ಅಪ್ಪಟ ಜಾನಪದ ಕವಿ, ರಂಗಕಮಿ೯, ನಾಟಕಕಾರ, ಕಾದಂಬರಿಕಾರ, ನಾಡು-ನುಡಿ ಸಂಸ್ಕೃತಿಯ ಚಿಂತಕ, ಚಲನಚಿತ್ರ ನಿದೇರ್ಶಕ, ಉತ್ತಮ ಹಾಡುಗಾರ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಿಲ್ಪಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ
ಚಂದ್ರಶೇಖರ ಕಂಬಾರ್ಗೆ ರಾಷ್ಟ್ರೀಯ ಮಟ್ಟದ ಸಾಹಿತ್ಯ ವಲಯದ ಅತ್ಯುನ್ನತ ಪ್ರಶಸ್ತಿಯಾಗಿರುವ ಜ್ಞಾನಪೀಠ ಪ್ರಶಸ್ತಿಯ ಗರಿ.
ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಮುಖ ವೇದಿಕೆಗಳಲ್ಲಿ ಚಿರಪರಿಚಿತರಾಗಿರುವ ಚಂದ್ರಶೇಖರ ಕಂಬಾರ್ ಬೆಂಗಳೂರಿನಂತಹ ಕಾಂಕ್ರೀಟ್ ಜಂಗಲಿನಲ್ಲಿ ವಾಸಿಸುತ್ತಿದ್ದರೂ, ಎದೆಯಾಳದಲ್ಲಿ ಮಾನವ ಪ್ರೀತಿಯನ್ನು, ಮೆದುಳಿನಲ್ಲಿ ಶೋಷಿತ, ದಲಿತ ಹೋರಾಟಗಳನ್ನು ಅದುಮಿಟ್ಟುಕೊಂಡ ಮಹಾನ್ ಚೇತನ.ಬೆಂಗಳೂರಿನ ಕಾಲೇಜಿನ ಪ್ರಾದ್ಯಾಪಕರಾಗಿ, ಹಂಪಿ ವಿವಿಯನ್ನು ತುಂಬಾ ಅಚ್ಚುಕಟ್ಟಾಗಿ ಬೆಳೆಸಿ, ತಮ್ಮ ಕಲಾನೈಪುಣ್ಯತೆಯನ್ನು ಕನ್ನಡ ರಂಗಭೂಮಿ ಹಾಗೂ ಚಲನಚಿತ್ರಗಳಿಗೆ ಪಸರಿಸಿದ ಕಂಬಾರ ಮೂಲತಃ ಹಳ್ಳಿಗಾಡಿನ ಮನುಷ್ಯ.
ಬೆಳಗಾವಿ ಜಿಲ್ಲೆಯ ಕಂಬಾರ ಬಸವಣ್ಣೆಪ್ಪ ಕಂಬಾರ, ಚೆನ್ನವ್ವ ದಂಪತಿಯ ಪುತ್ರರಾಗಿ ಜನಿಸಿದ ಚಂದ್ರಶೇಖರ ಕಂಬಾರ ಕಡುಬಡತನದ ಬೇಗೆಯಲ್ಲಿ ಮಿಂದೆದ್ದು ಬಂದ ಅಪ್ಪಟ ಚಿನ್ನ. ಹಳ್ಳಿಗಾಡಿನಿಂದ ಬಂದು ಇಷ್ಟು ಎತ್ತರಕ್ಕೆ ಏರಿರುವ ಕಂಬಾರ ಪ್ರಸ್ತುತ ಗ್ರಾಮೀಣ ಪ್ರತಿಭೆಗಳಿಗೆಲ್ಲ ಶ್ರೇಷ್ಟ ಮಾದರಿ.
ಡಾ.ಚಂದ್ರಶೇಖರ ಕಂಬಾರಗೆ ಸಂದಿರುವ ಜ್ಞಾನಪೀಠ ಪ್ರಶಸ್ತಿಯ ಸಂತಸವನ್ನು ಆರುವರೆಕೋಟಿ ಕನ್ನಡಿಗರೆಲ್ಲರೂ, ಸವಿಯಲು ಪ್ರಮುಖವಾಗಿ 2 ಕಾರಣಗಳಿವೆ.
13 ವರ್ಷಗಳ ಹಿಂದೆ (1998) ಗಿರೀಶ್ ಕಾನಾ೯ಡ೯ಗೆ ಈ ಪ್ರಶಸ್ತಿ ಲಭಿಸಿತ್ತು. ಇದೇ ಸಂದರ್ಭದಲ್ಲಿ ಭಾರತೀಯ ಭಾಷೆಗಳಲ್ಲಿ ಅತ್ಯಂತ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ಕನ್ನಡಿಗರ ಸಂತಸವನ್ನು ಇಮ್ಮಡಿಗೊಳಿಸಿದೆ. ರಾಷ್ಟ್ರೀಯ ಭಾಷೆ ಹಿಂದಿಗೆ ಏಳು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿದ್ದರೆ, ಆರುವರೆ ಕೋಟಿ ಜನತೆಯ ಮಾತೃಭಾಷೆ ಹಾಗೂ ಪ್ರಾದೇಶಿಕ ಭಾಷೆಯಾಗಿರುವ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳ ಮನ್ನಣೆ.
75ರ ಹರೆಯದ ಚಂದ್ರಶೇಖರ ಕಂಬಾರ ವಂಶ ಪಾರಂಪರ್ಯ ವೃತ್ತಿಯಾದ ಕಂಬಾರಿಕೆಯೊಂದಿಗೆ, ಸಾರಸ್ವತ ಲೋಕದ ಕಮ್ಮಾರಿಕೆಯನ್ನು ಅರ್ಥ ಪೂರ್ಣವಾಗಿ ನಿರ್ವಹಿಸಿದರು. ಪ್ರಾಥಮಿಕ ಶಿಕ್ಷಣವನ್ನು ಘೋಡಗೇರಿಯಲ್ಲಿ ಪೂರೈಸಿ, ಬೆಳಗಾವಿಯ ಲಿಂಗರಾಜು ಕಾಲೇಜಿನಿಂದ ಬಿ.ಎ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಎಂ.ಎ ಕನ್ನಡ ಪದವಿಯನ್ನು ಪಡೆದರು.
ಧಾರವಾಡದಲ್ಲಿ ಎಂ.ಎಂ ಕಲ್ಬುಗಿ೯, ಡಾ.ಸಿದ್ದ ಲಿಂಗ ಪಟ್ಟಣಶೆಟ್ಟಿ, ಆಂಗ್ಲಭಾಷಾ ಪ್ರಾದ್ಯಾಪಕ ಡಾ.ಗಿರಡ್ಡಿ ಗೋವಿಂದರಾಜರ್ ಕ್ಲಾಸ್ಮೇಟ್ಗಳಾಗಿ, ದೇಶಿ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದರು.
ಧಾರವಾಡದಲ್ಲಿ ಕಂಬಾರರಿಗೆ ಆದ ನಿರಾಸೆ, ಅವರ ಜೀವನದ ದಿಕ್ಕನ್ನೆ ಬದಲಿಸಿತು. ಕರ್ನಾಟಕ ಕಾಲೇಜಿನ ಉಪನ್ಯಾಸಕ ಹುದ್ದೆ, ತಮ್ಮ ಮತ್ತೊಬ್ಬ ಗೆಳೆಯನ ಪಾಲಾದಾಗ ಬೆಂಗಳೂರಿನತ್ತ ಪಯಣ ಬೆಳೆಸಿ, ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪನವರ ನೆಚ್ಚಿನ ಶಿಷ್ಯರಾದರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾದ್ಯಾಪಕರಾಗಿ ನೇಮಕ ಗೊಂಡ ಕಂಬಾರರಿಗೆ ಬೆಂಗಳೂರಿನ ಬಹುಸಂಸ್ಕೃತಿ, ವಾತಾವರಣ ಬಹುಪ್ರತಿಭೆಯ ಅನಾವರಣಕ್ಕೆ ಸಾಕ್ಷಿಯಾಯಿತು.
ಗಡಿನಾಡು ಹುಕ್ಕೇರಿ ತಾಲ್ಲೂಕಿನ ಘೋಡಗೇರಿ ಯಿಂದ ಬೆಳಗಾಂವ್, ಧಾರವಾಡ ಬೆಂಗಳೂರಿನ ವರೆಗೆ ಕಂಬಾರರು ನಡೆದು ಬಂದ ದಾರಿ ಕೇವಲ ಸಾಧನೆಯ ಮಾರ್ಗ ಮಾತ್ರ ಆಗದೇ, ಗ್ರಾಮೀಣ ಪ್ರದೇಶದ ಯುವಜನಾಂಗಕ್ಕೆ ರೋಮಂಚನಕಾರಿ ಅನುಭವದ ಪ್ರೇರಣಿಯನ್ನು ಸೃಷ್ಟಿಸುವ ಯಶಸ್ವಿ ಕಥಾನಾಯಕನ ಯಶೋಗಾಥೆಯಾಗಿದೆ.
ಹೇಳತೇನಕೇಳ, ತಕರಾರಿನವರು, ಸಾವಿರದ ನೆರಳು ಹಾಗೂ ಬೆಳ್ಳಿಮೀನು ಶಿಷಿ೯ಕೆಯ ನಾಲ್ಕು ಕವನ ಸಂಕಲನಗಳು, ಜೈಸಿದ ನಾಯಕ, ಸಣ್ಣಕಥಾ ಸಂಕ ಲನ, ಜಿ.ಕೆ ಮಾಸ್ತಾರರ ಪ್ರಣಯ ಪ್ರಸಂಗ, ಕರಿಮಾ ಯಿ, ಸಿಂಗಾರೆವ್ವ ಮತ್ತು ಅರಮನೆ ಮುಂತಾದ ಕಾದಂಬರಿಗಳು, ಜೋಕುಮಾರ ಸ್ವಾಮಿ, ಚಾಳೇಶ, ಕಾಡುಕುದುರೆ, ನಾಯಿಕಥೆ, ಹರಕೆಯ ಕುರಿ, ನಾಯಿ ಕಥೆ, ಹರಕೆಯ ಕುರಿ, ಅಂಗಿಮ್ಯಾಲಂಗಿ, ಸಿರಿಸಂಪಿಗೆ, ಮಹಾಮಾಯಿ, ಶಿವರಾತ್ರಿಗಳಂತಹ ಹತ್ತಕ್ಕೂ ಹೆಚ್ಚು ನಾಟಕಗಳು. ಉತ್ತರಕನಾ೯ಟಕ ಜನಪದ ರಂಗ ಭೂಮಿ ಕುರಿತು ಮಹಾಪ್ರಭಂದವನ್ನು ಸೃಷ್ಠಿಸಿರುವ ಚಂದ್ರಶೇಖರ ಕಂಬಾರ ಸಾಹಿತ್ಯ ಕ್ಷೇತ್ರದ ನೈಜ ಆರಾಧಕ.
ಚಂದ್ರಶೇಖರ ಕಂಬಾರ ಮತ್ತು ಕನ್ನಡ ಬೆಳ್ಳಿತೆರೆಯ ಮಧ್ಯೆ ಅವಿನಾಭಾವ ಸಂಬಂಧ. ಕಂಬಾರರು ರಚಿಸಿ ರುವ ಕರಿಮಾಯಿ, ಕಾಡುಕುದುರೆ ಹಾಗೂ ಸಂಗೀತ ಚಲನಚಿತ್ರಗಳು ಜನಪ್ರಿಯವಾಗಿ ಅಪ್ಪಟ ಗ್ರಾಮೀಣ ಶೈಲಿಯ ನೈಜ ಜನಪದ ಪರಂಪರೆಯ ಪ್ರತಿಬಿಂಬಗಳಾಗಿವೆ. ಜಿ.ಕೆ ಮಾಸ್ತಾರರ ಪ್ರಣಯ ಪ್ರಸಂಗ ಕಿರುತೆರೆಯ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.
ಸೂಟುಬೂಟಿನಲ್ಲಿ ಮಿರ್ರನೇ ಮಿಂಚುವ ಕಂಬಾರ, ಕಚ್ಚೆಪಂಜೆ ಧರಿಸಿ ತಲೆಗೆ ರುಮಾಲು ಸುತ್ತಿಕೊಂಡು ತಮ್ಮ ನೆಚ್ಚಿನ ಜನಪದ ಗೀತೆಯನ್ನು ಹಾಡಲಾ ರಂಭಿಸಿದರೆ, ಸಭೆ ಮತ್ತು ಸಭಾಂಗಣವನ್ನೆಲ್ಲ ಮರೆತು ಇಡೀ ಪ್ರೇಕ್ಷಕವರ್ಗವನ್ನು ಸಮ್ಮೋಹಿನಿ ಮೋಡಿ ಗೊಳಪಡಿಸುತ್ತಾರೆ. ಕಂಬಾರರ ಹಾಡುಗಾರಿಕೆಯನ್ನು ಆಲಿಸುವುದು ಜೀವನದ ಒಂದು ರೋಮಾಂಚ ನಕಾರಿ ಅನುಭವವೆಂದು ಹಳೆಯ ಸಂಗಾತಿಗಳು ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ಅವರೇ ರಚಿಸಿದ ಒಂದು ಜನಪ್ರಿಯಗೀತೆ ಹೋರಾಟದ ಕಿಚ್ಚನ್ನು ಉದ್ದೀಪನಗೊಳಿಸುತ್ತದೆ. ಮರೆತೆನೆಂದರೆ ಮರೆಯಲಿ ಹ್ಯಾಂಗ್ ಎಂಬ ಹಾಡು ಮಾವೋತ್ಸೇತುಂಗ್ ಕುರಿತು ಬರೆಯಲಾಗಿದೆ.
ಸಾಹಿತ್ಯ ವಲಯ, ಸಾಹಿತ್ಯ ವೇದಿಕೆ ಹಾಗೂ ಸಾಹಿತ್ಯ ಸಮ್ಮೇಳನಗಳಲ್ಲಿ ಕಂಬಾರರು ತಮ್ಮ ಸ್ವರಚಿತ ಕವನಗಳನ್ನು ಓದುವದಕ್ಕಿಂತ ಸುಶ್ರಾವ್ಯವಾಗಿ ಹಾಡುವ ಸದಭಿರುಚಿಯನ್ನೇ ಪ್ರೇಕ್ಷಕ ವರ್ಗ ಇಷ್ಟಪಡುತ್ತದೆ. ಕನಾ೯ಟಕ ಜಾನಪದ ಸಿರಿಸಂಪಿಗೆಯ ಸಿರಿಗಂಧವನ್ನು ತಮ್ಮ ಕಾವ್ಯದು ದ್ದಕ್ಕೂ ಪ್ರವಹಿಸುವ ಕಂಬಾರರ ಜಾನಪದ ಆಸಕ್ತಿ ಕನ್ನಡ ಸಾಹಿತ್ಯದ ಪರಂಪರೆಗೆ ಸಂದ ವಿಶಿಷ್ಟ ಗೌರವವಾಗಿದೆ.
ಭಾರತದ ಪ್ರಮುಖ ಪ್ರಾದೇಶಿಕ ಭಾಷೆ ಯಾಗಿರುವ ಕನ್ನಡಕ್ಕೆ ಐದು ಸಾವಿರ ವರ್ಷಗಳ ಇತಿಹಾಸ, ಮೂರು ಸಾವಿರ ವರ್ಷಗಳ ಸಾಂಸ್ಕೃತಿಕ ಪರಂಪರೆ, ಒಂದು ಸಾವಿರ ವರ್ಷಗಳ ಸಾಹಿತ್ಯ ಪರಂಪರೆಯನ್ನು ಹೊಂದಿರುವ ಶ್ರೀಮಂತ ಭಾಷೆ ಯಾಗಿದೆ.
44ವರ್ಷಗಳ ಹಿಂದೆ ಶುಭಾರಂಭಗೊಂಡ (1967) ಪ್ರಪ್ರಥಮ ಜ್ಞಾನಪೀಠ ಪರಂಪರೆಗೆ ನಾಂದಿ ಹಾಡಿದವರು ರಾಷ್ಟ್ರಕವಿ ಕುವೆಂಪು. ಮಲೆನಾಡಿನ ಜೀವನ ಸಂಸ್ಕೃತಿಯನ್ನು ತಮ್ಮ ಸಕಲ ಸಾಹಿತ್ಯ ಕೃತಿಗಳುದ್ದಕ್ಕೂ ಸಾರುವ ಕುವೆಂಪುರವರ ಮಹಾ ಕಾವ್ಯ ಶ್ರೀರಾಮಾಯಣ ದರ್ಶನಂ ಕೃತಿಗೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿ ಲಭಿಸಿತು.
2ನೇ ಜ್ಞಾನಪೀಠ ಪ್ರಶಸ್ತಿ ಆರು ವರ್ಷಗಳ ನಂತರ (1973) ದ.ರಾ.ಬೇಂದ್ರೆಯವರ ಮಹಾ ಕಾವ್ಯ ನಾಕು ತಂತಿಗೆ ಲಭಿಸಿತು. 3ನೇ ಜ್ಞಾನಪೀಠ ಪ್ರಶಸ್ತಿ ಕಡಲ ತೀರದ ಭಾರ್ಗವರೆಂದೆ ಖ್ಯಾತಿ ಗಳಿಸಿದ ಡಾ.ಶಿವರಾಮ ಕಾರಂತರ ಜನಪ್ರಿಯ ಕಾದಂಬರಿ ಮೂಕಜ್ಜಿಯ ಕನಸುಗಳು (1977) ಕೃತಿಯ ಪಾಲಾಯಿತು. 4ನೇಯ ಜ್ಞಾನಪೀಠ ಪ್ರಶಸ್ತಿಯೂ ಕನ್ನಡದ ಆಸ್ತಿ ಎಂದೇ ಪರಿಗಣಿಸಲ್ಪಟ್ಟ ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಚಿಕ್ಕವೀರ ರಾಜೇಂದ್ರ (1983) ಕೃತಿ ಪಡೆದುಕೊಂಡಿತು.
7ವರ್ಷಗಳ ಅಂತರದಲ್ಲಿ (1990) ಹಿರಿಯ ತತ್ವಜ್ಞಾನಿ, ಪ್ರಾದ್ಯಾಪಕ ಡಾ.ವಿ.ಕೃ ಗೋಕಾಕರ "ಭಾರತ ಸಿಂಧು ರಶ್ಮೀ" ಪಡೆದುಕೊಂಡಿತು. ಮತ್ತೇರಡು ಜ್ಞಾನಪೀಠ ಪ್ರಶಸ್ತಿಗಳನ್ನು ಸಮಗ್ರ ಸಾಹಿತ್ಯಕ್ಕಾಗಿ ಡಾ.ಯು.ಆರ್ ಅನಂತಮೂರ್ತಿ (1994) ಹಾಗೂ ರಂಗಕಮಿ೯, ಸಾಹಿತಿ ಗಿರೀಶ್ ಕಾನಾ೯ಡ್ ಮುಡಿಗೇರಿದವು.
ಪ್ರಸ್ತುತ 8ನೇ ಜ್ಞಾನಪೀಠ ಪ್ರಶಸ್ತಿಯ ಗರಿಯನ್ನು ತಮ್ಮ ಮುಡಿಗೇರಿಸಿಕೊಂಡಿರುವ ಡಾ.ಚಂದ್ರಶೇಖರ ಕಂಬಾರರು ವರಕವಿ ದ.ರಾ ಬೇಂದ್ರೆಯವರ ಕಾವ್ಯ ಸತ್ವದೊಂದಿಗೆ ಜಾನಪದ ಸೊಗಡನ್ನು ಮೈಗೂಡಿಸಿ ಕೊಂಡಿದ್ದಾರೆ. ಮುನ್ನಡೆದಿರುವ ಕನ್ನಡ ಕುಲಕೋಟಿಯ ಸರ್ವಶ್ರೇಷ್ಠ ಸಾಹಿತಿಗಳ ಹೆಜ್ಜೆಯಲ್ಲಿ ಹೊಸ ಬೆಳಕನ್ನು ಕಾಣುತ್ತಿರುವ ಡಾ.ಚಂದ್ರಶೇಖರ ಕಂಬಾರರು ವೈವಿದ್ಯಮಯ ಸಾಹಿತ್ಯದಲ್ಲಿ ಹೊಸತನದೊಂದಿಗೆ ತಾಜಾತನವನ್ನು ಕಾಣಲು ಸಾಧ್ಯ.
ಡಾ.ಚಂದ್ರಶೇಖರ ಕಂಬಾರರ 8ನೇ ಜ್ಞಾನಪೀಠ ಪ್ರಶಸ್ತಿಯನ್ನು ಕನಾ೯ಟಕದ ಜನತೆ ತುಂಬುಹೃದಯದಿಂದ ಸ್ವಾಗತಿಸುತ್ತಿರುವ ಸಂದರ್ಭದಲ್ಲಿ ಉತ್ತರಕನಾ೯ಟಕ ಜನತೆ ವಿಶಿಷ್ಠ ರೀತಿಯಲ್ಲಿ ಆನಂದಿ ಸುತ್ತಿದ್ದಾರೆ. ಇಲಿಯವರೆಗೆ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮಲೆನಾಡಿನ ಸಾಹಿತಿಗಳಾದ ಕುವೆಂಪು, ಕಾರಂತ, ಮಾಸ್ತಿ ಹಾಗು ಅನಂತಮೂರ್ತಿಯವರಿಗೆ ಸಂದಿದ್ದರೆ, ಉಳಿದ ಮೂರು ಪ್ರಶಸ್ತಿಗಳನ್ನು ಹಾವೇರಿ ಜಿಲ್ಲೆಯ ಸವಣೂರಿನ ಡಾ.ವಿ.ಕೃ ಗೋಕಾಕ, ಧಾರವಾಡದ ದ.ರಾ ಬೇಂದ್ರೆ ಹಾಗೂ ಗಿರೀಶ್ ಕಾನಾ೯ಡಗೆ ಲಭಿಸಿದೆ. ಈ ಬಾರಿ ಚಂದ್ರಶೇಖರ ಕಂಬಾರರ ಜ್ಞಾನಪೀಠ ಬಯಲು ಸೀಮೆಯ ಗ್ರಾಮೀಣ ಜನರ ಸಂತಸವನ್ನು ಇಮ್ಮಡಿಗೊಳಿಸಿದೆ.
ಜ್ಞಾನಪೀಠದ ಗೌರವದೊಂದಿಗೆ ಚಂದ್ರಶೇಖರ ಕಂಬಾರ ಭಾರತೀಯ ರಾಷ್ಟ್ರೀಯ ಭಾಷೆಯೊಂದಿಗೆ ಇತರ ಸಕಲ ಪ್ರಾದೇಶಿಕಗಳನ್ನು ಮೀರಿ ಹೊಸ ವಿನೂತನ ದಾಖಲೆಯನ್ನು ನಿಮರ್ಿಸಿದ ಶುಭ ಸಂದರ್ಭದಲ್ಲಿ ಆರುವರೆ ಕೋಟಿ ಕನ್ನಡಿಗರ ಶುಭಕಾಮನೆಗಳು.

ಬೆಂಗಳೂರು ವಿವಿ ಪ್ರಾದ್ಯಾಪಕರಾಗಿ, ಕನಾ೯ಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ, ಹಂಪಿ ಕನ್ನಡ ವಿವಿಯ ಪ್ರಪ್ರಥಮ ಕುಲಪತಿಯಾಗಿ, ಕನ್ನಡ ಜಾನಪದ ವಿಶ್ವಕೋಶದ ಸಂಪಾದಕರಾಗಿ, ನವದೆಹಲಿಯ ರಾಷ್ಟ್ರೀಯ ರಂಗಭೂಮಿಯ ಸಂಚಾಲಕರಾಗಿ, ರಾಜ್ಯದ ಜಾನಪದ, ಯಕ್ಷಗಾನ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಮೈಸೂರಿನ ರಂಗಾಯ ಣದ ಅಧ್ಯಕ್ಷರಾಗಿ ಅಮೇರಿಕಾದ ಚಿಕಾಗೋ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಡಾ.ಚಂದ್ರಶೇಖರ ಕಂಬಾರ ತಾವು ಕಾಯಕ ಮಾಡಿದ ಸಂಸ್ಥೆಗಳ ಗೌರವವನ್ನು ಆಗಸದೆತ್ತರಕ್ಕೆ ಹೆಚ್ಚಿಸಿದ್ದಾರೆ.
ಹೇಳತೇನಕೇಳ, ತಕರಾರಿನವರು, ಸಾವಿರದ ನೆರಳು ಹಾಗೂ ಬೆಳ್ಳಿಮೀನು ಶಿಷಿ೯ಕೆಯ ನಾಲ್ಕು ಕವನ ಸಂಕಲನಗಳು, ಜೈಸಿದ ನಾಯಕ, ಸಣ್ಣಕಥಾ ಸಂಕ ಲನ, ಜಿ.ಕೆ ಮಾಸ್ತಾರರ ಪ್ರಣಯ ಪ್ರಸಂಗ, ಕರಿಮಾ ಯಿ, ಸಿಂಗಾರೆವ್ವ ಮತ್ತು ಅರಮನೆ ಮುಂತಾದ ಕಾದಂಬರಿಗಳು, ಜೋಕುಮಾರ ಸ್ವಾಮಿ, ಚಾಳೇಶ, ಕಾಡುಕುದುರೆ, ನಾಯಿಕಥೆ, ಹರಕೆಯ ಕುರಿ, ನಾಯಿ ಕಥೆ, ಹರಕೆಯ ಕುರಿ, ಅಂಗಿಮ್ಯಾಲಂಗಿ, ಸಿರಿಸಂಪಿಗೆ, ಮಹಾಮಾಯಿ, ಶಿವರಾತ್ರಿಗಳಂತಹ ಹತ್ತಕ್ಕೂ ಹೆಚ್ಚು ನಾಟಕಗಳು. ಉತ್ತರಕನಾ೯ಟಕ ಜನಪದ ರಂಗ ಭೂಮಿ ಕುರಿತು ಮಹಾಪ್ರಭಂದವನ್ನು ಸೃಷ್ಠಿಸಿರುವ ಚಂದ್ರಶೇಖರ ಕಂಬಾರ ಸಾಹಿತ್ಯ ಕ್ಷೇತ್ರದ ನೈಜ ಆರಾಧಕ.
ಚಂದ್ರಶೇಖರ ಕಂಬಾರ ಮತ್ತು ಕನ್ನಡ ಬೆಳ್ಳಿತೆರೆಯ ಮಧ್ಯೆ ಅವಿನಾಭಾವ ಸಂಬಂಧ. ಕಂಬಾರರು ರಚಿಸಿ ರುವ ಕರಿಮಾಯಿ, ಕಾಡುಕುದುರೆ ಹಾಗೂ ಸಂಗೀತ ಚಲನಚಿತ್ರಗಳು ಜನಪ್ರಿಯವಾಗಿ ಅಪ್ಪಟ ಗ್ರಾಮೀಣ ಶೈಲಿಯ ನೈಜ ಜನಪದ ಪರಂಪರೆಯ ಪ್ರತಿಬಿಂಬಗಳಾಗಿವೆ. ಜಿ.ಕೆ ಮಾಸ್ತಾರರ ಪ್ರಣಯ ಪ್ರಸಂಗ ಕಿರುತೆರೆಯ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.
ಸೂಟುಬೂಟಿನಲ್ಲಿ ಮಿರ್ರನೇ ಮಿಂಚುವ ಕಂಬಾರ, ಕಚ್ಚೆಪಂಜೆ ಧರಿಸಿ ತಲೆಗೆ ರುಮಾಲು ಸುತ್ತಿಕೊಂಡು ತಮ್ಮ ನೆಚ್ಚಿನ ಜನಪದ ಗೀತೆಯನ್ನು ಹಾಡಲಾ ರಂಭಿಸಿದರೆ, ಸಭೆ ಮತ್ತು ಸಭಾಂಗಣವನ್ನೆಲ್ಲ ಮರೆತು ಇಡೀ ಪ್ರೇಕ್ಷಕವರ್ಗವನ್ನು ಸಮ್ಮೋಹಿನಿ ಮೋಡಿ ಗೊಳಪಡಿಸುತ್ತಾರೆ. ಕಂಬಾರರ ಹಾಡುಗಾರಿಕೆಯನ್ನು ಆಲಿಸುವುದು ಜೀವನದ ಒಂದು ರೋಮಾಂಚ ನಕಾರಿ ಅನುಭವವೆಂದು ಹಳೆಯ ಸಂಗಾತಿಗಳು ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ಅವರೇ ರಚಿಸಿದ ಒಂದು ಜನಪ್ರಿಯಗೀತೆ ಹೋರಾಟದ ಕಿಚ್ಚನ್ನು ಉದ್ದೀಪನಗೊಳಿಸುತ್ತದೆ. ಮರೆತೆನೆಂದರೆ ಮರೆಯಲಿ ಹ್ಯಾಂಗ್ ಎಂಬ ಹಾಡು ಮಾವೋತ್ಸೇತುಂಗ್ ಕುರಿತು ಬರೆಯಲಾಗಿದೆ.
ಸಾಹಿತ್ಯ ವಲಯ, ಸಾಹಿತ್ಯ ವೇದಿಕೆ ಹಾಗೂ ಸಾಹಿತ್ಯ ಸಮ್ಮೇಳನಗಳಲ್ಲಿ ಕಂಬಾರರು ತಮ್ಮ ಸ್ವರಚಿತ ಕವನಗಳನ್ನು ಓದುವದಕ್ಕಿಂತ ಸುಶ್ರಾವ್ಯವಾಗಿ ಹಾಡುವ ಸದಭಿರುಚಿಯನ್ನೇ ಪ್ರೇಕ್ಷಕ ವರ್ಗ ಇಷ್ಟಪಡುತ್ತದೆ. ಕನಾ೯ಟಕ ಜಾನಪದ ಸಿರಿಸಂಪಿಗೆಯ ಸಿರಿಗಂಧವನ್ನು ತಮ್ಮ ಕಾವ್ಯದು ದ್ದಕ್ಕೂ ಪ್ರವಹಿಸುವ ಕಂಬಾರರ ಜಾನಪದ ಆಸಕ್ತಿ ಕನ್ನಡ ಸಾಹಿತ್ಯದ ಪರಂಪರೆಗೆ ಸಂದ ವಿಶಿಷ್ಟ ಗೌರವವಾಗಿದೆ.
ಭಾರತದ ಪ್ರಮುಖ ಪ್ರಾದೇಶಿಕ ಭಾಷೆ ಯಾಗಿರುವ ಕನ್ನಡಕ್ಕೆ ಐದು ಸಾವಿರ ವರ್ಷಗಳ ಇತಿಹಾಸ, ಮೂರು ಸಾವಿರ ವರ್ಷಗಳ ಸಾಂಸ್ಕೃತಿಕ ಪರಂಪರೆ, ಒಂದು ಸಾವಿರ ವರ್ಷಗಳ ಸಾಹಿತ್ಯ ಪರಂಪರೆಯನ್ನು ಹೊಂದಿರುವ ಶ್ರೀಮಂತ ಭಾಷೆ ಯಾಗಿದೆ.
44ವರ್ಷಗಳ ಹಿಂದೆ ಶುಭಾರಂಭಗೊಂಡ (1967) ಪ್ರಪ್ರಥಮ ಜ್ಞಾನಪೀಠ ಪರಂಪರೆಗೆ ನಾಂದಿ ಹಾಡಿದವರು ರಾಷ್ಟ್ರಕವಿ ಕುವೆಂಪು. ಮಲೆನಾಡಿನ ಜೀವನ ಸಂಸ್ಕೃತಿಯನ್ನು ತಮ್ಮ ಸಕಲ ಸಾಹಿತ್ಯ ಕೃತಿಗಳುದ್ದಕ್ಕೂ ಸಾರುವ ಕುವೆಂಪುರವರ ಮಹಾ ಕಾವ್ಯ ಶ್ರೀರಾಮಾಯಣ ದರ್ಶನಂ ಕೃತಿಗೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿ ಲಭಿಸಿತು.
2ನೇ ಜ್ಞಾನಪೀಠ ಪ್ರಶಸ್ತಿ ಆರು ವರ್ಷಗಳ ನಂತರ (1973) ದ.ರಾ.ಬೇಂದ್ರೆಯವರ ಮಹಾ ಕಾವ್ಯ ನಾಕು ತಂತಿಗೆ ಲಭಿಸಿತು. 3ನೇ ಜ್ಞಾನಪೀಠ ಪ್ರಶಸ್ತಿ ಕಡಲ ತೀರದ ಭಾರ್ಗವರೆಂದೆ ಖ್ಯಾತಿ ಗಳಿಸಿದ ಡಾ.ಶಿವರಾಮ ಕಾರಂತರ ಜನಪ್ರಿಯ ಕಾದಂಬರಿ ಮೂಕಜ್ಜಿಯ ಕನಸುಗಳು (1977) ಕೃತಿಯ ಪಾಲಾಯಿತು. 4ನೇಯ ಜ್ಞಾನಪೀಠ ಪ್ರಶಸ್ತಿಯೂ ಕನ್ನಡದ ಆಸ್ತಿ ಎಂದೇ ಪರಿಗಣಿಸಲ್ಪಟ್ಟ ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಚಿಕ್ಕವೀರ ರಾಜೇಂದ್ರ (1983) ಕೃತಿ ಪಡೆದುಕೊಂಡಿತು.
7ವರ್ಷಗಳ ಅಂತರದಲ್ಲಿ (1990) ಹಿರಿಯ ತತ್ವಜ್ಞಾನಿ, ಪ್ರಾದ್ಯಾಪಕ ಡಾ.ವಿ.ಕೃ ಗೋಕಾಕರ "ಭಾರತ ಸಿಂಧು ರಶ್ಮೀ" ಪಡೆದುಕೊಂಡಿತು. ಮತ್ತೇರಡು ಜ್ಞಾನಪೀಠ ಪ್ರಶಸ್ತಿಗಳನ್ನು ಸಮಗ್ರ ಸಾಹಿತ್ಯಕ್ಕಾಗಿ ಡಾ.ಯು.ಆರ್ ಅನಂತಮೂರ್ತಿ (1994) ಹಾಗೂ ರಂಗಕಮಿ೯, ಸಾಹಿತಿ ಗಿರೀಶ್ ಕಾನಾ೯ಡ್ ಮುಡಿಗೇರಿದವು.
ಪ್ರಸ್ತುತ 8ನೇ ಜ್ಞಾನಪೀಠ ಪ್ರಶಸ್ತಿಯ ಗರಿಯನ್ನು ತಮ್ಮ ಮುಡಿಗೇರಿಸಿಕೊಂಡಿರುವ ಡಾ.ಚಂದ್ರಶೇಖರ ಕಂಬಾರರು ವರಕವಿ ದ.ರಾ ಬೇಂದ್ರೆಯವರ ಕಾವ್ಯ ಸತ್ವದೊಂದಿಗೆ ಜಾನಪದ ಸೊಗಡನ್ನು ಮೈಗೂಡಿಸಿ ಕೊಂಡಿದ್ದಾರೆ. ಮುನ್ನಡೆದಿರುವ ಕನ್ನಡ ಕುಲಕೋಟಿಯ ಸರ್ವಶ್ರೇಷ್ಠ ಸಾಹಿತಿಗಳ ಹೆಜ್ಜೆಯಲ್ಲಿ ಹೊಸ ಬೆಳಕನ್ನು ಕಾಣುತ್ತಿರುವ ಡಾ.ಚಂದ್ರಶೇಖರ ಕಂಬಾರರು ವೈವಿದ್ಯಮಯ ಸಾಹಿತ್ಯದಲ್ಲಿ ಹೊಸತನದೊಂದಿಗೆ ತಾಜಾತನವನ್ನು ಕಾಣಲು ಸಾಧ್ಯ.
ಡಾ.ಚಂದ್ರಶೇಖರ ಕಂಬಾರರ 8ನೇ ಜ್ಞಾನಪೀಠ ಪ್ರಶಸ್ತಿಯನ್ನು ಕನಾ೯ಟಕದ ಜನತೆ ತುಂಬುಹೃದಯದಿಂದ ಸ್ವಾಗತಿಸುತ್ತಿರುವ ಸಂದರ್ಭದಲ್ಲಿ ಉತ್ತರಕನಾ೯ಟಕ ಜನತೆ ವಿಶಿಷ್ಠ ರೀತಿಯಲ್ಲಿ ಆನಂದಿ ಸುತ್ತಿದ್ದಾರೆ. ಇಲಿಯವರೆಗೆ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮಲೆನಾಡಿನ ಸಾಹಿತಿಗಳಾದ ಕುವೆಂಪು, ಕಾರಂತ, ಮಾಸ್ತಿ ಹಾಗು ಅನಂತಮೂರ್ತಿಯವರಿಗೆ ಸಂದಿದ್ದರೆ, ಉಳಿದ ಮೂರು ಪ್ರಶಸ್ತಿಗಳನ್ನು ಹಾವೇರಿ ಜಿಲ್ಲೆಯ ಸವಣೂರಿನ ಡಾ.ವಿ.ಕೃ ಗೋಕಾಕ, ಧಾರವಾಡದ ದ.ರಾ ಬೇಂದ್ರೆ ಹಾಗೂ ಗಿರೀಶ್ ಕಾನಾ೯ಡಗೆ ಲಭಿಸಿದೆ. ಈ ಬಾರಿ ಚಂದ್ರಶೇಖರ ಕಂಬಾರರ ಜ್ಞಾನಪೀಠ ಬಯಲು ಸೀಮೆಯ ಗ್ರಾಮೀಣ ಜನರ ಸಂತಸವನ್ನು ಇಮ್ಮಡಿಗೊಳಿಸಿದೆ.
ಜ್ಞಾನಪೀಠದ ಗೌರವದೊಂದಿಗೆ ಚಂದ್ರಶೇಖರ ಕಂಬಾರ ಭಾರತೀಯ ರಾಷ್ಟ್ರೀಯ ಭಾಷೆಯೊಂದಿಗೆ ಇತರ ಸಕಲ ಪ್ರಾದೇಶಿಕಗಳನ್ನು ಮೀರಿ ಹೊಸ ವಿನೂತನ ದಾಖಲೆಯನ್ನು ನಿಮರ್ಿಸಿದ ಶುಭ ಸಂದರ್ಭದಲ್ಲಿ ಆರುವರೆ ಕೋಟಿ ಕನ್ನಡಿಗರ ಶುಭಕಾಮನೆಗಳು.
ಅಯ್ಯಪ್ಪ ತುಕ್ಕಾಯಿ, ಸಾಹಿತಿಗಳು ರಾಯಚೂರು.
No comments:
Post a Comment
Thanku