Friday, September 24, 2010











ಮಹಿಮೆ ದೇವರದ್ದು.. ದುಡಿಮೆ ಜನರದ್ದು..!


ಆ ಯೇಸುವಿನ ಕೃಪೆಯಿಂದ ಹೀರೆನಗನೂರು ಗ್ರಾಮದಲ್ಲಿ ಧರ್ಮಗುರು ಪೌಲರಾಜ್ರು ಗ್ರಾಮಕ್ಕೆ ಶಾಶ್ವತವಾಗಿ ಕುಡಿಯುವ ನೀರಿನ ಯೋಜನೆಯೊಂದನ್ನು ರೂಪಿಸಿ ಸುತ್ತ-ಮುತ್ತಲಿನ ಹಳ್ಳಿಗಳ ಜನರಿಂದ ಅಪಾರ ಮನ್ನಣೆ ಗಳಿಸಿದ್ದಾರೆ.. ಪೌಲರಾಜ್ರವರು ಮಾಡಿದ ಶಾಶ್ವತ ಕುಡಿಯುವ ನೀರಿನ ಯೋಜನೆಯ ಮಾದರಿಯನ್ನು ಸಕರ್ಾರಗಳು ಮಾಡಿದರೆ, ಇಡೀ ರಾಜ್ಯದಲ್ಲಿ ನೀರಿನ ಬವಣೆ ಇರಲಾರದಂತೆ ಮಾಡಬಹುದು. ಬೇಕಿದ್ದರೆ, ನೀವೆ ಒಂದು ಸಾರಿ ಆ ಗ್ರಾಮಕ್ಕೆ ಹೋಗಿ ನೋಡಿ.
ಸಕರ್ಾರ ಮಾಡಬೇಕಾದ ಕುಡಿಯುವ ನೀರಿನ ಯೋಜನೆಯೊಂದನ್ನು ಹಿರೇನಗನೂರಿನ ಜನತೆ ಧರ್ಮಗುರುಗಳ ಮಾರ್ಗದರ್ಶನದಂತೆ ಹಗಲಿರುಳು ದುಡಿದು ಮಾಡಿಕೊಂಡಿದ್ದಾರೆ. ಜನರ ದುಡಿಮೆಯಿಂದ ನಿಮರ್ಿತವಾದ ಈ ಯೋಜನೆ ಸಕರ್ಾರವನ್ನು ನಾಚಿಸುವಂತಿದೆ ಎಂದರೆ ತಪ್ಪಾಗಲಾರದು.ಗ್ರಾಮಸ್ಥರು ವರ್ಷದ ಎಲ್ಲ ದಿನಗಳಲ್ಲಿ ನೀರನ್ನು ಬಳಕೆ ಮಾಡುವಂತಾಗಿದೆ. ಜೊತೆಯಲ್ಲಿ ಸುತ್ತಲಿನ 2ಹಳ್ಳಿಗಳು ಇವರ ಮಾದರಿಯನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿವೆ.ಶ್ರಮಜೀವಿಗಳೇ ಇಗೋ ನಿಮಗೊಂದು ವಂದನೆ
ರಾಷ್ಟ್ರಮಟ್ಟದಲ್ಲಿಯೇ ಪ್ರಥಮವಾಗಿ ಧಾಮರ್ಿಕ ಸಂಸ್ಥೆಯಿಂದ ಒಂದು ಸಕರ್ಾರದ ಸಮಸ್ಯೆಯನ್ನು ಬಗೆಹರಿಸಿಕೊಂಡ ಹಳ್ಳಿಯೆಂದರೆ, ರಾಯಚೂರು ಜಿಲ್ಲೆಯ ಹಿರೇನಗನೂರು ಗ್ರಾಮ.ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿಕೊಂಡದ್ದು ಆಧುನಿಕ ಅದ್ಬುತ ಕಾರ್ಯವೇ ಸರಿ.ಸುಳ್ಳುಪವಾಡಗಳ ಬೆನ್ನಟ್ಟಿದ ನಿದರ್ಶನಗಳಿಗೆ ಈ ಒಂದು ವಿಷಯ ಸವಾಲಾಗಿ ಪರಿಣಮಿಸಿದೆ.ಹೀರೆನಗನೂರು ಗ್ರಾಮವು ಎತ್ತರಪ್ರದೇಶದಲ್ಲಿದ್ದು ಹಳ್ಳವಿಲ್ಲದೇ, ಸಿಹಿ ನೀರು ಇಲ್ಲದೇ, ಸುಮಾರು 100ವರ್ಷಗಳ ಹಿಂದೆ ಯುರೋಪಿನ ಕೈಸ್ತ ಗುರುಗಳು ಈ ಊರಿಗೆ ಬಂದು ಸುತ್ತಲಿನ ಹಳ್ಳಿಗಳಿಗೆ ತೋಟದ ಬಾವಿಯನ್ನು ಮತ್ತು ಊರಿನಲ್ಲಿ ಕುಡಿಯುವ ನೀರಿನ ಬಾವಿಗಳನ್ನು ತೊಡಿ, ಭದ್ರವಾದ ಕಟ್ಟಡವನ್ನು ಕಟ್ಟಿಸಿದ್ದಾರೆ ಅದೊಂದು ಈಗ ಇತಿಹಾಸ.ಅದೇ ಇತಿಹಾಸ ಇಂದು ಪುನರಾವರ್ತನೆಯಾಗಿದೆ ಎಂದರೆ ತಪ್ಪಗಲಾರದು. ಈ ನೂತನ ಶೈಲಿಯ ನೀರಿನ ಯೋಜನೆಯನ್ನು ಸಾವಿರಾರು ಜನ ಮೆಚ್ಚಿಕೊಂಡಿದ್ದರು. ಹಲವು ರಾಜಕೀಯ ಗಣ್ಯರು ನಾಚಿಕೆಪಟ್ಟುಕೊಂಡಿದ್ದಾರೆ. ಇನ್ನೂ ಸಕರ್ಾರಿ ಅಧಿಕಾರಿಗಳಂತು ಧನ್ಯತಾ ಭಾವದೊಂದಿಗೆ ಸಕರ್ಾರದ ಕೆಲಸ ದೇವರ ಕೆಲಸ ಎನ್ನುವ ಮಾತು ಅಕ್ಷರಶಃ ಸತ್ಯವಾಗಿದೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಇದಕ್ಕೆಲ್ಲ ಕಾರಣಿಭೂತರಾದ ಪೌಲರಾಜ್ ಧರ್ಮಗುರುಗಳನ್ನು ಮಾತ್ರ ನೆನಪು ಮಾಡಿಕೊಳ್ಳದೇ ಇರುವವರಿಲ್ಲ.ಚಚರ್ಿನಲ್ಲಿ ಪ್ರಾರ್ಥನೆ ಮುಗಿದ ನಂತರ ಗುರುಗಳು ಹಲವು ಸಮಸ್ಯೆಗಳು ಮತ್ತು ಕರ್ತವ್ಯಗಳ ಬಗ್ಗೆ ಚಚರ್ೆ ಮಾಡಿದ ನಂತರ ಮುಂದಿನ ಕೆಲಸ ಆರಂಭ. 80ವರ್ಷ ಆದ ಹಿರಿಯರನ್ನು ಪಕ್ಕಕ್ಕೆ ಕೂರಿಸಿಕೊಂಡು ಅವರ ಅಪ್ಪಣೆಯಂತೆ ಎಂದಿನ ಕೆಲಸ ಅಂದೇ ಶುರುವಾಗುತ್ತಿತ್ತು. ಅವಿದ್ಯಾವಂತ ಯಜಮಾನರನ್ನು ತುಂಬಾ ಗೌರವದಿಂದ ಕಾಣುತ್ತಿದ್ದರು. ಇವರುಗಳ ಅನುಭವ ಪಾಂಡಿತ್ಯವನ್ನು ಮೆಚ್ಚಿಕೊಳ್ಳುತ್ತಿದ್ದರು. ಚಿನ್ನಪ್ಪ ಯರಗುಂಟಿ, ರಾಯಪ್ಪ ಸೋಮನಮರಡಿ, ಪ್ರಕಾಶಪ್ಪ ಕಂದಳ್ಳಿ ಇವರ ಮುಂದಾಳತ್ವವು ಇಡೀ ಸಮೂಹವನ್ನು ಉರಿದುಂಬಿಸುತ್ತಿತ್ತು. ಅಬ್ರಾಹಂ ಸಲಬೂರ, ಮರಿಯಪ್ಪ ಸೋಮನಮರಡಿ, ಚಿನ್ನಪ್ಪ ಕಂದಳ್ಳಿ, ಬಾಲಪ್ರಕಾಶ, ಜೋಸೆಫ್ ಚುಕ್ಕನಟ್ಟಿ, ಆರೋಗ್ಯಪ್ಪ ಹೂವಿನಬಾವಿ ಜೊತೆಯಲ್ಲಿ ಸಮೂಹದವರು ಹಗಲಿರುಳು ಶ್ರಮಿಸಿದರು.ಟ್ಯಾಂಕ್ ನಿಮರ್ಿಸಲು ಸಲಹೆಗಳುನೆಲದ ಕೆಳಗೆ ಟ್ಯಾಂಕ್ನ್ನು ಹೇಗೆ ನಿಮರ್ಿಸುವುದು, ಅದಕ್ಕೆ ಸ್ಥಳವನ್ನು ತಯಾರು ಮಾಡುವುದು, ಬಾವಿಯನ್ನು ತೋಡಲು ಯಾವ ಜಾಗವನ್ನು ಕೊಳ್ಳುವುದು ಎಂಬ ಪ್ರಶ್ನೆಗಳು ಎದುರುದಾಗ ಊರ ಮುಂದಿನ ಜನತಾ ಪ್ಲಾಟ್ಗಳನ್ನು ಕೇಳಿ ಪಡೆದು ಅವರಿಗೆ ಸಾಧ್ಯವಾದಷ್ಟು ಹಣಕಾಸಿನ ನೆರವನ್ನು ನೀಡಿ ನಿಮರ್ಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು.ಗುರುಗಳ ಗಮನಕ್ಕೆ ತಂದು ಈ ಟ್ಯಾಂಕ್ಗೆ ನೀರನ್ನು ಪೈಪಲೈನ್ ಮುಖಾಂತರ ತರಲು ಇಲ್ಲಿಂದ 3ಕಿಮೀ ದೂರವಿರುವ ಕಾಳೇಶ್ವರ ಕೆರೆಯ ಹತ್ತಿರ ಶರಣಪ್ಪಗೌಡ ಎಂಬುವವರ 1ಎಕರೆ ಜಮೀನನ್ನು ಖರೀದಿ ಮಾಡಿ, ಅಲ್ಲಿ ಬಾವಿಯನ್ನು ನಿಮರ್ಿಸಲು ಪ್ರಥಮ ಹಂತದ ಕಾರ್ಯಗಳಿಗೆ ಚಾಲನೆ ನೀಡಲಾಯಿತು.ಟ್ಯಾಂಕ್ ನಿಮರ್ಿಸಲು ಯುವಕರ ಪಡೆಯ ಸಾಹಸ ಕೆಲಸ30ಕ್ಕೂ ಹೆಚ್ಚು ಯುವಕರು ಸಂದರ್ಭಕ್ಕೆ ತಕ್ಕಂತೆ ತಮ್ಮನ್ನು ತಾವೇ ತೊಡಗಿಸಿಕೊಂಡು ಯಾರೇ ಎಷ್ಟು ಮಾಡಿದರೂ ಹಗಲು-ರಾತ್ರಿಯೆನ್ನದೆ, ಶ್ರಮಿಸಿ ಗುರುಗಳ ಮಾತನ್ನು ಪಾಲಿಸುತ್ತಿದ್ದರು. ಒಂದು ಹೆಜ್ಜೆ ಮುಂದೆ ನಿಂತು ಕಷ್ಟಕರವಾಗಿ ಕೆಲಸ ಮಾಡಿದರು.ಪ್ರಾಣಪಾಯಗಳು, ಅನಾಹುತಗಳನ್ನು ಬದಿಗೊಟ್ಟಿ, ಬಾವಿಯನ್ನು ಹಿಟಾಚಿಯಿಂದ ಅಗೆಯುವಾಗ ನೀರನ್ನು ರಾತ್ರಿಯಿಡಿ ಮೇಲೆತ್ತುವುದು, ಎಂಜಿನ್ಗಳನ್ನು ಮೇಲಿನಿಂದ ಕೆಳಗಿಸುವುದು, ಯಂತ್ರವನ್ನು ರಿಪೇರಿಗೊಳಿಸುವುದು ಸೇರಿದಂತೆ ನಾನಾ ಕೆಲಸಕಾರ್ಯಗಳನ್ನು ಹಗಲಿರುಳು ಯುವಕರ ಪಡೆಗಳು ಮಾತು ಮೀರಿದಂತೆ ಮಾಡುತ್ತಿದ್ದವು. ಅದರ ಪ್ರತಿಫಲವಾಗಿ ಇಂದು ಟ್ಯಾಂಕ್ ಬೃಹದಕಾರವಾಗಿ ತಲೆ ಎತ್ತಿದೆ. ಒಂದು ಬಾರಿ ದೆಹಲಿಯಿಂದ ಐ.ಎ.ಎಸ್ ಅಧಿಕಾರಿಗಳ ಆಯೋಗವೊಂದು ನಮ್ಮ ಗ್ರಾಮಕ್ಕೆ ಭೇಟಿ ನೀಡಿ ಧರ್ಮಗುರುಗಳ ಮಾಡಿದ ಕೆಲಸವನ್ನು ಪ್ರಶಂಶಿಸಿ, ತಾವುಗಳು ಮಾಡಿದ ಕೆಲಸ ಶ್ಲಾಘನಾರ್ಹ ಎಂದು ಬಣ್ಣಿಸಿತು. ಇಂದು ಧರ್ಮಗುರುಗಳು ಮಾಡಿದ ಯೋಜನೆ ಎಲ್ಲರಿಗೆ ಮಾದರಿಯಾಗಿದೆ.ಇದೇ ಮಾದರಿಯನ್ನು ಪಕ್ಕದ ಹಳ್ಳಿಗಳು ಇಂದು ಅಳವಡಿಸಿಕೊಳ್ಳಲು ಹವಣಿಸುತ್ತಿವೆ. ಅದರಂತೆ ಸಕರ್ಾರಗಳು ಕೂಡ ನಮ್ಮ ಧರ್ಮಗುರುಗಳು ಮಾಡಿದ ಯೋಜನೆಯ ಮಾದರಿಗಳನ್ನು ಎಲ್ಲೆಡೆ ವಿಸ್ತಿರಿಸಿ ರಾಜ್ಯಕ್ಕಿರುವ ನೀರಿನ ಬವಣಿಯನ್ನು ತಪ್ಪಿಸಬೇಕೆಂಬುದೇ ನಮ್ಮೆಲ್ಲರ ಆಶಯವಾಗಿದೆ.


PRAISE THE LORD
ಪ್ರಾರ್ಥನೆ & ಪರಿಶ್ರಮದ ಶಿಸ್ತಿನ ಗುರು ವಂ. ಪೌಲರಾಜ್ಶಿಸ್ತಿನ ಗುರು ವಂ, ಪೌಲರಾಜರು ಪ್ರಾರ್ಥನೆ ಮತ್ತು ಪರಿಶ್ರಮಕ್ಕೆ ಮೊದಲ ಆಧ್ಯತೆ ನೀಡುತ್ತಿದ್ದರು. 5ವರ್ಷ ಹಿರೇನಗನೂರಿಗೆ ವಿಚಾರಣಿ ಗುರುಗಳಾಗಿ ಬಂದು ಗ್ರಾಮದ ಎಲ್ಲ ಜಾತಿಯ ಮಕ್ಕಳನ್ನು ತಮ್ಮ ಖಚರ್ಿನಲ್ಲಿಯೇ ಶಾಲೆಯನ್ನು ಓದಿಸಿದ್ದಾರೆ. ಎಲ್ಲ ಸಂಘಸಂಸ್ಥೆಗಳಲ್ಲಿ, ಎಲ್ಲಾಧರ್ಮದ ಹಬ್ಬಗಳಲ್ಲಿ ಅತಿಥಿಗಳಾಗಿ ಭಾಗವಹಿಸಿ 'ದೇವರಲ್ಲಿ ವಿಶ್ವಾಸವಿರಿಸುವದಲ್ಲದೇ ಶ್ರಮಪಡುವುದು, ಹೋರಾಟ ಮಾಡುವುದು, ಸಮಾಜಸೇವೆಯಲ್ಲಿ ಜನರನ್ನು ಹೇಗೆ ಬಳಸಿಕೊಳ್ಳುವುದು, ಜೀವನದೇವರ ಚಿತ್ತ ಅದನ್ನು ಪಾಲಿಸುವುದು ನಡೆಸುವುದು ನಮ್ಮೆಲ್ಲರ ಕರ್ತವ್ಯ' ಎಂದು ಕಿರುಭಾಷಣ ಮಾಡುತ್ತಿದ್ದರು. ಸರ್ವಧರ್ಮಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಾವೈಕ್ಯತೆಯೆ ಕುರಿತ ಸಂದೇಶಗಳನ್ನು ನೀಡುತ್ತಿದ್ದರು. ಇಂತಹ ವ್ಯಕ್ತಿತ್ವವನ್ನು ಹೊಂದಿದ್ದ ಧರ್ಮಗುರುಗಳು ಹಿರೇನಗನೂರಿನ ಜನರ ಪಾಲಿಗೆ ಕಣ್ಣಿಗೆ ಕಾಣುವ ದೇವರೇ ಸರಿ.ಇವರ ಸಾಧನೆಗಳು ತುಂಬಾ ಕಷ್ಟಕರವಾಗಿದ್ದವು. ಸಕರ್ಾರದ ಕಾಮಗಾರಿಗಳಿಗೆ ಲಕ್ಷಗಟ್ಟಲೇ ಖಚರ್ು ಮಾಡಿದರೂ ಅವು ಅರ್ಧಕ್ಕೆ ಮುಚ್ಚಿಹೋಗುತ್ತವೆ. ಅದರೆ, ಧರ್ಮಗುರುಗಳ ಕೆಲಸಗಳು ಹಾಗಿರಲಿಲ್ಲ. ಸಕರ್ಾರದಿಂದ ಉದ್ಯೋಗಖಾತ್ರಿಯಡಿ ಕೆಲಸವನ್ನು ಕೇಳಿ 1ಲಕ್ಷವನ್ನು ಪಡೆದು ಈ ಅದ್ಬುತ ಕಾರ್ಯವೊಂದನ್ನು ಮಾಡಿದ್ದಾರೆ. ಆದರೆ, ಈ ಯೋಜನೆಗೆ ತಲುಪಿದ ವೆಚ್ಚ ಬರೋಬರಿ 10ಲಕ್ಷ.ಧರ್ಮಗುರುಗಳು ಈ ಯೋಜನೆಯನ್ನು ಕೈಗೆತ್ತಿಕೊಂಡಾಗ ಪಂಚಾಯಿತಿಯಲ್ಲಿ ಕೆಲವೊಬ್ಬರು ಅಪಸ್ವರವನ್ನು ಎತ್ತಿದ್ದರು. ಅದ್ಯಾವದನ್ನು ಲೆಕ್ಕಸದೇ ಧರ್ಮಗುರುಗಳು ತಾವಿಡಿದ ಕೆಲಸವನ್ನು ಸಂಪೂರ್ಣವಾಗಿ ಮಾಡಿಬಿಟ್ಟರು. ಕೊನೆಗೆ ಈ ಯೋಜನೆಯ ಉದ್ಘಾಟನೆಯಂದು ಇಡಿ ಊರಿಗೆ ಊರು ಇವರ ಕೆಲಸವನ್ನು ಕೊಂಡಾಡಿ, ಉದಾರ ಮನಸ್ಸಿನಿಂದ ದೇಣಿಗೆಯನ್ನು ಸಹ ನೀಡಿತು. ಆರಂಭದಲ್ಲಿ ಅಪಸ್ವರ ಎತ್ತಿದ್ದ ಎಲ್ಲರು ತಮ್ಮ ತಪ್ಪಿಗೆ ಪ್ರಾಯಶ್ಚಿತ ಪಟ್ಟು ನಂತರ ಗುರುಗಳ ಮಾರ್ಗದರ್ಶನದಂತೆ ನಡೆದುಕೊಂಡರು.
ನೀರಾಭಕ್ತನ್..

No comments:

Post a Comment

Thanku