ಪೊಲೀಸರ ನೈತಿಕ ಸ್ಥೈರ್ಯವನ್ನು ಕುಂದಿಸುವಂತಹ ವರದಿಗಳನ್ನು ಮಾಧ್ಯಮಗಳು ಮಾಡಬಾರದು. ಅದರಂತೆಯೇ ಮಾಧ್ಯಮಗಳ ಕೊರಳು ಹಿಸುಕುವ ಕೆಲಸವನ್ನು ಪೊಲೀಸರೂ ಮಾಡಬಾರದು. ಸಾರ್ವಜನಿಕ ಹಿತಾಸಕ್ತಿಯ ರಕ್ಷಣೆಯ ತಮ್ಮನ್ನು ತೊಡಗಿಸಿಕೊಂಡಿರುವ ಈ ಎರಡು ವರ್ಗಗಳು ಪರಸ್ಪರ ಕಾದಾಟಕ್ಕೆ ಇಳಿದರೆ, ಅದರಿಂದ ಅಂತಿಮವಾಗಿ ಸಾರ್ವಜನಿಕ ಹಿತಾಸಕ್ತಿಗೇ ಹಾನಿಯಾಗುವುದು. ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ ಈ ಬೆಳವಣಿಗೆ ಅಪಾಯಕಾರಿ. ದಿವಂಗತ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರ ಆಡಳಿತದ ಕಿರು ಅವಧಿಯನ್ನು ಹೊರತುಪಡಿಸಿದರೆ, ಕನರ್ಾಟಕದಲ್ಲಿ ಮಾಧ್ಯಮಗಳು ನಿಭರ್ೀತಿಯಿಂದ ಕಾರ್ಯನಿರ್ವಹಿಸುವ ವಾತಾವರಣ ಹಿಂದೆಯೂ ಇತ್ತು. ಈಗಲೂ ಇದೆ. ಪತ್ರಕರ್ತರ ಹತ್ತಾರು ದೌರ್ಬಲ್ಯಗಳ ಅಸ್ತ್ರ ತಮ್ಮ ಬತ್ತಳಿಕೆಯಲ್ಲಿರುವದರಿಂದ ಅವರ ಬಾಯಿ ಮುಚ್ಚಿಸಲು ಪೊಲೀಸರ ಲಾಠಿ ಇಲ್ಲವೇ, ಕಾನೂನಿನ ದಂಡದ ಅಗತ್ಯ ಇಲ್ಲದಿರುವುದೂ ಕೂಡ ಈಗಿನ ಆಳುವ ವರ್ಗಗಳ ಈ ಔದಾರ್ಯಕ್ಕೆ ಕಾರಣ ಇರಬಹುದು. ಪತ್ರಕರ್ತರ ಸಮೂಹದಲ್ಲಿರುವ ಇಂತಹ ಕಪ್ಪುಕುರಿಗಳಿಂದಾಗಿಯೇ ಸಕರ್ಾರ ಮತ್ತು ಅದರ ಭಾಗವೇ ಆಗಿರುವ ಪೊಲೀಸರು ಒಮ್ಮೊಮ್ಮೆ ಎಲ್ಲ ಪತ್ರಕರ್ತರನ್ನು ಒಂದೇ ತಕ್ಕಡಿಯಲ್ಲಿ ಹಾಕಿ ತೂಗಲು ಹೋಗಿ ಎಡವಟ್ಟು ಮಾಡಿಕೊಳ್ಳುತ್ತಾರೆ. ಪ್ರಜಾವಾಣಿ ಪತ್ರಿಕೆಗೆ ಇತ್ತೀಚಿಗೆ ಪೊಲೀಸರಿಂದ ಬಂದಿರುವ ಎರಡು ನೋಟಿಸ್ಗಳು ಇದಕ್ಕೆ ಉದಾಹರಣೆ. ಮೊದಲನೆಯ ನೋಟಿಸ್ ಒಬ್ಬ ನಕ್ಸಲೀಯ ನಾಯಕನ ಸಂದರ್ಶನದ ಪ್ರಕಟಣಿಗೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ನೀಡಿದ್ದು. ಎರಡನೇಯ ನೋಟಿಸ್ ನಿತ್ಯಾನಂದ ಸ್ವಾಮಿ ಲೈಂಗಿಕ ಹಗರಣದಲ್ಲಿ ಬೇಕಾಗಿರುವ ನಟಿ ರಂಜಿತ ಸಿಐಡಿ ಅಧಿಕಾರಿಗಳ ಮುಂದೆ ರಹಸ್ಯವಾಗಿ ಹಾಜರಾಗಿದ್ದರು ಎನ್ನುವ ವರದಿಗೆ ಸಂಬಂಧಿಸಿದಂತೆ ಬೆಂಗಳೂರಿನ ಸಿಐಡಿ ಅಧಿಕಾರಿಯೊಬ್ಬರು ಜಾರಿಗೊಳಿಸಿದ್ದು. ವಿಚಿತ್ರವೆಂದರೆ ಈ ಎರಡು ನೋಟಿಸ್ಗಳು ಸುದ್ದಿ ಬರೆದ ವರದಿಗಾರರಿಗೆ ಜಾರಿಯಾಗಿವೆ, ವಿನಹ ಸಂಪಾದಕರಿಗಲ್ಲ. ಮೊದಲನೇ ಪ್ರಕರಣಕ್ಕೆ ಸಂಭಂದಿಸಿದ ಎರಡನೇ ನೋಟಿಸ್ ನೀಡುವಾಗಲೂ ಪೊಲೀಸರು ಅದನ್ನು ಸಹಸಂಪಾದಕರಿಗೆ ಜಾರಿ ಮಾಡಿದ್ದಾರೆ. ಇದು ಪತ್ರಿಕೆಗೆ ಸಂಬಂಧಿಸಿದ ಕಾನೂನಿನ ಪರಿಜ್ಞಾನ ಇಲ್ಲದೇ ಮಾಡಿರುವ ಅಡ್ಡಕಸುಬಿ ಕೆಲಸವೆನ್ನುವುದು ಪೊಲೀಸರ ಈ ನಡವಳಿಕೆಯಿಂದಲೇ ಸ್ಪಷ್ಟವಾಗುತ್ತದೆ. ನೋಟಿಸ್ ಜಾರಿಗೊಳಿಸಿರುವ ಪೊಲೀಸರು ಪ್ರಕಟಿತ ವರದಿಗಳಿಗೆ ಸಂಬಂದಿಸಿದ ಹೆಚ್ಚಿನ (ಅಪ್ರಕಟಿತ) ಮಾಹಿತಿಗಳನ್ನು ನೀಡಬೇಕೆಂದು ತಿಳಿಸಿದ್ದಾರೆ. ಆರು ದಶಕಗಳಿಗಿಂತ ಹೆಚ್ಚು ಕಾಲ ಓದುಗರ ಪ್ರೀತಿ-ವಿಶ್ವಾಸದ ತುತ್ತು ಉಂಡು ಬೆಳೆದಿರುವ ಪತ್ರಿಕೆಯೊಂದಕ್ಕೆ ಇಂತಹ ಸಣ್ಣಪುಟ್ಟ ಬೆದರಿಕೆಗಳನ್ನು ನಿಭಾಯಿಸುವ ಶಕ್ತಿ ಇದ್ದೇ ಇದೆ. ಆದ್ದರಿಂದ ಈ ನೋಟಿಸ್ಗಳದ್ದು ದೊಡ್ಡ ಸಂಗತಿಯೇನಲ್ಲ. ಆದರೆ, ಮಾಧ್ಯಮದ ಮೇಲೆ ಆಳುವ ವರ್ಗದ ಕಣ್ಣು ಬಿದ್ದಿರುವುದು ಕೇವಲ ಕನರ್ಾಟಕಕ್ಕೆ ಸೀಮಿತ ಅಲ್ಲ ಎನ್ನುವುದು ಗಮನಿಸುವಂತಹದ್ದು. ಕೇಂದ್ರದಲ್ಲಿರುವ ಯುಪಿಎ ಸಕರ್ಾರ ಮತ್ತು ನಕ್ಸಲೀಯ ಚಟುವಟಿಕೆಗಳು ನಡೆಯುತ್ತಿರುವ ರಾಜ್ಯಗಳ ಸಕರ್ಾರ ಕೂಡ ಮಾಧ್ಯಮದ ಮೇಲೆ ಕೆಂಗಣ್ಣು ಬೀರುತ್ತಿವೆ. ಇದು ಪತ್ರಿಕಾ ಸ್ವಾತಂತ್ರ್ಯ ಮತ್ತು ಸುದ್ದಿಮೂಲವನ್ನು ಬಹಿರಂಗಗೊಳಿಸುವದಕ್ಕೆ ಸಂಬಂಧಿಸಿದ ಹಳೆಯ ಚಚರ್ೆಯನ್ನು ಮತ್ತೇ ಹುಟ್ಟು ಹಾಕಿದೆ. ಮಾವೋವಾದಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳು ಕೇಂದ್ರ ಮತ್ತು ಸಂಬಂದಿತ ರಾಜ್ಯ ಸಕರ್ಾರಗಳನ್ನು ಇರುಸುಮುರಿಸಿಗೆ ಈಡುಮಾಡಿವೆ. ಪೊಲೀಸರ ಭೇಟೆಗೆ ಸಿಗದ ಮಾವೋವಾದಿಗಳನ್ನು ಪತ್ರಕರ್ತರು ಸುಲಭದಲ್ಲಿ ಸಂದಶರ್ಿಸಿ ವರದಿ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳದ ಮಾವೋವಾದಿ ನಾಯಕ ಕಿಶನ್ಜೀ, ಅಧಿಕೃತ ರಾಜಕೀಯ ಪಕ್ಷದ ನಾಯಕನಂತೆ ಆಗಾಗ ಪತ್ರಿಕಾಗೋಷ್ಠಿ ಕರೆದು ಸಕರ್ಾರವನ್ನು ಅಣುಕಿಸುತ್ತಿದ್ದಾರೆ. ದಾಂತೇವಾಡದ ದಟ್ಟಅರಣ್ಯದಲ್ಲಿ ಹಲವು ದಿನಗಳ ಕಾಲ ನಕ್ಸಲೀಯರ ಜೊತೆ ಇದ್ದು ಬಂದು ಧೀರ್ಘ ಲೇಖನವೊಂದನ್ನು ಬರೆದ ಖ್ಯಾತಲೇಖಕಿ ಅರುಂಧತಿರಾಯ್ ನೇರವಾಗಿ ಗೃಹಸಚಿವ ಪಿ.ಚಿದಂಬರಂ ವಿರುದ್ದವೇ ಕೆಲವು ನಿದರ್ಿಷ್ಟ ಆರೋಪಗಳನ್ನು ಮಾಡಿದ್ದಾರೆ. ನಕ್ಸಲೀಯ ಚಟುವಟಿಕೆಗಳಿರುವ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿರುವ ಕಂಪೆನಿಗಳ ಜತೆ ಗೃಹಸಚಿವರದ್ದು ಹಳೆಯ ಸಂಭಂದಗಳಲ್ಲೊಂದು ಎನ್ನುವುದು ಆ ಆರೋಪಗಳಲ್ಲೊಂದು. ಸಾಮಾನ್ಯವಾಗಿ ಸಕರ್ಾರವೊಂದು ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಹೊರಟಾಗ ಮೊದಲು ದಾಳಿ ಮಾಡುವುದು ಮಾಧ್ಯಮಗಳ ಮೇಲೆ. ಕಿಶನ್ಜಿ ಸಂದರ್ಶನ ಮಾಡಿದ್ದ ಪತ್ರಿಕೆಗಳ ವಿರುದ್ದ ಕ್ರಮಕೈಗೊಳ್ಳಲು ಒಂದು ಹಂತದಲ್ಲಿ ಗೃಹಸಚಿವರು ಉದ್ದೇಶಿಸಿದ್ದರಂತೆ. ಆದರೆ ಸಂಪುಟ ಸಭೆಯಲ್ಲಿಯೇ ಇದಕ್ಕೆ ವಿರೋಧ ವ್ಯಕ್ತವಾದ ಕಾರಣ ಅವರ ಉದ್ದೇಶ ಈಡೇರಲಿಲ್ಲ. ಈಗ ಸಾರ್ವಜನಿಕ ವ್ಯಕ್ತಿಯೊಬ್ಬರು ನೀಡಿರುವ ದೂರಿನ ಆಧಾರದಲ್ಲಿ ಛತ್ತೀಸ್ಗಡ ಪೊಲೀಸರು ಅರುಂಧತಿ ರಾಯ್ ವಿರುದ್ಧ ಛತ್ತೀಸ್ಗಡ ವಿಶೇಷ ಸಾರ್ವಜನಿಕ ಭದ್ರತಾ ಕಾಯಿದೆ 2005 ಅಡಿಯಲ್ಲಿ ಕ್ರಮಕೈಗೊಳ್ಳುವ ತಯಾರಿ ನಡೆಸಿದ್ದಾರಂತೆ. ಇದೇ ಕಾಯಿದೆಯಡಿ ಮಾನವ ಹಕ್ಕು ಕಾರ್ಯಕರ್ತರಾದ ವಿನಾಯಕ ಸೇನ್ ಅವರನ್ನು ಛತ್ತೀಸ್ಗಡ ಪೊಲೀಸರು ಎರಡು ವರ್ಷಗಳ ಬಂಧನದಲ್ಲಿಟ್ಟಿದ್ದರು. ಕನರ್ಾಟಕದಲ್ಲಿಯೂ ಅಕ್ರಮ ಚಟುವಟಿಕೆ ಕಾನೂನು ಇದೆ. ಅದರ ಅಡಿಯಲ್ಲಿಯೇ ಪೊಲೀಸರು ಪ್ರಜಾವಾಣಿಗೆ ನೋಟಿಸ್ ಜಾರಿಗೊಳಿಸಿದ್ದು.. ಭಾರತದ ಸಂವಿಧಾನದಲ್ಲಿ ಪತ್ರಿಕೆಗಳಿಗೆ ವಿಶೇಷ ಸ್ಥಾನಮಾನವೇನಿಲ್ಲ. ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಅದರಲ್ಲಿ ಪ್ರತ್ಯೇಕ ಉಲ್ಲೇಖವು ಇಲ್ಲ. ಸಂವಿಧಾನದ ಪರಿಚ್ಛೇದ 19(ಎ)ರಲ್ಲಿರುವ ಮೂಲಭೂತ ಹಕ್ಕುಗಳಲ್ಲಿ ಸೇರಿಕೊಂಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿಯೇ ಪತ್ರಿಕಾ ಸ್ವಾತಂತ್ರ್ಯ ಸೇರಿಕೊಂಡಿದೆ. ಪತ್ರಿಕಾ ಸ್ವಾತಂತ್ರ್ಯವನ್ನು ಪ್ರತ್ಯೇಕವಾಗಿ ಉಲ್ಲೇಖಿಸಬೇಕೆಂದು ಸಂವಿಧಾನ ರಚನೆಯಾದಾಗ ಕೆಲವು ಹಿರಿಯ ಪತ್ರಕರ್ತರು ಒತ್ತಾಯಿಸಿದ್ದರು. ಆದರೆ, ಸಂವಿಧಾನ ರಚನಾ ಮಂಡಳಿ ಒಬ್ಬ ಸಾಮಾನ್ಯ ಪ್ರಜೆಗಿರುವಷ್ಟೇ ಸ್ವಾತಂತ್ರ್ಯ ಒಬ್ಬ ಪತ್ರಕರ್ತನಿಗೂ ಇರುತ್ತದೆ. ಅದಕ್ಕಿಂತ ಹೆಚ್ಚಿಲ್ಲ, ಕಡಿಮೆಯೂ ಇಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಸಂವಿಧಾನದತ್ತವಾದ ಅಭಿವ್ಯಕ್ತಿ ಸ್ವಾತಂತ್ರ್ಯ ಕೂಡಾ ಸಂಪೂರ್ಣವಾದುದೇನಲ್ಲ. ಅದನ್ನು ಕೂಡಾ ಹೊಸ ಕಾನೂನು ರಚನೆ ಮೂಲಕ ನಿಯಂತ್ರಿಸಲು ಸಾಧ್ಯ. ದೇಶದ ಭದ್ರತೆ, ಸಾರ್ವಭೌಮತೆ ಮತ್ತು ಏಕತೆ, ಬೇರೆ ದೇಶಗಳ ಜತೆಗಿನ ಸ್ನೇಹ ಸಂಬಂಧ, ಸಾರ್ವಜನಿಕ ಶಾಂತಿ, ಶಿಷ್ಟಾಚಾರ, ನೈತಿಕತೆ, ನ್ಯಾಯಾಲಯದ ನಿಂದೆ, ಮಾನನಷ್ಟ ಹಾಗೂ ಅಪರಾಧ ಇಲ್ಲವೇ ಹಿಂಸೆಗೆ ಪ್ರಚೋದನೆ ದೃಷ್ಟಿಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಯಂತ್ರಿಸುವ ಕಾನೂನು ರಚಿಸಬಹುದು ಎಂದು ಸಂವಿಧಾನದ ಪರಿಚ್ಛೇದ 19(2) ಹೇಳಿದೆ. ಅನೇಕ ಹಿರಿಯ ಪತ್ರಕರ್ತರು ಈ ನಿದರ್ಿಷ್ಟ ಪರಿಚ್ಛೇದ ಸೇರ್ಪಡೆಯನ್ನು ವಿರೋಧಿಸಿದ್ದರು. ಈ ಕಾರಣದಿಂದಾಗಿಯೇ ಪತ್ರಿಕಾ ಸ್ವಾತಂತ್ರ್ಯ ಎಂಬುದು ಅಂತಿಮವಾಗಿ ನ್ಯಾಯಾಲಯದ ವ್ಯಾಖ್ಯಾನವನ್ನೇ ಅವಲಂಭಿಸಿದೆ. ಈ ಮೂಲಕ ಸಕರ್ಾರದ ಕೈಗೆ ಮಾಧ್ಯಮಗಳನ್ನು ಮಣಿಸುವ ಪರಮೋಚ್ಛ ಅಧಿಕಾರವನ್ನು ನೀಡಿದಂತಾಗಿದೆ. 1975ರಲ್ಲಿ ಆಂತರಿಕ ಗಲಭೆಯ ಕಾರಣ ನೀಡಿ ಆಗಿನ ಪ್ರಧಾನಿ ಇಂದಿರಾಗಾಂಧಿ ದೇಶದ ಮೇಲೆ ತುತರ್ು ಪರಿಸ್ಥಿತಿಯನ್ನು ಹೇರಿದಾಗ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನೇ ಅಮಾನತ್ನಲ್ಲಿರಿಸಿದ್ದು ಪರಮೋಚ್ಛ ಅಧಿಕಾರದ ದುರುಪಯೋಗಕ್ಕೆ ಉತ್ತಮ ಉದಾಹರಣಿ. ಒಬ್ಬ ಶಾಸಕ ಇಲ್ಲವೇ ಸಂಸದನಿಗೆ ಸದನದೊಳಗೆ ಮಾತನಾಡಲು ವಿಶೇಷ ಅಧಿಕಾರ (ಪ್ರಿವಿಲೇಜ್) ಇದೆ. ಸದನದೊಳಗಿನ ಅವರ ನಡುವಳಿಕೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಾಗದಂತಹ ವಿಶೇಷ ರಕ್ಷಣಿ (ಇಮ್ಯೂನಿಟಿ) ಕೂಡಾ ಇದೆ. ಇಂತಹದ್ದೇ ರಕ್ಷಣಿ ಪತ್ರಕರ್ತರಿಗೂ ನೀಡಬೇಕೆಂದು ಬೇಡಿಕೆ ಕೇವಲ ಮಾತ್ರವಲ್ಲ ಜಗತ್ತಿನಾಧ್ಯಂತ ಪತ್ರಕರ್ತರು ಕೇಳುತ್ತಿದ್ದಾರೆ. ಸಾಮಾನ್ಯ ಸಂದರ್ಭಗಳಲ್ಲಿ ಒಬ್ಬ ಪತ್ರಕರ್ತ ತಾನು ಸಂಪಾದಿಸಿದ ಮಾಹಿತಿಯನ್ನು ಸುದ್ದಿಯಾಗಿ ಬರೆಯಲು ಹೊರಟಾಗ ಅದರ ಮೂಲವನ್ನು ತಿಳಿಸುತ್ತಾನೆ. ಸುದ್ದಿಗೆ ವಿಶ್ವಾಸಾರ್ಹತೆಯನ್ನು ತಂದುಕೊಡುವುದೇ ಈ ಮೂಲಗಳು. ಆದರೆ, ಈ ಸಂಪ್ರದಾಯಕ್ಕೂ ಕೆಲವು ಅಪವಾದಗಳಿರುತ್ತವೆ. ಸುದ್ದಿಯನ್ನು ಓದುವ ಒಬ್ಬ ಓದುಗ ಅಭಿಪ್ರಾಯವನ್ನು ರೂಪಿಸಿಕೊಳ್ಳಲು ಅದರ ಮೂಲ ತಿಳಿದುಕೊಳ್ಳುವುದು ಅಗತ್ಯ. ಆದರೆ, ಮಾಹಿತಿ ನೀಡುವ ಒಬ್ಬ ವ್ಯಕ್ತಿಗೆ ತನ್ನ ಗುರುತನ್ನು ಬಚ್ಚಿಟ್ಟುಕೊಳ್ಳಲು ಅವನದ್ದೇ ಆದ ಕಾರಣಗಳಿರಬಹುದು. ತನ್ನ ಗುರುತನ್ನು ಬಹಿರಂಗಪಡಿಸದಿದ್ದರೆ ಮಾತ್ರ ನೀಡುವುದಾಗಿ ಹೇಳಬಹುದು. ಅಂತಹ ಸಂದರ್ಭಗಳಲ್ಲಿ ಪತ್ರಕರ್ತರು ಸುದ್ದಿ ಮೂಲವನ್ನು ಬಹಿರಂಗಪಡಿಸದೇ ವರದಿ ಮಾಡುವುದು ಅನಿವಾರ್ಯವಾಗುತ್ತದೆ. ಎಂದು ಕೆಲವು ವರ್ಷಗಳ ಹಿಂದೆ ಅಂತರಾಷ್ಟ್ರೀಯ ಪತ್ರಿಕಾ ಸಂಸ್ಥೆ (ಐಪಿಐ) ಮಾಡಿರುವ ಅಧ್ಯಯನವೊಂದು ಹೇಳಿದೆ. ಆದರೆ, ಬೇರೆ ಹಲವು ದೇಶಗಳಂತೆ ಭಾರತದಲ್ಲಿಯೂ ಸುದ್ದಿಮೂಲವನ್ನು ಬಹಿರಂಗಗೊಳಿಸದಿರುವ ವಿಶೇಷ ಅಧಿಕಾರ ಪತ್ರಕರ್ತರಿಗೆ ಇಲ್ಲ. ಭಾರತದ ಸಂವಿಧಾನಕ್ಕೆ ಮಾದರಿಯಾದ ಇಂಗ್ಲೇಂಡಿನ ಸಂವಿಧಾನದಲ್ಲಿಯೂ ಪತ್ರಿಕಾ ಸ್ವಾಂತ್ರ್ಯದ ಪ್ರತ್ಯೇಕ ಉಲ್ಲೇಖ ಇಲ್ಲ. ಪತ್ರಕರ್ತರಿಗೆ ವಿಶೇಷ ರಕ್ಷಣಿಯೂ ಇಲ್ಲ. ಬಹುತೇಕ ದೇಶಗಳಲ್ಲಿಯೂ ಇದೇ ಸ್ಥಿತಿ. ಅಮೇರಿಕದ ಸ್ಥಿತಿ ಮಾತ್ರ ಬಹಳಷ್ಟು ಬೇರೆ ದೇಶಗಳಿಗಿಂತ ಭಿನ್ನವಾಗಿದೆ. ಅಲ್ಲಿನ ಸಂವಿಧಾನದಲ್ಲಿಯಾಗಲಿ, ರಾಷ್ಟ್ರಮಟ್ಟದ ಕಾನೂನಿನಲ್ಲಿಯಾಗಲಿ ಪತ್ರಕರ್ತರಿಗೆ ಸುದ್ದಿಮೂಲವನ್ನು ಬಹಿರಂಗಪಡಿಸದೆ ಇರುವದಕ್ಕೆ ವಿಶೇಷ ರಕ್ಷಣಿ ಇಲ್ಲ. ಆದರೆ, ಇಲ್ಲಿನ ರಾಜ್ಯಗಳ ಮಟ್ಟದಲ್ಲಿ ರೂಪಿಸಲಾಗಿರುವ ರಕ್ಷಣಾ ಕಾನೂನು (ಶೀಲ್ಡ್ ಲಾ) ಪತ್ರಕರ್ತರಿಗೆ ಕೆಲವೊಂದು ರಕ್ಷಣೆಗಳನ್ನು ನೀಡಿದೆ. 1973ರಲ್ಲಿಯೇ ಜಾರಿಗೊಳಿಸಲಾದ ಈ ಕಾನೂನು ಪ್ರತಿರಾಜ್ಯದಲ್ಲಿಯೂ ಭಿನ್ನವಾಗಿದೆ. ಉದಾಹರಣಿಗೆ ಅಲಬಾಮದಲ್ಲಿ ಕೇವಲ ಪತ್ರಿಕೆ, ಟಿವಿ ಮತ್ತು ರೇಡಿಯೋಗಳಿಗೆ ಮಾತ್ರ ರಕ್ಷಣಿ ಇದ್ದರೆ, ನ್ಯೂಯಾಕರ್್ನಲ್ಲಿ ವಾರಪತ್ರಿಕೆ, ಸುದ್ದಿ ಸಂಸ್ಥೆ, ಪತ್ರಿಕಾ ಸಂಸ್ಥೆಗಳಿಗೆ ಈ ಕಾನೂನು ಅನ್ವಯವಾಗುತ್ತದೆ. ಓರೆಗಾನ್ ಮತ್ತು ನ್ಯೂಮೆಕ್ಸಿಕೋದಲ್ಲಿ ಸಾರ್ವಜನಿಕರ ಸಂಪರ್ಕದಲ್ಲಿರುವ ಎಲ್ಲ ಮಾಧ್ಯಮಗಳಿಗೂ ಕಾನೂನು ರಕ್ಷಣಿ ಇದೆ. ಇದೇ ರೀತಿ ಕೆಲವು ರಾಜ್ಯಗಳಲ್ಲಿ ಸುದ್ದಿಮೂಲ ಕಾಪಾಡಲು ಮಾತ್ರ ರಕ್ಷಣಿ ಇದ್ದರೆ, ಇನ್ನು ಕೆಲವು ರಾಜ್ಯಗಳಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ಎಲ್ಲ ಸುದ್ದಿಗಳಿಗೂ ರಕ್ಷಣಿ ಇದೆ. ನ್ಯಾಯಮೂತರ್ಿ ಕೆ.ಕೆ ಮ್ಯಾಥ್ಯೂ ಅಧ್ಯಕ್ಷರಾಗಿದ್ದ ಕಾನೂನು ಆಯೋಗ 30ವರ್ಷಗಳ ಹಿಂದೆ ಸಮೂಹ ಮಾಧ್ಯಮಗಳಿಂದ ಸುದ್ದಿ ಮೂಲದ ಪ್ರಕಟಣಿ ಎಂಬ ವಿಷಯದ ಬಗ್ಗೆಯೇ ನಡೆಸಿದ ಅಧ್ಯಯನದಲ್ಲಿ ಅಮೇರಿಕಾದ ಈ ಕಾನೂನನ್ನು ವಿಶೇಷವಾಗಿ ಉಲ್ಲೇಖಿಸಲಾಗಿದೆ. ಈ ಶಿಲ್ಡ್ ಕಾನೂನು ಆಧಾರದಲ್ಲಿಯೇ ಭಾರತದಲ್ಲಿ ಪತ್ರಕರ್ತರ ಸುದ್ದಿ ಮೂಲದ ರಕ್ಷಣಿಗಾಗಿ ಕಾನೂನು ರೂಪಿಸಬೇಕೆಂದು ಆ ಆಯೋಗ ಶಿಫಾರಸ್ಸು ಕೂಡ ಮಾಡಿತ್ತು.
No comments:
Post a Comment
Thanku