ಯಾವುದು ಹೇಗಿದ್ದರೇನು. ತಾವು ಮಾತ್ರ ಚನ್ನಾಗಿ ಬದುಕಬೇಕೆಂಬ ಸ್ವಾರ್ಥವನ್ನು ಪ್ರತಿಯೊಬ್ಬರು ಬಿಟ್ಟು, ತನ್ನೆದುರಿಗೆ ನಡೆಯುತ್ತಿರುವ ಭ್ರಷ್ಟಾಚಾರವನ್ನು ಸಾರಾಸಗಟಾಗಿ ವಿರೋಧಿಸಿ, ಸಮಾಜದ ಸ್ವಾಸ್ಥ್ಯಕ್ಕಾಗಿ ಪಕ್ಷ ಭೇದವನ್ನು ಮರೆತು ಐಕ್ಯತಾ ಹೋರಾಟಗಳಲ್ಲಿ ಭಾಗವಹಿಸಬೇಕು. ಇದು ಇಂದಿನ ವ್ಯವಸ್ಥೆಯ ಅನಿವಾರ್ಯ ಎಂದು ಅಭಿಪ್ರಾಯಪಡುತ್ತಾರೆ ಕಾ.ಅನಂತಸುಬ್ಬರಾವ್, ಎ.ಐ.ಟಿ.ಯು.ಸಿ ರಾಜ್ಯ ಪ್ರದಾನ ಕಾರ್ಯದಶರ್ಿಗಳು.ಭಾರತದ ರಾಜಕಾರಣ ಭ್ರಷ್ಟಾಚಾರದಲ್ಲಿ ದಿಲ್ಲಿಯಿಂದ ಹಳ್ಳಿಯವರೆಗೂ ಗಬ್ಬೆದ್ದು ನಾರುತ್ತಿದೆ. ಪಾಲರ್ಿಮೆಂಟ್ ವ್ಯವಸ್ಥೆ ಕುಸಿದು ಬೀಳುವ ಸ್ಥಿತಿ ತಲುಪಿದೆ. ಪಾಲರ್ಿಮೆಂಟ್ ಹಾಗೂ ವಿಧಾನಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋಟ್ಯಾಧಿಪತಿಗಳು, ಕ್ರಿಮಿನಲ್ ದಾಖಲೆ ಇರುವವರು ಸೇರಿಕೊಂಡಿದ್ದಾರೆ. ಹಣದ ಪ್ರಭಾವದಿಂದ ಪಾಲರ್ಿಮೆಂಟರಿ ಪ್ರಜಾಪ್ರಭುತ್ವ ವಿರೂಪಗೊಂಡಿದೆ. ಜನತೆಯ ತೆರಿಗೆಯಿಂದ ಸಂಗ್ರಹಿಸಿರುವ ಕೋಟ್ಯಾಂತರ ರೂಪಾಯಿಗಳು ಈ ವ್ಯವಸ್ಥೆಯನ್ನು ಸದೃಡ ಮಾಡುವ ಬದಲು ವ್ಯರ್ಥವಾಗುತ್ತಿದೆ. ಜನಪರ ನತಿಗಳ ಬಗ್ಗೆ, ಅವಶ್ಯಕ ಪದಾರ್ಥಗಳ ಬೆಲೆ ಏರಿಕೆ, ನರುದ್ಯೋಗ, ನರುದ್ಯೋಗ, ವೇಗವಾಗಿ ಬೆಳೆಯುತ್ತಿರುವ ಕೋಮುವಾದ, ಸ್ವಾತಂತ್ರ್ಯ ಬಂದು 63ವರ್ಷಗಳು ಕಳೆದರೂ ಸಮರ್ಪಕವಾಗಿ ಪೂರೈಕೆಯಾಗದಿರುವ ಮೂಲಭೂತ ಅವಶ್ಯಕತೆಗಳು, ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಆಗುತ್ತಿರುವ ಏರಿಳಿತ, ದಿನೇ ದಿನೇ ಬಡವ ಹಾಗೂ ಉಳ್ಳವರ ನಡುವೆ ಉಂಟಾಗುತ್ತಿರುವ ಹೆಚ್ಚಿನ ಅಂತರ, ರೈತರ ಆತ್ಮಹತ್ಯೆ ಇತ್ಯಾದಿಗಳು ಇಂದು ಚಚರ್ೆಯಾಗುತ್ತಿಲ್ಲ. ಕಳೆದ ಸಂಸತ್ ಅಧಿವೇಶನವು 2ಜಿ ತರಂಗಗುಚ್ಛ ಹಂಚಿಕೆ ಹಗರಣಕ್ಕೆ ಬಲಿಯಾಯಿತು. ಈ ಹಗರಣದಲ್ಲಿ ದೇಶವು 1.73ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದೆ! ಈ ಹಗರಣವನ್ನು ಜಂಟಿ ಸದನ ಸಮಿತಿಗೆ ಒಪ್ಪಿಸಿ ತನಖೆ ಮಾಡಿಸಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದವು. ಅದನ್ನು ಒಪ್ಪದ ಕಾಂಗ್ರೇಸ್ ಇಡೀ ಅಧಿವೇಶನವನ್ನೇ ಮುಂದಕ್ಕೆ ಹಾಕಿತು. ಕೊನೆಗೆ 2ಜಿ ಹಗರಣ ಇಡಿ ಕಲಾಪವನ್ನೇ ಬಲಿ ಪಡೆಯಿತು.ಕಾಮನ್ವೆಲ್ತ್ ಕರ್ಮಕಾಂಡ, ಮುಂಬಯಿ ಆದರ್ಶ ಸೊಸೈಟಿ ಹಗರಣಗಳು ಯುಪಿಎನ ಭ್ರಷ್ಟಾಚಾರಕ್ಕೆ ನದರ್ಶನಗಳಾದವು. ಆದರೂ ಸಕರ್ಾರ ಮತ್ತದರ ಮಂತ್ರಿಗಳು ನರ್ಲಜ್ಜೆಯಿಂದಿದ್ದಾರೆ. 2ಜಿ ತರಂಗಗುಚ್ಛé ಹಗರಣ ಸಕರ್ಾರಕ್ಕೆ 1.73ಲಕ್ಷ ಕೋಟಿ ನಷ್ಟವಾಗಿದೆಂದು ಸಿಎಜಿ ವರದಿಯೂ ಹೇಳಿದೆ. ಹಗರಣದ ಕುರಿತು ದೇಶವ್ಯಾಪ್ತಿ ಪ್ರತಿರೋದ ಬಂದದ್ದರಿಂದ ಸಚಿವರಾಗಿದ್ದ ಎ.ರಾಜಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು. ರಾಜಾ ಖಾತೆಗೆ ಮಂತ್ರಿಯಾಗಿ ಬಂದ ಕಪಿಲ್ ಸಿಬಾಲ್ ಸಕರ್ಾರಕ್ಕೆ ಹಗರಣದಿಂದ ಯಾವುದೇ ನಷ್ಟವಾಗಿಲ್ಲವೆಂದು ತಿಳಿಸಿದರು. ಇದು ಸತ್ಯವಾಗಿದ್ದಲ್ಲಿ ರಾಜ ಅವರ ರಾಜೀನಾಮೆ ಏಕೆ ಕಾಂಗ್ರೇಸ್ ಅಂಗೀಕರಿಸಿತು? ಮತ್ತು ಸುಳ್ಳು ವರದಿ ಕೊಟ್ಟದ್ದಕ್ಕೆ ಸಿಎಜಿಯವರ ಬಗ್ಗೆ ಪಾಲರ್ಿಮೆಂಟ್ ಶಿಸ್ತಿನ ಕ್ರಮ ಕೈಗೊಳ್ಳಬಹುದಿತ್ತು. ಒಟ್ಟಾರೆ ಈ ಎರಡು ಅಂಶಗಳ ಬಗ್ಗೆ ಸಕರ್ಾರ ಮೌನಯಾಗಿದೆ! ಇತ್ತೀಚಿಗೆ ಬಂದ ವರದಿಯ ಪ್ರಕಾರ ಈ ಹಗರಣದ ಬಗ್ಗೆ ತನಖೆ ನಡೆಸಿದ ನ್ಯಾಯಮೂತರ್ಿ ಶಿವರಾಜಪಾಟೀಲ್ರು ಎ.ರಾಜಾ ದೋಷಿ ಎಂದು ತಿಳಿಸಿದ್ದಾರೆ! (ಸದ್ಯ ಎ.ರಾಜಾರನ್ನು ಸಿಬಿಐ ಬಂಧಿಸಿ ತನ್ನ ವಶದಲ್ಲಿಟ್ಟುಕೊಂಡಿದೆ) ಇನ್ನು ಆದರ್ಶ ಸೊಸೈಟಿ ಹಗರಣದಲ್ಲಿ ಅಲ್ಲಿನ ಮುಖ್ಯಮಂತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಈಗ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ!ಇನ್ನು ಕನರ್ಾಟಕದಲ್ಲಿ ಹಗರಣ, ಭ್ರಷ್ಟಾಚಾರಗಳೇನು ಕಡಿಮೆ ಇಲ್ಲ.. ಇಡೀ ದೇಶದಲ್ಲಿಯೇ ಕನರ್ಾಟಕ ಭ್ರಷ್ಟಾಚಾರದಲ್ಲಿ ನಂ.1 ಪಟ್ಟವನ್ನು ಪಡೆದಿದೆ. ಬಿಜೆಪಿ ಸಕರ್ಾರದ 30ತಿಂಗಳುಗಳ ಅವಧಿಯಲ್ಲಿ 26ಹಗರಣಗಳು ಹೊರಬಂದಿವೆ. ಅಕ್ರಮ ಗಣಿಗಾರಿಕೆ, ಭೂಹಂಚಿಕೆಯಲ್ಲಿನ ಸ್ವಜನಪಕ್ಷಪಾತ ತಾಂಡವವಾಡುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರೇ ಈ ಎಲ್ಲಾ ಭ್ರಷ್ಟಾಚಾರದ ಗಂಗೋತ್ರಿಯಾಗಿದ್ದಾರೆ. ಸುಮಾರು 400ಕೋಟಿಗಳಷ್ಟು ಬೆಲೆ ಬಾಳುವ ಭೂಮಿಯನ್ನು ತನ್ನ ಮಗ, ಸೋದರಿ, ಅಳಿಯ ಮತ್ತಿತರರಿಗೆ ಅಕ್ರಮವಾಗಿ ಹಂಚಿದ್ದಾರೆ. ಈ ಹಿಂದಿನ ಮುಖ್ಯಮಂತ್ರಿಗಳು ಕೂಡ ಸಾಕಷ್ಟು ಭೂಮಿಯನ್ನು ಡಿನೋಟಿಫೈ ಮಾಡಿದ್ದಾರೆ. ಅದನ್ನೇ ನಾನು ಮಾಡಿದ್ದೇನೆ.. ತಪ್ಪೇನಾಯ್ತು? ಎಂದು ಉದ್ದಟತನದಿಂದ ಸವಾಲುಗಳನ್ನು ಹಾಕುತ್ತಿದ್ದಾರೆ. ಕೆಲವು ಕಡೆ ಡಿನೋಟಿಪೈ ಮಾಡಿಕೊಂಡ ಭೂಮಿಯನ್ನು ಬಿಡಿಎ ಗೆ ನಡಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ದರೋಡೆ ಮಾಡಿದ ವ್ಯಕ್ತಿ ಆ ವಸ್ತುವನ್ನು ಮರಳಿ ನಡಿದರೆ ಶಿಕ್ಷೆಯಿಂದ ಪಾರಾಗಲು ಸಾಧ್ಯವೇ? ಸದಾ ಮಠ, ದೇವಸ್ಥಾನಗಳಲ್ಲಿ ಅರೆಬೆತ್ತಲಾಗಿ ತಿರುಗುವ ಮುಖ್ಯಮಂತ್ರಿಗೆ ದೇವರಾಗಲಿ ಅಥವಾ ಮಠಾಧೀಶರಾಗಲಿ ಜನಸಾಮಾನ್ಯರ ಆಸ್ತಿ ಕಬಳಿಸಬಾರದೆಂದು ಯಾಕೆ ಹೇಳಲಿಲ್ಲ? ಆಷಾಢಭೂತಿತನಕ್ಕೂ ಒಂದು ಮಿತಿಯೆಂಬುದಿದೆ. ಜನರ ಅಜ್ಞಾನ ಮತ್ತು ಮೌಡ್ಯದ ಮೇಲೆ ಮುಖ್ಯಮಂತ್ರಿ ಇಂದು ಸವಾರಿ ಮಾಡುತ್ತಿದ್ದಾರೆ.ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ದಾವೆ ಹೂಡಲು ಕಾನೂನು ರೀತ್ಯಾ ಅನುಮತಿ ನಡಬೇಕೆಂದು ವಕೀಲರಿಬ್ಬರು ರಾಜ್ಯಪಾಲರಿಗೆ ಪತ್ರವನ್ನು ಬರೆದಿದ್ದರು. ರಾಜ್ಯಪಾಲರು ಕೂಡ ಕಾನೂನನಡಿಯಲ್ಲಿಯೇ ವಕೀಲರ ವೇದಿಕೆಗೆ 21-01-2011ರ ಸಂಜೆ ದಾವೆ ಹೂಡಲು ಅನುಮತಿ ಕೊಟ್ಟಿದ್ದಾರೆ. ಇದಾದ ನಂತರ ಹತ್ತಾರು ರಂಪಾಟಗಳನ್ನು ಮಾಡಿದ ಯಡಿಯೂರಪ್ಪ ತಾನು ನರಪರಾಧಿ ಎಂದು ಕೋಟರ್ಿನಲ್ಲಿ ಸಾಭೀತುಮಾಡುವ ಬದಲಿಗೆ ಇಲ್ಲ ಸಲ್ಲದ ವಾಕ್ಯಗಳಲ್ಲಿ ರಾಜ್ಯಪಾಲರನ್ನು ನಂದಿಸಿದ್ದಾರೆ. ಜೊತೆಯಲ್ಲಿ ಬಿಜೆಪಿಯ ಎಲ್ಲ ನಾಯಕರು ಯಡಿಯೂರಪ್ಪನ ಬೆಂಬಲಕ್ಕೆ ನಂತು ರಾಜ್ಯಪಾಲರ ವಿರುದ್ಧ ಬೀದಿಗಿಳಿದರು. ಲಿಂಗಾಯತ ಮಠ ಮಾನ್ಯಗಳು, ಪೇಜಾವರರು ಬಹಿರಂಗವಾಗಿಯೇ ಯಡಿಯೂರಪ್ಪನ ಭ್ರಷ್ಟಾಚಾರವನ್ನು ಬೆಂಬಲಿಸಿದ್ದಾರೆ. ಇದು ಸಾಲದೆಂಬಂತೆ 22-01-2011ರಂದು ಸಕರ್ಾರವೇ ಬಂದ್ ಆಚರಿಸಿದೆ. ಅಂದು ಸಾರಿಗೆ ವಾಹನಗಳ ರಸ್ತೆಗೆ ಇಳಿಯಲಿಲ್ಲ. ಸಾರಿಗೆ ಮಂತ್ರಿ ಆರ್.ಅಶೋಕ್ ಅವರೇ ಖುದ್ದಾಗಿ ನಗಮದ ಎಲ್ಲಾ ಬಸ್ಸುಗಳನ್ನು ನಲ್ಲಿಸಿದ್ದಾರೆ. ಸಾರಿಗೆ ಸಂಸ್ಥೆಯ ಕೆಲವು ಬಸ್ಸುಗಳಿಗೆ ಬೆಂಕಿಯನ್ನು ಹಚ್ಚಿಸಿದ್ದಾರೆ. ಒಂದು ಕೋಟಿ ಬಸ್ ಪ್ರಯಾಣಿಕರು ಬಸ್ಗಳಿಲ್ಲದೇ ಅಂದು ಪರದಾಡಿದರು. ಅವರ ಮೇಲೆ ಸಾರಿಗೆ ಮಂತ್ರಿ ಸವಾರಿ ಮಾಡಿದ್ದಾರೆ.ತಾನೊಂದು ವಿಶೇಷ ಸಿದ್ದಾಂತಗಳನ್ನೊಳಗೊಂಡ ಪಕ್ಷವೆಂದು ಕರೆಯಿಸಿಕೊಳ್ಳುವ ಬಿಜೆಪಿ ಕನರ್ಾಟದಲ್ಲಿ ಮುಖ್ಯಮಂತ್ರಿಯ ಭ್ರಷ್ಟಾಚಾರಕ್ಕೆ ಬೆಂಬಲವಾಗಿ ನಂತು ತಾನೇ ಬಂದ್ ನಡೆಸಿದೆ. ಆದರೆ, ಬಲವಂತವಾದ ಈ ಬಂದ್ನ್ನು ಸಕರ್ಾರ ಜನತೆಯ ಮೇಲ ಹೇರಿದೆ. ಈ ಬಂದ್ನಂದ ಒಂದು ಅಂದಾಜಿನ ಪ್ರಕಾರ ಅಂದು ರಾಜ್ಯಕ್ಕಾದ ನಷ್ಟ 2ಸಾವಿರ ಕೋಟಿ ರೂಪಾಯಿಗಳು! ಮುಖ್ಯಮಂತ್ರಿ ಯಡಿಯೂರಪ್ಪ ಯಾವುದೇ ತಪ್ಪು ಮಾಡಿಲ್ಲ, ಎಲ್ಲಿಯೂ ಭೂಮಿಯನ್ನು ಅತಿಕ್ರಮಿಸಿಕೊಂಡಿಲ್ಲ. ಕಾನೂನಾತ್ಮಕವಾಗಿಯೇ ಭೂಹಂಚಿಕೆ ಮಾಡಿದ್ದಾರೆಂದು ಬಿಜೆಪಿಯ ಹೈಕಮಾಂಡ್ ಒಂದೆಡೆ ಹೇಳುತ್ತಿದೆ. ಈ ಕಾರಣಕ್ಕಾಗಿಯೇ ಯಡಿಯೂರಪ್ಪನವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಾರದೆಂದು ಬೊಬ್ಬೆ ಇಡುತ್ತಿದೆ. ಇದು ಬಿಜೆಪಿಯ ಇಬ್ಬಗೆಯ ನತಿ.ಕೇಂದ್ರ ಸಕರ್ಾರದ ಮಂತ್ರಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಯ ಭ್ರಷ್ಟಾಚಾರ ಬಯಲಿಗೆ ಬಂದಾಗ ಭ್ರಷ್ಟಾಚಾರಿಗಳು ಸಂಪುಟದಿಂದ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನಡಬೇಕೆಂದು ಬಿಜೆಪಿ ಹಟ ಹಿಡಿಯಿತು. ಆಗ ಇರ್ವರ ತಲೆದಂಡವು ನಡೆಯಿತು. ಆದರೆ, ತನ್ನ ಪಕ್ಷದ ಮುಖ್ಯಮಂತ್ರಿ ಒಬ್ಬರು ಭ್ರಷ್ಟಾಚಾರದಲ್ಲಿ ಸಿಕ್ಕಿಹಾಕಿಕೊಂಡಾಗ ಬಿಜೆಪಿ ತುಟಿಪಿಟಿಕೆನ್ನದೇ ಯಡಿಯೂರಪ್ಪನನ್ನು ಬೆಂಬಲಿಸಿತು. ಅದು ಸಾಲದೆಂಬಂತೆ ಯಡಿಯೂರಪ್ಪ ಕನರ್ಾಟಕದ ಅಭಿವೃದ್ಧಿಯ ಹರಿಕಾರ ಎಂದೇಳಿತು. ಬಿಜೆಪಿ ಅಧ್ಯಕ್ಷ ನತಿನ್ ಗಡ್ಕರಿಯವರು ಮುಖ್ಯಮಂತ್ರಿಯವರು ಕಾನೂನುರೀತ್ಯಾ ಯಾವ ಅಕ್ರಮವನ್ನು ಎಸಗಿಲ್ಲವೆಂದೂ ನೈತಿಕ ಸರಿ ಅಲ್ಲವೆಂದು ಹೇಳಿದ್ದಾರೆ. ಇದೊಂದು ವಿತಂಡವಾದ. ತನ್ನ ಪಕ್ಷದ ಮುಖ್ಯಮಂತ್ರಿಯೊಬ್ಬ ಅನೈತಿಕ ಅಕ್ರಮ ಕೆಲಸಗಳನ್ನು ಮಾಡಿದರೂ ಕೂಡ ಆತನನ್ನು ಅದೇ ಸ್ಥಾನದಲ್ಲಿ ಮುಂದುವರಿಸಕೊಂಡು ಹೋಗುವುದೆಂದರೆ ಏನರ್ಥ? ಒಂದಂತೂ ಸತ್ಯ.. ಈ ಸಕರ್ಾರ ಅಧಿಕಾರಕ್ಕೆ ಬಂದ 30ತಿಂಗಳಲ್ಲಿ ರಾಜ್ಯದ ಜನತೆಯ ಯಾವುದೇ ಸಮಸ್ಯೆಯ ಬಗ್ಗೆ ಗಂಭೀರವಾಗಿ ಚಿಂತಿಸಿಲ್ಲ. ಯಡಿಯೂರಪ್ಪ ದಿನದಿಂದ ದಿನಕ್ಕೆ ಹೊಸಹೊಸ ಬಿಕ್ಕಟ್ಟಿಗೆ ಸಿಲುಕಿ ತನ್ನ ಕುಚರ್ಿ ಉಳಿಸಿಕೊಳ್ಳುವುದೇ ಆತನಗೆ ಬೃಹತ್ ಸಮಸ್ಯೆಯಾಗಿ ಉಳಿದಿದೆ.ಕಳೆದ ವಿಧಾನಸಭಾಧಿವೇಶನ ಕೂಡ ಅನರ್ಹ ಶಾಸಕರ ಚಚರ್ೆಗೆ ಸೀಮಿತವಾಗಿ ಯಾವುದೇ ಕಾರ್ಯಕಲಾಪ ನಡೆಯದೇ ಅಂತ್ಯಕಂಡಿತು. ಯಡಿಯೂರಪ್ಪ ಕನರ್ಾಟಕ ಕಂಡರಿಯದ ಅತ್ಯಂತ ಭ್ರಷ್ಟ ಮತ್ತು ಮೂಡನಂಬಿಕೆಗಳನ್ನುಳ್ಳ ಮುಖ್ಯಮಂತ್ರಿ. ಎರಡುವರೆ ವರ್ಷಗಳಲ್ಲಿ ಈತ ದರ್ಶನ ಮಾಡಿರುವ ಮಠಗಳು, ದೇವಸ್ಥಾನಗಳು ಹಾಗೂ ಯಜ್ಞ ಯಾಗಾದಿಗಳು ಗಿನ್ನಸ್ ದಾಖಲೆಯಾಗಿವೆ. ಆದರೆ, ಇದಿರಂದ ರಾಜ್ಯದ ಜನತೆಗೆ ಬಂದಿದ್ದೇನು? ಎಂಬುದು ನಮ್ಮ ಪ್ರಶ್ನೆ.ಈ ತಿಂಗಳಲ್ಲಿ ಆರಂಭವಾಗುವ ಬಜೆಟ್ ಅಧಿವೇಶನವು ಹಿಂದಿನಂತೆ ಗದ್ದಲಗಳಲ್ಲಿ ಕೊನೆಗಾಣುವ ಎಲ್ಲ ಸೂಚನೆಗಳು ಇವೆ. ಇಂತಹ ದುಸ್ಥಿತಿಗೆ ಕಾರಣ ಏನು?ಬಹುಶಃ ಅತೀ ಮುಖ್ಯವಾದ ಕಾರಣ ಸಾಮಾನ್ಯ ಜನರ ರಾಜಕೀಯ ಜಡತ್ವ ಸಕ್ರೀಯವಾದ ರಾಜಕಾರಣದಲ್ಲಿ ಭಾಗವಹಿಸಲಿರುವ ಹಿಂಜರಿಕೆ. ಯಾವುದು ಹೇಗಿದ್ದರೇನು. ತಾನು ಮಾತ್ರ ಚನ್ನಾಗಿ ಬದುಕಬೇಕೆಂಬ ಸ್ವಾರ್ಥ. ತನ್ನೆದುರಿಗೆ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ತಾತ್ಸಾರ, ಅಗಾಧ ಪ್ರಮಾಣವಾಗಿ ಬೆಳೆದು ಸಮಾಜದ ಸ್ವಾಸ್ಥ್ಯಕ್ಕೆ ಮುಳುವಾಗಿದೆ ಎಂಬುದು ಅರಿವಿಲ್ಲದಿರುವುದು. ಹಣದ ಪ್ರಭಾವ ಪ್ರತಿಯೊಬ್ಬ ನಾಗರೀಕನನ್ನು ಮಾರಾಟದ ಸರಕನ್ನಾಗಿ ಮಾರ್ಪಡಿಸಿದೆ. ಪಂಚಾಯತಿಯಿಂದ ಪಾಲರ್ಿಮೆಂಟ್ನವರೆಗೆ ಚುನಾವಣಿ ಗೆಲ್ಲಬೇಕಾದರೆ ಅಪಾರ ಹಣ ಖಚರ್ಾಗುತ್ತಿದೆ. ಈ ಹಣದ ಹೆಚ್ಚು ಭಾಗ ಎಲ್ಲಿಂದ ಬರುತ್ತಿದೆ ಎಂಬ ಅನುಮಾನ ಶುರುವಾಗಿದೆ. ಐ.ಪಿ.ಎಲ್ ಕ್ರಿಕೆಟಿಗರಂತೆ ನಮ್ಮ ಚುನಾಯಿತ ಪ್ರತಿನಧಿಗಳು ಬಿಕರಿಗೆ ಸಿದ್ದವಾಗಿದ್ದಾರೆ. ಪಕ್ಷ, ಸಿದ್ದಾಂತಗಳು ಇಲ್ಲಿ ಗೌಣವಾಗುತ್ತಿವೆ. ಯಡಿಯೂರಪ್ಪನಗೂ ಕುಮಾರಸ್ವಾಮಿಗೂ ಯಾವುದೇ ವ್ಯತ್ಯಾಸಗಳು ಕಾಣಸಿಗುತ್ತಿಲ್ಲ.ಕಪ್ಪು ಹಣ ಇಡೀ ರಾಜಕೀಯ ವ್ಯವಸ್ಥೆಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ಭಾರತದ ಹಲವಾರು ದೇಶಪ್ರೇಮಿಗಳು ವಿದೇಶಿ ಬ್ಯಾಂಕ್ ಅದರಲ್ಲೂ ಸ್ವಿಸ್ ಬ್ಯಾಂಕುಗಳಲ್ಲಿ ಹಣ ತೊಡಗಿಸಿದ್ದಾರೆ. ಈ ಹಣ ಅವರಿಗೆ ಎಲ್ಲಿಂದ ಬಂತೆಂಬ ಬಗ್ಗೆ ಸಂಶೋಧನೆಯ ಅವಶ್ಯಕತೆಯಿಲ್ಲ. ಅಂತಹ ದೇಶಪ್ರೇಮಿಗಳ ಹೆಸರುಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲವೆಂದು ಸಕರ್ಾರ ಸುಪ್ರೀಂಕೋಟರ್ಿಗೆ ತಿಳಿಸಿದೆ! ಇದಕ್ಕಿಂತ ನಾಚಿಕೆಗೇಡಿನ ಸನ್ನವೇಶ ಬರಲಾರದು. ಆದಾಗ್ಯೂ ಡಾ.ಮನಮೋಹನ್ ಸಿಂಗ್ ಅವರು ಪ್ರಾಮಾಣಿಕರು! ಅವರ ಮಂತ್ರಿಯೊಬ್ಬನಂದ ಸಕರ್ಾರಕ್ಕೆ 1.73ಲಕ್ಷ ಕೋಟಿ ನಾಮ ಹಾಕಿಸಿದ್ದಾರೆ! ವಿತ್ತ ಸಚಿವ ಪ್ರಣಬ್ಮುಖಜರ್ಿಯವರು ವಿದೇಶಿ ಬ್ಯಾಂಕುಗಳಲ್ಲಿ ಹಣ ಇಟ್ಟಿರುವ ಪುಣ್ಯಾತ್ಮರ ಹೆಸರುಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲವೆಂದು ಅಪ್ಪಣಿಯನ್ನು ಕೊಡಿಸಿದ್ದರು!ಕಾಲಕ್ರಮೇಣ ಅದರಲ್ಲಿ ಕೆಲವೊಂದು ಹೆಸರುಗಳು ಈಗಾಗಲೇ ಬಹಿರಂಗಗೊಂಡಿವೆ. ಅವುಗಳಿಗೆ ಬಾಕ್ಸ್ ನೋಡಿರಿ.ಇಂತಹ ಪರಿಸ್ಥಿತಿಯಲ್ಲಿ ದುಡಿಯುವ ವರ್ಗದ ಐಕ್ಯತಾ ಹೋರಾಟಗಳು ಮಾತ್ರ ಜನವಿರೋಧಿ ಸಕರ್ಾರಗಳ ನತಿಗಳನ್ನು ಹಿಮ್ಮೆಟ್ಟಿಸಿ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸಾಧ್ಯವಾಗುತ್ತದೆ.
ರಾಜ್ಯದಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆದಿರುವ ಯಡಿಯೂರಪ್ಪನವರು ಅವರ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಬರೆದಿರುವ ಪತ್ರದಲ್ಲಿ ತಮ್ಮ ವೈಯಕ್ತಿಕ ಆಸ್ತಿಯ ಬಗ್ಗೆ ವಿವರಣಿಯನ್ನು ಕೊಟ್ಟಿದ್ದಾರೆ. ಯಾವ ಮೂರ್ಖನೂ ಕೂಡ ಯಡಿಯೂರಪ್ಪನ ಈ ಸ್ವಯಂ ಆಸ್ತಿ ಘೋಷಣಿಯನ್ನು ಒಪ್ಪಲು ಸಾಧ್ಯವಿಲ್ಲ. ಅವರ ಮಕ್ಕಳು ಅವರ ಪಾಲನ್ನು ತೆಗೆದುಕೊಂಡಿದ್ದಾರೆಂದು ಅವರ ಪ್ರಮಾಣಿಕತೆಯನ್ನು ಬುದ್ದಿವಂತಿಕೆಯಿಂದ ಮುಚ್ಚಿಕೊಳ್ಳಲು ಪ್ರಯತ್ನಿಸಿದ್ದಾರೆ. ನಾನೊಬ್ಬ ರೈತನ ಮಗ, ಕನ್ನಡ ನಾಡು, ನುಡಿ, ಸಂಸ್ಕೃತಿ, ಖನಿಜ ಸಂಪತ್ತು, ರಾಜ್ಯದ ಅಭಿವೃದ್ಧಿಗಾಗಿ 5ವರ್ಷ ಹಗಲಿರುಳು ದುಡಿಯುತ್ತೇನೆಂದು ಬರೀ ವೇದಿಕೆಗಳಲ್ಲಿ ಮೊಸಳೆ ಕಣ್ಣೀರು ಸುರಿಸುವ ಯಡಿಯೂರಪ್ಪ ಅಧಿಕಾರಕ್ಕೆ ಬಂದು ಒಂದು ಸಾವಿರ ದಿನಗಳಲ್ಲಿ ಮಾಡಿದ ಕೆಲಸ ಸೊನ್ನೆ.ಬರೀ ಮಾತು ಬದಲಿಸುವದನ್ನೇ ತನ್ನ ಕಾಯಕ ಮಾಡಿಕೊಂಡ ಯಡಿಯೂರಪ್ಪ ತನ್ನ ಮಗನನ್ನು ಪಾಲರ್ಿಮೆಂಟ್ಗೆ ಅಭ್ಯಥರ್ಿಯಾಗಿ ನಿಲ್ಲಿಸುವುದಿಲ್ಲವೆಂದು ಕಂಡಕಂಡ ದೇವರ ಮೇಲೆ ಪ್ರಮಾಣ ಮಾಡಿದ್ದ. ಆದರೆ, ಕೊನೆಗೆ ರಾಘವೇಂದ್ರನ ಚುನಾವಣಿಯನ್ನು ಪ್ರತಿಷ್ಟೆಯಾಗಿ ಸ್ವೀಕರಿಸಿ, ಮನಸೋ ಇಚ್ಛೆ ಅಪಾರ ಹಣವನ್ನು ಖಚರ್ು ಮಾಡಿ ಸಂಸದನನ್ನಾಗಿ ಮಾಡಿದ.ಇನ್ನೊರ್ವ ಸುಪುತ್ರ ವಿಜಯೇಂದ್ರ, ಯಾವಾಗಲೂ ವಿಧಾನಸೌಧ, ವಿಕಾಸಸೌಧದ ಕೊಠಡಿಗಳಲ್ಲಿಯೇ ಠಿಕಾಣಿ ಹೂಡಿರುತ್ತಾನೆ. ಎಲ್ಲ ಇಲಾಖೆಗಳ ಕಡತಗಳು ಸಂಬಂಧಪಟ್ಟ ಮುಖ್ಯಸ್ಥರಿಗೆ ತಲುಪುವ ಮೊದಲೇ ವಿಜಯೇಂದ್ರ ಪರಿಶೀಲಿಸುತ್ತಾನೆ. ಕೆಲವು ದಿನಗಳ ಹಿಂದೆ ವಿಜಯೇಂದ್ರನ ಕಾಟಕ್ಕೆ ಹತ್ತಾರು ಮಂತ್ರಿಗಳು ಬೇಸತ್ತು ರಾಜೀನಾಮೆ ನೀಡಲು ಮುಂದಾಗಿದ್ದರು. (ಕೊನೆಗೆ ಕೇಶವಕೃಪ ಸಂದಾನಕ್ಕೆ ಬಂದಿತು.) ಒಂದೇ ಮಾತಿನಲ್ಲಿ ಹೇಳಬೇಕೆಂದರೆ ವಿಜಯೇಂದ್ರ ರಾಜ್ಯಮಟ್ಟದಲ್ಲಿ ಸಕರ್ಾರದ ಎಲ್ಲ ಡೀಲ್ಗಳನ್ನು ಕುದುರಿಸುವಾತ.ಈವರೆಗೆ ಯಡಿಯೂರಪ್ಪ ರಾಜ್ಯವನ್ನು ಲೂಟಿ ಮಾಡುತ್ತಾ ಅನೈತಿಕ ಹಾದಿಗಳಲ್ಲಿಯೇ ಮುಂದುವರೆದಿದ್ದಾನೆ. ಮೊದಲಿಗೆ ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡಿದ. ಇದೇ ಆಪರೇಷನ್ ಕಮಲ ತನಗೆ ಮುಳುವಾದಾಗ ರಾಷ್ಟ್ರೀಯ ನಾಯಕರನ್ನು ಕರೆತಂದು ರೆಡ್ಡಿಗಳ ಜೊತೆ ಸಂಧಾನ ಮಾಡಿಕೊಂಡ. ಕೊನೆಗೆ ಡಿನೋಟಿಪಿಕೇಷನ್ ಹಗರಣದಲ್ಲಿ ತನ್ನ ಖಚರ್ಿಗೆ ಸಂಚಕಾರ ಬಂದಾಗ ಗಡ್ಕರಿ ಮತ್ತು ಮಠಮಾನ್ಯಗಳ ಬೆಂಬಲ ಪಡೆದು ಖುಚರ್ಿ ಉಳಿಸಿಕೊಂಡ. ರಾಜ್ಯಪಾಲರು ತನ್ನ ವಿರುದ್ಧ ಮೊಕದ್ದಮೆ ದಾಖಲಿಸಲು ವಕೀಲರಿಬ್ಬರಿಗೆ ಅನುಮತಿ ನೀಡಿದಾಗ ತಾನೇ ಮುಂದೆ ನಿಂತು ಕನರ್ಾಟಕ ಬಂದ್ ಮಾಡಿಸಿದ. ಇಂತಹ ಯಡಿಯೂರಪ್ಪ ಈ ರಾಜ್ಯದ ಮುಖ್ಯಮಂತ್ರಿಯಾಗಲು ಕುಮಾರಸ್ವಾಮಿಯೇ ನೇರ ಕಾರಣ. ಮೊದಲಿಗೆ ಬಿಜೆಪಿಯ ಜೊತೆಗೂಡಿ ಸಕರ್ಾರ ಮಾಡಿ, ನಂತರದ ಅವಧಿಯಲ್ಲಿ ಯಡಿಯೂರಪ್ಪನಿಗೆ ಅಧಿಕಾರ ನೀಡದಿದ್ದರಿಂದ ಅದೇ ಸಿಂಪತಿಯನ್ನು ಬಳಸಿಕೊಂಡು ಮುಂದಿನ ಚುನಾವಣಿಯಲ್ಲಿ ಅಧಿಕಾರಕ್ಕೆ ಬಂದ. ಒಟ್ಟಾರೆ ಯಡಿಯೂರಪ್ಪ ಅನೈತಿಕ, ಅಕ್ರಮ, ಮಾಟಮಂತ್ರ, ಜಾತಿ ಮಾಡುತ್ತಲೇ ರಾಜಕಾರಣ ಮಾಡುವ ಮನುಷ್ಯ.ಹೆಚ್.ವಿ ಅನಂತಸುಬ್ಬರಾವ್.
Tuesday, February 22, 2011
Subscribe to:
Post Comments (Atom)
No comments:
Post a Comment
Thanku