Monday, July 16, 2012

ದಂಡುಪಾಳ್ಯ'ದ ದಾರಿಯಲ್ಲಿ ಹಂತಕರ ಹೆಜ್ಜೆ...



ದಾಕ್ಷಿಣ್ಯಕ್ಕಾದರೂ ಅಯ್ಯೋ-ಪಾಪ ಎನ್ನದಂಥ ಮನಸ್ಸು, ಕರುಣೆ ಅನ್ನೋದರ ಅರ್ಥವೇ ಗೊತ್ತಿಲ್ಲದ ಪರಮ ಕ್ರೂರಿಗಳು. ತಂಡದ ನಾಯಕಿ ಲಕ್ಷ್ಮಿ ಮೊದಲು ಒಂಟಿ ಮಹಿಳೆಯರಿರುವ ಮನೆಯನ್ನು ಗುರುತಿಸುತ್ತಾಳೆ. ಮನೆಯಲ್ಲಿ ಬೇರೆ ಯಾರೂ ಇಲ್ಲ ಅನ್ನೋದು ಗ್ಯಾರೆಂಟಿಯಾಗುತ್ತಿದ್ದಂತೇ ಆ ಮನೆ ಮತ್ತು ಮನೆಯಲ್ಲಿರುವವರ ಡೀಟೇಲನ್ನು ತಂಡದ ಉಳಿದ ಸದಸ್ಯರಿಗೆ ನೀಡುತ್ತಾಳೆ. ಹಾಗೆ ತನ್ನ ಗುಂಪಿನೊಂದಿಗೆ ಬರುವ ಲಕ್ಷ್ಮಿ ಮೊದಲು ಮನೆ ಬಾಗಿಲು ಬಡಿಯುತ್ತಾಳೆ. ಕುಡಿಯೋಕೆ ನೀರು ಕೊಡಿ ಎನ್ನುತ್ತಾಳೆ. ಮನೆಯಾಕೆ ಒಳಗೆ ಹೋಗಿ ನೀರು ತರುವಷ್ಟರಲ್ಲಿ ಗ್ಯಾಂಗಿನ ಉಳಿದ ಸದಸ್ಯರು ಮನೆಯೊಳಗೆ ಪವೇಶಿಸುತ್ತಾರೆ. ಅಲ್ಲಿಗೆ ಮನೆಯಲ್ಲಿರುವರ ಕತೆ ಮುಗಿದಂತೇ! ಹಿಂದಿನಿಂದ ತಲೆ ಲಟಾರನೆ ರಾಡಿನಿಂದ ಹೊಡೆದು ಕೆಳಗುರುಳಿಸುತ್ತಾರೆ. ಮನೆಯಲ್ಲಿರುವ ನಗ-ನಾಣ್ಯವನ್ನೆಲ್ಲಾದೋಚಿದ ನಂತರ ಮೆತ್ತಗೆ ಗ್ಯಾಂಗ್ ಲೀಡರ್ ಕೃಷ್ಣ ನೆಲದ ಮೇಲೆ ಪ್ರಜ್ಞಾಶೂನ್ಯ ಸ್ಥಿತಿಯಲ್ಲಿರುವ ಹೆಣ್ಣನ್ನು ಎಳೆದುಕೊಳ್ಳುತ್ತಾನೆ. ಎಲೆ-ಅಡಿಕೆ ಜಗಿಯುತ್ತಾ ಎಲ್ಲವನ್ನೂ ನೋಡುತ್ತಾ ಕೂರುವ ಲಕ್ಷ್ಮಿ ಬಂದು ಗಟ್ಟಿಯಾಗಿ ಆ ಹೆಣ್ಣಿನ ಕಾಲುಗಳನ್ನು ಒತ್ತಿಹಿಡಿಯುತ್ತಾಳೆ. ಮತ್ತೊಬ್ಬ ಬಂದು ಮೊಂಡು ಹಿಡಿದ ಕತ್ತಿಯೊಂದನ್ನು ನೀಡುತ್ತಾನೆ. ವಿಲಕ್ಷಣವಾಗಿ ದಿಟ್ಟಿಸುತ್ತಾ ಕತ್ತಿಯನ್ನು ಕುತ್ತಿಗೆಗಿಟ್ಟು ಚರ್ರಚರ್ರನೆ ಕೋಳಿ ಕೊಯ್ಯುವ ಹಾಕೆ ಗೋಮಾಳೆ ಸೀಳಿಬಿಡುತ್ತಾನೆ ಕೃಷ್ಣ. ಹಾಗೆ ಕುತ್ತಿಗೆ ಸೀಳಿದ ಕೂಡಲೇ ಗಂಟಲಿನಿಂದ `ಟಿಸ್ಸ್ಸ್ ' ಅಂತಾ ಶಬ್ದ ಬರುತ್ತದೆ. ಕಿವಿ ಹತ್ತಿರ ಮಾಡಿ ಆ ಸದ್ದನ್ನು ಕೇಳುವುದೆಂದರೆ ಕ್ರೂರಿ ಕೃಷ್ಣನಿಗೆ ಅದೆಂಥದ್ದೋ ಮೋಜು. ನಂತರ ತಂಡದ ಇತರೆ ಸದಸ್ಯರು ಸತ್ತ ಹೆಣವನ್ನೂ ರೇಪ್ ಮಾಡುತ್ತಾರೆ... ಮುನ್ನೂರು ರುಪಾಯಿಗೆ ಮೈಮಾರಿಕೊಳ್ಳುವ ಬೀದಿ ವೇಶ್ಯೆಯನ್ನೂ ಹಿಂಸಿಸಿ ಕೊಲ್ಲುವ, ಮನೆಗಳಿಗೆ ನುಗ್ಗಿದಾಗ ಸಿಗುವ ಗಂಡಸರ ಮೇಲೂ ಅತ್ಯಾಚಾರವೆಸಗುವು ಕೆಟ್ಟ ಕ್ರಿಮಿಗಳವರು...
ಅಬ್ಬಬ್ಬಬ್ಬಬ್ಬ!!
ಇಂಥ ಸರಣೀ ಭೀಬತ್ಸ ಕೊಲೆಗಳಿಗೆ ಕಾರಣರಾದವರು `ದಂಡುಪಾಳ್ಯ'ದ ಹಂತಕರು. ನೈಜ ಕತೆಯನ್ನೇ ಹೆಕ್ಕಿಕೊಂಡು ಅಷ್ಟೇ ನೈಜವಾಗಿ ಚಿತ್ರಿತಗೊಂಡಿರುವ ಸಿನಿಮಾ `ಡಂಡುಪಾಳ್ಯ'. ಈ ಚಿತ್ರವನ್ನು ಗಟ್ಟಿ ಗುಂಡಿಗೆಯಿದ್ದವರು ಮಾತ್ರ ನೋಡಲು ಸಾಧ್ಯ. ದಂಡು ಪಾಳ್ಯದ ಹಂತಕರ ಪ್ರತಿಯೊಂದೂ ವಿವರಗಳನ್ನು ಕಲೆಹಾಕಿ, ಆ ಗ್ಯಾಂಗಿನ ಹುಟ್ಟಡಗಿಸಿದ ಇನ್ಸ್ಪೆಕ್ಟರ್ ಚಲಪತಿವರ ಧೈರ್ಯ-ಬುದ್ದಿವಂತಿಕೆ ಇತ್ಯಾದಿ ವಿವರಗಳನ್ನಿಟ್ಟು ಪಕ್ಕಾ ರಿಯಲಿಸ್ಟಿಕ್ ಡಾಕ್ಯುಮೆಂಟರಿಯಂತೆ `ದಂಡುಪಾಳ್ಯ'ವನ್ನು ಕಟ್ಟಿಕೊಟ್ಟಿದ್ದಾರೆ ನಿದರ್ೇಶಕ ಶ್ರೀನಿವಾಸರಾಜು.

ಲಕ್ಷ್ಮಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪೂಜಾಗಾಂಧಿ, ಕೃಷ್ಣನಾಗಿ ಮಕರಂದ್ ದೇಶಪಾಂಡೆ, ರವಿಕಾಳೆ, ಮುನಿ, ಯತಿರಾಜ್, ಪೆಟ್ರೋಲ್ ಪ್ರಸನ್ನ ಮುಂತಾದವರು ಡಂಡುಪಾಳ್ಯದ ಹಂತಕರನ್ನೇ ಆವಾಹಿಸಿಕೊಂಡು ನಟಿಸಿದ್ದಾರೆ. ಚಿತ್ರದ ಮೊದಲಾರ್ಧದಲ್ಲಿ ಕುತ್ತಿಗೆ ಕತ್ತರಿಸುವ ದೃಶ್ಯಗಳೇ ಹೆಚ್ಚು ಇರುವುದರಿಂದ ಪ್ರೇಕ್ಷಕರ ಕರುಳು ಬಾಯಿಗೆ ಬಂದಂತಾಗುತ್ತದೆ; ಪ್ರೇಕ್ಷಕ ಪದೇ ಪದೇ ಕಣ್ಣು-ಕಿವಿ ಮುಚ್ಚಲೇಕಾದ ಅನಿವಾರ್ಯ! ಮತ್ತೆ ನೋಡುಗರ ಕಣ್ತೆಯುವುದು ಇನ್ಸ್ಪೆಕ್ಟರ್ ಚಲಪತಿ ಸಂಪೂರ್ಣವಾಗಿ ಎಂಟ್ರಿ ಕೊಟ್ಟು ತನಿಖೆ ಆರಂಭಿಸಿದ ಮೇಲಷ್ಟೇ. ಮೊದಲಿಗೆ ದರೋಡೆ ಮಾಡಿದ ಬಂಗಾರವನ್ನು ಸಂಶಯಾಸ್ಪದವಾಗಿ ಮಾರಲು ಯತ್ನಿಸುವ ತಂಡದ ಸದಸ್ಯ ತಿಮ್ಮನನ್ನು ಬಂಧಿಸಿ ನಂತರ ಗ್ಯಾಂಗಿನ ಇತರರ ಬೆನ್ನುಹತ್ತುವ ಎಪಿಸೋಡುಗಳು ರೋಚಕವಾಗಿವೆ. ಸಾಯಿ ಪ್ರಕಾಶ್ ಸಹೋದರ ರವಿಶಂಕರ್ ಚಲಪತಿ ಪಾತ್ರಕ್ಕೆ ಹೇಳಿಮಾಡಿಸಿದಂತೆ ನಟಿಸಿದ್ದಾರೆ. ದವಡೆಯಲ್ಲಿ ಅಡಿಕೆ-ಎಲೆ ಇಟ್ಟುಕೊಂಡು, ಬೀಡಿ ಸೇದುವ, ಹಂದಿಯನ್ನು ಭೇಟೆಯಾಡಿ ಹೆಗಲೆ ಮೇಲೆ ಹೊತ್ತೊಯ್ಯುವ ಪೂಜಾಗಾಂಧಿ ತಾನೊಬ್ಬಳು ಜನಪ್ರಿಯ ಹೀರೋಯಿನ್ ಅನ್ನೋದನ್ನು ಮರೆತು ನಟಿಸಿದ್ದಾಳೆ. ಇಂಥ ಸರಣಿ ಪಾಥಕಗಳನ್ನು ದೃಶ್ಯರೂಪದಲ್ಲಿ ನೀಡುವಾಗ ಹಿನ್ನೆಲೆ ಸಂಗೀತ ಮಹತ್ವವಾದ ಪಾತ್ರ ವಹಿಸುತ್ತದೆ. ಸಂಗೀತ ನಿದರ್ೇಶಕ ಅಜರ್ುನ್ ಇರುವ ಒಂದು ಹಾಡು ಮತ್ತು ಬಿಜಿಎಮ್ ಅಜರ್ುನ್ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಛಾಯಾಗ್ರಾಹಕ ರಾಮ್ಪ್ರಸಾದ್ ಇಡೀ ಸಿನಿಮಾವನ್ನು ಹಸಿಹಸಿಯಾಗಿ ಕಟ್ಟಿಕೊಟ್ಟೊದ್ದಾರೆ.

ದಂಡುಪಾಳ್ಯದ ಗ್ಯಾಂಗಿನವರಿಗೆ ಸುಫಾರಿ ಕೊಟ್ಟು ಪೊಲೀಸರನ್ನೇ ಕೊಲ್ಲಿಸುವ ಪೊಲೀಸರು, ಎರಡು ಮೂರು ಸಾವಿರ ರುಪಾಯಿಗಳನ್ನು ಕೊಟ್ಟು ಕೊಲೆ ಮಾಡಿಸುವ ವಕೀಲ... ಹೀಗೆ ನಡೆದ ಕಥೆಯನ್ನು ಯಥಾವತ್ತು ನಿರೂಪಿಸಿದ್ದಾರೆ; `ದಂಡುಪಾಳ್ಯ'ವನ್ನು ಜೀಣರ್ಿಸಿಕೊಳ್ಳುವುದು ಕಷ್ಟಕರವಾಗಿರುವುದೂ ಅದೇ ಕಾರಣಕ್ಕೇ. ಸಿನಿಮಾ ಪೊಲೀಸ್ ಫೈಲ್ಗಳ ಪ್ರಕಾರ ಬಹುತೇಕ ನೈಜವಾಗಿದೆ ಅನ್ನೋದರಲ್ಲಿ ಡೌಟಿಲ್ಲ. ಆದರೆ ಅಷ್ಟೊಂದು ನೈಜತೆಯನ್ನು ನೋಡುಗರ ಮೇಲೆ ಹೇರುವ ಅಗತ್ಯತೆ ಇತ್ತಾ ಅನ್ನೋದಷ್ಟೇ ಮತ್ತೆಮತ್ತೆ ಕಾಡುವ ಪ್ರಶ್ನೆ...

-ಅರುಣ್.ಜಿ


ನಿವೃತ್ತಿ, ಒಪ್ಪಂದ, ಸಂತಸ


ಓದುಗರೇ, ಇಂದು ತಾವುಗಳು ನೋಡುತ್ತಿರುವ ಪ್ರಜಾಸಮರ ಪತ್ರಿಕೆಯೂ 2007ರಲ್ಲಿ ಆರಂಭಗೊಂಡಿತು. ಇದರ ಸಿದ್ದತೆಗಾಗಿ 1 ವರ್ಷ ಕಳೆದರೂ ಕೂಡ ಕೊನೆಗೆ 2007 ರ ಅಂತ್ಯದಲ್ಲಿ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಸಂಘಟನೆ ಹಿನ್ನಲೆಯಿಂದ ಬಂದಿದ್ದ ನಮಗೆ ಪತ್ರಿಕೋದ್ಯಮದ ಒಳವಿಸ್ತಾರ ಹೇಗಿದೆ ಎಂಬುದು ಊಹಿಸುವುದು ಕಷ್ಟಕರವಾಗಿತ್ತು. ಇನ್ನೇನು ಪತ್ರಿಕೆಯ ಎಲ್ಲಾ ಹಂತಗಳ ಕಾರ್ಯಗಳು ಮುಗಿದಾಗ ಬಿಡುಗಡೆಗೆ ಯಾರನ್ನು ಆಮಂತ್ರಿಸಬೇಕು ಎಂಬ ಗೊಂದಲ ನಮ್ಮ ಬಳಗದಲ್ಲಿ ಏರ್ಪಟ್ಟಿತ್ತು.
ಆದಾಗ್ಯೂ ಅಂದು ಟಿವಿ 9 ಖಾಸಗಿ ವಾಹಿನಯಲ್ಲಿ ಪತ್ರಕರ್ತರಾಗಿದ್ದ ಹಮೀದ್ ಪಾಳ್ಯ ಅವರನ್ನು ಆಹ್ವಾನಸಲಾಯಿತು. ಕೊನೆ ಸಂದರ್ಭಕ್ಕೆ ಅವರು ಬರದೇ ಹೋದಾಗ, ನಮಗೆ ಏನು ಮಾಡಬೇಕೆಂದು ತೋಚದಂತಾಗಿ ಕೂಡಲೇ ಡಾ.ಎಂ.ಎಲ್ ಪಾಟೀಲ್ರನ್ನು ಆಹ್ವಾನಸಿದಾಗ ಅವರು ಅಂದಿನ ಪ್ರಧಾನ ವ್ಯವಸ್ಥಾಪಕರಾದ ಡಿ.ವೈ ವೆಂಕಟೇಶರ ಅನುಮತಿಯನ್ನು ಪಡೆದು ನಮ್ಮ ಪತ್ರಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡರು. ಸಹಜವಾಗಿ ಎಲ್ಲರೂ ಸಂತಸದಿಂದಲೇ ಪಾಟೀಲ್ರನ್ನು ಬರಮಾಡಿಕೊಂಡು ಕಾರ್ಯಕ್ರಮವನ್ನು ಮುಂದುವರೆಸಿದೆವು.
ಪ್ರಜಾಸಮರವನ್ನು ಉದ್ಘಾಟಿಸಿ ಮಾತನಾಡಿದ ಪಾಟೀಲ್ರು ಮುಂದಿನ ದಿನಗಳಲ್ಲಿ ಪತ್ರಿಕೆಗೆ ಒಳ್ಳೆಯ ಭವಿಷ್ಯವಿದೆ. ಅದನ್ನು ಈ ಯುವಪಡೆ ಮಾಡುತ್ತದೆ ಎಂಬ ಭರವಸೆ ನನಗಿದೆ. ಸ್ಥಳೀಯ ಮಟ್ಟದ ಪತ್ರಿಕೆ ಇದಾದರೂ, ರಾಜ್ಯಮಟ್ಟದ ಪತ್ರಿಕೆಯಾಗಿ ಹೊಮ್ಮುವದರಲ್ಲಿ ಎರಡು ಮಾತಿಲ್ಲ ಎಂಬ ಮಾತನ್ನು ಹೇಳಿದರು. ಅಂದಿನ ಬಿಡುಗಡೆ ಕಾರ್ಯಕ್ರಮದಲ್ಲಿ ಸ್ನೇಹಿತರಾದ ನಾಗಣ್ಣ ಕಟ್ಟಿಮನ, ಎಂ.ಸಿ ಲಿಂಗಪ್ಪ, ಹಿತೈಷಿಗಳಾದ ದಾಸಪ್ಪಗೌಡ, ಲಿಂಗಣ್ಣ ತಬಲಾಜಿ ಮೊದಲಾದವರು ಹಾಜರಿದ್ದರು.
ಯಾಕಾಗಿ ಇದನ್ನೆಲ್ಲ ನೆನಪಿಸಬೇಕಾಗಿ ಬಂತೆಂದರೆ,
ಅಂದು ಪತ್ರಿಕೆಯನ್ನು ಬಿಡುಗಡೆ ಮಾಡಿ ಸಂತಸದಿಂದ ನಾಲ್ಕು ಹಿತ ನುಡಿಗಳನ್ನು ಹೇಳಿದ್ದ ಪಾಟೀಲ್ರು ಇದೇ 30ರಂದು ಕಂಪೆನಿಯಿಂದ ನಿವೃತ್ತಿ ಹೊಂದಿದರು. ಕಂಪೆನಿಯಲ್ಲಿ ಇದ್ದಷ್ಟು ದಿನ ಪತ್ರಿಕೆಯ ಜೊತೆಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದ ಅವರು, ಮೊನ್ನೆ ನಮ್ಮ ಪತ್ರಿಕೆಯ 5ನೇ ವಾಷರ್ಿಕೋತ್ಸವದ ವಿಶೇಷ ಸಂಚಿಕೆಗೆ ಹಟ್ಟಿ ಚಿನ್ನದ ಗಣಿಯ ಪಿತಾಮಹ ಎಲ್.ಸಿ ಕಟರ್ಿಸ್ ಅವರ ಕುರಿತು ಲೇಖನವೊಂದನ್ನು ಬರೆದು ಕೊಟ್ಟದ್ದರು. ಅವರ ಲೇಖನದಿಂದ ಪತ್ರಿಕೆಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದವು. ಸಾಕಷ್ಟು ಸಂದರ್ಭಗಳಲ್ಲಿ ಪತ್ರಿಕೆಯ ಜೊತೆ ಸಕಾರಾತ್ಮಕ ಸಂಬಂಧವನ್ನು ಇಟ್ಟುಕೊಂಡಿದ್ದ ಪಾಟಿಲ್ರನ್ನು ಇಂದು ಬೀಳ್ಕೊಡುತ್ತಿರುವುದು ಬೇಸರವೆನಿಸುತ್ತದೆ.
ಕಂಪೆನಿಯ ಹಲವು ಹುದ್ದೆಗಳನ್ನು ಅಲಂಕರಿಸಿದ್ದ ಪಾಟೀಲ್ರು ಕೊನೆಗೆ ಕಂಪೆನಯ ಕಾರ್ಯನಿವರ್ಾಹಕ ನಿದರ್ೇಶಕರಾಗಿ, ತಮ್ಮ ನಿವೃತ್ತಿಯ ಹಿಂದಿನ ದಿನ ಕಾಮರ್ಿಕರ ಐತಿಹಾಸಿಕ ವೇತನ ಒಪ್ಪಂದಕ್ಕೆ ಸಹಿ ಹಾಕಿದರು. ಅವರನ್ನು ಬೀಳ್ಕೋಡಲು ಕಂಪೆನಿಯ ಹಲವು ವಿಭಾಗಗಳ ಕಾಮರ್ಿಕರು ಮತ್ತು ಸಂಘದ ಸದಸ್ಯರು ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ಅದರಲ್ಲಿ ಪಾಟೀಲರು ತಮ್ಮ ಮನದಾಳದ ಇಂಗಿತವನ್ನು ಬಿಚ್ಚಿಟ್ಟರು. ಕಂಪೆನಿಯನ್ನು ಬಿಟ್ಟುಹೋಗುತ್ತಿರುವುದು ದುಃಖಕರವಾಗಿದ್ದರೂ, ನಾನು ಲಿಂಗಸ್ಗೂರಿನಲ್ಲಿಯೇ ಮನೆ ಮಾಡುತ್ತಿದ್ದೂ, ಸಾಧ್ಯವಾದಾಗಲೆಲ್ಲ ಕಾಮರ್ಿಕರು ನಮ್ಮನ್ನು ಭೇಟಿಯಾಗಿರಿ ಎಂದು ಹೇಳಿದರು.
******
ಹಟ್ಟಿ ಚಿನ್ನದ ಗಣಿ ಕಂಪೆನಿಯ ಕಾಮರ್ಿಕ ಸಂಘದ ಅಧ್ಯಕ್ಷರಾಗಿದ್ದ ಎಸ್.ಎಂ ಶಫೀ ಕೂಡ ಇದೇ 30ರಂದು ನವೃತ್ತಿ ಹೊಂದಿದರು. ಪತ್ರಿಕೆ ಆರಂಭದಿಂದ ಪರಿಚಿತರಾಗಿದ್ದ ಅವರನ್ನು ಕಾಮರ್ಿಕ ಸಂಘದ ವಿಷಯ ಬಂದಾಗ ಅವರ ವಿರುದ್ದ ನೇರಾನೇರ ವರದಿಗಳನ್ನು ಪ್ರಜಾಸಮರ ಮಾಡಿತ್ತು. ವೈಯಕ್ತಿಕವಾಗಿ ಯಾವುದೇ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ ಕೂಡ ಸಾಮಾಜಿಕ ದೃಷ್ಟಿಕೋನದಿಂದ ಒಳ್ಳೆಯ ಹೆಸರು ಮಾಡಲು ಪ್ರಯತ್ನಿಸುತ್ತಿರುವದನ್ನು ಮೆಚ್ಚಬಹುದು. ತಮ್ಮದೇ ಅಧ್ಯಕ್ಷತೆಯಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ಆರಂಭಿಸಿ, ಸಾಕಷ್ಟು ಬಡಮಕ್ಕಳಿಗೆ ಕಡಿಮೆ ಹಣದಲ್ಲಿ ಶಿಕ್ಷಣವನ್ನು ಕೊಡುವ ಪ್ರಯತ್ನ ಮಾಡಿದ್ದಾರೆ. ಹಟ್ಟಿಯಲ್ಲಿ ಅತ್ಯಂತ ರಿಯಾಯಿತಿ ಹಣದಲ್ಲಿ ಶಿಕ್ಷಣ ಕೊಡುವುದು ನರಸಪ್ಪ ಯಾದವ ಅವರ ವಿನಾಯಕ ಸಂಸ್ಥೆ ಬಿಟ್ಟರೆ, ಎರಡನೇಯದ್ದೇ ಶಫೀಯವರ ಲಿಟಲ್ ಏಂಜೆಲ್ಸ್ ಶಾಲೆ. ಇನ್ನುಳಿದ ಕೆಲವು ಶಾಲೆಗಳಂತೂ ಪಾಲಕರನ್ನು ಕಿತ್ತುಕೊಂಡು ತಿನ್ನಲು ಜಾತಕ ಪಕ್ಷಿಯಂತೆ ಕಾದು ಕುಳಿತಿರುತ್ತವೆ. ಕಂಪೆನಿ, ಇತರೆ ಇಲಾಖೆಗಳ ಸಹಾಯವನ್ನು ಪಡೆದು ಶಾಲೆಯ ಅಭಿವೃದ್ದಿಯನ್ನು ಮಾಡಿದ್ದಾರೆ. (ಶಾಲೆಯ ಬೆಳವಣಿಗೆಗೆ ಇತರೆ ಸದಸ್ಯರು ಕಾರಣರಲ್ಲ ಎಂಬ ಭಾವನೆ ನಮ್ಮದಲ್ಲ. ಆದರೆ, ಯಾವುದೇ ಒಂದು ಬೆಳವಣಿಗೆ ಕ್ರಿಯೆ ನಡೆದಾಗ ಅದರ ಯಶಸ್ಸು ಲಭಿಸುವುದು ಅದನ್ನು ನಡೆಸುವ ಸಾರಥಿಗೆ. ಆ ಕಾರಣಕ್ಕೆ ಇದನ್ನು ಬೇರೆ ರೀತಿಯಲ್ಲಿ ಊಹಿಸುವುದು ತರವಲ್ಲ)
ಆರಂಭದಲ್ಲಿ ಸಣ್ಣದಾಗಿ ಶಫೀ ಯವರು ತೆಗೆದ ಶಾಲೆ ಇಂದು ಹಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ವರ್ಷದಿಂದ ವರ್ಷಕ್ಕೆ ಶಾಲೆಯ ಫಲಿತಾಂಶ ಗಣನೀಯವಾಗಿ ಏರುತ್ತಿದೆ. ಹಾಗೆ ವಿದ್ಯಾಥರ್ಿಗಳ ಸಂಖ್ಯೆಯೂ ಹೆಚ್ಚುತ್ತಿದೆ.
ಕಾಮರ್ಿಕ ಸಂಘದ ಅಧ್ಯಕ್ಷರಾದ ಶಫೀ ಮುಂಗೋಪಿ ಯಾದರೂ, ಕೂಡ ಪತ್ರಿಕೆ ಅವರ ವಿರುದ್ದ ಸಾಕಷ್ಟು ಸುದ್ದಿಗಳನ್ನು ಮಾಡಿದಾಗ ಅದ್ಯಾವುದನ್ನು ಮನಸ್ಸಲ್ಲಿಟ್ಟುಕೊಳ್ಳದೇ, ಪತ್ರಿಕೆಯೊಂದಿಗೆ ಕೆಲವೊಂದು ಸಂದರ್ಭದಲ್ಲಿ ಸಹಕರಿಸಿದ್ದಾರೆ.
ಲಿಂಗರಾಜು ಅವರು ತಂಗಿ ಆ ಶಾಲೆಗೆ ಪ್ರಥಮ ಸ್ಥಾನದಲ್ಲಿ ಬಂದಾಗ ಅತಿಹೆಚ್ಚು ಸಂತೋಷ ಪಟ್ಟದ್ದು ಶಾಲೆಯ ಆಡಳಿತ ಮಂಡಳಿ ಮತ್ತು ಶಫೀ ಎಂದು ಕೇಳಿದಾಗ ಅವರಲ್ಲಿ ಕೂಡ ವೈಯಕ್ತಿಕವಾಗಿ ಪ್ರಜಾಸಮರದ ಮೇಲೆ ಭಿನ್ನಾಭಿಪ್ರಾಯವಿಲ್ಲವೆಂಬುದು ಗೊತ್ತಾಯಿತು.
ವಾರದಲ್ಲಿ ನಾಲ್ಕೈದು ದಿನ ಊರಲ್ಲಿದ್ದರೂ, ತನ್ನ ನೆಟ್ವಕರ್್ನಂದ ಎಲ್ಲ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುತ್ತಿದ್ದ ಶಫೀ 30ಕ್ಕೆ ಕೆಲಸದಿಂದ ನವೃತ್ತಿ ಹೊಂದಿದರೂ, ಕಾಮರ್ಿಕ ಸಂಘದ ಅಧ್ಯಕ್ಷರಾಗಿ ಮುಂದುವರೆದಿರುತ್ತಾರೆ.
ಇನ್ನು ಮುಂದಿನ ದಿನಗಳಲ್ಲಿ ಶಫೀಯವರು ಸಾಕಷ್ಟು ಸಮಯವನ್ನು ಸಂಸ್ಥೆಗೆ ಮೀಸಲಿಟ್ಟು ಹಟ್ಟಿಯಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ನೀಡುವ ಕೇಂದ್ರವನ್ನಾಗಿ ತಮ್ಮ ಶಾಲೆಯನ್ನು ಮಾಡಲಿ.
******
ಹಟ್ಟಿ ಕಾಮರ್ಿಕರಿಗೆ ಜೂನ್ 29 ಶುಭ ಶುಕ್ರವಾರ. ಯಾಕೆಂದರೆ, ಅಂದು ಕಾಮರ್ಿಕ ಸಂಘ ಮತ್ತು ಆಡಳಿತ ಮಂಡಳಿ, ಕಾಮರ್ಿಕ ಇಲಾಖೆಯ ಪ್ರಾದೇಶಿಕ ಆಯುಕ್ತರ ಮುಂದೆ ಹೊಸ ವೇತನ ಒಪ್ಪಂದಕ್ಕೆ ಸಹಿ ಹಾಕಿದರು. ಆ ವೇತನ ಒಪ್ಪಂದವು ಎಪ್ರಿಲ್ 2011ರಿಂದ ಜಾರಿಗೆ ಬರುತ್ತದೆ. ಕಂಪೆನಿ ಹಾಗೂ ಕಾಮರ್ಿಕ ಸಂಘದ ಮಧ್ಯೆ ಏರ್ಪಟ್ಟ ಈ ಬಾರಿಯ ವೇತನ ಒಪ್ಪಂದವು ಐತಿಹಾಸಿಕ ದಾಖಲೆಯಾಗಿದೆ.
ಶೇ.10ರ ಗಟಿ ದಾಟಲಾಗದ ವೇತನ ಒಪ್ಪಂದವನ್ನು ಕಾಮ್ರೇಡ್ಸ್ ತಮ್ಮ ಶಕ್ತಿ ಸಾಮಥ್ರ್ಯದೊಂದಿಗೆ, ಸತತ 13 ತಿಂಗಳು ಹೋರಾಡಿ, ಇದೀಗ ಶೇ.23ರಷ್ಟುನ್ನು ಕಾಮರ್ಿಕರಿಗೆ ಕೊಡಿಸುವಲ್ಲಿ ಸಫಲರಾಗಿದ್ದಾರೆ. ಶೇ.10ರ ಗಡಿ ದಾಟಬೇಕಾದರೆ, ಸಕರ್ಾರದ ಅನುಮೋದನೆ ಅವಶ್ಯವೆಂದು ಗೊತ್ತಾದಾಗ ಕಂಪೆನಿಯ ವ್ಯವಸ್ಥಾಪಕ ನಿದರ್ೇಶಕರಾದ ಎ.ಕೆ ಮೊನ್ನಪ್ಪ, ಕಾಮರ್ಿಕ ಸಂಘದ ಅರವಿಂದ ಮಳೆಬೆನ್ನೂರು, ಶಫೀ ಒಗ್ಗಟ್ಟಿನಿಂದ ಪ್ರಯತ್ನ ಮಾಡಿ ಸಕರ್ಾರ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾದರು.
ಆದರೆ, ಸಕರ್ಾರ 23 ಪ್ರತಿಶತದ ಹಿಂದೆ ನಾನಾ ಷರತ್ತುಗಳನ್ನು ಹಾಕಿದೆ. ಕಾರಣ ಲಾಭದಲ್ಲಿ ಕಂಪೆನಿ ಇರುವುದರಿಂದ ನಿಮ್ಮ ಲಾಭದಲ್ಲಿ ನಷ್ಟ ಅನುಭವಿಸುತ್ತಿರುವ ಕಂಪೆನಗಳಿಗೆ ಸ್ವಲ್ಪ ಪಾಲು ಕೊಡಿ ಎಂದು ಕೇಳಲಾಗಿದೆ ಎಂದು ಗೊತ್ತಾಗಿದೆ. ಪ್ರತಿನಿತ್ಯ ಕಾಮರ್ಿಕರು ಎಲ್ಲಿ ನೋಡಿದರಲ್ಲಿ ಬರೀ ವೇತನ ಒಪ್ಪಂದದ್ದೇ ಮಾತನಾಡುತ್ತಿದ್ದರು. ಮೊನ್ನೆ ಶುಕ್ರವಾರದಂದು ವೇತನ ಒಪ್ಪಂದಕ್ಕೆ ಸಹಿ ಬೀಳುತ್ತಿದ್ದಂತೆ ಎಲ್ಲರಲ್ಲಿ ಸಂತಸ ಮನೆ ಮಾಡಿದೆ. ಶೇಕಡವಾರು ರೂ.5000ರಷ್ಟು ವೇತನ ಹೆಚ್ಚಳವಾಗುತ್ತಿದ್ದು ಕಾಮರ್ಿಕರು ಅದನ್ನು ಸರಿಯಾದ ಕಾರ್ಯಕ್ಕೆ ವಿನಯೋಗಿಸಿಕೊಂಡು ಉತ್ತಮ ಬದುಕು ಕಟ್ಟಿಕೊಂಡರೆ ಒಳ್ಳೆಯದು ಎಂದು ಅಭಿಪ್ರಾಯ ಪಡುತ್ತಾರೆ ಕಂಪೆನಿಯ ವ್ಯವಸ್ಥಾಪಕ ನಿದರ್ೇಶಕರಾದ ಎ.ಕೆ ಮೊನ್ನಪ್ಪನವರು. ಜೊತೆಯಲ್ಲಿ ವೇತನ ಒಪ್ಪಂದದ ಬಾಕಿ ಹಣವಾಗಿ ಕಾಮರ್ಿಕರಿಗೆ ಏನಿಲ್ಲವೆಂದರೂ, ಸರಿಯಾಗಿ ಕೆಲಸ ಮಾಡಿದವರಿಗೆ ರೂ.30000ರಷ್ಟು ಬರುತ್ತದೆ ಎಂಬ ಲೆಕ್ಕಾಚಾರ ಈಗಾಗಲೇ ನಡೆದಿದೆ.
ಕಳೆದ ವೇತನ ಒಪ್ಪಂದದಲ್ಲಿ ಕಾಮರ್ಿಕರಿಗೆ ಅನ್ಯಾಯವಾಗಿತ್ತು ಎಂದು ಪ್ರತಿಭಟಿಸಿದ್ದ ಕಾಮ್ರೇಡ್ಸ್ಗಳನ್ನೆಲ್ಲ ಅಂದಿನ ಆಡಳಿತ ಮಂಡಳಿ ಜೈಲಿಗೆ ತಳ್ಳಿತ್ತು. ಲಿಂಗರಾಜು, ಮುನ್ನಭಾಯ್ ಅವರು ಕಳೆದ ವೇತನ ಒಪ್ಪಂದವನ್ನು ವಿರೋಧಿಸಿ ಸಹಿ ಸಂಗ್ರಹ ಚಳವಳಿ ಮಾಡಿದ್ದರು. ಅದಕ್ಕೆ ಎ.ಐ.ಟಿ.ಯು.ಸಿ ಮತ್ತು ದಲಿತ ಸಂಘಟನೆ ಬೆಂಬಲಿಸಿತ್ತು.
ಪ್ರತಿ ಸಾರಿ ವೇತನ ಒಪ್ಪಂದಗಳು ನಡೆದಾಗ ಪರ-ವಿರೋಧಗಳು ನಡೆಯುತ್ತಿದ್ದವು. ಈ ಬಾರಿಯ ವೇತನ ಒಪ್ಪಂದದ ಪ್ರತಿ ಇನ್ನೂ ಕೆಲವು ಕಾಮರ್ಿಕ ಮುಖಂಡರ ಕೈಗೆ ಸಿಗದಿದ್ದರಿಂದ, ಯಾರು ಪ್ರತಿಕ್ರಿಯೆ ನೀಡಲು ಮುಂದೆ ಬರುತ್ತಿಲ್ಲ.
ಇನ್ನುಳಿದ ಅವಧಿಯಲ್ಲಿ ಕಾಮರ್ಿಕ ಸಂಘ ಕಾಮರ್ಿಕರಿಗೆ ವಿಆರ್ಎಸ್, ಮರಣ ಹೊಂದಿದ ಕಾಮರ್ಿಕರ ಮಕ್ಕಳು, ಸಂಬಂಧಿಗಳಿಗೆ ನೌಕರಿ, ಸುಮಾರು ವರ್ಷಗಳಿಂದ ದಿನಗೂಲಿಗಳಾಗಿ ದುಡಿಯುತ್ತಿರುವ ಕಾಮರ್ಿಕರ ಖಾಯಂಮಾತಿ ಹಾಗೂ ಕಾಮರ್ಿಕರಿಗೆ ಸಿಗಬಹುದಾದ ಅನೇಕ ಸವಲತ್ತುಗಳನ್ನು ಕೊಡಿಸಿ, ಕಾಮರ್ಿಕರ ಏಳಿಗೆಗಾಗಿ ಶ್ರಮಿಸಲಿ ಎಂದು ಪತ್ರಿಕೆ ಹಾರೈಸುತ್ತದೆ.

ಬದಲಾಗುತ್ತಿರುವ ವೃತ್ತಿಯ ಚಕ್ರವ್ಯೂಹದಲ್ಲಿ ಪತ್ರಕರ್ತ


ನಾಲ್ಕು ದಿಕ್ಕುಗಳಿಂದಲೂ ದಾಳಿ ನಡೆಯುತ್ತಿದೆ, ಪತ್ರಕರ್ತ ಯುದ್ಧಭೂಮಿಯ ಚಕ್ರವ್ಯೂಹ ದಲ್ಲಿದ್ದಾನೆ. ಭ್ರಷ್ಟ, ಅಪ್ರಾಮಾಣಿಕ,  ಸ್ವಾಥರ್ಿ, ...ಇತ್ಯಾದಿ ಟೀಕಾಸ್ತ್ರಗಳು ಆತನನ್ನು ಒಂದೇ ಸಮನೆ ಇರಿಯುತ್ತಿವೆ.
ವೈಯಕ್ತಿಕ ನೆಲೆಯಲ್ಲಿ ಈ ಆರೋಪಗಳನ್ನು ನಿರಾಕರಿಸಬಹುದಾದರೂ ತಾವು ಭಾಗವಾಗಿರುವ ಇಡೀ ಸಮುದಾಯವನ್ನು ಸಮಥರ್ಿಸಿಕೊಳ್ಳುವ ಸ್ಥಿತಿಯಲ್ಲಿ ಆತನೂ ಇಲ್ಲ.
ಹೆಚ್ಚೆಂದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವಿರೋಧಪಕ್ಷದ ನಾಯಕರನ್ನು ಉಡಾಫೆಯಿಂದ ಕೇಳಿದಂತೆ ನವೇನು ಸಾಚಾನಾ? ಎಂದು ಪ್ರಶ್ನಿಸಿ ಬಾಯಿಮುಚ್ಚಿಸಬಹುದು.
ಎಲ್ಲ ವೃತ್ತಿಗಳಂತೆ ಪತ್ರಿಕೆಗಳಲ್ಲಿಯೂ ಒಂದಷ್ಟು ಕಪ್ಪುಕುರಿಗಳು ಹಿಂದೆಯೂ ಇದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಉಳಿದವರನ್ನು ಅಲ್ಪಸಂಖ್ಯಾತರನ್ನಾಗಿ ಮಾಡುವಷ್ಟರ ಮಟ್ಟಿಗೆ ಈ ಕಪ್ಪುಕುರಿಗಳ ಸಂಖ್ಯೆ ಬೆಳೆಯುತ್ತಿದೆ. ಪತ್ರಕರ್ತನ ಆದರ್ಶದ ಹಾದಿ ತಪ್ಪಿದ್ದೆಲ್ಲಿ?
ಪತ್ರಕರ್ತನದ್ದು ಏಕವ್ಯಕ್ತಿ ಪ್ರದರ್ಶನ ಅಲ್ಲ, ಸಾಮೂಹಿಕ ಪ್ರಯತ್ನದ ಮೂಲಕವೇ ಪತ್ರಿಕೆ ರೂಪುಗೊಳ್ಳುವುದು. ಬದಲಾಗುತ್ತಿರುವ ಈ ಸಮೂಹವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದರೆ ಮಾತ್ರ ಪತ್ರಕರ್ತರಲ್ಲಿನ ಬದಲಾವಣೆಯನ್ನೂ ಅರ್ಥಮಾಡಿಕೊಳ್ಳಲು ಸಾಧ್ಯ. ಪತ್ರಕರ್ತರ ತಲೆಮೇಲೆ ಆತನ ಮಾಲೀಕರಿರುತ್ತಾರೆ, ಕಣ್ಣೆದುರಿನಲ್ಲಿ ಪತ್ರಿಕೆಯ ಓದುಗರಿರುತ್ತಾರೆ, ಅಕ್ಕಪಕ್ಕದಲ್ಲಿ ಸಹೋದ್ಯೋಗಿಗಳಿರುತ್ತಾರೆ, ಬೆನ್ನಹಿಂದೆ ಕಟ್ಟಿಕೊಂಡ ಸಂಸಾರ ಇರುತ್ತದೆ, ಇವುಗಳ ಮಧ್ಯೆ ಆತ ಇರುತ್ತಾನೆ, ಆತನೊಳಗೆ ಸದಾ ಪ್ರಶ್ನಿಸುವ, ಎಚ್ಚರಿಸುವ, ಕುಟುಕುವ, ಬುದ್ಧಿಹೇಳುವ ಆತ್ಮಸಾಕ್ಷಿ ಇರುತ್ತದೆ.
ಮುಖ್ಯವಾಗಿ ಆಥರ್ಿಕ ಉದಾರೀಕರಣ ಮತ್ತು ಜಾಗತೀಕರಣ ಯುಗ ಪ್ರಾರಂಭವಾದ ನಂತರದ ಎರಡು ದಶಕಗಳಲ್ಲಿ ಪತ್ರಕರ್ತನ ಸುತ್ತಮುತ್ತ ಇರುವ ಈ ಎಲ್ಲ ಪಾತ್ರಧಾರಿಗಳು ಗುರುತಿಸಲಾಗದಷ್ಟು ಬದಲಾಗಿ ಹೋಗಿದ್ದಾರೆ. ಬದಲಾಗುತ್ತಲೇ ಇರುವ ಈ ಪಾತ್ರಧಾರಿಗಳ ಒತ್ತಡಗಳ ನಡುವೆ ಪತ್ರಕರ್ತ ತನ್ನ ಆತ್ಮಸಾಕ್ಷಿಯ ಕರೆಗೆ ಓಗೊಡುತ್ತಾ ಕೆಲಸಮಾಡಬೇಕಾಗಿದೆ.
ಮೊದಲನೆಯದಾಗಿ  ಮಾಲೀಕ ವರ್ಗ.  169 ವರ್ಷಗಳ ಹಿಂದೆ ಕಲ್ಲಚ್ಚನ್ನು ಕೊರೆದು ಅಚ್ಚುಮೊಳೆ ಮಾಡಿ ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಪ್ರಕಟಿಸಿದ ಹೆರ್ಮನ್ ಫ್ರೆಡ್ರಿಕ್ ಮೊಗ್ಲಿಂಗ್ನ ಕಾಲದಿಂದ ಪತ್ರಿಕಾವೃತ್ತಿ ಬಹುದೂರ ಸಾಗಿ ಬಂದಿದೆ. ನಿಧಾನವಾಗಿ ವಾಣಿಜ್ಯೀಕರಣಗೊಳ್ಳುತ್ತಾ ಬಂದ ಈ ವೃತ್ತಿ ಈಗ ಪೂರ್ಣಪ್ರಮಾಣದ ಉದ್ಯಮವಾಗಿ ಪರಿವರ್ತನೆಗೊಂಡಿದೆ.
ಬದಲಾದ ಪರಿಸ್ಥಿತಿಯಲ್ಲಿ ಹೊಸ ಆಟಗಾರರು ಮೈದಾನ ಪ್ರವೇಶ ಮಾಡಿದ್ದಾರೆ, ಆಟ ಬದಲಾದಾಗ ಅದರ ನಿಯಮಾವಳಿಗಳೂ ಬದಲಾಗುತ್ತವೆ. ಹಳೆಯ ಆಟಗಾರರು ಹಳೆಯ ನಯಮಗಳ ಪ್ರಕಾರವೇ ಆಡುತ್ತೇನೆಂದು ಹೊರಟರೆ ಮೈದಾನದಿಂದ ಹೊರಬೀಳಬೇಕಾಗುತ್ತದೆ. ಉದ್ಯಮವನ್ನು ಸಮಾಜ ಸೇವಾ ಸಂಸ್ಥೆಯ ರೀತಿಯಲ್ಲಿ ನಡೆಸಿಕೊಂಡು ಹೋಗಲಾಗುವುದಿಲ್ಲ, ಅಂತಹ ದುಸ್ಸಾಹಸ ಮಾಡಿದವರು  ದಿವಾಳಿಯಾಗಬೇಕಾಗುತ್ತದೆ.
ಉದ್ಯಮದ ರೂಪ ಪಡೆದ ನಂತರ ಮಾಧ್ಯಮದ ಕಚೇರಿಯೊಳಗಿನ ಸಂಪಾದಕೀಯ ಮತ್ತು ಜಾಹೀರಾತು ವಿಭಾಗಗಳ ನಡುವಿನ ಗೆರೆ  ತೆಳ್ಳಗಾಗುತ್ತಿದೆ.  ಮುದ್ರಣ ವೆಚ್ಚಕ್ಕೆ ಅನುಗುಣವಾಗಿ ಪತ್ರಿಕೆಯ ಮುಖಬೆಲೆಯನ್ನು, ಮಾರುಕಟ್ಟೆಯಲ್ಲಿನ ಪೈಪೋಟಿಯಿಂದಾಗಿ ಹೆಚ್ಚಿಸಲಾರದ ಮಾಲೀಕರು  ಜಾಹೀರಾತುದಾರರನ್ನು ಹೆಚ್ಚುಹೆಚ್ಚು ಅವಲಂಬಿಸಬೇಕಾಗಿದೆ.
ಈ ಅಸಹಾಯಕತೆಯನ್ನು ಬಳಸಿಕೊಂಡು ಜಾಹೀರಾತು ನೀಡುವ ಉದ್ಯಮಗಳು ಮಾಧ್ಯಮಗಳ ಮೇಲಿನ ಹಿಡಿತವನ್ನು ಬಿಗಿಗೊಳಿಸುತ್ತಿವೆ. ಈ ವ್ಯವಸ್ಥೆ ಮಾಧ್ಯಮರಂಗವನ್ನು ಸದಾ ಉದ್ಯಮಿಗಳು ಮತ್ತು ಸಕರ್ಾರದ ಋಣಭಾರದಲ್ಲಿರುವಂತೆ ಮಾಡಿದೆ.
ಈ ಅನಾರೋಗ್ಯಕಾರಿ ವಾತಾವರಣದಲ್ಲಿಯೇ ಕಾಸಿಗಾಗಿ ಸುದ್ದಿಯಂತಹ ಲಾಲಸೆ, ರಾಡಿಯಾ ಟೇಪ್ನಂತಹ ವೃತ್ತಿದ್ರೋಹಗಳು ಹುಟ್ಟಿಕೊಂಡಿರುವುದು.  ಪತ್ರಿಕೋದ್ಯಮ  ಅತ್ತ ಪೂರ್ಣಪ್ರಮಾಣದಲ್ಲಿ ಉದ್ಯಮವಾಗಿಯೂ ಬೆಳೆಯದೆ, ಇತ್ತ ಆದರ್ಶ ವೃತ್ತಿಯಾಗಿಯೂ ಉಳಿಯದೆ ತ್ರಿಶಂಕು ಸ್ಥಿತಿಯಲ್ಲಿದೆ. ಇದನ್ನು ಓದುಗರಿಗೆ ಅರ್ಥಮಾಡಿಕೊಡಲು ಪತ್ರಿಕೆಯ ಮಾಲೀಕರಿಗೂ ಸಾಧ್ಯವಾಗಿಲ್ಲ.
ವೃತ್ತಿಯಿಂದ ಉದ್ಯಮವಾಗಿ ಬದಲಾವಣೆಗೊಂಡ ಈ ಕ್ಷೇತ್ರಕ್ಕೆ ಈಗ ರಾಜಕಾರಣಿಗಳು ಪ್ರವೇಶಿಸುತ್ತಿದ್ದಾರೆ. ಕನರ್ಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರಗಳ ಬಹುತೇಕ ಟಿವಿ ಚಾನೆಲ್ಗಳು ರಾಜಕಾರಣಿಗಳ ಒಡೆತನದಲ್ಲಿವೆ, ಪತ್ರಿಕೆಗಳು ಕೂಡಾ ಇದಕ್ಕೆ ಹೊರತಲ್ಲ.
ಇದು ಉದ್ಯಮಿಗಳ ಪ್ರವೇಶಕ್ಕಿಂತಲೂ ಅಪಾಯಕಾರಿ ಬೆಳವಣಿಗೆ. ಜನಾಭಿಪ್ರಾಯವೇ ಪ್ರಜಾಪ್ರಭುತ್ವದ ಬುನಾದಿ. ರಾಜಕಾರಣಿಗಳ ಒಡೆತನದಲ್ಲಿರುವ ಮಾಧ್ಯಮಗಳು ತಮಗೆ ಅನುಕೂಲವಾಗುವ ರೀತಿಯಲ್ಲಿ ಜನಾಭಿಪ್ರಾಯವನ್ನೇ ಉತ್ಪಾದಿಸುವ ಪ್ರಯತ್ನ ನಡೆಸಿವೆ. ಆಂಧ್ರಪ್ರದೇಶದಲ್ಲಿ ವೈಎಸ್ಆರ್ ಸಾವಿನ ನಂತರ ಅವರ ಒಡೆತನದ ಟಿವಿಚಾನೆಲ್ ಸೃಷ್ಟಿಸಿದ್ದ ಸಮೂಹ ಸನ್ನಿ ಇದಕ್ಕೆ ಉತ್ತಮ ಉದಾಹರಣೆ. ತಮಿಳುನಾಡು, ಕನರ್ಾಟಕಗಳು ಇದರಲ್ಲಿ ಹಿಂದೆ ಬಿದ್ದಿಲ್ಲ.
ಪತ್ರಿಕಾಮಂಡಳಿಯ ಏರ್ಕಂಡೀಷನ್ ಕಚೇರಿಯೊಳಗೆ ಕೂತಿರುವ ಅದರ ಅಧ್ಯಕ್ಷ ನ್ಯಾಯಮೂತರ್ಿ ಮಾರ್ಕಂಡೇಯ ಖಟ್ಜು ಅವರಂತೆ ಐಶ್ಚರ್ಯ ರೈ ಅವರಿಗೆ ಮಗು ಹುಟ್ಟಿದ್ದನ್ನು ದೊಡ್ಡ ಸುದ್ದಿ ಮಾಡುವ ಮಾಧ್ಯಮಗಳಿಗೆ, ಪೋಷಕಾಂಶಗಳ ಕೊರತೆಯಿಂದ ಸಾಯುತ್ತಿರುವ ಮಕ್ಕಳು ಸುದ್ದಿಯೇ ಅಲ್ಲ ಎಂದು ಚುಚ್ಚುವುದು ಸುಲಭ. ಆದರೆ ವಾಸ್ತವ ಬೇರೆಯಾಗಿದೆ.
ಐಶ್ಚರ್ಯರೈ ಕನಿಷ್ಠ ಒಂದು ಡಜನ್ ಉತ್ಪನ್ನಗಳಿಗೆ ಮಾಡೆಲ್, ಆಕೆಯ ಸುದ್ದಿ ಪ್ರಕಟಿಸಿದರೆ ಜಾಹೀರಾತು ಬರುತ್ತದೆ, ಬಡ ಮಕ್ಕಳ ಬಗ್ಗೆ ಬರೆದರೆ ಏನು ಸಿಗುತ್ತದೆ? ಇನ್ನೂ ಉಳಿದುಕೊಂಡಿರುವ ಒಂದಷ್ಟು ಸಹೃದಯಿಗಳು ಅಯ್ಯ ಪಾಪ  ಎಂದು ಉದ್ಗರಿಸಬಹುದು ಅಷ್ಟೆ.
ಇಂತಹ ಸ್ಥಿತಿಗೆ ಮಾಧ್ಯಮಕ್ಷೇತ್ರವನ್ನು ತಳ್ಳಿದ ವ್ಯವಸ್ಥೆಯನ್ನು ಬದಲಾವಣೆ ಮಾಡುವ ಬಗೆಯ ಬಗ್ಗೆ ನ್ಯಾ.ಖಟ್ಜು ಯೋಚನೆ ಮಾಡಿದರೆ ಅವರು ಬಯಸುವಂತೆ ಪತ್ರಿಕೆಗಳು,ಟಿವಿಚಾನೆಲ್ಗಳು ವರದಿ ಮಾಡಲು ಸಾಧ್ಯವಾಗಬಹುದು.
ಎರಡನೆಯದಾಗಿ ಪತ್ರಕರ್ತನ ಮುಂದಿರುವ ಓದುಗರು ಮತ್ತು ಟಿವಿ ವೀಕ್ಷಕರು. ಪ್ರಜ್ಞಾವಂತ ಓದುಗರೇ ಪತ್ರಿಕೆಯ ಶಕ್ತಿ, ಅಂತಹವರನ್ನೊಳಗೊಂಡ ಜಾಗೃತ ಸಮಾಜದಲ್ಲಿ ಮಾತ್ರ ಪತ್ರಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ.
ಶಿಕ್ಷಣ, ಸಂಪರ್ಕ ಮತ್ತು ಆಥರ್ಿಕ ಅಭಿವೃದ್ಧಿಯಿಂದಾಗಿ 2-3ದಶಕಗಳ ಹಿಂದಿನ ಓದುಗರಿಗಿಂತ ಈಗಿನವರು ಹೆಚ್ಚು ಪ್ರಜ್ಞಾವಂತರು. ಟಿವಿಚಾನೆಲ್ಗಳು ಹಳ್ಳಿಮನೆಗಳನ್ನೂ ಪ್ರವೇಶಿಸಿದ ನಂತರ ಅನಕ್ಷರಸ್ಥರು ಕೂಡಾ  ಸಮಕಾಲೀನ ವಿದ್ಯಮಾನಗಳನ್ನು ನೋಡಿ, ಕೇಳಿ ತಿಳಿದುಕೊಳ್ಳಬಲ್ಲರು.
ಮಾಧ್ಯಮಗಳ ನಡುವಿನ ಪೈಪೋಟಿಯಿಂದಾಗಿ ಯಾವುದೇ ಪತ್ರಿಕೆ ಇಲ್ಲವೇ ಟಿವಿಚಾನೆಲ್ ಯಾವ ಸುದ್ದಿಯನ್ನೂ ಬಚ್ಚಿಡುವ ಸ್ಥಿತಿಯಲ್ಲಿ ಇಲ್ಲ. ಒಬ್ಬರು ಬಚ್ಚಿಟ್ಟರೆ ಇನ್ನೊಬ್ಬರು ಬಿಚ್ಚಿಡುತ್ತಾರೆ, ಒಟ್ಟಿನಲ್ಲಿ ಎಲ್ಲವೂ ಬಟಾಬಯಲು. ಆದರೆ ಈ ಜನಜಾಗೃತಿಯ ಪ್ರತಿಬಿಂಬ ಓದುಗ ಸಮುದಾಯದ ನೀತಿ-ನಿಧರ್ಾರಗಳಲ್ಲಿ ಹುಡುಕಲು ಹೊರಟರೆ ನಿರಾಶೆಯಾಗುತ್ತದೆ.
ಇದಕ್ಕೆ ಉತ್ತಮ ಉದಾಹರಣೆ ರಾಜ್ಯದ ಬಿಜೆಪಿ ನಡೆಸಿದ ಆಪರೇಷನ್ ಕಮಲದ ನಂತರದ ಬೆಳವಣಿಗೆಗಳು. ಪಕ್ಷಾಂತರ ಮಾಡಿದ ಶಾಸಕರು ಯಾವ ಆಮಿಷಕ್ಕೆ ಬಲಿಯಾಗಿದ್ದರು ಎನ್ನುವುದನ್ನು ಎಲ್ಲ ಮಾಧ್ಯಮಗಳು ಕೂಗಿಕೂಗಿ ಹೇಳಿದ್ದವು. ಆ ಶಾಸಕರ ಬಗ್ಗೆ ಮತದಾರರಿಗೆ ಸಂಪೂರ್ಣ ಮಾಹಿತಿ ಇತ್ತು.
ಹೀಗಿದ್ದರೂ ಪ್ರಜಾಪ್ರಭುತ್ವವನ್ನೇ ಅಣಕಿಸುವಂತೆ ಅವರು ಮತ್ತೆ ಅದೇ ಪಕ್ಷಾಂತರಿ ಶಾಸಕರನ್ನು ಉಪಚುನಾವಣೆಯಲ್ಲಿ ಆರಿಸಿಕಳುಹಿಸುತ್ತಾರೆ. ವಿಜ್ಞಾನದ ಪದವೀಧರರೇ ಟಿವಿ ಚಾನೆಲ್ಗಳಲ್ಲಿ ಕಾಣಿಸಿಕೊಳ್ಳುವ ಜ್ಯೋತಿಷಿ-ಬಾಬಾಗಳ ಮುಂದೆ ಬಾಯಿಬಿಟ್ಟು ಕೂತಿರುತ್ತಾರೆ, ಎಂಜಲೆಲೆಯ ಮೇಲೆ ಉರುಳಾಡುತ್ತಿರುತ್ತಾರೆ.
ಸ್ವಜಾತಿ ರಾಜಕಾರಣಿಯ ಪರ ವಾದಕ್ಕೆ ನಲ್ಲುತ್ತಾರೆ. ಪತ್ರಿಕೆ ಜನಪರವಾಗಿರಬೇಕೆಂದು ಬೋಧನೆ ಮಾಡುವ ಈ ಓದುಗರು ಮಾರುಕಟ್ಟೆಯಲ್ಲಿ ಇನ್ನೊಂದು ಪತ್ರಿಕೆ ಎಂಟಾಣೆ ಕಡಿಮೆಮಾಡಿದರೆ ಆ ಕಡೆ ಓಡುತ್ತಾರೆ.
ಅನೈತಿಕ ಪೈಪೋಟಿಯ ದರ ಸಮರ ಅಂತಿಮವಾಗಿ ಜನರ ಜತೆಯಲ್ಲಿರಬೇಕಾದ ಪತ್ರಿಕೆಯನ್ನು ಜಾಹೀರಾತುದಾರರ ಕಾಲಬುಡಕ್ಕೆ ಕೊಂಡೊಯ್ದು ಅಡ್ಡಬೀಳಿಸುತ್ತದೆ ಎನ್ನುವುದು ಅವರಿಗೆ ಅರ್ಥವಾಗುವುದಿಲ್ಲ. ಹತ್ತು ರೂಪಾಯಿ ಉತ್ಪಾದನಾವೆಚ್ಚದ ಪತ್ರಿಕೆ ಏಳು ರೂಪಾಯಿ ಕೊಡುವ ಜಾಹಿರಾತುದಾರರ ಬದಲಿಗೆ ಮೂರು ರೂಪಾಯಿಯನ್ನಷ್ಟೇ ಕೊಡುವ ಓದುಗನಗೆ ಹೇಗೆ ನಿಷ್ಠೆಯಿಂದಿರಲು ಸಾಧ್ಯ?
ಮೂರನೆಯದಾಗಿ ಅಕ್ಕಪಕ್ಕದಲ್ಲಿರುವ ಸಹೋದ್ಯೋಗಿಗಳು.
25 ವರ್ಷಗಳ ಹಿಂದೆ ನನ್ನಂತಹವರು ಈ ವೃತ್ತಿ ಪ್ರವೇಶಿಸಿದಾಗ ಪ್ರಾಮಾಣಿಕತೆ ಮತ್ತು ವೃತ್ತಿನಷ್ಠೆಯನ್ನು ಪಾಲಿಸುವುದು ದೊಡ್ಡ ಸವಾಲು ಆಗಿರಲೇ ಇಲ್ಲ. ರಾತ್ರಿಪಾಳಿ ಮುಗಿಸಿ ಪ್ರೆಸ್ನಲ್ಲಿಯೇ ನ್ಯೂಸ್ಪ್ರಿಂಟ್ ಎಳೆದುಕೊಂಡು ಮಲಗಿದಾಗ, ಪಕ್ಕದಲ್ಲಿ ಹಾಗೆಯೇ ಮಲಗಿದ್ದ ಹತ್ತು ಮಂದಿ ಸಹೋದ್ಯೋಗಿಗಳಿರುತ್ತಿದ್ದರು.
ಕ್ಯಾಂಟೀನ್ನಲ್ಲಿ ಸಾಲ ಕೇಳಲು ಮುಜುಗರ ಆಗುತ್ತಿರಲಿಲ್ಲ, ಯಾಕೆಂದರೆ ಸಾಲದ ಪಟ್ಟಿಯಲ್ಲಿ ಆಗಲೇ ಸಹೋದ್ಯೋಗಿಗಳ ಹೆಸರುಗಳು ರಾರಾಜಿಸುತ್ತಿರುತ್ತಿತ್ತು. ಆದರೆ ಕಾಲ ತ್ವರಿತ ಗತಿಯಲ್ಲಿ ಬದಲಾಗಿ ಹೋಗಿದೆ.
ಕಳೆದ ಹತ್ತು ವರ್ಷಗಳಲ್ಲಿ ಕಡಿಮೆಯಾಗುತ್ತಿರುವ ಜಾಹೀರಾತು ಮತ್ತು ಏರುತ್ತಿರುವ ಉತ್ಪಾದನಾ ವೆಚ್ಚದಿಂದಾಗಿ ಪತ್ರಿಕಾ ಸಂಸ್ಥೆಗಳು, ಟಿವಿ ಚಾನೆಲ್ಗಳು ನರೀಕ್ಷಿತ ರೀತಿಯಲ್ಲಿ ಲಾಭ ಗಳಿಸಲಾಗುತ್ತಿಲ್ಲ. ಆದರೆ ಅವುಗಳಲ್ಲಿ ಕೆಲಸ ಮಾಡುವ ಕೆಲವು ಉದ್ಯೋಗಿಗಳ ಶ್ರಿಮಂತಿಕೆ ಏರುತ್ತಲೇ ಇದೆ.
ಆದಾಯ ಮೀರಿದ ಆಸ್ತಿಗಳಿಸಿದ ಆರೋಪ ಸಕರ್ಾರಿ ನೌಕರರ ಮೇಲೆ ಮಾತ್ರವಲ್ಲ ಕೆಲವು ಪತ್ರಕರ್ತರ ಮೇಲೂ ಇದೆ. ನೌಕರರ ಮನೆ ಮೇಲೆ ದಾಳಿ ನಡೆಸುವ ಲೋಕಾಯುಕ್ತರು ಪತ್ರಕರ್ತರ ಮೇಲೂ ನಡೆಸಬಹುದಲ್ಲವೇ ಎಂದು ಜನ ಕೇಳುತ್ತಿರುವುದು ಇದೇ ಕಾರಣಕ್ಕೆ.
ಇಂತಹ ವ್ಯವಸ್ಥೆಯಲ್ಲಿ ಪ್ರಾಮಾಣಿಕವಾಗಿ ಬದುಕಬೇಕೆನ್ನುವವರು ಬದುಕುವ ಕಲೆ ಗೊತ್ತಿಲ್ಲದ ಹುಚ್ಚರು ಎಂದು ಅನಸಿಕೊಳ್ಳುತ್ತಾರೆ ಅಷ್ಟೆ. ಭ್ರಷ್ಟರಾಗುವುದಕ್ಕೆ ಸಮರ್ಥನೆಗಳನ್ನು ಹುಡುಕಿಕೊಂಡು ಹೊರಟರೆ ಊರೆಲ್ಲ ಉದಾಹರಣೆಗಳು ಸಿಗುತ್ತವೆ. ಪ್ರಾಮಾಣಿಕವಾಗಿ ಉಳಿಯಬಯಸುವ ಪತ್ರಕರ್ತ ಸಮರ್ಥನೆಗಳನ್ನು ತನ್ನೊಳಗೆ ಹುಡುಕಬೇಕು. ಇಡೀ ಜಗತ್ತು ಭ್ರಷ್ಟಗೊಂಡರೂ ನಾನು ಭ್ರಷ್ಟನಾಗಲಾರೆ ಎಂಬ ತೀಮರ್ಾನಕ್ಕೆ ಬರಲು ಆತನಗೆ ಸಾಧ್ಯವಾಗಬೇಕು.
ಕೊನೆಯದಾಗಿ ಪತ್ರಕರ್ತ ಬೆನ್ನಗೆ ಕಟ್ಟಿಕೊಂಡ ಸಂಸಾರ.  ಈತ ಒಂದು ಆದರ್ಶ ವೃತ್ತಿಯಲ್ಲಿದ್ದಾನೆ ಎನ್ನುವ ಕಾರಣಕ್ಕೆ ಯಾರೂ ಮನೆಬಾಡಿಗೆ ಕಡಿಮೆ ಮಾಡುವುದಿಲ್ಲ, ಕಿರಾಣಿ ಅಂಗಡಿಯವ ಪುಕ್ಕಟೆಯಾಗಿ ಅಕ್ಕಿ-ಬೇಳೆ ತಂದುಹಾಕುವುದಿಲ್ಲ. ಈತನ ಮನೆಯ ಒಂದು ಪಕ್ಕದಲ್ಲಿ ಇನ್ಫೋಸಿಸ್ನ ಉದ್ಯೋಗಿ ಇರುತ್ತಾನೆ, ಇನ್ನೊಂದು ಪಕ್ಕದಲ್ಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಇರುತ್ತಾನೆ.
ಪ್ರತಿಯೊಬ್ಬನ ಸಂಸಾರದ ಬಹುಪಾಲು ಬೇಕುಬೇಡಗಳು ನೆರೆಹೊರೆಯವರನ್ನು ನೋಡಿಯೇ ನಧರ್ಾರವಾಗುವುದು. ಆಧುನಕ ಬದುಕಿನಲ್ಲಿ ಬಹುಪಾಲು ಗಳಿಕೆ ವ್ಯಯವಾಗುತ್ತಿರುವುದು ಸಾಮಾಜಿಕವಾದ ಹುಸಿ ಸ್ಥಾನಮಾನವನ್ನು ಕಾಯ್ದುಕೊಂಡು ಹೋಗುವ ವ್ಯಸನಕ್ಕಾಗಿ. ಇದನ್ನು ಮೀರಿಹೋಗುವ ಇಲ್ಲವೇ ಬದಲಾಯಿಸುವ ಶಕ್ತಿ ಪತ್ರಕರ್ತರಲ್ಲಿಯೂ ಇಲ್ಲ.
ಇವೆಲ್ಲವನ್ನೂ ಯೋಚನೆ ಮಾಡುತ್ತಾ ಹೋದರೆ ಈ ವೃತ್ತಿ ಸಾಕಪ್ಪ ಸಾಕು ಎಂಬ ತೀಮರ್ಾನಕ್ಕೆ ಬರಲು ಹತ್ತು ಕಾರಣಗಳು ಸುಲಭದಲ್ಲಿ ಸಿಗುತ್ತವೆ, ಆದರೆ ಪತ್ರಿಕೆಯನ್ನು ಬಿಡಿಸಿಕೊಂಡು ಕೂತರೆ ಇದೇ ವೃತ್ತಿಯಲ್ಲಿ ಮುಂದುವರಿಯಲು ನೂರು ಕಾರಣಗಳು ಪುಟಪುಟಗಳಲ್ಲಿ ಸಿಗುತ್ತವೆ.
ಸಮಾಜ ಎಷ್ಟೇ ಕೆಟ್ಟುಹೋದರೂ ಪ್ರಾಮಾಣಿಕರಿಗೆ, ಮಾನವಂತರಿಗೆ ಬದುಕಲು ಜಾಗ ಇದ್ದೇ ಇರುತ್ತದೆ.  ಅದೇ ರೀತಿ ಮಾಧ್ಯಮ ಕ್ಷೇತ್ರ ಎಷ್ಟೇ ಕೆಟ್ಟುಹೋದರೂ ಜನಪರ ಪತ್ರಿಕೋದ್ಯಮಕ್ಕೆ ಜಾಗ ಇದ್ದೇ ಇರುತ್ತದೆ. ಅದು ಸ್ವಲ್ಪ ಕಡಿಮೆಯಾಗಿರಬಹುದು ಅಷ್ಟೆ.
ಉದ್ಯಮವಾದ ವೃತ್ತಿ, ಬದಲಾಗಿ ಹೋಗಿರುವ ಓದುಗರು, ಸಹೋದ್ಯೋಗಿಗಳು, ಸಂಸಾರದ ಒತ್ತಡದ ನಡುವೆಯೂ ವೃತ್ತಿನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕೆನ್ನುವವರಿಗೆ  ಅವಕಾಶ ಇದೆ.
ಸಮಸ್ಯೆ ಅವಕಾಶದ್ದು ಅಲ್ಲವೇ ಅಲ್ಲ, ಅದನ್ನು ಬಳಸಿಕೊಳ್ಳುವ ಪತ್ರಕರ್ತರದ್ದು. ಹಳ್ಳಿಗಳಿಗೆ ಹೋಗಿ ಬರಪರಿಸ್ಥಿತಿಯ ವರದಿ ಮಾಡಿಕೊಂಡು ಬರುತ್ತೇನೆ ಎಂದೋ, ಮಲದ ಗುಂಡಿಗೆ ಬಿದ್ದು ಸಾಯುತ್ತಿರುವ ಪೌರಕಾಮರ್ಿಕರ ಬಗ್ಗೆ ಬರೆಯುತ್ತೇನೋ ಎಂದೋ ಒಬ್ಬ ವರದಿಗಾರ ಆಸಕ್ತಿ ತೋರಿದರೆ ಸಾಮಾನ್ಯವಾಗಿ ಯಾವ ಸಂಪಾದಕರೂ ಬೇಡ ಎಂದು ಹೇಳಲಾರರು.
ಆ ರೀತಿಯ ಆಸಕ್ತಿಯನ್ನು ತೋರಿಸುವ ಪತ್ರಕರ್ತರ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕದ ಬೆಳವಣಿಗೆ.

ಪತ್ರಿಕೆ ಎಂದರೆ, ಸಂಬಂಧವೇ ಇಲ್ಲದವರ ಸಾಮ್ರಾಜ್ಯ


ಪತ್ರಕರ್ತರು ಅಂದರೆ ಎಲ್ಲವನ್ನೂ ತಿಳಿದುಕೊಂಡವರು, ಪ್ರಾಮಾಣಿಕತೆಗೆ ಹೆಸರಾದವರು, ಜನರ ಬಗ್ಗೆ ವಿವೇಚಿಸುವವರು, ವ್ಯವಸ್ಥೆ ದೋಷ ನಿವಾರಿಸುವ ಪ್ರಯತ್ನದಲ್ಲಿ ತೊಡಗುವವರು, ಭಷ್ಟ ರಾಜಕಾರಣಿ, ಅಧಿಕಾರಿಗಳೊಂದಿಗೆ, ರಾಜಿಯಾಗದ ವರು ಎಂಬೆಲ್ಲಾ ವಿಶೇಷತೆಗಳೊಂದಿಗೆ ಜನರು ಅವರನ್ನು ಗೌರವಿಸುತ್ತಾರೆ. ಬಹುಪಾಲು ಜನರಿಗೆ ಈಗಲೂ ಅದೇ ಭಾವನೆ, ಗೌರವ ಇದೆ. ಪತ್ರಿಕೆಗಳು ಅಂದ ತಕ್ಷಣ ಜನರಲ್ಲಿ ಏನೋ ಒಂದು ರೀತಿಯ ಭೀತಿ ಜಾಗೃತವಾಗುತ್ತದೆ. ಆದರೆ, ಪತ್ರಕರ್ತರು ಅಥವಾ ಪತ್ರಿಕೆಗಳು ಮಾತ್ರ ಜನರ ಭಾವನೆಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿವೆ. ಅದಕ್ಕೆ ಹಲವಾರು ಕಾರಣ ನೀಡಬಹುದು. ವಾಗ್ವಾದಕ್ಕಿಳಿಯಬಹುದು. ಆದರೆ, ಪತ್ರಿಕಾಧರ್ಮ ಉಳಿಸಲು ಕಷ್ಟವೆನಿಸಿದರೆ ಆ ಕೆಲಸಕ್ಕೆ ಕೈ ಹಾಕುವುದಾದರೂ ಏತಕ್ಕೆ? ಹಣ ಮಾಡುವ ಬೇರೆ ದಂಧೆಯನ್ನು ನೆಚ್ಚಿಕೊಳ್ಳಬಹುದಲ್ಲ ಎಂಬ ಪ್ರಶ್ನೆಗೆ ಉತ್ತರ ಸುಲಭ.
ಕಾಯರ್ಾಂಗ ಮತ್ತು ರಾಜಕಾರಣ ಸಂಪೂರ್ಣ ವಾಗಿ ಭ್ರಷ್ಟಗೊಂಡಿರುವುದು, ಜನರ ಪರವಾಗಿ ಕೆಲಸ ಮಾಡಬೇಕಾದ ಪತ್ರಿಕೆಗಳು ಈ ಎರಡೂ ರಂಗಗಳ ತಪ್ಪನ್ನು ಪ್ರಶ್ನಿಸುವ ಅಧಿಕಾರ ಪಡೆದಿರುವುದು ಪ್ರಶ್ನೆಗೆ ಉತ್ತರವಾಗಿದೆ. ಭ್ರಷ್ಟ ಅಧಿಕಾರಿ ಹಾಗೂ ರಾಜಕಾರಣಿಯ ಊಟದೆಲೆಯಲ್ಲಿ ಪಾಲು ಪಡೆಯುವ ಅಥವಾ ಅವರು ಉಂಡು ಹೆಚ್ಚಾದವನ್ನು ತಾವು ಗೋರುವ ದುರಾಸೆ ಅಥವಾ ಧರ್ಮ ಪತ್ರಿಕೆಗಳದು.
ರಾಜಕಾರಣಿಯಾಗಲು ಹೇಗೆ ಯಾವುದೇ ಅರ್ಹತೆ ಅಗತ್ಯವಿಲ್ಲವೋ ಹಾಗೆಯೇ ಪತ್ರಕರ್ತ ನಾಗಬೇಕಾದರೆ ಯಾವುದೇ ಅರ್ಹತೆಯ ಅಗತ್ಯವಿಲ್ಲ. ದೊಡ್ಡಮಟ್ಟದ ಪತ್ರಿಕೆ (ರಾಜ್ಯ, ರಾಷ್ಟ್ರೀಯ ಪತ್ರಿಕೆಗಳು) ಹೆಸರಿನಲ್ಲಿ ವ್ಯಾಪಾರ ಆರಂಭಿಸುವವರು ಚೆನ್ನಾಗಿ ಬರೆಯುವವರು, ಪತ್ರಿಕೋದ್ಯಮದ ಪದವಿಯನ್ನು ಪಡೆದವರನ್ನು ಆಯ್ಕೆಗೆ ಅರ್ಹತೆಯನ್ನಾಗಿ ಪರಿಗಣಿಸುತ್ತಾರೆ. ಆದರೆ, ಮಾಲೀಕನಾಗುವವನಿಗೆ ಅದರ ಅರ್ಹತೆ ಅಗತ್ಯವಿಲ್ಲ. ಹಣವಿದ್ದರೆ, ಜೊತೆಗೆ ವ್ಯಾವಹರಿಕ ಜಾಣ್ಮೆಯಿದ್ದರೆ, ಆತ ಪತ್ರಿಕೋದ್ಯಮಿ ಯಾಗಬಹುದು. ಈ ಕಾರಣಕ್ಕೆ ಪತ್ರಿಕೆಗಳು ಪತ್ರಕರ್ತರು ಅಂದರೆ, ಸಂಬಂಧವೇ ಇಲ್ಲದವರ ಸಾಮ್ರಾಜ್ಯ. ಪತ್ರಿಕಾ ಧರ್ಮ, ಮೌಲ್ಯ, ಸಿದ್ದಾಂತ ಹೇಳುವವನನ್ನು ಅಪಹಾಸ್ಯ ಮಾಡಲಾಗುತ್ತಿದೆ. ವೇಸ್ಟ್ ಎಂದು ಪರಿಗಣಿಸಲಾಗುತ್ತಿದೆ. ಎರಡು ಹೊತ್ತಿನ ಊಟಕ್ಕಾಗಿ ಮನುಷ್ಯ ಏನನ್ನು ಬೇಕಾದರೂ ಮಾಡುತ್ತಾನೆ, ದುರಾಸೆಯಿಂದ ವ್ಯವಸ್ಥೆಯನ್ನೇ ಗಬ್ಬೆಬ್ಬಿಸುತ್ತಾನೆಂಬುದಕ್ಕೆ ಪತ್ರಿಕೆ ಪತ್ರಕರ್ತರು ಉದಾಹರಣೆಗೆ ನಿಲ್ಲುತ್ತಾರೆ.
ನಮ್ಮ ಹಿರಿಯರು ಅಥವಾ ಈ ಹಿಂದಿನ ಪತ್ರಿಕೆಗಳು ಹೀಗೆಯೇ ಇದ್ದರೆ, ಇತ್ತ ಎಂಬ ಪ್ರಶ್ನೆಗೆ ಇಲ್ಲವೆಂಬ ಉತ್ತರ ನೀಡಲು ಸಾಧ್ಯವಿಲ್ಲ. ಪ್ರಮಾಣ ಕಡಿಮೆಯಿ ರಬಹುದು. ಇತ್ತು. ಗೌಪ್ಯವಾಗಿತ್ತು. ಲಾಭ ಮಾಡಿಕೊ ಳ್ಳುವವ ಗೌಪ್ಯತೆ ಕಾಪಾಡಿಕೊಳ್ಳುತ್ತಿದ್ದ. ನಾಚಿಕೆ, ಭೀತಿ, ಸುತ್ತವಾಗಿರುತ್ತಿತ್ತು. ಈಗ ಅದೆಲ್ಲ ಇಲ್ಲವೇ ಇಲ್ಲ. ಖುಲ್ಲಂ ಖುಲ್ಲ ಗೋಡಾ ಬಿ ಹೈ, ಮೈದಾನ ಬೀ ಹೈ
ಮೊದಲು ಎಲ್ಲರೂ ಪತ್ರಕರ್ತರಾಗಲು ಹೆದರುತ್ತಿದ್ದರು. ಭಯವಲ್ಲ, ಕಾರಣ. ಅದು ಊಟಕ್ಕೂ ಕಷ್ಟ ಕೊಡುತ್ತದೆಂದು. ಪತ್ರಕರ್ತನನ್ನು ಬಡ ಪತ್ರಕರ್ತ, ಬಡಪಾಯಿ ಎಂದು ಸಂಭೋದಿಸುತ್ತಿದ್ದುದನ್ನು ಹೊಸ ತಲೆಮಾರಿನವರಿಗಲ್ಲದಿದ್ದರೂ, ಹಳೇ ತಲೆಮಾರಿನವರಿಗೆ ಗೊತ್ತಿದೆ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಪತ್ರಕರ್ತರಾದರೆ, ಯಥೇಚ್ಛವಾಗಿ ಹಣ ಮಾಡಬಹುದು. ಅಧಿಕಾರಿ, ರಾಜಕಾರಣಿಗಳನ್ನು ಹೆದರಿಸಿ ಕೆಲಸ ಮಾಡಿಸಿಕೊಳ್ಳಬಹುದೆಂದು.
ನಂ.1 ಪತ್ರಿಕೆ (ರಾಜ್ಯಮಟ್ಟದ್ದು) ಸಂಪಾದಕ, ಪತ್ರಕರ್ತರಲ್ಲಿಯೇ ನಂ.1 ಕುಬೇರನಾಗಿರುವುದು ಹೇಗೆ? ರಾಜಕಾರಣಿಯೊಬ್ಬರ ಬೂಟು ನೆಕ್ಕುತ್ತಿದ್ದುದೇ ಈತ ಸಂಪಾದಕನಾಗಲು ಇದ್ದ ಅರ್ಹತೆ. ಪತ್ರಿಕೋದ್ಯಮದ ಪಟ್ಟುಗಳನ್ನು ಬದಲಿಸಿರುವುದಾಗಿ ಸನ್ನಿ ಬಡಿದವನಂತೆ ಪದೇ ಪದೇ ಬಡಿದುಕೊಳ್ಳುವ ಈತನ ಮತ್ತೊಂದು ಸಾಧನೆಯೆಂದರೆ, ಹೋಟೆಲ್ಗಳಲ್ಲಿ ಮಾಣಿಗಳಾಗಿ ದ್ದವರೂ ಪತ್ರಿಕಾ ಕಛೇರಿಗಳಿಗೆ ಪತ್ರಿಕೆ ವಿತರಿಸಿ ಬದುಕುತ್ತಿದ್ದವರನ್ನು ಪತ್ರಕರ್ತರನ್ನಾಗಿ ಪ್ರತಿಷ್ಟಾಪಿಸಿದ್ದು. ಭಾಷೆ, ವ್ಯಾಕರಣ ಕಲಿತುಕೊಳ್ಳುವುದು ಕಷ್ಟವೇನಲ್ಲವೇ? ಮತ್ತೊಂದು ರಾಜ್ಯಮಟ್ಟದ ಪತ್ರಿಕೆಯೊಂದಕ್ಕೆ ಅಕ್ಷರಜ್ಞಾನವೇ ಇಲ್ಲದವನು ಸಂಪಾದಕನಾಗಿ ವಿಜೃಂಭಸಿದ್ದ. ಬಯಲಲ್ಲಿ ಬೆತ್ತಲಾದವರ ಸಂಖ್ಯೆ ಸಾಕಷ್ಟಿದೆ. ವೈಯಕ್ತಿಕ ಮಟ್ಟದಲ್ಲಿ ಪತ್ರಕರ್ತರು ಏನಾಗಿದ್ದಾರೆಂಬುದಕ್ಕೆ ಇದು ಉದಾಹರಣಿ. ಜಾತಿವಾದಿಗಳು, ಜಾತ್ಯಾತೀತವಾದಿಗಳು ಎಂಬ ಹಣಿಪಟ್ಟಿಯೊಂದಿಗೆ ಪತ್ರಿಕೋದ್ಯಮವನ್ನು ಕಸದ ಬುಟ್ಟಿಗೆ ಹಾಕಿದವರು ಇದ್ದಾರೆ. ಆಂದೋಲನ ಮಾಡುವುದಾಗಿ ಇನ್ನೂ ಮಾಡುತ್ತಿರುವುದಾಗಿ ಹೇಳಿಕೊಳ್ಳುವ ಸಮಾಜವಾದಿ ಪತ್ರಕರ್ತನೊರ್ವ ಜನರ ಮುಂದೆ ಸಮಾಜಸೇವಕ ಪೋಸು ನೀಡುತ್ತಾನೆ. ಸರಳತೆ, ಭಾಷಣ ಮಾಡಿ ಐಷಾರಾಮಿ ಕಾರುಗಳಲ್ಲಿ ತೆರಳುತ್ತಾನೆ. ಏನಾದರೂ, ಮಾಡಿಕೊಳ್ಳಲಿ ಸುದ್ದಿ ಬರೆಯುವ ಕೆಲಸಗಾರರಿಗೆ ಹೊಟ್ಟೆ ತುಂಬುವಷ್ಟು ಸಂಬಳವಾದರೂ ಕೊಡುತ್ತಾನೆಂದರೆ, ಅದು ಇಲ್ಲ. ಆದರೆ, ತನ್ನ ಆದಾಯದಲ್ಲಿ ಶೇಕಡಾ 40ರಷ್ಟನ್ನು ಸಮಾಜ ಸೇವೆಗೆ ವಿನಿಯೋಗಿಸುವುದಾಗಿ ಘೋಷಿಸುತ್ತಾನೆ.
ಇದು ಒತ್ತಟಿಗಿರಲಿ, ಇತ್ತೀಚಿಗೆ ಪತ್ರಿಕೆಗಳಿಗೆ ಚುನಾವಣಿ ಬಂತೆಂದರೆ ಹಬ್ಬ. ಕಾರಣ ಚುನಾವಣಿಗಳಲ್ಲಿ ವೆಚ್ಚದ ಮಿತಿ ಇರುವುದರಿಂದ ಜಾಹೀರಾತುಗಳನ್ನು ಮಿತಿ ಮೀರಿ ನೀಡುವಂತಿಲ್ಲ. ಅದಕ್ಕಾಗಿ ಪ್ರಾಯೋಜಿಕ ಸುದ್ದಿ ಪುಟಗಳು ಮುದ್ರಣಗೊಳ್ಳುತ್ತವೆ. ವಿಶ್ಲೇಷಣಿ ಮತ್ತು ಪ್ರಾಯೋಜಿತ ಸುದ್ದಿ ಪುಟಗಳು ಅಕ್ಕಪಕ್ಕದಲ್ಲಿಯೇ ಪ್ರಕಟಗೊಳ್ಳುವದರಿಂದ ಜನರು ಅಂದರೆ, ಓದುಗರು ಗೊಂದಲಗೊಂಡಿದ್ದಾರೆ. ಹೊಗಳಿ ಬರೆಸಿಕೊಳ್ಳುವದ ರಿಂದ ಪ್ರಯೋಜನವಿಲ್ಲವೆಂದು ರಾಜಕಾರಣಿಗಳಿಗೆ ಗೊತ್ತಿದೆ. ಆದರೆ, ಕಾಟ ತಡೆಯಲಾರದೇ ಪತ್ರಕರ್ತರಿಗೆ ಹಣ ನಡಬೇಕಾಗುತ್ತದೆ ಎಂದು ರಾಜಕಾರಣಿಗಳು ಗೊಳಾಡುತ್ತಾರೆ. ಎಷ್ಟೋ ರಾಜಕಾರಣಿಗಳನ್ನು ಪತ್ರಕರ್ತರು ಪ್ರಚಾರಕ್ಕೆ ತೆರಳಲು ಬಿಡುವುದಿಲ್ಲವಂತೆ. ಹಣ ನೀಡದಿದ್ದರೆ, ಹಿಂಬಾಲಿಸುವದರಲ್ಲಿ ಪತ್ರಕರ್ತರು ರಾಜಕೀಯ ಪಕ್ಷಗಳ ಕಾರ್ಯಕರ್ತರಿಗಿಂತ ಒಂದು ಕೈ ಮುಂದೆ.
ಇತ್ತೀಚಿಗೆ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಯುವಕನೊಬ್ಬ ಕೆಲಸಕ್ಕಾಗಿ ಅಲೆಯುತ್ತಿದ್ದ. ನಂ.1 ಪತ್ರಿಕೆ ಸಂಪಾದಕ ಹಾಗೂ ಭ್ರಷ್ಟ ರಾಜಕಾರಣಿಯೊಬ್ಬರಿಗೆ ಪರಸ್ಪರ ಸಂಬಂಧವಿರುವುದು ನನಗೆ ಗೊತ್ತಿತ್ತು. ಆ ರಾಜಕಾರಣಿಯ ಬಳಿ ಹೋಗಲು ತಿಳಿಸಿದೆ. ಯುವಕನಗ ಸಂತೋಷವಾಗಿದ್ದಾನೆ.
ಪತ್ರಿಕೆ ಎಂದರೆ, ಸಂಬಂಧವೇ ಇಲ್ಲದವರ ಸಾಮ್ರಾಜ್ಯ. ಹೇಗಾಗುತ್ತದೆ ಎಂಬುದಕ್ಕೆ ಇದನ್ನೆಲ್ಲ ಹೇಳಬೇಕಾಯಿತು. ಹೊಟ್ಟೆ ಪಾಡಿಗಾಗಿ ಮಾಡುತ್ತಾರೆಂದು ಸುಮ್ಮನಾಗೋಣ. ಆದರೆ, ಕೈತುಂಬ ಸಂಬಳ ನಡಿದ ಮೇಲೆಯೂ ಕೈಚಾಚುವರು ಇದ್ದಾರೆ. ಪ್ರಖ್ಯಾತ ರಾಷ್ಟ್ರೀಯ ಆಂಗ್ಲ ಪತ್ರಿಕೆಯೊಂದಕ್ಕೆ ಅಪರಾದ ಸುದ್ದಿ ವರದಿ ಮಾಡುವವ ಬೆಂಗಳೂರಿನ ಬಹಳಷ್ಟು ಪೊಲೀಸ್ ಠಾಣಿಯಲ್ಲಿ ಪ್ರತಿನತ್ಯ ಕೇವಲ ನೂರು ರೂಪಾಯಿಯನ್ನು ಕಡ್ಡಾಯವಾಗಿ ವಸೂಲಿ ಮಾಡುತ್ತಾನೆ. ಕಿತ್ತು ತಿನ್ನುವ ಪೊಲೀಸರನ್ನೇ ಕಿತ್ತು ತಿನ್ನವವನಿತ.
ಇಡೀ ದೇಶದಲ್ಲಿಯೇ ಸಿದ್ದಾಂತಕ್ಕೆ ಬದ್ದವಾದ ಪತ್ರಿಕೆಯೊಂದು ಇತ್ತೀಚಿನ ಉಪಚುನಾವಣಿಯ ಬಗ್ಗೆ ಅದರ ವರದಿಗಾರನಾದ ವ್ಯಕ್ತಿ ಆಶ್ಚರ್ಯಕರ ವಿಶ್ಲೇಷಣಿ ಬರೆದ. ಆತನ ಪ್ರಕಾರ ಕಣಕ್ಕಿಳಿದಿದ್ದ ಕುಬೇರ ಅಭ್ಯಥರ್ಿಯೊಬ್ಬ ಗೆದ್ದೆಗೆಲ್ಲುತ್ತಾನೆಂದು ವಾದಿಸಿದ್ದ.
ಆದರೆ, ಆಶ್ಚರ್ಯದ ವಿಷಯವೆಂದರೆ, ಆ ಚುನಾವಣಿಯಲ್ಲಿ ಆತ ಸೋತೆ ಸೋಲುತ್ತಾನೆಂಬುದು ಕ್ಷೇತ್ರದಲ್ಲಿ ಸಣ್ಣಮಕ್ಕಳಿಗೂ ಗೊತ್ತಾಗಿತ್ತು. ಇದಕ್ಕೆ ಏನನ್ನೋಣ.

ಆರ್ಟಿಪಿಎಸ್ ಗೋಳಿನ ಕಥೆ

ರಾಜ್ಯದಲ್ಲಿಗ ಬೀಕರ ಬರಗಾಲ. ಆದರೆ, ಈ ಬರ ಕೇವಲ ತುತ್ತು ಅನ್ನ, ಕುಡಿಯುವ ನೀರಿಗೆ ಮಾತ್ರ ಬಂದಿಲ್ಲ. ವಿದ್ಯುತ್ ವಲಯಕ್ಕೂ ತನ್ನ ಛಾಯೆಯನ್ನು ಆವರಿಸಿದೆ! ಹೌದು ರಾಜ್ಯದಲ್ಲಿ ಎಲ್ಲಕ್ಕಿಂತ ವಿದ್ಯುತ್ ಬರ ನಮ್ಮನ್ನು ತೀವ್ರವಾಗಿ ಕಾಡುತ್ತಿದೆ. ಕಳೆದ ಎರಡು ವರ್ಷದಿಂದ ಬೀಕರ ವಿದ್ಯುತ್ ಕ್ಷಾಮ ನಮ್ಮನ್ನು ಆವರಿಸಿದೆ. ಬೇಸಿಗೆ ದಿನಗಳಲ್ಲಂತೂ ಕರೆಂಟ್ ಯಾವಾಗ ಹೋಗುತ್ತೇ, ಮತ್ತ್ಯಾಗ ಬರುತ್ತೇ ಗೊತ್ತೇ ಆಗುವುದಿಲ್ಲ. ಇದಕ್ಕೆಲ್ಲ ಕಾರಣ ರಾಜ್ಯದ ವಿದ್ಯುತ್ ಬೇಡಿಕೆ ಮತ್ತು ಉತ್ಪಾದನೆ ನಡುವೆ ಇವರು ಅಜಗಜಾಂತಗರ ವ್ಯತ್ಯಾಸ.
ನಮ್ಮ ರಾಜ್ಯಕ್ಕೆ  ಪ್ರತಿನಿತ್ಯ 150 ದಶಲಕ್ಷ ಯೂನಿಟ್ನಿಂದ 160 ದಶಲಕ್ಷ ಯೂನಿಟ್ ವಿದ್ಯುತ್ ಬೇಕು. ಈ ವಿದ್ಯುತ್ನ್ನ ನಾವು ರಾಯಚೂರಿನ ಆರ್ಟಿಪಿಎಸ್, ಬಳ್ಳಾರಿಯ ಬಿಟಿಪಿಎಸ್, ಲಿಂಗನಮಕ್ಕಿ, ಶರಾವಾತಿ, ಕಾಳಿ, ಆಲಮಟ್ಟಿ ಸೇರಿದಂತೆ ಕೇಂದ್ರ ಸಕರ್ಾರ ಮತ್ತು ಖಾಸಗಿ ಕಂಪೆನಿಗಳಿಂದ ಪಡೆಯುತ್ತೇವೆ. ಆದರೆ, ಇದರಲ್ಲಿ ನಮ್ಮ ರಾಜ್ಯವು ಅತಿ ಹೆಚ್ಚು ಅವಲಂಬನೆಯಾಗಿರುವುದು ರಾಯಚೂರಿನ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್ಟಿಪಿಎಸ್ ಮೇಲೆ.
ಆರ್.ಟಿ.ಪಿ.ಎಸ್ ನಲ್ಲಿ ಒಟ್ಟು 8 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಈ 8 ಘಟಕಗಳು ಪ್ರತಿದಿನ 25 ಮೆಟ್ರಿಕ್ ಟನ್ ಕಲ್ಲಿದ್ದಲ್ಲನ್ನು ಉರಿಸಿ ಅವಿರತವಾಗಿ ವಿದ್ಯುತ್ ಉತ್ಪಾದಿಸುತ್ತಿವೆ. 210 ಮೆಗಾವ್ಯಾಟ್ ಸಾಮಥ್ರ್ಯದ 7 ಘಟಕ ಹಾಗೂ 250 ಮೆಗಾವ್ಯಾಟ್ ಸಾಮಥ್ರ್ಯದ 1 ಘಟಕ  ಸೇರಿ ಒಟ್ಟು ನಿತ್ಯ 1720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಅಂದರೆ ರಾಜ್ಯದ ಒಟ್ಟು ಉತ್ಪಾದನೆಯ ಶೇಕಡಾ 40ರಷ್ಟು ಇಲ್ಲಿ ಉತ್ಪಾದಿಸಲಾಗುತ್ತಿದೆ. ಹಾಗಾಗಿಯೇ ರಾಯಚೂರಿನ ಆರ್ಟಿಪಿಸ್ನ್ನು ಆಪದ್ಬಾಂಧವ ಎಂದು ಕರೆಯುತ್ತಾರೆ.
ಇನ್ನೂ ಒಂದು ವಿಚಾರ ನಿಮಗಿಲ್ಲಿ ನಾವು ಹೇಳಲೇಬೇಕು. ಕನರ್ಾಟಕ ವಿದ್ಯುತ್ ನಿಗಮವು ಆರ್.ಟಿ.ಪಿ.ಎಸ್ನಲ್ಲಿ ಉತ್ಪಾದಿಸುವ ವಿದ್ಯುತ್ನ್ನು ಕೇವಲ 2 ರೂ. 60 ಪೈಸೆಗೆ ಒಂದು ಯೂನಿಟ್ನಂತೆ ಅಗ್ಗದ ದರಕ್ಕೆ ಬೇರೆಯವರಿಗೆ ನೀಡುತ್ತಿದೆ. ಅಂದರೆ, ನಮಗೆ ಆರ್ಟಿಪಿಎಸ್ ಅವಶ್ಯಕತೆ ಹಾಗೂ ಅನಿವಾರ್ಯತೆ ಹೇಗಿರಬೇಕು ಊಹಿಸಿ.
ಈಗ ರಾಜ್ಯದಲ್ಲಿ ಆರ್.ಟಿ.ಪಿ.ಎಸ್ ಹೊರತು ಪಡಿಸಿದರೇ ಬಳ್ಳಾರಿ ಶಾಖೋತ್ಪನ್ನ ಕೇಂದ್ರದಿಂದ 500 ಮೆಗಾವ್ಯಾಟ್ ಮತ್ತು ಲಿಂಗನಮಕ್ಕಿ, ಶರಾವತಿ, ಕಾಳಿ, ಆಲಮಟ್ಟಿಗಳ ಜಲಮೂಲದಿಂದ ಸ್ವಲ್ಪ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ. (ಅದು ಸಾಕಷ್ಠು ಮಳೆಯಾಗಿ ಜಲಾಶಯ ಭತರ್ಿಯಾದಾಗ ಮಾತ್ರ)
ಉತ್ತರಕನರ್ಾಟಕದಲ್ಲಿದ್ದಂತೆ ಎಲ್ಲೆಡೆ ಬರ ಆವರಿಸಿದೆ, ಮೇಲಿನ ಯಾವಸ್ಥಳದಲ್ಲಿಯೂ ವಿದ್ಯುತ್ ಉತ್ಪಾದಿಸಲು ಸಾಧ್ಯವಿಲ್ಲ. ಕಾರಣ ಸಕರ್ಾರ ಶಕ್ತಿನಗರದ ಮೇಲೆಯೇ ಅವಲಂಬನೆಯಾಗಿದೆ.
ಒಂದೊಮ್ಮೆ ಆರ್.ಟಿ.ಪಿ.ಎಸ್ ನಲ್ಲಿ ಒಂದೆರಡು ಘಟಕಗಳು ತಾಂತ್ರಿಕ ಸಮಸ್ಯೆಯಿಂದ ಉತ್ಪಾದನೆ ನಿಲ್ಲಿಸಿ ಬಿಟ್ಟರೆ, ರಾಜ್ಯದ ವಿದ್ಯುತ್ ವಿತರಣಾ ಜಾಲದಲ್ಲಿ ಏರು ಪೇರಾಗುತ್ತೆ. ಇನ್ನೂ ಆರ್ಟಿಪಿಎಸ್ ಜನ್ಮ ತಾಳಿದಾಗಿನಿಂದ ತಾಂತ್ರಿಕ ಸಮಸ್ಯೆ, ಕಳಪೆ ಕಲ್ಲಿದ್ದಿಲ್ಲು, ಸಿಬ್ಬಂದಿ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಿಕೊಂಡು ದಾಖಲೆ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಿ ರಾಜ್ಯಕ್ಕೆ ನೀಡುತ್ತಾ ಬಂದಿದೆ.
ರಾಜ್ಯದ ವಿದ್ಯುತ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಶಕ್ತಿನಗರದ ಆರ್ಟಿಪಿಎಸ್ಗೆ ಈಗ ಆಪತ್ತು ಬಂದೊದಗಿದೆ. ಬಂದಿರುವ ಆಪತ್ತು ಅಂತಿಂತಹುದಲ್ಲ ಈ ಆಪತ್ತನ್ನು ಸಕರ್ಾರ ಗಂಭೀರವಾಗಿ ಪರಿಗಣಿಸದೇ ಹೋದರೆ, ಕನರ್ಾಟಕ ಕತ್ತಲಾಗುವುದು ಗ್ಯಾರಂಟಿ. ಆರ್ಟಿಪಿಎಸ್ಗೆ ಬಂದೊದಗಿದ ಆಪತ್ತೇ, ರಾಜ್ಯದ ಭೀಕರ ವಿದ್ಯುತ್ ಸಮಸ್ಯೆಗೆ ಕಾರಣ.
ಆರ್ಟಿಪಿಎಸ್ನಲ್ಲಿ ಕಲ್ಲಿದ್ದಲು ಕೊರತೆ, ತಾಂತ್ರಿಕ ಸಮಸ್ಯೆ ಆಥರ್ಿಕ ಸಂಕಷ್ಟ, ನೀರಿನ ಕೊರತೆ ಹೀಗೆ ಸಾಲು ಸಾಲು ಸಮಸ್ಯೆಗಳು ಬೃಹದಾಕಾರದಲ್ಲಿ ಬೆಳೆದು ನಿಂತಿವೆ. ಈ ಎಲ್ಲ ಸಮಸ್ಯೆಗಳು ಆರ್ಟಿಪಿಎಸ್ನ ಉತ್ಪಾದನೆಯನ್ನು ಕುಂಠಿತಗೊಳಿಸಿವೆ.
ಆರ್ಟಿಪಿಎಸ್ನ 8 ಘಟಕಗಳು ಪೂರ್ಣ ಸಾಮಥ್ರ್ಯದಲ್ಲಿ ವಿದ್ಯುತ್ ಉತ್ಪಾದಿಸಬೇಕು ಅಂದ್ರೆ ಪ್ರತಿ ದಿನ 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲ್ಲು ಬೇಕು. ಈ ಕಲ್ಲಿದ್ದಲು ಆಂದ್ರ ಪ್ರದೇಶದ ಬೆಲ್ಲಂಪಲ್ಲಿಯ ಸಿಂಗರೇಣಿ, ಮಹಾರಾಷ್ಟ್ರದ ಮಹಾನದಿ, ಓರಿಸ್ಸ್ದ ತಲ್ಚೆರ್ ಹಾಗೂ ವಿದೇಶಿ ಗಣಿಗಳಿಂದ ಪೂರೈಕೆಯಾಗುತ್ತದೆ.
ಆದರೆ ಇತ್ತಿಚೀನ ದಿನಗಳಲ್ಲಿ ಮಾತ್ರ ನೀರಿಕ್ಷಿತ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆಯಾಗುತ್ತಿಲ್ಲ. ಇದು ವಿದ್ಯುತ್ ಉತ್ಪಾದನೆ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಕಲ್ಲಿದ್ದಲು ಕೊರತೆಗೆ ತೆಲಂಗಾಣ ಹೋರಾಟ, ಕೇಂದ್ರ ಸರಕಾರದ ಅಸಹಕಾರ ಎಂದು ಆರೋಪಿಸುತ್ತಾ ಕಾಲ ದೂಡುತ್ತಿದ್ದ ಇಂಧನ ಸಚಿವರ ಹೇಳಿಕೆ ಸತ್ಯ ಮರೆ ಮಾಚಲು ನಡೆಸುತ್ತಿರುವ ಸರ್ಕಸ್ ಎನ್ನುವದು ಈಗ ಗುಟ್ಟಾಗಿಯೇನು ಉಳಿದಿಲ್ಲ.
ಬೇಸಿಗೆ ಕಾಲದಲ್ಲಿ ಜಲಮೂಲ ವಿದ್ಯುತ್ ಉತ್ಪಾದನೆ ಕಡಿಮೆ ಇರುವುದರಿಂದ, ಸಹಜವಾಗಿ ವಿದ್ಯುತ್ ಉತ್ಪಾದನೆಯ ಹೆಚ್ಚಿನ ಒತ್ತಡ ಶಾಖೋತ್ಪನ್ನ ಕೇಂದ್ರ ಆರ್ಟಿಪಿಎಸ್ ಮೇಲಿರುತ್ತದೆ. ಈ ಹಿನ್ನಲೆಯಲ್ಲಿ ಮೊದಲಿಗೆ ಮುಂಗಡವಾಗಿ 3 ರಿಂದ 6 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಆರ್ಟಿಪಿಎಸ್ನಲ್ಲಿ ಸಂಗ್ರಹಿಸಲಾಗುತ್ತಿತ್ತು. ಆದರೆ, ಕಳೆದ ಒಂದು ವರ್ಷದಿಂದ ಆರ್ಟಿಪಿಎಸ್ನಲ್ಲಿ ಕಲ್ಲಿದ್ದಲು ಸಂಗ್ರಹಣೆ ಸಂಪೂರ್ಣ ಬರಿದಾಗಿದೆ. ಈಗ ನಿತ್ಯವೂ ರೈಲಿನಿಂದ ಆಮದಾಗುವ ಕಲ್ಲಿದ್ದಲನ್ನು ಕಾಯುವ ದುಸ್ಥಿತಿ ಆರ್ಟಿಪಿಎಸ್ಗೆ ಬಂದೊದಗಿದೆ.
ಇದರಲ್ಲಿ ಪೂರೈಕೆಯಾಗುತ್ತಿರುವ ಕಲ್ಲಿದ್ದಲು ಕೂಡ ತೀರ ಕಳಪೆ ಗುಣಮಟ್ಟದ್ದು. ಸಕರ್ಾರ ತೊಳೆದ ಕಲ್ಲಿದ್ದಲು ಪೂರೈಕೆ ನಿಲ್ಲಿಸಿದಾಗಿಂದ, ಕಲ್ಲಿದ್ದಲಿನಲ್ಲಿ ಬರುವ ಕಬ್ಬಿಣ, ಸರಳು, ಭಾರಿ ಗಾತ್ರದ ಕಲ್ಲುಗಳು ಘಟಕಗಳನ್ನು ತೀವ್ರ ಹಾನಿಗೀಡು ಮಾಡಿವೆ. ಇದರಿಂದಾಗಿ ಘಟಕಗಳು ಮೇಲಿಂದ ಮೇಲೆ ಉತ್ಪಾದನೆ ನಿಲ್ಲಿಸುತ್ತಿವೆ. ಕಳಪೆ ಕಲ್ಲಿದ್ದಲಿನಲ್ಲಿ ಬರುವ ಶೇಕಡಾ 60% ರಷ್ಟು ಬೂದಿ, ಕಲ್ಲುಗಳು ಹಾಗೂ ಇತರೆ ಸಾಮಗ್ರಿಗಳು ತುಂಬಿಕೊಂಡು ಘಟಕಗಳು ದುಸ್ಥಿಗೆ ತಲುಪಿವೆ. ಇನ್ನೂ ಕಳಪೆ ಕಲ್ಲಿದ್ದಲು ಬಳಕೆಯಿಂದ ಹೆಚ್ಚು ಹೆಚ್ಚು ಇಂಧನವನ್ನು ಕಲ್ಲಿದ್ದಲು ಉರಿಸಲು ಬಳಕೆ ಮಾಡಲಾಗುತ್ತೆ, ಇದು ಸಕರ್ಾರಕ್ಕೆ ಅನಗತ್ಯ ಆಥರ್ಿಕ ಹೊರೆಯಾಗಿದೆ, ಇನ್ನೂ ಹಳೆಯಾದಾದ ಯಂತ್ರೋಪಕಾರಣಗಳನ್ನು ಕಾಲ ಕಾಲಕ್ಕೆ ಸರಿಯಾಗಿ ನಿರ್ವಹಣೆ ಮಾಡದಿರುವುದು ಸಮಸ್ಯೆ ಮತ್ತಷ್ಟು ಉಲ್ಬಣವಾಗಲು ಕಾರಣವಾಗಿದೆ.
ಉಷ್ಣ ವಿದ್ಯುತ್ ಘಟಕಗಳ ಕಾರ್ಯಕ್ಷಮತೆಯ ಮಿತಿ 25 ವರ್ಷ. ಹೀಗಾಗಿ 1985ರಲ್ಲಿ ಸ್ಥಾಪಿತವಾದ ಆರ್.ಟಿ.ಪಿ.ಎಸ್ 1 ಮತ್ತು 2ನೇ ಘಟಕ ಹಾಗೂ ನಂತರದ ದಿನಗಳಲ್ಲಿ ಸ್ಥಾಪನೆಯಾದ 3 ಮತ್ತು 4ನೇ ಘಟಕಗಳು ಈಗ ಪದೇ ಪದೇ ತಾಂತ್ರಿಕ ತೊಂದರೆಗೆ ಒಳಪಡುತ್ತಿವೆ. ಇವುಗಳ ಸಂಪೂರ್ಣ ನವೀಕರಣಕ್ಕೆ ಅಂದಾಜು ಸಾವಿರ ಕೋಟಿ ರೂಪಾಯಿಗಳ ಹಣಕಾಸಿನ ಅಗತ್ಯವಿದೆ. ಆದರೆ ಕನರ್ಾಟಕ ವಿದ್ಯುತ್ ನಗಮದ ಬಳಿ ಹಣಕಾಸಿನ ಕೊರತೆಯಿದೆ. ಹಣ ಹೊಂದಿಸಬೇಕಾದ ಸರಕಾರ ದುಬಾರಿ ಬೆಲೆಗೆ ಖಾಸಗಿ ಕಂಪನಿಗಳಿಂದ ವಿದ್ಯುತ್ ಖರೀದಿಗೆ ತೋರುವ ಆಸಕ್ತಿ, ಆರ್ಟಿಪಿಎಸ್ ದುರಸ್ಥಿಗೆ ತೋರುತ್ತಿಲ್ಲ..!
ಹೀಗೆ ತಾಂತ್ರಿಕ ಸಮಸ್ಯೆಯಿಂದ ಬಳಲುತ್ತಿರುವ ಕೆಲ ಘಟಕಗಳ ದುರಸ್ಥಿಗೆ ಜಪಾನ್ದಿಂದ ತಜ್ಞರು ಬರಬೇಕಾಗಿದೆ. ಆದ್ದರಿಂದಲೇ ಘಟಕಗಳು ಕೈಕೊಟ್ಟಾಗಲೆಲ್ಲಾ ನಾಲ್ಕಾರು ದಿನ ವಿಳಂಬವಾಗಿ ವಿದ್ಯುತ್ ಉತ್ಪಾದನೆ ಕುಂಠಿತಗೊಳ್ಳುತ್ತದೆ. ಇದರಿಂದಾಗಿ ವಿತರಣಾ ವ್ಯವಸ್ಥೆಯಲ್ಲಿ ಏರು ಪೇರಾಗಿ ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿಯಾಗುತ್ತದೆ.
ಈ ವರ್ಷದ ಬೀಕರ ಬರಗಾಲದ ಬಿಸಿ ಆರ್ಟಿಪಿಎಸ್ಗೂ ತಟ್ಟಿದೆ. ಆರ್ಟಿಪಿಎಸ್ನ 8 ಘಟಕಗಳ ಕೂಲಿಂಗ್ ಟವರ್ಗಳಿಗೆ ಪ್ರತಿ ದಿನ ಬೇಕಾಗುವ 150 ಕ್ಯೂಸೆಕ್ ನೀರು ಕೃಷ್ಣಾ ನದಿಯಿಂದ ಪೂರೈಸಲಾಗುತ್ತಿತ್ತು. ಆದರೆ, ಈಗ ಬರಗಾಲ ಇರುವದರಿಂದ  ನದಿಯಲ್ಲಿ ನೀರಿಲ್ಲ..! ಇದರಿಂದಾಗಿ ಆರ್ಟಿಪಿಎಸ್ 8 ಘಟಕಗಳ ಪೈಕಿ 4 ಘಟಕಗಳು ಈಗಾಗಲೇ ವಿದ್ಯುತ್ ಉತ್ಪಾದನೆ ನಿಲ್ಲಿಸಿವೆ. ಇನ್ನು ಕೆಲವು ದಿನಗಳಲ್ಲಿ ನದಿಗೆ ನೀರು ಬಾರದಿದ್ದರೆ ಆರ್ಟಿಪಿಎಸ್ನ ಎಲ್ಲ ಘಟಕಗಳು ಸ್ತಬ್ದವಾಗುವುದು ಗ್ಯಾರಂಟಿ.. ಹೀಗೆ ಆರ್ಟಿಪಿಎಸ್ಗೆ ಸಾಲು ಸಾಲು ಸಮಸ್ಯೆಗಳು ಬೆಂಬಿಡದೇ ಕಾಡುತ್ತಿದ್ದು, ಉತ್ಪಾದನೆ ಮಾಡುವುದು ಕಷ್ಟವಾಗಿದೆ.
ಆರ್.ಟಿ.ಪಿ.ಎಸ್ನಲ್ಲಿ ಕಲ್ಲಿದ್ದಲು, ಆಥರ್ಿಕ ಮತ್ತು ತಾಂತ್ರಿಕ ಸಮಸ್ಯೆಗಳಿಗಿಂತ ಭೀಕರವಾದದ್ದು ಇಲ್ಲಿನ ಗುತ್ತಿಗೆ ಕಾಮರ್ಿಕರದ್ದು. ಇವರನ್ನು ದ್ವೀತಿಯ ದಜರ್ೆ ನಾಗರೀಕರಂತೆ ಕಾಣುವ ಕೆಪಿಸಿ ಕನಿಷ್ಟ ಸೌಕರ್ಯ ಕಲ್ಪಿಸದೇ ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದೆ.
ಇಲ್ಲಿ ಒಟ್ಟು 2089 ಜನ ಖಾಯಂ ನೌಕರರಿದ್ದು, 900 ಜನ ಗುತ್ತಿಗೆ ಕಾಮರ್ಿರು ಕೆಲಸ ಮಾಡುತ್ತಿದ್ದಾರೆ. ಆದರೆ, ಗುತ್ತಿಗೆ ಕಾಮರ್ಿಕರು ತಾತ್ಕಾಲಿಕ ಕೆಲಸಕ್ಕೆಂದು ಬಂದು ಹೋಗುವವರಲ್ಲ. ದಶಕಗಳಿಂದ ನಿರಂತರವಾಗಿ ಆರ್ಟಿಪಿಎಸ್ನಲ್ಲಿ ಕಲ್ಲಿದ್ದಲು ವಿಭಾಗ, ಬಾಯ್ಲರ್, ಟಬರ್ೈನ್ ನಿರ್ವಹಣೆ, ಸ್ಟೋರ್, ಐಎನ್ಸಿ, ತ್ಯಾಜ್ಯವಾಗಿ ಬೂದಿ ಹೊರಬೀಳುವ ವಿಭಾಗ, ಆಸ್ಪತ್ರೆ ಸೇರಿದಂತೆ ಬಹುತೇಕ ವಿಭಾಗಗಳನ್ನು ನೋಡಿಕೊಳ್ಳುವವರು. ಹೀಗೆ ಕಾರ್ಯ ನಿರ್ವಹಿಸುವಾಗ ಅದೆಷ್ಟೋ ಜನ ತಮ್ಮ ಪ್ರಾಣ ಕಳೆದುಕೊಂಡ ಉದಾರಣೆಗಳಿವೆ.
ಹಗಲಿರುಳು ತಮ್ಮ ಬದುಕನ್ನೇ ಒತ್ತೇಯಿಟ್ಟು ದುಡಿಯುತ್ತಿರುವ ಗುತ್ತಿಗೆ ನೌಕರರನ್ನು ಇಲ್ಲಿಯವರೆಗಾದರೂ ಖಾಯಂ ಮಾಡಲು ಆಡಳಿತ ಮಂಡಳಿ ಮನಸ್ಸು ಮಾಡಿಲ್ಲ. ಖಾಯಂ ಮಾಡಬೇಕೆಂದು ಕನರ್ಾಟಕ ವಿದ್ಯುತ್ ನಿಗಮಕ್ಕೆ ಪ್ರಸ್ತಾವನೆ ಹೋಗಿದ್ದರೂ, ನಿಗಮ ಮಾತ್ರ ತನಗೇನು ಗೊತ್ತಿಲ್ಲದಂತೆ ವತರ್ಿಸುತ್ತಿದೆ. ಸಕರ್ಾರ ಮಾತ್ರ ಗುತ್ತೇದಾರರನ್ನು ಬೆಂಬಲಿಸುತ್ತಾ, ಕಾಮರ್ಿಕರ ಬದುಕಿನ ಮೇಲೆ ಚೆಲ್ಲಾಟವಾಡುತ್ತಿದೆ.
ಕಾಮರ್ಿಕರ ಕುರಿತು ಇಲ್ಲಿ ಒಂದು ವಿಷಯ ಗಮನಿಸಬೇಕು. ಯಾಕೆಂದರೆ, 1985ರಲ್ಲಿ ಆರ್ಟಿಪಿಎಸ್ ನ 1 ಮತ್ತು 2ನೇ ಘಟಕಗಳಿಗೆ ನೇಮಕಗೊಂಡ ನೌಕರರೇ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದಾರೆ, ಸದ್ಯ ಆರ್ಟಿಪಿಎಸ್ನಲ್ಲಿ 8 ಘಟಕಗಳಿವೆ. ತಾಂತ್ರಿಕ, ಆಡಳಿತಾತ್ಮಕ ಸಿಬ್ಬಂದಿ ಕೊರತೆ ಇದ್ದರೂ ಹೊಸದಾಗಿ ನೌಕರರನ್ನು ನೇಮಕ ಮಾಡಿಕೊಳ್ಳುವ ಗೋಜಿಗೆ ಕೆಪಿಸಿ ಹೋಗುತ್ತಿಲ್ಲ. ಇದು ಮುಖ್ಯವಾಗಿ ಆರ್ಟಿಪಿಎಸ್ನ್ನು ಕಾಡುತ್ತಿದೆ.
ಕೆಪಿಸಿ ತಾನು ವಿವಿಧ ಮೂಲಗಳಿಂದ ಉತ್ಪಾದಿಸುವ ವಿದ್ಯುತ್ನ್ನು ಅಗ್ಗದ ದರದಲ್ಲಿ ನೀಡುತ್ತಿದೆ, ಆದರೆ, ವಿದ್ಯುತ್ ಪಡೆದ ಬೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಮೆಸ್ಕಾಂ ಕಂಪನಿಗಳು ಕೆಪಿಸಿಗೆ 13 ಸಾವಿರ ಕೋಟಿ ಹಣ ಬಾಕಿ ನೀಡಬೇಕಿದೆ. ಇದೇ ನೆಪೆಲ್ಲಿ ಕೆಪಿಸಿ ನೂತನ ಯೋಜನೆಗಳನ್ನು ಹಾಕಿಕೊಳ್ಳಲು ಮುಂದಾಗುತ್ತಿಲ್ಲ. ಆರ್.ಟಿ.ಪಿಎಸ್ ನಲ್ಲಿ ಉಲ್ಬಣಿಸಿರುವ ತಾಂತ್ರಿಕ ಸಮಸ್ಯೆ ನಿವಾರಣಿಗೆ ಹಣದ ಕೊರತೆ ಕಾಡುತ್ತಿದೆ.

MS Hiremath

Friday, July 6, 2012

ಡೈನಾಮಿಕ್ ಪಿಎಸ್ಐ ಬಾಳನಗೌಡ

 ಇಡೀ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಒತ್ತಡವಿರುವ ಹುದ್ದೆಯೆಂದರೆ, ಅದು ಪೊಲೀಸ್ ಪೊಲೀಸ್ ಸಬ್ ಇನ್ಸಪೆಕ್ಟರ್ (ಪಿಎಸ್ಐ) ಹುದ್ದೆ.. ಪೊಲೀಸ್ ಸ್ಟೇಷನ್ನಿನಲ್ಲಿ ಒರ್ವ ಪಿಸಿ ಯಾಗಿದ್ದರೆ, ಕಛೇರಿಯ ಕೆಲಸವನ್ನು ನೆಮ್ಮದಿಯಿಂದ ಮಾಡಿಕೊಂಡು ಹೋಗಬಹುದು! ಸಿಪಿಐ ಅಥವಾ ಅದರ ಮೇಲಿನ ಅಧಿಕಾರಿಗಳಾದರೆ, ಇನ್ನಷ್ಟು ನೆಮ್ಮದಿ. (ಕೆಲವೊಂದು ಸಂದರ್ಭಗಳನ್ನು ಹೊರತುಪಡಿಸಿ) ಆದರೆ, ಪಿಎಸ್ಐ ಆಗಿಬಿಟ್ಟರೆ 24 ಗಂಟೆ ಸಭೆ, ಗಸ್ತು, ಗಲಾಟೆ, ಅಪಘಾತ, ಬಂದೋಬಸ್ತ್, ಕೋಟರ್ು ಅಂತೆಲ್ಲ ಕಳೆಯಬೇಕಾಗುತ್ತದೆ. ಜೊತೆಗೆ ಯಾವಾಗಾದರೂ, ಒಮ್ಮೆ ಮೈಕ್ 1,2 ಹಾಗೂ 3 ಸಾಹೇಬರು ಕಛೇರಿಗೆ ಭೇಟಿ ನೀಡುತ್ತಾರೆಂದರೆ, ಅವರು ಬಂದು ಹೋಗುವ ತನಕ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಬೇಕು. ಇನ್ನೂ ಪೊಲೀಸ್ ಠಾಣಿ ಪ್ರಮುಖ ನಗರಗಳಿಗೆ ಹಾದು ಹೋಗುವ ರಸ್ತೆಯಲ್ಲಿತ್ತೆಂದರೆ, ಕಥೆಯೇ ಮುಗಿಯಿತು. ಇಷ್ಟೇಲ್ಲ ಕರ್ತವ್ಯವನ್ನು ನಿರ್ವಹಿಸಿಕೊಂಡು ಜನಸಾಮಾನ್ಯರು, ಮುಖಂಡರು, ರಾಜಕಾರಣಿಗಳು ಹಾಗೂ ಗ್ರಾಮಸ್ಥರ ಜೊತೆ ಎಲ್ಲಿಯೂ ತಾಳ್ಮೆ ಕಳೆದುಕೊಳ್ಳದೇ, ಅತ್ತ ಕಾನೂನು ವ್ಯವಸ್ಥೆಗೆ ದಕ್ಕೆಯಾಗದಂತೆ ಹೋಗುವುದು ಒರ್ವ ಪಿಎಸ್ಐ ಜವಾಬ್ದಾರಿ.
    ಇಂತಹ ಜವಾಬ್ದಾರಿಯನ್ನು ಹಲವು ಪಿಎಸ್ಐಗಳು ಯಶಸ್ವಿಯಾಗಿ ನೋಡಿಕೊಂಡು ಹೋಗಿ ಈಗ ಸಿಪಿಐ ಗಳಾಗಿದ್ದಾರೆ. ಅಂತವರಿಗೆ ಸಮಾಜ ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸಿದೆ. ಅಂತಹ ಕೆಲವು ಅಧಿಕಾರಿಗಳ ಸಾಲಿಗೆ ಸೇರುತ್ತಾರೆ ಬಳಗಾನೂರು ಠಾಣಿಯ ಪೊಲೀಸ್ ಸಬ್ ಇನ್ಸಪೆಕ್ಟರ್ ಬಾಳನಗೌಡ.
ಡೈನಾಮಿಕ್ ಪಿಎಸ್ಐ ಬಾಳನಗೌಡ ಎಂ.ಎಸ್
    2007ರಲ್ಲಿ ಸೇವೆಗೆ ಸೇರಿಕೊಂಡ ಪೊಲೀಸ್ ಸಬ್ಇನ್ಸ್ಪೆಕ್ಟರ್ ಬಾಳನಗೌಡ ಸೇವೆಯ ಮೊದಲ ವರ್ಷವನ್ನು ಮಲೆನಾಡಿನ ಆಗುಂಬೆ ಠಾಣಿಯಲ್ಲಿ ಮುಗಿಸಿ, ಈಗ್ಗೆ 1ವರ್ಷದಿಂದ ಬಯಲುಸೀಮೆಯ ಬಳಗಾನೂರು ಠಾಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
    ಮೂಲತಃ ಕೊಪ್ಪಳ ಜಿಲ್ಲೆ ಯಲಬುಗರ್ಾದವರಾದ ಇವರು, ಬಡತನ ಹಸಿವು ನಿರುದ್ಯೋಗವನ್ನು ಹತ್ತಿರದಿಂದ ಬಲ್ಲವರು. ಯಾಕೆಂದರೆ ಉತ್ತರ ಕನರ್ಾಟಕದ ಕೊಪ್ಪಳ ರಾಯಚೂರು ಜಿಲ್ಲೆಗಳು ಎಲ್ಲ ಸಂದರ್ಭಗಳಲ್ಲಿ ಬರಗಾಲ, ಹಸಿವು, ಆತ್ಮಹತ್ಯೆಗಳಲ್ಲಿ ಪ್ರಖ್ಯಾತಿಯನ್ನು ಹೊಂದಿರುವಂತಹವು. ಹಾಗಾಗಿ ಬಯಲುಸೀಮೆಯಲ್ಲಿ ವಾಸಿಸುವ ಜನರ ಕಷ್ಟಕಾರ್ಪಣ್ಯಗಳನ್ನು ಹೇಗಿರುತ್ತವೆ ಎಂಬುದರ ಬಗ್ಗೆ ಪಿಎಸ್ಐ ಬಾಳನಗೌಡ ಸಂಪೂರ್ಣ ಮಾಹಿತಿ ಹೊಂದಿದ್ದಾರೆ.
    ಪಿ.ಎಸ್.ಐ ಬಾಳನಗೌಡ, ಖಡಕ್ ಆಗಿ ಭಾರತದ ಪರಮೋಚ್ಛ ಸಂವಿಧಾನ, ಭಾರತೀಯ ದಂಡ ಸಂಹಿತೆ ಸೇರಿದಂತೆ ಎಲ್ಲ ವಿಭಾಗದ ಕಾನೂನು ನಿಯಮಗಳನ್ನು ಕರಗತ ಮಾಡಿಕೊಂಡು, ಪ್ರತಿಯೊಬ್ಬರ ಜೊತೆಯಲ್ಲಿ ಉತ್ತಮ ಬಾಂಧವ್ಯದಿಂದ ಸ್ಪಂದಿಸುತ್ತಿರುವುದು ಆ ಸ್ಥಾನದ ಕಾರ್ಯದಕ್ಷತೆಯನ್ನು ಎತ್ತಿ ತೋರಿಸುವಂತಿದೆ.
ಸಹಜವಾಗಿ ಅನ್ಯಾಯಕ್ಕೊಳಪಟ್ಟವರು ಮಾತ್ರ ಪೊಲೀಸ್ ಠಾಣಿಯ ಮೆಟ್ಟಿಲು ಹತ್ತುತ್ತಾರೆ. ಅವರಿಗೆ ಇಲ್ಲಿಯೇ ನ್ಯಾಯ ಸಿಗಬಹುದೆಂಬ ನಂಬಿಕೆ, ಭರವಸೆಯೂ ಇರುತ್ತದೆ. ಆ ಭರವಸೆಯ ಬೆಳಕು ಅಭಿವೃದ್ದಿಗೊಳ್ಳುವುದು, ಅಲ್ಲಿನ ಅಧಿಕಾರಿಗಳು ನ್ಯಾಯಸಮ್ಮತವಾಗಿ ಸಮಸ್ಯೆಯನ್ನು ಬಗೆಹರಿಸಿ ಕೊಟ್ಟಾಗ ಮಾತ್ರ.
    ಕೆಲವೊಮ್ಮೆ ದೂರು ನೀಡಲು ಬಂದವನ ಅಹವಾಲು ಅಲ್ಲಿನ ಅಧಿಕಾರಿಗಳು ಸ್ವೀಕರಿಸದೇ ಹೋದರೆ, ದೂರುದಾರನೇ ಅಪರಾಧಿಯಾಗುತ್ತಾನೆ! ಅದು ಆ ಠಾಣಿಯ ಪಿಎಸ್ಐ ಆತನ ಜೊತೆ ಸಂವಹನ ಮಾಡುವ ಕ್ರಿಯೆಯಿಂದ ಗೊತ್ತಾಗುತ್ತದೆ.
ಮೊನ್ನೆ 70 ವಯಸ್ಸಿನ ವೃದ್ದನೊರ್ವ ಬಳಗಾನೂರು ಠಾಣಿಗೆ ಬಂದಿದ್ದ. ಆತನದು ಕೌಟುಂಬಿಕ ಸಮಸ್ಯೆ. ವೃದ್ಧ ತನ್ನ ಬದುಕಿನಲ್ಲಿ ಎಂದೂ ಪೊಲೀಸ್ ಠಾಣಿ ಹತ್ತದಾತ. ಏಕಾಏಕಿ ಕೌಟುಂಬಿಕ ಸಮಸ್ಯೆ ಮನೆಯಲ್ಲಿ ಬಗೆಹರಿಯದಿದ್ದರಿಂದ ಅನಿವಾರ್ಯವಾಗಿ ಪೊಲೀಸ್ ಠಾಣಿಯತ್ತ ಹೆಜ್ಜೆ ಹಾಕಿದ್ದ.
    ವೃದ್ಧ ಕಛೇರಿಗೆ ಹೋದಾಗ ಸಾಹೇಬರು ಇರದಿದ್ದರಿಂದ, ಪಿಎಸ್ಐ ಬರುವಿಕೆಯನ್ನು ಕಾಯುತ್ತ ಕುಳಿತಿದ್ದ. ನಂತರ ಬಂದ ಪಿಎಸ್ಐ ಅವರು ತಕ್ಷಣವೇ, 70ರ ವೃದ್ಧನ ದಯನೀಯ ಸ್ಥಿತಿಯನ್ನು ನೋಡಿ, ಹೇಳಿ ಯಜಮಾನ್ರೇ.. ಬಂದೀರಲ್ಲ.. ಏನು ವಿಷಯ.. ಎಂದು ಸೌಜನ್ಯದಿಂದ ಕೇಳತೊಡಗಿದಾಗ, ವೃದ್ಧನು ತನಗಾದ ಅನ್ಯಾಯವನ್ನು ವಿವರಿಸಿದ.
    ಅದಕ್ಕೆ ಕೂಡಲೇ ಪಿಎಸ್ಐ ಬಾಳನಗೌಡ ಇದೊಂದು ಕೌಟುಂಬಿಕ ಸಮಸ್ಯೆ. ನೀವು ನೇರವಾಗಿ ಕೋಟರ್್ಗೆ ಹೋಗಿ, ಸಂಬಂಧಪಟ್ಟ ದಾಖಲೆಗಳನ್ನು ಕೋಟರ್ಿಗೆ ಕೊಟ್ಟರೆ, ಅಲ್ಲಿ ಸರಿಯಾದ ನ್ಯಾಯ ಸಿಗುತ್ತದೆ ಎಂದು ಹೇಳಿ,, ವೃದ್ಧನ ಜೊತೆಯಲ್ಲಿ ಹೋಗಿದ್ದ ಮುಖಂಡರಿಗೆ ಹಿಂದೂ ಮ್ಯಾರೇಜ್ ಆ್ಯಕ್ಟ್ ಮತ್ತು ವೃದ್ದನಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಇರುವ ಕಾನೂನಿನ ಹಲವು ನಿಯಮಗಳ ವಿವರಣಿಯನ್ನು ನೀಡಿ ಕಳುಹಿಸಿಕೊಟ್ಟರು.
    ಪಿಎಸ್ಐ ಮಾತಿನಿಂದ ಸಮಾಧಾನಪಟ್ಟ ವೃದ್ಧರು ಮತ್ತು ಮುಖಂಡರು ನಿಟ್ಟುಸಿರು ಬಿಡುತ್ತಾ, ಬಾಳನಗೌಡರ ವಾಕ್ಚಾತುರ್ಯ, ಅವರಲ್ಲಿರುವ ಜ್ಞಾನವನ್ನು ಕೊಂಡಾಡುತ್ತಾ ಊರಿಗೆ ಹೋದರು.
ಈ ಘಟನೆಯನ್ನು ಯಾಕಾಗಿ ಹೇಳಬೇಕಾಗಿದೆಯೆಂದರೆ, ಇಂದು ಅದೆಷ್ಟೋ ಕುಟುಂಬಗಳು, ತಮಗೆ ಪರಿವಿಲ್ಲದೇ, ಕಾನೂನಿನ ಮಹತ್ವ ಗೊತ್ತಿಲ್ಲದ ತಪ್ಪು ದಾರಿ ಹಿಡಿಯುತ್ತಿವೆ. ಶ್ರೇಣಿಕೃತ ವ್ಯವಸ್ಥೆಯಲ್ಲಿ ಕೌಟುಂಬಿಕ ಸಮಸ್ಯೆಗಳೇ ಮುಖ್ಯವಾಗಿ ಹೋಗಿ ಐಕ್ಯತೆ, ಒಗ್ಗಟ್ಟು, ಸಂಬಂಧಗಳು ಎಂಬುದು ಹಳಸಿ ಹೋಗುತ್ತಿದೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಗ್ರಾಮೀಣ ಪ್ರದೇಶದ ಜನರ ಬದುಕನ್ನು ಉಳ್ಳವರು ಹಸನಗೊಳಿಸುವ ಬದಲಿಗೆ ಕಲುಷಿತಗೊಳಿಸುತ್ತಿದ್ದಾರೆ. ಒಂದೊಂದು ಕುಟುಂಬಗಳಲ್ಲಿ ಎರಡೆರಡು ಗುಂಪುಗಳಾಗಿ ಮಾನವೀಯತೆಯೆಂಬುದೇ ಸಮಾಜದಲ್ಲಿ ಇಲ್ಲವೆಂಬತೆ ಭಾಸವಾಗುತ್ತಿದೆ.
    ಪರಿಸ್ಥಿತಿ ಹೀಗಿದ್ದಾಗ ನ್ಯಾಯ ಹರಸಿ ಬಂದವನಿಗೆ ಸರಿಯಾದ ಮಾಗರ್ೋಪಾಯಗಳನ್ನು ಹೇಳಿ ಕೊಡುವುದು ಕಾನೂನು ಬಲ್ಲವರ ಕರ್ತವ್ಯ. ಅಂತಹ ಕಾರ್ಯವನ್ನು ಬಾಳನಗೌಡರು ಮಾಡುತ್ತಿರುವದಕ್ಕೆ ಮೇಲಿನ ಉದಾಹರಣಿ ನೀಡಬೇಕಾಗಿ ಬಂತು.
    ಸುತ್ತ ಹತ್ತಾರು ಹಳ್ಳಿಗಳಲ್ಲಿ ಗಸ್ತು ಹಾಕುತ್ತಾ, ಕಾನೂನು ಸುವ್ಯವಸ್ಥೆಗೆ ಎಲ್ಲಿಯೂ ದಕ್ಕೆಯಾಗದಂತೆ, ಸಿಬ್ಬಂದಿ ಹಾಗೂ ಜನರ ಬಳಿ ಉತ್ತಮ ಬಾಂಧವ್ಯವನ್ನಿಟ್ಟುಕೊಮಡು ಕೆಲಸ ಮಾಡುತ್ತಿರುವ ಪಿಎಸ್ಐ ಅವರು ಮೊನ್ನೆಯೊಂದು ಪ್ರಕರಣವನ್ನು ಭೇದಿಸಿದರು. ಅದು ಸಿನಿಮಿಯ ರೀತಿಯಲ್ಲಾದರೂ, ಅಚ್ಚರಿಪಡಿಸುವಂತಹದ್ದು.
    ಬಳಗಾನೂರು ಠಾಣಿಯೂ ಸುಮಾರು 40ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ! ಗುಡದನೂರು, ಆಯನೂರು ಗ್ರಾಮಗಳು ಕೂಡ ಇದೇ ಠಾಣಿಯ ವ್ಯಾಪ್ತಿಗೆ ಬರುತ್ತವೆ.
    ಇತ್ತೀಚಿಗೆ ಠಾಣಾ ವ್ಯಾಪ್ತಿಯಲ್ಲಿ 30 ತೊಲೆ ಬಂಗಾರ ಕಳುವಾದ ಪ್ರಕರಣ ದಾಖಲಾಗಿತ್ತು. ಕೂಡಲೇ ಕಳ್ಳತನ ಮಾಡಿದ ವ್ಯಕ್ತಿ ಕುರಿತು ಸುಳಿವನ್ನು ಪಡೆದು, ಕಾರ್ಯಪ್ರವೃತ್ತರಾದ ಪಿಎಸ್ಐ ಮೊಬೈಲ್ ಟವರ್ಗಳ ಸಹಾಯದಿಂದ ಕಳ್ಳನನ್ನು ದೂರದ ಮಂತ್ರಾಲಯದಲ್ಲಿ ಹಿಡಿದು ತಂದರು. ನಂತರ ಕಳ್ಳನಿಂದ 30 ತೊಲೆ ಬಂಗಾರ ವಶಪಡಿಸಿಕೊಂಡು, ದೂರು ನೀಡಿದ್ದ ವ್ಯಕ್ತಿಗಳಿಗೆ ಬಂಗಾರವನ್ನು ಮರಳಿ ಕೊಟ್ಟರು.
    ಜನರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವಲ್ಲಿ ಸಾಕಷ್ಟು ಶ್ರಮಿಸುತ್ತಿರುವ ಪಿಎಸ್ಐ ಬಾಳನಗೌಡರು ಮುಂದಿನ ಮುಂದಿನ ದಿನಗಳಲ್ಲಿ ಠಾಣಾ ವ್ಯಾಪ್ತಿಯಲ್ಲಿ ಮೋಟಾರ್ ಚಾಲನಾ ಪರವಾನಿಗೆ ಕ್ಯಾಂಪ್ನ್ನು ಆಯೋಜಿಸಿ, ಎಲ್ಲರಿಗೂ ಚಾಲನಾ ಪರವಾನಿಗೆ ಕೊಡಿಸುವ ಇರಾದೆಯನ್ನು ಹೊಂದಿದ್ದಾರೆ.
    ಇವರ ಸಾಮಾಜಿಕ ಕಳಕಳಿಯ ಕಾರ್ಯಗಳು ಹೀಗೆಯೇ ಮುಂದುವರೆಯಲಿ ಎಂದು ಪತ್ರಿಕೆ ಹಾರೈಸುತ್ತದೆ.

ಅರಿದಡೆ ಶರಣ, ಮರೆದಡೆ ಮಾನವ,

ಉಂಬ ಬಟ್ಟಲು ಬೇರೆ ಕಂಚಲ್ಲ, ನೋಡುವ ದರ್ಪಣ ಬೇರೆ ಕಂಚಲ್ಲ,
ಭಾಂಡ ಒಂದೆ ಭಾಜನ ಒಂದೆ, ಬೆಳಗೆ ಕನ್ನಡಿ ಎನಿಸಿತ್ತಯ್ಯಾ.
ಅರಿದಡೆ ಶರಣ, ಮರೆದಡೆ ಮಾನವ,
ಮರೆಯದೆ ಪೂಜಿಸು ಕೂಡಲಸಂಗನ.
-ಬಸವಣ್ಣನವರು
    ಮನ್ ಎಂದರೆ ವಿಚಾರ ಮಾಡು ಎಂದು ಅರ್ಥ. ವಿಚಾರ ಮಾಡುವ ಶಕ್ತಿಯುಳ್ಳವನು ಮಾನವನಾಗುತ್ತಾನೆ. ವಿಚಾರಗಳ ಉತ್ಪತ್ತಿಗೆ ಪ್ರಜ್ಞೆ ಮೂಲವಾಗಿರುತ್ತದೆ. ಪ್ರಜ್ಞೆಗೆ ವಸ್ತು ಮೂಲವಾಗಿರುತ್ತದೆ. ವಸ್ತು ಎಂದರೆ ಇಡೀ ವಿಶ್ವ. ಕಣ್ಣಿಗೆ ಕಾಣುವಂಥವುಗಳೆಲ್ಲ ವಸ್ತುಗಳೇ. ನಕ್ಷತ್ರ, ಸೂರ್ಯ, ಚಂದ್ರ, ಸಮುದ್ರ, ಅರಣ್ಯ, ಪಶು, ಪಕ್ಷಿ ಮತ್ತು ಮಾನವರು ಹೀಗೆ ಕಣ್ಣಿಗೆ ಕಾಣುವ ಎಲ್ಲವೂ ಮತ್ತು ಎಲ್ಲರೂ ನಿಜವಾದ ಅರ್ಥದಲ್ಲಿ ವಸ್ತುರೂಪದಲ್ಲೇ ಇದ್ದೇವೆ. ವಸ್ತುವಿನಿಂದ ಪ್ರಜ್ಞೆಯು ರೂಪ ತಾಳುತ್ತದೆ. ಆ ಪ್ರಜ್ಞೆಯು ವಿಶ್ವದ ಎಲ್ಲ ವಸ್ತುಗಳನ್ನು ಅವರವರ ಅನುಭವಕ್ಕೆ ತಕ್ಕಂತೆ ಅವರ ಮನದಲ್ಲಿ ಮೂಡಿಸುತ್ತದೆ.
    ಹೀಗೆ ಪ್ರಜ್ಞೆಯು ವಸ್ತುಗಳನ್ನು ಗ್ರಹಿಸುವ ಶಕ್ತಿಯಾಗಿದೆ. ಪ್ರಜ್ಞೆಯ ಅಸ್ತಿತ್ವಕ್ಕೆ ವಸ್ತು ಇರಲೇ ಬೇಕು. ವಸ್ತು ಇಲ್ಲದೆ ಮಾನವ ಕಲ್ಪಿಸಲಾರ. ನಿಜ ಅರ್ಥದಲ್ಲಿ ಕಲ್ಪನೆ ಎಂಬುದು ವಸ್ತು ಅಥವಾ ವಸ್ತುಗಳ ಸಹಾಯದಿಂದಲೇ ಮೂಡುವಂಥದ್ದು. ಸ್ಪಿಂಕ್ಸ್ ಕೆತ್ತಿದ ಶಿಲ್ಪಿ ಸಿಂಹವನ್ನು ಮತ್ತು ಹೆಣ್ಣನ್ನು ನೋಡಿದವನಾಗಿರುತ್ತಾನೆ. ಕರಿಯ ಬಣ್ಣ ಮತ್ತು ಹುಲಿಯ ಹಿನ್ನೆಲೆಯೊಂದಿಗೇನೆ ಕಲಾವಿದ ಕರಿಹುಲಿಯ ಚಿತ್ರವನ್ನು ಬಿಡಿಸಿರುತ್ತಾನೆ. ಹೆಣ್ಣು ಮತ್ತು ಮತ್ಸ್ಯದ ವಾಸ್ತವದ ಹಿನ್ನೆಲೆ ಇಲ್ಲದೆ ಮತ್ಸ್ಯಕನ್ಯೆ ಮೂಡಿ ಬರಲಾರಳು. ತೆಂಗಿನ ಮರವಿಲ್ಲದೆ ಕಲ್ಪವೃಕ್ಷವಿಲ್ಲ. ಗೋವು ಇಲ್ಲದೆ ಕಾಮಧೇನು ಇಲ್ಲ. ಆನೆ ಇಲ್ಲದೆ ಐರಾವತ ಇಲ್ಲ. ಹೀಗೆ ಮಾನವನ ಕಲ್ಪನೆಯ ಹಿಂದೆ ವಸ್ತುಗಳು ಅಡಕವಾಗಿವೆ.
    ಭಿತ್ತಿ ಇಲ್ಲದೆ ಬರೆಯಬಹುದೆ ಚಿತ್ತಾರವ? ಎಂದು ಬಸವಣ್ಣನವರು ಪ್ರಶ್ನಿಸುತ್ತಾರೆ. ಭಿತ್ತಿಯಂಥ ಭೌತಿಕ ವಸ್ತುಗಳ ಸಹಾಯವಿಲ್ಲದೆ ಚಿತ್ರಗಳನ್ನು ಬಿಡಿಸಲಿಕ್ಕಾಗದು. ಭಿತ್ತಿಯು ಭೌತಿಕವಾದದ ಪ್ರತೀಕವಾದರೆ, ಚಿತ್ತಾರವು ಅನುಭಾವದ ಪ್ರತೀಕವಾಗಿದೆ. ಭಿತ್ತಿ ಇಲ್ಲದೆ ಚಿತ್ತಾರವಿಲ್ಲ. ಹಾಗೆಯೆ ಅನುಭವವಿಲ್ಲದೆ ಅನುಭಾವವಿಲ್ಲ. ವಸ್ತುವಿನ ಜೊತೆಗಿನ ಅನುಭವದ ಮೂಲಕ ಬರುವ ಪ್ರಜ್ಞೆಯು ಭೌತಿಕವಾದಕ್ಕೆ ಪುಷ್ಟಿ ಕೊಡುತ್ತದೆ. ಅನುಭವದ ಮೂಲಕ ಅನುಭಾವದ ಸೃಷ್ಟಿಯಾದಾಗ ಅರಿವು ಮೂಡುತ್ತದೆ. ಹೀಗೆ ಪ್ರಜ್ಞೆ ಎಂಬುದು ವಸ್ತುವಿನ ಗ್ರಹಿಕೆಯ ಮೂಲಕ ಬಂದರೆ, ಅರಿವು ಎಂಬುದು ವಸ್ತುವಿನ ಮೂಲ ಗ್ರಹಿಕೆಯ ಮೂಲಕ ಬರುವುದು. ಈ ಸತ್ಯವನ್ನು ಅರಿತವನೇ ಶರಣ. ಮರೆತವನೇ ಮಾನವ. ಅಂದರೆ ಗ್ರಹಿಕೆಯು ಸಾಮಾನ್ಯ ಮಾನವನ ಗುಣವಾಗಿದೆ. ವಸ್ತುವಿನ ಮೂಲಕ ಸೃಷ್ಟಿಯಾಗುವ ಪ್ರಜ್ಞೆಯೊಂದಿಗೆ ಭೌತಿಕ ಜೀವನ ಸಾಗುವುದರಲ್ಲಿ ಸಂಶಯವಿಲ್ಲ. ಪ್ರತಿಯೊಬ್ಬ ಮಾನವನು ಸಹಜವಾಗಿಯೆ ಇಂಥ ಪ್ರಜ್ಞೆಯಿಂದ ಬದುಕುತ್ತಾನೆ. ಆದರೆ ನೋಟದಿಂದ ಪ್ರಜ್ಞೆ ಪಡೆಯುವ ಶರಣ ಒಳನೋಟದಿಂದ ಅರಿವು ಪಡೆಯುತ್ತಾನೆ. ಹೀಗೆ ಒಳನೋಟವನ್ನು ಮರೆತವನು ಮಾನವನಾಗಿರುತ್ತಾನೆ. ಆದರೆ ಒಳನೋಟವನ್ನು ಅರಿತವನೇ ಶರಣನಾಗಿರುತ್ತಾನೆ ಎಂಬುದನ್ನು ಬಸವಣ್ಣನವರು ಮಾಮರ್ಿಕವಾಗಿ ಹೇಳಿದ್ದಾರೆ.
    ವಸ್ತು ಮತ್ತು ಮೂಲವಸ್ತುವಾದ ಚೈತನ್ಯ ಬೇರೆ ಬೇರೆ ಅಲ್ಲ. ಮ್ಯಾಟರ್ ಮತ್ತು ಎನಜರ್ಿ ಬೇರೆ ಬೇರೆ ಅಲ್ಲ ಎಂಬುದು ಇದರ ಅರ್ಥ. ವಿಜ್ಞಾನದ ಎನಜರ್ಿ ತತ್ತ್ವಜ್ಞಾನದಲ್ಲಿ ಸ್ಪಿರಿಟ್ ಎನಸಿಕೊಳ್ಳುತ್ತದೆ. ಮ್ಯಾಟರ್ ಎಂಬುದು ವಸ್ತುವಾದರೆ ಮೂಲವಸ್ತು ಎಂಬುದೇ ಎನಜರ್ಿ ಅಥವಾ ಸ್ಪಿರಿಟ್. ಮೂಲವಸ್ತುವಾದ ಚೈತನ್ಯದಿಂದಲೇ ವಸ್ತುವಿನ ನಿಮರ್ಾಣವಾಗಿದೆ ಎಂಬದರ ಕುರಿತು ಬಸವಣ್ಣನವರು ತಿಳಿಸಿದ್ದಾರೆ. ಇದನ್ನು ಅರಿತವನೇ ಶರಣನಾಗುತ್ತಾನೆ. ಈ ಜ್ಞಾನವಿಲ್ಲದವನು ಬರಿ ಮಾನವನಾಗಿ ಭೌತಿಕ ವಸ್ತುಗಳ ಜೊತೆಗೆ ಜೀವನ ಸಾಗಿಸುತ್ತಾನೆ.   
    ಉಂಬ ಬಟ್ಟಲು ಬೇರೆ ಕಂಚಲ್ಲ, ನೋಡುವ ದರ್ಪಣ ಬೇರೆ ಕಂಚಲ್ಲ, ಭಾಂಡ ಒಂದೆ ಭಾಜನ ಒಂದೆ, ಬೆಳಗೆ ಕನ್ನಡಿ ಎನಿಸಿತ್ತಯ್ಯಾ. ಎಂದು ಬಸವಣ್ಣನವರು ತಿಳಿಸಿದ್ದಾರೆ. ಉಣ್ಣುವ ಗಂಗಾಳವನ್ನು ಕಂಚಿನಂದ ಮಾಡುತ್ತಾರೆ. ಮುಖ ನೋಡಿಕೊಳ್ಳವ ಕನ್ನಡಿಯನ್ನು ಕೂಡ ಕಂಚಿನಿಂದಲೇ ತಯಾರಿಸುತ್ತಾರೆ. ಹೀಗೆ ಉಣ್ಣುವ ಗಂಗಾಳ ಮತ್ತು ಮುಖ ನೋಡಿಕೊಳ್ಳುವ ಕನ್ನಡಿ ಬೇರೆ ಬೇರೆ ವಸ್ತುಗಳಾದರೆ. ಮೂಲ ವಸ್ತುವಾದ ಕಂಚು ಒಂದೇ ಆಗಿದೆ. ಅಡುಗೆ ಮಾಡುವ ಪಾತ್ರೆಯನ್ನು ಕಂಚಿನಿಂದಲೇ ತಯಾರಿಸುತ್ತಾರೆ. ಅದೇ ರೀತಿ ಊಟದ ಗಂಗಾಳ ಕೂಡ ಕಂಚಿನಿಂದಲೇ ತಯಾರಿಸುತ್ತಾರೆ. ಅದೇ ಕಂಚಿನ ತುಕಡಿಯನ್ನು ತಿಕ್ಕಿ ತಿಕ್ಕಿ ನುಣುಪುಗೊಳಿಸಿ ಕನ್ನಡಿ ತಯಾರಿಸುತ್ತಾರೆ. ಹೀಗೆ ಮೂಲವಸ್ತುವಾದ ಕಂಚು ವಿವಿಧ ರೀತಿಯ ರೂಪು ಪಡೆಯುವುದರ ಮೂಲಕ ಅಡುಗೆ ಪಾತ್ರೆ, ಊಟದ ಗಂಗಾಳ ಮತ್ತು ಮುಖ ನೋಡಿಕೊಳ್ಳುವ ಕನ್ನಡಿಯಾಗುತ್ತದೆ.
    ಈ ರೀತಿ ಜಗತ್ತು ರೂಪುಗೊಳ್ಳುವ ಕ್ರಮವನ್ನು ಬಸವಣ್ಣನವರು ಅರುಹಿದ್ದಾರೆ. ಬಸವಣ್ಣನವರ ಸಿದ್ಧಾಂತ ಬಯಲು ಸಿದ್ಧಾಂತವಾಗಿದೆ. ಬಯಲಿನಂದ ಸೃಷ್ಟಿಯಾದುದು ಬಯಲಲ್ಲೇ ಲಯವಾಗುತ್ತದೆ. ಬಯಲು ಎಂಬುದೇ ಮೂಲವಸ್ತು. ಈ ಬಯಲನ್ನು ಶೂನ್ಯ ಅಥವಾ ಚೈತನ್ಯ ಎಂದೂ ಕರೆಯುತ್ತಾರೆ. ಇದುವೆ ಸ್ಪಿರಿಟ್ ಅಥವಾ ಎನಜರ್ಿ. ಈ ಮೂಲವಸ್ತುವಿನಿಂದಲೇ ನಕ್ಷತ್ರಗಳು, ಸೂರ್ಯ, ಚಂದ್ರ, ಪೃಥ್ವಿ ಮುಂತಾದ ಆಕಾಶಕಾಯಗಳ ನಿಮರ್ಾಣವಾಗಿದೆ. ಮಾನವರು, ಪ್ರಾಣಿ, ಪಕ್ಷಿ, ಕ್ರಿಮಿ, ಕೀಟ, ಗಿಡಮರಬಳ್ಳಿಗಳು, ನದಿ ಮತ್ತು ಸಮುದ್ರಗಳು ಹೀಗೆ ಪೃಥ್ವಿಯಲ್ಲಿ ಕಾಣುವುದೆಲ್ಲವೂ ಪೃಥ್ವಿಯಿಂದಲೇ ಜನ್ಮ ತಾಳಿದ್ದಾಗಿರುತ್ತವೆ. ಆದರೆ ಪೃಥ್ವಿ ಸಮೇತ ಇಡೀ ವಿಶ್ವವು ಬಯಲೆಂಬ ಚೈತನ್ಯದಿಂದ ಸೃಷ್ಟಿಯಾಗಿದೆ. ಸೂರ್ಯ, ಚಂದ್ರ ತಾರೆಗಳ ಸಮೇತ ಕಾಣುವುದೆಲ್ಲವೂ ಒಂದಿಲ್ಲ ಒಂದು ದಿನ ಲಯವಾಗಿ ಮೂಲವಸ್ತುವಾದ ಚೈತನ್ಯದಲ್ಲಿ ಒಂದಾಗಲೇ ಬೇಕು. ಇದನ್ನು ಅರಿತವನೇ ಶರಣ. ಮರೆತವನೇ ಮಾನವ. ಆದ್ದರಿಂದಲೇ ಮರೆಯದೆ ಪೂಜಿಸು ಕೂಡಲಸಂಗನ ಎಂದು ಬಸವಣ್ಣನವರು ಹೇಳಿದ್ದಾರೆ. ಬಸವಣ್ಣನವರ ಪೂಜೆಯು ಮೂಲವಸ್ತುವನ್ನು ಅರಿತುಕೊಳ್ಳುವ ಕ್ರಮವಾಗಿದೆ.
ಬಯಲ ರೂಪ ಮಾಡಬಲ್ಲಾತನೆ ಶರಣನು;
ಆ ರೂಪ ಬಯಲು ಮಾಡಬಲ್ಲಾತನೆ ಲಿಂಗಾನುಭಾವಿ.
ಬಯಲ ರೂಪ ಮಾಡಲರಿಯದಿದ್ದಡೆ ಎಂತು     ಶರಣನೆಂಬೆ?
ಆ ರೂಪ ಬಯಲ ಮಾಡಲರಿಯದಿದ್ದಡೆ ಎಂತು ಲಿಂಗಾನುಭಾವಿ ಎಂಬೆ?
ಈ ಉಭಯ ಒಂದಾದಡೆ ನಿಮ್ಮಲ್ಲಿ ತೆರಹುಂಟೆ
ಕೂಡಲಸಂಗಮದೇವಾ.
    ಎಂದು ಬಸವಣ್ಣನವರು ಹೇಳುವಲ್ಲಿ ಈ ಅರಿವಿನ ವಿರಾಟ ಸ್ವರೂಪವನ್ನು ತೋರಿಸಿಕೊಟ್ಟಿದ್ದಾರೆ. ಚೈತನ್ಯದಿಂದ ವಸ್ತುವಾಗಿರುವುದನ್ನು ಅರಿತವನೇ ಶರಣ. ಆ ವಸ್ತು ಲಯವಾಗಿ ಮತ್ತೆ ಚೈತನ್ಯವಾಗುತ್ತದೆ ಎಂಬುದನ್ನು ಅರಿತವನೇ ಲಿಂಗತತ್ತ್ವವನ್ನು ಸಾಕ್ಷಾತ್ಕರಿಸಿಕೊಂಡ ಲಿಂಗಾನುಭಾವಿ. ಚೈತನ್ಯವನ್ನು ವಸ್ತುರೂಪದಲ್ಲಿ ಕಂಡುಕೊಂಡು ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವಾತನೇ ಶರಣ. ಶಿವ ಎಂಬುದೇ ಚೈತನ್ಯ. ಆ ಚೈತನ್ಯದಿಂದ ರೂಪ ತಳೆದ ಸಕಲ ಜೀವಾತ್ಮರು ಶಿವಸ್ವರೂಪಿಗಳೇ ಆಗಿದ್ದಾರೆ. ಆದ್ದರಿಂದ ಲೋಕದಲ್ಲಿ ಸರ್ವಸಮತ್ವವನ್ನು ಅರಿತವನು ಶರಣ ಎಂದು ಕರೆಯಿಸಿಕೊಳ್ಳುವನು. ಆತ ಹೀಗೆ ಬದುಕನ್ನು ಅಥರ್ೈಸಿಕೊಳ್ಳದಿದ್ದರೆ ಅವನಗೆ ಶರಣನೆಂದು ಕರೆಯಲಿಕ್ಕಾಗದು. ಈ ವಿಶ್ವ ಮತ್ತೆ ತನ್ನ ರೂಪವನ್ನು ಕಳೆದುಕೊಂಡು ಬಯಲಾಗುವುದು ಎಂಬ ಅಂತಿಮ ಸತ್ಯವನ್ನು ಅರಿತ ಶರಣನೇ ಲಿಂಗಾನುಭಾವಿಯಾಗುತ್ತಾನೆ. ಲಿಂಗತತ್ತ್ವವು ವಿಶ್ವದ ಆದಿ ಮತ್ತು ಅಂತ್ಯದ ಪರಿಜ್ಞಾನವನ್ನು ಕೊಡುವ ತತ್ತ್ವವಾಗಿದೆ. ಇವುಗಳ ಮಧ್ಯೆ ಇರುವ ಬದುಕನ್ನು ಲಿಂಗಾಂಗ ಸಾಮರಸ್ಯದೊಂದಿಗೆ ಅರ್ಥಪೂರ್ಣಗೊಳಿಸುವ ಕ್ರಮವನ್ನು ಲಿಂಗತತ್ತ್ವ ಸಾರುತ್ತದೆ. ಲಿಂಗವೇ ಚೈತನ್ಯ. ಅಂಗವೇ ನಮ್ಮ ದೇಹ ಎಂಬ ವಸ್ತು. ಇವುಗಳ ಮಧ್ಯದ ಅಂದರೆ ಶಿವ ಮತ್ತು ಜೀವರ ಮಧ್ಯದ ಸಾಮರಸ್ಯವೇ ಲಿಂಗಾಂಗ ಸಾಮರಸ್ಯ. ಹೀಗೆ ಲಿಂಗಾಂಗ ಸಾಮರಸ್ಯ ಹೊಂದಿದವರು ಪ್ರಸಾದಕಾಯರಾಗುತ್ತಾರೆ. ಇಂಥ ಲಿಂಗಾಂಗ ಸಾಮರಸ್ಯವನ್ನು ಹೊಂದಿದವರೇ ಲಿಂಗಾನುಭಾವಿಗಳು. ಎಲ್ಲವೂ ಲಯವಾಗುವ ಅಂತಿಮ ಸತ್ಯವನ್ನು ಅರಿಯಲು ಲಿಂಗಾಂಗಸಾಮರಸ್ಯ ಅವಶ್ಯವಾಗಿದೆ. ರೂಪ ಲಯವಾಗಿ ಬಯಲಾಗುವ ಅಂತಿಮ ಸತ್ಯವನ್ನು ಅರಿಯದವರು ಲಿಂಗಾನುಭಾವಿಗಳಾಗಲು ಸಾಧ್ಯವಿಲ್ಲ. ಇಂಥ ಬಯಲು ಮತ್ತು ರೂಪ ಒಂದಾಗಿರುವುದನ್ನು ಅರಿತುಕೊಂಡಾಗ ಶಿವ ಮತ್ತು ಜೀವರಲ್ಲಿ ಅಭೇದ್ಯ ಉಂಟಾಗುವುದು. ಈ ಸತ್ಯವನ್ನು ಅರಿತುಕೊಂಡವರು ಶರಣರಾಗುತ್ತಾರೆ; ಮರೆತವರು ಮಾನವರಾಗಿ ಸುಮ್ಮನೆ ಬದುಕಿ ಸತ್ತುಹೋಗುತ್ತಾರೆ.

ರಂಜಾನ್ ದಗರ್ಾ
ನಿದರ್ೇಶಕ,
ವಚನ ಅಧ್ಯಯನ ಕೇಂದ್ರ, ಬಸವ ಸೇವಾ ಪ್ರತಿಷ್ಠಾನ ಶರಣ ಉದ್ಯಾನ, ಶರಣ ನಗರ ಬೀದರ -585401
ಮೊಬೈಲ್: 9242470384

ನಂದಿಕೋಲ್ಮಠರಿಗೆ ರಾಜ್ಯಪ್ರಶಸ್ತಿಯ ಗರಿ

ಕಳೆದ 16 ವರ್ಷಗಳಿಂದ ಪ್ರಜಾವಾಣಿ ದಿನಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತ ಬಂದಿರುವ ವೃತ್ತಿಯಿಂದ ವಕೀಲರಾದ ಬಿ.ಎ. ನಂದಿಕೋಲಮಠ ಅವರು ತಮ್ಮದೆ ಆದ ಬರವಣಿಗೆಯ ಶೈಲಿಯನ್ನು ಹೊಂದಿದ್ದಾರೆ. ಅವರ ದಿಟ್ಟತನ ಹಾಗೂ ವೈಜ್ಞಾನಿಕ ವರದಿಗಳಿಗೆ ಕಾರ್ಯನಿರತ ಪತ್ರಕರ್ತರ ಸಂಘ ಸೇರಿದಂತೆ ಹಲವು ಸಂಘಸಂಸ್ಥೆಗಳು ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.
    ಗ್ರಾಮೀಣ ವರದಿಗಾರಿಕೆ, ನಮ್ಮ ಊರು ನಮ್ಮ ಜಿಲ್ಲೆ, ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತಹ ಸುದ್ದಿಗಳನ್ನು ಬರೆಯುತ್ತಾ ಜನರ ಮನದಲ್ಲಿದ್ದಾರೆ. ಅವರ ಬರವಣಿಗೆಯ ಶೈಲಿಗೆ ಸಾಕಷ್ಟು ಓದುಗರು ಮಾರುಹೋಗಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಗ್ರಾಮೀಣ, ಮಾನವೀಯ ಮೌಲ್ಯಗಳ ಮೇಲೆ ಬೆಳಕು ಚೆಲ್ಲುವ ವರದಿಗಳನ್ನು ಮಾಡಿದ್ದಾರೆ. ಅವರ ನಿಷ್ಟುರತೆಗೆ ಸಂದ ಗೌರವವಾಗಿ ಈಗ ಮತ್ತೊಮ್ಮೆ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದೆ.
    ಒಂದು ಬಾರಿ ಕ್ಯಾಮೆರಾ ಕ್ಲಿಕ್ ಆದರೆ ಅದಕ್ಕೆ ಸಂಬಂಧಿಸಿದ ಸುದ್ದಿ ಸಂಗ್ರಹಿಸಿ ವರದಿ ಮಾಡುವ ಅವರ ಕಠಿಣ ಪರಿಶ್ರಮಕ್ಕೆ ರಾಜ್ಯ ಮಟ್ಟದ ಪ್ರಶಸ್ತಿಯ ಗರಿ ದಿಟ್ಟತನಕ್ಕೆ ಸಂದ ಗೌರವವಾಗಿದೆ ಎಂಬುದು ಅವರ ಸ್ನೇಹಿತರ ನುಡಿ.
    1966ರಲ್ಲಿ ಲಿಂಗಸುಗೂರ ತಾಲ್ಲೂಕಿನ ಆನೆಹೊಸೂರು ಗ್ರಾಮದಲ್ಲಿ ವೈದ್ಯ ಅಮರಯ್ಯ ನಂದಿಕೋಲಮಠ, ಸಂಗನಬಸಮ್ಮ ಅವರ ಮಗನಾಗಿ ಬಸವರಾಜು ಬೆಳೆದು ನಿಂತಿದ್ದಾರೆ. ಅವರ ತಂದೆಯವರ ಸಮಯ ಪ್ರಜ್ಞೆ, ನಿಷ್ಠುರತೆಗಳನ್ನೆ ಮೈಗೂಡಿಸಿಕೊಂಡು ಬಂದಿರುವ ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಗ್ರಾಮೀಣ ಪ್ರದೇಶದಲ್ಲಿ ಮುಗಿಸಿ, ಲಿಂಗಸುಗೂರಿನಲ್ಲಿ ಕಾಲೇಜು ಶಿಕ್ಷಣ ಪಡೆದು, ಕಾನೂನು ಪದವಿಯನ್ನು ಗುಲಬರ್ಗ ವಿಶ್ವವಿದ್ಯಾನಿಲಯದಿಂದ ಪಡೆದಿದ್ದಾರೆ.
    1992ರಲ್ಲಿ ಲಿಂಗಸುಗೂರಿನಲ್ಲಿ ಹಿರಿಯ ನ್ಯಾಯವಾದಿ ಎಸ್.ಪಿ. ಪಾಟೀಲ ಅವರಲ್ಲಿ ತಮ್ಮ ವಕೀಲ ವೃತ್ತಿಯನ್ನು ಆರಂಭಿಸಿದರು. 1994-95 ರಿಂದ ಹಲವು ಸ್ಥಳೀಯ ಪತ್ರಿಕೆಗಳಿಗೆ ಹವ್ಯಾಸಿ ಪತ್ರಕರ್ತರಾಗಿ ಕೆಲಸ ಮಾಡುತ್ತಾ, 1997 ರಿಂದ ರಾಜ್ಯಮಟ್ಟದ ವಿಶ್ವಾಸಾರ್ಹ ಪತ್ರಿಕೆಯಲ್ಲಿ ಪ್ರಜಾವಾಣಿಯಲ್ಲಿ ವರದಿಗಾರರಾಗಿ ನೇಮಕಗೊಂಡರು. ಪ್ರಜಾವಾಣಿ ಪತ್ರಿಕೆಯ ಸಿದ್ಧಾಂತಗಳನ್ನು ಮನಸಾರೆ ಒಪ್ಪಿಕೊಂಡ ಅವರು ಜನಸಾಮಾನ್ಯರ ಧ್ವನಿಯಾಗಿ, ಸಮಸ್ಯೆಗಳನ್ನು ಹುಡುಕಿಕೊಂಡು ಹೋಗುತ್ತಾ, ವಾಸ್ತವವನ್ನು ಕಣ್ಣಿಗೆ ಕಟ್ಟುವಂತೆ ಬರೆಯುವ ಮೂಲಕ ತಮ್ಮ ಪತ್ರಿಕಾ ವರದಿಗಾರರ ವೃತ್ತಿಯನ್ನು ಆರಂಭಿಸಿದರು. ಕೆಲವೊಂದು ಬಾರಿ ತಮ್ಮ ನೈಜ ವರದಿಗಳಿಂದ ಕೆಲವು ಪ್ರತಿಷ್ಠಿತರ ಕೆಂಗೆಣ್ಣಿಗೆ ಗುರಿಯಾಗಿ ಸಂಕಷ್ಟಕ್ಕೆ ಸಿಲುಕಿದ ಪ್ರಸಂಗಗಳು ಬಂದವು.
    ಯಾವುದೇ ಒಂದು ಸುದ್ದಿ ಮಾಡಬೇಕಾದರೆ ಸ್ವತಃ ಆ ಸ್ಥಳಗಳಿಗೆ ಭೇಟಿ ನೀಡಿ, ಖುದ್ದಾಗಿ ವರದಿ ಸಂಗ್ರಹಿಸಿ ಜನಸಾಮಾನ್ಯರಿಗೆ ತಿಳಿಯುವ ಹಾಗೆ ವರದಿ ಮಾಡುತ್ತ ಬಂದಿರುವ ಇವರಿಗೆ ಕನರ್ಾಟಕ ರಕ್ಷಣಾ ವೇದಿಕೆ, ಕನರ್ಾಟಕ ದಲಿತ ಸಂಘರ್ಷ ಸಮಿತಿ, ಟಿಪ್ಪುಸುಲ್ತಾನ ಸಂಘಟನೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಇವರ ವರದಿಗಾರಿಕೆಯನ್ನು  ಮೆಚ್ಚಿ ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸುತ್ತಾ ಬಂದಿವೆ. ಪತ್ರಿಕೋದ್ಯಮದ ಬಗ್ಗೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಉಪನ್ಯಾಸ ನೀಡುವ ಮೂಲಕ ವಾಕ್ಚಾತುರ್ಯತೆಯಲ್ಲಿಯೂ ಸೈ ಎನ್ನಿಸಿಕೊಂಡಿದ್ದಾರೆ.
    ಕನರ್ಾಟಕ ಮೀಡಿಯಾ ಆ್ಯಂಡ್ ನ್ಯೂಸ್ ಸೆಂಟರ್ ಪತ್ರಕರ್ತರ ವೇದಿಕೆ ಪ್ರತಿ ವರ್ಷ ಕೊಡ ಮಾಡುವ "ಹೂಗಾರ ಸ್ಮಾರಕ ಮಾಧ್ಯಮ ಪ್ರಶಸ್ತಿ"ಗೆ ಪ್ರಸಕ್ತ ವರ್ಷ ಬಿ.ಎ ನಂದಿಕೋಲಮಠ ಅವರನ್ನು ಆಯ್ಕೆ ಮಾಡಿ, ಜುಲೈ 1ರಂದು ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

Sunday, July 1, 2012

ಬಂಡವಾಳಶಾಹಿಯನ್ನು ಬಲಪಡಿಸುವ ಪಾಸಿಟಿವ್ ಥಿಂಕಿಂಗ್ ಸ್ವಾಮಿಗಳು

    ಕಳೆದ ಭಾನುವಾರ 17-6-12 ರಂದು  ಸಂವಹನ ಆಯೋಜಿಸಿದ್ದ ಕವಿ ವೀರಣ್ಣ ಮಡಿವಾಳರ ಅಭಿನಂದನಾ ಸಮಾರಂಭದಲ್ಲಿ ಮಾತಾಡುತ್ತಾ ಹಿರಿಯ ಪತ್ರಕರ್ತ ದಿನೇಶ್ ಅಮೀನ ಮಟ್ಟು ಅವರು ಸಿಟ್ಟು ಅನ್ನುವುದೂ ಒಂದು ಮೌಲ್ಯವಾಗಿ ಎಷ್ಟು ಮುಖ್ಯ ಎಂದು ಮಾತಾಡಿದ್ದರು. ಎಲ್ಲವನ್ನೂ ಅದು ಇರುವುದು ಹಾಗೇ, ಅದರ ಬಗ್ಗೆ ಅಸಮಾಧಾನ ತಾಳಿ ನಮ್ಮ ಮನಸ್ಸು ಏಕೆ ಕೆಡಿಸಿಕೊಳ್ಳೋಣ ಎಂದು ಭಾವಿಸಿದರೆ ಹುಸಿ ನೆಮ್ಮದಿ ನಮ್ಮದಾಗಬಹುದು. ಆದರೆ ಸಮಾಜ ಒಂದಂತೂ ಮುಂದೆ ಸಾಗಿರುವುದಿಲ್ಲ. ಅನ್ಯಾಯದ ವಿರುದ್ಧ ಕ್ರೋಧ, ಅವ್ಯವಸ್ಥೆಯ ಬಗ್ಗೆ ಅಸಮಾಧಾನ, ಅದು ಪ್ರತಿಭಟನೆಯಾಗಿ ಹೊರಹೊಮ್ಮುವುದು ಆರೋಗ್ಯವಂತ ಪ್ರಜಾಪ್ರಭುತ್ವದಲ್ಲಿ ಬಹಳ ಮುಖ್ಯ. ಆದರೆ ಇಂದಿನ ಆಧ್ಯಾತ್ಮಿಕ ಗುರುಗಳು ಬೋಧಿಸುವುದು ಇದಕ್ಕೆ ತದ್ವಿರುದ್ಧವಾದದ್ದು. ಕೂಲ್ ಆಗಿರಿ, ಕಾಮ್ ಆಗಿರಿ? ಪರಿಸ್ಥಿತಿಯನ್ನು ಹಾಗೇ ಒಪ್ಪಿಕೊಳ್ಳಿ?
    ಹಲವು ವರ್ಷದ ಹಿಂದೆ ನಾನು ವಿದ್ಯಾಥರ್ಿಯಾಗಿದ್ದಾಗ ಇಂದಿನ ಜಗದ್ವಿಖ್ಯಾತ ಗುರೂಜಿಯೊಬ್ಬರ ಬಳಿ ಕೋಸರ್್ ಒಂದಕ್ಕೆ ಸೇರಿದ್ದೆ. ಯೋಗ, ಪ್ರಾಣಾಯಾಮ ಎಲ್ಲ ಮುಗಿದ ಬಳಿಕ ಬದುಕುವ ಕಲೆಯ ಭಾಗವಾಗಿ ಒಂದಿಷ್ಟು ಟಿಪ್ಸ್ಗಳನ್ನು ಅವರು ನೀಡುವ ಕಾರ್ಯಕ್ರಮವಿರುತ್ತದೆ. ಅಲ್ಲಿನ ಎರಡೇ ಎರಡು ಟಿಪ್ಸ್ ಗಮನಿಸಿ. ಒಂದು, ಂಛಿಛಿಜಠಿಣ ಣಜ ಣಣಚಿಣಠಟಿ ಚಿ ಣ . ಇನ್ನೊಂದು ಜಥಠಿಜಛಿಣಚಿಣಠಟಿ ಡಿಜಜಣಛಿಜ ರಿಠಥಿ ಈ ಎರಡು ಹೇಳಿಕೆಗಳು ನನ್ನ ತಲೆ ಕೆಡಿಸಿದ್ದವು. ಏಕೆ ಪರಿಸ್ಥಿತಿಯನ್ನು ಯಾವಾಗಲೂ ಅದು ಇರುವ ಹಾಗೇ ಒಪ್ಪಿಕೊಳ್ಳಬೇಕು? ಒಬ್ಬ ಮಹಿಳೆಗೆ, ಒಬ್ಬ ದಲಿತನಿಗೆ ಹಾಗೆ ಭಾವಿಸುವುದು ಸಾಧ್ಯವೇ? ನಿರೀಕ್ಷೆ ಇಲ್ಲದಾಗಲೇ ಅಲ್ಲವೇ ನಾವು ಇರುವ ಸ್ಥಿತಿಯನ್ನು ಅನಿವಾರ್ಯವೆಂಬಂತೆ ಒಪ್ಪುವುದು?
    ನೀವು ಇಂದಿನ ಯಾವುದೇ ಹೈಟೆಕ್ ಗುರೂಜಿಗಳನ್ನು ತೆಗೆದುಕೊಳ್ಳಿ. ಅವರು ಇವನ್ನೇ ಒಂದಲ್ಲ ಒಂದು ಬಗೆಯಲ್ಲಿ ಹೇಳುವವರಾಗಿರುತ್ತಾರೆ. ಅವರು ಯಥಾಸ್ಥಿತಿವಾದಿಗಳು. ಅವರ ಬಳಿಗೆ ಬರುವವರೂ ಆಥರ್ಿಕವಾಗಿ ತುಸು ಉತ್ತಮಮಟ್ಟದಲ್ಲಿದ್ದು ಕ್ಷಣದ ಒತ್ತಡ ಕಳೆದುಕೊಳ್ಳ ಬಯಸುವವರು. ಒಬ್ಬ ರೈತನನ್ನು, ಒಬ್ಬ ತರಕಾರಿ ಮಾರುವವ ನನ್ನು, ದಿನಪತ್ರಿಕೆ ಮಾರುವವನನ್ನು ಅವರ ಬಳಿ ನೋಡುವುದು ಸಾಧ್ಯವಿಲ್ಲ. ಎಲ್ಲರೂ ಚೆನ್ನಾಗಿ ಓದಿದವರು, ಮೇಲ್ವರ್ಗದವರು, ಹಣ ಉಳ್ಳವರು.
    ಜಾಗತೀಕರಣದ ನಂತರದ ಕಾಲಮಾನದಲ್ಲಿ ಬಂಡವಾಳಶಾಹಿ ಗಟ್ಟಿಗೊಳ್ಳುತ್ತಿರುವುದಕ್ಕೂ ಈ ಹೈಟೆಕ್ ಸ್ವಾಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಲೆಯೆತ್ತಿರುವುದಕ್ಕೂ ನೇರಾನೇರ ಸಂಬಂಧವಿದೆ. ಇವರು ಇಲ್ಲಿನ ಹೈಟೆಕ್ ಜನರ ಗುರುಗಳಾಗಿರುವುದೂ ಅಮೆರಿಕ ಮುಂತಾದ ದೇಶಗಳಲ್ಲಿ ಜನಪ್ರಿಯರಾಗಿರುವುದೂ ಆಕಸ್ಮಿಕವೇನಲ್ಲ. ಇವರು ಪರಿಸ್ಥಿತಿಯನ್ನು ಒಪ್ಪಿಕೊಳ್ಳುವಂತೆ ಕಲಿಸುವ ಪಾಠ ಕಂಪೆನಿಗಳನ್ನು ಬಲಪಡಿಸುತ್ತದೆ. ಅವರು ಎಷ್ಟೇ ಗಂಟೆ ತಮ್ಮ ಕ್ಯೂಬಿಕಲ್ಗಳಲ್ಲಿ ಕಳೆಯಬೇಕಾಗಿ ಬಂದರೂ ದನಿಯೆತ್ತುವುದನ್ನೇ ಮರೆತು ದುಡಿಯುತ್ತಾರೆ. ಸ್ಟ್ರೆಸ್ ಆದಾಗ ರಿಲಾಕ್ಸ್ ಆಗಲು ಉಸಿರು ಬಿಡುವ-ಎಳೆದುಕೊಳ್ಳುವ ತಂತ್ರಗಳನ್ನು ಇದೇ ಸ್ವಾಮೀಜಿಗಳು ಅವರಿಗೆ ಹೇಳಿಕೊಟ್ಟಿರುತ್ತಾರೆ. ವೀಕೆಂಡ್ ಧ್ಯಾನಮೇಳಗಳು ಮತ್ತೆ ವಾರಪೂತರ್ಿ ಅವರನ್ನು ಮೂಗೆತ್ತಿನಂತೆ ದುಡಿಯಲು ಹುರಿದುಂಬಿಸುತ್ತವೆ. ಒಂದು ರೀತಿಯಲ್ಲಿ ಹೊಸ ಬಗೆಯ ಜೀತ, ಗುಲಾಮೀ ಸಂಸ್ಕೃತಿಯನ್ನು ಬಲಪಡಿಸುವುದರಲ್ಲಿ ಇವರು ಕೈಲಾದ ಕೊಡುಗೆ ನೀಡುತ್ತಾ ಬರುತ್ತಿದ್ದಾರೆ.
    ಬಾರ್ಬರಾ ಎರೆನ್ರೀಚ್ ಎಂಬ ಮಹಿಳೆ ಸ್ಮೈಲ್ ಆರ್ ಡೈ: ಹೌ ಪೊಸಿಟಿವ್ ಥಿಂಕಿಂಗ್ ಫೂಲ್ಡ್ ಅಮೆರಿಕಾ ಅಂಡ್ ದ ವಲ್ಡರ್್ ಎಂಬ ಕೃತಿಯಲ್ಲಿ ಇದನ್ನು ತುಂಬಾ ಚೆನ್ನಾಗಿ ವಿಮಶರ್ೆಗೊಳಪಡಿಸುತ್ತಾರೆ. ಪೊಸಿಟಿವ್ ಆಗಿ ಯೋಚಿಸುವ ವ್ಯಕ್ತಿ ಎಂದರೆ ಆತ ಸದಾ ಹಸನ್ಮುಖಿಯಾ ಗಿರಬೇಕು, ಏನನ್ನೂ ದೂರಬಾರದು, ಹೆಚ್ಚು ವಿಮಶರ್ಾತ್ಮಕವಾಗಿರಬಾರದು, ಮೇಲಾಧಿಕಾರಿ ಹೇಳಿದ್ದಕ್ಕೆ ಎದುರಾಡದೆ ಒಪ್ಪಿಸಿಕೊಳ್ಳುವವನಾಗಿರಬೇಕು. ಇಂದಿನ ಅರ್ಥವ್ಯವಸ್ಥೆಗೆ ಇಂತಹ ವ್ಯಕ್ತಿಯೇ ಬೇಕು ಎನ್ನುತ್ತಾರೆ ಆಕೆ. ಆದರೆ ಶೋಚನೀಯ ಸಂಗತಿಯೆಂದರೆ ನಿಜಕ್ಕೂ ಇವರಿಗೆ ತಮ್ಮ ಬದುಕನ್ನು ರೂಪಿಸುವಲ್ಲಿ ಯಾವ ನಿಲುವೂ ಇರುವುದಿಲ್ಲ. ಅವರು ಸ್ವತಂತ್ರವಾಗಿ ಯೋಚಿಸುವ ಶಕ್ತಿಯನ್ನೇ ಕಳೆದುಕೊಂಡಿರುತ್ತಾರೆ. ಆದರೆ ಇಂತಹವರನ್ನೇ ನಮ್ಮ ಜಗತ್ತು ಯಶಸ್ವಿ ವ್ಯಕ್ತಿ ಎಂದು ಕೊಂಡಾಡುತ್ತದೆ.
    ಇವರ ಬಳಿ ಹೋಗುವವರಿಗೆ ಪ್ರಶ್ನೆಗಳೇ ಏಳುವುದಿಲ್ಲ. ಗುರುಗಳೇ ಹೇಳಿದ್ದೇ ವೇದವಾಕ್ಯ. ವಿಜ್ಞಾನ ಓದಿದವರೇ ಬಹಳ ಸಂಖ್ಯೆಯಲ್ಲಿ ಇರುವ ಇವರಲ್ಲಿ ವೈಜ್ಞಾನಿಕ ಮನೋಭಾವ ಎಳ್ಳಷ್ಟೂ ಇಲ್ಲ. ಸದ್ಯಕ್ಕೆ ಸದ್ದು ಮಾಡುತ್ತಿರುವ ಸ್ವಾಮಿಯಿಂದ ಮೋಸಗೊಂಡವರ ಪಟ್ಟಿ, ಅವರ ವಿದ್ಯಾರ್ಹತೆ ನೋಡಿದರೆ ಇದು ಗೊತ್ತಾಗುತ್ತದೆ. ಇವರು ನಿಜಕ್ಕೂ ವಿಜ್ಞಾನದ ವಿದ್ಯಾಥರ್ಿಗಳಾ? ಹಾಗಾದರೆ ಇಂದು ನಮ್ಮಲ್ಲಿನ ವಿಜ್ಞಾನದ ಬೋಧನೆ ಯಾವ ದಿಕ್ಕಿನಲ್ಲಿದೆ ಎಂದು ನಾವು ಚಿಂತಿಸುವಂತಾಗಿದೆ.
    ಬಹುಶಃ ಇವರಿಗೆ ನಮ್ಮ ಸುತ್ತಲಿನ ಸಮಾಜದ ಬಗೆಗೆ ಕನಿಷ್ಟ ತಿಳುವಳಿಕೆಯೂ ಇಲ್ಲವೇನೋ ಎನಿಸುತ್ತದೆ. ಗುರು ಹೇಳಿದ್ದನ್ನೇ ಪರಮಸತ್ಯವೆಂದು ನಂಬುವ ಇವರಲ್ಲಿ ಅಧ್ಯಯನಶೀಲತೆ ಹುಡುಕುವುದು ಸಾಧ್ಯವೇ ಇಲ್ಲವೇನೋ. ತಮ್ಮ ಸಾಮಾಜಿಕ ಬದ್ಧತೆಯನ್ನೇ ಮರೆತು ವೈಯಕ್ತಿಕ ಲೋಕದಲ್ಲಿ ಹುಸಿ ನೆಮ್ಮದಿಯ ಕವಚ ಹೊತ್ತು ಸಾಗುವ ಇಂತಹ ಜನರು ಇಂದು ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತಿದ್ದಾರೆ. ಇವರು ಬೋಧಿಸುವ ಈ ಎಲ್ಲ ತಂತ್ರಗಳು ಕ್ಷಣಕಾಲ ಮನಸ್ಸನ್ನು ಹಗುರಗೊಳಿಸುತ್ತವೆ. ಆದರೆ ಅದಕ್ಕೆ ಬಳಸುವ ದಾರಿ ವಾಸ್ತವವನ್ನು ನಮ್ಮ ಕಣ್ಣೆದುರಿಂದ ಮರೆ ಮಾಡುವುದು. ಆಗ ನಾವೇ ಕಟ್ಟಿಕೊಂಡ ಲೋಕದಲ್ಲಿ ನಾವು ಸುಖಿಗಳೆಂಬ ಕಲ್ಪನೆಯಲ್ಲಿ ಮೈಮರೆಯುತ್ತೇವೆ. ಈ ಪೈನ್ ಕಿಲ್ಲರ್ ತಂತ್ರಗಳು ಕ್ಷಣಕಾಲ ನಮ್ಮನ್ನು ಸಮಸ್ಯೆಗಳಿಂದ ದೂರ ಇರಿಸಬಹುದು. ಮೂಲ ಬೇರಿಗೇ ಸಾಗದ ಚಿಕಿತ್ಸೆಯಿಂದ ಒಳಗೊಳಗೇ ರೋಗ ಉಲ್ಬಣಗೊಳ್ಳುತ್ತಲೇ ಸಾಗುತ್ತದೆ. ನಮ್ಮ ಸಮಾಜದ ಹಲವು ರೋಗಗಳು ಇಂದು ಹೀಗೇ ವಿಷಮ ಸ್ಥಿತಿ ತಲುಪಿದೆ.
    ಹಸಿವು ಮತ್ತು ಅವಮಾನ, ಈ ಎರಡನ್ನು ಅನುಭವಿಸಿದವನು ಅಥವಾ ಅನುಭವಿಸದಿದ್ದರೂ ಇವನ್ನು ಹತ್ತಿರದಿಂದ ಬಲ್ಲವನು ಮಾತ್ರ ನಿಜವಾದ ಮನುಷ್ಯನಾಗಲು ಸಾಧ್ಯ. ನೆಲದಿಂದ ದೂರವೇ ಇದ್ದು ನಾವು ನಂಬಿದ್ದೇ ಆಧ್ಯಾತ್ಮ ಎಂದುಕೊಂಡು ಬದುಕಿನ ಹಲವು ಸಾಧ್ಯತೆಗಳತ್ತ ಕಣ್ಣುಪಟ್ಟಿ ಕಟ್ಟುವ ಈ ಆಧ್ಯಾತ್ಮಿಕ ತಂತ್ರಗಳು ಜನರ ಮೂಢನಂಬಿಕೆಯನ್ನು ನಗದೀಕರಿಸಿಕೊಂಡು ಬಂಡವಾಳಶಾಹಿಯನ್ನು ಬಲಪಡಿಸುವುದರಾಚೆಗೆ ಬೇರೆ ಯಾವ ಬದಲಾವಣೆಯನ್ನೂ ತರಲಾರವು.

ಭಾರತಿ ದೇವಿ. ಪಿ,
ವರ್ತಮಾನ ಬಳಗ.

ಎತ್ತಣ ಮಾಮರ ಎತ್ತಣ ಕೋಗಿಲೆ...

    ರೀ ರಾಮಚಂದ್ರರಾವ್ ನಮ್ಮ ಮೊಮ್ಮೊಗಳು ಸಂಗೀತಾಳದು ಈ ವರ್ಷ ಬಿ. ಇ. (ಇ&ಸಿ) ಅದೂ ಡಿಸ್ಟಿಂಕ್ಷನ್ನಲ್ಲಿ ಮುಗಿತು. ಹಾಗೇ ಮೊಮ್ಮೊಗ ಶಶಿಧರನದು ಪಿಯುಸಿ ಮುಗಿದು ಆತನಿಗೆ ಐಐಟಿ ಖರಗಪುರ್ದಲ್ಲಿ ಇಂಜನಿಯರಿಂಗ್ ಸೀಟು ಸಿಕ್ಕಿದೆ ಎಂದು ತಿಳಿಸಲು ನನಗೆ ಬಹಳ ಖುಷಿ ಅನಿಸುತ್ತಿದೆ"
    ಹೌದು ನೋಡ್ರಿ. ಹುಡುಗರು ಮೊನ್ನೆ ಮೊನ್ನೆ ಮನೆಗೆ ಬಂದಂಗನಿಸುತ್ತಿದೆ ನನಗೆ. ನನಗೂ ಬಹಳ ಸಂತೋಷ ಆಗೆದ. 70 ವರ್ಷದ ಡಾಕ್ಟರ್ ಚಿದಾನಂದ ತನ್ನ ಗೆಳೆಯ 60 ವರ್ಷದ ನಿವೃತ್ತ ಇಂಜನಿಯರಿಗೆ ಹೇಳಿದಾಗ ಅವರ ಮಾತಿಗೆ ಇಂಜಿನಿಯರ್ ರಾಮಚಂದ್ರರಾವ್ ಪ್ರತಿಕ್ರಿಯಿಸುತ್ತಾ ತಮ್ಮ ಸಂತಸ ಹಂಚಿಕೊಂಡರು. ಆನಂದದ ಉಮ್ಮೇದಿಯಲ್ಲಿ ಡಾಕ್ಟರಿಗೆ ಕಣ್ಣಾಲಿಗಳು ತುಂಬಿ ಬಂದಿದ್ದವು. ತನ್ನ ಇಂಜನಿಯರ್ ಗೆಳೆಯಗೆ ಕಣ್ಣೀರು ತೋರಿಸಲಿಚ್ಛಿಸದ ಡಾಕ್ಟರರು ಪಕ್ಕಕ್ಕೆ ತಿರುಗಿ ಕಣ್ಣೀರೊರಸಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸಿದ್ದರೂ ಅದು ರಾಮಚಂದ್ರರಾವ್ ಅವರ ಅಂತರಂಗದ ಅರಿವಿಗೆ ಬರದಿರುವುದು ಅಸಾಧ್ಯವಾಗಿತ್ತು.
    70ರ ಹರೆಯದ ಡಾಕ್ಟರ್ ಚಿದಾನಂದ ಮೆಡಿಕಲ್ ಆಫೀಸಿರ್ ಎಂದು ಆರೋಗ್ಯ ಇಲಾಖೆಯಿಂದ ನಿವೃತ್ತಿಯಾಗಿ 12 ವರ್ಷಗಳಾಗಿವೆ. ತಮ್ಮದೇ ದವಾಖಾನೆಯಲ್ಲಿ ಖಾಸಗಿಯಾಗಿ ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ. 70ರ ಇಳಿವಯಸ್ಸಿನಲ್ಲಿಯೂ ಆರೋಗ್ಯ ಚೆನ್ನಾಗಿ ಕಾಯ್ದುಕೊಂಡು ಬಂದಿರುವುದರಿಂದ ತಕ್ಕ ಮಟ್ಟಿಗೆ ತಮ್ಮ ವೈದ್ಯಕೀಯ ವೃತ್ತಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
    ಮಗಳೇ, ರಾಮಚಂದ್ರರಾವ್ಗೆ ಸ್ವಲ್ಪ ಚಹ ಮಾಡಿಕೊಂಡು ಬಾರಮ್ಮಾ, ಹಾಗೇ ಮಕ್ಕಳಿಗೆ ಸ್ವೀಟು ತೆಗೆದುಕೊಂಡು ರಾಮಚಂದ್ರರಾವ್ಗೆ ಕೊಡಲು ಹೇಳು. ಏಯ್ ಮಕ್ಕಳೇ ಅಂಕಲ್ಗೆ ಸ್ವೀಟ್ಸ್ ಕೊಡ್ರಿ ಎಂದು ಡಾಕ್ಟರು ಹೇಳಿದಾಗ, ಸಂಗೀತಾ ಮತ್ತು ಶಶಿಧರ ಸಿಹಿಯ ಪೊಟ್ಟಣ ಹಿಡಿದು ಕೊಂಡು ಬಂದರು. ಪೋಲಿಯೋದಿಂದ ಪೀಡಿತನಾಗಿದ್ದ ಶಶಿ ಕಾಲು ಎಳೆಯುತ್ತಾ ಅಕ್ಕನೊಂದಿಗೆ ರಾಮಚಂದ್ರರಾವ್ಗೆ ಸಿಹಿಕೊಟ್ಟು ಅವರ ಆಶೀವರ್ಾದ ಪಡೆದರು. ಮಲ್ಲಮ್ಮ, ಸಂಗೀತಾ, ಶಶಿಧರ ಅವರನ್ನು ಒಟ್ಟಿಗೆ ನೋಡಿದ ಡಾಕ್ಟರ್ ಚಿದಾನಂದ್ ಅವರ ಚಿತ್ತ ಗತ ಜೀವನದ ಮೆಲುಕು ಹಾಕತೊಡಗಿತು.
    ಮಲ್ಲಮ್ಮ ತನ್ನ ಮಕ್ಕಳಾದ ಸಂಗೀತಾ ಮತ್ತು ಶಶಿಧರ ಅವರೊಂದಿಗೆ ಡಾಕ್ಟರರ ಮನೆ ಸೇರಿ 12ವರ್ಷಗಳ ಮೇಲೆ ಆಗಿದೆ. ಮಲ್ಲಮ್ಮ ಡಾಕ್ಟರರ ಸ್ವಂತ ಮಗಳೇನೂ ಅಲ್ಲ. ಸಂಗೀತಾ ಮತ್ತು ಶಶಿಧರ ಅವರ ಸ್ವಂತ ಮೊಮ್ಮಕ್ಕಳೂ ಅಲ್ಲ. ಕಳೆದ 11 ವರ್ಷಗಳಲ್ಲಿ ಮಲ್ಲಮ್ಮ ಸ್ವಂತ ಮಗಳಿಗಿಂತಲೂ ಹೆಚ್ಚಿಗೆ, ಸಂಗೀತಾ ಮತ್ತು ಶಶಿಧರ ಸ್ವಂತ ಮೊಮ್ಮಕ್ಕಳಿಗಿಂತಲೂ ಹೆಚ್ಚಿಗೆ ಆಗಿದ್ದಾರೆ ಚಿದಾನಂದ ಅವರಿಗೆ. ಒಂದು ವಿಚಿತ್ರ ಸಂಕೀರ್ಣ ಸಮಯದಲ್ಲಿ ಮೂವರೂ ಡಾಕ್ಟರರ ಮನೆ ಸೇರಿದ್ದರು.
    ಡಾಕ್ಟರ್ ಚಿದಾನಂದ್, ಶೈಲಜಾ ಅವರದು ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗನೊಂದಿಗೆ ಕೂಡಿದ ಸುಖೀ ಸಂಸಾರವಾಗಿತ್ತು. ಹೆಣ್ಣುಮಕ್ಕಳಾದ ಸ್ನೇಹಲತಾ ಮತ್ತು ಪುಷ್ಪಲತಾ ಇಬ್ಬರೂ ಗಂಡು ಮಗನಾದ ರಾಹುಲ್ಗಿಂತಲೂ ದೊಡ್ಡವರು. ಡಾಕ್ಟರ್ ಚಿದಾನಂದ ತಮ್ಮ 55ನೇ ವಯಸ್ಸಿನಲ್ಲಿ ಇಬ್ಬರೂ ಹೆಣ್ಣುಮಕ್ಕಳ ಮದುವೆ ಮಾಡಿ ಮುಗಿಸಿದ್ದರು. ಸ್ನೇಹಿಲತಾ ಎಂ. ಎ ಮುಗಿಸಿದ್ದರೆ, ಪುಷ್ಪಲತಾ ಬಿ.ಎ. ಮುಗಿಸಿದ್ದಳು.
    ಸ್ನೇಹಲತಾಗೆ ಪೂನಾದಲ್ಲಿ ಕೆಲಸ ಮಾಡುವ ಇಂಜನಿಯರ್ ಹುಡುಗ ಸಿಕ್ಕಿದ್ದರೆ, ಪುಷ್ಪಲತಾಳನ್ನು ಫಾರಿನ್ನಲ್ಲಿರುವ ಇಂಜನಿಯರ್ ವರನೇ ವರಿಸಿದ್ದ. ಇಬ್ಬರದೂ ಒಂದೇ ಬಾರಿಗೆ ಮದುವೆ ಮುಗಿದಿತ್ತು. ತಮ್ಮ ತಮ್ಮ ಭಾವೀ ಜೀವನದ ಸುಂದರ ಕನಸುಗಳ ಲೋಕದಲ್ಲಿ ವಿಹರಿಸುತ್ತಿದ್ದ ಇಬ್ಬರೂ ಮದುವೆಯಾಗುತ್ತಲೇ ತಮ್ಮ ತಮ್ಮ ಗಂಡಂದಿರೊಂದಿಗೆ ಹೆಜ್ಜೆ ಹಾಕಿದ್ದರು. ಆಗ ರಾಹುಲ್ ಎಂ.ಬಿ.ಬಿ.ಎಸ್. ಮುಗಿಸುವ ಹಂತದಲ್ಲಿದ್ದ.
    ರಾಹುಲ್ ಎಂ.ಬಿ.ಬಿ.ಎಸ್. ಮುಗಿಸಿ, ಎಂ.ಎಸ್.ಗೆ ಸೇರುವಷ್ಟರಲ್ಲಿ ಸ್ನೇಹಲತಾ & ಪುಷ್ಪಲತಾ ಇಬ್ಬರೂ ಮೊದಲನೇ ಹೆರಿಗೆಗಾಗಿ ತವರಿಗೆ ಬಂದು ಹೋಗಿದ್ದರು. ತಮಗೆ ತಮ್ಮ ಕಾಲದಲ್ಲಿ ಎಂ.ಬಿ.ಬಿ.ಎಸ್. ಮುಗಿಸುವುದೇ ದೊಡ್ಡ ಮಾತಾಗಿತ್ತು. ವೈದ್ಯಕೀಯ ವಿಜ್ಞಾನದಲ್ಲಿ ಅದೇ ದೊಡ್ಡ ಡಿಗ್ರಿಯಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಪಿ.ಜಿ. ಇದ್ದರೆ ಚೆನ್ನ ಅಂತ ಅನಿಸುತ್ತಿತ್ತು ಡಾಕ್ಟರ್ ಚಿದಾನಂದರಿಗೆ. ಹಾಗಾಗಿ ಅವರು ಮಗಗೆ ಜನರಲ್ ಸರ್ಜರಿಯಲ್ಲಿ ಎಂ.ಎಸ್. ಮಾಡಲು ಬೆಳಗಾವಿಯ ಮೆಡಿಕಲ್ ಕಾಲೇಜಿಗೆ ಸೇರಿಸಿದ್ದರು.
    ಇಬ್ಬರೂ ಹೆಣ್ಣುಮಕ್ಕಳ ನಂತರ ಜನಿಸಿದ ರಾಹುಲ್ ತಾಯಿಯ ಮುದ್ದಿನ ಮಗನಾಗಿದ್ದ. ಒಂದು ತರಹದ ಹಟಮಾರಿತನದಲ್ಲೇ ಅವನ ಬೆಳವಣಿಗೆ ಮುಂದುವರೆದಿತ್ತು. ಎಂ.ಬಿ.ಬಿ.ಎಸ್. ಕೋಸರ್ು ಮುಗಿದಿದ್ದರೂ ಅವನ ಹಟಮಾರಿತನದ ಧೋರಣೆ, ದುಂದು ವೆಚ್ಚಕ್ಕೆ ಕಡಿವಾಣವಿರಲಿಲ್ಲ. ಮಗನ ಮೇಲೆ ಅತಿಯಾದ ಪ್ರೀತಿ, ವ್ಯಾಮೋಹ ಇದ್ದ ತಾಯಿ ಶೈಲಜಾಗೆ ಮಗ ಮಾಡಿದ್ದಲ್ಲೆಲ್ಲಾ ಮಾನ್ಯವಾಗಿದ್ದರೆ, ತಂದೆಗೆ ಮಗನ ಎಲ್ಲಾ ನಡವಳಿಕೆಗಳು ಅಷ್ಟಾಗಿ ಹಿಡಿಸುತ್ತಿರಲಿಲ್ಲ. ತಂದೆಯಿಂದ ಮಗನಿಗೆ ಆಗಾಗ್ಗೆ ಹಿತೋಪದೇಶ ಆಗುತ್ತಿತ್ತು. ಕೆಲವೊಂದು ಸಾರೆ ತಂದೆ-ಮಗನ ನಡುವಿನ ಚಚರ್ೆ, ಗಂಭೀರ ರೂಪ ತಳೆದು, ತಾರಕಕ್ಕೇರುತ್ತಿತ್ತು. ತಂದೆಯ ಹಿತವಚನದ ಮಾತುಗಳು ಮಗನಿಗೆ ರುಚಿಸುತ್ತಿರಲಿಲ್ಲ.
    ರಾಹುಲ್ ಎಂ.ಎಸ್. 2ನೇ ವರ್ಷದಲ್ಲಿದ್ದ. ಒಂದು ಸಾರೆ ರಜೆಗೆಂದು ಊರಿಗೆ ಬಂದಿದ್ದ ರಾಹುಲ್ ಮತ್ತು ಚಿದಾನಂದ ಅವರ ನಡುವೆ ಯಾವುದೋ ಖಚರ್ಿನ ವಿಷಯಕ್ಕೆ ಭರ್ಜರಿ ವಾಗ್ವಾದವಾಯಿತು. ತಂದೆ, ಮಕ್ಕಳ ವಾಗ್ವಾದದ ರೀತಿ, ನೀತಿ, ಗಂಭೀರತೆಯನ್ನು ಅರಿತ ಶೈಲಜಾ ತಾನೂ ನಡುವೆ ಬಾಯಿ ಹಾಕಿ ತಂದೆ-ಮಕ್ಕಳಿಬ್ಬರ ನಡುವೆ ರಾಜಿ ಮಾಡಲು ಪ್ರಯತ್ನಸಿದ್ದಳು. ವಾಗ್ವಾದದ ಎರಡು ದಿನಗಳ ನಂತರ ತನ್ನ ಅಭ್ಯಾಸಕ್ಕೆಂದು ಬೆಳಗಾವಿಗೆ ಹೋದ ರಾಹುಲ್ ಪುನಃ ಊರಿಗೆ ಬರಲಿಲ್ಲ. ಅವನು ಕಾಲೇಜಿಗೆ ಹೋಗಿ ಹಾಜರಾದ ಬಗ್ಗೆಯೂ ತಿಳಿದು ಬರಲಿಲ್ಲ. ಅದಾದ ಒಂದು ವಾರದ ನಂತರವಷ್ಟೇ ಡಾಕ್ಟರ್ ಚಿದಾನಂದ್ ದಂಪತಿಗಳಿಗೆ ತಿಳಿದದ್ದು ತಮ್ಮ ಮಗ ಬೆಳಗಾವಿಗೆ ಹೋಗಿಲ್ಲವೆಂದು. ಎಲ್ಲಾ ನಿಟ್ಟಿನಂದ ಪ್ರಯತ್ನಿಸಿದರೂ ಅವನ ವಿಳಾಸದ ಸುಳಿವು ಪತ್ತೆಯಾಗಲಿಲ್ಲ.
    ಮಗ ಹೇಳದೇ ಕೇಳದೇ ನಾಪತ್ತೆಯಾದುದು ಚಿದಾನಂದ-ಶೈಲಜಾ ದಂಪತಿಗಳನ್ನು ಅಧೀರರನ್ನಾಗಿಸಿತು. ಚಿದಾನಂದ ಅವರ ಸವರ್ೀಸು ಇನ್ನೊಂದು ವರ್ಷ ಉಳಿದಿತ್ತು. ಮಗನ ಎಂ.ಎಸ್. ಮುಗಿಯುವಷ್ಟರಲ್ಲಿ ತಮ್ಮದೂ ರಿಟೈರ್ಮೆಂಟ್ ಆಗುತ್ತದೆ. ಇಬ್ಬರೂ ಸೇರಿ ನಸರ್ಿಂಗ್ ಹೋಮ್ ಒಂದರನ್ನು ಪ್ರಾರಂಭಿಸುವ ಕನಸು ಕಾಣುತ್ತಿದ್ದರು ಡಾಕ್ಟರ್ ಚಿದಾನಂದ್. ಅವರ ಕನಸಿನ ಬಲೂನಿಗೆ ಸೂಜಿ ಚುಚ್ಚಿದ್ದ ಮಗ ರಾಹುಲ್. ಮಗನೆಂದರೆ ಸರ್ವಸ್ವ ಎಂದು ಅಂದುಕೊಂಡಿದ್ದ ತಾಯಿ ಶೈಲಜಾಳಿಗೆ ಮಾನಸಿಕವಾಗಿ ಆಘಾತವಾಗಿತ್ತು, ಮಗನ ಚಿಂತೆಯಲ್ಲಿ ಊಟ, ನಿದ್ರೆ ಯಾವುದೂ ಬೇಡವಾಗಿತ್ತು ಆಕೆಗೆ. ಮಗ ನಾಪತ್ತೆಯಾಗಿ ವರ್ಷವೊಂದು ಗತಿಸಿದರೂ ಅವನ ಬಗ್ಗೆ ಸುಳಿವು ಸಿಗದಾದಾಗ ಆಕೆ ಜೀವನದಲ್ಲಿ ಉತ್ಸಾಹವನ್ನೇ ಕಳೆದುಕೊಂಡಿದ್ದಳು. ಹೆಣ್ಣುಮಕ್ಕಳಿಬ್ಬರೂ ದೂರದ ಊರಿಂದ, ದೂರದ ದೇಶದಿಂದ ಒಂದು ಸಾರೆ ಬಂದು ತಂದೆ-ತಾಯಿಗಳಿಬ್ಬರಿಗೂ ಸಾಂತ್ವನ ಹೇಳಿ ಹೋಗಿದ್ದರು ಅಷ್ಟೇ. ಅವರಿಗಾದರೂ ಅವರ ಜೊತೆ ಬಹಳ ದಿನಗಳವರೆಗೆ ಇರಲು ಅನುಕೂಲವಿರ ಲಿಲ್ಲವಲ್ಲ. ಎಲ್ಲರಿಗೂ ಅವರವರ ಸಂಸಾರದ ಜವಾಬ್ದಾರಿ ಹೊರುವುದೇ ಸಾಕಾಗಿತ್ತು. ಮಕ್ಕಳು ಬಂದು ಹೋದ ನಂತರ ಪುನಃ ಗಂಡ-ಹೆಂಡತಿ ಇಬ್ಬರೇ.
    ಮಗನ ಚಿಂತೆಯಿಂದ ಹೊರಬರಲಾರದ ಶೈಲಜಾ ಡಾಕ್ಟರ್ ಚಿದಾನಂದ ಅವರನ್ನು ಒಂಟಿಮಾಡಿ ಒಂದು ದಿನ ಹೋರಟೇ ಬಿಟ್ಟಳು ಇಹಲೋಕದ ಯಾತ್ರೆ ಮುಗಿಸಿಕೊಂಡು. ಈಗ ಚಿದಾನಂದ ಅವರು ಜೀವನದಲ್ಲಿ ನಿಜವಾಗಿಯೂ ಏಕಾಂಗಿಯಾದರು. ಪತ್ನಿಯೆಂದರೆ ಅವರಿಗೆ ಸರ್ವಸ್ವ ಆಗಿದ್ದಳು. ಅವರಿಗೆ ಕೈಕಾಲೇ ಆಡದಂತಾಗಿತ್ತು. ಪುನಃ ಸ್ನೇಹಲತಾ, ಪುಷ್ಪಲತಾ ಬಂದು ನಾಲ್ಕು ದಿನ ಇದ್ದು ತಂದೆಗೆ ಸಮಾಧಾನ ಹೇಳಿ ಹೋಗಿದ್ದರು. ಹೋಗುವಾಗ ತಮ್ಮಲ್ಲಿಗೆ ಕರೆದುಕೊಂಡು ಹೋಗುವ ಅಭಿಲಾಷೆ ವ್ಯಕ್ತಪಡಿಸಿದರೂ ಡಾಕ್ಟರ ಚಿದಾನಂದ್ ಅದಕ್ಕೆ ತಮ್ಮ ಒಪ್ಪಿಗೆ ಸೂಚಿಸಲಿಲ್ಲ. ಹೆಂಡತಿ ಗತಿಸಿದ ತಿಂಗಳ ನಂತರ ಪುನಃ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದರು.
    ಬೆಳಿಗ್ಗೆ ಏಳುತ್ತಲೇ ಪ್ರತಿಯೊಂದಕ್ಕೂ ಹೆಂಡತಿಯ ಮೇಲೆ ಅವಲಂಬಿತರಾಗಿದ್ದ ಚಿದಾನಂದ್ರಿಗೆ ಈಗ ಅವಳ ಅನುಪಸ್ಥಿತಿಯಲ್ಲಿ ಅವಳಿಲ್ಲದಿರುವಿಕೆ ಬಹಳಷ್ಟು ಗಮನಕ್ಕೆ ಬರತೊಡಗಿತ್ತು. ಕೆಲವೊಂದು ಸಲ ಅವಳಿಲ್ಲದ ತಮ್ಮ ಜೀವನ ವ್ಯರ್ಥ ಎಂದೂ ಅನಿಸತೊಡಗಿತ್ತು. ಚಿದಾನಂದ್ ಮೈನಸ್ ಶೈಲಜಾ = ಜೀರೋ ಎಂದು ಅರಿವಾಗತೊಡಗಿತ್ತು. ಯಾವುದೇ ಒಂದು ವಸ್ತು ನಮ್ಮ ಜೊತೆಗಿದ್ದಾಗ ಅದರ ಪ್ರಾಮುಖ್ಯತೆ ಬಹಳಷ್ಟು ಸಾರೆ ಗೊತ್ತಾಗುವುದಿಲ್ಲ. ಅದಿಲ್ಲದಿರುವಾಗ ಅದರ ಪ್ರಾಮುಖ್ಯತೆ ಪ್ರತಿ ಕ್ಷಣದಲ್ಲೂ ಅರಿವಿಗೆ ಬರುತ್ತದೆ ಎಂಬ ನಿರ್ಸಗದ ನಿಯಮ ಚಿದಾನಂದರಿಗೆ ಅರಿವಾಗತೊಡಗಿತ್ತು. 2 ತಿಂಗಳು ಕಳೆಯುವಷ್ಟರಲ್ಲಿ ಅವರು ಅರ್ಧ ಇಳಿದಿದ್ದರು. ಚಿದಾನಂದರ ದೈಹಿಕ ಮತ್ತು ಮಾನಸಿಕ ಪರಿಸ್ಥಿತಿಗಳನ್ನು ಕಣ್ಣಾರೆ ಕಂಡ ಅವರ ಕೆಲವೊಂದಿಷ್ಟು ಜನ ಸಂಬಂಧಿಕರು, ಸ್ನೇಹಿತರು, ಹಿತೈಷಿಗಳು ಅವರಿಗೆ ಇನ್ನೊಂದು ಮದುವೆ ಮಾಡಿಕೊಳ್ಳಲು ಸಲಹೆ ಸೂಚನೆ ನೀಡಿದ್ದರು. ಕೆಲವೊಬ್ಬರು ಬಹಳಷ್ಟು ಒತ್ತಾಯ ಮಾಡಿದ್ದರು.
    ಚಿದಾನಂದರಿಗೆ 58ನೇ ವಯಸ್ಸು ನಡೆಯುತ್ತಿತ್ತು. ಇನ್ನೂ ಆರೇಳು ತಿಂಗಳುಗಳ ಸವರ್ೀಸು ಇತ್ತು. ರಾತ್ರಿ ಏಕಾಂತದಲ್ಲಿದ್ದಾಗ ಯೋಚನೆಗಳು ಅವರ ಮನಸ್ಸನ್ನು ಮುತ್ತಿಕ್ಕಿ ಮನಸ್ಸಿನ ಶಾಂತಿಯನ್ನು ಕದಡುತ್ತಿದ್ದವು. ಹೆಂಡತಿಯಿದ್ದಾಗ ಶಾಂತ ಸರೋವರದಂತಿದ್ದ ಅವರ ಮನಸ್ಸು ಈಗ ಉಕ್ಕುತ್ತಿರುವ ಜ್ವಾಲಾಮುಖಿ ಯಂತಾಗಿತ್ತು. ಶಾಂತ ಸರೋವರದಂತಿದ್ದ ಅವರ ಮನಸ್ಸಿನಲ್ಲಿ ಪುಟಿದೇಳುತ್ತಿದ್ದ ದೊಡ್ಡ ದೊಡ್ಡ ಅಲೆಗಳ ಆರ್ಭಟದ ಹೊಡೆತಕ್ಕೆ ನುಜ್ಜು ಗುಜ್ಜಾಗಿದ್ದರು. ಇನ್ನೊಂದು ಮದುವೆಯ ಬಗ್ಗೆ ಅವರ ಹಿತೈಷಿಗಳು ನೀಡಿದ್ದ ಸಲಹೆಯನ್ನು ಪರಾಮಷರ್ಿಸಿ ಈ ಇಳಿ ವಯಸ್ಸಿನಲ್ಲಿ ಸರಿಕಾಣುವುದಿಲ್ಲವೆಂದು ತೀಮರ್ಾನಿಸಿ, ಅದರ ಕಡೆಗೆ ಚಿತ್ತ ಹರಿಸುವುದನ್ನು ಬಿಟ್ಟರು. ದೇಹ, ಮನಸ್ಸುಗಳೆರಡೂ ಹೆಣ್ಣಿನ ಸಾಂಗತ್ಯಕ್ಕಾಗಿ ಆವಾಗಾವಾಗ ಎಳಸುತ್ತಿದ್ದರೂ, ಮನೋನಿಗ್ರಹದಿಂದ ತಮ್ಮಷ್ಟಕ್ಕೆ ತಾವೇ ಕಂಟ್ರೋಲ್ ಮಾಡಿಕೊಳ್ಳುತ್ತಿದ್ದರು. ತಮಗೆ ಅಡಿಗೆ ಮಾಡಲಿಕ್ಕೆ ಮತ್ತು ಮನೆಯ ಕೆಲಸಕ್ಕಾದರೂ ಒಬ್ಬ ವಯಸ್ಸಾದ ಅನಾಥ ಹೆಂಗಸನ್ನು ನೇಮಿಸಿಕೊಳ್ಳಬೇಕೆಂದು ಆಗಾಗ ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದರೂ ಇನ್ನೂ ಕಾರ್ಯರೂಪಕ್ಕೆ ಬಂದಿರಲಿಲ್ಲ. ಅದಕ್ಕೂ ಜನರ ಮಾತುಗಳುಬರಬಹುದೆಂದೂ ಆಲೋಚಿಸುತ್ತಿದ್ದರು. ತಮಗೆ ಆಪ್ತರೆನಿಸಿದವರಲ್ಲಿ ತಮ್ಮ ಮನಸ್ಸಿನಲ್ಲಿದ್ದ ವಿಚಾರವನ್ನು ಹೇಳಿಕೊಂಡಿದ್ದರು. ಗೆಳೆಯ ರಾಮಚಂದ್ರರಾವ್ ಅವರಲ್ಲಿ ಹೇಳಿದ್ದರು. ಅವರೂ ಸಹ ಪ್ರಯತ್ನ ಮಾಡುವುದಾಗಿ ತಿಳಿಸಿದ್ದರು.
    ಡಾಕ್ಟರ ಚಿದಾನಂದ್ ಇದೇ ವಿಚಾರದಲ್ಲಿದ್ದ ಒಂದು ದಿನ ಸಮೀಪದ ಹಳ್ಳಿಯ ಮಲ್ಲಮ್ಮ ಪೋಲಿಯೋ ಪೀಡಿತ ತನ್ನ ಮಗನನ್ನು ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದ್ದಳು. ಹುಡುಗನಿಗೆ 105 ಡಿಗ್ರಿ ಜ್ವರ, ವಿಪರೀತ ಕೆಮ್ಮು, ಜೊತೆಗೆ ನಿಶ್ಯಕ್ತಿ. ಜ್ವರ ಬಂದು ಆಗಲೇ ಎರಡು ದಿನಗಳ ಮೇಲಾಗಿದ್ದವು. ಊರಲ್ಲಿಯೇ ನೋಡಿದ ವೈದ್ಯರಿಗೆ ಹುಡುಗನ ಜ್ವರ, ಕೆಮ್ಮು ಹತೋಟಿಗೆ ಬರದೇ ಇದ್ದುದರಿಂದ ಡಾಕ್ಟರ ಚಿದಾನಂದ್ ಅವರ ಹತ್ತಿರ ಕಳುಹಿಸಿದ್ದರು. ಹುಡುಗನಿಗೆ ಕೆಂಡದಂಥಹ ಜ್ವರ. 6ನೇಯ ವಯಸ್ಸಿನಲ್ಲಿ ಪೋಲಿಯೋದಿಂದ ಬಲಗಾಲುಊನವಾಗಿದೆ. ಜ್ವರ ಕಡಿಮೆಯಾಗದಿದ್ದರೆ ಅನಾಹುತ ಆಗಬಹುದೆಂದು ನೆರೆಹೊರೆಯವರು ಮಲ್ಲಮ್ಮನಿಗೆ ಹೇಳಿ ಹೆದರಿಸಿದ್ದರು. ಮೂವತ್ತೈದರ ಹರೆಯದ ಮಲ್ಲಮ್ಮ, ಮೂವತ್ತನೇ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡು ವಿಧವೆಯಾಗಿದ್ದಳು. ಇದ್ದ ಎರಡು ಎಕರೆ ಹೊಲವನ್ನು ಸಂಬಂಧಿಕರಿಗೆ ಕೋರಿಗೆ ಕೊಟ್ಟು ಅವರಿವರ ಹೊಲ ಮನೆಗಳಲ್ಲಿ ಕೂಲಿ ನಾಲಿ ಮಾಡುತ್ತಾ ಹನ್ನೊಂದು ವರ್ಷದ ಮಗಳು ಸಂಗೀತಾ ಮತ್ತು 7 ವರ್ಷದ ಮಗ ಶಶಿಧರನನ್ನೂ ಸಲಹುತ್ತಿದ್ದಳು. ಊರಲ್ಲಿಯೇ ಇದ್ದ ಶಾಲೆಗೆ ಮಕ್ಕಳಿಬ್ಬರನ್ನೂ ಸೇರಿಸಿದ್ದಳು. ಸಂಬಂಧಿಕರ ಮನೆಯಲ್ಲಿ ಮಗಳನ್ನು ಬಿಟ್ಟು, ಮಗನನ್ನೂ ಕರೆದುಕೊಂಡು ಬಂದು ಆಸ್ಪತ್ರೆಗೆ ಸೇರಿ ಸಿದ್ದಳು. ಮಲ್ಲಮ್ಮ ತುಂಬಾ ಗಾಬರಿಯಲ್ಲಿದ್ದಳು.
    ಡಾಕ್ಟರ ಚಿದಾನಂದ್ ಅವರ ಸತತ ಶುಶ್ರೂಷೆಯಿಂದ 3ನೇ ದಿನ ಶಶಿಧರನ ಜ್ವರ ಕಡಿಮೆಯಾಗಿತ್ತು. ಅವನ ಆರೈಕೆಯಲ್ಲಿ ಅವರೂ ಎರಡು ದಿನ ನಿದ್ದೆಗೆಟ್ಟಿದ್ದರು. ಹುಡುಗನ ಆರೋಗ್ಯದ ಏರುಪೇರು ಅವರಿಗೊಂದು ರೀತಿಯ ಸವಾಲಾಗಿತ್ತು. ಆಸ್ಪತ್ರೆಗೆ ಬಂದಾಗಿನಿಂದ ಮಲ್ಲಮ್ಮ ಕಣ್ಣಿಗೆ ಕಣ್ಣು ಹಚ್ಚಿರಲಿಲ್ಲ. 4ನೇ ದಿನ ಮಗಗೆ ಜ್ವರ ಕಡಿಮೆಯಾದಾಗ ಮಲ್ಲಮ್ಮನ ಮುಖದಲ್ಲಿ ಕೊಂಚ ಗೆಲುವು ಮೂಡಿತ್ತು. ಆಗ ಅವಳಿಗೆ ಇನ್ನೊಂದು ಚಿಂತೆ ಕಾಡತೊಡಗಿತ್ತು. ಡಾಕ್ಟರರು ಎಷ್ಟು ದುಡ್ಡು ಕೇಳುತ್ತಾರೋ ಏನೋ ಎಂದು.
    ಮಲ್ಲಮ್ಮ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ ದಿನದಿಂದ ಸೂಕ್ಷ್ಮವಾಗಿ ಅವಳನ್ನು ಅವಲೋಕಿಸುತ್ತಿದ್ದರು ಡಾಕ್ಟರರು. ಎಣ್ಣೆಗೆಂಪು ಬಣ್ಣದ ತೆಳು ಮೈಕಟ್ಟಿನ ಸಾಧಾರಣ ರೂಪಿನ ಹೆಂಗಸು ಆಕೆ. ಮಾನ, ಮಯರ್ಾದೆಗೆ ಅಂಜಿ, ಅಳುಕುವ ಹೆಂಗಸು ಆಕೆಯೆಂದು ಅವರಿಗೆ ಅನಿಸಿತ್ತು. ಮಗನಿಗಾಗಿ ಮಿಡಿಯುತ್ತಿದ್ದ ಆಕೆಯ ಮಾತೃ ಹೃದಯದ ಬಗ್ಗೆ ಅವರಿಗೆ ಅಭಿಮಾನವೆನ್ಸಿತ್ತು. ಶಶಿಧರನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ದಿನ ಮಲ್ಲಮ್ಮನನ್ನು ತಮ್ಮ ಚೇಂಬರಿಗೆ ಕರೆಸಿದ್ದರು ಡಾಕ್ಟರ್ ಚಿದಾನಂದ್. ದುಡ್ಡು ಕೇಳಲು ಕರೆಸಿರಬೇಕೆಂಬ ಚಿಂತೆಯಲ್ಲಿ ಮೈಯನ್ನು ಹಿಡಿಯನ್ನಾಗಿ ಮಾಡಿಕೊಂಡು ಹೋಗಿ ಡಾಕ್ಟರರ ಎದುರು ನಿಂತಿದ್ದಳು ಮಲ್ಲಮ್ಮ.
    ಡಾಕ್ಟರರು ತಮ್ಮ ಫೀಸಿನ ಬಗ್ಗೆ ಚಕಾರವೆತ್ತದೆ, ಆಕೆಯ ಬಗ್ಗೆ ವಿಚಾರಿಸಿದ್ದರು. ಆಕೆ ಚುಟುಕಾಗಿ ತನ್ನ ಬಗ್ಗೆ ವಿವರಿಸಿದ್ದಳು. ಅಡುಗೆ ಮಾಡುವುದರ ಬಗ್ಗೆ ವಿಚಾರಿಸಿದ್ದರು. ರೊಟ್ಟಿ, ಚಪಾತಿ, ಪಲ್ಲೆ, ಅನ್ನ, ಸಾರು ಚೆನ್ನಾಗಿ ಮಾಡುವುದಾಗಿ ತಿಳಿಸಿದಳು. ಏಳನೇ ಕ್ಲಾಸಿನವರೆಗೂ ಶಾಲೆ ಓದಿರುವುದಾಗಿ ಹೇಳಿದಳು. ತಮ್ಮ ಮನೆಯಲ್ಲಿ ಅಡುಗೆ, ಕಸ, ಮುಸುರೆ ಮಾಡಿಕೊಂಡಿರುವಂತೆ ತಮ್ಮ ಬೇಡಿಕೆ ಮುಂದಿಟ್ಟಿದ್ದರು ಚಿದಾನಂದ್ ನೇರವಾಗಿ. ಆಕೆಯ ಮಕ್ಕಳಿಗೆ ತಾವೇ ವಿದ್ಯಾಭ್ಯಾಸ ಕೊಡಿಸುವುದಾ ಗಿಯೂ ಹೇಳಿದರು. ಊರಿಗೆ ಹೋಗಿ ತನ್ನ ಮಗಳು ಹಾಗೂ ತನ್ನವರೆನ್ನುವವರ ಜೊತೆ ಮಾತಾಡಿ ಮೂರು ದಿನಗಳಲ್ಲಿ ತನ್ನ ಅಭಿಪ್ರಾಯ ತಿಳಿಸುವುದಾಗಿ ಹೇಳಿದ್ದಳು. ಬರುವುದಿದ್ದರೆ ತಮ್ಮ ಸಾಮಾನುಗಳನ್ನು ತೆಗೆದುಕೊಂಡು ಬರುವುದಾಗಿ ಹೇಳಿದ್ದಳು ಮಲ್ಲಮ್ಮ ಯಾವುದೇ ಮುಚ್ಚುಮರೆಯಿಲ್ಲದೆ. ಅವಳಿಗೆ ಬರುವುದಕ್ಕೆ ಅನುಕೂಲವಾಗಲಿ ಎಂದು ತಾವೇ ಸ್ವಲ್ಪ ಹಣವನ್ನು ಮಲ್ಲಮ್ಮನಿಗೆ ಕೊಟ್ಟು ಕಳುಹಿಸಿದ್ದರು ಡಾಕ್ಟರ್ ಚಿದಾನಂದ್ ಅಂದು.
    ಆಸ್ಪತ್ರೆಯಿಂದ ಮಗನನ್ನು ಊರಿಗೆ ಕರೆದುಕೊಂಡು ಹೋದ ದಿನ ರಾತ್ರಿಯಿಡೀ ಮಲ್ಲಮ್ಮನಿಗೆ ನಿದ್ದೆ ಹತ್ತಿರ ಸುಳಿಯಲಿಲ್ಲ. ಡಾಕ್ಡರರು ಹೇಳಿದ್ದ ಮಾತುಗಳೇ ಅವಳ ಕಿವಿಯಲ್ಲಿ ಗುಯ್ ಗುಡುತ್ತಿದ್ದವು. ತಾನು ಅವರ ಮನೆಯಲ್ಲಿ ಕಸ, ಮುಸುರೆ, ಅಡುಗೆಗೆ ಹೋದರೆ, ತನಗೂ ತನ್ನ ಮಕ್ಕಳಿಗೂ ಒಂದು ನೆಲೆ ಸಿಕ್ಕಂತಾಗುತ್ತದೆ. ಹೇಗೂ ಮಕ್ಕಳ ವಿದ್ಯಾಭ್ಯಾಸವನ್ನು ಅವರು ನೋಡಿಕೊಳ್ಳುದಾಗಿ ತಿಳಿಸಿದ್ದಾರೆ. ಈಗಿನ ಮಳೆ, ಬೆಳೆ ನನ್ನ ಆದಾಯ ನೋಡಿದರೆ, ಬಹಳೆಂದರೆ ಹತ್ತನೇ ಕ್ಲಾಸಿನವರೆಗೆ ನಾ ಮಕ್ಕಳಿಗೆ ಓದಿಸಬಹುದು. ಡಾಕ್ಟರರ ಹೆಂಡತಿ ತೀರಿಕೊಂಡು ಸ್ವಲ್ಪ ದಿನಗಳಾಗಿರುವುದರಿಂದ ಮನೆಗೆಲಸದ ಜೊತೆಗೆ ತನ್ನನ್ನು ತಮ್ಮ ಭೋಗಕ್ಕೆ ಬಳಸಿಕೊಳ್ಳಬಹುದೇ? ಈ ಮನುಷ್ಯನನ್ನು ನೋಡಿದರೆ ಹಂಗ ಕಾಣುವುದಿಲ್ಲ. ನಾ ಆಸ್ಪತ್ರೆಯಲ್ಲಿದ್ದಾಗ ಅವರ ನೋಟದಲ್ಲಿ ಅಂಥಹದ್ದೇನು ಕಾಣಲಿಲ್ಲ. ಆದರೆ ಯಾವ ಹುತ್ತದೊಳಗೆ ಯಾವ ಹಾವೋ ಏನೋ? ನನ್ನದು ಅಂತ ಸ್ವಂತದ್ದು ಏನಿದೆ? ಈ 2 ಮಕ್ಕಳಿಗಾಗಿ ಅಂತ ಈ ನನ್ನ ದೇಹ ಕಟಿಪಿಟಿ ಪಡುತ್ತಿದೆ ಅಷ್ಟೇ. ನಾ ಮಾಡುವುದೆಲ್ಲಾ ಈಗ ಮಕ್ಕಳಿಗಾಗಿ ಅಲ್ಲವೇ? ಡಾಕ್ಟರರ ಮನೆಗೆ ಹೋದ ಮೇಲೆ ಅವರು ನನ್ನ ದೇಹದ ಮೇಲೆ  ಕಣ್ಣಾಕಿದರೆ ನಾ ನನ್ನನ್ನು ಸಂತೋಷದಿಂದ ಅವರಿಗೆ ಅಪರ್ಿಸಿಕೊಂಡರೆ ತಪ್ಪೇನೂ ಅನಿಸುವುದಿಲ್ಲ ಎಂದೆನ್ಸಿತ್ತಿದೆ. ಯಾಕೆಂದರೆ ಅವರು ನನ್ನ ಮಕ್ಕಳಿಗೆ ದಾರಿ ದೀಪವಾಗಲಿದ್ದಾರೆ. ಈಗಲೇ ಇಂಥಹ ವಿಚಾರಗಳನ್ನು ಮಾಡುವುದೇಕೆ? ಅಂಥಹ ಪ್ರಸಂಗ ಬಂದರೆ ಆವಾಗ ವಿಚಾರ ಮಾಡಿದರಾಯಿತು ಅಲ್ಲವೇ? ಸಧ್ಯಕ್ಕೆ ಮಕ್ಕಳೊಂದಿಗೆ ಡಾಕ್ಟರ ಮನೆಗೆ ಹೋಗಿ ಕೆಲಸಕ್ಕೆ ಸೇರಿಕೊಂಡರಾಯಿತು ಎಂದು ಮಲ್ಲಮ್ಮ ಅಂತಿಮ ನಿಧರ್ಾರಕ್ಕೆ ಬರುವುದರೊಳಗಾಗಿ ಪೂರ್ವ ದಿಕ್ಕಿನಲ್ಲಿ ನೇಸರ ತನ್ನ ಹೊಂಗಿರಣಗಳನ್ನು ಪಸರಿಸುತ್ತಾ ಮೇಲೇರತೊಡಗಿದ್ದ. ಬೆಳಿಗ್ಗೆ ಮಗಳು ಸಂಗೀತಾ ಮತ್ತು ಶಶಿಧರಗೆ ಡಾಕ್ಟರು ಹೇಳಿದ್ದನ್ನು ತಿಳಿಸಿ, ಒಪ್ಪಿಸಿ, ಗಂಟು ಮೂಟೆ ಕಟ್ಟಿಕೊಂಡು ಡಾಕ್ಟರರ ಮನೆ ಸೇರಿದ್ದಳು.
    ಸಂಗೀತಾ ಮತ್ತು ಶಶಿಧರ ಇಬ್ಬರನ್ನೂ ಒಳ್ಳೆಯ ಶಾಲೆಗೆ ಸೇರಿಸಿದ್ದರು ಡಾಕ್ಟರರು. ಮಲ್ಲಮ್ಮ ಡಾಕ್ಟರರ ಮನೆಯ ಶಿಷ್ಟಾಚಾರಗಳಿಗೆ ಹೊಂದಿಕೊಳ್ಳತೊಡ ಗಿದ್ದಳು. ಅವರ ಮನೆಯ ರೀತಿ, ರಿವಾಜುಗಳನ್ನು ರೂಢಿಸಿಕೊಳ್ಳುತ್ತಾ ರುಚಿ, ರುಚಿಯಾದ ಅಡುಗೆ ಗಳನ್ನು ಮಾಡಲು ಪ್ರಯತ್ನಿಸುತ್ತಿದ್ದಳು. ತನ್ನ ವೇಷ, ಭೂಷಣಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ, ಆಧುನಿಕತೆಗೆ ತನ್ನನ್ನು ಒಡ್ಡಿಕೊಳ್ಳತೊಡಗಿದ್ದಳು. ತನ್ನ ಆಡು ಭಾಷೆಯಲ್ಲಿ ಸಾಕಷ್ಟು ಸುಧಾರಣೆ ಮಾಡಿ ಕೊಂಡಿದ್ದಳು. ಪಟ್ಟಣಕ್ಕೆ ಬಂದು ಪಟ್ಟಣದವಳಂತೆಯೇ ಆಗಲು ಸತತ ಪ್ರಯತ್ನ ನಡೆಸಿದ್ದಳು.
    ಮಲ್ಲಮ್ಮ ಡಾಕ್ಟರರ ಮನೆಗೆ ಬಂದು ಎರಡು ತಿಂಗಳು ಕಳೆದಿದ್ದವು. ಅವಳ ನಡತೆ, ಕೆಲಸದ ಪರಿ, ಕೆಲಸದಲ್ಲಿನ ಅಚ್ಚುಕಟ್ಟುತನ ಡಾಕ್ಟರರ ಮನಸ್ಸಿಗೆ ತುಂಬಾ ಹಿಡಿಸಿದ್ದವು. ಮಕ್ಕಳಿಬ್ಬರೂ ಸಾಮಾನ್ಯವಾಗಿ ತಮ್ಮ ದೈನಂದಿನ ಹೋಂವರ್ಕನ್ನು ಮುಗಿಸಿಕೊಂಡು ಊಟ ಮಾಡಿ ಒಂಭತ್ತುವರೆಗೆಲ್ಲಾ ಮಲಗಿ ಬಿಡುತ್ತಿದ್ದರು. ಡಾಕ್ಟರರು ಒಂಭತ್ತುವರೆಯ ನಂತರ ಊಟಕ್ಕೆ ಕುಳಿತುಕೊಳ್ಳುತ್ತಿದ್ದರು. ನಂತರ ಮಲ್ಲಮ್ಮನ ಊಟ. ಊಟದ ನಂತರ ಅಡಿಗೆ ಮನೆಯಲ್ಲಿನ ಕೆಲಸ ಮುಗಿಸಿಕೊಂಡು ಹಾಸಿಗೆಗೆ ಬೆನ್ನು ಹಚ್ಚುವಷ್ಟರಲ್ಲಿ ರಾತ್ರಿ ಹತ್ತುವರೆ ಗಂಟೆಯಾಗುತ್ತಿತ್ತು ಆಕೆಗೆ.
    ಅಂದು ಮಲ್ಲಮ್ಮ ತನ್ನ ಕೆಲಸಗಳನ್ನೆಲ್ಲಾ ಮುಗಿಸಿದಾಗ ಹತ್ತುವರೆ ದಾಟಿತ್ತು. ಮಕ್ಕಳೊಂದಿಗೆ ಮಲಗುತ್ತಿದ್ದ ಆಕೆ ತಮ್ಮ ರೂಮಿಗೆ ಹೋಗದೇ, ಡಾಕ್ಟರರು ಮಲಗುವ ಕೋಣೆಯ ಬಾಗಿಲು ಬಡಿದಿದ್ದಳು. ಬಾಗಿಲನ್ನು ತೆಗೆದ ಡಾಕ್ಟರರು, ಏನು ಮಲ್ಲಮ್ಮ, ಆರಾಮ ಇದೆ ತಾನೆ? ಮಕ್ಕಳು ಹುಷಾರು ಇರುವವಲ್ಲವೇ? ಅವಳ ಮತ್ತು ಮಕ್ಕಳ ಕ್ಷೇಮ ಸಮಾಚಾರ ವಿಚಾರಿಸತೊಡಗಿದ್ದರು. ಎಲ್ಲರೂ ಚಿನ್ನಾಗಿಯೇ ಇದ್ದೇವೆ ಸಾಹೇಬ್ರೆ. ನನ್ನ ಕುಟುಂಬದ ಮೇಲೆ ನಿಮ್ಮ ಋಣದ ಭಾರ ಜಾಸ್ತಿಯಾಗುತ್ತಿದೆ. ಅದಕ್ಕೇ,... ಅದಕ್ಕೇ... ನಾನೊಂದು ತೀಮರ್ಾನಕ್ಕೆ ಬಂದಿದ್ದೇನೆ ಸಾಹೇಬ್ರೇ. ನನ್ನನ್ನೇ ತಮಗೆ ಅಪರ್ಿಸಿಕೊಂಡು ನಮ್ಮ ಮೇಲಿರುವ ಋಣದ ಭಾರ ಕಡಿಮೆ ಮಾಡಿಕೊಳ್ಳಬೇಕೆಂದಿದ್ದೇನೆ ಎಂದು ಮಲ್ಲಮ್ಮ ಉಸಿರು ಬಿಗಿ ಹಿಡಿದುಕೊಂಡು ಒಂದೊಂದೇ ಶಬ್ದ ಹೇಳಿದ್ದಳು.
    ಏನು? ನೀ ಏನು ಹೇಳ್ಲಿಕ್ಕತ್ತೀ ಅಂತ ನಿನಗೆ ಅರಿವು ಐತೆನು ಮಲ್ಲಮ್ಮ? ನೀ ನಮ್ಮ ಮನೆಗೆ ಬಂದಾಗಿನಿಂದ ನನ್ನ ಮನಸ್ಸು ದ್ವಂದ್ವದಲ್ಲಿತ್ತು. ನನಗ ಹೆಂಡ್ತಿ ಇಲ್ಲ. ನಿನಗೆ ಗಂಡ ಇಲ್ಲ. ಇಬ್ಬರೂ ದೈಹಿಕ ಕಾಮನೆಗಳನ್ನು ಯಾವ ನಿಭರ್ಿಡೆಯಿಲ್ಲದೇ ತಣಿಸಿ ಕೊಳ್ಳಬಹುದು ಎಂದು ನಾನೂ ಸಹ ಎಷ್ಟೋ ಸಾರೆ ಯೋಚಿಸಿರುವೆ. ಹೇಗೂ ನೀ ನಾ ಹೇಳಿದಂಗ ಕೇಳುವಿ ಎಂದು ನನಗೆ ಖಾತ್ರಿ ಇತ್ತು. ಆದ್ರ ಬಹಳ ಆಳವಾಗಿ ಯೋಚಿಸಿದ ಮೇಲೆ, ನಾ ಆ ರೀತಿ ಯೋಚಿಸುವುದು ಸರಿಯಲ್ಲ ಎಂದು ಅನಿಸ ತೊಡಗಿತು. ಭಾರತದ ನಾರಿಗೆ ತನ್ನತನ ಉಳಿಸಿಕೊ ಳ್ಳುವುದರಲ್ಲಿ ಹೆಚ್ಚಿನ ತೃಪ್ತಿ ಇದೆ ಎಂಬ ತಿಳುವಳಿಕೆ ಬರತೊಡಗಿತು. ನಿನ್ನ ಭಾವನೆಗಳಿಗೆ ಘಾಸಿ ಮಾಡುವುದಕ್ಕಿಂತಲೂ, ಪವಿತ್ರ ಸಂಬಂಧವನ್ನೇಕೆ ಹುಟ್ಟುಹಾಕಬಾರದು? ಎಂಬ ವಿಚಾರ ಗಟ್ಟಿಯಾಯಿತು ಮನದಲ್ಲಿ. ನನ್ನ ಗಂಡು ಮಗನ ಅಡ್ರೆಸ್ ಇದುವರೆಗೂ ಪತ್ತೆ ಆಗಿಲ್ಲ. ಹೆಣ್ಣು ಮಕ್ಕಳಿಬ್ಬರೂ ದೂರದ ದೇಶ, ದೂರದ ಊರಿನಲ್ಲಿ ಇದ್ದಾರೆ. ಇಳಿ ವಯಸ್ಸಿನಲ್ಲಿ ಅವರಿಂದ ನನಗೇನೂ ಕಿಂಚಿತ್ತು ಸಹಾಯ ಆಗಲಿಕ್ಕಿಲ್ಲ. ನಿನ್ನನ್ನೇ ನನ್ನ ಸ್ವಂತ ಮಗಳೆಂದೇಕೆ ತಿಳಿದುಕೊಳ್ಳಬಾರದು? ಸಂಗೀತಾ, ಶಶಿಧರ ಅವರನ್ನೇ ನನ್ನ ಸ್ವಂತ ಮೊಮ್ಮಕ್ಕಳೆಂದೇಕೇ ತಿಳಿದುಕೊಳ್ಳಬಾರದು? ಎಂದುಕೊಂಡೆ ನನ್ನಲ್ಲೇ. ನೋಡಮ್ಮಾ, ನಿನ್ನಿಂದ ನನ್ನ ಮೇಲೆ ಯಾವ ತರಹದ ಋಣದ ಭಾರವೂ ಇಲ್ಲ, ಇಬ್ಬರೂ ಪವಿತ್ರ ಸಂಬಂಧಕ್ಕೆ ನಾಂದಿ ಹಾಡೋಣ. ಇಂದಿನಿಂದ ನೀನೇ ನನ್ನ ಸ್ವಂತ ಮಗಳು, ನಿನ್ನ ಮಕ್ಕಳೇ ನನ್ನ ಸ್ವಂತ ಮೊಮ್ಮಕ್ಕಳು. ಈಗಾಗಲೇ ಬಹಳ ಹೊತ್ತಾಗಿದೆ. ಹೋಗಿ ಹಾಯಾಗಿ ಮಲಗು ಎಂದು ತಮ್ಮ ಮನದಾಳದ ಭಾವನೆಗಳನ್ನು ಹಂಚಿಕೊಂಡಿದ್ದರು ಡಾಕ್ಟರ್ ಚಿದಾನಂದ್.
    ಅಪ್ಪಾಜಿ, ನನ್ನ ಕ್ಷಮಿಸಿ ಬಿಡಿರಿ ಎಂದು ಮಲ್ಲಮ್ಮ ಡಾಕ್ಟರರ ಪಾದಗಳಿಗೆರಗಿ, ಅವರೆದೆಯಲ್ಲಿ ತನ್ನ ಮುಖ ಹುದುಗಿಸಿ ಸಾಂತ್ವನ ಪಡೆಯತೊಡಗಿದಳು. ಆಗ ಡಾಕ್ಟರ್ ಚಿದಾನಂದರಿಗೆ ನೆನಪಾದದ್ದು ಅಲ್ಲಮ ಪ್ರಭುರವರ ವಚನ. ಎತ್ತಣ ಮಾಮರ, ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯಾ.

ಎಸ್. ಶೇಖರಗೌಡ,
ಮುಖ್ಯ ವ್ಯವಸ್ಥಾಪಕರು,
ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಆರ್.ಸಿ.ಪಿ.ಸಿ., ಲಿಂಗಸ್ಗೂರು
(9448989332)

ಮಣಿಶಂಕರ್ರನ್ನು ಹೊರಗಟ್ಟಿದವರು ಪ್ರಣಬ್ರನ್ನು ಬಿಡುತ್ತಾರಾ?

    ವೊಡಾಪೋನ್, ಏಸರ್ೆಲ್-ಮ್ಯಾಕ್ಸಿಸ್, ವಾಲ್ಮಾಟರ್್
ಮುಂತಾದ ಬಹುರಾಷ್ಟ್ರೀಯ ಕಂಪೆನಿಗಳು ಹಾಗೂ ಬ್ರಿಟನ್, ನೆದರ್ಲ್ಯಾಂಡ್, ಅಮೇರಿಕ, ಸ್ವಿಟ್ಜರ್ಲ್ಯಾಂಡ್ನಂತ ಪ್ರಬಲ ರಾಷ್ಟ್ರಗಳ ಒತ್ತಡಗಳಿಂದಾಗಿ ಪ್ರಣವ್ ಮುಖಜರ್ಿಯನ್ನು ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯಥರ್ಿಯಾಗಿ ಆಯ್ಕೆ ಮಾಡಲಾಗಿದೆಯೇ? ಹಣಕಾಸು ಖಾತೆಯನ್ನು ಅವರಿಂದ ಕಿತ್ತುಕೊಳ್ಳುವುದಕ್ಕೆ ಭಾರೀ ಷಡ್ಯಂತ್ರಗಳು ನಡೆದಿವೆಯೇ?
ಇವು ಬರೇ ಅನುಮಾನಗಳಷ್ಟೇ ಅಲ್ಲ..
    2012 ಮೇ 7ರಂದು ಭಾರತಕ್ಕೆ ಭೇಟಿ ಕೊಟ್ಟ ಅಮೇರಿಕದ ವಿದೇಶಾಂಗ ಕಾರ್ಯದಶರ್ಿ ಹಿಲರಿ ಕ್ಲಿಂಟನ್, ಮೊದಲು ಪ್ರಧಾನಿ ಮನಮೋಹನ್ ಸಿಂಗ್ ರನ್ನು ಭೇಟಿಯಾಗುತ್ತಾರೆ. ಇರಾನ್ ನ ಜೊತೆ ಭಾರತದ ಸಂಬಂಧ, ಚಿಲ್ಲರೆ ಮಾರಾಟ ಕ್ಷೇತ್ರದಲ್ಲೇ ವಿದೇಶಿ ಹೂಡಿಕೆಗೆ (ಈಆ - ಈಠಡಿಜರಟಿ ಆಡಿಜಛಿಣ ಟಿತಜಣಟಜಟಿಣ ) ಅವಕಾಶ ಒದಗಿಸುವುದು, ಏಸರ್ೆಲ್-ಮ್ಯಾಕ್ಸಿಸ್ ನಡುವಿನ ಒಪ್ಪಂದದ ಕುರಿತಂತೆ ಇರುವ ತಕರಾರುಗಳು ಮತ್ತು ತೈಲ, ಗ್ಯಾಸ್ ಮತ್ತು ಪರಮಾಣು ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಯ ಬಗ್ಗೆ ಅವರಿಬ್ಬರೂ ಸುದೀರ್ಘ ಮಾತುಕತೆ ನಡೆಸುತ್ತಾರೆ. ಆ ಬಳಿಕ, ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಾಲ್ಮಾಟರ್್ನಂಥ ಬೃಹತ್ ಕಂಪೆನಗಳ ಪ್ರವೇಶವನ್ನು ಪ್ರಬಲವಾಗಿ ವಿರೋಧಿಸುವ ಮಮತಾ ಬ್ಯಾನಜರ್ಿಯನ್ನು ಪಶ್ಚಿಮ ಬಂಗಾಳಕ್ಕೆ ಹೋಗಿ ಕ್ಲಿಂಟನ್ ಭೇಟಿಯಾಗುತ್ತಾರೆ. ಅಷ್ಟಕ್ಕೂ ಹಿಲರಿ ಕ್ಲಿಂಟನ್ ರ ಸ್ಥಾನಮಾನ, ಹುದ್ದೆಯ ಎದುರು ಮುಖ್ಯಮಂತ್ರಿ ಮಮತಾ ಯಾವ ಲೆಕ್ಕ? ಆದರೂ ಹಿಲರಿಯೇ ಮಮತಾರ ಬಳಿಗೆ ಹೋಗಿ ಮಾತುಕತೆ ನಡೆಸಿದ್ದೇಕೆ? ಮಮತಾರ ತೃಣಮೂಲ ಕಾಂಗ್ರೆಸ್ ಯುಪಿಎಯ ಅಂಗಪಕ್ಷವಾಗಿದ್ದು, ಈ ಆ  ಗೆ ಅದು ವ್ಯಕ್ತಪಡಿಸುತ್ತಿರುವ ವಿರೋಧವನ್ನು ತಣ್ಣಗಾಗಿಸುವ ಉದ್ದೇಶವನ್ನು ಆ ಭೇಟಿ ಹೊಂದಿತ್ತು ಅನ್ನುವುದನ್ನು ಅಲ್ಲಗಳೆಯಬಹುದಾ?
ಬಹುರಾಷ್ಟ್ರೀಯ ಕಂಪೆನಿಗಳ ಲಾಬಿಯ ಪರಿಚಯ ಇದ್ದವರು, ಹಿಲರಿ ಕ್ಲಿಂಟನ್ ರ ಬಂಗಾಳ ಭೇಟಿಯನ್ನು ಕ್ಷುಲ್ಲಕ ಅನ್ನಲು ಸಾಧ್ಯವೇ ಇಲ್ಲ.
ಹಿಲರಿ - ಮಮತಾ
    ಕಲ್ಲಿದ್ದಲಿನ ಮೂಲಕ ವಿದ್ಯುತ್ ತಯಾರಿಸುವ ಬೃಹತ್ ಯೋಜನೆಯನ್ನು 1990ರಲ್ಲಿ ಎನ್ರಾನ್ ಭಾರತದ ಮುಂದಿಡುತ್ತದೆ. ಅದರ ಬೆನ್ನಿಗೇ ಇಂಧನ ಮತ್ತು ರಕ್ಷಣಾ ಇಲಾಖೆಯ ಕಾರ್ಯದಶರ್ಿಗಳ ಜೊತೆ ಅಮೇರಿಕದ ವಿದೇಶಾಂಗ ಕಾರ್ಯದಶರ್ಿ ಹೆನ್ರ ಕಿಸಿಂಜರ್ ಭಾರತಕ್ಕೆ ಭೇಟಿ ಕೊಡುತ್ತಾರೆ. ಮಹಾರಾಷ್ಟ್ರದಲ್ಲಿ ಎನ್ರಾನನ್ನು ಸ್ಥಾಪಿಸುವ ಬಗ್ಗೆ ಒಪ್ಪಂದವಾಗುತ್ತದೆ. ಭಾರತದ ನೀತಿ ನಿರೂಪಕರಲ್ಲಿ (ಕಠಟಛಿಥಿ ಒಚಿಞಜಡಿ) ಅರಿವು ಮೂಡಿಸುವುದಕ್ಕೆ 60 ಮಿಲಿಯನ್ ಡಾಲರ್ ಖಚರ್ು ಮಾಡಿರುವೆನೆಂದು ಆ ಬಳಿಕ ಎನ್ರಾನ್ ಒಪ್ಪಿಕೊಳ್ಳುತ್ತದೆ. ಅಂದಹಾಗೆ, ಅಂದು ಎನ್ರಾನ್ ನ ಪರ ಕಿಸಿಂಜರ್ ಬಂದಿದ್ದರೆ ಇಂದು ಅಮೇರಿಕದ ವಾಲ್ಮಾಟರ್್ ಪರ ಹಿಲರಿ ಬಂದಿಲ್ಲ ಎಂದು ಹೇಗೆ ಹೇಳುವುದು? ಮೆಕ್ಸಿಕೋದ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಬಂಡವಾಳ ಹೂಡುವುದಕ್ಕಾಗಿ ತಾನು ಲಂಚ ಕೊಟ್ಟಿದ್ದೆ ಎಂದು ವಾಲ್ಮಾಟರ್್ ಇತ್ತೀಚೆಗಷ್ಟೆ ಹೇಳಿಕೊಂಡಿತ್ತು. ಅದು ಅಮೇರಿಕದಲ್ಲಿ ವಿವಾದವನ್ನೂ ಉಂಟು ಮಾಡಿತ್ತಲ್ಲದೆ ತನಿಖೆಗೂ ಆದೇಶಿಸಲಾಗಿತ್ತು. ನಜವಾಗಿ, ವಾಲ್ ಮಾಟರ್್ ನಂತಹ ಬೃಹತ್ ಕಂಪೆನಿಗಳು ಲಂಚ ಕೊಟ್ಟೋ, ಲಾಬಿ ನಡೆಸಿಯೋ ವಿವಿಧ ದೇಶಗಳಿಂದ ಕಾಂಟ್ರ್ಯಾಕ್ಟ್ ಗಳನ್ನು ಪಡಕೊಳ್ಳುತ್ತವೆ. 190 ರಾಷ್ಟ್ರಗಳಲ್ಲಿ ಸಂಸ್ಥೆಗಳನ್ನು ಹೊಂದಿರುವ, 3,60,000 ಉದ್ಯೋಗಿಗಳಿರುವ ಯುರೋಪಿನ ಬೃಹತ್ ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ಕಂಪೆನಿ ಸಿಯೆಮೆನ್ಸ್ ಗೆ (ಖಜಟಜಟಿ) 2011 ಡಿಸೆಂಬರ್ನಲ್ಲಿ ಜರ್ಮನಿಯಲ್ಲಿ 1.6 ಮಿಲಿಯನ್ ಡಾಲರ್ ದಂಡ ವಿಧಿಸಲಾಯಿತು. 2001ರಿಂದ 2011ರ ನಡುವೆ ಅಜರ್ೆಂಟೀನಾ, ಬಾಂಗ್ಲಾ, ಚೀನಾ, ರಷ್ಯಾ, ವೆನೆಝುವೇಲಾ ಮತ್ತಿತರ ರಾಷ್ಟ್ರಗಳಲ್ಲಿ ಲಂಚದ ಮೂಲಕ ಅದು ಕಾಂಟ್ರ್ಯಾಕ್ಟ್ ಗಳನ್ನು ಪಡಕೊಂಡಿರುವುದು ತನಿಖೆಯಿಂದ ಬಹಿರಂಗವಾಗಿತ್ತು. ನಿಜವಾಗಿ ಸಿಯೆಮೆನ್ಸ್ ಅನ್ನು ಇಸ್ರೇಲ್ ಸಹಿತ ಯುರೋಪಿಯನ್ ರಾಷ್ಟ್ರಗಳೆಲ್ಲಾ ಬಹಿಷ್ಕರಿಸಬೇಕಾಗಿತ್ತು. ಜರ್ಮನಿಯ ಈ ಸಿಯೆಮೆನ್ಸ್, ಎರಡನೇ ವಿಶ್ವ ಯುದ್ಧದಲ್ಲಿ ಹಿಟ್ಲರ್ ನನ್ನು ಬಹಿರಂಗವಾಗಿ ಬೆಂಬಲಿಸಿತ್ತು. ನಾಝಿ ಪಕ್ಷಕ್ಕೆ ಚಂದಾ ಎತ್ತಿತ್ತು. ಯಹೂದಿಗಳನ್ನು ವಿದ್ಯುತ್ ಹಾಯಿಸಿ ಕೊಲ್ಲಲಾಗಿದೆಯೆಂದು (ಹಾಲೋಕಾಸ್ಟ್) ಹೇಳಲಾಗುವ ಕಾನ್ಸನ್ ಟ್ರೇಶನ್ ಕ್ಯಾಂಪ್ ಗೆ (ಮನೆ) ವಿದ್ಯುತ್ ಹರಿಸಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಟ್ಟದ್ದು ಇದೇ ಸಿಯೆಮೆನ್ಸ್. ಆದರೆ ಹಾಲೋಕಾಸ್ಟನ್ನು ಒಪ್ಪದ ಅಹ್ಮದಿ ನೆಜಾದ್ ರನ್ನು ಖಂಡಿಸುವ, ನೋಬೆಲ್ ಪ್ರಶಸ್ತಿ ವಿಜೇತ ಸಾಹಿತಿ ಗುಂಥರ್ ಗ್ರಾಸ್ ಗೆ ಬಹಿಷ್ಕಾರವನ್ನು ಹಾಕುವ ಇದೇ ಇಸ್ರೇಲ್, 2009ರಲ್ಲಿ ಸಿಯೆಮೆನ್ಸ್ ಜೊತೆ 418 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕುತ್ತದೆ. ಇದನ್ನು ಏನೆಂದು ಕರೆಯಬೇಕು? ಅಂದಹಾಗೆ ಹಾಲೋಕಾಸ್ಟನ್ನು ನಿರಾಕರಿಸುವುದು ಯುರೋಪಿಯನ ರಾಷ್ಟ್ರಗಳಲ್ಲಿ ಶಿಕ್ಷಾರ್ಹ ಅಪರಾಧ. ಅವೇ ರಾಷ್ಟ್ರಗಳು ಹಾಲೋಕಾಸ್ಟ್ ಗೆ ಸಹಕರಿಸಿದ ಸಿಯೆಮೆನ್ಸ್ ಗೆ ಕಾಂಟ್ಯಾಕ್ಟ್ ಗಳನ್ನೂ ಕೊಡುತ್ತಿವೆ. ಇದಕ್ಕೇನು ಕಾರಣ?
    1950ರಿಂದಲೇ ಭಾರತ ಸರಕಾರದ ನೀತಿಗಳ ಮೇಲೆ ವಿದೇಶಿ ಪ್ರಭಾವಗಳು ಇದ್ದಿದ್ದರೂ 1980ರ ವರೆಗೆ ಅದಕ್ಕೊಂದು ಮಿತಿ, ನಿಯಂತ್ರಣ ಇತ್ತು.
    ಆದರೆ, 1986 ಮಾಚರ್್ 26ರಂದು ಸ್ವೀಡನ್ನ ಬೋಫೋಸರ್್ ಕಂಪೆನಿಯೊಂದಿಗೆ 1500 ಕೋಟಿ ರೂಪಾಯಿಯ ವ್ಯವಹಾರಕ್ಕೆ ಭಾರತ ಯಾವಾಗ ಸಹಿ ಹಾಕಿತೋ ಅಂದಿನಿಂದಲೇ ಭಾರತದ ರಾಜಕಾರಣಿಗಳನ್ನು ಆಳುವ ಹಂತಕ್ಕೆ ವಿದೇಶಿ ಕಂಪೆನಿಗಳು ತಲುಪಿಬಿಟ್ಟವು. 1987 ಎಪ್ರಿಲ್ 16ರಂದು ಸ್ವೀಡನ್ನ ರೇಡಿಯೊಂದು ಮೊತ್ತಮೊದಲ ಬಾರಿಗೆ ಬೋಫೋಸರ್್ ವ್ಯವಹಾರದಲ್ಲಿ ಭಾರತದ ರಾಜಕಾರಣಿಗಳು ಮತ್ತು ರಕ್ಷಣಾ ಅಧಿಕಾರಿಗಳಿಗೆ ಲಂಚ ಪಾವತಿಯಾಗಿರುವುದಾಗಿ ಸುದ್ದಿ ಸ್ಫೋಟಿಸಿತು. ಬೋಫೋಸರ್್ ಕಂಪೆನಿಯ ನಿದರ್ೇಶಕ ಮಾಟರ್ಿನ್ ಲಿಬರ್ೊರ ಖಾಸಗಿ ಡೈರಿಯೊಂದರ ಆಧಾರದಲ್ಲಿ ಚಿತ್ರಾ ಸುಬ್ರಹ್ಮಣ್ಯಮ್ ಎಂಬ ಪತ್ರಕತರ್ೆ ದಿ ಹಿಂದೂ ಪತ್ರಿಕೆಯಲ್ಲಿ ಇಡೀ ಬೋಫೋಸರ್್ ವ್ಯವಹಾರವನ್ನೇ ಬಿಚ್ಚಿಡಲು ಪ್ರಾರಂಭಿಸಿದಾಗ ಜನ ದಂಗಾಗಿ ಬಿಟ್ಟರು. ರಾಜಕೀಯದಲ್ಲಿ ಬಿರುಗಾಳಿ ಎದ್ದಿತು. ಇಟಲಿಯ ಶಸ್ತ್ರಾಸ್ತ್ರ ದಲ್ಲಾಳಿ ಒಟ್ಟಾವಿಯೋ ಕ್ವಟ್ರೋಚಿ ಮತ್ತು ರಾಜೀವ್ ಗಾಂಧಿ ನಡುವೆ ಇದ್ದ ಸಂಬಂಧ, ಬೋಫೋಸರ್್ ನಿದರ್ೇಶಕ ಮಾಟರ್ಿನ್ ರ ಡೈರಿಯಲ್ಲಿ ಕಿ ಮತ್ತು ಖ ಎಂಬ ಸಾಂಕೇತಿಕ ಅಕ್ಷರಗಳಲ್ಲಿ ನಮೂದಿಸಲಾಗಿದ್ದ ಲಂಚದ ವಿವರಗಳು, ಸ್ವಿಸ್ ಬ್ಯಾಂಕಲ್ಲಿ ಕ್ವಟ್ರೋಚಿ ಹೊಂದಿದ್ದ ಎರಡು ಬ್ಯಾಂಕ್ ಖಾತೆಗಳು ಮತ್ತು ಕೋಟ್ಯಂತರ ದುಡ್ಡುಗಳ ವಿವರಗಳೆಲ್ಲಾ ಬಹಿರಂಗವಾದುವು. ಬಳಿಕ ಸಿಬಿಐಗೆ ತನಿಖೆಯ ಹೊಣೆಯನ್ನು ವಹಿಸಲಾಯಿತಲ್ಲದೇ ಕ್ವಟ್ರೋಚಿಯ ವಿರುದ್ಧ ಇಂಟರ್ ಪೋಲ್ ವಾರೆಂಟನ್ನು ಹೊರಡಿಸಲಾಯಿತು. ಇದೇ ವೇಳೆ, ಯೂನಿಯನ್ ಕಾಬರ್ೈಡ್ ದುರಂತದ ಪ್ರಮುಖ ಆರೋಪಿ ವಾರನ್ ಆಂಡರ್ಸನ್ ನನ್ನು ಭಾರತದಿಂದ ಸುರಕ್ಷಿತವಾಗಿ ಅಂದಿನ ಕಾಂಗ್ರೆಸ್ ಸರಕಾರವು ವಿದೇಶಕ್ಕೆ ರಾತೋರಾತ್ರಿ ವಿಮಾನದಲ್ಲಿ ಕಳುಹಿಸಿ ಕೊಟ್ಟಂತೆ ಕ್ವಟ್ರೋಚಿಯನ್ನೂ ರಹಸ್ಯವಾಗಿ ವಿದೇಶಕ್ಕೆ ರವಾನಿಸಿತು. ಇಂಟರ್ ಪೋಲ್ ವಾರೆಂಟ್ ಇದ್ದರೂ ಕ್ವಟ್ರೋಚಿ ವಿದೇಶಗಳಲ್ಲಿ ಪತ್ರಿಕೆಗಳಿಗೆ ಸಂದರ್ಶನ ಕೊಡುತ್ತಿದ್ದ. 2007 ಫೆಬ್ರವರಿ 6ರಂದು ಇಂಟರ್ ಪೋಲ್ ವಾರೆಂಟ್ ಪ್ರಕಾರ ಅಜರ್ೆಂಟೀನಾದಲ್ಲಿ ಕ್ವಟ್ರೋಚಿಯನ್ನು ಬಂಧಿಸಲಾಯಿತಾದರೂ ಸಿಬಿಐಯು ಗೊತ್ತೇ ಇಲ್ಲದಂತೆ ನಟಿಸಿತು. ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಅದು ಕ್ರಮ ಕೈಗೊಳ್ಳಲು ಪ್ರಾರಂಭಿಸಿದ್ದೇ ಬಂಧನದ 4 ತಿಂಗಳ ಬಳಿಕ ಜೂನ್ ನಲ್ಲಿ. ಸಿಬಿಐಯ ಬದ್ಧತೆಯನ್ನೇ ಅಜರ್ೆಂಟೈನಾ ಕೋಟರ್ು ಪ್ರಶ್ನಿಸಿತು. ಸರಿಯಾದ ದಾಖಲೆಗಳನ್ನೇ ಒದಗಿಸದ ನಿಮಗೆ ಕ್ವಟ್ರೋಚಿಯನ್ನು ಕೊಡಲಾರೆ ಅಂದಿತು. ನಿಜವಾಗಿ, ಕ್ವಟ್ರೋಚಿ ವಿಷಯದಲ್ಲಿ ಮುಂದುವರಿಯದಂತೆ ಭಾರತ ಸರಕಾರಕ್ಕೆ ತಾಕೀತು ಮಾಡಲು ವಿದೇಶಿ ರಾಷ್ಟ್ರಗಳ ಮುಖಾಂತರ ಬೋಫೋಸರ್್ ಯಶಸ್ವಿಯಾಗಿತ್ತು. ಹೀಗಿರುವಾಗ ಸಿಬಿಐ ಮಾಡುವುದಾದರೂ ಏನು? ಜವಾಹರ ಲಾಲ್ ನೆಹರು ಯುನಿವಸರ್ಿಟಿಯಲ್ಲಿ ನಿದರ್ೇಶಕರಾಗಿರುವ ಅರುಣ್ ಕುಮಾರ್ ಇತ್ತೀಚೆಗೆ ದಿ ಹಿಂದೂ ಪತ್ರಿಕೆಯಲ್ಲಿ ಈ ಬಗ್ಗೆ ಹೀಗೆ ಬರೆದಿದ್ದರು.
    ನಾನು ಇತ್ತೀಚೆಗೆ ಮಾಜಿ ಸಚಿವರೊಬ್ಬರನ್ನು ಭೇಟಿಯಾಗಿದ್ದೆ. ಕಪ್ಪು ಹಣದ ಬಗ್ಗೆ ಅವರಲ್ಲಿ ಮಾತಾಡಿದೆ. ಅವರು ಬೋಫೋಸರ್್ ಫೈಲನ್ನು ಹಿಡಿದುಕೊಂಡು ಒಮ್ಮೆ ಪ್ರಧಾನ ಮಂತ್ರಿಯ ಬಳಿಗೆ ಹೋಗಿದ್ದರಂತೆ. ಆಗ ಪ್ರಧಾನಿಯವರು, ಆ ಫೈಲನ್ನು ಮುಚ್ಚಿಬಿಡು. ಅದನ್ನು ತೆರೆದರೆ ನನ್ನ ಜೀವಕ್ಕೆ ಅಪಾಯ ಇದೆ ಎಂದಿದ್ದರಂತೆ.
    ಆದ್ದರಿಂದಲೇ, ರಾಷ್ಟ್ರಪತಿ ಪ್ರಣವ್ ಮುಖಜರ್ಿಯ ಬಗ್ಗೆ ಅನುಮಾನಗಳು ಹುಟ್ಟಿಕೊಳ್ಳುವುದು..
ಚಿದಂಬರಂ ರಿಂದ ಹಣಕಾಸು ಖಾತೆಯನ್ನು ಪಡಕೊಂಡ ಪ್ರಣವ್ ಮುಖಜರ್ಿಯವರು, 2ಜಿ ಸ್ಪೆಕ್ಟ್ರಂನ ಬಗ್ಗೆ ಕಠಿಣ ನಿಲುವನ್ನು ತಾಳಿದರು. ಒಂದು ಹಂತದಲ್ಲಿ ಚಿದಂಬರಮ್ ರ ವಿರುದ್ಧವೇ ಧ್ವನಿ ಎತ್ತಿದರು. ಕಪ್ಪು ಹಣವನ್ನು ಭಾರತಕ್ಕೆ ತರುವ ಬಗ್ಗೆಯೂ ಅವರಲ್ಲಿ ಸ್ಪಷ್ಟ ನಿಲುವು ಇತ್ತು. ವೊಡಾಪೋನ್ ವಿವಾದದಲ್ಲಿ ಅವರ ಕಠಿಣ ನಿಲುವು, ಬ್ರಿಟನ್ ಮತ್ತು ನೆದರ್ ಲ್ಯಾಂಡ್ ಗಳನ್ನು ತಳಮಳಗೊಳಿಸಿತ್ತು. ಮುಖ್ಯವಾಗಿ, ಭಾರತದಿಂದ ತೆರಿಗೆಯನ್ನು ತಪ್ಪಿಸಿಕೊಳ್ಳುವ ತಂತ್ರವೊಂದಕ್ಕೆ ವೊಡಾಪೋನ್ ಕೈ ಹಾಕಿತ್ತು. ಅದಕ್ಕಾಗಿ ಅದು ಕಂಪೆನಿಯ ನಿಜವಾದ ಮಾಲಿಕರ ಗುರುತನ್ನು ಅಡಗಿಸುವ ಪ್ರಯತ್ನ ಮಾಡಿತು. ಮಾರಿಷಸ್ ಮೂಲಕ ಬಂಡವಾಳ ಬಂದರೆ ಅದಕ್ಕೆ ತೆರಿಗೆ ವಿನಾಯಿತಿಯಿದೆ ಅನ್ನುವ 2003ರ ಸುಪ್ರೀಂ ಕೋಟರ್್ ನ ತೀರ್ಪನ್ನು ದುರುಪಯೋಗಿಸಲು ವೊಡಾಪೋನ್ ಯೋಜನೆ ರೂಪಿಸಿತು. ಆಝಾದಿ ಬಚಾವೋ ಆಂದೋಲನ್ ಮತ್ತು ಭಾರತ ಸರಕಾರದ ನಡುವಿನ ವಿವಾದವನ್ನು ಬಗೆಹರಿಸುವ ಸಂದರ್ಭದಲ್ಲಿ ಸುಪ್ರೀಂ ಕೋಟರ್್ ನೀಡಿದ ಈ ತೀರ್ಪನ್ನು ಬಹುರಾಷ್ಟ್ರೀಯ ಕಂಪೆನಿಯಾದ ವೊಡಾಫೋನ್ ಬಳಸಿಕೊಳ್ಳುವುದನ್ನು ಮುಖಜರ್ಿ ಬಲವಾಗಿ ವಿರೋಧಿಸಿದರು. ವೊಡಾಫೋನ್ ಗೆ ತೆರಿಗೆ ವಿನಾಯಿತಿ ಸಾಧ್ಯವಿಲ್ಲ ಎಂದು ಅವರು ಪಟ್ಟು ಹಿಡಿದರು. ನಿಜವಾಗಿ ಚಿದಂಬರಮ್ ವಿತ್ತ ಮಂತ್ರಿಯಾಗಿದ್ದಾಗ ನಡೆದ 2ಜಿ ಸ್ಪೆಕ್ಟ್ರಮ್ ನ ಬಗ್ಗೆ, ವೊಡಾಫೋನ್, ಏಸರ್ೆಲ್-ಮ್ಯಾಕ್ಸಿಸ್ ನಂತಹ ಬೃಹತ್ ಕಂಪೆನಿಗಳ ವ್ಯವಹಾರದ ಕುರಿತಂತೆ ಮುಖಜರ್ಿಯ ನಿಲುವು ಕಾಪರ್ೋರೇಟ್ ವಲಯದಲ್ಲಿ ತೀವ್ರ ಅಸಮಾಧಾನವನ್ನು ಸೃಷ್ಟಿಸಿವೆ. ಒಂದು ರೀತಿಯಲ್ಲಿ, ವಿತ್ತ ಮಂತ್ರಿಯಾಗಿ ಅವರನ್ನು ಸಹಿಸಿಕೊಳ್ಳುವುದು ಕಾಪರ್ೋರೇಟ್ ಸಂಸ್ಥೆಗಳಿಗೆ ಇವತ್ತು ಸಾಧ್ಯವಾಗುತ್ತಿಲ್ಲ.
    ಯಾರೇನೇ ಹೇಳಲಿ, ಭಾರತ ಸಹಿತ ಜಗತ್ತಿನ ಹೆಚ್ಚಿನೆಲ್ಲಾ ರಾಷ್ಟ್ರಗಳ ನೀತಿಗಳನ್ನು ರೂಪಿಸುವುದು ಬೃಹತ್ ಕಂಪೆನಿಗಳೇ. ಯಾರಿಗೆ ಯಾವ ಖಾತೆ ಕೊಡಬೇಕು, ಯಾರು ಪ್ರಧಾನಿ ಆಗಬೇಕು, ವಿದೇಶಾಂಗ, ಹಣಕಾಸು, ಆರೋಗ್ಯಮಂತ್ರಿ ಯಾರಾಗಬೇಕೆಂದು ತೀಮರ್ಾನಿಸುವುದೂ ಅವುಗಳೇ. ಅವು ತಮ್ಮ ಬಯಕೆಯನ್ನು ಅಮೇರಿಕದಂಥ ರಾಷ್ಟ್ರಗಳ ಮುಖಾಂತರ ಜಾರಿಗೆ ತರುತ್ತವೆ. ಅಗತ್ಯ ಬಂದಾಗಲೆಲ್ಲಾ ಹಿಲರಿ, ಒಬಾಮಾ, ಕ್ಯಾಮರೂನ್ ಗಳು ಬೃಹತ್ ಕಂಪೆನಿಗಳ ಸಿಇಓಗಳೊಂದಿಗೆ ಆಯಾ ರಾಷ್ಟ್ರಗಳಿಗೆ ಭೇಟಿ ಕೊಡುತ್ತಾರೆ. ಒಪ್ಪಂದ ಕುದುರಿಸುತ್ತಾರೆ. ಲಂಚ ಪಾವತಿಯಾಗುತ್ತದೆ. ಇದಕ್ಕೆ ಒಗ್ಗದವರಿಗೆ ರಾಷ್ಟ್ರಪತಿ ಹುದ್ದೆಯನ್ನೋ ದುರ್ಬಲ ಇಲಾಖೆಯನ್ನೋ ಕೊಟ್ಟು ಅಟ್ಟಲಾಗುತ್ತದೆ.
ಭಾರತ-ಇರಾನ್ ಗ್ಯಾಸ್ ಪೈಪ್ ಲೈನ್ ನ ಪರ ಬಲವಾಗಿ ವಾದಿಸುತ್ತಿದ್ದ ಮಣಿಶಂಕರ್ ಅಯ್ಯರ್ ರಿಂದ 2006ರಲ್ಲಿ ಪೆಟ್ರೋಲಿಯಂ ಖಾತೆಯನ್ನು ಕಸಿದು ಅವರಿಗೆ ಮನಮೋಹನ್ ಸಿಂಗ್ರು ಕ್ರೀಡಾ ಖಾತೆಯನ್ನು ಕೊಟ್ಟಿದ್ದರು. ಇದಕ್ಕೆ ಅಯ್ಯರ್ ರ ಇರಾನ್ ಪರ ನಿಲುವು ಕಾರಣ ಎಂದು ಅಗ ಭಾರತದಲ್ಲಿ ಅಮೇರಿಕದ ರಾಯಭಾರಿ ಆಗಿದ್ದ ಡೇವಿಡ್ ಮುಲ್ ಫೊಡರ್್ ಬಹಿರಂಗವಾಗಿಯೇ ಹೇಳಿದ್ದರು. ಇದೀಗ ಪ್ರಣವ್ ಮುಖಜರ್ಿ..
ಅಷ್ಟೇ ವ್ಯತ್ಯಾಸ.
ಏ.ಕೆ ಕುಕ್ಕಿಲ

ಮಣಿಶಂಕರ್ರನ್ನು ಹೊರಗಟ್ಟಿದವರು ಪ್ರಣಬ್ರನ್ನು ಬಿಡುತ್ತಾರಾ?



    ವೊಡಾಪೋನ್, ಏಸರ್ೆಲ್-ಮ್ಯಾಕ್ಸಿಸ್, ವಾಲ್ಮಾಟರ್್
ಮುಂತಾದ ಬಹುರಾಷ್ಟ್ರೀಯ ಕಂಪೆನಿಗಳು ಹಾಗೂ ಬ್ರಿಟನ್, ನೆದರ್ಲ್ಯಾಂಡ್, ಅಮೇರಿಕ, ಸ್ವಿಟ್ಜರ್ಲ್ಯಾಂಡ್ನಂತ ಪ್ರಬಲ ರಾಷ್ಟ್ರಗಳ ಒತ್ತಡಗಳಿಂದಾಗಿ ಪ್ರಣವ್ ಮುಖಜರ್ಿಯನ್ನು ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯಥರ್ಿಯಾಗಿ ಆಯ್ಕೆ ಮಾಡಲಾಗಿದೆಯೇ? ಹಣಕಾಸು ಖಾತೆಯನ್ನು ಅವರಿಂದ ಕಿತ್ತುಕೊಳ್ಳುವುದಕ್ಕೆ ಭಾರೀ ಷಡ್ಯಂತ್ರಗಳು ನಡೆದಿವೆಯೇ?
ಇವು ಬರೇ ಅನುಮಾನಗಳಷ್ಟೇ ಅಲ್ಲ..
    2012 ಮೇ 7ರಂದು ಭಾರತಕ್ಕೆ ಭೇಟಿ ಕೊಟ್ಟ ಅಮೇರಿಕದ ವಿದೇಶಾಂಗ ಕಾರ್ಯದಶರ್ಿ ಹಿಲರಿ ಕ್ಲಿಂಟನ್, ಮೊದಲು ಪ್ರಧಾನಿ ಮನಮೋಹನ್ ಸಿಂಗ್ ರನ್ನು ಭೇಟಿಯಾಗುತ್ತಾರೆ. ಇರಾನ್ ನ ಜೊತೆ ಭಾರತದ ಸಂಬಂಧ, ಚಿಲ್ಲರೆ ಮಾರಾಟ ಕ್ಷೇತ್ರದಲ್ಲೇ ವಿದೇಶಿ ಹೂಡಿಕೆಗೆ (ಈಆ - ಈಠಡಿಜರಟಿ ಆಡಿಜಛಿಣ ಟಿತಜಣಟಜಟಿಣ ) ಅವಕಾಶ ಒದಗಿಸುವುದು, ಏಸರ್ೆಲ್-ಮ್ಯಾಕ್ಸಿಸ್ ನಡುವಿನ ಒಪ್ಪಂದದ ಕುರಿತಂತೆ ಇರುವ ತಕರಾರುಗಳು ಮತ್ತು ತೈಲ, ಗ್ಯಾಸ್ ಮತ್ತು ಪರಮಾಣು ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಯ ಬಗ್ಗೆ ಅವರಿಬ್ಬರೂ ಸುದೀರ್ಘ ಮಾತುಕತೆ ನಡೆಸುತ್ತಾರೆ. ಆ ಬಳಿಕ, ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಾಲ್ಮಾಟರ್್ನಂಥ ಬೃಹತ್ ಕಂಪೆನಗಳ ಪ್ರವೇಶವನ್ನು ಪ್ರಬಲವಾಗಿ ವಿರೋಧಿಸುವ ಮಮತಾ ಬ್ಯಾನಜರ್ಿಯನ್ನು ಪಶ್ಚಿಮ ಬಂಗಾಳಕ್ಕೆ ಹೋಗಿ ಕ್ಲಿಂಟನ್ ಭೇಟಿಯಾಗುತ್ತಾರೆ. ಅಷ್ಟಕ್ಕೂ ಹಿಲರಿ ಕ್ಲಿಂಟನ್ ರ ಸ್ಥಾನಮಾನ, ಹುದ್ದೆಯ ಎದುರು ಮುಖ್ಯಮಂತ್ರಿ ಮಮತಾ ಯಾವ ಲೆಕ್ಕ? ಆದರೂ ಹಿಲರಿಯೇ ಮಮತಾರ ಬಳಿಗೆ ಹೋಗಿ ಮಾತುಕತೆ ನಡೆಸಿದ್ದೇಕೆ? ಮಮತಾರ ತೃಣಮೂಲ ಕಾಂಗ್ರೆಸ್ ಯುಪಿಎಯ ಅಂಗಪಕ್ಷವಾಗಿದ್ದು, ಈ ಆ  ಗೆ ಅದು ವ್ಯಕ್ತಪಡಿಸುತ್ತಿರುವ ವಿರೋಧವನ್ನು ತಣ್ಣಗಾಗಿಸುವ ಉದ್ದೇಶವನ್ನು ಆ ಭೇಟಿ ಹೊಂದಿತ್ತು ಅನ್ನುವುದನ್ನು ಅಲ್ಲಗಳೆಯಬಹುದಾ?
ಬಹುರಾಷ್ಟ್ರೀಯ ಕಂಪೆನಿಗಳ ಲಾಬಿಯ ಪರಿಚಯ ಇದ್ದವರು, ಹಿಲರಿ ಕ್ಲಿಂಟನ್ ರ ಬಂಗಾಳ ಭೇಟಿಯನ್ನು ಕ್ಷುಲ್ಲಕ ಅನ್ನಲು ಸಾಧ್ಯವೇ ಇಲ್ಲ.
ಹಿಲರಿ - ಮಮತಾ
    ಕಲ್ಲಿದ್ದಲಿನ ಮೂಲಕ ವಿದ್ಯುತ್ ತಯಾರಿಸುವ ಬೃಹತ್ ಯೋಜನೆಯನ್ನು 1990ರಲ್ಲಿ ಎನ್ರಾನ್ ಭಾರತದ ಮುಂದಿಡುತ್ತದೆ. ಅದರ ಬೆನ್ನಿಗೇ ಇಂಧನ ಮತ್ತು ರಕ್ಷಣಾ ಇಲಾಖೆಯ ಕಾರ್ಯದಶರ್ಿಗಳ ಜೊತೆ ಅಮೇರಿಕದ ವಿದೇಶಾಂಗ ಕಾರ್ಯದಶರ್ಿ ಹೆನ್ರ ಕಿಸಿಂಜರ್ ಭಾರತಕ್ಕೆ ಭೇಟಿ ಕೊಡುತ್ತಾರೆ. ಮಹಾರಾಷ್ಟ್ರದಲ್ಲಿ ಎನ್ರಾನನ್ನು ಸ್ಥಾಪಿಸುವ ಬಗ್ಗೆ ಒಪ್ಪಂದವಾಗುತ್ತದೆ. ಭಾರತದ ನೀತಿ ನಿರೂಪಕರಲ್ಲಿ (ಕಠಟಛಿಥಿ ಒಚಿಞಜಡಿ) ಅರಿವು ಮೂಡಿಸುವುದಕ್ಕೆ 60 ಮಿಲಿಯನ್ ಡಾಲರ್ ಖಚರ್ು ಮಾಡಿರುವೆನೆಂದು ಆ ಬಳಿಕ ಎನ್ರಾನ್ ಒಪ್ಪಿಕೊಳ್ಳುತ್ತದೆ. ಅಂದಹಾಗೆ, ಅಂದು ಎನ್ರಾನ್ ನ ಪರ ಕಿಸಿಂಜರ್ ಬಂದಿದ್ದರೆ ಇಂದು ಅಮೇರಿಕದ ವಾಲ್ಮಾಟರ್್ ಪರ ಹಿಲರಿ ಬಂದಿಲ್ಲ ಎಂದು ಹೇಗೆ ಹೇಳುವುದು? ಮೆಕ್ಸಿಕೋದ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಬಂಡವಾಳ ಹೂಡುವುದಕ್ಕಾಗಿ ತಾನು ಲಂಚ ಕೊಟ್ಟಿದ್ದೆ ಎಂದು ವಾಲ್ಮಾಟರ್್ ಇತ್ತೀಚೆಗಷ್ಟೆ ಹೇಳಿಕೊಂಡಿತ್ತು. ಅದು ಅಮೇರಿಕದಲ್ಲಿ ವಿವಾದವನ್ನೂ ಉಂಟು ಮಾಡಿತ್ತಲ್ಲದೆ ತನಿಖೆಗೂ ಆದೇಶಿಸಲಾಗಿತ್ತು. ನಜವಾಗಿ, ವಾಲ್ ಮಾಟರ್್ ನಂತಹ ಬೃಹತ್ ಕಂಪೆನಿಗಳು ಲಂಚ ಕೊಟ್ಟೋ, ಲಾಬಿ ನಡೆಸಿಯೋ ವಿವಿಧ ದೇಶಗಳಿಂದ ಕಾಂಟ್ರ್ಯಾಕ್ಟ್ ಗಳನ್ನು ಪಡಕೊಳ್ಳುತ್ತವೆ. 190 ರಾಷ್ಟ್ರಗಳಲ್ಲಿ ಸಂಸ್ಥೆಗಳನ್ನು ಹೊಂದಿರುವ, 3,60,000 ಉದ್ಯೋಗಿಗಳಿರುವ ಯುರೋಪಿನ ಬೃಹತ್ ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ಕಂಪೆನಿ ಸಿಯೆಮೆನ್ಸ್ ಗೆ (ಖಜಟಜಟಿ) 2011 ಡಿಸೆಂಬರ್ನಲ್ಲಿ ಜರ್ಮನಿಯಲ್ಲಿ 1.6 ಮಿಲಿಯನ್ ಡಾಲರ್ ದಂಡ ವಿಧಿಸಲಾಯಿತು. 2001ರಿಂದ 2011ರ ನಡುವೆ ಅಜರ್ೆಂಟೀನಾ, ಬಾಂಗ್ಲಾ, ಚೀನಾ, ರಷ್ಯಾ, ವೆನೆಝುವೇಲಾ ಮತ್ತಿತರ ರಾಷ್ಟ್ರಗಳಲ್ಲಿ ಲಂಚದ ಮೂಲಕ ಅದು ಕಾಂಟ್ರ್ಯಾಕ್ಟ್ ಗಳನ್ನು ಪಡಕೊಂಡಿರುವುದು ತನಿಖೆಯಿಂದ ಬಹಿರಂಗವಾಗಿತ್ತು. ನಿಜವಾಗಿ ಸಿಯೆಮೆನ್ಸ್ ಅನ್ನು ಇಸ್ರೇಲ್ ಸಹಿತ ಯುರೋಪಿಯನ್ ರಾಷ್ಟ್ರಗಳೆಲ್ಲಾ ಬಹಿಷ್ಕರಿಸಬೇಕಾಗಿತ್ತು. ಜರ್ಮನಿಯ ಈ ಸಿಯೆಮೆನ್ಸ್, ಎರಡನೇ ವಿಶ್ವ ಯುದ್ಧದಲ್ಲಿ ಹಿಟ್ಲರ್ ನನ್ನು ಬಹಿರಂಗವಾಗಿ ಬೆಂಬಲಿಸಿತ್ತು. ನಾಝಿ ಪಕ್ಷಕ್ಕೆ ಚಂದಾ ಎತ್ತಿತ್ತು. ಯಹೂದಿಗಳನ್ನು ವಿದ್ಯುತ್ ಹಾಯಿಸಿ ಕೊಲ್ಲಲಾಗಿದೆಯೆಂದು (ಹಾಲೋಕಾಸ್ಟ್) ಹೇಳಲಾಗುವ ಕಾನ್ಸನ್ ಟ್ರೇಶನ್ ಕ್ಯಾಂಪ್ ಗೆ (ಮನೆ) ವಿದ್ಯುತ್ ಹರಿಸಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಟ್ಟದ್ದು ಇದೇ ಸಿಯೆಮೆನ್ಸ್. ಆದರೆ ಹಾಲೋಕಾಸ್ಟನ್ನು ಒಪ್ಪದ ಅಹ್ಮದಿ ನೆಜಾದ್ ರನ್ನು ಖಂಡಿಸುವ, ನೋಬೆಲ್ ಪ್ರಶಸ್ತಿ ವಿಜೇತ ಸಾಹಿತಿ ಗುಂಥರ್ ಗ್ರಾಸ್ ಗೆ ಬಹಿಷ್ಕಾರವನ್ನು ಹಾಕುವ ಇದೇ ಇಸ್ರೇಲ್, 2009ರಲ್ಲಿ ಸಿಯೆಮೆನ್ಸ್ ಜೊತೆ 418 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕುತ್ತದೆ. ಇದನ್ನು ಏನೆಂದು ಕರೆಯಬೇಕು? ಅಂದಹಾಗೆ ಹಾಲೋಕಾಸ್ಟನ್ನು ನಿರಾಕರಿಸುವುದು ಯುರೋಪಿಯನ ರಾಷ್ಟ್ರಗಳಲ್ಲಿ ಶಿಕ್ಷಾರ್ಹ ಅಪರಾಧ. ಅವೇ ರಾಷ್ಟ್ರಗಳು ಹಾಲೋಕಾಸ್ಟ್ ಗೆ ಸಹಕರಿಸಿದ ಸಿಯೆಮೆನ್ಸ್ ಗೆ ಕಾಂಟ್ಯಾಕ್ಟ್ ಗಳನ್ನೂ ಕೊಡುತ್ತಿವೆ. ಇದಕ್ಕೇನು ಕಾರಣ?
    1950ರಿಂದಲೇ ಭಾರತ ಸರಕಾರದ ನೀತಿಗಳ ಮೇಲೆ ವಿದೇಶಿ ಪ್ರಭಾವಗಳು ಇದ್ದಿದ್ದರೂ 1980ರ ವರೆಗೆ ಅದಕ್ಕೊಂದು ಮಿತಿ, ನಿಯಂತ್ರಣ ಇತ್ತು.
    ಆದರೆ, 1986 ಮಾಚರ್್ 26ರಂದು ಸ್ವೀಡನ್ನ ಬೋಫೋಸರ್್ ಕಂಪೆನಿಯೊಂದಿಗೆ 1500 ಕೋಟಿ ರೂಪಾಯಿಯ ವ್ಯವಹಾರಕ್ಕೆ ಭಾರತ ಯಾವಾಗ ಸಹಿ ಹಾಕಿತೋ ಅಂದಿನಿಂದಲೇ ಭಾರತದ ರಾಜಕಾರಣಿಗಳನ್ನು ಆಳುವ ಹಂತಕ್ಕೆ ವಿದೇಶಿ ಕಂಪೆನಿಗಳು ತಲುಪಿಬಿಟ್ಟವು. 1987 ಎಪ್ರಿಲ್ 16ರಂದು ಸ್ವೀಡನ್ನ ರೇಡಿಯೊಂದು ಮೊತ್ತಮೊದಲ ಬಾರಿಗೆ ಬೋಫೋಸರ್್ ವ್ಯವಹಾರದಲ್ಲಿ ಭಾರತದ ರಾಜಕಾರಣಿಗಳು ಮತ್ತು ರಕ್ಷಣಾ ಅಧಿಕಾರಿಗಳಿಗೆ ಲಂಚ ಪಾವತಿಯಾಗಿರುವುದಾಗಿ ಸುದ್ದಿ ಸ್ಫೋಟಿಸಿತು. ಬೋಫೋಸರ್್ ಕಂಪೆನಿಯ ನಿದರ್ೇಶಕ ಮಾಟರ್ಿನ್ ಲಿಬರ್ೊರ ಖಾಸಗಿ ಡೈರಿಯೊಂದರ ಆಧಾರದಲ್ಲಿ ಚಿತ್ರಾ ಸುಬ್ರಹ್ಮಣ್ಯಮ್ ಎಂಬ ಪತ್ರಕತರ್ೆ ದಿ ಹಿಂದೂ ಪತ್ರಿಕೆಯಲ್ಲಿ ಇಡೀ ಬೋಫೋಸರ್್ ವ್ಯವಹಾರವನ್ನೇ ಬಿಚ್ಚಿಡಲು ಪ್ರಾರಂಭಿಸಿದಾಗ ಜನ ದಂಗಾಗಿ ಬಿಟ್ಟರು. ರಾಜಕೀಯದಲ್ಲಿ ಬಿರುಗಾಳಿ ಎದ್ದಿತು. ಇಟಲಿಯ ಶಸ್ತ್ರಾಸ್ತ್ರ ದಲ್ಲಾಳಿ ಒಟ್ಟಾವಿಯೋ ಕ್ವಟ್ರೋಚಿ ಮತ್ತು ರಾಜೀವ್ ಗಾಂಧಿ ನಡುವೆ ಇದ್ದ ಸಂಬಂಧ, ಬೋಫೋಸರ್್ ನಿದರ್ೇಶಕ ಮಾಟರ್ಿನ್ ರ ಡೈರಿಯಲ್ಲಿ ಕಿ ಮತ್ತು ಖ ಎಂಬ ಸಾಂಕೇತಿಕ ಅಕ್ಷರಗಳಲ್ಲಿ ನಮೂದಿಸಲಾಗಿದ್ದ ಲಂಚದ ವಿವರಗಳು, ಸ್ವಿಸ್ ಬ್ಯಾಂಕಲ್ಲಿ ಕ್ವಟ್ರೋಚಿ ಹೊಂದಿದ್ದ ಎರಡು ಬ್ಯಾಂಕ್ ಖಾತೆಗಳು ಮತ್ತು ಕೋಟ್ಯಂತರ ದುಡ್ಡುಗಳ ವಿವರಗಳೆಲ್ಲಾ ಬಹಿರಂಗವಾದುವು. ಬಳಿಕ ಸಿಬಿಐಗೆ ತನಿಖೆಯ ಹೊಣೆಯನ್ನು ವಹಿಸಲಾಯಿತಲ್ಲದೇ ಕ್ವಟ್ರೋಚಿಯ ವಿರುದ್ಧ ಇಂಟರ್ ಪೋಲ್ ವಾರೆಂಟನ್ನು ಹೊರಡಿಸಲಾಯಿತು. ಇದೇ ವೇಳೆ, ಯೂನಿಯನ್ ಕಾಬರ್ೈಡ್ ದುರಂತದ ಪ್ರಮುಖ ಆರೋಪಿ ವಾರನ್ ಆಂಡರ್ಸನ್ ನನ್ನು ಭಾರತದಿಂದ ಸುರಕ್ಷಿತವಾಗಿ ಅಂದಿನ ಕಾಂಗ್ರೆಸ್ ಸರಕಾರವು ವಿದೇಶಕ್ಕೆ ರಾತೋರಾತ್ರಿ ವಿಮಾನದಲ್ಲಿ ಕಳುಹಿಸಿ ಕೊಟ್ಟಂತೆ ಕ್ವಟ್ರೋಚಿಯನ್ನೂ ರಹಸ್ಯವಾಗಿ ವಿದೇಶಕ್ಕೆ ರವಾನಿಸಿತು. ಇಂಟರ್ ಪೋಲ್ ವಾರೆಂಟ್ ಇದ್ದರೂ ಕ್ವಟ್ರೋಚಿ ವಿದೇಶಗಳಲ್ಲಿ ಪತ್ರಿಕೆಗಳಿಗೆ ಸಂದರ್ಶನ ಕೊಡುತ್ತಿದ್ದ. 2007 ಫೆಬ್ರವರಿ 6ರಂದು ಇಂಟರ್ ಪೋಲ್ ವಾರೆಂಟ್ ಪ್ರಕಾರ ಅಜರ್ೆಂಟೀನಾದಲ್ಲಿ ಕ್ವಟ್ರೋಚಿಯನ್ನು ಬಂಧಿಸಲಾಯಿತಾದರೂ ಸಿಬಿಐಯು ಗೊತ್ತೇ ಇಲ್ಲದಂತೆ ನಟಿಸಿತು. ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಅದು ಕ್ರಮ ಕೈಗೊಳ್ಳಲು ಪ್ರಾರಂಭಿಸಿದ್ದೇ ಬಂಧನದ 4 ತಿಂಗಳ ಬಳಿಕ ಜೂನ್ ನಲ್ಲಿ. ಸಿಬಿಐಯ ಬದ್ಧತೆಯನ್ನೇ ಅಜರ್ೆಂಟೈನಾ ಕೋಟರ್ು ಪ್ರಶ್ನಿಸಿತು. ಸರಿಯಾದ ದಾಖಲೆಗಳನ್ನೇ ಒದಗಿಸದ ನಿಮಗೆ ಕ್ವಟ್ರೋಚಿಯನ್ನು ಕೊಡಲಾರೆ ಅಂದಿತು. ನಿಜವಾಗಿ, ಕ್ವಟ್ರೋಚಿ ವಿಷಯದಲ್ಲಿ ಮುಂದುವರಿಯದಂತೆ ಭಾರತ ಸರಕಾರಕ್ಕೆ ತಾಕೀತು ಮಾಡಲು ವಿದೇಶಿ ರಾಷ್ಟ್ರಗಳ ಮುಖಾಂತರ ಬೋಫೋಸರ್್ ಯಶಸ್ವಿಯಾಗಿತ್ತು. ಹೀಗಿರುವಾಗ ಸಿಬಿಐ ಮಾಡುವುದಾದರೂ ಏನು? ಜವಾಹರ ಲಾಲ್ ನೆಹರು ಯುನಿವಸರ್ಿಟಿಯಲ್ಲಿ ನಿದರ್ೇಶಕರಾಗಿರುವ ಅರುಣ್ ಕುಮಾರ್ ಇತ್ತೀಚೆಗೆ ದಿ ಹಿಂದೂ ಪತ್ರಿಕೆಯಲ್ಲಿ ಈ ಬಗ್ಗೆ ಹೀಗೆ ಬರೆದಿದ್ದರು.
    ನಾನು ಇತ್ತೀಚೆಗೆ ಮಾಜಿ ಸಚಿವರೊಬ್ಬರನ್ನು ಭೇಟಿಯಾಗಿದ್ದೆ. ಕಪ್ಪು ಹಣದ ಬಗ್ಗೆ ಅವರಲ್ಲಿ ಮಾತಾಡಿದೆ. ಅವರು ಬೋಫೋಸರ್್ ಫೈಲನ್ನು ಹಿಡಿದುಕೊಂಡು ಒಮ್ಮೆ ಪ್ರಧಾನ ಮಂತ್ರಿಯ ಬಳಿಗೆ ಹೋಗಿದ್ದರಂತೆ. ಆಗ ಪ್ರಧಾನಿಯವರು, ಆ ಫೈಲನ್ನು ಮುಚ್ಚಿಬಿಡು. ಅದನ್ನು ತೆರೆದರೆ ನನ್ನ ಜೀವಕ್ಕೆ ಅಪಾಯ ಇದೆ ಎಂದಿದ್ದರಂತೆ.
    ಆದ್ದರಿಂದಲೇ, ರಾಷ್ಟ್ರಪತಿ ಪ್ರಣವ್ ಮುಖಜರ್ಿಯ ಬಗ್ಗೆ ಅನುಮಾನಗಳು ಹುಟ್ಟಿಕೊಳ್ಳುವುದು..
ಚಿದಂಬರಂ ರಿಂದ ಹಣಕಾಸು ಖಾತೆಯನ್ನು ಪಡಕೊಂಡ ಪ್ರಣವ್ ಮುಖಜರ್ಿಯವರು, 2ಜಿ ಸ್ಪೆಕ್ಟ್ರಂನ ಬಗ್ಗೆ ಕಠಿಣ ನಿಲುವನ್ನು ತಾಳಿದರು. ಒಂದು ಹಂತದಲ್ಲಿ ಚಿದಂಬರಮ್ ರ ವಿರುದ್ಧವೇ ಧ್ವನಿ ಎತ್ತಿದರು. ಕಪ್ಪು ಹಣವನ್ನು ಭಾರತಕ್ಕೆ ತರುವ ಬಗ್ಗೆಯೂ ಅವರಲ್ಲಿ ಸ್ಪಷ್ಟ ನಿಲುವು ಇತ್ತು. ವೊಡಾಪೋನ್ ವಿವಾದದಲ್ಲಿ ಅವರ ಕಠಿಣ ನಿಲುವು, ಬ್ರಿಟನ್ ಮತ್ತು ನೆದರ್ ಲ್ಯಾಂಡ್ ಗಳನ್ನು ತಳಮಳಗೊಳಿಸಿತ್ತು. ಮುಖ್ಯವಾಗಿ, ಭಾರತದಿಂದ ತೆರಿಗೆಯನ್ನು ತಪ್ಪಿಸಿಕೊಳ್ಳುವ ತಂತ್ರವೊಂದಕ್ಕೆ ವೊಡಾಪೋನ್ ಕೈ ಹಾಕಿತ್ತು. ಅದಕ್ಕಾಗಿ ಅದು ಕಂಪೆನಿಯ ನಿಜವಾದ ಮಾಲಿಕರ ಗುರುತನ್ನು ಅಡಗಿಸುವ ಪ್ರಯತ್ನ ಮಾಡಿತು. ಮಾರಿಷಸ್ ಮೂಲಕ ಬಂಡವಾಳ ಬಂದರೆ ಅದಕ್ಕೆ ತೆರಿಗೆ ವಿನಾಯಿತಿಯಿದೆ ಅನ್ನುವ 2003ರ ಸುಪ್ರೀಂ ಕೋಟರ್್ ನ ತೀರ್ಪನ್ನು ದುರುಪಯೋಗಿಸಲು ವೊಡಾಪೋನ್ ಯೋಜನೆ ರೂಪಿಸಿತು. ಆಝಾದಿ ಬಚಾವೋ ಆಂದೋಲನ್ ಮತ್ತು ಭಾರತ ಸರಕಾರದ ನಡುವಿನ ವಿವಾದವನ್ನು ಬಗೆಹರಿಸುವ ಸಂದರ್ಭದಲ್ಲಿ ಸುಪ್ರೀಂ ಕೋಟರ್್ ನೀಡಿದ ಈ ತೀರ್ಪನ್ನು ಬಹುರಾಷ್ಟ್ರೀಯ ಕಂಪೆನಿಯಾದ ವೊಡಾಫೋನ್ ಬಳಸಿಕೊಳ್ಳುವುದನ್ನು ಮುಖಜರ್ಿ ಬಲವಾಗಿ ವಿರೋಧಿಸಿದರು. ವೊಡಾಫೋನ್ ಗೆ ತೆರಿಗೆ ವಿನಾಯಿತಿ ಸಾಧ್ಯವಿಲ್ಲ ಎಂದು ಅವರು ಪಟ್ಟು ಹಿಡಿದರು. ನಿಜವಾಗಿ ಚಿದಂಬರಮ್ ವಿತ್ತ ಮಂತ್ರಿಯಾಗಿದ್ದಾಗ ನಡೆದ 2ಜಿ ಸ್ಪೆಕ್ಟ್ರಮ್ ನ ಬಗ್ಗೆ, ವೊಡಾಫೋನ್, ಏಸರ್ೆಲ್-ಮ್ಯಾಕ್ಸಿಸ್ ನಂತಹ ಬೃಹತ್ ಕಂಪೆನಿಗಳ ವ್ಯವಹಾರದ ಕುರಿತಂತೆ ಮುಖಜರ್ಿಯ ನಿಲುವು ಕಾಪರ್ೋರೇಟ್ ವಲಯದಲ್ಲಿ ತೀವ್ರ ಅಸಮಾಧಾನವನ್ನು ಸೃಷ್ಟಿಸಿವೆ. ಒಂದು ರೀತಿಯಲ್ಲಿ, ವಿತ್ತ ಮಂತ್ರಿಯಾಗಿ ಅವರನ್ನು ಸಹಿಸಿಕೊಳ್ಳುವುದು ಕಾಪರ್ೋರೇಟ್ ಸಂಸ್ಥೆಗಳಿಗೆ ಇವತ್ತು ಸಾಧ್ಯವಾಗುತ್ತಿಲ್ಲ.
    ಯಾರೇನೇ ಹೇಳಲಿ, ಭಾರತ ಸಹಿತ ಜಗತ್ತಿನ ಹೆಚ್ಚಿನೆಲ್ಲಾ ರಾಷ್ಟ್ರಗಳ ನೀತಿಗಳನ್ನು ರೂಪಿಸುವುದು ಬೃಹತ್ ಕಂಪೆನಿಗಳೇ. ಯಾರಿಗೆ ಯಾವ ಖಾತೆ ಕೊಡಬೇಕು, ಯಾರು ಪ್ರಧಾನಿ ಆಗಬೇಕು, ವಿದೇಶಾಂಗ, ಹಣಕಾಸು, ಆರೋಗ್ಯಮಂತ್ರಿ ಯಾರಾಗಬೇಕೆಂದು ತೀಮರ್ಾನಿಸುವುದೂ ಅವುಗಳೇ. ಅವು ತಮ್ಮ ಬಯಕೆಯನ್ನು ಅಮೇರಿಕದಂಥ ರಾಷ್ಟ್ರಗಳ ಮುಖಾಂತರ ಜಾರಿಗೆ ತರುತ್ತವೆ. ಅಗತ್ಯ ಬಂದಾಗಲೆಲ್ಲಾ ಹಿಲರಿ, ಒಬಾಮಾ, ಕ್ಯಾಮರೂನ್ ಗಳು ಬೃಹತ್ ಕಂಪೆನಿಗಳ ಸಿಇಓಗಳೊಂದಿಗೆ ಆಯಾ ರಾಷ್ಟ್ರಗಳಿಗೆ ಭೇಟಿ ಕೊಡುತ್ತಾರೆ. ಒಪ್ಪಂದ ಕುದುರಿಸುತ್ತಾರೆ. ಲಂಚ ಪಾವತಿಯಾಗುತ್ತದೆ. ಇದಕ್ಕೆ ಒಗ್ಗದವರಿಗೆ ರಾಷ್ಟ್ರಪತಿ ಹುದ್ದೆಯನ್ನೋ ದುರ್ಬಲ ಇಲಾಖೆಯನ್ನೋ ಕೊಟ್ಟು ಅಟ್ಟಲಾಗುತ್ತದೆ.
ಭಾರತ-ಇರಾನ್ ಗ್ಯಾಸ್ ಪೈಪ್ ಲೈನ್ ನ ಪರ ಬಲವಾಗಿ ವಾದಿಸುತ್ತಿದ್ದ ಮಣಿಶಂಕರ್ ಅಯ್ಯರ್ ರಿಂದ 2006ರಲ್ಲಿ ಪೆಟ್ರೋಲಿಯಂ ಖಾತೆಯನ್ನು ಕಸಿದು ಅವರಿಗೆ ಮನಮೋಹನ್ ಸಿಂಗ್ರು ಕ್ರೀಡಾ ಖಾತೆಯನ್ನು ಕೊಟ್ಟಿದ್ದರು. ಇದಕ್ಕೆ ಅಯ್ಯರ್ ರ ಇರಾನ್ ಪರ ನಿಲುವು ಕಾರಣ ಎಂದು ಅಗ ಭಾರತದಲ್ಲಿ ಅಮೇರಿಕದ ರಾಯಭಾರಿ ಆಗಿದ್ದ ಡೇವಿಡ್ ಮುಲ್ ಫೊಡರ್್ ಬಹಿರಂಗವಾಗಿಯೇ ಹೇಳಿದ್ದರು. ಇದೀಗ ಪ್ರಣವ್ ಮುಖಜರ್ಿ..
ಅಷ್ಟೇ ವ್ಯತ್ಯಾಸ.
ಏ.ಕೆ ಕುಕ್ಕಿಲ