ಡಾ.ಎನ್.ಜಗದೀಶ್ ಕೊಪ್ಪ |
ಬಂಗಾರಪ್ಪ ಕನರ್ಾಟಕದ ರಾಜಕೀಯ ರಂಗದಲ್ಲಿ ಕಳೆದ 40 ವರ್ಷಗಳಿಂದ ಜನಸಾಮಾನ್ಯರ ಮನಸ್ಸಿನಲ್ಲಿ ಚಿರಸ್ಥಾಯಿಯಾಗುಳಿದ ಒಂದು ಹೆಸರು. ಬಡತನ, ಹಸಿವು, ಶೋಷಣೆ, ಗುಲಾಮಗಿರಿತನ ಇವುಗಳ ವಿರುದ್ಧ ತನ್ನ ರಾಜಕೀಯ ಬದುಕಿನುದ್ದಕ್ಕೂ ಹೋರಾಡುತ್ತಲೇ ಬಂದ ಹುಟ್ಟು ಹೋರಾಟಗಾರ ಎಸ್.ಬಂಗಾರಪ್ಪನವರು ಕನರ್ಾಟಕದ ರಾಜಕೀಯ ಹಾಗೂ ಸಾಂಸ್ಕೃತಿಕ ವಲಯಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಕನರ್ಾಟಕದ ರಾಜಕೀಯಕ್ಕೆ ಶಾಂತವೇರಿ ಗೋಪಾಲಗೌಡ ಮತ್ತು ಜೆ.ಎಚ್.ಪಟೇಲರಂತಹ ಧೀಮಂತ ನಾಯಕರು ಹಾಗೂ ಚಿಂತಕರನ್ನು ನೀಡಿದ ಶಿವಮೊಗ್ಗ ಜಿಲ್ಲೆಯ ಮಣ್ಣಿನಂದ ಹುಟ್ಟಿ ಬಂದ ಇನ್ನೋರ್ವ ರಾಜಕೀಯ ನೇತಾರ ಎಸ್.ಬಂಗಾರಪ್ಪ.
1960ರ ದಶಕದಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಮುನ್ನ ವಕೀಲಿ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಡವರ ಮತ್ತು ಗೇಣಿದಾರರ ಪರ ಹೋರಾಡುತ್ತಾ ಸಮಾಜವಾದಿ ಚಳುವಳಿಗೆ ಧುಮುಕಿದ ಬಂಗಾರಪ್ಪನವರು, 1967ರಲ್ಲಿ ಸೊರಬ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗುವುದರ ಮೂಲಕ ವಿಧಾನಸಭೆ ಪ್ರವೇಶಿಸಿದರು. ಆನಂತರ ಬಂಗಾರಪ್ಪನವರದ್ದು ವರ್ಣರಂಜಿತ ವ್ಯಕ್ತಿತ್ವ.
ಸೊರಬ ಕ್ಷೇತ್ರದಿಂದ ಸೋಲಿಲ್ಲದ ಸರದಾರನಂತೆ ನರಂತರವಾಗಿ ವಿಧಾನಸಭೆಗೆ ಆರಿಸಿ ಬಂದ ಬಂಗಾರಪ್ಪನವರು ಆಯಾ ಕಾಲಘಟ್ಟದ ಜ್ವಲಂತ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ದನಯೆತ್ತಿ ಕನರ್ಾಟಕದ ಜನಮನವನ್ನು ಸೂರೆ ಗೊಂಡರು. ರಾಜಕೀಯ ಬದುಕಿನ ಒತ್ತಡಗಳಿಗೆ ಅನುಗುಣವಾಗಿ ಬಂಗಾರಪ್ಪನವರು ಪಕ್ಷಗಳನ್ನು ಬದಲಾಯಿಸಿದರೂ ಕೂಡ ತಾವು ನಂಬಿದ ತತ್ವ ಸಿದ್ಧಾಂತಗಳನ್ನು ಎಂದೂ ತಮ್ಮ ರಾಜಕೀಯ ಸ್ವಾರ್ಥಕ್ಕೆ ಬಲಿಕೊಡಲಿಲ್ಲ. ಇದಕ್ಕೆ ಪ್ರಮುಖ ಕಾರಣ ರಾಮಮನೋಹರ ಲೋಹಿಯಾರ ಚಿಂತನೆ ಹಾಗೂ ಶಾಂತವೇರಿ ಗೋಪಾಲಗೌಡರ ಪ್ರಭಾವ.
ಗೋಪಾಲಗೌಡರ ನಧನಾನಂತರ ಶಿವಮೊಗ್ಗ ಜಿಲ್ಲೆಯ ಪ್ರಭಾವಿ ರಾಜಕಾರಣಿಯಾಗಿ ಜೆ.ಎಚ್.ಪಟೇಲರ ಜೊತೆ ಗುರುತಿಸಿಕೊಂಡ ಬಂಗಾರಪ್ಪನವರು ಕೇವಲ ಶಿವಮೊಗ್ಗ ಜಿಲ್ಲೆಗೆ ಸೀಮಿತವಾಗದೆ ರಾಜ್ಯ ರಾಜಕಾರಣದಲ್ಲಿ ಪ್ರಭಾವ ಬೀರತೊಡಗಿದರು.
ಕನರ್ಾಟಕ ಕಂಡ ಜನಪರ ಕಾಳಜಿಯ ಧೀಮಂತ ಮುಖ್ಯಮಂತ್ರಿ ಎಂದೇ ಹೆಸರಾದ ದಿವಂಗತ ದೇವರಾಜ ಅರಸುರವರು ಕಟ್ಟಿದ ಕ್ರಾಂತಿ ರಂಗ ಪಕ್ಷವನ್ನು ಅವರ ನಧನಾನಂತರ ಮುನ್ನಡೆಸುವುದರ ಮೂಲಕ 80ರ ದಶಕದಲ್ಲಿ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಪತನಗೊಳಿಸುವುದರಲ್ಲಿ ಬಂಗಾರಪ್ಪನವರ ಪಾತ್ರ ಪ್ರಮುಖವಾದುದು. ಗುಂಡೂರಾವ್ ಸರಕಾರ ಪತನಗೊಂಡ ನಂತರ ಈ ರಾಜ್ಯದ ಚುಕ್ಕಾಣಿ ಹಿಡಿದು ಮುಖ್ಯ ಮಂತ್ರಿಯಾಗಬೇಕಿದ್ದ ಬಂಗಾರಪ್ಪ ಹಲವು ರಾಜಕೀಯ ಒಳಸುಳಿಗೆ ಸಿಲುಕಿ ಅಂದಿನ ಜನತಾ ಸರಕಾರದ ರಾಮಕೃಷ್ಣ ಹೆಗಡೆಯವರಿಗೆ ಮುಖ್ಯಮಂತ್ರಿ ಪದವಿ ಬಿಟ್ಟು ಕೊಡಬೇಕಾಗಿ ಬಂದಿತು. ನಂತರದ ದಿನಗಳಲ್ಲಿ ತಮ್ಮ ಕ್ರಾಂತಿರಂಗ ಪಕ್ಷವನ್ನು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಳಿಸುವುದರ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಪಾದಾರ್ಪಣೆ ಮಾಡಿದ ಬಂಗಾರಪ್ಪನವರು ಕಾಂಗ್ರೆಸ್ ನೇತೃತ್ವದ ಸರಕಾರಗಳಲ್ಲಿ ಪ್ರಭಾವಿ ಸಚಿವರಾಗಿ ಕಾರ್ಯ ನರ್ವಹಿಸಿದರು. 1989ರಲ್ಲಿ ಅಸ್ತಿತ್ವದಲ್ಲಿದ್ದ ಕಾಂಗ್ರೆಸ್ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರನ್ನು ಅಂದಿನ ಪ್ರಧಾನ ರಾಜೀವ್ ಗಾಂಧಿ ಅನರೀಕ್ಷಿತವಾಗಿ ಕೆಳಗಿಳಿಸಿ ಬಂಗಾರಪ್ಪನವರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದರು.
ತಮ್ಮ ಜಿಲ್ಲೆಯಾದ ಶಿವಮೊಗ್ಗದ ಜನತೆಯನ್ನು ಜಾತಿ ಧರ್ಮದ ಹಂಗಿಲ್ಲದೆ, ರಾಜಕೀಯ ಪಕ್ಷಗಳ ಕಟ್ಟುಪಾಡುಗಳಿಲ್ಲದೆ ಪ್ರೀತಿಸಬಲ್ಲ ವ್ಯಕ್ತಿತ್ವ ಬಂಗಾರಪ್ಪನವರದ್ದು. ಇಂದಿಗೂ ಶಿವಮೊಗ್ಗ ಜಿಲ್ಲೆಯ ಯಾವುದೇ ಹಳ್ಳಿಗೆ ಹೋಗಲಿ ಅಲ್ಲಿಯ ಗ್ರಾಮಸ್ಥರನ್ನು ಹೆಸರಿಡಿದು ಕರೆಯುವಷ್ಟು ನೆನಪನ್ನು ಬಂಗಾರಪ್ಪ ಉಳಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಬೆಂಗಳೂರಿನಲ್ಲಿ ಬಂಗಾರಪ್ಪನವರ ಯಾವುದೇ ಕಾರ್ಯಕ್ರಮ ನಡೆಯಲಿ ಶಿವಮೊಗ್ಗ ಜಿಲ್ಲೆಯ ಹಳ್ಳಿಗಳಿಂದ ಜನರು ನದಿಯಂತೆ ಹರಿದು ಬರುತ್ತಾರೆ. ಜೊತೆಗೆ ಬಂಗಾರಪ್ಪನವರು ಎಷ್ಟೇ ಪಕ್ಷಗಳನ್ನು ಬದಲಾಯಿಸಿದರೂ ಅವರನ್ನು ಗೆಲ್ಲಿಸುತ್ತಲೇ ಬಂದಿದ್ದಾರೆ.
ಬಂಗಾರಪ್ಪನವರ ರಾಜಕೀಯ ತಪ್ಪು ನಧರ್ಾರಗಳಿಂದಾಗಿ ಇಂದಿನ ಯು.ಪಿ.ಎ. ಸರಕಾರದಲ್ಲಿ ಕೇಂದ್ರ ಸಚಿವರಾಗುವ ಅವಕಾಶವನ್ನು ಕಳೆದುಕೊಂಡರು. ಬಂಗಾರಪ್ಪನವರು ಬಿ.ಜೆ.ಪಿ. ಅಭ್ಯಥರ್ಿಯಾಗಿ ಲೋಕಸಭೆ ಪ್ರವೇಶಿಸಿದಾಗ ವಾಜಪೇಯಿ ನೇತೃತ್ವದ ಎನ್.ಡಿ.ಎ. ಸರಕಾರ ಚುನಾವಣೆಯಲ್ಲಿ ಸೋಲುಂಡಿತು. ಬಂಗಾರಪ್ಪನವರ ವ್ಯಕ್ತಿತ್ವಕ್ಕೆ ಹೊಂದಾಣಿಕೆಯಾಗದ ಬಿ.ಜೆ.ಪಿ. ಪಕ್ಷದ ಉಸಿರುಗಟ್ಟಿಸುವ ವಾತಾವರಣದಲ್ಲಿ ಇರಲಾರದೆ ರಾಜಿನಾಮೆ ನೀಡಿ ಅವರು ಹೊರಬಂದರು.
ಅತ್ತ ಕಾಂಗ್ರೆಸ್ ಪಕ್ಷವನ್ನು ಇತ್ತ ಬಿ.ಜೆ.ಪಿ.ಪಕ್ಷವನ್ನು ಸಮಾನ ಶತೃಗಳಂತೆ ಭಾವಿಸಿರುವ ಬಂಗಾರಪ್ಪನವರು ತಮ್ಮ 75ರ ಈ ಇಳಿವಯಸ್ಸಿನಲ್ಲೂ ಉತ್ತರ ಪ್ರದೇಶದ ಮುಲಾಯಂಸಿಂಗ್ ನೇತೃತ್ವದ ಸಮಾಜವಾದಿ ಪಕ್ಷವನ್ನು ಸೇರಿ ಮತ್ತೆ ಲೋಕಸಭೆಗೆ ಸ್ವಧರ್ಿಸಿ ಜಯಭೇರಿ ಬಾರಿಸಿ ಕನರ್ಾಟಕದಲ್ಲಿ ಸಮಾಜವಾದಿ ಪಕ್ಷ ಬೆಳೆಯಲು ಶ್ರಮಿಸುತ್ತಿದ್ದಾರೆ.
ನನಗೆ ಬಂಗಾರಪ್ಪನವರ ಬಗ್ಗೆ ಗೌರವ ಮೂಡಲು ವಿಶೇಷ ಕಾರಣವೆಂದರೆ ಅವರ ಶಿಸ್ತುಬದ್ಧ ಜೀವನ. ನರಂತರ ರಾಜಕೀಯ ಚಟುವಟಿಕೆಗಳ ನಡುವೆಯೂ ಕ್ರೀಡೆ, ಸಂಗೀತ, ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡಿರುವ ಬಂಗಾರಪ್ಪನವರು ಯಾವುದೇ ದುರಭ್ಯಾಸಗಳಿಲ್ಲದೆ ತಮ್ಮ ದೇಹ ಹಾಗೂ ಮನಸ್ಸನ್ನ ಆರೋಗ್ಯಯುತವಾಗಿ ಕಾಪಾಡಿಕೊಂಡು ಬಂದಿದ್ದಾರೆ.
ಇಂದಿನ ಕನರ್ಾಟಕ ದ ರಾಜಕಾರಣದಲ್ಲಿ ಎಸ್.ಎಂ.ಕೃಷ್ಣ, ಬಂಗಾರಪ್ಪ ಮತ್ತು ದೇವೇಗೌಡ ಮೂವರು ಒಂದೇ ವಯೋಮಾನದವರು. ಈ ಮೂವರ ಹೋರಾಟ, ಚಿಂತನೆ ಮತ್ತು ಜನಪರ ಕಾಳಜಿ ಕನರ್ಾಟಕದ ಭವಿಷ್ಯದ ರಾಜಕಾರಣಿಗಳಿಗೆ ಮಾದರಿಯಾಗಬಲ್ಲದು. 75 ವರ್ಷಗಳನ್ನು ಆಚರಿಸಿಕೊಳ್ಳುತ್ತಿರುವ ಬಂಗಾರಪ್ಪನವರು ಇನ್ನಷ್ಟು ಕಾಲ ನಮ್ಮ ನಡುವೆ ಇದ್ದು ಕನರ್ಾಟಕದ ನೆಲ ಜಲ, ಭಾಷೆ ಸಂಸ್ಕೃತಿ ಮುಂತಾದ ಹೋರಾಟಗಳಿಗೆ ಸ್ಫೂತರ್ಿ ತುಂಬಲಿ ಎಂಬುದು ನನ್ನ ಆಶಯ
ಡಾ.ಎನ್.ಜಗದೀಶ್ ಕೊಪ್ಪ
No comments:
Post a Comment
Thanku