ರಾಜ್ಯದಲ್ಲಿಗ ಬೀಕರ ಬರಗಾಲ. ಆದರೆ, ಈ ಬರ ಕೇವಲ ತುತ್ತು ಅನ್ನ, ಕುಡಿಯುವ ನೀರಿಗೆ ಮಾತ್ರ ಬಂದಿಲ್ಲ. ವಿದ್ಯುತ್ ವಲಯಕ್ಕೂ ತನ್ನ ಛಾಯೆಯನ್ನು ಆವರಿಸಿದೆ! ಹೌದು ರಾಜ್ಯದಲ್ಲಿ ಎಲ್ಲಕ್ಕಿಂತ ವಿದ್ಯುತ್ ಬರ ನಮ್ಮನ್ನು ತೀವ್ರವಾಗಿ ಕಾಡುತ್ತಿದೆ. ಕಳೆದ ಎರಡು ವರ್ಷದಿಂದ ಬೀಕರ ವಿದ್ಯುತ್ ಕ್ಷಾಮ ನಮ್ಮನ್ನು ಆವರಿಸಿದೆ. ಬೇಸಿಗೆ ದಿನಗಳಲ್ಲಂತೂ ಕರೆಂಟ್ ಯಾವಾಗ ಹೋಗುತ್ತೇ, ಮತ್ತ್ಯಾಗ ಬರುತ್ತೇ ಗೊತ್ತೇ ಆಗುವುದಿಲ್ಲ. ಇದಕ್ಕೆಲ್ಲ ಕಾರಣ ರಾಜ್ಯದ ವಿದ್ಯುತ್ ಬೇಡಿಕೆ ಮತ್ತು ಉತ್ಪಾದನೆ ನಡುವೆ ಇವರು ಅಜಗಜಾಂತಗರ ವ್ಯತ್ಯಾಸ.
ನಮ್ಮ ರಾಜ್ಯಕ್ಕೆ ಪ್ರತಿನಿತ್ಯ 150 ದಶಲಕ್ಷ ಯೂನಿಟ್ನಿಂದ 160 ದಶಲಕ್ಷ ಯೂನಿಟ್ ವಿದ್ಯುತ್ ಬೇಕು. ಈ ವಿದ್ಯುತ್ನ್ನ ನಾವು ರಾಯಚೂರಿನ ಆರ್ಟಿಪಿಎಸ್, ಬಳ್ಳಾರಿಯ ಬಿಟಿಪಿಎಸ್, ಲಿಂಗನಮಕ್ಕಿ, ಶರಾವಾತಿ, ಕಾಳಿ, ಆಲಮಟ್ಟಿ ಸೇರಿದಂತೆ ಕೇಂದ್ರ ಸಕರ್ಾರ ಮತ್ತು ಖಾಸಗಿ ಕಂಪೆನಿಗಳಿಂದ ಪಡೆಯುತ್ತೇವೆ. ಆದರೆ, ಇದರಲ್ಲಿ ನಮ್ಮ ರಾಜ್ಯವು ಅತಿ ಹೆಚ್ಚು ಅವಲಂಬನೆಯಾಗಿರುವುದು ರಾಯಚೂರಿನ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್ಟಿಪಿಎಸ್ ಮೇಲೆ.
ಆರ್.ಟಿ.ಪಿ.ಎಸ್ ನಲ್ಲಿ ಒಟ್ಟು 8 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಈ 8 ಘಟಕಗಳು ಪ್ರತಿದಿನ 25 ಮೆಟ್ರಿಕ್ ಟನ್ ಕಲ್ಲಿದ್ದಲ್ಲನ್ನು ಉರಿಸಿ ಅವಿರತವಾಗಿ ವಿದ್ಯುತ್ ಉತ್ಪಾದಿಸುತ್ತಿವೆ. 210 ಮೆಗಾವ್ಯಾಟ್ ಸಾಮಥ್ರ್ಯದ 7 ಘಟಕ ಹಾಗೂ 250 ಮೆಗಾವ್ಯಾಟ್ ಸಾಮಥ್ರ್ಯದ 1 ಘಟಕ ಸೇರಿ ಒಟ್ಟು ನಿತ್ಯ 1720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಅಂದರೆ ರಾಜ್ಯದ ಒಟ್ಟು ಉತ್ಪಾದನೆಯ ಶೇಕಡಾ 40ರಷ್ಟು ಇಲ್ಲಿ ಉತ್ಪಾದಿಸಲಾಗುತ್ತಿದೆ. ಹಾಗಾಗಿಯೇ ರಾಯಚೂರಿನ ಆರ್ಟಿಪಿಸ್ನ್ನು ಆಪದ್ಬಾಂಧವ ಎಂದು ಕರೆಯುತ್ತಾರೆ.
ಇನ್ನೂ ಒಂದು ವಿಚಾರ ನಿಮಗಿಲ್ಲಿ ನಾವು ಹೇಳಲೇಬೇಕು. ಕನರ್ಾಟಕ ವಿದ್ಯುತ್ ನಿಗಮವು ಆರ್.ಟಿ.ಪಿ.ಎಸ್ನಲ್ಲಿ ಉತ್ಪಾದಿಸುವ ವಿದ್ಯುತ್ನ್ನು ಕೇವಲ 2 ರೂ. 60 ಪೈಸೆಗೆ ಒಂದು ಯೂನಿಟ್ನಂತೆ ಅಗ್ಗದ ದರಕ್ಕೆ ಬೇರೆಯವರಿಗೆ ನೀಡುತ್ತಿದೆ. ಅಂದರೆ, ನಮಗೆ ಆರ್ಟಿಪಿಎಸ್ ಅವಶ್ಯಕತೆ ಹಾಗೂ ಅನಿವಾರ್ಯತೆ ಹೇಗಿರಬೇಕು ಊಹಿಸಿ.
ಈಗ ರಾಜ್ಯದಲ್ಲಿ ಆರ್.ಟಿ.ಪಿ.ಎಸ್ ಹೊರತು ಪಡಿಸಿದರೇ ಬಳ್ಳಾರಿ ಶಾಖೋತ್ಪನ್ನ ಕೇಂದ್ರದಿಂದ 500 ಮೆಗಾವ್ಯಾಟ್ ಮತ್ತು ಲಿಂಗನಮಕ್ಕಿ, ಶರಾವತಿ, ಕಾಳಿ, ಆಲಮಟ್ಟಿಗಳ ಜಲಮೂಲದಿಂದ ಸ್ವಲ್ಪ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ. (ಅದು ಸಾಕಷ್ಠು ಮಳೆಯಾಗಿ ಜಲಾಶಯ ಭತರ್ಿಯಾದಾಗ ಮಾತ್ರ)
ಉತ್ತರಕನರ್ಾಟಕದಲ್ಲಿದ್ದಂತೆ ಎಲ್ಲೆಡೆ ಬರ ಆವರಿಸಿದೆ, ಮೇಲಿನ ಯಾವಸ್ಥಳದಲ್ಲಿಯೂ ವಿದ್ಯುತ್ ಉತ್ಪಾದಿಸಲು ಸಾಧ್ಯವಿಲ್ಲ. ಕಾರಣ ಸಕರ್ಾರ ಶಕ್ತಿನಗರದ ಮೇಲೆಯೇ ಅವಲಂಬನೆಯಾಗಿದೆ.
ಒಂದೊಮ್ಮೆ ಆರ್.ಟಿ.ಪಿ.ಎಸ್ ನಲ್ಲಿ ಒಂದೆರಡು ಘಟಕಗಳು ತಾಂತ್ರಿಕ ಸಮಸ್ಯೆಯಿಂದ ಉತ್ಪಾದನೆ ನಿಲ್ಲಿಸಿ ಬಿಟ್ಟರೆ, ರಾಜ್ಯದ ವಿದ್ಯುತ್ ವಿತರಣಾ ಜಾಲದಲ್ಲಿ ಏರು ಪೇರಾಗುತ್ತೆ. ಇನ್ನೂ ಆರ್ಟಿಪಿಎಸ್ ಜನ್ಮ ತಾಳಿದಾಗಿನಿಂದ ತಾಂತ್ರಿಕ ಸಮಸ್ಯೆ, ಕಳಪೆ ಕಲ್ಲಿದ್ದಿಲ್ಲು, ಸಿಬ್ಬಂದಿ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಿಕೊಂಡು ದಾಖಲೆ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಿ ರಾಜ್ಯಕ್ಕೆ ನೀಡುತ್ತಾ ಬಂದಿದೆ.
ರಾಜ್ಯದ ವಿದ್ಯುತ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಶಕ್ತಿನಗರದ ಆರ್ಟಿಪಿಎಸ್ಗೆ ಈಗ ಆಪತ್ತು ಬಂದೊದಗಿದೆ. ಬಂದಿರುವ ಆಪತ್ತು ಅಂತಿಂತಹುದಲ್ಲ ಈ ಆಪತ್ತನ್ನು ಸಕರ್ಾರ ಗಂಭೀರವಾಗಿ ಪರಿಗಣಿಸದೇ ಹೋದರೆ, ಕನರ್ಾಟಕ ಕತ್ತಲಾಗುವುದು ಗ್ಯಾರಂಟಿ. ಆರ್ಟಿಪಿಎಸ್ಗೆ ಬಂದೊದಗಿದ ಆಪತ್ತೇ, ರಾಜ್ಯದ ಭೀಕರ ವಿದ್ಯುತ್ ಸಮಸ್ಯೆಗೆ ಕಾರಣ.
ಆರ್ಟಿಪಿಎಸ್ನಲ್ಲಿ ಕಲ್ಲಿದ್ದಲು ಕೊರತೆ, ತಾಂತ್ರಿಕ ಸಮಸ್ಯೆ ಆಥರ್ಿಕ ಸಂಕಷ್ಟ, ನೀರಿನ ಕೊರತೆ ಹೀಗೆ ಸಾಲು ಸಾಲು ಸಮಸ್ಯೆಗಳು ಬೃಹದಾಕಾರದಲ್ಲಿ ಬೆಳೆದು ನಿಂತಿವೆ. ಈ ಎಲ್ಲ ಸಮಸ್ಯೆಗಳು ಆರ್ಟಿಪಿಎಸ್ನ ಉತ್ಪಾದನೆಯನ್ನು ಕುಂಠಿತಗೊಳಿಸಿವೆ.
ಆರ್ಟಿಪಿಎಸ್ನ 8 ಘಟಕಗಳು ಪೂರ್ಣ ಸಾಮಥ್ರ್ಯದಲ್ಲಿ ವಿದ್ಯುತ್ ಉತ್ಪಾದಿಸಬೇಕು ಅಂದ್ರೆ ಪ್ರತಿ ದಿನ 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲ್ಲು ಬೇಕು. ಈ ಕಲ್ಲಿದ್ದಲು ಆಂದ್ರ ಪ್ರದೇಶದ ಬೆಲ್ಲಂಪಲ್ಲಿಯ ಸಿಂಗರೇಣಿ, ಮಹಾರಾಷ್ಟ್ರದ ಮಹಾನದಿ, ಓರಿಸ್ಸ್ದ ತಲ್ಚೆರ್ ಹಾಗೂ ವಿದೇಶಿ ಗಣಿಗಳಿಂದ ಪೂರೈಕೆಯಾಗುತ್ತದೆ.
ಆದರೆ ಇತ್ತಿಚೀನ ದಿನಗಳಲ್ಲಿ ಮಾತ್ರ ನೀರಿಕ್ಷಿತ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆಯಾಗುತ್ತಿಲ್ಲ. ಇದು ವಿದ್ಯುತ್ ಉತ್ಪಾದನೆ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಕಲ್ಲಿದ್ದಲು ಕೊರತೆಗೆ ತೆಲಂಗಾಣ ಹೋರಾಟ, ಕೇಂದ್ರ ಸರಕಾರದ ಅಸಹಕಾರ ಎಂದು ಆರೋಪಿಸುತ್ತಾ ಕಾಲ ದೂಡುತ್ತಿದ್ದ ಇಂಧನ ಸಚಿವರ ಹೇಳಿಕೆ ಸತ್ಯ ಮರೆ ಮಾಚಲು ನಡೆಸುತ್ತಿರುವ ಸರ್ಕಸ್ ಎನ್ನುವದು ಈಗ ಗುಟ್ಟಾಗಿಯೇನು ಉಳಿದಿಲ್ಲ.
ಬೇಸಿಗೆ ಕಾಲದಲ್ಲಿ ಜಲಮೂಲ ವಿದ್ಯುತ್ ಉತ್ಪಾದನೆ ಕಡಿಮೆ ಇರುವುದರಿಂದ, ಸಹಜವಾಗಿ ವಿದ್ಯುತ್ ಉತ್ಪಾದನೆಯ ಹೆಚ್ಚಿನ ಒತ್ತಡ ಶಾಖೋತ್ಪನ್ನ ಕೇಂದ್ರ ಆರ್ಟಿಪಿಎಸ್ ಮೇಲಿರುತ್ತದೆ. ಈ ಹಿನ್ನಲೆಯಲ್ಲಿ ಮೊದಲಿಗೆ ಮುಂಗಡವಾಗಿ 3 ರಿಂದ 6 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಆರ್ಟಿಪಿಎಸ್ನಲ್ಲಿ ಸಂಗ್ರಹಿಸಲಾಗುತ್ತಿತ್ತು. ಆದರೆ, ಕಳೆದ ಒಂದು ವರ್ಷದಿಂದ ಆರ್ಟಿಪಿಎಸ್ನಲ್ಲಿ ಕಲ್ಲಿದ್ದಲು ಸಂಗ್ರಹಣೆ ಸಂಪೂರ್ಣ ಬರಿದಾಗಿದೆ. ಈಗ ನಿತ್ಯವೂ ರೈಲಿನಿಂದ ಆಮದಾಗುವ ಕಲ್ಲಿದ್ದಲನ್ನು ಕಾಯುವ ದುಸ್ಥಿತಿ ಆರ್ಟಿಪಿಎಸ್ಗೆ ಬಂದೊದಗಿದೆ.
ಇದರಲ್ಲಿ ಪೂರೈಕೆಯಾಗುತ್ತಿರುವ ಕಲ್ಲಿದ್ದಲು ಕೂಡ ತೀರ ಕಳಪೆ ಗುಣಮಟ್ಟದ್ದು. ಸಕರ್ಾರ ತೊಳೆದ ಕಲ್ಲಿದ್ದಲು ಪೂರೈಕೆ ನಿಲ್ಲಿಸಿದಾಗಿಂದ, ಕಲ್ಲಿದ್ದಲಿನಲ್ಲಿ ಬರುವ ಕಬ್ಬಿಣ, ಸರಳು, ಭಾರಿ ಗಾತ್ರದ ಕಲ್ಲುಗಳು ಘಟಕಗಳನ್ನು ತೀವ್ರ ಹಾನಿಗೀಡು ಮಾಡಿವೆ. ಇದರಿಂದಾಗಿ ಘಟಕಗಳು ಮೇಲಿಂದ ಮೇಲೆ ಉತ್ಪಾದನೆ ನಿಲ್ಲಿಸುತ್ತಿವೆ. ಕಳಪೆ ಕಲ್ಲಿದ್ದಲಿನಲ್ಲಿ ಬರುವ ಶೇಕಡಾ 60% ರಷ್ಟು ಬೂದಿ, ಕಲ್ಲುಗಳು ಹಾಗೂ ಇತರೆ ಸಾಮಗ್ರಿಗಳು ತುಂಬಿಕೊಂಡು ಘಟಕಗಳು ದುಸ್ಥಿಗೆ ತಲುಪಿವೆ. ಇನ್ನೂ ಕಳಪೆ ಕಲ್ಲಿದ್ದಲು ಬಳಕೆಯಿಂದ ಹೆಚ್ಚು ಹೆಚ್ಚು ಇಂಧನವನ್ನು ಕಲ್ಲಿದ್ದಲು ಉರಿಸಲು ಬಳಕೆ ಮಾಡಲಾಗುತ್ತೆ, ಇದು ಸಕರ್ಾರಕ್ಕೆ ಅನಗತ್ಯ ಆಥರ್ಿಕ ಹೊರೆಯಾಗಿದೆ, ಇನ್ನೂ ಹಳೆಯಾದಾದ ಯಂತ್ರೋಪಕಾರಣಗಳನ್ನು ಕಾಲ ಕಾಲಕ್ಕೆ ಸರಿಯಾಗಿ ನಿರ್ವಹಣೆ ಮಾಡದಿರುವುದು ಸಮಸ್ಯೆ ಮತ್ತಷ್ಟು ಉಲ್ಬಣವಾಗಲು ಕಾರಣವಾಗಿದೆ.
ಉಷ್ಣ ವಿದ್ಯುತ್ ಘಟಕಗಳ ಕಾರ್ಯಕ್ಷಮತೆಯ ಮಿತಿ 25 ವರ್ಷ. ಹೀಗಾಗಿ 1985ರಲ್ಲಿ ಸ್ಥಾಪಿತವಾದ ಆರ್.ಟಿ.ಪಿ.ಎಸ್ 1 ಮತ್ತು 2ನೇ ಘಟಕ ಹಾಗೂ ನಂತರದ ದಿನಗಳಲ್ಲಿ ಸ್ಥಾಪನೆಯಾದ 3 ಮತ್ತು 4ನೇ ಘಟಕಗಳು ಈಗ ಪದೇ ಪದೇ ತಾಂತ್ರಿಕ ತೊಂದರೆಗೆ ಒಳಪಡುತ್ತಿವೆ. ಇವುಗಳ ಸಂಪೂರ್ಣ ನವೀಕರಣಕ್ಕೆ ಅಂದಾಜು ಸಾವಿರ ಕೋಟಿ ರೂಪಾಯಿಗಳ ಹಣಕಾಸಿನ ಅಗತ್ಯವಿದೆ. ಆದರೆ ಕನರ್ಾಟಕ ವಿದ್ಯುತ್ ನಗಮದ ಬಳಿ ಹಣಕಾಸಿನ ಕೊರತೆಯಿದೆ. ಹಣ ಹೊಂದಿಸಬೇಕಾದ ಸರಕಾರ ದುಬಾರಿ ಬೆಲೆಗೆ ಖಾಸಗಿ ಕಂಪನಿಗಳಿಂದ ವಿದ್ಯುತ್ ಖರೀದಿಗೆ ತೋರುವ ಆಸಕ್ತಿ, ಆರ್ಟಿಪಿಎಸ್ ದುರಸ್ಥಿಗೆ ತೋರುತ್ತಿಲ್ಲ..!
ಹೀಗೆ ತಾಂತ್ರಿಕ ಸಮಸ್ಯೆಯಿಂದ ಬಳಲುತ್ತಿರುವ ಕೆಲ ಘಟಕಗಳ ದುರಸ್ಥಿಗೆ ಜಪಾನ್ದಿಂದ ತಜ್ಞರು ಬರಬೇಕಾಗಿದೆ. ಆದ್ದರಿಂದಲೇ ಘಟಕಗಳು ಕೈಕೊಟ್ಟಾಗಲೆಲ್ಲಾ ನಾಲ್ಕಾರು ದಿನ ವಿಳಂಬವಾಗಿ ವಿದ್ಯುತ್ ಉತ್ಪಾದನೆ ಕುಂಠಿತಗೊಳ್ಳುತ್ತದೆ. ಇದರಿಂದಾಗಿ ವಿತರಣಾ ವ್ಯವಸ್ಥೆಯಲ್ಲಿ ಏರು ಪೇರಾಗಿ ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿಯಾಗುತ್ತದೆ.
ಈ ವರ್ಷದ ಬೀಕರ ಬರಗಾಲದ ಬಿಸಿ ಆರ್ಟಿಪಿಎಸ್ಗೂ ತಟ್ಟಿದೆ. ಆರ್ಟಿಪಿಎಸ್ನ 8 ಘಟಕಗಳ ಕೂಲಿಂಗ್ ಟವರ್ಗಳಿಗೆ ಪ್ರತಿ ದಿನ ಬೇಕಾಗುವ 150 ಕ್ಯೂಸೆಕ್ ನೀರು ಕೃಷ್ಣಾ ನದಿಯಿಂದ ಪೂರೈಸಲಾಗುತ್ತಿತ್ತು. ಆದರೆ, ಈಗ ಬರಗಾಲ ಇರುವದರಿಂದ ನದಿಯಲ್ಲಿ ನೀರಿಲ್ಲ..! ಇದರಿಂದಾಗಿ ಆರ್ಟಿಪಿಎಸ್ 8 ಘಟಕಗಳ ಪೈಕಿ 4 ಘಟಕಗಳು ಈಗಾಗಲೇ ವಿದ್ಯುತ್ ಉತ್ಪಾದನೆ ನಿಲ್ಲಿಸಿವೆ. ಇನ್ನು ಕೆಲವು ದಿನಗಳಲ್ಲಿ ನದಿಗೆ ನೀರು ಬಾರದಿದ್ದರೆ ಆರ್ಟಿಪಿಎಸ್ನ ಎಲ್ಲ ಘಟಕಗಳು ಸ್ತಬ್ದವಾಗುವುದು ಗ್ಯಾರಂಟಿ.. ಹೀಗೆ ಆರ್ಟಿಪಿಎಸ್ಗೆ ಸಾಲು ಸಾಲು ಸಮಸ್ಯೆಗಳು ಬೆಂಬಿಡದೇ ಕಾಡುತ್ತಿದ್ದು, ಉತ್ಪಾದನೆ ಮಾಡುವುದು ಕಷ್ಟವಾಗಿದೆ.
ಆರ್.ಟಿ.ಪಿ.ಎಸ್ನಲ್ಲಿ ಕಲ್ಲಿದ್ದಲು, ಆಥರ್ಿಕ ಮತ್ತು ತಾಂತ್ರಿಕ ಸಮಸ್ಯೆಗಳಿಗಿಂತ ಭೀಕರವಾದದ್ದು ಇಲ್ಲಿನ ಗುತ್ತಿಗೆ ಕಾಮರ್ಿಕರದ್ದು. ಇವರನ್ನು ದ್ವೀತಿಯ ದಜರ್ೆ ನಾಗರೀಕರಂತೆ ಕಾಣುವ ಕೆಪಿಸಿ ಕನಿಷ್ಟ ಸೌಕರ್ಯ ಕಲ್ಪಿಸದೇ ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದೆ.
ಇಲ್ಲಿ ಒಟ್ಟು 2089 ಜನ ಖಾಯಂ ನೌಕರರಿದ್ದು, 900 ಜನ ಗುತ್ತಿಗೆ ಕಾಮರ್ಿರು ಕೆಲಸ ಮಾಡುತ್ತಿದ್ದಾರೆ. ಆದರೆ, ಗುತ್ತಿಗೆ ಕಾಮರ್ಿಕರು ತಾತ್ಕಾಲಿಕ ಕೆಲಸಕ್ಕೆಂದು ಬಂದು ಹೋಗುವವರಲ್ಲ. ದಶಕಗಳಿಂದ ನಿರಂತರವಾಗಿ ಆರ್ಟಿಪಿಎಸ್ನಲ್ಲಿ ಕಲ್ಲಿದ್ದಲು ವಿಭಾಗ, ಬಾಯ್ಲರ್, ಟಬರ್ೈನ್ ನಿರ್ವಹಣೆ, ಸ್ಟೋರ್, ಐಎನ್ಸಿ, ತ್ಯಾಜ್ಯವಾಗಿ ಬೂದಿ ಹೊರಬೀಳುವ ವಿಭಾಗ, ಆಸ್ಪತ್ರೆ ಸೇರಿದಂತೆ ಬಹುತೇಕ ವಿಭಾಗಗಳನ್ನು ನೋಡಿಕೊಳ್ಳುವವರು. ಹೀಗೆ ಕಾರ್ಯ ನಿರ್ವಹಿಸುವಾಗ ಅದೆಷ್ಟೋ ಜನ ತಮ್ಮ ಪ್ರಾಣ ಕಳೆದುಕೊಂಡ ಉದಾರಣೆಗಳಿವೆ.
ಹಗಲಿರುಳು ತಮ್ಮ ಬದುಕನ್ನೇ ಒತ್ತೇಯಿಟ್ಟು ದುಡಿಯುತ್ತಿರುವ ಗುತ್ತಿಗೆ ನೌಕರರನ್ನು ಇಲ್ಲಿಯವರೆಗಾದರೂ ಖಾಯಂ ಮಾಡಲು ಆಡಳಿತ ಮಂಡಳಿ ಮನಸ್ಸು ಮಾಡಿಲ್ಲ. ಖಾಯಂ ಮಾಡಬೇಕೆಂದು ಕನರ್ಾಟಕ ವಿದ್ಯುತ್ ನಿಗಮಕ್ಕೆ ಪ್ರಸ್ತಾವನೆ ಹೋಗಿದ್ದರೂ, ನಿಗಮ ಮಾತ್ರ ತನಗೇನು ಗೊತ್ತಿಲ್ಲದಂತೆ ವತರ್ಿಸುತ್ತಿದೆ. ಸಕರ್ಾರ ಮಾತ್ರ ಗುತ್ತೇದಾರರನ್ನು ಬೆಂಬಲಿಸುತ್ತಾ, ಕಾಮರ್ಿಕರ ಬದುಕಿನ ಮೇಲೆ ಚೆಲ್ಲಾಟವಾಡುತ್ತಿದೆ.
ಕಾಮರ್ಿಕರ ಕುರಿತು ಇಲ್ಲಿ ಒಂದು ವಿಷಯ ಗಮನಿಸಬೇಕು. ಯಾಕೆಂದರೆ, 1985ರಲ್ಲಿ ಆರ್ಟಿಪಿಎಸ್ ನ 1 ಮತ್ತು 2ನೇ ಘಟಕಗಳಿಗೆ ನೇಮಕಗೊಂಡ ನೌಕರರೇ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದಾರೆ, ಸದ್ಯ ಆರ್ಟಿಪಿಎಸ್ನಲ್ಲಿ 8 ಘಟಕಗಳಿವೆ. ತಾಂತ್ರಿಕ, ಆಡಳಿತಾತ್ಮಕ ಸಿಬ್ಬಂದಿ ಕೊರತೆ ಇದ್ದರೂ ಹೊಸದಾಗಿ ನೌಕರರನ್ನು ನೇಮಕ ಮಾಡಿಕೊಳ್ಳುವ ಗೋಜಿಗೆ ಕೆಪಿಸಿ ಹೋಗುತ್ತಿಲ್ಲ. ಇದು ಮುಖ್ಯವಾಗಿ ಆರ್ಟಿಪಿಎಸ್ನ್ನು ಕಾಡುತ್ತಿದೆ.
ಕೆಪಿಸಿ ತಾನು ವಿವಿಧ ಮೂಲಗಳಿಂದ ಉತ್ಪಾದಿಸುವ ವಿದ್ಯುತ್ನ್ನು ಅಗ್ಗದ ದರದಲ್ಲಿ ನೀಡುತ್ತಿದೆ, ಆದರೆ, ವಿದ್ಯುತ್ ಪಡೆದ ಬೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಮೆಸ್ಕಾಂ ಕಂಪನಿಗಳು ಕೆಪಿಸಿಗೆ 13 ಸಾವಿರ ಕೋಟಿ ಹಣ ಬಾಕಿ ನೀಡಬೇಕಿದೆ. ಇದೇ ನೆಪೆಲ್ಲಿ ಕೆಪಿಸಿ ನೂತನ ಯೋಜನೆಗಳನ್ನು ಹಾಕಿಕೊಳ್ಳಲು ಮುಂದಾಗುತ್ತಿಲ್ಲ. ಆರ್.ಟಿ.ಪಿಎಸ್ ನಲ್ಲಿ ಉಲ್ಬಣಿಸಿರುವ ತಾಂತ್ರಿಕ ಸಮಸ್ಯೆ ನಿವಾರಣಿಗೆ ಹಣದ ಕೊರತೆ ಕಾಡುತ್ತಿದೆ.
MS Hiremath

No comments:
Post a Comment
Thanku