Monday, August 15, 2011

ಯಡಿಯೂರಪ್ಪನಿಗೆ ಕಾನೂನಿನ ಪೆಟ್ಟು!ಶಾಸಕ ನಂದೀಶರೆಡ್ಡಿಗೆ ಲತ್ತಿಪೆಟ್ಟು!!



ಯಡಿಯೂರಪ್ಪನಿಗೆ ಕಾನೂನಿನ ಪೆಟ್ಟು!ಶಾಸಕ ನಂದೀಶರೆಡ್ಡಿಗೆ ಲತ್ತಿಪೆಟ್ಟು!!ಅತೀ ಕಡಿಮೆ ಅಧಿಕಾರಾವಧಿಯಲ್ಲಿ ಅತೀ ಹೆಚ್ಚು ಅಡ್ನಾಡಿ ಕೆಲಸಗಳನ್ನು ಮಾಡಿದ ಮಹಾತ್ಸಾಧನೆಗೆ ಏನಾದರೂ ಒಂದು ಪ್ರಶಸ್ತಿ ಅಂತ ಇಟ್ಟಿದ್ದಿದ್ದರೆ ಪ್ರಾಯಶಃ ಅದು ಕನರ್ಾಟಕದ ಇಂದಿನ ಬಿಜೆಪಿ ಸಕರ್ಾರಕ್ಕೆ ಸಿಗುತ್ತಿತ್ತೇನೋ? ರಾಜ್ಯದಲ್ಲಿ ಬಿಜೆಪಿಗಳು ಮಾಡಿರುವ ಕೆಲಸಗಳೇ ಹಾಗಿವೆ. ಮೊದಲ ಬಾರಿಗೆ ಅವು ಅಧಿಕಾರಕ್ಕೇರಿವೆ. ಇನ್ನೊಂದ್ಸಾರಿ ಅಧಿಕಾರಕ್ಕೆ ಬರುತ್ತೇವೆ ಅನ್ನೋ ಭರವಸೆ ಇದ್ದಿದ್ರೆ ಈಗ ಒಂದಿಷ್ಟು ಲೂಟಿ ಹೋಡಿಯೋಣ, ಮುಂದೆ ಮತ್ತೆ ಅಧಿಕಾರಕ್ಕೆ ಬಂದಾಗ ಇನ್ನೊಂದಿಷ್ಟು ಲೂಟಿ ಹೊಡೆಯೋಣ ಅಂತನಾದ್ರೂ ಯೋಚಿಸುತ್ತಿದ್ದವು. ಆದರೆ ಮತ್ತೆ ಅಧಿಕಾರಕ್ಕೇರುತ್ತೇವೆ ಅನ್ನೋ ಭರವಸೆಯೇ ಅವರಿಗೇ ಇಲ್ಲ. ತಾವು ಈ ಎರಡು ವರ್ಷಗಳಲ್ಲಿ ಮಾಡಿರುವ ಘನಂದಾರಿ ಕೆಲಸಗಳನ್ನು ನೋಡಿ ಜನ ಛೀ... ಥೂ... ಅಂತ ಹಾದಿಬೀದಿಯಲ್ಲಿ ಉಗಿಯುತ್ತಿರುವುದು ಅವರಿಗೂ ಗೊತ್ತಿದೆ. ಮುಂದೆಂದೂ ಮತ್ತೆ ತಮ್ಮನ್ನು ಜನ ಅಧಿಕಾರಕ್ಕೆ ತರುವುದಿಲ್ಲ ಎಂಬುದು ಅವರಿಗೆ ಖಾತ್ರಿಯಾಗಿಬಿಟ್ಟಿದೆ. ಹಾಗಾಗಿ, ಈಗ ಅಧಿಕಾರ ಇರುವಾಗಲೇ ಎಷ್ಟು ಸಾಧ್ಯವೋ ಅಷ್ಟು ರಾಜ್ಯದ ಸಂಪತ್ತನ್ನು ಲೂಟಿ ಹೊಡೆದುಕೊಂಡು ಹೋಗಬೇಕು ಎಂಬ ತೀಮರ್ಾನಕ್ಕೆ ಅವರು ಬಂದುಬಿಟ್ಟಿದ್ದಾರೆ. ಪರಿಣಾಮವಾಗಿಯೇ ಎಲ್ಲಿ ಕೈಯಿಟ್ಟರೂ ಒಂದೊಂದು ಹಗರಣಗಳು ಕೈಗೆಟುಕುತ್ತವೆ. ಬಿಜೆಪಿಯ ಯಾರ ಬಳಿ ಹೋದರೂ ಆತ ತಿನ್ನಬಾರದ್ದನ್ನೆಲ್ಲಾ ತಿಂದು ಮೈಕೈ ಹೊಲಸು ಮಾಡಿಕೊಂಡು ಗಬ್ಬು ವಾಸನೆ ಹೊಡೆಯುತ್ತಿರುತ್ತಾನೆ. ಇವರ ಆಟಾಟೋಪಗಳಿಗೆ ಅಡೆತಡೆಯೊಡ್ಡುವ, ಇವರೆಲ್ಲಾ ಲೂಟಿಗಳಿಗೆ ಅಡ್ಡಲಾಗಿ ನಿಲ್ಲುವ, ಇವರ ಆಜ್ಞೆಗಳನ್ನು ತಲೆಬಾಗಿ ಪಾಲನೆ ಮಾಡದ ಅಧಿಕಾರಿಗಳನ್ನು ಪುಟ್ಬಾಲಿನಂತೆ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ವಗರ್ಾವಣೆ ಮಾಡುತ್ತಲೇ ಹೋಗುತ್ತಾರೆ. ಅವರ ಜಾಗಕ್ಕೆ ತಮಗೆ ನಾಯಿಯಂತೆ ನಿಷ್ಠೆಯಿಂದ ಸೇವೆ ಸಲ್ಲಿಸುವ ಅಧಿಕಾರಿಗಳನ್ನು ತಂದು ಕೂರಿಸಿಕೊಳ್ಳುತ್ತಾರೆ (ಬಳ್ಳಾರಿಯ ಜಿಲ್ಲಾಧಿಕಾರಿ ಶಿವಪ್ಪನಂತವರು).ಇತ್ತೀಚೆಗೆ ಬೆಂಗಳೂರಿನ ಕೆ.ಆರ್.ಪುರ ವ್ಯಾಪ್ತಿಯಲ್ಲಿರುವ ಕ್ಯಾಲಸನಹಳ್ಳಿಯಲ್ಲಿ ಬಿಜೆಪಿಯ ಭೂಗಳ್ಳ ಶಾಸಕ ನಂದೀಶ್ ರೆಡ್ಡಿ ಸ್ವಾತಂತ್ರ್ಯ ಯೋಧರಿಗೆ ಮೀಸಲಿಟ್ಟ ಜಮೀನನ್ನು ನುಂಗಿ ನೀರು ಕುಡಿಯಲು ಹವಣಿಸಿದ್ದು ಹಾಗೂ ಅದಕ್ಕೆ ಪ್ರತಿರೋಧ ಒಡ್ಡಿದ ಅಲ್ಲಿನ ತಹಶೀಲ್ದಾರ್ ಆಶಾ ಪವರ್ೀನ್ಗೆ ಕೊಡಬಾರದಷ್ಟು ಕಿರುಕುಳ ಕೊಟ್ಟಿದ್ದು, ಕೊನೆಗೆ ಆಕೆಯನ್ನು ವಗರ್ಾವಣೆ ಮಾಡಿ ಕೋಟರ್ಿನಿಂದ, ಜನರಿಂದ ಕ್ಯಾಕರಿಸಿ ಉಗಿಸಿಕೊಂಡಿದ್ದು ಇದೆಲ್ಲಾ ಬಿಜೆಪಿಗಳು ಎರಡು ವರ್ಷಗಳಿಂದ ಚಾಚೂ ತಪ್ಪದೇ ಮಾಡಿಕೊಂಡು ಬಂದಿರುವ ಅಡ್ನಾಡಿ ಕೆಲಸಗಳ ಸಾಲಿಗೆ ಮೊತ್ತೊಂದು ಸೇರ್ಪಡೆಯಷ್ಟೆ. ಅದು ಅವರ ಘನಂದಾರಿ ಕೆಲಸದ ಆರಂಭವೂ ಅಲ್ಲ, ಅಂತ್ಯವೂ ಅಲ್ಲ.ಅದು ಪ್ರಾರಂಭವಾಗಿದ್ದು ಹೀಗೆ...ಬೆಂಗಳೂರಿನ ಕೆ.ಆರ್.ಪುರಂನ ಕ್ಯಾಲಸನಹಳ್ಳಿಯ ಸವರ್ೇ ನಂಬರ್ 11ರಲ್ಲಿ 12 ಎಕರೆ ಸಕರ್ಾರಿ ಜಮೀನಿದೆ. ಬೆಂಗಳೂರು ನಗರ ವ್ಯಾಪ್ತಿಗೆ ಬರುವ ಅದರ ಈವೊತ್ತಿನ ಮಾಕರ್ೆಟ್ ಬೆಲೆ ಏನಿಲ್ಲವೆಂದರೂ ಎಪ್ಪತ್ತು ಕೋಟಿ. ಅಸಲಿಗೆ ಆ ಜಮೀನನ್ನು ಕೆಲವು ಸ್ವಾತಂತ್ರ್ಯ ಯೋಧರಿಗೆ ಹಂಚಿಕೆ ಮಾಡಿ ರಾಜ್ಯ ಸಕರ್ಾರ 1966ರಲ್ಲಿಯೇ ಆದೇಶ ಹೊರಡಿಸಿತ್ತು. ಅದರ ಪ್ರಕಾರ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಉತ್ತರಕನ್ನಡ ಜಿಲ್ಲೆಯ ಕಡೆಯವರಾದ ವಿಠಲ್ರಾವ್, ವೆಂಕಟಾಚಲಮ್ಮ, ಸಿದ್ದಣ್ಣ, ಸುಬ್ಬರಾವ್, ಕೃಷ್ಣಮೂತರ್ಿ, ಲಕ್ಷ್ಮೀ ಎಂಬುವವರು ಈಗಾಗಲೇ ಕ್ಯಾಲಸನಹಳ್ಳಿಯ ಸಕರ್ಾರಿ ಗೋಮಾಳ ಭೂಮಿಗೆ ಹಣವನ್ನು ಪಾವತಿಸಿ ಮಾಲೀಕರಾಗಿದ್ದರೆ ಇನ್ನುಳಿದಂತೆ ರಾಮಕೃಷ್ಣಹೆಗಡೆಯ ಸಂಬಂಧಿ ಜಿ.ಎಸ್ ಹೆಗಡೆ ಅಂಕೋಲಕರ್, ಗೋವಿಂದ್, ಎಸ್.ಎಸ್ ಹೆಗಡೆ ಎಂಬುವವರಿಗೆ ತಲಾ 4 ಎಕರೆಯಂತೆ ಮಂಜೂರಾಗಿದ್ದರೂ ಅವರ್ಯಾರೂ ಇತ್ತ ಹೆಜ್ಜೆ ಹಾಕಿರಲಿಲ್ಲ. ಇದು ಹೆಚ್ಚೂ ಕಡಿಮೆ ನಲ್ವತ್ತೈದು ವರ್ಷಗಳ ಹಿಂದಿನ ಕತೆ. ಆಗ ಬೆಂಗಳೂರು ಈಗಿನಂತಿರಲಿಲ್ಲ. ಕೆ.ಆರ್.ಪುರದ ಈ ಜಾಗವೂ ಒಂದು ರೀತಿಯಲ್ಲಿ ಕಾಡಿನಂತಿತ್ತು. ಹಾಗಾಗಿ, ಫಲಾನುಭವಿ ಸ್ವಾತಂತ್ರ್ಯ ಯೋಧರು ಈ ನಲ್ವತ್ತು ವರ್ಷ ಅತ್ತ ಹೆಜ್ಜೆಯನ್ನೂ ಹಾಕಿರಲಿಲ್ಲ. ಈಗ ಬೆಂಗಳೂರು ಅಗಾಧವಾಗಿ ಬೆಳೆದು ನಿಂತಿದೆ. ಅಡಿ ಅಡಿ ನೆಲಕ್ಕೆ ಚಿನ್ನದ ಬೆಲೆ ಬಂದುಬಿಟ್ಟಿದೆ. ರಿಯಲ್ ಎಸ್ಟೇಟ್ ಬಿಸಿನೆಸ್ ಅತ್ಯಂತ ಲಾಭದಾಯಕ ವ್ಯವಹಾರವಾಗಿ ಮಾರ್ಪಟ್ಟಿದೆ. ಅದೇ ವೇಳೆಯಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸಕರ್ಾರಿ ಜಮೀನನ್ನು ನುಂಗಿ ನೀರು ಕುಡಿದು ಕೋಟ್ಯಾಧಿಪತಿಗಳಾಗಿರುವ ದೊಡ್ಡ ಭೂಗಳ್ಳರ ಹಿಂಡೂ ಹುಟ್ಟಿಕೊಂಡಿದೆ. ಯಾವಾಗಲೂ ಹಡಬಿ ದುಡ್ಡು ತಿನ್ನುವುದಕ್ಕೇ ಹೊಂಚುಹಾಕುವ ಇಂತಹ ಖದೀಮರಿಗೆ ಸಕರ್ಾರಿ ಜಾಗೆಗಳು ಎಲ್ಲೆಲ್ಲಿವೆ ಅಂತ ಚೆನ್ನಾಗಿ ಗೊತ್ತಿರುತ್ತೆ. ಅದು ತಮಗೆ ಸೇರಿದ್ದು ಅಂತ ಖೊಟ್ಟಿ ದಾಖಲಾತಿಗಳನ್ನು ಸೃಷ್ಟಿಸಿಕೊಳ್ಳುವುದು, ಒಂದೇ ಸಲ ಗುಳುಂ ಮಾಡುವುದು ಅವರ ಕಾಯಕವಾಗಿ ಬಿಟ್ಟಿದೆ. ಅಂಥವರಲ್ಲಿ ಇಂದಿನ ಕೆ.ಆರ್.ಪುರಂನ ಬಿಜೆಪಿ ಶಾಸಕ ನಂದೀಶ್ ರೆಡ್ಡಿ ಕೂಡ ಒಬ್ಬ. ತನ್ನ ಏರಿಯಾದಲ್ಲೇ ಕ್ಯಾಲಸನಹಳ್ಳಿಯ ಸವರ್ೇ ನಂಬರ್ 11ರಲ್ಲಿ ಎಪ್ಪತ್ತು ಕೋಟಿ ಬೆಲೆ ಬಾಳುವ 12 ಎಕರೆ ಸಕರ್ಾರಿ ಜಮೀನು ಸಹಜವಾಗಿಯೇ ಅವನ ಕಣ್ಣು ಕುಕ್ಕಿಸುತ್ತಿತ್ತು. ಅದನ್ನು ಹೇಗಾದರೂ ಮಾಡಿ ಗುಳುಂ ಮಾಡುವುದಕ್ಕೆ ಆತ ಹೊಂಚು ಹಾಕಿ ಕುಳಿತಿದ್ದ. ಈ ಮಹಾತ್ಕಾರ್ಯದ ಸಂಪೂರ್ಣ ಜವಾಬ್ದಾರಿಯನ್ನು ತನ್ನ ಭಂಟ ಬಾಬುರೆಡ್ಡಿಗೆ ವಹಿಸಿಕೊಟ್ಟಿದ್ದ. ಬೆಂಗಳೂರು ಬೆಳೆದ ಮೇಲಾದರೂ ಆ ಸ್ವಾತಂತ್ರ್ಯಯೋಧರ ಕುಟುಂಬಗಳನ್ನು ಹುಡುಕಿ ಅವರಿಗೆ ಭೂಮಿ ಕೊಡುವ ಕೆಲಸವನ್ನು ಅಧಿಕಾರಿಗಳು ಮಾಡಬೇಕಿತ್ತು. ಆದರೆ ಇಷ್ಟು ವರ್ಷಗಳಲ್ಲಿ ಅಂತಹ ಕೆಲಸವನ್ನು ಇಲ್ಲಿಗೆ ಬಂದ ಯಾವೊಬ್ಬ ತಹಶೀಲ್ದಾರನೂ ಮಾಡಲಿಲ್ಲ. ಅಂತಹ ಕೆಲಸಕ್ಕೆ ಕೈಹಾಕಿದ್ದು ಈಗಿನ ತಹಶೀಲ್ದಾರ್ ಆಶಾ ಪವರ್ಿನ್. ಪ್ರಾಯಶಃ ನಂದೀಶ ರೆಡ್ಡಿ ಈ ಭೂಮಿ ಸ್ವಾಹ ಕಾರ್ಯಕ್ರಮಕ್ಕೆ ಮಹೂರ್ತ ಫಿಕ್ಸ್ ಮಾಡುತ್ತಿದ್ದುದು ಆಕೆಯ ಗಮನಕ್ಕೆ ಬಂದಿರಬೇಕು. ಹಾಗಾಗಿ ಕೂಡಲೇ ಕಾರ್ಯಪ್ರವೃತ್ತಳಾದ ಆಕೆ ಈ ಭೂಮಿ ಮಂಜೂರಾದ ಸ್ವಾತಂತ್ರ್ಯ ಯೋಧರ ಕುಟುಂಬಗಳನ್ನು ಹುಡುಕಿ ಭೂಮಿ ಹಸ್ತಾಂತರಿಸುವ ಕಾರ್ಯಕ್ರಮವನ್ನು ಪ್ರಾರಂಭಿಸಿಬಿಟ್ಟಳು. ಆಶಾಳನ್ನು ಮನೆಗೆ ಕರೆಸಿಕೊಂಡು ಒದೆ ತಿಂದ ನಂದೀಶರೆಡ್ಡಿ!ವಾಸ್ತವದಲ್ಲಿ ಆಶಾ ಪವರ್ೀನ್ ಇಟ್ಟ ಹೆಜ್ಜೆ ನಂದೀಶ ರೆಡ್ಡಿಗೆ ತಳಮಳವನ್ನುಂಟು ಮಾಡಿದೆ. ತನ್ನ ಜೇಬು ಸೇರಬೇಕಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಹಡಬಿ ಆಸ್ತಿಯನ್ನು ಪವರ್ೀನ್ ಹೀಗೆ ಕೈಗೆ ಬಂದದ್ದನ್ನು ಬಾಯಿಗೆ ಬಾರದಂತೆ ತಪ್ಪಿಸುತ್ತಿರುವುದನ್ನು ಕಂಡು ನಂದೀಶರೆಡ್ಡಿಗೆ ಎಲ್ಲಿಲ್ಲದ ಸಿಟ್ಟುಬಂದಿದೆ. ಕೂಡಲೆ ಆಕೆಯನ್ನು ಸಂಬಂಧಪಟ್ಟ ಕಡತಗಳ ಸಮೇತ ತನ್ನ ಮನೆಗೆ ಬರುವಂತೆ ಹೇಳಿ ಕಳಿಸಿದ್ದಾನೆ. ಮೊದಲೇ ಆಶಾ ದಿಟ್ಟ ಮಹಿಳೆ. ತಹಶೀಲ್ದಾರಾಗುವ ಮೊದಲು ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದಾಕೆ. ಆಗಲೇ ಇಂತ ಪುಂಡ ಪೋಕರಿಗಳನ್ನು ಅಟ್ಟಾಡಿಸಿಕೊಂಡು ಬಡಿದಾಕೆ. ಸಖತ್ ಹೈಟ್, ಪರ್ಸನಾಲಿಟಿ ಹೊಂದಿರುವ ಆಶಾಳಿಗೆ ತನ್ನದೇ ಆದ ಬೆಂಬಲಿಗ ಪಡೆ ಕೂಡ ಇದೆ! ಈಗ ಯಾಕೆ ನಂದೀಶ ಕರೆಯುತ್ತಿದ್ದಾನೆಂದು ಗೊತ್ತಿದ್ದೂ ಗೊತ್ತಿದ್ದೂ ಧೈರ್ಯದಿಂದ ಕಡತ ತೆಗೆದುಕೊಂಡು ಅವನ ಮನೆಗೆ ಹೋಗಿದ್ದಳು. ಇದೇ ಜೂನ್ 16ರಂದು ಆಕೆ ನೇರವಾಗಿ ಸಂಬಂಧಪಟ್ಟ ಕಡತಗಳ ಸಮೇತ ನಂದೀಶ ರೆಡ್ಡಿಯ ಮನೆಯಲ್ಲಿ ಪ್ರತ್ಯಕ್ಷಳಾದಾಗ ಸಣ್ಣದಂದು ಫೈಟಿಂಗ್ಗೆ ಅಖಾಡ ರೆಡಿಯಾಗಿತ್ತು. ಅವಳ ಕೈಯಲ್ಲಿದ್ದ ಕಡತವನ್ನು ಕೊಡುವಂತೆ ನಂದೀಶ್ ರೆಡ್ಡಿ ಕೇಳಿದಾಗ ಆಕೆ ಒಪ್ಪಿಲ್ಲ. ಆದರೂ ಹಠ ಬಿಡದ ಆತ ಆಕೆಯನ್ನು ಎಳೆದಾಡಿ ಕಡತ ಕಿತ್ತುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. (ಒಬ್ಬ ಮಹಿಳಾ ಅಧಿಕಾರಿಯೊಂದಿಗೇನೇ ಈ ಬಿಜೆಪಿ ಎಮ್ಮೆಲ್ಲೆಗಳು ಈ ರೀತಿ ಗುಂಡಾಗಳಂತೆ ವತರ್ಿಸುತ್ತಾರೆಂದರೆ ಇನ್ನು ಸಾಮಾನ್ಯ ಜನರ ಪಾಡೇನು?) ಆಕೆ ಅದನ್ನು ವಾಪಾಸ್ಸು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದಂತೆಯೇ ಅದನ್ನಾತ ತನ್ನ ಹಿಂಬಾಲಕನಿಗೆ ಕೊಟ್ಟ. ತಕ್ಷಣವೇ ಆ ಹಿಂಬಾಲಕ ಅಲ್ಲಿಂದ ಓಡಿ ಹೋಗಿದ್ದಾನೆ. ಮತ್ತೆ ಆಶಾ ಅವನನ್ನು ಬೆನ್ನು ಹತ್ತಿ ಓಡತೊಡಗಿದರೆ ಇದೇ ನಂದೀಶ ಆಕೆಗೆ ಅಡ್ಡ ಬಂದಿದ್ದಾನೆ. ಸಿಟ್ಟಿಗೆದ್ದ ಆಶಾ ತನ್ನ ಹಳೆಯ ಪೊಲೀಸ್ ವರಸೆಯನ್ನು ಬಳಸಿ ನಂದೀಶನಿಗೊಂದು ಲಾತ ಕೊಟ್ಟು ಅವನು ಕೆಡವಿ ಅಲ್ಲಿಂದ ಓಡಿದ್ದಾಳೆ. ಕೊನೆಗೆ ಮೂಲೆಯಲ್ಲಿ ಕಡತದೊಂದಿಗೆ ಅವಿತು ಕುಳಿತಿದ್ದ ಹಿಂಬಾಲಕನನ್ನೂ ಹಿಡಿದು ಅವನಿಗೂ ನಾಲ್ಕು ಬಾರಿಸಿ ಕಡತ ಕಿತ್ತುಕೊಂಡು ಅಲ್ಲಿಂದ ಪರಾರಿಯಾಗಿದ್ದಾಳೆ. ಹೀಗೆ, ನಂದೀಶ, ಆತನ ಹಿಂಬಾಲಕರು ಮತ್ತು ಸೆಕ್ಯೂರಿಟಿ ಗಾಡರ್್ಗಳ ಕೋಟೆಯನ್ನು ಬೇಧಿಸಿ ಸಕರ್ಾರಿ ಕಡತವನ್ನು ವಾಪಸ್ಸು ತರುವಲ್ಲಿ ಕೊನೆಗೂ ಆಕೆ ಯಶಸ್ವಿಯಾಗಿದ್ದಾಳೆ. ಸೇಡು ತೀರಿಸಿಕೊಳ್ಳಲು ಸಸ್ಪೆಂಡ್, ಟ್ರಾನ್ಸ್ಫರ್ತ್ಈಗ ನಂದೀಶ ರೆಡ್ಡಿ ಅಕ್ಷರಶಃ ಇಂಗು ತಿಂದ ಮಂಗನಾಗಿದ್ದಾನೆ. ಒಂದೆಡೆ ಆಶಾ ಪವರ್ೀನ್ ಎಂಬ ಮಹಿಳೆಯಿಂದ ದೈಹಿಕವಾಗಿ ಒದೆ ತಿಂದಿದ್ದ, ಇನ್ನೊಂದೆಡೆ ಅದೇ ಮಹಿಳಾ ಅಧಿಕಾರಿ ಇವನ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದೇ ಮಾನಸಿಕವಾಗಿಯೂ ಒದ್ದಿದ್ದಳು. ಈಗದನ್ನು ನಂದೀಶ ಹೇಗಾದರೂ ಮಾಡಿ ತೀರಿಸಿಕೊಳ್ಳಬೇಕಿತ್ತು. ಇಲ್ಲದಿದ್ದರೆ ಅವನ ಹಿಂಬಾಲಕರ ಮುಂದೆ ನಾಚಿಕೆಯಿಂದ ತಲೆತಗ್ಗಿಸಬೇಕಾದ ಹೀನಾಯ ಪರಿಸ್ಥಿತಿ ಎದುರಾಗುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಎಪ್ಪತ್ತು ಕೋಟಿ ಬೆಲೆಬಾಳುವ ಆಸ್ತಿಯೊಂದು ಕೈತಪ್ಪಿ ಕಂಡವರ ಪಾಲಾಗಿ ಬಿಡುತ್ತಿತ್ತು. ಎಲ್ಲಿಯ ತನಕ ಆಶಾ ಪವರ್ೀನ್ ಇಲ್ಲಿ ತಹಶೀಲ್ದಾರಾಗಿರುತ್ತಾಳೋ ಅಲ್ಲಿಯ ತನಕ ಅದು ತನ್ನ ಕೈವಶವಾಗುವುದು ಸಾಧ್ಯವಿಲ್ಲ ಎಂಬ ಅಸಲೀಯತ್ತೂ ಆತನಿಗೆ ಗೊತ್ತಿತ್ತು. ಇದೆಲ್ಲದಕ್ಕೆ ಪರಿಹಾರ ಎಂದರೆ ಆಶಾಳನ್ನು ಕೆಲಸದಿಂದ ಸಸ್ಪೆಂಡ್ ಮಾಡಬೇಕು ಇಲ್ಲವೇ ಕನಿಷ್ಠ ಅಲ್ಲಿಂದ ಎತ್ತಂಗಡಿ ಮಾಡಬೇಕು ಎಂದು ಒಳಗೊಳಗೇ ಆತ ಲೆಕ್ಕ ಹಾಕಿದ.ಅಂತೂ ಆಕೆಯಿಂದ ಒದೆ ತಿಂದು ಮಾನಸಿಕವಾಗಿ ನುಜ್ಜುಗುಜ್ಜಾಗಿದ್ದ ನಂದೀಶ ಮುಖ್ಯಮಂತ್ರಿ ಯಡ್ಡಿಯ ಕಿವಿ ತಿಕ್ಕಿದ್ದಾನೆ. ಮೊದಲೇ ನಮ್ಮ ಮುಖ್ಯಮಂತ್ರಿ ಕಂಡವರ ಚಾಡಿ ಮಾತು ಕೇಳಿ ಗುಂಡಿಗೆ ಬೀಳೋದರಲ್ಲಿ ಎತ್ತಿದ ಕೈ. ಈಗ ನಂದೀಶ ಬಂದು ಕಿವಿ ತಿಕ್ಕಿದ ತಕ್ಷಣವೇ ಒಂದು ಕ್ಷಣ ಯೋಚನೆ ಮಾಡದೆ ಆಶಾಳನ್ನು ಸಸ್ಪೆಂಡ್ ಮಾಡುವ ಆದೇಶ ಘಟನೆ ನಡೆದ ಮಾರನೇ ದಿನವೇ ಹೊರಡಿಸಿಬಿಟ್ಟ!ಅಂತೂ ಕೊನೆಗೆ ಸೇಡು ತೀರಿಸಿಕೊಂಡೆ ಎಂದು ನಂದೀಶ ಬೀಗುವ ಹೊತ್ತಿಗೆ ಆಶಾ ಅದಕ್ಕೂ ಪರಿಹಾರ ರೆಡಿ ಮಾಡಿಕೊಂಡಿದ್ದಳು. ಪ್ರಾಯಶಃ ನಂದೀಶ ಇಂಥ ಕೆಲಸ ಮಾಡುತ್ತಾನೆ ಎಂದು ಆಕೆ ಮೊದಲೇ ನಿರೀಕ್ಷಿಸಿದ್ದಳೋ ಏನೋ ಅಂತೂ ಸಸ್ಪೆಂಡ್ ಆದೇಶ ಕೈ ತಲುಪುತ್ತಿದ್ದಂತೆಯೇ ಆಕೆ ಕನರ್ಾಟಕ ಆಡಳಿತ ನ್ಯಾಯಮಂಡಳಿಗೆ (ಕೆಎಟಿ) ಹೋಗಿ ಈ ಸಸ್ಪೆಂಡ್ ಆದೇಶಕ್ಕೆ ತಡೆಯಾಜ್ಞೆ ತಂದುಬಿಟ್ಟಳು. ಸಕರ್ಾರಿ ಅಧಿಕಾರಿಗಳನ್ನು ವಗರ್ಾವಣೆ ಮಾಡುವಾಗ ಅನುಸರಿಸಬೇಕಾದ ಕನಷ್ಠ ನೀತಿ, ನಿಯಮ, ನಡಾವಳಿಗಳ್ಯಾವನ್ನೂ ಈ ಪ್ರಕರಣದಲ್ಲಿ ಅನುಸರಿಸಲಾಗಿಲ್ಲ ಎಂಬ ಅಭಿಪ್ರಾಯಕ್ಕೆ ಬಂದ ನ್ಯಾಯಮಂಡಳಿ ಈ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದಲ್ಲದೇ ಮುಖ್ಯಮಂತ್ರಿಯ ಮುಖಕ್ಕೆ ಮಂಗಳಾರತಿಯನ್ನೂ ಮಾಡಿತು. ಈಗ ನಂದೀಶ ನಿಜಕ್ಕೂ ಹುಚ್ಚು ನಾಯಿ ಕಡಿತಕ್ಕೆ ಸಿಕ್ಕವನಂತೆ ಪೆಚ್ಚಾಗಿ ಕುಳಿತಿದ್ದ. ಸಸ್ಪೆಂಡ್ ಮಾಡುವುದಕ್ಕಂತೂ ಆಗಲಿಲ್ಲ. ಕನಿಷ್ಠ ಟ್ರಾನ್ಸ್ಫರ್ ಆದ್ರೂ ಮಾಡಿಸಿ ಮುಖ ಉಳಿಸಿಕೊಳ್ಳಬೇಕೆಂಬ ಅನಿವಾರ್ಯತೆ ಅವನಿಗೆ. ಅಂತು ಮತ್ತೆ ಯಡ್ಡಿ ಕಿವಿಯಲ್ಲಿ ಬಿಸಿಗಾಳಿ ಊದಿ ವಗರ್ಾವಣೆ ಆದೇಶವನ್ನೂ ಹೊರಡಿಸುವಲ್ಲಿ ಯಶಸ್ವಿಯಾದ. ಆಕೆಯನ್ನು ಕೆ.ಆರ್ ಪುರಂನ ತಹಶೀಲ್ದಾರ ಕಚೇರಿಯಿಂದ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗೆ ವಗರ್ಾವಣೆ ಮಾಡಿಸಿ ತನ್ನ ತಾಳಕ್ಕೆ ತಕ್ಕಂತೆ ಕುಣಿಯುವ ಶಿವಕುಮಾರ ಎಂಬ ಅಧಿಕಾರಿಯನ್ನು ತಹಶೀಲ್ದಾರರನ್ನಾಗಿ ಮಾಡಿ ಕೂರಿಸಿದ. ಆದರೆ ಆಶಾ ಬಹಳ ಚಾಣಾಕ್ಷೆ. ಈ ವಗರ್ಾವಣೆ ಆದೇಶ ಕೈಸೇರುತ್ತಿದ್ದಂತೆಯೇ ಅದಕ್ಕೂ ಆಡಳಿತ ನ್ಯಾಯಮಂಡಳಿಯಿಂದ ತಡೆಯಾಜ್ಞೆ ತಂದುಬಿಟ್ಟಳು! ತಡೆಯಾಜ್ಞೆಯ ಪ್ರತಿಯನ್ನು ಕೈಯಲ್ಲಿ ಹಿಡಿದು ಆಶಾ ಆಫೀಸಿಗೆ ಬಂದರೆ ತಾಲ್ಲೂಕು ಆಫೀಸಿಗೆ ಬೀಗ ಜಡಿಯಲಾಗಿತ್ತು! ಅಸಲೀಯತ್ತೇನೆಂದರೆ ವಗರ್ಾವಣೆಗೆ ನ್ಯಾಯಮಂಡಳಿ ತಡೆಯಾಜ್ಞೆ ನೀಡಿದ್ದು ಗೊತ್ತಾದ ತಕ್ಷಣ ನಂದೀಶ ಹತಾಷೆಯಿಂದ ತನ್ನ ಬಾಡಿಗೆ ಗೂಂಡಾಗಳನ್ನು ಕಳಿಸಿ ಕೆ.ಆರ್.ಪುರಂ ತಹಶೀಲ್ದಾರ್ ಕಚೇರಿಗೆ ಬೀಗ ಜಡಿಸಿದ್ದ! ಕೈಲಾಗದವರು ಮೈ ಪರಚಿಕೊಂಡಿದ್ದರಂತಲ್ಲಾ ಹಾಗೆ. ಇದು ನಂದೀಶನದ್ದೇ ಕೆಲಸ ಎಂಬ ಬಗ್ಗೆ ಆಫೀಸಿನಲ್ಲಿದ್ದವರಿಗಾಗಲೀ, ಆಶಾಗಾಗಲೀ ಯಾವುದೇ ಅನುಮಾನ ಇರಲಿಲ್ಲ. ಹಿಂದು ಮುಂದು ನೋಡದೇ ಬೀಗ ಒಡೆಸಿ ಒಳ ನಡೆದುಬಿಟ್ಟಳು. ಅಲ್ಲಿಗೆ ನಂದೀಶನಿಗೆ ಅಘಾತದ ಮೇಲೆ ಮತ್ತೊಂದು ಅಘಾತವಾಯಿತು. ಈಗ ಮಾನ ಮಯರ್ಾದೆ ಉಳಿಸಿಕೊಳ್ಳೋದೇ ಆತನಿಗೆ ಕಷ್ಟವಾಯಿತು. ಕೂಡಲೇ ಆಶಾಳ ಕೋಣೆಯ ಎದುರು ಇನ್ನೊಂದು ಕುಚರ್ಿ ತರಿಸಿ ಹಾಕಿ ಅದರ ಮೇಲೆ ಶಿವಕುಮಾರ್ನನ್ನು ಕೂರಿಸಿದ. ಅಲ್ಲಿಗೆ ಒಂದೇ ತಾಲ್ಲೂಕು ಆಫೀಸಿಗೆ ಇಬ್ಬರು ತಹಶೀಲ್ದಾರರಾದಂತಾಯಿತು. ನಂದೀಶನಿಗೆ ಏನೂ ಕಿತ್ತುಕೊಳ್ಳಲಾಗಲಿಲ್ಲ. ಒಬ್ಬ ಹೆಣ್ಣು ಅಧಿಕಾರಿಯಿಂದ ಒದೆಯ ಮೇಲೆ ಒದೆ ತಿಂದು ಸುಸ್ತಾಗಿದ್ದ ಆತ ಕೊಟ್ಟ ಕೊನೆಯ ಆಯ್ಕೆಯಾಗಿ ಆಕೆಯ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಟ್ಟು ಇನ್ನೊಂದಿಷ್ಟು ಮೈ ಪರಚಿಕೊಂಡ. ಆಶಾ ಪವರ್ೀನ್ ಏನು ಕಡಿಮೆ ಗಿರಾಕಿಯೇ? ಆಕೆಯೂ ಒಂದು ಕಂಪ್ಲೇಂಟ್ ಲಾಡ್ಜ್ ಮಾಡಿದ್ದಾಳೆ. ಅಲ್ಲಿಗೆ ಒಂದು ಹಂತದ ಜಟಾಪಟಿ ಮುಗಿದಂತಾಗಿದೆ. ಸಧ್ಯಕ್ಕೆ ನಂದೀಶ ರೆಡ್ಡಿ ನೆಲಕ್ಕೆ ಬಿದ್ದು ಮಣ್ಣು ತಿಂದಿದ್ದಾನೆ. ಆದ್ರೂ ಮೀಸೆ ಮಣ್ಣಾಗಿಲ್ಲ ಅಂತ ಅಲ್ಲಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದಾನೆ! ಬಿಜೆಪಿ ಎಮ್ಮೆಲ್ಲೆಗಳು, ಮಂತ್ರಿ ಮಹೋದಯರು ಸಕರ್ಾರಿ ಸಂಪತ್ತನ್ನು ಹೇಗೆ ಲೂಟಿ ಮಾಡುತ್ತಾರೆ, ತಮ್ಮ ಲೂಟಿಗೆ ಅಡ್ಡ ಬಂದವರನ್ನು ಹೇಗೆ ಹಿಂಸಿಸುತ್ತಾರೆ ಎನ್ನೋದಕ್ಕೆ ಇದೊಂದು ಉದಾಹರಣೆಯಷ್ಟೆ. ಈ ಬಿಜೆಪಿಗಳು ಬಾಯ್ತೆರೆದರೆ ದೇಶಭಕ್ತಿ, ರಾಮರಾಜ್ಯ, ಪ್ರಾಮಾಣಿಕತೆ ಎಂತೆಲ್ಲಾ ಅಣಿಮುತ್ತುಗಳನ್ನು ಸುರಿಸುತ್ತವೆ. ಇವರ ಭಾಷಣಗಳನ್ನು ಕೇಳಿದರೆ ಆಹಾ ಇವರೆಂಥ ಮಹಾನ್ ದೇಶಭಕ್ತರು. ಇಂಥ ಮಹಾನುಭಾವರು ಇನ್ನೂ ಇದ್ದಾರಲ್ಲ ಅನ್ನಿಸುತ್ತೆ. ಆದರೆ ಒಂಚೂರು ಒಳಹೊಕ್ಕು ನೋಡಿದರೆ ಅಸಲಿ ಕಣ್ಣಿಗೆ ರಾಚುತ್ತದೆ. ಈ ಒಬ್ಬೊಬ್ಬ ಪುಢಾರಿಯೂ ನೂರಾರು, ಸಾವಿರಾರು ಕೋಟಿ ಮೌಲ್ಯದ ಆಸ್ತಿಗೆ ಒಡೆಯರಾಗಿದ್ದಾರೆ ಎಂದರೆ ಅವರ ದೇಶಭಕ್ತಿ, ದೇಶಪ್ರೇಮ, ಪ್ರಾಮಾಣಿಕತೆ, ರಾಮರಾಜ್ಯ ಎಂತಹದ್ದು ಎಂಬುದು ಅರ್ಥವಾಗಿಬಿಡುತ್ತದೆ. ಎಲ್ಲಾ ಅಧಿಕಾರಿಗಳೂ ಆಶಾ ಪವರ್ೀನ್ ಥರ ಇರೋದಿಲ್ಲ. ಇವರ ಕಾಟ ತಾಳಲಾರದೇ ಬಹುತೇಕ ಅಧಿಕಾರಿಗಳು ಹೆದರಿ ಎಮ್ಮೆಲ್ಲೆಗಳು, ಎಂಪಿಗಳು, ಮಂತ್ರಿಮಹೋದಯರು ಹೇಳಿದಂತೆ ಕೆಲಸ ಮಾಡಿ ಬಿಡುತ್ತಾರೆ. ಆ ಮೂಲಕ ಸಕರ್ಾರಿ ಸಂಪತ್ತು ಕಳ್ಳರ ಪಾಲಾಗುವುದಕ್ಕೆ ತಾವೇ ಸಹಕಾರ ಕೊಟ್ಟು ಬಿಡುತ್ತಾರೆ.(ಬಳ್ಳಾರಿ ಜಿಲ್ಲೆಯ ಎಲ್ಲ ಅಧಿಕಾರಿಗಳು ರೆಡ್ಡಿಗಳಿಗೆ ಹೆದರಿ ಸಕರ್ಾರದ ಸಂಪತ್ತನ್ನು ಲೂಟಿ ಮಾಡಲು ಸಹಕರಿಸುತ್ತಿದ್ದಾರೆ) ನಮ್ಮಲ್ಲಿ ಅಲ್ಲೋ ಇಲ್ಲೋ ಒಬ್ಬೊಬ್ಬರು ಆಶಾ ಪವರ್ೀನ್ ಥರ ಅಧಿಕಾರಿಗಳು ಇರ್ತಾರೆ. ಅಂಥವರು ಮಾತ್ರ ನಂದೀಶರೆಡ್ಡಿಯಂತಹ ನೆಲಗಳ್ಳರಿಗೆ ದಂಡಂದಶಗುಣಂ ಎಂದು ಪಾಠ ಕಲಿಸುತ್ತಾರೆ.ಒಟ್ಟಾರೆ ಈ ವ್ಯವಸ್ಥೆಯ ಸುಧಾರಣೆಗೆ ಆಶಾಪವರ್ಿನ್ರಂತೆ ಇನ್ನುಳಿದ ಅಧಿಕಾರಿಗಳು ದಿಟ್ಟತನದಿಂದ ಕೆಲಸ ಮಾಡಬೇಕು.
ಆಶಾ ಎಂಬ ಅಪರಂಜಿ
ಆಶಾ ಪವರ್ೀನಳ ಜಾಯಮಾನವೇ ಅಂತದು. ತಾನಂತೂ ಎಂದು ಭ್ರಷ್ಟಾಚಾರ ಮಾಡುವವಳಲ್ಲ, ತನ್ನ ಮೂಲಕ ಇತರರೂ ಮಾಡುವುದಕ್ಕೆ ಬಿಡುವವಳಲ್ಲ. ಸಾರ್ವಜನಕ ಸಂಪತ್ತನ್ನು ಮೋಸ, ವಂಚನೆಯ ಮೂಲಕ ಗುಳುಂ ಮಾಡುವದಕ್ಕೆ ಯಾರಾದರೂ ಕೈಹಾಕಿದರೆ, ಹಿಂದೆ-ಮುಂದೆ ನೋಡದೇ ಉಗಿದು ಕಳುಹಿಸುತ್ತಾಳೆ.ಅದು ನಂದೀಶರೆಡ್ಡಿಯಾಗಿರಲಿ, ಅಥವಾ ಅವರ ಅಪ್ಪನಾಗಿರಲಿ ಯಾರನ್ನು ಬಿಡುವುದಿಲ್ಲ.ಆಶಾಪವರ್ಿನ್ರಲ್ಲಿ ಈ ರೀತಿಯ ಕೆಚ್ಚು ಬರುವದಕ್ಕೆ ಪ್ರಾಯಶಃ ಅವರ ಅಪ್ಪನೇ ಕಾರಣವಿರಬೇಕು. ಮೂಲತಃ ಕೆ.ಆರ್ ಪೇಟೆಯವರಾದ ಅವರ ತಂದೆ ಹಿರಿಯ ಎಡಪಂಥೀಯ ಚಿಂತಕ ಎಸ್.ಕೆ ಕರೀಂಖಾನ್ ಅವರ ಪ್ರಭಾವಕ್ಕೆ ಒಳಗಾಗಿದ್ದವರು. ಜನಪರ ಮತ್ತು ಪ್ರಗತಿಪರ ಮೌಲ್ಯಗಳನ್ನು ಮೈಗೂಡಿಸಿಕೊಂಡು ನಂಬಿದ ಮೌಲ್ಯಗಳಿಗೆ ಚ್ಯುತಿ ಬಾರದಂತೆ, ಆದರ್ಶಪ್ರಾಯವಾಗಿ ಬದುಕಿದವರು. ದೊಡ್ಡ-ದೊಡ್ಡ ಹುದ್ದೆಗಳನ್ನು ಅಲಂಕರಿಸುವದಕ್ಕೆ ಶ್ರೀಮಂತನಾಗಿ ಬೆಳೆಯುವದಕ್ಕೆ ಎಷ್ಟೇ ಅವಕಾಶಗಳಿದ್ದರೂ ಅದ್ಯಾವ ವ್ಯಾಮೋಹಕ್ಕೂ ಬಲಿಯಾಗದೇ ಶಿಕ್ಷಕರಾಗಿಯೇ ಮುಂದುವರೆದವರು. ಅದೇ ರೀತಿಯಲ್ಲಿ ಆಶಾಪವರ್ಿನ್ರನ್ನು ಬೆಳೆಸಿದ್ದರು.ಹೀಗೆ ತಂದೆಯ ಪ್ರಗತಿಪರ ಚಿಂತನೆಗಳನ್ನು ಅಂತರ್ಗತ ಮಾಡಿಕೊಂಡ ಆಶಾಪವರ್ಿನ್ ತಮ್ಮ ಬದುಕಿನಲ್ಲಿಯೂ ಅವುಗಳನ್ನು ಅಳವಡಿಸಿಕೊಂಡರು. ಮುಂದೆ ಓದಿ ಪೊಲೀಸ್ ಇಲಾಖೆಯಲ್ಲಿ ಸೇರಿದ್ದಾಗಲೂ ಆ ಮೌಲ್ಯಗಳನ್ನು ಕಾಪಾಡಿಕೊಂಡು ಬಂದರು. ಸಾಮಾನ್ಯವಾಗಿ ಪೊಲೀಸ್ ಇಲಾಖೆ ಹೇಗಿರುತ್ತದೆಂದರೆ, ಒಮ್ಮೆ ಅದರೊಳಗೆ ಹೋದರೆ ಸಾಕು ಪ್ರಾಮಾಣಿಕರು ಒಂದು ರಾತ್ರಿ ಕಳೆಯುವದರೊಳಗಾಗಿ ಭ್ರಷ್ಟರಾಗಿ ಬಿಡುತ್ತಾರೆ. ಆದರೆ, ಆಶಾಪವರ್ಿನ್ ಅದಕ್ಕೆ ಅಪವಾದವಾಗಿದ್ದರು. 2001-03ರತನಕ ಸೆಂಟ್ರಲ್ ಕ್ರೈಂ ಬ್ರ್ಯಾಂಚಿನಲ್ಲಿದ್ದಾಗಲಿ ನಂತರ ಕಮಷರ್ಿಯಲ್ ಸ್ಟ್ರೀಟ್ ಪೊಲೀಸ್ ಸ್ಟೇಷನ್ನಲ್ಲಾಗಲಿ ಅಥವಾ ಆರ್.ಟಿ ನಗರ ಟ್ರಾಫಿಕ್ ಪೊಲೀಸ್ ಠಾಣಿಯಲ್ಲಾಗಲಿ, ಬಂದಾಗ ಒಂದೇ ಒಂದು ಭ್ರಷ್ಟಾಚಾರವನ್ನು ಮಾಡಲಿಲ್ಲ. ಭ್ರಷ್ಟರ ಮಧ್ಯೆದಲ್ಲಿಯೇ ಇದ್ದು ಕೊಂಡು ಪರಿಶುದ್ದರಾಗಿ ಉಳಿಯುವುದು ಬಹಳ ಕಷ್ಟ. ಆದರೆ, ಪವರ್ಿನ್ರವರು ಅದನ್ನು ಸಾಧಿಸಿ ತೋರಿಸಿದ್ದರು.ಈ ಕಾರಣಕ್ಕಾಗಿಯೇ ಮೇಲಾಧಿಕಾರಿಗಳ ಕೆಂಗಣ್ಣಿಗೆ ತುತ್ತಾಗಿ ಹಲವು ಬಾರಿ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಎತ್ತಂಗಡಿಯೂ ಆಗಬೇಕಾಯಿತು. ಆದರೂ, ಅವರು ಎಂದೆಂದಿಗೂ ಎದೆಗುಂದಲಿಲ್ಲ. ಅನೇಕ ಅಡ್ಡಿ-ಆತಂಕಗಳನ್ನು ಯಶಸ್ವಿಯಾಗಿ ಎದುರಿಸಿ ಜನರಿಂದ ಸೈ ಎನಿಸಿಕೊಂಡಿದ್ದಾರೆ.ನಂದೀಶರೆಡ್ಡಿ ಅದ್ಯಾವ ಗಳಿಗೆಯಲ್ಲಿ ಇವರನ್ನು ತೊಡವಿದನೋ ಅಥವಾ ಆತನ ಗ್ರಹಾಚಾರ ನೆಟ್ಟಗಿರಲಿಲ್ಲವೋ ಏನೋ ಅಂತೂ ಆಶಾಪವರ್ಿನ್ ಕೈಯಲ್ಲಿ ಸಿಕ್ಕು ಪೆಟ್ಟಿನ ಮೇಲೆ ಪೆಟ್ಟು ತಿನ್ನುತ್ತಿದ್ದಾನೆ. ತಾನು ತಿನ್ನುವುದಲ್ಲದೇ ಕೋಟರ್ಿನಿಂದ ಯಡ್ಡಿಗೂ ತಿನ್ನಿಸುತ್ತಿದ್ದಾನೆ.
ಮಾದ್ಯಮಗಳ ದಿವಾಳಿಕೋರತನಕೆ.ಆರ್.ಪುರಂ ಶಾಸಕ ನಂದೀಶರೆಡ್ಡಿಯ ಹಿಡಿತದಲ್ಲಿ ಕೆಲವೊಂದು ಟಿವಿ ಚಾನೆಲ್ಗಳ ವರದಿಗಾರರು ಕೆಲಸ ಮಾಡುತ್ತಿದ್ದಾರೆೆ! ಅವರಿಗೆ ತಿಂಗಳಿಗೆ ಇಂತಿಷ್ಟು ಎಂದು ಮಾಮೂಲಿಯನ್ನು ನಂದೀಶರೆಡ್ಡಿ ನೀಡುತ್ತಾನೆ! ಈ ಕಾರಣವಾಗಿ ರಾಜ್ಯದ ಯಾವೊಂದು ಚಾನೆಲ್ಗಳು ಪವರ್ಿನ್ರ ಪ್ರಕರಣದ ಕುರಿತು ವಾಸ್ತವ ವರದಿಯನ್ನು ಪ್ರಸಾರ ಮಾಡಿಲ್ಲ. ಅಮೇರಿಕಾದಲ್ಲಿ ಶೋಭಕ್ಕ ನೈಟ್ಪ್ಯಾಂಟ್ ಹಾಕಿದರೆ, ಪೊಲೀಸ್ ಜೀಪಿನ ಮೇಲೆರಿ ಸಿದ್ದರಾಮಯ್ಯ ಲುಂಗಿಮೇಲೆ ಕಟ್ಟಿದರೆ, ಅರ್ಧಗಂಟೆ ವಿಶೇಷ ಕಾರ್ಯಕ್ರಮ ಮಾಡುವ ಚಾನೆಲ್ಗಳು ಒಬ್ಬ ಹಿರಿಯ ಕೆ.ಎ.ಎಸ್ ಅಧಿಕಾರಿಗೆ ಆಗಿರುವ ಅನ್ಯಾಯವನ್ನು ವಾಸ್ತವಿಕವಾಗಿ ತಿಳಿದಿದ್ದರೂ ಏನು ಮಾಹಿತಿ ಇಲ್ಲದಂತೆ ವತರ್ಿಸುತ್ತಿವೆ.ಭ್ರಷ್ಟಾಚಾರದ ವಿರುದ್ಧ ಧ್ವನಯೆತ್ತ ಬೇಕಾದ ಚಾನೆಲ್ಗಳು ಭ್ರಷ್ಟರ ಎಂಜಲು ತಿಂದು ಅವರ ಪರವಾಗಿ ಕೆಲಸ ಮಾಡುತ್ತಿವೆ. ಸಮಾಜದಲ್ಲಿ ಸತ್ಯ, ನಿಷ್ಟೆ, ಕಾನೂನನ್ನು ಕಾಪಾಡಬೇಕಾದ ಮಾಧ್ಯಮಗಳು ತಮ್ಮ ಕರ್ತವ್ಯವನ್ನು ಮರೆತು ಜನಸಾಮಾನ್ಯರು ಮಾಧ್ಯಮಗಳ ಮೇಲಿಟ್ಟಿರುವ ನಂಬಿಕೆಗೆ ದ್ರೋಹ ಬಗೆಯುತ್ತಿವೆ. ಸಮಾಜವನ್ನು ಸರಿದಾರಿಯಲ್ಲಿ ನಡೆಸಬೇಕಾದ ಮಾಧ್ಯಮ ತಾನೇ ತಪ್ಪುದಾರಿಯಲ್ಲಿ ನಡೆದರೆ ಸಮಾಜದ ಗತಿ ಏನಾಗಬಹುದು? ಪರಿಸ್ಥಿತಿ ಹೀಗೆ ಮುಂದುವರೆದರೆ ಮಾಧ್ಯಮಗಳು ಸಂಪೂರ್ಣವಾಗಿ ಜನಸಾಮಾನ್ಯರ ನಂಬಿಕೆಯನ್ನು ಕಳೆದುಕೊಂಡು ವಿನಾಶದ ಅಂಚಿಗೆ ತಲುಪುವದರಲ್ಲಿ ಸಂದೇಹವಿಲ್ಲ. ಅದರಂತೆ ಆಶಾಪವರ್ಿನ್ರ ಪ್ರಕರಣದಲ್ಲಿ ಮಾಧ್ಯಮಗಳು ಇದನ್ನೇ ಮಾಡಿವೆ!ಮಾದ್ಯಮಗಳ ಮಾತು ಒತ್ತಟ್ಟಿಗಿರಲಿ. ಒಬ್ಬ ಮಹಿಳಾ ಅಧಿಕಾರಿಗೆ ಹೀಗೆ ಜನಪ್ರತಿನಧಿಯೊಬ್ಬ ಈ ಪಾಟಿ ಕಿರುಕುಳ ಕೊಡುತ್ತಿದ್ದರೆ ಮಹಿಳಾ ಸಂಘಟನೆಗಳಾದರೂ ಮುಂದೆ ಬಂದು ಪ್ರತಿಭಟಿಸಬೇಡವೆ? ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್ ವಿಮಲಾರವರನ್ನು ಹೊರತುಪಡಿಸಿದರೆ, ಮಹಿಳಾ ಮೀಸಲಾತಿಯ ಕುರಿತು ಗಂಟೆಗಟ್ಟಲೇ ಮಾತನಾಡುವ ಯಾವ ಮಹಿಳಾ ಸಂಘಟನೆಗಳೂ, ಯಾವ ಮಹಿಳಾಮಣಿಗಳು ಈ ಕಡೆ ಕಣ್ಣು ಹಾಯಿಸಲೇ ಇಲ್ಲ! ದುರಂತ ಎಂದರೆ ಇದೇ ಅಲ್ಲವೆ?
ಎಂ.ಲಿಂಗರಾಜು,

No comments:

Post a Comment

Thanku