ಇವರ್ಯಾರೆಂಬುದು ನಿಮಗೆ ಗೊತ್ತಾ..? ಕಾಮರ್ಿಕರ ಹೋರಾಟದ ಸಂಕೇತವಾಗಿ, ಕಾಮರ್ಿಕರ ನ್ಯಾಯಬದ್ದ ಹಕ್ಕುಗಳಿಗಾಗಿ ತಮ್ಮ ಪ್ರಾಣವನ್ನೇ ಅಪರ್ಿಸಿದ ಸಂಗಾತಿಗಳಿಗೆ ಶ್ರದ್ಧಾಂಜಲಿ ಅಪರ್ಿಸುವ ದಿನವಾಗಿ ಕಾಮರ್ಿಕರ ಹಕ್ಕೋತ್ತಾಯಗಳ ದಿನವಾಗಿ ಶೋಷಿತ ಸಮಾಜದ ಜಾಗದಲ್ಲಿ ಮನುಷ್ಯ ಮನಷ್ಯನನ್ನು ಶೋಷಿತ ಮಾಡುವಂತಹ ಒಂದು ಹೊಸ ಸಮಾಜದ ಸೃಷ್ಟಿಗಾಗಿ ಹೋರಾಡಲು ಪಣತೊಡಬೇಕಿರುವ ದಿನವಾಗಿ ಇತಿಹಾಸದುದ್ದಕ್ಕೂ ಕಾಮರ್ಿಕರು ಆಚರಿಸಿಕೊಂಡು ಬಂದಿರುವ ಈ ಮೇ ದಿನಾಚರಣೆಯನ್ನು ಕೆಲವರು ಸತ್ವಹೀನಗೊಳಿಸಿದ್ದಾರೆ. ಕಾಮರ್ಿಕರಲ್ಲಿ ಮೇ ದಿನದ ಸ್ಪೂತರ್ಿಯನ್ನು ತುಂಬುವ ಬದಲಿಗೆ ಅದನ್ನು ವಾಡಿಕೆಯ ಆಚರಣೆಯನ್ನಾಗಿಸಿದ್ದಾರೆ. ಅಂತರಾಷ್ಟ್ರೀಯ ಕಾಮರ್ಿಕ ವರ್ಗದ ಮುಷ್ಕರಗಳು18ನೇ ಶತಮಾನದಲ್ಲಿ ಕಾಮರ್ಿಕರನ್ನು ದಿನಕ್ಕೆ 14, 16 ಕೆಲವೊಮ್ಮೆ 20ಗಂಟೆಗಳ ಕಾಲ ದುಡಿಸಿಕೊಳ್ಳಲಾಗುತ್ತಿತ್ತು. ಕಡಿಮೆ ಕೂಲಿ, ದಣಿವರಿಯದ ದುಡಿಮೆ, ನಿಕೃಷ್ಣವಾದ ಜೀವನಮಟ್ಟ, ಯಾವುದೇ ಸೌಲಭ್ಯಗಳಿಂದ ಹೀನಾಯ ಕೆಲಸದ ವಾತಾವರಣ ಇವೆಲ್ಲದರಿಂದಾಗಿ ಕಾಮರ್ಿಕರ ಜರ್ಝರಿತರಾಗಿದ್ದರು. ಏನಾಗುತ್ತಿದೆ ಎಂದು ಯೋಚಿಸಲು ಪುರುಸೊತ್ತಿಲ್ಲದ ದುಡಿಮೆ ಅವರದ್ದಾಗಿತ್ತು. ನಮ್ಮ ಈ ಸತತ ದುಡಿಮೆಯಿಂದ ರೋಸಿ ಹೋದ ಕಾಮರ್ಿಕರು ಪ್ರತಿಭಟನೆ ತೋರಲಾರಂಭಿಸಿದರು. ಮೊದಲಿಗೆ ತಮ್ಮ ಕಾಖರ್ಾನೆಗಳನ್ನು ಅಥವಾ ಕೈಗಾರಿಕಾ ಶಾಖೆಗಳಲ್ಲಿ ನಂತರ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಂಘಟನಾ ಬಲವನ್ನು ಅರಿಯಲಾರಂಭಿಸಿದ ಕಾಮರ್ಿಕರು ಬಂಡವಾಳ ಶಾಹಿಗಳ ವಿರುದ್ದ ಐಕ್ಯ ಹೋರಾಟಗಳನ್ನು ನಡೆಸಿದರು. 1864 ಸೆಪ್ಟೆಂಬರ್ 28ರಂದು ಲಂಡನ್ನಲ್ಲಿ ರೂಪುಗೊಂಡ ಅಂತರಾಷ್ಟ್ರೀಯ ಕಾಮರ್ಿಕ ಸಂಘಟನೆ ಕಾಮರ್ಿಕರ ಐಕ್ಯಹೋರಾಟಕ್ಕೆ ಒಂದು ತಿರುವು ಬಿಂದುವಾಯಿತು.1886ರಲ್ಲಿ ಲಂಡನ್ ಹಾಗೂ ಎಡಿನ್ಬಗರ್್ಗಳಲ್ಲಿನ ಟೈಲರ್ಗಳ ಮುಷ್ಕರ, 1867ರಲ್ಲಿ ಬೆಲ್ಜಿಯಂ ಗಣಿ ಕಾಮರ್ಿಕರ ಮುಷ್ಕರ, 1868ರಲ್ಲಿ ಜೀನಿವಾ ಕಟ್ಟಡ ನಿಮರ್ಾಣ ಕಾಮರ್ಿಕರ ಮುಷ್ಕರ, 1871 ಮಾಚರ್್ನಿಂದ ಸೆಪ್ಟೆಂಬರ್ನವರೆಗೆ ಆಂಟ್ವೆರ್ಪ್ನಲ್ಲಿ ನಡೆದ ಸಿಗರೇಟ್ ಕಾಮರ್ಿಕರ ಮುಷ್ಕರಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಮತ್ತು ಸೌಹಾರ್ದತೆಯನ್ನು ಪಡೆಯಲಾರಂಭಿಸಿದವು. ಒಟ್ಟಾರೆ, 1860ರ ಅಂತ್ಯ ಹಾಗೂ 1870ರ ಆರಂಭದ ಅವಧಿ ಬಹಳಷ್ಟು ಕಾಮರ್ಿಕರ ಮುಷ್ಕರಗಳನ್ನು ಹಾಗೂ ಕಾಮರ್ಿಕರ ಪರಸ್ಪರ ಬೆಂಬಲ ವ್ಯಕ್ತಪಡಿಸಿದ ಅವಧಿಯಾಗಿತ್ತು. ಹೀಗಾಗಿ ಈ ವಾತಾವರಣ ಮಿಲಿಯಾಂತರ ಕಾಮರ್ಿಕರಲ್ಲಿ ತಾವೆಲ್ಲ ಒಂದೇ ಎಂಬ ಭಾವನೆಯನ್ನು ಮೂಡಿಸಿತು.ಈ ಅವಧಿಯಲ್ಲೇ ಅಂದರೆ, 1871ರಲ್ಲಿ ನಡೆದ ಪ್ಯಾರಿಸ್ ಕಮ್ಯೂನ್ (ಕಮ್ಯೂನಿಷ್ಟ ಪಕ್ಷದ ನೇತೃತ್ವದಲ್ಲಿ ಕ್ಷೀಪ್ರಕ್ರಾಂತಿಯ ಮೂಲಕ ಕಾಮರ್ಿಕರು ರಾಜ್ಯಾಧಿಕಾರವನ್ನು ವಶಪಡಿಸಿಕೊಂಡರು) ಪಡೆದ ವಿಜಯ ಕಾಮರ್ಿಕರ ಐಕ್ಯತೆಯಲ್ಲಿ ನಿಣರ್ಾಯಕ ಪಾತ್ರವನ್ನು ವಹಿಸಿತು. ಇದನ್ನು ಬೆಂಬಲಿಸಿ ಇಂಗ್ಲೇಂಡ್, ಬೆಲ್ಜಿಯಂ, ಹಾಲೆಂಡ್ ಹಾಗೂ ಅನೇಕ ನಗರಗಳಲ್ಲಿ ಬೃಹತ್ ಸಮೂಹ ಪ್ರದರ್ಶನಗಳು ನಡೆದವು. ಆದರೆ, ಸೂಕ್ತ ಇಲ್ಲದ ಕಾರಣ ಪ್ಯಾರಿಸ್ ಕಮ್ಯೂನ್ನ ಯಶಸ್ಸು ಅಲ್ಪಾವಧಿಯಲ್ಲಿಯೇ ಕೊನೆಗೊಂಡಿತು. ಪ್ರಾನ್ಸಿನ ಪ್ರತಿಗಾಮಿ ಸಕರ್ಾರ ಈ ಕಮ್ಯೂನಾಡರ್್ಗಳ ಮೇಲೆ ತೀವ್ರ ದಮನ ನಡೆಸಿದ್ದರಿಂದಾಗಿ ಅವರು ದೇಶವನ್ನೇ ತೊರೆದು ಇಂಗ್ಲೇಂಡ್, ಅಮೇರಿಕಾ ಹಾಗೂ ಸ್ವಿಟ್ಜರ್ಲೆಂಡ್ಗಳಲ್ಲಿ ಆಶ್ರಯ ಪಡೆಯಬೇಕಾಯಿತು. ಪ್ಯಾರಿಸ್ ಕಮ್ಯೂನ್ನ ಯಶಸ್ಸು ಹಾಗೂ ಮೊಟ್ಟಮೊದಲ ಅಂತರಾಷ್ಟ್ರೀಯ ಕಾಮರ್ಿಕ ಸಂಘಟನೆಯ ಪ್ರಭಾವವನ್ನು ಕಂಡು ಹೆದರಿದ ಬಹುತೇಕ ಯುರೋಪಿಯನ್ ಸಕರ್ಾರಗಳು ಅದರ ಮೇಲೆ ತೀವ್ರ ನಿರ್ಬಂಧವನ್ನು ಹೇರಿ ಅದನ್ನು ಕಾನೂನುಬಾಹಿರಗೊಳಿಸಿದವು. ಇದೆಲ್ಲದರ ಪರಿಣಾಮವಾಗಿ 1872ರ ಹೊತ್ತಿಗೆ ಈ ಸಂಘಟನೆ ಛಿದ್ರಗೊಂಡಿತು. ಅಷ್ಟುಹೊತ್ತಿಗಾಗಲೇ ಕಲ್ಪನಾವಾದಿ ಸಮಾಜವಾದದ ಅನೇಕ ಪ್ರವೃತ್ತಿಗಳನ್ನು ಸೋಲಿಸಿ ಮಾಕ್ಸರ್್ವಾದ ಕಾಮರ್ಿಕ ವರ್ಗದ ಸಿದ್ದಾಂತವಾಗಿ ಬೆಳೆದಿತ್ತು. ಬಹುತೇಕ ಬಂಡವಾಳ ಶಾಹಿ ದೇಶಗಳಲ್ಲಿನ ಕಾಮರ್ಿಕರ ಪರಿಸ್ಥಿತಿ ಹೆಚ್ಚು-ಕಡಿಮೆ ಒಂದೇ ಇದ್ದುದರಿಂದಲೂ ಕಾಮರ್ಿಕ ವರ್ಗದ ಚಳುವಳಿ ಅಂತರಾಷ್ಟ್ರೀಯಕರಣಗೊಂಡುದರ ಪರಿಣಾಮವಾಗಿಯೂ ಕಾಮರ್ಿಕರ ಬೇಡಿಕೆಗಳು ಏಕರೂಪವಾಗಿದ್ದವು. ಕಾಮರ್ಿಕರ ಶೋಷಣೆ ನಿಲ್ಲಬೇಕು ಹಾಗೂ ಅವರಿಗೆ ಸಾಮಾಜಿಕ ಆಥರ್ಿಕ ಹಕ್ಕುಗಳಿರಬೇಕು ಎನ್ನುವ ಬೇಡಿಕೆಗಳು ವ್ಯಾಪಕವಾಗಿದ್ದವು. ಈ ಬೇಡಿಕೆಗಳಲ್ಲಿ ಮುಖ್ಯವಾಗಿ ದಿನಕ್ಕೆ 8ಗಂಟೆಗಳ ಕೆಲಸ ಎನ್ನುವುದು ಯುರೋಪ ಮತ್ತು ಅಮೇರಿಕಾದ ಕಾಮರ್ಿಕರ ಅಂತರಾಷ್ಟ್ರೀಯ ಸಂಘಟನೆಯ ಘೋಷಣೆಯಾಗಿತ್ತು.ಪ್ರಪಂಚದ ಅತಿ ಮುಖ್ಯವಾದ ಕೈಗಾರಿಕಾ ದೇಶವಾಗಿದ್ದ ಅಮೇರಿಕಾದಲ್ಲಿ ಆಗ ಕಾಮರ್ಿಕರು 16ಗಂಟೆಗಳ ಕಾಲ ದುಡಿಯಬೇಕಾಗಿತ್ತು. ಚಿಕಾಗೋ ಅಮೇರಿಕಾದ ಕಾಮರ್ಿಕರ ಚಳುವಳಿಯ ಪ್ರಮುಖ ಕೇಂದ್ರವಾಗಿತ್ತಷ್ಟೇ ಅಲ್ಲದೇ ಮಿಲಿಟೆಂಟ್ ಹೋರಾಟಗಳ ಪರಂಪರೆಯನ್ನು ಹೊಂದಿತ್ತು.ಪ್ಯಾರಿಸ್ ಕಮ್ಯೂನ್ ನಡೆದ ಮರುವರ್ಷ ಅಂದರೆ 1872ರಲ್ಲಿ ಚಿಕಾಗೋದ ಕಾಮರ್ಿಕರು ರಕ್ತ ಇಲ್ಲವೇ ರೊಟ್ಟಿ ಎಂಬ ಬ್ಯಾನರ್ನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದ್ದರು. ಆಗವರನ್ನು ಚಿಕಾಗೋದ ಪೋಲಿಸರು ರಕ್ತದಲ್ಲಿಯೇ ಮುಳುಗಿಸದ್ದರು. ಇಂತಹದೇ ಮತ್ತೊಂದು ಬೃಹತ್ ಪ್ರತಿಭಟನೆ 1877ರಲ್ಲಿ ನಡೆಯಿತು.1877ರ ಬೃಹತ್ ಪ್ರತಿಭಟನೆಯ ನಂತರ ಕಾಮರ್ಿಕರು ಸೇನಾತ್ಮಕವಾಗಿ ಸಿದ್ದಗೊಳ್ಳಲಾರಂಭಿಸಿದರು. ಎಲ್ಲ ಕಡೆ ರಹಸ್ಯ ಕಾಮರ್ಿಕ ಸಂಘಟನೆಗಳು, ಸೊಸೈಟಿಗಳು, ಕಾಮರ್ಿಕ ವರ್ಗದ ಪಕ್ಷಗಳು ರೂಪುಗೊಂಡವು. ನಿದರ್ಿಷ್ಟವಾಗಿ ಚಿಕಾಗೋದಲ್ಲಿ ರ್ಯಾಡಿಕಲ್ ವಾತಾವರಣ ನಿಮಾರ್ಣವಾಗಿತ್ತು. ಅಲ್ಲಿಯೇ ಬಹುದೊಡ್ಡದಾಗಿದ್ದ ಸೆಂಟ್ರಲ್ ಲೇಬರ್ ಯೂನಿಯನ್ನ ಮುಂಚೂಣೆ ತಂಡದಲ್ಲಿ ಕ್ರಾಂತಿಕಾರಿಗಳಿದ್ದರು.ಜರ್ಮನಿಯರೇ, ಹೆಚ್ಚಿದ್ದ ಇದು ಮಾಲೀಕರ ಖಾಸಗಿ ಗೂಂಡಾಗಳನ್ನು ಎದುರಿಸಲು ಲೆಹರ್ ಹಾಗೂ ವೆಹರ್ ಎಂಬ ಸಶಸ್ತ್ರ ಮಿಲಿಷಯ್ಗಳನ್ನು ರೂಪಿಸಿಕೊಂಡಿತ್ತು. ಇವರೊಂದಿಗೆ ಇಂಗ್ಲೀಷ್ ಮಾತನಾಡುವ ಇಂಗ್ಲೀಷ್ ಕ್ಲಬ್, ಜೆಕ್ಮೂಲದ ಬೊಹೆಮಿಯಾನ್ ಶಾಪರ್್ಶೂಟರ್ಸ್ಗಳು ಹಾಗೂ ಪ್ರೆಂಚ್ ಗುಂಪು ಕೂಡ ಇತ್ತು. ಶೋಷಕರ ವಿರುದ್ದ ನಿಲ್ಲಬೇಕಿದ್ದಲ್ಲಿ ಕಾಮರ್ಿಕ ವರ್ಗ ಸಶಸ್ತ್ರವಾಗಿರಬೇಕೆನ್ನುವುದು ಸೆಂಟ್ರಲ್ ಲೇಬರ್ ಯೂನಿಯನ್ನ ನಿರ್ಣಯವಾಗಿತ್ತು. ಇಲ್ಲಿಯ ಕಾಮರ್ಿಕರಿಗೆ ಶಿಕ್ಷಣವನ್ನು ನೀಡಲು ಪಾರ್ಸನ್ ಎಂಬುವವರು ಇಂಗ್ಲೀಷ್ನಲ್ಲಿ ಪತ್ರಿಕೆಯನ್ನು ಹೊರತ್ತಿದ್ದರೆ, ಆಗಸ್ಟ್ ಸ್ಫೈಸ್ ಎನ್ನುವವರು ಜರ್ಮನಿಯಲ್ಲಿ ಪತ್ರಿಕೆಯನ್ನು ಹೊರತರುತ್ತಿದ್ದರು. ಇವರು ಇಬ್ಬರು ಕಾಮರ್ಿಕರ ಸಂಘಟನೆಗಳ ಮುಖಂಡರು ಆಗಿದ್ದರು.ಶ್ರಮಶಕ್ತಿ ಹೋರಾಟ! ರಕ್ತ-ಸಿಕ್ತ ಬಾವುಟ!! ಅದುವೆ ಕೆಂಬಾವುಟ!!!ಅಮೇರಿಕಾ ಹಾಗೂ ಕೆನಡಾದ ಯೂನಿಯನ್ಗಳು ಸೇರಿ ಮಾಡಿಕೊಂಡ ಅಮೇರಿಕನ್ ಪೆಡರೇಷನ್ ಆಪ್ ಲೇಬರ್ ಎಂಬ ಸಂಘಟನೆ ಕಾಮರ್ಿಕ ವರ್ಗದ ಚಳುವಳಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿತ್ತು. 1885ರಲ್ಲಿ ನಡೆದ ಇದರ ಮಹಾಧಿವೇಶನದಲ್ಲಿ 8ಗಂಟೆಗಳ ಕೆಲಸದ ಬೇಡಿಕೆಯನ್ನು ಮುಂದಿಡಲು ನಿರ್ಧರಿಸಲಾಯಿತು. ಕಾಮರ್ಿಕ ಸಂಘಟನೆಗಳು ಹಾಗೂ ಆಡಳಿತ ಮಂಡಳಿಯ ನಡುವೆ ಮಾತುಕತೆಯನ್ನು ನಡೆಸುವುದು ಹಾಗೂ ಆ ಒಪ್ಪಂದಕ್ಕೆ ಬರಲಾಗದಿದ್ದಲ್ಲಿ 1886ರ ಮೇ 1ರಂದು ಮುಷ್ಕರ ನಡೆಸಲು ನಿರ್ಧರಿಸಲಾಯಿತು. ಕಾಮರ್ಿಕ ಸಂಘಟನೆ ಹಾಗೂ ಆಡಳಿತ ಮಂಡಳಿಯಲ್ಲಿ ನಡೆದ ಹಲವು ಸುತ್ತಿನ ಮಾತುಕತೆಗಳು ಫಲಿಸಲಿಲ್ಲ. ಹಾಗಾಗಿ ಮೇ 1ರ ಮುಷ್ಕರಕ್ಕೆ ಕಾಮರ್ಿಕರು ಮುಂದಾದರು. ಚಿಕಾಗೋದಲ್ಲಿ ಮೇ ದಿನದ ಸಿದ್ದತೆಗಳು ಭರದಿಂದ ಸಾಗಿದವು.ಕಾಮರ್ಿಕರ ಹೋರಾಟವನ್ನು ದಮನಿಸಲು ಬಂಡವಾಳಶಾಹಿಗಳು ತಮ್ಮ ಸಿದ್ದತೆಯನ್ನು ಮಾಡಿಕೊಂಡವು. ನ್ಯಾಷನಲ್ ಗಾಡರ್್ ಕಾವಲ್ರಿ, ಪೊಲೀಸರಷ್ಟೇ ಅಲ್ಲದೇ ಬಂಡವಾಳಿಗರ ಖಾಸಗಿ ಗೂಂಡಾಗಳು ಸಶಸ್ತ್ರರಾಗಿ ಆದೇಶಕ್ಕಾಗಿ ಕಾಯತೊಡಗಿದರು. ಬೂಜ್ವರ್ಾ ದಿನಪತ್ರಿಕೆಗಳು ಚಿಕಾಗೋದ ನಾಯಕರುಗಳ ವಿರುದ್ದ ಇಲ್ಲ-ಸಲ್ಲದ ಅಪಪ್ರಚಾರ ಮಾಡಿದರು. ಭೂಗತರಾಗಿದ್ದ ಆಗಸ್ಪ್ಸ್ಪೈಸ್ ಹಾಗೂ ಪಾಸರ್್ನ್ ಹೇಡಿಗಳೆಂದು, ಅಪಾಯಕಾರಿ ಕೊಲೆಗಡುಕರೆಂದು, ಕ್ರಾಂತಿಯ ಕಿತಾಪತಿದಾರರೆಂದು ದೂರಿದವು. ಮುಷ್ಕರ ಹಾಗೂ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಕಾಮರ್ಿಕರ ಮೇಲೆ ನಿದರ್ಾಕ್ಷಿಣ್ಯವಾಗಿ ದಮನ ಮಾಡುವುದು, ಕೆಲಸದಿಂದ ವಜಾ ಮಾಡುವುದಾಗಿ ಹೆದರಿಸಲಾಯಿತು. ಆದರೆ ಕಾಮರ್ಿಕರು ಈ ಅಪಪ್ರಚಾರಗಳಿಂದಾಗಲಿ, ಬೆದರಿಕೆಯಿಂದಾಗಲಿ ಹಿಂದೆ ಸರಿಯಲಿಲ್ಲ. 1886ರ ಮೇ ಕಾಮರ್ಿಕ ಚಳುವಳಿಯ ಇತಿಹಾಸದಲ್ಲಿಯೇ ಮರೆಯಲಾಗದ ಒಂದು ಮಹತ್ತರವಾದ ದಿನ ಅಂದು ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಸಾವಿರಾರು ಕಾಮರ್ಿಕರು ತಮ್ಮ ಸಂಘಟಿತ ಬಲವನ್ನು ಪ್ರದಶರ್ಿಸಿದರು. ಚಿಕಾಗೋದ 30.000ಕಾಮರ್ಿಕರು ದಿನಕ್ಕೆ 8ಗಂಟೆಗಳ ಕಾಲ ಮಾತ್ರ ನಮ್ಮ ದುಡಿತ ಎಂದು ಘೋಷಣೆ ಹಾಕುತ್ತಾ ಬೀದಿಗೆ ಇಳಿದರು. ಎಲ್ಲ ರೈಲುಗಳು ನಿಂತವು. ಬಂದರುಗಳು ಕೆಲಸ ಸ್ಥಗಿತಗೊಂಡಿತ್ತು. ಯಾವ ಪ್ಯಾಕ್ಟರಿಗಳ ಚಿಮುಣಿಯಿಂದ ಹೊಗೆ ಬರಲಿಲ್ಲ. ಮಿಲಿಯಾಂತರ ದುಡಿಯುವ ಜನ ಎಚ್ಚೆತ್ತಿದ್ದಾರೆ. ಅವರು ಸಾಗುತ್ತಿರುವದು ನೋಡಿ ಪೀಕಡರೆಲ್ಲ ನಡುಗುತ್ತಿದ್ದಾರೆ. ಅವರ ಅಧಿಕಾರ ಇಷ್ಟರಲ್ಲೇ ಅಂತ್ಯಗಾಣಲಿದೆ. ಎಂದು ಹಾಡುತ್ತಾ ಕಾಮರ್ಿಕರು ಮತ್ತು ಅವರ ಕುಟುಂಬದವರು ರಸ್ತೆಯುದ್ದಕ್ಕೂ ಸಾಗಿದರು. ಚಿಕಾಗೋ ನಗರದ ಹೇ ಮಾರುಕಟ್ಟೆ ಚೌಕದಲ್ಲಿ ಸಾವಿರಾರು ಕಾಮರ್ಿಕರು ಸೇರಿದರು. ಆದರೆ, ಮೊದಲೇ ಯೋಜಿಸಿದ್ದಂತೆ ಕಾಮರ್ಿಕರ ಈ ಬೃಹತ್ ಪ್ರದರ್ಶನದ ಮೇಲೆ ಪೋಲಿಸರು ಗುಂಡಿನ ಮಳೆಗೆರದರು. ಕ್ಷಣಾರ್ಧದಲ್ಲಿ ಹೇಮಾರುಕಟ್ಟೆಯ ಚೌಕ ಕಾಮರ್ಿಕರು ಹರಿಸಿದ ರಕ್ತದಿಂದ ಕೆಂಪಾಯಿತು. ಮೇ 1ರಂದು ಕಾಮರ್ಿಕರು ಹರಿಸಿದ ರಕ್ತದ ಸಂಕೇತವಾಗಿಯೇ ಇಂದು ಕಾಮರ್ಿಕರ ಕೈಯಲ್ಲಿ ಕೆಂಬಾವುಟ ರಾರಾಜಿಸುತ್ತಿದೆ. ಅಂದು ಅಮೇರಿಕಾದ ಎಲ್ಲ ಪ್ರಮುಖ ನಗರಗಳಲ್ಲಿ ಎಂಟು ಗಂಟೆಗಳ ಕೆಲಸವನ್ನು ಒತ್ತಾಯಿಸುವ ಕಾಮರ್ಿಕರ ಪ್ರದರ್ಶನಗಳು ನಡೆದವು. ಡೆಟ್ರಾಯಿಟ್ನಲ್ಲಿ ಸಾವಿರಾರು ಕಾಮರ್ಿಕರು ಎಂಟು ಗಂಟೆಗಳ ಪ್ರದರ್ಶನ ನಡೆಸಿದರು. ನ್ಯೂಯಾಕರ್್ನಲ್ಲಿ ಸಾವಿರಾರು ಕಾಮರ್ಿಕರು ಪಂಜಿನ ಮೆರವಣಿಗೆ ನಡೆಸಿದರು. ಲೂಯಿಸ್ ವಿಲ್ಲೆ, ಕೆಂಟಕಿಗಳಲ್ಲಿ ಆರು ಸಾವಿರಕ್ಕಿಂತಲೂ ಹೆಚ್ಚಿನ ಕಾಮರ್ಿಕರು ನಿಷೇಧವನ್ನು ಮುರಿದು ಮೆರವಣಿಗೆಯಲ್ಲಿ ಸೇರಿದರು.ಆ ಸಮಯದಲ್ಲಿ ಅಮೇರಿಕಾದಲ್ಲಿಯೂ ಕೂಡ ಕಾಮರ್ಿಕರ ಹೋರಾಟಗಳು ಮೇ ಉದ್ದಕ್ಕೂ ನಡೆದವು. ಮೇ 2ರಂದು ಚಿಕಾಗೋದ ಉದ್ಯಮಪತಿಗಳು ಮುಷ್ಕರದಲ್ಲಿ ಪಾಲ್ಗೊಂಡ ಕಾಮರ್ಿಕರನ್ನು ಕೆಲಸದಿಂದ ವಜಾ ಮಾಡುವುದಾಗಿ ಘೋಷಿದ್ದನ್ನು ಪ್ರತಿಭಟಿಸಿ ಮೇ 3ರಂದು ರಾಷ್ಟ್ರಾಧ್ಯಂತ 3,40,000 ಕಾಮರ್ಿಕರು ಬೀದಿಗಿಳಿದರು. ಮೇ 4ರಂದು ಹೇ ಮಾರುಕಟ್ಟೆಯಲ್ಲಿ ಇಂತಹದ್ದೇ ಒಂದು ಪ್ರತಿಭಟನೆಯ ಸಮಯದಲ್ಲಿ ಎಲ್ಲಿಂದಲೋ ಬಂದ ಬಾಂಬೊಂದು ಪೊಲೀಸರ ಮೇಲೆ ಬಿದ್ದಾಗ ಒಬ್ಬ ಪೇದೆ ಸ್ಥಳದಲ್ಲಿಯೇ ಸತ್ತು ಆರು ಜನ ಪೊಲೀಸರು ತೀವ್ರವಾಗಿ ಗಾಯಗೊಂಡರು. ಇದರಿಂದಾಗಿ ರೊಚ್ಚಿಗೆದ್ದ ಪೊಲೀಸರು ಯದ್ವಾ-ತದ್ವಾ ಗುಂಡು ಹಾರಿಸದ್ದರಿಂದ ಹಲವಾರು ಕಾಮರ್ಿಕರು ಕೊಲ್ಲಲ್ಪಟ್ಟರು. ನೂರಾರು ಜನರು ಗಾಯಗೊಂಡರು.ನಂತರ ಪೊಲೀಸರ ಮೇಲೆ ಬಾಂಬ್ ಎಸೆದ ಘಟನೆಯನ್ನೇ ನೆಪವಾಗಿಟ್ಟುಕೊಂಡು ಪ್ರಭುತ್ವ ಕಾಮರ್ಿಕ ಸಂಘಟನೆಗಳ ಮೇಲೆ ದಾಳಿ ಮಾಡಲಾರಂಭಿಸಿತು. ಸಾವಿರಾರು ಕ್ರಾಂತಿಕಾರಿಗಳನ್ನು ಮುಷ್ಕರ ನಿರತರನ್ನು ಬಂಧಿಸಲಾಯಿತು. ಕಾಮರ್ಿಕ ಸಂಘಟನೆಗಳ ಕಛೇರಿಗಳ ಮೇಲೆ ದಾಳಿ ನಡೆದವು. ಮೇ ಮಧ್ಯಾವಧಿಯಲ್ಲಿ ಚಿಕಾಗೋದಲ್ಲಿ ನಡೆದ ಕೋಟರ್್ ವಿಚಾರಣಿಯಲ್ಲಿ ಏಳು ಮಂದಿ ಕಾಮರ್ಿಕರ ಮುಖಂಡರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಯಿತು. ಇವರುಗಳೇ ಆಲ್ಬಟರ್್ ಆರ್ ಪಾಸರ್್ನ್, ಆಗಸ್ಟ್ ಸ್ಪೈಸ್, ಮೈಕಲ್ ಚ್ವಾಬ್, ಸ್ವಾಮುವೆಲ್ ಫಿಲ್ಡ್ನ್, ಅಡೋಲ್ಪ್ ಫಿಷರ್, ಜಾಜರ್್ ಏಂಗೆಲ್, ಲೂಯಿಸ್ ಲಿಂಗ್ ಹಾಗೂ ಆಸ್ಕರ್ನೀಬೇಗಳಾಗದ್ದರು.ತೀಂಗಳಾನುಗಟ್ಟಲೇ ನಡೆದ ವಿಚಾರಣೆಯಲ್ಲಿ 1887ರ ನವೆಂಬರ್ 11ರಂದು ಫಿಲ್ಡ್ನ್ ಹಾಗೂ ಚ್ವಾಬ್ಗೆ ಜೀವಾವಧಿ ಶಿಕ್ಷೆ ವಿಧಿಸಿ ಪಾಸರ್್ನ್, ಸ್ಪೈಸ್, ಪೀಷರ್ ಹಾಗೂ ಎಂಗೆಲ್ರನ್ನು ಗಲ್ಲಿಗೇರಿಸಲಾಯಿತು. ಲೂಯಿಸ್ಲಿಂಗ್ರನ್ನು ಬಂದನದಲ್ಲಿದ್ದಾಗಲೇ ತಲೆಗೆ ಡೈನೆಮೆಟ್ ಟೋಪಿಯನ್ನು ಹಾಕಿ ಸಿಡಿಸಿ ಕೊಲ್ಲಲಾಯಿತು. ಆ ದಿನವನ್ನು ಅಮೇರಿಕಾದಾದ್ಯಂತವಷ್ಟೇ ಅಲ್ಲ ಪ್ರಾನ್ಸ್, ಇಟಲಿ, ರಷ್ಯಾ, ಹಾಲೆಂಡ್ ಹಾಗೂ ಸ್ಪೇನ್ಗಳಲ್ಲಿ ಕಪ್ಪು ಶುಕ್ರವಾರವೆಂದು ಆಚರಿಸುವ ಮೂಲಕ ತಮ್ಮ ನಾಯಕರಿಗೆ ಶೃದ್ದಾಂಜಲಿ ಅಪರ್ಿಸುವರು.ಮೇ 1ರ ಹೋರಾಟವನ್ನು ಅಮೇರಿಕಾದ ಕಾಮರ್ಿಕ ವರ್ಗ ಮುಂದುವರೆಸಿತು. ಹೀಗೆ ಕಾಮರ್ಿಕರು ಹಲವಾರು ವರ್ಷಗಳವೆರೆಗೆ ನಿರಂತರವಾಗಿ ಹೋರಾಡಿದ ಫಲವಾಗಿ ಬಂಡವಾಳಶಾಹಿಗಳು ಎಂಟು ಗಂಟೆಗಳ ಕೆಲಸವನ್ನು ಅನಿವಾರ್ಯವಾಗಿ ಒಪ್ಪಿಕೊಂಡರು.ನಂತರ 1891ರ ಆಗಸ್ಟ್ನಲ್ಲಿ ನಡೆದ 2ನೇ ಮಹಾಧಿವೇಶನದಲ್ಲಿ ಮೇ ಒಂದನ್ನು ಅಂತರಾಷ್ಟ್ರೀಯ ಕಾಮರ್ಿಕ ವರ್ಗದ ದಿನವೆಂದು ಘೋಷಿಸಲಾಯಿತು.ಹೀಗೆ ಮೇ1*ಮೊಟ್ಟ ಮೊದಲ ಬಾರಿಗೆ ಬಂಡವಾಳವಾದದ ವಿರುದ್ಧ ಕಾಮರ್ಿಕರು ಒಗ್ಗಟ್ಟಿನಿಂದ ಸಿಡಿದೆದ್ದ ದಿನವಾಗಿ..* ಕಾಮರ್ಿಕರು ತಮ್ಮ ಸಂಘಟಿತ ಬಲವನ್ನು ಪ್ರದಶರ್ಿಸಿದ ದಿನವಾಗಿ...* ಕಾಮರ್ಿಕರ ಹಕ್ಕೋತ್ತಾಯದ ದಿನವಾಗಿ...ಬಂಡವಾಳಶಾಹಿ ಸಮಾಜದ ಮಿಥ್ಯೆಯನ್ನು ಅರಿತು ಸಮಾಜವಾದದ ಅಗತ್ಯವನ್ನು ಕಂಡ ದಿನವಾಗಿ ಜಗತ್ತಿನಾಧ್ಯಂತ ಆಚರಿಸಲ್ಪಡುತ್ತದೆ.ವಿಶ್ವದ ಕಾಮರ್ಿಕರೇ ಒಂದಾಗಿ ! ಕಾಮರ್ಿಕ ವರ್ಗದ ಚಳುವಳಿ ಚಿರಾಯುವಾಗಲಿ !!ಎಂ ಲಿಂಗರಾಜು, ಸಂಪಾದಕರು.
No comments:
Post a Comment
Thanku