ಕಾಯಿಲೆಗಳನ್ನು ತಡೆಯುವಲ್ಲಿ ಸ್ವಚ್ಛತೆಯ ಪಾತ್ರಪ್ರಸ್ತುತ ಸಮಾಜದಲ್ಲಿ ಸ್ವಚ್ಛತೆಯಿಂದಿರುವುದು ಬಹಳ ಮುಖ್ಯ। ಸ್ವಚ್ಛತೆ ಇದ್ದಲ್ಲಿ ದೈವತ್ವ ಇರುತ್ತದೆ ಎಂಬುದು ವಾಡಿಕೆ. ನಾವುಗಳು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರಿಂದ ಮನುಷ್ಯನಿಗೆ ಬರುವ ಶೇಕಡಾ50ರಷ್ಟು ಕಾಯಿಲೆಗಳನ್ನು ತಡೆಹಿಡಿಯಬಹುದು. ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗಗಳಿಗೆ ಬ್ರೇಕ್ ಹಾಕಬಹುದು. ನೆಗಡಿ, ಕೆಮ್ಮು, ಜ್ವರ, ವಾಂತಿ, ಬೇದಿ, ಮಲೇರಿಯಾ, ಟೈಫಾಯಿಡ್, ಜಂತು ದೇಹದ ವಿವಿಧ ಅಂಗಗಳಿಗೆ ತಗುಲುವ ಸಾಂಕ್ರಾಮಿಕತೆಯನ್ನು ನಿಯಂತ್ರಣದಲ್ಲಿಡಬಹುದು.ಭಯಾನಕ ರೋಗಗಳಾದ ಕ್ಷಯ, ಮೆನಿನ್ಜೈಟಿಸ್, ಡೆಂಗ್ಯೂ, ಎನ್ಸಫಲೈಟಿಸ್ ಇವುಗಳನ್ನು ಸಹಿತ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವದರಿಂದ ತಡೆ ಹಿಡಿಯಬಹುದು.ನಮ್ಮ ಪರಿಸರದ ಸುತ್ತಮುತ್ತ ಹೊಲಸು, ನಿಮರ್ಾಣವಾದರೆ, ಬ್ಯಾಕ್ಟೀರಿಯಾ, ವೈರಸ್ಗಳು ಅದರಲ್ಲಿ ಉದ್ಬವವಾಗುತ್ತವೆ. ನಾವು ಸ್ವಚ್ಛತೆಯನ್ನು ಕಾಪಾಡಿಕೊಳ್ಳದೇ ಹೋದರೆ, ಇವುಗಳು ನಮ್ಮ ದೇಹವನ್ನು ಪ್ರವೇಶಿಸುವದರಲ್ಲಿ ಅನುಮಾನವಿಲ್ಲ. ಇವುಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡಿ ಪರಿಸರವನ್ನು ಹಾಳು ಮಾಡುತ್ತವೆ. ಎಲ್ಲಿ ಸ್ವಚ್ಛತೆ ಇರುವುದಿಲ್ಲವೇ ಅದೇ ರೋಗರುಜಿನುಗಳಿಗೆ ತವರು ಮನೆಯಾಗುತ್ತದೆ.ನಾವುಗಳು ಸಾಮಾನ್ಯವಾಗಿ 3ವಿಧಗಳಿಂದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು.* ವೈಯಕ್ತಿಕ ಸ್ವಚ್ಛತೆ* ಮನೆಯ ಸುತ್ತಮುತ್ತ ಸ್ವಚ್ಛತೆ* ಮನೆಯ ಒಳಗಡೆ ಸ್ವಚ್ಛತೆಪ್ರತಿಯೊಬ್ಬನು ತಾನು ವೈಯಕ್ತಿಕವಾಗಿ ಸ್ವಚ್ಛತೆಯನ್ನು ಕಾಪಾಡಿಕೊಂಡಾಗ ಎಲ್ಲ ರೋಗಗಳಿಂದ ದೂರವಿರಲು ಸಾಧ್ಯ. ಸಾಮಾನ್ಯವಾಗಿ ಪ್ರತಿನಿತ್ಯ ಬೆಳಿಗ್ಗೆ ಸಂಜೆ ಹಲ್ಲು ಉಜ್ಜಿ, ಸ್ನಾನ ಮಾಡುವದರಿಂದ ಕೆಲವೊಂದು ರೋಗಗಳು ಮಾನವನ ದೇಹವನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಆಗಾಗ ಕೈ-ಕಾಲಿನ ಉಗುರುಗಳನ್ನು ತೆಗೆದುಕೊಂಡು ಅತಿಯಾಗಿ ಕೂದಲು ಬೆಳೆಯದಂತೆ ಕ್ಷೌರ ಮಾಡಿಸಿಕೊಳ್ಳಬೇಕು. ಊಟಕ್ಕಿಂತ ಮುಂಚೆ ಹಾಗೂ ಮಲಮೂತ್ರಗಳಿಗೆ ಹೋಗಿಬಂದ ಮೇಲೆ ಸಾಬೂನುಗಳಿಂದ ಕೈ-ಕಾಲು ತೊಳೆದುಕೊಳ್ಳಬೇಕು. ದಿನಾಲು ಶುಭ್ರವಾದ ಬಟ್ಟೆಯನ್ನು ತೊಳೆದು ಹಾಕಿಕೊಳ್ಳಬೇಕು. ಸ್ವಚ್ಛತೆಯಲ್ಲಿ ಪ್ರಮುಖವಾಗಿ ಶುದ್ದ ನೀರು ಕುಡಿಯುವುದು ಒಳ್ಳೆಯದು. ಫಿಲ್ಟರ್ ಇದ್ದರೆ ಇನ್ನು ಅತ್ಯುತ್ತಮ. ದಿನಾಲು ತರಕಾರಿ ಹಣ್ಣುಗಳನ್ನು ಹೆಚ್ಚೆಚ್ಚು ಸೇವಿಸುವದರಿಂದ ದೇಹದಲ್ಲಿ ವಿಟಮಿನ್ಗಳ ಅಂಶ ಹೆಚ್ಚಾಗುತ್ತದೆ. ಒಟ್ಟಾರೆ ಇದೆಲ್ಲದರಿಂದ ಮನಸ್ಸು ಉಲ್ಲಾಸವಾಗಿರುತ್ತದೆ. ಇದು ವೈಯಕ್ತಿಕ ಸ್ವಚ್ಛತೆಯ ಮಹತ್ವ.ಮನೆಯ ಸ್ವಚ್ಛತೆಪ್ರತಿಯೊಬ್ಬರಿಗೆ ವೈಯಕ್ತಿಕ ಸ್ವಚ್ಛತೆಯೂ ಎಷ್ಟು ಮುಖ್ಯವೋ ಹಾಗೆಯೇ ಮನೆಯ ಸ್ವಚ್ಛತೆಯೂ ಅಷ್ಟೇ ಪ್ರಾಮುಖ್ಯ.ಮನೆಯನ್ನು ಒಂದು ದೇವಸ್ಥಾನದಂತೆ ನೋಡಿಕೊಳ್ಳಬೇಕು. ಮನೆಯಲ್ಲಿ ಕಸ, ಧೂಳು ಬರದಂತೆ ಜಾಗರೂಕತೆ ವಹಿಸಬೇಕು. ಅಡುಗೆ ಕೋಣಿಯನ್ನು ಶುಚಿತ್ವದಿಂದಿಡಬೇಕು. ಮತ್ತು ಅಡುಗೆ ಸಾಮಾನುಗಳನ್ನು ಸ್ವಚ್ಛವಾಗಿ ತೊಳೆದು ಉಪಯೋಗಿಸಬೇಕು. ಮನೆಯೊಳಗೆ ಶುಭ್ರಗಾಳಿ ಬರುವಂತೆ ಕಿಟಿಕಿ ಬಾಗಿಲುಗಳನ್ನು ತೆರೆಯಬೇಕು. ಮನೆಯೊಳಗೆ ಸೊಳ್ಳೆ-ಜಿರಲೆಗಳು ಪ್ರವೇಶಿಸದಂತೆ ಪರದೆಗಳನ್ನು ಉಪಯೋಗಿಸಬೇಕು. ಕಲುಷಿತ ನೀರು ಎಲ್ಲಿಯೂ ನಿಲ್ಲದಂತೆ ನೋಡಿಕೊಳ್ಳಬೇಕು. ದಿನಕ್ಕೊಂದು ಬಾರಿಯಾದರೂ ಒಳಚರಂಡಿ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಪರೀಕ್ಷೆ ಮಾಡುತ್ತಿರಬೇಕು. ಮನೆಯ ಶೌಚಾಲಯವನ್ನು ಸ್ವಚ್ಛವಾಗಿಟ್ಟು ಕೊಳ್ಳಬೇಕು.ಮನೆಯ ಆವರಣದ ಸ್ವಚ್ಛತೆಮನೆಯ ಸುತ್ತ-ಮುತ್ತ ಗಲೀಜು ಆಗದಂತೆ ಮುಂಜಾಗ್ರತೆ ವಹಿಸಿ ಆಗಾಗ ಬಿದ್ದ ಕಸವನ್ನು ಗೂಡಿಸಿಕೊಂಡು ನಿಂತ ನೀರು ನಿಲ್ಲದಂತೆ ನೋಡಬೇಕು. ಮನೆಯ ಆವರಣದಲ್ಲಿ ಗಿಡಗಳನ್ನು ಬೆಳೆಸಬೇಕು. ಇದರಿಂದ ತಂಪಾದ ಗಾಳಿ, ವಾತಾವರಣ ನಿಮರ್ಾಣವಾಗುತ್ತದೆ.ಹೀಗೆಲ್ಲ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವದರಿಂದ ಪರಿಸರವು ಹಿತವಾಗಿ ಜೀವನವು ಸುಂದರವಾಗಿರುತ್ತದೆ.ಮುಂದಿನ ಸಂಚಿಕೆಯ ಮತ್ತೊಂದು ಮಾಲಿಕೆಯಲ್ಲಿ ಇನ್ನೊಂದು ಸಲಹೆ. ನೀರಿಕ್ಷಿಸಿ...
No comments:
Post a Comment
Thanku