ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ, ಭಾರತೀಯ ಜನತಾ ಪಕ್ಷದ ದಕ್ಷಿಣ ಭಾರತದ ಬಹುದೊಡ್ಡ ನಾಯಕ. ಆರಂಭದಿಂದ ಸ್ವಯಂಸೇವಕ ಸಂಘದಲ್ಲಿ ಬೆಳೆದರೂ, ಅಧಿಕಾರಕ್ಕೆ ಬರುವ ಕೆಲವು ತಿಂಗಳುಗಳವರೆಗೆ ಅಲ್ಪಸ್ವಲ್ಪ ಜನಪರ ಕಾಳಜಿಯನ್ನು ಹೊಂದಿದವರು. ದೃಢವಾದ ನಿಲುವು ಮತ್ತು ಜನಪರ ಕಾಳಜಿ ಯಡಿಯೂರಪ್ಪನನ್ನು ಪುರಸಭೆ ಅಧ್ಯಕ್ಷನಿಂ ದಿಡಿದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದವು. ಹೀಗಾಗಿ ಅವರು ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರವನ್ನು ತಂದರು.
ತಮ್ಮ ರಾಜಕಾರಣದ ಬಹುಪಾಲು ಅವಧಿ ಯಡಿಯೂರಪ್ಪ ವಿರೋಧ ಪಕ್ಷದಲ್ಲಿಯೇ ಕಳೆದರು. ಸಕಾ೯ರಗಳು ಮಾಡುವ ತಪ್ಪುಗಳನ್ನು ಬಯಲಿಗೆಳೆಯುವುದೇ ಅವರ ದಿನನಿತ್ಯದ ಕಾಯಕವಾಯಿತು. ಪ್ರಾಮಾಣಿಕ ರಾಜಕಾರಣಿಯಂತೆ ಬಿಂಬಿತಗೊಂಡ ಯಡಿಯೂರಪ್ಪ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಹಾಗೂ ಜನರ ಮೆಚ್ಚುಗೆಯ ನಾಯಕರಾದರು. ಯಡಿಯೂರಪ್ಪನವರು ಅಧಿಕಾರಕ್ಕೆ ಬಂದರೆ, ಈ ರಾಜ್ಯದಲ್ಲಿ ಪಾರದರ್ಶಕ ಆಡಳಿತವನ್ನು ನೋಡಬಹುದೆನೋ ಎಂಬ ನೀರಿಕ್ಷೆ ಜನಸಾಮಾನ್ಯರಲ್ಲಿ ಸಣ್ಣಪ್ರಮಾಣದಲ್ಲಿ ಕವಲೊಡೆಯತೊಡಗಿತು. ಪ್ರತಿಯೊಂದನ್ನು ಟೀಕಿಸುತ್ತಾ, ವಿರೋಧಪಕ್ಷವೆಂದರೆ, ಅದರ ಕೆಲಸವೇನು ಎಂಬುದನ್ನು ಎಲ್ಲರಿಗಿಂತ ಚನ್ನಾಗಿ ತಿಳಿಸಿಕೊಟ್ಟು, ವಿಧಾನಸೌಧದ ನಿಯತ್ತಿನ ಕಾವಲು ನಾಯಿಯಾದರು.
ಆದರೆ, ಯಾಕೋ ಯಡಿಯೂರಪ್ಪನವರು ಅಧಿಕಾರಕ್ಕೆ ಬಂದ ಮೇಲೆ ಹೋರಾಟ, ಜನಪರ ಕಾಳಜಿ, ವಿರೋಧಪಕ್ಷದ ನಾಯಕನ ಸ್ಥಾನದಲ್ಲಿದ್ದಾಗ ಹೊಂದಿದ್ದ ನಿಲುವುಗಳನ್ನೆಲ್ಲ ಬದಿಗೊತ್ತಿದರು.
ಅಧಿಕಾರ ಸಿಕ್ಕೊಡನೆ ಯಡಿಯೂರಪ್ಪ ಜಾತಿ, ಮಠ, ಕುಟುಂಬ ಹಾಗೂ ಸಂಪತ್ತುಗಳ ವ್ಯಾಮೋಹಕ್ಕೆ ಅಂಟಿಕೊಂಡರು. ಆ ವ್ಯಾಮೋಹ ಯಾವ ಮಟ್ಟಕ್ಕೆ ತಲುಪಿತೆಂದರೆ, ಹಣ-ಅಧಿಕಾರ ಇಲ್ಲದೆ ಹೋದರೆ ಎಲ್ಲವೂ ಶೂನ್ಯ, ಹೋರಾಟ, ಸಿದ್ದಾಂತಗಳು ತಾತ್ಕಾಲಿಕವಾದವು, ಅಧಿಕಾರವೊಂದೇ ಶಾಶ್ವತವಾಗಿರುವುದು ಅದಕ್ಕಾಗಿ ಸಿಕ್ಕಿರುವ ಅಧಿಕಾರವನ್ನು ಬಳಸಿಕೊಂಡು ಜಾತಿ, ಮಠ, ಆಸ್ತಿಗಳನ್ನು ಮಾಡಿದರಾಯಿತು. ಅವುಗಳಾದರೂ ಮುಂದೊಂದು ದಿನ ನನ್ನ ಭವಿಷ್ಯಕ್ಕೆ ಭದ್ರವಾದ ಸಪೋಟ್೯ ನೀಡಬಹುದೆಂಬ ಮಟ್ಟಕ್ಕೆ ಹೋಯಿತು.
ಆದರೆ, ಮೊನ್ನೆ ಯಡಿಯೂರಪ್ಪನವರಿಗೆ ಪರಪ್ಪನ ಅಗ್ರಹಾರಕ್ಕೆ ಹೋಗಲೇಬೇಕಾದ ಅನಿವಾರ್ಯತೆಗಳು ಎದುರಾದಾಗ ತಾವುಗಳು ಮಾಡಿದ ತಪ್ಪಿನ ಪುನರಾವರ್ತನೆ ಮಾಡಿಕೊಳ್ಳತೊಡಗಿದರು. ತಮ್ಮ ರಾಜಕೀಯ ಜೀವನದುದ್ದಕ್ಕೂ ಯಡಿಯೂರಪ್ಪ ಸ್ವಯಂ ಸೇವಕ ಸಂಘದ ಕೆಲವರ ಮಾತುಗಳನ್ನು ಆಗಾಗ ಕೇಳಿದ್ದು ಬಿಟ್ಟರೆ, ಮತ್ತ್ಯಾವ ಸಂದರ್ಭಗಳಲ್ಲಿ ಯಾರೊಬ್ಬರ ಮಾತುಗಳನ್ನು ಪರಿಗಣಿಸುವವರಲ್ಲ. ಯಾಕೆಂದರೆ, ಅಂದು ಯಡಿಯೂರಪ್ಪರೊಬ್ಬರೇ ಬಿಜೆಪಿಗೆ ಮಾಸ್ಲೀಡರ್ ಆಗಿದ್ದರು. ಪರಪ್ಪನ ಅಗ್ರಹಾರ ಗತಿ ಎಂದು ಗೊತ್ತಾದಾಗ ಅವರಿವರ ಮಾತುಗಳನ್ನು ಕೇಳತೊಡಗಿದರು. ನಂತರ ನನ್ನ ತಪ್ಪಿನ ಅರಿವಾಗಿದೆ, ಇದರಿಂದ ಹೊರಬಂದು ಮತ್ತೊಮ್ಮೆ ರಾಜ್ಯದಲ್ಲಿ ಬಹುಮತದಿಂದ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ. ಅದಕ್ಕಾಗಿ ಮತ್ತೇ ರಾಜ್ಯಾಧ್ಯಂತ ಪ್ರವಾಸಗಳನ್ನು ಕೈಗೊಂಡು ಹೋರಾಟಗಳನ್ನು ಮಾಡುತ್ತೇನೆಂದು ಹೇಳತೊಡಗಿದರು.
ಇದ್ದ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದೇ, ಸಮಯ ಮಿಂಚಿಹೋದ ಮೇಲೆ ಚಿಂತೆ ಮಾಡಿದರೆ ಲಾಭವೇನು..? ಇದ್ದಾಗಲೇ ಆ ಸಮಯವನ್ನು ಬಳಸಿಕೊಂಡಿದ್ದರೆ, ಕನರ್ಾಟಕದಲ್ಲಿ ಏನಾದರೂ ಒಂದಿಷ್ಟು ಒಳ್ಳೆಯ ಕೆಲಸಗಳನ್ನು ಮಾಡಬಹುದಿತ್ತು. ಯಡಿಯೂರಪ್ಪರ ಮೇಲೆ ಜನಸಾಮಾನ್ಯರಿಟ್ಟಿದ್ದ ನಂಬಿಕೆಯಾದರೂ ಸ್ವಲ್ಪ ಮಟ್ಟಿಗೆ ಉಳಿದಿರುತ್ತಿತ್ತು. ಆದರೆ, ಅದ್ಯಾವುದು ಕರ್ನಾಟಕದಲ್ಲಿ ಆಗಲೇ ಇಲ್ಲ.
ಬಿಜೆಪಿ ಅಧಿಕಾರಕ್ಕೆ ಬಂದದ್ದೆ ತಡ, ಸ್ವಯಂಸೇವಕ ಸಂಘದ ಅಂಗ ಸಂಸ್ಥೆಗಳು ಬಲಾಡ್ಯವಾಗಿ ಬೆಳೆದವು. ಕಂಡಕಂಡಲ್ಲಿ ಚಚ೯, ಮಸೀಧಿಗಳ ಮೇಲೆ ದಾಳಿಗಳು ನಡೆದವು. ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗತೊಡಗಿದವು. ಆಡಳಿತಯಂತ್ರವು ಸಂಪೂರ್ಣವಾಗಿ ಕುಸಿದು ಪ್ರತಿಯೊಂದು ತೀಮಾ೯ನಗಳು ಕೇಶವಕೃಪಾದಿಂದ ಹೊರಬರತೊಡಗಿದವು. ಜವಾನನಿಂದಿಡಿದು ದಿವಾನನವರೆಗೆ ವಗಾ೯ವಣಿಯಲ್ಲಿ ಅಕ್ರಮಗಳು ನಡೆದವು. ಬಳ್ಳಾರಿ ಕಳ್ಳರು ನೈಸಗಿ೯ಕ ಸಂಪತ್ತನ್ನೇ ಲೂಟಿ ಮಾಡಿದರು. ಒಟ್ಟಾರೆ ಬಿಜೆಪಿ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮರೆತು, ತಮ್ಮ ಪಕ್ಷದ ಆಂತರಿಕ ಕಿತ್ತಾಟಗಳನ್ನು ಬಗೆಹರಿಸುವಲ್ಲಿ 1000 ದಿನಗಳನ್ನು ಕಳೆಯಿತು.
ಪಾಪಿ ಸಮುದ್ರಕ್ಕೆ ಹೋದರೂ ಮೊಣಕಾಲು ತುಂಬಾ ನೀರು ಎಂಬಂತೆ, ಬಿಜೆಪಿ ಎಲ್ಲ ಕೆಲಸಗಳಲ್ಲಿ ಬಲವಂತವಾಗಿ ತನ್ನ ಅಜೆಂಡಾಗಳನ್ನು ಹೇರಲು ಹೋಯಿತು.
ಪ್ರಬುದ್ದತೆ ಇರದ ಮಂದಿಯೆಲ್ಲ ಮಂತ್ರಿಗಳಾಗಿ ಎಲ್ಲ ಇಲಾಖೆಗಳನ್ನು ಹೊಲಸೆಬ್ಬಿಸಿದರೆ, ಗ್ರಾಮಪಂಚಾಯತ್ಗಳಲ್ಲಿಯೇ ಅಧಿಕಾರ ಪಡೆಯದ ಹಿಂಬಾಲಕರು ನಿಗಮ ಮಂಡಳಿಗಳನ್ನು ಸೇರಿ ಅಕ್ರಮ ಆಸ್ತಿ ಮಾಡಲು ಬಿದ್ದರು.
ಇವೆಲ್ಲವನ್ನು ಕ್ರಮಬದ್ದವಾಗಿ ವಿರೋಧಿಸಬೇಕಾದ ವಿರೋಧಪಕ್ಷಗಳು ರಾಜ್ಯದಲ್ಲಿ ಸಂಪೂರ್ಣವಾಗಿ ವಿಫಲವಾದವು. ವಿರೋಧ ಪಕ್ಷಗಳು ಭ್ರಷ್ಟಾಚಾರದ ನಂಟನ್ನು ಮೈಗಂಟಿಸಿಕೊಂಡಿರುವದರಿಂದ ಅವೆಲ್ಲವುಗಳು ರಾಜ್ಯದ ಬೆಳವಣಿಗೆಯ ಕುರಿತು ನೀರವ ಮೌನಕ್ಕೆ ಜಾರಿದವು. ಇನ್ನು ಮಾಧ್ಯಮ ಮಂದಿ ಸಕಾ೯ರ ನೀಡುವ ಸೈಟು, ಪ್ರಶಸ್ತಿ ಹಾಗೂ ತದಿತರೆ ಸೌಲಭ್ಯಗಳನ್ನು ಪಡೆದು ನಮಗೇನು ಗೊತ್ತಿಲ್ಲವೆಂಬಂತೆ ವತಿ೯ಸತೊಡಗಿದರು. ಅಲ್ಲಲ್ಲಿ ಪ್ರಗತಿಪರ ಪತ್ರಿಕೆಗಳು, ಅಂಕಣಕಾರರು ಸಕಾ೯ರದ ಕಾರ್ಯವೈಖರಿಯನ್ನು ಕಟುವಾಗಿ ಬರೆದಿದ್ದು ಬಿಟ್ಟರೆ, ಮೊನ್ನೆ ಯಡಿಯೂರಪ್ನ ಅಗ್ರಹಾರಗೆ ಹೋದಾಗಲೂ ಅವರನ್ನು ಸಮಥರ್ಸಿಕೊಂಡು ಬರೆದವರೇ ಹೆಚ್ಚು.
ಅದು ಸಾಲದೆಂಬಂತೆ ರಾಜಕಾರಣದಲ್ಲಿ ದುಡ್ಡು ಮಾಡಿದ ಮಂದಿಯೆಲ್ಲ ತಮ್ಮ ರಕ್ಷಣಿಗಾಗಿ, ತಾವುಗಳು ಮಾಡಿದ ಅಕ್ರಮ ಹಣದ ಚಲಾವಣಿಗಾಗಿ ಕೋಟಿಗಟ್ಟಲೇ ಬಂಡವಾಳಗಳನ್ನು ತೊಡಗಿಸಿ ಒಂದೊಂದು ನ್ಯೂಸ್ ಚಾನೆಲ್ಗಳನ್ನು ಆರಂಭಿಸತೊಡಗಿದರು. ಕೆಲವರು ಇದ್ದ ಚಾನೆಲ್ಗಳನ್ನೇ ಖರೀದಿ ಮಾಡತೊಡಗಿದರು.
ಇನ್ನು ಉದ್ಯೋಗಕ್ಕಾಗಿ ಕೆಲವು ಪತ್ರಕರ್ತರು ತಮ್ಮ ವೃತ್ತಿಪರತೆಯನ್ನು ಮರೆತು, ಸಕರ್ಾರಗಳ ಅಧಿಕೃತ ಹೊಗಳುಭಟ್ಟರಾದರು.
ಏನೇ ಆಗಲಿ ರಾಜ್ಯದಲ್ಲಿ ಎಷ್ಟೇಲ್ಲಾ ಅಕ್ರಮ, ಭ್ರಷ್ಟಾಚಾರ, ರಾಜಕೀಯ ದುರಾಡಳಿತ ನಡೆದಾಗ್ಯೂ, ವ್ಯವಸ್ಥೆಯ ಮಧ್ಯೆ ಇಬ್ಬರೂ ಮಾತ್ರ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ, ಪಾರದರ್ಶಕವಾಗಿ, ಮಾಡಿ ಮುಗಿಸಿದರು. ಅವರಿಂದಲೇ ಯಡಿಯೂರಪ್ಪ, ರೆಡ್ಡಿಗಳು ಜೈಲುಪಾಲಾಗಬೇಕಾಗಿದೆ. ಅವರೇ ಸಧ್ಯ ದಕ್ಷಿಣ ಭಾರತದ ಮೊದಲ ಬಿಜೆಪಿಯ ಆಡಳಿತಕ್ಕೆ ಅಂತ್ಯವನ್ನೂ ಬರೆಯುತ್ತಿದ್ದಾರೆ. ಅವರ್ಯಾರೆಂದರೂ ಕೇಳುವೀರಾ... ಮೊದಲನೇಯದ್ದು ಗಣಿಅಕ್ರಮವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸಂತೋಷ ಹೆಗ್ಡೆ ಮತ್ತು ರಾಜ್ಯದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಮಾಜಿ ಮುಖ್ಯಮಂತ್ರಿಯೊಬ್ಬನನ್ನು ಜೈಲಿಗೆ ಕಳುಹಿಸಿದ ಲೋಕಾಯುಕ್ತ ನ್ಯಾಯಮೂತಿ೯ ಸುದೀಂದ್ರ.ರಾವ್. ಈ ಇಬ್ಬರೂ ನ್ಯಾಯಮೂತಿ೯ಗಳ ಕುರಿತು ಮುಂದಿನ ಸಂಚಿಕೆಯಲ್ಲಿ ವಿವರವಾಗಿ ತಿಳಿಸಲಾಗುವುದು.
ಸಂಪಾದಕೀಯ...
No comments:
Post a Comment
Thanku