರವನ್ನು ಹೇಳಬಹುದು. ದಿಗಂತ್ ಅಂಕಲ್ಗೆ ಬಿನ್ನವಿಸಿಕೊಂಡ. ನಮ್ಮಪ್ಪನ ಮೊದಲನೇ ಬೇಡಿಕೆಗೆ ಏನು ಅರ್ಥ ಹೇಳದೇ, ಎರಡನೇ ವಿಚಾರವೇ ನೆಂದು ಕೇಳುತ್ತಿರುವ ದಿಗಂತ್ನ ವಿಚಾರದ ಧೋರ ಣೆಯೇ ಏನೆಂದು ನನಗೆ ಅರ್ಥವಾಗುತ್ತಿಲ್ಲವಲ್ಲಾ ಎಂದು ಒಳಗೊಳಗೇ ಕುದಿಯ ತೊಡಗಿದೆ. ಕಣ್ಸನ್ನೆಯಿಂದ ನನಗೆ ಸುಮ್ಮನಿರಲು ತಿಳಿಸುತ್ತಿದ್ದ ದಿಗಂತ್ ನನಗೆ.
ಎರಡನೆಯದಾಗಿ, ನಿನ್ನ ಡಿ.ಎಡ್., ಬಿ.ಎ., ಬಿ.ಎಡ್., ವಿದ್ಯಾಭ್ಯಾಸಕ್ಕಾಗಿ ನಿಮ್ಮ ಅಪ್ಪಾಜಿ ಕಡಿಮೆಯೆಂದರೂ ನಾಲ್ಕೈದು ಲಕ್ಷ ಹಣ ಖಚರ್ು ಮಾಡಿರುವರಂತೆ. ಅದರಲ್ಲಿ ಕನಿಷ್ಟ ಎರಡು ಲಕ್ಷವಾದರೂ ನೀ ಅವರಿಗೆ ವಾಪಾಸು ಕೊಡ ಬೇಕಂತೆ ಎಂದರು ಅಂಕಲ್ ಬೇರೆ ಕಡೆಗೆ ನೋಡುತ್ತಾ. ನಮ್ಮ ದೃಷ್ಟಿ ಎದುರಿಸುವ ಧೈರ್ಯ ಅವರಿಗಿದ್ದಂತೆ ತೋರುತ್ತಿರಲಿಲ್ಲ.
ನಾ ಹುಟ್ಟಿದಾಗಿನಿಂದ ನನ್ನ ಹೊಟ್ಟೆ, ಬಟ್ಟೆಗೆ ಖಚರ್ು ಮಾಡಿದ್ದನ್ನು ಸೇರಿಸಿ ಹೇಳು ಎಂದು ನಮ್ಮ ಅಪ್ಪನಿಗೆ ನೀವು ಹೇಳಲಿಲ್ಲವೇ ಅಂಕಲ್?
ನಿಮ್ಮ ಅಪ್ಪಾಜಿ ಹೇಳಿದ ವಿಚಾರ ನನಗೂ ಸಮಂಜಸವೆನಿಸಲಿಲ್ಲ. ನೀ ಹೇಳಿದ್ದನ್ನೇ ನಾನೂ ಸಹ ನಿನ್ನ ಅಪ್ಪನಿಗೆ ಹೇಳಿದೆ. ಅವನದು ಮೊದಲಿನಿಂದಲೂ ಒಂದು ತರಹ ಹಟಮಾರಿ ಸ್ವಭಾವ. ತಾ ಅಂದಿದ್ದೇ ನಡೆಯಬೇಕೆನ್ನುವವ. ಅವನ ಇಚ್ಛೆಯ ವಿರುದ್ಧವಾಗಿ ನ ಮದುವೆ ಯಾಗಿರುವುದಕ್ಕೆ ಹಟಮಾರಿ ಧೋರಣೆ ಇನ್ನೂ ಹೆಚ್ಚಾಗಿದೆ ಎಂದು ಹೇಳಬಹುದು. ಮನುಷ್ಯ ಜಿದ್ದಿಗೆ ಬಿದ್ದಿದ್ದಾನೆ ಅಷ್ಟೇ. ನಿನೇ ಹೊಂದಿಕೊಂಡು ಹೋಗಬೇಕು ಎಂದರು ಅಂಕಲ್.
ಕೊಡುವುದಕ್ಕೆ ಆಗುವುದಿಲ್ಲವೆಂದರೆ ಅವರು ಏನು ಮಾಡಬಹುದು ಅಂಕಲ್.
ನಿ ಹಾಗೆ ಕೇಳಿದರೆ ನಾ ಏನು ಹೇಳಲಮ್ಮಾ? ಜೀವನವೆನ್ನುವುದು ನಂಬಿಗೆ, ವಿಶ್ವಾಸದ ತಳಹದಿಯ ಮೇಲೆ ಸಾಗುತ್ತಿದೆ. ತಂದೆ ತನ್ನ ಅಸಹಾಯಕತೆಯಿಂದ ಹೀಗೆ ಕೇಳುತ್ತಿರಬಹುದು ಎಂದು ವಿಚಾರ ಮಾಡಿ ಅವರ ಬೇಡಿಕೆಯನ್ನು ನೀ ಪರಿಗಣಿಸಬಹುದು. ಅವರು ನಿನಗೆ ಜನ್ಮ ಕೊಟ್ಟ ತಂದೆಯಾಗಿರುವುದರಿಂದ ಕೇಳುತ್ತಿರುವರು. ನಿನ್ನನ್ನು ಕೇಳಲು ನನಗೆ ಹಕ್ಕಿದೆಯೇ? ಎಂದು ಇನ್ನೇನೋ ಹೇಳಿ ನನ್ನ ಬಾಯಿ ಮುಚ್ಚಿಸಲು ಪ್ರಯತ್ನಿಸಿದರು ಅಂಕಲ್.
ಆಯಿತು ಅಂಕಲ್, ನೀವು ಹೇಳಿದಂತೆ ನನ್ನ ಮಾವನವರ ಬೇಡಿಕೆಯನ್ನು ಈಡೇರಿಸಲು ನಾವು ಸಿದ್ಧರಾಗಿದ್ದೇವೆ. ದಿವ್ಯಾ ಭಾರತಿ ನಿಮ್ಮ ಜೊತೆ ಆ ರೀತಿ ಹೇಳುತ್ತಿದ್ದರೂ ಅವಳ ಹೃದಯ ಯಾವಾಗಲೂ ಆಕೆಯ ಅಪ್ಪ, ಅಮ್ಮನ ಬಗ್ಗೆ ಮಿಡಿಯುತ್ತಿರುತ್ತದೆ. ದಿಗಂತ್ ಒಮ್ಮಿಂದೊಮ್ಮೆಲೇ ತನ್ನ ನಿಲುವನ್ನು ಪ್ರಕಟಿಸಿದಾಗ ನನಗೆ ಅಚ್ಚರಿಯ ಅನುಭವ.
ಏಯ್, ಏಯ್, ನೀ ಏನು ಹೇಳುತ್ತಿರುವಿ ಎನ್ನುವುದು ನಿನ್ನ ಅರಿವಿಗೆ ಇದೆಯೇ? ಸ್ವಲ್ಪ ವಿಚಾರ ಮಾಡಿ ಹೇಳು. ಮತ್ತೆ ಅಪ್ಪಾಜಿಗೆ ಕೊಡು ವುದಕ್ಕಾಗಿ ಎಲ್ಲಿಯಾದರೂ ಕಳ್ಳ ಗಂಟು ಗಿಂಟು ಇಟ್ಟಿರುವಿಯಾ ಹೇಗೆ? ಎಂದು ದಿಗಂತ್ನಿಗೆ ಎಚ್ಚರಿಸಲು ಪ್ರಯತ್ನಿಸುವುದರ ಜೊತೆಗೆ ಕೆಣಕಿದೆ.
ನಿನಗೆ ತಿಳಿಯದ ವಿಷಯವೇನಿದೆ ಭಾರತಿ? ನನ್ನ, ನಿನ್ನ ಬ್ಯಾಂಕ್ ಪಾಸ್ ಪುಸ್ತಕಗಳು ಅಲ್ಲೇ ಟೇಬಲ್ಲಿನ ಮೇಲೆಯೇ ಇವೆ ಅಲ್ಲವೇ?
ಮತ್ತೆ ದುಡ್ಡು ಕೊಡಲು ಹೇಗೆ ಒಪ್ಪಿಕೊಂಡಿರುವಿರಿ?
ಅಂಕಲ್, ಫಿಕ್ಸಡ್ ಡಿಪಾಸಿಟ್ದ ಬಾಂಡ ನ್ನಂತೂ ನಾವು ಹಾಗೇ ಇಟ್ಟಿದ್ದೇವೆ. ನಾಳೆ, ಅಥವಾ ನಾಡದು ಅದರ ದುಡ್ಡನ್ನು ಮಾವನವರ ಬ್ಯಾಂಕ್ ಖಾತೆಗೆ ಜಮಾ ಮಾಡಿಸುತ್ತೇವೆ. ಉಳಿದ ಎರಡು ಲಕ್ಷವನ್ನು ಕಂತುಗಳಲ್ಲಿ ಕೊಡುವ ವಿಚಾರವಿದೆ. ಈ ತಿಂಗಳ ಕೊನೆಗೆ ಒಂದು ಲಕ್ಷ ಕೊಡುತ್ತೇವೆ. ಉಳಿದ ಇನ್ನೊಂದು ಲಕ್ಷವನ್ನು ಮೂರು ತಿಂಗಳೊಳಗೆ ಕೊಡುತ್ತೇವೆ. ಏಕೆಂದರೆ, ಇನ್ನೆರಡು ತಿಂಗಳಲ್ಲಿ ಬ್ಯಾಂಕಿನಲ್ಲಿನ ನನ್ನ ಲೋನ್ ಮುಗಿಯುತ್ತೆ. ಪುನಃ ಹೊಸದೊಂದು ಲೋನ್ ತೆಗೆದುಕೊಂಡು ಕೊಡುವೆವು ಅಷ್ಟೆ ಅಂದ ದಿಗಂತ್. ಇದಿಷ್ಟೂ ಹೇಳಿ ದಿಗಂತ್ ಸ್ವಲ್ಪ ಹೊತ್ತು ಮೌನಿಯಾದ. ಅವನು ಇನ್ನೂ ಏನನ್ನೋ ಹೇಳಲು ಇಚ್ಛಿಸುತ್ತಿದ್ದಾನೆ ಎಂದು ಅವನ ಮುಖ ನೋಡುತ್ತಾ ಕುಳಿತಿದ್ದ ನಾನು ಮತ್ತು ಅಂಕಲ್ ಅರಿತು ಸುಮ್ಮನೇ ಕುಳಿತಿದ್ದೆವು. ಸ್ವಲ್ಪ ಮೌನದ ನಂತರ, ದಿಗಂತ್ ಪುನಃ ಶುರು ಮಾಡಿದ.
ಅಂಕಲ್, ನಾ ಇನ್ನೊಂದು ಮಾತನ್ನು ಹೇಳ ಲಿಚ್ಛಿಸುವೆ. ನನಗಂತೂ ಹಿಂದೆ ಇಲ್ಲ, ಮುಂದೆ ಇಲ್ಲ. ದಿವ್ಯಾನೇ ನನಗೆ ಸರ್ವಸ್ವ. ನನ್ನ ಮತ್ತು ದಿವ್ಯಾಳ ಮದುವೆಗೆ ಮುಂಚೆ ನನಗೆ ಅನಾಥಪ್ರಜ್ಞೆ ಕಾಡುತ್ತಿತ್ತು. ಜೀವನದಲ್ಲಿ ಆಸಕ್ತಿಯನ್ನು ಕಳೆದು ಕೊಂಡಿದ್ದ ನನಗೆ ಜೀವನ ಎಂದರೆ ಇಷ್ಟು ಸುಂದರ ವಾಗಿರುತ್ತದೆಯೇ ಎಂದು ತಿಳಿಸಿಕೊಟ್ಟವಳು ಇವಳು. ಇಂಥಹ ಚೆಂದದ, ಸಜ್ಜನಿಕೆಯ ಜೊತೆಗಾತಿಯನ್ನು ನನಗಾಗಿಯೇ ಹೆತ್ತಿರುವ ಆಕೆಯ ತಂದೆ ತಾಯಿಗಳಿಗೆ ನಾ ಚಿರಋಣಿಯಾಗಿರುವೆ. ಅವಳ ತಂದೆ, ತಾಯಿ ಗಳನ್ನೇ ನನ್ನ ತಂದೆ, ತಾಯಿಗಳೆಂದು ನಾ ತಿಳಿದು ಕೊಳ್ಳುವೆ. ದಿಗಂತ್ ಇಷ್ಟು ಹೇಳುವಷ್ಟರಲ್ಲಿ ಭಾವುಕ ನಾಗಿದ್ದ, ಗದ್ಗದಿತನಾಗತೊಡಗಿದ್ದ. ಅವನು ಭಾವುಕ ನಾಗಿ ಮಾತಾಡುತ್ತಿದ್ದಂತೆ ಅವನ ಮಾತುಗಳಿಂದ ನಾನೂ ಭಾವುಕಳಾಗತೊಡಗಿದ್ದೆ. ದಿಗಂತ್ನ ಭಾವ ನಾತ್ಮಕ ಸಂಬಂಧದ ಮಾತುಗಳಿಂದ ನನ್ನ ಗಂಟ ಲುಬ್ಬಿ ಬರತೊಡಗಿತ್ತು. ನನ್ನ ಮನಸ್ಸು ನೆನಪಿನಾಳಕ್ಕೆ ಇಳಿಯತೊಡಗಿತ್ತು.
ನಾ ಪಿ.ಯು.ಸಿ.ಯಲ್ಲಿದ್ದಾಗಲೇ ನನ್ನ ಅಕ್ಕನಿಗೆ ಮದುವೆಯಾಗಿ ತನ್ನ ಗಂಡನೊಂದಿಗೆ ಬೆಂಗಳೂರು ಸೇರಿಕೊಂಡಿದ್ದಳು. ತಮ್ಮನೊಬ್ಬ ಮಾಸ್ತರನ ಮಗನಾಗಿ ಎಸ್.ಎಸ್.ಎಲ್.ಸಿ. ಪಾಸಾಗಲು ತಿಣಿಕಾಡುತ್ತಿದ್ದ. ಇದರಿಂದ ಅಪ್ಪನಿಗೆ ನಿರಾಶೆಯಾಗುವುದರ ಜೊತೆಗೆ ಮನಸ್ಸಿಗೂ ಆಘಾತವಾಗಿತ್ತು. ಪಿ.ಯು.ಸಿ. ಮುಗಿಸಿದ ಕೂಡಲೇ ಡಿ.ಎಡ್. ಮಾಡಿಕೊಂಡು ಶಿಕ್ಷಕಿಯಾಗಬೇಕೆಂಬ ನನ್ನ ಅಪ್ಪಾಜಿಯ ಮಾತನ್ನು ನಾ ಚಾಚೂ ತಪ್ಪದೇ ಪಾಲಿಸಿ ಡಿ.ಎಡ್. ಮಾಡಿ ಕೊಂಡೆ. ನನ್ನ ಡಿ.ಎಡ್. ಮುಗಿದು ಒಂದು ವರ್ಷ ವಾದರೂ ನನಗೆ ನೌಕರಿ ಸಿಗದಿದ್ದುದರಿಂದ ಬಿ.ಎ.ಗೆ ಸೇರಲು ಮನಸ್ಸು ಮಾಡಿದೆ. ನಮ್ಮ ಊರಲ್ಲಿ ಬಿ.ಎ. ಕೋಸರ್್ ಇರದಿದ್ದುದರಿಂದ ಬೇರೆ ಊರಿನಲ್ಲಿ, ಹಾಸ್ಟೆಲಿನಲ್ಲಿ ಇದ್ದು ಓದಬೇಕಾಗಿದ್ದುದರಿಂದ ಖಚರ್ು ಹೆಚ್ಚಾಗುತ್ತದೆಯೆಂದು ಅಪ್ಪಾಜಿ ವಿರೋಧಿಸುತ್ತಿದ್ದರೂ ನಾ ಅಮ್ಮನ ವಶೀಲಿಯಿಂದ ಬಿ.ಎ.ಗೆ ಸೇರಿಕೊಂಡೆ. ಬಿ.ಎ. ಮುಗಿಯುತ್ತಲೇ ಬಿ.ಎಡ್.ಗೂ ಸೇರಿಕೊಂಡೆ. ಬಿ.ಎಡ್. ಮುಗಿಸಿ ಎರಡು ವರ್ಷವಾದರೂ ನನಗೆ ಉದ್ಯೋಗ ಸಿಗಲಿಲ್ಲ. ಈ ಮಧ್ಯೆ ಸಂಬಂಧ ಬೆಳೆಸಲು ವರಗಳು ಹುಡುಕಿಕೊಂಡು ಬಂದರೂ, ನಮ್ಮ ಮಗಳಿಗೆ ಉದ್ಯೋಗಕ್ಕೆ ಸೇರುವ ಆಸಕ್ತಿ ಇರು ವುದರಿಂದ ಸಧ್ಯಕ್ಕೆ ಅವಳ ಮದುವೆ ಇಲ್ಲ ಎಂದು ಸಾಗ ಹಾಕುತ್ತಿದ್ದರು ಅಪ್ಪಾಜಿ. ನನ್ನ ವಿದ್ಯಾಭ್ಯಾಸಕ್ಕಾಗಿ ಮಾಡಿದ್ದ ಸಾಲದ ಮೊತ್ತವನ್ನು ನನ್ನ ನೌಕರಿಯ ಪಗಾರದ ಹಣದಿಂದ ತೀರಿಸಬೇಕೆಂದು ಅಪ್ಪಾಜಿಯ ಮನದಲ್ಲಿತ್ತು.
ನನಗಾಗಲೇ 27 ತುಂಬಿದ್ದವು. ಇತ್ತ ಉದ್ಯೋ ಗವೂ ಇಲ್ಲ, ಅತ್ತ ಮದುವೆಯೂ ಇಲ್ಲ. ವಯಸ್ಸಿಗೆ ಸಹಜ ಪ್ರೀತಿ, ಪ್ರೇಮದ ಕನಸುಗಳು ಗರಿಗೆದ ರುತ್ತಿದ್ದರೂ ಸಂಯಮದಿಂದ ಸಹಿಸಿಕೊಂಡಿದ್ದೆ. ಶ್ರೀನಿವಾಸರಾವ್ ಅವರ ಮಗಳಾಗಿದ್ದುದಕ್ಕೆ ನನ್ನನ್ನು ನಾನೇ ಹಳಿದುಕೊಳ್ಳುತ್ತಿದ್ದೆ. ಅಪ್ಪಾಜಿಯ ನಡವಳಿಕೆ ಯಿಂದ ಅಮ್ಮ ಪದ್ಮಾವತಿ ಬಾಯಿ ಸಹ ಅಸಹಾ ಕಳಾಗಿದ್ದಳು. ಅತ್ತ ಗಂಡ, ಇತ್ತ ಮಗಳ ಭವಿಷ್ಯದ ಚಿಂತೆಯಲ್ಲಿ ಬಸವಳಿದಿದ್ದಳು.
ಅಂತೂ ನನಗೆ 27 ತುಂಬಿದ ಸ್ವಲ್ಪೇ ದಿನಗಳಲ್ಲಿ ಈಗ ಕೆಲಸ ಮಾಡುತ್ತಿರುವ ಹಳ್ಳಿಯ ಹೈಸ್ಕೂಲಿನಲ್ಲಿ ನನಗೆ ಶಿಕ್ಷಕಿಯೆಂದು ಕೆಲಸ ಸಿಕ್ಕಾಗ ನಮ್ಮ ಕುಟುಂಬ ದವರಿಗೆಲ್ಲಾ ಹೇಳಲಿಕ್ಕೆ ಬಾರದಷ್ಟು ಸಂತೋಷ ವಾಗಿತ್ತು. ನಮ್ಮ ತಾಲೂಕಿನ ಪಕ್ಕದ ತಾಲೂಕಿನ ಈ ಹಳ್ಳಿ, ತಾಲೂಕು ಕೇಂದ್ರದಿಂದ ಆರು ಕಿ.ಮೀ. ದೂರದಲ್ಲಿದೆ ಅಷ್ಟೆ. ನನ್ನಂತೆಯೇ ತಾಲೂಕು ಕೇಂದ್ರ ದಿಂದ ಸಮೀಪದ ಹಳ್ಳಿಗಳ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಇಬ್ಬರು ಹುಡುಗಿಯರ ಜೊತೆ ತಾಲೂಕು ಕೇಂದ್ರದಲ್ಲಿ ಮನೆ ಮಾಡಿಕೊಂಡು ಶಾಲೆಗೆ ದಿನಾಲೂ ಹೋಗಿ ಬರುವುದು ಶುರು ಮಾಡಿದ್ದೆ. ನನ್ನ ಸಂಬಳದ ಹಣದಲ್ಲಿ ನನ್ನ ಖಚರ್ಿಗೆ ಬೇಕಾಗುವಷ್ಟನ್ನೇ ಇಟ್ಟುಕೊಂಡು ಉಳಿದದ್ದನ್ನು ಅಪ್ಪಾಜಿಗೆ ಕಳುಹಿಸುತ್ತಿದ್ದೆ.
ನಾ ನೌಕರಿಗೆ ಸೇರಿ ಎರಡು ವರ್ಷವಾದರೂ ಅಪ್ಪಾಜಿ ನನ್ನ ಮದುವೆಯ ಬಗ್ಗೆ ಉತ್ಸಾಹ ತೋರಿ ಸಲಿಲ್ಲ. ಈ ಮಧ್ಯೆ ನಮ್ಮ ಶಾಲೆಯಲ್ಲಿ ವಿಜ್ಞಾನದ ಶಿಕ್ಷಕನೆಂದು ಕೆಲಸ ಮಾಡುತ್ತಿದ್ದ ದಿಗಂತ್ ನನ್ನ ಮನಸ್ಸು ತುಂಬತೊಡಗಿದ್ದ. ಆತನ ಮಿತ ಭಾಷಿತ್ವ, ಕಾರ್ಯ ತತ್ಪರತೆ, ಸ್ತ್ರೀಯರ ಬಗ್ಗೆ ಆತನಿಗಿದ್ದ ಗೌರವ ಭಾವನೆಗಳು ನನ್ನನ್ನು ಸೆಳೆಯತೊಡಗಿದ್ದವು. ಅವನ ಎಲ್ಲಾ ಗುಣಗಳು ನನ್ನನ್ನು ಚುಂಬಕದಂತೆ ಆಕಷರ್ಿಸುತ್ತ್ತಿದ್ದುದರಿಂದ ನನಗರಿವಿಲ್ಲದಂತೆ ನಾ ಅವನನ್ನು ಪ್ರೀತಿಸತೊಡಗಿದ್ದೆ. ಅವನ ಮತ್ತು ನನ್ನ ಜಾತಿ ಬೇರೆ ಬೇರೆ ಆಗಿದ್ದುದರಿಂದ ನನ್ನ ಒಂದು ಮನಸ್ಸು ಹಿಂದೇಟು ಹಾಕುತ್ತಿತ್ತು. ಏಕೆಂದರೆ, ನಮ್ಮ ಅಪ್ಪಾಜಿ ಮೊದಲೇ ಕಟ್ಟಾ ಸಂಪ್ರದಾಯಸ್ಥ. ನಾ ಉದ್ಯೋಗಕ್ಕೆ ಸೇರಿದ 3ನೇ ವರ್ಷದಲ್ಲಿ ನನಗೆ ಶಾಲೆಗೆ ಹೋಗಿ ಬರಲು ಅನುಕೂಲವಾಗಲೆಂದು ಬ್ಯಾಂಕಲ್ಲಿ ಲೋನ್ ತೆಗೆದುಕೊಂಡು ಸ್ಕೂಟಿ ಯೊಂದನ್ನು ತೆಗೆದುಕೊಂಡುದುದರಿಂದ ತಿಂಗಳು ತಿಂಗಳು ಅಪ್ಪಾಜಿಗೆ ಕಳುಹಿಸುವ ಹಣದಲ್ಲಿ ಕಡಿಮೆ ಮಾಡಿದುದರಿಂದ ಅಪ್ಪಾಜಿಯ ಮುಂಗೋಪ ಎದುರಿಸಬೇಕಾಯಿತು.
ಹೀಗೇ ನನಗೆ ಮೂವತ್ತು ತುಂಬಿ ಹೋಗಿತ್ತು. ನನ್ನ ಮದುವೆಯ ಬಗ್ಗೆ ಮಾತುಕತೆಗಳೇ ಶುರು ವಾಗಲಿಲ್ಲ. ಕೊನೆಗೆ ನಾನೇ ಗಟ್ಟಿ ನಿಧರ್ಾರ ತೆಗೆದು ಕೊಂಡು ಒಂದು ದಿನ ನನ್ನ ಮನದಿಚ್ಛೆಯನ್ನು ದಿಗಂತ್ನಿಗೆ ತಿಳಿಸಿದ್ದೆ. ದಿಗಂತ್ನೆ ನನ್ನ ಬಗ್ಗೆ ಸಂಪೂರ್ಣ ಒಲವಿದ್ದರೂ ಜಾತಿಯ ಸಲುವಾಗಿ ಹಿಂದೇಟು ಹಾಕತೊಡಗಿದ್ದ. ನಾನು ಬೆನ್ನು ಬಿಡದ ಬೇತಾಳನಂತೆ ಒಂದು ದಿನ ದಿಗಂತ್ನಿಗೆ, ನೋಡು ದಿಗಂತ್, ನಿನಗೀಗಾಲೇ 35 ದಾಟಿದೆ. ಇದೇ ರೀತಿ ನೀ ಮುಂದುವರಿದರೆ ನೀ ಬ್ರಹ್ಮಚಾರಿಯಾಗಿಯೇ ಉಳಿ ಯಬೇಕಾಗುತ್ತದೆ. ನನ್ನನ್ನೂ ಬ್ರಹ್ಮಚಾರಿಣಿಯಾಗಿಯೇ ಉಳಿಸಿ ಬಿಡುವಿ. ನಿನ್ನ ಹೊರತು ನಾ ಬೇರೆ ಯಾರನ್ನೂ ಮದುವೆಯಾಗಲಾರೆ ಎಂದಿದ್ದೆ ತುಂಬಾ ಸೀರಿಯಸ್ಸಾಗಿ. ಕೊನೆಗೆ ನನ್ನ ಮನಸ್ಸಿಗೆ ತನ್ನ ಮನಸ್ಸು ಸೇರಿಸಿದ್ದ ದಿಗಂತ್. ನಮ್ಮಿಬ್ಬರ ಮನದಿಚ್ಛೆಯನ್ನು ಅಪ್ಪಾಜಿ, ಅಮ್ಮನಿಗೆ ತಿಳಿಸಿ, ನಮ್ಮ ಮದುವೆ ನೆರವೇರಿಸಲು ಬೇಡಿಕೊಂಡರೂ ಅವರ ಮನಸ್ಸು ಕರಗಲಿಲ್ಲ. ಮುಂದೆ ನಮ್ಮ ಮದುವೆಗೆ ಸಾಕಷ್ಟು ಅಡೆ ತಡೆಗಳನ್ನು ಒಡ್ಡಿದರೂ ನಾವು ಅವೆಲ್ಲವುಗಳನ್ನು ಧೈರ್ಯದಿಂದ ಎದುರಿಸಿ ನಾನು, ದಿಗಂತ್ ಸತಿ ಪತಿಗಳಾದೆವು. ನಾ ನೆನಪಿನ ಪುಟಗಳನ್ನು ತಿರುವಿ ಹಾಕಿದ್ದೆ.
ದಿಗಂತ್ನ ಉದಾತ್ತ ವಿಚಾರಗಳು, ದೊಡ್ಡ ಮನಸ್ಸು ನನ್ನನ್ನು ಭಾವೋದ್ವೇಗಕ್ಕೆ ಒಳಗಾಗುವಂತೆ ಮಾಡಿದ್ದವು. ನನಗರಿಯದಂತೆ ನನ್ನ ಕಣ್ಣಲ್ಲಿ ನೀರಿ ಳಿಯತೊಡಗಿದ್ದವು. ನನ್ನ ಅವಸ್ಥೆಯನ್ನು ನೋಡಿದ ದಿಗಂತ್ನ ಮನಸ್ಸಿಗೆ ಸಹಿಸಲಸಾಧ್ಯವಾದ ನೋವು ಆಗುತ್ತಿದೆಯೆಂದು ಅವನ ಮುಖ ನೋಡಿದರೇ ಅನಸುತ್ತಿತ್ತು. ನಾವಿಬ್ಬರೇ ಇದ್ದರೆ ಪರಸ್ಪರರು ತಬ್ಬಿ ಹಿಡಿದುಕೊಂಡು ಸಮಾಧಾನ ಮಾಡಿಕೊ ಳ್ಳುತ್ತಿದ್ದೆವೋ ಏನೋ? ಆದರೆ ನಮ್ಮೊಂದಿಗೆ ಅಂಕಲ್ ಇದ್ದರಲ್ಲ. ಅಷ್ಟರಲ್ಲಿ ಅಂಕಲ್, ನೋಡಮ್ಮಾ ಭಾರತಿ, ನಿನ್ನ ಮನದ ಭಾವನೆ ಗಳನ್ನು ನಾ ಓದಬಲ್ಲೆ. ನಿನ್ನ ತಂದೆಗೆ ಅರ್ಥವಾದರೆ ಒಳ್ಳೆಯದು. ಎನಿವೇ ನಿನಗೆ ದಿಗಂತ್ನಂಥಹ ವಿಶಾಲ ಹೃದಯಿ ಗಂಡ ಸಿಕ್ಕಿರುವುದಕ್ಕೆ ನನಗಂತೂ ಹೇಳಲಾರದಷ್ಟು ಸಂತೋಷವಾಗುತ್ತಿದೆ. ನಿಮ್ಮ ದಾಂಪತ್ಯ ಜೀವನ ಸುಂದರವೂ, ಸುಖಕರವೂ, ಅರ್ಥ ಪೂರ್ಣವೂ ಆಗಿರಲಿ ಎಂದು ನಾ ಹಾರೈಸಿ, ಆಶೀರ್ವದಿಸುವೆ.
ಪಟ್ಟಬದ್ಧ ಹಿತಾಸಕ್ತಿಗಳು ಜಾತಿ ಪದ್ಧತಿಯನ್ನು ಪೋಷಿಸಿಕೊಂಡು ಬಂದಿವೆ ನಮ್ಮ ದೇಶದಲ್ಲಿ. ಜಾತಿಯ ಪದ್ಧತಿಯನ್ನು ಬೇರುಸಹಿತ ಕಿತ್ತೆಸೆಯುವುದರ ಸಲು ವಾಗಿ ಹನ್ನೆರಡನೇ ಶತಮಾನದಲ್ಲಿ ಕ್ರಾಂತಿಕಾರಿ ಆಂ ದೋಲನ ನಡೆದರೂ ಈಗ 21ನೆಯ ಶತಮಾನದ ಲ್ಲೂ ಜಾತಿಯ ಭೂತದ ಅಟ್ಟಹಾಸ ಮುಂದುವರಿ ದಿರುವುದು ತುಂಬಾ ವಿಷಾದಕರ ಎಂದು ನನ್ನ ಅನಿ ಸಿಕೆ. ನೀವಿಬ್ಬರೂ ಜಾತಿಯನ್ನು ಮೆಟ್ಟಿ ನಿಂತಿರುವಿರಿ. ಆದರ್ಶ ದಂಪತಿಗಳಾಗಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿರಿ ಎಂದು ಅಂಕಲ್ ಭಾವೋದ್ವೇಗದಿಂದ ಹೇಳು ತ್ತಿದ್ದಂತೆ ನಾನು, ದಿಗಂತ್ ಇಬ್ಬರೂ ಅವರ ಪಾದ ಗಳಿಗೆರಗಿ ಆಶೀವರ್ಾದ ಪಡೆದೆವು ಹೊಸ ಹುರು ಪಿನಿಂದ.ಇಬ್ಬರ ಮುಖದಲ್ಲೂ ಸಂತಸದ ಅಲೆಗಳಿದ್ದವು.
ಎಸ್. ಶೇಖರಗೌಡ,
ಮುಖ್ಯ ವ್ಯವಸ್ಥಾಪಕರು,
ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಆರ್.ಸಿ.ಪಿ.ಸಿ., (9448989332)

No comments:
Post a Comment
Thanku