Thursday, August 19, 2010

ಬಳ್ಳಾರಿ ಜನಾರ್ದನರೆಡ್ಡಿ ಪಾಟರ್ಿ (ಬಿ.ಜೆ.ಪಿ)


ಬಳ್ಳಾರಿ ಜನಾರ್ದನರೆಡ್ಡಿ ಪಾಟರ್ಿ (ಬಿ.ಜೆ.ಪಿ)ರೆಡ್ಡಿಗಳ ಪಂಥಾಹ್ವಾನವನ್ನು ಸ್ವೀಕರಿಸಿ ಕಾಂಗ್ರೇಸ್ನವರು ಬಳ್ಳಾರಿಗೆ ಹೋಗುತ್ತಿರುವುದು,ಅದಿರು ರಪ್ತು ನಿಷೇದ,ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ಒಪ್ಪಿಸುವುದು,ಶ್ರೀರಾಮುಲು ತನ್ನ ಬಳ್ಳಾರಿಗೆ ದೃಷ್ಟಿಯಾಗಬಾರದೆಂಬ ಕಾರಣಕ್ಕೆ ಪದೇ ಪದೇ ಬರುವ ತಲೆ ಕೂದಲನ್ನು ಬೊಳಿಸಿಕೊಂಡಿರುವುದು,ತಾಸಿನಿಂದ ತಾಸಿಗೆ ಉಲ್ಟಾಹೊಡೆಯುವ ಬ್ರಾಂಡಿ ಮಂತ್ರಿ ಬ್ರಾಂಡ್ನ ಶಾಸಕರು,ಇದೆಲ್ಲವನ್ನು ಮನರಂಜನೆಯಾಗಿ ಜನಸಾಮಾನ್ಯರಿಗೆ ಉಣಬಡಿಸುತ್ತಿರುವ ಮಾಧ್ಯಮಗಳು,ಒಟ್ಟಾರೆ ಈ ಎಲ್ಲಾ ಬೆಳವಣೆಗೆಗಳನ್ನು ಕನರ್ಾಟಕ ರಾಜ್ಯ ಎಂದೆಂದೂ ಕಂಡಿದ್ದಿಲ್ಲ.!ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅನಿವಾರ್ಯವಾಗಿ ಕಾಣಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಕುರಿತು ವಾಸ್ತವಿಕ ನೆಲಗಟ್ಟಿನ ಮೇಲೆ ಪ್ರಸ್ತುತ ವಿಧ್ಯಮಾನಗಳತ್ತ ಒಂದು ಝಲಕ್..!ಎಲ್ಲಾ ರೀತಿಯ ಜನವಿರೋಧಿ ನೀತಿಗಳನ್ನು ಕಟಿಬದ್ದವಾಗಿ ಜಾರಿಗೆ ತರುವಲ್ಲಿ ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಇದರಿಂದ ದೇವೆಗೌಡರ ಜೆ.ಡಿ.ಎಸ್ ಪಕ್ಷವು ಹೊರತಾಗಿಲ್ಲ. ಕಾಂಗ್ರೇಸ್ ಮತ್ತು ಜೆ.ಡಿ.ಎಸ್ ಗಳು ಜಾತ್ಯಾತೀತ ವಿಚಾರಗಳನ್ನು ಹೇಳಿಕೊಂಡು ತಮ್ಮ ಆಚರಣೆಯಲ್ಲಿ ಅದೇ ಜಾತಿಯತೆಯನ್ನೇ ಮಾಡುತ್ತವೆ. ಆದರೆ, ಬಿಜೆಪಿಗಳಿಗೆ ಜಾತಿಯತೇ ಎನ್ನುವುದೇ ಒಂದು ಬಹಿರಂಗ ಅಜೆಂಡಾ. ಕೋಮು-ಜ್ವಾಲೆ-ದಳ್ಳುರಿಗಳನ್ನು ಹುಟ್ಟುಹಾಕುವ ಇತಿಹಾಸ ಬಿಜೆಪಿಗಳಿಗೆ ಇದ್ರೆ, ಅವೆಲ್ಲವುಗಳಿಗೆ ನೀರು ಗೊಬ್ಬರ ಹಾಕಿ ಬೆಳಿಸುವ ಕೀತರ್ಿ ಜೆ.ಡಿ.ಎಸ್ ಕಾಂಗ್ರೇಸ್ಗಳಿಗಿದೆ.ಅಂದ ಮೇಲೆ ಇವರ್ಯಾರು ಸಾಚಾಗಳಲ್ಲ, ಸಮಾಜದ ಉದ್ದಾರಕರಲ್ಲ ಎಂಬುದು ಜನರಿಗೆ ಗೊತ್ತು. ಆದ್ಯಾಗ್ಯೂ ಜನತೆಗೆ ಚುನಾವಣೆಯಲ್ಲಿ ಅನಿವಾರ್ಯತೆ ಇರುವದರಿಂದ ಈ ಎಲ್ಲರನ್ನು ಅವಲಂಭಿಸಿದ್ದಾರೆ. (ಚುನಾವಣೆಯ ಸಂದರ್ಭದಲ್ಲಿ ಹಣ, ಹೆಂಡಕ್ಕಾಗಿ ಮತಗಳನ್ನು ಮಾರಿಕೊಳ್ಳುವುದು ಸೇರಿದಂತೆ ಮುಂತಾದವುಗಳು)ಚೆಡ್ಡಿಗಳ ರಾಜಕೀಯ ಪಕ್ಷ ರೆಡ್ಡಿಗಳ ಪಾಟರ್ಿಯಾದದ್ದು ಹೀಗೆ...!ಬಿಜೆಪಿಯೂ ಸಕರ್ಾರವನ್ನು ರಚಿಸಲು ಪೂರ್ಣಪ್ರಮಾಣದ ಬಹುಮತವನ್ನು ಪಡೆಯದೇ ಹೋದಾಗ ಬಳ್ಳಾರಿಯ ರೆಡ್ಡಿಗಳು ಹಡಬೆ ದುಡ್ಡಲ್ಲಿ ಆಪರೇಷನ್ ಕಮಲ ಎಂಬ ಹೆಸರಿನಡಿ ಬೇರೆ ಪಕ್ಷಗಳ ಶಾಸಕರನ್ನು ಕೊಂಡುಕೊಂಡರು. ನಂತರ ಅವ್ರುಗಳಿಗೆ ಉಪ ಚುನಾವಣೆಯಲ್ಲಿ ಗೆಲ್ಲಲು ಕೋಟಿಗಟ್ಟಲೇ ಹಣವನ್ನು ನೀಡಿ ಕೊನೆಗೆ ಅವರು ಗೆಲ್ಲುವಂತೆಯೂ ನೋಡಿಕೊಂಡರು. ಅದೊಂದು ಸುವರ್ಣ ಸಮಯ ಬಿಜೆಪಿಯ ಎಲ್ಲಾ ಮುಖಂಡರಿಗೆ ಹರ್ಷವನ್ನು ತಂದುಕೊಟ್ಟಿತ್ತು.! ಯಾಕೆಂದರೆ, ಯಾವುದೇ ತತ್ವ-ಸಿದ್ದಾಂತಗಳಿಂದ ಬಂದಿರದ ರೆಡ್ಡಿಗಳು ಏಕಾಏಕಿ ಬೀಳುತ್ತಿರುವ ಸಕರ್ಾರವನ್ನು ಅಷ್ಟೊಂದು ಸಲೀಸಾಗಿ ಉಳಿಸಿದ್ದಾರೆಂದರೆ ಮಾಮೂಲಿಯಲ್ಲ ಎಂದು ತಿಳಿದ ಕೇಂದ್ರ ನಾಯಕರಿಗೆ ಅಚ್ಚರಿಯಾಯಿತು..!ಆಗಲೇ ರೆಡ್ಡಿಗಳು ಕನರ್ಾಟಕದಲ್ಲಿದ್ದ ಭಾರತೀಯ ಜನತಾ ಪಾಟರ್ಿಯನ್ನು ಬಳ್ಳಾರಿ ಜನಾರ್ಧನರೆಡ್ಡಿ ಪಾಟರ್ಿ ಎಂದು ಬಿಜೆಪಿಗೆ ಮರುನಾಮಕರಣ ಮಾಡಿಕೊಂಡರು. ಕ್ರಮೇಣ ಸಕರ್ಾರವೆಂದರೆ ನಾವು ನಾವಂದರೆ ಸಕರ್ಾರ ಎಂಬ ಅಹಂ ರೆಡ್ಡಿಗಳಿಗೆ ಬಂದು ಬೀಗತೊಡಗಿದರು. ಹಡಬೆ ದುಡ್ಡಿಗೆ ಹರಾಜಾಗಿದ್ದ ಶಾಸಕರೆಲ್ಲ ಇವರ ಬೆಂಗಾವಲಿಗೆ ನಿಂತರು. ನಂತರ ಆಡಳಿತದಲ್ಲಿ ಯಾವುದೇ ತೊಂದರೆಯಾಗದಂತೆ ತಮಗೆ ಬೇಕಾದ ಡಿಸಿ, ಎಸ್ಪಿಗಳನ್ನು ಹಾಕಿಸಿಕೊಂಡರು. ಅದರಂತೆ ಸಕರ್ಾರದಲ್ಲಿ ತಮಗೆ ಬೇಡವಾದ ಅಧಿಕಾರಿಗಳನ್ನು ವರ್ಗ ಮಾಡಿಸ ತೊಡಗಿದರು. ಶೋಭಾ ಕರಂದ್ಲಾಜೆಯನ್ನು ಸಂಪುಟದಿಂದ ಕೈಬಿಡುವಂತೆ ಪಕ್ಷದ ಹಿರಿಯ ಮುಖಂಡರ ಮೇಲೆ ಒತ್ತಡವನ್ನು ಹಾಕಿ ಯಶಸ್ವಿಯಾದರು. ಇನ್ನೂ ವಿರೋಧಪಕ್ಷವಾದ ಕಾಂಗ್ರೇಸ್ ಹಾಗೂ ಜೆ.ಡಿ.ಎಸ್ ಪಕ್ಷಗಳನ್ನು ಒಂದೇ ಸಮನೆ ತೆಗಳುತ್ತಾ, ಸೇಡಿನ ರಾಜಕಾರಣ ಮಾಡುತ್ತ ಬಂದರು. ವೈ.ಎಸ್.ಆರ್ ಮಗನೊಂದಿಗೆ ಕೋಟಿಗಟ್ಟಲೇ ಬಜೆಟ್ನೊಂದಿಗೆ ಬ್ರಾಹ್ನೀಣಿ ಸ್ಟೀಲ್ ಕೈಗಾರಿಕೆಯೊಂದನ್ನು ಆರಂಭಿಸಲು ಯೋಜನೆಯೊಂದನ್ನು ಹಾಕಿದರು. ಅದಕ್ಕೆ ಪೂರಕವಾಗಿ ಮಂದಿಯ ಕೂದಲಿನ ದೇವರಾದ ತಿರುಪತಿ ತಿಮ್ಮಪ್ಪನಿಗೆ ವಜ್ರಭರಿತ ಕೀರಿಟವೊಂದನ್ನು ನೀಡಿದರು. ಹೀಗೆ ರೆಡ್ಡಿಗಳ ದರ್ಪ ಜಾಸ್ತಿಯಾಗುತ್ತಾ ಸಾಗಿದಂತೆ ಅವರಿಗೆ ಗಾಡಫಾದರ್ ಆಗಿದ್ದ ಆಗಿನ ಮುಖ್ಯಮಂತ್ರಿ ವೈ.ಎಸ್.ಆರ್ ರಾಜಶೇಖರ ರೆಡ್ಡಿ ಹೆಲಿಕ್ಯಾಪ್ಟರ್ ಪತನದಲ್ಲಿ ಸಾವನ್ನಪ್ಪಿದರು. ಅಲ್ಲಿಂದಲೇ ರೆಡ್ಡಿಗಳಿಗೆ ತಮ್ಮ ಅಂತ್ಯದ ಮುನ್ಸೂಚನೆಗಳು ಬರತೊಡಗಿದವು.ಇವರ ಈ ಎಲ್ಲಾ ದುರಾಡಳಿತವನ್ನು ದಿನನಿತ್ಯ ಕಾಣುತ್ತಿದ್ದ ವಿರೋಧಪಕ್ಷಗಳಿಗೆ ಹೊಟ್ಟೆಯಲ್ಲಿ ಮೆಣಸಿನಕಾರ ಕಲಸಿದಂತಾಗುತ್ತಿತ್ತು. ಆದರೂ ಕೂಡ ಅದನ್ನೆಲ್ಲ ಸಹಿಸಿಕೊಂಡು ಕಾಂಗ್ರೇಸ್ ಮತ್ತು ಜೆ.ಡಿ.ಎಸ್ನವರು ಸಮಯಕ್ಕಾಗಿ ಕಾದು ಕುಳಿತಿದ್ದರು. (ಬಿಜೆಪಿಯ ವಿರುದ್ದ ಸಮರಕ್ಕೆ ಬೀದರನಿಂದ ಬೆಂಗಳೂರಿಗೆ ಪಾದಯಾತ್ರೆಯನ್ನು ಮಾಡಲು ಕುಮಾರಸ್ವಾಮಿ ಆಗಸ್ಟ್ ತಿಂಗಳಿನಲ್ಲಿ ದಿನಾಂಕವನ್ನು ನಿಗದಿ ಮಾಡಿದ್ದರು.)ಆದರೆ,ಮೊನ್ನೆ ಸದನದಲ್ಲಿ ಬಿಜೆಪಿ ಕೆಲವು ಎಂ.ಎಲ್.ಎಗಳು ತಾಕತ್ತಿದ್ರೆ, ನೀವು ಬಳ್ಳಾರಿಗೆ ಬರ್ರೀ.. ನಿಮ್ಮನ್ನು ನೋಡಿಕೊಳ್ಳುತ್ತೀವಿ ಎಂದು ಸಿದ್ರಾಮಯ್ಯನ ಪಡೆಗೆ ಸವಾಲು ಹಾಕಿದಾಗ, ಅವಕಾಶಕ್ಕಾಗಿ ಕಾದು ಕೂತಿದ್ದ (ಬಿಸಿಯಿದ್ದಾಗಲೇ ಕಬ್ಬಿಣವನ್ನು ಬಡಿದರೆ, ಬಗ್ಗುತ್ತದೆ ಎಂಬಂತೆ) ಕಾಂಗ್ರೇಸ್ನವರು ಒಳಗೊಳಗೆ ಸಭೆಗಳನ್ನು ಮಾಡಿ, ಹೈಕಮಾಂಡ್ನಿಂದ ಅನುಮತಿಯನ್ನು ಪಡೆದು ಬಳ್ಳಾರಿಗೆ ಪಾದಯಾತ್ರೆ ಮಾಡುವ ಕಾರ್ಯಕ್ರಮವನ್ನು ರೂಪಿಸಿಯೇ ಬಿಟ್ಟರು. ಕೋಮಾ ಸ್ಥಿತಿಯಲ್ಲಿದ್ದ ಕಾಂಗ್ರೇಸ್ಗೆ ಇದೊಂದು ಪಾದಯಾತ್ರೆಯೂ ಸ್ವಲ್ಪ ಆಸರೆಯಾಯಿತು. ರೆಡ್ಡಿಗಳು ಸಿದ್ದರಾಮ್ಯನನ್ನು ಹೊರತುಪಡಿಸಿ ಬೇರೆ ಯಾರಿಗಾದರೂ ಸವಾಲು ಹಾಕಿದ್ದರೆ, ಇದಕ್ಕೆ ಇಷ್ಟೊಂದು ಮಹತ್ವ ಬರುತ್ತಿರಲಿಲ್ಲವೇನೋ? ಯಾಕೆಂದರೆ ಸಿದ್ದರಾಮಯ್ಯ ಈಗ ಅನುಭವಿ ರಾಜಕಾರಣಿ ಮತ್ತು ರಾಜಕೀಯ ಮುತ್ಸದ್ಧಿ ದೇವೆಗೌಡರನ್ನೇ ಎದುರು ಹಾಕಿಕೊಂಡು ಚಳುವಳಿಗಳನ್ನು ಕಟ್ಟಿದ ಒಚಿ ಟಜಚಿಜಜಡಿ ಇದರ ಜೊತೆಯಲ್ಲಿ ಸಿದ್ದರಾಮಯ್ಯನಿಗೆ ಹೇಳಿಕೊಳ್ಳುವಷ್ಟು ಜನ ಬೆಂಬಲವಿದೆ. ಅದರಂತೆ ಎಲ್ಲ ಕುರುಬರ ಪಾಲಿಗೆ ಪರಮೋಚ್ಛ ನಾಯಕ ಸಿದ್ದರಾಮಯ್ಯ. (ಇಲ್ಲಿ ಈಶ್ವರಪ್ಪ, ಬಂಡೆಪ್ಪ ಕಾಶೆಂಪೂರನನ್ನು ಕುರುಬರು ತಮ್ಮ ನಾಯಕರೆಂದು ಎಂದು ಹೇಳಿಕೊಳ್ಳುವುದಿಲ್ಲ.) ಕಾರಣ ಇಷ್ಟೆಲ್ಲ ಹಿನ್ನಲೆಯಿರುವ ಸಿದ್ದರಾಮಯ್ಯನಿಗೆ ಸವಾಲು ಹಾಕಿರುವದರಿಂದ ಕಾಂಗ್ರೇಸ್ ಪ್ರತಿಷ್ಟೆಯ ಪ್ರಶ್ನೆಯಾಗಿ ಪಾದಯಾತ್ರೆಯನ್ನು ಕೈಗೆತ್ತಿಕೊಂಡಿತು.ಇನ್ನು ಪಾದಯಾತ್ರೆ ನಡೆಯುತ್ತಲೇ ಸಾಗಿದೆ. ಆದರೆ, ಬಳ್ಳಾರಿ ಜನಾರ್ಧನರೆಡ್ಡಿ ಪಕ್ಷದ ನಾಯಕರು ಜೈಲು, ರೌಡಿಸಂ, ಕೊಲೆ ಅಂತ ಏನೆಲ್ಲ ಪ್ರಕ್ರಿಯೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅದೆಲ್ಲ ಸಾಲದೆಂಬಂತೆ ತಲೆಗಳನ್ನು ಬೊಳಿಸಿಕೊಂಡು ಬಳ್ಳಾರಿ ಜಿಲ್ಲೆಯಲ್ಲಿ ಪಾದಯಾತ್ರೆಗಳನ್ನು ಮಾಡಲು ಆರಂಭಿಸಿದ್ದಾರೆ. ಶ್ರೀರಾಮುಲು ತಲೆಬೊಳಿಸಿದ್ದನ್ನು ಕಂಡು ಆತನ ಅಭಿಮಾನಿಗಳು ತಲೆಬೊಳಿಸುತ್ತಿದ್ದರಿಂದ ನಮ್ಮ ಹಡಪದ ಅಪ್ಪಣ್ಣನವರಿಗೆ ಗಿರಾಕಿಗಳು ಜಾಸ್ತಿಯಾದಂತಾಗಿದೆ.ಚೆಡ್ಡಿಗಳಿಗೆ ರೆಡ್ಡಿಗಳು ನುಂಗಲಾರದ ತುತ್ತು!ಸಕರ್ಾರವನ್ನು ರಚಿಸುವ ಸಂದರ್ಭದಲ್ಲಿ ರೆಡ್ಡಿಗಳನ್ನು ಬೇಷ್ ಎಂದು ಒಪ್ಪಿಕೊಂಡಿದ್ದ ಸಂಘಪರಿವಾರಿಗಳಿಗೆ ಅದೇ ರೆಡ್ಡಿಗಳು ಇಂದು ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ. ದಕ್ಷಿಣ ಭಾರತದ ಪ್ರಥಮ ಬಿಜೆಪಿ ಸಕರ್ಾರವನ್ನು ಯಶಸ್ವಿಯಾಗಿ 5ವರ್ಷ ಪೂರೈಸಿ ಇಲ್ಲಿಂದಲೇ ಭದ್ರಬುನಾದಿಯೊಂದನ್ನು ಹಾಕಬೇಕೆಂದಿದ್ದ ಸಂಘಪರಿವಾರಿಗಳ ಆಲೋಚನೆ ಮಣ್ಣುಮುಕ್ಕುತ್ತಿದೆ! ಈ ಅವಧಿಯೊಳಗಡೆ ತನ್ನ ಕಿಲಾಡಿ ಸಂಘಟನೆಗಳನ್ನು ಕಟ್ಟಿ ಹಿಂದುತ್ವದ ವಿಷಭೀಜವನ್ನು ಬಿತ್ತಲು ಚಿಂತನೆಯನ್ನು ಮಾಡಿತ್ತು.ಆದರೆ,ಕಾಂಗ್ರೇಸ್ಸಿಗರು ಮಾಡುತ್ತಿರುವ ಪಾದಯಾತ್ರೆ, ಪಕ್ಷದಲ್ಲಿನ ಭಿನ್ನಮತ, ರೆಡ್ಡಿಗಳ ಕುರಿತು ಜನತೆಗಿರುವ ಅಸಹ್ಯ ಅಸಮಧಾನ, ಕುಲಾಂತರಿ ಶಾಸಕರೆಲ್ಲ ವಾರಕ್ಕೊಮ್ಮೆ ರೆಸಾಟರ್್ಗಳಲ್ಲಿ ಸೇರುತ್ತಾ ಸಭೆಗಳನ್ನು ಮಾಡುತ್ತಿರುವುದು, ರೆಡ್ಡಿಗಳನ್ನು ಸಂಪುಟದಿಂದ ತೆಗೆದುಹಾಕಿದರೆ ತಮ್ಮ ಬುಡಕ್ಕೆಲ್ಲಿ ಪೆಟ್ಟು ಬೀಳುತ್ತದೆ ಎಂಬ ಭಯ, ಯಡಿಯೂರಪ್ಪ ರೆಡ್ಡಿಗಳನ್ನು ತೆಗೆದುಹಾಕುವಂತೆ ಮಾಡುತ್ತಿರುವ ಒತ್ತಡ, ಹಡಬೆ ದುಡ್ಡಿನ ಶಾಸಕರನ್ನೆಲ್ಲ ಕಂಡು ಸಂಘಪರಿವಾರಿಗಳ ನಿದ್ದೆಬಾರದಂತಾಗಿದೆ. ಏನಾದರೂ ಅವಸರದಿಂದ ಕ್ರಮಗಳನ್ನು ತೆಗೆದುಕೊಳ್ಳಲು ಸಕರ್ಾರದಲ್ಲಿ ಎಡವಟ್ಟಾಗುವುದೇ ಜಾಸ್ತಿಯಿದೆ.ಆದ್ದರಿಂದ ಸಂಘಪರಿವಾರಿಗಳ ದಿನಾಲು ಕೇಶವಕೃಪದಲ್ಲಿ ಕುಳಿತು ಬೈಠಕ್ಗಳ ಮೇಲೆ ಬೈಠಕ್ ಮಾಡುತ್ತಾ, ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಮುಖ್ಯವಾಗಿ ಸಂಘಪರಿವಾರಕ್ಕೆ ರಾಷ್ಟ್ರಮಟ್ಟದಲ್ಲಿ ಬೇಕಾದ ಸುಷ್ಮಾಸ್ವರಾಜ್ಳೇ ಈ ರೆಡ್ಡಿಗಳಿಗೆ ಮಹಾತಾಯಿಯಾಗಿದ್ದಾಳೆ. ಇನ್ನು ತಾಯಿಯನ್ನು ಕರೆಸಿ ಮಕ್ಕಳಿಗೆ ಬುದ್ದಿ ಕಲಿಸಬೇಕೆಂಬ ಕಾರ್ಯವು ಸಮರ್ಪಕವಾಗಿ ಆಗುತ್ತಿಲ್ಲ. ಅದರಂತೆ ಇದರ ಇರಾದೆಯೂ ಯಾರೊಬ್ಬರಿಗಿಲ್ಲ.! ಈ ಎಲ್ಲ ಬೆಳವಣಿಗೆಗಳ ಮಧ್ಯೆ ಸಂಘಪರಿವಾರಿಗಳು ತಾವು ತೋಡಿದ ಹಳ್ಳಕ್ಕೆ ತಾವೇ ಬೀಳಬೇಕಾದ ಪರಿಸ್ಥಿತಿ ಎದುರಾಗಿರುವುದಂತು ಸತ್ಯ.

No comments:

Post a Comment

Thanku