Friday, January 13, 2012

ಮಾಧ್ಯಮಗಳ ಐಡಿಯಾಲಜಿ ಎಂತಹದ್ದು..



ಪ್ರಜಾಪ್ರಭುತ್ವದ ಸ್ಪಧರ್ಾಕಣದಲ್ಲಿರುವ ಜಾತಿ, ವರ್ಗ, ಧರ್ಮ ಲಿಂಗತ್ವ, ಕೋಮು ಮೊದಲಾದ ಐಡೆಂಟಿಟಿಗಳೇ ಇಂದು ಮಾಧ್ಯಮಗಳನ್ನು ನಿಯಂತ್ರಿಸುತ್ತಿವೆ ಎಂಬ ಗ್ರಹಿಕೆ ಈ ಲೇಖನದ ಹಿನ್ನಲೆಯಾಗಿದೆ ಎನ್ನುತ್ತಾರೆ ಶ್ರೀನಿವಾಸ ಹೆಚ್.ಆರ್ ಮಂಗಳೂರು.

ಮಾಧ್ಯಮಗಳ ಹಿಂದೆ ಅವುಗಳದ್ದೇ ಆದ ಐಡಿಯಾಲಾಜಿಕಲ್ ನೆಲೆಗಳಿರುತ್ತವೆ ಎಂಬ ಗ್ರಹಿಕೆ ಮಾಧ್ಯಮಗಳನ್ನು ನೋಡುವ ಆದರ್ಶವಾದಿ ಗ್ರಹಿಕೆಗಳನ್ನು ತಿರಸ್ಕರಿಸುತ್ತದೆ. ಪತ್ರಿಕೆಗಳು ಪ್ರಜಾಪ್ರಭುತ್ವದ ಕಾವಲುನಾಯಿ ಎಂಬ ಮಾತಿನಂತೆ ಬಹುಮಟ್ಟಿಗೆ ಇಂಡಿಯಾದಲ್ಲಿ ಪ್ರಜಾಪ್ರಭುತ್ವದ ಅಸ್ತಿತ್ವದೊಂದಿಗೆ ಮಾಧ್ಯಮಗಳ ಅಸ್ತಿತ್ವವವು ವಿವರಿಸಿಕೊಳ್ಳುತ್ತಿದೆ.

ಪತ್ರಿಕೆಗಳು ಕಾವಲು ನಾಯಿ ಎಂದು ಏಕಕಾರದಲ್ಲಿ ಭಾವಿಸಿದರೆ ಪ್ರಜಾಪ್ರಭುತ್ವ ಚಟುವಟಿಕೆಗಳ ನೇರ ಪ್ರಕ್ರಿಯೆ, ಪರಿಣಾಮಗಳಿಂದ ಹೊರಗೆ (ಮನೆಯ ಹೊರಗೆ) ಕಾವಲು ಕುಳಿತ ಸ್ಥಿತಿ ಎಂದಾಗುತ್ತದೆ. ಪತ್ರಿಕೆಗಳ ಪ್ರಜಾಪ್ರಭುತ್ವದಲ್ಲಿ ಸಂಲಗ್ನಗೊಂಡು ಅವೂ ಈ ಚಟುವಟಿಕೆಗಳಲ್ಲಿ ನೇರವಾಗಿ ಭಾಗವಹಿಸುತ್ತವೆ ಎಂದು ತಿಳಿದುಕೊಳ್ಳೋಣ. ಆಗ ಪ್ರಜಾಪ್ರಭುತ್ವ ಎನ್ನುವುದು ಬೇರೆ ಬೇರೆ ಹಿತಾಸಕ್ತಿಗಳು ಅಧಿಕಾರಕ್ಕಾಗಿ ಸ್ಪಧರ್ಿಸುವ ಬಹುರೂಪಿ ಹಿತಾಸಕ್ತಿಗಳ ಸ್ಪಧರ್ಾಕರಣವಾಗಿರುವ ದರಿಂದ ಇದಕ್ಕೆ ಸಂವಾದಿಯಾಗಿ ಮಾಧ್ಯಮಗಳೂ ಬಹುರೂಪಿಯಾಗಿದ್ದು, ಅಧಿಕಾರಕ್ಕಾಗಿ ಸ್ಪಧರ್ಿಸುವ ವಿಭಿನ್ನ ಹಿತಾಸಕ್ತಿಗಳನ್ನು ಪ್ರತಿನಿಧಿಕರಿಸುತ್ತದೆ. ಅಥವಾ ಬೇರೆಬೇರೆ ಐಡಿಯಾಲಾಜಿಗಳ ಮುಖವಾಣಿಗಳಾಗಿ ಕೆಲಸ ಮಾಡುತ್ತವೆ ಎಂಬ ತಿಳುವಳಿಕೆ ಮೂಡುತ್ತದೆ.

ಪ್ರಜಾಪ್ರಭುತ್ವದ ಸ್ಪಧರ್ಾಕಣದಲ್ಲಿರುವ ಜಾತಿ, ವರ್ಗ, ಧರ್ಮ ಲಿಂಗತ್ವ, ಕೋಮು ಮೊದಲಾದ ಐಡೆಂಟಿಟಿಗಳೇ ಇಂದು ಮಾಧ್ಯಮಗಳನ್ನು ಕೂಡ ನಿಯಂತ್ರಿಸುತ್ತಿವೆ ಎಂಬ ಗ್ರಹಿಕೆ ಈ ಲೇಖನದ ಹಿನ್ನಲೆಯಲ್ಲಿದೆ. ಹೀಗಾಗಿ ಮಾಧ್ಯಮಗಳು ಕೇವಲ ವಾಸ್ತವಗಳನ್ನು ವರದಿ ಮಾಡುವುದಿಲ್ಲ. ಬದಲಾಗಿ ಸತ್ಯಗಳನ್ನು ತಮ್ಮದೇ ಐಡಿಯಾಲಾಜಿಕಲ್ ಹಿನ್ನೆಲೆಯಲ್ಲಿ ರೂಪಿಸುವ ಕೆಲಸ ಮಾಡುತ್ತವೆ ಎಂಬುದರ ಕಡೆಗೆ ಇಲ್ಲಿ ಗಮನ ಹರಿಸಲಾಗಿದೆ. ಇದರ ಜೊತೆಗೆ ಕಾಪರ್ೋರೆಟ್ ಜಗತ್ತಿನ ಜೊತೆಗೆ ಮಾಧ್ಯಮಗಳು ಸಂಬಂಧ ಪಡೆದಿದ್ದು ಇಂದು ಉದ್ಯಮಗಳಾಗಿ ಗುರುತಿಸಿಕೊಂಡಿರುವದರಿಂದ ಸಹಜವಾಗಿ ಲಾಭ ಗಳಿಸಿ ಜಾಗತಿಕ ಬಂಡವಾಳದಲ್ಲಿ ಪಾಲು ಪಡೆಯುವುದು ಇವುಗಳ ಉದ್ದೇಶವಾಗಿದೆ. ಸಾಮಾನ್ಯವಾಗಿ ಒಂದು ಆಲೋಚನೆ, ಉಪಾಯ ಎಂಬ ಅರ್ಥದಲ್ಲಿ ಐಡಿಯಾಲಾಜಿ ಪದ ಸೂಚಿಸುತ್ತದೆ. ಸಿದ್ದಾಂತ, ತತ್ವ ಎಂಬ ಪದಗಳಿಗೆ ಸಂವಾದಿಯಾದ ಇಂಗ್ಲೀಷ್ ಐಡಿಯಾಲಾಜಿ ಅನೇಕ ಆಲೋಚನೆಗಳ ಒಂದು ಸಮೂಹ ಅಥವಾ ಚಿಂತನದ ತುಣುಕುಗಳು ತರ್ಕಬದ್ದವಾಗಿ ವಾಸ್ತವವನ್ನು ಜನಕ್ಕೆ ಕಟ್ಟಿಕೊಡುವುದು ಎಂಬ ಅರ್ಥವನ್ನು ಆ ಪದವೊಳಗಿಂಡಿದೆ.

1977ರಲ್ಲಿ ಈ ಪದ ಮೊಟ್ಟಮೊದಲ ಬಾರಿಗೆ ಡೆಸ್ಮುಟ್ ದಿ ಟ್ರಿಸ್ಸಿ ಎನ್ನುವ ಪ್ರೆಂಚ್ ವಿದ್ವಾಂಸನಿಂದ ಚಲಾವಣೆಗೆ ಬಂತು. ಆತನ ವಿವರಣೆಯೆಂದರೆ, "ಆಲೋಚನೆಗಳ ವಿಜ್ಞಾನವೇ ಐಡಿಯಾಲಜಿ". ಅದು ಯಾವುದೇ ಸಂದೇಹ ಅಥವಾ ಗೊತ್ತಿಲ್ಲದರ ಬಗ್ಗೆ ಸೂಚಿಸುವುದು. ವೈಜ್ಞಾನಿಕ ಉತ್ತರವೇ ಐಡಿಯಾಲಜಿ. ಇಂದು ಈ ಪದಕ್ಕೆ ವಿಸ್ತಾರವಾದ ಅರ್ಥ ಪ್ರಾಪ್ತಿಯಾಗಿದೆ. ಯಾವುದೇ ಒಂದು ಕ್ರಿಯೆ ಅಥವಾ ನುಡಿಯ ಹಿಂದೆ ಒಂದು ಐಡಿಯಾಲಜಿ ಇರುತ್ತದೆ. ಈ ಐಡಿಯಾಲಜಿ ವ್ಯಕ್ತಿಯನ್ನು ಕ್ರಿಯಾಶೀಲವಾಗಿಸುತ್ತದೆ. ಆಲೋಚನೆಗೆ ಸಿಡಿಮದ್ದಿನಂತೆ ಕಾರ್ಯನಿರ್ವಹಿಸುವ ಕಾರ್ಯ 3 ರೀತಿಯದ್ದಾಗಿದೆ.

1 ವಾಸ್ತವವನ್ನು ಸರಳೀಕರಿಸುವುದು.

2 ವಾಸ್ತವದ ಬಗ್ಗೆ ಆದೇಶವನ್ನೀಯುವುದು.

3 ವಾಸ್ತವವನ್ನು ಸಮಥರ್ಿಸುವುದು.

ನಿದರ್ಶನವೊಂದರಿಂದ ಮೇಲಿನವುಗಳನ್ನು ಮತ್ತಷ್ಟು ಸ್ಪಷ್ಟಪಡಿಸಿಕೊಳ್ಳಬಹುದು. ಅಹಿಂಸಾ ಸಿದ್ದಾಂತ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಗಾಂಧೀಜಿ. ಆತ ವಾಸ್ತವವನ್ನು ಅಥರ್ೈಸಿದುದು ಅಹಿಂಸೆಯ ನೆಲೆಯಲ್ಲಿ. ಆದರೆ, ಈ ಸಿದ್ದಾಂತ ಕ್ರೀಯಾಶೀಲವಾಗು ವುದು ಹೀಗೆ. ನಾವು ಅಹಿಂಸೆಯನ್ನು ತೊರೆಯಬೇಕು. ಯಾವುದೇ ಜೀವಿಗೆ ನೋವುಂಟು ಮಾಡಬಾರದು ಎಂದು ಹೇಳುವ ಗಾಂಧಿಜಿ ಉದಯಸಿದ್ದು ಬನಿಯಾ ಜಾತಿಯಲ್ಲಿ, ವ್ಯಾಪಾರಿ ಕುಟುಂಬದ ವ್ಯಕ್ತಿ, ಒಬ್ಬ ವ್ಯಾಪಾರಿಗೆ ಲಾಭ ಅಥವಾ ನಷ್ಟ ಉಂಟಾಗುವುದು ಅಹಿಂಸೆ ಮತ್ತು ಹಿಂಸೆಯಿಂದ.

ಪ್ರತಿಭಟನೆ, ಗಲಭೆ, ಹಿಂಸೆ ಇರುವ ಎಡೆಗಳಲ್ಲಿ ವ್ಯಾಪಾರ ಸಾಧ್ಯವಾಗುವುದಿಲ್ಲ. ಸಂಭ್ರಮ, ಶಾಂತಿ, ಅಹಿಂಸೆ ಇದ್ದಾಗಲಷ್ಟೇ ವ್ಯಾಪಾರ ಸಾಧ್ಯ. ಆದ್ದರಿಂದ ಆಥರ್ಿಕ ವಹಿವಾಟು ನಡೆಯಬೇಕಾದರೆ, ಅಹಿಂಸಾವಾದ ಜಾರಿಯಾಗಬೇಕು. ಇದು ಅಹಿಂಸಾವಾದದ ಕ್ರೀಯಾಶಿಲತೆ. ಯಾವುದೇ ಐಡಿಯಾಲಜಿಯೂ ಸಹ ತನ್ನದೇ ಆದ ಹಿತಾಸಕ್ತಿಗಳನ್ನು ಹೊಂದಿರುತ್ತದೆ. ಅಲ್ಲದೇ ಹಿತಾಸಕ್ತಿಗಳನ್ನು ಪೋಷಿಸಿ ಬೆಳೆಸುತ್ತಿರುತ್ತದೆ.

ಆಧುನಿಕ ತಂತ್ರಜ್ಞಾನ ಇಂದು ಮಾದ್ಯಮಗಳಿಗೆ ವೇಗವನ್ನು ತಂದುಕೊಟ್ಟಿದೆ. ಸುದ್ದಿಸ್ಪೋಟದ ಈ ಕಾಲದಲ್ಲಿ ಜನರಿಗೆ ಸುದ್ದಿಕೊಡುವ ಧಾವಂತದಲ್ಲಿ ಎಂತಹ ಸುದ್ದಿ ಅತ್ಯವಶ್ಯ ಎಂಬುದನ್ನು ಮರೆತು, ಯಾರು ಮೊದಲು ಸುದ್ದಿ ಕೊಡುತ್ತಾರೆಂಬುದು ಮುಖ್ಯವಾಗುತ್ತದೆಯೇ ಹೊರತು ಎಂತಹ ಸುದ್ದಿ ಕೊಡುತ್ತಿದ್ದೇವೆ ಅದು ಸತ್ಯವೇ ಅದು ನಿಖರವೇ ಎಂಬ ಸಂಗತಿಗಳು ತೆರೆಯ ಹಿಂದೆ ಸರಿಯುತ್ತಿವೆ. ಸುದ್ದಿಗೆ ಮೊದಲೇ ಬೇಡಿಕೆ ಕಡಿಮೆ. ಹೆಚ್ಚೆಂದರೆ, ಅದು ಒಂದು ದಿನದ್ದು ಮಾತ್ರ. ಆದರೆ, 24ಗಂಟೆ ಸುದ್ದಿ ವಾಹಿನಿಗಳು ಬಂದ ಮೇಲೆ ಇದರ ಆಯುಷ್ಯ ಇನ್ನು ಕಡಿಮೆ. ಈಗ ಅದು ಬರೀ ಕ್ಷಣದ್ದು ಮಾತ್ರ. 24ಗಂಟೆ ಸುದ್ದಿ ಪ್ರಸಾರ ಬಂದಮೇಲೆ ಕ್ಷಣಕ್ಷಣಕ್ಕಾದರೂ ಏನಾದರೂ ಬ್ರೇಕಿಂಗ್ ನ್ಯೂಸ್ ಕೊಡಲೇಬೇಕು. ಆ ಟೀವಿಗಳು ಇದಕ್ಕಿಂತ ಈ ಟಿವಿಯ ಸುದ್ದಿಯನ್ನು ಬ್ರೇಕ್ ಮಾಡಬೇಕು. ಅದು ಒಳ್ಳೆಯದ್ದೆಆಗಿರಲಿ, ಕೆಟ್ಟದೇ ಆಗಿರಲಿ. ತಾನು ಮೊದಲೇ ಅದನ್ನು ಬ್ರೇಕ್ ಮಾಡಿದೆ ಎಂಬ ಪೈಪೋಟಿಯಲ್ಲಿ ಸುದ್ದಿಗೆ ಇರಬೇಕಾದ ಸತ್ಯ ನಿಷ್ಠೆ ಹಾಗೂ ಘನತೆಗಳೆರಡು ಮಣ್ಣುಪಾಲಾಗುತ್ತಿವೆ.

2005ರಲ್ಲಿ ಅಮಿತಾಬಚ್ಚನ್ ಅಸ್ವಸ್ಥರಾಗಿ ಮುಂಬಯಿನ ಲೀಲಾವತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರು ಚಿಕಿತ್ಸೆ ಪಡೆಯುತ್ತಿದ್ದ ಕೊಠಡಿಗೆ ಒಬ್ಬ ವರದಿಗಾಥರ್ಿ ನುಗ್ಗಿ ಬಚ್ಚನ್ರವರ ಬೈಟ್ ಪಡಯುಲು ಯತ್ನಿಸಿದ್ದರು. ಆಕೆಯನ್ನು ಆಸ್ಪತ್ರೆಯ ಸಿಬ್ಬಂದಿ ಆಚೆ ತಳ್ಳಿದ್ದರು. ಅದೇ ವರ್ಷ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಮೇಲೆ ನಡೆದ ಉಗ್ರರದಾಳಿಯಲ್ಲಿ ಗಾಯಗೊಂಡಿದ್ದ ಪಟೇಲಪ್ಪ ಎಂಬುವವರ ಬೈಟ್ ಪಡೆಯಲು ಒಬ್ಬ ಟಿವಿ ವರದಿಗಾತರ್ಿ ವೈದ್ಯರ ವೇಷದಲ್ಲಿ ಆಸ್ಪತ್ರಗೆ ನುಗ್ಗಿದಳು. ಈ ಎರಡು ಘಟನೆಗಳಲ್ಲಿ ಹಲವು ನೈತಿಕ ಪ್ರಶ್ನೆಗಳಿವೆ.

ಅದು ಸುದ್ದಿ ಮುಖ್ಯವೇ ಅಥವಾ ಬಚ್ಚನ್ ಆರೋಗ್ಯ ಮುಖ್ಯವೇ? ಅಥವಾ ಉಗ್ರರ ದಾಳಿಗೆ ಏಕೈಕ ಸಾಕ್ಷಿಯಾಗಿದ್ದ ಪಟೇಲಪ್ಪನವರ ಭದ್ರತೆ ಮುಖ್ಯವೇ? ಒಬ್ಬ ವ್ಯಕ್ತಿಗೆ ಖಾಸಗಿತನ ಮುಖ್ಯವಲ್ಲವೇ? ಟಿವಿ ವಾಹಿನಿಗಳು ಮನುಷ್ಯನ ಖಾಸಗಿ ಬದುಕಿಗೆ ಕೈಹಾಕುತ್ತಿವೆಯೇ? ಪದ್ಮಪ್ರಿಯ ಒಬ್ಬ ಶಾಸಕರ ಪತ್ನಿಯಾಗಿದ್ದರೂ ಆಕೆಗೂ ಒಂದು ಖಾಸಗಿ ಬದುಕು ಇರಬಹುದಿತ್ತಲ್ಲವೇ? ವ್ಯಕ್ತಿಗತ ನೋವು ಸಂತೋಷ ಆಯ್ಕೆಗಳು ಇರಬಹುದಲ್ಲವೇ? ಎಲ್ಲವನ್ನು ಬಿಚ್ಚಿಡುವ ಧಾವಂತದಲ್ಲಿ ಟಿವಿ ಸುದ್ದಿಗಾರರು ಜನರನ್ನು ಭೇಟೆಯಾಡುತ್ತಿದ್ದಾರೆ.

ಆಧುನಿಕ ತಂತ್ರಜ್ಞಾನ ಮೂಲಕ ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ ಪರಿಕಲ್ಪನೆ ಹುಟ್ಟಿಕೊಂಡಿದೆ. ಇದರಿಂದ ತಕ್ಷಣದ ವರದಿಗಳು ವೀಕ್ಷಕ/ಓದುಗರಿಗೆ ಸಿಗುತ್ತವೆ. ಆದರೆ, ವರದಿಗಳ ಸ್ವರೂಪ ಹಾಗೂ ಅದರ ಹಿಂದಿನ ಸಮಾಜದ ಕಳಕಳಿಯಾದರೂ ಎಂತಹದ್ದು.

2005ರಲ್ಲಿ ಆದಿ ಉಡುಪಿಯಲ್ಲಿ ನಡೆದ ಬೆತ್ತಲೆ ಪ್ರಕರಣ. ಹಾಜಬ್ಬ ಹಾಗೂ ಹಸನಬ್ಬರವರನ್ನು ಬೆತ್ತಲೆ ಮಾಡಿದ ಪ್ರಕರಣಕ್ಕೆ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ವ್ಯಕ್ತವಾಯಿತು. ಅದರಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿನ ಪ್ರತಿಭಟನೆ ತೀವ್ರಸ್ವರೂಪವನ್ನು ತಳೆಯುತ್ತಿತ್ತು. ಘಟನೆಯ ಮರುದಿನ ಈ ಜಿಲ್ಲೆಗಳ ಪ್ರಸಿದ್ದ ದಿನಪತ್ರಿಕೆಯೊಂದು ಮುಖಪುಟದಲ್ಲಿ ಇದು ಭಾರತವಲ್ಲ ಪಾಕಿಸ್ತಾನವೆಂಬ ಶಿಷರ್ಿಕೆಯಡಿ ಪ್ರತಿಭಟನೆಯ ಮೆರವಣಿಗೆಯ ವೇಳೆ ಪಾಕಿಸ್ತಾನದ ಧ್ವಜ ಹಾರಾಡುತ್ತಿತ್ತು ಎಂಬ ಸುದ್ದಿಯನ್ನು ಪ್ರಕಟಿಸಿತ್ತು. ನಂತರ ಮರುದಿನದ ಪತ್ರಿಕೆಯಲ್ಲಿ ಸುದ್ದಿಯೂ ಕಣ್ತಪ್ಪಿಂದ ತಪ್ಪಾಗಿ ಪ್ರಕಟವಾಗಿದೆ ಎಂದು ವಿಷಾಧಿಸಿ ಪ್ರಕಟಿಸಿತು. ದಗರ್ಾದ ಧ್ವಜವನ್ನು ಪಾಕಿಸ್ತಾನದ ಧ್ವಜವೆಂದು ಚಿತ್ರ ಸಮೇತ ಸುದ್ದಿ ಪ್ರಕಟಿಸುವ ಪತ್ರಿಕೆಗಳು ಕೇವಲ ವೇಗದಿಂದ (ಅವಸರ) ಇಂತಹ ತಪ್ಪು ಮಾಡಿರಲಿಕ್ಕಿಲ್ಲ. ಬದಲಾಗಿ ಇಡೀ ಪ್ರಕರಣವನ್ನು ತಿರುಚುವ ಪತ್ರಿಕೆಯ ಹಿಂದಿರುವ ಐಡಿಯಾಲಜಿ ಅರ್ಥವಾಗುತ್ತದೆ.

ಮಾಧ್ಯಮಗಳು ಕೇವಲ ನಡೆದ ಘಟನೆಯನ್ನು ಮಾತ್ರ ವರದಿ ಮಾಡದೇ ಸುದ್ದಿಗಳನ್ನು ಸೃಷ್ಟಿಸುವ ಕ್ರಿಯೆಯಲ್ಲಿ ತೊಡಗಿರುತ್ತವೆ. ರೋಚಕೆತೆಯ ಬೆನ್ನತ್ತು ಟಿವಿ ವರದಿಗಾರರು ಮಾಡುವ ಕೆಲಸ ಒಂದೆರಡಲ್ಲ.

ಇತ್ತೀಚಿಗೆ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಧಾರವಾಡದಲ್ಲಿ ಮರಾಠಿಗರ ವಿರುದ್ದ ಪ್ರತಿಭಟನೆ ಮಾಡುತ್ತಿದ್ದ ಕನ್ನಡ ಚಳುವಳಿಗಾರರಿಗೆ ನೀವು ಬರೀ ಹೀಗೆ ಘೋಷಣೆ ಕೂಗಿದರೆ ಸಾಲದು. ಏನಾದರೂ ದಾಂಧಲೆ ಮಾಡಿ ಎಂದು ಟಿವಿ ವರದಿಗಾರರೇ ಪ್ರೇರೆಪಿಸಿದ್ದರು. ಅದರಂತೆ ಅಲ್ಲಿನ ತಿಳುವಳಿಕೆ ಇಲ್ಲದ ಕೆಲ ಮಂದಿ ಮಹಾರಾಷ್ಟ್ರ ಬ್ಯಾಂಕಿಗೆ ನುಗ್ಗಿ ಪಿಠೋಪಕರಣಗಳನ್ನು ಒಡೆದುಹಾಕಿದರು. ಬ್ಯಾಂಕ್ ಆಪ್ ಮಹಾರಾಷ್ಟ್ರ ಮರಾಠಿಗರದ್ದೇ ಅಥವಾ ಭಾರತೀಯರದೇ? ಮೈಸೂರು ಬ್ಯಾಂಕ್ ಕೂಡ ದೇಶದ ಆಸ್ತಿಯೇ ತಾನೆ? ಅದೇನು ಕನರ್ಾಟಕದ ಆಸ್ತಿಯೇ? ನಾವು ಬರೀ ಮಹಾರಾಷ್ಟ್ರ ಬ್ಯಾಂಕಿನ ಒಂದು ಶಾಖೆಯನ್ನು ಪುಡಿಮಾಡಿದರೆ, ಮರಾಠಿಗರು ಮನಸ್ಸು ಮಾಡಿದರೆ, ಮುಂಬಯಿ ಹಾಗೂ ಪುಣೆಯಲ್ಲಿರುವ ಕನ್ನಡಿಗರ ಅಂಗಡಿ ಮುಂಗಟ್ಟುಗಳನ್ನು ಪುಡಿ ಮಾಡಿಬಿಡುತ್ತಿದ್ದರು. ಪುಣ್ಯ ಅವರು ಈ ಕೆಲಸಕ್ಕೆ ಕೈಹಾಕಲಿಲ್ಲ.

ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದ ಅವಧಿಯದು. ಶಾಸಕರ ಭವನಕ್ಕೆ ಬಂದಿದ್ದ ಬೆಳಗಾವಿ ಮೇಯರ್ ವಿಜಯ ಮೋರೆ ಹಾಗೂ ಅವರ ಇಬ್ಬರು ಸಹಚರರಿಗೆ (ಅವರಲ್ಲಿ ಒಬ್ಬರು ಮಾಜಿಉಪಮೇಯರು ಹಾಗೂ ಇನ್ನೊಬ್ಬರು ಮಾಜಿಶಾಸಕರು) ಕನ್ನಡ ಚಳುವಳಿಗಾರರು ಮುಖಕ್ಕೆ ಮಸಿ ಬಳಿದರು. ಭಾರತೀಯ ದಂಡ ಸಂಹಿತೆಯ ಪ್ರಕಾರ ಮಸಿ ಬಳಿಯುವುದು ಮಾನಹಾನಿ, ಎರಡು ಭಾಷಿಕರ ನಡುವೆ ದ್ವೇಷ ಹುಟ್ಟಿಸುವ ಕೆಲಸ. ಮೋರೆಯ ಮುಖಕ್ಕೆ ಮಸಿ ಬಳಿಯುವ ಜಾಗಕ್ಕೆ ಚಳುವಳಿಗಾರರು ಟಿವಿ ವರದಿಗಾರರನ್ನು ಕರೆದುಕೊಂಡು ಹೋಗಿದ್ದರು. ಅಪರಾಧಕ್ಕೆ ಸಾಕ್ಷಿಯಾಗುವುದು ಅಪರಾಧವಲ್ಲವೇ? ಅಲ್ಲ ಎನ್ನುವುದಾದರೆ, ಟಿವಿ ವರದಿಗಾರರನ್ನು ನಾಳೆ ಕರೆದುಕೊಂಡು ಹೋಗಿ ಯಾರಾದರೂ ಕೊಲೆ ಮಾಡಿದರೆ, ನಾವು ಅದನ್ನು ವರದಿ ಮಾಡುತ್ತೇವೆಂದು ಹೇಳಲಾದಿತೇ?

ಟಿವಿ ವಾಹಿನಿಗಳು ಅನೇಕ ವರ್ಷಗಳಿಂದ ಮುದ್ರಣ ಮಾದ್ಯಮ ಪಾಲಿಸಿಕೊಂಡು ಬಂದ ಸೂಕ್ಷ್ಮತೆಗಳ ಹಂಗನ್ನು ತೊರೆದಿವೆ. ಹೀಗಾಗಿ ಮಾಧ್ಯಮಗಳು ಮಾಲೀಕರ ನಿಲುವುಗಳನ್ನು ಅವಲಂಭಿಸಿ ಕೆಲಸ ಮಾಡುತ್ತಿವೆ.

No comments:

Post a Comment

Thanku