Thursday, February 24, 2011

ಹಟ್ಟಿ ಕಾರ್ಮಿಕರ ಚುನಾವಣೆ


ಹಟ್ಟಿಯಲ್ಲಿ ಕಾಮರ್ಿಕ ಸಂಘಕ್ಕೆ ಫೈ, ನಾರಾಯಣ, ಮಖ್ದೂಂನಂತಹ ನಾಯಕರು ಭದ್ರವಾದ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ. ಆದರೆ, ಮಹಾನ್ ನಾಯಕರು ಹಾಕಿಕೊಟ್ಟ ಆದರ್ಶ, ಮಾರ್ಗಗಳನ್ನು ಪಾಲಿಸುವ ನಾಯಕರು ಇಂದು ನಮಗೆ ಕಾಣ ಸಿಗುತ್ತಿಲ್ಲ. ಪ್ರತಿವರ್ಷ ಮೇ1ಕ್ಕೆ ಮಾತ್ರ ಆದರ್ಶ ನಾಯಕರನ್ನು ನೆನಪಿಸಿಕೊಳ್ಳುವ ಮುಖಂಡರು ಹೆಚ್ಚಿದ್ದಾರೆ. ಕ್ರಮೇಣ ಕಾಮರ್ಿಕ ಸಂಘವೆಂಬುದು ಅವಕಾಶವಾದಿಗಳ ಕೈಗೆ ಸಿಕ್ಕು ನಲುಗುತ್ತಿದೆ. ಕಾಮರ್ಿಕ ನಾಯಕನಾಗಿ ಆಯ್ಕೆಯಾದಾತ ವ್ಯವಸ್ಥೆಯ 'ಚಮಚಾಗಿರಿ'ಯಲ್ಲಿ ಪಾಲನ್ನು ಕೇಳುತ್ತಿದ್ದಾನೆ.ಇನ್ನು ಸಂಘದ ಭವನ ಸಾರ್ವಜನಿಕರಿಗೆ ಸಾಮೂಹಿಕ ಮೂತ್ರಾಲಯವಾಗಿ ಬಿಟ್ಟಿದೆ. ಮೇ1ರಂದು ಮಾತ್ರ ಕಾಮರ್ಿಕ ಸಂಘದತ್ತ ತೆರಳುವ ನಾಯಕರು ಮತ್ತೇ ಮೇ ಬರುವವರೆಗೆ ಅತ್ತ ಮರಳಿಯೂ ನೋಡುವುದಿಲ್ಲ. ಇದು ಕಾಮರ್ಿಕ ಸಂಘದ ಈಗಿನ ದುರಂತ. ಇಂತಹ ಸಂದರ್ಭದಲ್ಲಿ ಮತ್ತೊಮ್ಮೆ ಮಹಾನ್ ನಾಯಕರು ಕಟ್ಟಿದಂತಹ ಕಾಮರ್ಿಕ ಸಂಘಕ್ಕೆ ಚುನಾವಣಿ ಬಂದಿದೆ. ಆ ಚುನಾವಣಿಗಾಗಿ ಎಲ್ಲರೂ ತಮ್ಮದೇ ರೀತಿಯಲ್ಲಿ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ.ಆ ಕುರಿತು ನಮ್ಮ ಪ್ರತಿನಿಧಿ ಸಂಪೇಲ್ಲೇರ್ರಿಂದ ಒಂದು ವಿಶ್ಲೇಷಣಿ.
ಹಟ್ಟಿ ಗಣಿ ಕಾಮರ್ಿಕರ ಮೂಲಭೂತ ಬೇಡಿಕೆಗಳ ಈಡೇರಿಕೆಗಿರುವ ಕಾಮರ್ಿಕ ಸಂಘ ಇದೀಗ ಮತ್ತೊಮ್ಮೆ ಚುನಾವಣಿ ಎದುರಿಸಲು ಸಜ್ಜಾಗಿದೆ. 3ವರ್ಷಗಳಿಗೊಮ್ಮೆ ನಡೆಯುವ ಚುನಾವಣಾ ಅವಧಿ ಕಳೆದ ಜನೆವರಿ 21ಕ್ಕೆ ಮುಗಿದು ಹೋಗಿದೆ. ಇಲ್ಲಿ ಚುನಾವಣಿಯ ಮುಖಾಂತರ ಕಾಮರ್ಿಕ ಸಂಘಕ್ಕೆ ನಾಯಕರು ಆಯ್ಕೆಯಾಗುತ್ತಾರೆ. ಹಟ್ಟಿ ಕಂಪೆನಿಯ ಕಾಮರ್ಿಕರನ್ನೊಳಗೊಂಡು 4 ಗೌರವ ಸದಸ್ಯತ್ವ ಸ್ಥಾನಗಳಿಗೆ ಚುನಾವಣಿ ಏರ್ಪಡುತ್ತದೆ.ಹಲವು ಟ್ರೇಡ್ ಯೂನಿಯನ್ಗಳು ಮತ್ತು ಕೆಲವು ಸ್ವಯಂ ಸಂಘಟನೆಗಳು ಚುನಾವಣಿಯಲ್ಲಿ ಪಾಲ್ಗೊಳ್ಳುತ್ತವೆ. ಹಿಂದೆಲ್ಲ ಕಾಮರ್ಿಕ ಸಂಘದ ಚುಕ್ಕಾಣಿಯನ್ನು ಎ.ಐ.ಟಿ.ಯು.ಸಿ, ಐ.ಎನ್.ಟಿ.ಯು.ಸಿ, ಸಿ.ಐ.ಟಿ.ಯು ಹಾಗೂ ಆಕಳು ಪಕ್ಷಗಳು ಹಿಡಿದಿವೆ. ಕೆಲವು ಕಾಮರ್ಿಕರ ಒಳಿತಿಗಾಗಿ ಶ್ರಮಿಸಿದರೆ, ಇನ್ನು ಕೆಲವುಗಳು ಕಾಮರ್ಿಕರ ಬದುಕಿನ ಮೇಲೆ ಚದುರಂಗದಾಟ ಆಡಿವೆ.ಪ್ರತಿ 5ವರ್ಷಗಳಿಗೊಮ್ಮೆ ನಡೆಯುವ ಕಾಮರ್ಿಕರ ವೇತನ ಒಪ್ಪಂದದಲ್ಲಿ ಕಾಮರ್ಿಕ ಸಂಘದ ಪಾತ್ರ ಪ್ರಮುಖವಾಗಿರುತ್ತದೆ. ಕಂಪನಿ ಹಾಗೂ ಕಾಮರ್ಿಕ ಸಂಘದ ಮಧ್ಯೆ ನಡೆಯುವ ವೇತನ ಒಪ್ಪಂದವು ಕಾಮರ್ಿಕರ ದೃಷ್ಟಿಕೋನದಿಂದ ಅತಿ ಮಹತ್ವವಾದದ್ದು. ವೇತನ ಒಪ್ಪಂದದ ಮೇಲೆ ಎಲ್ಲ ಕಾಮರ್ಿಕರ ಭವಿಷ್ಯವು ಅಡಗಿರುತ್ತದೆ. ಅಂತೆಯೇ ಹಿಂದಿನ ಹಲವಾರು ವೇತನ ಒಪ್ಪಂದಗಳಲ್ಲಿ ಕಾಮರ್ಿಕರು ಸಿಹಿ-ಕಹಿಯನ್ನು ಅನುಭವಿಸಿದ್ದಾರೆ. ಈ ಅವಧಿ ಅಂದರೆ 2011ರಲ್ಲಿ ನಡೆಯುವ ವೇತನ ಒಪ್ಪಂದಲ್ಲಿ ಕಾಮರ್ಿಕರು ಬಹುಪಾಲು ಸಿಹಿಯನ್ನೇ ನೀರಿಕ್ಷಿಸುತ್ತಿದ್ದಾರೆ.ಕಾರಣ ಹಿಂದಿನ ಕೆಲವು ವೇತನ ಒಪ್ಪಂದಗಳು ನಡೆಯುವ ಸಂದರ್ಭದಲ್ಲಿ ಕಂಪನಿ ಸ್ಥಿತಿ ಹೇಳಿಕೊಳ್ಳುವ ಹಂತದಲ್ಲಿರಲಿಲ್ಲ. (ಅದು ಸಿ.ಐ.ಟಿ.ಯು ಅವಧಿ ಇರಬೇಕು) ಕಂಪನಿ ಉತ್ತಮ ಸ್ಥಿತಿಯಲ್ಲಿದ್ದಾಗ ಕಾಮರ್ಿಕರ ಸರಿಯಾದ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಕಾಮರ್ಿಕ ಸಂಘವಿದ್ದಿಲ್ಲ. (ಅದು ವಾಲೇಬಾಬನ ಆಕಳ ಅವಧಿ)ಆದರೆ, ಇಂದು ಕಂಪನಿ ಆಥರ್ಿಕವಾಗಿ ಸುಭದ್ರವಾಗಿದೆ ಮತ್ತು ದಿನೇ ದಿನೇ ಬಂಗಾರದ ಬೆಲೆ ಹೆಚ್ಚುತ್ತಿರುವದರಿಂದ ಸಾಮಾನ್ಯವಾಗಿ ಕಾಮರ್ಿಕರ ನೀರಿಕ್ಷೆಯೂ ಸಹಜವಾದದ್ದಾಗಿದೆ.ಕಾಮರ್ಿಕರ ಹಕ್ಕೊತ್ತಾಯಗಳನ್ನು ಈಡೇರಿಸಿ, ಕಾಮರ್ಿಕರಿಗಾಗಿ ಹಗಲಿರುಳು ಶ್ರಮಿಸುವ, ಕಾಮರ್ಿಕರ ಮಕ್ಕಳಿಗೆ ಕಂಪನಿ ಕೆಲಸ, ವಿ.ಆರ್.ಎಸ್, ದಿನಗೂಲಿಗಳನ್ನು ಖಾಯಂ ಮಾಡುತ್ತೇವೆ ಸೇರಿದಂತೆ ಹಲವು ಆಶ್ವಾಸನೆಗಳನ್ನು ಕಾಮರ್ಿಕ ಸಂಘಕ್ಕೆ ಸ್ಪಧರ್ೆ ಮಾಡುವ ಎಲ್ಲ ಸಂಘಟನೆಗಳು ಕಾಮರ್ಿಕರಿಗೆ ಇಲ್ಲಿಯವರೆಗೆ ಹೇಳಿವೆ. ಮುಂದೆಯೂ ಹೇಳುತ್ತವೆ. ಆದರೆ, ಅಧಿಕಾರಕ್ಕೆ ಬಂದ ಮೇಲೆ ಎಲ್ಲರೂ ಕಾಮರ್ಿಕರ ಕಿವಿ ಮೇಲೆ ಚೆಂದದ ಗುಲಾಬಿ ಹೂವನ್ನು ಇಡುತ್ತಾರೆ. ಚುನಾವಣಿಯಲ್ಲಿ ಆಯ್ಕೆಯಾಗುವ ಕಾಮರ್ಿಕ ನಾಯಕರು ಸಂಘವನ್ನು ಕಂಪೆನಿಯ ಇಡೀ ಕಾಮರ್ಿಕ ಸಂಕುಲದ ವ್ಯಾಪ್ತಿಗೆ ಒಳಪಡಿಸದೆ, ಸ್ವಪ್ರತಿಷ್ಠೆಗಾಗಿ ಸಂಘವನ್ನು ತಮ್ಮ ಸಂಘಟನೆಗಳಿಗೆ ಮಾತ್ರ ಸೀಮಿತ ಮಾಡಿ ಜಾತಿವಾರು, ಹಣವಾರು, ಅನುಕೂಲವಾರು ಕೆಲಸಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ಇದರಿಂದ ಕಮ್ಯೂನಿಷ್ಟ್ ಟ್ರೇಡ್ ಯೂನಿಯನ್ಗಳು ಹೊರತಾಗಿಲ್ಲ.ಕಾಮರ್ಿಕರಿಗೆ ಮೂಲಭೂತವಾಗಿ ಮನೆ, ಆಸ್ಪತ್ರೆ, ತಂದೆತಾಯಿಗಳ ಚಿಕಿತ್ಸೆ, ವೇತನ, ಮಕ್ಕಳಿಗೆ ನೌಕರಿ ಮೊದಲಾದವುಗಳ ಅವಶ್ಯಕತೆ ಇರುತ್ತದೆ. ಕಾಮರ್ಿಕನ ಕುಟುಂಬದ ಎಲ್ಲ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಬೇಕಾದದ್ದು ಕಾಮರ್ಿಕ ಸಂಘದ ಆದ್ಯ ಕರ್ತವ್ಯ. ಆದರೆ, ಯಾವ ಸಂಘಟನೆಗಳು ಆ ಕೆಲಸವನ್ನು ಮಾಡಲ್ಲ. ಇನ್ನು ಕಾಮರ್ಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಪ್ರಮುಖ ಜವಾಬ್ದಾರಿ ಆಡಳಿತ ಮಂಡಳಿಯ ಮೇಲಿರುವದರಿಂದ ಅದು ಕಾಮರ್ಿಕರ ಕಲ್ಯಾಣಕ್ಕೆ ಸೇರಿದ ಹಲವಾರು ಸಮಿತಿಗಳಲ್ಲಿ ಕಾಮರ್ಿಕ ಸಂಘವನ್ನು ಸೇರಿಸಿಕೊಂಡಿರುತ್ತದೆ.ಕಂಪನಿಯ ವಸತಿ, ಕ್ಯಾಂಟಿನ್, ವೈಧ್ಯಕೀಯ, ಭವಿಷ್ಯನಿಧಿಸಾಲ ಸೇರಿ ಹಲವು ಸಮಿತಿಗಳಲ್ಲಿ ಕಾಮರ್ಿಕ ಸಂಘದ ನಾಯಕರು ಸದಸ್ಯರಿರುತ್ತಾರೆ. ಆದರೆ, ಆ ನಾಯಕರು ಕಂಪನಿಯ ಸಮಿತಿಯಿಂದ ಯಾವುದನ್ನು ಕ್ರಮಬದ್ದವಾಗಿ ಕಾಮರ್ಿಕರಿಗೆ ಕೊಡಿಸದೇ ತಮ್ಮ ಸ್ವಾರ್ಥಗಳಿಗೆ ಸಮಿತಿಗಳನ್ನು ಬಳಸಿಕೊಳ್ಳುತ್ತಿರುತ್ತಾರೆ.ಪ್ರಮುಖವಾಗಿ ವಸತಿ, ಭವಿಷ್ಯನಿಧಿ ಸಮಿತಿಗಳಲ್ಲಿ ಕಾಮರ್ಿಕ ನಾಯಕರು ತನ್ನವನನ್ನು ಬಿಟ್ಟರೆ, ನ್ಯಾಯಯುತವಾಗಿ ಬೇರೆ ಯಾರೊಬ್ಬ ಕಾಮರ್ಿಕರಿಗೂ ಆ ಸಮಿತಿಯಿಂದ ಸೌಲಭ್ಯವನ್ನು ಕೊಡಿಸುವುದಿಲ್ಲ. ಅವುಗಳನ್ನು ವಿತರಿಸುವಲ್ಲಿ ಕಾಮರ್ಿಕ ಸಂಘಗಳು ಯಾವ್ಯಾವ ರೀತಿ ತಾರತಮ್ಯವನ್ನು ಮಾಡುತ್ತದೆ ಎಂಬುದರ ಕುರಿತು ಈಗಾಗಲೇ ನಮ್ಮ ಪತ್ರಿಕೆ ಕಳೆದ ನಾಲ್ಕೇದು ಸಂಚಿಕೆಗಳಲ್ಲಿ ವಿವರಿಸಿದೆ. ಮತ್ತೊಮ್ಮೆ ಅದನ್ನು ವಿವರಿಸುವ ಗೋಜಿಗೆ ಹೋಗುವುದಿಲ್ಲ.ಸಾವಿರಾರು ಕಾಮರ್ಿಕರನ್ನು ಪ್ರತಿನಿಧಿಸುವ ನಾಯಕ ಚುನಾವಣಿಗೆ ಸ್ಪಧರ್ಿಸಬೇಕಾದರೆ, ಕನಿಷ್ಟ ಅರ್ಹತೆಗಳನ್ನಾದರೂ ಹೊಂದಿರಬೇಕು. (ಹೆಚ್ಚಿನ ಮಾಹಿತಿಗಾಗಿ ಬಾಕ್ಸ್ ನೋಡಿ) ಕಾಯ್ದೆ, ಕಾನೂನು, ಸಾಮಾನ್ಯ ತಿಳುವಳಿಕೆ ಇರದ ನಾಯಕರು ಚುನಾವಣಿಯಲ್ಲಿ ಗೆದ್ದರೆ, ಹೆಚ್ಚಿಗೆ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಾರೆಯೇ ವಿನಃ ಬೇರೊಂದಿಲ್ಲ ಮತ್ತು ಕೆಲವೊಬ್ಬ ಅನಕ್ಷರಸ್ಥರು ನಾಯಕರಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡಲು ಹೋದರೆ, ಅಂತವರನ್ನು ವ್ಯವಸ್ಥೆ ದಾರಿ ತಪ್ಪಿಸುತ್ತದೆ. ಕಾಮರ್ಿಕ ನಾಯಕನ ವಿಕ್ನೆಸ್ಗಳನ್ನು ಪತ್ತೆಹಚ್ಚುವ ವ್ಯವಸ್ಥೆ ಆತನ ದೌರ್ಬಲ್ಯದಲ್ಲಿಯೇ ಆತನನ್ನು ಅಂತ್ಯಗೊಳಿಸುತ್ತದೆ. ಇದಕ್ಕೆ ನಮ್ಮಲ್ಲಿಯೇ ಸಾಕಷ್ಟು ತಾಜಾ ಉದಾಹರಣಿಗಳಿವೆ.ಒಟ್ಟಾರೆಯಾಗಿ ಹಟ್ಟಿ ಕಾಮರ್ಿಕ ಮತ್ತು ಆತನ ಕುಟುಂಬದವರ ಪಾಲಿಗೆ ಈ ಚುನಾವಣಿ ಮಹತ್ವವಾದದ್ದು. ಮೊದಲಿಗೆ ಹೇಳಿದಂತೆ "ವೇತನ ಒಪ್ಪಂದ" ಇದೇ ಅವಧಿಯಲ್ಲಿ ನಡೆಯುವುದರಿಂದ ಕಾಮರ್ಿಕರು ಪ್ರಾಮಾಣಿಕತೆಯಿಂದ, ಕಾಮರ್ಿಕರ ಒಳಿತಿಗಾಗಿ ಶ್ರಮಿಸುವ ನಾಯಕನನ್ನು ಆಯ್ಕೆ ಮಾಡಿಕೊಳ್ಳಬೇಕು.ಚುನಾವಣಿಯ ಸಂದರ್ಭದಲ್ಲಿ ಹೆಂಡ, ಆಸೆ-ಆಮಿಷಗಳಿಗೆ ಬಲಿಯಾಗಿ ನಿಮ್ಮ ಅಮೂಲ್ಯವಾದ ಮತವನ್ನು ಮಾರಿಕೊಂಡರೇ ನೀವೇ 5ವರ್ಷಗಳ ಕಾಲ ಪಶ್ಚಾಪಾತ ಪಡಬೇಕಾಗುತ್ತದೆ. ಅದರಿಂದ ನಿನ್ನನ್ನು ಆವರಿಸುವ ವ್ಯವಸ್ಥೆಗೂ ಪೆಟ್ಟು ಬೀಳುತ್ತದೆ.2005ರ ವೇತನ ಒಪ್ಪಂದದಿಂದ ಕಾಮರ್ಿಕರಿಗೆ ಎಷ್ಟರ ಮಟ್ಟಿಗೆ ಲಾಭ-ನಷ್ಟವಾಗಿದೆಯೆಂದು ನಾವುಗಳು ಅಂದೇ ನಮ್ಮ ಸಂಘಟನೆಯ ಜೊತೆಗೂಡಿ ಕರಪತ್ರದ ಮುಖಾಂತರ ಮಾಹಿತಿಯನ್ನು ನೀಡಿದ್ದೇವು.ಕಳೆದ ವೇತನ ಒಪ್ಪಂದದಲ್ಲಾದ ತಾರತಮ್ಯವನ್ನು ಪರಿಶೀಲಿಸಲು ಲೋಕಾಯುಕ್ತರಿಗೂ ದೂರನ್ನು ಸಲ್ಲಿಸಿದ್ದೇವು. ಅಂತಹ ಸಂದರ್ಭದಲ್ಲಿ ಕಂಪನಿ ನಮ್ಮ ಮೇಲೆ ಸುಳ್ಳು ಕೇಸ್ನ್ನು ಹಾಕಿ ಜೈಲಿಗೆ ಕಳುಹಿಸಿತು. (ಕೇಸ್ ಇನ್ನು ಮುಂದುವರೆದಿದೆ. ಇದೇ 23ರಂದು ವಿಚಾರಣಿ ನಡೆಯಲಿದೆ)ಕಾರಣ ಕಾಮರ್ಿಕರರು ಉತ್ತಮ ನಾಳೆಗಾಗಿ ಅತ್ಯುತ್ತಮ ನಾಯಕತ್ವವನ್ನು ಆಯ್ಕೆಮಾಡಿಕೊಳ್ಳುವುದು ಅನಿವಾರ್ಯ. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರಿ ಎಂಬುದೇ ನಮ್ಮಯ ಆಶಯ.
ಕಾಮರ್ಿಕ ಸಂಘಕ್ಕೆ ಸ್ಪಧರ್ೆ ಮಾಡುವವರಿಗೆ ಕನಿಷ್ಟ ಇಷ್ಟಾದರೂ ಅರ್ಹತೆಗಳಿರಬೇಕು.
ಮೊದಲಿಗೆ ಕಾಮರ್ಿಕ ನಾಯಕನಾಗುವಾತ ಅಕ್ಷರಸ್ಥನಾಗಿರಬೇಕು. ಕೈಗಾರಿಕಾ ವಿವಾದಗಳ ಅಧಿನಿಯಮ ಕಾಯ್ದೆ ಮಾಹಿತಿ ಇರಬೇಕು. ಕಾಮರ್ಿಕ ಇಲಾಖೆಗೆ ಸಂಬಂಧಿಸಿ ಕೇಂದ್ರದಿಂದ ತಾಲೂಕಾ ಕಾಮರ್ಿಕ ಇಲಾಖೆಯವರೆಗೆ ಏನೇನು ನಡೆಯುತ್ತದೆಂದು ಗೊತ್ತಿರಬೇಕು. ಗಣಿ ಕಾನೂನು ಹಾಗೂ ಕಂಪನಿ ಕಾನೂನಿನ ವ್ಯತ್ಯಾಸ ಗೊತ್ತಿರಬೇಕು. ದಿನನಿತ್ಯದ ಆಗು-ಹೋಗುಗಳ ಬಗ್ಗೆ ಸಂಪೂರ್ಣ ಅರಿವಿರಬೇಕು. (ಯಾಕೆಂದರೆ ಕಾಮರ್ಿಕ ಸಂಘದ ನಾಯಕನೊಬ್ಬ ಮೇ1ರಂದು ರ್ಯಾಲಿ ನಡೆಯುತ್ತಿದ್ದರೆ, ಅಲ್ಲಿ ಏನಾಗಿದೆ ಎಂದು ನಮ್ಮನ್ನೇ ಕೇಳಿದ್ದ. ಅಂದರೆ, ಆತನಿಗೆ ಮೇ1 ಯಾರ ದಿನ ಎಂಬುದೇ ಗೊತ್ತಿಲ್ಲ.) ನೇರ, ನಿಷ್ಠುರವಾಗಿ ಅಧಿಕಾರಿಗಳ ಜೊತೆ ನ್ಯಾಯಬದ್ದವಾಗಿ ಮಾತನಾಡುವ ಸ್ಥೈರ್ಯ ಹೊಂದಿರಬೇಕು. ಟ್ರೇಡ್ಯೂನಿಯನ್ ಆಕ್ಟ್ನ ಕುರಿತು ಅವಶ್ಯ ತಿಳುವಳಿಕೆ ಇರಬೇಕು.

No comments:

Post a Comment

Thanku