Sunday, September 25, 2011

ಭಾರತವು ಮಧುಮೇಹದಿಂದ ಮುಕ್ತವಾಗಲು ಸಾಧ್ಯವೇ.?


ಭಾರತವು ಮಧುಮೇಹದಿಂದ ಮುಕ್ತವಾಗಲು ಸಾಧ್ಯವೇ.?
ಪ್ರಜಾಪ್ರಭುತ್ವ ದೇಶದ ಪ್ರಧಾನಿಮಂತ್ರಿಗಳಾದ ಮಾನ್ಯ ಮನಮೋಹನ್ಸಿಂಗ್ ಅವರು ಇಂದು ಮಧುಮೇಹದಿಂದ ಬಳಲಿ ಸುಮಾರು ಎರಡು ಬಾರಿ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಇಂತಹ ಒಂದು ಸಂದಿಗ್ನ ಪರಿಸ್ಥಿತಿಯಲ್ಲಿ ಭಾರತದ ಪ್ರತಿಯೊಬ್ಬ ನಾಗ ರೀಕನ ಗತಿಯೇನು? ಹಾಗೂ ಮಧುಮೇಹ ನಿಯಂತ್ರಿಸಲು ರಾಷ್ಟ್ರಮಟ್ಟದ ಯೋಜನೆಯನ್ನು ರೂಪಿಸುವ ಅವಶ್ಯಕ ತೆಯಿದೆ ಎನ್ನುತ್ತಾರೆ ಖ್ಯಾತ ಅರವಳಿಕೆ ತಜ್ಞರಾದ ಡಾ.ರವೀಂದ್ರನಾಥ ಮಾವಿನಕಟ್ಟಿ.
ಮಾನವನ ಇತಿಹಾಸ ಕೆಣಕುತ್ತಾ ಹೋದಂತೆಲ್ಲ ಅವನ ಜೀವ ನಕ್ರಮದಲ್ಲಿ ಅನೇಕ ರೀತಿಯ ಬೆಳವಣಿಗೆಗಳು ಕಂಡುಬರುತ್ತವೆ. ಇಂತಹ ಬೆಳವಣಿಗೆಯನ್ನು ಅವಲೋಕಿಸುತ್ತಾ ಹೋದಂತೆಲ್ಲ ಅವನ ಆಚರಣಿ, ಆಹಾರ, ಉಡುಗೆ-ತೊಡುಗೆ ಒಟ್ಟಾರೆ ಜೀವನ ಶೈಲಿಯಲ್ಲಿ ಅಜಗಜಾಂತರ ವ್ಯತ್ಯಾಸವನ್ನು ಇಂದು ಕಾಣುತ್ತಿ ದ್ದೇವೆ.
    ಇಂದಿನ ಆಧುನಿಕರಣಕ್ಕೆ ಒಳಪಟ್ಟ ಮಾನವ ಹಲವಾರು ರೀತಿಯ ರೋಗರುಜಿನಗಳಿಗೆ ತುತ್ತಾಗುತ್ತಿದ್ದಾನೆ. ಏಕೆಂದರೆ, ಇಂದು ಮನುಕುಲವು ಉಪಯೋಗಿಸುತ್ತಿರುವ ಆಹಾರ ಪದಾ ರ್ಥಗಳು ಅನುಸರಿಸುತ್ತಿರುವ ಜೀವನ ಶೈಲಿ ಇವೆಲ್ಲದರ ನಡುವೆ ಅವನು ಮಾನಸಿಕ ಖಿನ್ನತೆಗೆ ಒಳಗಾಗಿ ವಿವಿಧ ರೀತಿಯ ರೋಗರುಜಿನಗಳಿಗೆ ತುತ್ತಾಗುತ್ತಿದ್ದಾನೆ. ಪ್ರಸ್ತುತ ನಮ್ಮ ದೇಶ ದಲ್ಲಿ ನಾಗರೀಕರು ಕೆಲವೊಂದು ಕಾಯಿಲೆಗಳಿಗೆ ತುತ್ತಾಗಿ ನರಳಾಡುತ್ತಿದ್ದಾರೆ.ಅಂತಹ ಕೆಲವು ಕಾಯಿಲೆಗಳಿಗೆ ಮಧುಮೇಹವೆಂಬ ರೋಗವು ಜನಸಾಮಾನ್ಯರನ್ನು ಎಡಬಿಡದೇ ಕಾಡು ತ್ತಿದೆ. ಏಕೆಂದರೆ ನಮ್ಮ ಸಕರ್ಾರಗಳು, ವಿವಿಧ ಸಂಘಸಂಸ್ಥೆಗಳು ಸಮಸ್ತ ಜನತೆಗೆ ಈ ಕಾಯಿಲೆಯ ಬಗ್ಗೆ ತಿಳುವಳಿಕೆ, ಹಾರೈಕೆ ಮಾಡುವ ಬಗ್ಗೆ ಹಾಗೂ ಅದನ್ನು ತಡೆಗಟ್ಟುವ ಬಗ್ಗೆ ಅಷ್ಟೊಂದು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ
    ಮುಂದುವರೆದ ರಾಷ್ಟ್ರಗಳು ಸೇರಿದಂತೆ ನಮ್ಮಲ್ಲಿಯೂ (ಭಾರತ) ಮಧುಮೇಹ ಸಾಮಾಜಿಕ ಪಿಡುಗಾಗಿ ಮಾರ್ಪಟ್ಟಿದೆ. ಇದು ಬಹುಕಾಲದವರೆಗೆ ಇರುವದರಿಂದ ದೇಹದ ವಿವಿಧ ಭಾಗಗಳಾದ ಕಿಡ್ನಿ, ಕಾಲು, ಕಣ್ಣು, ನರವ್ಯೂಹದ ಎಲ್ಲ ಭಾಗಗಳಿಗೆ ತೊಂದರೆ ಕೊಡುತ್ತದೆ.
ಡಯಾಬಿಟಿಸ್ನ್ನು ನಿಯಂತ್ರಿಸಲು ವೈಜ್ಞಾನಿಕವಾಗಿ ಕೆಲವೊಂದು ಸೂತ್ರಗಳನ್ನು ಅನುಸರಿಸಲೇಬೇಕು.
    ಇತ್ತೀಚಿಗೆ ಚನೈನ ಕೊಳಚೆಪ್ರದೇಶವೊಂದರಲಿ ಎ.ಬಾಲಾಜಿ ಎಂಬ ವೈದ್ಯರು ಡಯಾಬಿಟಿಸ್ನಿಂದ ಬಳಲುತ್ತಿರುವ 323 ಜನರನ್ನು ತಮ್ಮ ಸಮೀಕ್ಷೆಗಾಗಿ ಬಳಸಿಕೊಂಡರು.
    ಡಯಾಬಿಟಿಸ್ ರೋಗಿಗಳಿಗೆ ಸಿಗುತ್ತಿರುವ ಉಪಚಾರ ಹೇಗಿದೆ ಎಂಬುದರ ಕುರಿತು ಅವರ ಒಂದು ಅಧ್ಯಯನವಾಗಿತ್ತು. ಅವರು ತಮ್ಮ ಅಧ್ಯಯನದ ನಂತರ ಅಲ್ಲಿ ಭಾಗವಹಿಸಿದ್ದ 323 ಜನರ ಪೈಕಿ ಕೇವಲ 26 ಜನರಿಗೆ ಮಾತ್ರ ಸರಿಯಾದ ಉಪ ಚಾರ ಸಿಗುತ್ತಿದೆ ಎಂಬುದನ್ನು ಕಂಡುಕೊಂಡರು. ಇದು ಕೇವಲ ನೂರಕ್ಕೆ 8% ಜನರಿಗೆ ಮಾತ್ರ ಉಪಚಾರ ಸಿಕ್ಕಂತಾಗುತ್ತದೆ. ಇದರಂತೆ ಈ ದೇಶದಲ್ಲಿ ಎಲ್ಲ ಡಯಾಬಿಟಿಸ್ ರೋಗಿಗಳಿಗೆ ಯಾವ ರೀತಿಯ ಉಪಚಾರ ಸಿಗುತ್ತದೆ ಎಂಬ ಸಂಶೋಧನೆ ನಡೆದರೆ, ನಮಗೆ ನಿಬ್ಬೆರಗಾಗುವ ಫಲಿತಾಂಶ ಸಿಗುವದರಲ್ಲಿ ಅನುಮಾನವಿಲ್ಲ.
    ಇದೊಂದು ಆತಂಕಕಾರಿ ವಿಷಯ. ಈ ಕುರಿತು ಚಚರ್ೆ ನಡೆಸಬೇಕಾದ ರಾಜಕಾರಣಿಗಳು, ಉದ್ಯಮಿಗಳು, ಸಾಹಿತಿಗಳು, ವೈದ್ಯರು, ಮೆಡಿಕಲ್ ಕಾಲೇಜುಗಳು, ವಿದ್ಯಾವಂತ ಯುವಕರು ಪ್ರತಿಯೊಬ್ಬ ಸಾಮಾನ್ಯ ಮನುಷ್ಯನಿಗೆ ಈ ಖಾಯಿಲೆಯ ಬಗ್ಗೆ ತಿಳುವಳಿಕೆ ಮೂಡಿಸುವಲ್ಲಿ ವಿಫಲರಾಗಿದ್ದಾರೆ.
    ನಮ್ಮ ದೇಶದ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯು ಮಧುಮೇಹವನ್ನು ನಿಯಂತ್ರಿಸಲು ಹಲವಾರು ಕಾರ್ಯಕ್ರಮ ಗಳನ್ನು ಕೈಗೊಂಡರೂ ಸಕರ್ಾರವು ಈ ಯೋಜನೆಯನ್ನು ಸಮರ್ಪಕವಾಗಿ ನಿರ್ವಹಿಸಲು ಆಗದೇ, ಕೆಲವೊಂದು ಸಕರ್ಾ ರೇತರ ಸಂಸ್ಥೆಗಳಿಗೆ ನೀಡುತ್ತದೆ. ಈ ಸಂಸ್ಥೆಗಳು ಅಷ್ಟೊಂದು ಕ್ರಿಯಾಶೀಲ ತೆಯಿಂದ ಕಾಯರ್ೋನ್ಮುಖ ಹೊಂದಲು ಆಸಕ್ತಿ ಯನ್ನು ತೋರುವುದಿಲ್ಲ.
    ಪ್ರಮುಖವಾಗಿ ಸಕರ್ಾರವು ಮಧುಮೇಹ ನಿಯಂತ್ರಿಸಲು ರಾಷ್ಟ್ರಮಟ್ಟದ ಕಾರ್ಯಕ್ರಮವೊಂದನ್ನು ರೂಪಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.
    ಈ ಹಿಂದಿನ ಆರೋಗ್ಯಮಂತ್ರಿಗಳಾದ ಅನ್ಬುಮಣಿ ರಾಮದಾಸ್ರು ಕೇರಳದ ಒಂದು ಆರೋಗ್ಯ ಶಿಬಿರದಲ್ಲಿ ಇನ್ನಾರು ತಿಂಗಳೊಳಗೆ ಮಧುಮೇಹ ನಿಯಂತ್ರಣಕ್ಕಾಗಿ ಮಂಡಳಿಯೊಂದನ್ನು ರಚಿಸಿ, ಅದರ ನಿಯಂತ್ರಣಕ್ಕಾಗಿ ಪ್ರತ್ಯೇಕ ಕಾರ್ಯ ಕ್ರಮಗಳನ್ನು ರೂಪಿಸಲಾಗುವುದು ಎಂದಿದ್ದರು. ಆದರೆ, ವರ್ಷಗಳು ಕಳೆದರೂ ಮಂಡಳಿ ಹಾಗೂ ಕಾರ್ಯಕ್ರಮಗಳು ರೂಪುಗೊ ಳ್ಳಲಿಲ್ಲ, ಬದಲಿಗೆ ತಾವೇ ಇಲಾಖೆಯಿಂದ ನಿರ್ಗಮಿಸಿದರು.
important - ರಕ್ತ ಪರೀಕ್ಷೆ : ಹೆಚ್ಬಿ,ಎ.ಸಿ 6.5 ಉಪಕರಣದಿಂದ ಪರೀಕ್ಷೆ ಮಾಡಿಸಬೇಕು. - ಮೂತ್ರ ತಪಾಸಣಿ : ಮೈಕ್ರೋಪ್ರೋಟಿನ್ (ಮೂತ್ರಕ್ಕೆ ಸಂಬಂಧಿಸಿದ) ಪರೀಕ್ಷೆಯನ್ನು ಪ್ರತಿ3 ತಿಂಗಳುಗೊಮ್ಮೆ ಮಾಡಿಸ ಬೇಕು. - ನೇತ್ರ ತಪಾಸಣಿ : ಕಣ್ಣಿಗೆ ಸಂಬಂಧಿಸಿದಂತೆಯೂ ತಪಾಸಣೆಯನ್ನು ಮಾಡಿಸಬೇಕು. ನುರಿತ ನೇತ್ರ ತಜ್ಞರನ್ನು ಕಂಡು ಪರೀಕ್ಷೆ ನಡೆಸಬೇಕು. - ಪಾದ ಪರೀಕ್ಷೆ:ಮೈಕ್ರೋಫಿಲಿಮಿನೆಟ್ 10ಗ್ರಾಮ ಎಂಬ ಸಾಧನ ಯಂತ್ರದಿಂದ ಪಾದಸ್ಪರ್ಷವನ್ನು ಪರೀಕ್ಷಿಸಬೇಕು.
ಮೇಲಿನ ಎಲ್ಲವನ್ನು ಸರಿಯಾಗಿ 3ತಿಂಗಳಿಗೊಮ್ಮೆಯಾದರೂ ಪರೀಕ್ಷೆ ಮಾಡಿಸುತ್ತಾ ಹೋದರೆ, ಮಧುಮೇಹವನ್ನು ನಿಯಂತ್ರಣ ಲ್ಲಿಡಬಹುದು.

ವೈಜ್ಞಾನಿಕ ಇತಿಹಾಸ ಭಾಗ 2

ವೈಜ್ಞಾನಿಕ ಇತಿಹಾಸ ಭಾಗ 2



ನಗರ ನಿಮರ್ಾಣವನ್ನು ಬಲ್ಲ ಯಾರೋ ಹೊರಗಿನವರು ಇಲ್ಲಿಗೆ ಬಂದು ಈ ನಗರಗಳನ್ನು ನಿಮರ್ಿಸಿರಬೇಕೆಂದು ಕೋಸಂಬಿಯವರು ಅಭಿಪ್ರಾಯಪಡುತ್ತಾರೆ.


ಕ್ರಿ.ಪೂ 1750ರವರೆಗೆ ಈ ನಾಗರೀಕತೆ ಅಭಿಪ್ರಾಯ ಪಡುತ್ತಾರೆ ಕ್ರಿ.ಪೂ1750ರವರೆಗೆ ಮೆಸಪೊಟೋಮಿಯಾದೊಂದಿಗೆ ವ್ಯಾಪಾರ ಸಂಬಂಧಗಳನ್ನು ಹೊಂದಿತ್ತು ಎನ್ನುವದಕ್ಕೆ ಅಲ್ಲಿ ನಡೆಯಲಾದ ಪುರಾತತ್ವ ಶೋಧನೆಗಳು ಆಧಾರಗಳನ್ನು ಒದಗಿಸುತ್ತವೆ. ಸಿಂಧೂ ತೀರದ ಅವಶೇಷಗಳ ಮೇಲೆ ನೆಲವು 30ರಿಂದ 50 ಅಡಿಯಷ್ಟು ಬೆಳೆದಿದೆ ಎಂಬುದರಿಂದ ಅದು 1ಸಾವಿರದಷ್ಟು ವರ್ಷಗಳ ಹಿಂದಿನದೆಂದು ಗ್ರಹಿಸಬಹುದಾದರೆ ಈ ನಾಗರೀಕತೆಯ ಕಾಲ ಕ್ರಿ.ಪೂ 3000ದಿಂದ 1750ಎಂದು ನಿರ್ಧರಿಸಬಹುದು. ಒಂದು ವಿಚಿತ್ರವಾದ ವಿಷಯವೆಂದರೆ, ಇಷ್ಟು ಧೀರ್ಘಕಾಲದ ನಾಗರೀಕತೆಯ ಹರಪ್ಪ, ಮೆಹಂಜೋದಾರ ಪಟ್ಟಣಗಳ ನಿಮರ್ಾಣಗಳಲ್ಲಿ ಯಾವ ಬಗೆಯ ಬದಲಾವಣಿಗಳು ಕಾಣಬರದೇ ಹೋಗುತ್ತದೆ.


ಆರ್ಯರು ಮಧ್ಯ ಆಶಿಯಾ ಪ್ರಾಂತ್ಯಕ್ಕೆ ಸೇರಿದವರೆಂಬ ನಿರ್ಣಯಕ್ಕೆ ಇತರ ಚರಿತ್ರಕಾರರಂತೆ ಕೋಸಂಬಿಯವರು ತಲುಪುತ್ತಾರೆ. ಭಾರತ ಖಂಡಕ್ಕೆ ಈ ವಲಸೆ ಪ್ರಧಾನವಾಗಿ 2 ಹಂತದಲ್ಲಿ ಬಂದಿತೆಂದು ಕೋಸಂಬಿಯವರು ಹೇಳುತ್ತಾರೆ. ಕ್ರಿ.ಪೂ 2000ದ ಸುಮಾರಿನಲ್ಲಿ 1ಬಾರಿ, ಕ್ರಿ.ಪೂ 1ಸಾವಿರದ ವೇಳೆಗೆ ಬಾರಿ ಸಂಖ್ಯೆಯ ಆರ್ಯ ಸಮುದಾಯಗಳು ವಲಸೆ ಬಂದವು. ಮೊದಲು ಬಂದದ್ದು ಕ್ರಿ.ಪೂ 1750ಸುಮಾರಿನಲ್ಲಿ ಸಿಂಧೂನಾಗರೀಕತೆಯ ನಾಶಗೈದರು ಎಂಬುದರ ಕೋಸಂಬಿಯವರ ಅಂದಾಜು. ಈ ಆರ್ಯರು ಕುದುರೆಗಳನ್ನು ಸವಾರಿಗಾಗಿ ಬಳಸುತ್ತಿದ್ದರು. ಕುದುರೆಗಳನ್ನು ಬಂಡಿ ಅಥವಾ ರಥಗಳಿಗೆ ಕಟ್ಟಿ ಯುದ್ದಗಳಿಗೆ ಬಳಸುತ್ತಿದ್ದರು. ಒಂದು ನಾಗರೀಕತೆ ಆರ್ಯರಿಗಿಂತ ಉನ್ನತ ಸ್ಥಿತಿಯದ್ದಾಗಿದ್ದರೂ ಅವರಿಗಿಂತ ಇವರಲ್ಲಿ ಉತ್ತಮ ಆಯುಧಗಳಾಗಿದ್ದವು. ಯುದ್ಧದಲ್ಲಿ ಅವರು ನಿಪುಣರಾಗಿದ್ದರೆಂಬುದಕ್ಕೆ ನಿದರ್ಶನವೆಂದರೆ ಪಡುವಲ ಆಸಿಯಾದಿಂದ ಭಾರತ ಉಪಖಂಡದವರೆಗೆ ಅವರು ತಮಗಿಂತ ಉನ್ನತ ನಾಗರೀಕತೆಯ ಕಂಚುಯುಗದ ಕೃಷಿಕರನ್ನು ತಮಗಿಂತ ಹಿಂದುಳಿದ ಅನಾಗರೀಕ ಶಿಲಾಯುಗದ ಅರಣ್ಯವಾಸಿಗಳನ್ನು ಸದೆಬಡೆಯುವುದು ಅವರಿಗೆ ಸಾಧ್ಯವಾದದು.


ಗೋತ್ರಗಳು ಸಮುದಾಯ ವ್ಯವಸ್ಥೆಯನ್ನು ಮಾರ್ಪಡಿಸಿಕೊಂಡು ವರ್ಣವ್ಯವಸ್ಥೆಗೆ ರೂಪಾಂತರಗೊಂಡ ಹಂತ ನಮ್ಮ ದೇಶಕ್ಕೆ ಆರ್ಯರು ಬಂದ ನಂತರದಲ್ಲಿ ಸಾಧಿಸಿದ ಮೊತ್ತ ಮೊದಲ ಪ್ರಮುಖ ಬದಲಾವಣಿ ಎನ್ನಬಹುದು. ಆದಿಮಾಪಶುಪಾಲಕ ಸಮಾಜವನ್ನು ಬಿಟ್ಟು ಕಬ್ಬಿಣದ ಬಳಕೆಯನ್ನರಿತ ಕೃಷಿಕ ವರ್ಗ ಸಮಾಜ ರೂಪುಗೊಂಡ ಬದಲಾವಣಿ. ಅಲ್ಲಿಗೆ ಗೋತ್ರಗಳು ಸಮುದಾಯಗಳು ಸಾಮಾಜಿಕವಾಗಿ ಅರ್ಥರಹಿತವಾಗಿ ಹೋದವು. ಇಂದಿಗೂ ಗೋತ್ರಗಳೂ ಬ್ರಾಹ್ಮಣರಲ್ಲಿ ಉಳಿದುಕೊಂಡು ಬಂದಿವೆ. ಸಾಮಾಜಿಕ ವ್ಯವಸ್ಥೆಯಲ್ಲಿ ಗೋತ್ರಗಳು ಹೊರಟುಹೋಗಿ ಕುಲಗಳು ಬಂದಿವೆ. ಆದರೂ, ಆಚಾರ್ಯಗಳಲ್ಲಿ ಇಂದಿಗೂ ಕುಲಗೋತ್ರಗಳೆರಡು ಮುಖ್ಯವಾಗಿವೆ.


ಋಗ್ವೇದ ಕಾಲಕ್ಕೆ ಆರ್ಯರ ಸುತ್ತಲು ಇದ್ದ ಹೆಚ್ಚಿನವು ಅರಣ್ಯವಾಸಿ ಸಮುದಾಯಗಳು ಬಹುಶಃ ಕೆಲವು ಪಶುಪೋಷಕ ಹಾಗೆಯೇ ಸಿಂದೂ ನದಿ ತೀರದಲ್ಲಿ ಹಗುರ ಕೃಷಿಪದ್ದತಿಯನ್ನು ಅನುಸರಿಸುತ್ತಿದ್ದ ಕೃಷಿಕ ಸಮಾಜದ ಕುರುಹುಗಳು ಹರಪ್ಪ ಮೆಹಂಜೋದಾರ್ರ ಅವಶೇಷಗಳಲ್ಲಿ ದೊರೆತಿವೆ. ಒಟ್ಟು ಬುಡಕಟ್ಟಿನ ಹಿರಿಯನನ್ನು ರಾಜನೆಂದು ಕರೆಯುತ್ತಿದ್ದರು. ಗೋಮಾಂಸ ಆರ್ಯರ ಪ್ರಧಾನ ಆಹಾರ. ತಮ್ಮ ಪಶುಸಂಪತ್ತು ನಿರಂತರವಾಗಿ ಅಭಿವೃದ್ದಿ ಹೊಂದಲೆಂದು ದೇವರಲ್ಲಿ ಮೊರೆ ಇಡುತ್ತಿದ್ದರು. ಆ ದೇವರುಗಳಿಗೆ ಸ್ತ್ರೋತ್ರ, ಮಂತ್ರಗಳನ್ನು ಅಪರ್ಿಸಿದರೆ, ತಮ್ಮ ಅಗತ್ಯಗಳು ಪೂರೈಸುತ್ತವೆಂದು ನಂಬುತ್ತಿದ್ದರು. ಹಾಗಾಗಿಯೇ ಆಚರಣಿಗಳು, ಮಂತ್ರ, ಸಾಹಿತ್ಯವು ಸೃಷ್ಟಿಯಾದವು.


ಋಗ್ವೇದ ಸೂಕ್ತಗಳೆಂದರೆ, ಇಂತಹ ಯಜ್ಞಗಳ ಆಚರಣಿಯಲ್ಲಿ ಪಠಿಸಲಾಗುವ ಮಂತ್ರಗಳು ಋಗ್ವೇದವನ್ನು ಹಾಡುವ ಪದ್ದತಿಯೇ ಸಾಮವೇದ. ಋಗ್ವೇದವು ಅನಂತರದ ಕಾಲದಲ್ಲಿ ಮಾಪರ್ಾಡುಗಳನ್ನು ಹೊಂದಿ ಪಡೆದ ಆಚರಣಾ ಸಂಬಂಧಿ ಮಂತ್ರಗಳೇ ಯಜುವರ್ೇದ. ಹಾಗೂ ಅಥವರ್ಣ ವೇದಗಳು ಸಂಕ್ಷಿಪ್ತವಾಗಿ ಸೂಕ್ತಗಳ ರೂಪದಲ್ಲಿ ವೇದಮಂತ್ರಗಳನ್ನು ವ್ಯಾಖ್ಯಾನಿಸುವ ಬ್ರಾಹ್ಮಣರ ಗ್ರಂಥಗಳೇ ಇವುಗಳೊಂದಿಗೆ ಅರಣ್ಯಕಗಳು, ಉಪನಿಷತ್ತುಗಳನ್ನು ಕ್ರೋಡಿಕರಿಸಿ ಒಟ್ಟಿಗೆ ವೇದಸಾಹಿತ್ಯವೆನ್ನುತ್ತಾರೆ.


ಋಗ್ವೇದದ ಕಾಲದಲ್ಲಿ ಆರ್ಯರಲ್ಲಿ ವರ್ಣವ್ಯವಸ್ಥೆ ಇರಲಿಲ್ಲ. ವಿವಿಧ ಆರ್ಯ ಸಮುದಾಯಗಳು ಆ ಸಮುದಾಯಗಳಲ್ಲಿ ಗೋತ್ರಗಳು ಮಾತ್ರವೇ ಇದ್ದವು. ಕೆಲವು ಆಯರ್ೇತರ ಸಮುದಾಯಗಳನ್ನು ಒಂದುಗೂಡಿಸುವಲ್ಲಿ ಪುರೋಹಿತರು ಪ್ರಮುಖ ಪಾತ್ರ ವಹಿಸಿದ್ದರು. ಯಾರು ತಮಗೆ ಸೂಕ್ತವಾಗಿ ಲಾಭವನ್ನು ನೀಡುವರೋ ಅವರನ್ನು ಆರ್ಯನೆಂದು ಹೊಗಳಲು ಅವನ ಪರವಾಗಿ ಯಜ್ಞವನ್ನು ಆಚರಿಸಲು ಪುರೋಹಿತರು ಎಂದಿಗೂ ಸಿದ್ದರೆ? ಹೀಗೆ ಮಾಡುತ್ತಲೇ ಆರ್ಯ ಸಮಾಜವನ್ನು ವಿಸ್ತರಿಸುತ್ತಾ ಅದೇ ಸಂದರ್ಭದಲ್ಲಿ ಅವರು ಬಲಗೊಳ್ಳುತ್ತಾ (ಪುರೋಹಿತ ಬ್ರಾಹ್ಮಣ) ವರ್ಗವಾಗಿ ರೂಪತಾಳಿದರು. ಋಗ್ವೇದ ಕಾಲದ ಆರ್ಯರ ಮುಖ್ಯ ದೇವರು ಅಗ್ನಿ. ಯಜ್ಞಗಳಲ್ಲಿ ಪ್ರತ್ಯಕ್ಷವಾಗಿ ಅಗ್ನಿಗೆ ಬಲಿಯನ್ನು ಅಪರ್ಿಸುತ್ತಿದ್ದರು. ಅಗ್ನಿಯಲ್ಲದೇ ಇತರ ದೇವರುಗಳಾದ ವರುಣ, ಮಿತ್ರ, ಸೂರ್ಯ, ವಾಯು, ಅಶ್ವಿನಿಗಳು, ಪಜನ್ಯ ಮೊದಲಾದವರು. ಬಹುಕಾಲದವರೆಗೆ ನಿಸರ್ಗ ಸಂಗತಿಗಳು ಮಾನವೀಕೃತ ರೂಪತಾಳಿದ್ದವೇ ಆಗಿದ್ದವು. ಈ ಎಲ್ಲಾ ದೇವರುಗಳ ನಾಯಕನಾದ ಇಂದ್ರನು ಯುದ್ದನಿಪುಣ. ಆತನಿಗೆ ಬಲಿಗಳನ್ನು ಅಪರ್ಿಸಿ ಅವನನ್ನು ಒಲಿಸಿಕೊಂಡ ಆರ್ಯಸಮುದಾಯಗಳಿಗೆ ಇತರ (ಆರ್ಯ ಮತ್ತು ಆಯರ್ೇತರ ಸಮುದಾಯಗಳೊಂದಿಗೆ ಯುದ್ದಗಳಾದಾಗ ಇಂದ್ರನು ಸಹಾಯ ನೀಡುತ್ತಾನೆಂದು ನಂಬಿದ್ದರು. ಈ ಯುದ್ದಗಳೆಂದರೆ, ಮುಖ್ಯವಾಗಿ ಪಶುಸಂಪತ್ತಿಗಾಗಿ ಜಲಮೂಲಗಳಿಗೋಸ್ಕರ ನಡೆಯುತ್ತಿದ್ದವು. ಋಗ್ವೇದದಲ್ಲಿ ಆರ್ಯರ ಶತ್ರುಗಳೆಂದರೆ, ವಣರು, ದಾಸರು (ದಾಸ್ಯಗಳು) ವಣರು ಧನವಂತರೆಂದು ಲೋಬಿಗಳೆಂದು ಆಸೆಬುರಕರೆಂದು ವೇಧಗಳಲ್ಲಿ ವಣರ್ೀತವಾಗಿದೆ.


ದಾಸ ಎಂದರೆ, ನಂತರ ಕಾಲದಲ್ಲಿ ಸೇವಕ ಭೃತ್ಯ ಆದರೆ, ಋಗ್ವೇದ ಕಾಲದಲ್ಲಿ ಕೇವಲ ಆಯರ್ೇತರು ಎಂದಷ್ಟೇ ಅರ್ಥ. ಪುರೋಹಿತ ಪ್ರಾಬಲ್ಯ ಇದ್ದ ಸ್ಥಿತಿಯನ್ನು ಗುರುತಿಸಿದರೆ, ಬಹುಶಃ ಈ ಬ್ರಾಹ್ಮಣ ವರ್ಣದಲ್ಲಿ ಆರ್ಯ ಅಂಶಕ್ಕಿಂತ ದಾಸ ಅಂಶವೇ ಹೆಚ್ಚಿನದ್ದಿರಬಹುದು. ಬಹಳ ಕಾಲದವರೆಗೆ ಬ್ರಾಹ್ಮಣ ಗೋತ್ರಗಳು, ಋಷಿಗಳು ಬಹುಮಟ್ಟಿಗೆ ದಾಸರಿಂದಲೇ ಬಂದವರು ಎಂಬುದು ಕೋಸಂಬಿಯವರ ಅಭಿಪ್ರಾಯ.


ಋಗ್ವೇದ ಕಾಲದಲ್ಲಿ ಆಹಾರ ಉತ್ಪಾದನೆಯಾಲಿ, ಸ್ಥಿರಕೃಷಿಯಾಗಲಿ ಇರಲಿಲ್ಲ. ರಾಜರ ರಾಜ್ಯಗಳು ಇರಲಿಲ್ಲ. ಅಂದರೆ, ಇಲ್ಲಿ "ರಾಜ" ಎಂದರೆ, ಸಮುದಾಯದ ಮುಖ್ಯಸ್ಥ. ಒಂದು ಕಡೆ ಋಗ್ವೇದದ ತುಂಬ ದಾಸರನ್ನು ವಣರನ್ನು ದೂಷಿಸುತ್ತಾ ಮತ್ತೊಂದೆಡೆ ಅದೇ ದಾಸ ರಾಜರಿಂದ ಈ ಪುರೋಹಿತರು ದಕ್ಷಿಣೆಗಳನ್ನು ಪಡೆದು ಅವರಿಗಾಗಿ ಯಜ್ಞಗಳನ್ನು ಮಾಡುತ್ತಿದ್ದರು. ವಣರಲ್ಲಿ ಅಗ್ರಗಣ್ಯನಾದ ಬೃಬು ಬಹಳ ಉದಾರಸ್ವಭಾವದವನೆಂದು ಆರ್ಯನಾದ ಭಾರದ್ವಾಜನು ಹೊಗಳಿದ್ದಾನೆ. ನಂತರ ಕಾಲದಲ್ಲಿ ಇದನ್ನು ಬದಲಿಸಿ ಹೇಳಲು ಬ್ರಾಹ್ಮಣರು ಬಗೆಬಗೆಯ ಲಾಭಗಳನ್ನು ಹಾಕಿದ್ದಾರೆ. ವಶಅಶುನ ಎಂಬ ಪುರೋಹಿತನು ಬಲ್ಬೂತ್, ತರುಕ್ಷ ಎಂಬ ದಾಸರಿಂದ 3 ಒಂಟೆಗಳನ್ನು ದಕ್ಷಿಣೆಯಾಗಿ ಪಡೆದು ಅವರನ್ನು ಹೊಗಳಿದ್ದಾನೆ. ಋಗ್ವೇದದಲ್ಲಿ ಮೊತ್ತಮೊದಲ ಸಮುದಾಯಗಳೆಂದು 5ಗುಂಪುಗಳು (ಪಂಚಜನ) ಹೆಸರು ಗಳಿಸಿದ್ದಾರೆ. ಅವರಲ್ಲಿ ಯಾದವರು ಒಬ್ಬರು. ಆದರೆ, ಈ ಯಾದವರ ದೇವರು ಕೃಷ್ಣ, ಕರಿಯ, ಇಂದ್ರನ ಶತ್ರು ಈ ನಡುವೆ 2 ಬದಲಾವಣಿಗಳು ಬಂದಿವೆ. ಒಂದು ದಾಸರ ಪುರೋಹಿತರು, ಆರ್ಯರ ಪುರೋಹಿತರು ಒಂದಾಗಿ ಬ್ರಾಹ್ಮಣ ವರ್ಣವಾಗಿ ರೂಪ ತಳೆದರು. ಉಶಸ್ಸು ಮೊದಲಿಗೆ ಆರ್ಯದೇವತೆಯೇ ಅಲ್ಲವೆಂದು ಪಂಜಾಬ್ ಪ್ರಾಂತ್ಯಕ್ಕೆ ಆರ್ಯರು ಬರುವ ಪೂರ್ವದಲ್ಲಿ ಇದ್ದ ಅರಣ್ಯವಾಸಿಗಳ ಮಾತೃದೇವತೆ ಆಕೆಯೆಂಬುದು ಕೋಸಂಬಿಯವರ ಅಭಿಪ್ರಾಯ. ಊರ್ವಶಿ, ಮೇನಕೆ, ರಂಭೆ ಮೊದಲಾದ ಅಪ್ಸರೆಯರು ಕೂಡ ಈ ಆರ್ಯ ಪೂರ್ವಜರ ಜಲದೇವತೆಗಳೆ.


ಋಗ್ವೇದ ಕಾಲದ ಋಷಿಗಳ ಪೈಕಿ ವಿಶ್ವಾಮಿತ್ರನೊಬ್ಬನೇ ಖಚಿತವಾಗಿ ಆರ್ಯ ಎನ್ನುತ್ತಾರೆ. ಇಬ್ಬರು ಆರ್ಯದೇವತೆಗಳ ವೀರ್ಯವು ಒಂದು ಮಡಿಕೆಯಲ್ಲಿ ಬಿದ್ದದ್ದು ಅದರಿಂದ ಈತನ ಜನನವಾಯಿತೆಂದು ಹೇಳುವುದು ಇನ್ನೊಂದು ಕಥೆ. ಪುಷ್ಕರಣಿಯಲ್ಲಿ ದೊರಕಿದವನೆಂದು ಮೂರನೆಯ ಕಥೆ. ಆರ್ಯ, ಅನಾರ್ಯರು ವೀಲಿನಗೊಳ್ಳುತ್ತಿದ್ದ ಪ್ರಕ್ರಿಯೆಯ ಅಂಗವಾಗಿ ಬ್ರಾಹ್ಮಣ ವರ್ಗ ಎಂಬುದೊಂದು ಸೃಷ್ಟಿಯಾಯಿತು. ಬ್ರಾಹ್ಮಣರಲ್ಲಿ ಕಣ್ವ (ಕಣ್ವಾಯನ ಗೋತ್ರವಿದೆ). ಆದರೆ, ಅಥವರ್ಣವೇದದಲ್ಲಿ ಕಣ್ವ ಎಂಬುವವನು ಒಬ್ಬ ಕಪ್ಪು ರಾಕ್ಷಸ. ಹೌದಂಬರ ವೃಕ್ಷವನ್ನು ತನ್ನ ಸಮುದಾಯ ಚಿಹ್ನೆಯಾಗಿಯುಳ್ಳ ಒಂದು ಬುಡಕಟ್ಟು ಪ್ರಾಚೀನ ಕಾಲದಲ್ಲಿತ್ತು. ಆ ಮರವನ್ನು ಇಂದಿಗೂ ಪವಿತ್ರವೆಂದೇ ಭಾವಿಸಲಾಗುತ್ತದೆ. ಗುಜರಾತಿನಲ್ಲಿ ಹೌದಂಬರ ಕುಲವೆಂಬ ಹಿಂದುಳಿದ ಜಾತಿಯಿದೆ.


ಈ ಅರಣ್ಯಕ ಸಮುದಾಯಕ್ಕೆ ಸೇರಿದ ಶುನಶೇಷನನ್ನು ಬಲಿಕೊಡಲು ಹೊರಟಿದ್ದರಿಂದ ರಕ್ಷಿಸಿ ವಿಶ್ವಾಮಿತ್ರನು ಅವನಿಗೆ ದೇವರಾತನೆಂದು ಹೆಸರಿಡುತ್ತಾನೆ. ಆದರೆ, ಇಂದಿಗೂ ದೇವರಾತ ಗೋತ್ರಿಕರಾದ ಬ್ರಾಹ್ಮಣರಿಗೆ ವಿಶ್ವಾಮಿತ್ರ ಗೋತ್ರದವರಿಗೆ ವಿವಾಹ ನಿಷಿದ್ದವೆಂದು ಇಡಿಯಾಗಿ ಈ ಕಥೆಯನ್ನು ಶುನ್ಯಶ್ಯೇಪನೆಂಬ ಅನಾರ್ಯ ಪುರೋಹಿತನು ವಿಶ್ವಾಮಿತ್ರ ಗೋತ್ರವನ್ನು ಸ್ವೀಕರಿಸಿ ಆರ್ಯನಾದನೆಂದು ಅಥರ್ೈಸಬೇಕಾಗುತ್ತದೆ. ಬ್ರಾಹ್ಮಣಗೋತ್ರ ನಾಮವಾಗಿದೆ. ಈ ಗೋತ್ರದವರು ರೂಪಿಸಿದ ಯಜುವರ್ೇಧ ಸಂಪ್ರದಾಯವೇ ಇಂದಿಗೂ ಉಳಿದುಬಂದಿದೆ. ಋಗ್ವೇದವನ್ನು ಬಿಟ್ಟರೆ, ಅತ್ಯಂತ ಪ್ರಮುಖವೆನಿಸಿದ ಯಜುವರ್ೇಧ ಸಂಪ್ರದಾಯವೇ ಇಂದಿಗೂ ಉಳಿದುಬಂದಿರುವುದು. ಋಗ್ವೇದವನ್ನು ಬಿಟ್ಟರೆ, ಅತ್ಯಂತ ಪ್ರಮುಖವೆನಿಸಿದ ಯಜುವರ್ೇದವನ್ನು ಈ ಗೋತ್ರದವರೇ ನಂತರದ ಕಾಲದಲ್ಲಿ ರೂಪಿಸಿದರು. ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಆರ್ಯ,ಆಯರ್ೇತರ ಸಂಘರ್ಷ ಸಮ್ಮಿಲನಗಳ ಕ್ರಮ ಸಾಕಷ್ಟು ವಿಸೃತವಾಗಿಯೇ ನಡೆಯಿತು. ಸಮ್ಮಿಲನದಲ್ಲಿ ಮುಖ್ಯಪಾತ್ರ ವಹಿಸಿದ ಪುರೋಹಿತರೆಲ್ಲ ಒಂದಾಗಿ ಅನಿವಾರ್ಯ ಅಂಶಪ್ರಧಾನವಾದ ಒಂದು ಬ್ರಾಹ್ಮಣ ವರ್ಣ ಹುಟ್ಟಿಕೊಂಡಿತು. ಇದೇಲ್ಲ ಒಂದೇ ಏಟಿಗೆ ನಡೆದುಬಿಟ್ಟಿತೆಂದಲ್ಲ. ಬಹುಶಃ ಕ್ರಿ.ಪೂ 1500ರಿಂದ 1000ದವರೆಗಿನ ಅವಧಿಯಲ್ಲಿ ನಡೆದಿರಬಹುದು.


ಕ್ರಿ.ಪೂ 1200ರಿಂದ 1000ಸುಮಾರಿನಲ್ಲಿ ಕಬ್ಬಿಣದ ಬಳಕೆ ಹೆಚ್ಚಾಗುತ್ತಿದ್ದಂತೆ ಆಹಾರ ಉತ್ಪಾದನೆ, ಪಶುಸಂಗೋಪನೆಗಿಂತಲೂ ಪ್ರಮುಖ ಜೀವನಾಧಾರವಾಗಲು ತೊಡಗಿತು. ಯಜುವರ್ೇದ ಕಾಲಕ್ಕೆ ಯಜ್ಞಗಳ ಆಚರಣಿ ಬಹಳ ಹೆಚ್ಚಿತು. ಉಪನಿಷತ್ತಿನಲ್ಲಿ ಜನಕರಾಜನು ಯಜ್ಞವಲ್ಕನಿಗೆ ಹತ್ತು ಸಹಸ್ರ ಗೋವುಗಳನ್ನು ಉಡುಗೊರೆಯಾಗಿತ್ತನು. ಈ ಸಾಹಿತ್ಯವನ್ನು ಸೃಷ್ಟಿಸಿದವರು ಬ್ರಾಹ್ಮಣರೇ. ಸಂಸ್ಕೃತದಲ್ಲಿ ನೇಗಿಲಿಗೆ "ಹಲ" ಎನ್ನುತ್ತಾರೆ. ಗ್ರಾಮ ಎಂದರೆ, ಪಶುಗಳನ್ನು ಮೇಯಿಸುತ್ತಾ ಸಂಚರಿಸುವ ಗುಂಪು ಅಂತಹ ಎರಡು ಗುಂಪುಗಳು ಮುಖಾಮುಖಯಾದಾಗ ಕಲಹಗಳು ಉಂಟಾಗುತ್ತಿದ್ದವು. ಇದರಿಂದಾಗಿಯೇ ಯುದ್ದಕ್ಕೆ "ಸಂಗ್ರಾಮ" ಎಂಬ ಮಾತು ಬಂತು.


ಕ್ರಿ.ಪೂ 1000ದಿಂದಲೂ ಇವೆಲ್ಲ ನಿರಂತರವಾಗಿ ಸಾಗಿ ಬಂದವು. ಯಜುವರ್ೇದದ ವೇಳೆಗೆ ವರ್ಲಿ, ಬಾರ್ಲಿ, ಎಳ್ಳು, ಗೋಧಿ, ಬೇಳೆ, ಜೋಳ ಹಾಗೂ ಸಜ್ಜೆ ಮೊದಲಾದವುಗಳನ್ನು ಬೆಳೆಯಲಾಗುತ್ತಿತ್ತು. ಈ ಆಹಾರ ಪದಾರ್ಥಗಳನ್ನು ಬಿಟ್ಟರೆ, ಉಳಿದ ಸಂಪತ್ತು ಚಿನ್ನ, ತಾಮ್ರ, ಕಂಚು, ತವರ ಸೀಸ, ಕಬ್ಬಿಣ ಇಂಥವುಗಳಲ್ಲಿ ಬಹುಪಾಲಿನವು ಆ ಪ್ರಾಂತ್ಯಗಳಲ್ಲಿ ದೊರೆಯುವಂಥವಲ್ಲ ಎಂಬುವದನ್ನು ನೋಡಿದರೆ, ಅವುಗಳನ್ನು ವರ್ತಕರಿಂದ ಪಡೆಯುತ್ತಿದ್ದರು ಎನ್ನಬಹುದು.


ತಿಥಿ ನಕ್ಷತ್ರಗಳ ಪ್ರಸ್ತಾವನೆ ಇರುವದನ್ನು ನೋಡಿದರೆ, ಋತುಗಳನ್ನಾಧರಿಸಿದ, ಕೃಷಿ ವಿಧಾನವನ್ನು ಅರಿತಿದ್ದೆರೆಂದು ಊಹಿಸಬೇಕಾಗುತ್ತದೆ. ಅಥವರ್ಣ ವೇದದಲ್ಲಿ ನದಿಯ ನೀರನ್ನು ಕಾಲುವೆಗೆ ಹರಿಸುವಾಗ ಆಚರಿಸಲಾಗುವ ವಿಷಯವನ್ನು ಹೇಳಲಾಗಿದೆ. ಅಷ್ಟೇ ಅಲ್ಲದೇ, ಆರು ಇಲ್ಲವೆ ಎಂಟು ಎತ್ತುಗಳನ್ನು ನೆಗಿಲಿಗೆ ಹೂಡಿ ಬೇಸಾಯ ಮಾಡುವದನ್ನು ಅಥವರ್ಣ ವೇದದಲ್ಲಿ ವಣರ್ಿಸಲಾಗಿದೆ. ಇದನ್ನಾಧರಿಸಿದ ಈ ಕಾಲಕ್ಕೆ ಪಶುಗಳನ್ನು ತಿನ್ನುವದಷ್ಟೇ ಅಲ್ಲದೇ, ಬೇಸಾಯಕ್ಕೆ ಬಳಸುವದನ್ನು ಆರಂಭಿಸಲಾಗಿತೆಂದು, ಭಾರವಾದ ನೇಗಿಲುಗಳನ್ನು ಹೂಡುತ್ತಿದ್ದರೆಂದು ಊಹಿಸಬೇಕಾಗುತ್ತದೆ.


ಕ್ರಿ.ಪೂ 1000-600ರಕಾಲದಲ್ಲಿ ಆರ್ಯರ ವಿಸ್ತರಣೆ ಸಿಂಧೂ-ಗಂಗಾ ಬಯಲುಗಳ ಮಧ್ಯ ಭಾಗಕ್ಕೆ (ಉತ್ತರಪ್ರದೇಶ) ಪರಿಮಿತವಾಗಿ ಉಳಿಯಿತು. continue...


ಭೀಮಣ್ಣ ನಗನೂರು, ದಲಿತ ಸಾಹಿತಿಗಳು.

ವೈಧಿಕ ಮುಖ್ಯಮಂತ್ರಿ ಪತನ

ವೈಧಿಕ ಮುಖ್ಯಮಂತ್ರಿ ಪತನ



ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ಅದಕ್ಕಾಗಿ ತಾವು ನಿಗದಿಪಡಿಸಿಕೊಂಡಿದ್ದ ಮುಹೂರ್ತದಲ್ಲೇ ರಾಜೀನಾಮೆ ಸಲ್ಲಿಸಿದ್ದಾರೆ. ಮುಗ್ಧರಾದ ಜನರು ಯಡಿಯೂರಪ್ಪ ಅವರ ಸಕರ್ಾರವನ್ನು ಲಿಂಗಾಯತ ಸಕರ್ಾರವೆಂದೂ, ಅವರನ್ನು ಲಿಂಗಾಯತ ಮುಖ್ಯಮಂತ್ರಿಯೆಂದು ಭಾವಿಸಿದ್ದರು.


ಅವರ ಸಚಿವ ಸಂಪುಟದಲ್ಲಿ ಲಿಂಗಾಯತರು ಅಧಿಕವಾಗಿದ್ದರು. ಯಡಿಯೂರಪ್ಪ ಅವರು ಹುಟ್ಟಿನಿಂದ ಲಿಂಗಾಯತರು ಎಂಬುವುದು ನಿಜ. ಅವರಿಗೆ ಕೆಲವು ಮಠಗಳ ಆಶರ್ಿವಾದವಿತ್ತು.


ಆದರೆ, ಅವರದು ನಿಜದಲ್ಲಿ ಲಿಂಗಾಯತ ಸಕರ್ಾರವಾಗಿರಲಿಲ್ಲ. ಏಕೆಂದರೆ, ಅವರ ಸಕರ್ಾರದ ಸೂತ್ರಗಳೆಲ್ಲ ಬೆಂಗಳೂರಿನ ಕಾಣದ ಕೈಗಳ ವಶದಲ್ಲಿದ್ದವು. ಆ ಕಾಣದ ಕೈಗಳು ವೈದಿಕರ ಕಪಿಮುಷ್ಠಿಯಲ್ಲಿದ್ದವು. ಈ ಸಂಗತಿಗಳೆಲ್ಲ ರಹಸ್ಯವಾಗೇನು ಉಳಿದಿಲ್ಲ.


ಡಾ.ಎಂ.ಎಂ ಕಲ್ಬುಗರ್ಿಯವರು ಹೇಳಿರುವಂತೆ ಅವರ ಮುಖ್ಯಮಂತ್ರಿ ಅವಧಿಯಲ್ಲಿ ಎರಡು ವಿಧಾನಸೌಧಗಳು ಕೆಲಸ ಮಾಡುತ್ತಿದ್ದವು. ಒಂದು ಅಧಿಕೃತ ವಿಧಾನಸೌಧವಾದರೆ, ಮತ್ತೊಂದು ಕಾಣದ ಕೈಯಲ್ಲಿದ್ದ ವಿಧಾನಸೌಧ. ಮೊದಲನೆಯದಕ್ಕಿಂತ ಎರಡನೇಯದು ಪ್ರಬಲವಾಗಿತ್ತು. ಗದುಗಿನ ಶ್ರೀಗಳು ಹೇಳಿದಂತೆ ಅದು ಅವೈದಿಕರ ಸಕರ್ಾರವಾಗಿರದೇ ಬ್ರಾಹ್ಮಣರ ಸಕರ್ಾರವಾಗಿತ್ತು. ಈಗ ನಮ್ಮ ನಾಡಿನ ಅವೈದಿಕರು ಬುದ್ದಿಕಲಿಯಬೇಕಾಗಿದೆ. ಮಾತುಮಾತಿಗೆ ವೈದಿಕ ಆಚರಣೆಗಳಿಗೆ ಶರಣಾಗುತ್ತಿದ್ದ ಅಥವಾ ಶರಣಾಗುತ್ತಿರುವ ಮತ್ತು ದಿನ ಬೆಳಗಾದರೆ, ಆಗಮೋತ್ತರ ದೇವಾಲಯಗಳಿಗೆ ಭೇಟಿ ಕೊಡುತ್ತಿರುವ ಕುಂಕುಮಧಾರಿ ಯಡಿಯೂರಪ್ಪ ಅವರು ಹುಟ್ಟಿನಿಂದ ಕೇವಲ ಅವೈದಿಕರು.


ಜ್ಞಾನ ಮತ್ತು ಕ್ರಿಯೆ ಎರಡರಲ್ಲಿಯೂ ವೈದಿಕರು. ಇಂತಹ ಮುಖ್ಯಮಂತ್ರಿ ಅಧಿಕಾರ ಕಳೆದುಕೊಂಡಿದ್ದಾರೆ. ಇದು ಅವೈದಿಕರಿಗೆ ನೆಮ್ಮದಿಯ ಸಂಗತಿಯಾಗಬೇಕು. ರಾಜ್ಯವನ್ನು ಪಾರಮಾಥರ್ಿಕರಣದ ಕಪಿಮುಷ್ಠಿಯಿಂದ ಬಿಡುಗಡೆಗೊಳಿಸುವ ಬಗ್ಗೆ ಈಗ ಯೋಚಿಸಬಹುದು.


ಅತ್ಯಂತ ವಿಷಾದದ ಸಂಗತಿಯೆಂದರೆ ನಮ್ಮ ಕೆಲವು ಪ್ರಮುಖ ಅವೈದಿಕ ಮಠಗಳು ಅಂತಹ ಮುಖ್ಯಮಂತ್ರಿಯ ಬೆಂಬಲಕ್ಕೆ ಮತ್ತು ಅವರು ಗದ್ದುಗೆ ಅಲುಗಾಡಿದಾಗಲೆಲ್ಲ ಅವರ ಸಮರ್ಥನೆಗೆ ನಿಂತಿದ್ದವು. ಅದು ಋಣ ಪರಿಹಾರದಂತೆ ಕಾಣುತ್ತಿತ್ತೇ ವಿನಾ ಸಾತ್ವಿಕತೆಯ ಮಾರ್ಗದರ್ಶನದಂತೆ ಕಾಣುತ್ತಿರಲಿಲ್ಲ. ಈ ಬಗೆಯ ಮಠಗಳು ಸಕರ್ಾರದ ಹಂಗಿಗೆ ಬಿದ್ದಂತೆ ನಡೆದುಕೊಳ್ಳುತ್ತಿದ್ದವು. ಅವು ತಮ್ಮ ಹಕ್ಕಿನ ಅಸ್ತಿತ್ವವನ್ನು ಮರೆತಂತೆ ಕಾಣುತ್ತಿತ್ತು.


ಅವೆಲ್ಲ ಬಸವಣ್ಣನ ಭೋದನೆಗೆ ವಿರುದ್ಧವಾಗಿದ್ದವು ಎಂಬುದು ಮುಖ್ಯಮಂತ್ರಿಯವರಿಗಾಗಲಿ ಅಥವಾ ಮಾರ್ಗದರ್ಶನ ನೀಡುತ್ತಿದ್ದ ಮಠಾಧೀಶರುಗಳಿಗಾಗಲಿ ಅರ್ಥವಾಗದೆ ಇದ್ದುದು ಆಶ್ಚರ್ಯದ ಸಂಗತಿ. ಅಧಿಕಾರಕ್ಕೆ ಜನರು ಮುಗಿಬಿದ್ದರೆ ಅದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ, ಮಠಗಳು ಮತ್ತು ಮಠಾಧೀಶರು ಅಂತಹ ಆಮಿಷಗಳಿಗೆ ಬಲಿಯಾದರೆ ಯಾರನ್ನು ದೂರುವುದು?


ಈಗ ಯಡಿಯೂರಪ್ಪ ಅವರು ಇನ್ನು ಪೂಣರ್ಾವಧಿ ದೇವಾಲಯಗಳನ್ನು ಸುತ್ತು ಹಾಕುವುದು, ನದಿಗಳಲ್ಲಿ ಮುಳುಗೇಳಬಹುದು, ಯಜ್ಞ-ಯಾಗ ನಡೆಸಬಹುದು. ದಾನ-ದತ್ತಿ ನೀಡಬಹುದು. ಹರಕೆ ಕಟ್ಟಿಕೊಳ್ಳಬಹುದು. ಆ ಕೆಲಸವನ್ನು ಅವರು ಈಗಾಗಲೇ ಶುರು ಮಾಡಿಕೊಂಡಿರುವಂತೆ ಕಾಣುತ್ತದೆ. ಆದರೆ, ಇವುಗಳ ಬಗ್ಗೆ ಬಸವಣ್ಣ ಏನು ಹೇಳಿದ್ದಾನೆ ಎಂಬುದರ ಬಗ್ಗೆ ಅವರಿಗೆ ಪರಿವೆಯೇ ಇದ್ದಂತೆ ಕಾಣುತ್ತಿಲ್ಲ. ಬಸವಣ್ಣ ಹೇಳುತ್ತಾನೆ :


ಹರಸಿ ಮಾಡುವುದು ಹರಕೆಯ ದಂಡ


ನೆರಹಿ ಮಾಡುವುದು ಡಂಬಿನ ಭಕ್ತಿ


ಹರಸ ಬೇಡ, ನೆರಹ ಬೇಡ


ಬಂದ ಬರವನರಿದಡೆ ಕೂಡಿಕೊಂಡಿಪ್ಪ


ನಮ್ಮ ಕೂಡಲಸಂಗಮದೇವ.


ಯಡಿಯೂರಪ್ಪ ಅವರು ಬಂದ ಬರವನರಿಯದೆ ದೇವಾಲಯಗಳಿಗೆ ಎಡತಾಕಿದರು. ಹರಕೆ ಹೊತ್ತರು. ಆರಾಧನೆ ನಡೆಸಿದರು. ಆದರೆ, ಇದಕ್ಕೆ ವಚನ ಸಂವಿಧಾನದ ಮಾರ್ಗದರ್ಶನವು ಬೇರೆಯೇ ಇದೆ.


ಗದ್ದುಗೆಯನ್ನು ಕಳೆದುಕೊಂಡ ಮುಖ್ಯಮಂತ್ರಿಗಳಿಗೆ ಜನರಿಗಿಂತ ಮತ್ತು ಮತದಾರರಗಿಂತ ದೇವರ ಮೇಲೆ ನಂಬಿಕೆ ಅಧಿಕವಾಗಿರುವಂತೆ ಕಾಣುತ್ತದೆ.


ಅದು ಸರಿಯಿಲ್ಲವೆಂದು ಕನರ್ಾಟಕದ ಸಂತರು ಬಹಳ ಹಿಂದೆಯೇ ಎಚ್ಚರಿಸಿದ್ದರು.


ಚರಿತ್ರೆಯಿಂದ ಪಾಠ ಕಲಿಯಲಿಲ್ಲ ಎಂಬುದಕ್ಕೆ ಯಡಿಯೂರಪ್ಪ ನಿದರ್ಶನವಾಗಿದ್ದಾರೆ. ಈ ಬಗ್ಗೆ ಲದ್ದೆಯ ಸೋಮಣ್ಣಗಳು ಹೇಳುವ ಮಾತುಗಳು ನಮ್ಮ ಕಣ್ಣು ತೆರೆಸುತ್ತವೆ. ಅವನ ಅದ್ಬುತ ಈ ವಚನ ಹೀಗಿವೆ.


ಅವ ಕಾಯಕವಾದಡು ಸ್ವಕಾಯಕವ ಮಾಡು


ಗುರುಲಿಂಗ ಜಂಗಮವ ಮುಂದಿಟ್ಟು


ಬಂದುದು ಹಾರೈಸಿ, ಮಿಕ್ಕುದ ಕೈಗೊಂಡು ವ್ಯಾಧಿ


ಬಂದಡೆ ನೆರಳು, ಬೇನೆ ಬಂದೆಡೆ


ಒರಲು


ಜೀವ ಹೋದಡೆ ನಾಯಿ, ಇದಕ್ಕಾ ದೇವರ ಹಂಗ್ಯಾಕೆ?


ಬಾವು ಲದ್ದೆಯ ಸೋಮ


ಆದರೆ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಸ್ವಕಾಯಕ ಮಾಡುವದನ್ನು ಬಿಟ್ಟು ದೇವರ ಹಂಗಿಗೆ ಬಿದ್ದುಬಿಟ್ಟರು. ದೇವಾಲಯಗಳಲ್ಲಿ ಪೂಜೆ, ಆರಾಧನೆ, ಯಜ್ಞ, ಯಾಗಾಧಿ ಮಾಡುತ್ತಿರುವದರಿಂದ ರಾಜ್ಯದಲ್ಲಿ ಮಳೆ ಬೆಳೆಯಾಗುತ್ತಿದೆ ಎಂದು ಹೇಳುವ ಮೂಲಕ ಮೌಡ್ಯ ಮೆರೆದರು.


ಇಂತಹ ಮೌಡ್ಯ ಸಂದೇಶಗಳನ್ನು ಕೇಳುವ ಸ್ಥಿತಿ 21ನೇ ಶತಮಾನದ ನಮ್ಮ ಮಕ್ಕಳಿಗೆ ಬಂದದ್ದು ಮಾತ್ರ ದೌಭರ್ಾಗ್ಯ.


ಆದರೆ, ಇಂತಹ ಸಂದೇಶವನ್ನು ಕೇಳುವ ಸಂಗತಿ ಈಗ ಕೊನೆಗೊಂಡಿದೆ.


ಯಡಿಯೂರಪ್ಪ ಅವರು ಎಲ್ಲಿಯವರೆಗೆ ಕುರುಡು ಸಂಪ್ರದಾಯವನ್ನು ಮೆರೆದರು ಎಂದರೆ, ತಮ್ಮ ಪ್ರಾಮಾಣಿಕತೆಯನ್ನು ದೇವರ ಮುಂದೆ ಆಣಿಪ್ರಮಾದದ ಮೂಲಕ ಸಾಧಿಸುವ ಕುರುಡು ಸಂಪ್ರದಾಯದ ಆಚರಣಿಗೆ ಶರಣು ಹೋದರು. ರಾಜಕೀಯ ಅಪ್ರಭುದ್ದತೆಯನ್ನು ಮರೆದರು.


ದಕ್ಷ ಆಡಳಿತಕ್ಕೆ ವೀರೆಂದ್ರಪಾಟೀಲ್, ಭೂಸುಧಾರಣೆಗೆ ದೇವರಾಜ್ ಅರಸು ಮತ್ತು ಕನರ್ಾಟಕದ ನಮರ್ಾತೃ ಎಂಬ ಕೀತರ್ಿಗೆ ಎಸ್.ನಜಲಿಂಗಪ್ಪ ಭಾಜನಾಗಿದ್ದರು. ಯಡಿಯೂರಪ್ಪನವರು ಯಾವುದಕ್ಕೆ ಬಾದ್ಯಸ್ಥರಾಗಿದ್ದಾರೆ? ಇದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಅದಕ್ಕೆ ಲೋಕಾಯುಕ್ತರ ಬೃಹತ್ ವರದಿ ನಮ್ಮ ಮುಂದಿದೆ.


ಯಡಿಯೂರಪ್ಪರವರು ತಮ್ಮ ಅಧಿಕಾರವಧಿಯಲ್ಲಿ ಕೈಗೊಂಡ ಬಹುತೇಕ ಕಾರ್ಯಕ್ರಮಗಳು ಜನತಂತ್ರ ಮೌಲ್ಯಗಳಿಗೆ ದೂರವಾಗಿದ್ದವು. ಬಸವ ತತ್ವಕ್ಕೆ ವಿರುದ್ಧವಾಗಿದ್ದವು.


ತಾತ್ಕಾಲಿಕ ಅನುಕೂಲಗಳಿಗೆ ಬಲಿಯಾಗಿ ವೈದಿಕ ತತ್ವ, ಸಿದ್ದಾಂತಗಳಿಗೆ ಮಣಿ ಹಾಕಿದ ನಮ್ಮ ಅವೈದಿಕ ಶಾಸಕರು ಇನ್ನಾದರೂ ಕಣ್ಣು ತೆರೆಯಬೇಕು. ನೂರಾರು ವರ್ಷಗಳಿಂದ ವೈದಿಕ ಶೆಡ್ಡು ಹೊಡೆದು ನಂತಿದ್ದ ಕನರ್ಾಟಕದ ಅವೈದಿಕ ಸಂಸ್ಕೃತಿಯ ಮಹತ್ವವನ್ನು ಅವರು ಅರಿತಿಕೊಳ್ಳಬೇಕು.


ನಮ್ಮ ರಾಜ್ಯದ ಭೌತಿಕ ಸಂಪತ್ತಾದ ವಚನಸಂವಿಧಾನದ ಪ್ರತಿಪಾದಿಸಿದ ಮೌಲ್ಯಗಳನ್ನು ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದೆ. ಅಲ್ಲಿಗೆ ಸಮಾನತೆಯ ಪರಮೋಚ್ಛ ಸ್ಥಾನ ನಡಲಾಗಿದೆ. ಅಂತಹ ಘನವಾದ ಸಿದ್ದಾಂತವನ್ನು ಗಾಳಿಗೆ ತೂರಲಾಗಿದೆ.


ಅವೈದಿಕ ನಂಬಿಕೆಗಳಿಗೆ ನಮ್ಮ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರು ನಡೆಯ ತೊಡಗಿದಾಗಲೆಲ್ಲ ಅವರನ್ನು ಎಚ್ಚರಿಸಬೇಕಾದ ನಮ್ಮ ಅವೈದಿಕ ಶಾಸಕರು, ಮಠಗಳು ಹಾಗೂ ಮಠಾಧೀಶರು ವೈದಿಕತೆಗೆ ಶರಣು ಹೋಗಿದ್ದು ನಮ್ಮ ಕಾಲದ ದೊಡ್ಡ ದುರಂತ.




ಡಾ.ಟಿ.ಆರ್ ಚಂದ್ರಶೇಖರ, ಪ್ರಾಧ್ಯಾಪಕರು ಅಭಿವೃದ್ಧಿ ವಿಭಾಗ ಹಂಪಿ.

ಹುಚ್ಚು ಮನಸ್ಸೇ.. ನೀ ಹೀಂಗ್ಯಾಕೆ..?

ಹುಚ್ಚು ಮನಸ್ಸೇ.. ನೀ ಹೀಂಗ್ಯಾಕೆ..?




ಅಂದು ಸಾಯಂಕಾಲ ನಾ ಆಫೀಸಿನಿಂದ ಮನೆಗೆ ಬರುವಷ್ಟರಲ್ಲಿ ರಾತ್ರಿ 8 ಗಂಟೆಯಾಗಿತ್ತು. ಮನೆಗೆ ಬರುತ್ತಲೇ, ನನ್ನ ಶ್ರೀಮತಿ ಪ್ರಣೀತಾ, ರೀ, ಈ ವೆಡ್ಡಿಂಗ್ ಕಾಡರ್್ ನೋಡಿರಿ. ಎಂದು ಹೇಳುವಷ್ಟರಲ್ಲಿ, ಯಾರದು ಎಂದು ನೀನೇ ಹೇಳಿ ಬಿಡೇ? ಎಂದೆ ನಾ. ಏಕೆಂದರೆ, ಮದುವೆ ಸೀಜನ್ನಲ್ಲಿ ಕೆಲವೊಂದು ದಿನ ಎಂಟು, ಹತ್ತು ಮದುವೆ ಆಮಂತ್ರಣ ಪತ್ರಿಕೆಗಳು ಬರುತ್ತಿವೆ. ಅದೇನೋ ಗೊತ್ತಿಲ್ಲ, ಇತ್ತೀಚಿನ ವರ್ಷಗಳಲ್ಲಿ ಒಂದೇ ದಿನದ ಮುಹೂರ್ತದಲ್ಲಿ ಬಹಳಷ್ಟು ಜನ ಸಂಬಂಧಿಕರ ಮದುವೆಗಳು ಇರುವುದರಿಂದ ಯಾರ ಮದುವೆಗೆ ಹೋಗುವುದು, ಯಾರ ಮದುವೆಗೆ ಬಿಡುವುದು ಎಂಬ ಕನ್ಫ್ಯೂಜನ್ನಲ್ಲಿ ಇರುತ್ತೇವೆ ಗಂಡ-ಹೆಂಡತಿಯರಿಬ್ಬರೂ. ಒಂದೇ ದಿನ ಮುಹೂರ್ತ ಫಿಕ್ಸ್ ಮಾಡಿದ ಪುರೋಹಿತರಿಗೆ ಹಿಡಿ ಶಾಪ ಹಾಕುತ್ತೇನೆ ನಾನಂತೂ. ಈ ಗಳಿಗೆಯೇ ಶುಭ ಗಳಿಗೆ ಎಮ್ಮವರು ಬೆಸಗೊಂಡರೆ ಶುಭ ಲಗ್ನವೆನ್ನಿರಯ್ಯಾ ಎಂಬ ಶರಣರ ಮಾತುಗಳು ಯಾರಿಗೂ ಬೇಕಿಲ್ಲ ಅಲ್ಲವೇ?


ಅದೇ..ರ್ರಿ, ಊರಲ್ಲಿ ಅಮ್ಮನ ಮನೆಯ ಹತ್ತಿರ, ಅಮ್ಮನ ಮನೆಯ ಸಾಲಿನಲ್ಲಿ ಎಡಗಡೆಗೆ ಮೂರನೆಯ ಮನೆಯಲ್ಲಿ ಬಾಡಿಗೆಗೆ ಇರುವ ಟೀಚರ್ ಮೇಡಂ ರಚನಾಳ ನೆನಪು ನಿಮಗಿರಬೇಕಲ್ಲವೇ? ಆ ಹುಡುಗಿಯು ಗುಂಡ ಗುಂಡಗೆ ಚೆಂದ ಇರುವಳಲ್ಲವೇ? ಆ ಹುಡುಗಿಯ ಅಮ್ಮ ಸಾವಿತ್ರಮ್ಮ ಮೇಲಿಂದ ಮೇಲೆ ನಮ್ಮ ಮನೆಗೆ ಬಂದು, ಅಮ್ಮನ ಜೊತೆ ಮಾತಾಡುತ್ತಿದ್ದುದನ್ನು ನೀವು ಕಂಡಿರಬೇಕು. ನಾನೂ ಊರಿಗೆ ಹೋದಾಗ ನನ್ನ ಜೊತೆನೂ ಬಹಳಷ್ಟು ಸಲ ಮಾತಾಡುತ್ತಿದ್ದುದು ನಿಮಗೆ ನೆನಪಿರಬೇಕು ಅಲ್ಲವೇ?


ಪ್ರಣೀತಾಳ ಮಾತನ್ನು ಅರ್ಧಕ್ಕೇ ತಡೆದು, ಆಯಿತು ಕಣೇ, ನೀನು ಮೊದಲು ವಿಷಯ ಹೇಳು. ಪೀಠಿಕೆನೇ ಜಾಸ್ತಿಯಾಯ್ತು. ಎಂದೆ. ನಾ ಮುಖ ತೊಳೆಯಲು ಹೋಗಬೇಕಾಗಿದ್ದುದರಿಂದ ಅವಸರ ಮಾಡಿದೆ.


ಅದೇ ಟೀಚರ್ ಮೇಡಮ್ದೇ ಮದುವೆ. ಹುಡುಗ ಕಾಲೇಜ್ ಲೆಕ್ಚೆರರ್ ಅಂತೆ. ಎರಡು ದಿನಗಳ ಹಿಂದೆ ಸಾವಿತ್ರಮ್ಮನವರು ಫೋನು ಮಾಡಿ, ನನ್ನ ಜೊತೆ ಮಾತಾಡಿ, ನಮ್ಮ ಮನೆ ಅಡ್ರೆಸ್ ಪಡೆದುಕೊಂಡು ಮನೆ ಅಡ್ರೆಸ್ಸಿಗೇ ಆಮಂತ್ರಣ ಪತ್ರಿಕೆ ಕಳುಹಿಸಿದ್ದಾರೆ. ಫೋನಿನಲ್ಲಿಯೂ ಮದುವೆಗೆ ಬರಬೇಕೆಂದು ಬಹಳ ಒತ್ತಾಯಿಸಿದ್ದಾರೆ. ಇಂದು ಗುರುವಾರ, ಬರುವ ಗುರುವಾರ ಮದುವೆಯೆಂತೆ. ನಾ ಸೋಮವಾರದ ದಿನ ಊರಿಗೆ ಹೋಗಿ, ಎರಡು ದಿನ ಊರಲ್ಲಿ ಇದ್ದು ಮದುವೆ ಮುಗಿಸಿಕೊಂಡು ಬರುವೆ. ಹೇಗೂ ಊರಿಗೆ ಹೋಗದೇ ಬಹಳ ದಿನಗಳಾದವಲ್ಲ? ಎಂದು ತಾ ಊರಿಗೆ ಹೋಗುವ ತವಕ ವ್ಯಕ್ತ ಪಡಿಸಿದಳು.


ಆಯಿತು ಕಣೇ, ಮದುವೆ ಇನ್ನೂ ದೂರ ಇದೆಯಲ್ಲ? ಅವಸರವೇಕೆ? ಎಂದೆ.


ಆಫೀಸಿನ ಕೆಲಸದ ಒತ್ತಡದಲ್ಲಿ ಶನಿವಾರ ಬಂದುದೇ ಗೊತ್ತಾಗಲಿಲ್ಲ. ಶನಿವಾರ ಆಫೀಸಿಗೆ ಹಾಫ್ ಡೇ ಇದ್ದರೂ, ಮನೆಗೆ ಬರುವಷ್ಟರಲ್ಲಿ ಕಡಿಮೆಯೆಂದರೂ ಆರು ಗಂಟೆಯಾಗುತ್ತಿತ್ತು. ನನ್ನ ಕೆಲಸದ ಪರಿ ನೋಡಿ, ನನ್ನ ಶ್ರೀಮತಿ ಆಗಾಗ, ಜಗತ್ತಿನಲ್ಲಿ ಯಾವ ಆಫೀಸಿನಲ್ಲಿಯೂ ನಿಮ್ಮ ಆಫೀಸಿನಂಥಹ ಕೆಲಸವಿರಲಿಕ್ಕಿಲ್ಲ. ಹೊತ್ತೂ ಇಲ್ಲ, ಗೊತ್ತೂ ಇಲ್ಲ ನಿಮ್ಮ ಆಫೀಸಿನ ಕೆಲಸಕ್ಕೆ. ಮನೆಯ ಪ್ರತಿಯೊಂದೂ ಕೆಲಸ ನಾನೇ ಮಾಡಿಕೊಳ್ಳಬೇಕು. ಕಿರಾಣಿ ಸಾಮಾನು ನಾನೇ ತರಬೇಕು, ಹಣ್ಣು, ತರಕಾರಿ ನಾನೇ ತರಬೇಕು ಎಂದು ಗೊಣಗುತ್ತಿದ್ದಳು. ಏಕೆಂದರೆ ಮಕ್ಕಳು ಬೇರೆ ಬೇರೆ ಕಡೆಗೆ ಓದುತ್ತಿದ್ದುದರಿಂದ ಮನೆಯಲ್ಲಿ ಇರುವುದು ನಾವಿಬ್ಬರೇ. ಇಂದೂ ಸಹ ಬಹಳ ಲೇಟಾಗಿರುವುದರಿಂದ ಏನು ಪ್ರತಿಕ್ರಿಯೆ ಬರುವುದೋ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ, ಮನೆಯಲ್ಲಿ ಹೆಜ್ಜೆ ಹಾಕಿದ್ದೆ. ಶ್ರೀಮತಿಯವರ ಸುಂದರ ವದನ ದುಗುಡದಿಂದ ಕೂಡಿದ ಹಾಗೆ ಕಾಣುತ್ತಿತ್ತು. ಮನದಲ್ಲಿ ಚಿಂತೆಯ ಕಾಮರ್ೋಡಗಳು ತುಂಬಿದ್ದವು ಎಂದೆನಿಸುತ್ತಿತ್ತು.


ರೀ, ಊರಿಂದ ಅಮ್ಮ ಫೋನು ಮಾಡಿದ್ದಳು. ಆ ರಚನಾ ಟೀಚರ್ ಮದುವೆ ನಿನ್ನೆ ಆಯಿತಂತೆ. ಊರಿಗೆ ಬರುವ ಅವಶ್ಯಕತೆ ಇಲ್ಲವೆಂದು ಹೇಳಿದಳು.


ನನಗೊಂದೂ ಅರ್ಥವಾಗಲಿಲ್ಲ. ಏಕೆಂದರೆ, ಬರುವ ಗುರುವಾರ ಆ ಹುಡುಗಿಯ ಮದುವೆ ಇದೆಯೆಂದು ಮೊನ್ನೆ ತಾನೇ ಹೇಳಿದ್ದಳು. ಈಗ ನೋಡಿದರೆ, ಆಗಲೇ ನಿನ್ನೇನೇ ಮದುವೆ ಆಯಿತು ಎಂದು ಹೇಳುತ್ತಿದ್ದಾಳೆ. ಟೋಟಲೀ ಕನ್ಫ್ಯೂಜ್ ಆಯಿತು. ಸ್ವಲ್ಪ ವಿವರಿಸಿಯಾದರೂ ಹೇಳೇ ಎಂದೆ.


ರಚನಾಳ ಮನೆಗೆ ಮೇಲಿಂದ ಮೇಲೆ ಬರುತ್ತಿದ್ದ ಆಕೆಯ ಸೋದರತ್ತೆಯ ಮಗನನ್ನು ನೀವೂ ನೋಡಿರಬಹುದು. ಅವನದೂ ನಮ್ಮ ಊರೇ. ನಾನೂ ಸಹ ಊರಿಗೆ ಹೋದಾಗ ಆ ಹುಡುಗನನ್ನು ರಚನಾಳ ಮನೆಯಲ್ಲಿ ಬಹಳಷ್ಟು ಸಾರೆ ನೋಡಿದ್ದೇನೆ. ಅದೇ ಹುಡುಗನನ್ನು ರಚನಾ ಮದುವೆಯಾಗಿರುವಳಂತೆ.


ಆ ಹುಡುಗಗೆ ಮದುವೆಯಾಗಿ ಮಕ್ಕಳೂ ಇವೆಯೆಂದು ಹೇಳುತ್ತಿದ್ದರಲ್ಲಾ? ಹೌದು ತಾನೆ? ನಾ ಕುತೂಹಲದಿಂದ ಅರ್ಧದಲ್ಲೇ ಅವಳ ಮಾತು ತಡೆದು ಕೇಳಿದೆ.


ಹೌದುರೀ. ಆ ಹುಡುಗಗೆ ಈಗಾಗಲೇ ಮದುವೆಯಾಗಿ, ಎರಡು ಮಕ್ಕಳೂ ಇವೆಯೆಂತೆ. ಅವನಿಗೂ ರಚನಾಗೂ ಸುಮಾರು 10ವರ್ಷಗಳ ಅಂತರವಿರಬಹುದು. ಅವರಿಬ್ಬರ ಮದುವೆ ನಿನ್ನೆ ಆಯಿತಂತೆ. ಯಾವುದೋ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡು ಬಂದು, ತನ್ನ ತಂದೆ-ತಾಯಿಗಳಿಗೆ ಆಶ್ಚರ್ಯದ ಜೊತೆಗೆ ಶಾಕ್ನ್ನೂ ನೀಡಿರುವಳಂತೆ ರಚನಾ. ಸಾವಿತ್ರಮ್ಮನವರು ಮಾನಸಿಕವಾಗಿ ಬಹಳ ಜಜರ್ಿರಿತರಾಗಿರುವರೆಂದು ಅಮ್ಮ ಫೋನಿನಲ್ಲಿ ಹೇಳುತ್ತಿದ್ದಳು. ಎಂದಳು ನನ್ನ ಶ್ರೀಮತಿ ಪ್ರಣೀತಾ.


ಅಮ್ಮಾ ತಾಯಿ, ಸ್ವಲ್ಪ ವಿವರಿಸಿ ಹೇಳ್ತೀಯಾ? ಎಂದು ನಾ ಉತ್ಸುಕತೆ, ಕುತೂಹಲ ತೋರಿಸಿದಾಗ, ನನ್ನ ಶ್ರೀಮತಿ ಪ್ರಣೀತಾ ಶುರು ಮಾಡಿದಳು.


ರಚನಾ ಶಾಲಾ ಶಿಕ್ಷಕಿಯಾಗಬೇಕೆಂಬ ಉದ್ದೇಶದಿಂದಲೇ, ಪಿ.ಯು.ಸಿ. ಮುಗಿದ ತಕ್ಷಣ ಡಿ.ಎಡ್. ಮಾಡಿಕೊಂಡಿದ್ದಳು. ತಂದೆ-ತಾಯಿಯಂದಿರು ಡಿಗ್ರಿ ಮಾಡಿಕೊಂಡು ಬಿ.ಎಡ್. ಮಾಡಿಕೋ ಎಂದು ಒತ್ತಾಯಿಸಿದರೂ ಆಕೆ ಕೇಳಿರಲಿಲ್ಲ. ರಚನಾ ಡಿ.ಎಡ್. ಮಾಡಿ ವರ್ಷವಾದರೂ, ಸರಕಾರ ಶಾಲಾ ಶಿಕ್ಷಕರ ಹುದ್ದೆಗಳನ್ನು ಭತರ್ಿ ಮಾಡಲು ಆದೇಶ ಹೊರಡಿಸದಿದ್ದುದರಿಂದ, ಮುಂದಿನ ವರ್ಷ ಆಕೆ ಬಿ.ಎ.ಗೆ ಸೇರಿಕೊಂಡಳು. ಆಕೆಯ ಬಿ.ಎ. ಮುಗಿಯುವ ವರ್ಷ ಸರಕಾರ ಶಿಕ್ಷಕರ ನೇಮಕಾತಿ ಕೈಗೊಂಡುದದರಿಂದ ರಚನಾಗೆ ನಮ್ಮ ಊರಿಂದ ಹದಿನೈದು ಕಿ.ಮೀ. ದೂರದ ಹಳ್ಳಿಯೊಂದರ ಮಾಧ್ಯಮಿಕ ಶಾಲೆಗೆ ಶಿಕ್ಷಕಿಯೆಂದು ಆದೇಶ ಸಿಕ್ಕಿತು.


ಬಾಗಲುಕೋಟೆ ಜಿಲ್ಲೆಯ ರಚನಾಳಿಗೆ ಈಗ ಪೋಸ್ಟಿಂಗ್ ಆಗಿರುವ ಹಳ್ಳಿ ಅರಿಯದ ಊರು. ಇದುವರೆಗೂ ತಂದೆ-ತಾಯಿಗಳು ಹಾಗು ತಂಗಿ ಅಮೃತಾಳ ಜೊತೆ ಬೆಳೆದವಳು. ರಚನಾಳ ತಂದೆಗೆ ಇದೇ ವರ್ಷ ಉದ್ಯೋಗದಲ್ಲಿ ಬಡ್ತಿ ಸಿಕ್ಕು, ಪಕ್ಕದ ಗದಗ ಜಿಲ್ಲೆಯ ತಾಲೂಕೊಂದಕ್ಕೆ ಲೆಕ್ಚೆರರ್ ಅಂತ ವರ್ಗ ಆಯಿತು. ಈಗ ಪೋಸ್ಟಿಂಗ್ ಆಗಿರುವ ಹಳ್ಳಿಯ ಶಾಲೆಯ ಶಿಕ್ಷಕಿಯಾಗಿ ಕರ್ತವ್ಯಕ್ಕೆ ಹಾಜರಾಗಲು ರಚನಾಳಿಗೆ ಇನ್ನೂ ಒಂದು ವಾರ ಅವಧಿ ಇತ್ತು. ಆಗ ಅವರಿಗೆಲ್ಲಾ ಹೊಳೆದಿದ್ದು ನಮ್ಮ ಊರಿನಲ್ಲಿದ್ದ ರಚನಾಳ ಸೋದರತ್ತೆಯ ಮನೆಯ ಬಗ್ಗೆ. ಅವರಿಗೆ ಒಬ್ಬನೇ ಮಗ ಮಹೇಶ ಅಂತ. ನಮ್ಮ ಊರಿನಲ್ಲಿ ಮನೆ ಮಾಡಿ, ಅಲ್ಲಿಂದ ಶಾಲೆಯ ಹಳ್ಳಿಗೆ ಬಸ್ಸಿನಲ್ಲಿ ಅಡ್ಡಾಡುವುದೆಂದು ತಮ್ಮಲ್ಲೇ ಚಚರ್ಿಸಿ ತೀಮರ್ಾನಿಸಿಕೊಂಡು, ಮಹೇಶನಿಗೆ ಫೋನಾಯಿಸಿ, ರಚನಾಳಿಗೆ ಉದ್ಯೋಗ ಸಿಕ್ಕಿರುವ ಬಗ್ಗೆ ತಿಳಿಸಿ, ಅವಳಿಗಾಗಿ ಎರಡು ರೂಮಿನ ಚಿಕ್ಕ ಮನೆಯೊಂದನ್ನು ಹುಡುಕಲು ಹೇಳಿದ್ದರು. ಕುಟುಂಬದವರೆಲ್ಲಾ ಒಂದು ದಿನ ನಮ್ಮೂರಿಗೆ ಬಂದು ಮಹೇಶ್ ನೋಡಿಟ್ಟಿರುವ ಮನೆಗಳಲ್ಲಿ ಒಂದು ಮನೆಯನ್ನು ಫೈನಲ್ ಮಾಡಿಕೊಂಡು ಹಾಗೇ ರಚನಾಳ ಶಾಲೆಯ ಊರಿಗೆ ಹೋಗಿ ನೋಡಿಕೊಂಡು ಬಂದರು. ಚಿಕ್ಕ ಮಗಳು ಅಮೃತಾಳೊಂದಿಗೆ ತಂದೆ, ರಚನಾಳೊಂದಿಗೆ ತಾಯಿ ಇರುವುದೆಂದು ಅವರ ಕುಟುಂಬದಲ್ಲಿ ತೀಮರ್ಾನ ಮಾಡಿಕೊಂಡಿದ್ದರು.


ರಚನಾಳ ಶಾಲೆಯ ಊರು ರಾಜ್ಯ ಹೆದ್ದಾರಿಯಲ್ಲಿ ಇದ್ದುದರಿಂದ ಕೆಲವೊಂದಿಷ್ಟು ಬಸ್ಸುಗಳು ಅಲ್ಲಿ ನಿಲ್ಲುತ್ತಿದ್ದವು. ಬೆಳಿಗ್ಗೆ 9 ಗಂಟೆಯ ಬಸ್ಸಿಗೆ ಹೋದರೆ, ಒಂಭತ್ತುವರೆಗೆ ಅಲ್ಲಿಗೆ ಹೋಗಬಹುದಿತ್ತು. 10ಗಂಟೆಗೆ ಶಾಲೆ ಆರಂಭವಾಗುತ್ತಿತ್ತು. ಸಾಯಂಕಾಲ ನಾಲ್ಕುವರೆಯಿಂದ ಐದುವರೆ ಒಳಗೆ ಆ ಗ್ರಾಮದಿಂದ ವಾಪಸ್ಸು ಬರಲು 4-5 ಬಸ್ಸುಗಳಿದ್ದವು. ಶಾಲೆ ಐದು ಗಂಟೆಗೆ ಮುಗಿಯುತ್ತಿತ್ತು. ರಚನಾಳಿಗೆ ಶಾಲೆಯಿಂದ ವಾಪಾಸು ಬರಲು ಬಸ್ಸಿನ ಅನುಕೂಲ ಚೆನ್ನಾಗಿತ್ತು.


ಶಾಲೆಗೆ ಕರ್ತವ್ಯಕ್ಕೆ ಹಾಜರಾಗಬೇಕಿಂದಿದ್ದ ಹಿಂದಿನ ದಿನ ರಚನಾ ತನ್ನ ತಂದೆ-ತಾಯಿ ಹಾಗೂ ತಂಗಿಯೊಂದಿಗೆ ಲಗೇಜಿನ ಸಮೇತ ಬಂದಿಳಿದಿದ್ದಳು ನಮ್ಮ ಊರಿಗೆ. ಬರುವುದನ್ನು ಮೊದಲೇ ತಿಳಿಸಿದ್ದುದರಿಂದ ಮಹೇಶ್ ಬಸ್ನಿಲ್ದಾಣದಲ್ಲಿ ಹಾಜರಿದ್ದು ಅವರನ್ನು ಬರ ಮಾಡಿಕೊಂಡಿದ್ದ. ಲಗೇಜುಗಳ ಸಾಗಾಣಿಕೆ, ಮನೆಯಲ್ಲಿ ನೀರಿನ ವ್ಯವಸ್ಥೆ ಎಲ್ಲಾ ಮಾಡಿದ್ದ ಮಹೇಶ್.


ಮರು ದಿನದಿಂದ ರಚನಾ ತನ್ನ ಶಾಲೆಗೆ ಹೋಗಲು ಬೆಳಿಗ್ಗೆ 9 ಗಂಟೆಯ ಬಸ್ಸು ಹಿಡಿಯಬೇಕಾಗಿತ್ತು. 9 ಗಂಟೆಯ ಬಸ್ಸು ತಪ್ಪಿದರೆ ಪುನಃ ಬಸ್ಸಿರುವುದು 10ಕ್ಕೆ. ಶಾಲೆಯಲ್ಲಿ ಸರಿಯಾದ ವೇಳೆಗೆ ಇರಬೇಕೆಂದರೆ, ಒಂಬತ್ತು ಗಂಟೆಯ ಬಸ್ಸು ಹಿಡಿಯುವುದು ಅನಿವಾರ್ಯವಾಗಿತ್ತು ರಚನಾಳಿಗೆ. ಮನೆಯಿಂದ ಬಸ್ಟ್ಯಾಂಡಿಗೆ ಎಂಟ್ಹತ್ತು ನಿಮಿಷಗಳ ಹಾದಿ ಅಷ್ಟೆ. ಮೊದಲನೇ ದಿನ ರಚನಾ ಬಸ್ಟ್ಯಾಂಡಿಗೆ ಬರುವಷ್ಟರಲ್ಲಿ ಒಂಭತ್ತು ಗಂಟೆ ಐದು ನಿಮಿಷಗಳಾಗಿದ್ದವು. ಅವಸರವಸರವಾಗಿ ಸ್ವಲ್ಪ ಟಿಫಿನ್ ಮಾಡಿಕೊಂಡು, ಚಪಾತಿ, ಮೊಸರನ್ನ ಡಬ್ಬಿಗೆ ಹಾಕಿಕೊಂಡು ಬರುವಷ್ಟರಲ್ಲಿ ಬಸ್ಸು ಸ್ವಲ್ಪದರಲ್ಲಿ ಮಿಸ್ಸಾಗಿತ್ತು. ಮೊದಲನೇ ದಿನವೇ ಹೀಗಾದುದಕ್ಕೆ ರಚನಾಳಿಗೆ ಹಳಹಳಿಯಾಗಿತ್ತು. ಹತ್ತು ಗಂಟೆಯ ಬಸ್ಸೇ ಗತಿ ಎಂದು ಅಂದುಕೊಂಡಳು. ಲೇಟಾಗಿ ಹೋದರೆ, ಮುಖ್ಯ ಗುರುಗಳು ಏನನ್ನುವರೋ ಏನೋ ಎಂಬ ಅಳುಕು ಮನದಲ್ಲಿ. ಒಂದು ರೀತಿಯ ಆತಂಕ ಶುರುವಾಯಿತು ಅವಳಿಗೆ. ಮನಸ್ಸಿನಲ್ಲಿ ಒಂದು ರೀತಿಯ ಚಿಂತೆಗಿಟ್ಟುಕೊಂಡಿತು.


ಅಷ್ಟರಲ್ಲಿ ತನ್ನ ಸೈಕಲ್ ಮೋಟರಿನಲ್ಲಿ ಮಹೇಶ್ ಪ್ರತ್ಯಕ್ಷನಾಗಬೇಕೆ?. ಮೊದಲನೇ ದಿನ ನೀವು ಡ್ಯೂಟಿಗೆ ಹಾಜರಾಗುತ್ತಿರುವುದರಿಂದ ನಿಮಗೆ ವಿಷ್ ಮಾಡಬೇಕೆಂದು ಮನೆಯ ಹತ್ತಿರ ಬಂದೆ. ಆಗಲೇ ನೀವು ಹೋಗಿರುವುದಾಗಿ ತಿಳಿಯಿತು. ಬಸ್ಟ್ಯಾಂಡಿಗಂತೂ ಹೋಗೋಣ. ನೀವು ಸಿಕ್ಕರೆ ವಿಷ್ ಮಾಡಿದರಾಯಿತೆಂದುಕೊಂಡು ನೇರವಾಗಿ ಇಲ್ಲಿಗೇ ಬಂದೆ. ಹೋಗಿದ್ದರೆ ಫೋನು ಮಾಡಿ ವಿಷ್ ಮಾಡಿದರಾಯಿತೆಂದು ಅಂದು ಕೊಂಡಿದ್ದೆ. ಎನಿ ವೇ ನಿಮ್ಮ ಭೆಟ್ಟಿಯಾಯಿತು. ಬಸ್ಸು ಇನ್ನೂ ಬಂದಿಲ್ಲವೇ? ಆಗಲೇ ಹೊತ್ತಾಗಿದೆ. ಎಂದ ಮಹೇಶ್.


ಬಸ್ಸು ಮಿಸ್ಸಾದ ಬಗ್ಗೆ ಮಿಸ್ ರಚನಾ ಹೇಳುತ್ತಾ, ಶಾಲೆಗೆ ತಡವಾಗುತ್ತಿರುವುದಕ್ಕೆ ಕಳವಳ ವ್ಯಕ್ತ ಪಡಿಸತೊಡಗಿದಳು.


ಲೇಟಾಗುತ್ತಿರುವುದಕ್ಕೆ ಆತಂಕ ಪಡುವ ಅವಶ್ಯಕತೆ ಇಲ್ಲ. ನಿಮ್ಮ ಶಾಲೆ ಮುಖ್ಯ ಗುರುಗಳು ನನಗೆ ಚೆನ್ನಾಗಿ ಗೊತ್ತು. ಅವರಿಗೆ ಬೇಕಾದರೆ ನಾ ಹೇಳುತ್ತೇನೆ. ಎಂದ ಮಹೇಶ್.


ಬೇಡ, ಬೇಡ. ಅವರಿಗೇನೂ ಹೇಳುವುದು ಬೇಡ. ನನ್ನ ಉದ್ಯೋಗ ಪರ್ವದ ಮೊದಲನೆಯ ದಿನವೇ ತಡವಾಗಿ ಹೋಗುತ್ತಿರುವುದಕ್ಕೆ ನನ್ನ ಮನಃಸಾಕ್ಷಿ ಒಪ್ಪುತ್ತಿಲ್ಲ. ಎಂದು ಇನ್ನೇನೋ ಹೇಳಬೇಕೆನ್ನುತ್ತಿದ್ದಳು ರಚನಾ.


ಹಾಗಾದರೆ ನಿಮ್ಮದೇನೂ ಅಭ್ಯಂತರವಿಲ್ಲದಿದ್ದರೆ, ನನ್ನ ಬೈಕಿನಲ್ಲಿ ನಿಮ್ಮನ್ನು ಇಂದು ಶಾಲೆಗೆ ಕರೆದುಕೊಂಡು ಹೋಗಿ ತಲುಪಿಸುವೆ. ಹದಿನೈದು ನಿಮಿಷಗಳಲ್ಲಿ ನೀವು ಶಾಲೆಯಲ್ಲಿರುವ ಹಾಗೆ ನಾ ನೋಡಿಕೊಳ್ಳುವೆ. ನಿಮ್ಮ ಮನಃಸಾಕ್ಷಿಯಂತೆ ನೀವು ನಿಗದಿತ ವೇಳೆಗೆ ಕರ್ತವ್ಯಕ್ಕೆ ಹಾಜರಾಗಬಹುದು. ರಚನಾಳ ಮಾತುಗಳನ್ನು ಕಟ್ ಮಾಡಿ ಹೇಳಿದ್ದ ಮಹೇಶ್.


ಬೇಡ, ನಿಮಗೇಕೆ ತೊಂದರೆ? ರಚನಾ ಮಹೇಶನ ಜೊತೆ ಹೋಗುವುದಕ್ಕೆ ಮೀನ ಮೇಷ ಎಣಿಸತೊಡಗಿದ್ದಳು.


ಇರಲಿ ಬನ್ರೀ, ಸಂಕೋಚ ಪಡಬೇಡಿ. ನೀವು ವಿದ್ಯಾವಂತರಿರುವಿರಿ. ಮೇಲಾಗಿ ನಾನೂ, ನೀವೂ ಸಂಬಂಧಿಕರಿರುವುದರಿಂದ ನಾ ನಿಮ್ಮನ್ನು ಕರೆದುಕೊಂಡು ಹೋಗಲು ಕೇಳುತ್ತಿರುವೆನು. ಇಲ್ಲದಿದ್ದರೆ, ನಾನ್ಯಾರೋ, ನೀವ್ಯಾರೋ? ಅಲ್ಲವೇ? ಎಂದು ಹೇಳುತ್ತಾ ಮಹೇಶ್ ಒತ್ತಾಯಪೂರ್ವಕವಾಗಿ ರಚನಾಳನ್ನು ತನ್ನ ಬೈಕಿನಲ್ಲಿ ಕೂಡ್ರಿಸಿಕೊಂಡು ಹೊರಟೇ ಬಿಟ್ಟ.


ರಚನಾಳಿಗೆ ಇದೊಂದು ರೀತಿಯ ಹೊಸ ಅನುಭವ, ಹರೆಯದ ಗಂಡಸಿನೊಂದಿಗೆ ಬೈಕಿನಲ್ಲಿ ಹೋಗುವುದು. ತಾನಿನ್ನೂ ಈ ಊರಿಗೇ ಹೊಸಬಳು. ಅವಳಿಗೆ ಒಂದು ರೀತಿಯ ಮುಜುಗರವಾಗತೊಡಗಿತ್ತು. ಆದರೂ ಅವನೊಂದಿಗೆ ಹೋಗುವುದು ಅನಿವಾರ್ಯವಾಗಿತ್ತು ಅವಳಿಗೆ. ಪರಸ್ಥಿತಿಗೆ ಹೊಂದಿಕೊಳ್ಳಬೇಕೆಂದುಕೊಂಡು ಮನಸ್ಸಿನಲ್ಲಿ ಮಂಥನ ನಡೆಸಿ, ರಾಜಿ ಮಾಡಿಕೊಳ್ಳತೊಡಗಿದಳು ತನ್ನಷ್ಟಕ್ಕೆ ತಾನೇ.


ಬೈಕು ಊರ ಹೊರವಲಯ ದಾಟುತ್ತಿತ್ತು. ಈ ವರ್ಷ ಮೇ ತಿಂಗಳಿಂದಲೇ ಮಳೆ ಪ್ರಾರಂಭವಾಗಿದ್ದುದರಿಂದ ಭೂ ದೇವಿ ಹಸಿರುಟ್ಟು ನೋಡುಗರ ಮನಸ್ಸಿಗೆ ಮುದ ನೀಡುತ್ತಿದ್ದಳು. ಸಣ್ಣ ಪುಟ್ಟ ಗುಡ್ಡಗಳು ಗಿಡ ಗಂಟಿಗಳಿಂದ ಹಸಿರು ಹಸಿರಾಗಿ ಕಾಣುತ್ತಿದ್ದವು. ಮಹೇಶನ ಬೈಕು ವೇಗವಾಗಿ ಓಡುತ್ತಿದ್ದುದರಿಂದ ಮಾತಾಡುವುದಕ್ಕೆ ಹೆಚ್ಚಿಗೆ ಅವಕಾಶವಿರಲಿಲ್ಲ. ಮಹೇಶನ ಬೈಕು ರಚನಾಳ ಶಾಲೆಯ ಮುಂದೆ ನಿಂತಾಗ 9-45 ಆಗಿತ್ತು. ರಚನಾಳ ಮುಖದಲ್ಲಿ ಧನ್ಯತಾ ಭಾವವಿತ್ತು. ಮಹೇಶ ಮುಖ್ಯ ಗುರುಗಳನ್ನು ಭೆಟ್ಟಿಯಾಗಿ, ರಚನಾಳ ಪರಿಚಯ ಮಾಡಿಸಿ, ತಮ್ಮ ನೆಂಟಸ್ತಿಕೆಯ ಬಗ್ಗೆಯೂ ಹೇಳಿದ. ರಚನಾ ತಾ ಅಂದುಕೊಂಡಿದ್ದಂತೆ ಅಂದು ಸರಿಯಾದ ವೇಳೆಗೆ ಕರ್ತವ್ಯಕ್ಕೆ ಹಾಜರಾಗಿದ್ದಳು ಮಹೇಶನಿಗೆ ಧನ್ಯವಾದ ಹೇಳುತ್ತಾ.


ಮುಂದಿನ ದಿನಗಳಲ್ಲಿ ಮಹೇಶ್ ರಚನಾಳ ಮನೆಗೆ ಆಗಾಗ್ಗೆ ಬರುತ್ತಿದ್ದ. ಹೆಚ್ಚಾದ ಇವರ ಮಾತುಕತೆಗಳು ಸಾವಿತ್ರಮ್ಮನವರಿಗೆ ಹಿಡಿಸುತ್ತಿರಲಿಲ್ಲ. ಮಗಳಿಗೆ ಆಗಾಗ್ಗೆ ಕಿವಿ ಮಾತೂ ಹೇಳತೊಡಗಿದ್ದರು. ಮಹೇಶ್ ಮತ್ತು ರಚನಾರ ನಡುವೆ ಒಂದು ರೀತಿಯ ಆತ್ಮೀಯತೆ ಬೆಳೆಯತೊಡಗಿತ್ತು.


ಆಗಸ್ಟ್ 15ರಂದು ತನ್ನ ಶಾಲೆಯಲ್ಲಿ ರಚನಾ ತಾನೇ ಧ್ವಜಾರೋಹಣ ಮಾಡಬೇಕಾಗಿತ್ತು. ಶಾಲೆಯ ಮುಖ್ಯ ಗುರುಗಳು ಯಾವುದೋ ತುತರ್ು ಕೆಲಸದ ಮೇಲೆ ಬೇರೆಡೆಗೆ ಹೋಗುತ್ತಿದ್ದುದರಿಂದ ರಚನಾ ಮೇಡಂಗೆ ಧ್ವಜ ಏರಿಸುವ ಜವಾಬ್ದಾರಿ ವಹಿಸಿದ್ದರು. ಅಂದು ರಚನಾ ಬೆಳಿಗ್ಗೆ ಆರೂವರೆಗೆಲ್ಲಾ ಊರು ಬಿಡಬೇಕಾಗಿತ್ತು. ಬೆಳಿಗ್ಗೆ ಐದುವರೆಯ ಬಸ್ಸಿನ ನಂತರ ಆಕೆಯ ಶಾಲೆಯ ಊರಿಗೆ ಬಸ್ಸಿರುವುದೇ ಎಂಟು ಗಂಟೆಗೆ. ನಾಳೆ ಬೆಳಿಗ್ಗೆ ಶಾಲೆಗೆ ಹೇಗೆ ಹೋಗುವುದು? ಆಗ ರಚನಾಗೆ ನೆನಪಾದುದು ಮಹೇಶ್. ಅದಕ್ಕಾಗಿ ಹಿಂದಿನ ದಿನವೇ ರಚನಾ ಮಹೇಶಗೆ ಫೋನು ಮಾಡಿ, ಪಂದ್ರಹ ಆಗಷ್ಟ್ದ ದಿನ ತನ್ನನ್ನು ಶಾಲೆಗೆ ಕರೆದುಕೊಂಡು ಹೋಗಬೇಕೆಂದು ವಿನಂತಿಸಿಕೊಂಡಾಗ ಅವ ಖುಷಿಯಿಂದ ಒಪ್ಪಿಕೊಂಡಿದ್ದ.


ಮರು ದಿನ ಹೇಳಿದ ವೇಳೆಗೆ ಸರಿಯಾಗಿ ಬಂದ ಮಹೇಶ್. ಮಳೆಗಾಲದ ದಿನವಾಗಿದ್ದರಿಂದ ಚಳಿ ಹಿತವಾಗಿತ್ತು. ಇರಲಿಯೆಂದು ರಚನಾ ಸ್ವೆಟರ್ ಹಾಕಿಕೊಂಡಳು ಮುಂಜಾಗರೂಕತೆಯಿಂದ. ಬೈಕಿನ ಮೇಲೆ ಹೋಗುವಾಗ ಗಾಳಿ ಹೆಚ್ಚಿಗೆ ಬರುತ್ತದೆಯೆಂದು ಆಕೆ ಅನುಭವವಾಗಿತ್ತು. ಬೈಕಿನ ಪ್ರಯಾಣ ಚೇತೋಹಾರಿಯಾಗಿತ್ತು ಇಬ್ಬರಿಗೂ. ಮುಂಜಾನೆಯ ಕುಳಿಗರ್ಾಳಿಗೆ ಹಾರಾಡುತ್ತಿದ್ದ ಮುಂಗುರುಳನ್ನು ವಯ್ಯಾರವಾಗಿ, ನವಿರಾಗಿ ಹಿಂದಕ್ಕೆ ತಳ್ಳುತ್ತಾ, ಮುಂಗಾರು ಬೆಳೆಗಳ ಹಸಿರಿನಿಂದ ನಳ ನಳಿಸುತ್ತಿದ್ದ ಭೂ ದೇವಿಯ ಚೆಲುವನ್ನು ಆಸ್ವಾದಿಸುತ್ತಿದ್ದಳು ರಚನಾ. ಮಹೇಶ್ ತನ್ನ ಗಾಡಿಯಲ್ಲಿ ಕರೆದುಕೊಂಡು ಬಂದುದರಿಂದ ಅಂದು ರಚನಾ ಸರಿಯಾದ ವೇಳೆಗೆ ಶಾಲೆಗೆ ಬಂದು, ಧ್ವಜಾರೋಹಣವನ್ನು ನೆರವೇರಿಸಿದ್ದಳು. ಮಹೇಶನ ಉಪಕಾರ ಸ್ಮರಣೆ ಮಾಡಿದ್ದಳು ಮೇಲಿಂದ ಮೇಲೆ. ಮಹೇಶನಿಗೂ ಇದು ಒಂದು ರೀತಿಯ ತೃಪ್ತಿ ಮತ್ತು ಖುಷಿ ನೀಡಿತ್ತು.


ರಚನಾ ಮತ್ತು ಮಹೇಶರ ನಡುವಿನ ಸಂಬಂಧ ದಿನದಿಂದ ದಿನಕ್ಕೆ ಸಂಕೀರ್ಣವಾಗುತ್ತಿದ್ದುದನ್ನು ಗಮನಿಸಿದ ರಚನಾಳ ತಾಯಿ ಸಾವಿತ್ರಮ್ಮ ಇಬ್ಬರಿಗೂ ಎಚ್ಚರಿಕೆಯ, ತಿಳುವಳಿಕೆಯ, ಹಿತ ವಚನದ ಮಾತುಗಳನ್ನು ಮೇಲಿಂದ ಮೇಲೆ ಹೇಳತೊಡಗಿದ್ದರು. ಅಂಥಹದ್ದೇನೂ ಇಲ್ಲ, ಮಹೇಶ್ ಆಪತ್ಕಾಲಕ್ಕೆ ಸ್ಪಂದಿಸುವ ಒಳ್ಳೆಯ ಗೆಳೆಯ ಅಷ್ಟೇ ಎಂದು ತಾಯಿಗೆ ಸಮಜಾಯಿಸಿ ಹೇಳಿ, ಸುಮ್ಮನಾಗಿಸುತ್ತಿದ್ದಳು ರಚನಾ. ಮಹೇಶ್ ಹೆಚ್ಚಿಗೇನೂ ಮಾತಾಡದೇ ಅತ್ತೆಯ ಮನ ಗೆಲ್ಲಲು ಪ್ರಯತ್ನಿಸುತ್ತಿದ್ದ. ಈಗಾಗಲೇ ಅಕ್ಕ-ಪಕ್ಕದವರಿಂದ ಟೀಕೆ, ಟಿಪ್ಪಣಿಗಳು ಶುರುವಾಗಿದ್ದುದರಿಂದ ಮಗಳಿಗೆ ಸಾವಿತ್ರಮ್ಮನ ಹಿತ ವಚನ, ಉಪದೇಶ ನಿರಂತರವಾಗಿ ಮುಂದುವರೆದಿದ್ದವು.


ರಚನಾ ಬಂದು ಐದಾರು ತಿಂಗಳುಗಳಾಗುವುದರೊಳಗೆ, ಓಣಿಯ ಜನರೆಲ್ಲಾ, ಗುಸು, ಗುಸು ಮಾತಾಡಲು ತೊಡಗಿದ್ದರು. ಅಯ್ಯೋ, ಈ ಟೀಚರಮ್ಮ ಮದುವೆಯಾಗಿರುವ ಆ ಹುಡುಗನ ಹಿಂದೆ ಬಿದ್ದಿದ್ದಾಳಂತೆ. ಈ ಹುಡುಗಿಗೇನು ಧಾಡಿಯಾಗಿದೆಯೋ ಏನೋ ಮದುವೆಯಾಗಿ ಎರಡು ಮಕ್ಕಳಿರುವ ಈ ಮಹೇಶನ ಹಿಂದೆ ಗಂಟು ಬೀಳುವುದಕ್ಕೆ? ಚೆಂದುಳ್ಳಿ ಚೆಲುವಿಯಂಥಹ ಈ ಮಾಸ್ತರತಿ ಮಹೇಶನಲ್ಲಿ ಅಂಥಹದ್ದನ್ನು ಏನು ಕಂಡಿದ್ದಾಳೋ ಏನೋ? ಈ ಹುಡುಗನ ಹೆಂಡತಿ, ತಾಯಿಗಾದರೂ ಬುದ್ಧಿ ಬೇಡವೇ? ಈ ಹುಡುಗಿ ನೋಡಿದರೆ, ಬಿ.ಎ.,ಡಿ.ಎಡ್. ಅಂತೆ, ಮಹೇಶನದು ಬರೀ ಎಸ್.ಎಸ್.ಎಲ್.ಸಿ. ಅಷ್ಟೆ. ಇವ ನೋಡಿದರೆ ರೈತ, ಆಕೆ ನೋಡಿದರೆ ಶಾಲಾ ಶಿಕ್ಷಕಿ. ಇವರದೇನು ಪ್ರೇಮವೋ, ಕಾಮವೋ? ಒಂದೂ ಗೊತ್ತಾಗುತ್ತಿಲ್ಲ. ಹುಡುಗಿಯ ತಾಯಿ ಹುಡುಗಿಯ ಜೊತೆನೇ ಇದ್ದರೂ ಈ ಹುಚ್ಚು ಹುಡುಗಿಗೇಕೆ ತಾಯಿ ಸರಿಯಾದ ಬುದ್ಧಿವಾದ ಹೇಳುತ್ತಿಲ್ಲ? ಎಂದು ಜನ ತಮಗೆ ತಿಳಿದ ಹಾಗೆ ಮಾತಾಡತೊಡಗಿದ್ದರು.


ಜನರ ಇಂಥಹ ಕುಹಕದ ಮಾತುಗಳನ್ನು ಕೇಳಿಸಿಕೊಂಡ ರಚನಾಳ ತಾಯಿ ಸಾವಿತ್ರಮ್ಮ ಒಂದು ದಿನ ಮಗಳನ್ನು ಕೂಡ್ರಿಸಿಕೊಂಡು ಬಹಳ ಸೀರಿಯಸ್ಸಾಗಿ ಬುದ್ಧಿವಾದ ಹೇಳಿದಳು. ನೀ ಇದೇ ರೀತಿ ಮಹೇಶನ ಜೊತೆ ಸುತ್ತಾಡುವುದು, ಮಾತಾಡುವುದು ಮುಂದುವರಿಸಿದರೆ, ಜನರ ಬಾಯಿಗೆ ಆಹಾರವಾಗಿ, ನಾಳೆ ನಿನ್ನ ಮದುವೆಗೆ ತೊಂದರಯಾಗುತ್ತದೆ ನೋಡು. ಆಗ ನೀ ಪಶ್ಚಾತ್ತಾಪ ಪಡಬೇಕಾಗುತ್ತದೆ. ನನಗಿಂತ ನೀ ಹೆಚ್ಚಿಗೆ ಓದಿಕೊಂಡವಳು, ತಿಳುವಳಿಕೆಯುಳ್ಳವಳು. ಹೆಣ್ಣು ಎಷ್ಟು ಹುಷಾರಾಗಿದ್ದರೂ ಕಡಿಮೆಯೇ. ಮೈ ಎಲ್ಲಾ ಕಣ್ಣಾಗಿಟ್ಟುಕೊಂಡಿರಬೇಕು. ಒಂದು ಸಾರೆ ಹೆಸರಿಗೆ ಕಳಂಕ ಅಂಟಿಸಿಕೊಂಡರೆ, ಜೀವನ ಪರ್ಯಂತ ನೋವು ಅನುಭವಿಸಬೇಕಾಗುತ್ತದೆ. ಜನರಾಡುವ ಮಾತುಗಳನ್ನು ಕೇಳಿಸಿಕೊಂಡರೆ, ನನಗಂತೂ ಜೀವ ಹೋದ ಹಾಗೆ ಆಗುತ್ತಿದೆ. ನಮ್ಮ ಮನೆತನದ ಮಾನ, ಮಯರ್ಾದೆ ಕಾಪಾಡುವುದು ನಿನ್ನ ಧರ್ಮ. ನಮಗಾದರೂ ಯಾರಿದ್ದಾರೆ? ನೀನು & ಅಮೃತಾ ತಾನೆ? ನೀವಿಬ್ಬರೂ ನನ್ನ ಎರಡು ಕಣ್ಣುಗಳಿದ್ದ ಹಾಗೆ. ಎಂದು ಮಗಳಿಗೆ ತಿಳುವಳಿಕೆ ಹೇಳಿದ್ದಳು.


ಅತ್ತ ಮಹೇಶನ ಮನೆಯಲ್ಲಿಯೂ ಈ ವಿಷಯ ಗೊತ್ತಾಗಿ ಮಹೇಶನ ಹೆಂಡತಿಯೂ ಅವನ ಜೊತೆ ರಂಪಾಟ ಮಾಡಿದ್ದಳು. ಅತ್ತೂ, ಕರೆದೂ ಕಣ್ಣೀರು ಹಾಕಿದ್ದಳು. ಆದರೆ ಮಹೇಶನ ದರ್ಪದ ಮಾತುಗಳ ಮುಂದೆ ಅವಳದೇನೂ ನಡೆದಿರಲಿಲ್ಲ. ಆಕೆಯ ಕಣ್ಣೀರಿಗೆ ಅವನೇನೂ ಕರಗಲಿಲ್ಲ. ಮಹೇಶನ ತಾಯಿಯೂ ಮಗನಿಗೆ ತಿಳುವಳಿಕೆ ಹೇಳಿದ್ದಳು. ತಮ್ಮ ಮನೆತನದ ಮಾನ, ಮಯರ್ಾದೆ ಕಾಪಾಡುವುದರ ಜೊತೆಗೆ ಆ ಹುಡುಗಿಯ ಹೆಸರಿಗೆ ಕಳಂಕ ಬರದ ಹಾಗೆ ನೋಡಿಕೊಳ್ಳಬೇಕಾದುದು ನಮ್ಮ ಧರ್ಮ ಎಂದು ಮಗನಿಗೆ ಬುದ್ಧಿವಾದ ಹೇಳಿದ್ದರು.


ಅಂಥಹದ್ದೇನೂ ಇಲ್ಲಮ್ಮಾ ನನ್ನ ಮತ್ತು ಆ ಹುಡುಗಿಯ ನಡುವೆ ನೀವು ತಿಳಿದುಕೊಂಡ ಹಾಗೆ. ಜನರು ಮಾತಾಡುವ ಹಾಗೆ ಯಾವ ಸಂಬಂಧವೂ ಇಲ್ಲ. ಎಲುಬಿಲ್ಲದ ನಾಲಿಗೆಯ ಜನ ಮನಸ್ಸಿಗೆ ಬಂದಂತೆ ಮಾತಾಡುತ್ತಿರುವಂತೆ ನೀವೂ ಸಹ ಅವರ ಮಾತಿನ ತಾಳಕ್ಕೆ ಕುಣಿಯುತ್ತಿರುವಿರಲ್ಲಾ? ನಿಮಗಾದರೂ ತಿಳಿಯಬೇಡವೇ? ನಿಮ್ಮ ಮಗನ ಮೇಲೆ ನಿಮಗೆ ನಂಬಿಗೆಯಿಲ್ಲವೇ? ಏನೋ ಅವರಿಗೆ ಇದು ಅರಿಯದ ಊರು ಎಂದು ನಾ ಒಂದೆರಡು ಸಾರೆ ರಚನಾಳನ್ನು ಅವಳ ಶಾಲೆಗೆ ಕರೆದುಕೊಂಡು ಹೋಗಿರಬಹುದು ನನ್ನ ಬೈಕಿನಲ್ಲಿ. ಅವರ ಮನೆಯ ಕಡೆಗೆ ಹೋದಾಗ ಏನೋ ಸ್ವಲ್ಪ ಮಾತಾಡಿರಬಹುದು ಅಷ್ಟೇ. ಅದಕ್ಕೇ ಅಂಥಹ ವಿಶೇಷ ಅರ್ಥ ಕಲ್ಪಿಸುವುದು ಸರಿಯಲ್ಲಮ್ಮಾ. ಇದು ಆ ಹುಡುಗಿಯ ಮಯರ್ಾದೆ ಪ್ರಶ್ನೆ. ಎಂದು ಸಮಜಾಯಿಸಿ ಹೇಳಿ ತಾಯಿಯ ಬಾಯಿ ಮುಚ್ಚಿಸಿದ್ದ ಮಹೇಶ್.


ಮುಂದಿನ ದಿನಗಳಲ್ಲಿ ಮಹೇಶ್ ರಚನಾಳ ಮನೆಗೆ ಹೋಗುವುದನ್ನು ಸ್ವಲ್ಪ ಕಡಿಮೆ ಮಾಡಿದ್ದ. ಸಾವಿತ್ರಮ್ಮ, ರಚನಾ ಶಾಲೆಗೆ ಹೋದನಂತರ ಗಂಡನಿಗೆ ಫೋನು ಮಾಡಿ, ಸಾಧ್ಯವಾದರೆ ಈ ವರ್ಷ ರಚನಾಳಿಗೆ ಮದುವೆ ಮಾಡೋಣ. ಸ್ವಲ್ಪ ಸೀರಿಯಸ್ಸಾಗಿ ವರಗಳನ್ನು ನೋಡಲು ಶುರು ಮಾಡಿರಿ. ಈಗಾಗಲೇ ಯಾರಿಗಾದರೂ ಹೇಳಿರುವಿರಾ? ಎಂದಿದ್ದಳು.


ನಾ ಈಗಾಗಲೇ ನನ್ನ ಸ್ನೇಹಿತರಿಗೆಲ್ಲಾ ತಿಳಿಸಿದ್ದೇನೆ. ನೋಡೋಣ. ಈ ವರ್ಷದ ಬೇಸಿಗೆಯಲ್ಲಿ ಅನುಕೂಲ ನೋಡಿಕೊಂಡು ರಚನಾಳ ಮದುವೆ ಮುಗಿಸಿ ಬಿಡೋಣ. ರಚನಾಳಿಗೇನು ವರಗಳು ಕ್ಯೂ ಹಚ್ಚುತ್ತಾರೆ, ಹಾಗಿದ್ದಾಳೆ ನಮ್ಮ ಮಗಳು. ಎಂದು ಮಗಳನ್ನು ಬಣ್ಣಿಸಿದ್ದರು ಸಾವಿತ್ರಮ್ಮನ ಯಜಮಾನರು ಶಿವಶಂಕರ್.


ಸಾವಿತ್ರಮ್ಮ, ರಚನಾ ಮತ್ತು ಮಹೇಶ್ರ ಬಗ್ಗೆ ಈ ಊರಿನಲ್ಲಿ ಹರಡಿರುವ ಸುದ್ದಿಯ ಬಗ್ಗೆಯೇನೂ ಹೇಳಿರಲಿಲ್ಲ ಗಂಡನಿಗೆ. ಆದಷ್ಟು ಬೇಗ ಅವಳ ಮದುವೆ ಮುಗಿಸಬೇಕೆಂಬುದು ಅವರ ಮನಸ್ಸಿನ ಆಶಯವಾಗಿತ್ತು. ಹಾಗೇ ಇಲ್ಲಿಂದ ತಮ್ಮ ಊರಿನ ಕಡೆಗೆ ರಚನಾಳಿಗೆ ವಗರ್ಾವಣೆಗೂ ಪ್ರಯತ್ನ ಮಾಡಲು ಗಂಡನಿಗೆ ತಿಳಿಸುವುದನ್ನು ಮರೆಯಲಿಲ್ಲ.


ಮಹೇಶನ ಮುಖ ದರ್ಶನ ದಿನಾಲೂ ಆಗುವುದು ತಪ್ಪಿದ್ದಕ್ಕೆ ರಚನಾಳಿಗೆ ತುಂಬಾ ಬೇಸರವಾಗಿತ್ತು. ಇಬ್ಬರಿಗೂ ಮುಖಾ ಮುಖಿ ಭೆಟ್ಟಿ ಮೇಲಿಂದ ಮೇಲೆ ಆಗದಿದ್ದರೂ, ಫೋನಿನಲ್ಲಿ ಇಬ್ಬರ ಮಾತುಕತೆಗಳು ಮುಂದುವರೆದಿದ್ದವು. ರಚನಾ ಅಪ್ಪಿ ತಪ್ಪಿಯೂ ಮನೆಯಲ್ಲಿ ಅಮ್ಮನೆದುರಿಗೆ ಮಹೇಶನ ಜೊತೆ ಫೋನಿನಲ್ಲಿ ಮಾತಾಡುತ್ತಿದ್ದಿಲ್ಲ. ಆದರೆ ಆಕೆ ಮನೆ ಬಿಟ್ಟ ಕೂಡಲೇ ಅವಳ ಮೊಬೈಲು ಫೋನು ಶುರುವಾಗುತ್ತಿತ್ತು ಮಹೇಶನೊಂದಿಗೆ ಹರಟಲು.


ಏಕಾಂತದಲ್ಲಿದ್ದಾಗ, ರಚನಾಳಿಗೆ ಮಹೇಶನ ಬಗ್ಗೆಯೇ ಯೋಚನೆಗಳು ಮುತ್ತಿಕ್ಕುತ್ತಿದ್ದವು. ಅವಳ ಮನಸ್ಸು ಒಂದು ರೀತಿಯ ತಾಕಲಾಟದಲ್ಲಿ ಬಿದ್ದಿತ್ತು. ತಾನು ಮಹೇಶನನ್ನು ಪ್ರೀತಿಸುತ್ತಿದ್ದೇನೆಯೇ ಎಂಬ ಅನುಮಾನ ಅವಳ ಮನದಲ್ಲಿ ಸುಳಿದು ಮಾಯವಾಗುತ್ತಿತ್ತು. ಮಹೇಶನ ಭೆಟ್ಟಿಗಾಗಿ ಅವಳ ಮನಸ್ಸು ಹಪ ಹಪಿಸುತ್ತಿತ್ತು. ಎಂಥಹದೋ ಅರಿಯದ ಆಕರ್ಷಣೆ ಅವಳಿಗೆ ಅವನಲ್ಲಿ. ಅವಳ ಹೃದಯ ಅವನಿಗಾಗಿ ಮಿಡಿಯುತ್ತಿತ್ತು. ಅವನನ್ನು ಗಾಢವಾಗಿ ಪ್ರೀತಿಸು ಎಂದು ಒಂದು ಮನಸ್ಸು ಹೇಳುತ್ತಿದ್ದರೆ, ಇನ್ನೊಂದು ಮನಸ್ಸು, ಏಯ್ ಹುಡುಗಿಯೇ, ನಿನಗೇನು ಹುಚ್ಚು ಗಿಚ್ಚು ಹಿಡಿದಿದೆಯೇ ಮದುವೆಯಾಗಿ ಮಕ್ಕಳಿರುವ, ನಿನಗಿಂತಲೂ ಹತ್ತು ವರ್ಷಗಳಷ್ಟು ಹಿರಿಯನನ್ನು ಪ್ರೀತಿಸಲು? ನಿನ್ನ ರೂಪ, ವಿದ್ಯೆ, ಯೌವನಕ್ಕೆ ತಕ್ಕ ಚೆಲುವ ಚೆನ್ನಿಗ ಸಿಗಲಾರನೇ? ಯೌವನದ ಹುಚ್ಚು ಹೊಳೆಯಲ್ಲಿ ಈಸಲು ಪ್ರಯತ್ನಿಸಬೇಡ. ಸರಿಯಾದ ದಿಶೆಯಲ್ಲಿ ವಿಚಾರ ಮಾಡಲು ಆ ಭಗವಂತ ನಿನಗೆ ವಿದ್ಯಾ, ಬುದ್ಧಿ ಕೊಟ್ಟಿರುವನು. ಆತುರದ ನಿಧರ್ಾರ ತೆಗೆದುಕೊಂಡು ಮುಂದೆ ಪಶ್ಚಾತ್ತಾಪ ಪಡಬೇಡ. ಎಂದು ಎಚ್ಚರಿಸುತ್ತಿತ್ತು. ರಚನಾಳ ಮನಸ್ಸು ಗೊಂದಲಗಳ ಗೂಡಾಗಿತ್ತು. ಒಂದು ಮನಸ್ಸು ಎಷ್ಟೇ ವಿವೇಚನೆ ಹೇಳಿದರೂ, ಆಕೆಯ ಇನ್ನೊಂದು ಮನಸ್ಸು ಮಹೇಶನ ಕಡೆಗೇ ವಾಲುತ್ತಿತ್ತು.


ಮಹೇಶನ ಮನಸ್ಸೂ ಇದಕ್ಕೆ ವಿರುದ್ಧವಾಗಿರಲಿಲ್ಲ. ಮನೆಯಲ್ಲಿ ಚೆಲುವೆ, ಗುಣಸಂಪನ್ನೆ ಹೆಂಡತಿ, ಮುದ್ದಾದ ಮಕ್ಕಳು ಇದ್ದರೂ ಅವನ ಮಂಗ ಮನಸ್ಸು ಅವನಿಗೆ ಅರಿಯದಂತೆ ರಚನಾಳನ್ನು ಬಯಸುತ್ತಿತ್ತು. ಬೇಡ, ಬೇಡವೆಂದು ಒಂದು ಮನಸ್ಸು ಹೇಳುತ್ತಿದ್ದರೂ, ಇನ್ನೊಂದು ಮನಸ್ಸು ಬೇಕು, ಬೇಕು ಎಂದು ಬೋಧಿಸುತ್ತಿತ್ತು. ಬೇಕು, ಬೇಕು ಎನ್ನುವ ಮನಸ್ಸಿನ ತುಡಿತವೇ ಸ್ಥಿರವಾತೊಡಗಿತ್ತು.


ಅಂದು ಮಹೇಶ್ ಬಜಾರಕ್ಕೆ ಹೊರಟಿದ್ದ ತನ್ನ ಹೀರೋ ಹೊಂಡಾ ಗಾಡಿಯ ಮೇಲೆ. ಹೋಗುವಾಗ ರಚನಾಳ ಮನೆಯ ಮುಂದೆಯೇ ಹೋಗಬೇಕಾಗುತ್ತಿತ್ತು. ಅಂದು ರವಿವಾರ ಬೇರೆ. ಬಹಳ ದಿನಗಳಿಂದ ರಚನಾಳನ್ನು ಭೆಟ್ಟಿಯಾಗಿರದಿದ್ದುದರಿಂದ ಅವನ ಮನಸ್ಸಿನಲ್ಲಿ ತವಕ. ತುಡಿತ ಜಾಸ್ತಿ ಇತ್ತು. ಅವಳ ಮನೆಯ ಸಮೀಪ ಬರುತ್ತಲೇ ಅವ ತನ್ನ ಗಾಡಿ ನಿಲ್ಲಿಸಿ, ಮನೆಗೆ ಹೋಗಿ ಬಾಗಿಲು ಬಡಿದ. ಹಿಂದಿನ ದಿನದಿಂದ ರಚನಾಳಿಗೆ ವಿಪರೀತ ನೆಗಡಿ, ಕೆಮ್ಮು, ಜ್ವರ. ರಾತ್ರಿ ತನ್ನಲ್ಲಿದ್ದ ಯಾವುದೋ ಒಂದು ನೆಗಡಿ ಗುಳಿಗೆ ತೆಗೆದುಕೊಂಡಿದ್ದಳು. ತಂದೆಗೆ ಆರಾಮವಿಲ್ಲವೆಂದು ತಾಯಿ ಬೇರೆ ಎರಡು ದಿನಗಳ ಹಿಂದೇನೇ ಊರಿಗೆ ಹೋಗಿದ್ದುದರಿಂದ ರಚನಾಳಿಗೆ ಆರೈಕೆ ಮಾಡಲು ತನ್ನವರೆನ್ನುವವರು ಯಾರೂ ಇರಲಿಲ್ಲ. ಬೇರೆಯವರು ತಪ್ಪು ತಿಳಿದುಕೊಂಡಾರೆಂದು ಮಹೇಶನಿಗೆ ಹೇಳಲೂ ಅವಳಿಗೆ ಮನಸ್ಸಿರಲಿಲ್ಲ. ಒಂದು ತರಹದ ಅಸಹಾಯಕತೆಯಿಂದ ರಚನಾ ಜಜರ್ಿರಿತಳಾಗಿದ್ದಳು. ಜ್ವರ, ಕೆಮ್ಮು ಜಾಸ್ತಿಯಾಗಿ ತುಂಬಾ ಬಳಲಿ ಹೋಗಿದ್ದಳು. ಜ್ವರದ ತಾಪದ ಜೊತೆಗೆ ರಾತ್ರಿಯೆಲ್ಲಾ ಕೆಮ್ಮಿ, ಕೆಮ್ಮಿ ಸುಸ್ತಾಗಿ ಅಶಕ್ತಳಾಗಿದ್ದಳು. ಬೆಳಿಗ್ಗೆ ಹೇಗೋ ಕಷ್ಟಪಟ್ಟು ಎದ್ದು, ಒಂದು ಕಪ್ ಚಹ ಮಾಡಿಕೊಂಡು ಕುಡಿದಿದ್ದಳು ಅಷ್ಟೆ.


ಬಾಗಿಲು ಬಡಿದ ಶಬ್ದ ಕೇಳಿ, ಹೇಗೋ ಎದ್ದು ಬಂದು ಬಾಗಿಲು ತೆಗೆದಿದ್ದಳು. ತನ್ನವರಾರೂ ಜೊತೆಗೆ ಇಲ್ಲವಲ್ಲ ಎಂಬ ನೋವು ಮನದಲ್ಲಿ ತುಂಬಿಕೊಂಡಿದ್ದ ರಚನಾಳಿಗೆ ಮಹೇಶನನ್ನು ನೋಡುತ್ತಲೇ, ಮರುಭೂಮಿಯಲ್ಲಿ ಓಯಾಸಿಸ್ ಕಂಡಂತೆ ಆಯಿತು. ಮನಸ್ಸಿನಲ್ಲಿ ಒಂದು ರೀತಿಯ ಪುಳಕ ಶುರುವಾಯಿತು ಆರಾಮವಿರದಿದ್ದರೂ ಮಹೇಶನನ್ನು ನೋಡುತ್ತಲೇ. ಜ್ವರ, ಕೆಮ್ಮಿನಿಂದ ಕಳೆಗುಂದಿದ್ದ ಮುಖದಲ್ಲಿ ನಗು ಬರಿಸಿಕೊಂಡು ಮಹೇಶನನ್ನು ಸ್ವಾಗತಿಸಿದ್ದಳು. ತುಂಬಾ ನಿಶ್ಯಕ್ತಿಯಾಗಿದ್ದುದರಿಂದ ಅವಳಿಗೆ ಕುಳಿತುಕೊಂಡು ಮಹೇಶನ ಜೊತೆ ಮಾತಾಡಲು ಕಷ್ಟವಾದುದನ್ನು ಗಮನಿಸಿದ ಮಹೇಶ್ ಅವಳ ಹತ್ತಿರ ಬಂದು ಅವಳ ಹಣೆಯ ಮೇಲೆ ಕೈ ಇಟ್ಟು ಪರೀಕ್ಷಿಸಿದ. ಹಣೆ ಕೆಂಡದಂತೆ ಸುಡುತ್ತಿತ್ತು. ಜ್ವರ ತುಂಬಾ ಇತ್ತು. ರಚನಾ ಅವನಿಗೆ ಎಲ್ಲಾ ಹೇಳಿದಳು. ಇಂಥಹ ಸಮಯದಲ್ಲಿ ತನ್ನವರೆನ್ನುವವರು ತಬ್ಬಿ ಹಿಡಿದು ಸಂತೈಸಿ ಸಮಾಧಾನ ಮಾಡಿದರೆ, ಮೈ ಮನಸ್ಸಿಗೆರಡಕ್ಕೂ ಹಾಯೆನಿಸುತ್ತದೆ ಎಂದು ಅವಳ ಮನದ ನಿರೀಕ್ಷೆ.


ರಚನಾಳ ಕೆಂಡದಂಥಹ ಹಣೆಯ ಮೇಲಿದ್ದ ತನ್ನ ಕೈ ತೆಗೆದ ಮಹೇಶ್ ತಕ್ಷಣ ಅವಳಿಗೆ ಹೇಳಿ, ತನಗೆ ಗೊತ್ತಿದ್ದ ಡಾಕ್ಟರರನ್ನು ಅಲ್ಲಿಗೇ ಕರೆದುಕೊಂಡು ಬಂದು ತೋರಿಸಿ, ಔಷಧಿ ಕೊಡಿಸಿದ. ಡಾಕ್ಟರರನ್ನು ಬಿಟ್ಟು ಬರುವಾಗ, ಅವಳಿಗಾಗಿ ಇಡ್ಲಿ, ಬ್ರೆಡ್, ಬಿಸ್ಕೀಟು, ಹಣ್ಣುಗಳನ್ನು ತಂದಿದ್ದ. ಒತ್ತಾಯ ಪೂರ್ವಕವಾಗಿ ಸ್ವಲ್ಪ ಇಡ್ಲಿ, ಬ್ರೆಡ್ ತಿನ್ನಿಸಿ ಮಾತ್ರೆ ನುಂಗಿಸಿದ. ಅವನ ಕಾಳಜಿ ನೋಡಿ ರಚನಾಳ ಹೃದಯ ತುಂಬಿ ಬಂದಿತ್ತು. ಮಹೇಶನೇ ಅವಳಿಗಾಗಿ ಚಹ ಮಾಡಿಕೊಟ್ಟ. ಅವನ ಆರೈಕೆ, ಕಳಕಳಿಗೆ ರಚನಾಳ ಮನ ಸೋತು ಹೋಯಿತು. ಬಹಳ ದಿನಗಳಿಂದ ಹಿಡಿದಿಟ್ಟುಕೊಂಡಿದ್ದ ಸುಪ್ತ ಭಾವನೆಗಳನ್ನು ತಡೆದುಕೊಳ್ಳದಾಗಿದ್ದಳು. ಮಹೇಶನನ್ನು ಬಲವಾಗಿ ತಬ್ಬಿ ಹಿಡಿದು ಅವನ ಎದೆಯಲ್ಲಿ ತನ್ನ ಮುಖ ಹುದುಗಿಸಿ, ದೀರ್ಘವಾಗಿ ಉಸಿರಾಡಿಸುತ್ತಾ ಮೊದಲ ಸಲ ಅವನ ಸಾಂಗತ್ಯದಲ್ಲಿ ಸಂಭ್ರಮಿಸತೊಡಗಿದಳು. ಇದನ್ನು ನಿರೀಕ್ಷಿಸಿಯೇ ಇದ್ದ ಮಹೇಶ್ ತಾನೂ ಸಹ ಅವಳನ್ನು ತಬ್ಬಿ ಹಿಡಿದು, ಅವಳ ತಲೆ, ಬೆನ್ನು ನೇವರಿಸುತ್ತಾ ಅವಳನ್ನು ಸಂತೈಸಿ ಸಮಾಧಾನ ಮಾಡಿದ್ದ. ಅವಳಿಗೆ ಆರಾಮವಾಗುವವರೆಗೂ ಅವನ ಆರೈಕೆ ಮುಂದುವರೆದಿತ್ತು. ಇದರಿಂದ ಅವರು ಪರಸ್ಪರ ಇನ್ನೂ ಹತ್ತಿರವಾಗಿದ್ದರು.


ಬೇಸಿಗೆ ರಜ ಸುರುವಾಗುತ್ತಲೇ, ಸಾವಿತ್ರಮ್ಮ ಮಗಳನ್ನು ಹೊರಡಿಸಿಕೊಂಡು ತಕ್ಷಣ ಗಂಡನಿದ್ದ ಊರಿಗೆ ಹೋಗಿದ್ದಳು ಮಹೇಶ್ ಮತ್ತು ರಚನಾರ ಸಂಪರ್ಕ ಕಡಿಯಲು. ರಚನಾಳಿಗೆ ವರಗಳ ಬೇಟೆ ತುಂಬಾ ಬ್ರಿಸ್ಕ್ ಆಗಿ ಶುರುವಾಯಿತು. ಇಬ್ಬರು ಹುಡುಗರು ಬಂದು ಹೋದರು. ಹುಡುಗರಿಗೆ ರಚನಾ ಇಷ್ಟವಾದರೆ, ರಚನಾಳಿಗೆ ಹುಡುಗರು ಇಷ್ಟವಾಗಲಿಲ್ಲ. ಒಬ್ಬ ಹೈಸ್ಕೂಲಿನ ಟೀಚರ್ ಇದ್ದರೆ, ಇನ್ನೊಬ್ಬ ಮಾಧ್ಯಮಿಕ ಶಾಲೆಯ ಟೀಚರ್. ಅವಳ ರೂಪಕ್ಕೆ ಅವರು ತಕ್ಕ ಜೋಡಿಯಾಗುತ್ತಿರಲಿಲ್ಲ. ಮೂರನೆಯದಾಗಿ ಬಾಗಲುಕೋಟೆ ಜಿಲ್ಲೆ ಬದಾಮಿ ತಾಲೂಕಿನ ಲೆಕ್ಚೆರರ್ ಹುಡುಗ ಬಂದ. ಹುಡುಗನಿಗೆ ರಚನಾ ಒಪ್ಪಿಗೆಯಾದಳು. ರಚನಾಳ ತಂದೆ-ತಾಯಿಯವರಿಗೂ ಹುಡುಗ ಒಪ್ಪಿಗೆಯಾದ. ಕೊನೆಗೆ ರಚನಾಳೂ ಒಪ್ಪಿಕೊಂಡಳು. ಮೇ ತಿಂಗಳ ಕೊನೇ ವಾರದಲ್ಲಿ ಮದುವೆ ನಿಗದಿ ಮಾಡಲಾಯಿತು.


ಅಲ್ಲಿಗೆ ಹೋದ ಮೇಲೆ ರಚನಾ ಹೆಚ್ಚು ಕಡಿಮೆ ಮೌನ ಗೌರಿಯಂತಾಗಿದ್ದಳು. ಮಾತು ಬಹಳ ಕಡಿಮೆ ಮಾಡಿದ್ದಳು. ಕತೆ, ಕಾದಂಬರಿಗಳೇ ಅವಳ ಸಂಗಾತಿಗಳಾಗಿದ್ದವು. ಇಲ್ಲಿನ ಪ್ರತಿಯೊಂದು ಬೆಳವಣಿಗೆಗಳ ವರದಿ ವಾಚನ ರಚನಾಳಿಂದ ಮಹೇಶನಿಗೆ ರೆಗುಲರ್ ಆಗಿ ಆಗುತ್ತಿತ್ತು. ಸಮಯ ನೋಡಿಕೊಂಡು ಇಬ್ಬರೂ ಗೌಪ್ಯವಾಗಿ ಮಾತಾಡುತ್ತಿದ್ದರು.


ಮದುವೆಯ ದಿನಾಂಕ ಸಮೀಪಿಸುತ್ತಿದ್ದಂತೆ, ಮದುವೆಯ ತಯಾರಿ ಜೋರಾಗಿ ನಡೆದಿದ್ದರೆ, ರಚನಾ ಮತ್ತು ಮಹೇಶರ ನಡುವೆ ಮಾತುಕತೆಗಳೂ ಸಹ ಅಷ್ಟೇ ವೇಗವಾಗಿ ನಡೆದಿದ್ದವು. ಅವರಿಬ್ಬರಲ್ಲಿ ತುಂಬಾ ಮಾತುಕತೆಗಳು ಆದವು ಫೋನಿನಲ್ಲಿ. ಎಲ್ಲವೂ ಹೃದಯಕ್ಕೆ ಸಂಬಂಧಪಟ್ಟವು. ಮನಸ್ಸು ಮನಸ್ಸಗಳನ್ನು ಬೆಸೆಯುವಂಥಹವು. ಇಬ್ಬರ ಮನಸ್ಸುಗಳಲ್ಲಿನ ತವಕ, ಕಳವಳ, ವೇದನೆ ಅವರಿಬ್ಬರಿಗೇ ಗೊತ್ತು. ಇಬ್ಬರ ಪರಸ್ಥಿತಿ ನೀರಿನಿಂದ ಹೊರ ತೆಗೆದ ಮೀನಿನಂತಾಗಿತ್ತು.


ರಚನಾಳ ಮದುವೆ ಇನ್ನೂ ಒಂದು ವಾರವಿದೆಯೆಂದಾಗ, ರಚನಾ ಮತ್ತು ಮಹೇಶ್ ಬಲವಾದ ನಿಧರ್ಾರವೊಂದನ್ನು ತೆಗೆದುಕೊಂಡಿದ್ದರು. ಅಂದು ಬೆಳಿಗ್ಗೆ ಎಂಟು ಗಂಟೆಯ ಸುಮಾರು ರಚನಾ ಮನೆಯಲ್ಲಿ ಯಾರಿಗೂ ಹೇಳದೇ ಮನೆ ಬಿಟ್ಟಿದ್ದಳು. ಮೊಬೈಲು, ಸ್ವಿಚ್ ಆಫ್ ಆಗಿತ್ತು. ರಚನಾ ಪುನಃ ವಾಪಾಸು ಬಂದಾಗ ಮಧ್ಯಾಹ್ನ ಎರಡು ಗಂಟೆಯಾಗುತ್ತಲಿತ್ತು. ಜೊತೆಯಲ್ಲಿ ಮಹೇಶ್ ಇದ್ದ. ಜೊತೆಗೆ ಅವನ ನಾಲ್ಕೈದು ಜನ ಗೆಳೆಯರು. ರಚನಾ-ಮಹೇಶ್ ಸಾಧಾರಣ ಹುಡುಗಿ-ಹುಡುಗರಂತೆ ಇರಲಿಲ್ಲ. ಇಬ್ಬರೂ ಸತಿ-ಪತಿಗಳಾಗಿದ್ದರು. ಇಬ್ಬರ ಕೊರಳಲ್ಲಿ ದೊಡ್ಡ ದೊಡ್ಡ ಹೂವಿನ ಹಾರಗಳು ರಾರಾಜಿಸುತ್ತಿದ್ದವು. ರಚನಾಳ ಕೊರಳಲ್ಲಿನ ಮಾಂಗಲ್ಯ ಅವಳ ಎದೆಯ ಮೇಲೆ ಮಿಂಚುತ್ತಿತ್ತು.


ರಚನಾ-ಮಹೇಶ್ ಇಬ್ಬರೂ ಸಾವಿತ್ರಮ್ಮ, ಶಿವಶಂಕರ್ ಅವರ ಪಾದಗಳಿಗೆರಗಿ ಆಶೀವರ್ಾದ ಪಡೆಯಲು ಯತ್ನಿಸಿದಾಗ ಮನೆಯವರಿಗೆಲ್ಲಾ ಶಾಕ್ ಹೊಡೆದಂತಾಗಿತ್ತು. ಮಗಳ ಹೊಸ ಜೀವನದ ಅವತಾರವನ್ನು ನೋಡಿದ ಸಾವಿತ್ರಮ್ಮನಿಗೆ ಆದ ಶಾಕ್ನಿಂದ ಆಕೆ ಕೆಲ ಹೊತ್ತು ಪ್ರಜ್ಞಾ ಶೂನ್ಯಳಾದಳು. ಶಿವ ಶಂಕರ್-ಸಾವಿತ್ರಮ್ಮ ದಂಪತಿಗಳಿಗೆ ಮಗಳ ನಿಧರ್ಾರವನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಬೇರೆ ಆಯ್ಕೆಗಳಿರಲಿಲ್ಲ. ಈ ರೀತಿ ಆಗಬಹುದೆಂದು ಊಹಿಸಿದ್ದ ಸಾವಿತ್ರಮ್ಮನಿಗೆ ಅದನ್ನು ತಪ್ಪಿಸಲು ಪ್ರಯತ್ನಿಸಿದರೂ ಆಕೆ ಅದರಲ್ಲಿ ಸಫಲತೆಯನ್ನು ಕಾಣಲಿಲ್ಲ.


ಇದೇ ನೋಡ್ರಿ ರಚನಾಳ ಪ್ರೇಮ ಕಥೆ ಎಂದು ನನ್ನ ಶ್ರೀಮತಿ ಪ್ರಣೀತಾ ಭಾರವಾದ ಹೃದಯದಿಂದ ಹೇಳಿ ಮುಗಿಸಿದಳು.


ಆ ಹುಡುಗಿಗೆ ಅವನಲ್ಲಿ ಮೊದಲಿನಿಂದಲೂ ಒಲವಿತ್ತೆಂದು ಅನಿಸುತ್ತಿದೆ. ಅದಕ್ಕೇ ಹೀಗಾಗಿದೆ. ಪ್ರೀತಿಗೆ ವಯಸ್ಸಿನ ಅಂತರ, ಎರಡನೆಯ ಸಂಬಂಧ ಅದೂ ಇದೂ ಅಂತ ಯಾವುದೂ ಗೊತ್ತಾಗುವುದಿಲ್ಲ, ಅಲ್ಲವೇ? ಎಂದೆ ನಾ.


ಪ್ರಣೀತಾ ಇನ್ನೂ ಮುಂದುವರೆದು, ರಚನಾಳ ತಾಯಿ ಸಾವಿತ್ರಮ್ಮನವರ ಗೋಳಾಟ, ರಂಪಾಟ, ವೇದನೆ ಮನ ಕಲಕುವಂತಿದೆಯೆಂದು ಅಮ್ಮ ಹೇಳುತ್ತಿದ್ದರು. ಅವರು ಅಮ್ಮನಿಗೆ ಫೋನು ಮಾಡಿ, ತನ್ನ ಮನದಲ್ಲಿ ವೇದನೆಯನ್ನು ಅಮ್ಮನೊಂದಿಗೆ ಹಂಚಿಕೊಂಡಳಂತೆ. ಈ ಹುಚ್ಚು ಹುಡುಗಿ ತನ್ನ ಅಸಂಬದ್ಧ ನಿಧರ್ಾರದಿಂದ ನಮ್ಮನ್ನೆಲ್ಲಾ ಕೊಂದು ಹಾಕಿದಳು. ನಮ್ಮನ್ನೆಲ್ಲಾ ಜೀವಂತ ಶವಗಳನ್ನಾಗಿ ಮಾಡಿಬಿಟ್ಟಳು. ತನ್ನ ಸ್ವಂತ ಮಯರ್ಾದೆ ಏನೆಂದು ತಿಳಿದುಕೊಳ್ಳಲಿಲ್ಲ. ಮನೆತನದ ಮಯರ್ಾದೆಯ ಬಗ್ಗೆಯೂ ವಿಚಾರ ಮಾಡಲಿಲ್ಲ. ನಡು ವಯಸ್ಸಿನ ತಂದೆ-ತಾಯಿಗಳ ಮಾನಸಿಕ ಸ್ಥಿತಿ ಹೇಗಾಗಬಹುದೆಂದೂ ಚಿಂತಿಸಲಿಲ್ಲ. ಮನೆಯಲ್ಲಿ ಮುಂದೆ ಮದುವೆಯಾಗುವ ತಂಗಿಯೊಬ್ಬಳಿದ್ದಾಳೆ ಎಂದು ಆಲೋಚಿಸಲಿಲ್ಲ. ತನ್ನ ಇಂಥಹ ನಿಧರ್ಾರ ತಂಗಿಯ ಮದುವೆಯ ಮೇಲೆ ಎಂಥಹ ಪರಿಣಾಮ ಬೀರಬಹುದೆಂದು ತಿಳಿದುಕೊಳ್ಳಲಿಲ್ಲ. ಅದೇನು ಅವಳ ಪ್ರೀತಿಯೋ ಏನೋ? ಇದು ಪ್ರೀತಿಯೋ? ಬರೀ ತೆವಲೋ? ಒಂದೂ ಅರ್ಥವಾಗುತ್ತಿಲ್ಲ. ಇವಳೊಂದಿಗೆ ಮದುವೆಯಾಗಲು ಒಪ್ಪಿಕೊಂಡಿದ್ದ ಆ ಗಂಡು ಹುಡುಗನ ಮನೆಯವರ ಮಾನ ಮಯರ್ಾದೆ ಏನು? ಈ ಮದುವೆಗೆ ಒಪ್ಪಿಕೊಳ್ಳುವ ಮುಂಚೆನೇ ಮಹೇಶ್ನೊಂದಿಗೆ ಮದುವೆ ಮಾಡಿಕೊಂಡಿದ್ದರೆ, ಗಂಡಿನ ಮನೆಯವರ ಮಯರ್ಾದೆಗೆ ಧಕ್ಕೆ ಬರುತ್ತಿರಲಿಲ್ಲ. ಸರೀಕರ ಜೊತೆ ನಾವು ತಲೆ ಎತ್ತಿ ನಿಲ್ಲದ ಹಾಗೆ ಮಾಡಿಬಿಟ್ಟಳು ರಚನಾ ಎಂದು ಇನ್ನೇನೋ ಹೇಳಿ ತಮ್ಮ ಅಳಲನ್ನು ತೋಡಿಕೊಂಡರಂತೆ ಸಾವಿತ್ರಮ್ಮ ಅಮ್ಮನೊಂದಿಗೆ. ಅಮ್ಮ ತನಗೆ ತಿಳಿದಂತೆ ಅವರಿಗೆ ಸಮಾಧಾನ ಮಾಡಿದರಂತೆ. ಎಂದು ಬಹಳಷ್ಟು ವಿಷಯ ತಿಳಿಸುತ್ತಾ, ಹುಚ್ಚು ಕೋಡಿ ಮನಸ್ಸೇ ನೀ ಹಿಂಗ್ಯಾಕ? ಎಂದು ಕೊನೆಗೆ ನಿಟ್ಟುಸಿರು ಹಾಕಿದಳು ಪ್ರಣೀತಾ.




ಶೇಖರಗೌಡ, ವ್ಯವಸ್ಥಾಪಕರು, ಎಸ್.ಬಿ.ಹೆಚ್ ಬ್ಯಾಂಕ್ ಲಿಂಗಸ್ಗೂರು.

ಕನರ್ಾಟಕ ಲೋಕಾಯುಕ್ತ ನ್ಯಾಯಮೂತರ್ಿ ಶಿವರಾಜ ಪಾಟೀಲ್

ಕನರ್ಾಟಕ ಲೋಕಾಯುಕ್ತ ನ್ಯಾಯಮೂತರ್ಿ ಶಿವರಾಜ ಪಾಟೀಲ್


ಜಗತ್ತಿನ ಅತ್ಯಂತ ದೊಡ್ಡ ಹಾಗೂ ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರ ಎನ್ನುವ ಅಂತರ್ರಾಷ್ಟ್ರೀಯ ಖ್ಯಾತಿಯ ಮನ್ನಣೆ ಗಳಿಸಿದ್ದ ಭಾರತ ತನ್ನ ಸ್ವಾತಂತ್ರ್ಯದ ಅರವತೈದನೇಯ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ. ಇಂತಹ ಸಂಕೀರ್ಣ ಪರಿಸ್ಥಿತಿಯಲ್ಲಿ ಭಾರತ ಜಗತ್ತಿನ ಪ್ರಮುಖ ಭ್ರಷ್ಟ ರಾಷ್ಟ್ರಗಳ ಪಂಕ್ತಿಗೆ ಸೇರ್ಪಡೆಗೊಂಡಿರುವುದು ನೋವಿನ ಸಂಗತಿ. ಪ್ರಜಾಪ್ರಭುತ್ವ ರಾಷ್ಟ್ರ, ಭ್ರಷ್ಟಾಚಾರ ರಾಷ್ಟ್ರವಾಗಿ ಪರಿವರ್ತನೆಗೊಳ್ಳಲು ಸಂವಿಧಾನದ ಮೂರು ಪ್ರಮುಖ ಅಂಗಗಳಲ್ಲಿ ಶಾಸಕಾಂಗ, ಕಾಯರ್ಾಂಗಳ ಅಪವಿತ್ರ ಮೈತ್ರಿಯೇ ಕಾರಣ. ಈ ಎರಡು ಅಂಗಗಳಲ್ಲಿ ಕಂಡು ಬರುವ ಭ್ರಷ್ಟಾಚಾರದ ನಿಮರ್ೂಲನೆಗಾಗಿ ನ್ಯಾಯಾಂಗ ಮನಸ್ಸು ಮಾಡಿದರೆ, ಯಾವ ಪ್ರಮಾದದ ಪರಿವರ್ತನೆಗಳನ್ನು ಕಾಣಲು ಸಾಧ್ಯ ಎನ್ನುವವರಿಗೆ ಲೋಕಾಯುಕ್ತರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನ್ಯಾಯಮೂತರ್ಿ ಸಂತೋಷ ಹೆಗ್ಡೆಯವರ ವರದಿಯೇ ದಿಕ್ಸೂಚಿ.


ತಮ್ಮ ಸುದೀರ್ಘ ವರದಿಯ ಮುಖಾಂತರ ರಾಜ್ಯರಾಜಕೀಯದಲ್ಲಿ ತಲ್ಲಣ ಮೂಡಿಸಿದ್ದ ನ್ಯಾಯಮೂತರ್ಿ ಸಂತೋಷ ಹೆಗ್ಡೆಯವರ ನಿವೃತ್ತಿಯ ನಂತರ ಆ ಗುರುತವಾದ ಸ್ಥಾನವನ್ನು ತುಂಬಬಲ್ಲ, ಸಮರ್ಥ ವ್ಯಕ್ತಿ ಯಾರು ಎನ್ನುವ ಆರುವರೆ ಕೋಟಿ ಕನ್ನಡಿಗರ ಪಾಲಿಗೆ ಈಗ ರಾಯಚೂರು ಜಿಲ್ಲೆಯವರೇ ಆದ ನ್ಯಾಯಮೂತರ್ಿ ಡಾ. ಶಿವರಾಜ್ ಪಾಟೀಲ್ರ ಆಯ್ಕೆ ಹೆಚ್ಚಿನ ಸಂತಸ, ಭಾವಗಳನ್ನು ತೃಪ್ತಿಸಿದೆ.


ಸಾಕ್ಷರತೆ ದೃಷ್ಟಿಯಿಂದ ಜಗತ್ತಿನ ಏಕೈಕ ಕತ್ತಲೆಯ ತಾಲೂಕು ಎಂದೇ ಗುರುತಿಸಲ್ಪಟ್ಟಿರುವ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಲದಕಲ್ ಗ್ರಾಮದಲ್ಲಿ 12 ಜನೆವರಿ 1940ರಂದು ಜನಿಸಿದ ಶಿವರಾಜ ಪಾಟೀಲ್ರಿಗೆ ಈಗ 72ರ ಹರೆಯ.


ಮಲದಕಲ್, ರಾಯಚೂರು ಹಾಗೂ ಗುಲ್ಬರ್ಗದಲ್ಲಿ ತಮ್ಮ ವ್ಯಾಸಾಂಗವನ್ನು ಪೂರ್ಣಗೊಳಿಸಿದ ಶಿವರಾಜ ಪಾಟೀಲರು ನಡೆದು ಬಂದ ದಾರಿ ರೋಮಂಚನಕಾರಿ ಯಶೋಗಾಥೆ.


ಅವರ 22ನೇ ವಯಸ್ಸಿನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿ ನಂತರ ಕೈಗೊಂಡ ಜೀವನಸಾಧನೆ ಇಂದಿನ ಯುವಜನಾಂಗಕ್ಕೆ ಸ್ಪೂತರ್ಿಯ ಸೆಲೆಯಾಗಿದೆ. ವಕೀಲ ವೃತ್ತಿಯೊಂದಿಗೆ ಕಲ್ಬುಗರ್ಿಯ ಸೇಠ್ ಶಂಕರಲಾಲ್ ಲಾಹೋಟಿ ಕಾನೂನು ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಗೌರವಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ. ನ್ಯಾಯಾಂಗ ವೃತ್ತಿಯಲ್ಲಿ ಕಾಯಕ ಪ್ರಜ್ಞೆಯೊಂದಿಗೆ ಕಾರ್ಯನಿರ್ವಸಿದ ಶಿವರಾಜ ಪಾಟೀಲ್ ರಾಜ್ಯದ ಹಲವಾರು ಧಾಮರ್ಿಕ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.


32ವರ್ಷಗಳ ಹಿಂದೆ (1979) ರಾಜ್ಯ ರಾಜಧಾನಿ ಬೆಂಗಳೂರಿಗೆ ಆಗಮಿಸಿ ಹೈಕೋಟರ್್ನಲ್ಲಿ ತಮ್ಮ ವೃತ್ತಿಯನ್ನು ಆರಂಭಿಸಿದ ಅವರು ವೃತ್ತಿ ಜೀವನಕ್ಕೆ ವಿನೂತನ ಆಯಾಮವನ್ನು ಕಂಡುಕೊಂಡರು. ಹೈಕೋಟರ್್ನ ನ್ಯಾಯವಾದಿಗಳಾಗಿ ಸಕರ್ಾರದ ವಿವಿಧ ಇಲಾಖೆಗಳ ಪರವಾಗಿ ವಾದ ಮಂಡಿಸಿ ವೃತ್ತಿ ಜೀವನದಲ್ಲಿ ಯಶಸ್ಸು ಪಡೆದ ಶಿವರಾಜ ಪಾಟೀಲರು 1990ರಲ್ಲಿ ಕನರ್ಾಟಕ ಹೈಕೋಟರ್್ನ ನ್ಯಾಯಮೂತರ್ಿಗಳಾಗಿ ನೇಮಕಗೊಂಡರು. ನಂತರ ತಮಿಳುನಾಡು ಹಾಗೂ ರಾಜಸ್ಥಾನ ಹೈಕೋಟರ್ುಗಳ ಮುಖ್ಯ ನ್ಯಾಯಮೂತರ್ಿಗಳಾಗಿ ಸೇವೆ ಸಲ್ಲಿಸಿ ನ್ಯಾಯಾಂಗ ಇಲಾಖೆಯ ಘನತೆ, ಗೌರವಗಳನ್ನು ಹೆಚ್ಚಿಸಿದರು.


ನ್ಯಾಯಮೂತರ್ಿ ಶಿವರಾಜ ಪಾಟೀಲ್ರ ಸರಳತೆ, ಸಜ್ಜನಿಕೆ ನ್ಯಾಯಾಂಗ ಇಲಾಖೆಯ ಸೇವಾಬದ್ದತೆಯನ್ನು ಪರೀಶೀಲಿಸಿದ ಭಾರತ ಸಕರ್ಾರ ರಾಷ್ಟ್ರದ ಸವರ್ೋಚ್ಛ ನ್ಯಾಯಾಲಯದ ನ್ಯಾಯಮೂತರ್ಿಗಳನ್ನಾಗಿ ನೇಮಕ ಮಾಡಿತು. ಸುದೀರ್ಘ 4ದಶಕಗಳ ನ್ಯಾಯಾಂಗ ಸೇವೆಯ ನಂತರ 11 ಜನೆವರಿ 2005ರಂದು ತಮ್ಮ ವೃತ್ತಿಯಿಂದ ನಿವೃತ್ತರಾದರು.


ತಮ್ಮ ನಿವೃತ್ತಿಯ ನಂತರವು ವೃತ್ತಿಧರ್ಮದ ಪಾವಿತ್ರತೆಯನ್ನೇ ಪ್ರವೃತ್ತಿಯಾಗಿಸಿಕೊಂಡ ಸನ್ಮಾನ್ಯ ಜಸ್ಟೀಸ್ ಶಿವರಾಜ ಪಾಟೀಲ್ರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ ಕಾರ್ಯನಿರ್ವಹಿಸಿದರು. 21 ಶತಮಾನದ ಅತಿದೊಡ್ಡ ಹಗರಣವೆಂದು ಪರಿಗಣಿಸಲ್ಪಟ್ಟ ಕೇಂದ್ರ ಸಕರ್ಾರದ 2ಜಿ ತರಾಂಗತರಂಗ ಹಗರಣಕ್ಕೆ ಸಂಬಂದಿಸಿದ ತನಿಖೆಯನ್ನು ಅತಿ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿ ತನಿಖಾ ವರದಿಯನ್ನು ಕೇಂದ್ರ ಸಕರ್ಾರಕ್ಕೆ ಸಲ್ಲಿಸಿ ಭ್ರಷ್ಟ ರಾಜಕೀಯ ನಾಯಕರ ಪಾಲಿಗೆ ಸಿಂಹಸ್ವಪ್ನರಾದರು. ಶಿವರಾಜ ಪಾಟೀಲ್ರ ತನಿಖಾ ವರದಿಯಲ್ಲಿ ಚಿಕ್ಕಪುಟ್ಟ ಮೀನುಗಳೊಂದಿಗೆ, ಭಾರಿ ಗಾತ್ರ ತಿಮಿಂಗಲುಗಳೂ ಕೂಡ ಇದ್ದವು. ಇವರು ಮಾಡಿದ ಕೆಲಸ ನ್ಯಾಯಾಂಗ ಇಲಾಖೆಯ ಘನತೆಯ ಹೆಚ್ಚಿಸಿದಂತಾಗಿದೆ.


ಕನರ್ಾಟಕ ಸಕರ್ಾರ ಸನ್ಮಾನ್ಯ ಡಾ.ಎಂ. ಶಿವರಾಜ ಪಾಟೀಲ್ರನ್ನು ರಾಜ್ಯದಲ್ಲಿ ಬಾಲ್ಯವಿವಾಹಗಳನ್ನು ತಡೆಗಟ್ಟುವ ಉನ್ನತ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿತು. 72ರ ಉತ್ಸಾಹಿ ಶಿವರಾಜ ಪಾಟೀಲ್ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ವ್ಯಾಪಕ ಅಧ್ಯಯನದೊಂದಿಗೆ, ನೂರಾರು ಸಂಖ್ಯೆಯ ಬಾಲ್ಯವಿವಾಹಗಳನ್ನು ತಡೆಗಟ್ಟುವದರೊಂದಿಗೆ ಪಾಲಕರಲ್ಲಿ ಕಾನೂನಿನ ಪ್ರಜ್ಞೆಯನ್ನು ಮೂಡಿಸಿದರು. ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ ಎನ್ನುವುದು ಕೇವಲ ಸಂವಿಧಾನದ ಪುಟಗಳಿಗೆ ಮಾತ್ರ ಸೀಮಿತವಾದದ್ದನ್ನು ಅಕ್ಷರಶಃ ಜನಸಾಮಾನ್ಯರ ಸಾಮಾಜಿಕ ಬದುಕಿನಲ್ಲಿ ರೂಪಿಸಿದರು.


ಶಾಂತಿ, ಸರಳತೆ, ಶಿಸ್ತು, ಸಮಯಪಾಲನೆಯ ಅಧ್ಯಯನ ಶೀಲತೆಯನ್ನು ತಮ್ಮ ಜೀವನಶೈಲಿಯಾಗಿಸಿಕೊಂಡಿರುವ ನ್ಯಾಯಮೂತರ್ಿ ಶಿವರಾಜ ಪಾಟೀಲರು ರಾಜ್ಯದ ಲೋಕಾಯುಕ್ತರಾಗಿ ನೇಮಕಗೊಂಡಾಗ ರಾಜ್ಯದ ಉದ್ದಗಲಕ್ಕೂ ಕನರ್ಾಟಕ ಜನತೆ ಮಿಶ್ರಪ್ರತಿಕ್ರಿಯೆಗಳನ್ನು ದಾಖಲಿಸಿದರು. ಆಗಸ್ಟ್ ಮೊದಲನೇಯ ವಾರದಲ್ಲಿ ನಿವೃತ್ತರಾದ ನ್ಯಾಯಮೂತರ್ಿ ಸಂತೋಷ ಹೆಗ್ಡೆಯವರ ಸ್ಥಾನವನ್ನು ನ್ಯಾಯಮೂತರ್ಿ ಶಿವರಾಜ ಪಾಟೀಲರು ಯಶಸ್ವಿಯಾಗಿ ತುಂಬಬಲ್ಲರೇ, ಎನ್ನುವ ಕುಹಕುಹ ಮಾತುಗಳಿಗೆ ಪಾಟೀಲ್ರು ಮುಂಬರುವ ದಿನಗಳಲ್ಲಿ ನೀವೇ ನೋಡಿ ಎನ್ನುವ ಮಾಮರ್ಿಕ ಉತ್ತರವನ್ನು ನೀಡಿದ್ದಾರೆ. ಅವರ ಮಾತುಗಳು ಹೊಸ ಭರವಸೆಗಳನ್ನು ಸೃಷ್ಟಿಸಿವೆ. ಅದರಂತೆ ಲೋಕಾಯುಕ್ತ ಇಲಾಖೆಯ ಸಿಬ್ಬಂದಿಯ ಜವಾಬ್ದಾರಿಗಳನ್ನು ಸೂಚಿಸಿದ್ದಾರೆ. ಇದೇ ತಿಂಗಳು 9ರಂದು ಬೆಳಂಬೆಳಿಗ್ಗೆ ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ಕಪ್ಪು ಹಣವನ್ನು ಬಯಲಿಗೆಳೆದಿದ್ದಾರೆ. ಲೋಕಾಯುಕ್ತರ ದಾಳಿಗೆ ಸಿಕ್ಕ ಭ್ರಷ್ಟ ಅಧಿಕಾರಿಗಳನ್ನು ಯಾವುದೇ ಪರಿಸ್ಥಿತಿಯಲ್ಲಿ ಮರುನೇಮಕ ಮಾಡದೇ ಅಮಾನತಿನಲ್ಲಿಡಿ ಎನ್ನುವ ಸೂಚನೆಯನ್ನು ರಾಜ್ಯಸಕರ್ಾರಕ್ಕೆ ಕಟ್ಟುನಿಟ್ಟಾಗಿ ನೀಡಿದ್ದಾರೆ.


ತಮ್ಮ ಜೀವನದುದ್ದಕ್ಕೂ ಕರ್ತವ್ಯನಿಷ್ಠೆ, ಸೇವಾಪ್ರಜ್ಞೆ ಹಾಗೂ ಕಾಯಕ ಬದ್ದತೆಯನ್ನು ಪಾಲಿಸಿಕೊಂಡು ಬಂದಿರುವ ನ್ಯಾಯಮೂತರ್ಿ ಶಿವರಾಜ ಪಾಟೀಲರು ಸಕರಾತ್ಮಕ ಯೋಚನೆ ಹಾಗೂ ಯೋಜನೆಗಳ ಮುಖಾಂತರ ತಾವು ನಿರ್ವಹಿಸುವ ಯಾವುದೇ ಹುದ್ದೆಗೆ ಸಾಮಾಜಿಕ ನ್ಯಾಯ ನೀಡುತ್ತಾರೆ. ಭ್ರಷ್ಟಾಚಾರವನ್ನು ಯಾವುದೇ ಹಂತದಲ್ಲಿ ಸ್ವೀಕರಿಸುವುದಿಲ್ಲ. ಸಮಯಪಾಲನೆ, ಶೃದ್ದೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದರೆ, ಗುರಿಮುಟ್ಟಲು ಸಾಧ್ಯವೆಂದು ನಂಬಿದ್ದಾರೆ. ಒಂದು ಸಾರಿ ಭೇಟಿಯಾದರೆ, ಅವರನ್ನು ಆತ್ಮೀಯತೆಯ ನಗುಮೊಗದೊಂದಿಗೆ ಮಾತನಾಡಿಸಿ ತಮ್ಮ ನೆನಪಿನಂಗಳದಲ್ಲಿ ಶಾಶ್ವತವಾಗಿ ದಾಖಲಿಸಿಕೊಳ್ಳುತ್ತಾರೆ. ಮತ್ತೊಮ್ಮೆ ಭೇಟಿಯಾದಾಗ ಅವರನ್ನು ಹೆಸರಿಡಿದು ಕರೆಯುವುದು ಅವರ ಸೌಜನ್ಯತೆಗೊಂದು ಅತ್ಯುತ್ತಮ ನಿದರ್ಶನ. ಕಲ್ಬುಗರ್ಿಯಲ್ಲಿ ನ್ಯಾಯವಾದಿಯಾಗಿ ತಮ್ಮ ಸಾಮಾಜಿಕ ಬದುಕನ್ನು ರೂಪಿಸಿಕೊಂಡ ಶಿವರಾಜ ಪಾಟೀಲರು ತಮಗೆ ಮೊದಲ ಕೇಸನ್ನು ಕೊಟ್ಟ ಕಕ್ಷಿದಾರರನ್ನು ಇಂದಿಗೂ ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಸಮಯಪಾಲನೆಯ ಮಹತ್ವವನ್ನು ಅವರನ್ನು ನೋಡಿ ಕಲಿಯಬೆಕು. ಮುಂಜಾನೆ 5ಗಂಟೆಯಿಂದ ಆರಂಭಗೊಳ್ಳುವ ಅವರ ದಿನಚರಿ ರಾತ್ರಿ 11ರವರೆಗೆ ನಿರಂತರವಾಗಿ ಮುಂದುವರಿಯುತ್ತದೆ. ಸಮಯಕ್ಕೆ ನೀಡುವ ಗೌರವ ಅವರನ್ನು ಸದಾ ಪರಿಶ್ರಮಿಯನ್ನಾಗಿ ರೂಪಿಸಿದೆ. ತಾವು ಕಾರ್ಯನಿರ್ವಹಿಸುವ ಕಛೇರಿಯ ಮೇಜಿನ ಮೇಲೆ "ಕಾಯಕವೇ ಕೈಲಾಸ" ಎನ್ನುವ ಫಲಕಗಳು ಕೇವಲ ಆಡಂಬರದ ಫಲಕಗಳಾಗದೇ ಅವರ ಕಾರ್ಯದಕ್ಷತೆಯ ಸಂಕೇತಗಳಾಗಿವೆ.


ಪ್ರಸ್ತುತ ಸಂದರ್ಭದಲ್ಲಿ ಪಂಚಾಯತಿಯಿಂದ ಪಾಲರ್ಿಮೆಂಟಿನವರೆಗೆ ರಾಜಕೀಯ ಕ್ಷೇತ್ರ ಹೆಚ್ಚಿನ ಜನರಿಗೆ ಆಕರ್ಷಕ ಮತ್ತು ಗ್ಲಾಮರ್ಸ್ ಆಗಿದೆ. ಆದರೆ, ನ್ಯಾಯಮೂತರ್ಿ ಶಿವರಾಜ ಪಾಟೀಲರು ರಾಜಕೀಯ ಕ್ಷೇತ್ರದ ಉನ್ನತ ನಾಯಕರ ಪರಿವಾರದೊಂದಿಗೆ ವೈವಾಹಿಕ ಸಂಬಂಧಗಳನ್ನು ಹೊಂದಿದ್ದರೂ ಸಹ ರಾಜಕೀಯ ನಾಯಕರ ಪ್ರತಿಷ್ಠೆಗಳನ್ನು ತಮ್ಮ ವೈಯಕ್ತಿಕ ಉದ್ದೇಶಗಳಿಗೆ ಎಂದಿಗೂ ಬಳಸಿಕೊಳ್ಳದ ಅಪ್ಪಟ ಕಾಯಕ ಯೋಗಿ.


ಲೋಕಸಭೆಯ ಮಾಜಿ ಸಭಾಪತಿ, ಕೇಂದ್ರಸಕರ್ಾರದ ಮಾಜಿ ಗೃಹಮಂತ್ರಿ, ಪ್ರಸ್ತುತ ಪಂಜಾಬ ರಾಜ್ಯದ ರಾಜ್ಯಪಾಲರಾಗಿರುವ ಶಿವರಾಜ್ ಪಾಟೀಲರ ಪುತ್ರಿಯನ್ನು ಕಿರಿಯ ಮಗ ನ್ಯಾಯವಾದಿ ಬಸವಪ್ರಭು ಪಾಟೀಲ ವಿವಾಹವಾಗಿದ್ದರೆ, ಇನ್ನೊರ್ವ ಪುತ್ರರಾದ ಡಾ.ಶರಣು ಪಾಟೀಲ್ ರಾಜ್ಯದ ಕಾಂಗ್ರೇಸ್ ಪಕ್ಷದ ಹಿರಿಯ ನಾಯಕರಾದ ದಾವಣಗೆರೆ ಶಾಸಕ ಶ್ಯಾಮನೂರು ಶಿವಶಂಕರಪ್ಪ ಅವರ ಪುತ್ರಿಯನ್ನು ವಿವಾಹವಾಗಿದ್ದಾರೆ. ಆದರೆ, ರಾಜಕೀಯ ಸಂಬಂಧಗಳಿಂದ ಸಾಕಷ್ಟು ಅಂತರ್ವನ್ನು ಕಾಪಾಡಿಕೊಂಡಿದ್ದಾರೆ. ನೂತನ ಲೋಕಾಯುಕ್ತರಾಗಿ ನೇಮಕಗೊಂಡಿರುವ ನ್ಯಾಯಮೂತರ್ಿ ಡಾ.ಎಂ ಶಿವರಾಜಪಾಟೀಲರು ತಮ್ಮ ಅನುಭವ, ಕರ್ತವ್ಯಬದ್ದತೆ, ನ್ಯಾಯ ನಿಷ್ಠುರತೆಗಳಿಂದಾಗಿ ಲೋಕಾಯುಕ್ತ ಹುದ್ದೆಗೆ ಹೆಚ್ಚಿನ ಗೌರವವನ್ನು ನೀಡಲಿದ್ದಾರೆ ಎನ್ನುವುದು ಅವರ ಸಕಲ ಅಭಿಮಾನಿಗಳ ನಿರೀಕ್ಷೆಗಳು ನಿರಾಸೆಯಾಗುವುದಿಲ್ಲ ಎನ್ನುವ ವಿಶ್ವಾಸ ನನ್ನದು. ಶಿವರಾಜಪಾಟೀಲರ ವಿವಿಧ ಕ್ಷೇತ್ರಗಳ ಸಾಧನೆಗಳನ್ನು ಗುರುತಿಸಿ ರಾಜ್ಯ, ರಾಷ್ಟ್ರಾದ್ಯಂತ ಸಾವಿರಾರು ಸಂಖ್ಯೆಯ ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.


ಗುಲ್ಬಗರ್ಾ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬೆಂಗಳೂರಿನ ಬಸವ ಸೇವಾಸಮಿತಿ "ಬಸವ ರತ್ನ" ಪ್ರಶಸ್ತಿ ನೀಡಿ ಗೌರವಿಸಿದೆ. ಬಿಡುವಿಲ್ಲದ ಬದುಕಿನ ಮಧ್ಯೆ ಡಾ.ಎಂ ಶಿವರಾಜ ಪಾಟೀಲರ ಸಾಹಿತ್ಯಾಸಕ್ತಿ ಸಾಹಿತ್ಯ ಕ್ಷೇತ್ರದ ಸಾಧಕರ ಪಾಲಿಗೆ ಅಚ್ಚರಿಯ ಸಂಗತಿಯಾಗಿದೆ. ವೃತ್ತಿ ಜೀವನದ ಅನುಭವಗಳು ಹಾಗೂ ಸಾಮಾಜಿಕ ಚಿಂತನೆಯ ಹಿನ್ನಲೆಯಲ್ಲಿ ಅವರು ರಚಿಸಿದ 18ಸಾಹಿತ್ಯ ಕೃತಿಗಳು ಅವರನ್ನು ಸೃಜನಶೀಲ ಬರಹಗಾರರನ್ನಾಗಿ ರೂಪಿಸಿದೆ. ರಾಯಚೂರು ಜಿಲ್ಲಾ 7ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ (6,7 ಮಾಚರ್್ 2010) ಅವರು ನೀಡಿದ ಸುದೀರ್ಘ ಭಾಷಣ ಬೌದ್ಧಿಕ ಜಗತ್ತಿನ ಪಾಲಿಗೆ ಅಚ್ಚರಿ ಮತ್ತು ರೋಮಾಂಚನಕಾರಿಯಾಗಿದೆ.


ಸನ್ಮಾನ ಡಾ.ಎಂ ಶಿವರಾಜ ಪಾಟೀಲರ ಬದುಕಿನ ಸಾಧನೆ, ಏರಿದ ಎತ್ತರ, ಸಮಯಪ್ರಜ್ಞೆ, ಕಾಯಕಪ್ರಜ್ಞೆ, ಸೇವಾಕೈಂಕರ್ಯ, ಸಾಹಿತ್ಯಚಿಂತನೆ, ಜೀವನ ಮೌಲ್ಯಗಳು ರಾಯಚೂರು ಜಿಲ್ಲೆಯ ಗೌರವವನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಿದೆ.


ಅಯ್ಯಪ್ಪ ತುಕ್ಕಾಯಿ, ಸಾಹಿತಿಗಳು ರಾಯಚೂರು.

ಕುಗ್ರಾಮದಲ್ಲಿ ಅರಳಿದ ಪ್ರತಿಭೆ ಡಾ.ಸಂಗಪ್ಪ ಹಾಲಬಾವಿ

ಕುಗ್ರಾಮದಲ್ಲಿ ಅರಳಿದ ಪ್ರತಿಭೆ ಡಾ.ಸಂಗಪ್ಪ ಹಾಲಬಾವಿ



ಹಟ್ಟಿಯಲ್ಲಿ ಸುಮಾರು 6ವರ್ಷಗಳ ಹಿಂದೆ ಸಂಘಟನೆಯ ವತಿಯಿಂದ ಶಿವಪುತ್ರಪ್ಪ ಭೇರಿಯವರ ಅಧ್ಯಕ್ಷತೆಯಲ್ಲಿ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಅದಕ್ಕೆ ಪೂರಕವಾಗಿ ಅತಿಥಿಗಳನ್ನು ಆಯ್ಕೆ ಮಾಡಲು ರಾಯಚೂರಿನ ನೌಕರ ಸಂಘದ ಕಛೇರಿಯಲ್ಲಿ ಸಭೆ ಕರೆದು, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹನೀಯರನ್ನು ಆಹ್ವಾನಿಸಲು ತೀಮರ್ಾನಿಸಲಾಯಿತು.


ಸಭೆ ಅಧ್ಯಕ್ಷತೆ ವಹಿಸಿದ್ದ ಶಿವಪುತ್ರಪ್ಪ ಭೇರಿಯವರು ಶಿಬಿರಕ್ಕೆ ಮುಖ್ಯ ಅತಿಥಿಯನ್ನಾಗಿ ಸಂಗಪ್ಪ ಹಾಲಬಾವಿ ಎನ್ನುವ ಉಪನ್ಯಾಸಕರನ್ನು ಕರೆಸೋಣ, ಸಧ್ಯ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುತ್ತಿದ್ದಾರೆ, ಒಂದು ಬಾರಿ ಅವರನ್ನು ಕಂಡು ಸಮಯವನ್ನು ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು.


ಕಾರ್ಯಕ್ರಮದ ಉಸ್ತುವಾರಿಯನ್ನು ಹೊತ್ತಿದ್ದ ಅಣ್ಣ ಭೀಮಣ್ಣ ನಗನೂರು ಮತ್ತು ನಾನು ಸಂಗಪ್ಪನವರನ್ನು ಸಂಪಕರ್ಿಸುವ ಜವಾಬ್ದಾರಿಯನ್ನು ಹೊತ್ತು, ಅವರಿರುವ ವಿಳಾಸವನ್ನು ಪಡೆದು ನಮ್ಮ ಶಿಬಿರದ ಅಹವಾಲೆನ್ನೆಲ್ಲ ತಿಳಿಸಿದೆವು. ಅದಕ್ಕೆ ಅಂದು ಸಂಗಪ್ಪನವರು ಸಕರಾತ್ಮಾಕವಾಗಿಯೇ ಸ್ಪಂದಿಸಿ, ಸಂತೋಷದಿಂದ ಶಿಬಿರಕ್ಕೆ ಬರುವುದಾಗಿ ತಿಳಿಸಿದ್ದರು. ಕೊನೆಗೆ ವಿಶ್ವವಿದ್ಯಾನಿಲಯದ ಕೆಲಸದ ಒತ್ತಡದಲ್ಲಿ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲವೆಂದು ತಿಳಿಸಿದರು.


ನಾವು ಅವರನ್ನು ನೋಡದೇ, ಅವರು ನಮ್ಮನ್ನು ನೋಡದೇ, ಸಾಮಾಜಿಕ ಕಾರ್ಯಕ್ರಮಕ್ಕೆ ಬರುತ್ತೀವೆಂದು ಅವರು ಹೇಳಿದ ಮಾತೇ ನಮಗೆ ಆಶಾದಾಯಕವೆನಿಸಿತ್ತು.


ಆಗ ಮಾತ್ರ ಸಂಪರ್ಕದಲ್ಲಿದ್ದ ಸಂಗಪ್ಪನವರನ್ನು ಪುನಃ ಸಂಪಕರ್ಿಸಲು ಬೇರೆ ಬೇರೆ ಕಾರಣಗಳಿಂದ ಇಲ್ಲಿಯವರೆಗೆ ಅಂದರೆ, ಸುಮಾರು 7ವರ್ಷಗಳ ಕಾಲ ಸಾಧ್ಯವಾಗಿರಲಿಲ್ಲ.


ಮೊನ್ನೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಹೆಚ್.ಡಿಗಾಗಿ ನೋಟಿಫಿಕೇಷನೊಂದು ಹೊರಬಿದ್ದ ನಂತರ ನಾನು ಮಂಗಳೂರಿಗೆ ಹೋಗಬೇಕಾಗಿ ಬಂತು. (ಪ್ರವೇಶ ಬಯಸಿ ಅಜರ್ಿಯನ್ನು ಸಲ್ಲಿಸಲು) ಅದರಂತೆ ಮಂಗಳೂರಿಗೆ ಹೋಗಿ ನನ್ನ ಕೆಲಸವನ್ನು ಮುಗಿಸಿಕೊಂಡು ಹಿಂತಿರುಗುವಾಗ 2ನೇ ಮಹಡಿಯಲ್ಲಿ ಸಂಗಪ್ಪ ಹಾಲಬಾವಿಯವರ ಕೊಠಡಿಯ ನಾಮಫಲಕ ಕಣ್ಣಿಗೆ ಬಿತ್ತು. ಆ ಕ್ಷಣಕ್ಕೆ 7 ವರ್ಷಗಳ ಹಿಂದೆ ಶಿಬಿರದ ಸಲುವಾಗಿ ಸಂಪರ್ಕ ಮಾಡಿದ್ದ ಸಂಭಾಷಣೆ ನೆನಪಿಗೆ ಬಂತು.


ತಡಮಾಡದೇ, ನೇರವಾಗಿ ಸಂಗಪ್ಪನವರ ಕೊಠಡಿಗೆ ತೆರಳಿ, ಸಾರ್.. ನಾನು ಹಟ್ಟಿಯಿಂದ ಬಂದಿದ್ದೇನೆ, ತಮ್ಮನ್ನು ಈ ಹಿಂದೆ ನಾವುಗಳು ಶಿಬಿರದ ಮುಖ್ಯಅತಿಥಿಗಳಾಗಿ ಆಹ್ವಾನಿಸಿದ್ದೇವು.. ನಂತರ ತಾವ್ಯಾರೆಂಬುದನ್ನು ಸಹಿತ ನೋಡಿಲ್ಲ, ಕಾರಣ ನಾವುಗಳು ತಮ್ಮನ್ನು ಕಾಣಲು ಒಳಗಡೆ ಬರಬಹುದಾ... ಎಂದು ಕೇಳುತ್ತಿದ್ದಂತೆ ಸಂಗಪ್ಪನವರು ಏಕಾಏಕಿ ತಾವು ಮಾಡುತ್ತಿದ್ದ ಪ್ರಾಜೆಕ್ಟ್ನ ಕೆಲಸವನ್ನು ಬಿಟ್ಟು, ಬನ್ನಿ ಸಾರ್.. ಒಳಗಡೆ ಎಂದರು. ನೀವುಗಳು ಸುಮಾರು ಆರೇಳು ವರ್ಷಗಳ ಕೆಳಗೆ ಹಟ್ಟಿಯಲ್ಲಿ ಕಾರ್ಯಕ್ರಮದ ನಿಮಿತ್ಯ ನಮ್ಮನ್ನು ಆಹ್ವಾನಿಸಿದಾಗ ಕಾರಣಾಂತರಗಳಿಂದ ನನಗೆ ಆಗಿರಲಿಲ್ಲವೆಂದು ಹೇಳುತ್ತಾ ಪರಿಚಯ ಮಾಡಿಕೊಂಡು ಮಾತನಾಡಲು ಆರಂಭಿಸಿದರು.


ನನಗೊಂದು ರೀತಿಯಲ್ಲಿ ಸಂತಸ. ಅದರಂತೆ ಸಂಗಪ್ಪನವರಿಗೂ ನಮ್ಮ ಕಡೆಯವರು ಒಬ್ಬರು ಹೆಸರೇಳಿಕೊಂಡು ಬಂದು ಭೇಟಿಯಾಗಿದ್ದರಲ್ಲಾ ಎಂಬ ಖುಷಿ.


ಈ ಎರಡರ ಮಧ್ಯೆ ನಾನೊಬ್ಬ ಪತ್ರಕರ್ತನಾಗಿ ವಿಚಾರ ಮಾಡುತ್ತಾ, ಸಂಗಪ್ಪನವರು ಹಾಲಬಾವಿ ಎಂಬ ಕುಗ್ರಾಮದಿಂದ ಮಂಗಳೂರು ವಿಶ್ವವಿದ್ಯಾನಲಯದವರೆಗೆ ಹೇಗೆ ಬೆಳೆದುಬಂದರು ಎಂಬುದರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದೆ. ಅದಕ್ಕಾಗಿ ಸಣ್ಣದೊಂದು ಸಂದರ್ಶನವನ್ನು ಅಂದು ಸಂಗಪ್ಪನವರಿಗೆ ಮಾಡಲು ಕ್ಷಣದಲ್ಲಿ ತೀಮರ್ಾನಿಸಿದೆ.


ಆಗ ಸಂಗಪ್ಪನವರು ತಮ್ಮ ಅದ್ಬುತ ಬದುಕು ಕಟ್ಟಿಕೊಂಡ ಪರಿಯನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾ ಸಾಗಿದರು.


1972ರಲ್ಲಿ ಹಾಲಬಾವಿ ಎಂಬ ಕುಗ್ರಾಮದ ದಲಿತ ಕುಟುಂಬದಲ್ಲಿ ಹುಟ್ಟಿದ ನಾನು ಹಳ್ಳಿಗಾಡಿನಲ್ಲಿ ಕನ್ನಡ ಶಾಲೆ ಓದಿ, ಗುಲ್ಬಗರ್ಾ ವಿಶ್ವವಿದ್ಯಾನಿಲಯದಿಂದ 1997ರಲ್ಲಿ ಎಂ.ಎಸ್ಸಿ ಭೌತಶಾಸ್ತ್ರ ವಿಷಯದಲ್ಲಿ ಪ್ರಥಮ ದಜರ್ೆಯೊಂದಿಗೆ ಪದವಿಯನ್ನು ಪಡೆದಿದ್ದೇನೆ. ನಂತರ 1998ರಲ್ಲಿ ಅದೇ ವಿಶ್ವವಿದ್ಯಾನಿಲಯದಿಂದ ಎಂ.ಫಿಲ್ ಪದವಿಯನ್ನು ಪಡೆದು ನಂತರ ಯುಜಿಸಿ ಆಯೋಜಿಸುವ ನೆಟ್ನ್ನು ಉತ್ತಮ ದಜರ್ೆಯಲ್ಲಿ ತೆರ್ಗಡೆಗೊಳಿಸಿದ್ದೇನೆ.


1990ರಲ್ಲಿ ಮೊದಲ ಬಾರಿಗೆ ಮೈಸೂರಿನ ಯುವರಾಜ ಕಾಲೇಜಿನ ಭೌತಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕ ವೃತ್ತಿ ಆರಂಭಿಸಿದ ನಾನು ನಂತರ 2003ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಅಧಿಕೃತವಾಗಿ ಸೇರಿಕೊಂಡು ಕೆಲಸ ನಿರ್ವಹಿಸತೊಡಗಿದೆ.

02-05-2008 gÀ°è "Studies on natural and man-made polymers using X-ray diffraction method" ಎಂಬ ವಿಷಯದ ಮೇಲೆ ಪ್ರೋ. ಆರ್ ಸೋಮಶೇಖರವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ನಂತರ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಹೆಚ್ಡಿ ಪದವಿ ಬಂತೆಂದು ಹೇಳಿದರು.


ಇಷ್ಟೆಲ್ಲವನ್ನು ಸಂಗಪ್ಪನವರು ಹೇಳುತ್ತಿದ್ದಂತೆ ನಾನು ಮತ್ತಷ್ಟು ಕುತೂಹಲದಿಂದ ಅವರ ಕುರಿತು ಮಾಹಿತಿ ಕಲೆಹಾಕಲು ಪ್ರಯತ್ನಿಸಿದೆ.


ಅಲ್ಲಿಂದ ಹಟ್ಟಿಗೆ ವಾಪಸ್ಸಾದ ನಾನು ಸಂಗಪ್ಪನವರ ಒಡನಾಡಿಗಳು, ಸ್ನೇಹಿತರು, ವಿಶ್ವವಿದ್ಯಾನಿಲಯದ ಸಿಬ್ಬಂದಿಗಳು, ಹಿತೈಷಿಗಳನ್ನು ಭೇಟಿ ಮಾಡಿ ಅವರ ವ್ಯಕ್ತಿತ್ವ, ಅಧ್ಯಯನ, ಆ ಮಟ್ಟದಲ್ಲಿ ಬೆಳೆದುಬಂದ ಹಾದಿ ಎಲ್ಲದರ ಕುರಿತು ಮಾಹಿತಿ ಸಂಗ್ರಹಿಸಿದೆ. ನಂತರದ ಬೆಳವಣಿಗೆಯಲ್ಲಿ ನನಗೆ ಸಿಕ್ಕ ಮಾಹಿತಿ ನನ್ನನ್ನೇ ನಿಬ್ಬೆರಗಾಗುವಂತೆ ಮಾಡಿತು.


ಸಂಗಪ್ಪನವರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ ಚಂಡಿಘಡ, ಗ್ವಾಲಿಯಾರ್, ಅಮೃತಸರ್, ಮುಂಬಯಿ, ಜೈಪುರ, ಚನೈ, ದೆಹಲಿ, ಕೇರಳದ ಕೊಟ್ಟಾಯಂ ಹಾಗೂ ಜರ್ಮನಿ, ಮಲೇಷಿಯಾದಂತಹ ರಾಷ್ಟ್ರಗಳಲ್ಲಿ ಭೌತಶಾಸ್ತ್ರಕ್ಕೆ ಸಂಬಂಧಿಸಿದ ಹತ್ತು ಹಲವು ಅಂತರಾಷ್ಟ್ರೀಯ, ರಾಷ್ಟ್ರೀಯ ಸಮ್ಮೇಳನ, ಕಾರ್ಯಗಾರ ಮತ್ತು ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಸಂಶೋದನಾ ವರದಿ, ಪ್ರಾಜೆಕ್ಟ್ಗಳನ್ನು ಮಂಡಿಸುತ್ತಾ ಉಪನ್ಯಾಸ ನೀಡಿದ್ದಾರೆ.


ಮುಂದಿನ ತಿಂಗಳು ಇಂಡೋನೇಷ್ಯಾದಲ್ಲಿ ನಡೆಯಲಿರುವ ಭೌತಶಾಸ್ತ್ರಕ್ಕೆ ಸಂಬಂಧಿಸಿದ ಕಾರ್ಯಗಾರದಲ್ಲಿ ಸಂಗಪ್ಪನವರು ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿಯೂ ಬಲ್ಲಮೂಲಗಳಿಂದ ತಿಳಿದು ಬಂತು.


ಜೂನ್ 29 ರಿಂದ ಜುಲೈ 1, 2009, ರವೆಗೆ ಕೌಲಾಲಂಪುರದಲ್ಲಿ ನಡೆದ International Conference on Neutron and X-ray Scattering (ICNX-2009) ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಸಂಗಪ್ಪನವರು Microstructural parameters in 8 MeV Electron irradiated Bombyx mori silk fibers by wide-angle X-ray scattering studies (WAXS), ವಿಷಯದ ಕುರಿತು ಸುಧೀರ್ಘವಾದ ವರದಿಯನ್ನು ಮಂಡಿಸಿರುತ್ತಾರೆ.


ನಂತರ ಕುಟುಂಬ ಹಿನ್ನಲೆಯ ಕುರಿತು ನಾನೊಂದೆರಡು ಪ್ರಶ್ನೆಗಳನ್ನು ಸಂಗಪ್ಪನವರನ್ನು ಕೇಳಿದಾಗ ಅವರಾಡಿದ ಒಂದೆರಡು ಮಾತುಗಳು ಹೀಗಿವೆ..


ನಮ್ಮದೊಂದು ದಲಿತ ಕುಟುಂಬ, ನಾವೆಲ್ಲರೂ ದುಡಿದೇ ಜೀವನ ಸಾಗಿಸಬೇಕು. ನಮಗಿರುವುದು ತುಂಡುಭೂಮಿ. ಅದು ಮಳೆ ಬಂದರೆ ಮಾತ್ರ ಬೆಳೆ. ಆಥರ್ಿಕವಾಗಿಯೂ ಹಿಂದುಳಿದಿರುವ ನಮ್ಮ ಕುಟುಂಬವನ್ನು ತಂದೆಯವರಾದ ಯಲ್ಲಪ್ಪನವರು ಅಂದು ಮುನ್ನಡೆಸಿಕೊಂಡು ಹೋಗಿ, ನಮಗೆ ತಕ್ಕಮಟ್ಟಿನ ಶಿಕ್ಷಣವನ್ನು ನೀಡಿದ್ದೇ, ನಾವಿಂದು ಈ ಹಂತಕ್ಕೆ ಬರಲು ಸಾಧ್ಯವಾಗಿದೆ.


ನಮ್ಮ ಆಥರ್ಿಕತೆ, ಬಡತನವನ್ನಿರತು ನಾನು ಬುದ್ದಿವಂತಿಕೆಯಿಂದ ಕಷ್ಟಪಟ್ಟು ಓದಿ ಎಲ್ಲದರಲ್ಲಿ ಪ್ರಥಮ ದಜರ್ೆಯಲ್ಲಿ ಮುಂದೆ ಬಂದಿದ್ದೇವೆ. ಇಂದು ಐಷಾರಾಮಿಯಾಗಿ ಹತ್ತಾರು ದೇಶಗಳನ್ನು ಸುತ್ತಿ, ನೂರಾರು ಸಮ್ಮೇಳನಗಳಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿರುವುದು ಅಂದು ನನ್ನ ತಂದೆ ತಾಯಿಗಳು ಕಷ್ಟದ ಸಂದರ್ಭದಲ್ಲಿ ಓದಿಸಿದ್ದೇ ಆಗಿದೆ. ಇಲ್ಲವೆಂದರೆ, ನಮ್ಮಂತವರು ಇಂತಹ ವಿಭಾಗಗಳಲ್ಲಿ ಬರಲು ಆಗುವುದಿಲ್ಲವೆಂದು ಆನಂದ ಬಾಷ್ಪ ಹರಿಸಿದರು.


ಸಂಗಪ್ಪನವರ ಬದುಕು-ಬವಣಿಯನ್ನೆಲ್ಲ ಕೇಳಿದ ನನಗೆ ತಕ್ಷಣ ಅನಿಸಿದ್ದು, ನಮ್ಮ ಪತ್ರಿಕೆಯಲ್ಲಿ ಅಣ್ಣನ ಕುರಿತು ಒಂದೆರಡು ಸಾಲುಗಳಾದರೂ ಬರೆಯಬೇಕೆಂದು.


ಒಬ್ಬ ವ್ಯಕ್ತಿ ಜೀವನದಲ್ಲಿ ಎಲ್ಲ ಸವಾಲುಗಳನ್ನು ಎದುರಿಸಿ ಹೇಗೆ ಮುಂದೆ ಬರಬೇಕು ಎನ್ನುವವರಿಗೆ ಸಂಗಪ್ಪಣ್ಣ ಮಾದರಿಯಾಗಿದ್ದಾರೆ. ಕಾರಣ ಈ ಸಂಪಾದಕೀಯವನ್ನು ಬರೆಯಬೇಕಾಗಿ ಬಂತು.


ಹೀಗಿರುವಾಗ ನಮ್ಮವರೊಬ್ಬರು ಕಷ್ಟುಪಟ್ಟು ಮೇಲೆ ಹೋಗಿದ್ದಾರೆಂದರೆ ನಾವೆಲ್ಲರೂ ಹೆಮ್ಮೆ ಪಡಬೇಕು ಮತ್ತು ಅವರಿಗೆ ಶುಭವಾಗಲಿ ಎಂದು ಹಾರೈಸಬೇಕು.

Thursday, September 1, 2011

"ನಿರಂತರ ಹೋರಾಟಗಾರ ಬಾಲಸ್ವಾಮಿ ಕೊಡ್ಲಿ"

ರಾಯಚೂರು ಜಿಲ್ಲೆ ಎಂದರೆ, ಹೆಚ್ಚುಕಡಿಮೆ ಬಿಸಿಲು, ಬಡತನ, ನಿರುದ್ಯೋಗದ ತವರು ಎಂಬುದು ಕೆಲವರ ಉವಾಚ. ಅದರಂತೆ ಇಲ್ಲಿ ಸಾಹಿತಿಗಳು, ಹೋರಾಟಗಾರರು, ಪ್ರಗತಿಪರರು ತಮ್ಮದೇ ರೀತಿಯಲ್ಲಿ ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ಕೊಡುಗೆಗಳನ್ನು ನೀಡಿರುತ್ತಾರೆ ಎಂಬುದು ಕೂಡ ಇನ್ನು ಕೆಲವರ ಅಭಿಪ್ರಾಯ.ಈ ನಿಟ್ಟಿನಲ್ಲಿ ನಾವು ಜಿಲ್ಲೆಯ ಆಗು-ಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ, 80ರ ದಶಕದಲ್ಲಿ ನಡೆದ ಭೂಹೋರಾಟಗಳು, ದಲಿತ ಚಳುವಳಿಗಳು ನೆನಪಿಗೆ ಬರುತ್ತವೆ. ಯಾಕೆಂದರೆ, ಅದೊಂದು ಸಮಯ ಭೂಮಾಲೀಕ ಪದ್ದತಿ, ಜೀತುದಾಳು ವ್ಯವಸ್ಥೆ, ಅಸ್ಪೃಶ್ಯತೆ ರಾಯಚೂರು ಜಿಲ್ಲೆಯನ್ನು ಬಲುಜೋರಾಗಿ ಅವಲಂಭಿಸಿಕೊಂಡಿತ್ತು. ಹಾಗಾಗಿ ಅವುಗಳ ವಿರುದ್ಧ ಹೋರಾಟಗಳನ್ನು ರೂಪಿಸಲು, ಜನರನ್ನು ಜಾಗೃತಿಗೊಳಿಸಲು, ದೂರದ ಊರಿಂದ ಬಂದಂಥಹ ಪ್ರಗತಿಪರ, ದಲಿತ ಸಂಘಟನೆಗಳು ಹುಟ್ಟಿಕೊಂಡವು. ಕ್ರಮೇಣ ಹೋರಾಟದ ರೂಪುರೇಷೆಗಳು ಜಿಲ್ಲೆಯಾಧ್ಯಂತ ವಿಸ್ತರಿಸಿಕೊಳ್ಳುತ್ತಿದ್ದಂತೆ ವ್ಯವಸ್ಥೆಯಲ್ಲಿ ತಕ್ಕಮಟ್ಟಿನ ಬದಲಾವಣೆಗಳು ಆಗತೊಡಗಿದವು.ಆದರೆ, 80ರ ದಶಕದಲ್ಲಿ ನಡೆದ ಅವ್ಯಾಹತ ದಲಿತ ಚಳುವಳಿಗಳಲ್ಲಿ ಒಬ್ಬ ದಲಿತ ಕುಟುಂಬದ ನಾಯಕನೊಬ್ಬ ಪ್ರಗತಿಪರ ಆಲೋಚನೆಗಳನ್ನೊಳಗೊಂಡು ಭವಿಷ್ಯತ್ತಿನ ನಿರಂತರ ನಾಯಕನಾಗಿ ಬೆಳೆಯುತ್ತಾನೆ. ಅಂದಿನ ಎಲ್ಲಾ ಹೋರಾಟಗಳಲ್ಲಿ ಮುಂಚೂಣೆ ನಾಯಕತ್ವವನ್ನು ಪಡೆಯುತ್ತಾ, ಜನಸಮೂಹದ ಮುಖಂಡನಾಗಿ ಮುನ್ನುಗ್ಗುತ್ತಾನೆ. ಆ ವ್ಯಕ್ತಿ ಮುಂದೊಂದು ದಿನ ಸಕರ್ಾರಿ ನೌಕರನಾಗಿ ಸಮಾಜದ ಸುಧಾರಣೆಗಾಗಿ ಹಗಲಿರುಳು ಶ್ರಮಿಸುತ್ತಾ ಬರುತ್ತಾನೆ. ಅಂತಹ ವ್ಯಕ್ತಿಯನ್ನು ನಾವೀಗ ಈ "ಎಲೆಮರೆಯಕಾಯಿ" ಅಂಕಣದಲ್ಲಿ ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದೇವೆ.1962ರಲ್ಲಿ ಆಶರ್ಿವಾದಪ್ಪ ಮರಿಯಮ್ಮ ದಂಪತಿಗಳಿಗೆ ಜನಿಸಿದ ಈ ವ್ಯಕ್ತಿಯೇ "ಬಾಲಸ್ವಾಮಿ ಕೊಡ್ಲಿ" ಹುಟ್ಟೂರು ಉದ್ಬಾಳ ಆದರೂ ಮಾನ್ವಿ ಹಾಗೂ ಸಿಂಧನೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದು, ರಾಯಚೂರಿನ ಎಲ್.ವಿ.ಡಿಯಲ್ಲಿ ಪದವಿ ಮುಗಿಸಿದರು. ತಮ್ಮ ಓದಿನ ಜೊತೆಯಲ್ಲಿ ಸಮಾಜ ಪರಿವರ್ತನೆಯಂತಹ ಚಳುವಳಿಗಳಲ್ಲಿ ತೊಡಗಿಕೊಳ್ಳುತ್ತಿದ್ದರು.ಜಿಲ್ಲೆ ಕಂಡ, ಜಂಬಣ್ಣ ಅಮರಚಿಂತ, ಚೆನ್ನಣ್ಣ ವಾಲೀಕಾರ ರಂತ ಹೋರಾಟಗಾರರ ಜೊತೆ ಸಖ್ಯ ಬೆಳೆಸಿದ್ದರು. ಇವರ ಗುರುಗಳಾದ ಭೀಮಣ್ಣ ನಗನೂರುರವರ ಜೊತೆಗೂಡಿ, ಹಳ್ಳಿಹಳ್ಳಿಗಳಿಗೆ ಸಾಗಿ ದಲಿತ ಸಂಘಟನೆಯನ್ನು ಗಟ್ಟಿಗೊಳಿಸುತ್ತಿದ್ದರು. ಉತ್ತಮ ಸಮಾಜವನ್ನು ನಿಮರ್ಾಣ ಮಾಡಬೇಕಾದರೆ, ಹೋರಾಟವು ಅನಿವಾರ್ಯ. ಅದುವೇ ಪಯರ್ಾಯ ಎಂದು ತಿಳಿದು ಎಲ್ಲ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅದೇ ಇಂದು ಅವರಿಗೆ ಯಶಸ್ಸನ್ನು ತಂದುಕೊಟ್ಟಿದೆ ಎಂದರೆ, ತಪ್ಪಾಗಲಾರದು.1984ರಲ್ಲಿ ಸಕರ್ಾರಿ ನೌಕರಿಗೆ ಸೇರಿದ ಬಾಲಸ್ವಾಮಿಕೊಡ್ಲಿ, ಪ್ರಾರಂಭದಲ್ಲಿ ಕೋಲಾರದ ಭಾಗೇಪಲ್ಲಿಯಲ್ಲಿ ರೇಷ್ಮೇ ಇಲಾಖೆಯ ನೌಕರರಾಗಿ ಕೆಲಸ ಮಾಡಿದರು. ಅಲ್ಲಿಯೂ ಕೂಡ ಜನಪರ ಹೋರಾಟಗಳನ್ನು ರೂಪಿಸುತ್ತಾ, ನೊಂದವರಿಗಾಗಿ ಶ್ರಮಿಸಿದರು. ಒಂದು ಸಂದರ್ಭದಲ್ಲಿ ಅಲ್ಲಿನ ಬರಪರಿಸ್ಥಿತಿಯ ಹೊತ್ತಿನಲ್ಲಿ ಡಾ||ರಾಜಕುಮಾರ್ರನ್ನು ಆಹ್ವಾನಿಸಿ ಬಹುದೊಡ್ಡ ಮನೋರಂಜನಾ ಕಾರ್ಯಕ್ರಮವನ್ನು ಮಾಡಿ, ಬರಪರಿಹಾರಕ್ಕೆ ತುತ್ತಾದವರಿಗೆ 1ಲಕ್ಷರೂಪಾಯಿಯನ್ನು ಕಲಾವಿದರಿಂದ ಕೊಡಿಸಿದ್ದರು. ಅದು ಬರಪೀಡಿತರಿಗೆ ಆಸರೆಯಾಯಿತು.ನಂತರ ಅಲ್ಲಿಂದ ತವರು ಜಿಲ್ಲೆಗೆ ವರ್ಗವಾಗಿ ಬಂದ ಬಾಲಸ್ವಾಮಿ ಕೊಡ್ಲಿ, ಜಿಲ್ಲೆಯಲ್ಲಿ ಹತ್ತಾರು ಹೋರಾಟಗಳನ್ನು ರೂಪಿಸುತ್ತಾ, ಜನಪರ ಪ್ರತಿಭಟನೆಗಳಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡುತ್ತಾ ವ್ಯವಸ್ಥೆಯ ಮಜಲುಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತಿದ್ದರು.ವಿಚಾರ ಸಂಕೀರ್ಣಗಳು, ಕವಿಗೋಷ್ಠಿಗಳಂತಹ ತದಿತರ ವೇದಿಕೆಗಳಲ್ಲಿ ಕೆಚ್ಚೆದೆಯ ಮಾತುಗಳನ್ನಾಡಿ ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದರು.ಆ ನಂತರದ ದಿನಗಳಲ್ಲಿ ಕೊಡ್ಲಿ, ಮಾನ್ವಿ ತಾಲೂಕಿನ ಸಕರ್ಾರಿ ನೌಕರರ ಸಂಘಕ್ಕೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಇವರಲ್ಲಿನ ನಾಯಕತ್ವದ ಗುಣಗಳು ರಾಜ್ಯಮಟ್ಟದ ನಾಯಕರನ್ನು ಇಣುಕಿಸಿ ನೋಡುವಂತಿದ್ದವು. ಪ್ರಬಲ ನಾಯಕತ್ವವನ್ನು ಹೊಂದಿದ ಬಾಲಸ್ವಾಮಿಯವರು ಸಕರ್ಾರಿ ನೌಕರರ ಹತ್ತಾರು ಸಮಸ್ಯೆಗಳನ್ನು ರಾಜ್ಯಸಕರ್ಾರಗಳ ಗಮನಕ್ಕೆ ತಂದು ಅವುಗಳಿಗೆ ಪರಿಹಾರ ಕಂಡುಕೊಂಡಿದ್ದರು. ರಾಜ್ಯಾಧ್ಯಂತ ಎಲ್ಲಿಯಾದರೂ ಸಕರ್ಾರಿ ನೌಕರರ ಮೇಲೆ ಹಲ್ಲೆ, ದೌರ್ಜನ್ಯಗಳಾದರೆ, ತಕ್ಷಣವೇ ಪ್ರತಿಭಟಿಸುವ ಬಲವನ್ನು ಹೊಂದಿದ್ದರು. ನೌಕರಿಗಿಂತ ಮುಂಚೆ ದಲಿತ ಚಳುವಳಿಗಳಲ್ಲಿ ಕಲಿತಿದ್ದ ಹೋರಾಟದ ಮಾದರಿಗಳನ್ನು ಇಲ್ಲಿಯೂ ಅಳವಡಿಸಿಕೊಂಡು ಸಮಾಜಪರಿವರ್ತನೆಯ ಕೆಲಸವನ್ನು ಮಾಡತೊಡಗಿದರು. ಇವರ ಹೋರಾಟದ ಚಾಕಚಕ್ಯತೆಯನ್ನು ಅರಿತಿರುವ ರಾಜ್ಯಮುಖಂಡರು ಇವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗುಲ್ಬಗರ್ಾ ವಿಭಾಗೀಯ ಮಟ್ಟದ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು. ಜಿಲ್ಲೆಯಲ್ಲಿ ಸಕರ್ಾರಿ ನೌಕರರು ಎಂಥಹದ್ದೇ ಸಮಸ್ಯೆಯೊಂದನ್ನು ಹೊತ್ತು ತಂದರೆ, ಅದಕ್ಕೆ ತಕ್ಷಣ ಸ್ಪಂದಿಸಿ ಸಂಬಂಧಪಟ್ಟ ಇಲಾಖೆಯಿಂದ ಪರಿಹಾರ ಕೊಡಿಸುತ್ತಿದ್ದರು.ಇತ್ತೀಚಿಗೆ ನವೆಂಬರ್ನಲ್ಲಿ ಬಾಲಸ್ವಾಮಿಯವರು ಮಾಡಿದ ಮಹಾ ಸಾಧನೆಯೆಂದರೆ, ಒಬ್ಬ ಸಕರ್ಾರಿ ನೌಕರರಾಗಿ ಹತ್ತಾರು ಜಾತಿಗಳ ಭಾವೈಕ್ಯತೆಯ, ಸರ್ವಧರ್ಮ 193ಜೋಡಿ ಸಾಮೂಹಿಕ ವಿವಾಹಗಳನ್ನು ನೆರೆಹಾವಳಿಯಲ್ಲಿ ಸಂತ್ರಸ್ತರಾದ ಕುಟುಂಬಗಳಿಗಾಗಿ ಮಾಡಿದರು. ಅದೊಂದು ಇತಿಹಾಸ. ಇಂದಿನ ಸಮಾಜ ಜಾತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಅವಲಂಭಿಸಿದೆ. ದಲಿತರು, ಹಿಂದುಳಿದವರು ಯಾವುದಾದರೂ ಕಾರ್ಯಕ್ಕೆ ಕೈ ಹಾಕಿದರೆ, ಅದನ್ನು ಯಶಸ್ವಿ ಮಾಡುವವರಿಗಿಂತ ಹಾಳು ಮಾಡಬೇಕೆಂಬುವವರ ಸಂಖ್ಯೆಯೆ ಜಾಸ್ತಿ ಇರುತ್ತದೆ. ಅಂತಹದರಲ್ಲಿ ಒಬ್ಬ ದಲಿತ ನೌಕರನಾಗಿ ಸಾಮೂಹಿಕ ವಿವಾಹಗಳನ್ನು ಮಾಡುವುದೆಂದರೆ, ಸುಲಭದ ಮಾತೇನಲ್ಲ.ಹಿಂದೂ, ಮುಸ್ಲಿಂ, ಕ್ರೈಸ್ತ ರಿಗೆ ಅವರವರ ಧರ್ಮದನ್ವಯ ಗುರುಗಳನ್ನು ಕರೆತಂದು ಅದ್ದೂರಿಯಾಗಿ ಮಾನ್ವಿಯಲ್ಲಿ ಸಾಮೂಹಿಕ ವಿವಾಹಗಳನ್ನು ಮಾಡುತ್ತಾ, 193ಜೋಡಿಗಳ ಕುಟುಂಬಗಳಿಗೆ ನೆರವಾದರು. (1ಜೋಡಿಗೆ ಸರಾಸರಿ ಬಡತನದ ಮದುವೆಯೆಂದರೆ, ಇಂದು 50ಸಾವಿರ ಆಗುತ್ತದೆ. ಅಂತಹದರಲ್ಲಿ 193ಜೋಡಿಗಳಿಗೆ ಏನಿಲ್ಲವೆಂದರೂ 1ಕೋಟಿ ರೂಪಾಯಿ ವೆಚ್ಚವಾಗುತ್ತದೆ.) ತಾವು ಮುಂದೆ ನಿಂತು ಸಾಮೂಹಿಕ ವಿವಾಹಗಳನ್ನು ಯಶಸ್ವಿ ಮಾಡುವದರೊಂದಿಗೆ ಎಲ್ಲ ಕುಟುಂಬಗಳಿಗೆ ತಗುಲುವ ವೆಚ್ಚವನ್ನು ತಪ್ಪಿಸಿದರು.ಇಂತಹ ಹತ್ತಾರು ಸಾಮಾಜಿಕ ಕಳಕಳಿಯ ಚಟುವಟಿಕೆಗಳನ್ನು ಮಾಡುತ್ತಾ ಬಂದಿರುವ ಬಾಲಸ್ವಾಮಿ ಕೊಡ್ಲಿಯವರ ಕುರಿತು ಎಷ್ಟು ಜನರಿಗೆ ಗೊತ್ತಿದೆ? ನೊಂದವರಿಗೆ ಧ್ವನಿಯಾಗಿ, ಹಸಿದವನಿಗೆ ಅನ್ನವಾಗಿರುವ ಬಾಲಸ್ವಾಮಿ ಕೊಡ್ಲಿಯವರ ಕಾರ್ಯ ನಿಜಕ್ಕೂ ಶ್ಲಾಘನಾರ್ಹ.ಇನ್ಮುಂದೆಯೂ ಬಾಲಸ್ವಾಮಿಯವರು ಇದೇ ರೀತಿ ಜನಪರ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜದ ಏಳಿಗೆಗಾಗಿ ಶ್ರಮಿಸಲಿ ಎಂದು ಪತ್ರಿಕೆ ಅವರನ್ನು ಹಾರೈಸುತ್ತದೆ.