Thursday, April 8, 2010

ಶಹೀದ್ ಅಜ್ಮಿಯನ್ನು ನೆನೆಯುತ್ತಾ...



ನಾನು ಹೇಗೆ ಸಾಯುತ್ತೇನೆಂಬುದು ಈಗಾಗಲೇ ನಿಧರ್ಾರವಾಗಿರುವ ವಿಚಾರ। ಪ್ರಾಯಶಃ ಇಂದಲ್ಲ ನಾಳೆ ಬುಲೆಟ್ಗಳು ನನ್ನ ಎದೆಯನ್ನು ಹೊಕ್ಕು ನನ್ನನ್ನು ಕೊಲ್ಲುತ್ತವೆ ಎಂದು ಆಗಾಗ ಆತ ಹೇಳುತ್ತಿದ್ದ। ಅಕ್ಷರಶಃ ಅವನ ನಿರೀಕ್ಷೆಯಂತೆಯೇ ಆಗಿ ಹೋಯಿತು. ಮೊನ್ನೆ ಫೆಬ್ರವರಿ 11ರ ಸಂಜೆ ಮುಂಬೈನ ಕುಲರ್ಾ ಏರಿಯಾದಲ್ಲಿದ್ದ ತನ್ನ ಆಫೀಸಿನಲ್ಲಿ ಬಡ ಕಕ್ಷಿದಾರರೊಂದಿಗೆ ಚಚರ್ೆ ಮಾಡುತ್ತಾ ಕುಳಿತಿದ್ದಾಗ ನಾಲ್ಕು ಜನ ಬಂದೂಕುಧಾರಿಗಳು ಆಫೀಸಿಗೆ ನುಗ್ಗಿ ಎದೆಗೆ ಪಾಯಿಂಟ್ ಬ್ಲಾಂಕ್ ರೇಂಜಿನಲ್ಲಿ ಗುಂಡು ಹಾರಿಸಿ ಆತನನ್ನು ಕೊಂದುಹಾಕಿದರು. ಅಲ್ಲಿಗೆ, ನೈಜ ಪ್ರಜಾತಾಂತ್ರಿಕ ವ್ಯವಸ್ಥೆಯೊಂದನ್ನು, ಸರ್ವರಿಗೂ ನ್ಯಾಯವೊದಗಿಸುವ ನ್ಯಾಯಾಂಗವನ್ನು, ಎಲ್ಲಾ ಸಮುದಾಯಗಳು ತಮ್ಮ ಸಾಂಸ್ಕೃತಿಕ ವೈವಿಧ್ಯತೆಗಳೊಂದಿಗೆ ನಿಜಾರ್ಥದಲ್ಲಿ ಐಕ್ಯವಾಗಿ, ನೆಮ್ಮದಿಯಿಂದ ಬದುಕುವ ಆರೋಗ್ಯಪೂರ್ಣ ಸಮಾಜವೊಂದನ್ನು ಸ್ಥಾಪಿಸುವುದಕ್ಕಾಗಿ ಕನಸುತ್ತಾ, ಅದನ್ನು ಸಾಕಾರಗೊಳಿಸುವುದಕ್ಕಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಹಗಲಿರುಳು ದುಡಿದ ಮತ್ತೊಂದು ಯುವ ಕುಡಿ ಹೀಗೆ ವ್ಯವಸ್ಥೆಯ ಕ್ರೌರ್ಯಕ್ಕೆ ಬಲಿಯಾಗಿ ಕಮರಿಹೋದಂತಾಯಿತು.


ಆತನ ಹೆಸರು ಶಹೀದ್ ಅಜ್ಮಿ. ವಯಸ್ಸಿನ್ನೂ ಮೂವತ್ತೆರಡು ವರ್ಷ ಆಗಿತ್ತು. ವೃತ್ತಿಯಲ್ಲಿ ವಕೀಲ. ಇನ್ನೂ ಹದಿಹರೆಯದ ಬಾಲಕನಂತೆ ಕಾಣುವ ಅಂದವಾದ ಮೈಕಟ್ಟು, ಕಾಂತಿಯುತ ಮುಖ, ಪ್ರಖರವಾದ ತೇಜಸ್ಸು, ಮೆದು ಮಾತುಗಳು, ಸೌಮ್ಯ ಸ್ವಭಾವ, ಸ್ನೇಹಿತರನ್ನು ಹಚ್ಚಿಕೊಳ್ಳುವ ರೀತಿ, ಪ್ರಭುತ್ವ ಹಿಂಸೆಗೆ ಬಲಿಯಾಗಿ ಬಳಲುತ್ತಿರುವ ದಮನಿತರಿಗೆ ತೋರುವ ಪ್ರೀತಿ, ನೋವಿಗೆ ಮಿಡಿಯುವ ಹೂವಿನಂತಹ ಹೃದಯ, ಭಾರತದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಆಳವಾದ ಜ್ಞಾನ, ನಮ್ಮ ಸಂವಿಧಾನ, ಕಾನೂನುಗಳ ಬಗೆಗಿನ ಅಗಾಧ ಪಾಂಡಿತ್ಯ, ಎಂಥಾ ಜಟಿಲ ಸಾಮಾಜಿಕಾಥರ್ಿಕ ಸ್ಥಿತ್ಯಂತರಗಳನ್ನೂ ಜನಸಾಮಾನ್ಯರೂ ಅರ್ಥಮಾಡಿಕೊಳ್ಳುವಂತೆ ವಿವರಿಸುವ ಕುಶಲತೆ - ಹೀಗೆ ಹತ್ತು ಹಲವು ಸದ್ಗುಣಗಳು, ಸಾಮಥ್ರ್ಯಗಳು, ಸ್ವಭಾವಗಳು, ನಡವಳಿಕೆಗಳು ಮೇಳೈಸಿ ರೂಪುಗೊಂಡಿರುವ ಆತನ ವ್ಯಕ್ತಿತ್ವ ಎಂಥವರನ್ನೂ ಕ್ಷಣಾರ್ಧದಲ್ಲಿ ಆಕಷರ್ಿಸಿಬಿಡುತ್ತಿತ್ತು. ಒಮ್ಮೆ ಆತನನ್ನು ಭೇಟಿಯಾಗಿ ಎರಡು ನಿಮಿಷ ಮಾತನಾಡಿದರೆ ಸಾಕು ಅವಕಾಶ ಸಿಕ್ಕಾಗಲೆಲ್ಲಾ ಆತನೊಂದಿಗೆ ಸಮಯ ಕಳೆಯಬೇಕೆನ್ನಿಸುವಂಥ ವ್ಯಕ್ತಿತ್ವ ಅದು.
ಹೊರ ಜಗತ್ತಿಗೆ ಶಹೀದ್ ಅಜ್ಮಿ ಗೊತ್ತಿರುವುದು ಟೆರರಿಸ್ಟ್ ಲಾಯರ್ ಎಂಬ ಹೆಸರಿನಲ್ಲಿ. ಅದು ಮುಖ್ಯವಾಹಿನಿಯ ಮಾಧ್ಯಮಗಳು ಶಹೀದ್ ಅಜ್ಮಿ ಎಂಬ ಪುಣ್ಯಕೋಟಿ ಗೋವಿಗೆ ಕೊಟ್ಟ ಅನ್ವರ್ಥಕ ನಾಮ. ಅದಕ್ಕೆ ಕಾರಣವಿಷ್ಟೆ: ಪ್ರಭುತ್ವ ಯಾವ್ಯಾವ ಅಮಾಯಕರಿಗೆ ಟೆರರಿಸ್ಟ್ ಹಣೆಪಟ್ಟಿ ಕಟ್ಟಿ, ಅನ್ಯಾಯವಾಗಿ ಅವರ ಮೈತುಂಬಾ ಕೇಸುಗಳನ್ನು ಹಾಕಿ, ಅಮಾನುಷವಾಗಿ ಚಿತ್ರಹಿಂಸೆ ಕೊಡುತ್ತಿದೆಯೋ ಅವರೆಲ್ಲರಿಗೆ ನ್ಯಾಯ ಒದಗಿಸುವುದಕ್ಕಾಗಿ ಈತ ತನ್ನ ಜೀವನವನ್ನೇ ಮುಡುಪಾಗಿಟ್ಟಿರುವುದು; ಎಷ್ಟೇ ಪ್ರಾಣ ಬೆದರಿಕೆಗಳು ಬಂದಿದ್ದರೂ ಅದನ್ನು ಲೆಕ್ಕಿಸದೇ ತಮ್ಮ ಜೀವವನ್ನು ಪಣಕ್ಕಿಟ್ಟು ನ್ಯಾಯಾಲಯದಲ್ಲಿ ಅವರ ಕೇಸುಗಳ ಪರವಾಗಿ ವಾದಿಸುತ್ತಾ ಕಾನೂನುಬದ್ಧ ಹೋರಾಟದಲ್ಲಿ ತೊಡಗಿರುವುದು. 2008ರ ಸೆಪ್ಟೆಂಬರ್ 26ರಂದು ಮುಂಬೈನ ತಾಜ್ ಹೋಟೆಲ್ ಮೇಲೆ ನಡೆದ ಭಯೋತ್ಪಾದಕ ದಾಳಿಯ ಪ್ರಕರಣದಲ್ಲಿ ದಾಳಿಕೋರರಿಗೆ ಸಹಾಯ ಮಾಡಿದ ಆರೋಪದ ಮೇಲೆ ಬಂಧಿತನಾಗಿದ್ದ ಫಾಯಿಮ್ ಅನ್ಸಾರಿಯ ಪರವಾಗಿ, 2006ರ ಜುಲೈ 11ರಂದು ಮುಂಬೈನ ಲೋಕಲ್ ಟ್ರೇನ್ ಬ್ಲಾಸ್ಟ್ ಪ್ರಕರಣದಲ್ಲಿ ಭಯೋತ್ಪಾದಕರೊಂದಿಗೆ ಕೈಜೋಡಿಸಿದ ಆರೋಪದ ಮೇಲೆ ಬಂಧಿತರ ಪರವಾಗಿಯೂ ಶಹೀದ್ ಅಜ್ಮಿ ವಕಾಲತ್ತು ವಹಿಸಿದ್ದ.
ನಮ್ಮಲ್ಲಿ ಎಲ್ಲೇ ಬಾಂಬ್ ಸ್ಫೋಟಗೊಂಡರೂ, ಎಲ್ಲೇ ಭಯೋತ್ಪಾದಕ ದಾಳಿ ನಡೆದರೂ ಯಾವುದೇ ತನಿಖೆಯಿಲ್ಲದೇ ಮುಸ್ಲಿಮ್ ಭಯೋತ್ಪಾದಕರೇ ಅದಕ್ಕೆ ಕಾರಣಕರ್ತರೆಂದು ಪರಿಗಣಿಸುವ ಪರಿಪಾಠವಿದೆ. ಇತ್ತೀಚಿನ ವರ್ಷಗಳಲ್ಲಿ ಭಜರಂಗದಳದವರು, ಆರೆಸ್ಸೆಸ್ನವರೂ ಬಾಂಬ್ ತಯಾರಿಸುತ್ತಿದ್ದ ವೇಳೆ ಅಕಾಸ್ಮಾತಾಗಿ ಸ್ಫೋಟಗೊಂಡು ಸತ್ತ ಘಟನೆಗಳು ಬಹಳಷ್ಟು ವರದಿಯಾಗಿವೆ. ಹಿಂದೂತ್ವವಾದಿಗಳೇ ಜನನಿಬಿಡ ಪ್ರದೇಶಗಳಲ್ಲಿ ಬಾಂಬ್ ಸ್ಫೋಟಿಸಿ ಅದನ್ನು ಮುಸ್ಲಿಂ ಭಯೋತ್ಪಾದಕರ ತಲೆಗೆ ಕಟ್ಟುವ ಉದ್ದೇಶದಿಂದ ಬಾಂಬ್ ತಯಾರಿಸಲಾಗುತ್ತಿತ್ತು ಎಂದು ಪೊಲೀಸ್ ತನಿಖೆಯಲ್ಲಿ ಸಾಬೀತಾಗಿವೆ. ಹೀಗಿದ್ದ ಮೇಲೂ, ಎಲ್ಲೇ ಬಾಂಬ್ ಸ್ಫೋಟಗೊಂಡರೂ ಕನಿಷ್ಠ ತನಿಖೆ ನಡೆಸದೆ ಅದನ್ನು ಮುಸ್ಲೀಂ ಭಯೋತ್ಪಾದಕರ ಅಕೌಂಟಿಗೆ ಹಾಕುವ ಪರಿಪಾಠ ಮಾತ್ರ ನಿಂತಿಲ್ಲ. ಅಂತೆಯೇ, ನಿಜವಾಗಿ ಬಾಂಬ್ ಸ್ಫೋಟಿಸಿದವರು ಮುಸ್ಲೀಂ ಭಯೋತ್ಪಾದಕರೇ ಆಗಿದ್ದರೂ ಅವರಂತೂ ಪೊಲೀಸರ ಕೈಗೆ ಸಿಗುವುದಿಲ್ಲ. ಅವರನ್ನು ಹಿಡಿಯಬೇಕೆಂದು ನಾಗರಿಕ ಸಮಾಜದಿಂದ ಒತ್ತಡ ಹೆಚ್ಚಾಗುತ್ತಿದ್ದಂತೆ ತಾವು ಏನೋ ಸಾಧನೆ ಮಾಡಿದ್ದೇವೆಂದು ತೋರಿಸಿಕೊಳ್ಳುವುದಕ್ಕೆ ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸಿ ಅವರ ತಲೆಗೆ ಈ ಪ್ರಕರಣಗಳನ್ನು ಕಟ್ಟುವ ಪರಿಪಾಠಕ್ಕೂ ನಮ್ಮಲ್ಲಿ ಕೊರತೆಯಿಲ್ಲ. ಹೀಗೆ, ಅಮಾಯಕರಾಗಿದ್ದರೂ ಭಯೋತ್ಪಾದಕರೆಂಬ ಹಣೆಪಟ್ಟಿಯನ್ನು ಹಚ್ಚಿಸಿಕೊಂಡು ಚಿತ್ರಹಿಂಸೆ ಅನುಭವಿಸುತ್ತಿರುವವರಿಗೆ ಕಾನೂನುಬದ್ಧವಾಗಿ ನ್ಯಾಯ ದೊರಕಿಸಿಕೊಡುವ ಕೆಲಸಕ್ಕೇನಾದರೂ ಯಾರಾದರೂ ಕೈಹಾಕಿದರೆ, ಅದರಲ್ಲೂ ವಿಶೇಷವಾಗಿ ಹೀಗೆ ಕೈ ಹಾಕುವವನು ಅಕಸ್ಮಾತಾಗಿ ಮುಸ್ಲಿಂಮನಾಗಿದ್ದರೆ ಆತ ಎರಡು ರೀತಿಯ ಅಪಾಯಗಳನ್ನು ಎದುರಿಸಬೇಕಾಗುತ್ತದೆ: ಒಂದು, ಭಯೋತ್ಪಾದಕರೆಂಬ ಆರೋಪ ಹೊತ್ತಿರುವವರಿಗೆ ಕಾನೂನು ನೆರವು ನೀಡಿದ ಕಾರಣಕ್ಕಾಗಿ ಆತನನ್ನೂ ಭಯೋತ್ಪಾದಕ ಎಂದು ಚಿತ್ರಿಸುವುದು. ಎರಡು, ಪೊಲೀಸರಿಂದ ಮತ್ತು ಹಿಂದೂತ್ವ ಉಗ್ರವಾದಿಗಳಿಂದ ಪ್ರಾಣಾಪಾಯವನ್ನು ಎದುರಿಸುವುದು. ಅಮಾಯಕರ ಪರವಾಗಿ ಗಟ್ಟಿಯಾಗಿ ವಾದ ಮಾಡಿ ಗೆದ್ದರೆ ಅಮಾಯಕರನ್ನು ಬಂಧಿಸಿ, ಅವರನ್ನೇ ಭಯೋತ್ಪಾದಕರೆಂದು ಹೊರಜಗತ್ತಿಗೆ ತೋರಿಸಿ, ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡ ಪೊಲೀಸರಿಗೆ ಮುಖಭಂಗವಾಗುತ್ತದೆಯಾದ್ದರಿಂದ ನ್ಯಾಯಾಲಯದಲ್ಲಿ ಬಂಧಿತರ ಪರವಾಗಿ ವಾದಿಸುವವವರನ್ನೇ ದೈಹಿಕವಾಗಿ ಹಾಕುವ ಹೀನ ಕೃತ್ಯಕ್ಕೆ ಪೊಲೀಸರು ಇಳಿಯುತ್ತಾರೆ. ಇನ್ನು ಶಿವಸೇನೆ, ಭಜರಂಗದಳ, ಆರೆಸ್ಸೆಸ್ನಂತಹ ಹಿಂದೂತ್ವ ಉಗ್ರವಾದಿ ಸಂಘಟನೆಗಳೂ ತಮ್ಮ ಹಿಂದೂತ್ವ ಭಕ್ತಿಯನ್ನು ಪ್ರದಶರ್ಿಸುವುದಕ್ಕಾಗಿ ಅಂತಹ ವಕೀಲರ ಮೇಲೆಯೇ ಮುಗಿಬೀಳುತ್ತಾರೆ. ಶಹೀದ್ ಅಜ್ಮಿ ವಿಚಾರದಲ್ಲಿ ಇವೆರಡೂ ಸತ್ಯವಾದವು. ಮಾಧ್ಯಮಗಳು ಆತನನ್ನು ಟೆರರಿಸ್ಟ್ ಲಾಯರ್ ಎಂದು ಕರೆದರೆ, ಹಿಂದೂತ್ವವಾದಿ-ಪೊಲೀಸ್ ಕೂಟ ಅವರನ್ನು ಟೆರರಿಸ್ಟ್ ಎಂದೇ ಪರಿಗಣಿಸಿ ಅಂತಿಮವಾಗಿ ಅವರ ಪ್ರಾಣವನ್ನೇ ಬಲಿತೆಗೆದುಕೊಂಡಿತು.
ಇಷ್ಟಕ್ಕೂ ಭಯೋತ್ಪಾದಕ ಕೃತ್ಯಗಳಲ್ಲಿ ಆರೋಪಿಗಳೆನಿಸಿದವರ ಪರವಾಗಿಯೇ ಅಜ್ಮಿ ಏಕೆ ವಕಾಲತ್ತು ಮಾಡುತ್ತಿದ್ದ? ಇದಕ್ಕೆ ಉತ್ತರ ಆತನ ಬದುಕಿನಲ್ಲೇ ಇದೆ. ಅಸಲಿಗೆ, ಆತನ ಸಾವಿನಂತೆಯೇ ಆತನ ಬದುಕೂ ಕೂಡ ಬಹಳ ದುರಂತಮಯವಾದದ್ದು. ಆ ದುರಂತಮಯ ಬದುಕನ್ನು ಅರ್ಥ ಮಾಡಿಕೊಳ್ಳದೇ ಆತನ ಈ ಪ್ರಶ್ನೆಗೆ ಉತ್ತರವೂ ಸಿಗುವುದಿಲ್ಲ. ಅದನ್ನು ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗದ ಬಹುತೇಕರು ಅಥವ ಅರ್ಥಮಾಡಿಕೊಳ್ಳುವುದಕ್ಕೇ ಬಯಸದ ಬಹುತೇಕರು, ಆತನೊಬ್ಬ ಮುಸ್ಲಿಂ ಯುವಕ. ಸಹಜವಾಗಿಯೇ ಮುಸ್ಲಿಂ ಭಯೋತ್ಪಾದಕರ ನೆರವಿಗೆ ಬರುತ್ತಾನೆ. ಹಾಗಾಗಿ, ಆತನೂ ಪರೋಕ್ಷವಾಗಿ ಒಬ್ಬ ಭಯೋತ್ಪಾದಕ ಎಂಬ ನಿಲುವಿಗೆ ಬಂದುಬಿಟ್ಟಿದ್ದರು.
ಬಡ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ ಅಜ್ಮಿ ಏಳು ವರ್ಷದ ಬಾಲಕನಿದ್ದಾಗಲೇ ತನ್ನ ತಂದೆಯನ್ನು ಕಳೆದುಕೊಂಡ. ನಂತರ ಆತನನ್ನು ಪೊರೆದು ಬೆಳೆಸಿದ್ದ ಆತನ ತಾಯಿ, ಬಂಧುಬಳಗದವರು. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸಗೊಂಡ ನಂತರ ಶಿವಸೇನೆ ಮತ್ತು ಸಂಘಪರಿವಾರದ ಉಗ್ರಕೂಟ ಮುಂಬೈನಲ್ಲಿ ನಡೆಸಿದ ಮುಸ್ಲೀಮರ ಮಾರಣಹೋಮ ಅಜ್ಮಿಯ ಬದುಕಿನ ದಿಕ್ಕನ್ನೇ ಬದಲಿಸಿಬಿಟ್ಟಿತು. ಆಗ ಆತನಿನ್ನೂ ಹದಿನೈದು ವರ್ಷದ ಬಾಲಕ. ಮುಂಬೈ ಕೋಮುಗಲಭೆಗಳಿಂದ ಹೊತ್ತಿ ಉರಿಯುತ್ತಿದ್ದ 1992ರ ಡಿಸೆಂಬರ್ನಲ್ಲಿ ಒಂದು ದಿನ ಅಜ್ಮಿ ಶಾಲೆಯನ್ನು ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಾಗದ್ದಾಗ ಒಬ್ಬ ಪೊಲೀಸ್ ಈತನ ಹಣೆಗೆ ಪಿಸ್ತೂಲನ್ನಿಟ್ಟು ಕೊಲ್ಲುವುದಾಗಿ ಬೆದರಿಸಿದ. ಆತನ ಮಾತಿನಲ್ಲೇ ಹೇಳುವುದಾದರೆ ಇದು ಆತನ ಜೀವನದ ಅತ್ಯಂತ ಭಯಾನಕ ಘಟನೆಯಾಗಿತ್ತು. ನಂತರ ಆತನನ್ನು ಬಂಧಿಸಿ ಶಿವಸೇನೆಯ ಅಧಿನೇತ ಭಾಳ ಠಾಕ್ರೆಯನ್ನು ಕೊಲ್ಲುವ ಸಂಚು ರೂಪಿಸಿದ್ದ ಎಂಬ ಆರೋಪ ಹೊರಿಸಿ ಜೈಲಿಗಟ್ಟಲಾಯಿತು. 1995ರಲ್ಲಿ ಆತ ನಿಷೇಧಿತ ಇಸ್ಲಾಮಿಕ್ ಸಂಘಟನೆಯ ಸದಸ್ಯನಾಗಿದ್ದಾನೆ ಎಂಬ ಅರೋಪ ಹೊರಿಸಿ ತಿಹಾರ್ ಜೈಲಿಗೆ ಕಳಿಸಿ ಕೊಡಬಾರದ ಚಿತ್ರಹಿಂಸೆ ಕೊಡಲಾಯಿತು. ಅಜ್ಮಿಯನ್ನು ಶಾಶ್ವತವಾಗಿ ಜೈಲುಕಂಬಿಗಳ ಹಿಂದೆ ಕೊಳೆಸಬೇಕೆಂಬ ಉದ್ದೇಶದಿಂದ ಆತನ ಮೇಲೆ ಟಾಡಾದಂತಹ ಕರಾಳ ಕಾನೂನನ್ನೂ ಹಾಕಲಾಯಿತು. (ಆದರೆ, ಸುಪ್ರೀಂ ಕೋಟರ್ು ಆತನನ್ನು ಆರೋಪದಿಂದ ಮುಕ್ತಗೊಳಿಸಿತು) ದುರಂತ ನೋಡಿ, ಆತನ ಮೇಲೆ ಹೊರಿಸಲಾಗಿದ್ದ ಯಾವ ಆರೋಪವನ್ನೂ ನ್ಯಾಯಾಲಯದಲ್ಲಿ ಸಾಬೀತುಪಡಿಸುವುದಕ್ಕೆ ಪೊಲೀಸರಿಂದ ಆಗಲಿಲ್ಲ. ಆದರೆ, ಶಹೀದ್ ಅಜ್ಮಿ ಮಾತ್ರ ಮುಸ್ಲಿಮನಾಗಿ ಹುಟ್ಟಿದ ತಪ್ಪಿಹಗೆ ಅನ್ಯಾಯವಾಗಿ ಹಲವಾರು ವರ್ಷಗಳ ಕಾಲ ಚಿತ್ರಹಿಂಸೆ ಅನುಭವಿಸುತ್ತಾ ಜೈಲಿನಲ್ಲಿ ಕೊಳೆಯಬೇಕಾಯಿತು. ಈ ಅವಧಿಯಲ್ಲಿ ಆತನನ್ನು ಐವತ್ತು ದಿನಗಳ ಕಾಲ ಕಾನೂನುಬಾಹಿರವಾಗಿ ನೆಲಮಾಳಿಗೆಯ ಕತ್ತಲ ಜೈಲುಕೋಣೆಯಲ್ಲಿ ಏಕಾಂಗಿಯಾಗಿ ಬಂಧಿಸಿಡಲಾಗಿತ್ತು. ಅದಾದ ಮೇಲೆ ಆತನನ್ನು ನೆಲಮಾಳಿಗೆಯಿಂದ ಹೊರತರಲಾಯಿತಾದರೂ ಒಂದು ವರ್ಷ ಕಾಲ ಏಕಾಂತ ಜೈಲುವಾಸವನ್ನು ಮುಂದುವರೆಸಲಾಯಿತು. ಕಿರಣ್ ಬೇಡಿಯವರು ಆತನನ್ನು ಅಲ್ಲಿಂದ ಹೊರತರಬೇಕೆಂಬ ಆದೇಶ ಕೊಟ್ಟ ಮೇಲಷ್ಟೇ ಆತ ಪೊಲೀಸರು ಮತ್ತು ಜೈಲು ಅಧಿಕಾರಿಗಳನ್ನು ಹೊರತುಪಡಿಸಿ ಬೇರೆ ಜನರ ಮುಖ ನೋಡಿದ್ದು.
ನಿರಪರಾಧಿಯಾಗಿದ್ದರೂ ಅನ್ಯಾಯವಾಗಿ ಅನುಭವಿಸಿದ ಈ ಚಿತ್ರಹಿಂಸೆ ಶಹೀದ್ ಅಜ್ಮಿಯ ಜೀವನದ ದಿಕ್ಕನ್ನೇ ಬದಲಿಸಿತು. ತನ್ನಂತೆಯೇ ಪೊಲೀಸರಿಂದ ಬಂಧನಕ್ಕೊಳಗಾಗಿ, ಟೆರರಿಸ್ಟ್ ಎಂಬ ಹಣೆಪಟ್ಟಿ ಹಚ್ಚಿಸಿಕೊಂಡು, ಅನ್ಯಾಯವಾಗಿ ವ್ಯವಸ್ಥೆಯ ಕ್ರೌರ್ಯಕ್ಕೆ ಬಲಿಯಾಗುತ್ತಿರುವ ಸಾವಿರಾರು ಜನರ ಕಣ್ಣೀರನ್ನು ಒರೆಸಬೇಕೆಂಬ ತೀಮರ್ಾನಕ್ಕೆ ಆತ ಬಂದುಬಿಟ್ಟ. ಅದಕ್ಕವನು ಆರಿಸಿಕೊಂಡಿದ್ದು ವಕೀಲಿ ವೃತ್ತಿಯನ್ನು. ಜೈಲಿನಲ್ಲಿರುವಾಗಲೇ ಆತ ಕಾನೂನು ಪದವಿ ಓದುವುದಕ್ಕೆ ಪ್ರಾರಂಭಿಸಿದ್ದ. ಜೈಲಿನಿಂದ ಹೊರಬಂದ ತಕ್ಷಣವೇ ತನ್ನ ಪದವಿಯನ್ನು ಮುಗಿಸಿ ಕಪ್ಪು ಕೋಟು ತೊಟ್ಟು ಪೊಲೀಸರ ದೌರ್ಜನ್ಯಕ್ಕೆ ಬಲಿಯಾದವರ ಕೇಸುಗಳನ್ನು ಹುಡುಕಿ ಹುಡಿಕಿ ಕೈಗೆತ್ತಿಕೊಳ್ಳಲಾರಂಭಿಸಿದ. ಅದರಲ್ಲೂ ವಿಶೇಷವಾಗಿ ಭಯೋತ್ಪಾದಕರೆಂಬ ಹಣೆಪಟ್ಟಿ ಹಚ್ಚಿಸಿಕೊಂಡ ಅಮಾಯಕರ ಪರವಾಗಿ ವಿಶೇಷ ಕಾಳಜಿ ವಹಿಸಿ ವಕಾಲತ್ತು ಮಾಡಲಾರಂಭಿಸಿದ. ಮೊದಲೇ ಬಹಳ ಬುದ್ಧಿವಂತನಾಗಿದ್ದ ಹಾಗೂ ಕಾನೂನುಗಳನ್ನು ಚೆನ್ನಾಗಿ ಅರೆದು ಕುಡಿದಿದ್ದ ಅಜ್ಮಿ ತನ್ನಂತೆಯೇ ಅನೇಕ ಅಮಾಯಕರು ಸರಳುಗಳ ಹಿಂದೆ ಅನ್ಯಾಯವಾಗಿ ಚಿತ್ರಹಿಂಸೆ ಅನುಭವಿಸುವುದನ್ನು ತಪ್ಪಿಸಿದ. ಈ ಪ್ರಕ್ರಿಯೆಯಲ್ಲಿಯೇ ಪೊಲೀಸರ, ಹಿಂದೂತ್ವವಾದಿಗಳ ಕೆಂಗಣ್ಣಿಗೂ ಗುರಿಯಾದ. 2008ರ ಸೆಪ್ಟೆಂಬರ್ 26ರಂದು ಮುಂಬೈನ ತಾಜ್ ಹೊಟೆಲ್ ದಾಳಿಯಲ್ಲಿ ಆರರೋಪಿಗಳೆನಿಸಿದವರ ಪರ ವಕಾಲತ್ತು ವಹಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲವೆಂದು ಶಿವಸೇನೆಯಿಂದ ಬೇರ್ಪಟ್ಟು ತನ್ನದೇ ಮಹಾರಾಷ್ಟ್ರ ನವ ನಿಮರ್ಾಣ ಸೇನೆ ಕಟ್ಟಿಕೊಂಡಿರುವ ರಾಜ್ ಠಾಕ್ರೆಯೇ ಬಹಿರಂಗವಾಗಿ ಬೆದರಿಕೆಯೊಡ್ಡಿದ್ದ. ಅದರಲ್ಲೂ ವಿಶೇಷವಾಗಿ ಅಜ್ಮಿಗೆ ಅನೇಕ ಬಾರಿ ಪ್ರಾಣಬೆದರಿಕೆಗಳೂ ಬಂದಿದ್ದವು. ತಾನು ಪೊಲೀಸರ ಅಥವ ಶಿವಸೇನೆಯಂಥ ಉಗ್ರರ ಗುಂಡಿಗೆ ಒಂದು ದಿನ ಬಲಿಯಾಗುತ್ತೇನೆಂದು ಆತನಿಗೆ ಗೊತ್ತಿದ್ದರೂ ತನ್ನ ವೃತ್ತಿಯನ್ನು ಮಾತ್ರ ಬಿಡಲಿಲ್ಲ. ತನ್ನ ಬದ್ಧತೆಯೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ.
ಸಾಮಾನ್ಯವಾಗಿ ಭಯೋತ್ಪಾದನೆ, ಸಂಘಟಿತ ಅಪರಾಧ, ಕೊಲೆಗಳಂಥ ಗಂಭೀರ ಆರೋಪ ಹೊತ್ತಿರುವವರ ಕ್ರಿಮಿನಲ್ ಕೇಸುಗಳನ್ನು ತೆಗೆದುಕೊಂಡರೆ ಬಹಳಷ್ಟು ದುಡ್ಡು ಮಾಡಬಹುದೆಂಬ ಆಲೋಚನೆ ಬಹಳಷ್ಟು ವಕೀಲರಿಗಿರುತ್ತದೆ. ಆದರೆ ಶಹೀದ್ ಅಜ್ಮಿ ಇದಕ್ಕೆ ಬಹುದೊಡ್ಡ ಅಪವಾದವಾಗಿದ್ದ. ಆತ ಎಂದೂ ದುಡ್ಡಿಗೆ ಆಸೆಪಡಲಿಲ್ಲ. ತನ್ನ ಕಕ್ಷಿದಾರರು ಬಡವರಾಗಿದ್ದರೆ ಅವರಿಂದ ಒಂದು ಪೈಸೆಯನ್ನೂ ಪಡೆಯುತ್ತಿರಲಿಲ್ಲ. ಸ್ವಲ್ಪ ಅನುಕೂಲಸ್ತರಾದರೆ ಕನಿಷ್ಠ ಪೀಜನ್ನು ಮಾತ್ರ ತೆಗೆದುಕೊಳ್ಳುತ್ತಿದ್ದ. ವಾಸ್ತವದಲ್ಲಿ ಭಯೋತ್ಪಾದನಾ ಕೇಸುಗಳ ಬಗ್ಗೆಯೇ ಒಂದು ಪಿಹೆಚ್ಡಿ ಮಾಡಿ ಅಲ್ಲಾಗುತ್ತಿರುವ ಅನ್ಯಾಯವನ್ನು ದಾಖಲಿಸಬೇಕೆಂದು ಶಹೀದ್ ಅಜ್ಮಿ ಬಲವಾದ ಆಸೆಯಿಟ್ಟುಕೊಂಡಿದ್ದ. ಅದನ್ನು ಮಾಡಿಮುಗಿಸುವ ಮೊದಲೇ ಗುಂಡಿಗೆ ಎದೆಯೊಡ್ಡಿ ನೆಲಕ್ಕುರುಳಿದ್ದಾನೆ.
ಅಜ್ಮಿ ಕೇವಲ ವಕೀಲ ವೃತ್ತಿಗೆ ತನ್ನನ್ನು ಸೀಮಿತಗೊಳಿಸಿಕೊಂಡಿರಲಿಲ್ಲ. ಮುಂಬೈನಲ್ಲಿ ಸಾವಿರಾರು ಗುಡಿಸಲುಗಳನ್ನು ನೆಲಸಮ ಮಾಡಿ ಸ್ಲಮ್ ನಿವಾಸಿಗಳನ್ನು ಹೊರದಬ್ಬುತ್ತಿದ್ದಾಗ ಅದರ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ. ಸಕರ್ಾರದ ಜನವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆಗಳು, ವಿಚಾರಗೋಷ್ಠಿಗಳು ನಡೆದರೆ ತಪ್ಪದೇ ಪಾಲ್ಗೊಳ್ಳುತ್ತಿದ್ದ. ಅಠಟಟಣಣಜಜ ಜಿಠಡಿ ಕಡಿಠಣಜಛಿಣಠಟಿ ಠಜಿ ಆಜಟಠಛಿಡಿಚಿಣಛಿ ಖರಣ (ಅಕಆಖ) ಚಿಟಿಜ ಟಿಜಚಿಟಿ ಂಠಛಿಚಿಣಠಟಿ ಠಜಿ ಕಜಠಠಿಟಜ' ಐಚಿತಿಥಿಜಡಿ (ಂಕಐ) ಸಂಘಟನೆಗಳ ಸಕ್ರಿಯ ಕಾರ್ಯಕರ್ತನಾಗಿದ್ದನಲ್ಲದೇ ಅನೇಕ ಸತ್ಯಶೋಧನಾ ತಂಡಗಳಲ್ಲಿ ಭಾಗಿಯಾಗಿದ್ದ.
ಶಹೀದ್ ಅಜ್ಮಿ ಒಬ್ಬ ಅತ್ಯುತ್ತಮ ಭೋದಕನಾಗಿದ್ದ. ತನ್ನ ಬಾಲ್ಯದ ದಿನಗಳಲ್ಲಿ ಆತ ಸುಪ್ರಸಿದ್ಧ ಟಾಟಾ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಕಟ್ಟದೆದುರು ಹಾದು ಹೋಗುತ್ತಾ ತಾನೂ ಒಂದು ದಿನ ವಿದ್ಯಾಥರ್ಿಯಾಗಿ ಈ ಸಂಸ್ಥೆಯೊಳಗೆ ಪ್ರವೇಶಿಸಬೇಕೆಂದು ಕನಸು ಕಾಣುತ್ತಿದ್ದ. ಆದರೆ, ಅದು ಸಾಧ್ಯವಾಗಲೇ ಇಲ್ಲ. ಕೊನೆಗೆ ಅದೇ ಶಿಕ್ಷಣ ಸಂಸ್ಥೆ ಅಜ್ಮಿಯನ್ನು ಅತಿಥಿ ಉಪನ್ಯಾಸಕನಾಗಿ ವಿದ್ಯಾಥರ್ಿಗಳಿಗೆ ಪಾಠ ಮಾಡುವಂತೆ ಆಹ್ವಾನಿಸಿತು! ಹೀಗೆ ವಿದ್ಯಾಥರ್ಿಯಾಗಿ ಹೋಗಬೇಕೆಂದು ಕನಸು ಕಂಡಿದ್ದ ಅಜ್ಮಿ ಉಪನ್ಯಾಸಕನಾಗಿ ಹೋಗಿದ್ದ! ಆತನಿಂದ ಪಾಠ ಹೇಳಿಸಿಕೊಂಡ ವಿದ್ಯಾಥರ್ಿಗಳೇ ನಮ್ಮ ವಿದ್ಯಾಥರ್ಿ ಜೀವನದಲ್ಲಿ ನಾವು ಕೇಳಿದ ಅತ್ಯುತ್ತಮ ಪಾಠಗಳು ಎಂದರೆ ಅಜ್ಮಿ ಹೇಳಿಕೊಟ್ಟ ಪಾಠಗಳು ಎನ್ನುತ್ತಾರೆಂದರೆ ಅಜ್ಮಿಯ ವ್ಯಕ್ತಿತ್ವ, ಪಾಂಡಿತ್ಯ ಮತ್ತು ಬೋಧನಾ ಕುಶಲತೆಗಳು ಅರ್ಥವಾಗುತ್ತವೆ. ಆತನಿಗೆ ಓದಿನ ಗೀಳೂ ಬಹಳವಾಗಿತ್ತು. ಆತ ತಿಹಾರ್ ಜೈಲಿನಲ್ಲಿದ್ದಾಗ ಮಾವೋವಾದಿ ರಾಜಕೀಯ ಖೈದಿಗಳ ಸಂಪರ್ಕಕ್ಕೆ ಬಂದ ಮೇಲೆ ಅವರೊಂದಿಗೆ ಸೇರಿಕೊಂಡು ತಿಹಾರ್ ಜೈಲಿನಲ್ಲೇ ಅತ್ಯುತ್ತಮವಾದ ಒಂದು ಗ್ರಂಥಾಲಯವನ್ನು ಸ್ಥಾಪಿಸಿದ್ದ.
ಶಹೀದ್ ಅಜ್ಮಿಯಿಂದ ಪಾಠ ಹೇಳಿಸಿಕೊಂಡ ವಿದ್ಯಾಥರ್ಿಗಳೆಲ್ಲರೂ ತಮ್ಮ ನೆಚ್ಚಿನ ಮೇಸ್ಟ್ರ ಸಾವಿನಿಂದ ನಿಜಕ್ಕೂ ಕಂಬನಿ ಮಿಡಿಯುತ್ತಿದ್ದಾರೆ. ಆತನಿಂದ ನ್ಯಾಯ ದೊರಕಿಸಿಕೊಂಡ ಅನೇಕ ಬಡ ಮುಸ್ಲಿಂ ಅಮಾಯಕರು ತಮ್ಮ ಕಣ್ಣೀರನ್ನು ಒರೆಸಿದ ಪುಣ್ಯಾತ್ಮನನ್ನು ನೆನದು ಬಿಕ್ಕಳಿಸುತ್ತಿದ್ದಾರೆ. ಆತನೊಂದಿಗೆ ವಿವಿಧ ಸಾಮಾಜಿಕ, ರಾಜಕೀಯ ಹೋರಾಟಗಳಲ್ಲಿ ಭಾಗಿಯಾದವರೆಲ್ಲರೂ ಅಜ್ಮಿಯ ಸಾವಿನಿಂದ ಜರ್ಝರಿತರಾಗಿದ್ದಾರೆ.
ಒಟ್ಟಿನಲ್ಲಿ ಇಂಥ ಅನಘ್ರ್ಯ ರತ್ನವೊಂದನ್ನು ನಮ್ಮ ಕ್ರೂರ ವ್ಯವಸ್ಥೆ ಬಲಿತೆಗೆದುಕೊಂಡಿದೆ.

No comments:

Post a Comment

Thanku