Sunday, January 1, 2012

ಮಾನಪ್ಪ ವಜ್ಜಲ ಮತ್ತು ಶಿವನಗೌಡ


ಕಮಲ ಪಕ್ಷದ ಮಾನಪ್ಪ ವಜ್ಜಲ ಮತ್ತು ಶಿವನಗೌಡ ತಾಲೂಕುಗಳ ಸವರ್ಾಂಗೀಣ ಅಭಿವೃದ್ಧಿಗೆ ಎಂದೆಂದೂ ಶ್ರಮಿಸಲಿಲ್ಲ. ಸಕರ್ಾರದ ಹತ್ತಾರು ಯೋಜನೆಗಳನ್ನು ಯಾರೊಬ್ಬರಿಗೂ ತಲುಪಿಸಲಿಲ್ಲ. ಲಿಂಗಸ್ಗೂರಿನಲ್ಲಿ ಮಾನಪ್ಪ ತನ್ನ ಸ್ವಜಾತಿ ಅಧಿಕಾರಿಗಳನ್ನು ತಂದು ತಾಲೂಕನ್ನು ಲೂಟಿ ಮಾಡಲು ಬಿಟ್ಟಿದ್ದಾನೆ. ಅದುವೇ ಆತನ 2ವರೆ ವರ್ಷದ ಮಹ್ಸಾಧನೆಯಾಗಿದೆ. ಇತ್ತ ಶಿವನಗೌಡನು ದೇವದುರ್ಗದಲ್ಲಿ ತನ್ನ ಸಂಬಂಧಿಗಳಿಗೆ ಹತ್ತಾರು ಕಾಮಗಾರಿಗಳನ್ನು ನೀಡಿ, ಅವರ ಮುಖಾಂತರ ತನ್ನ ಜೇಬನ್ನು ತುಂಬಿಸಿಕೊಳ್ಳುತ್ತಿದ್ದಾನೆ. ಜೊತೆಯಲ್ಲಿ ಗಲ್ಲಿಗೊಂದು ಬಾರ್ಶಾಫ್ ತೆಗೆಯುತ್ತ, ತನ್ನ ಅವಧಿಯನ್ನು ನೂಕಿದ್ದಾನೆ. ಒಟ್ಟಾರೆ, ಇವರಿಬ್ಬರೂ ತಾಲೂಕಿನ ಜನರಿಗೆ ಮಕ್ಕಳಾಗಿ ಕೆಲಸವು ಮಾಡಿಲ್ಲ. ಈ ಕಡೆ ಕಮಲದವರಿಗೆ ಸ್ಮಶಾನದಲ್ಲಿರುವ ಹೆಣವು ಆಗಲಿಲ್ಲ ಎಂದು ನಮ್ಮ ಪ್ರತಿನಿಧಿ ಸಂಪೇಲ್ಲೇರ್ ವಿಶ್ಲೇಷಿಸುತ್ತಾರೆ.
ಮಾನಪ್ಪ ವಜ್ಜಲನ ಕುರಿತು ಕಳೆದೆರಡು ಬಾರಿ ನಮ್ಮ ಪತ್ರಿಕೆಯಲ್ಲಿ ಬರೆಯಲಾಗಿತ್ತು. ಆದಾಗ್ಯೂ ಮಗದೊಮ್ಮೆ ಬರೆಯುವುದು ಅನಿವಾರ್ಯವಾಗಿದೆ. ಇದು ಮಾನಪ್ಪನೆಂಬ ಅನಕ್ಷರಸ್ಥನ ಅಂತ್ಯದ ಸುದ್ದಿ ಎಂದರೆ ತಪ್ಪಾಗಲಾರದು.ಈತ ಲಿಂಗಸ್ಗೂರಿಗೆ ಶಾಸಕನಾದ ಮೇಲೆ ಎಲ್ಲಿಯೂ ಯಾವೊಂದು ಹೇಳಿಕೊಳ್ಳುವ ಕೆಲಸಗಳನ್ನು ಮಾಡಲಿಲ್ಲ. ಸಕರ್ಾರಗಳಿಂದ ಬಂದಂತಹ ಅನುದಾನ ಮತ್ತು ಯೋಜನೆಗಳನ್ನು ಸಮರ್ಪಕವಾಗಿ ಜನಸಾಮಾನ್ಯರಿಗೆ ತಲುಪಿಸಲಿಲ್ಲ. ಅತ್ತ ತಾನು ಗೆದ್ದು ಬಂದಿದ್ದ ಬಿಜೆಪಿಯಲ್ಲಿಯೂ ಯಾವೊಂದು ಘನಂದಾರಿ ಕೆಲಸಗಳನ್ನು ಮಾಡಲಿಲ್ಲ. ಅದರಲ್ಲಿ ಒಬ್ಬನೇ ಒಬ್ಬ ಹೊಸ ಕಾರ್ಯಕರ್ತನನ್ನು ಹುಟ್ಟುಹಾಕಲಿಲ್ಲ. (ಕೆಲವೊಬ್ಬರು ಹಣದಾಸೆಗೆ ಮಾನಪ್ಪನಿಂದ ಆಗಾಗ ತಿರುಗುತ್ತಾರೆ. ಅವರ್ಯಾರು ಕಾರ್ಯಕರ್ತರಾಗಲು ಸಾಧ್ಯವಿಲ್ಲ.) ಆದರೆ, ಒಂದಂತೂ ಸ್ಪಷ್ಟ ಮಾನಪ್ಪ ಶಾಸಕನಾದ ಮೇಲೆ ಸ್ವಜಾತಿಯ ಅಧಿಕಾರಿಗಳನ್ನು ಲಿಂಗಸ್ಗೂರಿಗೆ ಎಳೆತಂದು ಇದ್ದಬಿದ್ದದನ್ನೇಲ್ಲ ಮೇಯಲು ಬಿಟ್ಟಿದ್ದು ಬಿಟ್ಟರೇ ಮತ್ತೇನು ಮಾಡಲಿಲ್ಲ. ದುಡ್ಡನ್ನು ಲೂಟಿ ಮಾಡುವದರಲ್ಲಿಯೇ ತನ್ನ 2ವರೆ ವರ್ಷ ಕಳೆದು ಬಿಟ್ಟ.ಇತ್ತೀಚಿಗೆ ನಡೆದ ರಾಜಕೀಯ ದೊಂಬರಾಟಗಳಲ್ಲಿ ಮಾನಪ್ಪ ಬಿಜೆಪಿಯ ವಿಪ್ನ್ನು ಉಲ್ಲಂಘಿಸಿ, ತಾಲೂಕಿನಲ್ಲಿ ಲಿಂಗವಂತರನ್ನು ಒಲೈಸಿಕೊಳ್ಳಲು ತನ್ನ ರಾಜಕೀಯ ಗುರು ಆನ್ವರಿ ಬಸವರಾಜಪ್ಪನ ಹಿಂದೆ ಓಡಿಹೋಗಿ ಯಡಿಯೂರಪ್ಪ 2 ಬಾರಿ ವಿಶ್ವಾಸಮತ ಸೂಚಿಸುವ ಸಂದರ್ಭದಲ್ಲಿ ಗೈರು ಹಾಜರಾಗಿದ್ದ. ಆ ಗೈರು ಹಾಜರಿಯೇ ಇಂದು ಮಾನಪ್ಪನ ಅಂತ್ಯವನ್ನು ಪ್ರಾರಂಭಿಸುತ್ತಿದೆ. ಆ ವಿದ್ಯಮಾನದ ಪರಿಣಾಮ ಬಿಜೆಪಿ ಈತನನ್ನು ಪಕ್ಷದಿಂದ ಉಚ್ಛಾಟಿಸುವ ತೀಮರ್ಾನಕ್ಕೆ ಬಂದಿದೆ. ಇದಕ್ಕೆ ಪೂರಕವಾಗಿ ಜಿಲ್ಲಾಧ್ಯಕ್ಷ ತಾಲೂಕಿನ ಎಲ್ಲ ಘಟಕಗಳನ್ನು ವಿಸಜರ್ಿಸಿದ್ದಾನೆ.ಮತ್ತೊಂದೆಡೆ ಮಾನಪ್ಪನನ್ನು ಪಕ್ಷದಿಂದ ಕೈಬಿಡಬಾರದು, ಶಾಸಕ ಸ್ಥಾನದಿಂದ ಅನರ್ಹಗೊಳಿಸಬಾರದು ಎಂದು ಕಾರ್ಯಕರ್ತರು ಬೆಂಗಳೂರಿನ ಯಡಿಯೂರಪ್ಪನ ಮನೆ ಮುಂದೆ ಧರಣಿ, ಸತ್ಯಾಗ್ರಹಗಳನ್ನು ಮಾಡುತ್ತಿದ್ದಾರೆ. ಅದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತದೆ. ಕಾದು ನೋಡಬೇಕು.ಮಾನಪ್ಪನ ಬಗ್ಗೆ ಒಂದಿಷ್ಟು..!ವಜ್ಜಲ ಎಂಬ ಕುಗ್ರಾಮದಿಂದ ಬಂದ ಈತ ಮೂಲತಃ ಅಗರ್ಭ ಶ್ರೀಮಂತ ಕುಟುಂಬದಿಂದ ಬಂದಾತನೇನು ಅಲ್ಲ. ಇಲಕಲ್ನ ಕೆಲವು ಗ್ರಾನೈಟ್ ಉದ್ದಿಮೆದಾರರ ಕೈಯಲ್ಲಿ ಕೆಲಸ ಮಾಡಿಕೊಂಡು ಮುಂದೆ ಬಂದಿರುವಾತ. ಅದರಂತೆ ವಜ್ಜಲದಲ್ಲಿಯು ಹೇಳಿಕೊಳುವಂತಹ ಮನುಷ್ಯನು ಅಲ್ಲ. ತಾನು ಮೊದಲಿಗೆ ಕುಲಕಸುಬನ್ನೇ ಮಾಡಿಕೊಂಡು ನಂತರ ಸಣ್ಣಪುಟ್ಟ ಗುತ್ತಿಗೆ ಕೆಲಸಗಳನ್ನು ನಿರ್ವಹಿಸುತ್ತ ಒಂದು ಹಂತಕ್ಕೆ ಬೆಳೆದ. ನೀರಾವರಿ ಇಲಾಖೆಗೆ ಸಂಬಂಧಿಸಿದ 2-3ಕಾಮಗಾರಿಗಳಲ್ಲಿ ಅಧಿಕ ಹಣವನ್ನು ಗಳಿಸಿದ. ದಿನೇ ದಿನೇ ಹಣ ಹೆಚ್ಚುತ್ತಿದ್ದಂತೆ ಈತನಿಗೆ ಏಕಾಏಕಿ ಎಂ.ಎಲ್.ಎ ಆಗಬೇಕೆಂಬ ಹುಚ್ಚು ಹಿಡಿಯಿತು. ಆ ಹುಚ್ಚಿನಿಂದಲೇ ಮಾನಪ್ಪ ರಾಜಕೀಯಕ್ಕೆ ಎಂಟ್ರಿ ಹೊಡೆದದ್ದು.ಅದೇ ಸಂದರ್ಭಕ್ಕೆ ವಿಧಾನಸಭಾ ಚುನಾವಣೆಗಳು ನಡೆದವು. ದೇವದುರ್ಗದಲ್ಲಿ ಮೊದಲ ಬಾರಿಗೆ ಹನುಮಂತಪ್ಪ ಆಲ್ಕೋಡನ ವಿರುದ್ಧ ಪಕ್ಷೇತರನಾಗಿ ನಿಂತು ಹೇಳಿಕೊಳ್ಳುವಷ್ಟು ಮತಗಳನ್ನು ಪಡೆದು ಸೋಲು ಅನುಭವಿಸಿದನು.ನಂತರದ ದಿನಗಳಲ್ಲಿ ಮಾನಪ್ಪನ ಅಲ್ಪಸ್ವಲ್ಪ ವರ್ಚಸ್ಸು, ಆತನಲ್ಲಿದ್ದ ಹಣ ನೋಡಿ ಕಾಂಗ್ರೇಸ್ನವರು ತಮ್ಮ ಪಕ್ಷಕ್ಕೆ ಸೇರಿಸಿಕೊಂಡರು. ಅದು ಈತನಿಗೂ ಅನಿವಾರ್ಯವಾಗಿತ್ತು. ಯಾಕೆಂದರೆ, ಯಾವುದಾದರೊಂದು ರಾಜಕೀಯ ಪಕ್ಷದಲ್ಲಿದ್ದರೆ, ಮುಂದಿನ ಬಾರಿ ಎಂ.ಎಲ್.ಎ ಟಿಕೆಟ್ ಸಿಗಬಹುದು. ಅದರಂತೆ ನಾ ಕಂಡ ಕನಸು ನನಸಾಗಬಹುದು. ವಿಶೇಷವಾಗಿ ನನ್ನ ಗುತ್ತಿಗೆ ಕೆಲಸಗಳಿಗೆ ರಕ್ಷಣಿ ಸಿಗಬಹುದೆಂದು ತಿಳಿದು ಮಾನಪ್ಪ ಕಾಂಗ್ರೇಸ್ ಜೊತೆ ಕೈಗೂಡಿಸಿದ.ಕ್ರಮೇಣ 2008ರ ವಿಧಾನಸಭಾ ಚುನಾವಣೆಯಲ್ಲಿ ದೇವದುರ್ಗದಿಂದ ಮೀಸಲು ಕ್ಷೇತ್ರ ಲಿಂಗಸ್ಗೂರಿಗೆ ವರ್ಗವಾಗುತ್ತಿದ್ದಂತೆ ಎಂ.ಎಲ್.ಎ ಟಿಕೆಟ್ಗಾಗಿ ಪೈಪೋಟಿ ಜಾಸ್ತಿಯಾಯಿತು. ಯಾಕೋ.. ಏನೋ.. ಮಾನಪ್ಪನಿಗೆ ಖಗರ್ೆ ಸಾಹೇಬರು ದಯೆ ತೋರಿಸಲಿಲ್ಲ. ಅದರಂತೆ ಕಾಂಗ್ರೇಸ್ ಜಿಲ್ಲಾಧ್ಯಕ್ಷ ವಸಂತಕುಮಾರ ಒತ್ತಡ ಪಕ್ಷದಲಿ ಹೆಚ್ಚಿದ್ದರಿಂದ ಕೊನೆಗೆ ಹೈಕಮಾಂಡ್ ವಸಂತಕುಮಾರ್ಗೆ ಟಿಕೆಟ್ ನೀಡಿತು.ಕಾಂಗ್ರೇಸ್ನಿಂದ ಟಿಕೇಟ್ ವಂಚಿತನಾದ ಮಾನಪ್ಪ ನೇರವಾಗಿ ಬಿಜೆಪಿಗೆ ಜಿಗಿದನು. ಬಿಜೆಪಿ ಅಷ್ಟೋತ್ತಿಗೆ ಸಿದ್ದುಬಂಡಿ ಎಂಬಾತನಿಗೆ ಟಿಕೆಟ್ ನೀಡಲು ನಿರ್ಧರಿಸಿತ್ತಾದರೂ ಮಾನಪ್ಪ ಬಿಜೆಪಿಗೆ ಬರುತ್ತಿದ್ದಂತೆ ಸಿದ್ದು ಬಂಡಿಯನ್ನು ಸಮಜಾಯಿಸಿ ಮಾನಪ್ಪನಿಗೆ ಟಿಕೆಟ್ ನೀಡಿತು. (ಅಷ್ಟೊತ್ತಿಗೆ ಬಸವರಾಜ ಪಾಟೀಲ್ ಆನ್ವರಿ ಕಮಲಕ್ಕೆ ಹಾರಿ ಬಂದಿದ್ದರು)ಚುನಾವಣೆಯಲ್ಲಿ ಮಾನಪ್ಪನ ಹಣಬಲದ ಮುಂದೆ ಲಿಂಗಸ್ಗೂರಿನ ಅರ್ಧದಷ್ಟು ಮತದಾರರು ತಮ್ಮ ಮತಗಳನ್ನು ಮಾರಿಕೊಂಡರು. ಹಟ್ಟಿ ಹೊರತುಪಡಿಸಿದರೆ, ಉಳಿದ ಎಲ್ಲ ಭಾಗದಲ್ಲಿ ಮಾನಪ್ಪನಿಗೆ ಅತಿಹೆಚ್ಚು ಮತಗಳು ಬಂದವು. ಬಸವರಾಜ ಪಾಟೀಲ್ ಆನ್ವರಿಯ ಕೈಚಳಕ ಅಲ್ಲಲ್ಲಿ ಯಶಸ್ವಿಯಾದ್ದರಿಂದ ಲಿಂಗಸ್ಗೂರಿಗೆ ಮಾನಪ್ಪ ಶಾಸಕನಾಗಿ ಗೆದ್ದುಬಂದನು. ಅಲ್ಲಿಗೆ ಮಾನಪ್ಪನಿಗಿದ್ದ ಎಂ.ಎಲ್.ಎ ಹುಚ್ಚು ಸ್ವಲ್ಪಮಟ್ಟಿಗೆ ಇಳಿಯತೊಡಗಿತು.ಒಂದು ವೇಳೆ ಮಾನಪ್ಪ ಸೋತುಹೋಗಿದ್ದರೆ, ಇನ್ನೊಂದು ಬಾರಿ ರಾಜಕೀಯಕ್ಕೆ ಬರುತ್ತಿದ್ದಿಲ್ಲ. ಮುಂದೆ ಗ್ರಾಮಪಂಚಾಯತ್ಗೆ ಅವಿರೋಧ ಆಯ್ಕೆ ಎಂದರೂ ಇತ್ತ ತಲೆಹಾಕುತ್ತಿದ್ದಿಲ್ಲ. ದುರಂತಕ್ಕೆ ಜಯಿಸುತ್ತಿದ್ದಂತೆ ತಾನೊಬ್ಬ ಶಾಸಕೆನೆಂಬುದನ್ನೇ ಮರೆತು ಬರೀ ಚಿಲ್ಲರೆ ಕೆಲಸಗಳನ್ನೇ ಮಾಡುತ್ತಾ ಬಂದ. ಇದು ಅನಕ್ಷರಸ್ಥ ಮಾನಪ್ಪನ ಸಿಂಪಲ್ ರಿಪೋಟರ್್.!ತಾಲೂಕಿನಲ್ಲಿ ಕಿಸ್ತಿದ್ದಾದರೂ ಏನು..?ಚುನಾವಣೆಯ ಸಂದರ್ಭದಲ್ಲಿ ನಾನು ಗೆದ್ದರೆ ನಿಮ್ಮೂರಿಗೆ ಗುಡಿ-ಗುಂಡಾರಗಳನ್ನು ಕಟ್ಟಿಕೊಡುತ್ತೇನೆಂದು ಆಶ್ವಾಸನೆಗಳನ್ನು ನೀಡಿದ್ದ. ಈತನ ಮಾತಿಗೆ ಕೆಲವು ಹಳ್ಳಿಗಳ ಗ್ರಾಮಸ್ಥರು ಹಳೆ ಗುಡಿಗಳನ್ನು ಕೆಡವಿ ಮೂತರ್ಿಗಳನ್ನು ಹೊರಗಿಟ್ಟಿದ್ದಾರೆ. ಆದರೆ, ಮಾನಪ್ಪ ಮಾತ್ರ ಗೆದ್ದಮೇಲೆ ಯಾವ ಹಳ್ಳಿಗಳತ್ತ ಮುಖ ತೋರಿಸಿಲ್ಲ. ಒಂದು ವೇಳೆ ಊರಿನ ಜನರು ತಾನಿದ್ದಲ್ಲಿಗೆ ಬಂದು ಕೇಳಿದರೆ, ಹಾರೈಕೆಯ ಉತ್ತರ ನೀಡಿ ಕಳುಹಿಸುತ್ತಾನೆ. ಈ ತಂತ್ರವನ್ನು ಹಿಂದೆ ದೇವದುರ್ಗದಲ್ಲಿಯೂ ಮಾನಪ್ಪ ಮಾಡಿ ಬಂದಿದ್ದ.ಲಿಂಗಸ್ಗೂರು ವಿಧಾನಸಭಾ ಕ್ಷೇತ್ರಕ್ಕೆ ಪ್ರಮುಖವಾಗಿ ಹಟ್ಟಿ, ಮುದಗಲ್, ಲಿಂಗಸ್ಗೂರು ನಗರಗಳು ಒಳಪಡುತ್ತವೆ. ಇಲ್ಲಿಯೇ ಅತಿಹೆಚ್ಚು ಮತದಾರರು ಇರುವುದು. ಮೂರರಲ್ಲಿ ಹಟ್ಟಿಯನ್ನು ಹೊರತುಪಡಿಸಿದರೆ, ಇನ್ನುಳಿದೆರಡು ನಗರಗಳು ಚುನಾವಣೆಯಲ್ಲಿ ಮಾನಪ್ಪನಿಗೆ ಸಾಥ್ ನೀಡಿವೆ. ಆದರೆ, ತನ್ನ ಬೆಂಬಲಕ್ಕಿದ್ದ ನಗರಗಳಿಗೆ ಏನಾದರೂ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ತಾನೇ.? ಅದು ಕೂಡ ಮಾಡಿಲ್ಲ.ಇನ್ನು ಹಟ್ಟಿಯ ವಿಷಯಕ್ಕೆ ಬಂದರೆ, ಇಲ್ಲಿ ಗ್ರಾಮವನ್ನು ಹೊರತುಪಡಿಸಿದರೆ, ಕ್ಯಾಂಪಿನ ಎಲ್ಲ ಕೆಲಸಗಳನ್ನು ಕಂಪನಿಯೇ ನೋಡಿಕೊಳ್ಳುತ್ತದೆ. ಇಲ್ಲಿ ಅಧಿಸೂಚಿತ ಪ್ರದೇಶ ಇರುವುದರಿಂದ ಅದರ ಬಜೆಟ್ನಲ್ಲಿ ಕೆಲವೊಂದು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಕ್ಯಾಂಪ್ನ್ನು ಹೊರತುಪಡಿಸಿ ಹಟ್ಟಿ ಗ್ರಾಮದಲ್ಲಿ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಸಮರ್ಪಕ ರಸ್ತೆ, ಚರಂಡಿಗಳಿಲ್ಲ, ಗ್ರಾಮದ ಕೆಲವೊಂದು ವಾಡರ್್ಗಳಿಗೆ ಹೋದರೆ, ಹೊನ್ನಿನ ನಾಡಿನ ಹೊಲಸು ಮುಖ ಕಾಣುತ್ತದೆ. ಎಲ್ಲ ಪಕ್ಷಗಳ ನಾಯಕರ ರಾಜಕೀಯದಿಂದ ಹದಗೆಟ್ಟು ಹೋಗಿರುವ ಗ್ರಾಮಕ್ಕೆ ಇಲ್ಲಿಯವರೆಗೆ ಯಾವೊಂದು ಕಾಯಕಲ್ಪವು ಮಾನಪ್ಪನಿಂದ ಸಿಕ್ಕಿಲ್ಲ.ಹೆಸರಿಗೆ ಮಾತ್ರ ಶಾಸಕನಾಗಿರುವ ಮಾನಪ್ಪ ತಾಲೂಕಿನ ಯಾವ ಹಳ್ಳಿಗಳಲ್ಲಿಯೂ ಕೆಲಸಗಳನ್ನು ಮಾಡಿಲ್ಲ. ಕಂಪನಿಯಲ್ಲಿ ಕ್ಯಾಸುವಲ್ ಲೇಬರ್ ತೆಗೆದುಕೊಳ್ಳಲು ತನ್ನ ಲೆಟರ್ಪ್ಯಾಡ್ನ್ನು ಕೆಲವರಿಗೆ ನೀಡುವುದು ಬಿಟ್ಟರೆ, ಮಾನಪ್ಪ ಬೇರೆನೂ ಮಾಡಿಲ್ಲ.ತಾಲೂಕಿನಲ್ಲಿ ಕುಸಿದಿರುವ ಕಾನೂನು ಸುವ್ಯವಸ್ಥೆ, ನಡೆಯದ ಅಭಿವೃದ್ಧಿ ಕೆಲಸಗಳು ಮತ್ತು ಮಾನಪ್ಪನ ಕಾರ್ಯವೈಖರಿಯ ಬಗ್ಗೆ ಇತ್ತೀಚಿಗೆ ದಲಿತ ಸಂಘಟನೆಗಳು ಬೃಹತ್ ಹೋರಾಟವನ್ನು ಮಾಡಿದವು. ಅಂತಹದೊಂದು ಜನಪರ ಹೋರಾಟವನ್ನು ಮಾನಪ್ಪ ಪಾಸಿಟಿವ್ ಆಗಿ ತೆಗೆದುಕೊಳ್ಳದೇ ತನ್ನ ತಮ್ಮಂದಿರ ಮುಖಾಂತರ ದಲಿತ ಸಂಘಟನೆಗಳ ವಿರುದ್ಧ ಏಟಿಗೆ ಎದಿರೇಟು ಎಂಬಂತೆ ದುಡ್ಡಿಗೆ ಬಾಡಿಗೆ ಜನರನ್ನು ಕರೆತಂದು ಹೋರಾಟ ಮಾಡಿಸಿದ್ದಾನೆ. ಇಷ್ಟರ ಮೇಲೆಯೇ ಗೊತ್ತಾಗುತ್ತದೆ ಮಾನಪ್ಪನಿಗೆ ದಲಿತರ ಮೇಲೆ ಎಷ್ಟೊಂದು ಕಾಳಜಿಯಿದೆ ಎಂಬುದು.ತಾಲೂಕಿಗೆ ಎಂ.ಎಲ್.ಎ ಆದ ಮೇಲೆ ಕ್ಷೇತ್ರಕ್ಕೆ ಮಗನಾಗಿ ಯಾವ ಜವಾಬ್ದಾರಿಯ ಕೆಲಸಗಳನ್ನು ಮಾಡದೇ, ಅತ್ತ ಬಿಜೆಪಿಯಲ್ಲಿಯೂ ಶಿಸ್ತಿನಿಂದ ಇರಲಾರದೇ, ಈಗ ಅತಂತ್ರನಾಗಿದ್ದಾನೆ. ಅದಕ್ಕಾಗಿ ಮನೆಗೆ ಮಗನಾಗಲಿಲ್ಲ, ಸ್ಮಶಾನಕ್ಕೆ ಹೆಣವಾಗಲಿಲ್ಲ ಎಂಬ ಗಾದೆ ಮಾನಪ್ಪನಿಗೆ ಸಧ್ಯ ಅನ್ವಯವಾಗುತ್ತಿದೆ.
ಶಿವನಗೌಡ...ಅದು ಶಿವನಗೌಡನ ಹಣೆಬರಹವೋ.. ನಮ್ಮ ಪತ್ರಿಕೆಯಲ್ಲಿ ಬಂದಂತಹ ಬರವಣಿಗೆಯೋ ಗೊತ್ತಿಲ್ಲ. ನಾವೆಂದು ಗೌಡನ ವಿರುದ್ಧ ಸುದ್ದಿ ಬರೆಯಲು ಪ್ರಾರಂಭಿಸಿದೆವೋ ಅಂದಿನಿಂದ ಗೌಡನ ರಾಜಕೀಯ ಅಧಃಪತನದತ್ತ ಸಾಗುತ್ತಿದೆ. ಆರಂಭದಲ್ಲಿ ಶಿವನಗೌಡನ ಕುರುಡು ದಬರ್ಾರ್ ಎಂಬ ಸುದ್ದಿ ಪ್ರಕಟಗೊಂಡಾಗ ಜಿಲ್ಲೆಯಲ್ಲಿ ಗ್ರಂಥಾಲಯ ಇಲಾಖೆಯ ಹಗರಣವೊಂದು ಬಯಲಿಗೆ ಬಿತ್ತು. ನಂತರ ದಿನಪತ್ರಿಕೆಯೊಂದರ ಮುಖಪುಟದಲ್ಲಿ ಸುದ್ದಿ ಬಂದು ಗೌಡನ ಮಾನ ರಾಜ್ಯಮಟ್ಟದಲ್ಲಿ ಹರಾಜಾಯಿತು.ನಂತರದ ಸಂಚಿಕೆಯಲ್ಲಿ ಶಿವನಗೌಡನ ಅಂತ್ಯ ಆರಂಭ ಹೊತ್ತಿ ಉರಿದ ದೀಪ ಆರುತ್ತಿದೆ! ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಆಗ ಗೌಡನ ಮಂತ್ರಿಗಿರಿಯೇ ವಜಾಗೊಂಡಿತು. ಇನ್ನು ಕಳೆದ ಸಂಚಿಕೆಯಲ್ಲಿ ತನ್ನ ಗೋರಿ ತಾನೇ ತೋಡಿಕೊಂಡ ಮಾಜಿಸಚಿವ ಎಂಬ ವರದಿ ಮಾಡುತ್ತಿದ್ದಂತೆ ಇತ್ತೀಚಿಗೆ ಹೈಕೋಟರ್್ ಸ್ಪೀಕರ್ ಕ್ರಮವೇ ಸರಿಯೆಂದು ತೀರ್ಪನ್ನು ನೀಡಿತು. ಅಲ್ಲಿಗೆ ಗೌಡ ತನ್ನ ಗೋರಿಯನ್ನು ತಾನೇ ತೋಡಿಕೊಂಡ. ಹೀಗಾಗಿ ಶಿವನಗೌಡ ತಾಲೂಕಿನ ಜನರಿಗೆ ಶಾಸಕನು ಆಗಲಿಲ್ಲ! ಅತ್ತ ಕಮಲ ಪಕ್ಷದವರಿಗೆ ನಿಷ್ಠಾವಂತ ಕಾರ್ಯಕರ್ತನೂ ಆಗಲಿಲ್ಲ. ಕಾರಣ ಈತನು ಮಾನಪ್ಪನಂತೆ ಮನೆಗೆ ಮಗನಾಗಲಿಲ್ಲ. ಸ್ಮಶಾನಕ್ಕೆ ಹೆಣವಾಗಲಿಲ್ಲ.ಶಿವನಗೌಡನ ಬೆಳವಣಿಗೆಯ ಕುರಿತು ಒಂದಿಷ್ಟು..!ತಾಲೂಕಾ ಪಂಚಾಯತ್ನ ಮಾಜಿ ಅಧ್ಯಕ್ಷ ಶಿವನಗೌಡ ರಾಜಕೀಯದಲ್ಲಿ ಬೆಳೆದು ಬಂದದ್ದೇ ವಿಚಿತ್ರ. ಅಲ್ಲಲ್ಲಿ ಪಡ್ಡೇ ಹುಡುಗರನ್ನು ಕಟ್ಟಿಕೊಂಡು ಜಗಳ ಮಾಡುವುದು ಬಿಟ್ಟರೇ, ಗೌಡನಿಗೆ ಮತ್ತೇನು ಗೊತ್ತಿದ್ದಿಲ್ಲ. ಮೂಲತಃ ಈತನ ರಾಜಕೀಯ ಗುರುಗಳೆಂದರೆ, ವೆಂಕಟೇಶ ನಾಯಕ, ಯಲ್ಲಪ್ಪ ಅಕ್ಕರಕಿ. (ಈಗ ಗೌಡ ನನ್ನ ಗಾಡಫಾದರ್ ರಾಮುಲು ಅಂತ ಹೇಳಿಕೊಳ್ಳುತ್ತಾನೆ. ಹಾಗೆಂದರೆ ಗೌಡ ಉಂಡ ಮನೆಗೆ ಜಂತಿ ಎಣಿಸಿದಂತೆ)ಮಾಜಿಸಂಸದ ವೆಂಕಟೇಶ ನಾಯಕ ಹಿಂದೊಮ್ಮೆ ಜಿಲ್ಲಾಪಂಚಾಯತ್ಗೆ ಶಿವನಗೌಡನಿಗೆ ಟಿಕೇಟ್ ನೀಡಿದ್ದರೆ, ಶಿವನಗೌಡ ಎಂಬ ಹೆಸರು ಯಾವೊಂದು ಪತ್ರಿಕೆಯಲ್ಲಿ ಮತ್ತು ವಿಶೇಷವಾಗಿ ನ್ಯೂಸ್ ಚಾನೆಲ್ಗಳ ಅತಿಥಿ ಕಾರ್ಯಕ್ರಮಗಳಲ್ಲಿ ಬರುತ್ತಿದ್ದಿಲ್ಲ. ಇನ್ನು ಗೂಟದ ಕಾರು, ವಿಧಾನಸೌಧವನ್ನು ದೂರದಿಂದ ನೋಡಿ ಸಂತೋಷ ಪಡಬೇಕಾಗಿತ್ತು. ಈತನಿಗೆ ಅಂದೇ ಜಿ.ಪಂನ ಟಿಕೇಟ್ ನೀಡಿದ್ದರೆ, ಅಬ್ಬಬ್ಬಾ.. ಅಂದರೆ ಜಿಲ್ಲಾಪಂಚಾಯತ್ನ 5ವರ್ಷದ ಅವಧಿಯಲ್ಲಿ 1ಬಾರಿ ಅಧ್ಯಕ್ಷನಾಗುತ್ತಿದ್ದಷ್ಟೇ..! ಇಷ್ಟು ಬಿಟ್ಟರೆ, ಶಿವನಗೌಡ ಒಂದಿಂಚೂ ರಾಜಕೀಯದಲ್ಲಿ ಮುಂದೆ ಬರುತ್ತಿದ್ದಿಲ್ಲ. ಮತ್ತ್ಯಾವ ಕಿಮ್ಮತ್ತು ಈತನಿಗೆ ಇರುತ್ತಿದ್ದಿಲ್ಲ.ಆದರೆ, ಅದು ಹಾಗೇ ಆಗಲಿಲ್ಲವೇ?ಮಾಜಿ ಸಂಸದರು ಜಿದ್ದಿಗೆ ನಿಂತು ಶಿವನಗೌಡನಿಗೆ ಟಿಕೇಟ್ ನಿರಾಕರಿಸಿದರು. ಅಲ್ಲಿಂದಲೇ ತಾತ ಮತ್ತು ಮೊಮ್ಮಗನ ಮಧ್ಯೆ ಮುಸುಕಿನ ಗುದ್ದಾಟ ಪ್ರಾರಂಭವಾಯಿತು. ಸಮಯಕ್ಕಾಗಿ ಕಾದು ಕುಳಿತಿದ್ದ ಶಿವನಗೌಡನಿಗೆ ಒಂದು ಸಂದರ್ಭ ಎದುರಾಯಿತು. ಅದುವೇ ಎಂ.ಎಲ್.ಎ ಚುನಾವಣೆ.ಒಂದು ಜಿಲ್ಲಾ ಪಂಚಾಯತ್ಗೆ ಟಿಕೇಟ್ ತರಲು ಅರ್ಹನಿಲ್ಲದ ಶಿವನಗೌಡ ದೇವದುರ್ಗ ಎಸ್.ಟಿ ಮೀಸಲು ಕ್ಷೇತ್ರವಾಗುತ್ತಿದ್ದಂತೆ ಎಂ.ಎಲ್.ಎ ಸ್ಥಾನಕ್ಕೆ ನಿಲ್ಲುತ್ತಾನೆಂದು ಯಾರೊಬ್ಬರು ಅಂದುಕೊಂಡಿದ್ದಿಲ್ಲ. ಆದರೆ, ಚುನಾವಣೆಗೆ ನಿಲ್ಲಲು ತಾನು ಮಾತ್ರ ತಯಾರು ಮಾಡಿಕೊಂಡನು.ತಾಲೂಕಿನಲ್ಲಿ ಹನುಮಂತಪ್ಪ ಆಲ್ಕೋಡ್ ಅಂದಿನ ಸಂಸದ ವೆಂಕಟೇಶ ನಾಯಕರ ಮೇಲಿನ ಸಿಟ್ಟಿಗೆ ಶಿವನಗೌಡನನ್ನು ಬಳಸಿಕೊಂಡು ಜೆ.ಡಿ.ಎಸ್ನಿಂದ ಟಿಕೇಟ್ ಕೊಡಿಸಿದ. ಕುಮಾರಸ್ವಾಮಿಯಿಂದಿಡಿದು ಎಲ್ಲರೂ ಶಿವನಗೌಡನ ಪರವಾಗಿ, ಮಾಜಿ ಸಂಸದರ ವಿರುದ್ಧ ಪ್ರಚಾರ ಮಾಡಿದರು. ಅಂದಿನ ಅನುಕಂಪವನ್ನೇ ಬಳಸಿಕೊಂಡು ಜಿ.ಪಂ ಸದಸ್ಯನಾಗದ ಒಬ್ಬ ಮಾಜಿ ತಾ.ಪಂ ಅಧ್ಯಕ್ಷ ಶಿವನಗೌಡ ಶಾಸಕನಾಗುತ್ತಾನೆ. ಆಗ ಜೆ.ಡಿ.ಎಸ್ನಲ್ಲಿದ್ದು, ಕ್ಷೇತ್ರದ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗಿದ್ದರೆ, ಆತನಿಗೆ ಇವತ್ತಿನ ಈ ಪರಿಸ್ಥಿತಿ ಬರುತ್ತಿದ್ದಿಲ್ಲ.ನಂತರ ರೆಡ್ಡಿಗಳ ಆಪರೇಷನ್ ಕಮಲದಲ್ಲಿ 30ಕೋಟಿಗೆ ಹರಾಜಾಗುತ್ತಾನೆ! ಗೆದ್ದ ಕೆಲವೇ ದಿನಗಳಲ್ಲಿ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯದ ಲಾಟರಿ ಮಂತ್ರಿಯಾಗುತ್ತಾನೆ. ಮಂತ್ರಿಯಾಗಿದ್ದೇ ತಡ ಗೌಡನ ಪೌರುಷ ನೆತ್ತಿಗೇರಿ, ಅಧಿಕಾರಿಗಳನ್ನೆಲ್ಲ ಜೀತದಾಳುಗಳಿಂತ ನಿಕೃಷ್ಟವಾಗಿ ನೋಡಿಕೊಳ್ಳುತ್ತಾ, ಹೆಂಡ ಕುಡಿದ ಕೋತಿಯಂತೆ ದಬರ್ಾರು ಮಾಡುತ್ತಾನೆ.ಪ್ರತಿಯೊಬ್ಬರನ್ನು ಏಕವಚನದಲ್ಲಿ ನಿಂದಿಸುತ್ತಾ ಡಿಸಿ, ಎಸಿ, ಸರ್ಕಲ್ಗಳನ್ನು ಜಿಲ್ಲೆಯಲ್ಲಿ 2ವರ್ಷ ಹೈರಾಣಾಗುವಂತೆ ಮಾಡಿದ. ಬರೀ ಲಕ್ಷಗಳಲ್ಲಿದ್ದ ತನ್ನ ವ್ಯವಹಾರಗಳನ್ನು ಕೋಟಿಗಳಿಗೆ ಕುದುರಿಸಿಕೊಂಡ. ಕಳೆದ ಅಕ್ಟೋಬರನಲ್ಲಿ ಸಂಭವಿಸಿದ ನೆರೆಹಾವಳಿಗೆ ತಾಲೂಕು ತತ್ತರಿಸಿ ಹೋಗಿತ್ತು. ಆಗ ನೆರೆಸಂತ್ರಸ್ತರಿಗೆ ಬಂದ ಎಲ್ಲ ಪರಿಹಾರ ಧನವನ್ನು ವಿಶೇಷವಾಗಿ ಪ್ಯಾಕೇಜ್ಗಳನ್ನು ತಾನೇ ಗುಳುಂ ಮಾಡಿದ!ಉದ್ಯೋಗ ಖಾತ್ರಿ ಯೋಜನೆಯಿಂದಿಡಿದು ಪಂಚಾಯತ್ಗಳಲ್ಲಿ ಬರುವ ಎಲ್ಲ ಯೋಜನೆಗಳನ್ನು ತನ್ನ ಹಿಂಬಾಲಕರ ಮುಖಾಂತರ ಲೂಟಿ ಮಾಡಿ, ಗಲ್ಲಿಗಲ್ಲಿಗಳಿಗೆ ಹೆಂಡದಂಗಡಿಗಳನ್ನು ತೆಗೆದ. (ಹೆಂಡದಂಗಡಿಗಳಿಂದ ಲಾಭವಿರುತ್ತದೆಯೇ ವಿನಃ ಎಂದೆಂದಿಗೂ ನಷ್ಟವಿರುವುದಿಲ್ಲ.) ಹೀಗಾಗಿ ಇಂತಹ ಆಲೋಚನೆ ಹೊಂದಿ ಗೌಡ ತಾಲೂಕಿನೆಲ್ಲೆಡೆ ಅಭಿವೃದ್ಧಿ ಕೆಲಸಗಳನ್ನು ಮಾಡದೇ ಬರೀ ಬಾರ್ಶಾಫ್ಗಳನ್ನು ತೆಗೆದ.ಅರಕೇರಾದಲ್ಲಿ ತನ್ನ ತಾತನ ವಿರುದ್ಧ ಮಾಡಿದ ರಾಜಕೀಯವನ್ನು ಬೆಂಗಳೂರಿನಲ್ಲಿ ಮಾಡುತ್ತಾ, ಬಿಜೆಪಿಯ ಕಂಡಕಂಡ ಚೆಡ್ಡಿ, ಮುಖಂಡರುಗಳಿಗೆ ಏಕವಚನದಿಂದಲೇ ಮಾತನಾಡಲು ಶುರುವಚ್ಚಿಕೊಂಡ. ಅಂದು ಅನಿವಾರ್ಯತೆಯಿಂದ ಎಲ್ಲವನ್ನು ಸಹಿಸಿಕೊಂಡಿದ್ದ ಕಮಲದವರು ಕೊನೆಗೆ ಈತನನ್ನು ಕೈಬಿಡಬೇಕೆಂದು ತೀಮರ್ಾನಿಸಿದರು.ಈತನನ್ನು ಕೈಬಿಡಲು ಯಡಿಯೂರಪ್ಪನಿಗೆ ಪ್ರಮುಖವಾಗಿ 3ಕಾರಣಗಳು ಸಿಕ್ಕವು. ಮೊದಲನೇಯದು ರೆಡ್ಡಿಗಳ ಜೊತೆಯಲ್ಲಿ ಹಿಂದೊಮ್ಮೆ ಗುರುತಿಸಿಕೊಂಡು ನಾಯಕತ್ವದ ವಿರುದ್ಧ ಧ್ವನಿಯೆತ್ತಿದ್ದು, 2ನೇಯದಾಗಿ ಜಿಲ್ಲೆಯ ಎಲ್ಲ ಬಿಜೆಪಿಗಳು ದಿನಕ್ಕೊಂದು ಫೀಯರ್ಾಧಿಯನ್ನು ಬಿಜೆಪಿ ಹೈಕಮಾಂಡ್ಗೆ ನೀಡುತ್ತಿರುವುದು ಮತ್ತು 3ನೇಯದಾಗಿ ಈತನ ಗ್ರಂಥಾಲಯ ಹಗರಣ. ಇವೆಲ್ಲವುಗಳನ್ನು ಗಣನೆಗೆ ತೆಗೆದುಕೊಂಡು ಯಡಿಯೂರಪ್ಪ ಗೌಡನನ್ನು ಏಕಾಏಕಿ ಮಂತ್ರಿಸ್ಥಾನದಿಂದ ಕೆಳಗಿಸಲು ಸಂಚು ರೂಪಿಸಿದ.ಈ ಸಂಧರ್ಭದಲ್ಲಿ ಶಿವನಗೌಡ ಏಕಾಏಕಿ ರೇಣುಕನ ಹತ್ತಿರ ಓಡಿಹೋಗಿ ಸಿ.ಎಂಗೆ ಹೇಳಿ.. ನಾನೊಬ್ಬ ನಿಷ್ಠಾವಂತ ಮಂತ್ರಿ, ನನ್ನಿಂದ ಯಾವುದಾದರೂ ತಪ್ಪಾಗಿದ್ದರೆ, ನಾನು ತಿದ್ದಿಕೊಳ್ಳುವೇ, ದಯವಿಟ್ಟು ನನ್ನನ್ನು ಸಂಪುಟದಿಂದ ಕೈಬಿಡಬೇಡಿ ಎಂದು ಅಂಗಲಾಚಿಕೊಳ್ಳುತ್ತಿದ್ದನಂತೆ!ಇದ್ಯಾವದಕ್ಕೂ ಜಗ್ಗದ ಯಡಿಯೂರಪ್ಪ ಮುಂದಿನ ಬಾರಿ ಅವನಿಗೆ ಮುಂದಿನ ಬಾರಿ ಎಂ.ಎಲ್.ಎ ಟಿಕೇಟ್ ಕೂಡ ನೀಡಬಾರದು. ಅವನು ಬೇಕಿದ್ದರೆ, ನಮ್ಮ ಪಕ್ಷದಲ್ಲಿರಲಿ. ಇಲ್ಲವಾದರೆ ಪಕ್ಷ ಬಿಟ್ಟು ಹೋಗಲಿ ಎಂದು ರೇಣುಕನಿಗೆ ಫಮರ್ಾನು ಹೊರಡಿಸಿದರಂತೆ! ಇತ್ತ ರೆಡ್ಡಿಗಳು ಕೂಡ ಗೌಡನ ಬೆಂಬಲಕ್ಕೆ ಬರುವುದಿಲ್ಲ. ಇನ್ನು ಕ್ಷೇತ್ರದ ಯಾವೊಬ್ಬರು ಗೌಡನ ಪರವಾಗಿ ಮಾತನಾಡುವುದಿಲ್ಲ.ಹೀಗೆ ಕ್ರಮೇಣ ಮಂತ್ರಿಗಿರಿಯನ್ನು ಕಳೆದುಕೊಂಡ ಗೌಡ ಇನ್ನು ಮುಂದೆ ಬಿಜೆಪಿಯಲ್ಲಿ ನನಗೆ ಭವಿಷ್ಯವಿಲ್ಲ ಎಂದು ತಿಳಿದು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆ.ಡಿ.ಎಸ್ನ ಜೊತೆಯಲ್ಲಿ ಗುರುತಿಸಿಕೊಂಡಿದ್ದಾನೆ.ಇವತ್ತು ನೂರಾರು ಕೋಟಿ ಗಳಿಸಿರುವ ಗೌಡ ಮತ್ತೊಂದು ಚುನಾವಣೆಗೆ ಸನ್ನಧ್ದನಾಗುತ್ತಿದ್ದಾನೆ. ಅದಕ್ಕಾಗಿ ತಯಾರಿಗಳನ್ನು ಮಾಡಿಕೊಳ್ಳುತ್ತ, ಅಲ್ಲಲ್ಲಿ ಕಾರ್ಯಕರ್ತರ ಜೊತೆ ಚಚರ್ಿಸುತ್ತಿದ್ದಾನೆ.ಇನ್ನು ಅನರ್ಹತೆಯ ಪ್ರಕರಣ ದಿಲ್ಲಿಗೆ ವರ್ಗವಾಗಿದೆ. ದಿಲ್ಲಿಯಲ್ಲಿ ಹೆಚ್ಚು ಕಡಿಮೆ ಸುಪ್ರೀಂಕೋಟರ್್ ಹೈಕೋಟರ್್ನ ತೀರ್ಪನ್ನು ಎತ್ತಿಹಿಡಿಯುವ ಸಾಧ್ಯತೆ ಇದೆ!ಶಿವನಗೌಡನ ರಾಜಕೀಯ ಅಸ್ಥಿರತೆಯ ಮಧ್ಯೆ ತಾಲೂಕಿನಲ್ಲಿ ಯಾವೊಂದು ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಕಂಡಕಂಡಲ್ಲಿ ಭ್ರಷ್ಟಾಚಾರ ಎದ್ದು ಕಾಣುತ್ತಿದೆ. ಪಂಚಾಯತ್ಗಳಲ್ಲಿ ಗೌಡನ ಅನುಯಾಯಿಗಳ ಕಾಟಕ್ಕೆ ಅಧಿಕಾರಿಗಳು, ಕಾರ್ಯದಶರ್ಿಗಳು ರೋಸಿಹೋಗಿದ್ದಾರೆ. ಬರೀ ಬೋಗಸ್ ಬಿಲ್ಗಳನ್ನು ತಯಾರಿಸಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇನ್ನು ದೇವದುರ್ಗ ಪಟ್ಟಣವೇ ಕೊಳಚೆಯಿಂದ ಕೂಡಿದೆ. ಅಲ್ಲಿ ಯಾವ ಚರಂಡಿ, ರಸ್ತೆಗಳಿಲ್ಲ. ತಿಂತಿಣಿಯಿಂದ ದೇವದುರ್ಗ ಮಾರ್ಗವಾಗಿ ಹಾದುಹೋಗುವ ರಸ್ತೆಯ ಸ್ಥಿತಿಯಂತೂ ನರಕಸದೃಶ್ಯವಾಗಿದೆ. ಅದ್ಯಾಕೆ ತನ್ನ ಸ್ವಗ್ರಾಮ ಅರಕೇರಾ ಪಂಚಾಯತಿಯೇ ಗಬ್ಬು ನಾರುತ್ತಿದೆ. 2 ವರ್ಷಗಳಲ್ಲಿ ಶಿವನಗೌಡನಿಂದ ತಾಲೂಕಿನ ಜನತೆ ಯಾವೊಂದು ಅಭಿವೃದ್ಧಿ ಯೋಜನೆಗಳನ್ನು ಕಂಡಿಲ್ಲ.ಈ ಎಲ್ಲ ಬೆಳವಣಿಗೆಗಳು ಅನಕ್ಷರಸ್ಥ ದೇವದುರ್ಗ ತಾಲೂಕಿನ ದುರಂತವಲ್ಲದೇ ಮತ್ತೇನು..?
ಮಾನಣ್ಣ ಮುಂದಿನ ಗ್ರಾಮಪಂಚಾಯತ್ ಚುನಾವಣೆಯಲ್ಲಿ ನಿಂತರೂ ಗೆಲ್ಲುವುದಿಲ್ಲ ಎಂಬುದೇ ತನಗೆ ಖಾತರಿಯಾಗುತ್ತಿದ್ದಂತೆ ತೆಪ್ಪಗೆ ಕುಮಾರಣ್ಣನಿಂದ 38ಕೋಟಿಗೆ ತಗೊಂಡು ಯಡಿಯೂರಪ್ಪನ 2ಬಾರಿ ಬಹುಮತದ ಸಂದರ್ಭದಲ್ಲಿ ಗೈರು ಹಾಜರಾಗಿದ್ದಾನೆ!ಈತನ ರಾಜಕೀಯ ಗುರು ಬಸವರಾಜ ಪಾಟೀಲ್ ಆನ್ವರಿ ದೇವೇಗೌಡರಿಗೆ ಕೊಟ್ಟ ಮಾತಂತೆ ವಜ್ಜಲನ್ನನು ಹಿಡಿದೊಯ್ಯದು ಮಂಡ್ಯದ ಚೆಲುವರಾಯಸ್ವಾಮಿಯ ಮನೆಗೆ ತಲುಪಿಸಿ ತನ್ನ ಮಾತನ್ನು ಉಳಿಸಿಕೊಂಡಿದ್ದಾನೆ.ನಂತರ ಮಾನಪ್ಪ ಚೆಲುವರಾಯಸ್ವಾಮಿಯ ಮನೆಯಲ್ಲಿ ಕುಮಾರಣ್ಣನ ಜೊತೆ ವ್ಯವಹಾರ ಕುದುರಿಸಿಕೊಂಡಿದ್ದಾನೆ! ಬಿಜೆಪಿಯ 2ಬಹುಮತಗಳ ಸಂದರ್ಭದಲ್ಲಿ ಗೈರುಹಾಜರಾಗಲು 38ಕೋಟಿ ಹಣ, ಮುಂದಿನ ಚುನಾವಣೆಯಲ್ಲಿ ತಮ್ಮ ನಾಗಪ್ಪ ಅಥವಾ ಕರಿಯಪ್ಪನಿಗೆ ಜೆ.ಡಿ.ಎಸ್ ಟಿಕೇಟ್ ಕೊಡಬೇಕೆಂದು ಒಪ್ಪಂದ ಮಾಡಿಕೊಂಡಿದ್ದಾನೆ. ಮಾನಪ್ಪನ ಒಳಒಪ್ಪಂದ ಲಿಂಗಸ್ಗೂರಿನಲ್ಲಿ ಹಳೆ ಜೆ.ಡಿ.ಎಸ್ನ ಮುಖಂಡರುಗಳಿಗೆ ತಿಳಿಯುತ್ತಿದ್ದಂತೆ ಅವರೆಲ್ಲ ದೇವೆಗೌಡ, ಕುಮಾರಸ್ವಾಮಿಯ ಹತ್ತಿರ ಹೋಗಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.ಇನ್ನು ಲಿಂಗಸ್ಗೂರು ಕ್ಷೇತ್ರದಲ್ಲಿ ಸಣ್ಣಗೆ ಸುದ್ದಿ ಮಾಡಿದ್ದ ಹನುಮಂತಪ್ಪ ಆಲ್ಕೋಡ ಕೂಡ ದಿಗ್ಬ್ರಾಂತಗೊಂಡಿದ್ದಾರೆಂದು ತಿಳಿದು ಬಂದಿದೆ.ಒಟ್ಟಾರೆ ಮಾನಪ್ಪನ ಆಡಳಿತದಿಂದ ತಾಲೂಕಾ ಆಡಳಿತ ಸಂಪೂರ್ಣವಾಗಿ ಕುಸಿದಿದೆ. (ಈಗ ಉಜ್ವಲಘೋಷ ಎಂಬ ಎ.ಸಿಯವರು ಬಂದ ಮೇಲೆ ಆಡಳಿತಕ್ಕೆ ಚುರುಕುಬಂದಿದೆ) ಕಂಡಕಂಡಲ್ಲಿ ಕೊಲೆಗಳು ನಡೆದಿವೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಇಂತಹ ಸಂಧಿಗ್ದತೆಯ ನಡುವೆ ಲಿಂಗಸ್ಗೂರು ಉಪಚುನಾವಣೆಯನ್ನು ಎದುರಿಸಲು ಸಜ್ಜಾಗುತ್ತಿದೆ.
ತಾನು ಮುಂದಿನ ಚುನಾವಣೆಯಲ್ಲಿ ಸ್ಪಧರ್ಿಸುವುದು ತುಸು ಕಷ್ಟವೆಂದು ತಿಳಿಯುತ್ತಿದ್ದಂತೆ ತಮ್ಮ ಮಾವ ವೆಂಕನಗೌಡ (ತಾಯಿಯ ಅಣ್ಣ)ನನ್ನು ಅಭ್ಯಥರ್ಿಯನ್ನಾಗಿ ಮಾಡಲು ತಯಾರಿ ನಡೆಸಿದ್ದಾನೆ.ಈಗಾಗಲೇ ಶಿವನಗೌಡ ತನ್ನ ಪಕ್ಕಾ ಬೆಂಬಲಿಗ ಕಾರ್ಯಕರ್ತರೊಂದಿಗೆ ಸಭೆಯನ್ನು ಮಾಡುತ್ತಾ ತೀಮರ್ಾನಗಳನ್ನು ತೆಗೆದುಕೊಳ್ಳುತ್ತಿದ್ದಾನೆ. ಅದರಂತೆಯೇ ಮೊನ್ನೆ ಕುಮಾರಸ್ವಾಮಿಯ ಜೊತೆ ಈ ರೀತಿ ಒಪ್ಪಂದ ಮಾಡಿಕೊಂಡಿದ್ದಾನೆಂಬ ಸುದ್ದಿ ಎಲ್ಲೆಡೆ ಹರಡಿದೆ!ಜೆ.ಡಿ.ಎಸ್ನಿಂದ ನನ್ನ ಮಾವನಿಗೆ ಟಿಕೇಟ್ ನೀಡಬೇಕು. ಒಂದು ವೇಳೆ ಮಹಿಳೆಗೆ ಮೀಸಲಾದರೆ, ನನ್ನ ತಾಯಿ ಇಲ್ಲವೇ ಹೆಂಡತಿಗೆ ಟಿಕೇಟ್ ಕೊಡಬೇಕು. ಅದನ್ನು ಬಿಟ್ಟು ಆಲ್ಕೋಡ್ ಹನುಮಂತಪ್ಪನನ್ನು ಕೇಳಿ ತೀಮರ್ಾನ ಮಾಡಬಾರದು. ಈ ರೀತಿ ಒಪ್ಪಂದಕ್ಕೆ ತಾವುಗಳು ಒಪ್ಪುವುದಾದರೆ, ಯಡಿಯೂರಪ್ಪನ ವಿರುದ್ಧ ಬಂಡೇಳುತ್ತೇನೆಂದು ಕುಮಾರಣ್ಣನಿಗೆ ವಾಗ್ದಾನ ನೀಡಿದ್ದಾನೆಂದು ಗೌಡನ ಆಪ್ತವಲಯದಲ್ಲಿ ಕೇಳಿಬರುತ್ತಿದೆ. ಗೌಡನ ಈ ರೀತಿಯ ಒಳಒಪ್ಪಂದಕ್ಕೆ ಹನುಮಂತಪ್ಪ ಆಲ್ಕೋಡ ಕೂಡ ಸಮ್ಮತಿ ಸೂಚಿಸಿದ್ದಾರಂತೆ.. ಆದರೆ, ಆಲ್ಕೋಡ ಒಪ್ಪಲು ಗೌಡನಿಗೆ ಒಂದು ಕಂಡೀಷನ್ ಅಂತೆ.. ಅದೇನೆಂದರೆ, ಮುಂಬರುವ ಜಿ.ಪಂ ಚುನಾವಣೆಯಲ್ಲಿ ತನ್ನ ಸ್ವಕ್ಷೇತ್ರ ಅರಕೇರಾದಿಂದ ತಮ್ಮ ದಾನಪ್ಪನನ್ನು ಗೆಲ್ಲಿಸಬೇಕು. ಹಾಗಿದ್ದರೆ, ಮಾತ್ರ ಶಿವನಗೌಡನ ಜೊತೆ ರಾಜಿ. ಹೀಗಾಗಿ ಕಳೆದೆರಡು ದಿನಗಳ ಹಿಂದೆ ದಾನಪ್ಪ ಗೌಪ್ಯ ಸ್ಥಳವೊಂದರಲ್ಲಿ ಶಿವನಗೌಡನನ್ನು ಭೇಟಿಯಾಗಿ ಚಚರ್ಿಸಿದ್ದಾನೆ!ಒಟ್ಟಾರೆ ಶಿವನಗೌಡನ ಆಡಳಿತದಿಂದ ಅಭಿವೃದ್ಧಿ ಕಾಣದ ದೇವದುರ್ಗ ಮತ್ತೊಂದು ಚುನಾವಣೆಗೆ ಸಜ್ಜಾಗುತ್ತಿರುವುದರಲ್ಲಿ ಎರಡು ಮಾತಿಲ್ಲ.ಪ್ರಜಾಸಮರ

No comments:

Post a Comment

Thanku